ಸೂರಾ ಅಲ್-ವಾಕಿಯಾ ಅರೇಬಿಕ್ ಮತ್ತು ಕನ್ನಡ

ಸೂರಾ ಅಲ್-ವಾಕಿಯಾ ಸಂಪೂರ್ಣ ಕನ್ನಡ ಅನುವಾದ, ಉಚ್ಚಾರಣೆ ಮತ್ತು ಆಡಿಯೋ ಪಠಣದೊಂದಿಗೆ ಓದಿ. ಪ್ರತಿ ಆಯತ್‌ನ ಅರ್ಥ. (96 ಆಯತ್ — مكية). ಅಲ್-ವಾಕಿಯಾ ಆಲಿಸಿ, ಅಲ್-ವಾಕಿಯಾ ಅನುವಾದ, ಅಲ್-ವಾಕಿಯಾ mp3, ಅಲ್-ವಾಕಿಯಾ pdf.

ಸೂರಾ ಅಲ್-ವಾಕಿಯಾ ಓದಿ ಮತ್ತು ಆಲಿಸಿ

🎧 ಆಯತ್
M Mishary Rashid Alafasy
M Mahmoud Khalil Al-Husary
A Abdurrahman As-Sudais
M Mohamed Siddiq Al-Minshawi
A Abdul Basit Abdul Samad
A Ali Al-Hudhaify
A Ahmed ibn Ali al-Ajamy
A Abu Bakr Ash-Shaatree
M Muhammad Ayyoub
A Abdullah Basfar
A Abdullah Al-Juhani
M Maher Al Muaiqly
x1
إِذَا وَقَعَتِ الْوَاقِعَةُ ۝١
📖 ಅನುವಾದ ಆಯತ್ 1
ಸಂಭವಿಸುವ (ಪ್ರಳಯವು) ಸಂಭವಿಸಿದಾಗ
لَيْسَ لِوَقْعَتِهَا كَاذِبَةٌ ۝٢
📖 ಅನುವಾದ ಆಯತ್ 2
ಅದರ ಸಂಭವವನ್ನು ಸುಳ್ಳಾಗಿಸುವವನಾರಿಲ್ಲ.
خَافِضَةٌ رَّافِعَةٌ ۝٣
📖 ಅನುವಾದ ಆಯತ್ 3
ಅದು (ಆ ಘಟನೆ) ಅಧಃಪತನಗೊಳಿಸುವಂತದ್ದು ಮತ್ತು ಔನ್ನತ್ಯ ನೀಡುವಂತಹದ್ದು ಆಗಿರುವುದು.
إِذَا رُجَّتِ الْأَرْضُ رَجًّا ۝٤
📖 ಅನುವಾದ ಆಯತ್ 4
ಭೂಮಿಯು ಬಲವಾಗಿ ಕಂಪಿಸಲಾಗುವಾಗ.
وَبُسَّتِ الْجِبَالُ بَسًّا ۝٥
📖 ಅನುವಾದ ಆಯತ್ 5
ಪರ್ವತಗಳು ನುಚ್ಚುನೂರು ಮಾಡಲ್ಪಟ್ಟಾಗ,
فَكَانَتْ هَبَاءً مُّنبَثًّا ۝٦
📖 ಅನುವಾದ ಆಯತ್ 6
ಬಳಿಕ ಅವು ಚದುರಿ ಧೂಳಾಗುವುದು,
وَكُنتُمْ أَزْوَاجًا ثَلَاثَةً ۝٧
📖 ಅನುವಾದ ಆಯತ್ 7
ಮತ್ತು (ಆಗ) ನೀವು ಮೂರು ಗುಂಪುಗಳಾಗಿ ಬಿಡುವಿರಿ.
فَأَصْحَابُ الْمَيْمَنَةِ مَا أَصْحَابُ الْمَيْمَنَةِ ۝٨
📖 ಅನುವಾದ ಆಯತ್ 8
ಒಂದು ಬಲಭಾಗದವರದ್ದು: ಅದೆಷ್ಟು ಉತ್ತಮರು ಬಲಭಾಗದವರು!
وَأَصْحَابُ الْمَشْأَمَةِ مَا أَصْحَابُ الْمَشْأَمَةِ ۝٩
📖 ಅನುವಾದ ಆಯತ್ 9
ಮತ್ತೊಂದು ಎಡಭಾಗದವರದ್ದು, ಎಡಭಾಗದವರ ಎಷ್ಟು ಕೆಟ್ಟ ಸ್ಥಿತಿಯಾಗಿರುವುದು.
وَالسَّابِقُونَ السَّابِقُونَ ۝١٠
📖 ಅನುವಾದ ಆಯತ್ 10
ಸತ್ಕರ್ಮದಲ್ಲಿ ಮುಂಚೂಣಿಯಲ್ಲಿರುವವರು ಮುಂಚೂಣಿಯಲ್ಲೇ ಇರುವರು.
