ಸೂರಾ ಯೂಸುಫ್ ಅರೇಬಿಕ್ ಮತ್ತು ಕನ್ನಡ

ಸೂರಾ ಯೂಸುಫ್ ಸಂಪೂರ್ಣ ಕನ್ನಡ ಅನುವಾದ, ಉಚ್ಚಾರಣೆ ಮತ್ತು ಆಡಿಯೋ ಪಠಣದೊಂದಿಗೆ ಓದಿ. ಪ್ರತಿ ಆಯತ್‌ನ ಅರ್ಥ. (111 ಆಯತ್ — مكية). ಯೂಸುಫ್ ಆಲಿಸಿ, ಯೂಸುಫ್ ಅನುವಾದ, ಯೂಸುಫ್ mp3, ಯೂಸುಫ್ pdf.

ಸೂರಾ ಯೂಸುಫ್ ಓದಿ ಮತ್ತು ಆಲಿಸಿ

🎧 ಆಯತ್
M Mishary Rashid Alafasy
M Mahmoud Khalil Al-Husary
A Abdurrahman As-Sudais
M Mohamed Siddiq Al-Minshawi
A Abdul Basit Abdul Samad
A Ali Al-Hudhaify
A Ahmed ibn Ali al-Ajamy
A Abu Bakr Ash-Shaatree
M Muhammad Ayyoub
A Abdullah Basfar
A Abdullah Al-Juhani
M Maher Al Muaiqly
x1
الر ۚ تِلْكَ آيَاتُ الْكِتَابِ الْمُبِينِ ۝١
📖 ಅನುವಾದ ಆಯತ್ 1
ಅಲಿಫ್ ಲಾಮ್ ರಾ, ಇವು ಸುವ್ಯಕ್ತ ಗ್ರಂಥದ ಸೂಕ್ತಗಳಾಗಿವೆ.
إِنَّا أَنزَلْنَاهُ قُرْآنًا عَرَبِيًّا لَّعَلَّكُمْ تَعْقِلُونَ ۝٢
📖 ಅನುವಾದ ಆಯತ್ 2
ನೀವು ಅರಿತುಕೊಳ್ಳಲಿ ಎಂದು ನಾವಿದನ್ನು ಅರಬೀ ಭಾಷೆಯ ಪಾರಾಯಣ ಗ್ರಂಥವನ್ನಾಗಿ ಅವತೀರ್ಣಗೊಳಿಸಿರುತ್ತೇವೆ.
نَحْنُ نَقُصُّ عَلَيْكَ أَحْسَنَ الْقَصَصِ بِمَا أَوْحَيْنَا إِلَيْكَ هَٰذَا الْقُرْآنَ وَإِن كُنتَ مِن قَبْلِهِ لَمِنَ الْغَافِلِينَ ۝٣
📖 ಅನುವಾದ ಆಯತ್ 3
ನಾವು ಈ ಕು಼ರ್‌ಆನನ್ನು ನಿಮ್ಮೆಡೆಗೆ ಅವತೀರ್ಣಗೊಳಿಸುವ ಮೂಲಕ ನಿಮಗೆ ಅತ್ಯುತ್ತಮ ವೃತ್ತಾಂತಗಳನ್ನು ತಿಳಿಸುತ್ತಿದ್ದೇವೆ. ನಿಜವಾಗಿಯೂ ನೀವು ಇದಕ್ಕೆ ಮೊದಲು ಅಲಕ್ಷರಲ್ಲಾಗಿದ್ದೀರಿ.
إِذْ قَالَ يُوسُفُ لِأَبِيهِ يَا أَبَتِ إِنِّي رَأَيْتُ أَحَدَ عَشَرَ كَوْكَبًا وَالشَّمْسَ وَالْقَمَرَ رَأَيْتُهُمْ لِي سَاجِدِينَ ۝٤
📖 ಅನುವಾದ ಆಯತ್ 4
ಯೂಸುಫ್ ತಮ್ಮ ತಂದೆಯೊಡನೆ ಹೇಳಿದ ಸಂದರ್ಭವನ್ನು ಸ್ಮರಿಸಿರಿ, ನನ್ನ ಪ್ರಿಯ ತಂದೆ ನಾನು ಸ್ವಪ್ನದಲ್ಲಿ ಹನ್ನೊಂದು ನಕ್ಷತ್ರಗಳನ್ನು, ಸೂರ್ಯ ಮತ್ತು ಚಂದ್ರರನ್ನು ಅವು ನನಗೆ ಸಾಷ್ಟಾಂಗವೆರಗುತ್ತಿರುವುದಾಗಿ ಕಂಡಿರುವೆನು.
قَالَ يَا بُنَيَّ لَا تَقْصُصْ رُؤْيَاكَ عَلَىٰ إِخْوَتِكَ فَيَكِيدُوا لَكَ كَيْدًا ۖ إِنَّ الشَّيْطَانَ لِلْإِنسَانِ عَدُوٌّ مُّبِينٌ ۝٥
📖 ಅನುವಾದ ಆಯತ್ 5
ಆಗ ಅವರ ತಂದೆ ಹೇಳಿದರು; ಪ್ರಿಯ ಪುತ್ರ ನಿನ್ನ ಈ ಕನಸಿನ ವಿಚಾರವನ್ನು ನಿನ್ನ ಸಹೋದರರ ಮುಂದೆ ಪ್ರಸ್ತಾಪಿಸಬೇಡ, ಅವರು ನಿನ್ನ ವಿರುದ್ಧ ಯಾವುದಾದರೂ ಕುತಂತ್ರವನ್ನು ಪ್ರಯೋಗಿಸಬಹುದು. ನಿಶ್ಚಯವಾಗಿಯೂ ಶೈತಾನನು ಮನುಷ್ಯನ ಪ್ರತ್ಯಕ್ಷ ಶತ್ರುವಾಗಿದ್ದಾನೆ.
وَكَذَٰلِكَ يَجْتَبِيكَ رَبُّكَ وَيُعَلِّمُكَ مِن تَأْوِيلِ الْأَحَادِيثِ وَيُتِمُّ نِعْمَتَهُ عَلَيْكَ وَعَلَىٰ آلِ يَعْقُوبَ كَمَا أَتَمَّهَا عَلَىٰ أَبَوَيْكَ مِن قَبْلُ إِبْرَاهِيمَ وَإِسْحَاقَ ۚ إِنَّ رَبَّكَ عَلِيمٌ حَكِيمٌ ۝٦
📖 ಅನುವಾದ ಆಯತ್ 6
ಇದೇ ಪ್ರಕಾರ (ಸ್ವಪ್ನದಲ್ಲಿ ಕಂಡAತೆ) ನಿನ್ನ ಪ್ರಭು ನಿನ್ನನ್ನು( ಪ್ರವಾದಿತ್ವಕ್ಕಾಗಿ) ಆಯ್ದುಕೊಳ್ಳುವನು ಮತ್ತು ಸ್ವಪ್ನವ್ಯಾಖ್ಯಾನಗಳ ಆಳಕ್ಕೆ ತಲುಪುವ ಜ್ಞಾನವನ್ನು ಸಹ ಕಲಿಸುವನು. ಮತ್ತು ಇದಕ್ಕೆ ಮೊದಲು ನಿನ್ನ ಪೂರ್ವಜರಾದ ಇಬ್ರಾಹೀಮ್ ಇಸ್‌ಹಾಕ್‌ರವರ ಮೇಲೆ ತನ್ನ ಅನುಗ್ರಹವನ್ನು ಪೂರ್ಣಗೊಳಿಸಿದಂತೆಯೇ ನಿನ್ನ ಮೇಲೂ ಮತ್ತು ಯಾಕೂಬರ ಕುಟುಂಬದ ಮೇಲೂ ಪೂರ್ಣಗೊಳಿಸುವನು. ನಿಶ್ಚಯವಾಗಿಯೂ ನಿನ್ನ ಪ್ರಭು ಸರ್ವಜ್ಞಾನಿಯು ಮಹಾ ಯುಕ್ತಿವಂತನೂ ಆಗಿದ್ದಾನೆ.
۞ لَّقَدْ كَانَ فِي يُوسُفَ وَإِخْوَتِهِ آيَاتٌ لِّلسَّائِلِينَ ۝٧
📖 ಅನುವಾದ ಆಯತ್ 7
ನಿಶ್ಚಯವಾಗಿಯೂ ಯೂಸುಫ್ ಮತ್ತು ಅವರ ಸಹೋದರರ ಚರಿತ್ರೆಯಲ್ಲಿ ವಿಚಾರಿಸುವವರಿಗೆ ನಿದರ್ಶನಗಳಿವೆ.
إِذْ قَالُوا لَيُوسُفُ وَأَخُوهُ أَحَبُّ إِلَىٰ أَبِينَا مِنَّا وَنَحْنُ عُصْبَةٌ إِنَّ أَبَانَا لَفِي ضَلَالٍ مُّبِينٍ ۝٨
📖 ಅನುವಾದ ಆಯತ್ 8
ಅವರ ಸಹೋದರರು ಪರಸ್ಪರ ಹೇಳಿದ ಸಂದರ್ಭವನ್ನು ಸ್ಮರಿಸಿರಿ ನಾವು (ಬಲಿಷ್ಠ) ತಂಡವಾಗಿದ್ದರೂ ಯೂಸುಫ್ ಮತ್ತು ಅವರ ಸಹೋದರ ನಮ್ಮ ತಂದೆಗೆ ನಮಗಿಂತಲೂ ಹೆಚ್ಚು ಪ್ರಿಯರಾಗಿದ್ದಾರೆ, ನಿಸ್ಸಂಶಯವಾಗಿಯೂ ನಮ್ಮ ತಂದೆಯು ಸ್ಪಷ್ಟ ತಪ್ಪಿನಲ್ಲಿದ್ದಾರೆ.
اقْتُلُوا يُوسُفَ أَوِ اطْرَحُوهُ أَرْضًا يَخْلُ لَكُمْ وَجْهُ أَبِيكُمْ وَتَكُونُوا مِن بَعْدِهِ قَوْمًا صَالِحِينَ ۝٩
📖 ಅನುವಾದ ಆಯತ್ 9
(ಈಗ ನಿಮಗಿರುವ ದಾರಿ) ನೀವು ಯೂಸುಫ್ ರವರನ್ನು ಕೊಂದು ಹಾಕಿರಿ ಅಥವ ಅವನನ್ನು ಎಲ್ಲಾದರೂ ದೂರ ಪ್ರದೇಶದಲ್ಲಿ ಎಸೆದು ಬಿಡಿರಿ ಆಗ ನಿಮ್ಮ ತಂದೆಯ ಒಲವು ಕೇವಲ ನಿಮ್ಮೆಡೆಗೆ ಇರುವುದು ಮತ್ತು ಅದರ ನಂತರ ನೀವು(ಪಶ್ಚಾತಾಪ ಪಟ್ಟು) ಸಜ್ಜನರಾಗಿಬಿಡಿರಿ.
قَالَ قَائِلٌ مِّنْهُمْ لَا تَقْتُلُوا يُوسُفَ وَأَلْقُوهُ فِي غَيَابَتِ الْجُبِّ يَلْتَقِطْهُ بَعْضُ السَّيَّارَةِ إِن كُنتُمْ فَاعِلِينَ ۝١٠
📖 ಅನುವಾದ ಆಯತ್ 10
ಅವರ ಪೈಕಿ ಒಬ್ಬನು ಹೇಳಿದನು; ನೀವು ಯೂಸುಫ್‌ನನ್ನು ಕೊಲ್ಲಬೇಡಿರಿ. ನಿಮಗೇನಾದರೂ ಮಾಡುವುದೇ ಇದ್ದರೆ ಅವನನ್ನು ಯಾವುದಾದರೂ ಪಾಳು ಬಾವಿಯಲ್ಲಿ ಹಾಕಿಬಿಡಿರಿ. ಯಾವುದಾದರೂ ಯಾತ್ರಿಕ ತಂಡವು ಅವನನ್ನು ಎತ್ತಿ ಕೊಂಡೊಯ್ಯುವುದು.
قَالُوا يَا أَبَانَا مَا لَكَ لَا تَأْمَنَّا عَلَىٰ يُوسُفَ وَإِنَّا لَهُ لَنَاصِحُونَ ۝١١
📖 ಅನುವಾದ ಆಯತ್ 11
ಅವರು ಹೇಳಿದರು; ನಮ್ಮ ತಂದೆಯೇ! ನೀವು ಯೂಸುಫ್‌ರವರ ವಿಚಾರದಲ್ಲಿ ನಮ್ಮನ್ನು ಏಕೆ ನಂಬುವುದಿಲ್ಲ ? ನಿಶ್ಚಯವಾಗಿಯೂ ನಾವು ಅವನ ಹಿತೈಷಿಗಳಾಗಿದ್ದೇವೆ.
أَرْسِلْهُ مَعَنَا غَدًا يَرْتَعْ وَيَلْعَبْ وَإِنَّا لَهُ لَحَافِظُونَ ۝١٢
📖 ಅನುವಾದ ಆಯತ್ 12
ನಾಳೆ ಅವನನ್ನು ನಮ್ಮೊಂದಿಗೆ ಕಳುಹಿಸಿರಿ. ಅವನು ತಿನ್ನಲಿ ಕುಡಿಯಲಿ ಹಾಗೂ ಆಟವಾಡಲಿ ಅವನ ಸಂರಕ್ಷಣೆಯ ಹೊಣೆಗಾರರು ನಾವಾಗಿದ್ದೇವೆ.
قَالَ إِنِّي لَيَحْزُنُنِي أَن تَذْهَبُوا بِهِ وَأَخَافُ أَن يَأْكُلَهُ الذِّئْبُ وَأَنتُمْ عَنْهُ غَافِلُونَ ۝١٣
📖 ಅನುವಾದ ಆಯತ್ 13
ಅವರ ತಂದೆ ಹೇಳಿದರು ; ಅವನನ್ನು ನೀವು ಕರೆದುಕೊಂಡು ಹೋಗುವ ವಿಚಾರವು ನನಗೆ ತುಂಬಾ ವ್ಯಥೆಪಡಿಸುವಂತಹದ್ದಾಗಿದೆ, ಮತ್ತು ನೀವು ಅವನ ಬಗ್ಗೆ ನಿರ್ಲಕ್ಷö್ಯಕರಾಗಿರುವಾಗ ಅವನನ್ನು ತೋಳವು ತಿಂದು ಬಿಡಬಹುದೆಂದು ನಾನು ಭಯಪಡುತ್ತೇನೆ.
قَالُوا لَئِنْ أَكَلَهُ الذِّئْبُ وَنَحْنُ عُصْبَةٌ إِنَّا إِذًا لَّخَاسِرُونَ ۝١٤
📖 ಅನುವಾದ ಆಯತ್ 14
ಅವರು ಉತ್ತರಿಸಿದರು; ನಮ್ಮಂತಹ ಬಲಿಷ್ಠ ತಂಡದ ಉಪಸ್ಥಿತಿಯಲ್ಲಿ ಅವನÀನ್ನು ತೋಳವು ತಿಂದು ಬಿಡುವುದಾದರೆ ಖಂಡಿತ ನಾವು ಅಸಮರ್ಥರೇ ಆಗಿರುವೆವು.
فَلَمَّا ذَهَبُوا بِهِ وَأَجْمَعُوا أَن يَجْعَلُوهُ فِي غَيَابَتِ الْجُبِّ ۚ وَأَوْحَيْنَا إِلَيْهِ لَتُنَبِّئَنَّهُم بِأَمْرِهِمْ هَٰذَا وَهُمْ لَا يَشْعُرُونَ ۝١٥
📖 ಅನುವಾದ ಆಯತ್ 15
ಅನಂತರ ಅವರು (ತಂದೆಗೆ ಒತ್ತಾಯಪಡಿಸಿ) ಅವನನ್ನು ಕರೆದುಕೊಂಡು ಹೋದರು ಮತ್ತು ಅವರೆಲ್ಲರೂ ಅವನನ್ನು ನಿರ್ಜನ ಪ್ರದೇಶದ ಪಾಳು ಬಾವಿಯಲ್ಲಿ ಹಾಕಲೆಂಬ ದೃಢ ನಿರ್ಧಾರಕ್ಕೆ ಬಂದಾಗ ನಾವು ಯೂಸುಫ್‌ರವರ ಕಡೆಗೆ ದಿವ್ಯವಾಣಿ ಮಾಡಿದೆವು. ಖಂಡಿತ ನೀನು ಅವರ ಈ ಕೃತ್ಯದ ಕುರಿತು ಅವರು ತಿಳಿದೇ ಇಲ್ಲದಂತಹ ಸ್ಥಿತಿಯಲ್ಲಿ ತಿಳಿಸಿಕೊಡಲಿರುವೆ
وَجَاءُوا أَبَاهُمْ عِشَاءً يَبْكُونَ ۝١٦
📖 ಅನುವಾದ ಆಯತ್ 16
ರಾತ್ರಿಯ ವೇಳೆ ಅವರೆಲ್ಲರೂ ತಮ್ಮ ತಂದೆಯ ಬಳಿ ಅಳುತ್ತಾ ಬಂದರು.
