ಸೂರಾ ತಾಹಾ ಅರೇಬಿಕ್ ಮತ್ತು ಕನ್ನಡ
ಸೂರಾ ತಾಹಾ ಸಂಪೂರ್ಣ ಕನ್ನಡ ಅನುವಾದ, ಉಚ್ಚಾರಣೆ ಮತ್ತು ಆಡಿಯೋ ಪಠಣದೊಂದಿಗೆ ಓದಿ. ಪ್ರತಿ ಆಯತ್‌ನ ಅರ್ಥ. (135 ಆಯತ್ — مكية). ತಾಹಾ ಆಲಿಸಿ, ತಾಹಾ ಅನುವಾದ, ತಾಹಾ mp3, ತಾಹಾ pdf.ಸೂರಾ ತಾಹಾ ಓದಿ ಮತ್ತು ಆಲಿಸಿ
🎧 ಆಯತ್
M
Mishary Rashid Alafasy
✓
Mishary Rashid Alafasy
✓
M
Mahmoud Khalil Al-Husary
✓
Mahmoud Khalil Al-Husary
✓
A
Abdurrahman As-Sudais
✓
Abdurrahman As-Sudais
✓
M
Mohamed Siddiq Al-Minshawi
✓
Mohamed Siddiq Al-Minshawi
✓
A
Abdul Basit Abdul Samad
✓
Abdul Basit Abdul Samad
✓
A
Ali Al-Hudhaify
✓
Ali Al-Hudhaify
✓
A
Ahmed ibn Ali al-Ajamy
✓
Ahmed ibn Ali al-Ajamy
✓
A
Abu Bakr Ash-Shaatree
✓
Abu Bakr Ash-Shaatree
✓
M
Muhammad Ayyoub
✓
Muhammad Ayyoub
✓
A
Abdullah Basfar
✓
Abdullah Basfar
✓
A
Abdullah Al-Juhani
✓
Abdullah Al-Juhani
✓
M
Maher Al Muaiqly
✓
Maher Al Muaiqly
✓
—
x1
مَا أَنزَلْنَا عَلَيْكَ الْقُرْآنَ لِتَشْقَىٰ ٢
📖 ಅನುವಾದ
ಆಯತ್ 2
ನಾವು ಈ ಕುರ್‌ಆನನ್ನು ನಿಮ್ಮನು ಸಂಕಷ್ಟಕ್ಕೀಡು ಮಾಡಲಿಕ್ಕಾಗಿ ನಿಮ್ಮ ಮೇಲೆ ಅವತೀರ್ಣಗೊಳಿಸಿರುವುದಿಲ್ಲ.
إِلَّا تَذْكِرَةً لِّمَن يَخْشَىٰ ٣
📖 ಅನುವಾದ
ಆಯತ್ 3
ಆದರೆ ಇದು (ಅಲ್ಲಾಹನನ್ನು) ಭಯಪಡುವವನಿಗೆ ಉಪದೇಶವಾಗಿದೆ.
تَنزِيلًا مِّمَّنْ خَلَقَ الْأَرْضَ وَالسَّمَاوَاتِ الْعُلَى ٤
📖 ಅನುವಾದ
ಆಯತ್ 4
ಇದು ಭೂಮಿಯನ್ನು ಉನ್ನತವಾದ ಆಕಾಶಗಳನ್ನು ಸೃಷ್ಟಿಸಿದವನ ಕಡೆಯಿಂದ ಅವತೀರ್ಣಗೊಂಡಿದೆ.
لَهُ مَا فِي السَّمَاوَاتِ وَمَا فِي الْأَرْضِ وَمَا بَيْنَهُمَا وَمَا تَحْتَ الثَّرَىٰ ٦
📖 ಅನುವಾದ
ಆಯತ್ 6
ಆಕಾಶಗಳಲ್ಲೂ, ಭೂಮಿಯಲ್ಲೂ, ಅವೆರಡರ ನಡುವೆಯೂ ಮತ್ತು (ಮಣ್ಣಿನ) ಅಡಿಯಲ್ಲೂ ಇರುವ ಸಕಲವೂ ಅವನದೇ ಆಗಿದೆ.
وَإِن تَجْهَرْ بِالْقَوْلِ فَإِنَّهُ يَعْلَمُ السِّرَّ وَأَخْفَى ٧
📖 ಅನುವಾದ
ಆಯತ್ 7
ನೀವು ನಿಮ್ಮ ಮಾತನ್ನು ಉಚ್ಛಸ್ವರದಲ್ಲಿ ಹೇಳಿದರೆ, ಅವನಂತು ರಹಸ್ಯವನ್ನು ಮತ್ತು ಅದಕ್ಕಿಂತ ಅಡಗಿರುವುದನ್ನೂ ಚೆನ್ನಾಗಿ ಬಲ್ಲನು
اللَّهُ لَا إِلَٰهَ إِلَّا هُوَ ۖ لَهُ الْأَسْمَاءُ الْحُسْنَىٰ ٨
📖 ಅನುವಾದ
ಆಯತ್ 8
ಅಲ್ಲಾಹನ ಹೊರತು ಇನ್ನಾವ ಆರಾಧ್ಯನಿಲ್ಲ ಅವನಿಗೆ ಅತ್ಯುತ್ತಮ ನಾಮಗಳಿವೆ.
إِذْ رَأَىٰ نَارًا فَقَالَ لِأَهْلِهِ امْكُثُوا إِنِّي آنَسْتُ نَارًا لَّعَلِّي آتِيكُم مِّنْهَا بِقَبَسٍ أَوْ أَجِدُ عَلَى النَّارِ هُدًى ١٠
📖 ಅನುವಾದ
ಆಯತ್ 10
ಅವರು ಬೆಂಕಿಯನ್ನು ಕಂಡಾಗ ತಮ್ಮ ಮನೆಯವರಿಗೆ ಹೇಳಿದರು: ನೀವು ಸ್ವಲ್ಪ ನಿಲ್ಲಿರಿ. ನಾನೊಂದು ಬೆಂಕಿಯನ್ನು ಕಂಡಿದ್ದೇನೆ. ಬಹುಶಃ ನಾನು ಅದರಿಂದ ನಿಮಗಾಗಿ ಕೆಂಡವೊAದನ್ನು ತರಬಹುದು ಅಥವಾ ಅ ಬೆಂಕಿಯ ಹತ್ತಿರ ದಾರಿಯ ಮಾಹಿತಿಯನ್ನು ಪಡೆಯುವ ಸಾಧ್ಯತೆಯಿದೆ.
فَلَمَّا أَتَاهَا نُودِيَ يَا مُوسَىٰ ١١
📖 ಅನುವಾದ
ಆಯತ್ 11
ಅವರು ಅಲ್ಲಿಗೆ ತಲುಪಿದಾಗ ಹೀಗೆ ಕರೆಯಲಾಯಿತು: ಓ ಮೂಸಾ,
إِنِّي أَنَا رَبُّكَ فَاخْلَعْ نَعْلَيْكَ ۖ إِنَّكَ بِالْوَادِ الْمُقَدَّسِ طُوًى ١٢
📖 ಅನುವಾದ
ಆಯತ್ 12
ಖಂಡಿತವಾಗಿಯು ನಾನು ನಿಮ್ಮ ಪ್ರಭುವಾಗಿದ್ದೇನೆ. ನಿಮ್ಮ ಪಾದರಕ್ಷೆಗಳನ್ನು ಕಳಚಿರಿ. ಏಕೆಂದರೆ ನೀವು ಪವಿತ್ರವಾದ ತುವಾ ಕಣಿವೆಯಲ್ಲಿದ್ದೀರಿ.
وَأَنَا اخْتَرْتُكَ فَاسْتَمِعْ لِمَا يُوحَىٰ ١٣
📖 ಅನುವಾದ
ಆಯತ್ 13
ಮತ್ತು ನಾನು ನಿಮ್ಮನ್ನು (ದೌತ್ಯ ಕಾರ್ಯಕ್ಕೆ) ಆಯ್ಕೆ ಮಾಡಿದ್ದೇನೆ. ಆದ್ದರಿಂದ ನಿಮಗೆ ನೀಡಲಾಗುತ್ತಿರುವ ದಿವ್ಯವಾಣಿಯನ್ನು ಗಮನ ಕೊಟ್ಟು ಆಲಿಸಿರಿ.
إِنَّنِي أَنَا اللَّهُ لَا إِلَٰهَ إِلَّا أَنَا فَاعْبُدْنِي وَأَقِمِ الصَّلَاةَ لِذِكْرِي ١٤
📖 ಅನುವಾದ
ಆಯತ್ 14
ನಿಸ್ಸಂದೇಹವಾಗಿಯು ನಾನು ಅಲ್ಲಾಹನಾಗಿದ್ದೇನೆ. ನನ್ನ ಹೊರತು ಇನ್ನಾವ ಆರಾಧ್ಯನಿಲ್ಲ. ಆದ್ದರಿಂದ ನೀವು ನನ್ನನ್ನೇ ಆರಾಧಿಸಿರಿ. ಮತ್ತು ನನ್ನ ಸ್ಮರಣೆಗಾಗಿ ನಮಾಝ್ ಸಂಸ್ಥಾಪಿಸಿರಿ.
إِنَّ السَّاعَةَ آتِيَةٌ أَكَادُ أُخْفِيهَا لِتُجْزَىٰ كُلُّ نَفْسٍ بِمَا تَسْعَىٰ ١٥
📖 ಅನುವಾದ
ಆಯತ್ 15
ಖಂಡಿತವಾಗಿಯೂ ಪ್ರಳಯ ದಿನವು ಬರಲಿದೆ. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಕರ್ಮಗಳ ಪ್ರತಿಫಲ ಪಡೆಯಲೆಂದು ನಾನು ಅದನ್ನು ರಹಸ್ಯವಾಗಿಡಲು ಇಚ್ಛಿಸುತ್ತೇನೆ.
فَلَا يَصُدَّنَّكَ عَنْهَا مَن لَّا يُؤْمِنُ بِهَا وَاتَّبَعَ هَوَاهُ فَتَرْدَىٰ ١٦
📖 ಅನುವಾದ
ಆಯತ್ 16
ಆದುದರಿಂದ ಅದರಲ್ಲಿ ವಿಶ್ವಾಸವಿಡದವನು ಮತ್ತು ತನ್ನ ಸ್ವೇಚ್ಛೆಯನ್ನು ಹಿಂಬಾಲಿಸುವನು ಅದರ ವಿಶ್ವಾಸದಿಂದ ನಿಮ್ಮನ್ನು ತಡೆಯದಿರಲಿ. ಹಾಗೇನಾದರೂ ಆದರೆ ನೀವು ನಾಶವಾಗುವಿರಿ.
قَالَ هِيَ عَصَايَ أَتَوَكَّأُ عَلَيْهَا وَأَهُشُّ بِهَا عَلَىٰ غَنَمِي وَلِيَ فِيهَا مَآرِبُ أُخْرَىٰ ١٨
📖 ಅನುವಾದ
ಆಯತ್ 18
ಅವರು ಉತ್ತರಿಸಿದರು: ಇದು ನನ್ನ ಕೋಲು, ಇದನ್ನು ನಾನು ಊರಿ ನಡೆಯುತ್ತೇನೆ ಮತ್ತು ಇದರಿಂದ ನನ್ನ ಆಡುಗಳಿಗೆ ಎಲೆಗಳನ್ನು ಉದುರಿಸುತ್ತೇನೆ. ಮತ್ತು ನನಗೆ ಇನ್ನೂ ಹಲವು ಪ್ರಯೋಜನಗಳು ಇದರಲ್ಲಿವೆ.
فَأَلْقَاهَا فَإِذَا هِيَ حَيَّةٌ تَسْعَىٰ ٢٠
📖 ಅನುವಾದ
ಆಯತ್ 20
ಅವರು ಅದನ್ನು ಹಾಕಿದರು, ಕೂಡಲೇ ಅದೊಂದು ತೆವಳುವ ಸರ್ಪವಾಯಿತು.
قَالَ خُذْهَا وَلَا تَخَفْ ۖ سَنُعِيدُهَا سِيرَتَهَا الْأُولَىٰ ٢١
📖 ಅನುವಾದ
ಆಯತ್ 21
ಅಲ್ಲಾಹನು ಹೇಳಿದನು: ಭಯಪಡದೆ ನೀವು ಅದನ್ನು ಹಿಡಿದುಕೊಳ್ಳಿರಿ. ನಾವದನ್ನು ಪೂರ್ವ ಸ್ಥಿತಿಗೆ ಮರಳಿಸಲಿದ್ದೇವೆ.
وَاضْمُمْ يَدَكَ إِلَىٰ جَنَاحِكَ تَخْرُجْ بَيْضَاءَ مِنْ غَيْرِ سُوءٍ آيَةً أُخْرَىٰ ٢٢
📖 ಅನುವಾದ
ಆಯತ್ 22
ಮತ್ತು ನಿಮ್ಮ ಅಂಗೈಯನ್ನು ನಿಮ್ಮ ಕಂಕುಳಕ್ಕೆ ಸೇರಿಸಿರಿ.ಆಗ ಅದು ಯಾವುದೇ ದೋಷವಿಲ್ಲದೆ ಬೆಳ್ಳಗೆ ಮಿಂಚುತ್ತಿರುವ ಸ್ಥಿತಿಯಲ್ಲಿ ಹೊರ ಬರುವುದು. ಇದು ಎರಡನೆಯ ಪವಾಡವಾಗಿದೆ.
