ಸೂರಾ ಅಲ್-ಮಾಇದಾ ಅರೇಬಿಕ್ ಮತ್ತು ಕನ್ನಡ
ಸೂರಾ ಅಲ್-ಮಾಇದಾ ಸಂಪೂರ್ಣ ಕನ್ನಡ ಅನುವಾದ, ಉಚ್ಚಾರಣೆ ಮತ್ತು ಆಡಿಯೋ ಪಠಣದೊಂದಿಗೆ ಓದಿ. ಪ್ರತಿ ಆಯತ್ನ ಅರ್ಥ. (120 ಆಯತ್ — مدنية). ಅಲ್-ಮಾಇದಾ ಆಲಿಸಿ, ಅಲ್-ಮಾಇದಾ ಅನುವಾದ, ಅಲ್-ಮಾಇದಾ mp3, ಅಲ್-ಮಾಇದಾ pdf.ಸೂರಾ ಅಲ್-ಮಾಇದಾ ಓದಿ ಮತ್ತು ಆಲಿಸಿ
🎧 ಆಯತ್
M
Mishary Rashid Alafasy
✓
Mishary Rashid Alafasy
✓
M
Mahmoud Khalil Al-Husary
✓
Mahmoud Khalil Al-Husary
✓
A
Abdurrahman As-Sudais
✓
Abdurrahman As-Sudais
✓
M
Mohamed Siddiq Al-Minshawi
✓
Mohamed Siddiq Al-Minshawi
✓
A
Abdul Basit Abdul Samad
✓
Abdul Basit Abdul Samad
✓
A
Ali Al-Hudhaify
✓
Ali Al-Hudhaify
✓
A
Ahmed ibn Ali al-Ajamy
✓
Ahmed ibn Ali al-Ajamy
✓
A
Abu Bakr Ash-Shaatree
✓
Abu Bakr Ash-Shaatree
✓
M
Muhammad Ayyoub
✓
Muhammad Ayyoub
✓
A
Abdullah Basfar
✓
Abdullah Basfar
✓
A
Abdullah Al-Juhani
✓
Abdullah Al-Juhani
✓
M
Maher Al Muaiqly
✓
Maher Al Muaiqly
✓
—
x1
يَا أَيُّهَا الَّذِينَ آمَنُوا أَوْفُوا بِالْعُقُودِ ۚ أُحِلَّتْ لَكُم بَهِيمَةُ الْأَنْعَامِ إِلَّا مَا يُتْلَىٰ عَلَيْكُمْ غَيْرَ مُحِلِّي الصَّيْدِ وَأَنتُمْ حُرُمٌ ۗ إِنَّ اللَّهَ يَحْكُمُ مَا يُرِيدُ ١
📖 ಅನುವಾದ
ಆಯತ್ 1
ಓ ಸತ್ಯವಿಶ್ವಾಸಿಗಳೇ, ನೀವು ಕರಾರುಗಳನ್ನು ಈಡೇರಿಸಿರಿ. ಪಶುಗಳನ್ನು ನಿಮಗಾಗಿ ಧರ್ಮಸಮ್ಮತಗೊಳಿಸಲಾಗಿದೆ. ಆದರೆ ಮುಂದೆ ನಿಮಗೆ ಓದಿ ಹೇಳಲಾಗುವ ಪ್ರಾಣಿಗಳ ಹೊರತು. ಆದರೆ ನೀವು ಇಹ್ರಾಮ್ನ ಸ್ಥಿತಿಯಲ್ಲಿ ಬೇಟೆಯಾಡಲು ನಿಮಗೆ ಅನುಮತಿಯಿಲ್ಲ. ಖಂಡಿತವಾಗಿಯು ಅಲ್ಲಾಹನು ತಾನಿಚ್ಛಿಸುವುದನ್ನು ವಿಧಿಸುತ್ತಾನೆ.
يَا أَيُّهَا الَّذِينَ آمَنُوا لَا تُحِلُّوا شَعَائِرَ اللَّهِ وَلَا الشَّهْرَ الْحَرَامَ وَلَا الْهَدْيَ وَلَا الْقَلَائِدَ وَلَا آمِّينَ الْبَيْتَ الْحَرَامَ يَبْتَغُونَ فَضْلًا مِّن رَّبِّهِمْ وَرِضْوَانًا ۚ وَإِذَا حَلَلْتُمْ فَاصْطَادُوا ۚ وَلَا يَجْرِمَنَّكُمْ شَنَآنُ قَوْمٍ أَن صَدُّوكُمْ عَنِ الْمَسْجِدِ الْحَرَامِ أَن تَعْتَدُوا ۘ وَتَعَاوَنُوا عَلَى الْبِرِّ وَالتَّقْوَىٰ ۖ وَلَا تَعَاوَنُوا عَلَى الْإِثْمِ وَالْعُدْوَانِ ۚ وَاتَّقُوا اللَّهَ ۖ إِنَّ اللَّهَ شَدِيدُ الْعِقَابِ ٢
📖 ಅನುವಾದ
ಆಯತ್ 2
ಓ ಸತ್ಯವಿಶ್ವಾಸಿಗಳೇ, ಅಲ್ಲಾಹನ ಧರ್ಮ ಲಾಂಛನಗಳನ್ನು ಅಪಮಾನಿಸÀದಿರಿ. ಪವಿತ್ರವಾದ ತಿಂಗಳನ್ನು ಹರಮ್ನಲ್ಲಿ ಬಲಿಕೊಡಲು ಕೊಂಡೊಯ್ಯಲಾಗುವ ಮೃಗಗಳನ್ನು, ಹಾಗೂ ಬಲಿ ಸೂಚಕವಾಗಿ ಕೊರಳಪಟ್ಟಿಯಿರುವ ಮೃಗಗಳನ್ನು ಮತ್ತು ತಮ್ಮ ಪ್ರಭುವಿನ ಅನುಗ್ರಹ ಹಾಗೂ ಸಂತೃಪ್ತಿಯನ್ನು ಅರಸುತ್ತಾ ಪವಿತ್ರ ಭವನದೆಡೆಗೆ (ಹಜ್ಜ್ಗಾಗಿ) ಹೋಗುವವರನ್ನು ಅಪಮಾನಿಸÀದಿರಿ. ಆದರೆ ಇಹ್ರಾಮನ್ನು ಬಿಚ್ಚಿದ ಬಳಿಕ ನೀವು ಬೇಟೆಯಾಡಬಹುದಾಗಿದೆ. ಒಂದು ಜನತೆಯ ನಿಮ್ಮೊಂದಿಗಿನ ವೈರತ್ವವು ಅವರು ನಿಮ್ಮನ್ನು ಮಸ್ಜಿದುಲ್ ಹರಾಮ್ನಿಂದ ತಡೆದರು. ಎಂಬ ವಿಚಾರವು ಅವರೊಡನೆ ಅನ್ಯಾಯ ಮಾಡಲು ನಿಮ್ಮನ್ನು ಪ್ರೇರೇಪಿಸದಿರಲಿ. ಪುಣ್ಯ ಮತ್ತು ಧರ್ಮ ನಿಷ್ಠೆಯ ವಿಚಾರದಲ್ಲಿ ನೀವು ಪರಸ್ಪರ ಸಹಾಯ ಮಾಡುತ್ತಲಿರಿ. ಪಾಪ ಮತ್ತು ಅನ್ಯಾಯಗಳ ವಿಚಾರದಲ್ಲಿ ನೀವು ಪರಸ್ಪರ ಸಹಾಯ ಮಾಡಬೇಡಿರಿ. ನೀವು ಅಲ್ಲಾಹನನ್ನು ಭಯಪಡಿರಿ. ಖಂಡಿತವಾಗಿಯು ಅಲ್ಲಾಹನು ಕಠಿಣವಾಗಿ ಶಿಕ್ಷಿಸುವವನಾಗಿದ್ದಾನೆ.
حُرِّمَتْ عَلَيْكُمُ الْمَيْتَةُ وَالدَّمُ وَلَحْمُ الْخِنزِيرِ وَمَا أُهِلَّ لِغَيْرِ اللَّهِ بِهِ وَالْمُنْخَنِقَةُ وَالْمَوْقُوذَةُ وَالْمُتَرَدِّيَةُ وَالنَّطِيحَةُ وَمَا أَكَلَ السَّبُعُ إِلَّا مَا ذَكَّيْتُمْ وَمَا ذُبِحَ عَلَى النُّصُبِ وَأَن تَسْتَقْسِمُوا بِالْأَزْلَامِ ۚ ذَٰلِكُمْ فِسْقٌ ۗ الْيَوْمَ يَئِسَ الَّذِينَ كَفَرُوا مِن دِينِكُمْ فَلَا تَخْشَوْهُمْ وَاخْشَوْنِ ۚ الْيَوْمَ أَكْمَلْتُ لَكُمْ دِينَكُمْ وَأَتْمَمْتُ عَلَيْكُمْ نِعْمَتِي وَرَضِيتُ لَكُمُ الْإِسْلَامَ دِينًا ۚ فَمَنِ اضْطُرَّ فِي مَخْمَصَةٍ غَيْرَ مُتَجَانِفٍ لِّإِثْمٍ ۙ فَإِنَّ اللَّهَ غَفُورٌ رَّحِيمٌ ٣
📖 ಅನುವಾದ
ಆಯತ್ 3
ಶವ, ರಕ್ತ, ಹಂದಿ ಮಾಂಸ, ಅಲ್ಲಾಹೇತರರ ಹೆಸರಲ್ಲಿ ಕೊಯ್ಯಲ್ಪಟ್ಟದ್ದು, ಕೊರಳು ಬಿಗಿದು ಸತ್ತದ್ದು, ಏಟು ಬಿದ್ದು ಸತ್ತದ್ದು, ಎತ್ತರದಿಂದ ಬಿದ್ದು ಸತ್ತದ್ದು, ಯಾವುದಾದರೂ ಪ್ರಾಣಿಯ ಕೊಂಬು ಇರಿಯಲ್ಪಟ್ಟು ಸತ್ತದ್ದು, ವನ್ಯಮೃಗಗಳು ಹರಿದು ತಿಂದದ್ದು ನಿಮ್ಮ ಮೇಲೆ ನಿಷಿದ್ಧಗೊಳಿಸಲಾಗಿದೆ. ಆದರೆ ನೀವು ಅದು ಸಾಯುವುದಕ್ಕೆ ಮುಂಚೆ ಕೊಯ್ದು ಬಿಟ್ಟಿದ್ದರೆ ಬೇರೆ ವಿಚಾರ. ಮತ್ತು ಬಲಿಪೀಠಗಳಲ್ಲಿ ಕೊಯ್ಯಲಾದದ್ದು ಮತ್ತು ಬಾಣಗಳನ್ನು ಬಳಸಿ ಅದೃಷ್ಟ ಪರೀಕ್ಷಿಸುವುದನ್ನು ಸಹ ನಿಮ್ಮ ಮೇಲೆ ನಿಷಿದ್ಧಗೊಳಿಸಲಾಗಿದೆ. ಇವೆಲ್ಲವೂ ಅತಿ ನಿಕೃಷ್ಟ ಪಾಪಗಳಾಗಿವೆ. ಇಂದು ಸತ್ಯನಿಷೇಧಿಗಳು ನಿಮ್ಮ ಧÀರ್ಮದಿಂದ ನಿರಾಶರಾಗಿಬಿಟ್ಟಿದ್ದಾರೆ. ನೀವು ಅವರನ್ನು ಭಯಪಡಬೇಡಿರಿ. ನೀವು ನನ್ನನ್ನು ಭಯಪಡಿರಿ. ಇಂದು ನಾನು ನಿಮಗಾಗಿ ನಿಮ್ಮ ಧರ್ಮವನ್ನು ಪರಿಪೂರ್ಣಗೊಳಿಸಿದ್ದೇನೆ. ಮತ್ತು ನನ್ನ ಅನುಗ್ರಹವನ್ನು ನಿಮಗೆ ಸಂಪೂರ್ಣಗೊಳಿಸಿದ್ದೇನೆ. ಮತ್ತು ಇಸ್ಲಾಮ್ ಅನ್ನು ನಿಮ್ಮ ಧರ್ಮವನ್ನಾಗಿ ನಾನು ಅಂಗೀಕರಿಸಿದ್ದೇನೆ. ಇನ್ನು ಯಾವೊಬ್ಬ ವ್ಯಕ್ತಿಯು ಮನಃ ಪೂರ್ವಕವಾಗಿ ಪಾಪದೆಡೆಗೆ ವಾಲದೆ ಕಠಿಣ ಹಸಿವಿನ ನಿಮಿತ್ತ ನಿರ್ಭಂಧಿತನಾಗಿ ಅದನ್ನು ತಿಂದರೆ ಬೇರೆ ವಿಚಾರ. ಖಂಡಿತವಾಗಿಯು ಅಲ್ಲಾಹನು ಅತ್ಯಧಿಕ ಕ್ಷಮಿಸುವವನೂ ಕರುಣೆ ತೋರುವವನೂ ಆಗಿದ್ದಾನೆ.
يَسْأَلُونَكَ مَاذَا أُحِلَّ لَهُمْ ۖ قُلْ أُحِلَّ لَكُمُ الطَّيِّبَاتُ ۙ وَمَا عَلَّمْتُم مِّنَ الْجَوَارِحِ مُكَلِّبِينَ تُعَلِّمُونَهُنَّ مِمَّا عَلَّمَكُمُ اللَّهُ ۖ فَكُلُوا مِمَّا أَمْسَكْنَ عَلَيْكُمْ وَاذْكُرُوا اسْمَ اللَّهِ عَلَيْهِ ۖ وَاتَّقُوا اللَّهَ ۚ إِنَّ اللَّهَ سَرِيعُ الْحِسَابِ ٤
📖 ಅನುವಾದ
ಆಯತ್ 4
ತಮಗೆ ಏನೆಲ್ಲಾ ಧರ್ಮಸಮ್ಮತಗೊಳಿಸಲಾಗಿದೆಯೆಂದು ಅವರು ನಿಮ್ಮೊಂದಿಗೆ ಕೇಳುತ್ತಾರೆ. ಹೇಳಿರಿ: ಎಲ್ಲಾ ಶುದ್ಧ ವಸ್ತುಗಳನ್ನು ನಿಮಗೆ ಧರ್ಮಸಮ್ಮತಗೊಳಿಸಲಾಗಿದೆ. ಮತ್ತು ಅಲ್ಲಾಹನು ನಿಮಗೆ ಕಲಿಸಿದ ಜ್ಞಾನದ ಆಧಾರದಲ್ಲಿ ನೀವು ತರಬೇತಿ ಕೊಟ್ಟು ಪಳಗಿಸಿದ ಪ್ರಾಣಿಯು ನಿಮಗೋಸ್ಕರ ಭೇಟೆಯಾಡಿ ತಂದದ್ದನ್ನು ನೀವು ತಿನ್ನಿರಿ ಆದರೆ ಅದರ ಮೇಲೆ ಅಲ್ಲಾಹನ ನಾಮವನ್ನು ಉಚ್ಛರಿಸಿರಿ. ಮತ್ತು ನೀವು ಅಲ್ಲಾಹನನ್ನು ಭಯಪಡಿರಿ. ಖಂಡಿತವಾಗಿಯು ಅಲ್ಲಾಹನು ಅತಿಶೀಘ್ರವಾಗಿ ವಿಚಾರಣೆ ನಡೆಸುವವನಾಗಿದ್ದಾನೆ.
الْيَوْمَ أُحِلَّ لَكُمُ الطَّيِّبَاتُ ۖ وَطَعَامُ الَّذِينَ أُوتُوا الْكِتَابَ حِلٌّ لَّكُمْ وَطَعَامُكُمْ حِلٌّ لَّهُمْ ۖ وَالْمُحْصَنَاتُ مِنَ الْمُؤْمِنَاتِ وَالْمُحْصَنَاتُ مِنَ الَّذِينَ أُوتُوا الْكِتَابَ مِن قَبْلِكُمْ إِذَا آتَيْتُمُوهُنَّ أُجُورَهُنَّ مُحْصِنِينَ غَيْرَ مُسَافِحِينَ وَلَا مُتَّخِذِي أَخْدَانٍ ۗ وَمَن يَكْفُرْ بِالْإِيمَانِ فَقَدْ حَبِطَ عَمَلُهُ وَهُوَ فِي الْآخِرَةِ مِنَ الْخَاسِرِينَ ٥
📖 ಅನುವಾದ
ಆಯತ್ 5
ಇಂದು ನಿಮಗೆ ಸಕಲ ಶುದ್ಧ ವಸ್ತುಗಳನ್ನೂ ಧರ್ಮಸಮ್ಮತಗೊಳಿಸಲಾಗಿದೆ ಮತ್ತು ಗ್ರಂಥ ನೀಡಲ್ಪಟ್ಟವರು ಕೊಯ್ದ ಮಾಂಸಾಹಾರವು ನಿಮಗೆ ಧರ್ಮಸಮ್ಮತಗೊಳಿಸಲಾಗಿದೆ ನೀವು ಕೊಯ್ದ ಮಾಂಸಹಾರವು ಅವರಿಗೂ ಧರ್ಮಸಮ್ಮತವಾಗಿದೆ. ಸತ್ಯವಿಶ್ವಾಸಿನಿಗಳ ಪೈಕಿ ಸುಶೀಲೆಯರಾದ ಸ್ತಿçÃಯರು ಮತ್ತು ನಿಮಗಿಂತ ಮುಂಚೆ ಗ್ರಂಥವನ್ನು ನೀಡಲ್ಪಟ್ಟವರ ಪೈಕಿ ಸುಶೀಲೆಯರಾದ ಸ್ತಿçÃಯರು ನೀವು ಬಹಿರಂಗ ವೈಭಿಚಾರವಾಗಲೀ, ರಹಸ್ಯವಾಗಿ ಅನೈತಿಕ ಸಂಬAಧವಾಗಲೀ ಇಟ್ಟುಕೊಳ್ಳದೆ ಅವರನ್ನು ವಿವಾಹವಾಗಿ ಅವರಿಗೆ ವಧುಧನವನ್ನು ನೀಡುವುದಾದರೆ ನಿಮಗೆ ಧರ್ಮಸಮ್ಮತವಾಗಿದ್ದಾರೆ. ಇನ್ನು ಯಾರು ಸತ್ಯವಿಶ್ವಾಸವನ್ನು ನಿಷೇಧಿಸುತ್ತಾನೋ ಅವನ ಕರ್ಮಗಳು ನಿಷ್ಫಲವಾಗಿವೆ. ಪರಲೋಕದಲ್ಲಿ ಅವನು ನಷ್ಟ ಹೊಂದಿದವರೊAದಿಗೆ ಸೇರುವನು.
يَا أَيُّهَا الَّذِينَ آمَنُوا إِذَا قُمْتُمْ إِلَى الصَّلَاةِ فَاغْسِلُوا وُجُوهَكُمْ وَأَيْدِيَكُمْ إِلَى الْمَرَافِقِ وَامْسَحُوا بِرُءُوسِكُمْ وَأَرْجُلَكُمْ إِلَى الْكَعْبَيْنِ ۚ وَإِن كُنتُمْ جُنُبًا فَاطَّهَّرُوا ۚ وَإِن كُنتُم مَّرْضَىٰ أَوْ عَلَىٰ سَفَرٍ أَوْ جَاءَ أَحَدٌ مِّنكُم مِّنَ الْغَائِطِ أَوْ لَامَسْتُمُ النِّسَاءَ فَلَمْ تَجِدُوا مَاءً فَتَيَمَّمُوا صَعِيدًا طَيِّبًا فَامْسَحُوا بِوُجُوهِكُمْ وَأَيْدِيكُم مِّنْهُ ۚ مَا يُرِيدُ اللَّهُ لِيَجْعَلَ عَلَيْكُم مِّنْ حَرَجٍ وَلَٰكِن يُرِيدُ لِيُطَهِّرَكُمْ وَلِيُتِمَّ نِعْمَتَهُ عَلَيْكُمْ لَعَلَّكُمْ تَشْكُرُونَ ٦
📖 ಅನುವಾದ
ಆಯತ್ 6
ಓ ಸತ್ಯವಿಶ್ವಾಸಿಗಳೇ, ನೀವು ನಮಾಝ್ಗಾಗಿ ಸಿದ್ಧರಾದರೆ ನಿಮ್ಮ ಮುಖಗಳನ್ನು ಮತ್ತು ಮೊಣಕೈಗಳವರೆಗೆ ಕೈಗಳನ್ನು ತೊಳೆಯಿರಿ. ನಿಮ್ಮ ತಲೆಗಳನ್ನು (ಕೈಗಳನ್ನು ವದ್ದೆ ಮಾಡಿ) ಸವರಿರಿ ಮತ್ತು ಕಾಲುಗಳನ್ನು ಮಣಿಗಂಟುಗಳವರೆಗೆ ತೊಳೆಯಿರಿ. ನೀವು ಜನಾಬತ್ನ ಸ್ಥಿತಿಯಲ್ಲಿದ್ದರೆ ಸ್ನಾನ ಮಾಡಿರಿ. ಮತ್ತು ನೀವು ರೋಗಿಗಳೋ, ಪ್ರಯಾಣಿಕರೋ ಆಗಿದ್ದು, ನಿಮ್ಮಲ್ಲೊಬ್ಬನು ಮಲಮೂತ್ರ ವಿಸರ್ಜನೆ ಮಾಡಿ ಬಂದರೆ ಅಥವಾ ನೀವು ಸ್ತಿçÃಯರೊಂದಿಗೆ ಸಂಭೋಗ ಮಾಡಿದರೆ ಮತ್ತು ನಿಮಗೆ ನೀರು ದೊರಕದಿದ್ದರೆ ಶುದ್ಧವಾದ ಮಣ್ಣಿನಿಂದ ತಯಮ್ಮುಮ್ ಮಾಡಿರಿ. (ಅಂದರೆ ನಿಮ್ಮ ಹಸ್ತಗಳನ್ನು ಮಣ್ಣಿನ ಮೇಲೆ ಬಡಿದು) ಅದನ್ನು ನಿಮ್ಮ ಮುಖ ಮತ್ತು ಕೈಗಳ ಮೇಲೆ ಸವರಿರಿ. ನಿಮ್ಮ ಮೇಲೆ ಯಾವುದೇ ರೀತಿಯ ಸಂಕಷ್ಟವನ್ನುAಟು ಮಾಡಲು ಅಲ್ಲಾಹನು ಇಚ್ಛಿಸುವುದಿಲ್ಲ. ಆದರೆ ಅವನು ನಿಮ್ಮನ್ನು ಶುದ್ಧೀಕರಿಸಲು ಮತ್ತು ತನ್ನ ಅನುಗ್ರಹವನ್ನು ನಿಮಗೆ ದಯಪಾಲಿಸಲು ಇಚ್ಛಿಸುತ್ತಾನೆ. ಇದು ನೀವು ಕೃತಜ್ಞತೆ ಸಲ್ಲಿಸಲೆಂದಾಗಿದೆ.
وَاذْكُرُوا نِعْمَةَ اللَّهِ عَلَيْكُمْ وَمِيثَاقَهُ الَّذِي وَاثَقَكُم بِهِ إِذْ قُلْتُمْ سَمِعْنَا وَأَطَعْنَا ۖ وَاتَّقُوا اللَّهَ ۚ إِنَّ اللَّهَ عَلِيمٌ بِذَاتِ الصُّدُورِ ٧
📖 ಅನುವಾದ
ಆಯತ್ 7
ಅಲ್ಲಾಹನು ನಿಮ್ಮ ಮೇಲೆ ದಯಪಾಲಿಸಿದ ಅನುಗ್ರಹವನ್ನು ಸ್ಮರಿಸಿರಿ. 'ನಾವು ಆಲಿಸಿದೆವು ಮತ್ತು ಅನುಸರಿಸಿದೆವು' ಎಂದು ನೀವು ಹೇಳಿದ ಸಂದರ್ಭದಲ್ಲಿ ಅಲ್ಲಾಹನು ನಿಮ್ಮೊಂದಿಗೆ ಪಡೆದ ದೃಢವಾದ ಕರಾರನ್ನು ಸ್ಮರಿಸಿರಿ ಮತ್ತು ಅಲ್ಲಾಹನನ್ನು ಭಯಪಡಿರಿ. ಖಂಡಿತವಾಗಿಯು ಅಲ್ಲಾಹನು ಹೃದಯಗಳ ರಹಸ್ಯಗಳನ್ನು ಅರಿಯುವವನಾಗಿದ್ದಾನೆ.
يَا أَيُّهَا الَّذِينَ آمَنُوا كُونُوا قَوَّامِينَ لِلَّهِ شُهَدَاءَ بِالْقِسْطِ ۖ وَلَا يَجْرِمَنَّكُمْ شَنَآنُ قَوْمٍ عَلَىٰ أَلَّا تَعْدِلُوا ۚ اعْدِلُوا هُوَ أَقْرَبُ لِلتَّقْوَىٰ ۖ وَاتَّقُوا اللَّهَ ۚ إِنَّ اللَّهَ خَبِيرٌ بِمَا تَعْمَلُونَ ٨
📖 ಅನುವಾದ
ಆಯತ್ 8
ಓ ಸತ್ಯವಿಶ್ವಾಸಿಗಳೇ, ನೀವು ಅಲ್ಲಾಹನಿಗೋಸ್ಕರ ಸತ್ಯದಲ್ಲಿ ನೆಲೆನಿಲ್ಲಿರಿ. ನ್ಯಾಯದೊಂದಿಗೆ ಸಾಕ್ಷಿವಹಿಸುವವರಾಗಿರಿ. ಯಾವುದೇ ಸಮುದಾಯದೊಂದಿಗಿನ ವೈರತ್ವವು ನಿಮ್ಮನ್ನು ಅನ್ಯಾಯಕ್ಕೆ ಪ್ರೇರೇಪಿಸದಿರಲಿ. ನೀವು ನ್ಯಾಯವನ್ನು ಪಾಲಿಸಿರಿ. ಇದೇ ಭಯಭಕ್ತಿಗೆ ಅತೀ ಸಮೀಪವಾಗಿದೆ,. ಖಂಡಿತವಾಗಿಯು ಅಲ್ಲಾಹನು ನಿಮ್ಮ ಕರ್ಮಗಳ ಕುರಿತು ಅರಿವುಳ್ಳವನಾಗಿದ್ದಾನೆ.