قَالُوا يَا أَبَانَا إِنَّا ذَهَبْنَا نَسْتَبِقُ وَتَرَكْنَا يُوسُفَ عِندَ مَتَاعِنَا فَأَكَلَهُ الذِّئْبُ ۖ وَمَا أَنتَ بِمُؤْمِنٍ لَّنَا وَلَوْ كُنَّا صَادِقِينَ ۝١٧
📖 ಅನುವಾದ ಆಯತ್ 17
ಮತ್ತೆ ಹೇಳತೊಡಗಿದರು ನಮ್ಮ ತಂದೆಯೇ ನಾವು ಪರಸ್ಪರ ಓಟದ ಸ್ಪರ್ಧೆಯಲ್ಲಿ ನಿರತರಾಗಿದ್ದೆವು. ಯೂಸುಫ್‌ರವರನ್ನು ನಮ್ಮ ಸಾಮಾನುಗಳ ಬಳಿ ಬಿಟ್ಟಿದ್ದೆವು, ಅಷ್ಟರಲ್ಲಿ ಅವನನ್ನು ತೋಳವು ತಿಂದುಬಿಟ್ಟಿತು. ನಾವು ಸತ್ಯವಂತರಾಗಿದ್ದರು ನೀವಂತೂ ನಮ್ಮ ಮಾತನ್ನು ನಂಬುವವರೇ ಅಲ್ಲ.
وَجَاءُوا عَلَىٰ قَمِيصِهِ بِدَمٍ كَذِبٍ ۚ قَالَ بَلْ سَوَّلَتْ لَكُمْ أَنفُسُكُمْ أَمْرًا ۖ فَصَبْرٌ جَمِيلٌ ۖ وَاللَّهُ الْمُسْتَعَانُ عَلَىٰ مَا تَصِفُونَ ۝١٨
📖 ಅನುವಾದ ಆಯತ್ 18
ಅವರು ಯೂಸುಫ್‌ರ ಅಂಗಿಗೆ ಹುಸಿ ರಕ್ತ ಹಚ್ಚಿ ತಂದಿದ್ದರು. ತಂದೆಯು ಹೇಳಿದರು; (ವಾಸ್ತವಿಕತೆ ಹೀಗಿಲ್ಲ) ಆದರೆ ನಿಮಗೆ ನಿಮ್ಮ ಮನಸ್ಸು ಈ ಸ್ವರಚಿತ ಕೃತ್ಯವನ್ನು ಸುಂದರವಾಗಿ ತೋರಿಸಿದೆ. ಇನ್ನು ನನಗೆ ಉತ್ತಮ ಸಹನÉಯೇ ಲೇಸು ಮತ್ತು ನಿಮ್ಮ ಕಲ್ಪಿತ ಕಥೆಗಳ ಮೇಲೆ ಅಲ್ಲಾಹನಿಂದಲೇ ಸಹಾಯ ಬೇಡಲಾಗುವುದು.
وَجَاءَتْ سَيَّارَةٌ فَأَرْسَلُوا وَارِدَهُمْ فَأَدْلَىٰ دَلْوَهُ ۖ قَالَ يَا بُشْرَىٰ هَٰذَا غُلَامٌ ۚ وَأَسَرُّوهُ بِضَاعَةً ۚ وَاللَّهُ عَلِيمٌ بِمَا يَعْمَلُونَ ۝١٩
📖 ಅನುವಾದ ಆಯತ್ 19
ಅಲ್ಲಿಗೆ ಯಾತ್ರಾ ತಂಡವೊAದು ಬಂತು ಮತ್ತು ಅವರು ತಮ್ಮ ನೀರು ಸೇದುವವನನ್ನು ಕಳುಹಿಸಿದರು, ಅವನು ತನ್ನ ತೊಟ್ಟಿಯನ್ನು ಇಳಿಸಿದಾಗ ಹೇಳತೊಡಗಿದನು, ಆಹಾ ಶುಭಸುದ್ದಿ ಇದೆ! ಇವನೊಬ್ಬ ಬಾಲಕನಾಗಿದ್ದಾನೆ. ಅವರು ಅವನನ್ನು ವ್ಯಾಪಾರ ಸರಕನ್ನಾಗಿಸಿ ಅಡಗಿಸಿಟ್ಟರು ಮತ್ತು ಅಲ್ಲಾಹನು ಅವರು ಮಾಡುತ್ತಿದ್ದ ಕೃತ್ಯಗಳ ಕುರಿತು ಅರಿವುಳ್ಳವನಾಗಿದ್ದನು
وَشَرَوْهُ بِثَمَنٍ بَخْسٍ دَرَاهِمَ مَعْدُودَةٍ وَكَانُوا فِيهِ مِنَ الزَّاهِدِينَ ۝٢٠
📖 ಅನುವಾದ ಆಯತ್ 20
ಮತ್ತು ಅವರು ಅವನನ್ನು ಅತ್ಯಲ್ಪ ಬೆಲೆಗೆ ಕೆಲವು ಬೆಳ್ಳಿ ನಾಣ್ಯಗಳಿಗೆ ಮಾರಿಬಿಟ್ಟರು. ಅವರಂತೂ ಯೂಸುಫ್‌ರವರ ವಿಚಾರದಲ್ಲಿ ಅತ್ಯಂತ ನಿರಾಸಕ್ತರಾಗಿದ್ದರು.
وَقَالَ الَّذِي اشْتَرَاهُ مِن مِّصْرَ لِامْرَأَتِهِ أَكْرِمِي مَثْوَاهُ عَسَىٰ أَن يَنفَعَنَا أَوْ نَتَّخِذَهُ وَلَدًا ۚ وَكَذَٰلِكَ مَكَّنَّا لِيُوسُفَ فِي الْأَرْضِ وَلِنُعَلِّمَهُ مِن تَأْوِيلِ الْأَحَادِيثِ ۚ وَاللَّهُ غَالِبٌ عَلَىٰ أَمْرِهِ وَلَٰكِنَّ أَكْثَرَ النَّاسِ لَا يَعْلَمُونَ ۝٢١
📖 ಅನುವಾದ ಆಯತ್ 21
ಈಜಿಪ್ಟಿನವರಲ್ಲಿ ಅವರನ್ನು ಖರೀಸಿದವನು ತನ್ನ ಪತ್ನಿಗೆ ಹೇಳಿದನು; ನೀನು ಅವನನ್ನು ಗೌರವದಿಂದ ಇರಿಸು ಪ್ರಾಯಶಃ ಅವನು ನಮಗೆ ಪ್ರಯೋಜನಕಾರಿಯಾಗಬಹುದು. ಅಥವಾ ನಾವು ಅವನನ್ನು ನಮ್ಮ ಪುತ್ರನನ್ನಾಗಿಯು ಮಾಡಿಕೊಳ್ಳಬಹುದು. ಹೀಗೆ ನಾವು ಈಜಿಪ್ಟ್ನ ಭೂಮಿಯಲ್ಲಿ ಯೂಸುಫ್‌ರವರಿಗೆ ನೆಲೆಯನ್ನು ಸುಭದ್ರವಾಗಿಸಿಕೊಟ್ಟೆವು ಮತ್ತು ನಾವು ಅವರಿಗೆ ವಿಷಯಗಳ ಆಳಕ್ಕೆ ತಲುಪುವ ಜ್ಞಾನವನ್ನು ಕಲಿಸಿಕೊಟ್ಟೆವು ಮತ್ತು ಅಲ್ಲಾಹನು ತನ್ನ ಕಾರ್ಯವನ್ನು ಪೂರ್ಣಗೊಳಿಸುವ ಸಾಮರ್ಥ್ಯವುಳ್ಳವನಾಗಿದ್ದಾನೆ. ಆದರೆ ಹೆಚ್ಚಿನ ಜನರು ಅಜ್ಞಾನಿಗಳಾಗಿರುತ್ತಾರೆ.
وَلَمَّا بَلَغَ أَشُدَّهُ آتَيْنَاهُ حُكْمًا وَعِلْمًا ۚ وَكَذَٰلِكَ نَجْزِي الْمُحْسِنِينَ ۝٢٢
📖 ಅನುವಾದ ಆಯತ್ 22
ಮತ್ತು ಯೂಸುಫ್ ಯೌವ್ವನಕ್ಕೆ ತಲುಪಿದಾಗ ನಾವು ಅವರಿಗೆ ಯುಕ್ತಿಯನ್ನು ಸುಜ್ಞಾನವನ್ನು ದಯಪಾಲಿಸಿದೆವು ಮತ್ತು ಸಜ್ಜನರಿಗೆ ನಾವು ಇದೇ ರೀತಿ ಪ್ರತಿಫಲ ನೀಡುತ್ತೇವೆ.
وَرَاوَدَتْهُ الَّتِي هُوَ فِي بَيْتِهَا عَن نَّفْسِهِ وَغَلَّقَتِ الْأَبْوَابَ وَقَالَتْ هَيْتَ لَكَ ۚ قَالَ مَعَاذَ اللَّهِ ۖ إِنَّهُ رَبِّي أَحْسَنَ مَثْوَايَ ۖ إِنَّهُ لَا يُفْلِحُ الظَّالِمُونَ ۝٢٣
📖 ಅನುವಾದ ಆಯತ್ 23
ಯೂಸುಫ್‌ರವರು ವಾಸಿಸುತ್ತಿದ್ದ ಮನೆಯೊಡತಿ ಅವರನ್ನು ಫುಸಲಾಯಿಸಿದಳು ಒಮ್ಮೆ ಬಾಗಿಲುಗಳನ್ನು ಮುಚ್ಚಿ "ಇತ್ತ ಬಾ" ಎಂದಳು. ಯೂಸುಫ್ ಹೇಳಿದರು "ಅಲ್ಲಾಹನ ಅಭಯ ನಿಶ್ಚಯವಾಗಿ ನನ್ನ ಒಡೆಯನು ನನ್ನನ್ನು ಅತ್ಯುತ್ತಮವಾಗಿ ಇಟ್ಟಿದ್ದಾನೆ, ಖಂಡಿತವಾಗಿಯೂ ಅನ್ಯಾಯ ಮಾಡುವವರು ಯಶಸ್ಸು ಪಡೆಯುವುದಿಲ್ಲ.
وَلَقَدْ هَمَّتْ بِهِ ۖ وَهَمَّ بِهَا لَوْلَا أَن رَّأَىٰ بُرْهَانَ رَبِّهِ ۚ كَذَٰلِكَ لِنَصْرِفَ عَنْهُ السُّوءَ وَالْفَحْشَاءَ ۚ إِنَّهُ مِنْ عِبَادِنَا الْمُخْلَصِينَ ۝٢٤
📖 ಅನುವಾದ ಆಯತ್ 24
ಆಕೆ ಅವರನ್ನು(ನೀಚ ಕೃತ್ಯಕ್ಕೆ) ಬಯಸಿದಳು ಆದರೆ ತಮ್ಮ ಪ್ರಭುವಿನ ದೃಷ್ಟಾಂತವನ್ನು ಯೂಸುಫ್‌ರವರು ಕಾಣದಿರುತ್ತಿದ್ದರೆ ಅವರೂ ಸಹ ಅವಳನ್ನು ಬಯಸುತ್ತಿದ್ದರು. ನಾವು ಅವರಿಂದ ಕೆಡುಕನ್ನು ನೀಚ ಕೃತ್ಯವನ್ನು ದೂರ ಮಾಡಲೆಂದು ಹೀಗೆ ಮಾಡಿದೆವು ನಿಸ್ಸಂಶಯವಾಗಿಯೂ ಅವರು ನಮ್ಮ ಆಯ್ಕೆಯಾದ ದಾಸರಲ್ಲಾಗಿದ್ದರು.
وَاسْتَبَقَا الْبَابَ وَقَدَّتْ قَمِيصَهُ مِن دُبُرٍ وَأَلْفَيَا سَيِّدَهَا لَدَى الْبَابِ ۚ قَالَتْ مَا جَزَاءُ مَنْ أَرَادَ بِأَهْلِكَ سُوءًا إِلَّا أَن يُسْجَنَ أَوْ عَذَابٌ أَلِيمٌ ۝٢٥
📖 ಅನುವಾದ ಆಯತ್ 25
ಅವರಿಬ್ಬರೂ ಬಾಗಿಲಿನತ್ತ ಓಡಿದರು. ಆಕೆ ಹಿಂದಿನಿAದ ಅವರ ಅಂಗಿಯನ್ನು ಹರಿದಳು. ಅವರಿಬ್ಬರೂ ಬಾಗಿಲ ಬಳಿಯೇ ಅವಳ ಪತಿಯನ್ನು ಉಪಸ್ಥಿತರಿರುವುದಾಗಿ ಕಂಡರು, ಆಗ ಅವಳು ಹೇಳಿದಳು ನಿಮ್ಮ ಮಡದಿಯೊಂದಿಗೆ ಕೆಡುಕನ್ನು ಬಯಸಿದವರಿಗೆ ಸೆರೆಗೆ ತಳ್ಳುವುದು ಅಥವಾ ವೇದನಾಯುಕ್ತ ಶಿಕ್ಷೆಯಲ್ಲದೆ ಬೇರೆ ಪ್ರತಿಫಲವೇನಿದೆ ?
قَالَ هِيَ رَاوَدَتْنِي عَن نَّفْسِي ۚ وَشَهِدَ شَاهِدٌ مِّنْ أَهْلِهَا إِن كَانَ قَمِيصُهُ قُدَّ مِن قُبُلٍ فَصَدَقَتْ وَهُوَ مِنَ الْكَاذِبِينَ ۝٢٦
📖 ಅನುವಾದ ಆಯತ್ 26
ಯೂಸುಫ್ ಹೇಳಿದರು; ಇವಳೇ ನನ್ನನ್ನು ಫುಸಲಾಯಿಸಿದ್ದಳು ಆಗ ಆಕೆಯ ಕುಟುಂಬದಿAದಲೇ ಒಬ್ಬ ವ್ಯಕ್ತಿಯು ಸಾಕ್ಷಿ ವಹಿಸಿದನು. ಅವರ ಅಂಗಿಯೂ ಮುಂಭಾಗದಿAದ ಹರಿದು ಹೋಗಿದ್ದರೆ ಇವಳು ಸತ್ಯವಂತಳಾಗಿದ್ದಾಳೆ, ಮತ್ತು ಯೂಸುಫ್ ಸುಳ್ಳುಗಾರರಲ್ಲಾಗಿರುವರು.
وَإِن كَانَ قَمِيصُهُ قُدَّ مِن دُبُرٍ فَكَذَبَتْ وَهُوَ مِنَ الصَّادِقِينَ ۝٢٧
📖 ಅನುವಾದ ಆಯತ್ 27
ಇನ್ನು ಇವರ ಅಂಗಿಯೂ ಹಿಂಭಾಗದಿAದ ಹರಿದು ಹೋಗಿದ್ದರೆ ಇವಳು ಸುಳ್ಳುಗಾರ್ತಿಯಾಗಿದ್ದು ಮತ್ತು ಯೂಸುಫ್ ಸತ್ಯವಂತರಲ್ಲಾಗಿರುವರು.
فَلَمَّا رَأَىٰ قَمِيصَهُ قُدَّ مِن دُبُرٍ قَالَ إِنَّهُ مِن كَيْدِكُنَّ ۖ إِنَّ كَيْدَكُنَّ عَظِيمٌ ۝٢٨
📖 ಅನುವಾದ ಆಯತ್ 28
ಅವರ ಅಂಗಿಯೂ ಹಿಂಭಾಗದಿAದ ಹರಿದು ಹೋಗಿರುವುದನ್ನು ಆಕೆಯ ಪತಿ ಕಂಡಾಗ ಸ್ಪಷ್ಟವಾಗಿ ಹೇಳಿಬಿಟ್ಟನು: ಇದಂತೂ ನಿಮ್ಮ ಹೆಂಗಸರ ಕುತಂತ್ರವಾಗಿದೆ. ನಿಸ್ಸಂದೇಹವಾಗಿಯೂ ನಿಮ್ಮ ಕುತಂತ್ರವೂ ಅತಿ ದೊಡ್ಡದಾಗಿರುತ್ತದೆ.