أُولَٰئِكَ الْمُقَرَّبُونَ ۝١١
📖 ಅನುವಾದ ಆಯತ್ 11
ಇವರೇ (ಅಲ್ಲಾಹನ) ಸಾಮಿಪ್ಯ ಪಡೆದವರಾಗಿದ್ದಾರೆ.
فِي جَنَّاتِ النَّعِيمِ ۝١٢
📖 ಅನುವಾದ ಆಯತ್ 12
ಸುಖಾನುಗ್ರಹಗಳು ತುಂಬಿದ ಸ್ವರ್ಗೋದ್ಯಾನಗಳಲ್ಲಿರುವರು.
ثُلَّةٌ مِّنَ الْأَوَّلِينَ ۝١٣
📖 ಅನುವಾದ ಆಯತ್ 13
(ಸಾಮೀಪ್ಯ ಪಡೆದವರ) ದೊಡ್ಡ ಗುಂಪು ಪೂರ್ವಿಕರದ್ದಾಗಿರುವುದು.
وَقَلِيلٌ مِّنَ الْآخِرِينَ ۝١٤
📖 ಅನುವಾದ ಆಯತ್ 14
ಮತ್ತು ಮುಂದಿನವರಲ್ಲಿ ಕೆಲವರಿರುವರು.
عَلَىٰ سُرُرٍ مَّوْضُونَةٍ ۝١٥
📖 ಅನುವಾದ ಆಯತ್ 15
ಅವರು ಸ್ವರ್ಣದಾರದಿಂದ ರತ್ನಗಳನ್ನು ಜೋಡಿಸಿ ನೇಯಲಾದ ಮಂಚಗಳ ಮೇಲಿರುವರು.
مُّتَّكِئِينَ عَلَيْهَا مُتَقَابِلِينَ ۝١٦
📖 ಅನುವಾದ ಆಯತ್ 16
ಪರಸ್ಪರ ಅಭಿಮುಖವಾಗಿ ದಿಂಬುಗಳಿಗೆ ಒರಗಿ ಕುಳಿತಿರುವರು.
يَطُوفُ عَلَيْهِمْ وِلْدَانٌ مُّخَلَّدُونَ ۝١٧
📖 ಅನುವಾದ ಆಯತ್ 17
ಚಿರಂಜೀವಿಗಳಾದ ಬಾಲಕರು ಅವರ ನಡುವೆ ಸುತ್ತುತ್ತಿರುವರು.
بِأَكْوَابٍ وَأَبَارِيقَ وَكَأْسٍ مِّن مَّعِينٍ ۝١٨
📖 ಅನುವಾದ ಆಯತ್ 18
ಹರಿಯುತ್ತಿರುವ ಸುರದ ಚಿಲುಮೆಗಳಿಂದ ತುಂಬಲಾದ ಲೋಟಗಳು ಹೂಜಿಗಳು ಪಾನ ಪಾತ್ರೆಗಳೊಂದಿಗೆ.
لَّا يُصَدَّعُونَ عَنْهَا وَلَا يُنزِفُونَ ۝١٩
📖 ಅನುವಾದ ಆಯತ್ 19
ಅದನ್ನು ಕುಡಿದಾಗ ಅವರಿಗೆ ತಲೆನೋವಾಗಲಿ ಬುದ್ಧಿ ಭ್ರಮಣೆಯಾಗಲಿ ಉಂಟಾಗದು.
وَفَاكِهَةٍ مِّمَّا يَتَخَيَّرُونَ ۝٢٠
📖 ಅನುವಾದ ಆಯತ್ 20
ಅವರು ಇಷ್ಟಪಡುವ ಹಣ್ಣುಹಂಪಲುಗಳಿ ರುವುದು.
وَلَحْمِ طَيْرٍ مِّمَّا يَشْتَهُونَ ۝٢١
📖 ಅನುವಾದ ಆಯತ್ 21
ಅವರಿಗೆ ಪ್ರಿಯವಾದ ಪಕ್ಷಿ ಮಾಂಸವಿರುವುದು.
وَحُورٌ عِينٌ ۝٢٢
📖 ಅನುವಾದ ಆಯತ್ 22
ಮತ್ತು ವಿಶಾಲ ನಯನಗಳುಳ್ಳ ಅಪ್ಸರೆಯರು ಇರುವರು.
كَأَمْثَالِ اللُّؤْلُؤِ الْمَكْنُونِ ۝٢٣
📖 ಅನುವಾದ ಆಯತ್ 23
ಅವರು ಬಚ್ಚಿಡಲಾದ ಮುತ್ತುಗಳಂತಿರುವರು.