لِنُرِيَكَ مِنْ آيَاتِنَا الْكُبْرَى ٢٣
📖 ಅನುವಾದ
ಆಯತ್ 23
ಇದೇಕೆಂದರೆ ನಾವು ನಿಮಗೆ ನಮ್ಮ ಕೆಲವು ಮಹಾ ದೃಷ್ಟಾಂತಗಳನ್ನು ತೋರಿಸಿ ಕೊಡಲೆಂದಾಗಿದೆ.
اذْهَبْ إِلَىٰ فِرْعَوْنَ إِنَّهُ طَغَىٰ ٢٤
📖 ಅನುವಾದ
ಆಯತ್ 24
ಇನ್ನು ನೀವು ಫಿರ್‌ಔನನ ಕಡೆಗೆ ಹೋಗಿರಿ. ನಿಶ್ಚಯವಾಗಿಯು ಅವನು ಮಿತಿಮೀರಿ ಹೋಗಿದ್ದಾನೆ.
قَالَ رَبِّ اشْرَحْ لِي صَدْرِي ٢٥
📖 ಅನುವಾದ
ಆಯತ್ 25
ಮೂಸ ಪ್ರಾರ್ಥಿಸಿದರು: ಓ ನನ್ನ ಪ್ರಭು, ನೀನು ನನಗಾಗಿ ನನ್ನ ಹೃದಯವನ್ನು ವಿಶಾಲಗೊಳಿಸು.
وَاجْعَل لِّي وَزِيرًا مِّنْ أَهْلِي ٢٩
📖 ಅನುವಾದ
ಆಯತ್ 29
ನನಗಾಗಿ ನನ್ನ ಕುಟುಂಬದಿAದ ಒಬ್ಬ ಸಹಾಯಕನನ್ನು ನೇಮಿಸು.
كَيْ نُسَبِّحَكَ كَثِيرًا ٣٣
📖 ಅನುವಾದ
ಆಯತ್ 33
ಇದು ನಾವು ಅತಿ ಹೆಚ್ಚಾಗಿ ನಿನ್ನ ಪಾವಿತ್ರö್ಯವನ್ನು ಸ್ತುತಿಸಲೆಂದು.
إِنَّكَ كُنتَ بِنَا بَصِيرًا ٣٥
📖 ಅನುವಾದ
ಆಯತ್ 35
ನಿಸ್ಸಂಶಯವಾಗಿಯು ನೀನು ನಮ್ಮನ್ನು ಚೆನ್ನಾಗಿ ನೋಡುವವನಾಗಿರುವೆ.
قَالَ قَدْ أُوتِيتَ سُؤْلَكَ يَا مُوسَىٰ ٣٦
📖 ಅನುವಾದ
ಆಯತ್ 36
ಆಗ ಅಲ್ಲಾಹನು ಉತ್ತರಿಸಿದನು: ಓ ಮೂಸಾ, ನಿನ್ನ ಎಲ್ಲಾ ಬೇಡಿಕೆಗಳನ್ನು ಈಡೇರಿಸಲಾಗಿದೆ.
وَلَقَدْ مَنَنَّا عَلَيْكَ مَرَّةً أُخْرَىٰ ٣٧
📖 ಅನುವಾದ
ಆಯತ್ 37
ನಾವು ನಿಮ್ಮ ಮೇಲೆ ಇನ್ನೊಂದು ಸಲವೂ ಉಪಕಾರವನ್ನು ಮಾಡಿದ್ದೇವು.
إِذْ أَوْحَيْنَا إِلَىٰ أُمِّكَ مَا يُوحَىٰ ٣٨
📖 ಅನುವಾದ
ಆಯತ್ 38
ನಾವು ನಿಮ್ಮ ತಾಯಿಯೆಡಗೆ ಕೊಡಬೇಕಾಗಿದ್ದ ಜ್ಞಾನವನ್ನು ದಿವ್ಯವಾಣಿಯ ಮೂಲಕ ಕೊಟ್ಟ ಸಂದರ್ಭವನ್ನು ಸ್ಮರಿಸಿರಿ.
أَنِ اقْذِفِيهِ فِي التَّابُوتِ فَاقْذِفِيهِ فِي الْيَمِّ فَلْيُلْقِهِ الْيَمُّ بِالسَّاحِلِ يَأْخُذْهُ عَدُوٌّ لِّي وَعَدُوٌّ لَّهُ ۚ وَأَلْقَيْتُ عَلَيْكَ مَحَبَّةً مِّنِّي وَلِتُصْنَعَ عَلَىٰ عَيْنِي ٣٩
📖 ಅನುವಾದ
ಆಯತ್ 39
ನೀನು ಪೆಟ್ಟಿಗೆಯಲ್ಲಿ ಇರಿಸಿ ಅದನ್ನು ನದಿಯಲ್ಲಿ ತೇಲಿಬಿಡು, ಅನಂತರ ನದಿಯು ಅದನ್ನು ದಡಕ್ಕೆ ಸೇರಿಸಿಬಿಡುವುದು ಮತ್ತು ಅದನ್ನು ನನ್ನ ಮತ್ತು ಆ ಮಗುವಿನ ಶತ್ರುವು ಎತ್ತಿಕೊಳ್ಳುವನು ಮತ್ತು ನಾನು ನಿನ್ನ ಮೇಲೆ ನನ್ನ ಕಡೆಯ ಪ್ರೀತಿಯನ್ನು ಹಾಕಿರುವೆನು ಇದೇಕೆಂದರೆ ನಿನ್ನ ಪಾಲನೆ ಪೋಷಣೆಯು ನನ್ನ ಮೇಲ್ನೋಟದಲ್ಲೇ ಆಗಲೆಂದಾಗಿದೆ.
إِذْ تَمْشِي أُخْتُكَ فَتَقُولُ هَلْ أَدُلُّكُمْ عَلَىٰ مَن يَكْفُلُهُ ۖ فَرَجَعْنَاكَ إِلَىٰ أُمِّكَ كَيْ تَقَرَّ عَيْنُهَا وَلَا تَحْزَنَ ۚ وَقَتَلْتَ نَفْسًا فَنَجَّيْنَاكَ مِنَ الْغَمِّ وَفَتَنَّاكَ فُتُونًا ۚ فَلَبِثْتَ سِنِينَ فِي أَهْلِ مَدْيَنَ ثُمَّ جِئْتَ عَلَىٰ قَدَرٍ يَا مُوسَىٰ ٤٠
📖 ಅನುವಾದ
ಆಯತ್ 40
ನಿನ್ನ ಸಹೋದರಿಯು (ಅಪರಿಚಿತಳಾಗಿ) ನಡೆದು ಹೋಗಿ: (ಫಿರ್‌ಔನನ ಮನೆಯವರಿಗೆ) ಈ ಶಿಶುವನ್ನು ಅತ್ಯುತ್ತಮವಾಗಿ ಆರೈಕೆ ಮಾಡುವವರ ಕುರಿತು ನಾನು ನಿಮಗೆ ತಿಳಿಸಿಕೊಡಲೇ? ಎಂದು ಹೇಳಿದ ಸಂದರ್ಭವನ್ನು ಸ್ಮರಿಸಿರಿ. ಈ ಉಪಾಯದ ಮೂಲಕ ನಾವು ನಿಮ್ಮನ್ನು (ಅರೈಕೆಗಾಗಿ) ಪುನಃ ನಿಮ್ಮ ತಾಯಿಯೆಡೆಗೆ ಅವಳ ಕಣ್ಣು ತಣಿಸಲೆಂದೂ, ಅವಳು ವ್ಯಥೆಪಡದಿರಲೆಂದೂ ಮರಳಿಸಿದೆವು.ಮತ್ತು ನೀವು (ಫಿರ್‌ಔನಿನ ಜನಾಂಗದ) ವ್ಯಕ್ತಿಯೊಬ್ಬನನ್ನು ಕೊಂದಿದ್ದಾಗಲೂ ನಿಮ್ಮನ್ನು ಅ ಮನೋವ್ಯಥೆಯಿಂದ ಪಾರು ಮಾಡಿದೆವು. ಒಟ್ಟಿನಲ್ಲಿ ನಾವು ನಿಮ್ಮನ್ನು ಪರೀಕ್ಷೆಗೊಳಪಡಿಸಿದೆವು. ಹಾಗೆಯೇ ನೀವು ಹಲವು ವರ್ಷಗಳ ಕಾಲ ಮದ್‌ಯನ್ ಜನರ ನಡುವೆ ತಂಗಿದ್ದೀರಿ. ತರುವಾಯ ನೀವು ನಿಶ್ಚಿತ ಸಮಯದಲ್ಲೇ ಬಂದಿರುವಿರಿ.
وَاصْطَنَعْتُكَ لِنَفْسِي ٤١
📖 ಅನುವಾದ
ಆಯತ್ 41
ಮತ್ತು ನಾನು ನಿಮ್ಮನ್ನು ನನ್ನ ಕಾರ್ಯಕ್ಕಾಗಿ ಆಯ್ಕೆ ಮಾಡಿಕೊಂಡಿದ್ದೇನೆ.
اذْهَبْ أَنتَ وَأَخُوكَ بِآيَاتِي وَلَا تَنِيَا فِي ذِكْرِي ٤٢
📖 ಅನುವಾದ
ಆಯತ್ 42
ಈಗ ನೀವು ಮತ್ತು ನಿಮ್ಮ ಸಹೋದರ ನನ್ನ ದೃಷ್ಟಾಂತಗಳೊAದಿಗೆ ಹೋಗಿರಿ, ಮತ್ತು ನೀವು ನನ್ನ ಸ್ಮರಣೆಯಲ್ಲಿ ಆಲಸ್ಯ ತೋರಬೇಡಿರಿ.
اذْهَبَا إِلَىٰ فِرْعَوْنَ إِنَّهُ طَغَىٰ ٤٣
📖 ಅನುವಾದ
ಆಯತ್ 43
ನೀವಿಬ್ಬರೂ ಫಿರ್‌ಔನನ ಕಡೆಗೆ ಹೋಗಿರಿ. ಅವನು ಮಿತಿ ಮೀರಿದ್ದಾನೆ.
فَقُولَا لَهُ قَوْلًا لَّيِّنًا لَّعَلَّهُ يَتَذَكَّرُ أَوْ يَخْشَىٰ ٤٤
📖 ಅನುವಾದ
ಆಯತ್ 44
ಅವನೊಂದಿಗೆ ನಯವಾಗಿ ಮಾತನಾಡಿರಿ. ಅವನು ಉಪದೇಶವನ್ನು ಸ್ವೀಕರಿಸಬಹುದು ಅಥವಾ ಭಯ ಪಡಬಹುದು.
قَالَا رَبَّنَا إِنَّنَا نَخَافُ أَن يَفْرُطَ عَلَيْنَا أَوْ أَن يَطْغَىٰ ٤٥
📖 ಅನುವಾದ
ಆಯತ್ 45
ಅವರಿಬ್ಬರೂ ಹೇಳದಿರು: ಓ ನಮ್ಮ ಪ್ರಭು, ಅವನು ನಮ್ಮೊಂದಿಗೆ ಅತಿಕ್ರಮ ತೋರುವ ಅಥವಾ ಅವನು ನಮ್ಮ ಮೇಲೆ ಮುಗಿ ಬೀಳುವ ಭಯ ನಮಗಿದೆ.
قَالَ لَا تَخَافَا ۖ إِنَّنِي مَعَكُمَا أَسْمَعُ وَأَرَىٰ ٤٦
📖 ಅನುವಾದ
ಆಯತ್ 46
ಅಲ್ಲಾಹನು ಉತ್ತರಿಸಿದನು: ನೀವು ಭಯಪಡದಿರಿ. ನಾನು ನಿಮ್ಮ ಜೊತೆಗಿದ್ದೇನೆ ಮತ್ತು ನಾನು ಎಲ್ಲವನ್ನು ಆಲಿಸುತ್ತಿದ್ದೇನೆ, ವೀಕ್ಷಿಸುತ್ತಿದ್ದೇನೆ.
فَأْتِيَاهُ فَقُولَا إِنَّا رَسُولَا رَبِّكَ فَأَرْسِلْ مَعَنَا بَنِي إِسْرَائِيلَ وَلَا تُعَذِّبْهُمْ ۖ قَدْ جِئْنَاكَ بِآيَةٍ مِّن رَّبِّكَ ۖ وَالسَّلَامُ عَلَىٰ مَنِ اتَّبَعَ الْهُدَىٰ ٤٧
📖 ಅನುವಾದ
ಆಯತ್ 47
ನೀವು ಅವನೆಡೆಗೆ ಹೋಗಿ ಹೇಳಿರಿ: ನಾವು ನಿನ್ನ ಪ್ರಭುವಿನ ಸಂದೇಶವಾಹಕರಾಗಿದ್ದೇವೆ. ನೀನು ಇಸ್ರಾಯೀಲ್ ಸಂತತಿಗಳನ್ನು ನಮ್ಮ ಸಂಗಡ ಕಳುಹಿಸಿಕೊಡು ಮತ್ತು ಅವರಿಗೆ ಹಿಂಸೆ ಕೊಡಬೇಡ. ನಾವು ನಿನ್ನಲ್ಲಿಗೆ ನಿನ್ನ ಪ್ರಭುವಿನ ಕಡೆಯ ನಿದರ್ಶನದೊಂದಿಗೆ ಬಂದಿರುತ್ತೇವೆ ಮತ್ತು ಸನ್ಮಾರ್ಗವನ್ನು ಹಿಂಬಾಲಿಸಿದವನ ಮೇಲೆ ಶಾಂತಿಯಿರುವುದು.
