ಸೂರಾ ಅರ್-ರಹ್ಮಾನ್ ಅರೇಬಿಕ್ ಮತ್ತು ಕನ್ನಡ

ಸೂರಾ ಅರ್-ರಹ್ಮಾನ್ ಸಂಪೂರ್ಣ ಕನ್ನಡ ಅನುವಾದ, ಉಚ್ಚಾರಣೆ ಮತ್ತು ಆಡಿಯೋ ಪಠಣದೊಂದಿಗೆ ಓದಿ. ಪ್ರತಿ ಆಯತ್‌ನ ಅರ್ಥ. (78 ಆಯತ್ — مدنية). ಅರ್-ರಹ್ಮಾನ್ ಆಲಿಸಿ, ಅರ್-ರಹ್ಮಾನ್ ಅನುವಾದ, ಅರ್-ರಹ್ಮಾನ್ mp3, ಅರ್-ರಹ್ಮಾನ್ pdf.

ಸೂರಾ ಅರ್-ರಹ್ಮಾನ್ ಓದಿ ಮತ್ತು ಆಲಿಸಿ

🎧 ಆಯತ್
M Mishary Rashid Alafasy
M Mahmoud Khalil Al-Husary
A Abdurrahman As-Sudais
M Mohamed Siddiq Al-Minshawi
A Abdul Basit Abdul Samad
A Ali Al-Hudhaify
A Ahmed ibn Ali al-Ajamy
A Abu Bakr Ash-Shaatree
M Muhammad Ayyoub
A Abdullah Basfar
A Abdullah Al-Juhani
M Maher Al Muaiqly
x1
الرَّحْمَٰنُ ۝١
📖 ಅನುವಾದ ಆಯತ್ 1
ಪರಮ ದಯಾಮಯನು.
عَلَّمَ الْقُرْآنَ ۝٢
📖 ಅನುವಾದ ಆಯತ್ 2
ಕುರ್‌ಆನನ್ನು ಕಲಿಸಿದನು.
خَلَقَ الْإِنسَانَ ۝٣
📖 ಅನುವಾದ ಆಯತ್ 3
ಅವನು ಮನುಷ್ಯನನ್ನು ಸೃಷ್ಟಿಸಿದನು.
عَلَّمَهُ الْبَيَانَ ۝٤
📖 ಅನುವಾದ ಆಯತ್ 4
ಅವನಿಗೆ ಮಾತನಾಡಲು ಕಲಿಸಿದನು.
الشَّمْسُ وَالْقَمَرُ بِحُسْبَانٍ ۝٥
📖 ಅನುವಾದ ಆಯತ್ 5
ಸೂರ್ಯ ಹಾಗು ಚಂದ್ರ ಒಂದು ನಿಶ್ಚಿತ ಗಣನೆಯಂತೆ ಬಂಧಿತವಾಗಿದೆ.
وَالنَّجْمُ وَالشَّجَرُ يَسْجُدَانِ ۝٦
📖 ಅನುವಾದ ಆಯತ್ 6
ಬಳ್ಳಿಗಳೂ ಹಾಗು ವೃಕ್ಷಗಳೂ ಅವನಿಗೆ ಸಾಷ್ಟಾಂಗವೆರಗುತ್ತವೆ.
وَالسَّمَاءَ رَفَعَهَا وَوَضَعَ الْمِيزَانَ ۝٧
📖 ಅನುವಾದ ಆಯತ್ 7
ಅವನೇ ಆಕಾಶವನ್ನು ಎತ್ತರಕ್ಕೇರಿಸಿದನು ಹಾಗು ಅವನೇ ತಕ್ಕಡಿಯನ್ನು ಸ್ಥಾಪಿಸಿದನು.
أَلَّا تَطْغَوْا فِي الْمِيزَانِ ۝٨
📖 ಅನುವಾದ ಆಯತ್ 8
ಇದೇಕೆಂದರೆ ನೀವು ತೂಕದಲ್ಲಿ ಅತಿಕ್ರಮಿಸಬಾರದೆಂದಾಗಿದೆ.
وَأَقِيمُوا الْوَزْنَ بِالْقِسْطِ وَلَا تُخْسِرُوا الْمِيزَانَ ۝٩
📖 ಅನುವಾದ ಆಯತ್ 9
ನ್ಯಾಯ ನೀತಿಯೊಂದಿಗೆ ನೀವು ತೂಕ ಮಾಡಿರಿ, ಹಾಗು ತೂಕದಲ್ಲಿ ಕಡಿತಗೊಳಿಸಬೇಡಿರಿ.
وَالْأَرْضَ وَضَعَهَا لِلْأَنَامِ ۝١٠
📖 ಅನುವಾದ ಆಯತ್ 10
ಅವನೇ ಭೂಮಿಯನ್ನು ಸೃಷ್ಟಿಗಳಿಗಾಗಿ ಉಂಟುಮಾಡಿದನು.
