📖 0/604 ಓದಿದ ಪುಟಗಳು
📄 264
قَالَ يَٰٓإِبۡلِيسُ مَا لَكَ أَلَّا تَكُونَ مَعَ ٱلسَّٰجِدِينَ ٣٢ قَالَ لَمۡ أَكُن لِّأَسۡجُدَ لِبَشَرٍ خَلَقۡتَهُۥ مِن صَلۡصَٰلٍ مِّنۡ حَمَإٍ مَّسۡنُونٍ ٣٣ قَالَ فَٱخۡرُجۡ مِنۡهَا فَإِنَّكَ رَجِيمٌ ٣٤ وَإِنَّ عَلَيۡكَ ٱللَّعۡنَةَ إِلَىٰ يَوۡمِ ٱلدِّينِ ٣٥ قَالَ رَبِّ فَأَنظِرۡنِيٓ إِلَىٰ يَوۡمِ يُبۡعَثُونَ ٣٦ قَالَ فَإِنَّكَ مِنَ ٱلۡمُنظَرِينَ ٣٧ إِلَىٰ يَوۡمِ ٱلۡوَقۡتِ ٱلۡمَعۡلُومِ ٣٨ قَالَ رَبِّ بِمَآ أَغۡوَيۡتَنِي لَأُزَيِّنَنَّ لَهُمۡ فِي ٱلۡأَرۡضِ وَلَأُغۡوِيَنَّهُمۡ أَجۡمَعِينَ ٣٩ إِلَّا عِبَادَكَ مِنۡهُمُ ٱلۡمُخۡلَصِينَ ٤٠ قَالَ هَٰذَا صِرَٰطٌ عَلَيَّ مُسۡتَقِيمٌ ٤١ إِنَّ عِبَادِي لَيۡسَ لَكَ عَلَيۡهِمۡ سُلۡطَٰنٌ إِلَّا مَنِ ٱتَّبَعَكَ مِنَ ٱلۡغَاوِينَ ٤٢ وَإِنَّ جَهَنَّمَ لَمَوۡعِدُهُمۡ أَجۡمَعِينَ ٤٣ لَهَا سَبۡعَةُ أَبۡوَٰبٍ لِّكُلِّ بَابٍ مِّنۡهُمۡ جُزۡءٌ مَّقۡسُومٌ ٤٤ إِنَّ ٱلۡمُتَّقِينَ فِي جَنَّٰتٍ وَعُيُونٍ ٤٥ ٱدۡخُلُوهَا بِسَلَٰمٍ ءَامِنِينَ ٤٦ وَنَزَعۡنَا مَا فِي صُدُورِهِم مِّنۡ غِلٍّ إِخۡوَٰنًا عَلَىٰ سُرُرٍ مُّتَقَٰبِلِينَ ٤٧ لَا يَمَسُّهُمۡ فِيهَا نَصَبٌ وَمَا هُم مِّنۡهَا بِمُخۡرَجِينَ ٤٨ ۞ نَبِّئۡ عِبَادِيٓ أَنِّيٓ أَنَا ٱلۡغَفُورُ ٱلرَّحِيمُ ٤٩ وَأَنَّ عَذَابِي هُوَ ٱلۡعَذَابُ ٱلۡأَلِيمُ ٥٠ وَنَبِّئۡهُمۡ عَن ضَيۡفِ إِبۡرَٰهِيمَ ٥١
15:32
قَالَ يَٰٓإِبۡلِيسُ مَا لَكَ أَلَّا تَكُونَ مَعَ ٱلسَّٰجِدِينَ ٣٢
ಅಲ್ಲಾಹನು ಕೇಳಿದನು! ಓ ಇಬ್‌ಲೀಸ್ ಸಾಷ್ಟಾಂಗವೆರಗುವವರ ಜೊತೆಗೆ ಸೇರದಿರಲು ನಿನಗೇನಾಗಿದೆ ?
15:33
قَالَ لَمۡ أَكُن لِّأَسۡجُدَ لِبَشَرٍ خَلَقۡتَهُۥ مِن صَلۡصَٰلٍ مِّنۡ حَمَإٍ مَّسۡنُونٍ ٣٣
ಅವನು ಉತ್ತರಿಸಿದನು; ನೀನು ಟಣಟಣಿಸುವ ಕೊಳೆತ ಕರಿ ಮಣ್ಣಿನಿಂದ ಸೃಷ್ಟಿಸಿರುವಂತಹ ಮಾನವನಿಗೆ ನಾನು ಸಾಷ್ಟಾಂಗ ಮಾಡುವವನಲ್ಲ.