جَزَاءً بِمَا كَانُوا يَعْمَلُونَ ۝٢٤
📖 ಅನುವಾದ ಆಯತ್ 24
ಇದು ಅವರ ಕರ್ಮಗಳಿಗಿರುವ ಪ್ರತಿಫಲವಾಗಿದೆ.
لَا يَسْمَعُونَ فِيهَا لَغْوًا وَلَا تَأْثِيمًا ۝٢٥
📖 ಅನುವಾದ ಆಯತ್ 25
ನಿರರ್ಥಕ ಮತ್ತು ಪಾಪದ ಮಾತುಗಳನ್ನು ಅವರು ಅಲ್ಲಿ ಆಲಿಸಲಾರರು.
إِلَّا قِيلًا سَلَامًا سَلَامًا ۝٢٦
📖 ಅನುವಾದ ಆಯತ್ 26
ಕೇವಲ ಶಾಂತಿಯೇ ಶಾಂತಿಯ ಶಬ್ದವಿರುವುದು.
وَأَصْحَابُ الْيَمِينِ مَا أَصْحَابُ الْيَمِينِ ۝٢٧
📖 ಅನುವಾದ ಆಯತ್ 27
ಬಲಭಾಗದವರು ! ಬಲಭಾಗದವರು ಅದೆಷ್ಟು ಉತ್ತಮರು !
فِي سِدْرٍ مَّخْضُودٍ ۝٢٨
📖 ಅನುವಾದ ಆಯತ್ 28
ಅವರಿಗೆ ಮುಳ್ಳುಗಳಿಲ್ಲದ ಬಾರೆ ಮರ ಇರುವುದು.
وَطَلْحٍ مَّنضُودٍ ۝٢٩
📖 ಅನುವಾದ ಆಯತ್ 29
ದಟ್ಟವಾದ ಗೊನೆಗಳುಳ್ಳ ಬಾಳೆಹಣ್ಣುಗಳು ಇರುವುದು.
وَظِلٍّ مَّمْدُودٍ ۝٣٠
📖 ಅನುವಾದ ಆಯತ್ 30
ಬಹುದೂರ ಹಬ್ಬಿರುವ ನೆರಳು ಇರುವುದು.
وَمَاءٍ مَّسْكُوبٍ ۝٣١
📖 ಅನುವಾದ ಆಯತ್ 31
ಸದಾ ಹರಿಯುತ್ತಿರುವ ನೀರು ಸಹ ಇರುವುದು.
وَفَاكِهَةٍ كَثِيرَةٍ ۝٣٢
📖 ಅನುವಾದ ಆಯತ್ 32
ಧಾರಾಳ ಹಣ್ಣು ಹಂಪಲುಗಳು.
لَّا مَقْطُوعَةٍ وَلَا مَمْنُوعَةٍ ۝٣٣
📖 ಅನುವಾದ ಆಯತ್ 33
ಎಂದೂ ಮುಗಿಯದ ಮತ್ತು ತಡೆಹಿಡಿಯಲಾಗದ.
وَفُرُشٍ مَّرْفُوعَةٍ ۝٣٤
📖 ಅನುವಾದ ಆಯತ್ 34
ಮತ್ತು ಉನ್ನತವಾದ ಹಾಸಿಗೆಗಳಿರುವವು.
إِنَّا أَنشَأْنَاهُنَّ إِنشَاءً ۝٣٥
📖 ಅನುವಾದ ಆಯತ್ 35
ನಾವು ಅವರನ್ನು (ಅಪ್ಸರೆಯರನ್ನು) ಒಂದು ವಿಶೇಷ ರೀತಿಯಲ್ಲಿ ಹೊಸತಾಗಿ ಸೃಷ್ಟಿಸಿದ್ದೇವೆ.
فَجَعَلْنَاهُنَّ أَبْكَارًا ۝٣٦
📖 ಅನುವಾದ ಆಯತ್ 36
ನಾವು ಅವರನ್ನು ಕನ್ಯೆಯರನ್ನಾಗಿ ಮಾಡಿದ್ದೇವೆ.
عُرُبًا أَتْرَابًا ۝٣٧
📖 ಅನುವಾದ ಆಯತ್ 37
ಅವರ ಪ್ರಿಯತಮೆಯರು ಹಾಗು ಸಮಾನ ವಯಸ್ಕರು.
لِّأَصْحَابِ الْيَمِينِ ۝٣٨
📖 ಅನುವಾದ ಆಯತ್ 38
ಇವೆಲ್ಲ ಬಲಭಾಗದವರಿಗಾಗಿದೆ.
ثُلَّةٌ مِّنَ الْأَوَّلِينَ ۝٣٩
📖 ಅನುವಾದ ಆಯತ್ 39
ಅವರು ಪೂರ್ವಿಕರ ಪೈಕಿ ಅನೇಕರಿರುವರು.