فِيهَا فَاكِهَةٌ وَالنَّخْلُ ذَاتُ الْأَكْمَامِ ۝١١
📖 ಅನುವಾದ ಆಯತ್ 11
ಅದರಲ್ಲಿ ಹಣ್ಣು ಹಂಪಲುಗಳಿವೆ ಹಾಗು ಕೋಶಗಳುಳ್ಳ ಖರ್ಜೂರ ಮರಗಳಿವೆ.
وَالْحَبُّ ذُو الْعَصْفِ وَالرَّيْحَانُ ۝١٢
📖 ಅನುವಾದ ಆಯತ್ 12
ಸಿಪ್ಪೆಯುಳ್ಳ ಧಾನ್ಯ ಹಾಗು ಸುಗಂಧಿತ ಹೂವುಗಳಿವೆ.
فَبِأَيِّ آلَاءِ رَبِّكُمَا تُكَذِّبَانِ ۝١٣
📖 ಅನುವಾದ ಆಯತ್ 13
ಹಾಗಿದ್ದೂ ನೀವು ನಿಮ್ಮ ಪ್ರಭುವಿನ ಯಾವ ಯಾವ ಅನುಗ್ರಹಗಳನ್ನು ಸುಳ್ಳಾಗಿಸುವಿರಿ?
خَلَقَ الْإِنسَانَ مِن صَلْصَالٍ كَالْفَخَّارِ ۝١٤
📖 ಅನುವಾದ ಆಯತ್ 14
ಅವನು ಮಾನವನನ್ನು ಠಣಠಣಿಸುವ ಅವೆ ಮಣ್ಣಿನಿಂದ ಸೃಷ್ಟಿಸಿದನು.
وَخَلَقَ الْجَانَّ مِن مَّارِجٍ مِّن نَّارٍ ۝١٥
📖 ಅನುವಾದ ಆಯತ್ 15
ಹಾಗು ಅವನು ಜಿನ್ನ್ಗಳನ್ನು ಅಗ್ನಿಯ ಜ್ವಾಲೆಯಿಂದ ಸೃಷ್ಟಿಸಿದನು.
فَبِأَيِّ آلَاءِ رَبِّكُمَا تُكَذِّبَانِ ۝١٦
📖 ಅನುವಾದ ಆಯತ್ 16
ಯಕ್ಷಗಳೇ ಮತ್ತು ಮಾನವರೇ ನೀವಿನ್ನು ನಿಮ್ಮ ಪ್ರಭುವಿನ ಯಾವ ಯಾವ ಅದ್ಭುತ ಮಹಿಮೆಗಳನ್ನು ಸುಳ್ಳಾಗಿಸುವಿರಿ ?
رَبُّ الْمَشْرِقَيْنِ وَرَبُّ الْمَغْرِبَيْنِ ۝١٧
📖 ಅನುವಾದ ಆಯತ್ 17
ಅವನು ಎರಡು ಪೂರ್ವಗಳ ಮತ್ತು ಎರಡು ಪಶ್ಚಿಮಗಳ ಪ್ರಭುವಾಗಿರುವನು.
فَبِأَيِّ آلَاءِ رَبِّكُمَا تُكَذِّبَانِ ۝١٨
📖 ಅನುವಾದ ಆಯತ್ 18
ಯಕ್ಷಗಳೇ ಮತ್ತು ಮಾನವರೇ ನೀವಿನ್ನು ನಿಮ್ಮ ಪ್ರಭುವಿನ ಯಾವ ಯಾವ ಅದ್ಭುತ ಸಾಮರ್ಥ್ಯಗಳನ್ನು ಸುಳ್ಳಾಗಿಸುವಿರಿ?
مَرَجَ الْبَحْرَيْنِ يَلْتَقِيَانِ ۝١٩
📖 ಅನುವಾದ ಆಯತ್ 19
ಅವನು ಎರಡು ಸಮುದ್ರಗಳನ್ನು ಅವು ಪರಸ್ಪರ ಸ್ಪಂದಿಸುವAತೆ ಹರಿಸಿರುವನು.
بَيْنَهُمَا بَرْزَخٌ لَّا يَبْغِيَانِ ۝٢٠
📖 ಅನುವಾದ ಆಯತ್ 20
ಅವೆರಡರ ನಡುವೆ ಒಂದು ತೆರೆಯಿದೆ. ಅದ್ದರಿಂದ ಅವು ಅತಿಕ್ರಮಿಸುವುದಿಲ್ಲ.
فَبِأَيِّ آلَاءِ رَبِّكُمَا تُكَذِّبَانِ ۝٢١
📖 ಅನುವಾದ ಆಯತ್ 21
ಯಕ್ಷಗಳೇ ಮತ್ತು ಮಾನವರೇ ನೀವಿನ್ನು ನಿಮ್ಮ ಪ್ರಭುವಿನ ಯಾವ ಯಾವ ಅದ್ಭುತಗಳನ್ನು ಸುಳ್ಳಾಗಿಸುವಿರಿ?
يَخْرُجُ مِنْهُمَا اللُّؤْلُؤُ وَالْمَرْجَانُ ۝٢٢
📖 ಅನುವಾದ ಆಯತ್ 22
ಅವೆರಡರಿಂದ ಮುತ್ತು ಹಾಗು ಹವಳಗಳು ಹೊರಬರುತ್ತವೆ.
