ಸೂರಾ ಅದ್-ದುಖಾನ್ ಅರೇಬಿಕ್ ಮತ್ತು ಕನ್ನಡ
ಸೂರಾ ಅದ್-ದುಖಾನ್ ಸಂಪೂರ್ಣ ಕನ್ನಡ ಅನುವಾದ, ಉಚ್ಚಾರಣೆ ಮತ್ತು ಆಡಿಯೋ ಪಠಣದೊಂದಿಗೆ ಓದಿ. ಪ್ರತಿ ಆಯತ್‌ನ ಅರ್ಥ. (59 ಆಯತ್ — مكية). ಅದ್-ದುಖಾನ್ ಆಲಿಸಿ, ಅದ್-ದುಖಾನ್ ಅನುವಾದ, ಅದ್-ದುಖಾನ್ mp3, ಅದ್-ದುಖಾನ್ pdf.ಸೂರಾ ಅದ್-ದುಖಾನ್ ಓದಿ ಮತ್ತು ಆಲಿಸಿ
🎧 ಆಯತ್
M
Mishary Rashid Alafasy
✓
Mishary Rashid Alafasy
✓
M
Mahmoud Khalil Al-Husary
✓
Mahmoud Khalil Al-Husary
✓
A
Abdurrahman As-Sudais
✓
Abdurrahman As-Sudais
✓
M
Mohamed Siddiq Al-Minshawi
✓
Mohamed Siddiq Al-Minshawi
✓
A
Abdul Basit Abdul Samad
✓
Abdul Basit Abdul Samad
✓
A
Ali Al-Hudhaify
✓
Ali Al-Hudhaify
✓
A
Ahmed ibn Ali al-Ajamy
✓
Ahmed ibn Ali al-Ajamy
✓
A
Abu Bakr Ash-Shaatree
✓
Abu Bakr Ash-Shaatree
✓
M
Muhammad Ayyoub
✓
Muhammad Ayyoub
✓
A
Abdullah Basfar
✓
Abdullah Basfar
✓
A
Abdullah Al-Juhani
✓
Abdullah Al-Juhani
✓
M
Maher Al Muaiqly
✓
Maher Al Muaiqly
✓
—
x1
إِنَّا أَنزَلْنَاهُ فِي لَيْلَةٍ مُّبَارَكَةٍ ۚ إِنَّا كُنَّا مُنذِرِينَ ٣
📖 ಅನುವಾದ
ಆಯತ್ 3
ನಿಶ್ಚಯವಾಗಿಯು ನಾವು ಇದನ್ನು ಒಂದು ಸಮೃದ್ಧಪೂರ್ಣರಾತ್ರಿಯಲ್ಲಿ ಅವತೀರ್ಣಗೊಳಿಸಿರುತ್ತೇವೆ. ನಿಸ್ಸಂಶಯ ವಾಗಿಯು ನಾವು ಜನರನ್ನು ಮುನ್ನೆಚ್ಚರಿಕೆ ನೀಡುವವರಾಗಿದ್ದೇವೆ.
فِيهَا يُفْرَقُ كُلُّ أَمْرٍ حَكِيمٍ ٤
📖 ಅನುವಾದ
ಆಯತ್ 4
ಆ ರಾತ್ರಿಯಲ್ಲಿ ನಮ್ಮ ಅಪ್ಪಣೆಯಿಂದ ಯುಕ್ತಿಪೂರ್ಣವಾದ ಸಕಲ ವಿಷಯಗಳನ್ನು ಬೇರ್ಪಡಿಸಿ ವಿವರಿಸಲಾಗುವುದು.
أَمْرًا مِّنْ عِندِنَا ۚ إِنَّا كُنَّا مُرْسِلِينَ ٥
📖 ಅನುವಾದ
ಆಯತ್ 5
ಅದು ನಮ್ಮ ತೀರ್ಮಾನವಾಗಿರುತ್ತದೆ ಖಂಡಿತವಾಗಿಯೂ ಸಂದೇಶವಾಹಕರನ್ನು ಕಳುಹಿಸುವವರು ನಾವೇ ಆಗಿರುತ್ತೇವೆ.