وَثُلَّةٌ مِّنَ الْآخِرِينَ ۝٤٠
📖 ಅನುವಾದ ಆಯತ್ 40
ಮತ್ತು ಕೊನೆಯ ಕಾಲದವರ ಪೈಕಿ ಅನೇಕರಿರುವರು.
وَأَصْحَابُ الشِّمَالِ مَا أَصْحَابُ الشِّمَالِ ۝٤١
📖 ಅನುವಾದ ಆಯತ್ 41
ಎಡಭಾಗದವರು ಎಡಭಾಗದವರ ಸ್ಥಿತಿಯನ್ನು ಹೇಳುವುದೇನು?
فِي سَمُومٍ وَحَمِيمٍ ۝٤٢
📖 ಅನುವಾದ ಆಯತ್ 42
ಅವರು ಅತ್ಯುಷ್ಣಗಾಳಿ ಕುದಿಯುತ್ತಿರುವ ನೀರಿನಲ್ಲಿರುವರು.
وَظِلٍّ مِّن يَحْمُومٍ ۝٤٣
📖 ಅನುವಾದ ಆಯತ್ 43
ಕಪ್ಪು ಹೊಗೆಯ ನೆರಳಿನಲ್ಲಿ,
لَّا بَارِدٍ وَلَا كَرِيمٍ ۝٤٤
📖 ಅನುವಾದ ಆಯತ್ 44
ಅದುತಂಪಾಗಿರದು, ಸುಖಕರವಾಗಿಯೂ ಇರದು,
إِنَّهُمْ كَانُوا قَبْلَ ذَٰلِكَ مُتْرَفِينَ ۝٤٥
📖 ಅನುವಾದ ಆಯತ್ 45
ನಿಸ್ಸಂದೇಹವಾಗಿಯೂ ಇದಕ್ಕೆ ಮೊದಲು ಇವರು ಸುಖಲೋಲುಪತೆಯಲ್ಲಿ ಬೆಳೆದವರಾಗಿದ್ದರು.
وَكَانُوا يُصِرُّونَ عَلَى الْحِنثِ الْعَظِيمِ ۝٤٦
📖 ಅನುವಾದ ಆಯತ್ 46
ಅವರು ಮಹಾ ಪಾಪಗಳಲ್ಲಿ ಹಠಸಾಧಿಸಿ ನಿಲ್ಲುತ್ತಿದ್ದರು.
وَكَانُوا يَقُولُونَ أَئِذَا مِتْنَا وَكُنَّا تُرَابًا وَعِظَامًا أَإِنَّا لَمَبْعُوثُونَ ۝٤٧
📖 ಅನುವಾದ ಆಯತ್ 47
ಅವರು ಹೇಳುತ್ತಿದ್ದರು ನಾವು ಸತ್ತು ಮಣ್ಣು ಮತ್ತು ಮೂಳೆಗಳಾಗಿದ್ದ ಬಳಿಕವು ಪುನಃ ಜೀವಂತಗೊಳಿಸಿ ಎಬ್ಬಿಸಲಾಗುವೆವೇ ?
أَوَآبَاؤُنَا الْأَوَّلُونَ ۝٤٨
📖 ಅನುವಾದ ಆಯತ್ 48
ಮತ್ತು ನಮ್ಮ ಪೂರ್ವಿಕರಾದಂತಹ ಮುತ್ತಾತಂದಿರು ಸಹ?
قُلْ إِنَّ الْأَوَّلِينَ وَالْآخِرِينَ ۝٤٩
📖 ಅನುವಾದ ಆಯತ್ 49
ಹೇಳಿರಿ; ಖಂಡಿತವಾಗಿಯು ಪೂರ್ವಿಕರೂ ನಂತರದವರೂ ಸಹ;
لَمَجْمُوعُونَ إِلَىٰ مِيقَاتِ يَوْمٍ مَّعْلُومٍ ۝٥٠
📖 ಅನುವಾದ ಆಯತ್ 50
ಒಂದು ನಿರ್ದಿಷ್ಟ ದಿನದ ವೇಳೆಯಲ್ಲಿ ಸಕಲರೂ ಖಂಡಿತ ಒಟ್ಟುಗೂಡಿಸಲಾಗುವರು.
ثُمَّ إِنَّكُمْ أَيُّهَا الضَّالُّونَ الْمُكَذِّبُونَ ۝٥١
📖 ಅನುವಾದ ಆಯತ್ 51
ತರುವಾಯ ಓ ಸತ್ಯನಿಷೇಧಿಗಳಾದ ದುರ್ಮಾರ್ಗಿಗಳೇ.
لَآكِلُونَ مِن شَجَرٍ مِّن زَقُّومٍ ۝٥٢
📖 ಅನುವಾದ ಆಯತ್ 52
ಖಂಡಿತ ನೀವು ಝಕ್ಕೂಮ್ (ವಿಷಕಳ್ಳಿಗಿಡ) ಮರವನ್ನು ತಿನ್ನಲಿರುವಿರಿ.