فَبِأَيِّ آلَاءِ رَبِّكُمَا تُكَذِّبَانِ ۝٢٣
📖 ಅನುವಾದ ಆಯತ್ 23
ಯಕ್ಷಗಳೇ ಮತ್ತು ಮಾನವರೇ ನೀವಿನ್ನು ನಿಮ್ಮ ಪ್ರಭುವಿನ ಯಾವ ಯಾವ ಅದ್ಭುತಗಳನ್ನು ಸುಳ್ಳಾಗಿಸುವಿರಿ?
وَلَهُ الْجَوَارِ الْمُنشَآتُ فِي الْبَحْرِ كَالْأَعْلَامِ ۝٢٤
📖 ಅನುವಾದ ಆಯತ್ 24
ಸಮುದ್ರದಲ್ಲಿ ಪರ್ವತಗಳಂತೆ ಎತ್ತರವಾಗಿ (ಸಂಚರಿಸುತ್ತಿರುವ) ಹಡಗುಗಳು ಅಲ್ಲಾಹನ ಒಡೆತನದಲ್ಲಿವೆ.
فَبِأَيِّ آلَاءِ رَبِّكُمَا تُكَذِّبَانِ ۝٢٥
📖 ಅನುವಾದ ಆಯತ್ 25
ಯಕ್ಷಗಳೇ ಮತ್ತು ಮಾನವರೇ ನೀವಿನ್ನು ನಿಮ್ಮ ಪ್ರಭುವಿನ ಯಾವ ಯಾವ ಅದ್ಭುತ ಉಪಕಾರಗಳನ್ನು ಸುಳ್ಳಾಗಿಸುವಿರಿ?
كُلُّ مَنْ عَلَيْهَا فَانٍ ۝٢٦
📖 ಅನುವಾದ ಆಯತ್ 26
ಭೂಮಿಯ ಮೇಲೆ ಇರುವುದೆಲ್ಲವೂ ನಾಶವಾಗಲಿದೆ.
وَيَبْقَىٰ وَجْهُ رَبِّكَ ذُو الْجَلَالِ وَالْإِكْرَامِ ۝٢٧
📖 ಅನುವಾದ ಆಯತ್ 27
ಅಪಾರ ಮಹಿಮೆ ಹಾಗು ಉದಾರತೆಯುಳ್ಳ ನಿನ್ನ ಪ್ರಭುವಿನ ಅಸ್ತಿತ್ವ ಮಾತ್ರ ಉಳಿಯುವುದು.
فَبِأَيِّ آلَاءِ رَبِّكُمَا تُكَذِّبَانِ ۝٢٨
📖 ಅನುವಾದ ಆಯತ್ 28
ಯಕ್ಷಗಳೇ ಮತ್ತು ಮಾನವರೇ ನೀವಿನ್ನು ನಿಮ್ಮ ಪ್ರಭುವಿನ ಯಾವ ಯಾವ ಅದ್ಭುತಗಳನ್ನು ಸುಳ್ಳಾಗಿಸುವಿರಿ?
يَسْأَلُهُ مَن فِي السَّمَاوَاتِ وَالْأَرْضِ ۚ كُلَّ يَوْمٍ هُوَ فِي شَأْنٍ ۝٢٩
📖 ಅನುವಾದ ಆಯತ್ 29
ಆಕಾಶಗಳಲ್ಲಿರುವ ಮತ್ತು ಭೂಮಿಯಲ್ಲಿರುವ ಸಕಲರೂ ಅವನೊಂದಿಗೆ ಬೇಡಿಕೊಳ್ಳುತ್ತಾರೆ, ಪ್ರತಿದಿನವೂ ಅವನು ಒಂದು ಕಾರ್ಯದಲ್ಲಿರುವನು.
فَبِأَيِّ آلَاءِ رَبِّكُمَا تُكَذِّبَانِ ۝٣٠
📖 ಅನುವಾದ ಆಯತ್ 30
ಯಕ್ಷಗಳೇ ಮತ್ತು ಮಾನವರೇ ನೀವಿನ್ನು ನಿಮ್ಮ ಪ್ರಭುವಿನ ಯಾವ ಯಾವ ಕೊಡಗೆಗಳನ್ನು ಅದ್ಭುತಗಳನ್ನು ಸುಳ್ಳಾಗಿಸುವಿರಿ?
سَنَفْرُغُ لَكُمْ أَيُّهَ الثَّقَلَانِ ۝٣١
📖 ಅನುವಾದ ಆಯತ್ 31
(ಓ ಜಿನ್ನ್ ಮತ್ತು ಮನುಷ್ಯರ ಸಮೂಹವೇ) ಸದ್ಯದಲ್ಲೇ ನಾವು ನಿಮ್ಮೆಡೆಗೆ ಸಂಪೂರ್ಣವಾಗಿ ಗಮನ ಹರಿಸಲಿದ್ದೇವೆ.