إِنَّا قَدْ أُوحِيَ إِلَيْنَا أَنَّ الْعَذَابَ عَلَىٰ مَن كَذَّبَ وَتَوَلَّىٰ ٤٨
📖 ಅನುವಾದ
ಆಯತ್ 48
ಸುಳ್ಳಾಗಿಸಿದವನಿಗೂ ಹಾಗೂ ವಿಮುಖನಾದವನಿಗೂ ಶಿಕ್ಷೆಯಿರುವುದೆಂದು ನಮ್ಮೆಡೆಗೆ ದಿವ್ಯವಾಣಿ ಮಾಡಲಾಗಿದೆ.
قَالَ فَمَن رَّبُّكُمَا يَا مُوسَىٰ ٤٩
📖 ಅನುವಾದ
ಆಯತ್ 49
ಫಿರ್‌ಔನ್ ಹೇಳಿದನು: ಓ ಮೂಸಾ, ಸರಿ, ಹಾಗಾದರೆ ನಿಮ್ಮಿಬ್ಬರ ಪ್ರಭು ಯಾರು?
قَالَ رَبُّنَا الَّذِي أَعْطَىٰ كُلَّ شَيْءٍ خَلْقَهُ ثُمَّ هَدَىٰ ٥٠
📖 ಅನುವಾದ
ಆಯತ್ 50
ಆಗ ಅವರು ಉತ್ತರಿಸಿದರು: ಪ್ರತಿಯೊಂದು ವಸ್ತುವಿಗೂ ಅದರ ಪ್ರತ್ಯೇಕ ಸ್ವರೂಪವನ್ನೂ ದಯಪಾಲಿಸಿದವನು ಹಾಗೂ ಮಾರ್ಗ ತೋರಿದವನು ನಮ್ಮ ಪ್ರಭು.
قَالَ فَمَا بَالُ الْقُرُونِ الْأُولَىٰ ٥١
📖 ಅನುವಾದ
ಆಯತ್ 51
ಅವನು ಕೇಳಿದನು: ಸರಿ, ಗತ (ಬಹುದೇವಾರಾಧಕ) ಪೀಳಿಗೆಗಳ ಸ್ಥಿತಿಯೇನಾಗುವುದು?
قَالَ عِلْمُهَا عِندَ رَبِّي فِي كِتَابٍ ۖ لَّا يَضِلُّ رَبِّي وَلَا يَنسَى ٥٢
📖 ಅನುವಾದ
ಆಯತ್ 52
ಅವರು ಉತ್ತರಿಸಿದರು: ಅದರ ಜ್ಞಾನವು ನನ್ನ ಪ್ರಭುವಿನ ಬಳಿ ಒಂದು ಗ್ರಂಥದಲ್ಲಿದೆ ನನ್ನ ಪ್ರಭುವು ತಪ್ಪು ಮಾಡುವುದಿಲ್ಲ ಮತ್ತು ಮರೆಯುವುದೂ ಇಲ್ಲ.
الَّذِي جَعَلَ لَكُمُ الْأَرْضَ مَهْدًا وَسَلَكَ لَكُمْ فِيهَا سُبُلًا وَأَنزَلَ مِنَ السَّمَاءِ مَاءً فَأَخْرَجْنَا بِهِ أَزْوَاجًا مِّن نَّبَاتٍ شَتَّىٰ ٥٣
📖 ಅನುವಾದ
ಆಯತ್ 53
ಅವನು ನಿಮಗಾಗಿ ಭೂಮಿಯನ್ನು ಹಾಸನ್ನಾಗಿ ಮಾಡಿದನು ಮತ್ತು ಅದರಲ್ಲಿ ನಿಮ್ಮ ಸಂಚಾರಕ್ಕಾಗಿ ಮಾರ್ಗಗಳನ್ನು ರೂಪಿಸಿಕೊಟ್ಟನು ಮತ್ತು ಆಕಾಶದಿಂದ ನೀರನ್ನು ಸುರಿಸಿದನು. ಅನಂತರ ಅದರ ಮೂಲಕ ವಿವಿಧ ತರಹದ ಫಲ ಬೆಳೆಗಳನ್ನೂ ನಾವೇ ಉತ್ಪಾದಿಸುತ್ತೇವೆ.
كُلُوا وَارْعَوْا أَنْعَامَكُمْ ۗ إِنَّ فِي ذَٰلِكَ لَآيَاتٍ لِّأُولِي النُّهَىٰ ٥٤
📖 ಅನುವಾದ
ಆಯತ್ 54
ನೀವೂ ತಿನ್ನಿರಿ ಮತ್ತು ನಿಮ್ಮ ಜಾನುವಾರುಗಳನ್ನೂ ಮೇಯಿಸಿರಿ. ನಿಸ್ಸಂದೇಹವಾಗಿಯೂ, ಇದರಲ್ಲಿ ಬುದ್ಧಿವಂತರಿಗೆ ಅನೇಕ ನಿದರ್ಶನಗಳಿವೆ.
۞ مِنْهَا خَلَقْنَاكُمْ وَفِيهَا نُعِيدُكُمْ وَمِنْهَا نُخْرِجُكُمْ تَارَةً أُخْرَىٰ ٥٥
📖 ಅನುವಾದ
ಆಯತ್ 55
ನಾವು ಈ ಭೂಮಿಯಿಂದಲೇ ನಿಮ್ಮನ್ನು ಸೃಷ್ಟಿಸಿರುತ್ತೇವೆ ಮತ್ತು ಅದರೊಳಗೇ ನಿಮ್ಮನ್ನು ಮರಳಿಸುವೆವು ಮತ್ತು ಅದರಿಂದಲೇ ಪುನಃ ನಿಮ್ಮನ್ನು ನಾವು ಹೊರತರುವೆವು.
وَلَقَدْ أَرَيْنَاهُ آيَاتِنَا كُلَّهَا فَكَذَّبَ وَأَبَىٰ ٥٦
📖 ಅನುವಾದ
ಆಯತ್ 56
ನಾವು ಫಿರ್‌ಔನನಿಗೆ ನಮ್ಮ ಸಕಲ ದೃಷ್ಟಾಂತಗಳನ್ನು ತೋರಿಸಿಕೊಟ್ಟೆವು. ಆದರೆ ಅವನು ಸುಳ್ಳಾಗಿಸಿದನು ಮತ್ತು ನಿರಾಕರಿಸಿಬಿಟ್ಟನು.
قَالَ أَجِئْتَنَا لِتُخْرِجَنَا مِنْ أَرْضِنَا بِسِحْرِكَ يَا مُوسَىٰ ٥٧
📖 ಅನುವಾದ
ಆಯತ್ 57
ಅವನು ಹೇಳಿದನು: ಓ ಮೂಸಾ, ನೀನು ನಿನ್ನ ಜಾದೂ ಶಕ್ತಿಯಿಂದ ನಮ್ಮನ್ನು ನಮ್ಮ ನಾಡಿನಿಂದ ಹೊರ ಹಾಕಲೆಂದು ಬಂದಿರುವೆಯಾ?
فَلَنَأْتِيَنَّكَ بِسِحْرٍ مِّثْلِهِ فَاجْعَلْ بَيْنَنَا وَبَيْنَكَ مَوْعِدًا لَّا نُخْلِفُهُ نَحْنُ وَلَا أَنتَ مَكَانًا سُوًى ٥٨
📖 ಅನುವಾದ
ಆಯತ್ 58
ಸರಿ, ನಾವು ಸಹ ನಿನ್ನ ವಿರುದ್ಧ ಅಂತಹದೇ ಜಾದೂವನ್ನು ಖಂಡಿತ ತರುವೆವು. ಮತ್ತು ನಮ್ಮ ಹಾಗೂ ನಿನ್ನ ನಡುವೆ ಒಂದು ವಾಗ್ದಾನ ದಿನವನ್ನು ನಿಶ್ಚಯಿಸು.ಅದನ್ನು ನಾವಗಲೀ, ನೀನಾಗಲೀ ಉಲ್ಲಂಘಿಸುವAತಿಲ್ಲ. ಸಮತಟ್ಟಾದ ಮೈದಾನದಲ್ಲಿ ಸ್ಪರ್ಧೆಯಾಗಲಿ.
قَالَ مَوْعِدُكُمْ يَوْمُ الزِّينَةِ وَأَن يُحْشَرَ النَّاسُ ضُحًى ٥٩
📖 ಅನುವಾದ
ಆಯತ್ 59
ಮೂಸಾ ಉತ್ತರಿಸಿದರು: ಹಬ್ಬದ ದಿನವೇ ನಿಮ್ಮ ನಿಗದಿತ ವಾಗ್ದಾನ ಮತ್ತು ಜನರನ್ನು ಪೂರ್ವಾಹ್ನವಾಗುತ್ತಲೇ ಒಟ್ಟು ಗೂಡಿಸಲಾಗಲಿ.
فَتَوَلَّىٰ فِرْعَوْنُ فَجَمَعَ كَيْدَهُ ثُمَّ أَتَىٰ ٦٠
📖 ಅನುವಾದ
ಆಯತ್ 60
ಆಗ ಫಿರ್‌ಔನನು ಮರಳಿ ಹೋದನು ಮತ್ತು ತನ್ನ ಎಲ್ಲಾ ಕುತಂತ್ರಗಳನ್ನು ಒಟ್ಟುಗೂಡಿಸಿ ಸ್ಪರ್ಧೆಗೆ ಬಂದನು.
قَالَ لَهُم مُّوسَىٰ وَيْلَكُمْ لَا تَفْتَرُوا عَلَى اللَّهِ كَذِبًا فَيُسْحِتَكُم بِعَذَابٍ ۖ وَقَدْ خَابَ مَنِ افْتَرَىٰ ٦١
📖 ಅನುವಾದ
ಆಯತ್ 61
ಮೂಸಾ ಅವರಿಗೆ ಹೇಳಿದರು: ನಿಮಗೆ ನಾಶವಿರಲಿ, ನೀವು ಅಲ್ಲಾಹನ ಮೇಲೆ ಸುಳ್ಳನ್ನು ಹೊರಿಸದಿರಿ. ಅನ್ಯಥಾ ಅವನು ನಿಮ್ಮನ್ನು ಯಾತನೆಯ ಮೂಲಕ ನಾಶ ಮಾಡಬಹುದು ಸುಳ್ಳರೋಪ ಹೊರಿಸುವವನು ಎಂದಿಗೂ ಸಫಲನಾಗಲಾರ.
فَتَنَازَعُوا أَمْرَهُم بَيْنَهُمْ وَأَسَرُّوا النَّجْوَىٰ ٦٢
📖 ಅನುವಾದ
ಆಯತ್ 62
ಆಗ ಅವರು (ಮಾಟಗಾರರು) ತಮ್ಮ ವಿಷಯದಲ್ಲಿ ಭಿನ್ನಾಭಿಪ್ರಾಯ ಹೊಂದಿದರು ಮತ್ತು ಗುಪ್ತವಾಗಿ ಸಮಾಲೋಚನೆ ನಡೆಸತೊಡಗಿದರು.
قَالُوا إِنْ هَٰذَانِ لَسَاحِرَانِ يُرِيدَانِ أَن يُخْرِجَاكُم مِّنْ أَرْضِكُم بِسِحْرِهِمَا وَيَذْهَبَا بِطَرِيقَتِكُمُ الْمُثْلَىٰ ٦٣
📖 ಅನುವಾದ
ಆಯತ್ 63
ಅವರು ಹೇಳಿದರು: ಇವರಿಬ್ಬರೂ ಜಾದೂಗಾರರಾಗಿದ್ದಾರೆ, ಇವರು ತಮ್ಮ ಜಾದೂವಿನ ಬಲದಿಂದ ನಿಮ್ಮನ್ನು ನಿಮ್ಮ ನಾಡಿನಿಂದ ಹೊರಹಾಕಲೆಂದೂ, ನಿಮ್ಮ ಅತ್ಯುತ್ತಮ ಧರ್ಮವನ್ನು ನಾಶ ಮಾಡಲೆಂದೂ ಬಯಸುತ್ತಾರೆ.
فَأَجْمِعُوا كَيْدَكُمْ ثُمَّ ائْتُوا صَفًّا ۚ وَقَدْ أَفْلَحَ الْيَوْمَ مَنِ اسْتَعْلَىٰ ٦٤
📖 ಅನುವಾದ
ಆಯತ್ 64
ಆದುದರಿಂದ ನೀವು ನಿಮ್ಮ ಎಲ್ಲಾ ತಂತ್ರಗಳನ್ನು ಒಟ್ಟುಗೂಡಿಸಿರಿ. ಅನಂತರ ನೀವು ಒಂದೇ ಅಣಿಯಾಗಿ ರಂಗಕ್ಕಿಳಿಯಿರಿ.ಇAದು ಯಾರು ಮೇಲುಗೈ ಸಾಧಿಸುತ್ತಾನೋ ಅವನೇ ಯಶಸ್ಸು ಪಡೆಯುವನು.