فَمَالِئُونَ مِنْهَا الْبُطُونَ ۝٥٣
📖 ಅನುವಾದ ಆಯತ್ 53
ಮತ್ತು ಅದರಿಂದಲೇ ಹೊಟ್ಟೆ ತುಂಬಿಸುವಿರಿ.
فَشَارِبُونَ عَلَيْهِ مِنَ الْحَمِيمِ ۝٥٤
📖 ಅನುವಾದ ಆಯತ್ 54
ಬಳಿಕ ಅದರ ಮೇಲೆ ಕುದಿಯುವ ನೀರನ್ನು ಕುಡಿಯುವಿರಿ.
فَشَارِبُونَ شُرْبَ الْهِيمِ ۝٥٥
📖 ಅನುವಾದ ಆಯತ್ 55
ಬಳಿಕ ದಾಹದಿಂದ ಬಳಲಿದ ಒಂಟೆಯAತೆ ನೀವು ಕುಡಿಯುವಿರಿ.
هَٰذَا نُزُلُهُمْ يَوْمَ الدِّينِ ۝٥٦
📖 ಅನುವಾದ ಆಯತ್ 56
ಇದು ಪ್ರತಿಫಲದ ದಿನ ಅವರಿಗಿರುವ ಸತ್ಕಾರವಾಗಿದೆ,
نَحْنُ خَلَقْنَاكُمْ فَلَوْلَا تُصَدِّقُونَ ۝٥٧
📖 ಅನುವಾದ ಆಯತ್ 57
ನಾವೇ ನಿಮ್ಮೆಲ್ಲರನ್ನು ಸೃಷ್ಟಿಸಿದ್ದೇವೆ, ಹಾಗಿದ್ದೂ ನೀವು ನಂಬುವುದಿಲ್ಲವೇ ?
أَفَرَأَيْتُم مَّا تُمْنُونَ ۝٥٨
📖 ಅನುವಾದ ಆಯತ್ 58
ಸರಿ ನೀವು ಸ್ರವಿಸುವ ವೀರ್ಯದ ಕುರಿತು ಯೋಚಿಸಿದ್ದೀರಾ ?
أَأَنتُمْ تَخْلُقُونَهُ أَمْ نَحْنُ الْخَالِقُونَ ۝٥٩
📖 ಅನುವಾದ ಆಯತ್ 59
ಅದರಿಂದ ಮಾನವನನ್ನು ಸೃಷ್ಟಿಸುವವರು ನೀವೋ ? ಅಥವ ಸೃಷ್ಟಿಸುವವರು ನಾವೋ ?
نَحْنُ قَدَّرْنَا بَيْنَكُمُ الْمَوْتَ وَمَا نَحْنُ بِمَسْبُوقِينَ ۝٦٠
📖 ಅನುವಾದ ಆಯತ್ 60
ನಾವೇ ನಿಮ್ಮ ನಡುವೆ ಮರಣವನ್ನು ನಿಶ್ಚಯಿಸಿದ್ದೇವೆ. ಮತ್ತು ನಾವು ಖಂಡಿತಅಶಕ್ತರಲ್ಲ.
عَلَىٰ أَن نُّبَدِّلَ أَمْثَالَكُمْ وَنُنشِئَكُمْ فِي مَا لَا تَعْلَمُونَ ۝٦١
📖 ಅನುವಾದ ಆಯತ್ 61
ನಿಮ್ಮ ಬದಲಿಗೆ ನಿಮ್ಮಂತಿರುವ ಇತರರನ್ನು ತರಲು ಹಾಗು ನಿಮಗೆ (ಒಂದಿಷ್ಟೂ) ಅರಿವಿಲ್ಲದ ವಿಧದಲ್ಲಿ ನಿಮ್ಮನ್ನು ಸೃಷ್ಟಿಸಲು ನಾವು ಅಶಕ್ತರಲ್ಲ.
وَلَقَدْ عَلِمْتُمُ النَّشْأَةَ الْأُولَىٰ فَلَوْلَا تَذَكَّرُونَ ۝٦٢
📖 ಅನುವಾದ ಆಯತ್ 62
ಖಂಡಿತವಾಗಿಯು ನಿಮಗೆ ಮೊದಲ ಬಾರಿಯ ಸೃಷ್ಟಿಯ ಅರಿವಿದೆ. ಹಾಗಿದ್ದೂ ನೀವೇಕೆ ಉಪದೇಶ ಸ್ವೀಕರಿಸುವುದಿಲ್ಲ.