فَبِأَيِّ آلَاءِ رَبِّكُمَا تُكَذِّبَانِ ۝٣٢
📖 ಅನುವಾದ ಆಯತ್ 32
ಯಕ್ಷಗಳೇ ಮತ್ತು ಮಾನವರೇ ನೀವಿನ್ನು ನಿಮ್ಮ ಪ್ರಭುವಿನ ಯಾವ ಯಾವ ಉಪಕಾರಗಳನ್ನು ಸುಳ್ಳಾಗಿಸುವಿರಿ?
يَا مَعْشَرَ الْجِنِّ وَالْإِنسِ إِنِ اسْتَطَعْتُمْ أَن تَنفُذُوا مِنْ أَقْطَارِ السَّمَاوَاتِ وَالْأَرْضِ فَانفُذُوا ۚ لَا تَنفُذُونَ إِلَّا بِسُلْطَانٍ ۝٣٣
📖 ಅನುವಾದ ಆಯತ್ 33
ಓ ಜಿನ್ನ್ ಮತ್ತು ಮನುಷ್ಯರ ಸಮೂಹವೇ, ನಿಮಗೆ ಆಕಾಶಗಳ ಮತ್ತು ಭೂಮಿಯ ಸೀಮೆಗಳನ್ನು ದಾಟಿ ಹೊರಹೋಗುವ ಸಾಮರ್ಥ್ಯವಿದ್ದರೆ ಹೊರಹೋಗಿರಿ, ನೀವು ಪ್ರಚಂಡ ಶಕ್ತಿಯ ವಿನಾಃ ಹೊರಹೋಗಲಾರಿರಿ.
فَبِأَيِّ آلَاءِ رَبِّكُمَا تُكَذِّبَانِ ۝٣٤
📖 ಅನುವಾದ ಆಯತ್ 34
ಯಕ್ಷಗಳೇ ಮತ್ತು ಮಾನವರೇ ನೀವಿನ್ನು ನಿಮ್ಮ ಪ್ರಭುವಿನ ಯಾವ ಯಾವ ಅದ್ಭುತ ಸಾಮರ್ಥ್ಯಗಳನ್ನು ಸುಳ್ಳಾಗಿಸುವಿರಿ?
يُرْسَلُ عَلَيْكُمَا شُوَاظٌ مِّن نَّارٍ وَنُحَاسٌ فَلَا تَنتَصِرَانِ ۝٣٥
📖 ಅನುವಾದ ಆಯತ್ 35
ನಿಮ್ಮ ಮೇಲೆ ಅಗ್ನಿಯ ಜ್ವಾಲೆಯನ್ನು ಮತ್ತು ಹೊಗೆಯನ್ನು ಬಿಡಲಾಗುವುದು. ಆಮೇಲೆ ನೀವು ಎದುರಿಸಲಾರಿರಿ.
فَبِأَيِّ آلَاءِ رَبِّكُمَا تُكَذِّبَانِ ۝٣٦
📖 ಅನುವಾದ ಆಯತ್ 36
ಯಕ್ಷಗಳೇ ಮತ್ತು ಮಾನವರೇ ನೀವಿನ್ನು ನಿಮ್ಮ ಪ್ರಭುವಿನ ಯಾವ ಯಾವ ಅದ್ಭುತ ಮಹಿಮೆಗಳನ್ನು ಸುಳ್ಳಾಗಿಸುವಿರಿ?
فَإِذَا انشَقَّتِ السَّمَاءُ فَكَانَتْ وَرْدَةً كَالدِّهَانِ ۝٣٧
📖 ಅನುವಾದ ಆಯತ್ 37
ಆಕಾಶವು ಬಿರಿದು ಕೆಂಪು ಚರ್ಮದಂತೆ ಕೆಂಪಾದಾಗ.
فَبِأَيِّ آلَاءِ رَبِّكُمَا تُكَذِّبَانِ ۝٣٨
📖 ಅನುವಾದ ಆಯತ್ 38
ಯಕ್ಷಗಳೇ ಮತ್ತು ಮಾನವರೇ ನೀವಿನ್ನು ನಿಮ್ಮ ಪ್ರಭುವಿನ ಯಾವ ಯಾವ ಅದ್ಭುತ ಮಹಿಮೆಗಳನ್ನು ಸುಳ್ಳಾಗಿಸುವಿರಿ ?
فَيَوْمَئِذٍ لَّا يُسْأَلُ عَن ذَنبِهِ إِنسٌ وَلَا جَانٌّ ۝٣٩
📖 ಅನುವಾದ ಆಯತ್ 39
ಆ ದಿನ ಯಾವ ಮನುಷ್ಯನಿಂದಾಗಲಿ, ಜಿನ್ನ್ನಿಂದಾಗಲಿ ಅವನ ಪಾಪದ ಕುರಿತು ವಿಚಾರಿಸಲಾಗುವುದಿಲ್ಲ.