قَالُوا يَا مُوسَىٰ إِمَّا أَن تُلْقِيَ وَإِمَّا أَن نَّكُونَ أَوَّلَ مَنْ أَلْقَىٰ ٦٥
📖 ಅನುವಾದ
ಆಯತ್ 65
ಜಾದುಗಾರರು ಹೇಳಿದರು: ಓ ಮೂಸಾ, ಒಂದೋ ನೀವು ಮೊದಲು ಮೊಡಿ ಹಾಕಿರಿ? ಇಲ್ಲವೆ ನಾವು ಮೊದಲು ಹಾಕುವೆವು?
قَالَ بَلْ أَلْقُوا ۖ فَإِذَا حِبَالُهُمْ وَعِصِيُّهُمْ يُخَيَّلُ إِلَيْهِ مِن سِحْرِهِمْ أَنَّهَا تَسْعَىٰ ٦٦
📖 ಅನುವಾದ
ಆಯತ್ 66
ಅವರು ಉತ್ತರಿಸಿದರು: ಇಲ್ಲ, ನೀವೇ ಮೊದಲು ಹಾಕಿಬಿಡಿರಿ. ಕೂಡಲೇ ಮೂಸಾರವರಿಗೆ ಅವರ ಹಗ್ಗಗಳು ಹಾಗೂ ಲಾಠಿಗಳು ಅವರ ಜಾದೂವಿನ ಬಲದಿಂದ ಓಡಾಡುತ್ತಿರುವಂತೆ ಭಾಸವಾಯಿತು.
قُلْنَا لَا تَخَفْ إِنَّكَ أَنتَ الْأَعْلَىٰ ٦٨
📖 ಅನುವಾದ
ಆಯತ್ 68
ಆಗ ನಾವು (ಅಲ್ಲಾಹ್) ಹೇಳಿದೆವು: ನೀವು ಭಯಪಡಬೇಡಿ. ನಿಶ್ಚಯವಾಗಿಯೂ ನೀವೇ ಮೇಲುಗೈ ಸಾಧಿಸುವಿರಿ.
وَأَلْقِ مَا فِي يَمِينِكَ تَلْقَفْ مَا صَنَعُوا ۖ إِنَّمَا صَنَعُوا كَيْدُ سَاحِرٍ ۖ وَلَا يُفْلِحُ السَّاحِرُ حَيْثُ أَتَىٰ ٦٩
📖 ಅನುವಾದ
ಆಯತ್ 69
ನೀವು ನಿಮ್ಮ ಬಲಗೈಯಲ್ಲಿರುವುದನ್ನು ಕೆಳಗೆ ಹಾಕಿಬಿಡಿ. ಅದು ಅವರು ಮಾಡಿರುವುದೆಲ್ಲವನ್ನು ನುಂಗಿಬಿಡುವುದು. ಅವರು ಉಂಟುಮಾಡಿರುವುದೇನಿದ್ದರೂ ಕೇವಲ ಜಾದೂಗಾರರ ಕೈಚಳಕ ಮಾತ್ರ ಮತ್ತು ಜಾದೂಗಾರನು ಎಲ್ಲಿಂದ ಬಂದಿದ್ದರೂ ಯಶಸ್ವಿಯಾಗಲಾರ.
فَأُلْقِيَ السَّحَرَةُ سُجَّدًا قَالُوا آمَنَّا بِرَبِّ هَارُونَ وَمُوسَىٰ ٧٠
📖 ಅನುವಾದ
ಆಯತ್ 70
ಕೊನೆಗಂತೂ ಸಕಲ ಜಾದೂಗಾರರು ನೆಲಕ್ಕೆ ಬಿದ್ದು ಸಾಷ್ಟಾಂಗವೆರಗಿದರು ಮತ್ತು ಸಾರಿಬಿಟ್ಟರು: ನಾವು ಹಾರೂನ್ ಮತ್ತು ಮೂಸಾರವರ ಪ್ರಭುವಿನಲ್ಲಿ ವಿಶ್ವಾಸವಿರಿಸಿದೆವು.
قَالَ آمَنتُمْ لَهُ قَبْلَ أَنْ آذَنَ لَكُمْ ۖ إِنَّهُ لَكَبِيرُكُمُ الَّذِي عَلَّمَكُمُ السِّحْرَ ۖ فَلَأُقَطِّعَنَّ أَيْدِيَكُمْ وَأَرْجُلَكُم مِّنْ خِلَافٍ وَلَأُصَلِّبَنَّكُمْ فِي جُذُوعِ النَّخْلِ وَلَتَعْلَمُنَّ أَيُّنَا أَشَدُّ عَذَابًا وَأَبْقَىٰ ٧١
📖 ಅನುವಾದ
ಆಯತ್ 71
ಫಿರ್‌ಔನ್ ಹೇಳಿದನು: ನಾನು ನಿಮಗೆ ಅನುಮತಿ ನೀಡುವ ಮೊದಲೇ ನೀವು ಅವನಲ್ಲಿ ವಿಶ್ವಾಸವಿರಿಸಿದ್ದೀರಾ? ನಿಜವಾಗಿಯೂ ಅವನೇ ನಿಮ್ಮೆಲ್ಲರಿಗೆ ಜಾದೂವನ್ನು ಕಲಿಸಿದ ನಿಮ್ಮ ಹಿರಿಯವನಾಗಿರಬೇಕು. (ಕೇಳಿರಿ) ನಾನು ನಿಮ್ಮ ಕೈ, ಕಾಲುಗಳನ್ನು ವಿರುದ್ಧ ದಿಕ್ಕಿನಿಂದ ಕತ್ತರಿಸಿ ಖರ್ಜೂರ ಮರದ ಕಾಂಡಗಳ ಮೇಲೆ ಶಿಲುಬೆಗೇರಿಸಿ ಬಿಡುವೆನು.ಆಗ ನಿಮಗೆ ನಮ್ಮ ಪೈಕಿ ಯಾರ ಶಿಕ್ಷೆ ಕಠಿಣವೆಂದೂ, ಹಾಗೂ ಶಾಶ್ವತವೆಂದೂ ಚೆನ್ನಾಗಿ ತಿಳಿಯುವುದು.
قَالُوا لَن نُّؤْثِرَكَ عَلَىٰ مَا جَاءَنَا مِنَ الْبَيِّنَاتِ وَالَّذِي فَطَرَنَا ۖ فَاقْضِ مَا أَنتَ قَاضٍ ۖ إِنَّمَا تَقْضِي هَٰذِهِ الْحَيَاةَ الدُّنْيَا ٧٢
📖 ಅನುವಾದ
ಆಯತ್ 72
ಜಾದೂಗಾರರು ಹೀಗೆ ಉತ್ತರಿಸಿದರು: ನಮ್ಮ ಮುಂದೆ ಬಂದಿರುವAತಹ ಆಧಾರ ಪ್ರಮಾಣಗಳಿಗಿಂತ ಹಾಗೂ ನಮ್ಮನ್ನು ಸೃಷ್ಟಿಸಿರುವ ಅಲ್ಲಾಹನಿಗಿಂತ ನಿನಗೆ ನಾವು ಪ್ರಾಮುಖ್ಯತೆಯನ್ನು ಖಂಡಿತ ನೀಡಲಾರೆವು. ಇನ್ನು ನೀನೇನು ವಿಧಿಸಲಿರುವೆಯೋ ಅದನ್ನು ವಿಧಿಸು.ನೀನು ಈ ಐಹಿಕ ಜೀವನದಲ್ಲಿ ಮಾತ್ರವೇ ತೀರ್ಮಾನ ಮಾಡಬಲ್ಲೆ.
إِنَّا آمَنَّا بِرَبِّنَا لِيَغْفِرَ لَنَا خَطَايَانَا وَمَا أَكْرَهْتَنَا عَلَيْهِ مِنَ السِّحْرِ ۗ وَاللَّهُ خَيْرٌ وَأَبْقَىٰ ٧٣
📖 ಅನುವಾದ
ಆಯತ್ 73
ನಮ್ಮ ಪಾಪಗಳನ್ನು ಮತ್ತು ನೀನು ನಮ್ಮಿಂದ ಬಲವಂತವಾಗಿ ಮಾಡಿಸಿದ ಜಾದೂವಿನ(ಪಾಪವನ್ನು) ಕ್ಷಮಿಸಿಬಿಡಲೆಂದು, ನಾವು ನಮ್ಮ ಪ್ರಭುವಿನ ಮೇಲೆ ವಿಶ್ವಾಸವಿರಿಸಿದ್ದೇವೆ. ಮತ್ತು ಅಲ್ಲಾಹನು ಅತ್ಯುತ್ತಮನು, ಅತ್ಯಂತ ಶಾಶ್ವತನು ಆಗಿರುತ್ತಾನೆ.
إِنَّهُ مَن يَأْتِ رَبَّهُ مُجْرِمًا فَإِنَّ لَهُ جَهَنَّمَ لَا يَمُوتُ فِيهَا وَلَا يَحْيَىٰ ٧٤
📖 ಅನುವಾದ
ಆಯತ್ 74
ವಾಸ್ತವದಲ್ಲಿ ಯಾರು ತನ್ನ ಪ್ರಭುವಿನ ಬಳಿ ಅಪರಾಧಿಯಾಗಿ ಬರುತ್ತಾನೋ ಅವನಿಗೆ ನರಕವಿರುವುದು. ಅಲ್ಲಿ ಅವನು ಸಾಯವುದೂ ಇಲ್ಲ, ಬದುಕುವುದೂ ಇಲ್ಲ.
وَمَن يَأْتِهِ مُؤْمِنًا قَدْ عَمِلَ الصَّالِحَاتِ فَأُولَٰئِكَ لَهُمُ الدَّرَجَاتُ الْعُلَىٰ ٧٥
📖 ಅನುವಾದ
ಆಯತ್ 75
ಇನ್ನು ಯಾರು ಸತ್ಕರ್ಮಗಳನ್ನು ಮಾಡಿ ಸತ್ಯವಿಶ್ವಾಸಿಯಾಗಿರುವ ಸ್ಥಿತಿಯಲ್ಲಿ ಅವನ ಬಳಿಗೆ ಹಾಜರಾಗುತ್ತಾನೋ ಅವನಿಗೆ ಉನ್ನತ ಸ್ಥಾನಗಳಿರುವುವು.
جَنَّاتُ عَدْنٍ تَجْرِي مِن تَحْتِهَا الْأَنْهَارُ خَالِدِينَ فِيهَا ۚ وَذَٰلِكَ جَزَاءُ مَن تَزَكَّىٰ ٧٦
📖 ಅನುವಾದ
ಆಯತ್ 76
ಅವರಿಗೆ ಶಾಶ್ವತವಾದ ಸ್ವರ್ಗೋದ್ಯಾನಗಳಿವೆ. ಅವುಗಳ ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವುವು. ಅವರು ಅದರಲ್ಲಿ ಶಾಶ್ವತವಾಗಿರುವರು. ಪರಿಶುದ್ಧನಾಗಿರುವ ಪ್ರತಿಯೊಬ್ಬ ವ್ಯಕ್ತಿಯ ಪ್ರತಿಫಲವು ಇದೇ ಆಗಿರುತ್ತದೆ.
وَلَقَدْ أَوْحَيْنَا إِلَىٰ مُوسَىٰ أَنْ أَسْرِ بِعِبَادِي فَاضْرِبْ لَهُمْ طَرِيقًا فِي الْبَحْرِ يَبَسًا لَّا تَخَافُ دَرَكًا وَلَا تَخْشَىٰ ٧٧
📖 ಅನುವಾದ
ಆಯತ್ 77
ನಾವು ಮೂಸಾರೆಡೆಗೆ ದಿವ್ಯವಾಣಿ ಮಾಡಿದೆವು: ನೀವು ರಾತ್ರೋ ರಾತ್ರಿ ನನ್ನ ದಾಸರನ್ನು ಕರೆದುಕೊಂಡು ಹೊರಡಿರಿ ಮತ್ತು ಅವರಿಗೆ ಸಮುದ್ರದಲ್ಲಿ (ತಮ್ಮ ಕೋಲಿನಿಂದ) ಒಣಗಿದ ದಾರಿಯನ್ನು ನಿರ್ಮಿಸಿಕೊಡಿ ಆಮೇಲೆ ನಿಮ್ಮನ್ನು ಯಾರಾದರೂ ಬೆನ್ನಟ್ಟಿ ಬರುವರೆಂದು ಭಯ ಪಡಬೇಡಿರಿ ಅಥವಾ ಇನ್ನಾವ ಭಯವಾಗಲಿ ಬೇಡ.
فَأَتْبَعَهُمْ فِرْعَوْنُ بِجُنُودِهِ فَغَشِيَهُم مِّنَ الْيَمِّ مَا غَشِيَهُمْ ٧٨
📖 ಅನುವಾದ
ಆಯತ್ 78
ಫಿರ್‌ಔನನು ತನ್ನ ಸೈನ್ಯದೊಂದಿಗೆ ಅವರನ್ನು ಬೆನ್ನಟ್ಟಿದನು. ಅನಂತರ ಸಮುದ್ರವು ಅವರೆಲ್ಲರನ್ನು ಆವರಿಸುವ ರೀತಿಯಲ್ಲಿ ಆವರಿಸಿಬಿಟ್ಟಿತು.
