📖 0/604 ಓದಿದ ಪುಟಗಳು
📄 181
وَمَا لَهُمۡ أَلَّا يُعَذِّبَهُمُ ٱللَّهُ وَهُمۡ يَصُدُّونَ عَنِ ٱلۡمَسۡجِدِ ٱلۡحَرَامِ وَمَا كَانُوٓاْ أَوۡلِيَآءَهُۥٓۚ إِنۡ أَوۡلِيَآؤُهُۥٓ إِلَّا ٱلۡمُتَّقُونَ وَلَٰكِنَّ أَكۡثَرَهُمۡ لَا يَعۡلَمُونَ ٣٤ وَمَا كَانَ صَلَاتُهُمۡ عِندَ ٱلۡبَيۡتِ إِلَّا مُكَآءً وَتَصۡدِيَةًۚ فَذُوقُواْ ٱلۡعَذَابَ بِمَا كُنتُمۡ تَكۡفُرُونَ ٣٥ إِنَّ ٱلَّذِينَ كَفَرُواْ يُنفِقُونَ أَمۡوَٰلَهُمۡ لِيَصُدُّواْ عَن سَبِيلِ ٱللَّهِۚ فَسَيُنفِقُونَهَا ثُمَّ تَكُونُ عَلَيۡهِمۡ حَسۡرَةً ثُمَّ يُغۡلَبُونَۗ وَٱلَّذِينَ كَفَرُوٓاْ إِلَىٰ جَهَنَّمَ يُحۡشَرُونَ ٣٦ لِيَمِيزَ ٱللَّهُ ٱلۡخَبِيثَ مِنَ ٱلطَّيِّبِ وَيَجۡعَلَ ٱلۡخَبِيثَ بَعۡضَهُۥ عَلَىٰ بَعۡضٍ فَيَرۡكُمَهُۥ جَمِيعًا فَيَجۡعَلَهُۥ فِي جَهَنَّمَۚ أُوْلَٰٓئِكَ هُمُ ٱلۡخَٰسِرُونَ ٣٧ قُل لِّلَّذِينَ كَفَرُوٓاْ إِن يَنتَهُواْ يُغۡفَرۡ لَهُم مَّا قَدۡ سَلَفَ وَإِن يَعُودُواْ فَقَدۡ مَضَتۡ سُنَّتُ ٱلۡأَوَّلِينَ ٣٨ وَقَٰتِلُوهُمۡ حَتَّىٰ لَا تَكُونَ فِتۡنَةٌ وَيَكُونَ ٱلدِّينُ كُلُّهُۥ لِلَّهِۚ فَإِنِ ٱنتَهَوۡاْ فَإِنَّ ٱللَّهَ بِمَا يَعۡمَلُونَ بَصِيرٌ ٣٩ وَإِن تَوَلَّوۡاْ فَٱعۡلَمُوٓاْ أَنَّ ٱللَّهَ مَوۡلَىٰكُمۡۚ نِعۡمَ ٱلۡمَوۡلَىٰ وَنِعۡمَ ٱلنَّصِيرُ ٤٠
8:34
وَمَا لَهُمۡ أَلَّا يُعَذِّبَهُمُ ٱللَّهُ وَهُمۡ يَصُدُّونَ عَنِ ٱلۡمَسۡجِدِ ٱلۡحَرَامِ وَمَا كَانُوٓاْ أَوۡلِيَآءَهُۥٓۚ إِنۡ أَوۡلِيَآؤُهُۥٓ إِلَّا ٱلۡمُتَّقُونَ وَلَٰكِنَّ أَكۡثَرَهُمۡ لَا يَعۡلَمُونَ ٣٤
ಅಲ್ಲಾಹನು ಅವರಿಗೆ ಶಿಕ್ಷಿಸದಿರಲು ಅವರಲ್ಲಿ ಯಾವ ಅರ್ಹತೆಯಿದೆ? ವಸ್ತುತಃ ಅವರು ಮಸ್ಜಿದುಲ್ ಹರಾಮ್‌ನಿಂದ ಜನರನ್ನು ತಡೆಯುತ್ತಾರೆ. ಅವರು ಅದರ ಮೇಲ್ವಿಚಾರಕರೂ ಅಲ್ಲ. ಭಯಭಕ್ತಿಯುಳ್ಳವರ ಹೊರತು ಇನ್ನಾರೂ ಅದರ ಮೇಲ್ವಿಚಾರಕರಾಗಲಾರರು. ಆದರೆ ಅವರಲ್ಲಿ ಹೆಚ್ಚಿನವರು ಅರಿಯುವುದಿಲ್ಲ.
