📖 0/604 ಓದಿದ ಪುಟಗಳು
📄 456
وَوَهَبۡنَا لَهُۥٓ أَهۡلَهُۥ وَمِثۡلَهُم مَّعَهُمۡ رَحۡمَةً مِّنَّا وَذِكۡرَىٰ لِأُوْلِي ٱلۡأَلۡبَٰبِ  ۝٤٣ وَخُذۡ بِيَدِكَ ضِغۡثًا فَٱضۡرِب بِّهِۦ وَلَا تَحۡنَثۡۗ إِنَّا وَجَدۡنَٰهُ صَابِرًاۚ نِّعۡمَ ٱلۡعَبۡدُ إِنَّهُۥٓ أَوَّابٌ  ۝٤٤ وَٱذۡكُرۡ عِبَٰدَنَآ إِبۡرَٰهِيمَ وَإِسۡحَٰقَ وَيَعۡقُوبَ أُوْلِي ٱلۡأَيۡدِي وَٱلۡأَبۡصَٰرِ  ۝٤٥ إِنَّآ أَخۡلَصۡنَٰهُم بِخَالِصَةٍ ذِكۡرَى ٱلدَّارِ  ۝٤٦ وَإِنَّهُمۡ عِندَنَا لَمِنَ ٱلۡمُصۡطَفَيۡنَ ٱلۡأَخۡيَارِ  ۝٤٧ وَٱذۡكُرۡ إِسۡمَٰعِيلَ وَٱلۡيَسَعَ وَذَا ٱلۡكِفۡلِۖ وَكُلٌّ مِّنَ ٱلۡأَخۡيَارِ  ۝٤٨ هَٰذَا ذِكۡرٌۚ وَإِنَّ لِلۡمُتَّقِينَ لَحُسۡنَ مَـَٔابٍ  ۝٤٩ جَنَّٰتِ عَدۡنٍ مُّفَتَّحَةً لَّهُمُ ٱلۡأَبۡوَٰبُ  ۝٥٠ مُتَّكِـِٔينَ فِيهَا يَدۡعُونَ فِيهَا بِفَٰكِهَةٍ كَثِيرَةٍ وَشَرَابٍ  ۝٥١ ۞ وَعِندَهُمۡ قَٰصِرَٰتُ ٱلطَّرۡفِ أَتۡرَابٌ  ۝٥٢ هَٰذَا مَا تُوعَدُونَ لِيَوۡمِ ٱلۡحِسَابِ  ۝٥٣ إِنَّ هَٰذَا لَرِزۡقُنَا مَا لَهُۥ مِن نَّفَادٍ  ۝٥٤ هَٰذَاۚ وَإِنَّ لِلطَّٰغِينَ لَشَرَّ مَـَٔابٍ  ۝٥٥ جَهَنَّمَ يَصۡلَوۡنَهَا فَبِئۡسَ ٱلۡمِهَادُ  ۝٥٦ هَٰذَا فَلۡيَذُوقُوهُ حَمِيمٌ وَغَسَّاقٌ  ۝٥٧ وَءَاخَرُ مِن شَكۡلِهِۦٓ أَزۡوَٰجٌ  ۝٥٨ هَٰذَا فَوۡجٌ مُّقۡتَحِمٌ مَّعَكُمۡ لَا مَرۡحَبَۢا بِهِمۡۚ إِنَّهُمۡ صَالُواْ ٱلنَّارِ  ۝٥٩ قَالُواْ بَلۡ أَنتُمۡ لَا مَرۡحَبَۢا بِكُمۡۖ أَنتُمۡ قَدَّمۡتُمُوهُ لَنَاۖ فَبِئۡسَ ٱلۡقَرَارُ  ۝٦٠ قَالُواْ رَبَّنَا مَن قَدَّمَ لَنَا هَٰذَا فَزِدۡهُ عَذَابًا ضِعۡفًا فِي ٱلنَّارِ  ۝٦١
38:43
وَوَهَبۡنَا لَهُۥٓ أَهۡلَهُۥ وَمِثۡلَهُم مَّعَهُمۡ رَحۡمَةً مِّنَّا وَذِكۡرَىٰ لِأُوْلِي ٱلۡأَلۡبَٰبِ  ۝٤٣
ಮತ್ತು ನಾವು ನಮ್ಮ ಕಡೆಯ ವಿಶೇಷ ಕಾರುಣ್ಯದಿಂದ ಅವರಿಗೆ ಅವರÀ ಮನೆಯವರನ್ನು ಮತ್ತು ಅವರ ಜೊತೆಯಲ್ಲಿ ಅವರಷ್ಟೇ ಮಂದಿಯನ್ನೂ ನೀಡಿದೆವು. ಇದು ಬುದ್ಧಿಜೀವಿಗಳಿಗೆ ಉದ್ಭೋದೆಯಾಗಲೆಂದಾಗಿದೆ.