وَعَدَ اللَّهُ الَّذِينَ آمَنُوا وَعَمِلُوا الصَّالِحَاتِ ۙ لَهُم مَّغْفِرَةٌ وَأَجْرٌ عَظِيمٌ ٩
📖 ಅನುವಾದ
ಆಯತ್ 9
ಸತ್ಯವಿಶ್ವಾಸವಿಟ್ಟು ಸತ್ಕರ್ಮ ಮಾಡಿದವರಿಗೆ ಪಾಪವಿಮೋಚನೆ ಹಾಗೂ ಮಹಾ ಪ್ರತಿಫಲವಿದೆಯೆಂದು ಅಲ್ಲಾಹನು ವಾಗ್ದಾನ ಮಾಡಿದ್ದಾನೆ.
وَالَّذِينَ كَفَرُوا وَكَذَّبُوا بِآيَاتِنَا أُولَٰئِكَ أَصْحَابُ الْجَحِيمِ ١٠
📖 ಅನುವಾದ
ಆಯತ್ 10
ಯಾರು ಸತ್ಯವನ್ನು ನಿರಾಕರಿಸಿ ಮತ್ತು ನಮ್ಮ ನಿಯಮಗಳನ್ನು ಸುಳ್ಳಾಗಿಸುತ್ತಾರೋ ಅವರೇ ನರಕವಾಸಿಗಳಾಗಿದ್ದಾರೆ.
يَا أَيُّهَا الَّذِينَ آمَنُوا اذْكُرُوا نِعْمَتَ اللَّهِ عَلَيْكُمْ إِذْ هَمَّ قَوْمٌ أَن يَبْسُطُوا إِلَيْكُمْ أَيْدِيَهُمْ فَكَفَّ أَيْدِيَهُمْ عَنكُمْ ۖ وَاتَّقُوا اللَّهَ ۚ وَعَلَى اللَّهِ فَلْيَتَوَكَّلِ الْمُؤْمِنُونَ ١١
📖 ಅನುವಾದ
ಆಯತ್ 11
ಓ ಸತ್ಯವಿಶ್ವಾಸಿಗಳೇ, ಒಂದು ಜನತೆ ನಿಮ್ಮ ಮೇಲೆ ಕೈ ಮಾಡಲು ಮುಂದಾದಾಗ ಅವರ ಕೈಗಳು ನಿಮ್ಮ ಮೇಲೆ ಎರಗದಂತೆ ತಡೆಯುವ ಮೂಲಕ ಅಲ್ಲಾಹನು ನಿಮ್ಮ ಮೇಲೆ ಮಾಡಿದ ಅನುಗ್ರಹವನ್ನು ಸ್ಮರಿಸಿರಿ. ನೀವು ಅಲ್ಲಾಹನನ್ನು ಭಯಪಡುತ್ತಿರಿ. ಸತ್ಯವಿಶ್ವಾಸಿಗಳು ಅಲ್ಲಾಹನ ಮೇಲೆ ಭರವಸೆಯನ್ನಿಡಲಿ.
۞ وَلَقَدْ أَخَذَ اللَّهُ مِيثَاقَ بَنِي إِسْرَائِيلَ وَبَعَثْنَا مِنْهُمُ اثْنَيْ عَشَرَ نَقِيبًا ۖ وَقَالَ اللَّهُ إِنِّي مَعَكُمْ ۖ لَئِنْ أَقَمْتُمُ الصَّلَاةَ وَآتَيْتُمُ الزَّكَاةَ وَآمَنتُم بِرُسُلِي وَعَزَّرْتُمُوهُمْ وَأَقْرَضْتُمُ اللَّهَ قَرْضًا حَسَنًا لَّأُكَفِّرَنَّ عَنكُمْ سَيِّئَاتِكُمْ وَلَأُدْخِلَنَّكُمْ جَنَّاتٍ تَجْرِي مِن تَحْتِهَا الْأَنْهَارُ ۚ فَمَن كَفَرَ بَعْدَ ذَٰلِكَ مِنكُمْ فَقَدْ ضَلَّ سَوَاءَ السَّبِيلِ ١٢
📖 ಅನುವಾದ
ಆಯತ್ 12
ಮತ್ತು ಅಲ್ಲಾಹನು ಇಸ್ರಾಯೀಲ್ ಸಂತತಿಗಳೊAದಿಗೆ ದೃಢ ಕರಾರು ಪಡೆದನು ಮತ್ತು ಅವರಿಂದಲೇ ಹನ್ನೆರಡು ಜನರನ್ನು ನಾಯಕರನ್ನಾಗಿ ನಿಯೋಗಿಸಿದನು ಮತ್ತು ಅಲ್ಲಾಹನು ಹೇಳಿದನು: ಖಂಡಿತವಾಗಿಯು ನಾನು ನಿಮ್ಮೊಂದಿಗಿದ್ದೇನೆ. ನೀವು ನಮಾಝನ್ನು ಸಂಸ್ಥಾಪಿಸುತ್ತಿದ್ದರೆ, ಝಕಾತನ್ನು ನೀಡುತ್ತಿದ್ದರೆ, ನನ್ನ ಸಂದೇಶವಾಹಕರಲ್ಲಿ ವಿಶ್ವಾಸವಿಡುತ್ತಿದ್ದರೆ, ಅವರಿಗೆ ಸಹಕಾರ ನೀಡುತ್ತಿದ್ದರೆ ಮತ್ತು ಅಲ್ಲಾಹನಿಗೆ ಉತ್ತಮವಾದ ಸಾಲವನ್ನು ನೀಡುತ್ತಿದ್ದರೆ ಖಂಡಿತವಾಗಿಯು ನಾನು ನಿಮ್ಮ ಪಾಪಗಳನ್ನು ಅಳಿಸುವೆನು ಮತ್ತು ತಳಭಾಗದಲ್ಲಿ ಕಾಲುವೆಗಳು ಹರಿಯುವ ಸ್ವರ್ಗೋದ್ಯಾನಗಳೆಡೆಗೆ ನಿಮ್ಮನ್ನು ಕೊಂಡೊಯ್ಯುವೆನು. ಇನ್ನು ಈ ಕರಾರಿನ ನಂತರವೂ ನಿಮ್ಮ ಪೈಕಿ ಯಾರು ಧರ್ಮಧಿಕ್ಕಾರಿಯಾಗುತ್ತಾನೋ ಅವನು ನೇರ ಮಾರ್ಗದಿಂದ ವ್ಯತಿಚಲಿಸಿದವನಾಗಿದ್ದಾನೆ.
فَبِمَا نَقْضِهِم مِّيثَاقَهُمْ لَعَنَّاهُمْ وَجَعَلْنَا قُلُوبَهُمْ قَاسِيَةً ۖ يُحَرِّفُونَ الْكَلِمَ عَن مَّوَاضِعِهِ ۙ وَنَسُوا حَظًّا مِّمَّا ذُكِّرُوا بِهِ ۚ وَلَا تَزَالُ تَطَّلِعُ عَلَىٰ خَائِنَةٍ مِّنْهُمْ إِلَّا قَلِيلًا مِّنْهُمْ ۖ فَاعْفُ عَنْهُمْ وَاصْفَحْ ۚ إِنَّ اللَّهَ يُحِبُّ الْمُحْسِنِينَ ١٣
📖 ಅನುವಾದ
ಆಯತ್ 13
ತರುವಾಯ ಅವರ ಕರಾರು ಉಲ್ಲಂಘನೆಯ ನಿಮಿತ್ತ ನಾವು ಅವರ ಮೇಲೆ ನಮ್ಮ ಶಾಪವನ್ನು ಎರಗಿಸಿದೆವು ಮತ್ತು ಅವರ ಹೃದಯಗಳನ್ನು ಕಠೋರಗೊಳಿಸಿದೆವು. ಅವರು ಗ್ರಂಥ ವಾಕ್ಯಗಳನ್ನು ಅವುಗಳ ಸ್ಥಾನದಿಂದ ಬದಲಾಯಿಸುತ್ತಾರೆ. ಮತ್ತು ಅವರು ತಮಗೆ ಉಪದೇಶ ನೀಡಲಾದುದರಲ್ಲಿ ದೊಡ್ಡ ಅಂಶವನ್ನು ಮರೆತುಬಿಟ್ಟರು. ಅವರ ಪೈಕಿ ಕೆಲವರ ಹೊರತು ಒಂದಲ್ಲ ಒಂದು ವಂಚನೆಯ ಸುದ್ದಿಯು ನಿಮಗೆ ಲಭಿಸುತ್ತಲೇ ಇರುತ್ತದೆ. ನೀವು ಅವರನ್ನು ಕ್ಷಮಿಸಿರಿ ಮತ್ತು ಅವರನ್ನು ಮನ್ನಿಸಿರಿ. ಖಂಡಿತವಾಗಿಯು ಅಲ್ಲಾಹನು ಸದಾಚಾರವೆಸಗುವವರನ್ನು ಮೆಚ್ಚುತ್ತಾನೆ.
وَمِنَ الَّذِينَ قَالُوا إِنَّا نَصَارَىٰ أَخَذْنَا مِيثَاقَهُمْ فَنَسُوا حَظًّا مِّمَّا ذُكِّرُوا بِهِ فَأَغْرَيْنَا بَيْنَهُمُ الْعَدَاوَةَ وَالْبَغْضَاءَ إِلَىٰ يَوْمِ الْقِيَامَةِ ۚ وَسَوْفَ يُنَبِّئُهُمُ اللَّهُ بِمَا كَانُوا يَصْنَعُونَ ١٤
📖 ಅನುವಾದ
ಆಯತ್ 14
ಮತ್ತು ಇದೇ ಪ್ರಕಾರ ತಮ್ಮನ್ನು ಕ್ರೆöÊಸ್ತರು ಎಂದು ಹೇಳಿಕೊಂಡವರಿAದಲೂ ನಾವು ಕರಾರನ್ನು ಪಡೆದೆವು. ಅವರೂ ಸಹ ತಮಗೆ ಉಪದೇಶ ನೀಡಲಾದುದರ ಅತಿದೊಡ್ಡ ಅಂಶವನ್ನು ಮರೆತು ಬಿಟ್ಟರು. ಆಗ ನಾವು ಸಹ ಅವರ ನಡುವೆ ಪುನರುತ್ಥಾನದ ದಿನದವರೆಗಿರುವಂತಹ ವಿದ್ವೇಷವನ್ನೂ, ವೈರತ್ವವನ್ನೂ ಹಾಕಿಬಿಟ್ಟೆವು ಮತ್ತು ಅವರು ಏನೆಲ್ಲವನ್ನು ಮಾಡುತ್ತಿದ್ದರೋ ಅದರ ಕುರಿತು ಅಲ್ಲಾಹನು ಸದ್ಯವೇ ಅವರಿಗೆ ತಿಳಿಸಿಕೊಡಲಿದ್ದಾನೆ.
يَا أَهْلَ الْكِتَابِ قَدْ جَاءَكُمْ رَسُولُنَا يُبَيِّنُ لَكُمْ كَثِيرًا مِّمَّا كُنتُمْ تُخْفُونَ مِنَ الْكِتَابِ وَيَعْفُو عَن كَثِيرٍ ۚ قَدْ جَاءَكُم مِّنَ اللَّهِ نُورٌ وَكِتَابٌ مُّبِينٌ ١٥
📖 ಅನುವಾದ
ಆಯತ್ 15
ಓ ಗ್ರಂಥದವರೇ, ಗ್ರಂಥದಿAದ ನೀವು ಮರೆಮಾಚುತ್ತಿದ್ದ ಅನೇಕ ಸಂಗತಿಗಳನ್ನು ನಿಮಗೆ ಬಹಿರಂಗಗೊಳಿಸುವ ಮತ್ತು ಹಲವು ವಿಚಾರಗಳನ್ನು ಕಡೆಗಣಿಸುವ ನಮ್ಮ ಸಂದೇಶವಾಹಕರು ನಿಮ್ಮ ಬಳಿಗೆ ಬಂದಿರುವರು. ನಿಶ್ಚಯವಾಗಿಯು ನಿಮ್ಮೆಡೆಗೆ ಅಲ್ಲಾಹನ ವತಿಯಿಂದ ಒಂದು ಪ್ರಕಾಶವೂ, ಸ್ಪಷ್ಟವಾದ ಒಂದು ಗ್ರಂಥವೂ ಬಂದಿರುತ್ತದೆ.
يَهْدِي بِهِ اللَّهُ مَنِ اتَّبَعَ رِضْوَانَهُ سُبُلَ السَّلَامِ وَيُخْرِجُهُم مِّنَ الظُّلُمَاتِ إِلَى النُّورِ بِإِذْنِهِ وَيَهْدِيهِمْ إِلَىٰ صِرَاطٍ مُّسْتَقِيمٍ ١٦
📖 ಅನುವಾದ
ಆಯತ್ 16
ಅದರ ಮೂಲಕ ತನ್ನ ಪ್ರಭುವಿನ ಸಂಪ್ರೀತಿಯನ್ನು ಬಯಸಿದವರಿಗೆ ಅಲ್ಲಾಹನು ರಕ್ಷಾ ಮಾರ್ಗಗಳಿಗೆ ಮುನ್ನಡೆಸುವನು. ಮತ್ತು ಅವನು ಅವರನ್ನು ತನ್ನ ಕೃಪೆಯಿಂದ ಅಂಧಕಾರಗಳಿAದ ಪ್ರಕಾಶದೆಡೆಗೆ ಕರೆತರುವನು ಮತ್ತು ಅವರನ್ನು ನೇರವಾದ ಮಾರ್ಗದೆಡೆಗೆ ಮಾರ್ಗದರ್ಶನ ಮಾಡುವನು.
لَّقَدْ كَفَرَ الَّذِينَ قَالُوا إِنَّ اللَّهَ هُوَ الْمَسِيحُ ابْنُ مَرْيَمَ ۚ قُلْ فَمَن يَمْلِكُ مِنَ اللَّهِ شَيْئًا إِنْ أَرَادَ أَن يُهْلِكَ الْمَسِيحَ ابْنَ مَرْيَمَ وَأُمَّهُ وَمَن فِي الْأَرْضِ جَمِيعًا ۗ وَلِلَّهِ مُلْكُ السَّمَاوَاتِ وَالْأَرْضِ وَمَا بَيْنَهُمَا ۚ يَخْلُقُ مَا يَشَاءُ ۚ وَاللَّهُ عَلَىٰ كُلِّ شَيْءٍ قَدِيرٌ ١٧
📖 ಅನುವಾದ
ಆಯತ್ 17
ಅಲ್ಲಾಹನೇ ಮರ್ಯಮರ ಪುತ್ರ ಮಸೀಹನಾಗಿದ್ದಾನೆ ಎಂದು ಹೇಳಿದವರು ಖಂಡಿತವಾಗಿಯು ಸತ್ಯನಿಷೇಧಿಗಳಾಗಿರುವರು. ಹೇಳಿರಿ: ಅಲ್ಲಾಹನು ಮರ್ಯಮರ ಪುತ್ರ ಮಸೀಹರನ್ನೂ, ಅವರ ತಾಯಿಯನ್ನೂ, ಭೂಮಿಯಲ್ಲಿರುವ ಸರ್ವರನ್ನೂ ನಾಶಗೊಳಿಸಲು (ಮರಣ ಕೊಡಲು) ಬಯಸಿದರೆ ಅಲ್ಲಾಹನ ಮೇಲೆ ನಿಯಂತ್ರಣ ಹೊಂದಿದವರು ಯಾರಿದ್ದಾರೆ? ಆಕಾಶಗಳಲ್ಲಿ, ಭೂಮಿಯಲ್ಲಿ ಮತ್ತು ಅವೆರಡರ ಮಧ್ಯೆಯಿರುವ ಎಲ್ಲದರ ಅಧಿಪತ್ಯವು ಅಲ್ಲಾಹನದ್ದಾಗಿದೆ. ಅವನು ತಾನಿಚ್ಛಿಸಿದ್ದನ್ನು ಸೃಷ್ಟಿಸುತ್ತಾನೆ ಮತ್ತು ಅಲ್ಲಾಹನು ಸರ್ವ ಕಾರ್ಯಗಳ ಮೇಲೂ ಸಾಮರ್ಥ್ಯವುಳ್ಳವನಾಗಿದ್ದಾನೆ.
وَقَالَتِ الْيَهُودُ وَالنَّصَارَىٰ نَحْنُ أَبْنَاءُ اللَّهِ وَأَحِبَّاؤُهُ ۚ قُلْ فَلِمَ يُعَذِّبُكُم بِذُنُوبِكُم ۖ بَلْ أَنتُم بَشَرٌ مِّمَّنْ خَلَقَ ۚ يَغْفِرُ لِمَن يَشَاءُ وَيُعَذِّبُ مَن يَشَاءُ ۚ وَلِلَّهِ مُلْكُ السَّمَاوَاتِ وَالْأَرْضِ وَمَا بَيْنَهُمَا ۖ وَإِلَيْهِ الْمَصِيرُ ١٨
📖 ಅನುವಾದ
ಆಯತ್ 18
ಯಹೂದರು ಮತ್ತು ಕ್ರೆöÊಸ್ತರು ಹೇಳುತ್ತಾರೆ: ನಾವು ಅಲ್ಲಾಹನ ಮಕ್ಕಳು ಮತ್ತು ಅವನ ಪ್ರೀತಿ ಪಾತ್ರರು. ಓ ಪೈಗಂಬರರೇ ಹೇಳಿರಿ: ಮತ್ತೇಕೆ ಅಲ್ಲಾಹನು ನಿಮ್ಮನ್ನು ನಿಮ್ಮ ಪಾಪಗಳನಿಮಿತ್ತ ಶಿಕ್ಷಿಸುತ್ತಾನೆ? ವಾಸ್ತವದಲ್ಲಿ ನೀವು ಅವನ ಸೃಷ್ಟಿಗಳಲ್ಲಿ ಸೇರಿದ ಮನುಷ್ಯರು ಮಾತ್ರವಾಗಿದ್ದೀರಿ. ಅವನು ತಾನಿಚ್ಛಿಸಿದವರಿಗೆ ಕ್ಷಮಿಸುತ್ತಾನೆ ಮತ್ತು ತಾನಿಚ್ಛಿಸಿದವರನ್ನು ಶಿಕ್ಷಿಸುತ್ತಾನೆ. ಆಕಾಶಗಳ, ಭೂಮಿಯ ಮತ್ತು ಅವೆರಡರ ಮಧ್ಯೆಯಿರುವ ಎಲ್ಲದರ ಅಧಿಪತ್ಯವು ಅಲ್ಲಾಹನದ್ದಾಗಿದೆ ಮತ್ತು ಮರಳುವಿಕೆಯು ಅವನ ಬಳಿಗೇ ಆಗಿರುತ್ತದೆ.
يَا أَهْلَ الْكِتَابِ قَدْ جَاءَكُمْ رَسُولُنَا يُبَيِّنُ لَكُمْ عَلَىٰ فَتْرَةٍ مِّنَ الرُّسُلِ أَن تَقُولُوا مَا جَاءَنَا مِن بَشِيرٍ وَلَا نَذِيرٍ ۖ فَقَدْ جَاءَكُم بَشِيرٌ وَنَذِيرٌ ۗ وَاللَّهُ عَلَىٰ كُلِّ شَيْءٍ قَدِيرٌ ١٩
📖 ಅನುವಾದ
ಆಯತ್ 19
ಓ ಗ್ರಂಥದವರೇ, ನಿಶ್ಚಯವಾಗಿಯು ಸಂದೇಶವಾಹಕರ ಆಗಮನವು ಸ್ಥಗಿತಗೊಂಡಿದ್ದ ಒಂದು ಕಾಲದ ಬಳಿಕ ನಮ್ಮ ಸಂದೇಶವಾಹಕರು ನಿಮ್ಮ ಬಳಿಗೆ ಬಂದಿರುವರು. ಅವರು ನಿಮಗಾಗಿ (ನಮ್ಮ ನಿಯಮಗಳನ್ನು) ಸ್ಪಷ್ಟವಾಗಿ ವಿವರಿಸಿಕೊಡುತ್ತಾರೆ. ಇದೇಕೆಂದರೆ ನೀವು ನಮ್ಮ ಬಳಿಗೆ ಒಬ್ಬ ಶುಭವಾರ್ತೆ ನೀಡುವವನಾಗಲೀ, ಮುನ್ನೆಚ್ಚರಿಕೆ ನೀಡುವವನಾಗಲೀ ಬಂದಿರಲಿಲ್ಲ ಎಂದು ಹೇಳಬಾರದೆಂದಾಗಿದೆ. ಇನ್ನು ಖಂಡಿತವಾಗಿಯು ಶುಭವಾರ್ತೆಯನ್ನು ತಿಳಿಸುವ ಮತ್ತು ಮುನ್ನೆಚ್ಚರಿಕೆ ನೀಡುವ ಪೈಗಂಬರರು ನಿಮ್ಮ ಬಳಿಗೆ ಬಂದಿರುವರು ಮತ್ತು ಅಲ್ಲಾಹನು ಸಕಲ ಸಂಗತಿಗಳ ಮೇಲೂ ಸಾಮರ್ಥ್ಯವುಳ್ಳವನಾಗಿದ್ದಾನೆ.
وَإِذْ قَالَ مُوسَىٰ لِقَوْمِهِ يَا قَوْمِ اذْكُرُوا نِعْمَةَ اللَّهِ عَلَيْكُمْ إِذْ جَعَلَ فِيكُمْ أَنبِيَاءَ وَجَعَلَكُم مُّلُوكًا وَآتَاكُم مَّا لَمْ يُؤْتِ أَحَدًا مِّنَ الْعَالَمِينَ ٢٠
📖 ಅನುವಾದ
ಆಯತ್ 20
ಮೂಸಾ ತನ್ನ ಜನತೆಯೊಂದಿಗೆ ಹೇಳಿದ ಸಂದರ್ಭವನ್ನು ಸ್ಮರಿಸಿರಿ: ಓ ನನ್ನ ಜನರೇ, ನಿಮ್ಮಿಂದಲೇ ಪೈಗಂಬರರÀನ್ನು ನಿಯೋಗಿಸಿ, ನಿಮ್ಮನ್ನು ಅರಸರನ್ನಾಗಿ ಮಾಡಿ ಮತ್ತು ಇಡೀ ಜಗತ್ತಿನ ಜನರ ಪೈಕಿ ಯಾರಿಗೂ ನೀಡದಂತಹದ್ದನ್ನು ನಿಮಗೆ ನೀಡಿ ಅಲ್ಲಾಹನು ನಿಮ್ಮ ಮೇಲೆ ಮಾಡಿರುವ ಉಪಕಾರವನ್ನು ಸ್ಮರಿಸಿರಿ.
يَا قَوْمِ ادْخُلُوا الْأَرْضَ الْمُقَدَّسَةَ الَّتِي كَتَبَ اللَّهُ لَكُمْ وَلَا تَرْتَدُّوا عَلَىٰ أَدْبَارِكُمْ فَتَنقَلِبُوا خَاسِرِينَ ٢١
📖 ಅನುವಾದ
ಆಯತ್ 21
ಓ ನನ್ನ ಜನರೇ, ಅಲ್ಲಾಹನು ನಿಮಗಾಗಿ ಬರೆದಿರುವ ಪವಿತ್ರ ಭೂಮಿಯನ್ನು (ಫೆಲಸ್ತೀನ್) ನೀವು ಪ್ರವೇಶಿಸಿರಿ. ಮತ್ತು ಬೆನ್ನು ತಿರುಗಿಸಿ ಹೋಗಬೇಡಿರಿ. ಅನ್ಯಥಾ ನೀವು ನಷ್ಟ ಹೊಂದಿದವರಾಗಿ ಮರಳುವಿರಿ.
قَالُوا يَا مُوسَىٰ إِنَّ فِيهَا قَوْمًا جَبَّارِينَ وَإِنَّا لَن نَّدْخُلَهَا حَتَّىٰ يَخْرُجُوا مِنْهَا فَإِن يَخْرُجُوا مِنْهَا فَإِنَّا دَاخِلُونَ ٢٢
📖 ಅನುವಾದ
ಆಯತ್ 22
ಅವರು ಉತ್ತರಿಸಿದರು: ಓ ಮೂಸಾ, ಅಲ್ಲಿ ಪರಾಕ್ರಮಿಗಳಾದ ಜನಾಂಗವಿದೆ. ಅವರು ಅಲ್ಲಿಂದ ಹೊರಹೋಗುವವರೆಗೆ ನಾವು ಅಲ್ಲಿಗೆ ಹೋಗಲಾರೆವು. ಆದರೆ ಅವರು ಅಲ್ಲಿಂದ ನಿರ್ಗಮಿಸಿದ ಬಳಿಕ ಖಂಡಿತ ನಾವು ಪ್ರವೇಶಿಸುವೆವು.
قَالَ رَجُلَانِ مِنَ الَّذِينَ يَخَافُونَ أَنْعَمَ اللَّهُ عَلَيْهِمَا ادْخُلُوا عَلَيْهِمُ الْبَابَ فَإِذَا دَخَلْتُمُوهُ فَإِنَّكُمْ غَالِبُونَ ۚ وَعَلَى اللَّهِ فَتَوَكَّلُوا إِن كُنتُم مُّؤْمِنِينَ ٢٣
📖 ಅನುವಾದ
ಆಯತ್ 23
ದೇವಭಯವಿರುವವರ ಪೈಕಿ ಅಲ್ಲಾಹನು ಅನುಗ್ರಹಿಸಿದ ಇಬ್ಬರು ಹೇಳಿದರು: ನೀವು ಅವರ ಬಳಿಗೆ ಹೆಬ್ಬಾಗಿಲಿನಿಂದ ದಾಳಿ ಮಾಡುತ್ತಾ ಹೊಕ್ಕಿಬಿಡಿ, ನೀವು ಹೆಬ್ಬಾಗಿಲನ್ನು ತಲುಪುತ್ತಿರುವಂತೆಯೇ ಖಂಡಿತ ಗೆಲುವು ಸಾಧಿಸುವಿರಿ. ಮತ್ತು ನೀವು ವಿಶ್ವಾಸಿಗಳಾಗಿದ್ದರೆ ಅಲ್ಲಾಹನ ಮೇಲೆಯೇ ಭರವಸೆಯನ್ನಿಡಿರಿ.
