📖 0/604 ಓದಿದ ಪುಟಗಳು
📄 164
حَقِيقٌ عَلَىٰٓ أَن لَّآ أَقُولَ عَلَى ٱللَّهِ إِلَّا ٱلۡحَقَّۚ قَدۡ جِئۡتُكُم بِبَيِّنَةٍ مِّن رَّبِّكُمۡ فَأَرۡسِلۡ مَعِيَ بَنِيٓ إِسۡرَٰٓءِيلَ ١٠٥ قَالَ إِن كُنتَ جِئۡتَ بِـَٔايَةٍ فَأۡتِ بِهَآ إِن كُنتَ مِنَ ٱلصَّٰدِقِينَ ١٠٦ فَأَلۡقَىٰ عَصَاهُ فَإِذَا هِيَ ثُعۡبَانٌ مُّبِينٌ ١٠٧ وَنَزَعَ يَدَهُۥ فَإِذَا هِيَ بَيۡضَآءُ لِلنَّٰظِرِينَ ١٠٨ قَالَ ٱلۡمَلَأُ مِن قَوۡمِ فِرۡعَوۡنَ إِنَّ هَٰذَا لَسَٰحِرٌ عَلِيمٌ ١٠٩ يُرِيدُ أَن يُخۡرِجَكُم مِّنۡ أَرۡضِكُمۡۖ فَمَاذَا تَأۡمُرُونَ ١١٠ قَالُوٓاْ أَرۡجِهۡ وَأَخَاهُ وَأَرۡسِلۡ فِي ٱلۡمَدَآئِنِ حَٰشِرِينَ ١١١ يَأۡتُوكَ بِكُلِّ سَٰحِرٍ عَلِيمٍ ١١٢ وَجَآءَ ٱلسَّحَرَةُ فِرۡعَوۡنَ قَالُوٓاْ إِنَّ لَنَا لَأَجۡرًا إِن كُنَّا نَحۡنُ ٱلۡغَٰلِبِينَ ١١٣ قَالَ نَعَمۡ وَإِنَّكُمۡ لَمِنَ ٱلۡمُقَرَّبِينَ ١١٤ قَالُواْ يَٰمُوسَىٰٓ إِمَّآ أَن تُلۡقِيَ وَإِمَّآ أَن نَّكُونَ نَحۡنُ ٱلۡمُلۡقِينَ ١١٥ قَالَ أَلۡقُواْۖ فَلَمَّآ أَلۡقَوۡاْ سَحَرُوٓاْ أَعۡيُنَ ٱلنَّاسِ وَٱسۡتَرۡهَبُوهُمۡ وَجَآءُو بِسِحۡرٍ عَظِيمٍ ١١٦ ۞ وَأَوۡحَيۡنَآ إِلَىٰ مُوسَىٰٓ أَنۡ أَلۡقِ عَصَاكَۖ فَإِذَا هِيَ تَلۡقَفُ مَا يَأۡفِكُونَ ١١٧ فَوَقَعَ ٱلۡحَقُّ وَبَطَلَ مَا كَانُواْ يَعۡمَلُونَ ١١٨ فَغُلِبُواْ هُنَالِكَ وَٱنقَلَبُواْ صَٰغِرِينَ ١١٩ وَأُلۡقِيَ ٱلسَّحَرَةُ سَٰجِدِينَ ١٢٠
7:105
حَقِيقٌ عَلَىٰٓ أَن لَّآ أَقُولَ عَلَى ٱللَّهِ إِلَّا ٱلۡحَقَّۚ قَدۡ جِئۡتُكُم بِبَيِّنَةٍ مِّن رَّبِّكُمۡ فَأَرۡسِلۡ مَعِيَ بَنِيٓ إِسۡرَٰٓءِيلَ ١٠٥
ಅಲ್ಲಾಹನ ಮೇಲೆ ಸತ್ಯವನ್ನಲ್ಲದೆ ಇನ್ನೇನನ್ನು ಹೇಳದಿರುವುದೇ ನನಗೆ ಭೂಷಣವಾಗಿದೆ. ನಾನು ನಿಮ್ಮ ಬಳಿಗೆ ನಿಮ್ಮ ಪ್ರಭುವಿನ ವತಿಯ ಒಂದು ಪುರಾವೆಯನ್ನು ತಂದಿರುವೆನು. ಆದ್ದರಿಂದ ಇಸ್ರಾಯೀಲ್ ಸಂತತಿಗಳನ್ನು ನನ್ನ ಜೊತೆ ಕಳುಹಿಸಿಕೊಡು'.