أَفَرَأَيْتُم مَّا تَحْرُثُونَ ۝٦٣
📖 ಅನುವಾದ ಆಯತ್ 63
ನೀವು ಬಿತ್ತುತ್ತಿರುವುದರ ಬಗ್ಗೆ ಯೋಚಿಸಿದ್ದೀರಾ ?
أَأَنتُمْ تَزْرَعُونَهُ أَمْ نَحْنُ الزَّارِعُونَ ۝٦٤
📖 ಅನುವಾದ ಆಯತ್ 64
ಅದನ್ನು ಮೊಳೆಯಿಸುತ್ತಿರುವವರು ನೀವೋ ಅಥವ ಮೊಳೆಯಿಸುವವರು ನಾವೋ ?
لَوْ نَشَاءُ لَجَعَلْنَاهُ حُطَامًا فَظَلْتُمْ تَفَكَّهُونَ ۝٦٥
📖 ಅನುವಾದ ಆಯತ್ 65
ನಾವು ಇಚ್ಛಿಸುತ್ತಿದ್ದರೆ ಅದನ್ನು ನುಚ್ಚುನೂರು ಮಾಡಿಬಿಡುತ್ತಿದ್ದೆವು ಆಗ ನೀವು ದಿಗ್ಭಾçಂತರಾಗಿ ಹೇಳುತ್ತಿದ್ದೀರಿ;
إِنَّا لَمُغْرَمُونَ ۝٦٦
📖 ಅನುವಾದ ಆಯತ್ 66
ನಮ್ಮ ಮೇಲೆ ದಿವಾಳಿತನವೇ ಎರಗಿಬಿಟ್ಟಿತು.
بَلْ نَحْنُ مَحْرُومُونَ ۝٦٧
📖 ಅನುವಾದ ಆಯತ್ 67
ಅಲ್ಲ, ನಾವು ವಂಚಿತರಾಗಿ ಬಿಟ್ಟೆವು.
أَفَرَأَيْتُمُ الْمَاءَ الَّذِي تَشْرَبُونَ ۝٦٨
📖 ಅನುವಾದ ಆಯತ್ 68
ನೀವು ಕುಡಿಯುತ್ತಿರುವ ನೀರಿನ ಬಗ್ಗೆ ಯೋಚಿಸಿದ್ದೀರಾ ?
أَأَنتُمْ أَنزَلْتُمُوهُ مِنَ الْمُزْنِ أَمْ نَحْنُ الْمُنزِلُونَ ۝٦٩
📖 ಅನುವಾದ ಆಯತ್ 69
ಅದನ್ನು ಮೋಡಗಳಿಂದ ಸುರಿಸುತ್ತಿರುವವರು ನೀವೋ ? ಅಥವ ಸುರಿಸುವವರು ನಾವೋ ?
لَوْ نَشَاءُ جَعَلْنَاهُ أُجَاجًا فَلَوْلَا تَشْكُرُونَ ۝٧٠
📖 ಅನುವಾದ ಆಯತ್ 70
ನಾವು ಇಚ್ಛಿಸುತ್ತಿದ್ದರೆ ಅದನ್ನು ಕಡು ಉಪ್ಪನ್ನಾಗಿ ಮಾಡುತ್ತಿದ್ದೆವು, ಹಾಗಿದ್ದೂ ನೀವು ಕೃತಜ್ಞತೆ ಸಲ್ಲಿಸುವುದಿಲ್ಲವೇ?
أَفَرَأَيْتُمُ النَّارَ الَّتِي تُورُونَ ۝٧١
📖 ಅನುವಾದ ಆಯತ್ 71
ನೀವು ಉರಿಸುತ್ತಿರುವ ಬೆಂಕಿಯ ಕುರಿತು ಯೋಚಿಸಿದ್ದೀರಾ ?
أَأَنتُمْ أَنشَأْتُمْ شَجَرَتَهَا أَمْ نَحْنُ الْمُنشِئُونَ ۝٧٢
📖 ಅನುವಾದ ಆಯತ್ 72
ಅದರ ಮರವನ್ನು ಸೃಷ್ಟಿಸುವವರು ನೀವೋ ? ಅಥವ ಅದನ್ನು ಸೃಷ್ಟಿಸುವವರು ನಾವೋ ?
نَحْنُ جَعَلْنَاهَا تَذْكِرَةً وَمَتَاعًا لِّلْمُقْوِينَ ۝٧٣
📖 ಅನುವಾದ ಆಯತ್ 73
ನಾವು ಆ ಮರವನ್ನು ಉಪದೇಶಕ್ಕಿರುವ ಮಾರ್ಗ ಹಾಗು ಯಾತ್ರಿಕರ ಅನುಕೂಲದ ವಸ್ತುವನ್ನಾಗಿ ಮಾಡಿದ್ದೇವೆ.