قَالُوا يَا مُوسَىٰ إِنَّا لَن نَّدْخُلَهَا أَبَدًا مَّا دَامُوا فِيهَا ۖ فَاذْهَبْ أَنتَ وَرَبُّكَ فَقَاتِلَا إِنَّا هَاهُنَا قَاعِدُونَ ٢٤
📖 ಅನುವಾದ
ಆಯತ್ 24
ಆಗ ಅವರು ಹೇಳಿದರು: ಓ ಮೂಸಾ, ಅವರು ಅಲ್ಲಿರುವವರೆಗೆ ನಾವು ಎಂದೂ ಅದನ್ನು ಪ್ರವೇಶಿಸುವುದಿಲ್ಲ. ಆದ್ದರಿಂದ ನೀವು ಮತ್ತು ನಿಮ್ಮ ಪ್ರಭು ಹೋಗಿ ಯುದ್ಧ ಮಾಡಿರಿ. ನಾವು ಇಲ್ಲೆ ಕುಳಿತುಕೊಂಡಿರುತ್ತೇವೆ.
قَالَ رَبِّ إِنِّي لَا أَمْلِكُ إِلَّا نَفْسِي وَأَخِي ۖ فَافْرُقْ بَيْنَنَا وَبَيْنَ الْقَوْمِ الْفَاسِقِينَ ٢٥
📖 ಅನುವಾದ
ಆಯತ್ 25
ಆಗ ಅವರು (ಮೂಸಾ) ಪ್ರಾರ್ಥಿಸಿದರು: ಓ ನನ್ನ ಪ್ರಭು, ನನ್ನ ಮತ್ತು ನನ್ನ ಸಹೋದರನ (ಹಾರೂನ್) ಹೊರತು ಇನ್ನಾರ ಮೇಲೂ ನನಗೆ ನಿಯಂತ್ರಣವಿಲ್ಲ. ಆದ್ದರಿಂದ ನಮ್ಮನ್ನು ಮತ್ತು ಈ ಧಿಕ್ಕಾರಿಗಳಾದ ಜನರನ್ನು ಪರಸ್ಪರ ಬೇರ್ಪಡಿಸು.
قَالَ فَإِنَّهَا مُحَرَّمَةٌ عَلَيْهِمْ ۛ أَرْبَعِينَ سَنَةً ۛ يَتِيهُونَ فِي الْأَرْضِ ۚ فَلَا تَأْسَ عَلَى الْقَوْمِ الْفَاسِقِينَ ٢٦
📖 ಅನುವಾದ
ಆಯತ್ 26
ಅಲ್ಲಾಹನು ಹೇಳಿದನು: ಹಾಗಾದರೆ ಆ ಭೂಮಿ ನಲ್ವತ್ತು ವರ್ಷಗಳ ಕಾಲ ಅವರಿಗೆ ನಿಷೇಧಿಸಲ್ಪಟ್ಟಿದೆ. ಅವರು ಭೂಮಿಯಲ್ಲಿ ಅತ್ತಿಂದಿತ್ತ ಅಲೆದಾಡುತ್ತಿರುವರು. ಆದ್ದರಿಂದ ಆ ಧಿಕ್ಕಾರಿಗಳಾದ ಜನರ ಕುರಿತು ನೀವು ದುಃಖಿಸಬೇಡಿರಿ.
۞ وَاتْلُ عَلَيْهِمْ نَبَأَ ابْنَيْ آدَمَ بِالْحَقِّ إِذْ قَرَّبَا قُرْبَانًا فَتُقُبِّلَ مِنْ أَحَدِهِمَا وَلَمْ يُتَقَبَّلْ مِنَ الْآخَرِ قَالَ لَأَقْتُلَنَّكَ ۖ قَالَ إِنَّمَا يَتَقَبَّلُ اللَّهُ مِنَ الْمُتَّقِينَ ٢٧
📖 ಅನುವಾದ
ಆಯತ್ 27
(ಓ ಪೈಗಂಬರರೇ) ನೀವು ಅವರಿಗೆ ಆದಮನ ಇಬ್ಬರು ಮಕ್ಕಳ (ಹಾಬಿಲ್, ಖಾಬಿಲ್) ವೃತ್ತಾಂತವನ್ನು ಸತ್ಯದೊಂದಿಗೆ ಓದಿ ತಿಳಿಸಿರಿ. ಅವರಿಬ್ಬರೂ ಒಂದೊAದು ಹರಕೆಯನ್ನು ಸಮರ್ಪಿಸಿದ ಸಂದರ್ಭ. ಒಬ್ಬನಿಂದ ಹರಕೆಯು ಸ್ವೀಕರಿಸಲ್ಪಟ್ಟಿತು, ಇನ್ನೊಬ್ಬನಿಂದ ಸ್ವೀಕರಿಸಲ್ಪಡಲಿಲ್ಲ. ಆಗ ಅವನು (ಖಾಬಿಲ್) ಹೇಳಿದನು: ನಾನು ನಿನ್ನನ್ನು ಕೊಂದು ಬಿಡುವೆನು. ಇನ್ನೊಬ್ಬನು (ಹಾಬಿಲ್) ಹೇಳಿದನು: ಭಯಭಕ್ತಿಯುಳ್ಳವರಿಂದ ಮಾತ್ರವೇ ಅಲ್ಲಾಹನು ಸ್ವೀಕರಿಸುವನು.
لَئِن بَسَطتَ إِلَيَّ يَدَكَ لِتَقْتُلَنِي مَا أَنَا بِبَاسِطٍ يَدِيَ إِلَيْكَ لِأَقْتُلَكَ ۖ إِنِّي أَخَافُ اللَّهَ رَبَّ الْعَالَمِينَ ٢٨
📖 ಅನುವಾದ
ಆಯತ್ 28
(ಹಾಬಿಲ್ ಹೇಳುವನು) ನನ್ನನ್ನು ಕೊಲ್ಲುವುದಕ್ಕಾಗಿ ನೀನು ನನ್ನೆಡಗೆ ಕೈಚಾಚಿದರೂ ನಿನ್ನನ್ನು ಕೊಲ್ಲುವುದಕ್ಕಾಗಿ ನಾನು ನಿನ್ನೆಡೆಗೆ ಕೈಚಾಚಲಾರೆನು ನಿಶ್ಚಯವಾಗಿಯೂ ನಾನು ಸರ್ವ ಲೋಕಗಳ ಪ್ರಭುವಾದ ಅಲ್ಲಾಹುನನ್ನು ಭಯಪಡುತ್ತೇನೆ.
إِنِّي أُرِيدُ أَن تَبُوءَ بِإِثْمِي وَإِثْمِكَ فَتَكُونَ مِنْ أَصْحَابِ النَّارِ ۚ وَذَٰلِكَ جَزَاءُ الظَّالِمِينَ ٢٩
📖 ಅನುವಾದ
ಆಯತ್ 29
ನನ್ನ ಪಾಪವನ್ನು ನಿನ್ನ ಪಾಪವನ್ನು ನೀನೇ ಹೊಣೆಗಾರನಾಗಿ ಹೊತ್ತುಕೋ, ನೀನು ನರಕವಾಸಿಗಳಲ್ಲಿ ಸೇರಿಬಿಡು ಎಂದು ನಾನು ಬಯಸುತ್ತೇನೆ. ಅಕ್ರಮಿಗಳಿಗಿರುವ ಪ್ರತಿಫಲ ಅದುವೇ ಆಗಿದೆ.
فَطَوَّعَتْ لَهُ نَفْسُهُ قَتْلَ أَخِيهِ فَقَتَلَهُ فَأَصْبَحَ مِنَ الْخَاسِرِينَ ٣٠
📖 ಅನುವಾದ
ಆಯತ್ 30
ಕೊನೆಗೆ (ಖಾಬಿಲನಿಗೆ) ತನ್ನ ಸಹೋದರನನ್ನು (ಹಾಬೀಲನನ್ನು) ಕೊಲ್ಲಲು ಆತನ ಮನಸ್ಸು ಪ್ರೇರೇಪಿಸಿತು ಮತ್ತು ಅವನು ಅವನನ್ನು ಕೊಂದು ನಷ್ಟ ಹೊಂದಿದವರಲ್ಲಿ ಸೇರಿದವನಾದನು.
فَبَعَثَ اللَّهُ غُرَابًا يَبْحَثُ فِي الْأَرْضِ لِيُرِيَهُ كَيْفَ يُوَارِي سَوْءَةَ أَخِيهِ ۚ قَالَ يَا وَيْلَتَا أَعَجَزْتُ أَنْ أَكُونَ مِثْلَ هَٰذَا الْغُرَابِ فَأُوَارِيَ سَوْءَةَ أَخِي ۖ فَأَصْبَحَ مِنَ النَّادِمِينَ ٣١
📖 ಅನುವಾದ
ಆಯತ್ 31
ಅ ಬಳಿಕ ತನ್ನ ಸಹೋದರನ ಮೃತದೇಹವನ್ನು ಮರೆಮಾಚುವುದು ಹೇಗೆಂದು ಅವನಿಗೆ ತೋರಿಸಿಕೊಡುವುದಕ್ಕಾಗಿ ನೆಲವನ್ನು ಅಗೆಯುವ ಒಂದು ಕಾಗೆಯನ್ನು ಅಲ್ಲಾಹನು ಕಳುಹಿಸಿದನು. ಅವನು ಹೇಳಿದನು: ನನ್ನ ನಾಶವೇ, ನಾನು ನನ್ನ ಸಹೋದರನ ಮೃತದೇಹವನ್ನು ದಫನ ಮಾಡಲು ಅಸಮರ್ಥನಾಗಿ ಈ ಕಾಗೆಗಿಂಲೂ ಹೀನನಾಗಿ ಬಿಟ್ಟೇನಲ್ಲ! ಅನಂತರ ಅವನು (ತುಂಬಾ) ವಿಷಾಧಿಸುವವರಲ್ಲಾದನು.
مِنْ أَجْلِ ذَٰلِكَ كَتَبْنَا عَلَىٰ بَنِي إِسْرَائِيلَ أَنَّهُ مَن قَتَلَ نَفْسًا بِغَيْرِ نَفْسٍ أَوْ فَسَادٍ فِي الْأَرْضِ فَكَأَنَّمَا قَتَلَ النَّاسَ جَمِيعًا وَمَنْ أَحْيَاهَا فَكَأَنَّمَا أَحْيَا النَّاسَ جَمِيعًا ۚ وَلَقَدْ جَاءَتْهُمْ رُسُلُنَا بِالْبَيِّنَاتِ ثُمَّ إِنَّ كَثِيرًا مِّنْهُم بَعْدَ ذَٰلِكَ فِي الْأَرْضِ لَمُسْرِفُونَ ٣٢
📖 ಅನುವಾದ
ಆಯತ್ 32
ಇದೇ ಕಾರಣದಿಂದ ನಾವು ಇಸ್ರಾಯೀಲ್ ಸಂತತಿಗಳಿಗೆ (ತೌರಾತ್ನಲ್ಲಿ) ಹೀಗೆ ಆದೇಶಿಸಿದೆವು. ಯಾರಾದರೂ ಒಬ್ಬ ವ್ಯಕ್ತಿಯನ್ನು ಕೊಲೆ ಮಾಡಿರುವುದಕ್ಕಾಗಿ ಅಥವಾ ಭೂಮಿಯಲ್ಲಿ ಕ್ಷೆÆÃಭೆ ಹರಡಿರುವುದಕ್ಕಾಗಿಯೇ ಹೊರತು ಯಾರನ್ನಾದರು ಕೊಂದರೆ ಅವನು ಇಡೀ ಮನುಕುಲವನ್ನೇ ಕೊಂದAತೆ. ಮತ್ತು ಯಾರಾದರು ಒಂದು ಜೀವವನ್ನು ರಕ್ಷಿದರೆ ಅದು ಇಡೀ ಮನುಕುಲವನ್ನು ರಕ್ಷಿಸಿದಂತೆ. ನಮ್ಮ ಅನೇಕ ಸಂದೇಶವಾಹಕರು ಸ್ಪಷ್ಟವಾದ ಪುರಾವೆಗಳೊಂದಿಗೆ ಅವರ ಬಳಿಗೆ ಬಂದಿದ್ದರು. ಆದರೆ ಅದರ ನಂತರವೂ ಅವರ ಪೈಕಿ ಹೆಚ್ಚಿನ ಮಂದಿ ಭೂಮಿಯಲ್ಲಿ ಅನ್ಯಾಯವಾಗಿ ಅಕ್ರಮವೆಸಗುವವರಾಗಿದ್ದರು.
إِنَّمَا جَزَاءُ الَّذِينَ يُحَارِبُونَ اللَّهَ وَرَسُولَهُ وَيَسْعَوْنَ فِي الْأَرْضِ فَسَادًا أَن يُقَتَّلُوا أَوْ يُصَلَّبُوا أَوْ تُقَطَّعَ أَيْدِيهِمْ وَأَرْجُلُهُم مِّنْ خِلَافٍ أَوْ يُنفَوْا مِنَ الْأَرْضِ ۚ ذَٰلِكَ لَهُمْ خِزْيٌ فِي الدُّنْيَا ۖ وَلَهُمْ فِي الْآخِرَةِ عَذَابٌ عَظِيمٌ ٣٣
📖 ಅನುವಾದ
ಆಯತ್ 33
ಯಾರು ಅಲ್ಲಾಹನೊಂದಿಗೆ ಮತ್ತು ಅವನ ಸಂದೇಶವಾಹಕರೊAದಿಗೆ ಯುದ್ಧ ಮಾಡುತ್ತಾರೋ ಮತ್ತು ಭೂಮಿಯಲ್ಲಿ ಕ್ಷೆÆÃಭೆಯನ್ನುಂಟು ಮಾಡುತ್ತಾರೋ ಅವರ ಶಿಕ್ಷೆಯು ಅವರನ್ನು ವಧಿಸಲಾಗುವುದು, ಅಥವಾ ಶಿಲುಬೆಗೇರಿಸಲಾಗುವುದು, ಅಥವಾ ಅವರ ಕೈ ಕಾಲುಗಳನ್ನು ಪರಸ್ಪರ ವಿರುದ್ಧ ದಿಕ್ಕಿನಿಂದ ಕತ್ತರಿಸಲಾಗುವುದು ಅಥವಾ ಅವರನ್ನು ಗಡಿಪಾರುಗೊಳಿಸಲಾಗುವುದು. ಇದು ಅವರಿಗೆ ಇಹಲೋಕದಲ್ಲಿರುವ ಅಪಮಾನವಾಗಿದೆ. ಮತ್ತು ಪರಲೋಕದಲ್ಲಿ ಅವರಿಗೆ ಮಹಾ ಕಠಿಣವಾದ ಶಿಕ್ಷೆಯಿರುವುದು.
إِلَّا الَّذِينَ تَابُوا مِن قَبْلِ أَن تَقْدِرُوا عَلَيْهِمْ ۖ فَاعْلَمُوا أَنَّ اللَّهَ غَفُورٌ رَّحِيمٌ ٣٤
📖 ಅನುವಾದ
ಆಯತ್ 34
ಆದರೆ, ಅವರ ವಿರುದ್ಧ ನಿಂಯತ್ರಣ ಸಾಧಿಸುವ ಮುನ್ನ ಅವರು ಪಶ್ಚಾತ್ತಾಪ ಪಟ್ಟು ಮರಳಿದರೆ ಖಂಡಿತವಾಗಿಯು ಅಲ್ಲಾಹನು ಅತ್ಯಧಿಕ ಕ್ಷಮಿಸುವವನೂ ಕರುಣಾನಿಧಿಯೂ ಆಗಿದ್ದಾನೆ ಎಂಬುದನ್ನು ನೀವು ಅರಿತುಕೊಳ್ಳಿರಿ.
يَا أَيُّهَا الَّذِينَ آمَنُوا اتَّقُوا اللَّهَ وَابْتَغُوا إِلَيْهِ الْوَسِيلَةَ وَجَاهِدُوا فِي سَبِيلِهِ لَعَلَّكُمْ تُفْلِحُونَ ٣٥
📖 ಅನುವಾದ
ಆಯತ್ 35
ಓ ಸತ್ಯವಿಶ್ವಾಸಿಗಳೇ, ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ಅವನೆಡೆÀಗೆ ಸಾಮಿಪ್ಯ ಮಾರ್ಗವನ್ನು ಹುಡುಕಿರಿ ಹಾಗೂ ಅವನ ಮಾರ್ಗದಲ್ಲಿ ಹೋರಾಡಿರಿ. ಇದು ನೀವು ಯಶಸ್ಸು ಸಾಧಿಸಲೆಂದಾಗಿದೆ.
إِنَّ الَّذِينَ كَفَرُوا لَوْ أَنَّ لَهُم مَّا فِي الْأَرْضِ جَمِيعًا وَمِثْلَهُ مَعَهُ لِيَفْتَدُوا بِهِ مِنْ عَذَابِ يَوْمِ الْقِيَامَةِ مَا تُقُبِّلَ مِنْهُمْ ۖ وَلَهُمْ عَذَابٌ أَلِيمٌ ٣٦
📖 ಅನುವಾದ
ಆಯತ್ 36
ಖಂಡಿತವಾಗಿಯು ಪುನರುತ್ಥಾನ ದಿನದ ಶಿಕ್ಷೆಯಿಂದ ಪಾರಾಗಲಿಕ್ಕಾಗಿ ಸತ್ಯನಿಷೇಧಿಗಳ ವಶದಲ್ಲಿ ಭೂಮಿಯಲ್ಲಿರುವುದೆಲ್ಲವೂ ಅದರಷ್ಟೇ ಬೇರೆಯೂ ಇದ್ದೂ ಅವೆಲ್ಲವನ್ನೂ ಪರಿಹಾರ ಧನವನ್ನಾಗಿ ನೀಡಲು ಅವರು ಇಚ್ಛಿಸಿದರೂ ಅದನ್ನು ಅವರಿಂದ ಸ್ವೀಕರಿಸಲಾಗದು ಮತ್ತು ಅವರಿಗೆ ವೇದನಾಜನಕ ಶಿಕ್ಷೆಯಿದೆ.
يُرِيدُونَ أَن يَخْرُجُوا مِنَ النَّارِ وَمَا هُم بِخَارِجِينَ مِنْهَا ۖ وَلَهُمْ عَذَابٌ مُّقِيمٌ ٣٧
📖 ಅನುವಾದ
ಆಯತ್ 37
ಅವರು ನರಕದಿಂದ ಹೊರಹೋಗಲು ಬಯಸುತ್ತಾರೆ. ಆದರೆ ಅದರಿಂದ ಎಂದೆAದಿಗೂ ಹೊರಹೋಗಲು ಅವರಿಗೆ ಸಾಧ್ಯವಾಗದು. ಮತ್ತು ಅವರಿಗೆ ನಿರಂತರವಾದ ಶಿಕ್ಷೆಯಿರುವುದು.
وَالسَّارِقُ وَالسَّارِقَةُ فَاقْطَعُوا أَيْدِيَهُمَا جَزَاءً بِمَا كَسَبَا نَكَالًا مِّنَ اللَّهِ ۗ وَاللَّهُ عَزِيزٌ حَكِيمٌ ٣٨
📖 ಅನುವಾದ
ಆಯತ್ 38
ಕದಿಯುವವನ ಮತ್ತು ಕದಿಯುವವಳ ಕೈಗಳನ್ನು ಕತ್ತರಿಸಿರಿ. ಅದು ಅವರು ಗಳಿಸಿರುವುದರ ಪ್ರತಿಫಲ ಮತ್ತು ಅಲ್ಲಾಹನ ಕಡೆಯ ಶಿಕ್ಷೆಯಾಗಿದೆ ಮತ್ತು ಅಲ್ಲಾಹನು ಸಾಮರ್ಥ್ಯವುಳ್ಳವನೂ, ಯುಕ್ತಿಪೂರ್ಣನೂ ಆಗಿದ್ದಾನೆ.
فَمَن تَابَ مِن بَعْدِ ظُلْمِهِ وَأَصْلَحَ فَإِنَّ اللَّهَ يَتُوبُ عَلَيْهِ ۗ إِنَّ اللَّهَ غَفُورٌ رَّحِيمٌ ٣٩
📖 ಅನುವಾದ
ಆಯತ್ 39
ಆದರೆ ಯಾರಾದರೂ ಅಕ್ರಮವೆಸಗಿದ ಬಳಿಕ ಪಶ್ಚಾತ್ತಾಪ ಪಟ್ಟರೆ ಮತ್ತು ಸುಧಾರಣೆ ಮಾಡಿಕೊಂಡರೆ ಅಲ್ಲಾಹನು ಅವರ ಪಶ್ಚಾತ್ತಾಪವನ್ನು ಸ್ವೀಕರಿಸುತ್ತಾನೆ ಖಂಡಿತವಾಗಿಯು ಅಲ್ಲಾಹನು ಅತ್ಯಧಿಕ ಕ್ಷಮಿಸುವವನೂ ಕರುಣೆ ತೋರುವವನಾಗಿದ್ದಾನೆ.
أَلَمْ تَعْلَمْ أَنَّ اللَّهَ لَهُ مُلْكُ السَّمَاوَاتِ وَالْأَرْضِ يُعَذِّبُ مَن يَشَاءُ وَيَغْفِرُ لِمَن يَشَاءُ ۗ وَاللَّهُ عَلَىٰ كُلِّ شَيْءٍ قَدِيرٌ ٤٠
📖 ಅನುವಾದ
ಆಯತ್ 40
ಆಕಾಶಗಳ ಮತ್ತು ಭೂಮಿಯ ಅಧಿಪತ್ಯವು ಅಲ್ಲಾಹನಿಗೇ ಸೇರಿದ್ದೆಂದು ನಿಮಗೆ ತಿಳಿದಿಲ್ಲವೇ? ತಾನಿಚ್ಛಿಸುವವರನ್ನು ಅವನು ಶಿಕ್ಷಿಸುತ್ತಾನೆ ಮತ್ತು ತಾನಿಚ್ಛಿಸುವವರನ್ನು ಅವನು ಕ್ಷಮಿಸುತ್ತಾನೆ. ಅಲ್ಲಾಹನು ಸಕಲ ಸಂಗತಿಗಳ ಮೇಲೆ ಸಾಮರ್ಥ್ಯವುಳ್ಳವನಾಗಿದ್ದಾನೆ.
۞ يَا أَيُّهَا الرَّسُولُ لَا يَحْزُنكَ الَّذِينَ يُسَارِعُونَ فِي الْكُفْرِ مِنَ الَّذِينَ قَالُوا آمَنَّا بِأَفْوَاهِهِمْ وَلَمْ تُؤْمِن قُلُوبُهُمْ ۛ وَمِنَ الَّذِينَ هَادُوا ۛ سَمَّاعُونَ لِلْكَذِبِ سَمَّاعُونَ لِقَوْمٍ آخَرِينَ لَمْ يَأْتُوكَ ۖ يُحَرِّفُونَ الْكَلِمَ مِن بَعْدِ مَوَاضِعِهِ ۖ يَقُولُونَ إِنْ أُوتِيتُمْ هَٰذَا فَخُذُوهُ وَإِن لَّمْ تُؤْتَوْهُ فَاحْذَرُوا ۚ وَمَن يُرِدِ اللَّهُ فِتْنَتَهُ فَلَن تَمْلِكَ لَهُ مِنَ اللَّهِ شَيْئًا ۚ أُولَٰئِكَ الَّذِينَ لَمْ يُرِدِ اللَّهُ أَن يُطَهِّرَ قُلُوبَهُمْ ۚ لَهُمْ فِي الدُّنْيَا خِزْيٌ ۖ وَلَهُمْ فِي الْآخِرَةِ عَذَابٌ عَظِيمٌ ٤١
📖 ಅನುವಾದ
ಆಯತ್ 41
ಓ ಸಂದೇಶವಾಹಕರೇ, ನಾವು ಸತ್ಯವಿಶ್ವಾಸವಿಟ್ಟೆವು ಎಂದು ಬಾಯಿ ಮಾತಿನಲ್ಲಿ ಹೇಳುವ ಹಾಗೂ ಹೃದಯದಲ್ಲಿ ವಿಶ್ವಾಸವಿಲ್ಲದ ಕಪಟವಿಶ್ವಾಸಿಗಳ ಪೈಕಿ ಮತ್ತು ಯಹೂದರ ಪೈಕಿ ಸತ್ಯನಿಷೇಧದೆಡೆಗೆ ಧಾವಿಸುತ್ತಿರುವವರ ಅವಸ್ಥೆಯು ನಿಮ್ಮನ್ನು ದುಃಖಕ್ಕೀಡು ಮಾಡದಿರಲಿ. ಕೆಲವರು ಹೀಗಿರುತ್ತಾರೆ ಅವರು ಸುಳ್ಳು ವದಂತಿಗಳನ್ನು ಆಲಿಸುವವರೂ, ಮತ್ತು ನಿಮ್ಮ ಬಳಿಗೆ ಇದುವರೆಗೂ ಬರದಂತಹ ಜನರ ಗೂಢಾಚಾರರೂ ಆಗಿದ್ದಾರೆ. ಅವರು ಗ್ರಂಥ ವಾಕ್ಯಗಳನ್ನು ಅವುಗಳ ನೈಜ ಸ್ಥಾನದಿಂದ ಬದಲಿಸುತ್ತಾರೆ. ಮತ್ತು ಹೇಳುತ್ತಾರೆ (ಪೈಗಂಬರರ ಬಳಿ) ಇದೇ ವಿಧಿಯು ನಿಮಗೆ ನೀಡಲಾಗುವುದಾದರೆ ನೀವು ಅದನ್ನು ಸ್ವೀಕರಿಸಿರಿ. ಇದೇ ವಿಧಿಯು ನೀಡಲಾಗುವುದಿಲ್ಲವೆಂದಾದರೆ ನೀವು ಎಚ್ಚರ ವಹಿಸಿರಿ. ಅಲ್ಲಾಹನು ಯಾರನ್ನಾದರೂ ಗೊಂದಲಗೊಳಿಸಲು ಇಚ್ಚಿಸಿದರೆ ಅವನಿಗೆ ಅಲ್ಲಾಹನಿಂದ ಏನನ್ನೂ ತಡೆಯಲೂ ನಿಮಗೆ ಸಾಧ್ಯವಿಲ್ಲ. ಅಲ್ಲಾಹನು ಅವರ ಹೃದಯಗಳನ್ನು ಶುದ್ಧೀಕರಿಸಲು ಇಚ್ಛಿಸುವುದಿಲ್ಲ. ಅವರಿಗೆ ಇಹಲೋಕದಲ್ಲಿ ಅಪಮಾನವಿದೆ ಮತ್ತು ಪರಲೋಕದಲ್ಲೂ ಕಠಿಣ ಶಿಕ್ಷೆಯಿದೆ.