7:106
قَالَ إِن كُنتَ جِئۡتَ بِـَٔايَةٍ فَأۡتِ بِهَآ إِن كُنتَ مِنَ ٱلصَّٰدِقِينَ ١٠٦
ಫಿರ್‌ಔನ್ ಹೇಳಿದನು: ನೀನು ಯಾವುದಾದರೂ ಪುರಾವೆಯನ್ನು ತಂದಿರುವುದಾದರೆ ಅದನ್ನು ಮುಂದಿಡು; ನೀನು ಸತ್ಯಸಂಧನಾಗಿದ್ದರೆ.
7:107
فَأَلۡقَىٰ عَصَاهُ فَإِذَا هِيَ ثُعۡبَانٌ مُّبِينٌ ١٠٧
ಆಗ ಅವರು ತನ್ನ ಬೆತ್ತವನ್ನು ಹಾಕಿದರು. ಕೂಡಲೇ ಅದು ಪ್ರತ್ಯಕ್ಷವಾದ ಸರ್ಪವಾಗಿ ಬಿಟ್ಟಿತು.
7:108
وَنَزَعَ يَدَهُۥ فَإِذَا هِيَ بَيۡضَآءُ لِلنَّٰظِرِينَ ١٠٨
ಮತ್ತು ಅವರು ತನ್ನ ಕೈಯ್ಯನ್ನು ಹೊರತೆಗೆದರು. ತಕ್ಷಣ ಅದು ನೋಡುವವರಿಗೆ ಬೆಳ್ಳಗೆ ಹೊಳೆಯುತ್ತಿರುವುದಾಗಿ ಕಂಡು ಬಂದಿತು.
7:109
قَالَ ٱلۡمَلَأُ مِن قَوۡمِ فِرۡعَوۡنَ إِنَّ هَٰذَا لَسَٰحِرٌ عَلِيمٌ ١٠٩
ಫಿರ್‌ಔನನ ಜನತೆಯ ಪ್ರಮುಖರು ಹೇಳಿದರು: ನಿಜವಾಗಿಯು ಇವನೊಬ್ಬ ನಿಪುಣ ಜಾದುಗಾರನಾಗಿದ್ದಾನೆ.
7:110
يُرِيدُ أَن يُخۡرِجَكُم مِّنۡ أَرۡضِكُمۡۖ فَمَاذَا تَأۡمُرُونَ ١١٠
ಇವನು ನಿಮ್ಮನ್ನು ನಿಮ್ಮ ನಾಡಿನಿಂದ ಹೊರಗಟ್ಟಲು ಇಚ್ಛಿಸುತ್ತಿದ್ದಾನೆ. ಆದ್ದರಿಂದ ನೀವು ಯಾವ ಸಲಹೆಯನ್ನು ನೀಡುವಿರಿ?
7:111
قَالُوٓاْ أَرۡجِهۡ وَأَخَاهُ وَأَرۡسِلۡ فِي ٱلۡمَدَآئِنِ حَٰشِرِينَ ١١١
ಅವರು ಹೇಳಿದರು: ನೀವು ಅವರಿಗೂ, ಅವರ ಸೋದರರಿಗೂ ಕಾಲಾವಕಾಶ ನೀಡಿರಿ. ನಗರಗಳಲ್ಲಿ ದೂತರನ್ನು ಕಳುಹಿಸಿರಿ.
7:113
وَجَآءَ ٱلسَّحَرَةُ فِرۡعَوۡنَ قَالُوٓاْ إِنَّ لَنَا لَأَجۡرًا إِن كُنَّا نَحۡنُ ٱلۡغَٰلِبِينَ ١١٣
ಆ ಜಾದುಗಾರರು ಫಿರ್‌ಔನ್‌ನ ಬಳಿಗೆ ಬಂದರು ಮತ್ತು ಹೇಳಿದರು: ನಾವು ಜಯಗಳಿಸಿದರೆ ನಮಗೆ ಉತ್ತಮ ಪ್ರತಿಫಲವು ಸಿಗುವುದೇ?