وَأَضَلَّ فِرْعَوْنُ قَوْمَهُ وَمَا هَدَىٰ ٧٩
📖 ಅನುವಾದ
ಆಯತ್ 79
ಫಿರ್‌ಔನನು ತನ್ನ ಜನಾಂಗವನ್ನು ದಾರಿಗೆಡಿಸಿ ಬಿಟ್ಟನು ಮತ್ತು ಸನ್ಮಾರ್ಗವನ್ನು ತೋರಿಸಲಿಲ್ಲ.
يَا بَنِي إِسْرَائِيلَ قَدْ أَنجَيْنَاكُم مِّنْ عَدُوِّكُمْ وَوَاعَدْنَاكُمْ جَانِبَ الطُّورِ الْأَيْمَنَ وَنَزَّلْنَا عَلَيْكُمُ الْمَنَّ وَالسَّلْوَىٰ ٨٠
📖 ಅನುವಾದ
ಆಯತ್ 80
ಓ ಇಸ್ರಾಯೀಲ್ ಸಂತತಿಗಳೇ, ನಾವು ನಿಮ್ಮನ್ನು ನಿಮ್ಮ ಶತ್ರುವಿನಿಂದ ರಕ್ಷಿಸಿದೆವು ಮತ್ತು ನಿಮಗೆ ತೂರ್ ಪರ್ವತದ ಬಲಭಾಗದ ವಾಗ್ದಾನವನ್ನು ಮಾಡಿದೆವು ಮತ್ತು ನಿಮ್ಮ ಮೇಲೆ ಮನ್ನಾ (ಒಂದುರೀತಿಯ ಸಿಹಿ ಪದಾರ್ಥ) ಮತ್ತು ಲಾವಕ್ಕಿಯÀನ್ನು ಇಳಿಸಿದೆವು.
كُلُوا مِن طَيِّبَاتِ مَا رَزَقْنَاكُمْ وَلَا تَطْغَوْا فِيهِ فَيَحِلَّ عَلَيْكُمْ غَضَبِي ۖ وَمَن يَحْلِلْ عَلَيْهِ غَضَبِي فَقَدْ هَوَىٰ ٨١
📖 ಅನುವಾದ
ಆಯತ್ 81
ನಾವು ನಿಮಗೆ ದಯಪಾಲಿಸಿದಂತಹ ಶುದ್ಧ ಆಹಾರವನ್ನು ತಿನ್ನಿರಿ ಹಾಗೂ ಇದರಲ್ಲಿ ನೀವು ಮಿತಿ ಮೀರಬೇಡಿರಿ. ಹಾಗೇನಾದರೂ ಆದರೆ ನಿಮ್ಮ ಮೇಲೆ ನನ್ನ ಕೋಪ ಎರಗುವುದು ಮತ್ತು ಯಾರ ಮೇಲೆ ನನ್ನ ಕೋಪ ಎರಗುವುದೋ ಅವನು ಖಂಡಿತ ಪತನವಾಗಿಬಿಟ್ಟನು.
وَإِنِّي لَغَفَّارٌ لِّمَن تَابَ وَآمَنَ وَعَمِلَ صَالِحًا ثُمَّ اهْتَدَىٰ ٨٢
📖 ಅನುವಾದ
ಆಯತ್ 82
ಆದರೆ, ನಿಸ್ಸಂಶಯವಾಗಿಯೂ ಪಶ್ಚಾತ್ತಾಪ ಪಟ್ಟು ಸತ್ಯವಿಶ್ವಾಸವಿರಿಸಿ, ಸತ್ಕರ್ಮಗಳನ್ನು ಕೈಗೊಂಡು ಆ ಬಳಿಕ ಸನ್ಮಾರ್ಗದಲ್ಲಿ ನೆಲೆನಿಂತವರಿಗೆ ನಾನು ಅಧಿಕವಾಗಿ ಕ್ಷಮೆ ನೀಡುವವನಾಗಿರುವೆನು.
۞ وَمَا أَعْجَلَكَ عَن قَوْمِكَ يَا مُوسَىٰ ٨٣
📖 ಅನುವಾದ
ಆಯತ್ 83
ಓ ಮೂಸಾ, ನಿನ್ನ ಜನಾಂಗವನ್ನು ಬಿಟ್ಟು ಅದ್ಯಾವ ವಸ್ತುವು ನಿನ್ನನ್ನು ಇಷ್ಟು ಶೀಘ್ರವಾಗಿ ಕರೆತಂದಿತು?
قَالَ هُمْ أُولَاءِ عَلَىٰ أَثَرِي وَعَجِلْتُ إِلَيْكَ رَبِّ لِتَرْضَىٰ ٨٤
📖 ಅನುವಾದ
ಆಯತ್ 84
ಅವರು ಉತ್ತರಿಸಿದರು: ಅವರು ನನ್ನ ಬೆನ್ನ ಹಿಂದೆಯೇ ಇದ್ದಾರೆ ಓ ನನ್ನ ಪ್ರಭು ನೀನು ಸಂತುಷ್ಟನಾಗಲೆAದು ನಾನು ನಿನ್ನೆಡೆಗೆ ಆತುರಪಟ್ಟು ಬಂದಿರುವೆನು.
قَالَ فَإِنَّا قَدْ فَتَنَّا قَوْمَكَ مِن بَعْدِكَ وَأَضَلَّهُمُ السَّامِرِيُّ ٨٥
📖 ಅನುವಾದ
ಆಯತ್ 85
ಅಲ್ಲಾಹನು ಹೇಳಿದನು: ನಾವು ನಿನ್ನ ಜನಾಂಗವನ್ನು ನಿನ್ನ ನಂತರ ಪರೀಕ್ಷೆಗೊಳಪಡಿಸಿರುವೆವು ಮತ್ತು ಅವರನ್ನು ಸಾಮಿರಿಯು ದಾರಿ ತಪ್ಪಿಸಿರುವನು.
فَرَجَعَ مُوسَىٰ إِلَىٰ قَوْمِهِ غَضْبَانَ أَسِفًا ۚ قَالَ يَا قَوْمِ أَلَمْ يَعِدْكُمْ رَبُّكُمْ وَعْدًا حَسَنًا ۚ أَفَطَالَ عَلَيْكُمُ الْعَهْدُ أَمْ أَرَدتُّمْ أَن يَحِلَّ عَلَيْكُمْ غَضَبٌ مِّن رَّبِّكُمْ فَأَخْلَفْتُم مَّوْعِدِي ٨٦
📖 ಅನುವಾದ
ಆಯತ್ 86
ಆಗ ಮೂಸಾ ತನ್ನ ಜನಾಂಗದೆಡೆಗೆ ಕುಪಿತರಾಗಿ ಮತ್ತು ವ್ಯಾಕುಲ ಚಿತ್ತರಾಗಿ ಹಿಂದಿರುಗಿದರು ಮತ್ತು ಹೇಳಿದರು: ಓ ನನ್ನ ಜನಾಂಗವೇ! ನಿಮ್ಮ ಪ್ರಭು ಉತ್ತಮವಾದ ವಾಗ್ದಾನವೊಂದನ್ನು ನಿಮಗೆ ಮಾಡಿರಿಲಿಲ್ಲವೇ? ನಿಮಗೆ ಅವನ ಕಾಲಾವಧಿಯು ಸುದೀರ್ಘವೆನಿಸಿತೇ? ಅಥವಾ ನಿಮ್ಮ ಪ್ರಭುವಿನ ಕೋಪವು ನಿಮ್ಮ ಮೇಲೆ ಎರಗಿ ಬಿಡಲೆಂದು ನೀವು ಬಯಸಿಬಿಟ್ಟಿರಾ? ಹೀಗೆ ನೀವು ನನ್ನ ಕರಾರನ್ನು ಉಲ್ಲಂಘಿಸಿಬಿಟ್ಟಿರಿ.
قَالُوا مَا أَخْلَفْنَا مَوْعِدَكَ بِمَلْكِنَا وَلَٰكِنَّا حُمِّلْنَا أَوْزَارًا مِّن زِينَةِ الْقَوْمِ فَقَذَفْنَاهَا فَكَذَٰلِكَ أَلْقَى السَّامِرِيُّ ٨٧
📖 ಅನುವಾದ
ಆಯತ್ 87
ಅವರು ಹೇಳಿದರು: ನಾವು ನಮ್ಮ ಸ್ವಇಚ್ಛೆಯಿಂದ ನಿಮ್ಮೊಂದಿಗಿನ ಕರಾರನ್ನು ಉಲ್ಲಂಘಿಸಿಲ್ಲ. ನಾವು ಜನರ ಆಭರಣಗಳ ಹೊರೆಯನ್ನು ಹೇರಲ್ಪಟ್ಟಿದ್ದೆವು. ಆದ್ದರಿಂದ ನಾವು ಅವುಗಳನ್ನು ಬೆಂಕಿಯಲ್ಲಿ ಹಾಕಿ ಬಿಟ್ಟೆವು ಮತ್ತು ಅದೇ ಪ್ರಕಾರ ಸಾಮಿರಿಯು ಸಹ ತನ್ನ ಬಳಿಯಿರುವುದನ್ನು ಹಾಕಿಬಿಟ್ಟನು.
فَأَخْرَجَ لَهُمْ عِجْلًا جَسَدًا لَّهُ خُوَارٌ فَقَالُوا هَٰذَا إِلَٰهُكُمْ وَإِلَٰهُ مُوسَىٰ فَنَسِيَ ٨٨
📖 ಅನುವಾದ
ಆಯತ್ 88
ಅನಂತರ ಅವನು ಅವರಿಗೋಸ್ಕರ ಒಂದು ಕರುವಿನ ಪ್ರತಿಮೆಯನ್ನು ಹೊರ ತಂದನು. ಅದರಿಂದ ದನದಂತಹ ಶಬ್ದವೂ ಹೊರಡುತ್ತಿತ್ತು. ಅನಂತರ ಸಾಮಿರಿಯ ಅನುಯಾಯಿಗಳು ಇದುವೇ ನಿಮ್ಮ ದೇವರು, ಮೂಸಾನ ದೇವರು. ಆದರೆ ಮೂಸಾ ಮರೆತುಬಿಟ್ಟಿದ್ದಾರೆ ಎಂದನು.
أَفَلَا يَرَوْنَ أَلَّا يَرْجِعُ إِلَيْهِمْ قَوْلًا وَلَا يَمْلِكُ لَهُمْ ضَرًّا وَلَا نَفْعًا ٨٩
📖 ಅನುವಾದ
ಆಯತ್ 89
ಅದು ಅವರ ಮಾತಿಗೆ ಯಾವ ಉತ್ತರವನ್ನು ನೀಡಲಾರದೆಂದೂ, ಅದು ಅವರಿಗೆ ಯಾವುದೇ ಹಾನಿಯನ್ನಾಗಲೀ, ಲಾಭವನ್ನಾಗಲೀ ಕೊಡುವ ಅಧಿಕಾರ ಹೊಂದಿಲ್ಲವೆAದು ಈ ಪಥಭ್ರಷ್ಟರು ಕಾಣುವುದಿಲ್ಲವೇ?
وَلَقَدْ قَالَ لَهُمْ هَارُونُ مِن قَبْلُ يَا قَوْمِ إِنَّمَا فُتِنتُم بِهِ ۖ وَإِنَّ رَبَّكُمُ الرَّحْمَٰنُ فَاتَّبِعُونِي وَأَطِيعُوا أَمْرِي ٩٠
📖 ಅನುವಾದ
ಆಯತ್ 90
ಹಾರೂನ್‌ರವರು (ಮೂಸ ಬರುವುದಕ್ಕಿಂತ) ಮೊದಲೇ ಅವರಿಗೆ ಹೇಳಿದ್ದರು: ಓ ನನ್ನ ಜನಾಂಗವೇ, ನೀವು ಈ ಕರುವಿನ ಮೂಲಕ ಪರೀಕ್ಷೆಗೊಳಗಾಗಿರುವಿರಿ. ನಿಶ್ಚಯವಾಗಿಯು ನಿಮ್ಮ ನೈಜ ಪ್ರಭು ಪರಮ ದಯಾಮಯನಾದ ಅಲ್ಲಾಹನಾಗಿದ್ದಾನೆ. ಆದ್ದರಿಂದ ನೀವೆಲ್ಲರೂ ನನ್ನನ್ನು ಅನುಸರಿಸಿರಿ ಮತ್ತು ನನ್ನ ಆದೇಶವನ್ನು ಪಾಲಿಸಿರಿ.
قَالُوا لَن نَّبْرَحَ عَلَيْهِ عَاكِفِينَ حَتَّىٰ يَرْجِعَ إِلَيْنَا مُوسَىٰ ٩١
📖 ಅನುವಾದ
ಆಯತ್ 91
ಅವರು ಉತ್ತರ ನೀಡಿದರು: ಮೂಸಾ ನಮ್ಮೆಡೆಗೆ ಮರಳಿ ಬರುವವರೆಗೆ ನಾವು ಇದರ ಆರಾಧನೆಯನ್ನೇ ಮಾಡುತ್ತಿರುವೆವು.