رَحْمَةً مِّن رَّبِّكَ ۚ إِنَّهُ هُوَ السَّمِيعُ الْعَلِيمُ ٦
📖 ಅನುವಾದ
ಆಯತ್ 6
ಇದು ನಿಮ್ಮ ಪ್ರಭುವಿನ ಕೃಪೆಯಿಂದಾಗಿದೆ. ನಿಸ್ಸಂದೇಹವಾಗಿಯೂ ಅವನು ಸರ್ವವನ್ನು ಆಲಿಸುವವನು ಮತ್ತು ಎಲ್ಲವನ್ನು ಅರಿಯುವವನಾಗಿದ್ದಾನೆ.
رَبِّ السَّمَاوَاتِ وَالْأَرْضِ وَمَا بَيْنَهُمَا ۖ إِن كُنتُم مُّوقِنِينَ ٧
📖 ಅನುವಾದ
ಆಯತ್ 7
ಅವನು ಆಕಾಶಗಳ ಮತ್ತು ಭೂಮಿಯ ಹಾಗೂ ಅವುಗಳ ನಡುವೆಯಿರುವ ಸಕಲ ವಸ್ತುಗಳ ಪ್ರಭುವಾಗಿದ್ದಾನೆ. ನೀವು ನಂಬುವವರಾಗಿದ್ದರೆ.
لَا إِلَٰهَ إِلَّا هُوَ يُحْيِي وَيُمِيتُ ۖ رَبُّكُمْ وَرَبُّ آبَائِكُمُ الْأَوَّلِينَ ٨
📖 ಅನುವಾದ
ಆಯತ್ 8
ಅವನ ಹೊರತು ಅನ್ಯಆರಾಧ್ಯರಿಲ್ಲ. ಅವನೇ ಜೀವಂತಗೊಳಿಸುತ್ತಾನೆ ಮತ್ತು ಮರಣ ನೀಡುತ್ತಾನೆ. ಅವನೇ ನಿಮ್ಮ ಮತ್ತು ನಿಮ್ಮ ಪೂರ್ವಿಕರಾದ ತಂದೆತಾತAದಿರ ಪ್ರಭುವು.
فَارْتَقِبْ يَوْمَ تَأْتِي السَّمَاءُ بِدُخَانٍ مُّبِينٍ ١٠
📖 ಅನುವಾದ
ಆಯತ್ 10
ಆದ್ದರಿಂದ ಆಕಾಶವು ಸ್ಪಷ್ಟವಾದ ಧೂಮವನ್ನು ತರುವ ದಿನವನ್ನು ನೀವು ನಿರೀಕ್ಷಿಸಿರಿ.
يَغْشَى النَّاسَ ۖ هَٰذَا عَذَابٌ أَلِيمٌ ١١
📖 ಅನುವಾದ
ಆಯತ್ 11
ಅದು ಜನರನ್ನು ಆವರಿಸಿ ಕೊಳ್ಳುವುದು. ಇದೊಂದು ವೇದನಾಜನಕ ಯಾತನೆಯಾಗಿದೆ.
رَّبَّنَا اكْشِفْ عَنَّا الْعَذَابَ إِنَّا مُؤْمِنُونَ ١٢
📖 ಅನುವಾದ
ಆಯತ್ 12
ಅವರು ಹೇಳುವರು: ನಮ್ಮ ಪ್ರಭು, ನಮ್ಮಿಂದ ಈ ಯಾತನೆಯನ್ನು ಸರಿಸಿಬಿಡು. ನಾವು ವಿಶ್ವಾಸಿಗಳಾಗುವೆವು.
أَنَّىٰ لَهُمُ الذِّكْرَىٰ وَقَدْ جَاءَهُمْ رَسُولٌ مُّبِينٌ ١٣
📖 ಅನುವಾದ
ಆಯತ್ 13
ಅವರಿಗೆ ಉದ್ಬೋಧೆಯು ಎಲ್ಲಿದೆ? ಅವರ ಬಳಿಗೆ ಸುಸ್ಪಷ್ಟವಾಗಿ ವಿವರಿಸುವಒಬ್ಬ ಸಂದೇಶವಾಹಕರು ಬಂದಿದ್ದರು.
ثُمَّ تَوَلَّوْا عَنْهُ وَقَالُوا مُعَلَّمٌ مَّجْنُونٌ ١٤
📖 ಅನುವಾದ
ಆಯತ್ 14
ಹಾಗಿದ್ದೂ ಅವರು ಆತನಿಂದ ವಿಮುಖರಾಗಿ ಬಿಟ್ಟರು ಮತ್ತು ಇವನೊಬ್ಬ ಕಲಿಸಲ್ಪಟ್ಟ ಹುಚ್ಚನಾಗಿದ್ದಾನೆ ಎಂದು ಹೇಳಿದರು.