سَمَّاعُونَ لِلْكَذِبِ أَكَّالُونَ لِلسُّحْتِ ۚ فَإِن جَاءُوكَ فَاحْكُم بَيْنَهُمْ أَوْ أَعْرِضْ عَنْهُمْ ۖ وَإِن تُعْرِضْ عَنْهُمْ فَلَن يَضُرُّوكَ شَيْئًا ۖ وَإِنْ حَكَمْتَ فَاحْكُم بَيْنَهُم بِالْقِسْطِ ۚ إِنَّ اللَّهَ يُحِبُّ الْمُقْسِطِينَ ٤٢
📖 ಅನುವಾದ
ಆಯತ್ 42
ಅವರು ಸುಳ್ಳನ್ನು ಆಸಕ್ತಿಯಿಂದ ಆಲಿಸುವವರೂ ನಿಷಿದ್ಧವಾದ ಸಂಪಾದನೆಯನ್ನು ಧಾರಾಳವಾಗಿ ತಿನ್ನುವವರೂ ಆಗಿದ್ದಾರೆ. ಅವರು ನಿಮ್ಮ ಬಳಿಗೆ ಬರುವುದಾದರೆ ಅವರ ನಡುವೆ ನೀವು ತೀರ್ಪು ನೀಡಿರಿ. ಅಥವಾ ಅವರನ್ನು ಕಡೆಗಣಿಸಿರಿ. ನೀನು ಅವರನ್ನು ಕಡೆಗಣಿಸುವುದಾದರೆ ಅವರು ನಿಮಗೆ ಯಾವ ತೊಂದರೆಯನ್ನು ಉಂಟುಮಾಡಲಾರರು. ಆದರೆ ನೀವು ತೀರ್ಪು ನೀಡುವುದಾದರೆ ಅವರ ನಡುವೆ ನ್ಯಾಯಸಮ್ಮತವಾದ ತೀರ್ಪನ್ನು ನೀಡಿರಿ. ಖಂಡಿತವಾಗಿಯು ನ್ಯಾಯ ಪಾಲಿಸುವವರನ್ನು ಅಲ್ಲಾಹನು ಮೆಚ್ಚುತ್ತಾನೆ.
وَكَيْفَ يُحَكِّمُونَكَ وَعِندَهُمُ التَّوْرَاةُ فِيهَا حُكْمُ اللَّهِ ثُمَّ يَتَوَلَّوْنَ مِن بَعْدِ ذَٰلِكَ ۚ وَمَا أُولَٰئِكَ بِالْمُؤْمِنِينَ ٤٣
📖 ಅನುವಾದ
ಆಯತ್ 43
ಅವರ ಬಳಿ ಅಲ್ಲಾಹನ ವಿಧಿ ನಿಯಮಗಳಿರುವ ತೌರಾತ್ ಇದ್ದು ಆ ಬಳಿಕ ಅವರು ವಿಮುಖರಾಗುತ್ತಿರುವಾಗ ಅವರು ನಿಮ್ಮನ್ನು ತೀರ್ಪುಗಾರನನ್ನಾಗಿ ಮಾಡುವುದಾದರೂ ಹೇಗೆ? ವಾಸ್ತವದಲ್ಲಿ ಅವರು ಸತ್ಯವಿಶ್ವಾಸಿಗಳಲ್ಲ.
إِنَّا أَنزَلْنَا التَّوْرَاةَ فِيهَا هُدًى وَنُورٌ ۚ يَحْكُمُ بِهَا النَّبِيُّونَ الَّذِينَ أَسْلَمُوا لِلَّذِينَ هَادُوا وَالرَّبَّانِيُّونَ وَالْأَحْبَارُ بِمَا اسْتُحْفِظُوا مِن كِتَابِ اللَّهِ وَكَانُوا عَلَيْهِ شُهَدَاءَ ۚ فَلَا تَخْشَوُا النَّاسَ وَاخْشَوْنِ وَلَا تَشْتَرُوا بِآيَاتِي ثَمَنًا قَلِيلًا ۚ وَمَن لَّمْ يَحْكُم بِمَا أَنزَلَ اللَّهُ فَأُولَٰئِكَ هُمُ الْكَافِرُونَ ٤٤
📖 ಅನುವಾದ
ಆಯತ್ 44
ನಾವು ತೌರಾತನ್ನು ಅವತೀರ್ಣಗೊಳಿಸಿದ್ದೇವೆ. ಅದರಲ್ಲಿ ಮಾರ್ಗದರ್ಶನ ಮತ್ತು ಪ್ರಕಾಶವಿದೆ. ಯಹೂದರ ನಡುವೆ ಅಲ್ಲಾಹನಿಗೆ ಶರಣಾಗತರಾದ ಪೈಗಂಬರರೂ, ಪುಣ್ಯಪುರುಷರೂ, ಧರ್ಮವಿದ್ವಾಂಸರೂ ತೌರಾತ್ಗನುಗುಣವಾಗಿ ತೀರ್ಪು ನೀಡುತ್ತಿದ್ದರು. ಏಕೆಂದರೆ ಅವರಿಗೆ ಅಲ್ಲಾಹನ ಆ ಗ್ರಂಥದ ಸಂರಕ್ಷಣೆಯನ್ನು ವಹಿಸಲಾಗಿತ್ತು. ಅವರು ಅದಕ್ಕೆ ಸಾಕ್ಷಿಗಳಾಗಿದ್ದರು. (ಯಹೂದಿ ಪುರೋಹಿತರೇ) ನೀವು ಜನರನ್ನು ಭಯಪಡಬೇಡರಿ. ನನ್ನನ್ನು ಮಾತ್ರ ಭಯಪಡಿರಿ. ನನ್ನ ಸೂಕ್ತಿಗಳನ್ನು ನೀವು ತುಚ್ಛ ಬೆಲೆಗೆ ಮಾರಬೇಡಿರಿ. ಯಾರು ಅಲ್ಲಾಹನು ಅವತೀರ್ಣಗೊಳಿಸಿರುವುದಕ್ಕೆ ಅನುಸಾರವಾಗಿ ತೀರ್ಪು ನೀಡುವುದಿಲ್ಲವೋ ಅವರೇ ನಿಷೇಧಿಗಳಾಗಿದ್ದಾರೆ.
وَكَتَبْنَا عَلَيْهِمْ فِيهَا أَنَّ النَّفْسَ بِالنَّفْسِ وَالْعَيْنَ بِالْعَيْنِ وَالْأَنفَ بِالْأَنفِ وَالْأُذُنَ بِالْأُذُنِ وَالسِّنَّ بِالسِّنِّ وَالْجُرُوحَ قِصَاصٌ ۚ فَمَن تَصَدَّقَ بِهِ فَهُوَ كَفَّارَةٌ لَّهُ ۚ وَمَن لَّمْ يَحْكُم بِمَا أَنزَلَ اللَّهُ فَأُولَٰئِكَ هُمُ الظَّالِمُونَ ٤٥
📖 ಅನುವಾದ
ಆಯತ್ 45
ನಾವು ಯಹೂದರಿಗೆ ತೌರಾತ್ನಲ್ಲಿ ಹೀಗೆ ವಿಧಿಸಿದ್ದೆವು ಅಂದರೆ ಪ್ರಾಣದ ಬದಲಿಗೆ ಪ್ರಾಣ. ಕಣ್ಣಿನ ಬದಲಿಗೆ ಕಣ್ಣು, ಮೂಗಿನ ಬದಲಿಗೆ ಮೂಗು, ಕಿವಿಯ ಬದಲಿಗೆ ಕಿವಿ, ಹಲ್ಲಿನ ಬದಲಿಗೆ ಹಲ್ಲು ಮತ್ತು ಗಾಯಗಳಿಗೂ ತತ್ಸಮಾನ ಪ್ರತೀಕಾರವಿದೆ. ನಂತರ ಯಾರಾದರೂ ಆ ಮುಯ್ಯಿ (ಪರಿಹಾರ ಧನ) ಕ್ಷಮಿಸುವುದಾದರೆ ಅದು ಅವನ (ಪಾಪಗಳ) ಪ್ರಾಯಶ್ಚಿತವಾಗಿದೆ. ಅಲ್ಲಾಹನು ಅವತೀರ್ಣಗೊಳಿಸಿರುವುದಕ್ಕೆ ಅನುಸಾರವಾಗಿ ಯಾರು ತೀರ್ಪು ನೀಡುವುದಿಲ್ಲವೋ ಅವರೇ ಅಕ್ರಮಿಗಳಾಗಿದ್ದಾರೆ.
وَقَفَّيْنَا عَلَىٰ آثَارِهِم بِعِيسَى ابْنِ مَرْيَمَ مُصَدِّقًا لِّمَا بَيْنَ يَدَيْهِ مِنَ التَّوْرَاةِ ۖ وَآتَيْنَاهُ الْإِنجِيلَ فِيهِ هُدًى وَنُورٌ وَمُصَدِّقًا لِّمَا بَيْنَ يَدَيْهِ مِنَ التَّوْرَاةِ وَهُدًى وَمَوْعِظَةً لِّلْمُتَّقِينَ ٤٦
📖 ಅನುವಾದ
ಆಯತ್ 46
ಮತ್ತು ನಾವು ಆ ಪೈಗಂಬರರ ನಂತರ ಮರ್ಯಮರ ಪುತ್ರರಾದ ಈಸಾರನ್ನು ತಮಗಿಂತ ಮುಂಚೆಯಿರುವ ತೌರಾತನ್ನು ಸತ್ಯವೆಂದು ದೃಢಿಕರಿಸುವವರಾಗಿ ನಿಯೋಗಿಸದೆವು. ಮತ್ತು ಸನ್ಮಾರ್ಗದರ್ಶನ ಮತ್ತು ಪ್ರಕಾಶವನ್ನು ಹೊಂದಿದ್ದ ಇಂಜೀಲನ್ನು ನಾವು ಅವರಿಗೆ ದಯಪಾಲಿಸಿದೆವು. ಅದು ತನ್ನ ಮುಂಚಿರುವ ತೌರಾತನ್ನು ಸತ್ಯವೆಂದು ದೃಢೀಕರಿಸುವಂತದ್ದೂ ಭಯಭಕ್ತಿ ಪಾಲಿಸುವವರಿಗೆ ಮಾರ್ಗದರ್ಶನ ಮತ್ತು ಸದುಪದೇಶವೂ ಆಗಿತ್ತು.
وَلْيَحْكُمْ أَهْلُ الْإِنجِيلِ بِمَا أَنزَلَ اللَّهُ فِيهِ ۚ وَمَن لَّمْ يَحْكُم بِمَا أَنزَلَ اللَّهُ فَأُولَٰئِكَ هُمُ الْفَاسِقُونَ ٤٧
📖 ಅನುವಾದ
ಆಯತ್ 47
ಮತ್ತು ಇಂಜೀಲಿನ ಅನುಯಾಯಿಗಳು ಅಲ್ಲಾಹನು ಇಂಜೀಲ್ನಲ್ಲಿ ಅವತೀರ್ಣಗೊಳಿಸಿರುವ ಪ್ರಕಾರ ತೀರ್ಪು ನೀಡಲಿ ಮತ್ತು ಅಲ್ಲಾಹನು ಅವತೀರ್ಣಗೊಳಿಸಿರುವುದಕ್ಕೆ ಅನುಸಾರವಾಗಿ ಯಾರು ತೀರ್ಪು ನೀಡುವುದಿಲ್ಲವೋ ಅವರೇ ಧಿಕ್ಕಾರಿಗಳಾಗಿದ್ದಾರೆ.
وَأَنزَلْنَا إِلَيْكَ الْكِتَابَ بِالْحَقِّ مُصَدِّقًا لِّمَا بَيْنَ يَدَيْهِ مِنَ الْكِتَابِ وَمُهَيْمِنًا عَلَيْهِ ۖ فَاحْكُم بَيْنَهُم بِمَا أَنزَلَ اللَّهُ ۖ وَلَا تَتَّبِعْ أَهْوَاءَهُمْ عَمَّا جَاءَكَ مِنَ الْحَقِّ ۚ لِكُلٍّ جَعَلْنَا مِنكُمْ شِرْعَةً وَمِنْهَاجًا ۚ وَلَوْ شَاءَ اللَّهُ لَجَعَلَكُمْ أُمَّةً وَاحِدَةً وَلَٰكِن لِّيَبْلُوَكُمْ فِي مَا آتَاكُمْ ۖ فَاسْتَبِقُوا الْخَيْرَاتِ ۚ إِلَى اللَّهِ مَرْجِعُكُمْ جَمِيعًا فَيُنَبِّئُكُم بِمَا كُنتُمْ فِيهِ تَخْتَلِفُونَ ٤٨
📖 ಅನುವಾದ
ಆಯತ್ 48
ಓ ಪೈಗಂಬರರೇ, ನಾವು ನಿಮ್ಮ ಕಡೆಗೆ ಸತ್ಯದೊಂದಿಗೆ ಈ ಗ್ರಂಥವನ್ನು ಅವತೀರ್ಣಗೊಳಿಸಿದ್ದೇವೆ. ಇದು ತನಗಿಂತ ಮುಂಚಿನ ಗ್ರಂಥವನ್ನು ಸತ್ಯವೆಂದು ದೃಢೀಕರಿಸುತ್ತದೆ ಮತ್ತು ಅವುಗಳನ್ನು ಸಂರಕ್ಷಿಸುತ್ತದೆ ಆದ್ದರಿಂದ ನೀವು ಅವರ ನಡುವೆ ಅಲ್ಲಾಹನಿಂದ ಅವತೀರ್ಣಗೊಂಡಿರುವ ಗ್ರಂಥದ ಪ್ರಕಾರ ತೀರ್ಪು ನೀಡಿರಿ. ಈ ಸತ್ಯವನ್ನು ತೊರೆದು ನೀವು ಅವರ ಇಚ್ಛೆಗಳನ್ನು ಹಿಂಬಾಲಿಸಬಾರದು. ನಿಮ್ಮಲ್ಲಿನ ಪ್ರತಿಯೊಂದು ಸಮುದಾಯಕ್ಕೂ ಒಂದೊAದು ನಿಯಮ ಸಂಹಿತೆ ಮತ್ತು ಕರ್ಮ ಮಾರ್ಗವನ್ನು ನಾವು ನಿಶ್ಚಯಿಸಿದ್ದೇವೆ. ಅಲ್ಲಾಹನು ಇಚ್ಛಿಸುತ್ತಿದ್ದರೆ ನಿಮ್ಮೆಲ್ಲರನ್ನು ಒಂದೇ ಸಮುದಾಯವನ್ನಾಗಿಸುತ್ತಿದ್ದನು. ಆದರೆ ಅವನು ನಿಮಗೆ ದಯಪಾಲಿಸುವುದರಲ್ಲಿ ನಿಮ್ಮನ್ನು ಪರೀಕ್ಷಿಸಲು ಇಚ್ಛಿಸುತ್ತಾನೆ. ನೀವು ಸತ್ಕರ್ಮಗಳೆಡೆಗೆ ಸ್ಪರ್ಧಿಸಿರಿ. ನಿಮ್ಮೆಲ್ಲರ ಮರಳುವಿಕೆಯು ಅಲ್ಲಾಹನ ಕಡೆಗೇ ಆಗಿದೆ ಮತ್ತು ಅವನು ನೀವು ಭಿನ್ನತೆ ಹೊಂದಿರುವ ಸಕಲ ವಿಷಯಗಳ ಕುರಿತು ನಿಮಗೆ ತಿಳಿಸಿಕೊಡುವನು.
وَأَنِ احْكُم بَيْنَهُم بِمَا أَنزَلَ اللَّهُ وَلَا تَتَّبِعْ أَهْوَاءَهُمْ وَاحْذَرْهُمْ أَن يَفْتِنُوكَ عَن بَعْضِ مَا أَنزَلَ اللَّهُ إِلَيْكَ ۖ فَإِن تَوَلَّوْا فَاعْلَمْ أَنَّمَا يُرِيدُ اللَّهُ أَن يُصِيبَهُم بِبَعْضِ ذُنُوبِهِمْ ۗ وَإِنَّ كَثِيرًا مِّنَ النَّاسِ لَفَاسِقُونَ ٤٩
📖 ಅನುವಾದ
ಆಯತ್ 49
ಅಲ್ಲಾಹನು ಅವತೀರ್ಣಗೊಳಿಸಿರುವ ನಿಯಮಕ್ಕನುಸಾರವಾಗಿಯೇ ನೀವು ಅವರ ನಡುವೆ ತೀರ್ಪು ನೀಡಿರಿ ಮತ್ತು ಅವರ ಇಚ್ಛೆಗಳನ್ನು ಹಿಂಬಾಲಿಸಬೇಡಿರಿ ಮತ್ತು ಅಲ್ಲಾಹನು ನಿಮ್ಮ ಮೇಲೆ ಅವತೀರ್ಣಗೊಳಿಸಿರುವ ಯಾವುದಾದರೂ ಆದೇಶದಿಂದ ಅವರು ನಿಮ್ಮನ್ನು ದಾರಿ ತಪ್ಪಿಸಿದಂತೆ ಎಚ್ಚರ ವಹಿಸಿರಿ. ಇನ್ನು ಅವರು ವಿಮುಖರಾಗುವುದಾದರೆ ಅಲ್ಲಾಹನು ಅವರ ಪಾಪಗಳ ನಿಮಿತ್ತ ಅವರಿಗೆ ಶಿಕ್ಷಿಸಲಿಚ್ಚಿಸುತ್ತಾನೆಂದು ತಿಳಿದುಕೊಳ್ಳಿರಿ. ಮತ್ತು ಹೆಚ್ಚಿನ ಜನರು ಧಿಕ್ಕಾರಿಗಳೇ ಆಗಿರುತ್ತಾರೆ.
أَفَحُكْمَ الْجَاهِلِيَّةِ يَبْغُونَ ۚ وَمَنْ أَحْسَنُ مِنَ اللَّهِ حُكْمًا لِّقَوْمٍ يُوقِنُونَ ٥٠
📖 ಅನುವಾದ
ಆಯತ್ 50
ಅವರು ಅಜ್ಞಾನ ಕಾಲದ ತೀರ್ಪನ್ನು ಬಯಸುತ್ತಿದಾರೆಯೇ? ದೃಢವಿಶ್ವಾಸಿಗಳಾದ ಜನರಿಗೆ ಅಲ್ಲಾಹನಿಗಿಂತಲೂ ಉತ್ತಮನಾದ ತೀರ್ಪುಗಾರ ಇನ್ನಾರಿದ್ದಾನೆ?
۞ يَا أَيُّهَا الَّذِينَ آمَنُوا لَا تَتَّخِذُوا الْيَهُودَ وَالنَّصَارَىٰ أَوْلِيَاءَ ۘ بَعْضُهُمْ أَوْلِيَاءُ بَعْضٍ ۚ وَمَن يَتَوَلَّهُم مِّنكُمْ فَإِنَّهُ مِنْهُمْ ۗ إِنَّ اللَّهَ لَا يَهْدِي الْقَوْمَ الظَّالِمِينَ ٥١
📖 ಅನುವಾದ
ಆಯತ್ 51
ಓ ಸತ್ಯವಿಶ್ವಾಸಿಗಳೇ, ಯಹೂದರನ್ನು ಮತ್ತು ಕ್ರೆöÊಸ್ತರನ್ನು ನೀವು ಆಪ್ತ ಮಿತ್ರನನ್ನಾಗಿ ಮಾಡಿಕೊಳ್ಳಬೇಡಿರಿ. ಅವರಂತು ಪರಸ್ಪರ ಮಿತ್ರರಾಗಿದ್ದಾರೆ. ನಿಮ್ಮ ಪೈಕಿ ಯಾರು ಅವರನ್ನು ಮಿತ್ರರನ್ನಾಗಿ ಮಾಡಿಕೊಳ್ಳುತ್ತಾನೋ ಖಂಡಿತವಾಗಿಯು ಅವನು ಅವರೊಂದಿಗೇ ಸೇರಿದವನಾಗಿದ್ದಾನೆ. ಖಂಡಿತವಾಗಿಯು ಅಕ್ರಮಿಗಳಿಗೆ ಅಲ್ಲಾಹನು ಸನ್ಮಾರ್ಗವನ್ನು ತೋರಿಸಿಕೊಡುವುದಿಲ್ಲ.
فَتَرَى الَّذِينَ فِي قُلُوبِهِم مَّرَضٌ يُسَارِعُونَ فِيهِمْ يَقُولُونَ نَخْشَىٰ أَن تُصِيبَنَا دَائِرَةٌ ۚ فَعَسَى اللَّهُ أَن يَأْتِيَ بِالْفَتْحِ أَوْ أَمْرٍ مِّنْ عِندِهِ فَيُصْبِحُوا عَلَىٰ مَا أَسَرُّوا فِي أَنفُسِهِمْ نَادِمِينَ ٥٢
📖 ಅನುವಾದ
ಆಯತ್ 52
(ಓ ಪೈಗಂಬರರೇ) ಹೃದಯಗಳಲ್ಲಿ (ಕಾಪಟ್ಯದ) ರೋಗವಿದ್ದವರು ಆತುರದಿಂದ ಅವರ (ಯಹೂದಿಗಳ) ನಡುವೆ ನುಸುಳುವುದನ್ನು ನೀವು ಕಾಣಬಹುದು ಮತ್ತು (ಕಪಟಿಗಳು) ಹೇಳುತ್ತಾರೆ. ನಮ್ಮ ಮೇಲೆ ಯಾವುದಾದರೂ ಆಪತ್ತು ಎರಗಬಹುದೆಂದು ನಾವು ಭಯಪಡುತ್ತೇವೆ. ಅಲ್ಲಾಹನು ನಿಮಗೆ (ಪೈಗಂಬರರಿಗೆ) ವಿಜಯವನ್ನು ಕರುಣಿಸಬಹುದು. ಅಥವಾ ತನ್ನ ವತಿಯಿಂದ ಬೇರೇನಾದರೂ ಸಂಗತಿಯನ್ನುAಟು ಮಾಡಲೂಬಹುದು. ಅನಂತರ ಅವರು ತಮ್ಮ ಮನಸ್ಸುಗಳಲ್ಲಿ ಅಡಿಗಿಸಿಟ್ಟಿರುವ ವಿಚಾರಗಳಿಂದಾಗಿ ವಿಷಾಧಿಸುವವರಾಗಿ ಮಾರ್ಪಡುವರು.
وَيَقُولُ الَّذِينَ آمَنُوا أَهَٰؤُلَاءِ الَّذِينَ أَقْسَمُوا بِاللَّهِ جَهْدَ أَيْمَانِهِمْ ۙ إِنَّهُمْ لَمَعَكُمْ ۚ حَبِطَتْ أَعْمَالُهُمْ فَأَصْبَحُوا خَاسِرِينَ ٥٣
📖 ಅನುವಾದ
ಆಯತ್ 53
(ಅಂದು) ಸತ್ಯ ವಿಶ್ವಾಸಿಗಳು (ಪರಸ್ಪರ) ಹೇಳುವರು: 'ನಾವು ನಿಮ್ಮೊಂದಿಗೇ ಇದ್ದೇವೆ' ಎಂದು ಅಲ್ಲಾಹನ ಮೇಲೆ ಪ್ರಬಲ ಆಣೆಯಿಟ್ಟು ಹೇಳಿದವರು ಇವರೇ ಏನು? ಅವರ ಕರ್ಮಗಳು ನಿಷ್ಫಲಗೊಂಡವು. ಹಾಗೆಯೇ ಅವರು ಪರಾಜಿತರಾಗಿಬಿಟ್ಟರು.
يَا أَيُّهَا الَّذِينَ آمَنُوا مَن يَرْتَدَّ مِنكُمْ عَن دِينِهِ فَسَوْفَ يَأْتِي اللَّهُ بِقَوْمٍ يُحِبُّهُمْ وَيُحِبُّونَهُ أَذِلَّةٍ عَلَى الْمُؤْمِنِينَ أَعِزَّةٍ عَلَى الْكَافِرِينَ يُجَاهِدُونَ فِي سَبِيلِ اللَّهِ وَلَا يَخَافُونَ لَوْمَةَ لَائِمٍ ۚ ذَٰلِكَ فَضْلُ اللَّهِ يُؤْتِيهِ مَن يَشَاءُ ۚ وَاللَّهُ وَاسِعٌ عَلِيمٌ ٥٤
📖 ಅನುವಾದ
ಆಯತ್ 54
ಓ ಸತ್ಯವಿಶ್ವಾಸಿಗಳೇ, ನಿಮ್ಮಲ್ಲಿ ಯಾರು ತನ್ನ ಧರ್ಮದಿಂದ ವಿಮುಖನಾಗುತ್ತಾನೋ ಆಗ ಸದ್ಯವೇ ಅಲ್ಲಾಹನ ಪ್ರೀತಿಗೆ ಪಾತ್ರರಾದ ಮತ್ತು ಅಲ್ಲಾಹನು ಪ್ರೀತಿಸುವ ಇನ್ನೊಂದು ಸಮುದಾಯವನ್ನು ಅವನು ಉಂಟು ಮಾಡುವನು ಆ ಸತ್ಯವಿಶ್ವಾಸಿಗಳು ವಿಶ್ವಾಸಿಗಳೊಂದಿಗೆ ಮೃದುಹೃದಯಿಗಳಾಗಿ ರುವರು. ಮತ್ತು ಸತ್ಯನಿಷೇಧಿಗಳೊಂದಿಗೆ ಕಠೋರರೂ ಆಗಿರುತ್ತಾರೆ. ಅವರು ಅಲ್ಲಾಹನ ಮಾರ್ಗದಲ್ಲಿ ಹೋರಾಡುವರು ಮತ್ತು ಅಕ್ಷೇಪಿಸುವವನ ಯಾವ ಅಕ್ಷೇಪವನ್ನು ಗಣನೆಗೆ ತೆಗೆದುಕೊಳ್ಳಲಾರರು. ಇದು ಅಲ್ಲಾಹನ ಅನುಗ್ರಹವಾಗಿದೆ. ಅವನು ತಾನಿಚ್ಛಿಸುವವರಿಗೆ ಅದನ್ನು ನೀಡುವನು. ಅಲ್ಲಾಹನು ಆಗಾಧ ಸಾಮರ್ಥ್ಯವುಳ್ಳವನೂ, ಸರ್ವಜ್ಞನೂ ಆಗಿದ್ದಾನೆ.