8:35
وَمَا كَانَ صَلَاتُهُمۡ عِندَ ٱلۡبَيۡتِ إِلَّا مُكَآءً وَتَصۡدِيَةًۚ فَذُوقُواْ ٱلۡعَذَابَ بِمَا كُنتُمۡ تَكۡفُرُونَ ٣٥
ಮತ್ತು ಕಾಬಾದ ಬಳಿ ಅವರ ಪ್ರಾರ್ಥನೆಯು ಶಿಳ್ಳೆ ಹೊಡೆಯುವುದು ಮತ್ತು ಚಪ್ಪಾಳೆ ತಟ್ಟುವುದರ ಹೊರತು ಇನ್ನೇನೂ ಇಲ್ಲ. ಆದ್ದರಿಂದ ನೀವು ನಿಮ್ಮ ಸತ್ಯನಿಷೇಧದ ನಿಮಿತ್ತ ಈ ಶಿಕ್ಷೆಯನ್ನು ಸವಿಯಿರಿ.
8:36
إِنَّ ٱلَّذِينَ كَفَرُواْ يُنفِقُونَ أَمۡوَٰلَهُمۡ لِيَصُدُّواْ عَن سَبِيلِ ٱللَّهِۚ فَسَيُنفِقُونَهَا ثُمَّ تَكُونُ عَلَيۡهِمۡ حَسۡرَةً ثُمَّ يُغۡلَبُونَۗ وَٱلَّذِينَ كَفَرُوٓاْ إِلَىٰ جَهَنَّمَ يُحۡشَرُونَ ٣٦
ನಿಸ್ಸಂಶಯವಾಗಿಯು ಸತ್ಯನಿಷೇಧಿಗಳು ತಮ್ಮ ಸಂಪತ್ತನ್ನು ಅಲ್ಲಾಹನ ಮಾರ್ಗದಿಂದ ತಡೆಯುವುದಕ್ಕಾಗಿ ಖರ್ಚು ಮಾಡುತ್ತಾರೆ. ಹಾಗೆಯೇ ಅವರು ತಮ್ಮ ಸಂಪತ್ತುಗಳನ್ನು ಖರ್ಚು ಮಾಡುತ್ತಲಿರುವರು. ಅನಂತರ ಆ ಸಂಪತ್ತು ಅವರ ಪಾಲಿಗೆ ಖೇದದ ವಸ್ತುವಾಗಿ ಪರಿಣಮಿಸಲಿರುವುದು. ತದನಂತರ ಅವರು ಪರಾಜಿತರಾಗುವರು ಮತ್ತು ಸತ್ಯನಿಷೇಧಿಗಳನ್ನು ನರಕದೆಡೆಗೇ ಒಟ್ಟುಗೂಡಿಸಲಾಗುವುದು.
8:37
لِيَمِيزَ ٱللَّهُ ٱلۡخَبِيثَ مِنَ ٱلطَّيِّبِ وَيَجۡعَلَ ٱلۡخَبِيثَ بَعۡضَهُۥ عَلَىٰ بَعۡضٍ فَيَرۡكُمَهُۥ جَمِيعًا فَيَجۡعَلَهُۥ فِي جَهَنَّمَۚ أُوْلَٰٓئِكَ هُمُ ٱلۡخَٰسِرُونَ ٣٧
ಇದು ಅಲ್ಲಾಹನು ಅಶುದ್ಧತೆಯಿಂದ ಶುದ್ಧತೆಯನ್ನು ಬೇರ್ಪಡಿಸಲು, ಅಶುದ್ಧತೆಗಳನ್ನು ಪರಸ್ಪರ ಒಟ್ಟ್ಟಾಗಿಸಲು ಮತ್ತು ಅವರೆಲ್ಲರನ್ನೂ ಒಟ್ಟುಗೂಡಿಸಿ ಅನಂತರ ನರಕದಲ್ಲಿ ಹಾಕಲೆಂದಾಗಿದೆ. ಅವರೇ ನಷ್ಟ ಹೊಂದುವವರಾಗಿದ್ದಾರೆ.