إِنَّا كَاشِفُو الْعَذَابِ قَلِيلًا ۚ إِنَّكُمْ عَائِدُونَ ١٥
📖 ಅನುವಾದ
ಆಯತ್ 15
ಖಂಡಿತವಾಗಿಯು ನಾವು ಯಾತನೆಯನ್ನು ಸ್ವಲ್ಪ ಕಾಲ ಸರಿಸಿ ಬಿಡುವೆವು. ಆದರೆ ನೀವು ಅದೇ ಹಿಂದಿನ ಸ್ಥಿತಿಗೆ ಮರಳುವಿರಿ.
يَوْمَ نَبْطِشُ الْبَطْشَةَ الْكُبْرَىٰ إِنَّا مُنتَقِمُونَ ١٦
📖 ಅನುವಾದ
ಆಯತ್ 16
ನಾವು ಅತ್ಯುಗ್ರವಾಗಿ ಹಿಡಿಯುವ ದಿನದಂದು ಖಂಡಿತವಾಗಿಯು ನಾವು ಪ್ರತಿಕಾರ ಪಡೆಯುವವರಿದ್ದೇವೆ.
۞ وَلَقَدْ فَتَنَّا قَبْلَهُمْ قَوْمَ فِرْعَوْنَ وَجَاءَهُمْ رَسُولٌ كَرِيمٌ ١٧
📖 ಅನುವಾದ
ಆಯತ್ 17
ನಿಶ್ಚಯವಾಗಿಯು ನಾವು ಇವರಿಗಿಂತ ಮುಂಚೆ ಫಿರ್‌ಔನನ ಜನರನ್ನು ಪರೀಕ್ಷಿಸಿದ್ದೆವು. ಮತ್ತು ಅವರ ಬಳಿ ಒಬ್ಬ ಸನ್ಮಾನ್ಯ ಸಂದೇಶವಾಹಕರು ಬಂದಿದ್ದರು.
أَنْ أَدُّوا إِلَيَّ عِبَادَ اللَّهِ ۖ إِنِّي لَكُمْ رَسُولٌ أَمِينٌ ١٨
📖 ಅನುವಾದ
ಆಯತ್ 18
ನೀವು ಅಲ್ಲಾಹನ ದಾಸರನ್ನು ನನ್ನ ವಶಕ್ಕೊಪ್ಪಿಸಿರಿ. ಖಂಡಿತವಾಗಿಯು ನಾನು ನಿಮಗೆ ಒಬ್ಬ ನಂಬಿಗಸ್ಥ ಸಂದೇಶವಾಹಕನಾಗಿದ್ದೇನೆ. (ಎಂದು ಹೇಳಿದ್ದರು).
وَأَن لَّا تَعْلُوا عَلَى اللَّهِ ۖ إِنِّي آتِيكُم بِسُلْطَانٍ مُّبِينٍ ١٩
📖 ಅನುವಾದ
ಆಯತ್ 19
ನೀವು ಅಲ್ಲಾಹನ ಮುಂದೆ ಧಿಕ್ಕಾರತೋರದಿರಿ. ನಾನು ನಿಮ್ಮ ಬಳಿ ಸುಸ್ಪಷ್ಟ ಪುರಾವೆಯೊಂದಿಗೆ ಬಂದಿರುವೆನು
وَإِنِّي عُذْتُ بِرَبِّي وَرَبِّكُمْ أَن تَرْجُمُونِ ٢٠
📖 ಅನುವಾದ
ಆಯತ್ 20
ನೀವು ನನ್ನನ್ನು ಕಲ್ಲೆಸೆದು ಕೊಲ್ಲುವುದರಿಂದ ನಾನು ನನ್ನ ಮತ್ತು ನಿಮ್ಮ ಪ್ರಭುವಿನಲ್ಲಿ ಅಭಯ ಪಡೆದಿದ್ದೇನೆ.
وَإِن لَّمْ تُؤْمِنُوا لِي فَاعْتَزِلُونِ ٢١
📖 ಅನುವಾದ
ಆಯತ್ 21
ನೀವು ನನ್ನಲ್ಲಿ ವಿಶ್ವಾಶವಿಡುವುದಿಲ್ಲವೆಂದಾದರೆ ನನ್ನಿಂದ ನೀವು ದೂರ ಸರಿಯಿರಿ.