يُوسُفُ أَعْرِضْ عَنْ هَٰذَا ۚ وَاسْتَغْفِرِي لِذَنبِكِ ۖ إِنَّكِ كُنتِ مِنَ الْخَاطِئِينَ ۝٢٩
📖 ಅನುವಾದ ಆಯತ್ 29
ಓ ಯೂಸುಫ್! ಈ ವಿಷಯವನ್ನು ಕಡೆಗಣಿಸಿರಿ ಮತ್ತು( ಓ ಸ್ತಿçÃಯೇ) ನೀನು ನಿನ್ನ ತಪ್ಪಿಗಾಗಿ ಕ್ಷಮೆಯಾಚಿಸು, ಖಂಡಿತವಾಗಿಯೂ ನೀನೇ ತಪ್ಪಿತಸ್ಥೆಯಾಗಿದ್ದೆ.
۞ وَقَالَ نِسْوَةٌ فِي الْمَدِينَةِ امْرَأَتُ الْعَزِيزِ تُرَاوِدُ فَتَاهَا عَن نَّفْسِهِ ۖ قَدْ شَغَفَهَا حُبًّا ۖ إِنَّا لَنَرَاهَا فِي ضَلَالٍ مُّبِينٍ ۝٣٠
📖 ಅನುವಾದ ಆಯತ್ 30
ಆ ಪಟ್ಟಣದ ಸ್ತಿçÃಯರು ಪರಸ್ಪರ ಚರ್ಚೆ ಮಾಡತೊಡಗಿದರು, ರಾಜನ ಪತ್ನಿ ತನ್ನ ತರುಣ ಸೇವಕನನ್ನು ಪುಸಲಾಯಿಸುವುದರಲ್ಲಿ ತಲ್ಲಿನಳಾಗಿದ್ದಾಳೆ. ಅವಳ ಹೃದಯದಲ್ಲಿ ಆ ತರುಣನ ಪ್ರೇಮವು ನೆಲೆಯೂರಿದೆ ನಮ್ಮ ಅಭಿಪ್ರಾಯದಲ್ಲಿ ಅವಳು ಸ್ಪಷ್ಟ ಮಾರ್ಗಚ್ಯುತಿಯಲ್ಲಿದ್ದಾಳೆ.
فَلَمَّا سَمِعَتْ بِمَكْرِهِنَّ أَرْسَلَتْ إِلَيْهِنَّ وَأَعْتَدَتْ لَهُنَّ مُتَّكَأً وَآتَتْ كُلَّ وَاحِدَةٍ مِّنْهُنَّ سِكِّينًا وَقَالَتِ اخْرُجْ عَلَيْهِنَّ ۖ فَلَمَّا رَأَيْنَهُ أَكْبَرْنَهُ وَقَطَّعْنَ أَيْدِيَهُنَّ وَقُلْنَ حَاشَ لِلَّهِ مَا هَٰذَا بَشَرًا إِنْ هَٰذَا إِلَّا مَلَكٌ كَرِيمٌ ۝٣١
📖 ಅನುವಾದ ಆಯತ್ 31
ಅವಳು ಅವರ ಈ ನಿಂದನೆಯ ಮಾತುಗಳನ್ನು ಕೇಳಿದಾಗ ಅವರನ್ನು ಆಹ್ವಾನಿಸಿದಳು. ಅವರಿಗಾಗಿ ಸಭೆಯೊಂದನ್ನು ಏರ್ಪಡಿಸಿದಳು. ಮತ್ತು ಅವರಲ್ಲಿ ಪ್ರತಿಯೊಬ್ಬರಿಗೂ ಚೂರಿಯನ್ನು ನೀಡಿದಳು. ಮತ್ತು ಯೂಸುಫ್‌ನೊಂದಿಗೆ ನೀನು ಅವರ ಮುಂದಿನಿAದ ಹೊರಟು ಬಾ! ಎಂದಳು ಆ ಸ್ತಿçÃಯರು ಅವನನ್ನು ಕಂಡಾಗ ಮಹೋನ್ನತನನ್ನಾಗಿ ಭಾವಿಸಿ ದಿಗ್ಬಾçಂತರಾದರು, ಮತ್ತು ಕೈಗಳನ್ನು ಕೊಯ್ದುಕೊಂಡರು ನಂತರ ಹೇಳಿದರು" “ಹಾಶಲಿಲ್ಲಾಹ್” ಇವನು ಮನುಷ್ಯನಂತೂ ಅಲ್ಲ ಇವನಂತೂ ಯಾವುದೇ ಒಬ್ಬ ಸನ್ಮಾನ್ಯ ದೇವಚರನಾಗಿದ್ದಾನೆ.
قَالَتْ فَذَٰلِكُنَّ الَّذِي لُمْتُنَّنِي فِيهِ ۖ وَلَقَدْ رَاوَدتُّهُ عَن نَّفْسِهِ فَاسْتَعْصَمَ ۖ وَلَئِن لَّمْ يَفْعَلْ مَا آمُرُهُ لَيُسْجَنَنَّ وَلَيَكُونًا مِّنَ الصَّاغِرِينَ ۝٣٢
📖 ಅನುವಾದ ಆಯತ್ 32
ಆಗ ಆಕೆ ಹೇಳಿದಳು; ಯಾರ ವಿಚಾರದಲ್ಲಿ ನೀವು ನನ್ನನ್ನು ಆಕ್ಷೇಪಿಸಿದ್ದೀರೋ ಆ ವ್ಯಕ್ತಿ ಇವನೇ. ಮತ್ತು ನಾನು ಇವನನ್ನು ಪುಸಲಾಯಿಸಲು ಪ್ರಯತ್ನಿಸಿದ್ದೆ. ಆದರೆ ಇವನು ತನ್ನನ್ನು ರಕ್ಷಿಸಿಕೊಂಡನು, ಮತ್ತು ನಾನು ಆಜ್ಞಾಪಿಸಿದ್ದನ್ನು ಇವನೇನಾದರೂ ಮಾಡದಿದ್ದರೆ ಖಂಡಿತ ಇವನು ಸೆರೆಗೆ ತಳ್ಳಲ್ಪಡುವನು, ಮತ್ತು ನಿಸ್ಸಂಶಯವಾಗಿಯೂ ಇವನು ನಿಂದ್ಯರಲ್ಲಾಗುವನು.
قَالَ رَبِّ السِّجْنُ أَحَبُّ إِلَيَّ مِمَّا يَدْعُونَنِي إِلَيْهِ ۖ وَإِلَّا تَصْرِفْ عَنِّي كَيْدَهُنَّ أَصْبُ إِلَيْهِنَّ وَأَكُن مِّنَ الْجَاهِلِينَ ۝٣٣
📖 ಅನುವಾದ ಆಯತ್ 33
ಯೂಸುಫ್ ಪ್ರಾರ್ಥಿಸಿದರು ನನ್ನ ಪ್ರಭುವೇ ಇವರು ನನ್ನನ್ನು ಕರೆಯುತ್ತಿರುವ ಕಾರ್ಯಕ್ಕಿಂತ ನನಗೆ ಸೆರೆಮನೆಯೇ ಅತ್ಯಂತ ಪ್ರಿಯವಾಗಿದೆ ಮತ್ತು ನೀನು ಅವರ ಕುತಂತ್ರದಿAದ ನನ್ನನ್ನು ಪಾರುಗೊಳಿಸದಿದ್ದರೆ ನಾನು ಅವರೆಡೆಗೆ ವಾಲಿಬಿಡುವೆನು ಮತ್ತು ಅವಿವೇಕಿಗಳಲ್ಲಾಗುವೆನು.
فَاسْتَجَابَ لَهُ رَبُّهُ فَصَرَفَ عَنْهُ كَيْدَهُنَّ ۚ إِنَّهُ هُوَ السَّمِيعُ الْعَلِيمُ ۝٣٤
📖 ಅನುವಾದ ಆಯತ್ 34
ಆಗ ಅವರ ಪ್ರಭು ಅವರ ಕರೆಗೆ ಓಗೊಟ್ಟನು ಮತ್ತು ಅವರ ಕುತಂತ್ರಗಳಿAದ ಅವರನ್ನು ದೂರ ಸರಿಸಿದನು. ನಿಶ್ಚಯವಾಗಿಯೂ ಅವನು ಆಲಿಸುವವನು ಸರ್ವಜ್ಞಾನಿಯು ಆಗಿರುವನು.
ثُمَّ بَدَا لَهُم مِّن بَعْدِ مَا رَأَوُا الْآيَاتِ لَيَسْجُنُنَّهُ حَتَّىٰ حِينٍ ۝٣٥
📖 ಅನುವಾದ ಆಯತ್ 35
ತರುವಾಯ ಅವರಿಗೆ ಆಧಾರ ಪ್ರಮಾಣವು ದೊರೆತ ಬಳಿಕವೂ ಅವರಿಗೆ ಅವರನ್ನು ಒಂದು ನಿರ್ದಿಷ್ಟ ಅವಧಿಯವರೆಗೆ ಸೆರೆಮನೆಯಲ್ಲಿ ಇಡುವುದೇ ಸರಿಯೆಂದು ತೋಚಿತು.
وَدَخَلَ مَعَهُ السِّجْنَ فَتَيَانِ ۖ قَالَ أَحَدُهُمَا إِنِّي أَرَانِي أَعْصِرُ خَمْرًا ۖ وَقَالَ الْآخَرُ إِنِّي أَرَانِي أَحْمِلُ فَوْقَ رَأْسِي خُبْزًا تَأْكُلُ الطَّيْرُ مِنْهُ ۖ نَبِّئْنَا بِتَأْوِيلِهِ ۖ إِنَّا نَرَاكَ مِنَ الْمُحْسِنِينَ ۝٣٦
📖 ಅನುವಾದ ಆಯತ್ 36
ಇಬ್ಬರು ಯುವಕರು ಸಹ ಅವರ ಜೊತೆ ಸೆರೆಮನೆಯೊಳಗೆ ಪ್ರವೇಶಿಸಿದರು. ಅವರಿಬ್ಬರಲ್ಲಿ ಒಬ್ಬನು ಹೇಳಿದನು ; ನಾನು ಕನಸಿನಲ್ಲಿ ಮದ್ಯ ಹಿಂಡುತ್ತಿರುವುದಾಗಿ ಕಂಡಿರುವೆನು, ಮತ್ತೊಬ್ಬನು ಹೇಳಿದನು, ನಾನು ನನ್ನನ್ನು ನನ್ನ ತಲೆಯ ಮೇಲೆ ರೊಟ್ಟಿಗಳನ್ನು ಹೊತ್ತುಕೊಂಡು ಪಕ್ಷಿಗಳು ಅವುಗಳನ್ನು ತಿನ್ನುತ್ತಿರುವುದಾಗಿ ಕಂಡಿರುವೆನು. ನೀವು ನಮಗೆ ಇದರ ವ್ಯಾಖ್ಯಾನವನ್ನು ತಿಳಿಸಿಕೊಡಿರಿ. ನಮಗಂತೂ ನೀವು ಸಜ್ಜನರಲ್ಲಿ ಕಾಣುತ್ತಿರುವಿರಿ.
قَالَ لَا يَأْتِيكُمَا طَعَامٌ تُرْزَقَانِهِ إِلَّا نَبَّأْتُكُمَا بِتَأْوِيلِهِ قَبْلَ أَن يَأْتِيَكُمَا ۚ ذَٰلِكُمَا مِمَّا عَلَّمَنِي رَبِّي ۚ إِنِّي تَرَكْتُ مِلَّةَ قَوْمٍ لَّا يُؤْمِنُونَ بِاللَّهِ وَهُم بِالْآخِرَةِ هُمْ كَافِرُونَ ۝٣٧
📖 ಅನುವಾದ ಆಯತ್ 37
ಯೂಸುಫ್; ಹೇಳಿದರು ನಿಮಗೆ ನೀಡಲಾಗುವ ಆಹಾರವು ನಿಮ್ಮ ಬಳಿ ಬರುವ ಮೊದಲೇ ನಾನು ನಿಮಗೆ ಅದರ ವ್ಯಾಖ್ಯಾನವನ್ನು ತಿಳಿಸಿಕೊಡುತ್ತೇನೆ. ಇದು ನನ್ನ ಪ್ರಭು ನನಗೆ ಕಲಿಸಿರುವ ಜ್ಞಾನದ ಫಲವಾಗಿದೆ. ನಾನು ಅಲ್ಲಾಹನ ಮೇಲೆ ವಿಶ್ವಾಸವಿಡದ ಮತ್ತು ಪರಲೋಕವನ್ನು ನಿರಾಕರಿಸುವ ಜನತೆಯ ಮಾರ್ಗವನ್ನು ಕೈಬಿಟ್ಟಿರುತ್ತೇನೆ.
وَاتَّبَعْتُ مِلَّةَ آبَائِي إِبْرَاهِيمَ وَإِسْحَاقَ وَيَعْقُوبَ ۚ مَا كَانَ لَنَا أَن نُّشْرِكَ بِاللَّهِ مِن شَيْءٍ ۚ ذَٰلِكَ مِن فَضْلِ اللَّهِ عَلَيْنَا وَعَلَى النَّاسِ وَلَٰكِنَّ أَكْثَرَ النَّاسِ لَا يَشْكُرُونَ ۝٣٨
📖 ಅನುವಾದ ಆಯತ್ 38
ನನ್ನ ಪೂರ್ವಜರಾದ ಇಬ್ರಾಹೀಮ್, ಇಸ್‌ಹಾಕ್, ಯಾಕೂಬ್ ರವರ ಮಾರ್ಗವನ್ನು ನಾನು ಅವಲಂಬಿಸಿದ್ದೇನೆ. ಅಲ್ಲಾಹನೊಂದಿಗೆ ಇತರರಲ್ಲೂ ಸಹಭಾಗಿಯನ್ನಾಗಿ ನಿಶ್ಚಯಿಸುವುದು ನಮಗೆ ಭೂಷÀಣವಲ್ಲ. ಇದು (ಏಕದೇವ ವಿಶ್ವಾಸ) ನಮ್ಮ ಮೇಲೆ ಮತ್ತು ಸಕಲ ಜನರ ಮೇಲೆ ಅಲ್ಲಾಹನ ಅನುಗ್ರಹವಾಗಿದೆ. ಆದರೆ ಹೆಚ್ಚಿನ ಜನರು ಕೃತಜ್ಞತೆ ತೋರುವುದಿಲ್ಲ.
يَا صَاحِبَيِ السِّجْنِ أَأَرْبَابٌ مُّتَفَرِّقُونَ خَيْرٌ أَمِ اللَّهُ الْوَاحِدُ الْقَهَّارُ ۝٣٩
📖 ಅನುವಾದ ಆಯತ್ 39
ಓ ನನ್ನ ಸೆರೆಮನೆಯ ಸಂಗಾತಿಗಳೇ ಅನೇಕ ವಿಭಿನ್ನ ದೇವರುಗಳು ಉತ್ತಮರೋ ಅಥವಾ ಸರ್ವ ಸಮರ್ಥನಾದ ಏಕೈಕ ಅಲ್ಲಾಹನೋ ?
مَا تَعْبُدُونَ مِن دُونِهِ إِلَّا أَسْمَاءً سَمَّيْتُمُوهَا أَنتُمْ وَآبَاؤُكُم مَّا أَنزَلَ اللَّهُ بِهَا مِن سُلْطَانٍ ۚ إِنِ الْحُكْمُ إِلَّا لِلَّهِ ۚ أَمَرَ أَلَّا تَعْبُدُوا إِلَّا إِيَّاهُ ۚ ذَٰلِكَ الدِّينُ الْقَيِّمُ وَلَٰكِنَّ أَكْثَرَ النَّاسِ لَا يَعْلَمُونَ ۝٤٠
📖 ಅನುವಾದ ಆಯತ್ 40
ಅವನ ಹೊರತು ನೀವು ಆರಾಧಿಸುತ್ತಿರುವವುಗಳೆಲ್ಲವೂ ನೀವು ನಿಮ್ಮ ಪೂರ್ವಿಕರು ಸ್ವತಃ ಇರಿಸಿಕೊಂಡಿರುವAತಹಾ ಕೆಲವು ಹೆಸರುಗಳಾಗಿವೆ. ಅಲ್ಲಾಹನು ಅವುಗಳ ಬಗ್ಗೆ ಯಾವ ಆಧಾರವನ್ನು ಇಳಿಸಿಲ್ಲ, ಆಜ್ಞಾಧಿಕಾರವು ಕೇವಲ ಅಲ್ಲಾಹನದೇ ಆಗಿದೆ. ಅವನ ಹೊರತು ಇನ್ನಾರ ಆರಾಧನೆ ಮಾಡಬಾರದೆಂದು ಅವನು ಆಜ್ಞಾಪಿಸಿದ್ದಾನೆ ಇದುವೇ ನಿಜವಾದ ಧರ್ಮವಾಗಿದೆ, ಆದರೆ ಹೆಚ್ಚಿನ ಜನರು ತಿಳಿಯುವುದಿಲ್ಲ.
