ಸೂರಾ ಅಲ್-ಗಾಶಿಯಾ ಅರೇಬಿಕ್ ಮತ್ತು ಕನ್ನಡ

ಸೂರಾ ಅಲ್-ಗಾಶಿಯಾ ಸಂಪೂರ್ಣ ಕನ್ನಡ ಅನುವಾದ, ಉಚ್ಚಾರಣೆ ಮತ್ತು ಆಡಿಯೋ ಪಠಣದೊಂದಿಗೆ ಓದಿ. ಪ್ರತಿ ಆಯತ್‌ನ ಅರ್ಥ. (26 ಆಯತ್ — مكية). ಅಲ್-ಗಾಶಿಯಾ ಆಲಿಸಿ, ಅಲ್-ಗಾಶಿಯಾ ಅನುವಾದ, ಅಲ್-ಗಾಶಿಯಾ mp3, ಅಲ್-ಗಾಶಿಯಾ pdf.

ಸೂರಾ ಅಲ್-ಗಾಶಿಯಾ ಓದಿ ಮತ್ತು ಆಲಿಸಿ

🎧 ಆಯತ್
M Mishary Rashid Alafasy
M Mahmoud Khalil Al-Husary
A Abdurrahman As-Sudais
M Mohamed Siddiq Al-Minshawi
A Abdul Basit Abdul Samad
A Ali Al-Hudhaify
A Ahmed ibn Ali al-Ajamy
A Abu Bakr Ash-Shaatree
M Muhammad Ayyoub
A Abdullah Basfar
A Abdullah Al-Juhani
M Maher Al Muaiqly
x1
هَلْ أَتَاكَ حَدِيثُ الْغَاشِيَةِ ۝١
📖 ಅನುವಾದ ಆಯತ್ 1
ಆವರಿಸಿಕೊಳ್ಳುವಂತಹ ಪ್ರಳಯ ದಿನದ ವೃತ್ತಾಂತವು ನಿಮಗೆ ತಲುಪಿದೆಯೇ?
وُجُوهٌ يَوْمَئِذٍ خَاشِعَةٌ ۝٢
📖 ಅನುವಾದ ಆಯತ್ 2
ಆ ದಿನ ಕೆಲವು ಮುಖಗಳು ಅಪಮಾನದ ನಿಮಿತ್ತ ಬಾಗಿರುವುವು.
عَامِلَةٌ نَّاصِبَةٌ ۝٣
📖 ಅನುವಾದ ಆಯತ್ 3
(ಮತ್ತು) ಪರಿಶ್ರಮ ಪಟ್ಟವು ಬಳಲಿರುವುವು.
تَصْلَىٰ نَارًا حَامِيَةً ۝٤
📖 ಅನುವಾದ ಆಯತ್ 4
ಅವರು ಧಗಧಗಿಸುವ ಅಗ್ನಿಯನ್ನು ಪ್ರವೇಶಿಸುವರು.
تُسْقَىٰ مِنْ عَيْنٍ آنِيَةٍ ۝٥
📖 ಅನುವಾದ ಆಯತ್ 5
ಕುದಿಯುತ್ತಿರುವ ಚಿಲುಮೆಯ ನೀರನ್ನು ಅವರಿಗೆ ಕುಡಿಸಲಾಗುವುದು.
لَّيْسَ لَهُمْ طَعَامٌ إِلَّا مِن ضَرِيعٍ ۝٦
📖 ಅನುವಾದ ಆಯತ್ 6
ಅವರಿಗೆ ಮುಳ್ಳು ತುಂಬಿದ ಗಿಡಗಳ ಹೊರತು ಬೇರಾವ ಆಹಾರವಿರದು.
لَّا يُسْمِنُ وَلَا يُغْنِي مِن جُوعٍ ۝٧
📖 ಅನುವಾದ ಆಯತ್ 7
ಅದು (ಶರೀರಕ್ಕೆ) ಪೋಷಣೆಯನ್ನು ನೀಡದು ಮತ್ತು ಹಸಿವನ್ನೂ ನೀಗಿಸದು.
وُجُوهٌ يَوْمَئِذٍ نَّاعِمَةٌ ۝٨
📖 ಅನುವಾದ ಆಯತ್ 8
ಹಲವು ಮುಖಗಳು ಅಂದು ರ‍್ಷಭರಿತವಾಗಿರುವುದು.
لِّسَعْيِهَا رَاضِيَةٌ ۝٩
📖 ಅನುವಾದ ಆಯತ್ 9
ಅವುಗಳು ತಮ್ಮ (ಭೂಲೋಕದ) ಪರಿಶ್ರಮದ ಕುರಿತು ಸಂತೃಪ್ತವಾಗಿರುವುವು.
فِي جَنَّةٍ عَالِيَةٍ ۝١٠
📖 ಅನುವಾದ ಆಯತ್ 10
ಉನ್ನತವಾದ ಸ್ರ‍್ಗಗಳಲ್ಲಿರುವುವು.
لَّا تَسْمَعُ فِيهَا لَاغِيَةً ۝١١
📖 ಅನುವಾದ ಆಯತ್ 11
ಅದರಲ್ಲಿ ಯಾವ ವ್ರ‍್ಥ ಮಾತನ್ನು ಅವರು ಕೇಳಲಾರರು.
فِيهَا عَيْنٌ جَارِيَةٌ ۝١٢
📖 ಅನುವಾದ ಆಯತ್ 12
ಹರಿಯುತ್ತಿರುವ ಚಿಲುಮೆಯಿರುವುದು.