فَدَعَا رَبَّهُ أَنَّ هَٰؤُلَاءِ قَوْمٌ مُّجْرِمُونَ ٢٢
📖 ಅನುವಾದ
ಆಯತ್ 22
ಕೊನೆಗೆ ಅವರು ತಮ್ಮ ಪ್ರಭುವಿನಲ್ಲಿ ಇವರು ಅಪರಾಧಿ ಜನಾಂಗವಾಗಿದ್ದಾರೆAದು ಪ್ರಾರ್ಥಿಸಿದರು.
فَأَسْرِ بِعِبَادِي لَيْلًا إِنَّكُم مُّتَّبَعُونَ ٢٣
📖 ಅನುವಾದ
ಆಯತ್ 23
(ಆಗ ಅಲ್ಲಾಹನು ಆದೇಶಿಸಿದನು) ಹಾಗಿದ್ದರೆ ನೀವು ನನ್ನ ದಾಸರನ್ನು ಕರೆದುಕೊಂಡು ರಾತ್ರಿಯಲ್ಲಿ ಹೊರಡಿರಿ. ಖಂಡಿತವಾಗಿಯು ನಿಮ್ಮನ್ನು ಹಿಂಬಾಲಿಸಲಾಗುವುದು.
وَاتْرُكِ الْبَحْرَ رَهْوًا ۖ إِنَّهُمْ جُندٌ مُّغْرَقُونَ ٢٤
📖 ಅನುವಾದ
ಆಯತ್ 24
ಮತ್ತು ನೀವು ಸಮುದ್ರವನ್ನು ಶಾಂತಿಯುತವಾಗಿರಲು ಬಿಟ್ಟು ಬಿಡಿರಿ. ನಿಸ್ಸಂದೇಹವಾಗಿಯು ಅವರ ಸೈನ್ಯವನ್ನು ಮುಳುಗಿಸಲಾಗುವುದು.
كَمْ تَرَكُوا مِن جَنَّاتٍ وَعُيُونٍ ٢٥
📖 ಅನುವಾದ
ಆಯತ್ 25
ಅವರು ಅದೆಷ್ಟೋ ತೋಟಗಳನ್ನೂ, ಚಿಲುಮೆಗಳನ್ನೂ ಬಿಟ್ಟು ಹೋದರು.
وَنَعْمَةٍ كَانُوا فِيهَا فَاكِهِينَ ٢٧
📖 ಅನುವಾದ
ಆಯತ್ 27
ಮತ್ತು ಅವರು ಆನಂದಿಸುತ್ತಿದ್ದ ಆ ಸುಖಭೋಗ ಸಾಧನಗಳನ್ನು ಬಿಟ್ಟು ಹೋದರು.
كَذَٰلِكَ ۖ وَأَوْرَثْنَاهَا قَوْمًا آخَرِينَ ٢٨
📖 ಅನುವಾದ
ಆಯತ್ 28
ಇದೇ ಪ್ರಕಾರವಾಯಿತು ಮತ್ತು ನಂತರ ನಾವು ಇತರ ಜನರನ್ನು ಅದರ ವಾರೀಸುದಾರರನ್ನಾಗಿ ಮಾಡಿದೆವು.
فَمَا بَكَتْ عَلَيْهِمُ السَّمَاءُ وَالْأَرْضُ وَمَا كَانُوا مُنظَرِينَ ٢٩
📖 ಅನುವಾದ
ಆಯತ್ 29
ಹಾಗೆಯೇ ಆಕಾಶವಾಗಲಿ, ಭೂಮಿಯಾಗಲಿ ಅವರಿಗಾಗಿ ರೋದಿಸಲಿಲ್ಲ ಮತ್ತು ಅವರಿಗೆ ಒಂದಿಷ್ಟೂ ಕಾಲಾವಕಾಶ ಲಭಿಸಲಿಲ್ಲ.
وَلَقَدْ نَجَّيْنَا بَنِي إِسْرَائِيلَ مِنَ الْعَذَابِ الْمُهِينِ ٣٠
📖 ಅನುವಾದ
ಆಯತ್ 30
ನಿಸ್ಸಂಶಯವಾಗಿಯೂ ನಾವು ಇಸ್ರಾಯೀಲ್ ಸಂತತಿಗಳನ್ನು ಅಪಮಾನಕರ ಶಿಕ್ಷೆಯಿಂದ ರಕ್ಷಿಸಿದೆವು.