يَا صَاحِبَيِ السِّجْنِ أَمَّا أَحَدُكُمَا فَيَسْقِي رَبَّهُ خَمْرًا ۖ وَأَمَّا الْآخَرُ فَيُصْلَبُ فَتَأْكُلُ الطَّيْرُ مِن رَّأْسِهِ ۚ قُضِيَ الْأَمْرُ الَّذِي فِيهِ تَسْتَفْتِيَانِ ۝٤١
📖 ಅನುವಾದ ಆಯತ್ 41
ಓ ಸೆರೆಮನೆಯ ನನ್ನ ಸಂಗಾತಿಗಳೇ ನಿಮ್ಮಿಬ್ಬರಲ್ಲಿ ಒಬ್ಬನಂತೂ ತನ್ನ ರಾಜನಿಗೆ ಮದ್ಯ ಕುಡಿಸಲು ನೇಮಕವಾಗಲಿದ್ದಾನೆ. ಆದರೆ ಇನ್ನೊಬ್ಬನು ಗಲ್ಲಿಗೇರಿಸಲ್ಪಡುವನು ಮತ್ತು ಪಕ್ಷಿಗಳು ಅವನ ತಲೆಯನ್ನು ಕುಕ್ಕಿಕುಕ್ಕಿ ತಿನ್ನಲಿವೆ, ನೀವಿಬ್ಬರೂ ವಿಚಾರಿಸಿದಂತಹಾ ಸಂಗತಿಯ ತೀರ್ಮಾನವು ಆಗಿಬಿಟ್ಟಿದೆ.
وَقَالَ لِلَّذِي ظَنَّ أَنَّهُ نَاجٍ مِّنْهُمَا اذْكُرْنِي عِندَ رَبِّكَ فَأَنسَاهُ الشَّيْطَانُ ذِكْرَ رَبِّهِ فَلَبِثَ فِي السِّجْنِ بِضْعَ سِنِينَ ۝٤٢
📖 ಅನುವಾದ ಆಯತ್ 42
ಅವರಿಬ್ಬರಲ್ಲಿ ಬಿಡುಗಡೆಹೊಂದುವನೆAದು ತಾನು ಭಾವಿಸಿಕೊಂಡ ವ್ಯಕ್ತಿಯೊಡನೆ ಯೂಸುಫ್‌ರವರು ಹೇಳಿದರು, ನಿನ್ನ ರಾಜನ ಬಳಿ ನನ್ನ ಪ್ರಸ್ತಾಪವನ್ನು ಮಾಡು. ಆದರೆ ಶೈತಾನನೂ ಅವನಿಗೆ ತನ್ನ ರಾಜನ ಬಳಿ ಹೇಳುವುದನ್ನು ಮರೆಯುವಂತೆ ಮಾಡಿದನು ಮತ್ತು ಯೂಸುಫ್ ಹಲವು ವರ್ಷಗಳವರೆಗೆ ಸೆರೆಮನೆಯಲ್ಲೇ ಕಳೆದರು.
وَقَالَ الْمَلِكُ إِنِّي أَرَىٰ سَبْعَ بَقَرَاتٍ سِمَانٍ يَأْكُلُهُنَّ سَبْعٌ عِجَافٌ وَسَبْعَ سُنبُلَاتٍ خُضْرٍ وَأُخَرَ يَابِسَاتٍ ۖ يَا أَيُّهَا الْمَلَأُ أَفْتُونِي فِي رُؤْيَايَ إِن كُنتُمْ لِلرُّؤْيَا تَعْبُرُونَ ۝٤٣
📖 ಅನುವಾದ ಆಯತ್ 43
ರಾಜನು ಹೇಳಿದನು; ನಾನು ಕನಸಿನಲ್ಲಿ ಏಳು ಕೊಬ್ಬಿದ ಹಸುಗಳನ್ನು ಏಳು ಸಣಕಲು ಹಸುಗಳು ತಿನ್ನುತ್ತಿರುವುದಾಗಿ ಮತ್ತು ಧಾನ್ಯದ ಏಳು ತೆನೆಗಳು ಹಸಿರಾಗಿದ್ದು ಇತರ ಏಳು ಒಣಗಿದವುಗಳಾಗಿ ಕಂಡಿರುವೆನು. ಓ ಆಸ್ಥಾನದ ಪ್ರಮುಖರೇ, ನೀವು ಕನಸುಗಳ ವ್ಯಾಖ್ಯಾನ ಬಲ್ಲವರಾಗಿದ್ದರೆ ನನ್ನ ಈ ಕನಸಿನ ವ್ಯಾಖ್ಯಾನವನ್ನು ತಿಳಿಸಿರಿ.
قَالُوا أَضْغَاثُ أَحْلَامٍ ۖ وَمَا نَحْنُ بِتَأْوِيلِ الْأَحْلَامِ بِعَالِمِينَ ۝٤٤
📖 ಅನುವಾದ ಆಯತ್ 44
ಅವರು ಉತ್ತರಿಸಿದರು ಇವು ಗೊಂದಲಮಯವಾದ ಕನಸುಗಳ ಫಲ ನಮಗೆ ತಿಳಿಯದು.
وَقَالَ الَّذِي نَجَا مِنْهُمَا وَادَّكَرَ بَعْدَ أُمَّةٍ أَنَا أُنَبِّئُكُم بِتَأْوِيلِهِ فَأَرْسِلُونِ ۝٤٥
📖 ಅನುವಾದ ಆಯತ್ 45
ಆ ಇಬ್ಬರು ಕೈದಿಗಳ ಪೈಕಿ ಬಿಡುಗಡೆ ಹೊಂದಿದವನಿಗೆ ಸುದೀರ್ಘ ಕಾಲದ ನಂತರ ಯೂಸುಫ್‌ರವರ ಮಾತು ನೆನಪಾಗಿ ಹೇಳಿದನು; ನಾನು ನಿಮಗೆ ಇದರ ವಿವರ ನೀಡುವೆನು ನನಗೆ ಯೂಸುಫ್‌ರವರ ಬಳಿ ಕಳುಹಿಸಿರಿ.
يُوسُفُ أَيُّهَا الصِّدِّيقُ أَفْتِنَا فِي سَبْعِ بَقَرَاتٍ سِمَانٍ يَأْكُلُهُنَّ سَبْعٌ عِجَافٌ وَسَبْعِ سُنبُلَاتٍ خُضْرٍ وَأُخَرَ يَابِسَاتٍ لَّعَلِّي أَرْجِعُ إِلَى النَّاسِ لَعَلَّهُمْ يَعْلَمُونَ ۝٤٦
📖 ಅನುವಾದ ಆಯತ್ 46
ಓ ಸತ್ಯಸಂಧ ಯೂಸುಫ್, ಏಳು ಕೊಬ್ಬಿದ ಹಸುಗಳನ್ನು ಏಳು ಸಣಕಲು ಹಸುಗಳು ತಿನ್ನುತ್ತಿವೆ ಮತ್ತು ಏಳು ತೆನೆಗಳು ಹಸಿರಾಗಿವೆ ಹಾಗೂ ಉಳಿದ ಏಳು ಒಣಗಿದವುಗಳಾಗಿವೆ.
قَالَ تَزْرَعُونَ سَبْعَ سِنِينَ دَأَبًا فَمَا حَصَدتُّمْ فَذَرُوهُ فِي سُنبُلِهِ إِلَّا قَلِيلًا مِّمَّا تَأْكُلُونَ ۝٤٧
📖 ಅನುವಾದ ಆಯತ್ 47
ಯೂಸುಫ್ ಹೇಳಿದರು; ನೀವು ನಿರಂತರ ಏಳು ವರ್ಷಗಳ ಕಾಲ ಕೃಷಿ ಮಾಡಿರಿ ಆಮೇಲೆ ನೀವು ಕೊಯ್ಯುವ ಬೆಳೆಯಿಂದ ಆಹಾರಕ್ಕೆ ಬೇಕಾದಷ್ಟು ಅಂಶವನ್ನು ತೆಗೆದು ಉಳಿದುದನ್ನು ಅದರ ತೆನೆಗಳಲ್ಲಿ ಬಿಟ್ಟುಬಿಡಿರಿ.
ثُمَّ يَأْتِي مِن بَعْدِ ذَٰلِكَ سَبْعٌ شِدَادٌ يَأْكُلْنَ مَا قَدَّمْتُمْ لَهُنَّ إِلَّا قَلِيلًا مِّمَّا تُحْصِنُونَ ۝٤٨
📖 ಅನುವಾದ ಆಯತ್ 48
ಅದರ ತರುವಾಯ ಏಳು ವಷÀðಗಳ ಕಾಲ ಬರಗಾಲ ಬರಲಿದೆ. ನೀವು ಸಂಗ್ರಹಿಸಿಟ್ಟಿದ್ದನ್ನು ಅದು ತಿಂದುಬಿಡುವುದು. ಆದರೆ ನೀವು ಜೋಪಾನವಾಗಿರಿಸಿದ್ದ ಅಲ್ಪವನ್ನು ಬಿಟ್ಟು.
ثُمَّ يَأْتِي مِن بَعْدِ ذَٰلِكَ عَامٌ فِيهِ يُغَاثُ النَّاسُ وَفِيهِ يَعْصِرُونَ ۝٤٩
📖 ಅನುವಾದ ಆಯತ್ 49
ತರುವಾಯ ಬರುವ ಒಂದು ವರ್ಷದಲ್ಲಿ ಜನರಿಗೆ ಚೆನ್ನಾಗಿ ಮಳೆಯಾಗುವುದು ಮತ್ತು ಅದರಲ್ಲಿ ಅವರು ರಸ ಹಿಂಡುವರು.
وَقَالَ الْمَلِكُ ائْتُونِي بِهِ ۖ فَلَمَّا جَاءَهُ الرَّسُولُ قَالَ ارْجِعْ إِلَىٰ رَبِّكَ فَاسْأَلْهُ مَا بَالُ النِّسْوَةِ اللَّاتِي قَطَّعْنَ أَيْدِيَهُنَّ ۚ إِنَّ رَبِّي بِكَيْدِهِنَّ عَلِيمٌ ۝٥٠
📖 ಅನುವಾದ ಆಯತ್ 50
ಮತ್ತು ರಾಜನು ಹೇಳಿದನು ಯೂಸುಫ್‌ರವರನ್ನು ನನ್ನ ಬಳಿಗೆ ಕರೆತನ್ನಿರಿ. ರಾಜದೂತ ಅವರ ಬಳಿಗೆ ಬಂದಾಗ ಅವರು ಹೇಳಿದರು ; ನೀನು ನಿನ್ನ ರಾಜನ ಬಳಿಗೆ ಮರಳಿ ಹೋಗು ಮತ್ತು ತಮ್ಮ ಕೈಗಳನ್ನು ಕೊಯ್ದುಕೊಂಡ ಆ ಸ್ತಿçÃಯರ ನಿಜಸ್ಥಿತಿ ಏನೆಂದು ಕೇಳು, ನಿಜವಾಗಿಯೂ ನನ್ನ ಪ್ರಭು ಅವರ ಕುತಂತ್ರಗಳನ್ನು ಚೆನ್ನಾಗಿ ಬಲ್ಲನು.
قَالَ مَا خَطْبُكُنَّ إِذْ رَاوَدتُّنَّ يُوسُفَ عَن نَّفْسِهِ ۚ قُلْنَ حَاشَ لِلَّهِ مَا عَلِمْنَا عَلَيْهِ مِن سُوءٍ ۚ قَالَتِ امْرَأَتُ الْعَزِيزِ الْآنَ حَصْحَصَ الْحَقُّ أَنَا رَاوَدتُّهُ عَن نَّفْسِهِ وَإِنَّهُ لَمِنَ الصَّادِقِينَ ۝٥١
📖 ಅನುವಾದ ಆಯತ್ 51
ರಾಜನು ಕೇಳಿದನು; ಸ್ತಿçÃಯರೇ ನೀವು ಯೂಸುಫ್‌ರವರನ್ನು ಪುಸಲಾಯಿಸಿದ ಸಂದರ್ಭದ ಸತ್ಯಸಂಗತಿ ಏನು? ಅವರು ಸ್ಪಷ್ಟವಾಗಿ ಉತ್ತರಿಸಿದರು; “ಹಾಶಲಿಲ್ಲಾಹ್!” ನಾವು ಯೂಸುಫ್‌ರವರಲ್ಲಿ ಯಾವ ಕೇಡನ್ನು ಕಂಡಿಲ್ಲ. ರಾಜನ ಪತ್ನಿಯೂ ಸಹ ಹೇಳಿದಳು; ಈಗಂತೂ ಸತ್ಯ ಸಂಗತಿಯು ಬಯಲಾಗಿದೆ. ನಾನೇ ಯೂಸುಫ್ ರವರನ್ನು ಪುಸಲಾಯಿಸಿ ಪಾಪಕ್ಕೆ ಪ್ರೇರೇಪಿಸಿದ್ದೆ ನಿಜವಾಗಿಯೂ ಅವರು ಸತ್ಯಸಂಧರಲ್ಲಾಗಿರುವರು.
ذَٰلِكَ لِيَعْلَمَ أَنِّي لَمْ أَخُنْهُ بِالْغَيْبِ وَأَنَّ اللَّهَ لَا يَهْدِي كَيْدَ الْخَائِنِينَ ۝٥٢
📖 ಅನುವಾದ ಆಯತ್ 52
(ಯೂಸುಫ್ ಹೇಳಿದರು) ಇದೇಕೆಂದರೆ ನಾನು ರಾಜನಿಗೆ ಅವನ ಅನುಪಸ್ಥಿತಿಯಲ್ಲಿ ದ್ರೋಹ ಮಾಡಿಲ್ಲವೆಂದು, ಅರಿತುಕೊಳ್ಳಲೆಂದಾಗಿದೆ ಮತ್ತು ಅಲ್ಲಾಹನು ದ್ರೋಹ ಬಗೆಯುವವರ ಕುತಂತ್ರವನ್ನು ನಡೆಯಲು ಬಿಡಲಾರನು
۞ وَمَا أُبَرِّئُ نَفْسِي ۚ إِنَّ النَّفْسَ لَأَمَّارَةٌ بِالسُّوءِ إِلَّا مَا رَحِمَ رَبِّي ۚ إِنَّ رَبِّي غَفُورٌ رَّحِيمٌ ۝٥٣
📖 ಅನುವಾದ ಆಯತ್ 53
ನನ್ನ ಮನಸ್ಸು ನಿರ್ದೋಷಿಯೆಂದು ನಾನು ಹೇಳುವುದಿಲ್ಲ. ನಿಸ್ಸಂಶಯವಾಗಿಯೂ ನನ್ನ ಪ್ರಭು ದಯೆ ತೋರದಿದ್ದರೆ ಮನಸ್ಸು ಕೇಡಿನ ಕಡೆಗೆ ಪ್ರೇರೇಪಿಸುತ್ತದೆ. ನಿಶ್ಚಯವಾಗಿಯೂ ನನ್ನ ಪ್ರಭು ಕ್ಷಮಾಶೀಲನೂ ಕರುಣಾನಿಧಿಯೂ ಆಗಿರುತ್ತಾನೆ.
وَقَالَ الْمَلِكُ ائْتُونِي بِهِ أَسْتَخْلِصْهُ لِنَفْسِي ۖ فَلَمَّا كَلَّمَهُ قَالَ إِنَّكَ الْيَوْمَ لَدَيْنَا مَكِينٌ أَمِينٌ ۝٥٤
📖 ಅನುವಾದ ಆಯತ್ 54
ರಾಜನು ಹೇಳಿದನು ; ನೀವು ಅವರನ್ನು ನನ್ನ ಬಳಿಗೆ ಕರೆತನ್ನಿರಿ. ನಾನು ಅವರನ್ನು ನನ್ನ ಆಪ್ತ ಕಾರ್ಯಗಳಿಗೆ ನಿಶ್ಚಯಿಸುತ್ತೇನೆ. ಅನಂತರ ಯೂಸುಫರು ಅವನೊಂದಿಗೆ ಮಾತುಕತೆ ನಡೆಸಿದಾಗ ರಾಜನು ಹೇಳಿದನು; ತಾವು ಇಂದಿನಿAದ ನಮ್ಮ ಬಳಿ ಆದರಣಿಯರು ನಂಬಿಗಸ್ಥರು ಆಗಿರುವಿರಿ.