فِيهَا سُرُرٌ مَّرْفُوعَةٌ ۝١٣
📖 ಅನುವಾದ ಆಯತ್ 13
ಉನ್ನತವಾದ ಮಂಚಗಳಿರುವುವು.
وَأَكْوَابٌ مَّوْضُوعَةٌ ۝١٤
📖 ಅನುವಾದ ಆಯತ್ 14
ಪಾನಪಾತ್ರೆಗಳನ್ನು ಸುಸಜ್ಜಿತ ಗೊಳಿಸಲಾಗಿರುವುದು.
وَنَمَارِقُ مَصْفُوفَةٌ ۝١٥
📖 ಅನುವಾದ ಆಯತ್ 15
ಸಾಲಾಗಿಡಲಾದ ಒರಗು ದಿಂಬುಗಳಿರುವುವು.
وَزَرَابِيُّ مَبْثُوثَةٌ ۝١٦
📖 ಅನುವಾದ ಆಯತ್ 16
ಮತ್ತು ಹಾಸಲಾದ ರತ್ನಗಂಬಳಿಗಳಿರುವುವು.
أَفَلَا يَنظُرُونَ إِلَى الْإِبِلِ كَيْفَ خُلِقَتْ ۝١٧
📖 ಅನುವಾದ ಆಯತ್ 17
ಏನು ಅವರು ಒಂಟೆಯೆಡೆಗೆ ನೋಡುವುದಿಲ್ಲವೇ, ಅದು ಹೇಗೆ ವಿಚಿತ್ರವಾಗಿ ಸೃಷ್ಟಿಸಲಾಗಿದೆಯೆಂದು ?
وَإِلَى السَّمَاءِ كَيْفَ رُفِعَتْ ۝١٨
📖 ಅನುವಾದ ಆಯತ್ 18
ಮತ್ತು ಆಕಾಶದೆಡೆಗೆ, ಅದು ಹೇಗೆ ಎತ್ತರಿಸಲಾಗಿದೆಯೆಂದು ?
وَإِلَى الْجِبَالِ كَيْفَ نُصِبَتْ ۝١٩
📖 ಅನುವಾದ ಆಯತ್ 19
ಮತ್ತು ರ‍್ವತಗಳೆಡೆಗೆ ಅವುಗಳನ್ನು ಹೇಗೆ ನಾಟಲಾಗಿದೆಯೆಂದು ?
وَإِلَى الْأَرْضِ كَيْفَ سُطِحَتْ ۝٢٠
📖 ಅನುವಾದ ಆಯತ್ 20
ಭೂಮಿಯೆಡೆಗೆ ಅದು ಹೇಗೆ ಹಾಸಲಾಗಿದೆಯೆಂದು ?
فَذَكِّرْ إِنَّمَا أَنتَ مُذَكِّرٌ ۝٢١
📖 ಅನುವಾದ ಆಯತ್ 21
ಆದ್ದರಿಂದ ನೀವು ಉಪದೇಶ ನೀಡಿರಿ. ನೀವು ಉಪದೇಶ ನೀಡುವವರು ಮಾತ್ರವಾಗಿರುವಿರಿ
لَّسْتَ عَلَيْهِم بِمُصَيْطِرٍ ۝٢٢
📖 ಅನುವಾದ ಆಯತ್ 22
ನೀವು ಅವರ ಮೇಲೆ ಬಲ ಪ್ರಯೋಗಿಸುವವರಲ್ಲ.
إِلَّا مَن تَوَلَّىٰ وَكَفَرَ ۝٢٣
📖 ಅನುವಾದ ಆಯತ್ 23
ಆದರೆ ಯಾರು ವಿಮುಖನಾಗುತ್ತಾನೋ ಮತ್ತು ಸತ್ಯನಿಷೇಧ ಕೈಗೊಳ್ಳುತ್ತಾನೋ.
فَيُعَذِّبُهُ اللَّهُ الْعَذَابَ الْأَكْبَرَ ۝٢٤
📖 ಅನುವಾದ ಆಯತ್ 24
ಅವನಿಗೆ ಅಲ್ಲಾಹನು ಅತಿದೊಡ್ಡ ಶಿಕ್ಷೆಯನ್ನು ನೀಡುವನು.
إِنَّ إِلَيْنَا إِيَابَهُمْ ۝٢٥
📖 ಅನುವಾದ ಆಯತ್ 25
ನಿಸ್ಸಂಶಯವಾಗಿಯೂ ನಮ್ಮೆಡೆಗೇ ಅವರ ಮರಳುವಿಕೆಯಿರುವುದು.
ثُمَّ إِنَّ عَلَيْنَا حِسَابَهُم ۝٢٦
📖 ಅನುವಾದ ಆಯತ್ 26
ಬಳಿಕ ನಿಸ್ಸಂಶಯವಾಗಿಯೂ ಅವರ ವಿಚಾರಣೆಯ ಹೊಣೆ ನಮ್ಮ ಮೇಲೆ ಇದೆ.
← 87 ಅಲ್-ಗಾಶಿಯಾ (88/114) 89 →
ಓದಿ ಸೂರಾ ಅಲ್-ಗಾಶಿಯಾ ಕನ್ನಡ ಅನುವಾದ – ಪಠಣ ಮತ್ತು ಆಡಿಯೋ

88الغاشية Al-Ghashiyah 📚 26 ಆಯತ್ مكية

ಆಯತ್‌ವಾರು – ಸೂರಾ ಅಲ್-ಗಾಶಿಯಾ — 26 ಆಯತ್




ಪವಿತ್ರ ಕುರಾನ್


Monday, September 7, 2026

Don't forget us in your sincere prayers