مِن فِرْعَوْنَ ۚ إِنَّهُ كَانَ عَالِيًا مِّنَ الْمُسْرِفِينَ ٣١
📖 ಅನುವಾದ
ಆಯತ್ 31
ಫಿರ್‌ಔನನಿಂದ ವಾಸ್ತವದಲ್ಲಿ ಅವನು ಅಹಂಕಾರಿಯು ಮತ್ತು ಹದ್ದುಮೀರಿ ದವರಲ್ಲಾಗಿದ್ದನು
وَلَقَدِ اخْتَرْنَاهُمْ عَلَىٰ عِلْمٍ عَلَى الْعَالَمِينَ ٣٢
📖 ಅನುವಾದ
ಆಯತ್ 32
ನಾವು ಅವರನ್ನು (ಬನೀ ಇಸ್ರಾಯೀಲರನ್ನು) ಅರ್ಹರೆಂದು ಅರಿತು ಸರ್ವಲೋಕದವರ ಮೇಲೆ ಶ್ರೇಷ್ಠತೆಯನ್ನು ನೀಡಿದ್ದೆವು.
وَآتَيْنَاهُم مِّنَ الْآيَاتِ مَا فِيهِ بَلَاءٌ مُّبِينٌ ٣٣
📖 ಅನುವಾದ
ಆಯತ್ 33
ನಾವು ಅವರಿಗೆ ನೀಡಿದ ದೃಷ್ಟಾಂತಗಳಲ್ಲಿ ಸುಸ್ಪಷ್ಟವಾದ ಪರೀಕ್ಷೆಯಿತ್ತು.
إِنْ هِيَ إِلَّا مَوْتَتُنَا الْأُولَىٰ وَمَا نَحْنُ بِمُنشَرِينَ ٣٥
📖 ಅನುವಾದ
ಆಯತ್ 35
ನಮ್ಮ ಮೊದಲ ಬಾರಿಯ ಮರಣದ ಹೊರತು ಬೇರೇನಿಲ್ಲ ಮತ್ತು ನಮ್ಮನ್ನು ಪುನಃ ಎಬ್ಬಿಸಲಾಗುವುದಿಲ್ಲ.
فَأْتُوا بِآبَائِنَا إِن كُنتُمْ صَادِقِينَ ٣٦
📖 ಅನುವಾದ
ಆಯತ್ 36
ನೀವು ಸತ್ಯವಂತರಾಗಿದ್ದರೆ ನಮ್ಮ ತಂದೆ ತಾತಂದಿರನ್ನು ಕರೆತನ್ನಿರಿ.
أَهُمْ خَيْرٌ أَمْ قَوْمُ تُبَّعٍ وَالَّذِينَ مِن قَبْلِهِمْ ۚ أَهْلَكْنَاهُمْ ۖ إِنَّهُمْ كَانُوا مُجْرِمِينَ ٣٧
📖 ಅನುವಾದ
ಆಯತ್ 37
ಇವರು ಉತ್ತಮರೇ? ಅಥವಾ ತುಬ್ಬಾದ ಜನಾಂಗ ಮತ್ತು ಅವರಿಗಿಂತ ಮೊದಲಿದ್ದವರೇ? ನಾವು ಅವರೆಲ್ಲರನ್ನು ನಾಶಮಾಡಿದೆವು. ಖಂಡಿತವಾಗಿಯು ಅವರು ಅಪರಾಧಿಗಳಾಗಿದ್ದರು.
وَمَا خَلَقْنَا السَّمَاوَاتِ وَالْأَرْضَ وَمَا بَيْنَهُمَا لَاعِبِينَ ٣٨
📖 ಅನುವಾದ
ಆಯತ್ 38
ನಾವು ಆಕಾಶಗಳನ್ನೂ, ಭೂಮಿಯನ್ನೂ, ಅವುಗಳ ನಡುವೆಯಿರುವ ವಸ್ತುಗಳನ್ನೂ ಆಟವಿನೋದಕ್ಕಾಗಿ ಸೃಷ್ಟಿಸಿರುವುದಿಲ್ಲ.