فَبِأَيِّ آلَاءِ رَبِّكُمَا تُكَذِّبَانِ ۝٤٠
📖 ಅನುವಾದ ಆಯತ್ 40
ಯಕ್ಷಗಳೇ ಮತ್ತು ಮಾನವರೇ ನೀವಿನ್ನು ನಿಮ್ಮ ಪ್ರಭುವಿನ ಯಾವ ಯಾವ ಅದ್ಭುತ ಉಪಕಾರಗಳನ್ನು ನಿರಾಕರಿಸುತ್ತೀರಿ?
يُعْرَفُ الْمُجْرِمُونَ بِسِيمَاهُمْ فَيُؤْخَذُ بِالنَّوَاصِي وَالْأَقْدَامِ ۝٤١
📖 ಅನುವಾದ ಆಯತ್ 41
ಅಪರಾಧಿಗಳು ತಮ್ಮ ಮುಖಲಕ್ಷಣಗಳಿಂದಲೇ ಗುರುತಿಸಲಾಗುವರು. ಅವರ ಮುಂದೆಲೆಯ ಕೂದಲು ಹಾಗು ಕಾಲುಗಳನ್ನು ಹಿಡಿಯಲಾಗುವುದು.
فَبِأَيِّ آلَاءِ رَبِّكُمَا تُكَذِّبَانِ ۝٤٢
📖 ಅನುವಾದ ಆಯತ್ 42
ಆಗ ನೀವು ನಿಮ್ಮ ಪ್ರಭುವಿನ ಯಾವ ಯಾವ ಶಕ್ತಿ ಸಾಮರ್ಥ್ಯಗಳನ್ನು ಸುಳ್ಳಾಗಿಸುವಿರಿ?
هَٰذِهِ جَهَنَّمُ الَّتِي يُكَذِّبُ بِهَا الْمُجْرِمُونَ ۝٤٣
📖 ಅನುವಾದ ಆಯತ್ 43
ಅಪರಾಧಿಗಳು ಸುಳ್ಳಾಗಿಸುತ್ತಿದ್ದ ನರಕವು ಇದುವೇ ಆಗಿದೆ.
يَطُوفُونَ بَيْنَهَا وَبَيْنَ حَمِيمٍ آنٍ ۝٤٤
📖 ಅನುವಾದ ಆಯತ್ 44
ಅವರು ಆ ನರಕ ಹಾಗೂ ಕುದಿಯುತ್ತಿರುವ ನೀರಿನ ನಡುವೆ ಸುತ್ತುತ್ತಿರುವರು.
فَبِأَيِّ آلَاءِ رَبِّكُمَا تُكَذِّبَانِ ۝٤٥
📖 ಅನುವಾದ ಆಯತ್ 45
ಯಕ್ಷಗಳೇ ಮತ್ತು ಮಾನವರೇ ನೀವಿನ್ನು ನಿಮ್ಮ ಪ್ರಭುವಿನ ಯಾವ ಯಾವ ಅದ್ಭುತ ಸಾಮರ್ಥ್ಯಗಳನ್ನು ಸುಳ್ಳಾಗಿಸುವಿರಿ?
وَلِمَنْ خَافَ مَقَامَ رَبِّهِ جَنَّتَانِ ۝٤٦
📖 ಅನುವಾದ ಆಯತ್ 46
ತನ್ನ ಪ್ರಭುವಿನ ಮುಂದೆ ನಿಲ್ಲುವುದನ್ನು ಭಯಪಟ್ಟವನಿಗೆ ಎರಡು ಸ್ವರ್ಗೋದ್ಯಾನಗಳಿವೆ.
فَبِأَيِّ آلَاءِ رَبِّكُمَا تُكَذِّبَانِ ۝٤٧
📖 ಅನುವಾದ ಆಯತ್ 47
ಯಕ್ಷಗಳೇ ಮತ್ತು ಮಾನವರೇ ನೀವಿನ್ನು ನಿಮ್ಮ ಪ್ರಭುವಿನ ಯಾವ ಯಾವ ಅದ್ಭುತ ಪುರಸ್ಕಾರಗಳನ್ನು ಸುಳ್ಳಾಗಿಸುವಿರಿ?
ذَوَاتَا أَفْنَانٍ ۝٤٨
📖 ಅನುವಾದ ಆಯತ್ 48
ಆ ಎರಡೂ ಸ್ವರ್ಗೋದ್ಯಾನಗಳು ಅನೇಕ ರೆಂಬೆ ಕೊಂಬೆಗಳುಳ್ಳದ್ದಾಗಿರುವುವು.
فَبِأَيِّ آلَاءِ رَبِّكُمَا تُكَذِّبَانِ ۝٤٩
📖 ಅನುವಾದ ಆಯತ್ 49
ಯಕ್ಷಗಳೇ ಮತ್ತು ಮಾನವರೇ ನೀವಿನ್ನು ನಿಮ್ಮ ಪ್ರಭುವಿನ ಯಾವ ಯಾವ ಅದ್ಭುತ ಕೊಡುಗೆಗಳನ್ನು ಸುಳ್ಳಾಗಿಸುವಿರಿ?