قَالَ اجْعَلْنِي عَلَىٰ خَزَائِنِ الْأَرْضِ ۖ إِنِّي حَفِيظٌ عَلِيمٌ ۝٥٥
📖 ಅನುವಾದ ಆಯತ್ 55
ಯೂಸುಫ್ ಹೇಳಿದರು; ನನ್ನನ್ನು ದೇಶದ ಭಂಡಾರಗಳ ಮೇಲೆ ನಿಶ್ಚಯಿಸಿಬಿಡಿರಿ. ನಾನು ಸಂರಕ್ಷಕನೂ ಅರಿವುಳ್ಳವನೂ ಆಗಿರುವೆನು.
وَكَذَٰلِكَ مَكَّنَّا لِيُوسُفَ فِي الْأَرْضِ يَتَبَوَّأُ مِنْهَا حَيْثُ يَشَاءُ ۚ نُصِيبُ بِرَحْمَتِنَا مَن نَّشَاءُ ۖ وَلَا نُضِيعُ أَجْرَ الْمُحْسِنِينَ ۝٥٦
📖 ಅನುವಾದ ಆಯತ್ 56
ಹೀಗೆ ನಾವು ಯೂಸುಫ್‌ರವರಿಗೆ ದೇಶದ ಅಧಿಕಾರವನ್ನು ಸ್ವಾಧೀನ ಗೊಳಿಸಿದೆವು. ನಾವು ಇಚ್ಛಿಸುವವರಿಗೆ ನಮ್ಮ ಕೃಪೆಯನ್ನು ದಯಪಾಲಿಸುತ್ತೇವೆ. ಮತ್ತು ನಾವು ಒಳಿತನ್ನು ಬಯಸುವವರ ಪ್ರತಿಫಲವನ್ನು ವ್ಯರ್ಥಗೊಳಿಸುವುದಿಲ್ಲ.
وَلَأَجْرُ الْآخِرَةِ خَيْرٌ لِّلَّذِينَ آمَنُوا وَكَانُوا يَتَّقُونَ ۝٥٧
📖 ಅನುವಾದ ಆಯತ್ 57
ಸತ್ಯ ವಿಶ್ವಾಸವನ್ನಿರಿಸಿ ಭಯ-ಭಕ್ತಿಯೊಂದಿಗೆ ಕಾರ್ಯವೆಸಗುವವರಿಗೆ ಪರಲೋಕದ ಪ್ರತಿಫಲವೂ ಅತ್ಯುತ್ತಮವಾಗಿರುತ್ತದೆ.
وَجَاءَ إِخْوَةُ يُوسُفَ فَدَخَلُوا عَلَيْهِ فَعَرَفَهُمْ وَهُمْ لَهُ مُنكِرُونَ ۝٥٨
📖 ಅನುವಾದ ಆಯತ್ 58
(ಬರಗಾಲ ಬಂದಾಗ) ಯೂಸುಫ್‌ರವರ ಸಹೋದರರು (ಈಜಿಪ್ಟಿಗೆ) ಬಂದರು ಮತ್ತು ಅವರ ಮುಂದೆ ಹಾಜರಾದರು. ಆಗ ಯೂಸುಫ್‌ರವರು ಅವರನ್ನು ಗುರುತಿಸಿಕೊಂಡರು ಆದರೆ ಅವರು ಅವರನ್ನು ಗುರುತಿಸಲಿಲ್ಲ.
وَلَمَّا جَهَّزَهُم بِجَهَازِهِمْ قَالَ ائْتُونِي بِأَخٍ لَّكُم مِّنْ أَبِيكُمْ ۚ أَلَا تَرَوْنَ أَنِّي أُوفِي الْكَيْلَ وَأَنَا خَيْرُ الْمُنزِلِينَ ۝٥٩
📖 ಅನುವಾದ ಆಯತ್ 59
ಮತ್ತು ಯೂಸುಫ್‌ರವರು ಅವರ ಸಾಮಾನು ಸರಂಜಾಮುಗಳನ್ನು ಸಿದ್ಧಪಡಿಸಿ ಕೊಟ್ಟಾಗ ಹೇಳಿದರು: ನೀವು ನಿಮ್ಮ ತಂದೆಯ ಕಡೆಯ ನಿಮ್ಮ ಸಹೋದರನನ್ನು ನನ್ನ ಬಳಿಗೆ ಕರೆತನ್ನಿರಿ. ನಾನು ಅಳತೆಯನ್ನು ಪರಿಪೂರ್ಣವಾಗಿ ನೀಡುವವನೆಂದೂ ಅತ್ತುö್ಯತ್ತಮವಾಗಿ ಸತ್ಕರಿಸುವವನೆಂದೂ ನೀವು ಕಂಡಿಲ್ಲವೇ?
فَإِن لَّمْ تَأْتُونِي بِهِ فَلَا كَيْلَ لَكُمْ عِندِي وَلَا تَقْرَبُونِ ۝٦٠
📖 ಅನುವಾದ ಆಯತ್ 60
ನೀವೇನಾದರೂ ಅವನನ್ನು ನನ್ನ ಬಳಿಗೆ ಕರೆತರದಿದ್ದರೆ ನಿಮಗೆ ನನ್ನ ಬಳಿ ಧಾನ್ಯವಿಲ್ಲ. ಮಾತ್ರವಲ್ಲ ನೀವು ನನ್ನ ಹತ್ತಿರ ಸುಳಿಯುವುದೂ ಬೇಡ.
قَالُوا سَنُرَاوِدُ عَنْهُ أَبَاهُ وَإِنَّا لَفَاعِلُونَ ۝٦١
📖 ಅನುವಾದ ಆಯತ್ 61
ಅವರು ಹೇಳಿದರು; ಶೀಘ್ರವೇ ಅವನನ್ನು ಕಳುಹಿಸಲಿಕ್ಕಾಗಿ ನಾವು ಅವನ ತಂದೆಯನ್ನು ಒಲಿಸುವೆವು ಮತ್ತು ನಾವು ಹೀಗೆ ಮಾಡಿಯೇ ತೀರುವೆವು.
وَقَالَ لِفِتْيَانِهِ اجْعَلُوا بِضَاعَتَهُمْ فِي رِحَالِهِمْ لَعَلَّهُمْ يَعْرِفُونَهَا إِذَا انقَلَبُوا إِلَىٰ أَهْلِهِمْ لَعَلَّهُمْ يَرْجِعُونَ ۝٦٢
📖 ಅನುವಾದ ಆಯತ್ 62
ಯೂಸುಫ್‌ರವರು ತನ್ನ ಸೇವಕರಿಗೆ ಹೇಳಿದರು; ಅವರು ಕೊಟ್ಟ ಧನವನ್ನು ಅವರ ಚೀಲಗಳಲ್ಲೇ ಇರಿಸಿರಿ. ಅವರು ತಮ್ಮ ಪರಿವಾರದ ಬಳಿ ಮರಳಿ ಹೋದಾಗ ಅದನ್ನು ಗುರುತಿಸಿಕೊಂಡು(ಬಹುಶಃ ಇದರ ಕಾರಣ) ಮರಳಿ ಬರಬಹುದು.
فَلَمَّا رَجَعُوا إِلَىٰ أَبِيهِمْ قَالُوا يَا أَبَانَا مُنِعَ مِنَّا الْكَيْلُ فَأَرْسِلْ مَعَنَا أَخَانَا نَكْتَلْ وَإِنَّا لَهُ لَحَافِظُونَ ۝٦٣
📖 ಅನುವಾದ ಆಯತ್ 63
ಅವರು ತಮ್ಮ ತಂದೆಯ ಬಳಿಗೆ ಮರಳಿದಾಗ ಹೇಳಿದರು; ಓ ನಮ್ಮ ತಂದೆಯೇ ನಮ್ಮಿಂದ ಧಾನ್ಯವನ್ನು ತಡೆಹಿಡಿಯಲಾಗಿದೆ. ನಾವು ಧಾನ್ಯವನ್ನು ತರಲು ತಾವು ನಮ್ಮೊಂದಿಗೆ ನಮ್ಮ ಸಹೋದರ (ಬಿನ್‌ಯಾಮಿನ್)ನನ್ನು ಕಳುಹಿಸಿರಿ. ನಾವು ಅವನ ಸಂರಕ್ಷಣೆಯ ಹೊಣೆಗಾರರಾಗಿರುತ್ತೇವೆ.
قَالَ هَلْ آمَنُكُمْ عَلَيْهِ إِلَّا كَمَا أَمِنتُكُمْ عَلَىٰ أَخِيهِ مِن قَبْلُ ۖ فَاللَّهُ خَيْرٌ حَافِظًا ۖ وَهُوَ أَرْحَمُ الرَّاحِمِينَ ۝٦٤
📖 ಅನುವಾದ ಆಯತ್ 64
ಆಗ ಯಾಕೂಬ್‌ರವರು ಹೇಳಿದರು ಇದಕ್ಕೆ ಮೊದಲು ಅವನ ಸಹೋದರನ ವಿಚಾರದಲ್ಲಿ ನಿಮ್ಮನ್ನು ನಂಬಿದAತೆ ಇವನ ವಿಚಾರದಲ್ಲಿಯೂ ನಾನು ನಿಮ್ಮನ್ನು ನಂಬಬೇಕೆ? ಹಾಗೆಯೇ ಅಲ್ಲಾಹನೇ ಅತ್ಯುತ್ತಮ ಸಂರಕ್ಷಕನಾಗಿರುವನು, ಮತ್ತು ಅವನು ಕಾರುಣ್ಯವಂತರಲ್ಲಿ ಮಹಾ ಕಾರುಣ್ಯವಂತನಾಗಿದ್ದಾನೆ.
وَلَمَّا فَتَحُوا مَتَاعَهُمْ وَجَدُوا بِضَاعَتَهُمْ رُدَّتْ إِلَيْهِمْ ۖ قَالُوا يَا أَبَانَا مَا نَبْغِي ۖ هَٰذِهِ بِضَاعَتُنَا رُدَّتْ إِلَيْنَا ۖ وَنَمِيرُ أَهْلَنَا وَنَحْفَظُ أَخَانَا وَنَزْدَادُ كَيْلَ بَعِيرٍ ۖ ذَٰلِكَ كَيْلٌ يَسِيرٌ ۝٦٥
📖 ಅನುವಾದ ಆಯತ್ 65
ಅವರು ತಮ್ಮ ಸರಕುಗಳನ್ನು ಬಿಚ್ಚಿದಾಗ ಅವರ ಬಂಡವಾಳವು ಅವರೆಡೆಗೆ ಹಿಂದಿರುಗಿಸಲಾಗಿರುವುದನ್ನು ಕಂಡು ಹೇಳಿದರು; ನಮ್ಮ ತಂದೆಯೇ ನಮಗೆ ಇನ್ನೇನು ಬೇಕು? ಇದೋ ನಮ್ಮ ಬಂಡವಾಳವನ್ನು ಸಹ ನಮಗೆ ಹಿಂದಿರುಗಿಸಲಾಗಿದೆ. ನಾವು ನಮ್ಮ ಕುಟುಂಬವನ್ನು ಪೋಷಿಸುವೆವು ಮತ್ತು ಸಹೋದರನನ್ನು ನೋಡಿಕೊಳ್ಳುವೆವು ಹಾಗೂ ಒಂದು ಒಂಟೆಯ ಹೊರೆಯಷÀÄ್ಟ ಧಾನ್ಯವನ್ನು ಹೆಚ್ಚಾಗಿ ತರುವೆವು, ಇದು ನಮಗೆ ಸುಲಭವಾಗಿ ದೊರಕುವ ಧಾನ್ಯವಾಗಿದೆ.
قَالَ لَنْ أُرْسِلَهُ مَعَكُمْ حَتَّىٰ تُؤْتُونِ مَوْثِقًا مِّنَ اللَّهِ لَتَأْتُنَّنِي بِهِ إِلَّا أَن يُحَاطَ بِكُمْ ۖ فَلَمَّا آتَوْهُ مَوْثِقَهُمْ قَالَ اللَّهُ عَلَىٰ مَا نَقُولُ وَكِيلٌ ۝٦٦
📖 ಅನುವಾದ ಆಯತ್ 66
ಅವರ ತಂದೆಯೂ ಹೇಳಿದರು; ನಾನು ಖಂಡಿತವಾಗಿ ಅವನನ್ನು ನಿಮ್ಮೊಂದಿಗೆ ಕಳುಹಿಸಲಾರೆ. ಖಂಡಿತ ನೀವು ಅವನನ್ನು ನನ್ನಲ್ಲಿಗೆ ತಲುಪಿಸಿಕೊಡುವಿರಿ ಎಂದು ಅಲ್ಲಾಹನ ಮೇಲೆ ಆಣೆ ಹಾಕಿ ಮಾತು ಕೊಡಬೇಕು. ಆದರೆ ನೀವು ಯಾವುದಾದರೂ ವಿಪತ್ತಿನಲ್ಲಿ ಸಿಲುಕಿದರೆ ಬೇರೆ ಮಾತು. ಆಗವರು ದೃಢವಾದ ಭರವಸೆ ಕೊಟ್ಟಾಗ ಯಾಕೂಬರು ಹೇಳಿದರು; ನಾವು ಹೇಳುತ್ತಿರುವುದರ ಮೇಲೆ ಅಲ್ಲಾಹನು ಸಾಕ್ಷಿಯಾಗಿದ್ದಾನೆ.
وَقَالَ يَا بَنِيَّ لَا تَدْخُلُوا مِن بَابٍ وَاحِدٍ وَادْخُلُوا مِنْ أَبْوَابٍ مُّتَفَرِّقَةٍ ۖ وَمَا أُغْنِي عَنكُم مِّنَ اللَّهِ مِن شَيْءٍ ۖ إِنِ الْحُكْمُ إِلَّا لِلَّهِ ۖ عَلَيْهِ تَوَكَّلْتُ ۖ وَعَلَيْهِ فَلْيَتَوَكَّلِ الْمُتَوَكِّلُونَ ۝٦٧
📖 ಅನುವಾದ ಆಯತ್ 67
ಅವರ ತಂದೆಯು ಹೇಳಿದರು ಓ ನನ್ನ ಮಕ್ಕಳೇ, ನೀವೆಲ್ಲರೂ ಒಂದೇ ದ್ವಾರದ ಮೂಲಕ ಪ್ರವೇಶಿಸದೆ ವಿವಿಧ ದ್ವಾರಗಳ ಮೂಲಕ ಪ್ರವೇಶಿಸಿರಿ. ನಾನು ಅಲ್ಲಾಹನಿಂದ ಇರುವ ಯಾವ ವಿಧಿಯನ್ನು ನಿಮ್ಮಿಂದ ಸರಿಸಲಾರೆ. ಆಜ್ಞಾಧಿಕಾರವು ಕೇವಲ ಅಲ್ಲಾಹನದೇ ಆಗಿದೆ. ನಾನು ಅವನ ಮೇಲೆಯೇ ಭರವಸೆಯನ್ನು ಇಟ್ಟಿದ್ದೇನೆ ಮತ್ತು ಭರವಸೆಯನ್ನಿರಿಸಿಕೊಳ್ಳುವ ಪ್ರತಿಯೊಬ್ಬನು ಅವನ ಮೇಲೆ ಭರವಸೆಯನ್ನಿಡಬೇಕು.
وَلَمَّا دَخَلُوا مِنْ حَيْثُ أَمَرَهُمْ أَبُوهُم مَّا كَانَ يُغْنِي عَنْهُم مِّنَ اللَّهِ مِن شَيْءٍ إِلَّا حَاجَةً فِي نَفْسِ يَعْقُوبَ قَضَاهَا ۚ وَإِنَّهُ لَذُو عِلْمٍ لِّمَا عَلَّمْنَاهُ وَلَٰكِنَّ أَكْثَرَ النَّاسِ لَا يَعْلَمُونَ ۝٦٨
📖 ಅನುವಾದ ಆಯತ್ 68
ಅವರು ತಮ್ಮ ತಂದೆಯು ಆದೇಶಿಸಿದಂತೆ ವಿವಿಧ ದ್ವಾರಗಳಿಂದ ಪ್ರವೇಶಿಸಿದಾಗ ಅಲ್ಲಾಹನು ನಿಶ್ಚಯಿಸಿದಂತಹ ಸಂಗತಿಯಿAದ ಅವನು ಅವರನ್ನು ರಕ್ಷಿಸಿಕೊಳ್ಳುವ ಸಂಭವವೇ ಇರಲಿಲ್ಲ. ಆದರೆ ಯಾಕೂಬರ ಮನಸ್ಸಿನಲ್ಲಿ ಯೋಚನೆಯೊಂದು (ಉಂಟಾಯಿತು) ಅದನ್ನು ಅವರು ಪೂರ್ತಿಕರಿಸಿದರು. ನಿಸ್ಸಂಶಯವಾಗಿಯೂ ಅವರು ನಾವು ಕಲಿಸಿದ ಜ್ಞಾನದ ಸುಶಿಕ್ಷಿತರಾಗಿದ್ದರು. ಆದರೆ ಅಧಿಕ ಜನರು ಆರಿಯುವುದಿಲ್ಲ.