إِنَّمَا وَلِيُّكُمُ اللَّهُ وَرَسُولُهُ وَالَّذِينَ آمَنُوا الَّذِينَ يُقِيمُونَ الصَّلَاةَ وَيُؤْتُونَ الزَّكَاةَ وَهُمْ رَاكِعُونَ ٥٥
📖 ಅನುವಾದ
ಆಯತ್ 55
ವಿಶ್ವಾಸಿಗಳೇ ನಿಮ್ಮ ಮಿತ್ರ ಸ್ವತಃ ಅಲ್ಲಾಹನಾಗಿದ್ದಾನೆ ಮತ್ತು ಅವನ ಸಂದೇಶವಾಹಕರಾಗಿದ್ದರೆ ನಮಾಝನ್ನು ಸಂಸ್ಥಾಪಿಸುವ ಝಕಾತ್ ನೀಡುವ ಮತ್ತು ಅಲ್ಲಾಹನಿಗೆ ವಿನಯದಿಂದ ಬಾಗುವ ಸತ್ಯವಿಶ್ವಾಸಿಗಳಾಗಿದ್ದಾರೆ.
وَمَن يَتَوَلَّ اللَّهَ وَرَسُولَهُ وَالَّذِينَ آمَنُوا فَإِنَّ حِزْبَ اللَّهِ هُمُ الْغَالِبُونَ ٥٦
📖 ಅನುವಾದ
ಆಯತ್ 56
ಮತ್ತು ಯಾರು ಅಲ್ಲಾಹನನ್ನು, ಅವನ ಸಂದೇಶವಾಹಕರನ್ನು, ವಿಶ್ವಾಸಿಗಳನ್ನು ಆಪ್ತ ಮಿತ್ರರನ್ನಾಗಿ ಮಾಡಿಕೊಂಡರೆ ಖಂಡಿತವಾಗಿಯು ಅಲ್ಲಾಹನ ಪಕ್ಷದವರೇ ಜಯಸಾಧಿಸುವವರಾಗಿದ್ದಾರೆ.
يَا أَيُّهَا الَّذِينَ آمَنُوا لَا تَتَّخِذُوا الَّذِينَ اتَّخَذُوا دِينَكُمْ هُزُوًا وَلَعِبًا مِّنَ الَّذِينَ أُوتُوا الْكِتَابَ مِن قَبْلِكُمْ وَالْكُفَّارَ أَوْلِيَاءَ ۚ وَاتَّقُوا اللَّهَ إِن كُنتُم مُّؤْمِنِينَ ٥٧
📖 ಅನುವಾದ
ಆಯತ್ 57
ಓ ಸತ್ಯವಿಶ್ವಾಸಿಗಳೇ ನಿಮಗಿಂತ ಮೊದಲು ಗ್ರಂಥ ನೀಡಲ್ಪಟ್ಟವರ ಪೈಕಿ ನಿಮ್ಮ ಧರ್ಮವನ್ನು ತಮಾಷೆ ಹಾಗೂ ವಿನೋದದ ವಸ್ತುವನ್ನಾಗಿ ಮಾಡಿದ ಜನರನ್ನು ಮತ್ತು ಸತ್ಯನಿಷೇಧಿಗಳಾದವರನ್ನು ನೀವು ಆಪ್ತಮಿತ್ರರನ್ನಾಗಿ ಮಾಡಿಕೊಳ್ಳಬೇಡಿರಿ. ನೀವು ಸತ್ಯವಿಶ್ವಾಸಿಗಳಾಗಿದ್ದರೆ ಅಲ್ಲಾಹನನ್ನು ಭಯಪಡಿರಿ.
وَإِذَا نَادَيْتُمْ إِلَى الصَّلَاةِ اتَّخَذُوهَا هُزُوًا وَلَعِبًا ۚ ذَٰلِكَ بِأَنَّهُمْ قَوْمٌ لَّا يَعْقِلُونَ ٥٨
📖 ಅನುವಾದ
ಆಯತ್ 58
ನೀವು ನಮಾಝ್ಗಾಗಿ ಕರೆ ನೀಡಿದರೆ ಅವರು ಅದನ್ನು ಒಂದು ತಮಾಷೆ ಮತ್ತು ವಿನೋದದ ವಸ್ತುವನ್ನಾಗಿ ಮಾಡಿಕೊಳ್ಳುತ್ತಾರೆ. ಇದು ಅವರು ಅವಿವೇಕಿಗಳಾಗಿರುವ ಕಾರಣದಿಂದಾಗಿದೆ.
قُلْ يَا أَهْلَ الْكِتَابِ هَلْ تَنقِمُونَ مِنَّا إِلَّا أَنْ آمَنَّا بِاللَّهِ وَمَا أُنزِلَ إِلَيْنَا وَمَا أُنزِلَ مِن قَبْلُ وَأَنَّ أَكْثَرَكُمْ فَاسِقُونَ ٥٩
📖 ಅನುವಾದ
ಆಯತ್ 59
ನೀವು ಹೇಳಿರಿ: ಓ ಗ್ರಂಥದವರೇ ನಾವು ಅಲ್ಲಾಹನಲ್ಲೂ, ನಮ್ಮೆಡೆಗೆ ಅವತೀರ್ಣ ಗೊಳಿಸಲಾದ ಗ್ರಂಥದಲ್ಲೂ, ಇದಕ್ಕಿಂತ ಮುಂಚೆ ಅವತೀರ್ಣಗೊಳಿಸಲಾದ ಗ್ರಂಥದಲ್ಲೂ ವಿಶ್ವಾಸಿವಿರಿದ್ದೇವೆ ಎಂಬುದಕ್ಕಾಗಿ ಮತ್ತು ನಿಮ್ಮಲ್ಲಿ ಹೆಚ್ಚಿನವರೂ ಧರ್ಮ ಧಿಕ್ಕಾರಿಗಳಾಗಿರುವುದರಿಂದಲೇ ಹೊರತು ಇನ್ನಾವ ಕಾರಣಕ್ಕಾಗಿ ನೀವು ನಮ್ಮನ್ನು ಆಪಾದಿಸುತ್ತಿರುವಿರಿ.
قُلْ هَلْ أُنَبِّئُكُم بِشَرٍّ مِّن ذَٰلِكَ مَثُوبَةً عِندَ اللَّهِ ۚ مَن لَّعَنَهُ اللَّهُ وَغَضِبَ عَلَيْهِ وَجَعَلَ مِنْهُمُ الْقِرَدَةَ وَالْخَنَازِيرَ وَعَبَدَ الطَّاغُوتَ ۚ أُولَٰئِكَ شَرٌّ مَّكَانًا وَأَضَلُّ عَن سَوَاءِ السَّبِيلِ ٦٠
📖 ಅನುವಾದ
ಆಯತ್ 60
ಹೇಳಿರಿ: ಅಲ್ಲಾಹನ ಬಳಿ ಅದಕ್ಕಿಂತಲು ಹೆಚ್ಚು ನಿಕೃಷ್ಟ ಪ್ರತಿಫಲವಿರುವವರು ಯಾರೆಂದು ನಾನು ನಿಮಗೆ ತಿಳಿಸಿಕೊಡಲೇ? ಯಾರನ್ನು ಅಲ್ಲಾಹನು ಶಪಿಸಿರುವನೋ, ಯಾರ ಮೇಲೆ ಅವನು ಕುಪಿತನಾಗಿರುವನೋ, ಮತ್ತು ಅವರ ಪೈಕಿ ಅವನು ಕಪಿಗಳನ್ನಾಗಿಯೂ, ಹಂದಿಗಳನ್ನಾಗಿಯೂ ಮಾಡಿರುವನೋ, ಯಾವ ಜನರು ಮಿಥ್ಯಾರಾಧ್ಯರುಗಳನ್ನು ಆರಾಧಿಸಿದರೋ ಅವರೇ ಅತ್ಯಂತ ನಿಕೃಷ್ಟ ಸ್ಥಾನದಲ್ಲಿರುವವರು ಮತ್ತು ನೇರ ಮಾರ್ಗದಿಂದ ಅತ್ಯಧಿಕವಾಗಿ ವ್ಯತಿಚಲಿಸಿದವರಾಗಿದ್ದಾರೆ.
وَإِذَا جَاءُوكُمْ قَالُوا آمَنَّا وَقَد دَّخَلُوا بِالْكُفْرِ وَهُمْ قَدْ خَرَجُوا بِهِ ۚ وَاللَّهُ أَعْلَمُ بِمَا كَانُوا يَكْتُمُونَ ٦١
📖 ಅನುವಾದ
ಆಯತ್ 61
ಕಪಟಿಗಳು ನಿಮ್ಮ ಬಳಿಗೆ ಬರುವಾಗ ಅವರು ಹೇಳುವರು: ನಾವು ವಿಶ್ವಾಸವಿರಿಸಿದ್ದೇವೆ. ವಾಸ್ತವದಲ್ಲಿ ಅವರು ಸತ್ಯನಿಷೇಧದೊಂದಿಗೆ ಬಂದಿದ್ದರು. ಸತ್ಯನಿಷೇಧದೊಂದಿಗೇ ಹಿಂದಿರುಗಿದರು ಮತ್ತು ಅವರು ಮರೆಮಾಚುತ್ತಿರುವುದರ ಕುರಿತು ಅಲ್ಲಾಹನು ಚೆನ್ನಾಗಿ ಅರಿಯುವವನಾಗಿದ್ದಾನೆ.
وَتَرَىٰ كَثِيرًا مِّنْهُمْ يُسَارِعُونَ فِي الْإِثْمِ وَالْعُدْوَانِ وَأَكْلِهِمُ السُّحْتَ ۚ لَبِئْسَ مَا كَانُوا يَعْمَلُونَ ٦٢
📖 ಅನುವಾದ
ಆಯತ್ 62
ಅವರಲ್ಲಿ ಹೆಚ್ಚಿನವರು ಪಾಪ ಕೃತ್ಯಗಳ ಕಡೆಗೆ, ಅತಿಕ್ರಮಗಳ ಕಡೆಗೆ, ನಿಷಿದ್ಧ ಸಂಪಾದನೆಯನ್ನು ತಿನ್ನುವುದರ ಕಡೆಗೆ ಧಾವಿಸಿ ಹೋಗುತ್ತಿರುವುದಾಗಿ ನೀವು ಕಾಣುವಿರಿ. ಅವರು ಮಾಡುತ್ತಿರುವುದೆಲ್ಲವೂ ನೀಚ ಕೃತ್ಯಗಳಾಗಿವೆ.
لَوْلَا يَنْهَاهُمُ الرَّبَّانِيُّونَ وَالْأَحْبَارُ عَن قَوْلِهِمُ الْإِثْمَ وَأَكْلِهِمُ السُّحْتَ ۚ لَبِئْسَ مَا كَانُوا يَصْنَعُونَ ٦٣
📖 ಅನುವಾದ
ಆಯತ್ 63
ಅವರು ಪಾಪಕರ ಮಾತುಗಳನ್ನು ಆಡುವುದರಿಂದಲೂ ಮತ್ತು ನಿಷಿದ್ದವಾದ ಸಂಪಾದನೆಯನ್ನು ತಿನ್ನುವುದರಿಂದಲೂ ಸಜ್ಜನರು ಮತ್ತು ವಿದ್ವಾಂಸರು ಅವರನ್ನು ತಡೆಯದಿದ್ದುದೇಕೆ? ನಿಸ್ಸಂಶಯವಾಗಿಯು ಅವರು ಮಾಡುತ್ತಿರುವುದು ಬಹಳ ಕೆಟ್ಟದ್ದಾಗಿದೆ.
وَقَالَتِ الْيَهُودُ يَدُ اللَّهِ مَغْلُولَةٌ ۚ غُلَّتْ أَيْدِيهِمْ وَلُعِنُوا بِمَا قَالُوا ۘ بَلْ يَدَاهُ مَبْسُوطَتَانِ يُنفِقُ كَيْفَ يَشَاءُ ۚ وَلَيَزِيدَنَّ كَثِيرًا مِّنْهُم مَّا أُنزِلَ إِلَيْكَ مِن رَّبِّكَ طُغْيَانًا وَكُفْرًا ۚ وَأَلْقَيْنَا بَيْنَهُمُ الْعَدَاوَةَ وَالْبَغْضَاءَ إِلَىٰ يَوْمِ الْقِيَامَةِ ۚ كُلَّمَا أَوْقَدُوا نَارًا لِّلْحَرْبِ أَطْفَأَهَا اللَّهُ ۚ وَيَسْعَوْنَ فِي الْأَرْضِ فَسَادًا ۚ وَاللَّهُ لَا يُحِبُّ الْمُفْسِدِينَ ٦٤
📖 ಅನುವಾದ
ಆಯತ್ 64
ಅಲ್ಲಾಹನ ಕೈಗಳು ಬಿಗಿಯಲ್ಪಟ್ಟಿವೆ ಎಂದು ಯಹೂದರು ಹೇಳುತ್ತಾರೆ ಅವರದೇ ಕೈಗಳು ಬಿಗಿಯಲ್ಪಟ್ಟಿವೆ (ಜಿಪುಣತನದಿಂದ) ಮತ್ತು ಅವರ ಈ ಮಾತಿನ ನಿಮಿತ್ತ ಅವರ ಮೇಲೆ ಶಾಪ ಎರಗಿದೆ. ಹಾಗಲ್ಲ, ಅಲ್ಲಾಹನ ಎರಡೂ ಕೈಗಳು ವಿಶಾಲವಾಗಿ ತೆರೆದುಕೊಂಡಿವೆ. ಅವನು ಇಚ್ಛಿಸುವುದನ್ನು ಖರ್ಚು ಮಾಡುತ್ತಾನೆ ಮತ್ತು (ಓ ಪೈಗಂಬರರೇ) ನಿಮ್ಮೆಡೆಗೆ ನಿಮ್ಮ ಪ್ರಭುವಿನ ವತಿಯಿಂದ ಅವತೀರ್ಣಗೊಳ್ಳುತ್ತಿರುವುದು (ಕುರ್ಆನ್) ಅವರ ಪೈಕಿ ಹೆಚ್ಚಿನವರ ಧಿಕ್ಕಾರ ಮತ್ತು ನಿಷೇಧವನ್ನು ಹೆಚ್ಚಿಸುತ್ತದೆ. ಮತ್ತು ನಾವು ಅವರ ನಡುವೆ ಪುನರುತ್ಥಾನದ ದಿನದವರೆಗೆ ಶತ್ರುತ್ವ ಮತ್ತು ವಿದ್ವೇಷವನ್ನು ಹಾಕಿಬಿಟ್ಟಿರುತ್ತೇವೆ. ಅವರು ಯುದ್ಧಾಗ್ನಿಯನ್ನು ಹೆಚ್ಚಿಸಲು ಇಚ್ಛಿಸುವಾಗಲೆಲ್ಲಾ ಅಲ್ಲಾಹನು ಅದನ್ನು ನಂದಿಸಿ ಬಿಡುತ್ತಾನೆ. ಅವರು ನಾಡಿನಲ್ಲಿ ಕ್ಷೆÆÃಭೆ ಹರಡುತ್ತಾರೆ ಮತ್ತು ಅಲ್ಲಾಹನು ಕ್ಷೆÆÃಭೆಗಾರರನ್ನು ಮೆಚ್ಚುವುದಿಲ್ಲ.
وَلَوْ أَنَّ أَهْلَ الْكِتَابِ آمَنُوا وَاتَّقَوْا لَكَفَّرْنَا عَنْهُمْ سَيِّئَاتِهِمْ وَلَأَدْخَلْنَاهُمْ جَنَّاتِ النَّعِيمِ ٦٥
📖 ಅನುವಾದ
ಆಯತ್ 65
ಗ್ರಂಥದವರು ವಿಶ್ವಾಸವಿಟ್ಟಿದ್ದರೆ ಮತ್ತು ಭಯಭಕ್ತಿ ಪಾಲಿಸಿದ್ದರೆ ನಾವು ಅವರ ಸಕಲ ಪಾಪಗಳನ್ನು ಮನ್ನಿಸಿ ಬಿಡುತ್ತಿದ್ದೆವು ಮತ್ತು ಅನುಗ್ರಹಪೂರ್ಣವಾದ ಸ್ವರ್ಗೋದ್ಯಾನಗಳಿಗೆ ಅವರನ್ನು ಕೊಂಡೊಯ್ಯುತ್ತಿದ್ದೆವು
وَلَوْ أَنَّهُمْ أَقَامُوا التَّوْرَاةَ وَالْإِنجِيلَ وَمَا أُنزِلَ إِلَيْهِم مِّن رَّبِّهِمْ لَأَكَلُوا مِن فَوْقِهِمْ وَمِن تَحْتِ أَرْجُلِهِم ۚ مِّنْهُمْ أُمَّةٌ مُّقْتَصِدَةٌ ۖ وَكَثِيرٌ مِّنْهُمْ سَاءَ مَا يَعْمَلُونَ ٦٦
📖 ಅನುವಾದ
ಆಯತ್ 66
ಅವರು ತೌರಾತ್, ಇಂಜೀಲ್ ಮತ್ತು ಅವರ ಪ್ರಭುವಿನ ವತಿಯಿಂದ ಅವರೆಡೆಗೆ ಅವತೀರ್ಣಗೊಳಿಸಲಾದ ಕುರ್ಆನನ್ನು ಅನುಸರಿಸುತ್ತಿದ್ದರೆ ಅವರು ತಮ್ಮ ಮೇಲ್ಗಡೆಯಿಂದಲೂ, ಕಾಲಡಿಯಿಂದಲೂ ಅನ್ನಾಧಾರವನ್ನು ಪಡೆಯುತ್ತಿದ್ದರು ಮತ್ತು ತಿನ್ನುತ್ತಿದ್ದರು. ಅವರ ಪೈಕಿ ಒಂದು ಗುಂಪು ಮದ್ಯಮ ನಿಲುವಿನದ್ದಾಗಿದೆ ಮತ್ತು ಅವರ ಪೈಕಿಯ ಹೆಚ್ಚಿನವರು ದುಷ್ಕೃತ್ಯಗಳನ್ನೆಸಗುತ್ತಿದ್ದಾರೆ.
۞ يَا أَيُّهَا الرَّسُولُ بَلِّغْ مَا أُنزِلَ إِلَيْكَ مِن رَّبِّكَ ۖ وَإِن لَّمْ تَفْعَلْ فَمَا بَلَّغْتَ رِسَالَتَهُ ۚ وَاللَّهُ يَعْصِمُكَ مِنَ النَّاسِ ۗ إِنَّ اللَّهَ لَا يَهْدِي الْقَوْمَ الْكَافِرِينَ ٦٧
📖 ಅನುವಾದ
ಆಯತ್ 67
ಓ ಸಂದೇಶವಾಹಕರೇ, ನಿಮ್ಮ ಪ್ರಭುವಿನ ಕಡೆಯಿಂದ ನಿಮ್ಮೆಡೆಗೆ ಅವತೀರ್ಣಗೊಳಿಸಲಾಗುತ್ತಿರುವುದನ್ನು ಜನರಿಗೆ ತಲುಪಿಸಿರಿ. ಇನ್ನು ನೀವು ಹಾಗೆ ಮಾಡದಿದ್ದರೆ ನೀವು ಅಲ್ಲಾಹನ ದೌತ್ಯವನ್ನು ಈಡೇರಿಸಿಲ್ಲ ಮತ್ತು ನಿಮ್ಮನ್ನು ಅಲ್ಲಾಹನು ಜನರ ಕುತಂತ್ರಗಳಿAದ ರಕ್ಷಿಸುವನು. ನಿಸ್ಸಂಶಯವಾಗಿಯು ಅಲ್ಲಾಹನು ಸತ್ಯನಿಷೇಧಿಗಳಾದ ಜನರಿಗೆ ಸನ್ಮಾರ್ಗವನ್ನು ನೀಡುವುದಿಲ್ಲ.
قُلْ يَا أَهْلَ الْكِتَابِ لَسْتُمْ عَلَىٰ شَيْءٍ حَتَّىٰ تُقِيمُوا التَّوْرَاةَ وَالْإِنجِيلَ وَمَا أُنزِلَ إِلَيْكُم مِّن رَّبِّكُمْ ۗ وَلَيَزِيدَنَّ كَثِيرًا مِّنْهُم مَّا أُنزِلَ إِلَيْكَ مِن رَّبِّكَ طُغْيَانًا وَكُفْرًا ۖ فَلَا تَأْسَ عَلَى الْقَوْمِ الْكَافِرِينَ ٦٨
📖 ಅನುವಾದ
ಆಯತ್ 68
ಹೇಳಿರಿ: ಓ ಗ್ರಂಥದವರೇ, ತೌರಾತ್, ಇಂಜೀಲ್ ಮತ್ತು ಈಗ ನಿಮ್ಮೆಡೆಗೆ ನಿಮ್ಮ ಪ್ರಭುವಿನ ವತಿಯಿಂದ ಅವತೀರ್ಣಗೊಳ್ಳುತ್ತಿರುವುದನ್ನು (ಕುರ್ಆನ್) ಸ್ಥಾಪಿಸುವವರೆಗೆ ನೀವು ಯಾವುದೇ ಆಧಾರದಲ್ಲಿಲ್ಲ ಮತ್ತು ನಿಮ್ಮೆಡೆಗೆ ನಿಮ್ಮ ಪ್ರಭುವಿನ ವತಿಯಿಂದ ಅವತೀರ್ಣಗೊಳ್ಳುತಿರುವುದು ಅವರ ಪೈಕಿ ಹೆಚ್ಚಿನವರ ಧಿಕ್ಕಾರ ಮತ್ತು ನಿಷೇಧವನ್ನು ಹೆಚ್ಚಿಸುತ್ತದೆ. ಅದ್ದರಿಂದ ಸತ್ಯನಿಷೇಧಿಗಳ ಮೇಲೆ ನೀವು ದುಃಖಿಸಬೇಡಿರಿ.
إِنَّ الَّذِينَ آمَنُوا وَالَّذِينَ هَادُوا وَالصَّابِئُونَ وَالنَّصَارَىٰ مَنْ آمَنَ بِاللَّهِ وَالْيَوْمِ الْآخِرِ وَعَمِلَ صَالِحًا فَلَا خَوْفٌ عَلَيْهِمْ وَلَا هُمْ يَحْزَنُونَ ٦٩
📖 ಅನುವಾದ
ಆಯತ್ 69
ಸತ್ಯವಿಶ್ವಾಸಿಗಳು, ಯಹೂದರು, ಸಾಬಿಗಳು (ನಕ್ಷತ್ರಾರಾಧಕರು), ಕ್ರೆöÊಸ್ತರು ಯಾರೆ ಆಗಿರಲಿ ಅಲ್ಲಾಹನಲ್ಲೂ, ಅಂತ್ಯ ದಿನದಲ್ಲೂ ವಿಶ್ವಾಸವಿಡುತ್ತಾರೋ ಮತ್ತು ಸತ್ಕರ್ಮಗಳನ್ನು ಮಾಡುತ್ತಾರೋ ಅವರಿಗೆ ಯಾವ ಭಯವಿಲ್ಲ. ಮತ್ತು ಅವರು ದುಃಖಿಸಬೇಕಾಗಿಯೂ ಇಲ್ಲ.
لَقَدْ أَخَذْنَا مِيثَاقَ بَنِي إِسْرَائِيلَ وَأَرْسَلْنَا إِلَيْهِمْ رُسُلًا ۖ كُلَّمَا جَاءَهُمْ رَسُولٌ بِمَا لَا تَهْوَىٰ أَنفُسُهُمْ فَرِيقًا كَذَّبُوا وَفَرِيقًا يَقْتُلُونَ ٧٠
📖 ಅನುವಾದ
ಆಯತ್ 70
ನಾವು ಇಸ್ರಾಯೀಲ್ ಸಂತತಿಗಳಿAದ ಕರಾರನ್ನು ಪಡೆದೆವು ಮತ್ತು ಅವರ ಕಡೆಗೆ ಸಂದೇಶವಾಹಕರನ್ನು ನಿಯೋಗಿಸಿದೆವು. ಸಂದೇಶವಾಹಕರು ಅವರ ಸ್ವೇಚ್ಛೆಗೆ ವಿರುದ್ಧವಾದ ನಿಯಮಗಳೊಂದಿಗೆ ಅವರ ಬಳಿಗೆ ಬಂದಾಗ ಅವರ ಪೈಕಿ ಕೆಲವರನ್ನು ನಿಷೇಧಿಸಿದರು ಮತ್ತು ಕೆಲವರನ್ನು ಕೊಲೆಗೈದರು.