15:34
قَالَ فَٱخۡرُجۡ مِنۡهَا فَإِنَّكَ رَجِيمٌ ٣٤
ಅಲ್ಲಾಹನು ಹೇಳಿದನು: ನೀನಿಲ್ಲಿಂದ ತೊಲಗು. ನಿಜವಾಗಿಯೂ ನೀನು ಧಿಕ್ಕರಿಸಲ್ಪಪಟ್ಟವನಾಗಿರುವೆ.
15:35
وَإِنَّ عَلَيۡكَ ٱللَّعۡنَةَ إِلَىٰ يَوۡمِ ٱلدِّينِ ٣٥
ನಿಶ್ಚಯವಾಗಿಯೂ ನಿರ್ಣಾಯಕ ದಿನದವರೆಗೂ ನಿನ್ನ ಮೇಲೆ ನನ್ನ ಶಾಪವಿದೆ.
15:36
قَالَ رَبِّ فَأَنظِرۡنِيٓ إِلَىٰ يَوۡمِ يُبۡعَثُونَ ٣٦
ಅವನು ಹೇಳಿದನು; ಓ ನನ್ನ ಪ್ರಭುವೇ ಜನರು ಪುನರೆಬ್ಬಿಸಲ್ಪಡುವ ದಿನದವರೆಗೆ ನನಗೆ ಕಾಲಾವಕಾಶ ನೀಡು.
15:37
قَالَ فَإِنَّكَ مِنَ ٱلۡمُنظَرِينَ ٣٧
ಅಲ್ಲಾಹನು ಹೇಳಿದನು; ಖಂಡಿತವಾಗಿಯೂ ನೀನು ಕಾಲಾವಕಾಶ ನೀಡಿದವರಲ್ಲಾಗಿರುವೆ.
15:39
قَالَ رَبِّ بِمَآ أَغۡوَيۡتَنِي لَأُزَيِّنَنَّ لَهُمۡ فِي ٱلۡأَرۡضِ وَلَأُغۡوِيَنَّهُمۡ أَجۡمَعِينَ ٣٩
ಅವನು ಹೇಳಿದನು; ಓ ನನ್ನ ಪ್ರಭುವೇ ನೀನು ನನ್ನನ್ನು ದಾರಿಗೆಡಿಸಿರುವೆ ಖಂಡಿತವಾಗಿಯೂ ನಾನು ಅವರಿಗಾಗಿ ಭೂಮಿಯಲ್ಲಿ ಕೆಡುಕುಗಳನ್ನು ಅಲಂಕೃತಗೊಳಿಸಿ ಅವರೆಲ್ಲರನ್ನೂ ದಾರಿಗೆಡಿಸುವೆನು.
15:41
قَالَ هَٰذَا صِرَٰطٌ عَلَيَّ مُسۡتَقِيمٌ ٤١
ಅಲ್ಲಾಹನು ಹೇಳಿದನು; ಇದೇ ನನ್ನೆಡೆಗೆ ತಲುಪುವ ಋಜುವಾದ ಮಾರ್ಗವಾಗಿದೆ.
15:42
إِنَّ عِبَادِي لَيۡسَ لَكَ عَلَيۡهِمۡ سُلۡطَٰنٌ إِلَّا مَنِ ٱتَّبَعَكَ مِنَ ٱلۡغَاوِينَ ٤٢
ನಿಶ್ಚಯವಾಗಿಯೂ ನನ್ನ ದಾಸರ ಮೇಲೆ ನಿನ್ನ ಯಾವ ಅಧಿಕಾರ ಇರಲಾರದು. ಆದರೆ ನಿನ್ನನ್ನು ಅನುಸರಿಸಿದ ದಾರಿಗೆಟ್ಟವರ ಹೊರತು.
15:43
وَإِنَّ جَهَنَّمَ لَمَوۡعِدُهُمۡ أَجۡمَعِينَ ٤٣
ಖಂಡಿತವಾಗಿಯೂ ಅವರೆಲ್ಲರ ವಾಗ್ದತ್ತ ನೆಲೆಯು ನರಕವಾಗಿದೆ.
15:44
لَهَا سَبۡعَةُ أَبۡوَٰبٍ لِّكُلِّ بَابٍ مِّنۡهُمۡ جُزۡءٌ مَّقۡسُومٌ ٤٤
ಅದಕ್ಕೆ ಏಳು ದ್ವಾರಗಳಿವೆ. ಪ್ರತಿಯೊಂದು ದ್ವಾರಕ್ಕೆ ಅವರ ಒಂದು ಭಾಗವು ನಿಗದಿತವಾಗಿದೆ.
