📖 0/604 ಓದಿದ ಪುಟಗಳು
📄 293
وَبِٱلۡحَقِّ أَنزَلۡنَٰهُ وَبِٱلۡحَقِّ نَزَلَۗ وَمَآ أَرۡسَلۡنَٰكَ إِلَّا مُبَشِّرًا وَنَذِيرًا ١٠٥ وَقُرۡءَانًا فَرَقۡنَٰهُ لِتَقۡرَأَهُۥ عَلَى ٱلنَّاسِ عَلَىٰ مُكۡثٍ وَنَزَّلۡنَٰهُ تَنزِيلًا ١٠٦ قُلۡ ءَامِنُواْ بِهِۦٓ أَوۡ لَا تُؤۡمِنُوٓاْۚ إِنَّ ٱلَّذِينَ أُوتُواْ ٱلۡعِلۡمَ مِن قَبۡلِهِۦٓ إِذَا يُتۡلَىٰ عَلَيۡهِمۡ يَخِرُّونَۤ لِلۡأَذۡقَانِۤ سُجَّدًاۤ ١٠٧ وَيَقُولُونَ سُبۡحَٰنَ رَبِّنَآ إِن كَانَ وَعۡدُ رَبِّنَا لَمَفۡعُولًا ١٠٨ وَيَخِرُّونَ لِلۡأَذۡقَانِ يَبۡكُونَ وَيَزِيدُهُمۡ خُشُوعًا۩ ١٠٩ قُلِ ٱدۡعُواْ ٱللَّهَ أَوِ ٱدۡعُواْ ٱلرَّحۡمَٰنَۖ أَيًّا مَّا تَدۡعُواْ فَلَهُ ٱلۡأَسۡمَآءُ ٱلۡحُسۡنَىٰۚ وَلَا تَجۡهَرۡ بِصَلَاتِكَ وَلَا تُخَافِتۡ بِهَا وَٱبۡتَغِ بَيۡنَ ذَٰلِكَ سَبِيلًا ١١٠ وَقُلِ ٱلۡحَمۡدُ لِلَّهِ ٱلَّذِي لَمۡ يَتَّخِذۡ وَلَدًا وَلَمۡ يَكُن لَّهُۥ شَرِيكٌ فِي ٱلۡمُلۡكِ وَلَمۡ يَكُن لَّهُۥ وَلِيٌّ مِّنَ ٱلذُّلِّۖ وَكَبِّرۡهُ تَكۡبِيرَۢا ١١١
ٱلۡحَمۡدُ لِلَّهِ ٱلَّذِيٓ أَنزَلَ عَلَىٰ عَبۡدِهِ ٱلۡكِتَٰبَ وَلَمۡ يَجۡعَل لَّهُۥ عِوَجَاۜ ١ قَيِّمًا لِّيُنذِرَ بَأۡسًا شَدِيدًا مِّن لَّدُنۡهُ وَيُبَشِّرَ ٱلۡمُؤۡمِنِينَ ٱلَّذِينَ يَعۡمَلُونَ ٱلصَّٰلِحَٰتِ أَنَّ لَهُمۡ أَجۡرًا حَسَنًا ٢ مَّٰكِثِينَ فِيهِ أَبَدًا ٣ وَيُنذِرَ ٱلَّذِينَ قَالُواْ ٱتَّخَذَ ٱللَّهُ وَلَدًا ٤
ಸೂರಾ ಅಲ್-ಕಹ್ಫ್

17:105
وَبِٱلۡحَقِّ أَنزَلۡنَٰهُ وَبِٱلۡحَقِّ نَزَلَۗ وَمَآ أَرۡسَلۡنَٰكَ إِلَّا مُبَشِّرًا وَنَذِيرًا ١٠٥
ನಾವು ಈ ಕುರ್‌ಆನನ್ನು ಸತ್ಯದೊಂದಿಗೆ ಇಳಿಸಿರುತ್ತೇವೆ. ಮತ್ತು ಅದು ಸತ್ಯದೊಂದಿಗೇ ಇಳಿಯಿತು ಮತ್ತು (ಓ ಪೈಗಂಬರರೇ) ನಾವು ನಿಮ್ಮನ್ನು ಕೇವಲ ಸುವಾರ್ತೆ ನೀಡುವವನಾಗಿ, ಮುನ್ನೆಚ್ಚರಿಕೆ ಕೊಡುವವನಾಗಿ ಕಳುಹಿಸಿರುತ್ತೇವೆ.