7:114
قَالَ نَعَمۡ وَإِنَّكُمۡ لَمِنَ ٱلۡمُقَرَّبِينَ ١١٤
ಫಿರ್‌ಔನ್ ಹೇಳಿದನು: ಹೌದು ಮತ್ತು ನೀವು ಆಸ್ಥಾನದ ಸಮೀಪಸ್ಥರಲ್ಲಿ ಸೇರುವಿರಿ.
7:115
قَالُواْ يَٰمُوسَىٰٓ إِمَّآ أَن تُلۡقِيَ وَإِمَّآ أَن نَّكُونَ نَحۡنُ ٱلۡمُلۡقِينَ ١١٥
ಅವರು ಹೇಳಿದರು: ಓ ಮೂಸಾ, ಒಂದೋ ನೀವು ಮೊಡಿ ಹಾಕಿರಿ ಅಥವಾ ನಾವು ಹಾಕುವೆವು.
7:116
قَالَ أَلۡقُواْۖ فَلَمَّآ أَلۡقَوۡاْ سَحَرُوٓاْ أَعۡيُنَ ٱلنَّاسِ وَٱسۡتَرۡهَبُوهُمۡ وَجَآءُو بِسِحۡرٍ عَظِيمٍ ١١٦
ಮೂಸಾ ಹೇಳಿದರು: ನೀವೇ ಹಾಕಿರಿ. ಆಗ ಅವರು ಮೋಡಿ ಹಾಕಿದಾಗ ಅವರು ಜನರ ಕಣ್ಣುಗಳನ್ನು ಭ್ರಾಂತಿಗೊಳಿಸಿದರು ಮತ್ತು ಅವರನ್ನು ಭಯಪಡಿಸಿದರು. ಅವರು ಒಂದು ವಿಧದ ಮಹಾ ಜಾದುವನ್ನು ಪ್ರದರ್ಶಿಸಿದರು.
7:117
۞ وَأَوۡحَيۡنَآ إِلَىٰ مُوسَىٰٓ أَنۡ أَلۡقِ عَصَاكَۖ فَإِذَا هِيَ تَلۡقَفُ مَا يَأۡفِكُونَ ١١٧
ಆಗ ನಾವು ಮೂಸರವರಿಗೆ ದಿವ್ಯ ಸಂದೇಶ ನೀಡಿದೆವು: ನೀವು ತಮ್ಮ ಬೆತ್ತವನ್ನು ಹಾಕಿರಿ. ಆಗ ಅದು ಅವರು ಕೃತಕವಾಗಿ ಸೃಷ್ಟಿಸಿದ್ದನ್ನು ತಕ್ಷಣ ನುಂಗತೊಡಗಿತು.
7:118
فَوَقَعَ ٱلۡحَقُّ وَبَطَلَ مَا كَانُواْ يَعۡمَلُونَ ١١٨
ಹೀಗೆ ಸತ್ಯವು ಮೇಲುಗೈ ಸಾಧಿಸಿತು ಮತ್ತು ಅವರು ಮಾಡಿರುವುದೆಲ್ಲವೂ ವ್ಯರ್ಥವಾಯಿತು.
7:119
فَغُلِبُواْ هُنَالِكَ وَٱنقَلَبُواْ صَٰغِرِينَ ١١٩
ಅವರು ಆ ಸಂದರ್ಭದಲ್ಲಿ ಸೋತು ಹೋದರು ಮತ್ತು ಅಪಮಾನಿತರಾಗಿ ಮರಳಿದರು.
العربيةEnglishBahasa IndonesiaTürkçeРусскийفارسیFrançaisاردوবাংলাDeutschEspañol中文हिन्दीPortuguêsItalianoภาษาไทยPolskiNederlandsShqipKiswahiliO'zbekதமிழ்MelayuBosanskiSoomaaliAzərbaycanکوردی한국어日本語SvenskaDanskNorskپښتوമലയാളംසිංහලTamazightHausaአማርኛБългарскиТоҷикӣҚазақшаFilipinoسنڌيYorùbáFulfuldeТатарчаئۇيغۇرچەКыргызчаਪੰਜਾਬੀJawaతెలుగుမြန်မာગુજરાતીOromoमराठीTiếng ViệtMalagasyНохчийнWolofދިވެހިಕನ್ನಡУкраїнськаΕλληνικάქართულიខ្មែរدریQafar afMaranaoनेपाली
ಪವಿತ್ರ ಕುರಾನ್
Saturday, August 22, 2026
Don't forget us in your sincere prayers