وَلَمَّا دَخَلُوا عَلَىٰ يُوسُفَ آوَىٰ إِلَيْهِ أَخَاهُ ۖ قَالَ إِنِّي أَنَا أَخُوكَ فَلَا تَبْتَئِسْ بِمَا كَانُوا يَعْمَلُونَ ۝٦٩
📖 ಅನುವಾದ ಆಯತ್ 69
ಅವರು ಯೂಸುಫ್‌ರವರ ಬಳಿಗೆ ತಲುಪಿದಾಗ ಅವರು ತನ್ನ ಸಹೋದರರನ್ನು (ಬಿನ್‌ಯಾಮಿನ್) ತನ್ನ ಬಳಿ ಇರಿಸಿದರು ಮತ್ತೆ ಹೇಳಿದರು ನಾನು ನಿನ್ನ ಸಹೋದರ (ಯೂಸುಫ್) ಆಗಿದ್ದೇನೆ. ಇನ್ನು ನೀನು ಅವರು ಮಾಡುತ್ತಿರುವ ಕೃತ್ಯಗಳ ಬಗ್ಗೆ ವ್ಯಥೆ ಪಡಬೇಡ.
فَلَمَّا جَهَّزَهُم بِجَهَازِهِمْ جَعَلَ السِّقَايَةَ فِي رَحْلِ أَخِيهِ ثُمَّ أَذَّنَ مُؤَذِّنٌ أَيَّتُهَا الْعِيرُ إِنَّكُمْ لَسَارِقُونَ ۝٧٠
📖 ಅನುವಾದ ಆಯತ್ 70
ಯೂಸುಫ್‌ರವರು ಅವರ ಸಾಮಾನು ಸಿದ್ಧಪಡಿಸಿಕೊಟ್ಟಾಗ ತನ್ನ ಸಹೋದರನ ಸರಕಿನ ಚೀಲದಲ್ಲಿ ಪಾನ ಪಾತ್ರೆಯನ್ನು ಇಟ್ಟುಬಿಟ್ಟರು. ಅನಂತರ ಕರೆ ನೀಡುವವನೊಬ್ಬನು ಕೂಗಿ ಹೇಳಿದನು; ಓ ಯಾತ್ರಿಕ ತಂಡದವರೇ, ನಿಸ್ಸಂದೇಹವಾಗಿಯೂ ನೀವು ಕಳ್ಳರಾಗಿದ್ದೀರಿ.
قَالُوا وَأَقْبَلُوا عَلَيْهِم مَّاذَا تَفْقِدُونَ ۝٧١
📖 ಅನುವಾದ ಆಯತ್ 71
ಆವರು ಅವರ ಕಡೆಗೆ ತಿರುಗಿ ಹೇಳಿದರು; ನಿಮ್ಮ ಯಾವ ವಸ್ತು ಕಳೆದು ಹೋಗಿದೆ?
قَالُوا نَفْقِدُ صُوَاعَ الْمَلِكِ وَلِمَن جَاءَ بِهِ حِمْلُ بَعِيرٍ وَأَنَا بِهِ زَعِيمٌ ۝٧٢
📖 ಅನುವಾದ ಆಯತ್ 72
ಅವರು ಉತ್ತರಿಸಿದರು; ರಾಜನ ಪಾನಪಾತ್ರೆ ಕಳೆದು ಹೋಗಿದೆ. ಅದನ್ನು ತಂದು ಕೊಟ್ಟವನಿಗೆ ಒಂದು ಒಂಟೆಯ ಹೊರÉಯಷÀÄ್ಟ ಧಾನ್ಯ ಸಿಗುವುದು ಮತ್ತು ಅದರ ಹೊಣೆಗಾರ ನಾನಾಗಿದ್ದೇನೆ.
قَالُوا تَاللَّهِ لَقَدْ عَلِمْتُم مَّا جِئْنَا لِنُفْسِدَ فِي الْأَرْضِ وَمَا كُنَّا سَارِقِينَ ۝٧٣
📖 ಅನುವಾದ ಆಯತ್ 73
ಅವರು ಹೇಳಿದರು; ಅಲ್ಲಾಹನ ಆಣೆ ನಾವು ಈ ದೇಶದಲ್ಲಿ ಕ್ಷೆÆÃಭೆ ಹರಡಲು ಬಂದಿಲ್ಲವೆAದು ಮತ್ತು ನಾವು ಕಳ್ಳರೂ ಅಲ್ಲವೆಂದು ನಿಮಗೆ ಚೆನ್ನಾಗಿ ತಿಳಿದಿದೆ.
قَالُوا فَمَا جَزَاؤُهُ إِن كُنتُمْ كَاذِبِينَ ۝٧٤
📖 ಅನುವಾದ ಆಯತ್ 74
ಅವರು; ಸರಿ, ನೀವು ಸುಳ್ಳುಗಾರರಾಗಿದ್ದರೆ ಕಳ್ಳನ ಶಿಕ್ಷೆಯೇನು ಎಂದು ಕೇಳಿದರು,
قَالُوا جَزَاؤُهُ مَن وُجِدَ فِي رَحْلِهِ فَهُوَ جَزَاؤُهُ ۚ كَذَٰلِكَ نَجْزِي الظَّالِمِينَ ۝٧٥
📖 ಅನುವಾದ ಆಯತ್ 75
ಸಹೋದರರು ಉತ್ತರಿಸಿದರು ಯಾರ ಸರಕಿನಲ್ಲಿ ಅದು ಸಿಗುವುದು ಅವನನ್ನೇ ಅದರ ಬದಲಿಗೆ ವಶಪಡಿಸಿಕೊಳ್ಳಲಾಗುವುದು. ನಾವು ಇದೇ ಪ್ರಕಾರ ಅಕ್ರಮಿಗಳಿಗೆ ಶಿಕ್ಷೆ ನೀಡುತ್ತೇವೆ,
فَبَدَأَ بِأَوْعِيَتِهِمْ قَبْلَ وِعَاءِ أَخِيهِ ثُمَّ اسْتَخْرَجَهَا مِن وِعَاءِ أَخِيهِ ۚ كَذَٰلِكَ كِدْنَا لِيُوسُفَ ۖ مَا كَانَ لِيَأْخُذَ أَخَاهُ فِي دِينِ الْمَلِكِ إِلَّا أَن يَشَاءَ اللَّهُ ۚ نَرْفَعُ دَرَجَاتٍ مَّن نَّشَاءُ ۗ وَفَوْقَ كُلِّ ذِي عِلْمٍ عَلِيمٌ ۝٧٦
📖 ಅನುವಾದ ಆಯತ್ 76
ಹಾಗೆಯೇ ಯೂಸುಫ್ ತನ್ನ ಸಹೋದರನ ಸರಕಿಗಿಂತ ಮೊದಲು ಅವರ ಸರಕುಗಳಿಂದಲೇ ತಪಾಸಣೆ ಆರಂಭಿಸಿದರು. ಅನಂತರ ತನ್ನ ಸಹೋದರನ ಸರಕಿನಿಂದ ಪಾನ ಪಾತ್ರೆಯನ್ನು ಹೊರತೆಗೆದರು. ಹೀಗೆ ನಾವು ಯೂಸುಫ್‌ರವರಿಗೆ ಉಪಾಯವನ್ನು ಕಲಿಸಿಕೊಟ್ಟೆವು. ಅಲ್ಲಾಹನು ಇಚ್ಛಿಸದಿರುತ್ತಿದ್ದರೆ ರಾಜನ ಕಾನೂನಿನ ಪ್ರಕಾರ ತನ್ನ ಸಹೋದರನನ್ನು ತಡೆದಿರಿಸಿಕೊಳ್ಳಲಾಗುತ್ತಿರಲಿಲ್ಲ. ನಾವು ಇಚ್ಛಿಸಿದವರಿಗೆ ಪದವಿಗಳನ್ನು ಉನ್ನತಗೊಳಿಸುತ್ತೇವೆ ಮತ್ತು ಪ್ರತಿಯೊಬ್ಬ ಜ್ಞಾನಿಗಿಂತ ಔನ್ನತ್ಯವನ್ನು ಹೊಂದಿರುವ ಇನ್ನೊಬ್ಬ ಸರ್ವಜ್ಞಾನಿಯಿದ್ದಾನೆ.
۞ قَالُوا إِن يَسْرِقْ فَقَدْ سَرَقَ أَخٌ لَّهُ مِن قَبْلُ ۚ فَأَسَرَّهَا يُوسُفُ فِي نَفْسِهِ وَلَمْ يُبْدِهَا لَهُمْ ۚ قَالَ أَنتُمْ شَرٌّ مَّكَانًا ۖ وَاللَّهُ أَعْلَمُ بِمَا تَصِفُونَ ۝٧٧
📖 ಅನುವಾದ ಆಯತ್ 77
ಆಗ ಸಹೋದರರು ಹೇಳಿದರು; ಇವನು ಕದ್ದರೂ(ಆಶ್ಚರ್ಯವಿಲ್ಲ) ಇದಕ್ಕೆ ಮೊದಲು ಇವನ ಸಹೋದರ(ಯೂಸುಫ್)ನೂ ಸಹ ಕದ್ದಿದ್ದಾನೆ. ಆದರೆ ಯೂಸುಫ್ ಈ ವಿಚಾರವನ್ನು ತನ್ನ ಮನಸ್ಸಿನಲ್ಲಿ ಅಡಗಿಸಿಟ್ಟರು ಅವರ ಮುಂದೆ ಬಹಿರಂಗಗೊಳಿಸಲಿಲ್ಲ. ನೀವು ಅತ್ಯಂತ ನೀಚಮಟ್ಟದಲ್ಲಿ ಇದ್ದೀರಿ ಹಾಗೂ ನೀವು ಹೇಳುತ್ತಿರುವುದನ್ನು ಅಲ್ಲಾಹನು ಚೆನ್ನಾಗಿ ಅರಿಯುವವನಾಗಿದ್ದಾನೆ ಎಂದು ತಮ್ಮ ಮನಸ್ಸಿನಲ್ಲಿ ಹೇಳಿಕೊಂಡರು.
قَالُوا يَا أَيُّهَا الْعَزِيزُ إِنَّ لَهُ أَبًا شَيْخًا كَبِيرًا فَخُذْ أَحَدَنَا مَكَانَهُ ۖ إِنَّا نَرَاكَ مِنَ الْمُحْسِنِينَ ۝٧٨
📖 ಅನುವಾದ ಆಯತ್ 78
ಅವರು ಹೇಳಿದರು; ರಾಜರೇ ಇವನ ತಂದೆ ತುಂಬಾ ಪ್ರಾಯದ ವೃದ್ಧ ವ್ಯಕ್ತಿಯಾಗಿದ್ದಾರೆ. ತಾವು ಅವನ ಸ್ಥಾನದಲ್ಲಿ ನಮ್ಮಲ್ಲಿ ಯಾರನ್ನಾದರೂ ತಡೆದಿರಿಸಿಕೊಳ್ಳಿರಿ. ನಾವು ತಮ್ಮನ್ನು ಮಹಾ ಸಜ್ಜನರಲ್ಲಿ ಕಾಣುತ್ತಿದ್ದೇವೆ.
قَالَ مَعَاذَ اللَّهِ أَن نَّأْخُذَ إِلَّا مَن وَجَدْنَا مَتَاعَنَا عِندَهُ إِنَّا إِذًا لَّظَالِمُونَ ۝٧٩
📖 ಅನುವಾದ ಆಯತ್ 79
ಯೂಸುಫ್ ಹೇಳಿದರು; ಯಾರ ಬಳಿ ನಮಗೆ ನಮ್ಮ ವಸ್ತುಸಿಕ್ಕಿದೆಯೋ ಅವನ ಹೊರತು ಇತರರನ್ನು ಸೆರೆಹಿಡಿಯುವುದರಿಂದ ಅಲ್ಲಾಹನ ಅಭಯ ಯಾಚಿಸುತ್ತೇವೆ, ಹಾಗೇನಾದರೂ ಮಾಡಿದರೆ ಖಂಡಿತವಾಗಿಯೂ ನಾವು ಅಕ್ರಮಿಗಳಾಗಿಬಿಡುವೆವು.
فَلَمَّا اسْتَيْأَسُوا مِنْهُ خَلَصُوا نَجِيًّا ۖ قَالَ كَبِيرُهُمْ أَلَمْ تَعْلَمُوا أَنَّ أَبَاكُمْ قَدْ أَخَذَ عَلَيْكُم مَّوْثِقًا مِّنَ اللَّهِ وَمِن قَبْلُ مَا فَرَّطتُمْ فِي يُوسُفَ ۖ فَلَنْ أَبْرَحَ الْأَرْضَ حَتَّىٰ يَأْذَنَ لِي أَبِي أَوْ يَحْكُمَ اللَّهُ لِي ۖ وَهُوَ خَيْرُ الْحَاكِمِينَ ۝٨٠
📖 ಅನುವಾದ ಆಯತ್ 80
ಅವರು ಅವನಿಂದ ನಿರಾಶರಾದಾಗ ಏಕಾಂತದಲ್ಲಿ ಕುಳಿತುಕೊಂಡು ಸಮಾಲೋಚನೆ ನಡೆಸಿದರು. ಅವರ ಪೈಕಿ ಹಿರಿಯನೆಂದನು ನಿಮ್ಮ ತಂದೆಯು ನಿಮ್ಮಿಂದ ಅಲ್ಲಾಹನ ಆಣೆ ಹಾಕಿ ಸದೃಢ ಕರಾರನ್ನು ಪಡೆದಿರುವರೆಂದು ನಿಮಗೆ ಗೊತ್ತಿಲ್ಲವೇ? ಮತ್ತು ಇದಕ್ಕೆ ಮೊದಲು ನೀವು ಯೂಸುಫ್‌ನ ವಿಚಾರದಲ್ಲಿ ನೀಚತನ ತೋರಿರುವಿರಿ. ಹಾಗಾಗಿ ಸ್ವತಃ ನನ್ನ ತಂದೆಯವರು ನನಗೆ ಅನುಮತಿ ನೀಡುವ ತನಕ ಅಥವಾ ಅಲ್ಲಾಹನು ನನ್ನ ವಿಚಾರದ ತೀರ್ಪನ್ನು ಮಾಡುವ ತನಕ ನಾನಂತೂ ಈ ಭೂಪ್ರದೇಶವನ್ನು ಬಿಟ್ಟು ಕದಲಲಾರೆ ಮತ್ತು ಅಲ್ಲಾಹನೇ ಅತ್ಯುತ್ತಮ ತೀರ್ಪು ನೀಡುವವನಾಗಿದ್ದಾನೆ.
ارْجِعُوا إِلَىٰ أَبِيكُمْ فَقُولُوا يَا أَبَانَا إِنَّ ابْنَكَ سَرَقَ وَمَا شَهِدْنَا إِلَّا بِمَا عَلِمْنَا وَمَا كُنَّا لِلْغَيْبِ حَافِظِينَ ۝٨١
📖 ಅನುವಾದ ಆಯತ್ 81
ನೀವು ನಿಮ್ಮ ತಂದೆಯ ಬಳಿಗೆ ಮರಳಿ ಹೋಗಿ ಹೇಳಿರಿ; ಓ ನಮ್ಮ ತಂದೆಯೇ ತಮ್ಮ ಮಗನು ಕದ್ದಿದ್ದಾನೆ ಮತ್ತು ನಾವು ನಮಗೆ ಗೊತ್ತಿರುವುದನ್ನೇ ಸಾಕ್ಷಿ ವಹಿಸಿರುತ್ತೇವೆ ಮತ್ತು ಅಗೋಚರ ಸಂಗತಿಯ ಕುರಿತು ಎಚ್ಚರಿಕೆ ವಹಿಸುವರು ನಾವಲ್ಲ.