أَلَّا تَتَّبِعَنِ ۖ أَفَعَصَيْتَ أَمْرِي ٩٣
📖 ಅನುವಾದ
ಆಯತ್ 93
ಮೂಸಾ ಕೇಳಿದರು: ಓ ಹಾರೂನ್, ಇವರು ಮಾರ್ಗಭ್ರಷ್ಟರಾಗುತ್ತಿರುವುದನ್ನು ಕಂಡಾಗ ನನ್ನ ಅನುಸರಣೆ ಮಾಡದಂತೆ ನಿನ್ನನ್ನು ತಡೆದಿದ್ದಾದರೂ ಏನು? ನೀನು ಸಹ ನನ್ನ ಆದೇಶವನ್ನು ಧಿಕ್ಕರಿಸಿ ಬಿಟ್ಟೆಯಾ?
قَالَ يَا ابْنَ أُمَّ لَا تَأْخُذْ بِلِحْيَتِي وَلَا بِرَأْسِي ۖ إِنِّي خَشِيتُ أَن تَقُولَ فَرَّقْتَ بَيْنَ بَنِي إِسْرَائِيلَ وَلَمْ تَرْقُبْ قَوْلِي ٩٤
📖 ಅನುವಾದ
ಆಯತ್ 94
ಹಾರೂನ್ ಹೇಳಿದರು: ಓ ನನ್ನ ತಾಯಿಯ ಪುತ್ರನೇ, ನೀನು ನನ್ನ ಗಡ್ಡವನ್ನು, ತಲೆಗೂದಲನ್ನು ಹಿಡಿದು ಎಳೆಯಬೇಡ, ನೀನು ಇಸ್ರಾಯೀಲ್ ಸಂತತಿಗಳ ನಡುವೆ ಒಡಕುಂಟು ಮಾಡಿದೆ ಮತ್ತು ನನ್ನ ಮಾತಿಗೆ ಬೆಲೆ ಕೊಡಲಿಲ್ಲವೆಂದು ನೀನು ಹೇಳಬಹುದೆಂದು ನಾನು ಭಯಪಟ್ಟೆ.
قَالَ بَصُرْتُ بِمَا لَمْ يَبْصُرُوا بِهِ فَقَبَضْتُ قَبْضَةً مِّنْ أَثَرِ الرَّسُولِ فَنَبَذْتُهَا وَكَذَٰلِكَ سَوَّلَتْ لِي نَفْسِي ٩٦
📖 ಅನುವಾದ
ಆಯತ್ 96
ಅವನು ಉತ್ತರಿಸಿದನು: ಅವರಿಗೆ ಕಾಣದಂತಹ ವಸ್ತುವೊಂದು ನನಗೆ ಕಂಡಿತು. ಆಗ ನಾನು ದೇವದೂತರ ಹೆಜ್ಜೆ ಗುರಿತಿನಿಂದ ಒಂದು ಹಿಡಿ ಮಣ್ಣನ್ನು ಮುಷ್ಠಿಯಲ್ಲಿ ತೆಗೆದುಕೊಂಡು ಅದರಲ್ಲಿ ಹಾಕಿ ಬಿಟ್ಟೆನು.ಹೀಗೆ ನನ್ನ ಮನಸ್ಸು ನನಗೆ ಇದನ್ನು ಸುಂದರವಾಗಿ ತೋರಿಸಿತು.
قَالَ فَاذْهَبْ فَإِنَّ لَكَ فِي الْحَيَاةِ أَن تَقُولَ لَا مِسَاسَ ۖ وَإِنَّ لَكَ مَوْعِدًا لَّن تُخْلَفَهُ ۖ وَانظُرْ إِلَىٰ إِلَٰهِكَ الَّذِي ظَلْتَ عَلَيْهِ عَاكِفًا ۖ لَّنُحَرِّقَنَّهُ ثُمَّ لَنَنسِفَنَّهُ فِي الْيَمِّ نَسْفًا ٩٧
📖 ಅನುವಾದ
ಆಯತ್ 97
ಅವರು ಹೇಳಿದರು: ಹಾಗಾದರೆ ಇಲ್ಲಿಂದ ಹೊರಟು ಹೋಗು. ಐಹಿಕ ಜೀವನದ ನಿನ್ನ ಶಿಕ್ಷೆಯು ಜೀವನವಿಡೀ ನನ್ನನ್ನು ಮುಟ್ಟಬೇಡಿ ಎಂದು ಹೇಳುತ್ತಿರುವುದಾಗಿದೆ ಮತ್ತು ನಿನಗೆ ಇನ್ನೊಂದು ವಾಗ್ದತ್ತ ಸಮಯವೂ ಇದೆ.ಅದು ನಿನ್ನಿಂದ ಎಂದೂ ತಪ್ಪಿಹೋಗದು. ಮತ್ತು ನೀನು ಪೂಜೆಯಲ್ಲಿ ನಿರತನಾಗುತ್ತಿದ್ದ ಆ ನಿನ್ನ ಆರಾಧ್ಯ ದೇವತೆಯನ್ನೂ ನೋಡು. ನಾವದನ್ನು ಸುಟ್ಟು ಬಿಡುವೆವು ಆ ಬಳಿಕ ಅದರ ಬೂದಿಯನ್ನು ಸಮುದ್ರದಲ್ಲಿ ಹಾರಿಸಿ ಬಿಡುವೆವು.
إِنَّمَا إِلَٰهُكُمُ اللَّهُ الَّذِي لَا إِلَٰهَ إِلَّا هُوَ ۚ وَسِعَ كُلَّ شَيْءٍ عِلْمًا ٩٨
📖 ಅನುವಾದ
ಆಯತ್ 98
ವಾಸ್ತವದಲ್ಲಿ ನಿಮ್ಮ ನೈಜ ಆರಾಧ್ಯ ಕೇವಲ ಅಲ್ಲಾಹನಾಗಿದ್ದಾನೆ. ಅವನ ಹೊರತು ಇನ್ನಾವ ಆರಾಧ್ಯನಿಲ್ಲ. ಅವನ ಜ್ಞಾನವು ಸಕಲ ವಸ್ತುಗಳನ್ನು ವ್ಯಾಪಿಸಿಕೊಂಡಿದೆ.
كَذَٰلِكَ نَقُصُّ عَلَيْكَ مِنْ أَنبَاءِ مَا قَدْ سَبَقَ ۚ وَقَدْ آتَيْنَاكَ مِن لَّدُنَّا ذِكْرًا ٩٩
📖 ಅನುವಾದ
ಆಯತ್ 99
(ಓ ಪೈಗಂಬರರೇ) ಇದೇ ಪ್ರಕಾರ ನಾವು ನಿಮಗೆ ಕೆಲವು ಗತ ವೃತ್ತಾಂತಗಳನ್ನು ತಿಳಿಸಿಕೊಡುತ್ತೇವೆ ಮತ್ತು ನಿಶ್ಚಯವಾಗಿಯೂ ನಾವು ನಿಮಗೆ ನಮ್ಮ ವತಿಯ ಉದ್ಬೋಧೆ (ಕುರ್‌ಆನ್)ಯನ್ನು ದಯಪಾಲಿಸಿರುತ್ತೇವೆ.
مَّنْ أَعْرَضَ عَنْهُ فَإِنَّهُ يَحْمِلُ يَوْمَ الْقِيَامَةِ وِزْرًا ١٠٠
📖 ಅನುವಾದ
ಆಯತ್ 100
ಯಾರು ಅದರಿಂದ ವಿಮುಖನಾಗುತ್ತಾನೋ ಅವನು ನಿಶ್ಚಯವಾಗಿಯೂ ಪುನರುತ್ಥಾನದ ದಿನದಂದು ಪಾಪದ ಭಾರವನ್ನು ಹೊರುವನು.
خَالِدِينَ فِيهِ ۖ وَسَاءَ لَهُمْ يَوْمَ الْقِيَامَةِ حِمْلًا ١٠١
📖 ಅನುವಾದ
ಆಯತ್ 101
ಅವರು ಅದರಲ್ಲಿ ಶಾಶ್ವತವಾಗಿರುವರು ಮತ್ತು ಅವರಿಗೆ ಪುನರುತ್ಥಾನದ ದಿನದಂದು ನಿಕೃಷ್ಟ ಭಾರವಿರುವುದು.
يَوْمَ يُنفَخُ فِي الصُّورِ ۚ وَنَحْشُرُ الْمُجْرِمِينَ يَوْمَئِذٍ زُرْقًا ١٠٢
📖 ಅನುವಾದ
ಆಯತ್ 102
ಕಹಳೆ ಮೊಳಗುವ ದಿನ ನಾವು ಅಪರಾಧಿಗಳನ್ನು (ಭಯಭೀತಿಯ ನಿಮಿತ್ತ) ನೀಲಿ ನೇತ್ರಗಳೊಂದಿಗೆ ಒಟ್ಟುಗೂಡಿಸುವೆವು.
يَتَخَافَتُونَ بَيْنَهُمْ إِن لَّبِثْتُمْ إِلَّا عَشْرًا ١٠٣
📖 ಅನುವಾದ
ಆಯತ್ 103
ಅವರು ಪರಸ್ಪರ ಪಿಸುಮಾತಿನಲ್ಲಿ: ನೀವು (ಭೂಲೋಕದಲ್ಲಿ) ಕೇವಲ ಹತ್ತು ದಿನಗಳಷ್ಟೇ ತಂಗಿರುವಿರಿ, ಎಂದು ಹೇಳುವರು.
نَّحْنُ أَعْلَمُ بِمَا يَقُولُونَ إِذْ يَقُولُ أَمْثَلُهُمْ طَرِيقَةً إِن لَّبِثْتُمْ إِلَّا يَوْمًا ١٠٤
📖 ಅನುವಾದ
ಆಯತ್ 104
ಅವರು ಹೇಳುತ್ತಿರುವುದರ ವಾಸ್ತವಿಕತೆಯನ್ನು ನಾವು ಚೆನ್ನಾಗಿ ಬಲ್ಲೆವು. ಅವರ ಪೈಕಿ ಅತ್ಯುತ್ತಮ ಸಲಹೆಗಾರ: “ನೀವು ಕೇವಲ ಒಂದು ದಿನ ಮಾತ್ರ ತಂಗಿದ್ದೀರಿ”, ಎನ್ನುವರು.
وَيَسْأَلُونَكَ عَنِ الْجِبَالِ فَقُلْ يَنسِفُهَا رَبِّي نَسْفًا ١٠٥
📖 ಅನುವಾದ
ಆಯತ್ 105
. ಅವರು ನಿಮ್ಮಿಂದ ಭವ್ಯ ಪರ್ವತಗಳ ಬಗ್ಗೆ ವಿಚಾರಿಸುತ್ತಾರೆ. ಹೇಳಿರಿ: ನನ್ನ ಪ್ರಭುವು ಅವುಗಳನ್ನು ಧೂಳನ್ನಾಗಿ ಮಾಡಿ ಹಾರಿಸಿ ಬಿಡುವನು.
فَيَذَرُهَا قَاعًا صَفْصَفًا ١٠٦
📖 ಅನುವಾದ
ಆಯತ್ 106
ಆಮೇಲೆ ಭೂಮಿಯನ್ನು ಸಮತಟ್ಟಾದ ಮೈದಾನವನ್ನಾಗಿ ಮಾಡಿ ಬಿಡುವನು.
لَّا تَرَىٰ فِيهَا عِوَجًا وَلَا أَمْتًا ١٠٧
📖 ಅನುವಾದ
ಆಯತ್ 107
ನೀವು ಅದರಲ್ಲಿ ಯಾವುದೇ ಏರು ಇಳಿತವನ್ನು ಕಾಣಲಾರಿರಿ.
يَوْمَئِذٍ يَتَّبِعُونَ الدَّاعِيَ لَا عِوَجَ لَهُ ۖ وَخَشَعَتِ الْأَصْوَاتُ لِلرَّحْمَٰنِ فَلَا تَسْمَعُ إِلَّا هَمْسًا ١٠٨
📖 ಅನುವಾದ
ಆಯತ್ 108
ಆ ದಿನ ಜನರು ಕರೆ ನೀಡುವಾತನನ್ನು ಯಾವುದೇ ವಕ್ರತೆಯಿಲ್ಲದೆ ಹಿಂಬಾಲಿಸುವರು ಮತ್ತು ಶಬ್ದಗಳು ಪರಮ ದಯಾಮಯನಾದ ಅಲ್ಲಾಹನ ಮುಂದೆ ಅಡಗಿ ಬಿಡುವುವು.ನೀವು ಕೇವಲ ಮೆಲು ಸಪ್ಪಳದ ಹೊರತು ಇನ್ನೇನನ್ನೂ ಕೇಳಲಾರಿರಿ.
يَوْمَئِذٍ لَّا تَنفَعُ الشَّفَاعَةُ إِلَّا مَنْ أَذِنَ لَهُ الرَّحْمَٰنُ وَرَضِيَ لَهُ قَوْلًا ١٠٩
📖 ಅನುವಾದ
ಆಯತ್ 109
ಆ ದಿನ ಪರಮ ದಯಾಮಯನಾದ ಅಲ್ಲಾಹನು ಯಾರಿಗೆ ಅನುಮತಿ ನೀಡುವನೋ, ಮತ್ತು ಯಾರ ಮಾತು ಅವನಿಗೆ ತೃಪ್ತಿಕರವಾಗಿರುವುದೋ ಅವರ ಹೊರತು ಶಿಫಾರಸ್ಸು ಪ್ರಯೋಜನಕ್ಕೆ ಬಾರದು.