فَسَبِّحْ بِاسْمِ رَبِّكَ الْعَظِيمِ ۝٧٤
📖 ಅನುವಾದ ಆಯತ್ 74
(ಓ ಪೈಗಂಬರರೇ) ಆದ್ದರಿಂದ ನೀವು ಮಹಾನನಾದ ನಿಮ್ಮ ಪ್ರಭುವಿನ ನಾಮದ ಪಾವಿತ್ರö್ಯವನ್ನು ಕೊಂಡಾಡಿರಿ.
۞ فَلَا أُقْسِمُ بِمَوَاقِعِ النُّجُومِ ۝٧٥
📖 ಅನುವಾದ ಆಯತ್ 75
ನಾನು ನಕ್ಷತ್ರಗಳ ಪತನದ ಆಣೆ ಹಾಕುತ್ತೇನೆ.
وَإِنَّهُ لَقَسَمٌ لَّوْ تَعْلَمُونَ عَظِيمٌ ۝٧٦
📖 ಅನುವಾದ ಆಯತ್ 76
ನೀವು ಅರಿಯುವವರಾಗಿದ್ದರೆ ಇದೊಂದು ಮಹಾ ಆಣೆಯಾಗಿದೆ.
إِنَّهُ لَقُرْآنٌ كَرِيمٌ ۝٧٧
📖 ಅನುವಾದ ಆಯತ್ 77
ನಿಸ್ಸಂದೇಹವಾಗಿಯೂ ಇದು ಮಹಾ ಆದರಣಿಯ ಕುರ್‌ಆನ್ ಆಗಿದೆ.
فِي كِتَابٍ مَّكْنُونٍ ۝٧٨
📖 ಅನುವಾದ ಆಯತ್ 78
ಇದು ಸುರಕ್ಷಿತ ಗ್ರಂಥದಲ್ಲಿದೆ.
لَّا يَمَسُّهُ إِلَّا الْمُطَهَّرُونَ ۝٧٩
📖 ಅನುವಾದ ಆಯತ್ 79
ಪರಿಶುದ್ಧರಲ್ಲದೇ ಬೇರಾರು ಇದನ್ನು ಸ್ಪರ್ಶಿಸಲಾರರು.
تَنزِيلٌ مِّن رَّبِّ الْعَالَمِينَ ۝٨٠
📖 ಅನುವಾದ ಆಯತ್ 80
ಇದು ಸರ್ವ ಲೋಕಗಳ ಪ್ರಭುವಿನ ಕಡೆಯಿಂದ ಅವತೀರ್ಣಗೊಂಡಿದೆ.
أَفَبِهَٰذَا الْحَدِيثِ أَنتُم مُّدْهِنُونَ ۝٨١
📖 ಅನುವಾದ ಆಯತ್ 81
ಹೀಗಿದ್ದೂ ನೀವು ಈ ವಚನವನ್ನು ಕಡೆಗಣಿಸುತ್ತಿರುವಿರಾ ?
وَتَجْعَلُونَ رِزْقَكُمْ أَنَّكُمْ تُكَذِّبُونَ ۝٨٢
📖 ಅನುವಾದ ಆಯತ್ 82
ನೀವು ಸುಳ್ಳಾಗಿಸುವುದನ್ನೇ ನಿಮ್ಮ ಚಾಳಿಯನ್ನಾಗಿ ಮಾಡಿಕೊಳ್ಳುತ್ತಿರುವಿರಾ ?
فَلَوْلَا إِذَا بَلَغَتِ الْحُلْقُومَ ۝٨٣
📖 ಅನುವಾದ ಆಯತ್ 83
ಆತ್ಮವು ಗಂಟಲಿನವರೆಗೆ ತಲುಪಿದಾಗ (ಅದನ್ನು ತಡೆದು ಕೊಳ್ಳುವುದಿಲ್ಲವೇಕೆ ?)
وَأَنتُمْ حِينَئِذٍ تَنظُرُونَ ۝٨٤
📖 ಅನುವಾದ ಆಯತ್ 84
ನೀವು ಆಗ ನೋಡುತ್ತಲೇ ಇರುವಿರಿ.
وَنَحْنُ أَقْرَبُ إِلَيْهِ مِنكُمْ وَلَٰكِن لَّا تُبْصِرُونَ ۝٨٥
📖 ಅನುವಾದ ಆಯತ್ 85
ನಾವು ಆ ವ್ಯಕ್ತಿಯೊಂದಿಗೆ ನಿಮಗಿಂತಲೂ ಹೆಚ್ಚು ಸಮೀಪದಲ್ಲಿರುತ್ತೇವೆ ಆದರೆ ನೀವು ನೋಡಲಾರಿರಿ.
فَلَوْلَا إِن كُنتُمْ غَيْرَ مَدِينِينَ ۝٨٦
📖 ಅನುವಾದ ಆಯತ್ 86
ನೀವು ಯಾರದೇ ಅಧೀನದಲ್ಲಿಲ್ಲವೆಂದಾದರೆ.