وَاسْأَلِ الْقَرْيَةَ الَّتِي كُنَّا فِيهَا وَالْعِيرَ الَّتِي أَقْبَلْنَا فِيهَا ۖ وَإِنَّا لَصَادِقُونَ ۝٨٢
📖 ಅನುವಾದ ಆಯತ್ 82
ನಾವು ಇದ್ದಂತಹ ಆ ನಾಡಿನವರಲ್ಲಿ, ಮತ್ತು ನಾವು ಬಂದ ಯಾತ್ರಾ ತಂಡದವರೊAದಿಗೆ ವಿಚಾರಿಸಿ ನೋಡಿರಿ ನಿಜವಾಗಿಯೂ ನಾವು ಸತ್ಯವಂತರಾಗಿದ್ದೇವೆ.
قَالَ بَلْ سَوَّلَتْ لَكُمْ أَنفُسُكُمْ أَمْرًا ۖ فَصَبْرٌ جَمِيلٌ ۖ عَسَى اللَّهُ أَن يَأْتِيَنِي بِهِمْ جَمِيعًا ۚ إِنَّهُ هُوَ الْعَلِيمُ الْحَكِيمُ ۝٨٣
📖 ಅನುವಾದ ಆಯತ್ 83
ಅವರ ತಂದೆಯೂ ಹೇಳಿದರು; ನೀವು ನಿಮ್ಮಿಂದಲೇ ಒಂದು ಸಂಗತಿಯನ್ನು ಉಂಟುಮಾಡಿರುವಿರಿ. ಇನ್ನು ಉತ್ತಮ ಸಹನÉಯೇ ಲೇಸು. ಅಲ್ಲಾಹನು ಅವರೆಲ್ಲರನ್ನೂ ನನ್ನ ಬಳಿಗೆ ತಲುಪಿಸಬಹುದು ಅವನೇ ಸರ್ವಜ್ಞಾನಿಯೂ ಯುಕ್ತಿಪೂರ್ಣನೂ ಆಗಿದ್ದಾನೆ.
وَتَوَلَّىٰ عَنْهُمْ وَقَالَ يَا أَسَفَىٰ عَلَىٰ يُوسُفَ وَابْيَضَّتْ عَيْنَاهُ مِنَ الْحُزْنِ فَهُوَ كَظِيمٌ ۝٨٤
📖 ಅನುವಾದ ಆಯತ್ 84
ಅನಂತರ ಯಾಕೂಬರು ಅವರಿಂದ ಮುಖ ತಿರುಗಿಸಿಕೊಂಡರು ಮತ್ತು ಹೇಳಿದರು “ಅಯ್ಯೋ ಓ ನನ್ನ ಯೂಸುಫ್" ದುಃಖ ಸಂಕಟದಿAದ ಅವರ ಕಣ್ಣುಗಳೆರಡು ಬಿಳುಪಾಗಿ ಬಿಟ್ಟಿದ್ದವು, ಮತ್ತು ಅವರು ತೀವ್ರ ದುಃಖವನ್ನು ಅದುಮಿಟ್ಟುಕೊಂಡಿದ್ದರು.
قَالُوا تَاللَّهِ تَفْتَأُ تَذْكُرُ يُوسُفَ حَتَّىٰ تَكُونَ حَرَضًا أَوْ تَكُونَ مِنَ الْهَالِكِينَ ۝٨٥
📖 ಅನುವಾದ ಆಯತ್ 85
ಅವರ ಮಕ್ಕಳು ಹೇಳಿದರು; ಅಲ್ಲಾಹನಾಣೆ ನೀವಂತು ಸದಾ ಯೂಸುಫ್‌ನನ್ನು ನೆನೆಸುತ್ತಲೇ ತಮ್ಮನ್ನು ಕರಗಿಸಿಬಿಡುವಿರಿ ಅಥವಾ ನಾಶಗೊಳಿಸಿಕೊಳ್ಳುವಿರಿ.
قَالَ إِنَّمَا أَشْكُو بَثِّي وَحُزْنِي إِلَى اللَّهِ وَأَعْلَمُ مِنَ اللَّهِ مَا لَا تَعْلَمُونَ ۝٨٦
📖 ಅನುವಾದ ಆಯತ್ 86
ಅವರು(ಯಾಕೂಬ್) ಹೇಳಿದರು ನಾನಂತೂ ನನ್ನ ತಳಮಳವನ್ನು ಮತ್ತು ಸಂಕಟವನ್ನು ಅಲ್ಲಾಹನಲ್ಲಿ ತೋಡಿಕೊಳ್ಳುತ್ತಿರುವೆನು ಮತ್ತು ನೀವು ತಿಳಿದಿಲ್ಲದ್ದನ್ನು ಅಲ್ಲಾಹನ ಕಡೆಯಿಂದ ನಾನು ತಿಳಿದಿದ್ದೇನೆ.
يَا بَنِيَّ اذْهَبُوا فَتَحَسَّسُوا مِن يُوسُفَ وَأَخِيهِ وَلَا تَيْأَسُوا مِن رَّوْحِ اللَّهِ ۖ إِنَّهُ لَا يَيْأَسُ مِن رَّوْحِ اللَّهِ إِلَّا الْقَوْمُ الْكَافِرُونَ ۝٨٧
📖 ಅನುವಾದ ಆಯತ್ 87
ಓ ನನ್ನ ಪುತ್ರರೇ ನೀವು ಹೋಗಿ ಯೂಸುಫ್ ಮತ್ತು ಅವನ ಸಹೋದರನನ್ನು ಹುಡುಕಿರಿ ಮತ್ತು ನೀವು ಅಲ್ಲಾಹನ ಕೃಪೆಯಿಂದ ನಿರಾಶರಾಗದಿರಿ. ನಿಸ್ಸಂಶಯವಾಗಿಯೂ ಸತ್ಯನಿಷÉÃಧಿಗಳ ಹೊರತು ಅಲ್ಲಾಹನ ಕೃಪೆಯಿಂದ ಬೇರಾರೂ ನಿರಾಶರಾಗಲಾರರು.
فَلَمَّا دَخَلُوا عَلَيْهِ قَالُوا يَا أَيُّهَا الْعَزِيزُ مَسَّنَا وَأَهْلَنَا الضُّرُّ وَجِئْنَا بِبِضَاعَةٍ مُّزْجَاةٍ فَأَوْفِ لَنَا الْكَيْلَ وَتَصَدَّقْ عَلَيْنَا ۖ إِنَّ اللَّهَ يَجْزِي الْمُتَصَدِّقِينَ ۝٨٨
📖 ಅನುವಾದ ಆಯತ್ 88
ಅನಂತರ ಅವರು ಯೂಸುಫ್‌ರವರ ಬಳಿಗೆ ತಲುಪಿದಾಗ ಹೇಳಿದರು; ಓ ರಾಜನೆ ನಮಗೂ ನಮ್ಮ ಕುಟುಂಬಕ್ಕೂ ಸಂಕಷ್ಟ ಭಾದಿಸಿದೆ, ಮತ್ತು ನಾವು ಅತ್ಯಲ್ಪ ಬಂಡವಾಳದೊAದಿಗೆ ಬಂದಿರುತ್ತೇವೆ. ಆದ್ದರಿಂದ ನೀವು ನಮಗೆ ಸಂಪೂರ್ಣ ಧಾನ್ಯವನ್ನು ನೀಡಿರಿ, ಮತ್ತು ನಮ್ಮ ಮೇಲೆ ದಾನ ಧರ್ಮವನ್ನು ಮಾಡಿರಿ. ಖಂಡಿತವಾಗಿಯೂ ಅಲ್ಲಾಹನು ದಾನ-ಧರ್ಮ ನೀಡುವವರಿಗೆ ಪ್ರತಿಫಲವನ್ನು ನೀಡುವನು.
قَالَ هَلْ عَلِمْتُم مَّا فَعَلْتُم بِيُوسُفَ وَأَخِيهِ إِذْ أَنتُمْ جَاهِلُونَ ۝٨٩
📖 ಅನುವಾದ ಆಯತ್ 89
ಯೂಸುಫ್ ಹೇಳಿದರು; ನೀವು ಅಜ್ಞಾನಿಗಳಾಗಿದ್ದಾಗ ಯೂಸುಫ್ ಮತ್ತು ಅವನ ಸಹೋದರನೊಂದಿಗೆ ಹೇಗೆ ವರ್ತಿಸಿದ್ದೀರೆಂದು ನಿಮಗೆ ತಿಳಿದಿದೆಯೇ ?
قَالُوا أَإِنَّكَ لَأَنتَ يُوسُفُ ۖ قَالَ أَنَا يُوسُفُ وَهَٰذَا أَخِي ۖ قَدْ مَنَّ اللَّهُ عَلَيْنَا ۖ إِنَّهُ مَن يَتَّقِ وَيَصْبِرْ فَإِنَّ اللَّهَ لَا يُضِيعُ أَجْرَ الْمُحْسِنِينَ ۝٩٠
📖 ಅನುವಾದ ಆಯತ್ 90
ಅವರು ಹೇಳಿದರು; ನಿಜವಾಗಿಯೂ ನೀವೇ ಯೂಸುಫ್‌ರವರೇ ? ಅವರು ಉತ್ತರಿಸಿದರು ಹೌದು ನಾನೇ ಯೂಸುಫ್, ಇವನು ನನ್ನ ಸಹೋದರನು ಅಲ್ಲಾಹನು ನಮ್ಮ ಮೇಲೆ ಅನುಗ್ರಹವನ್ನು ಮಾಡಿರುತ್ತಾನೆ. ವಾಸ್ತವದಲ್ಲಿ ಭಯ-ಭಕ್ತಿಯನ್ನಿರಿಸುವವರಿಗೆ ಮತ್ತು ಸಹನಶೀಲತೆ ತೋರಿಸುವ ಸಜ್ಜನರ ಪ್ರತಿಫಲವನ್ನು ಅಲ್ಲಾಹನು ವ್ಯರ್ಥಗೊಳಿಸುವುದಿಲ್ಲ.
قَالُوا تَاللَّهِ لَقَدْ آثَرَكَ اللَّهُ عَلَيْنَا وَإِن كُنَّا لَخَاطِئِينَ ۝٩١
📖 ಅನುವಾದ ಆಯತ್ 91
ಅವರು ಹೇಳಿದರು ಅಲ್ಲಾಹನಾಣೆ ಅಲ್ಲಾಹನು ನಿಮಗೆ ನಮ್ಮ ಮೇಲೆ ಶ್ರೇಷÀ್ಠತೆಯನ್ನು ನೀಡಿರುವನು ಮತ್ತು ನಾವು ತಪ್ಪಿತಸ್ಥರೇ ಆಗಿದ್ದೆವು.
قَالَ لَا تَثْرِيبَ عَلَيْكُمُ الْيَوْمَ ۖ يَغْفِرُ اللَّهُ لَكُمْ ۖ وَهُوَ أَرْحَمُ الرَّاحِمِينَ ۝٩٢
📖 ಅನುವಾದ ಆಯತ್ 92
ಅವರು ಉತ್ತರಿಸಿದರು; ಇಂದು ನಿಮ್ಮ ಮೇಲೆ ಯಾವ ದೋಷಾರೋಪಣೆ ಇಲ್ಲ ಅಲ್ಲಾಹನು ನಿಮಗೆ ಕ್ಷಮಿಸಲಿ. ಅವನು ಸಕಲ ಕಾರುಣ್ಯವಂತರಲ್ಲಿ ಮಹಾ ಕಾರುಣ್ಯವಂತನಾಗಿದ್ದಾನೆ.
اذْهَبُوا بِقَمِيصِي هَٰذَا فَأَلْقُوهُ عَلَىٰ وَجْهِ أَبِي يَأْتِ بَصِيرًا وَأْتُونِي بِأَهْلِكُمْ أَجْمَعِينَ ۝٩٣
📖 ಅನುವಾದ ಆಯತ್ 93
ನೀವು ನನ್ನ ಅಂಗಿಯನ್ನು ತೆಗೆದುಕೊಂಡು ಹೋಗಿರಿ, ಅದನ್ನು ನನ್ನ ತಂದೆಯವರ ಮುಖದ ಮೇಲೆ ಹಾಕಿ, ಅವರ ದೃಷ್ಟಿ ಮರಳಿ ಬರುವುದು ನಂತರ ನಿಮ್ಮ ಎಲ್ಲಾ ಕುಟುಂಬದವರನ್ನು ನನ್ನ ಬಳಿಗೆ ಕರೆತನ್ನಿರಿ.
وَلَمَّا فَصَلَتِ الْعِيرُ قَالَ أَبُوهُمْ إِنِّي لَأَجِدُ رِيحَ يُوسُفَ ۖ لَوْلَا أَن تُفَنِّدُونِ ۝٩٤
📖 ಅನುವಾದ ಆಯತ್ 94
ಆಗ ಈ ಯಾತ್ರಾ ತಂಡವು (ಈಜಿಪ್ಟಿನಿಂದ) ಹೊರಟಾಗ ಅವರ ತಂದೆಯೂ ಹೇಳಿದರು; ನಾನು ಯೂಸುಫ್‌ನ ಸುಗಂಧವನ್ನು ಪಡೆಯುತ್ತಿದ್ದೇನೆ, ನೀವು ನನ್ನನ್ನು ಅರಳು ಮರುಳಾದವನೆಂದು ತಿಳಿಯದಿದ್ದರೆ!
قَالُوا تَاللَّهِ إِنَّكَ لَفِي ضَلَالِكَ الْقَدِيمِ ۝٩٥
📖 ಅನುವಾದ ಆಯತ್ 95
ಅವರು ಹೇಳಿದರು ಅಲ್ಲಾಹನಾಣೆ ತಮ್ಮ ಅದೇ ಹಳೆಯ ತಪ್ಪು ಗ್ರಹಿಕೆಯಲ್ಲಿದ್ದೀರಿ.
فَلَمَّا أَن جَاءَ الْبَشِيرُ أَلْقَاهُ عَلَىٰ وَجْهِهِ فَارْتَدَّ بَصِيرًا ۖ قَالَ أَلَمْ أَقُل لَّكُمْ إِنِّي أَعْلَمُ مِنَ اللَّهِ مَا لَا تَعْلَمُونَ ۝٩٦
📖 ಅನುವಾದ ಆಯತ್ 96
ಸುವಾರ್ತೆ ನೀಡುವವನು ಬಂದು ಆ ನಿಲುವಂಗಿಯನ್ನು ಅವರ ಮುಖದ ಮೇಲೆ ಹಾಕಿದನು. ಆಗಲೇ ಅವರ ದೃಷ್ಟಿ ಮರಳಿ ಬಂದಿತು. ಅವರು ಹೇಳಿದರು; ನೀವು ತಿಳಿದಿಲ್ಲದ್ದನ್ನು ನಾನು ಅಲ್ಲಾಹನಿಂದ ತಿಳಿದುಕೊಂಡಿರುತ್ತೇನೆ ಎಂದು ನಾನು ನಿಮಗೆ ಹೇಳಿರಲಿಲ್ಲವೆ ?
قَالُوا يَا أَبَانَا اسْتَغْفِرْ لَنَا ذُنُوبَنَا إِنَّا كُنَّا خَاطِئِينَ ۝٩٧
📖 ಅನುವಾದ ಆಯತ್ 97
ಅವರು ಹೇಳಿದರು; ಓ ನಮ್ಮ ತಂದೆಯೇ ನಮ್ಮ ಪಾಪಗಳಿಗೆ ಕ್ಷಮೆಯನ್ನು ಬೇಡಿರಿ ನಿಸ್ಸಂಶಯವಾಗಿಯೂ ನಾವು ಪಾಪಿಗಳಾಗಿದ್ದೆವು.
قَالَ سَوْفَ أَسْتَغْفِرُ لَكُمْ رَبِّي ۖ إِنَّهُ هُوَ الْغَفُورُ الرَّحِيمُ ۝٩٨
📖 ಅನುವಾದ ಆಯತ್ 98
ಅವರು ಹೇಳಿದರು; ಸರಿ ನಾನು ಶೀಘ್ರವೇ ನನ್ನ ಪ್ರಭುವಿನಿಂದ ನಿಮಗಾಗಿ ಕ್ಷಮೆ ಯಾಚಿಸುವೆನು, ನಿಶ್ಚಯಯವಾಗಿಯೂ ಅವನು ಮಹಾ ಕ್ಷಮಾಶೀಲನೂ ಕರುಣಾನಿಧಿಯೂ ಆಗಿರುವನು.