فِيهِمَا عَيْنَانِ تَجْرِيَانِ ۝٥٠
📖 ಅನುವಾದ ಆಯತ್ 50
ಅವೆರಡರಲ್ಲಿ ಎರಡು ಚಿಲುಮೆಗಳು ಹರಿಯುತ್ತಿರುವುವು.
فَبِأَيِّ آلَاءِ رَبِّكُمَا تُكَذِّبَانِ ۝٥١
📖 ಅನುವಾದ ಆಯತ್ 51
ಯಕ್ಷಗಳೇ ಮತ್ತು ಮಾನವರೇ ನೀವಿನ್ನು ನಿಮ್ಮ ಪ್ರಭುವಿನ ಯಾವ ಯಾವ ಅದ್ಭುತ ಕೊಡುಗೆಗಳನ್ನು ಸುಳ್ಳಾಗಿಸುವಿರಿ?
فِيهِمَا مِن كُلِّ فَاكِهَةٍ زَوْجَانِ ۝٥٢
📖 ಅನುವಾದ ಆಯತ್ 52
ಅವೆರಡರಲ್ಲಿ ಪ್ರತಿಯೊಂದು ವಿಧದ ಹಣ್ಣುಹಂಪಲುಗಳ ಎರಡೆರಡು ವರ್ಗಗಳಿರುವವು.
فَبِأَيِّ آلَاءِ رَبِّكُمَا تُكَذِّبَانِ ۝٥٣
📖 ಅನುವಾದ ಆಯತ್ 53
ಯಕ್ಷಗಳೇ ಮತ್ತು ಮಾನವರೇ ನೀವಿನ್ನು ನಿಮ್ಮ ಪ್ರಭುವಿನ ಯಾವ ಯಾವ ಅದ್ಭುತ ಕೊಡುಗೆಗಳನ್ನು ಸುಳ್ಳಾಗಿಸುವಿರಿ?
مُتَّكِئِينَ عَلَىٰ فُرُشٍ بَطَائِنُهَا مِنْ إِسْتَبْرَقٍ ۚ وَجَنَى الْجَنَّتَيْنِ دَانٍ ۝٥٤
📖 ಅನುವಾದ ಆಯತ್ 54
ಸ್ವರ್ಗವಾಸಿಗಳು ದಿಂಬಿಗೊರಗಿ ಕುಳಿತಿರುವ ಹಾಸಿಗೆಗಳ ಒಳಪದರಗಳು ದಪ್ಪ ರೇಶ್ಮೆಗಳಿಂದಾಗಿರುವವು, ಮತ್ತು ಆ ಎರಡೂ ಸ್ವರ್ಗೋದ್ಯಾನಗಳ ಹಣ್ಣುಹಂಪಲುಗಳು ಬಾಗಿರುವುವು.
فَبِأَيِّ آلَاءِ رَبِّكُمَا تُكَذِّبَانِ ۝٥٥
📖 ಅನುವಾದ ಆಯತ್ 55
ಯಕ್ಷಗಳೇ ಮತ್ತು ಮಾನವರೇ ನೀವಿನ್ನು ನಿಮ್ಮ ಪ್ರಭುವಿನ ಯಾವ ಯಾವ ಅದ್ಭುತ ಕೊಡುಗೆಗಳನ್ನು ಸುಳ್ಳಾಗಿಸುವಿರಿ?
فِيهِنَّ قَاصِرَاتُ الطَّرْفِ لَمْ يَطْمِثْهُنَّ إِنسٌ قَبْلَهُمْ وَلَا جَانٌّ ۝٥٦
📖 ಅನುವಾದ ಆಯತ್ 56
ಅದರಲ್ಲಿ ದೃಷ್ಟಿ ತಗ್ಗಿಸುವವರಾದ ಅಪ್ಸರೆಗಳಿರುವರು, ಇದಕ್ಕೆ ಮೊದಲು ಅವರನ್ನು ಯಾವ ಮಾನವನಾಗಲಿ ಜಿನ್ನ್ ಆಗಲಿ ಸ್ಪರ್ಶಿಸಿರುವುದಿಲ್ಲ.
فَبِأَيِّ آلَاءِ رَبِّكُمَا تُكَذِّبَانِ ۝٥٧
📖 ಅನುವಾದ ಆಯತ್ 57
ಯಕ್ಷಗಳೇ ಮತ್ತು ಮಾನವರೇ ನೀವಿನ್ನು ನಿಮ್ಮ ಪ್ರಭುವಿನ ಯಾವ ಯಾವ ಅದ್ಭುತ ಕೊಡುಗೆಗಳನ್ನು ಸುಳ್ಳಾಗಿಸುವಿರಿ?
كَأَنَّهُنَّ الْيَاقُوتُ وَالْمَرْجَانُ ۝٥٨
📖 ಅನುವಾದ ಆಯತ್ 58
ಆ ಅಪ್ಸರೆಗಳು ಮಾಣಿಕ್ಯ ಮತ್ತು ಹವಳಗಳಂತಿರುವರು.