تَرْجِعُونَهَا إِن كُنتُمْ صَادِقِينَ ۝٨٧
📖 ಅನುವಾದ ಆಯತ್ 87
ಮತ್ತು ನೀವು ಈ ಮಾತಿನಲ್ಲಿ ಸತ್ಯವಂತರಾಗಿದ್ದರೆ ಈ ಆತ್ಮವನ್ನು ಮರಳಿ ತರುವುದಿಲ್ಲವೇಕೆ ?
فَأَمَّا إِن كَانَ مِنَ الْمُقَرَّبِينَ ۝٨٨
📖 ಅನುವಾದ ಆಯತ್ 88
ಇನ್ನು ಮರಣ ಹೊಂದುವ ವ್ಯಕ್ತಿಯು ಅಲ್ಲಾಹನ ಸಾಮಿಪ್ಯವನ್ನು ಪಡೆದವನಾಗಿದ್ದರೆ.
فَرَوْحٌ وَرَيْحَانٌ وَجَنَّتُ نَعِيمٍ ۝٨٩
📖 ಅನುವಾದ ಆಯತ್ 89
ಅವನಿಗೆ ನೆಮ್ಮದಿಯಿರುವುದು ಮತ್ತು ಆಹಾರಗಳಿರುವುವು ಹಾಗು ಅನುಗ್ರಹಪೂರ್ಣ ಸ್ವರ್ಗೋದ್ಯಾನವಿರುವುದು.
وَأَمَّا إِن كَانَ مِنْ أَصْحَابِ الْيَمِينِ ۝٩٠
📖 ಅನುವಾದ ಆಯತ್ 90
ಅವನು ಬಲಭಾಗದವರಲ್ಲಾಗಿದ್ದರೆ.
فَسَلَامٌ لَّكَ مِنْ أَصْحَابِ الْيَمِينِ ۝٩١
📖 ಅನುವಾದ ಆಯತ್ 91
ನೀನು ಬಲಭಾಗದವರಲ್ಲಿ ಸೇರಿದುದರಿಂದ ನಿನ್ನ ಮೇಲೆ ಶಾಂತಿಯಿರಲಿ ಎಂದು ಹೇಳಲಾಗುವುದು.
وَأَمَّا إِن كَانَ مِنَ الْمُكَذِّبِينَ الضَّالِّينَ ۝٩٢
📖 ಅನುವಾದ ಆಯತ್ 92
ಆದರೆ ಅವನು ಸುಳ್ಳಾಗಿಸುವ ಮಾರ್ಗಭ್ರಷ್ಟರಲ್ಲಿ ಸೇರಿದವನಾಗಿದ್ದರೆ.
فَنُزُلٌ مِّنْ حَمِيمٍ ۝٩٣
📖 ಅನುವಾದ ಆಯತ್ 93
ಅವನಿಗೆ ಕುದಿಯುವ ನೀರಿನ ಸತ್ಕಾರವಿರುವುದು.
وَتَصْلِيَةُ جَحِيمٍ ۝٩٤
📖 ಅನುವಾದ ಆಯತ್ 94
ಮತ್ತು ಅವನಿಗೆ ನರಕಾಗ್ನಿಯಲ್ಲಿ ಪ್ರವೇಶವಿದೆ.
إِنَّ هَٰذَا لَهُوَ حَقُّ الْيَقِينِ ۝٩٥
📖 ಅನುವಾದ ಆಯತ್ 95
ಖಂಡಿತ ಇವೆಲ್ಲಾ ಸತ್ಯ ಹಾಗು ಖಚಿತವಾಗಿವೆ.
فَسَبِّحْ بِاسْمِ رَبِّكَ الْعَظِيمِ ۝٩٦
📖 ಅನುವಾದ ಆಯತ್ 96
ಆದ್ದರಿಂದ ನೀವು ಮಹಾನನಾದ ನಿಮ್ಮ ಪ್ರಭುವಿನ ನಾಮದ ಪಾವಿತ್ರö್ಯವನ್ನು ಕೊಂಡಾಡಿರಿ.
← 55 ಅಲ್-ವಾಕಿಯಾ (56/114) 57 →
ಓದಿ ಸೂರಾ ಅಲ್-ವಾಕಿಯಾ ಕನ್ನಡ ಅನುವಾದ – ಪಠಣ ಮತ್ತು ಆಡಿಯೋ

56الواقعة Al-Waqi'ah 📚 96 ಆಯತ್ مكية

ಆಯತ್‌ವಾರು – ಸೂರಾ ಅಲ್-ವಾಕಿಯಾ — 96 ಆಯತ್




ಪವಿತ್ರ ಕುರಾನ್


Monday, September 7, 2026

Don't forget us in your sincere prayers