يَعْلَمُ مَا بَيْنَ أَيْدِيهِمْ وَمَا خَلْفَهُمْ وَلَا يُحِيطُونَ بِهِ عِلْمًا ١١٠
📖 ಅನುವಾದ
ಆಯತ್ 110
ಜನರ ಮುಂದಿರುವ ಮತ್ತು ಹಿಂದಿರುವ ಎಲ್ಲವನ್ನೂ ಅವನು ಅರಿಯುತ್ತಾನೆ. ಆದರೆ ಇತರರಿಗೆ ಅದರ ಸಂಪೂರ್ಣ ಜ್ಞಾನವಿಲ್ಲ.
۞ وَعَنَتِ الْوُجُوهُ لِلْحَيِّ الْقَيُّومِ ۖ وَقَدْ خَابَ مَنْ حَمَلَ ظُلْمًا ١١١
📖 ಅನುವಾದ
ಆಯತ್ 111
ಮುಖಗಳೆಲ್ಲವೂ ಚಿರಂತನನ್ನೂ, ಸರ್ವ ನಿಂತ್ರಕನೂ ಆದ ಅಲ್ಲಾಹನ ಮುಂದೆ ಶರಣಾಗಿರುವುವು.ಯಾರು ಅಕ್ರಮವನ್ನು ಹೊತ್ತು ಕೊಂಡಿರುತ್ತಾನೋ ಅವನು ನಿಜವಾಗಿಯೂ ಪತನ ಹೊಂದಿದನು.
وَمَن يَعْمَلْ مِنَ الصَّالِحَاتِ وَهُوَ مُؤْمِنٌ فَلَا يَخَافُ ظُلْمًا وَلَا هَضْمًا ١١٢
📖 ಅನುವಾದ
ಆಯತ್ 112
ಮತ್ತು ಯಾರು ಸತ್ಯವಿಶ್ವಾಸಿಯಾಗಿ ಸತ್ಕರ್ಮಗಳನ್ನು ಮಾಡುತ್ತಾನೋ ಅವನಿಗೆ ಯಾವುದೇ ಅನ್ಯಾಯ, ಮತ್ತು ಹಕ್ಕುಚ್ಯುತಿಯ ಭಯವಿಲ್ಲ.
وَكَذَٰلِكَ أَنزَلْنَاهُ قُرْآنًا عَرَبِيًّا وَصَرَّفْنَا فِيهِ مِنَ الْوَعِيدِ لَعَلَّهُمْ يَتَّقُونَ أَوْ يُحْدِثُ لَهُمْ ذِكْرًا ١١٣
📖 ಅನುವಾದ
ಆಯತ್ 113
ಇದೇ ರೀತಿ ನಾವು ಇದನ್ನು (ಅಂತಿಮ ದಿವ್ಯವಾಣಿಯನ್ನು) ನಿಮ್ಮ ಮೇಲೆ ಅರಬಿ ಭಾಷೆಯಲ್ಲಿ ಕುರ್‌ಆನನ್ನಾಗಿ ಅವತೀರ್ಣಗೊಳಿಸಿರುತ್ತೇವೆ. ಹಾಗೂ ಇದರಲ್ಲಿ ವಿಭಿನ್ನ ಶೈಲಿಯ ಮುನ್ನೆಚ್ಚರಿಕೆಯನ್ನು ವಿವರಿಸಿ ಕೊಟ್ಟಿರುತ್ತೇವೆ. ಇದೇಕೆಂದರೆ ಜನರು ಭಯಭಕ್ತಿಯುಳ್ಳವರಾಗಲೆಂದು, ಅಥವಾ ಅವರ ಮನದಲ್ಲಿ ಉಪದೇಶ ಮಾಡಲೆಂದಾಗಿದೆ.
فَتَعَالَى اللَّهُ الْمَلِكُ الْحَقُّ ۗ وَلَا تَعْجَلْ بِالْقُرْآنِ مِن قَبْلِ أَن يُقْضَىٰ إِلَيْكَ وَحْيُهُ ۖ وَقُل رَّبِّ زِدْنِي عِلْمًا ١١٤
📖 ಅನುವಾದ
ಆಯತ್ 114
ಹಾಗೆಯೇ ಮಹೋನ್ನತನಾದ ಅಲ್ಲಾಹನು ನೈಜ ಅಧಿಪತಿ ಯಾಗಿರುವನು. (ಓ ಪೈಗಂಬರರೇ) ಕುರ್‌ಆನಿನ ದಿವ್ಯವಾಣಿಯು ಪೂರ್ತಿಯಾಗುವುದಕ್ಕೂ ಮುನ್ನ ನೀವು ಅದನ್ನು ಪಠಿಸುವುದರಲ್ಲಿ ಆತುರ ಪಡಬೇಡಿ.ಮತ್ತು ಓ ನನ್ನ ಪ್ರಭುವೇ, ನೀನು ನನ್ನ ಜ್ಞಾನವನ್ನು ಹೆಚ್ಚಿಸಿಕೊಡು ಎಂದು ಪ್ರಾರ್ಥಿಸಿರಿ.
وَلَقَدْ عَهِدْنَا إِلَىٰ آدَمَ مِن قَبْلُ فَنَسِيَ وَلَمْ نَجِدْ لَهُ عَزْمًا ١١٥
📖 ಅನುವಾದ
ಆಯತ್ 115
ನಾವು ಇದಕ್ಕೆ ಮೊದಲು ಆದಮ್‌ರವರಿಗೆ ಕರಾರು ಮಾಡಿದ್ದೆವು ಆದರೆ ಅವರು ಮರೆತುಬಿಟ್ಟರು ಮತ್ತು ನಾವು ಅವರಲ್ಲಿ ಯಾವುದೇ ಸ್ಥಿರ ಚಿತ್ತವನ್ನು ಕಾಣಲಿಲ್ಲ.
وَإِذْ قُلْنَا لِلْمَلَائِكَةِ اسْجُدُوا لِآدَمَ فَسَجَدُوا إِلَّا إِبْلِيسَ أَبَىٰ ١١٦
📖 ಅನುವಾದ
ಆಯತ್ 116
ನಾವು ಮಲಕ್‌ಗಳಿಗೆ ಆದಮರಿಗೆ ಸಾಷ್ಟಾಂಗವೆರಗಿರೆAದು ಹೇಳಿದ ಸಂದರ್ಭ: ಆಗ ಇಬ್‌ಲೀಸನ ಹೊರತು ಅವರೆಲ್ಲರೂ ಸಾಷ್ಟಾಂಗವೆರಗಿದರು. ಅವನು ನಿರಾಕರಿಸಿಬಿಟ್ಟನು.
فَقُلْنَا يَا آدَمُ إِنَّ هَٰذَا عَدُوٌّ لَّكَ وَلِزَوْجِكَ فَلَا يُخْرِجَنَّكُمَا مِنَ الْجَنَّةِ فَتَشْقَىٰ ١١٧
📖 ಅನುವಾದ
ಆಯತ್ 117
ಆಗ ನಾವೆಂದೆವು: ಓ ಆದಮ್, ಇವನು ನಿನ್ನ ಮತ್ತು ನಿನ್ನ ಪತ್ನಿಯ ಶತ್ರವಾಗಿದ್ದಾನೆ, ನಿಮ್ಮಬ್ಬರನ್ನು ಸ್ವರ್ಗದಿಂದ ಹೊರಹಾಕಿಸದಿರಲಿ. ಅನ್ಯಥಾ ನೀವು ಆಪತ್ತಿನಲ್ಲಿ ಸಿಲುಕುವಿರಿ.
إِنَّ لَكَ أَلَّا تَجُوعَ فِيهَا وَلَا تَعْرَىٰ ١١٨
📖 ಅನುವಾದ
ಆಯತ್ 118
ನೀವು ಇಲ್ಲಿ ಹಸಿಯುವುದಿಲ್ಲ, ಮತ್ತು ನಗ್ನರಾಗುವುದೂ ಇಲ್ಲ.
وَأَنَّكَ لَا تَظْمَأُ فِيهَا وَلَا تَضْحَىٰ ١١٩
📖 ಅನುವಾದ
ಆಯತ್ 119
ಮತ್ತು ನಿಮಗೆ ಇಲ್ಲಿ ದಾಹವಾಗುವುದೂ ಇಲ್ಲ, ಬಿಸಿಲ ತಾಪವೂ ತಟ್ಟುವುದಿಲ್ಲ.
فَوَسْوَسَ إِلَيْهِ الشَّيْطَانُ قَالَ يَا آدَمُ هَلْ أَدُلُّكَ عَلَىٰ شَجَرَةِ الْخُلْدِ وَمُلْكٍ لَّا يَبْلَىٰ ١٢٠
📖 ಅನುವಾದ
ಆಯತ್ 120
ಆದರೆ ಶೈತಾನನು ಅವರನ್ನು ಪ್ರೇರೇಪಿಸಿಬಿಟ್ಟನು. ಅವನು ಹೇಳಿದನು: ಓ ಆದಮ್ ನಾನು ನಿಮಗೆ ಒಂದು ಅಮರ ವೃಕ್ಷ ಹಾಗೂ ಅನಶ್ವರ ಸಾಮ್ರಾಜ್ಯದ ಕುರಿತು ತಿಳಿಸ ಕೊಡಲೇ
فَأَكَلَا مِنْهَا فَبَدَتْ لَهُمَا سَوْآتُهُمَا وَطَفِقَا يَخْصِفَانِ عَلَيْهِمَا مِن وَرَقِ الْجَنَّةِ ۚ وَعَصَىٰ آدَمُ رَبَّهُ فَغَوَىٰ ١٢١
📖 ಅನುವಾದ
ಆಯತ್ 121
ಕೊನೆಗೆ ಅವರಿಬ್ಬರೂ ಆ ಮರದಿಂದ ತಿಂದರು. ಆಗ ಅವರ ಗುಪ್ತಾಂಗಗಳು ಪರಸ್ಪರ ಗೋಚರವಾದವು ಮತ್ತು ಅವರು ಸ್ವರ್ಗದ ಎಲೆಯಿಂದ ತಮ್ಮ ಮೈಯನ್ನು ಮುಚ್ಚತೊಡಗಿದರು. ಆದಮ್‌ರವರು ತನ್ನ ಪ್ರಭುವಿನ ಆಜ್ಞೋಲ್ಲಂಘನೆ ಮಾಡಿ ದಾರಿತಪ್ಪಿದರು.
ثُمَّ اجْتَبَاهُ رَبُّهُ فَتَابَ عَلَيْهِ وَهَدَىٰ ١٢٢
📖 ಅನುವಾದ
ಆಯತ್ 122
ತರುವಾಯ ಅವರ ಪ್ರಭುವು ಅವರನ್ನು ಆಯ್ದುಕೊಂಡನು. ಅವರ ಪಶ್ಚಾತ್ತಾಪವನ್ನು ಸ್ವೀಕರಿಸಿದನು ಹಾಗೂ ಸನ್ಮಾರ್ಗ ತೋರಿದನು.
قَالَ اهْبِطَا مِنْهَا جَمِيعًا ۖ بَعْضُكُمْ لِبَعْضٍ عَدُوٌّ ۖ فَإِمَّا يَأْتِيَنَّكُم مِّنِّي هُدًى فَمَنِ اتَّبَعَ هُدَايَ فَلَا يَضِلُّ وَلَا يَشْقَىٰ ١٢٣
📖 ಅನುವಾದ
ಆಯತ್ 123
ಅಲ್ಲಾಹನು ಹೇಳಿದನು: ನೀವಿಬ್ಬರು ಇಲ್ಲಿಂದ ಇಳಿದು ಹೋಗಿರಿ. ನೀವು ಪರಸ್ಪರ ಒಬ್ಬರಿಗೊಬ್ಬರು ಶತ್ರುಗಳಾಗಿರುವಿರಿ. ಇನ್ನು ನಿಮ್ಮ ಬಳಿಗೆ ನನ್ನ ಕಡೆಯಿಂದ ಮಾರ್ಗದರ್ಶನವು ಬಂದಾಗ ಯಾರು ನನ್ನ ಮಾರ್ಗದರ್ಶನವನ್ನು ಅನುಸರಿಸುತ್ತಾನೋ ಅವನು ದಾರಿ ತಪ್ಪಲಾರನು ಹಾಗೂ ವಿಪತ್ತಿನಲ್ಲಿ ಸಿಲುಕಲಾರನು.
وَمَنْ أَعْرَضَ عَن ذِكْرِي فَإِنَّ لَهُ مَعِيشَةً ضَنكًا وَنَحْشُرُهُ يَوْمَ الْقِيَامَةِ أَعْمَىٰ ١٢٤
📖 ಅನುವಾದ
ಆಯತ್ 124
ಅಲ್ಲಾಹನು ಹೇಳಿದನು: ನೀವಿಬ್ಬರು ಇಲ್ಲಿಂದ ಇಳಿದು ಹೋಗಿರಿ. ನೀವು ಪರಸ್ಪರ ಒಬ್ಬರಿಗೊಬ್ಬರು ಶತ್ರುಗಳಾಗಿರುವಿರಿ. ಇನ್ನು ನಿಮ್ಮ ಬಳಿಗೆ ನನ್ನ ಕಡೆಯಿಂದ ಮಾರ್ಗದರ್ಶನವು ಬಂದಾಗ ಯಾರು ನನ್ನ ಮಾರ್ಗದರ್ಶನವನ್ನು ಅನುಸರಿಸುತ್ತಾನೋ ಅವನು ದಾರಿ ತಪ್ಪಲಾರನು ಹಾಗೂ ವಿಪತ್ತಿನಲ್ಲಿ ಸಿಲುಕಲಾರನು.