فَبِأَيِّ آلَاءِ رَبِّكُمَا تُكَذِّبَانِ ۝٥٩
📖 ಅನುವಾದ ಆಯತ್ 59
ಯಕ್ಷಗಳೇ ಮತ್ತು ಮಾನವರೇ ನೀವಿನ್ನು ನಿಮ್ಮ ಪ್ರಭುವಿನ ಯಾವ ಯಾವ ಅದ್ಭುತ ಕೊಡುಗೆಗಳನ್ನು ಸುಳ್ಳಾಗಿಸುವಿರಿ?
هَلْ جَزَاءُ الْإِحْسَانِ إِلَّا الْإِحْسَانُ ۝٦٠
📖 ಅನುವಾದ ಆಯತ್ 60
ಒಳಿತಿನ ಪ್ರತಿಫಲವು ಒಳಿತಿನ ಹೊರತು ಇನ್ನೇನಿದೆ?
فَبِأَيِّ آلَاءِ رَبِّكُمَا تُكَذِّبَانِ ۝٦١
📖 ಅನುವಾದ ಆಯತ್ 61
ಯಕ್ಷಗಳೇ ಮತ್ತು ಮಾನವರೇ ನೀವಿನ್ನು ನಿಮ್ಮ ಪ್ರಭುವಿನ ಯಾವ ಯಾವ ಅದ್ಭುತಗಳನ್ನು ಸುಳ್ಳಾಗಿಸುವಿರಿ?
وَمِن دُونِهِمَا جَنَّتَانِ ۝٦٢
📖 ಅನುವಾದ ಆಯತ್ 62
ಅವೆರಡರ ಹೊರತು ಇನ್ನೆರಡು ಸ್ವರ್ಗೋದ್ಯಾನಗಳಿವೆ.
فَبِأَيِّ آلَاءِ رَبِّكُمَا تُكَذِّبَانِ ۝٦٣
📖 ಅನುವಾದ ಆಯತ್ 63
ಯಕ್ಷಗಳೇ ಮತ್ತು ಮಾನವರೇ ನೀವಿನ್ನು ನಿಮ್ಮ ಪ್ರಭುವಿನ ಯಾವ ಯಾವ ಅದ್ಭುತ ಕೊಡುಗೆಗಳನ್ನು ಸುಳ್ಳಾಗಿಸುವಿರಿ?
مُدْهَامَّتَانِ ۝٦٤
📖 ಅನುವಾದ ಆಯತ್ 64
ಅವೆರಡೂ ಹಚ್ಚ ಹಸಿರು ವರ್ಣದ್ದಾಗಿವೆ.
فَبِأَيِّ آلَاءِ رَبِّكُمَا تُكَذِّبَانِ ۝٦٥
📖 ಅನುವಾದ ಆಯತ್ 65
ಹಾಗಾದರೆ ನೀವು ನಿಮ್ಮ ಪ್ರಭುವಿನ ಯಾವ ಯಾವ ಅನುಗ್ರಹಗಳನ್ನು ಸುಳ್ಳಾಗಿಸುವಿರಿ?
فِيهِمَا عَيْنَانِ نَضَّاخَتَانِ ۝٦٦
📖 ಅನುವಾದ ಆಯತ್ 66
ಅವುಗಳಲ್ಲಿ ಚಿಮ್ಮುವ ಎರಡು ಚಿಲುಮೆಗಳಿವೆ.
فَبِأَيِّ آلَاءِ رَبِّكُمَا تُكَذِّبَانِ ۝٦٧
📖 ಅನುವಾದ ಆಯತ್ 67
ಯಕ್ಷಗಳೇ ಮತ್ತು ಮಾನವರೇ ನೀವಿನ್ನು ನಿಮ್ಮ ಪ್ರಭುವಿನ ಯಾವ ಯಾವ ಅದ್ಭುತ ಕೊಡುಗೆಗಳನ್ನು ಸುಳ್ಳಾಗಿಸುವಿರಿ ?
فِيهِمَا فَاكِهَةٌ وَنَخْلٌ وَرُمَّانٌ ۝٦٨
📖 ಅನುವಾದ ಆಯತ್ 68
ಅವೆರಡರಲ್ಲಿ ಹಣ್ಣು ಹಂಪಲುಗಳು ಮತ್ತು ಖರ್ಜೂರ ವೃಕ್ಷಗಳು ಹಾಗು ದಾಳಿಂಬೆಗಳು ಇರುವವು.
فَبِأَيِّ آلَاءِ رَبِّكُمَا تُكَذِّبَانِ ۝٦٩
📖 ಅನುವಾದ ಆಯತ್ 69
ಯಕ್ಷಗಳೇ ಮತ್ತು ಮಾನವರೇ ನೀವಿನ್ನು ನಿಮ್ಮ ಪ್ರಭುವಿನ ಯಾವ ಯಾವ ಅದ್ಭುತ ಕೊಡುಗೆಗಳನ್ನು ಸುಳ್ಳಾಗಿಸುವಿರಿ?
فِيهِنَّ خَيْرَاتٌ حِسَانٌ ۝٧٠
📖 ಅನುವಾದ ಆಯತ್ 70
ಇವುಗಳಲ್ಲಿ ಸುಶಿಲೆಯರಾದ ಸುಂದರ ತರುಣಿಯರಿರುವರು.