وَحَسِبُوا أَلَّا تَكُونَ فِتْنَةٌ فَعَمُوا وَصَمُّوا ثُمَّ تَابَ اللَّهُ عَلَيْهِمْ ثُمَّ عَمُوا وَصَمُّوا كَثِيرٌ مِّنْهُمْ ۚ وَاللَّهُ بَصِيرٌ بِمَا يَعْمَلُونَ ٧١
📖 ಅನುವಾದ
ಆಯತ್ 71
ಮತ್ತು ಅವರು ಯಾವುದೇ ಪರೀಕ್ಷೆ ಉಂಟಾಗದೆAದು ಭಾವಿಸಿದರು. ಆದ್ದರಿಂದ ಅವರು ಅಂಧರೂ, ಕಿವುಡರೂ ಆದರು. ನಂತರ ಅಲ್ಲಾಹನು ಅವರ ಪಶ್ಚಾತ್ತಾಪವನ್ನು ಸ್ವೀಕರಿಸಿದನು. ಬಳಿಕವೂ ಅವರಪೈಕಿ ಹೆಚ್ಚಿನವರು ಅಂಧರೂ, ಕಿವುಡರೂ ಆದರು. ಅಲ್ಲಾಹನು ಅವರು ಮಾಡುತ್ತಿರುವುದನ್ನು ಚೆನ್ನಾಗಿ ವೀಕ್ಷಿಸುವವನಾಗಿದ್ದಾನೆ.
لَقَدْ كَفَرَ الَّذِينَ قَالُوا إِنَّ اللَّهَ هُوَ الْمَسِيحُ ابْنُ مَرْيَمَ ۖ وَقَالَ الْمَسِيحُ يَا بَنِي إِسْرَائِيلَ اعْبُدُوا اللَّهَ رَبِّي وَرَبَّكُمْ ۖ إِنَّهُ مَن يُشْرِكْ بِاللَّهِ فَقَدْ حَرَّمَ اللَّهُ عَلَيْهِ الْجَنَّةَ وَمَأْوَاهُ النَّارُ ۖ وَمَا لِلظَّالِمِينَ مِنْ أَنصَارٍ ٧٢
📖 ಅನುವಾದ
ಆಯತ್ 72
ಮರ್ಯಮರ ಮಗನಾದ ಮಸೀಹನೇ ಅಲ್ಲಾಹನಾಗಿದ್ದಾನೆ ಎಂದು ಹೇಳಿದವರು ನಿಸ್ಸಂಶಯವಾಗಿಯು ಸತ್ಯನಿಷೇಧಿಗಳಾಗಿದ್ದಾರೆ. ವಸ್ತುತಃ ಸ್ವತಃ ಮಸೀಹರೆ ಅವರೊಂದಿಗೆ ಹೇಳಿದ್ದರು: ಓ ಇಸ್ರಾಯೀಲ್ ಸಂತತಿಗಳೇ, ನನ್ನ ಮತ್ತು ನಿಮ್ಮೆಲ್ಲರ ಪ್ರಭುವಾದ ಅಲ್ಲಾಹನ ಆರಾಧನೆಯನ್ನು ಮಾಡಿರಿ. ಯಾರು ಅಲ್ಲಾಹನೊಂದಿಗೆ ಸಹಭಾಗಿಯನ್ನು ನಿಶ್ಚಯಿಸುತ್ತಾನೋ ಖಂಡಿತವಾಗಿಯು ಅಲ್ಲಾಹನು ಅವನಿಗೆ ಸ್ವರ್ಗವನ್ನು ನಿಷಿದ್ಧಗೊಳಿಸಿದ್ದಾನೆ. ಅವನ ನೆಲೆಯು ನರಕವಾಗಿರುತ್ತದೆ ಮತ್ತು ಪಾಪಿಗಳ ಸಹಾಯಕರಾಗಿ ಯಾರೂ ಇರಲಾರರು.
لَّقَدْ كَفَرَ الَّذِينَ قَالُوا إِنَّ اللَّهَ ثَالِثُ ثَلَاثَةٍ ۘ وَمَا مِنْ إِلَٰهٍ إِلَّا إِلَٰهٌ وَاحِدٌ ۚ وَإِن لَّمْ يَنتَهُوا عَمَّا يَقُولُونَ لَيَمَسَّنَّ الَّذِينَ كَفَرُوا مِنْهُمْ عَذَابٌ أَلِيمٌ ٧٣
📖 ಅನುವಾದ
ಆಯತ್ 73
ಅಲ್ಲಾಹನು ಮೂವರಲ್ಲಿ ಒಬ್ಬನಾಗಿದ್ದಾನೆ ಎಂದು ಹೇಳಿದವರು ಖಂಡಿತವಾಗಿಯು ನಿಷೇಧಿಗಳಾಗಿದ್ದಾರೆ. ವಾಸ್ತವದಲ್ಲಿ ಅಲ್ಲಾಹನ ಹೊರತು ಇನ್ನಾವ ಆರಾಧ್ಯನಿಲ್ಲ. ಅವರ ಪೈಕಿ ಸತ್ಯನಿಷೇಧಿಗಳಾಗಿರುವವರಿಗೆ ವೇದನಾಜನಕವಾದ ಶಿಕ್ಷೆಯು ಖಂಡಿತ ತಲುಪುವುದು.
أَفَلَا يَتُوبُونَ إِلَى اللَّهِ وَيَسْتَغْفِرُونَهُ ۚ وَاللَّهُ غَفُورٌ رَّحِيمٌ ٧٤
📖 ಅನುವಾದ
ಆಯತ್ 74
ಅವರು ಅಲ್ಲಾಹನೆಡೆಗೆ ಮರಳಿ ಅವನೊಂದಿಗೆ ಪಾಪವಿಮೋಚನೆಯನ್ನು ಏಕೆ ಬೇಡುವುದಿಲ್ಲ? ಅಲ್ಲಾಹನು ಅತ್ಯಧಿಕ ಕ್ಷಮಿಸುವವನೂ, ಕರುಣಾನಿಧಿಯೂ ಆಗಿದ್ದಾನೆ.
مَّا الْمَسِيحُ ابْنُ مَرْيَمَ إِلَّا رَسُولٌ قَدْ خَلَتْ مِن قَبْلِهِ الرُّسُلُ وَأُمُّهُ صِدِّيقَةٌ ۖ كَانَا يَأْكُلَانِ الطَّعَامَ ۗ انظُرْ كَيْفَ نُبَيِّنُ لَهُمُ الْآيَاتِ ثُمَّ انظُرْ أَنَّىٰ يُؤْفَكُونَ ٧٥
📖 ಅನುವಾದ
ಆಯತ್ 75
ಮರ್ಯಮಳ ಮಗನಾದ ಮಸೀಹನು ಸಂದೇಶವಾಹಕನೇ ಹೊರತು ಬೇರೇನೂ ಅಲ್ಲ. ಅವರಿಗಿಂತ ಮುಂಚೆ ಅನೇಕ ಸಂದೇಶವಾಹಕರು ಗತಿಸಿ ಹೋಗಿದ್ದಾರೆ. ಅವರ ತಾಯಿಯು ಓರ್ವ ಸತ್ಯವಂತೆಯಾಗಿದ್ದರು. ಅವರಿಬ್ಬರೂ ಆಹಾರವನ್ನು ಸೇವಿಸುತ್ತಿದ್ದರು. ನಾವು ಅವರ ಮುಂದೆ ಯಾವ ರೀತಿಯಲ್ಲಿ ದೃಷ್ಟಾಂತಗಳನ್ನು ವಿವರಿಸುತ್ತಿದ್ದೇವೆಂದು ನೋಡಿರಿ ಅವರು ಯಾವ ರೀತಿ ಅಲೆದಾಡುತ್ತಿದ್ದಾರೆಂದು ನೋಡಿರಿ.
قُلْ أَتَعْبُدُونَ مِن دُونِ اللَّهِ مَا لَا يَمْلِكُ لَكُمْ ضَرًّا وَلَا نَفْعًا ۚ وَاللَّهُ هُوَ السَّمِيعُ الْعَلِيمُ ٧٦
📖 ಅನುವಾದ
ಆಯತ್ 76
(ಪೈಗಂಬರರೇ ಹೇಳಿರಿ:) ನಿಮಗೆ ಯಾವುದೇ ಲಾಭ ಅಥವಾ ಹಾನಿಯನ್ನುಂಟು ಮಾಡುವ ಅಧಿಕಾರವಿಲ್ಲದವರನ್ನು ನೀವು ಅಲ್ಲಾಹನ ಹೊರತು ಅರಾಧಿಸುತ್ತಿರುವಿರಾ? ಅಲ್ಲಾಹನೇ ಸರ್ವವನ್ನು, ಆಲಿಸುವವನೂ, ಸಂಪೂರ್ಣವಾಗಿ ಅರಿಯುವವನೂ ಆಗಿದ್ದಾನೆ.
قُلْ يَا أَهْلَ الْكِتَابِ لَا تَغْلُوا فِي دِينِكُمْ غَيْرَ الْحَقِّ وَلَا تَتَّبِعُوا أَهْوَاءَ قَوْمٍ قَدْ ضَلُّوا مِن قَبْلُ وَأَضَلُّوا كَثِيرًا وَضَلُّوا عَن سَوَاءِ السَّبِيلِ ٧٧
📖 ಅನುವಾದ
ಆಯತ್ 77
ಹೇಳಿರಿ: ಗ್ರಂಥದವರೇ, ನೀವು ತಮ್ಮ ಧರ್ಮದ ವಿಚಾರದಲ್ಲಿ ಅನ್ಯಾಯವಾಗಿ ಹದ್ದುಮೀರದಿರಿ. ಮತ್ತು ಅತಿಕ್ರಮ ಮಾಡಬೇಡಿರಿ. ಮೊದಲಿನಿಂದಲೇ ದಾರಿಗೆಟ್ಟು, ಅನೇಕ ಜನರನ್ನು ದಾರಿಗೆಡಿಸಿ ಬಿಟ್ಟಂತಹ, ಮತ್ತು ರುಜು ಮಾರ್ಗದಿಂದ ಭ್ರಷ್ಟರಾದಂತಹ ಜನರ ಸ್ವೇಚ್ಛೆಗಳನ್ನು ನೀವು ಅನುಸರಿಸಬೇಡಿರಿ.
لُعِنَ الَّذِينَ كَفَرُوا مِن بَنِي إِسْرَائِيلَ عَلَىٰ لِسَانِ دَاوُودَ وَعِيسَى ابْنِ مَرْيَمَ ۚ ذَٰلِكَ بِمَا عَصَوا وَّكَانُوا يَعْتَدُونَ ٧٨
📖 ಅನುವಾದ
ಆಯತ್ 78
ಇಸ್ರಾಯೀಲ್ ಸಂತತಿಗಳಲ್ಲಿ ಸತ್ಯನಿಷೇಧಿಸಿದವರು. ದಾವೂದ್ ಮತ್ತು ಮರ್ಯಮರ ಮಗನಾದ ಈಸಾರ ನಾಲಗೆಯಿಂದ ಶಪಿಸಲ್ಪಟ್ಟರು. ಇದು ಅವರು ಧಿಕ್ಕಾರವನ್ನು ತೋರಿದ್ದರಿಂದಲು ಅತಿಕ್ರಮವನ್ನು ಕೈಗೊಂಡದ್ದರಿAದಲೂ ಆಗಿದೆ.
كَانُوا لَا يَتَنَاهَوْنَ عَن مُّنكَرٍ فَعَلُوهُ ۚ لَبِئْسَ مَا كَانُوا يَفْعَلُونَ ٧٩
📖 ಅನುವಾದ
ಆಯತ್ 79
ಅವರು ಮಾಡುತ್ತಿದ್ದ ದುಷ್ಕೃತ್ಯಗಳಿಂದ ಅವರು ಪರಸ್ಪರ ತಡೆಯುತ್ತಿರಲಿಲ್ಲ. ಅವರು ಮಾಡುತ್ತಿದ್ದುದ್ದೆಲ್ಲವೂ ಅತೀ ನಿಕೃಷ್ಟವಾಗಿತ್ತು.
تَرَىٰ كَثِيرًا مِّنْهُمْ يَتَوَلَّوْنَ الَّذِينَ كَفَرُوا ۚ لَبِئْسَ مَا قَدَّمَتْ لَهُمْ أَنفُسُهُمْ أَن سَخِطَ اللَّهُ عَلَيْهِمْ وَفِي الْعَذَابِ هُمْ خَالِدُونَ ٨٠
📖 ಅನುವಾದ
ಆಯತ್ 80
ಅವರಲ್ಲಿ ಹೆಚ್ಚಿನವರು ಸತ್ಯನಿಷೇಧಿಗಳನ್ನು ಆಪ್ತಮಿತ್ರರನ್ನಾಗಿ ಮಾಡಿಕೊಳ್ಳುವುದನ್ನು ನೀವು ಕಾಣುವಿರಿ. ಅವರು ಸ್ವತಃ ತಮಗಾಗಿ ಮೊದಲೇ ಕಳುಹಿಸಿರುವಂತಹದು ಅತ್ಯಂತ ನಿಕೃಷ್ಟವಾಗಿದೆ. ಆದುದರಿಂದ ಅಲ್ಲಾಹನು ಅವರ ಮೇಲೆ ಕೋಪಗೊಂಡಿರುವನು. ಮತ್ತು ಶಿಕ್ಷೆಯಲ್ಲಿ ಅವರು ಶಾಶ್ವತವಾಗಿರುವರು.
وَلَوْ كَانُوا يُؤْمِنُونَ بِاللَّهِ وَالنَّبِيِّ وَمَا أُنزِلَ إِلَيْهِ مَا اتَّخَذُوهُمْ أَوْلِيَاءَ وَلَٰكِنَّ كَثِيرًا مِّنْهُمْ فَاسِقُونَ ٨١
📖 ಅನುವಾದ
ಆಯತ್ 81
ಅವರು ಅಲ್ಲ್ಲಾಹನಲ್ಲೂ ಪೈಗಂಬರರಲ್ಲೂ, ಪೈಗಂಬರರ ಮೆಲೆ ಅವತೀರ್ಣಗೊಂಡಿರುವುದರಲ್ಲೂ ವಿಶ್ವಾಸವಿರಿಸುತ್ತಿದ್ದರೆ ಅವರು ಸತ್ಯನಿಷೇಧಿಗಳನ್ನು ಅಪ್ತ ಮಿತ್ರರನ್ನಾಗಿ ಮಾಡಿಕೊಳ್ಳುತ್ತಿರಲಿಲ್ಲ. ಆದರೆ ಅವರ ಪೈಕಿ ಹೆಚ್ಚಿನವರು ಧಿಕ್ಕಾರಿಗಳಾಗಿದ್ದಾರೆ.
۞ لَتَجِدَنَّ أَشَدَّ النَّاسِ عَدَاوَةً لِّلَّذِينَ آمَنُوا الْيَهُودَ وَالَّذِينَ أَشْرَكُوا ۖ وَلَتَجِدَنَّ أَقْرَبَهُم مَّوَدَّةً لِّلَّذِينَ آمَنُوا الَّذِينَ قَالُوا إِنَّا نَصَارَىٰ ۚ ذَٰلِكَ بِأَنَّ مِنْهُمْ قِسِّيسِينَ وَرُهْبَانًا وَأَنَّهُمْ لَا يَسْتَكْبِرُونَ ٨٢
📖 ಅನುವಾದ
ಆಯತ್ 82
ಖಂಡಿತವಾಗಿಯು ನೀವು ಸತ್ಯವಿಶ್ವಾಸಿಗಳ ಪರಮ ಶತ್ರುಗಳನ್ನಾಗಿ ಯಹೂದರನ್ನೂ, ಬಹುದೇವಾರಾಧಕರನ್ನೂ ಕಾಣುವಿರಿ. ಮತ್ತು ತಮ್ಮನ್ನು ಕ್ರೆöÊಸ್ತರೆಂದು ಹೇಳುವವರನ್ನು ಸತ್ಯವಿಶ್ವಾಸಿಗಳೊಂದಿಗೆ ಎಲ್ಲರಿಗಿಂತ ಹೆಚ್ಚು ಮಿತ್ರತ್ವಕ್ಕೆ ಹತ್ತಿರವಿರುವುದಾಗಿ ಕಾಣುವಿರಿ. ಇದು ಅವರಲ್ಲಿ ವಿದ್ವಾಂಸರು ಮತ್ತು ಸನ್ಯಾಸಿಗಳಿರುವರು ಹಾಗೂ ಅವರು ಅಹಂಭಾವ ತೋರುವುದಿಲ್ಲವೆಂಬುದೇ ಇದಕ್ಕೆ ಕಾರಣವಾಗಿದೆ.
وَإِذَا سَمِعُوا مَا أُنزِلَ إِلَى الرَّسُولِ تَرَىٰ أَعْيُنَهُمْ تَفِيضُ مِنَ الدَّمْعِ مِمَّا عَرَفُوا مِنَ الْحَقِّ ۖ يَقُولُونَ رَبَّنَا آمَنَّا فَاكْتُبْنَا مَعَ الشَّاهِدِينَ ٨٣
📖 ಅನುವಾದ
ಆಯತ್ 83
ಮತ್ತು ಅವರು (ಭಕ್ತಿಯುಳ್ಳ ಕ್ರೆöÊಸ್ತರು) ಸಂದೇಶವಾಹಕರಿಗೆ ಅವತೀರ್ಣಗೊಳಿಸಲಾದುದನ್ನು ಆಲಿಸಿಕೊಂಡರೆ ಸತ್ಯವನ್ನು ಗ್ರಹಿಸಿದುದರ ಕಾರಣ ಅವರು ಕಣ್ಣುಗಳಿಂದ ಕಣ್ಣೀರು ಹರಿಯುವುದನ್ನು ನೀವು ಕಾಣುವಿರಿ. ಅವರು ಹೇಳುವರು: ಓ ನಮ್ಮ ಪ್ರಭೂ, ನಾವು ವಿಶ್ವಾಸವಿಟ್ಟಿದ್ದೇವೆ. ಆದ್ದರಿಂದ ಸತ್ಯಕ್ಕೆ ಸಾಕ್ಷö್ಯ ನೀಡುವವರೊಂದಿಗೆ ನಮ್ಮನ್ನೂ ದಾಖಲಿಸು.
وَمَا لَنَا لَا نُؤْمِنُ بِاللَّهِ وَمَا جَاءَنَا مِنَ الْحَقِّ وَنَطْمَعُ أَن يُدْخِلَنَا رَبُّنَا مَعَ الْقَوْمِ الصَّالِحِينَ ٨٤
📖 ಅನುವಾದ
ಆಯತ್ 84
ನಮ್ಮ ಪ್ರಭು ನಮ್ಮನ್ನು ಸಜ್ಜನರೊಂದಿಗೆ ಸೇರಿಸುವವನೆಂದು ನಿರೀಕ್ಷಿಸುತ್ತಿರುವಾಗ ನಾವು ಅಲ್ಲಾಹನಲ್ಲೂ, ನಮಗೆ ಬಂದು ತಲುಪಿದ ಸತ್ಯದಲ್ಲೂ ವಿಶ್ವಾಸವಿಡದಿರಲು ನಮಗೇನು ನೆಪವಿದೆ?
فَأَثَابَهُمُ اللَّهُ بِمَا قَالُوا جَنَّاتٍ تَجْرِي مِن تَحْتِهَا الْأَنْهَارُ خَالِدِينَ فِيهَا ۚ وَذَٰلِكَ جَزَاءُ الْمُحْسِنِينَ ٨٥
📖 ಅನುವಾದ
ಆಯತ್ 85
ಆದ್ದರಿಂದ ಅವರ ಈ ಮಾತಿನ ನಿಮಿತ್ತ ಅಲ್ಲಾಹನು ಅವರಿಗೆ ತಳಬಾಗದಲ್ಲಿ ಕಾಲುವೆಗಳು ಹರಿಯುತ್ತಿರುವ ಸ್ವರ್ಗೋದ್ಯಾನವನ್ನು ದಯಪಾಲಿಸಿದನು. ಅವರು ಅದರಲ್ಲಿ ಶಾಶ್ವತವಾಗಿರುವರು ಮತ್ತು ಸತ್ಕರ್ಮಿಗಳಿಗಿರುವ ಪ್ರತಿಫಲ ಇದುವೇ ಆಗಿದೆ.
وَالَّذِينَ كَفَرُوا وَكَذَّبُوا بِآيَاتِنَا أُولَٰئِكَ أَصْحَابُ الْجَحِيمِ ٨٦
📖 ಅನುವಾದ
ಆಯತ್ 86
ಮತ್ತು ಯಾರು ಸತ್ಯವನ್ನು ನಿಷೇಧಿಸುತ್ತಾರೋ ಮತ್ತು ನಮ್ಮ ದೃಷ್ಟಾಂತಗಳನ್ನು ಸುಳ್ಳಾಗಿಸಿದರೋ ಅವರೇ ನರಕವಾಸಿಗಳಾಗಿದ್ದಾರೆ.
يَا أَيُّهَا الَّذِينَ آمَنُوا لَا تُحَرِّمُوا طَيِّبَاتِ مَا أَحَلَّ اللَّهُ لَكُمْ وَلَا تَعْتَدُوا ۚ إِنَّ اللَّهَ لَا يُحِبُّ الْمُعْتَدِينَ ٨٧
📖 ಅನುವಾದ
ಆಯತ್ 87
ಓ ಸತ್ಯವಿಶ್ವಾಸಿಗಳೆ, ಅಲ್ಲಾಹನು ನಿಮಗೆ ಧರ್ಮಸಮ್ಮತಗೊಳಿಸಿದ ಶುದ್ಧ ವಸ್ತುಗಳನ್ನು ನೀವು ನಿಷಿದ್ಧಗೊಳಿಸಬೇಡಿರಿ. ಮತ್ತು ಹದ್ದು ಮೀರಬೇಡಿರಿ. ನಿಸ್ಸಂಶಯವಾಗಿಯು ಅಲ್ಲಾಹನು ಹದ್ದು ಮೀರುವವರನ್ನು ಇಷ್ಟಪಡುವುದಿಲ್ಲ.
وَكُلُوا مِمَّا رَزَقَكُمُ اللَّهُ حَلَالًا طَيِّبًا ۚ وَاتَّقُوا اللَّهَ الَّذِي أَنتُم بِهِ مُؤْمِنُونَ ٨٨
📖 ಅನುವಾದ
ಆಯತ್ 88
ಅಲ್ಲಾಹನು ನಿಮಗೆ ನೀಡಿದವುಗಳಿಂದ ಧರ್ಮ ಸಮ್ಮತ ಮತ್ತು ಉತ್ತಮ ಆಹಾರಗಳನ್ನು ತಿನ್ನಿರಿ ಮತ್ತು ನೀವು ವಿಶ್ವಾಸವಿಟ್ಟ ಆ ಅಲ್ಲಾಹುನನ್ನು ಭಯಪಡಿರಿ.
لَا يُؤَاخِذُكُمُ اللَّهُ بِاللَّغْوِ فِي أَيْمَانِكُمْ وَلَٰكِن يُؤَاخِذُكُم بِمَا عَقَّدتُّمُ الْأَيْمَانَ ۖ فَكَفَّارَتُهُ إِطْعَامُ عَشَرَةِ مَسَاكِينَ مِنْ أَوْسَطِ مَا تُطْعِمُونَ أَهْلِيكُمْ أَوْ كِسْوَتُهُمْ أَوْ تَحْرِيرُ رَقَبَةٍ ۖ فَمَن لَّمْ يَجِدْ فَصِيَامُ ثَلَاثَةِ أَيَّامٍ ۚ ذَٰلِكَ كَفَّارَةُ أَيْمَانِكُمْ إِذَا حَلَفْتُمْ ۚ وَاحْفَظُوا أَيْمَانَكُمْ ۚ كَذَٰلِكَ يُبَيِّنُ اللَّهُ لَكُمْ آيَاتِهِ لَعَلَّكُمْ تَشْكُرُونَ ٨٩
📖 ಅನುವಾದ
ಆಯತ್ 89
ಉದ್ದೇಶಪೂರ್ವಕವಲ್ಲದ ನಿಮ್ಮ ಶಪಥಗಳ ನಿಮಿತ್ತ ಅಲ್ಲಾಹನು ನಿಮ್ಮನ್ನು ಹಿಡಿಯವುದಿಲ್ಲ. ಆದರೆ ನೀವು ಉದ್ದೇಶಪೂರ್ವಕವಾಗಿ ಮಾಡುವ ಶಪಥಗಳ ಕುರಿತು ಅವನು ಅಗತ್ಯವಾಗಿ ವಿಚಾರಣೆ ನಡೆಸುವನು. ಈ ಶಪಥಗಳನ್ನು ಮುರಿಯುವವರಿಗೆ ಪ್ರಾಯಶ್ಚಿತ್ತವೇನೆಂದರೆ ನೀವು ನಿಮ್ಮ ಮನೆಯವರಿಗೆ ನೀಡುವ ಮಧ್ಯಮ ದರ್ಜೆಯ ಆಹಾರದಿಂದ ಹತ್ತು ಮಂದಿ ಬಡವರಿಗೆ ಉಣಿಸುವುದು. ಅಥವಾ ಅವರಿಗೆ ಉಡುಪನ್ನು ನೀಡುವುದು. ಅಥವಾ ಓರ್ವ ಗುಲಾಮನನ್ನು ವಿಮೋಸಚನೆಗೊಳಿಸುವುದಾಗಿದೆ. ಮತ್ತು ಸಾಮರ್ಥ್ಯವಿಲ್ಲದವನು ಮೂರು ದಿನ ಉಪವಾಸ ಆಚರಿಸಬೇಕಾಗಿದೆ. ಇದು ನೀವು ಶಪಥಗಳ ಉಲ್ಲಂಘನೆ ಮಾಡಿರುವುದರ ಪ್ರಾಯಶ್ಚಿತ್ತವಾಗಿದೆ ಆದ್ದರಿಂದ ನೀವು ನಿಮ್ಮ ಶಪಥಗಳ ಬಗ್ಗೆ ಎಚ್ಚರವಹಿಸಿರಿ. ಇದೇ ಪ್ರಕಾರ ಅಲ್ಲಾಹನು ತನ್ನ ನಿಯಮಗಳನ್ನು ನಿಮಗೋಸ್ಕರ ವಿವರಿಸಿಕೊಡುತ್ತಿದ್ದಾನೆ. ಇದು ನೀವು ಕೃತಜ್ಞತೆ ತೋರಿಸಲೆಂದಾಗಿದೆ.
