ಸೂರಾ ಅಲ್-ಆಲಾ ಅರೇಬಿಕ್ ಮತ್ತು ಕನ್ನಡ

ಸೂರಾ ಅಲ್-ಆಲಾ ಸಂಪೂರ್ಣ ಕನ್ನಡ ಅನುವಾದ, ಉಚ್ಚಾರಣೆ ಮತ್ತು ಆಡಿಯೋ ಪಠಣದೊಂದಿಗೆ ಓದಿ. ಪ್ರತಿ ಆಯತ್‌ನ ಅರ್ಥ. (19 ಆಯತ್ — مكية). ಅಲ್-ಆಲಾ ಆಲಿಸಿ, ಅಲ್-ಆಲಾ ಅನುವಾದ, ಅಲ್-ಆಲಾ mp3, ಅಲ್-ಆಲಾ pdf.

ಸೂರಾ ಅಲ್-ಆಲಾ ಓದಿ ಮತ್ತು ಆಲಿಸಿ

🎧 ಆಯತ್
M Mishary Rashid Alafasy
M Mahmoud Khalil Al-Husary
A Abdurrahman As-Sudais
M Mohamed Siddiq Al-Minshawi
A Abdul Basit Abdul Samad
A Ali Al-Hudhaify
A Ahmed ibn Ali al-Ajamy
A Abu Bakr Ash-Shaatree
M Muhammad Ayyoub
A Abdullah Basfar
A Abdullah Al-Juhani
M Maher Al Muaiqly
x1
سَبِّحِ اسْمَ رَبِّكَ الْأَعْلَى ۝١
📖 ಅನುವಾದ ಆಯತ್ 1
ನೀವು ತಮ್ಮ ಅತ್ತುö್ಯನ್ನತನಾದ ಪ್ರಭುವಿನ ನಾಮದ ಪಾವಿತ್ರö್ಯವನ್ನು ಸ್ತುತಿಸಿರಿ.
الَّذِي خَلَقَ فَسَوَّىٰ ۝٢
📖 ಅನುವಾದ ಆಯತ್ 2
ಅವನು (ಸಕಲವನ್ನು) ಸೃಷ್ಟಿಸಿದನು ಮತ್ತು (ಸಂತುಲಿತಗೊಳಿಸಿದನು.
وَالَّذِي قَدَّرَ فَهَدَىٰ ۝٣
📖 ಅನುವಾದ ಆಯತ್ 3
ಅವನು ವಿಧಿಯನ್ನು ನಿಶ್ಚಯಿಸಿದನು ಅನಂತರ (ಅವುಗಳಿಗೆ ತಕ್ಕ) ಮರ‍್ಗರ‍್ಶನ ಮಾಡಿದನು.
وَالَّذِي أَخْرَجَ الْمَرْعَىٰ ۝٤
📖 ಅನುವಾದ ಆಯತ್ 4
ಅವನೇ ಭೂಮಿಯಿಂದ ಮೇವನ್ನು ಹೊರತಂದನು.
فَجَعَلَهُ غُثَاءً أَحْوَىٰ ۝٥
📖 ಅನುವಾದ ಆಯತ್ 5
ಬಳಿಕ ಅದನ್ನು ಕರಿಯ ಕಸಕಡ್ಡಿಯನ್ನಾಗಿ ಮಾಡಿದನು.
سَنُقْرِئُكَ فَلَا تَنسَىٰ ۝٦
📖 ಅನುವಾದ ಆಯತ್ 6
ಓ ಪೈಗಂಬರರೇ ನಾವು ನಿಮಗೆ (ಕುರ್ಆನನ್ನು) ಓದಿಕೊಡುವೆವು. ಬಳಿಕ ನೀವು ಮರೆಯಲಾರಿರಿ.
إِلَّا مَا شَاءَ اللَّهُ ۚ إِنَّهُ يَعْلَمُ الْجَهْرَ وَمَا يَخْفَىٰ ۝٧
📖 ಅನುವಾದ ಆಯತ್ 7
ಆದರೆ ಅಲ್ಲಾಹನು ಇಚ್ಛಿಸುವುದರ ಹೊರತು. ಅವನು ಗೋಚರ ಮತ್ತು ಅಗೋಚರವನ್ನು ಬಲ್ಲವನು.
وَنُيَسِّرُكَ لِلْيُسْرَىٰ ۝٨
📖 ಅನುವಾದ ಆಯತ್ 8
ನಾವು ನಿಮಗೆ ಸುಲಭ ಮರ‍್ಗವನ್ನು ಸುಗಮಗೊಳಿಸುವೆವು.