8:38
قُل لِّلَّذِينَ كَفَرُوٓاْ إِن يَنتَهُواْ يُغۡفَرۡ لَهُم مَّا قَدۡ سَلَفَ وَإِن يَعُودُواْ فَقَدۡ مَضَتۡ سُنَّتُ ٱلۡأَوَّلِينَ ٣٨
ಅವರು ಸತ್ಯನಿಷೇಧದಿಂದ ಹಿಂದೆ ಸರಿಯುವುದಾದರೆ ಅವರು ಮುಂಚೆ ಮಾಡಿರುವ ಪಾಪಗಳನ್ನು ಅವರಿಗೆ ಕ್ಷಮಿಸಿ ಬಿಡಲಾಗುವುದೆಂದು ನೀವು ಸತ್ಯನಿಷೇಧಿಗಳಿಗೆ ಹೇಳಿರಿ ಮತ್ತು ಅವರು ತಮ್ಮ ಅದೇ ಚಾಳಿಯನ್ನು ಮುಂದುವರಿಸಿದರೆ (ಸತ್ಯನಿಷೇಧಿ) ಪೂರ್ವಿಕರ ಪಾಲಿನ ಶಿಕ್ಷಾಕ್ರಮವು ಇವರ ಮೇಲೂ ಜಾರಿಯಾಗಿರುತ್ತದೆ.
8:39
وَقَٰتِلُوهُمۡ حَتَّىٰ لَا تَكُونَ فِتۡنَةٌ وَيَكُونَ ٱلدِّينُ كُلُّهُۥ لِلَّهِۚ فَإِنِ ٱنتَهَوۡاْ فَإِنَّ ٱللَّهَ بِمَا يَعۡمَلُونَ بَصِيرٌ ٣٩
ಓ ಸತ್ಯವಿಶ್ವಾಸಿಗಳೇ ಕ್ಷೆÆÃಭೆಯು ಅಳಿಯುವ ತನಕ ಮತ್ತು ಧರ್ಮವು ಸಂಪೂರ್ಣವಾಗಿ ಅಲ್ಲಾಹನದೇ ಆಗುವ ತನಕ ನೀವು ಅವರೊಂದಿಗೆ ಯುದ್ಧ ಮಾಡಿರಿ. ಇನ್ನು ಅವರು ಸ್ಥಗಿತಗೊಳಿಸುವುದಾದರೆ ಅವರ ಕರ್ಮಗಳನ್ನು ಅಲ್ಲಾಹನು ಚೆನ್ನಾಗಿ ನೋಡುತ್ತಿದ್ದಾನೆ.
8:40
وَإِن تَوَلَّوۡاْ فَٱعۡلَمُوٓاْ أَنَّ ٱللَّهَ مَوۡلَىٰكُمۡۚ نِعۡمَ ٱلۡمَوۡلَىٰ وَنِعۡمَ ٱلنَّصِيرُ ٤٠
ಮತ್ತು ಇನ್ನು ಅವರು ವಿಮುಖತೆ ತೋರುವುದಾದರೆ ಅಲ್ಲಾಹನು ನಿಮ್ಮ ಕಾರ್ಯಸಾಧಕನೆಂಬುದನ್ನು ಖಚಿತವಾಗಿ ಅರಿತುಕೊಳ್ಳಿರಿ. ಅವನು ಉತ್ತಮ ಕಾರ್ಯಸಾಧಕನು ಮತ್ತು ಉತ್ತಮ ಸಹಾಯಕನಾಗಿದ್ದಾನೆ.
العربيةEnglishBahasa IndonesiaTürkçeРусскийفارسیFrançaisاردوবাংলাDeutschEspañol中文हिन्दीPortuguêsItalianoภาษาไทยPolskiNederlandsShqipKiswahiliO'zbekதமிழ்MelayuBosanskiSoomaaliAzərbaycanکوردی한국어日本語SvenskaDanskNorskپښتوമലയാളംසිංහලTamazightHausaአማርኛБългарскиТоҷикӣҚазақшаFilipinoسنڌيYorùbáFulfuldeТатарчаئۇيغۇرچەКыргызчаਪੰਜਾਬੀJawaతెలుగుမြန်မာગુજરાતીOromoमराठीTiếng ViệtMalagasyНохчийнWolofދިވެހިಕನ್ನಡУкраїнськаΕλληνικάქართულიខ្មែរدریQafar afMaranaoनेपाली
ಪವಿತ್ರ ಕುರಾನ್
Sunday, August 23, 2026
Don't forget us in your sincere prayers