يَا أَيُّهَا الَّذِينَ آمَنُوا إِنَّمَا الْخَمْرُ وَالْمَيْسِرُ وَالْأَنصَابُ وَالْأَزْلَامُ رِجْسٌ مِّنْ عَمَلِ الشَّيْطَانِ فَاجْتَنِبُوهُ لَعَلَّكُمْ تُفْلِحُونَ ٩٠
📖 ಅನುವಾದ
ಆಯತ್ 90
ಓ ಸತ್ಯವಿಶ್ವಾಸಿಗಳೇ, ಖಂಡಿತವಾಗಿಯು ಮದ್ಯ, ಜೂಜಟ, ಪ್ರತಿಷ್ಠಾಪಿಸಲಾದ ವಿಗ್ರಹಗಳು ಮತ್ತು ಅದೃಷ್ಟ ನಿರ್ಧರಿಸುವ ಬಾಣಗಳು ಅಶುದ್ಧ ಮತ್ತು ಪೈಶಾಚಿಕ ಕಾರ್ಯಗಳಲ್ಲಾಗಿವೆ. ಇವುಗಳಿಂದ ದೂರವಿರಿ. ನೀವು ಯಶಸ್ಸು ಪಡೆಯಬಹುದು.
إِنَّمَا يُرِيدُ الشَّيْطَانُ أَن يُوقِعَ بَيْنَكُمُ الْعَدَاوَةَ وَالْبَغْضَاءَ فِي الْخَمْرِ وَالْمَيْسِرِ وَيَصُدَّكُمْ عَن ذِكْرِ اللَّهِ وَعَنِ الصَّلَاةِ ۖ فَهَلْ أَنتُم مُّنتَهُونَ ٩١
📖 ಅನುವಾದ
ಆಯತ್ 91
ಶೈತಾನನು ಮದ್ಯ ಮತ್ತು ಜೂಜಾಟದ ಮೂಲಕ ನಿಮ್ಮ ನಡುವೆ ಶತ್ರುತ್ವ ಹಾಗೂ ವಿದ್ವೇಷವನ್ನುಂಟು ಮಾಡಲು, ಅಲ್ಲಾಹನ ಸ್ಮರಣೆ ಹಾಗೂ ನಮಾಝ್ನಿಂದ ನಿಮ್ಮನ್ನು ದೂರವಿಡಲು ಬಯಸುತ್ತಾನೆ. ಆದ್ದರಿಂದ ನೀವು ಅವುಗಳಿಂದ ದೂರವಿರುವಿರಾ?
وَأَطِيعُوا اللَّهَ وَأَطِيعُوا الرَّسُولَ وَاحْذَرُوا ۚ فَإِن تَوَلَّيْتُمْ فَاعْلَمُوا أَنَّمَا عَلَىٰ رَسُولِنَا الْبَلَاغُ الْمُبِينُ ٩٢
📖 ಅನುವಾದ
ಆಯತ್ 92
ನೀವು ಅಲ್ಲಾಹನ ಆಜ್ಞಾನುಸರಣೆಯನ್ನು ಮಾಡಿರಿ ಮತ್ತು ಸಂದೇಶವಾಹಕರ ಅನುಸರಣೆಯನ್ನು ಮಾಡಿರಿ ಮತ್ತು (ಪಾಪಕೃತ್ಯಗಳಿಂದ) ಎಚ್ಚರವಹಿಸಿರಿ. ಇನ್ನು ನೀವು ವಿಮುಖರಾಗುವುದಾದರೆ ನಮ್ಮ ಸಂದೇಶವಾಹಕರ ಕರ್ತವ್ಯವು ಸ್ಪಷ್ಟವಾಗಿ ಸಂದೇಶ ತಲುಪಿಸುವುದು ಮಾತ್ರವಾಗಿದೆಂಬುದನ್ನು ತಿಳಿದುಕೊಳ್ಳಿರಿ.
لَيْسَ عَلَى الَّذِينَ آمَنُوا وَعَمِلُوا الصَّالِحَاتِ جُنَاحٌ فِيمَا طَعِمُوا إِذَا مَا اتَّقَوا وَّآمَنُوا وَعَمِلُوا الصَّالِحَاتِ ثُمَّ اتَّقَوا وَّآمَنُوا ثُمَّ اتَّقَوا وَّأَحْسَنُوا ۗ وَاللَّهُ يُحِبُّ الْمُحْسِنِينَ ٩٣
📖 ಅನುವಾದ
ಆಯತ್ 93
ಸತ್ಯವಿಶ್ವಾಸವಿರಿಸಿ ಸತ್ಕರ್ಮಗೈದವರ ಮೇಲೆ ಅವರು ಈ ಹಿಂದೆ ಸೇವಿಸಿದುದರಲ್ಲಿ ಅವರ ಮೇಲೆ ಯಾವ ದೋಷವಿಲ್ಲ ಅವರು ಇನ್ನು ಮುಂದೆ ನಿಷಿದ್ಧ ವಸ್ತುಗಳನ್ನು ವರ್ಜಿಸಿದರೆ ನಂತರ ಅವರು ಭಯಭಕ್ತಿ ಪಾಲಿಸಿದರೆ ಮತ್ತು ಸತ್ಯ ವಿಶ್ವಾಸವಿರಿಸಿದರೆ ಆ ಬಳಿಕವೂ ಅವರು ಭಯಭಕ್ತಿ ಪಾಲಿಸಿದರೆ ಮತ್ತು ಸತ್ಕರ್ಮಗಳನ್ನೆಸಗಿದರೆ ಅಲ್ಲಾಹನು ಇಂತಹ ಸದಾಚಾರಿಗಳನ್ನು ಇಷ್ಟಪಡುತ್ತಾನೆ.
يَا أَيُّهَا الَّذِينَ آمَنُوا لَيَبْلُوَنَّكُمُ اللَّهُ بِشَيْءٍ مِّنَ الصَّيْدِ تَنَالُهُ أَيْدِيكُمْ وَرِمَاحُكُمْ لِيَعْلَمَ اللَّهُ مَن يَخَافُهُ بِالْغَيْبِ ۚ فَمَنِ اعْتَدَىٰ بَعْدَ ذَٰلِكَ فَلَهُ عَذَابٌ أَلِيمٌ ٩٤
📖 ಅನುವಾದ
ಆಯತ್ 94
ಓ ಸತ್ಯವಿಶ್ವಾಸಿಗಳೇ, ನಿಮ್ಮ ಕೈಗಳು ಹಾಗೂ ಭರ್ಚಿಗಳಿಂದ ಬೇಟೆಯಾಡುವ ಪ್ರಾಣಿಗಳ ಮೂಲಕ ಅಲ್ಲಾಹನು ನಿಮ್ಮನ್ನು ಖಂಡಿತ ಪರೀಕ್ಷಿಸುವನು. ಇದು ಅಲ್ಲಾಹನು ಯಾರು ತನ್ನನ್ನು ಅಗೋಚರವಾಗಿ ಭಯಪಡುತ್ತಾನೆಂದು ತಿಳಿಯಲೆಂದಾಗಿದೆ. ಆದ್ದರಿಂದ ಯಾರು ಇದರ ನಂತರ ಹದ್ದು ಮೀರುತ್ತಾನೋ ಅವನಿಗೆ ಯಾತನಾಮಯವಾದ ಶಿಕ್ಷೆಯಿದೆ.
يَا أَيُّهَا الَّذِينَ آمَنُوا لَا تَقْتُلُوا الصَّيْدَ وَأَنتُمْ حُرُمٌ ۚ وَمَن قَتَلَهُ مِنكُم مُّتَعَمِّدًا فَجَزَاءٌ مِّثْلُ مَا قَتَلَ مِنَ النَّعَمِ يَحْكُمُ بِهِ ذَوَا عَدْلٍ مِّنكُمْ هَدْيًا بَالِغَ الْكَعْبَةِ أَوْ كَفَّارَةٌ طَعَامُ مَسَاكِينَ أَوْ عَدْلُ ذَٰلِكَ صِيَامًا لِّيَذُوقَ وَبَالَ أَمْرِهِ ۗ عَفَا اللَّهُ عَمَّا سَلَفَ ۚ وَمَنْ عَادَ فَيَنتَقِمُ اللَّهُ مِنْهُ ۗ وَاللَّهُ عَزِيزٌ ذُو انتِقَامٍ ٩٥
📖 ಅನುವಾದ
ಆಯತ್ 95
ಓ ಸತ್ಯವಿಶ್ವಾಸಿಗಳೇ, ನೀವು ಇಹ್ರಾಮ್ನಲ್ಲಿರುವಾಗ ಬೇಟೆ ಪ್ರಾಣಿಯನ್ನು ಕೊಲ್ಲಬೇಡಿರಿ. ನಿಮ್ಮ ಪೈಕಿ ಯಾರಾದರೂ ಉದ್ದೇಶಪೂರ್ವಕವಾಗಿ ಅದನ್ನು ಕೊಂದರೆ ಅವನು ಅದಕ್ಕೆ ಸಮಾನವಾದ ಪ್ರಾಣಿಯನ್ನು ಪ್ರಾಯಶ್ಚಿತ್ತವಾಗಿ ನೀಡುವುದು ಕಡ್ಡಾಯವಾಗಿದೆ. ನಿಮ್ಮ ಪೈಕಿ ಇಬ್ಬರು ನ್ಯಾಯಸಮ್ಮತ ವ್ಯಕ್ತಿಗಳು ಇದರ ತೀರ್ಮಾನ ಮಾಡಲಿ, ಪ್ರಾಯಶ್ಚಿತ್ತವು ಕಾಬಾಲಯಕ್ಕೆ ಹರಕೆಯ ರೂಪದಲ್ಲಿ ತಲುಪಿಸಬೇಕಾಗಿದೆ ಅಥವಾ ಪ್ರಾಯಶ್ಚಿತ್ತವನ್ನು ದರಿದ್ರರಿಗೆ ಆಹಾರವಾಗಿ ನೀಡಲಿ ಮತ್ತು ಅದಕ್ಕೆ ಸಮಾನವಾಗಿ ಉಪವಾಸ ಆಚರಿಸಲಿ. ಇದು ಅವನು ಮಾಡಿದ ಕೃತ್ಯದ ಪರಿಣಾಮವನ್ನು ಸ್ವತಃ ಅವನು ಅನುಭವಿಸಲೆಂದಾಗಿದೆ. ಈ ಮುಂಚೆ ಮಾಡಿರುವುದನ್ನು ಅಲ್ಲಾಹು ಕ್ಷಮಿಸಿರುತ್ತಾನೆ ಮತ್ತು ಯಾರು ಪುನಃ ಅಂತಹದೇ ಕೃತ್ಯವನ್ನು ಎಸಗುತ್ತಾನೋ ಅಲ್ಲಾಹನು ಪ್ರತೀಕಾರ ಶಿಕ್ಷಾಕ್ರಮವನ್ನು ಕೈಗೊಳ್ಳುವನು. ಅಲ್ಲಾಹನು ಪ್ರತಾಪಶಾಲಿಯೂ, ಶಿಕ್ಷಾಕ್ರಮ ಕೈಗೊಳ್ಳುವವನೂ ಆಗಿದ್ದಾನೆ.
أُحِلَّ لَكُمْ صَيْدُ الْبَحْرِ وَطَعَامُهُ مَتَاعًا لَّكُمْ وَلِلسَّيَّارَةِ ۖ وَحُرِّمَ عَلَيْكُمْ صَيْدُ الْبَرِّ مَا دُمْتُمْ حُرُمًا ۗ وَاتَّقُوا اللَّهَ الَّذِي إِلَيْهِ تُحْشَرُونَ ٩٦
📖 ಅನುವಾದ
ಆಯತ್ 96
ನಿಮ್ಮ ಪ್ರಯೋಜನಕ್ಕಾಗಿ ಮತ್ತು ಪ್ರಯಾಣಿಕರ ಪ್ರಯೋಜನಕ್ಕಾಗಿ ಸಮುದ್ರದಲ್ಲಿ ಬೇಟೆಯಾಡುವುದನ್ನೂ ಮತ್ತು ಅದನ್ನು ತಿನ್ನುವುದನ್ನೂ ಧರ್ಮಸಮ್ಮತಗೊಳಿಸಲಾಗಿದೆ. ಮತ್ತು ನೀವು ಇಹ್ರಾಮ್ನ ಸ್ಥಿತಿಯಲ್ಲಿರುವಾಗ ನೆಲದ ಬೇಟೆಯನ್ನು ನಿಮಗೆ ನಿಷಿದ್ಧಗೊಳಿಸಲಾಗಿದೆ. ಯಾರೆಡೆಗೆ ನೀವು ಒಟ್ಟುಗೂಡಿಸಲ್ಪಡುವಿರೋ ಆ ಅಲ್ಲಾಹುನನ್ನು ಭಯಪಡಿರಿ.
۞ جَعَلَ اللَّهُ الْكَعْبَةَ الْبَيْتَ الْحَرَامَ قِيَامًا لِّلنَّاسِ وَالشَّهْرَ الْحَرَامَ وَالْهَدْيَ وَالْقَلَائِدَ ۚ ذَٰلِكَ لِتَعْلَمُوا أَنَّ اللَّهَ يَعْلَمُ مَا فِي السَّمَاوَاتِ وَمَا فِي الْأَرْضِ وَأَنَّ اللَّهَ بِكُلِّ شَيْءٍ عَلِيمٌ ٩٧
📖 ಅನುವಾದ
ಆಯತ್ 97
ಆದರಣೀಯ ಗೃಹವಾದ ಕಾಬಾವನ್ನು, ಅಲ್ಲಾಹನು ಜನರ ಶಾಂತಿಯ ಕೇಂದ್ರವನ್ನಾಗಿ ಮಾಡಿದ್ದಾನೆ. ಮತ್ತು ಗೌರವಾನ್ವಿತ ತಿಂಗಳನ್ನು ಹರಮ್ನಲ್ಲಿ ಬಲಿನೀಡಲಾಗುವ ಪ್ರಾಣಿಯನ್ನೂ, ಕೊರಳಲ್ಲಿ ಪಟ್ಟಿ ಹಾಕಲಾದ (ಕಾಬಾದ ಕಡೆ ಒಯ್ಯುವ) ಪ್ರಾಣಿಗಳನ್ನೂ ಸಹ. ಇದು ನಿಸ್ಸಂಶಯವಾಗಿಯು ಅಲ್ಲಾಹನು ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವ ಸಕಲ ಜ್ಞಾನವನ್ನು ಹೊಂದಿದ್ದಾನೆAದೂ, ಮತ್ತು ಅವನು ಎಲ್ಲಾ ವಸ್ತುಗಳನ್ನು ಚೆನ್ನಾಗಿ ಅರಿತಿರುವನೆಂದೂ ನೀವು ತಿಳಿದುಕೊಳ್ಳಲೆಂದಾಗಿದೆ.
اعْلَمُوا أَنَّ اللَّهَ شَدِيدُ الْعِقَابِ وَأَنَّ اللَّهَ غَفُورٌ رَّحِيمٌ ٩٨
📖 ಅನುವಾದ
ಆಯತ್ 98
ಅಲ್ಲಾಹನು ಕಠಿಣವಾಗಿ ಶಿಕ್ಷಿಸುವವನೆಂದೂ ಮತ್ತು ಅಲ್ಲಾಹನು ಕ್ಷಮಾಶೀಲನೂ ಹಾಗೂ ಕರುಣಾನಿಧಿಯೂ ಆಗಿದ್ದಾನೆಂದು ನೀವು ತಿಳಿದುಕೊಳ್ಳಿರಿ.
مَّا عَلَى الرَّسُولِ إِلَّا الْبَلَاغُ ۗ وَاللَّهُ يَعْلَمُ مَا تُبْدُونَ وَمَا تَكْتُمُونَ ٩٩
📖 ಅನುವಾದ
ಆಯತ್ 99
ಸಂದೇಶವಾಹಕರ ಮೇಲೆ ಸಂದೇಶವನ್ನು ತಲುಪಿಸುವ ಹೊಣೆ ಮಾತ್ರವಿದೆ. ನೀವು ಬಹಿರಂಗಗೊಳಿಸುವುದನ್ನೂ, ಬಚ್ಚಿಡುವುದನ್ನೂ ಅಲ್ಲಾಹನು ಅರಿಯುತ್ತಾನೆ.
قُل لَّا يَسْتَوِي الْخَبِيثُ وَالطَّيِّبُ وَلَوْ أَعْجَبَكَ كَثْرَةُ الْخَبِيثِ ۚ فَاتَّقُوا اللَّهَ يَا أُولِي الْأَلْبَابِ لَعَلَّكُمْ تُفْلِحُونَ ١٠٠
📖 ಅನುವಾದ
ಆಯತ್ 100
ಓ ಪೈಗಂಬರರೇ ಹೇಳಿರಿ: ಅಶುದ್ಧವಾದುದೂ, ಶುದ್ಧವಾದುದೂ ಸಮಾನವಲ್ಲ; ನಿಮಗೆ ಅಶುದ್ಧವಾದವುಗಳ ಹೆಚ್ಚಳವು ಆಕರ್ಷಕವಾಗಿ ಕಂಡರೂ ಸರಿಯೇ, ಓ ಬುದ್ಧಿವಂತರೇ, ನೀವು ಅಲ್ಲಾಹನನ್ನು ಭಯಪಡಿರಿ. ನೀವು ಯಶಸ್ಸು ಪಡೆಯಬಹುದು.
يَا أَيُّهَا الَّذِينَ آمَنُوا لَا تَسْأَلُوا عَنْ أَشْيَاءَ إِن تُبْدَ لَكُمْ تَسُؤْكُمْ وَإِن تَسْأَلُوا عَنْهَا حِينَ يُنَزَّلُ الْقُرْآنُ تُبْدَ لَكُمْ عَفَا اللَّهُ عَنْهَا ۗ وَاللَّهُ غَفُورٌ حَلِيمٌ ١٠١
📖 ಅನುವಾದ
ಆಯತ್ 101
ಓ ಸತ್ಯವಿಶ್ವಾಸಿಗಳೇ, ನಿಮಗೆ ಬಹಿರಂಗಗೊಳಿಸಲಾದರೆ ಸಹಿಸಲು ಸಾಧ್ಯವಾಗದಂತಹ ಸಂಗತಿಗಳನ್ನು ನೀವು ಕೇಳಬಾರದು ಮತ್ತು ಕುರ್ಅನ್ ಅವತೀರ್ಣಗೊಳ್ಳುವ ಸಂದರ್ಭದಲ್ಲಿ ನೀವು ಅವುಗಳ ಕುರಿತು ಪ್ರಶ್ನಿಸುವುದಾದರೆ ನಿಮಗೆ ಅವುಗಳನ್ನು ಬಹಿರಂಗಗೊಳಿಸಲಾಗುವುದು. ಗತ ಪ್ರಶ್ನೆಗಳನ್ನು ಅಲ್ಲಾಹನು ಮನ್ನಿಸಿರುವನು ಮತ್ತು ಅಲ್ಲಾಹನು ಕ್ಷಮಾಶೀಲನೂ, ಸಹನಾಶೀಲನೂ ಆಗಿರುವನು.
قَدْ سَأَلَهَا قَوْمٌ مِّن قَبْلِكُمْ ثُمَّ أَصْبَحُوا بِهَا كَافِرِينَ ١٠٢
📖 ಅನುವಾದ
ಆಯತ್ 102
ಇಂತಹ ಪ್ರಶ್ನೆಗಳನ್ನು ನಿಮಗಿಂತ ಮುಂಚಿನ ಜನರೂ ಕೇಳಿದ್ದರು. ಅವುಗಳ ಉತ್ತರ ಸಿಕ್ಕಿತು. ತರುವಾಯ ಅವರು ಆ ಮಾತುಗಳ ನಿಷೇಧಿಗಳಾಗಿಬಿಟ್ಟರು.
مَا جَعَلَ اللَّهُ مِن بَحِيرَةٍ وَلَا سَائِبَةٍ وَلَا وَصِيلَةٍ وَلَا حَامٍ ۙ وَلَٰكِنَّ الَّذِينَ كَفَرُوا يَفْتَرُونَ عَلَى اللَّهِ الْكَذِبَ ۖ وَأَكْثَرُهُمْ لَا يَعْقِلُونَ ١٠٣
📖 ಅನುವಾದ
ಆಯತ್ 103
ಬಹೀರಃವನ್ನಾಗಲೀ, ಸಾಇಬಃವನ್ನಾಗಲೀ, ವಸೀಲವನ್ನಾಗಲೀ ಮತ್ತು ಹಾಮ್ಅನ್ನಾಗಲೀ (ಮಿಥ್ಯಾರಾಧ್ಯರಿಗೆ ಬಿಟ್ಟ ಪ್ರಾಣಿಗಳು) ಅಲ್ಲಾಹನು ನಿಶ್ಚಯಿಸಿರುವುದಿಲ್ಲ. ಆದರೆ ಸತ್ಯನಿಷೇಧಿಗಳು (ದೇವತೆಗಳಿಗೆ ಬಿಟ್ಟು) ಅಲ್ಲಾಹನ ಮೇಲೆ ಸುಳ್ಳು ಹೆಣೆಯುತ್ತಿದ್ದಾರೆ ಮತ್ತು ಅವರಲ್ಲಿ ಹೆಚ್ಚಿನವರು ವಿವೇಕವನ್ನು ಹೊಂದಿರುವುದಿಲ್ಲ.
وَإِذَا قِيلَ لَهُمْ تَعَالَوْا إِلَىٰ مَا أَنزَلَ اللَّهُ وَإِلَى الرَّسُولِ قَالُوا حَسْبُنَا مَا وَجَدْنَا عَلَيْهِ آبَاءَنَا ۚ أَوَلَوْ كَانَ آبَاؤُهُمْ لَا يَعْلَمُونَ شَيْئًا وَلَا يَهْتَدُونَ ١٠٤
📖 ಅನುವಾದ
ಆಯತ್ 104
ಅಲ್ಲಾಹನು ಅವತೀರ್ಣಗೊಳಿಸಿದ ಗ್ರಂಥದೆಡೆಗೂ, ಸಂದೇಶವಾಹಕ ರೆಡೆಗೂ ಬನ್ನಿರಿ ಎಂದು ಅವರೊಡನೆ ಹೇಳಲಾದರೆ, 'ನಾವು ನಮ್ಮ ಪೂರ್ವಿಕರನ್ನು ಯಾವ ಮಾರ್ಗದಲ್ಲಿ ಕಂಡಿದ್ದೇವೋ ಅದೇ ನಮಗೆ ಸಾಕು' ಎಂದು ಅವರು ಹೇಳುವರು. ಏನು? ಅವರ ಪೂರ್ವಿಕರು ಏನನ್ನೂ ಅರಿಯದವರೂ, ಸನ್ಮಾರ್ಗ ಪಡೆಯದವರೂ ಆಗಿದ್ದರೂ (ಅವರನ್ನೆ ಅನುಸರಿಸವುದು) ಸರಿಯೇ?
يَا أَيُّهَا الَّذِينَ آمَنُوا عَلَيْكُمْ أَنفُسَكُمْ ۖ لَا يَضُرُّكُم مَّن ضَلَّ إِذَا اهْتَدَيْتُمْ ۚ إِلَى اللَّهِ مَرْجِعُكُمْ جَمِيعًا فَيُنَبِّئُكُم بِمَا كُنتُمْ تَعْمَلُونَ ١٠٥
📖 ಅನುವಾದ
ಆಯತ್ 105
ಓ ಸತ್ಯವಿಶ್ವಾಸಿಗಳೇ, ನೀವು ತಮ್ಮ ಬಗ್ಗೆ ಚಿಂತಿಸಿರಿ. ನೀವು ಸನ್ಮಾರ್ಗದಲ್ಲಿ ಮುನ್ನಡೆಯುತ್ತಿದ್ದರೆ ಯಾವೊಬ್ಬ ದಾರಿಗೆಟ್ಟವನಿಂದ ನಿಮಗೇನೂ ನಷ್ಟವುಂಟಾಗದು. ನಿಮಗೆಲ್ಲರಿಗೂ ಅಲ್ಲಾಹನ ಕಡೆಗೇ ಮರಳಬೇಕಾಗಿದೆ. ಅನಂತರ ಅವನು ನೀವು ಮಾಡುತ್ತಿದ್ದುದರ ಕುರಿತು ನಿಮಗೆ ತಿಳಿಸಿಕೊಡುವನು.
يَا أَيُّهَا الَّذِينَ آمَنُوا شَهَادَةُ بَيْنِكُمْ إِذَا حَضَرَ أَحَدَكُمُ الْمَوْتُ حِينَ الْوَصِيَّةِ اثْنَانِ ذَوَا عَدْلٍ مِّنكُمْ أَوْ آخَرَانِ مِنْ غَيْرِكُمْ إِنْ أَنتُمْ ضَرَبْتُمْ فِي الْأَرْضِ فَأَصَابَتْكُم مُّصِيبَةُ الْمَوْتِ ۚ تَحْبِسُونَهُمَا مِن بَعْدِ الصَّلَاةِ فَيُقْسِمَانِ بِاللَّهِ إِنِ ارْتَبْتُمْ لَا نَشْتَرِي بِهِ ثَمَنًا وَلَوْ كَانَ ذَا قُرْبَىٰ ۙ وَلَا نَكْتُمُ شَهَادَةَ اللَّهِ إِنَّا إِذًا لَّمِنَ الْآثِمِينَ ١٠٦
📖 ಅನುವಾದ
ಆಯತ್ 106
ಓ ಸತ್ಯವಿಶ್ವಾಸಿಗಳೇ, ನಿಮ್ಮಲ್ಲೊಬ್ಬನು ಮರಣಸನ್ನಾದರೆ ಮತ್ತು ವಸಿಯ್ಯತ್ತಿನ (ಉಯಿಲು) ಮಾಡುವ ಸಂದರ್ಭ ಬಂದರೆ ನಿಮ್ಮ ಧರ್ಮದವರಾದ ಇಬ್ಬರು ನ್ಯಾಯವಂತರು ಸಾಕ್ಷಿ ವಹಿಸಲಿ. ಇನ್ನು ನೀವು ಪ್ರಯಾಣದಲ್ಲಿದ್ದರೆ ಮತ್ತು ನೀವು ಮರಣಾಸನ್ನರಾದರೆ ಅನ್ಯಧರ್ಮೀಯವರಾದರೂ ಇಬ್ಬರು ಸಾಕ್ಷಿವಹಿಸಲಿ. ನಿಮಗೆ ಸಂದೇಹವುAಟಾದರೆ ನಮಾಝ್ ನಿರ್ವಹಿಸಿದ ನಂತರ ಅವರಿಬ್ಬರನ್ನು ತಡೆದುಕೊಳ್ಳಿರಿ. ನಂತರ ಅವರಿಬ್ಬರೂ (ಜನರ ಮುಂದೆ) ಅಲ್ಲಾಹುವಿನ ಮೇಲೆ ಆಣೆಯಿಟ್ಟು ನಾವು ಈ ಆಣೆಗೆ ಪ್ರತಿಯಾಗಿ ಯಾವುದೇ ಲಾಭವನ್ನು ಪಡೆಯಲು ಇಚ್ಛಿಸುವುದಿಲ್ಲ. ಅದು ನಿಕಟ ಸಂಬAಧಿಕನಿಗೆ ಸಂಬAಧಿಸಿದ ವಿಷಯವಾದರೂ ಸರಿಯೇ ಮತ್ತು ನಾವು ಅಲ್ಲಾಹನ ಮಾತನ್ನು ಬಚ್ಚ್ಚಿಡಲಾರೆವು. ಹಾಗೇನಾದರು ಆದರೆ ನಾವು ಪಾಪವೆಸಗಿದವರಲ್ಲಾಗುವೆವು ಎಂದು ಹೇಳಬೇಕು.