15:45
إِنَّ ٱلۡمُتَّقِينَ فِي جَنَّٰتٍ وَعُيُونٍ ٤٥
ನಿಶ್ಚಯವಾಗಿಯೂ ಭಕ್ತಿಯುಳ್ಳವರು ಸ್ವರ್ಗೋದ್ಯಾನಗಳಲ್ಲಿಯೂ ಚಿಲುಮೆಗಳಲ್ಲಿಯೂ ಇರುವರು.
15:46
ٱدۡخُلُوهَا بِسَلَٰمٍ ءَامِنِينَ ٤٦
(ಅವರೊಂದಿಗೆ ಹೇಳಲಾಗುವುದು) ನೀವು ಇದರೊಳಗೆ ನಿರ್ಭಯರಾಗಿ ಶಾಂತಿಯೊAದಿಗೆ ಪ್ರವೇಶಿಸಿರಿ.
15:47
وَنَزَعۡنَا مَا فِي صُدُورِهِم مِّنۡ غِلٍّ إِخۡوَٰنًا عَلَىٰ سُرُرٍ مُّتَقَٰبِلِينَ ٤٧
ನಾವು ಅವರ ಹೃದಯಗಳಲ್ಲಿ ಇದ್ದಂತಹ ವೈಮನಸ್ಸನ್ನು ತೆಗೆದುಹಾಕುವೆವು. ಅವರು ಸಹೋದರರಾಗಿ ಮಂಚಗಳಲ್ಲಿ ಎದುರುಬದುರಾಗಿ ಆಸೀನರಾಗಿರುವರು.
15:48
لَا يَمَسُّهُمۡ فِيهَا نَصَبٌ وَمَا هُم مِّنۡهَا بِمُخۡرَجِينَ ٤٨
ಅದರಲ್ಲಿ ಅವರಿಗೆ ಯಾವುದೇ ಕಷÀ್ಟ ಬಾಧಿಸದು ಮತ್ತು ಅವರೆಂದೂ ಅಲ್ಲಿಂದ ಹೊರಹಾಕಲ್ಪಡಲಾರರು.
15:49
۞ نَبِّئۡ عِبَادِيٓ أَنِّيٓ أَنَا ٱلۡغَفُورُ ٱلرَّحِيمُ ٤٩
ನಿಶ್ಚಯವಾಗಿಯೂ ನಾನು ಕ್ಷಮಾಶೀಲನೂ ಕರುಣಾನಿಧಿಯೂ ಆಗಿದ್ದೇನೆಂದು ನೀವು ನನ್ನ ದಾಸರಿಗೆ ತಿಳಿಸಿಬಿಡಿರಿ.
15:50
وَأَنَّ عَذَابِي هُوَ ٱلۡعَذَابُ ٱلۡأَلِيمُ ٥٠
ಮತ್ತು ನನ್ನ ಯಾತನೆಯು ಸಹ ಅತ್ಯಂತ ವೇದನಾಜನಕವಾಗಿದೆ.
15:51
وَنَبِّئۡهُمۡ عَن ضَيۡفِ إِبۡرَٰهِيمَ ٥١
ಅವರಿಗೆ ಇಬ್ರಾಹಿಮರ ಅತಿಥಿಗಳ ವೃತ್ತಾಂತವನ್ನು ತಿಳಿಸಿಬಿಡಿ.
العربيةEnglishBahasa IndonesiaTürkçeРусскийفارسیFrançaisاردوবাংলাDeutschEspañol中文हिन्दीPortuguêsItalianoภาษาไทยPolskiNederlandsShqipKiswahiliO'zbekதமிழ்MelayuBosanskiSoomaaliAzərbaycanکوردی한국어日本語SvenskaDanskNorskپښتوമലയാളംසිංහලTamazightHausaአማርኛБългарскиТоҷикӣҚазақшаFilipinoسنڌيYorùbáFulfuldeТатарчаئۇيغۇرچەКыргызчаਪੰਜਾਬੀJawaతెలుగుမြန်မာગુજરાતીOromoमराठीTiếng ViệtMalagasyНохчийнWolofދިވެހިಕನ್ನಡУкраїнськаΕλληνικάქართულიខ្មែរدریQafar afMaranaoनेपाली
ಪವಿತ್ರ ಕುರಾನ್
Tuesday, August 25, 2026
Don't forget us in your sincere prayers