17:106
وَقُرۡءَانًا فَرَقۡنَٰهُ لِتَقۡرَأَهُۥ عَلَى ٱلنَّاسِ عَلَىٰ مُكۡثٍ وَنَزَّلۡنَٰهُ تَنزِيلًا ١٠٦
ನಾವು ಕುರ್‌ಆನನ್ನು ನೀವು ಜನರಿಗೆ ಸಂದರ್ಭಕ್ಕೆ ತಕ್ಕಂತೆ ಓದಿ ಕೊಡಲೆಂದು ಸ್ವಲ್ಪ ಸ್ವಲ್ಪವಾಗಿ ಅವತೀರ್ಣಗೊಳಿಸಿರುತ್ತೇವೆ. ಮತ್ತು ನಾವು ಸಹ ಅದನ್ನು ಹಂತ ಹಂತವಾಗಿ ಇಳಿಸಿರುತ್ತೇವೆ.
17:107
قُلۡ ءَامِنُواْ بِهِۦٓ أَوۡ لَا تُؤۡمِنُوٓاْۚ إِنَّ ٱلَّذِينَ أُوتُواْ ٱلۡعِلۡمَ مِن قَبۡلِهِۦٓ إِذَا يُتۡلَىٰ عَلَيۡهِمۡ يَخِرُّونَۤ لِلۡأَذۡقَانِۤ سُجَّدًاۤ ١٠٧
ಹೇಳಿರಿ: (ಓ ಸತ್ಯನಿಷೇಧಿಗಳೇ) ನೀವು ಇದರಲ್ಲಿ ವಿಶ್ವಾಸವಿಡಿರಿ: ಇಲ್ಲವೇ ವಿಶ್ವಾಸವಿಡದಿರಿ. ಖಂಡಿತವಾಗಿಯು ಇದಕ್ಕೆ ಮೊದಲು ಜ್ಞಾನ ನೀಡಲಾದವರ ಬಳಿ ಇದನ್ನು ಓದಿ ಹೇಳಲಾದಾಗ ಅವರು ಅಡ್ಡಬಿದ್ದು ಸಾಷ್ಟಾಂಗವೆರಗಿ ಬಿಡುತ್ತಾರೆ.
17:108
وَيَقُولُونَ سُبۡحَٰنَ رَبِّنَآ إِن كَانَ وَعۡدُ رَبِّنَا لَمَفۡعُولًا ١٠٨
ಮತ್ತು ಅವರು ಹೇಳುತ್ತಾರೆ: ನಮ್ಮ ಪ್ರಭುವು ಅದೆಷ್ಟೋ ಪರಮ ಪಾವನನು ನಿಸ್ಸಂದೇಹವಾಗಿಯು ನಮ್ಮ ಪ್ರಭುವಿನ ವಾಗ್ದಾನವು ನಡೆದೇ ತೀರುವುದು.
17:109
وَيَخِرُّونَ لِلۡأَذۡقَانِ يَبۡكُونَ وَيَزِيدُهُمۡ خُشُوعًا۩ ١٠٩
ಅವರು ರೋಧಿಸುತ್ತಾ ಮುಖವನ್ನು ನೆಲಕ್ಕಿಟ್ಟು ಅಡ್ಡಬೀಳುತ್ತಾರೆ. ಮತ್ತು ಈ ಕುರ್‌ಆನ್ ಅವರ ಭಯ, ಭಕ್ತಿಯನ್ನು ಹೆಚ್ಚಿಸುತ್ತದೆ.
17:110
قُلِ ٱدۡعُواْ ٱللَّهَ أَوِ ٱدۡعُواْ ٱلرَّحۡمَٰنَۖ أَيًّا مَّا تَدۡعُواْ فَلَهُ ٱلۡأَسۡمَآءُ ٱلۡحُسۡنَىٰۚ وَلَا تَجۡهَرۡ بِصَلَاتِكَ وَلَا تُخَافِتۡ بِهَا وَٱبۡتَغِ بَيۡنَ ذَٰلِكَ سَبِيلًا ١١٠
ಹೇಳಿರಿ: ನೀವು ಅಲ್ಲಾಹನನ್ನು ಅಲ್ಲಾಹನೆಂದು ಕರೆಯಿರಿ ಇಲ್ಲವೇ ರಹ್ಮಾನ್ ಎಂದು ಕರೆಯಿರಿ. ನೀವು ಯಾವ ನಾಮದಿಂದ ಕರೆದರು ಅವನಿಗೇ ಅತ್ಯುತ್ತಮ ನಾಮಗಳಿವೆ. ಮತ್ತು ನೀವು ನಿಮ್ಮ ನಮಾಝನ್ನು ಉಚ್ಛಸ್ವರದಲ್ಲಾಗಲಿ ಅಥವಾ ಮೆಲು ಧ್ವನಿಯಲ್ಲಾಗಲಿ ನಿರ್ವಹಿಸದಿರಿ. ಬದಲಿಗೆ ಅವುಗಳ ಮಧ್ಯಮ ಮಾರ್ಗವನ್ನು ಅರಸಿರಿ.