فَإِنْ عُثِرَ عَلَىٰ أَنَّهُمَا اسْتَحَقَّا إِثْمًا فَآخَرَانِ يَقُومَانِ مَقَامَهُمَا مِنَ الَّذِينَ اسْتَحَقَّ عَلَيْهِمُ الْأَوْلَيَانِ فَيُقْسِمَانِ بِاللَّهِ لَشَهَادَتُنَا أَحَقُّ مِن شَهَادَتِهِمَا وَمَا اعْتَدَيْنَا إِنَّا إِذًا لَّمِنَ الظَّالِمِينَ ١٠٧
📖 ಅನುವಾದ
ಆಯತ್ 107
ಇನ್ನು ಆ ಇಬ್ಬರು ಸಾಕ್ಷಿಗಳು (ಸುಳ್ಳು ಹೇಳಿ) ಯಾವುದಾದರೂ ಪಾಪವನ್ನು ಮಾಡಿದ್ದಾರೆಂದು ತಿಳಿದುಬಂದರೆ ಯಾರ ವಿರುದ್ಧ ಪಾಪ ಮಾಡಲಾಗಿದೆಯೋ ಅವರ ಪೈಕಿ ಮೃತನಿಗೆ ನಿಕಟವಾಗಿರುವ ಇಬ್ಬರು ಆ ಇಬ್ಬರ ಸ್ಥಾನದಲ್ಲಿ ನಿಲ್ಲಲಿ. ನಂತರ ಅವರಿಬ್ಬರೂ ಅಲ್ಲಾಹನ ಮೇಲೆ ಆಣೆಯಿಟ್ಟು 'ಖಂಡಿತವಾಗಿಯು ಅವರ ಸಾಕ್ಷö್ಯಕ್ಕಿಂತಲೂ ನಮ್ಮ ಸಾಕ್ಷö್ಯ ಸತ್ಯವಾಗಿದೆ ಮತ್ತು ನಾವು ಹದ್ದುಮೀರಿಲ್ಲ. ಹಾಗೇನಾದರೂ ಆದರೆ ನಾವು ಮಹಾ ಅಕ್ರಮಿಗಳಾಗಿ ಬಿಡುವೆವು'. ಎಂದು ಹೇಳಲಿ.
ذَٰلِكَ أَدْنَىٰ أَن يَأْتُوا بِالشَّهَادَةِ عَلَىٰ وَجْهِهَا أَوْ يَخَافُوا أَن تُرَدَّ أَيْمَانٌ بَعْدَ أَيْمَانِهِمْ ۗ وَاتَّقُوا اللَّهَ وَاسْمَعُوا ۗ وَاللَّهُ لَا يَهْدِي الْقَوْمَ الْفَاسِقِينَ ١٠٨
📖 ಅನುವಾದ
ಆಯತ್ 108
ಅವರು (ಸಾಕ್ಷಿಗಳು) ನ್ಯಾಯಬದ್ದವಾಗಿ ಆಣೆ ಹಾಕಲು (ಈ ವಿಧಾನ) ಹೆಚ್ಚು ಸೂಕ್ತವಾಗಿದೆ. ತಾವು ಆಣೆ ಹಾಕಿದ ನಂತರ (ವಾರಿಸುದಾರರಿಂದ) ಆಣೆ ಹಾಕಿಸಲಾಗುವ ಸಾಧ್ಯತೆಯಿದೆಯೆಂಬುದರ ಬಗ್ಗೆ ಅವರು ಭಯಪಡಲಿ ಮತ್ತು ನೀವು ಅಲ್ಲಾಹನನ್ನು ಭಯಪಡಿರಿ ಮತ್ತು (ಅವನ ಆದೇಶಗಳನ್ನು) ಆಲಿಸಿರಿ ಧಿಕ್ಕಾರಿಗಳಾಗಿರುವ ಜನರಿಗೆ ಅಲ್ಲಾಹನು ಸನ್ಮಾರ್ಗ ತೋರಿಸುವುದಿಲ್ಲ.
۞ يَوْمَ يَجْمَعُ اللَّهُ الرُّسُلَ فَيَقُولُ مَاذَا أُجِبْتُمْ ۖ قَالُوا لَا عِلْمَ لَنَا ۖ إِنَّكَ أَنتَ عَلَّامُ الْغُيُوبِ ١٠٩
📖 ಅನುವಾದ
ಆಯತ್ 109
ಅಲ್ಲಾಹನು ಸಕಲ ಸಂದೇಶವಾಹಕರನ್ನು ಒಟ್ಟುಗೂಡಿಸಿ (ನಿಮ್ಮ ಅನುಯಾಯಿಗಳಿಂದ) ನಿಮಗೆ (ಆಹ್ವಾನದ) ಯಾವ ಪ್ರತಿಕ್ರಿಯೆಯು ಲಭಿಸಿತ್ತು? ಎಂದು ಕೇಳುವ ದಿನ ನಮಗೆ (ಭಯಭಿತರಾಗಿ) ಯಾವ ಅರಿವೂ ಇಲ್ಲ. ಅಗೋಚರ ಮಾತುಗಳನ್ನು ಚೆನ್ನಾಗಿ ಅರಿಯುವವನು ನೀನೇ ಆಗಿರುವೆ ಎಂದು ಅವರು ಹೇಳುವರು.
إِذْ قَالَ اللَّهُ يَا عِيسَى ابْنَ مَرْيَمَ اذْكُرْ نِعْمَتِي عَلَيْكَ وَعَلَىٰ وَالِدَتِكَ إِذْ أَيَّدتُّكَ بِرُوحِ الْقُدُسِ تُكَلِّمُ النَّاسَ فِي الْمَهْدِ وَكَهْلًا ۖ وَإِذْ عَلَّمْتُكَ الْكِتَابَ وَالْحِكْمَةَ وَالتَّوْرَاةَ وَالْإِنجِيلَ ۖ وَإِذْ تَخْلُقُ مِنَ الطِّينِ كَهَيْئَةِ الطَّيْرِ بِإِذْنِي فَتَنفُخُ فِيهَا فَتَكُونُ طَيْرًا بِإِذْنِي ۖ وَتُبْرِئُ الْأَكْمَهَ وَالْأَبْرَصَ بِإِذْنِي ۖ وَإِذْ تُخْرِجُ الْمَوْتَىٰ بِإِذْنِي ۖ وَإِذْ كَفَفْتُ بَنِي إِسْرَائِيلَ عَنكَ إِذْ جِئْتَهُم بِالْبَيِّنَاتِ فَقَالَ الَّذِينَ كَفَرُوا مِنْهُمْ إِنْ هَٰذَا إِلَّا سِحْرٌ مُّبِينٌ ١١٠
📖 ಅನುವಾದ
ಆಯತ್ 110
ಅಲ್ಲಾಹನು (ಈಸಾರೊಂದಿಗೆ) ಹೇಳಿದ ಸಂದರ್ಭವನ್ನು ಸ್ಮರಿಸಿರಿ. ಓ ಮರ್ಯಮರ ಪುತ್ರನಾದ ಈಸಾ! ನಿಮ್ಮ ಮೇಲೂ, ನಿಮ್ಮ ತಾಯಿಯ ಮೇಲೂ ಮಾಡಲಾಗಿರುವ ನನ್ನ ಅನುಗ್ರಹಗಳನ್ನು ಸ್ಮರಿಸಿರಿ. ನಾನು ನಿಮಗೆ ಪವಿತ್ರಾತ್ಮನ ಮೂಲಕ ಬೆಂಬಲ ನೀಡಿದೆ. ನೀವು ತೊಟ್ಟಿಲಿನಲ್ಲಿರುವಾಗ ಮತ್ತು ಹಿರಿಯ ವಯಸ್ಕನಾಗಿರುವಾಗ ಜನರೊಂದಿಗೆ ಮಾತನಾಡುತ್ತಿದ್ದೀರಿ ಮತ್ತು ನಿಮಗೆ ನಾನು ಗ್ರಂಥ ಹಾಗೂ ಸುಜ್ಞಾನವನ್ನು, ತೌರಾತ್ ಮತ್ತು ಇಂಜೀಲ್ನ ಶಿಕ್ಷಣವನ್ನು ಕಲಿಸಿಕೊಟ್ಟಿದ್ದೆ. ಮತ್ತು ನೀವು ನನ್ನ ಅಪ್ಪಣೆಯಿಂದ ಮಣ್ಣಿನಿಂದ ಪಕ್ಷಿಯ ರೂಪವನ್ನು ಮಾಡಿ, ನಂತರ ನೀವು ಅದರಲ್ಲಿ ಊದುವಾಗ ಅದು ನನ್ನ ಅಪ್ಪಣೆಯಿಂದ ಪಕ್ಷಿಯಾಗಿ ಮಾರ್ಪಡುತ್ತಿತ್ತು. ಮತ್ತು ನೀವು ನನ್ನ ಅಪ್ಪಣೆಯಿಂದ ಹುಟ್ಟು ಕುರುಡನನ್ನೂ, ಕುಷ್ಠರೋಗಿಯನ್ನೂ ಗುಣಪಡಿಸುತ್ತಿದ್ದೀರಿ ಮತ್ತು ನೀವು ನನ್ನ ಅಪ್ಪಣೆಯಿಂದ ಮೃತಪಟ್ಟವರನ್ನು ಎಬ್ಬಿಸುತ್ತಿದ್ದೀರಿ ಮತ್ತು ನೀವು ಇಸ್ರಾಯೀಲ್ ಸಂತತಿಗಳೆಡೆಗೆ ಸುವ್ಯಕ್ತ ದುಷ್ಟಾಂತಗಳೊAದಿಗೆ ಬಂದಾಗ ಅವರ ಪೈಕಿಯ ಸತ್ಯನಿಷೇಧಿಗಳು 'ಇದು ಸ್ಪಷ್ಟ ಜಾದುವಿನ ಹೊರತು ಇನ್ನೇನೂ ಅಲ್ಲ ಎಂದು ಹೇಳಿದಾಗ ನಾವು ನಿಮ್ಮನ್ನು ಅವರ ಕೇಡಿನಿಂದ ರಕ್ಷಿಸಿದೆವು.'
وَإِذْ أَوْحَيْتُ إِلَى الْحَوَارِيِّينَ أَنْ آمِنُوا بِي وَبِرَسُولِي قَالُوا آمَنَّا وَاشْهَدْ بِأَنَّنَا مُسْلِمُونَ ١١١
📖 ಅನುವಾದ
ಆಯತ್ 111
ಮತ್ತು “ನೀವು ನನ್ನಲ್ಲೂ, ನನ್ನ ಸಂದೇಶವಾಹಕರಲ್ಲೂ (ಈಸಾ) ವಿಶ್ವಾಸವಿಡಿರಿ ಎಂದು ನಾವು ಹವಾರಿಗಳಿಗೆ ದಿವ್ಯ ಸಂದೇಶ ನೀಡಿದ ಸಂದರ್ಭವನ್ನು (ಸ್ಮರಿಸಿರಿ) ಆಗ ಅವರು ಹೇಳಿದರು: ನಾವು ವಿಶ್ವಾಸವಿಟ್ಟಿದ್ದೇವೆ ಮತ್ತು ನಾವು ವಿಧೇಯರೆಂಬುದಕ್ಕೆ ನೀನು ಸಾಕ್ಷö್ಯವಹಿಸು.
إِذْ قَالَ الْحَوَارِيُّونَ يَا عِيسَى ابْنَ مَرْيَمَ هَلْ يَسْتَطِيعُ رَبُّكَ أَن يُنَزِّلَ عَلَيْنَا مَائِدَةً مِّنَ السَّمَاءِ ۖ قَالَ اتَّقُوا اللَّهَ إِن كُنتُم مُّؤْمِنِينَ ١١٢
📖 ಅನುವಾದ
ಆಯತ್ 112
ಹವಾರಿಗಳು ಹೇಳಿದ ಸಂದರ್ಭವು ಗಮನಾರ್ಹವಾಗಿದೆ: ಓ ಮರ್ಯಮರ ಪುತ್ರನಾದ ಈಸಾ, ನಿಮ್ಮ ಪ್ರಭುವಿಗೆ ಆಕಾಶದಿಂದ ನಮ್ಮ ಮೇಲೆ ಒಂದು ಭಕ್ಷö್ಯ ಹರಿವಾಣವನ್ನು ಇಳಿಸಿಕೊಡಲು ಸಾಧ್ಯವಿದೆಯೇ? ಅವರು ಹೇಳಿದರು: ನೀವು ಸತ್ಯವಿಶ್ವಾಸಿಗಳಾಗಿದ್ದರೆ ಅಲ್ಲಾಹನನ್ನು ಭಯಪಡಿರಿ.
قَالُوا نُرِيدُ أَن نَّأْكُلَ مِنْهَا وَتَطْمَئِنَّ قُلُوبُنَا وَنَعْلَمَ أَن قَدْ صَدَقْتَنَا وَنَكُونَ عَلَيْهَا مِنَ الشَّاهِدِينَ ١١٣
📖 ಅನುವಾದ
ಆಯತ್ 113
ಅವರು ಹೇಳಿದರು: ನಾವು ಅದರಿಂದ ತಿನ್ನಲು ಮತ್ತು ನಮ್ಮ ಹೃದಯಗಳಿಗೆ ಸಮಾಧಾನ ಸಿಗಲು ಮತ್ತು ನೀವು ನಮ್ಮೊಂದಿಗೆ ಹೇಳಿದ್ದು ಸತ್ಯವಾಗಿತ್ತೆಂದು ನಮಗೆ ಮನವರಿಕೆಯಾಗಲು ಮತ್ತು ನಾವು ಸಾಕ್ಷö್ಯವಹಿಸುವವರೊಂದಿಗೆ ಸೇರಲು ಬಯಸುತ್ತೇವೆ.
قَالَ عِيسَى ابْنُ مَرْيَمَ اللَّهُمَّ رَبَّنَا أَنزِلْ عَلَيْنَا مَائِدَةً مِّنَ السَّمَاءِ تَكُونُ لَنَا عِيدًا لِّأَوَّلِنَا وَآخِرِنَا وَآيَةً مِّنكَ ۖ وَارْزُقْنَا وَأَنتَ خَيْرُ الرَّازِقِينَ ١١٤
📖 ಅನುವಾದ
ಆಯತ್ 114
ಮರ್ಯಮರ ಪುತ್ರ ಈಸಾ ಪ್ರಾರ್ಥಿಸಿದರು: ಓ ಅಲ್ಲಾಹ್, ನಮ್ಮ ಪ್ರಭು, ನೀನು ಆಕಾಶದಿಂದ ನಮ್ಮ ಮೇಲೆ ಒಂದು ಭಕ್ಷö್ಯ ಹರಿವಾಣವನ್ನು ಇಳಿಸಿಕೊಡು ಅದು ನಮ್ಮ ಪೈಕಿ ಮೊದಲಿನವರಿಗೂ, ನಂತರದವರಿಗೂ ಹಬ್ಬವಾಗಲಿ ಮತ್ತು ನಿನ್ನ ಕಡೆಯಿಂದ ಒಂದು ದೃಷ್ಟಾಂತವು ಆಗಿರಲಿ ಮತ್ತು ನೀನು ನಮಗೆ ಜೀವನಾಧಾರವನ್ನು ಕರುಣಿಸು ಮತ್ತು ಅನ್ನಧಾರ ದಯಪಾಲಿಸುವವರ ಪೈಕಿ ನೀನು ಅತ್ಯುತ್ತಮನಾಗಿರುವೆ.
قَالَ اللَّهُ إِنِّي مُنَزِّلُهَا عَلَيْكُمْ ۖ فَمَن يَكْفُرْ بَعْدُ مِنكُمْ فَإِنِّي أُعَذِّبُهُ عَذَابًا لَّا أُعَذِّبُهُ أَحَدًا مِّنَ الْعَالَمِينَ ١١٥
📖 ಅನುವಾದ
ಆಯತ್ 115
ಅಲ್ಲಾಹು ಹೇಳಿದನು: ಖಂಡಿತ ನಾನು ಅದನ್ನು ನಿಮ್ಮ ಮೇಲೆ ಇಳಿಸಿಕೊಡುವೆನು ಅನಂತರ ನಿಮ್ಮ ಪೈಕಿ ಯಾರಾದರೂ ಧಿಕ್ಕಾರ ತೋರಿದರೆ ನಾನು ಅವನಿಗೆ ಜಗತ್ತಿನವರಲ್ಲಿ ಯಾರಿಗೂ ನೀಡದಂತಹ ಶಿಕ್ಷೆಯನ್ನು ನೀಡುವೆನು.
وَإِذْ قَالَ اللَّهُ يَا عِيسَى ابْنَ مَرْيَمَ أَأَنتَ قُلْتَ لِلنَّاسِ اتَّخِذُونِي وَأُمِّيَ إِلَٰهَيْنِ مِن دُونِ اللَّهِ ۖ قَالَ سُبْحَانَكَ مَا يَكُونُ لِي أَنْ أَقُولَ مَا لَيْسَ لِي بِحَقٍّ ۚ إِن كُنتُ قُلْتُهُ فَقَدْ عَلِمْتَهُ ۚ تَعْلَمُ مَا فِي نَفْسِي وَلَا أَعْلَمُ مَا فِي نَفْسِكَ ۚ إِنَّكَ أَنتَ عَلَّامُ الْغُيُوبِ ١١٦
📖 ಅನುವಾದ
ಆಯತ್ 116
ಮತ್ತು ಅಲ್ಲಾಹನು ಪುನರುತ್ಥಾನದ ದಿನ ಹೇಳುವ ಸಂದರ್ಭವನ್ನು ಗಮನಿಸಿರಿ. ಓ ಮರ್ಯಮರ ಪುತ್ರನಾದ ಈಸಾ, ನನ್ನನ್ನೂ ಮತ್ತು ನನ್ನ ತಾಯಿಯನ್ನೂ ಅಲ್ಲಾಹನ ಹೊರತು ಆರಾಧ್ಯರನ್ನಾಗಿ ಮಾಡಿಕೊಳ್ಳಿರಿ ಎಂದು ಜನರೊಡನೆ ಹೇಳಿರುವೆಯಾ? ಈಸಾ ಹೇಳುವರು: ನೀನು ಪರಮ ಪಾವನನು ನನಗೆ ಯಾವುದೇ ಹಕ್ಕಿಲ್ಲದ ಮಾತನ್ನು ಹೇಳುವುದು ನನಗೆ ಯುಕ್ತವಲ್ಲ. ನಾನದನ್ನು ಹೇಳಿರುತ್ತಿದ್ದರೆ ನೀನು ಅದನ್ನು ತಿಳಿದಿರುತ್ತಿದ್ದೆ. ನನ್ನ ಮನಸ್ಸಿನಲ್ಲಿರುವುದನ್ನು ನೀನು ಅರಿಯುವೆ ಮತ್ತು ನಿನ್ನ ಮನಸ್ಸಿನಲ್ಲಿರುವುದನ್ನು ನಾನು ಅರಿಯಲಾರೆ. ಸಕಲ ಅಗೋಚರಗಳನ್ನು ಅರಿಯುವವನು ನೀನೇ ಆಗಿರುವೆ.
مَا قُلْتُ لَهُمْ إِلَّا مَا أَمَرْتَنِي بِهِ أَنِ اعْبُدُوا اللَّهَ رَبِّي وَرَبَّكُمْ ۚ وَكُنتُ عَلَيْهِمْ شَهِيدًا مَّا دُمْتُ فِيهِمْ ۖ فَلَمَّا تَوَفَّيْتَنِي كُنتَ أَنتَ الرَّقِيبَ عَلَيْهِمْ ۚ وَأَنتَ عَلَىٰ كُلِّ شَيْءٍ شَهِيدٌ ١١٧
📖 ಅನುವಾದ
ಆಯತ್ 117
ನೀನು ನನ್ನೊಂದಿಗೆ ಆದೇಶಿಸಿದಂತೆ ನನ್ನ ಪ್ರಭುವೂ, ನಿಮ್ಮ ಪ್ರಭುವೂ ಆದ ಅಲ್ಲಾಹನನ್ನು ಆರಾಧಿಸಿರಿ ಎಂಬುದರ ಹೊರತು ಇನ್ನೇನನ್ನೂ ಅವರಿಗೆ ಹೇಳಿರಲಿಲ್ಲ. ನಾನು ಅವರೊಂದಿಗೆ ಇದ್ದ ಕಾಲದವರೆಗೆ ಅವರ ಮೇಲೆ ಸಾಕ್ಷಿಯಾಗಿದ್ದೆ. ನಂತರ ನೀನು ನನ್ನನ್ನು ಆಕಾಶÀಕ್ಕೆತ್ತಿದ ಬಳಿಕ ನೀನೇ ಅವರ ವೀಕ್ಷಕನಾಗಿದ್ದೆ. ನೀನು ಸರ್ವ ಸಂಗತಿಗಳ ಕುರಿತು ಸಾಕ್ಷಿಯಾಗಿರುವೆ.
إِن تُعَذِّبْهُمْ فَإِنَّهُمْ عِبَادُكَ ۖ وَإِن تَغْفِرْ لَهُمْ فَإِنَّكَ أَنتَ الْعَزِيزُ الْحَكِيمُ ١١٨
📖 ಅನುವಾದ
ಆಯತ್ 118
ನೀನು ಅವರನ್ನು ಶಿಕ್ಷಿಸುವುದಾದರೆ ನಿಸ್ಸಂಶಯವಾಗಿಯು ಅವರು ನಿನ್ನ ದಾಸರಾಗಿದ್ದಾರೆ ಮತ್ತು ನೀನು ಅವರನ್ನು ಕ್ಷಮಿಸುವುದರೆ ನೀನು ಪ್ರತಾಪಶಾಲಿಯೂ, ಯುಕ್ತಿಪೂರ್ಣನೂ ಆಗಿರುವೆ.
قَالَ اللَّهُ هَٰذَا يَوْمُ يَنفَعُ الصَّادِقِينَ صِدْقُهُمْ ۚ لَهُمْ جَنَّاتٌ تَجْرِي مِن تَحْتِهَا الْأَنْهَارُ خَالِدِينَ فِيهَا أَبَدًا ۚ رَّضِيَ اللَّهُ عَنْهُمْ وَرَضُوا عَنْهُ ۚ ذَٰلِكَ الْفَوْزُ الْعَظِيمُ ١١٩
📖 ಅನುವಾದ
ಆಯತ್ 119
ಅಲ್ಲಾಹನು ಹೇಳುವನು: ಇಂದು ಸತ್ಯಸಂಧರಿಗೆ (ಏಕ ದೇವ ನಿಷ್ಠರಿಗೆ) ತಮ್ಮ ಸತ್ಯಸಂಧತೆಯ ಪ್ರಯೋಜನ ಸಿಗುವ ದಿನವಾಗಿದೆ. ಅವರಿಗೆ ತಳಭಾಗದಿಂದ ಕಾಲುವೆಗಳು ಹರಿಯುತ್ತಿರುವ ಸ್ವರ್ಗೋದ್ಯಾನಗಳಿರುವುವು. ಅವರು ಅದರಲ್ಲಿ ಶಾಶ್ವತವಾಗಿರುವರು. ಅವರ ಬಗ್ಗೆ ಅಲ್ಲ್ಲಾಹನು ಸಂತೃಪ್ತನಾಗಿರುವನು. ಮತ್ತು ಅವರು ಅವನ ಬಗ್ಗೆ ಸಂತೃಪ್ತರಾಗಿರುವರು. ಇದು ಮಹಾ ಯಶಸ್ಸಾಗಿದೆ.
لِلَّهِ مُلْكُ السَّمَاوَاتِ وَالْأَرْضِ وَمَا فِيهِنَّ ۚ وَهُوَ عَلَىٰ كُلِّ شَيْءٍ قَدِيرٌ ١٢٠
📖 ಅನುವಾದ
ಆಯತ್ 120
ಆಕಾಶಗಳಲ್ಲೂ, ಭೂಮಿಯಲ್ಲೂ ಮತ್ತು ಅವರೆಡರ ನಡುವೆಯೂ ಇರುವ ಸಕಲ ವಸ್ತುಗಳ ಆಧಿಪತ್ಯವು ಅಲ್ಲಾಹನದ್ದಾಗಿದೆ. ಅವನು ಸಕಲ ವಸ್ತುಗಳ ಮೇಲೆ ಸಾಮರ್ಥ್ಯವುಳ್ಳವನಾಗಿದ್ದಾನೆ.
ಓದಿ ಸೂರಾ ಅಲ್-ಮಾಇದಾ ಕನ್ನಡ ಅನುವಾದ – ಪಠಣ ಮತ್ತು ಆಡಿಯೋ
ಪವಿತ್ರ ಕುರಾನ್
Monday, September 7, 2026
Don't forget us in your sincere prayers