فَبِأَيِّ آلَاءِ رَبِّكُمَا تُكَذِّبَانِ ۝٧١
📖 ಅನುವಾದ ಆಯತ್ 71
ಯಕ್ಷಗಳೇ ಮತ್ತು ಮಾನವರೇ ನೀವಿನ್ನು ನಿಮ್ಮ ಪ್ರಭುವಿನ ಯಾವ ಯಾವ ಅದ್ಭುತ ಕೊಡುಗೆಗಳನ್ನು ಸುಳ್ಳಾಗಿಸುವಿರಿ?
حُورٌ مَّقْصُورَاتٌ فِي الْخِيَامِ ۝٧٢
📖 ಅನುವಾದ ಆಯತ್ 72
ಆ ಅಪ್ಸರೆಯರು ಸ್ವರ್ಗದ ಗುಡಾರಗಳಲ್ಲಿರುವರು.
فَبِأَيِّ آلَاءِ رَبِّكُمَا تُكَذِّبَانِ ۝٧٣
📖 ಅನುವಾದ ಆಯತ್ 73
ಯಕ್ಷಗಳೇ ಮತ್ತು ಮಾನವರೇ ನೀವಿನ್ನು ನಿಮ್ಮ ಪ್ರಭುವಿನ ಯಾವ ಯಾವ ಅದ್ಭುತ ಕೊಡುಗೆಗಳನ್ನು ಸುಳ್ಳಾಗಿಸುವಿರಿ?
لَمْ يَطْمِثْهُنَّ إِنسٌ قَبْلَهُمْ وَلَا جَانٌّ ۝٧٤
📖 ಅನುವಾದ ಆಯತ್ 74
ಇದಕ್ಕೆ ಮೊದಲು ಅವರನ್ನು ಯಾವ ಮಾನವನಾಗಲಿ, ಜಿನ್ನ್ ಆಗಲಿ ಸ್ಪರ್ಶಿಸಿರುವುದಿಲ್ಲ.
فَبِأَيِّ آلَاءِ رَبِّكُمَا تُكَذِّبَانِ ۝٧٥
📖 ಅನುವಾದ ಆಯತ್ 75
ಯಕ್ಷಗಳೇ ಮತ್ತು ಮಾನವರೇ ನೀವಿನ್ನು ನಿಮ್ಮ ಪ್ರಭುವಿನ ಯಾವ ಯಾವ ಅದ್ಭುತ ಕೊಡುಗೆಗಳನ್ನು ಸುಳ್ಳಾಗಿಸುವಿರಿ?
مُتَّكِئِينَ عَلَىٰ رَفْرَفٍ خُضْرٍ وَعَبْقَرِيٍّ حِسَانٍ ۝٧٦
📖 ಅನುವಾದ ಆಯತ್ 76
ಸ್ವರ್ಗವಾಸಿಗಳು ಹಸಿರು ರತ್ನಗಂಬಳಿಗಳಲ್ಲಿ ಉನ್ನತವಾದ ಹಾಸಿಗೆಗಳ ಮೇಲೆ ದಿಂಬುಗಳಿಗೆ ಒರಗಿಕೊಂಡಿರುವರು.
فَبِأَيِّ آلَاءِ رَبِّكُمَا تُكَذِّبَانِ ۝٧٧
📖 ಅನುವಾದ ಆಯತ್ 77
ಯಕ್ಷಗಳೇ ಮತ್ತು ಮಾನವರೇ ನೀವಿನ್ನು ನಿಮ್ಮ ಪ್ರಭುವಿನ ಯಾವ ಯಾವ ಅದ್ಭುತ ಕೊಡುಗೆಗಳನ್ನು ಸುಳ್ಳಾಗಿಸುವಿರಿ?
تَبَارَكَ اسْمُ رَبِّكَ ذِي الْجَلَالِ وَالْإِكْرَامِ ۝٧٨
📖 ಅನುವಾದ ಆಯತ್ 78
ಅಪಾರ ಮಹಿಮೆ ಹಾಗು ಉದಾರತೆಯುಳ್ಳವನಾದ ನಿಮ್ಮ ಪ್ರಭುವಿನ ನಾಮವು ಮಹಾ ಮಂಗಳಮಯವಾಗಿರುವುದು.
← 54 ಅರ್-ರಹ್ಮಾನ್ (55/114) 56 →
ಓದಿ ಸೂರಾ ಅರ್-ರಹ್ಮಾನ್ ಕನ್ನಡ ಅನುವಾದ – ಪಠಣ ಮತ್ತು ಆಡಿಯೋ

55الرحمن Ar-Rahman 📚 78 ಆಯತ್ مدنية

ಆಯತ್‌ವಾರು – ಸೂರಾ ಅರ್-ರಹ್ಮಾನ್ — 78 ಆಯತ್




ಪವಿತ್ರ ಕುರಾನ್


Monday, September 7, 2026

Don't forget us in your sincere prayers