مَا خَلَقْنَاهُمَا إِلَّا بِالْحَقِّ وَلَٰكِنَّ أَكْثَرَهُمْ لَا يَعْلَمُونَ ٣٩
📖 ಅನುವಾದ
ಆಯತ್ 39
ವಸ್ತುತಃ ನಾವು ಅವುಗಳನ್ನು ಉದ್ದೇಶಪೂರ್ವಕವಾಗಿ ಸತ್ಯದೊಂದಿಗೆ ಸೃಷ್ಟಿಸಿದ್ದೇವೆ. ಆದರೆ ಅವರಲ್ಲಿ ಹೆಚ್ಚಿನವರು ಅರಿಯುವುದಿಲ್ಲ.
إِنَّ يَوْمَ الْفَصْلِ مِيقَاتُهُمْ أَجْمَعِينَ ٤٠
📖 ಅನುವಾದ
ಆಯತ್ 40
ನಿಶ್ಚಯವಾಗಿಯೂ ಆ ನಿರ್ಣಾಯಕ ತೀರ್ಪಿನ ದಿನವು ಅವರೆಲ್ಲರ ನಿಶ್ಚಿತ ವೇಳೆಯಾಗಿದೆ.
يَوْمَ لَا يُغْنِي مَوْلًى عَن مَّوْلًى شَيْئًا وَلَا هُمْ يُنصَرُونَ ٤١
📖 ಅನುವಾದ
ಆಯತ್ 41
ಆ ದಿನ ಯಾವೊಬ್ಬ ಮಿತ್ರನು ತನ್ನ ಮಿತ್ರನಿಗೆ ಸ್ವಲ್ಪವೂ ಪ್ರಯೋಜನಕ್ಕೆ ಬಾರನು ಮತ್ತು ಅವರಿಗೆ ಯಾವ ಸಹಾಯವೂ ಲಭಿಸದು.
إِلَّا مَن رَّحِمَ اللَّهُ ۚ إِنَّهُ هُوَ الْعَزِيزُ الرَّحِيمُ ٤٢
📖 ಅನುವಾದ
ಆಯತ್ 42
ಆದರೆ ಅಲ್ಲಾಹನು ಕರುಣೆತೋರಿದವನ ಹೊರತು. ಅವನು ಪ್ರತಾಪಶಾಲಿಯು, ಕರುಣಾನಿಧಿಯು ಆಗಿದ್ದಾನೆ.
كَالْمُهْلِ يَغْلِي فِي الْبُطُونِ ٤٥
📖 ಅನುವಾದ
ಆಯತ್ 45
ಅದು ಕರಗಿದ ತಾಮ್ರದಂತೆ ಹೊಟ್ಟೆಗಳೊಳಗೆ ಕುದಿಯುತ್ತಿರುವುದು.
خُذُوهُ فَاعْتِلُوهُ إِلَىٰ سَوَاءِ الْجَحِيمِ ٤٧
📖 ಅನುವಾದ
ಆಯತ್ 47
(ನಾವು ಆದೇಶಿಸುವೆವು) ಅವನನ್ನು ಹಿಡಿಯಿರಿ. ಅನಂತರ ಅವನನ್ನು ನರಕದ ಮಧ್ಯಕ್ಕೆ ಎಳೆದೊಯ್ಯಿರಿ.
ثُمَّ صُبُّوا فَوْقَ رَأْسِهِ مِنْ عَذَابِ الْحَمِيمِ ٤٨
📖 ಅನುವಾದ
ಆಯತ್ 48
ಬಳಿಕ ಅವನ ತಲೆಯ ಮೇಲೆ ಕುದಿಯುವ ನೀರಿನ ಯಾತನೆಯನ್ನು ಸುರಿಯಿರಿ.
ذُقْ إِنَّكَ أَنتَ الْعَزِيزُ الْكَرِيمُ ٤٩
📖 ಅನುವಾದ
ಆಯತ್ 49
(ಮತ್ತು ಹೇಳಲಾಗುವುದು) ನೀನು ಈ ರುಚಿಯನ್ನು ಸವಿದುಕೋ, ನೀನು ಪ್ರತಾಪಶಾಲಿಯು, ಗೌರವಾನ್ವಿತನೂ ಆಗಿದ್ದೆ
إِنَّ هَٰذَا مَا كُنتُم بِهِ تَمْتَرُونَ ٥٠
📖 ಅನುವಾದ
ಆಯತ್ 50
ನೀವು ಸಂದೇಹ ಪಡುತ್ತಿದ್ದಂತಹ ನರಕ ಇದೇ ಆಗಿದೆ.