فَلَمَّا دَخَلُوا عَلَىٰ يُوسُفَ آوَىٰ إِلَيْهِ أَبَوَيْهِ وَقَالَ ادْخُلُوا مِصْرَ إِن شَاءَ اللَّهُ آمِنِينَ ۝٩٩
📖 ಅನುವಾದ ಆಯತ್ 99
ಅವರು ಯೂಸುಫ್‌ರವರ ಬಳಿ ತಲುಪಿದಾಗ ತನ್ನ ತಂದೆ ತಾಯಿಯವರಿಗೆ ಆದರದಿಂದ ಬರಮಾಡಿಕೊಂಡರು ಮತ್ತು (ತಮ್ಮ ಎಲ್ಲಾ ಕುಟುಂಬದವರೊಡನೆ) ಹೇಳಿದರು ನೀವೆಲ್ಲರೂ ನಗರದೊಳಗೆ (ಈಜಿಪ್ಟ್) ಪ್ರವೇಶಿಸಿರಿ. ಹೇಳಿದರು ಅಲ್ಲಾಹನು ಇಚ್ಚಿಸಿದರೆ ನೀವು ಶಾಂತಿ ಸಮಾಧಾನಗಳೊಂದಿಗೆ ವಾಸಿಸುವಿರಿ.
وَرَفَعَ أَبَوَيْهِ عَلَى الْعَرْشِ وَخَرُّوا لَهُ سُجَّدًا ۖ وَقَالَ يَا أَبَتِ هَٰذَا تَأْوِيلُ رُؤْيَايَ مِن قَبْلُ قَدْ جَعَلَهَا رَبِّي حَقًّا ۖ وَقَدْ أَحْسَنَ بِي إِذْ أَخْرَجَنِي مِنَ السِّجْنِ وَجَاءَ بِكُم مِّنَ الْبَدْوِ مِن بَعْدِ أَن نَّزَغَ الشَّيْطَانُ بَيْنِي وَبَيْنَ إِخْوَتِي ۚ إِنَّ رَبِّي لَطِيفٌ لِّمَا يَشَاءُ ۚ إِنَّهُ هُوَ الْعَلِيمُ الْحَكِيمُ ۝١٠٠
📖 ಅನುವಾದ ಆಯತ್ 100
ಅವರು ತನ್ನ ತಂದೆ-ತಾಯಿಯನ್ನು ತನ್ನ ಜೊತೆಗೆ ಸಿಂಹಾಸನದ ಮೇಲೆ ಕುಳ್ಳಿರಿಸಿದರು ಮತ್ತು ಅವರೆಲ್ಲರೂ ಯೂಸುಫ್ ರವರ ಮುಂದೆ ಸಾಷ್ಟಾಂಗವೆರಗಿದರು(ಆಗ) ಅವರೆಂದರು ಗೌರವಾನ್ವಿತ ತಂದೆಯವರೇ, ಇದು ನನ್ನ ಹಿಂದಿನ ಕನಸಿನ ಫಲವಾಗಿದೆ. ನನ್ನ ಪ್ರಭು ಅದನ್ನು ನಿಜ ಮಾಡಿ ತೋರಿಸಿದನು, ಮತ್ತು ನನ್ನನ್ನು ಸೆರೆಮನೆಯಿಂದ ಬಿಡಿಸಿದಾಗಲೂ ನನ್ನ ಮತ್ತು ನನ್ನ ಸಹೋದರರ ನಡುವೆ ಶೈತಾನನು ಭಿನ್ನತೆಯನ್ನು ಹಾಕಿದ ನಂತರ ಮರುಭೂಮಿಯಿಂದ ನಿಮ್ಮೆಲ್ಲರನ್ನು ಕರೆದುಕೊಂಡು ಬಂದಾಗಲೂ ಅವನು ನನಗೆ ಮಹಾ ಉಪಕಾರವನ್ನು ಮಾಡಿರುವನು. ವಾಸ್ತವದಲ್ಲಿ ನನ್ನ ಪ್ರಭು ತಾನು ಇಚ್ಛಿಸಿದವುಗಳಲ್ಲಿ ಸೂಕ್ಷ್ಮವಾಗಿ ನಿಯಂತ್ರಿಸುತ್ತಾನೆ ಮತ್ತು ನಿಶ್ಚಯವಾಗಿಯೂ ಅವನು ಸರ್ವಜ್ಞಾನಿಯು ಯುಕ್ತಿಪೂರ್ಣನೂ ಆಗಿದ್ದಾನೆ.
۞ رَبِّ قَدْ آتَيْتَنِي مِنَ الْمُلْكِ وَعَلَّمْتَنِي مِن تَأْوِيلِ الْأَحَادِيثِ ۚ فَاطِرَ السَّمَاوَاتِ وَالْأَرْضِ أَنتَ وَلِيِّي فِي الدُّنْيَا وَالْآخِرَةِ ۖ تَوَفَّنِي مُسْلِمًا وَأَلْحِقْنِي بِالصَّالِحِينَ ۝١٠١
📖 ಅನುವಾದ ಆಯತ್ 101
ನನ್ನ ಪ್ರಭುವೇ ನೀನು ನನಗೆ ರಾಜ್ಯಾಧಿಕಾರವನ್ನು ನೀಡಿರುವೆ ಮತ್ತು ನೀನು ನನಗೆ ಕನಸುಗಳ ಫಲವನ್ನು ಕಲಿಸಿಕೊಟ್ಟಿರುವೆ. ಓ ಆಕಾಶಗಳ ಮತ್ತು ಭೂಮಿಯ ಸೃಷ್ಟಿಕರ್ತನೇ ನೀನೆ ಇಹಲೋಕದಲ್ಲೂ ಪರಲೋಕದಲ್ಲೂ ನನ್ನ ಮಿತ್ರನಾಗಿರುವೆ. ನನಗೆ ನೀನು ವಿಧೇಯನಾಗಿರುವ ಸ್ಥಿತಿಯಲ್ಲಿ ಮರಣ ನೀಡು ಮತ್ತು ನನ್ನನ್ನು ಸಜ್ಜನರಲ್ಲಿ ಸೇರಿಸು.
ذَٰلِكَ مِنْ أَنبَاءِ الْغَيْبِ نُوحِيهِ إِلَيْكَ ۖ وَمَا كُنتَ لَدَيْهِمْ إِذْ أَجْمَعُوا أَمْرَهُمْ وَهُمْ يَمْكُرُونَ ۝١٠٢
📖 ಅನುವಾದ ಆಯತ್ 102
ಓ ಪೈಗಂಬರರೇ ಇವು ನಿಮ್ಮೆಡೆಗೆ ಅವತೀರ್ಣಗೊಳಿಸಲಾಗುತ್ತಿರುವ ಅಗೋಚರ ವೃತ್ತಾಂತಗಳಾಗಿವೆ. ಅವರು ಪರಸ್ಪರ ತಮ್ಮ ಯೋಜನೆಯಲ್ಲಿ ಒಮ್ಮತದೊಂದಿಗೆ ಕುತಂತ್ರವೆಸಗುತ್ತಿದ್ದಾಗ ನೀವು ಅವರ ಬಳಿ ಇರಲಿಲ್ಲ.
وَمَا أَكْثَرُ النَّاسِ وَلَوْ حَرَصْتَ بِمُؤْمِنِينَ ۝١٠٣
📖 ಅನುವಾದ ಆಯತ್ 103
ಆದರೆ ನೀವೆಷÉ್ಟÃ ಹಂಬಲಿಸಿದರು ಈ ಜನರಲ್ಲಿ ಹೆಚ್ಚಿನವರು ಸತ್ಯ ವಿಶ್ವಾಸಿಗಳಾಗುವವರಲ್ಲ.
وَمَا تَسْأَلُهُمْ عَلَيْهِ مِنْ أَجْرٍ ۚ إِنْ هُوَ إِلَّا ذِكْرٌ لِّلْعَالَمِينَ ۝١٠٤
📖 ಅನುವಾದ ಆಯತ್ 104
ನೀವು ಇದಕ್ಕಾಗಿ ಅವರಿಂದ ಯಾವುದೇ ಪ್ರತಿಫಲವನ್ನು ಬೇಡುತ್ತಿಲ್ಲ. ಇದು ಸರ್ವಲೋಕದವರಿಗೆ ಒಂದು ಉಪದೇಶವಾಗಿದೆ.
وَكَأَيِّن مِّنْ آيَةٍ فِي السَّمَاوَاتِ وَالْأَرْضِ يَمُرُّونَ عَلَيْهَا وَهُمْ عَنْهَا مُعْرِضُونَ ۝١٠٥
📖 ಅನುವಾದ ಆಯತ್ 105
ಆಕಾಶಗಳಲ್ಲೂ , ಭೂಮಿಯಲ್ಲೂ ಎಷÉÆ್ಟÃ ದೃಷ್ಟಾಂತಗಳಿವೆ. ಅವುಗಳನ್ನು ಕಡೆಗಣಿಸುತ್ತಾ ಅವರು ಅವುಗಳ ಮುಂದಿನಿAದಲೇ ಹಾದು ಹೋಗುತ್ತಿರುವರು.
وَمَا يُؤْمِنُ أَكْثَرُهُم بِاللَّهِ إِلَّا وَهُم مُّشْرِكُونَ ۝١٠٦
📖 ಅನುವಾದ ಆಯತ್ 106
ಅವರಲ್ಲಿ ಹೆಚ್ಚಿನವರು ಸಹಭಾಗಿಗಳನ್ನು ಕಲ್ಪಿಸದೆ ಅಲ್ಲಾಹನಲ್ಲಿ ನಂಬಿಕೆಯನ್ನಿಡುವುದಿಲ್ಲ.
أَفَأَمِنُوا أَن تَأْتِيَهُمْ غَاشِيَةٌ مِّنْ عَذَابِ اللَّهِ أَوْ تَأْتِيَهُمُ السَّاعَةُ بَغْتَةً وَهُمْ لَا يَشْعُرُونَ ۝١٠٧
📖 ಅನುವಾದ ಆಯತ್ 107
ಅವರು ಅಲ್ಲಾಹನಿಂದ ಯಾತನೆಯೊಂದು ಅವರ ಮೇಲೆ ಬಂದೆರಗುವುದರಿAದಲೂ ನಿಶ್ಚಿಂತರಾಗಿರುವರೇ ?
قُلْ هَٰذِهِ سَبِيلِي أَدْعُو إِلَى اللَّهِ ۚ عَلَىٰ بَصِيرَةٍ أَنَا وَمَنِ اتَّبَعَنِي ۖ وَسُبْحَانَ اللَّهِ وَمَا أَنَا مِنَ الْمُشْرِكِينَ ۝١٠٨
📖 ಅನುವಾದ ಆಯತ್ 108
ಹೇಳಿರಿ ಇದುವೇ ನನ್ನ ಮಾರ್ಗವಾಗಿದೆ. ನಾನು ಮತ್ತು ನನ್ನನ್ನು ಅನುಸರಿಸುವವರು ಅಲ್ಲಾಹನೆಡೆಗೆ ಸದೃಢ ಜ್ಞಾನ ಹಾಗೂ ನಂಬಿಕೆಯೊAದಿಗೆ ಕರೆಯುತ್ತಿದ್ದೇವೆ, ಅಲ್ಲಾಹನು ಪರಮಪಾವನನು ಮತ್ತು (ಓ ಪೈಗಂಬರರೇ) ನಾನು ಬಹುದೇವರಾಧಕರಲ್ಲಿ ಸೇರಿಲ್ಲ.
وَمَا أَرْسَلْنَا مِن قَبْلِكَ إِلَّا رِجَالًا نُّوحِي إِلَيْهِم مِّنْ أَهْلِ الْقُرَىٰ ۗ أَفَلَمْ يَسِيرُوا فِي الْأَرْضِ فَيَنظُرُوا كَيْفَ كَانَ عَاقِبَةُ الَّذِينَ مِن قَبْلِهِمْ ۗ وَلَدَارُ الْآخِرَةِ خَيْرٌ لِّلَّذِينَ اتَّقَوْا ۗ أَفَلَا تَعْقِلُونَ ۝١٠٩
📖 ಅನುವಾದ ಆಯತ್ 109
ನಿಮಗಿಂತ ಮುಂಚೆ ನಾವು ಕಳುಹಿಸಲಾದ ಸಂದೇಶವಾಹಕರೆಲ್ಲರೂ ಪುರುಷÀರೇ ಆಗಿದ್ದರು. ನಾವು ಅವರೆಡೆಗೆ ಸಂದೇಶವನ್ನು ನೀಡುತ್ತಿದ್ದೆವು, ಅವರು ಅದೇ ನಾಡಿನವರಾಗಿದ್ದರು, ಅವರು ಭೂಮಿಯಲ್ಲಿ ಸಂಚರಿಸಿ ಅವರಿಗೆ ಮುಂಚಿನವರ ಪರಿಣಾಮವು ಹೇಗಿತ್ತೆಂಬುದನ್ನು ನೋಡಲಿಲ್ಲವೇ? ನಿಶ್ಚಯವಾಗಿಯೂ ಪರಲೋಕದ ನೆಲೆಯು ಭಯವನ್ನು ಇರಿಸಿಕೊಂಡವರಿಗೆ ಅತ್ಯುತ್ತಮವಾಗಿದೆ. ಹಾಗಿದ್ದೂ ನೀವು ಯೋಚಿಸುವುದಿಲ್ಲವೇ.
حَتَّىٰ إِذَا اسْتَيْأَسَ الرُّسُلُ وَظَنُّوا أَنَّهُمْ قَدْ كُذِبُوا جَاءَهُمْ نَصْرُنَا فَنُجِّيَ مَن نَّشَاءُ ۖ وَلَا يُرَدُّ بَأْسُنَا عَنِ الْقَوْمِ الْمُجْرِمِينَ ۝١١٠
📖 ಅನುವಾದ ಆಯತ್ 110
ಕೊನೆಗೆ ಸಂದೇಶವಾಹಕರು ನಿರಾಶರಾದಾಗ ತಮ್ಮೊಂದಿಗೆ ಸುಳ್ಳು ಹೇಳಲಾಗಿದೆ ಎಂದು ಭಾವಿಸಿದಾಗ ನಮ್ಮ ಸಹಾಯವು ಪೈಗಂಬರರ ಕಡೆಗೆ ಬಂದುಬಿಟ್ಟಿತು. ನಾವು ಇಚ್ಚಿಸಿದವರನ್ನು ರಕ್ಷಿಸಲಾಯಿತು ಮತ್ತು ನಮ್ಮ ವಿಪತ್ತನ್ನು ಅಪರಾಧಿಗಳಾದ ಜನರಿಂದ ಸರಿಸಲಾಗದು.
لَقَدْ كَانَ فِي قَصَصِهِمْ عِبْرَةٌ لِّأُولِي الْأَلْبَابِ ۗ مَا كَانَ حَدِيثًا يُفْتَرَىٰ وَلَٰكِن تَصْدِيقَ الَّذِي بَيْنَ يَدَيْهِ وَتَفْصِيلَ كُلِّ شَيْءٍ وَهُدًى وَرَحْمَةً لِّقَوْمٍ يُؤْمِنُونَ ۝١١١
📖 ಅನುವಾದ ಆಯತ್ 111
ಅವರ ವೃತ್ತಾಂತಗಳಲ್ಲಿ ಬುದ್ಧಿವಂತರಿಗೆ ಪಾಠವಿದೆ. ಈ ಕುರ್‌ಆನ್ ಕಲ್ಪಿತ ಸುಳ್ಳು ಮಾತಲ್ಲ, ಆದರೆ ಇದು ಮೊದಲು ಬಂದ ಗ್ರಂಥಗಳನ್ನು ದೃಢೀಕರಿಸುವಂಥದ್ದೂ, ಪ್ರತಿಯೊಂದು ಸಂಗತಿಯನ್ನು ಸ್ಪಷÀ್ಟವಾಗಿ ವಿವರಿಸುವಂಥದ್ದೂ ಆಗಿದೆ, ಮತ್ತು ವಿಶ್ವಾಸವಿಡುವ ಜನರಿಗೆ ಸನ್ಮಾರ್ಗವೂ ಕಾರುಣ್ಯವೂ ಆಗಿದೆ.
← 11 ಯೂಸುಫ್ (12/114) 13 →
ಓದಿ ಸೂರಾ ಯೂಸುಫ್ ಕನ್ನಡ ಅನುವಾದ – ಪಠಣ ಮತ್ತು ಆಡಿಯೋ

12يوسف Yusuf 📚 111 ಆಯತ್ مكية

ಆಯತ್‌ವಾರು – ಸೂರಾ ಯೂಸುಫ್ — 111 ಆಯತ್




ಪವಿತ್ರ ಕುರಾನ್


Monday, September 7, 2026

Don't forget us in your sincere prayers