فَذَكِّرْ إِن نَّفَعَتِ الذِّكْرَىٰ ۝٩
📖 ಅನುವಾದ ಆಯತ್ 9
ಆದ್ದರಿಂದ ಉಪದೇಶವು ಪ್ರಯೋಜನಕಾರಿ ಆಗುವುದಾದರೆ ನೀವು ಉಪದೇಶ ನೀಡಿರಿ.
سَيَذَّكَّرُ مَن يَخْشَىٰ ۝١٠
📖 ಅನುವಾದ ಆಯತ್ 10
ಭಯಭಕ್ತಿಯುಳ್ಳವನು ಉಪದೇಶವನ್ನು ಸ್ವೀಕರಿಸುವನು.
وَيَتَجَنَّبُهَا الْأَشْقَى ۝١١
📖 ಅನುವಾದ ಆಯತ್ 11
ಹತಭಾಗ್ಯನು ಅದರಿಂದ ದೂರ ಉಳಿಯುವನು.
الَّذِي يَصْلَى النَّارَ الْكُبْرَىٰ ۝١٢
📖 ಅನುವಾದ ಆಯತ್ 12
ಅವನು ಮಹಾ ಅಗ್ನಿಯಲ್ಲಿ ಪ್ರವೇಶಿಸುವನು.
ثُمَّ لَا يَمُوتُ فِيهَا وَلَا يَحْيَىٰ ۝١٣
📖 ಅನುವಾದ ಆಯತ್ 13
ಅನಂತರ ಅವನು ಅಲ್ಲಿ ಸಾಯುವುದೂ ಇಲ್ಲ, ಬದುಕುವುದೂ ಇಲ್ಲ,
قَدْ أَفْلَحَ مَن تَزَكَّىٰ ۝١٤
📖 ಅನುವಾದ ಆಯತ್ 14
ನಿಸ್ಸಂಶಯವಾಗಿಯೂ (ಸತ್ಯ ನಿಷೇಧದಿಂದ) ಪರಿಶುದ್ಧನಾದವನು ಯಶಸ್ಸುಗಳಿಸಿದನು.
وَذَكَرَ اسْمَ رَبِّهِ فَصَلَّىٰ ۝١٥
📖 ಅನುವಾದ ಆಯತ್ 15
ಅವನು ತನ್ನ ಪ್ರಭುವಿನ ನಾಮವನ್ನು ಸ್ಮರಿಸಿದನು ಮತ್ತು ನಮಾಜ್ ನರ‍್ವಹಿಸಿದನು.
بَلْ تُؤْثِرُونَ الْحَيَاةَ الدُّنْيَا ۝١٦
📖 ಅನುವಾದ ಆಯತ್ 16
ಆದರೆ ನೀವು ಐಹಿಕ ಜೀವನಕ್ಕೆಆದ್ಯತೆ ನೀಡುತ್ತೀರಿ.
وَالْآخِرَةُ خَيْرٌ وَأَبْقَىٰ ۝١٧
📖 ಅನುವಾದ ಆಯತ್ 17
ಆದರೆ ಪರಲೋಕವು ಅತ್ತುö್ಯತ್ತಮವೂ, ಶಾಶ್ವತವೂ ಆಗಿದೆ.
إِنَّ هَٰذَا لَفِي الصُّحُفِ الْأُولَىٰ ۝١٨
📖 ಅನುವಾದ ಆಯತ್ 18
ವಾಸ್ತವದಲ್ಲಿ ಈ ವಿಚಾರಗಳು ಪರ‍್ವ ಗ್ರಂಥಗಳಲ್ಲೂ ಇದ್ದವು.
صُحُفِ إِبْرَاهِيمَ وَمُوسَىٰ ۝١٩
📖 ಅನುವಾದ ಆಯತ್ 19
ಅಂದರೆ ಇಬ್ರಾಹೀಮ್ ಮತ್ತು ಮೂಸಾರ ಗ್ರಂಥಗಳಲ್ಲಿ.
← 86 ಅಲ್-ಆಲಾ (87/114) 88 →
ಓದಿ ಸೂರಾ ಅಲ್-ಆಲಾ ಕನ್ನಡ ಅನುವಾದ – ಪಠಣ ಮತ್ತು ಆಡಿಯೋ

87الأعلى Al-A'la 📚 19 ಆಯತ್ مكية

ಆಯತ್‌ವಾರು – ಸೂರಾ ಅಲ್-ಆಲಾ — 19 ಆಯತ್




ಪವಿತ್ರ ಕುರಾನ್


Tuesday, September 8, 2026

Don't forget us in your sincere prayers