إِنَّ الْمُتَّقِينَ فِي مَقَامٍ أَمِينٍ ٥١
📖 ಅನುವಾದ
ಆಯತ್ 51
ನಿಸ್ಸಂದೇಹವಾಗಿಯು (ಅಲ್ಲಾಹನಲ್ಲಿ) ಭಯ ಭಕ್ತಿಯುಳ್ಳವರು ಶಾಂತಿಧಾಮದಲ್ಲಿರುವರು.
يَلْبَسُونَ مِن سُندُسٍ وَإِسْتَبْرَقٍ مُّتَقَابِلِينَ ٥٣
📖 ಅನುವಾದ
ಆಯತ್ 53
ತೆಳುರೇಷ್ಮೆಯ ಹಾಗೂ ದಪ್ಪರೇಷ್ಮೆಯ ವಸ್ತçವನ್ನು ಧರಿಸಿ ಪರಸ್ಪರ ಎದುರುಬದುರಾಗಿ ಕುಳಿತಿರುವರು.
كَذَٰلِكَ وَزَوَّجْنَاهُم بِحُورٍ عِينٍ ٥٤
📖 ಅನುವಾದ
ಆಯತ್ 54
ಇದೇರೀತಿ ನಾವು ಅವರನ್ನು ವಿಶಾಲ ನಯನಗಳುಳ್ಳ ಅಪ್ಸರೆಯರೊಂದಿಗೆ ವಿವಾಹ ಮಾಡಿಸುವೆವು.
يَدْعُونَ فِيهَا بِكُلِّ فَاكِهَةٍ آمِنِينَ ٥٥
📖 ಅನುವಾದ
ಆಯತ್ 55
ಅಲ್ಲಿ ಅವರು ನಿಶ್ಚಿಂತರಾಗಿ ಸಕಲ ವಿಧದ ಫಲಗಳನ್ನು ತರಿಸಿಕೊಳ್ಳುವರು.
لَا يَذُوقُونَ فِيهَا الْمَوْتَ إِلَّا الْمَوْتَةَ الْأُولَىٰ ۖ وَوَقَاهُمْ عَذَابَ الْجَحِيمِ ٥٦
📖 ಅನುವಾದ
ಆಯತ್ 56
ಮೊದಲೇ ಬಂದ ಮರಣದ ಹೊರತು. ಅಲ್ಲವರು ಮರಣದ ರುಚಿಯನ್ನು ಸವಿಯಲಾರರು. ಅವರನ್ನು ಅಲ್ಲಾಹನು ನರಕದ ಯಾತನೆಯಿಂದ ರಕ್ಷಿಸುವನು
فَضْلًا مِّن رَّبِّكَ ۚ ذَٰلِكَ هُوَ الْفَوْزُ الْعَظِيمُ ٥٧
📖 ಅನುವಾದ
ಆಯತ್ 57
ಇದು ನಿಮ್ಮ ಪ್ರಭುವಿನ ಅನುಗ್ರಹವಾಗಿದೆ. ಇದುವೇ ಮಹಾಯಶಸ್ಸಾಗಿದೆ.
فَإِنَّمَا يَسَّرْنَاهُ بِلِسَانِكَ لَعَلَّهُمْ يَتَذَكَّرُونَ ٥٨
📖 ಅನುವಾದ
ಆಯತ್ 58
ಅವರು ಉಪದೇಶ ಪಡೆಯಬಹುದೆಂದು ನಾವು ಈ ಕುರ್‌ಆನನ್ನು ನಿಮ್ಮ ಭಾಷೆಯಲ್ಲಿ ಸರಳಗೊಳಸಿದ್ದೇವೆ.
فَارْتَقِبْ إِنَّهُم مُّرْتَقِبُونَ ٥٩
📖 ಅನುವಾದ
ಆಯತ್ 59
ಆದ್ದರಿಂದ ನೀವು ನಿರೀಕ್ಷಿಸಿರಿ. ಅವರೂ ನಿರೀಕ್ಷಿಸುತ್ತಿದ್ದಾರೆ.
ಓದಿ ಸೂರಾ ಅದ್-ದುಖಾನ್ ಕನ್ನಡ ಅನುವಾದ – ಪಠಣ ಮತ್ತು ಆಡಿಯೋ
ಪವಿತ್ರ ಕುರಾನ್
Monday, September 7, 2026
Don't forget us in your sincere prayers