قَالَ رَبِّ لِمَ حَشَرْتَنِي أَعْمَىٰ وَقَدْ كُنتُ بَصِيرًا ١٢٥
📖 ಅನುವಾದ
ಆಯತ್ 125
ಅವನು ಕೇಳುವನು: ಓ ನನ್ನ ಪ್ರಭುವೇ, ನೀನು ನನ್ನನ್ನು ಕುರುಡನನ್ನಾಗಿ ಎಬ್ಬಿಸಿರುವುದೇಕೆ? ವಸ್ತುತಃ ನಾನು ದೃಷ್ಟಿಯುಳ್ಳವನಾಗಿದ್ದೆನು.
قَالَ كَذَٰلِكَ أَتَتْكَ آيَاتُنَا فَنَسِيتَهَا ۖ وَكَذَٰلِكَ الْيَوْمَ تُنسَىٰ ١٢٦
📖 ಅನುವಾದ
ಆಯತ್ 126
ಆಗ ಅಲ್ಲಾಹನು ಹೇಳುವನು: ಇದೇ ಪ್ರಕಾರ ನಮ್ಮ ನಿದರ್ಶನಗಳು ನಿನ್ನ ಬಳಿ ಬಂದಾಗ ಅವುಗಳನ್ನು ನೀನು ಮರೆತು ಬಿಟ್ಟೆ
وَكَذَٰلِكَ نَجْزِي مَنْ أَسْرَفَ وَلَمْ يُؤْمِن بِآيَاتِ رَبِّهِ ۚ وَلَعَذَابُ الْآخِرَةِ أَشَدُّ وَأَبْقَىٰ ١٢٧
📖 ಅನುವಾದ
ಆಯತ್ 127
ಇದೇ ಪ್ರಕಾರ ತನ್ನ ಪ್ರಭುವಿನ ದೃಷ್ಟಾಂತಗಳಲ್ಲಿ ವಿಶ್ವಾಸವಿರಿಸದವನಿಗೆ ನಾವು ಪ್ರತಿಫಲ ನೀಡುವೆವು ಮತ್ತು ನಿಸ್ಸಂಶಯವಾಗಿಯು ಪರಲೋಕದ ಯಾತನೆಯು ಅತ್ಯುಗ್ರವು, ಅತ್ಯಂತ ಶಾಶ್ವತವು ಆಗಿರುತ್ತದೆ.
أَفَلَمْ يَهْدِ لَهُمْ كَمْ أَهْلَكْنَا قَبْلَهُم مِّنَ الْقُرُونِ يَمْشُونَ فِي مَسَاكِنِهِمْ ۗ إِنَّ فِي ذَٰلِكَ لَآيَاتٍ لِّأُولِي النُّهَىٰ ١٢٨
📖 ಅನುವಾದ
ಆಯತ್ 128
ನಾವು ಇವರಿಗಿಂತ ಮುಂಚೆ ಅದೆಷ್ಟೋ ಜನಾಂಗಗಳನ್ನು ನಾಶ ಮಾಡಿದ್ದೇವೆ. ಮತ್ತು ಇವರು ಅವರ ನಾಡುಗಳಲ್ಲಿ ಸಂಚರಿಸುತ್ತಾರೆ. ಇದು ಅವರಿಗೆ ಸನ್ಮಾರ್ಗ ತೋರಲಿಲ್ಲವೇ?ನಿಶ್ಚಯವಾಗಿಯೂ ಇದರಲ್ಲಿ ಬುದ್ಧಿಶಾಲಿಗಳಿಗೆ ಅನೇಕ ನಿದರ್ಶನಗಳಿವೆ.
وَلَوْلَا كَلِمَةٌ سَبَقَتْ مِن رَّبِّكَ لَكَانَ لِزَامًا وَأَجَلٌ مُّسَمًّى ١٢٩
📖 ಅನುವಾದ
ಆಯತ್ 129
(ಓ ಪೈಗಂಬರರೇ) ನಿಮ್ಮ ಪ್ರಭುವಿನಿಂದ ಮೊದಲೇ ನಿರ್ಧರಿತ ವಚನ ಮತ್ತು ನಿಶ್ಚಯಿಸಲಾದ ಕಾಲಾವಧಿ ಇಲ್ಲದಿರುತ್ತಿದ್ದರೆ ಆಗಲೇ (ಸತ್ಯನಿಷೇಧಿ ಖುರೈಶರ ಮೇಲೆ) ಯಾತನೆಯು ಎರಗಿಬಿಡುತ್ತಿತ್ತು.
فَاصْبِرْ عَلَىٰ مَا يَقُولُونَ وَسَبِّحْ بِحَمْدِ رَبِّكَ قَبْلَ طُلُوعِ الشَّمْسِ وَقَبْلَ غُرُوبِهَا ۖ وَمِنْ آنَاءِ اللَّيْلِ فَسَبِّحْ وَأَطْرَافَ النَّهَارِ لَعَلَّكَ تَرْضَىٰ ١٣٠
📖 ಅನುವಾದ
ಆಯತ್ 130
ಅವರಾಡುವ ಮಾತುಗಳ ಬಗ್ಗೆ ಸಹನೆ ವಹಿಸಿರಿ ಮತ್ತು ಸೂರ್ಯೋದಯ ಹಾಗೂ ಸೂರ್ಯಾಸ್ತಮಯಕ್ಕೆ ಮೊದಲು ನಿಮ್ಮ ಪ್ರಭುವಿನ ಸ್ತುತಿಯೊಂದಿಗೆ ಪಾವಿತ್ರö್ಯವನ್ನು ಕೊಂಡಾಡಿರಿ.ರಾತ್ರಿಯ ವೇಳೆಗಳಲ್ಲಿಯು, ಹಗಲಿನ ಅಂಚುಗಳಲ್ಲಿಯು ಅವನ ಪರಿಶುದ್ಧತೆಯನ್ನು ಕೊಂಡಾಡಿರಿ. ನೀವು ಸಂತೃಪ್ತಿ ಪಡೆಯಬಹುದು.
وَلَا تَمُدَّنَّ عَيْنَيْكَ إِلَىٰ مَا مَتَّعْنَا بِهِ أَزْوَاجًا مِّنْهُمْ زَهْرَةَ الْحَيَاةِ الدُّنْيَا لِنَفْتِنَهُمْ فِيهِ ۚ وَرِزْقُ رَبِّكَ خَيْرٌ وَأَبْقَىٰ ١٣١
📖 ಅನುವಾದ
ಆಯತ್ 131
ನಾವು ಸತ್ಯ ನಿಷೇಧಿಗಳ ಪೈಕಿ ವಿವಿಧ ಜನಾಂಗಗಳಿಗೆ ನೀಡಿದ ಸುಖಭೋಗ ಮತ್ತು ಐಹಿಕ ಜೀವನದ ವೈಭವದೆಡೆಗೆ ನೀವು ಕಣ್ಣೆತ್ತೂ ನೋಡಬೇಡಿ. ಅವುಗಳನ್ನು ನಾವು ಪರೀಕ್ಷಿಸಲಿಕ್ಕಾಗಿ ಅವರಿಗೆ ಕೊಟ್ಟಿದ್ದೇವೆ. ನಿಮಗೆ ನಿಮ್ಮ ಪ್ರಭುವಿನಿಂದ ನೀಡಲಾದುದೇ ಉತ್ತಮವೂ, ಅತ್ಯಂತ ಶಾಶ್ವತವೂ ಆಗಿದೆ.
وَأْمُرْ أَهْلَكَ بِالصَّلَاةِ وَاصْطَبِرْ عَلَيْهَا ۖ لَا نَسْأَلُكَ رِزْقًا ۖ نَّحْنُ نَرْزُقُكَ ۗ وَالْعَاقِبَةُ لِلتَّقْوَىٰ ١٣٢
📖 ಅನುವಾದ
ಆಯತ್ 132
ನಿಮ್ಮ ಮನೆಯವರಿಗೆ ನಮಾಝ್‌ನ ಆದೇಶ ನೀಡಿರಿ ಮತ್ತು ನೀವು ಸಹ ಅದರಲ್ಲಿ ಸ್ಥಿರಚಿತ್ತರಾಗಿರಿ. ನಾವು ನಿಮ್ಮಿಂದ ಜೀವನಾಧಾರವನ್ನು ಕೇಳುತ್ತಿಲ್ಲ. ಬದಲಾಗಿ ಸ್ವತಃ ನಾವೇ ನಿಮಗೆ ಜೀವನಾಧಾರ ನೀಡುತ್ತೇವೆ ಮತ್ತು ಭಯಭಕ್ತಿಯುಳ್ಳವರಿಗೇ ಉತ್ತಮ ಪ್ರತಿಫಲವಿರುವುದು.
وَقَالُوا لَوْلَا يَأْتِينَا بِآيَةٍ مِّن رَّبِّهِ ۚ أَوَلَمْ تَأْتِهِم بَيِّنَةُ مَا فِي الصُّحُفِ الْأُولَىٰ ١٣٣
📖 ಅನುವಾದ
ಆಯತ್ 133
ಈ ಪೈಗಂಬರ್ ತನ್ನ ಪ್ರಭುವಿನಿಂದ ನಮ್ಮಲ್ಲಿಗೆ ಯಾವುದೇ ದೃಷ್ಟಾಂತವನ್ನು ಏಕೆ ತರುವುದಿಲ್ಲ? ಎಂದು ಅವರು ಕೇಳುತ್ತಾರೆ. (ಅಲ್ಲಾಹನು ಹೇಳುತ್ತಾನೆ) ಅವರ ಬಳಿ ಹಿಂದಿನ ಗ್ರಂಥದಲ್ಲಿದ್ದAತಹ ಸುಸ್ಪಷ್ಟ ಪುರಾವೆಯು ತಲುಪಲಿಲ್ಲವೇ?
وَلَوْ أَنَّا أَهْلَكْنَاهُم بِعَذَابٍ مِّن قَبْلِهِ لَقَالُوا رَبَّنَا لَوْلَا أَرْسَلْتَ إِلَيْنَا رَسُولًا فَنَتَّبِعَ آيَاتِكَ مِن قَبْلِ أَن نَّذِلَّ وَنَخْزَىٰ ١٣٤
📖 ಅನುವಾದ
ಆಯತ್ 134
ಮತ್ತು ನಾವೇನಾದರೂ ಈ (ಕುರ್‌ಆನನ್ನು ಅವತೀರ್ಣಗೊಳಿಸುವುದಕ್ಕಿಂತ) ಮುಂಚೆಯೇ ಅವರನ್ನು ಯಾತನೆಯ ಮೂಲಕ ನಾಶ ಮಾಡಿರುತ್ತಿದ್ದರೆ ಖಂಡಿತವಾಗಿಯೂ ಅವರು ಹೇಳುತ್ತಿದ್ದರು: ನಮ್ಮ ಪ್ರಭು ನೀನೇಕೆ ನಮ್ಮೆಡೆಗೆ ಒಬ್ಬ ಸಂದೇಶವಾಹಕನನ್ನು ಕಳುಹಿಸಿ ಕೊಡಲಿಲ್ಲ? ನಾವು ಅಪಮಾನಿತರೂ ನಿಂದ್ಯರೂ ಆಗುವ ಮೊದಲು ನಿನ್ನ ಸೂಕ್ತಿಗಳನ್ನು ಅನುಸರಿಸುತ್ತಿದ್ದೆವು.
قُلْ كُلٌّ مُّتَرَبِّصٌ فَتَرَبَّصُوا ۖ فَسَتَعْلَمُونَ مَنْ أَصْحَابُ الصِّرَاطِ السَّوِيِّ وَمَنِ اهْتَدَىٰ ١٣٥
📖 ಅನುವಾದ
ಆಯತ್ 135
ಹೇಳಿರಿ: ಪ್ರತಿಯೊಬ್ಬನೂ ಪರಿಣಾಮದ ನಿರೀಕ್ಷೆಯಲ್ಲಿರುವನು. ಇನ್ನು ನೀವೂ ನಿರೀಕ್ಷಿಸುತ್ತಿರಿ. ಯಾರು ಋಜು ಮಾರ್ಗದವರು ಮತ್ತು ಯಾರು ಸನ್ಮಾರ್ಗ ಪಡೆದವರೆಂದು ಸಧ್ಯವೇ ನೀವು ಅರಿತುಕೊಳ್ಳಲಿದ್ದೀರಿ.
ಓದಿ ಸೂರಾ ತಾಹಾ ಕನ್ನಡ ಅನುವಾದ – ಪಠಣ ಮತ್ತು ಆಡಿಯೋ
ಪವಿತ್ರ ಕುರಾನ್
Monday, September 7, 2026
Don't forget us in your sincere prayers