17:111
وَقُلِ ٱلۡحَمۡدُ لِلَّهِ ٱلَّذِي لَمۡ يَتَّخِذۡ وَلَدًا وَلَمۡ يَكُن لَّهُۥ شَرِيكٌ فِي ٱلۡمُلۡكِ وَلَمۡ يَكُن لَّهُۥ وَلِيٌّ مِّنَ ٱلذُّلِّۖ وَكَبِّرۡهُ تَكۡبِيرَۢا ١١١
ಹೇಳಿರಿ: ಸರ್ವಸ್ತುತಿಯು ಅಲ್ಲಾಹನಿಗೇ ಮಿಸಲು. ಅವನು ಯಾರನ್ನು ಪುತ್ರನನ್ನಾಗಿ ಮಾಡಿಕೊಂಡಿಲ್ಲ. ಅವನ ಅಧಿಪತ್ಯದಲ್ಲಿ ಯಾರೂ ಸಹಭಾಗಿ ಇಲ್ಲ ತನ್ನನ್ನು ದೌರ್ಬಲ್ಯದಿಂದ ರಕ್ಷಿಸುವ ಸಹಾಯಕರ ಅಗತ್ಯವೂ ಅವನಿಗಿಲ್ಲ. ಆದ್ದರಿಂದ ನೀವು ಸಂಪೂರ್ಣವಾಗಿ ಅವನ ಹಿರಿಮೆಯನ್ನು ಕೊಂಡಾಡಿರಿ.
ಸೂರಾ ಅಲ್-ಕಹ್ಫ್

18:1
ٱلۡحَمۡدُ لِلَّهِ ٱلَّذِيٓ أَنزَلَ عَلَىٰ عَبۡدِهِ ٱلۡكِتَٰبَ وَلَمۡ يَجۡعَل لَّهُۥ عِوَجَاۜ ١
ಸರ್ವಸ್ತುತಿಯು ಅಲ್ಲಾಹನಿಗೆ ಮೀಸಲು. ಅವನು ತನ್ನ ದಾಸನ ಮೇಲೆ ಗ್ರಂಥವನ್ನು (ಕುರ್‌ಆನನ್ನು) ಅವತೀರ್ಣಗೊಳಿಸಿದನು ಮತ್ತು ಅದರಲ್ಲಿ ಯಾವ ವಕ್ರತೆಯನ್ನೂ ಇರಿಸಿಲ್ಲ.
18:2
قَيِّمًا لِّيُنذِرَ بَأۡسًا شَدِيدًا مِّن لَّدُنۡهُ وَيُبَشِّرَ ٱلۡمُؤۡمِنِينَ ٱلَّذِينَ يَعۡمَلُونَ ٱلصَّٰلِحَٰتِ أَنَّ لَهُمۡ أَجۡرًا حَسَنًا ٢
ಋಜುವಾದ ಗ್ರಂಥವಿದು; ಅವನ ಕಡೆಯಿಂದ ಕಠಿಣ ಯಾತನೆಯ ಕುರಿತು ಎಚ್ಚರಿಸಲಿಕ್ಕಾಗಿ ಹಾಗೂ ಸತ್ಯ ವಿಶ್ವಾಸವನ್ನಿರಿಸಿ, ಸತ್ಕರ್ಮಗಳನ್ನೆಸಗುವವರಿಗೆ ಉತ್ತಮವಾದ ಪ್ರತಿಫಲವಿದೆಯೆಂದು ಸುವಾರ್ತೆ ನೀಡಲಿಕ್ಕಾಗಿದೆ.
18:4
وَيُنذِرَ ٱلَّذِينَ قَالُواْ ٱتَّخَذَ ٱللَّهُ وَلَدًا ٤
ಮತ್ತು ಇದು ಅಲ್ಲಾಹನು ಸಂತಾನವನ್ನು ಹೊಂದಿದ್ದಾನೆAದು ಹೇಳುವವರಿಗೂ ಎಚ್ಚರಿಕೆ ನೀಡಲಿಕ್ಕಾಗಿದೆ.
العربيةEnglishBahasa IndonesiaTürkçeРусскийفارسیFrançaisاردوবাংলাDeutschEspañol中文हिन्दीPortuguêsItalianoภาษาไทยPolskiNederlandsShqipKiswahiliO'zbekதமிழ்MelayuBosanskiSoomaaliAzərbaycanکوردی한국어日本語SvenskaDanskNorskپښتوമലയാളംසිංහලTamazightHausaአማርኛБългарскиТоҷикӣҚазақшаFilipinoسنڌيYorùbáFulfuldeТатарчаئۇيغۇرچەКыргызчаਪੰਜਾਬੀJawaతెలుగుမြန်မာગુજરાતીOromoमराठीTiếng ViệtMalagasyНохчийнWolofދިވެހިಕನ್ನಡУкраїнськаΕλληνικάქართულიខ្មែរدریQafar afMaranaoनेपाली
ಪವಿತ್ರ ಕುರಾನ್
Tuesday, August 25, 2026
Don't forget us in your sincere prayers