38:44
وَخُذۡ بِيَدِكَ ضِغۡثًا فَٱضۡرِب بِّهِۦ وَلَا تَحۡنَثۡۗ إِنَّا وَجَدۡنَٰهُ صَابِرًاۚ نِّعۡمَ ٱلۡعَبۡدُ إِنَّهُۥٓ أَوَّابٌ  ۝٤٤
ಮತ್ತು ನೀವು ನಿಮ್ಮ ಕÉÊಯಲ್ಲಿ ಹುಲ್ಲು ಕಡ್ಡಿಗಳ ಪೊರಕೆಯೊಂದನ್ನು ತೆಗೆದುಕೊಂಡು ಅದರಿಂದ ಹೊಡೆಯಿರಿ ಹಾಗೂ ಪ್ರತಿಜ್ಞೆಯನ್ನು ಉಲ್ಲಂಘಿಸಬೇಡಿ. ನಿಜವಾಗಿಯು ನಾವು ಅಯ್ಯೂಬರನ್ನು ಸಹನಾಶೀಲರನ್ನಾಗಿ ಕಂಡೆವು. ಅವರು ಅತ್ಯುತ್ತಮ ದಾಸರು ಮತ್ತು ತಮ್ಮ ಪ್ರಭುವಿನೆಡೆಗೆ ಹೆಚ್ಚು ಮರಳುವವರಾಗಿದ್ದರು.
38:45
وَٱذۡكُرۡ عِبَٰدَنَآ إِبۡرَٰهِيمَ وَإِسۡحَٰقَ وَيَعۡقُوبَ أُوْلِي ٱلۡأَيۡدِي وَٱلۡأَبۡصَٰرِ  ۝٤٥
ನೀವು ನಮ್ಮ ದಾಸರಾದ ಇಬ್ರಾಹೀಮ್, ಇಸ್‌ಹಾಕ್, ಯಅಕೂಬರನ್ನೂ ಸ್ಮರಿಸಿರಿ. ಅವರು ಕರ್ಮ ಶಕ್ತಿಯುಳ್ಳವರೂ, ದೂರದೃಷ್ಟಿ ಹೊಂದಿದವರೂ ಆಗಿದ್ದರು.
38:46
إِنَّآ أَخۡلَصۡنَٰهُم بِخَالِصَةٍ ذِكۡرَى ٱلدَّارِ  ۝٤٦
ನಾವು ಅವರನ್ನು ಒಂದು ವಿಶಿಷ್ಟ ಗುಣದಿಂದಾಗಿ ಉತ್ಕೃಷ್ಟಗೊಳಿಸಿದೆವು. ಅದು ಪರಲೋಕದ ಸ್ಮರಣೆಯಾಗಿತ್ತು.
38:47
وَإِنَّهُمۡ عِندَنَا لَمِنَ ٱلۡمُصۡطَفَيۡنَ ٱلۡأَخۡيَارِ  ۝٤٧
ನಿಶ್ಚಯವಾಗಿಯೂ ಅವರು ನಮ್ಮ ಬಳಿ ಆಯ್ಕೆ ಮಾಡಲಾದ ಅತ್ಯುತ್ತಮ ಜನರಾಗಿದ್ದರು.
38:48
وَٱذۡكُرۡ إِسۡمَٰعِيلَ وَٱلۡيَسَعَ وَذَا ٱلۡكِفۡلِۖ وَكُلٌّ مِّنَ ٱلۡأَخۡيَارِ  ۝٤٨
ಇಸ್ಮಾಯೀಲ್, ಯಸ್‌ಅ ಹಾಗೂ ದುಲ್‌ಕಿಫಲ್‌ರನ್ನು ಸ್ಮರಿಸಿರಿ. ಅವರಲ್ಲಿ ಪ್ರತಿಯೊಬ್ಬರೂ ಸತ್ಕರ್ಮಿಗಳಾಗಿದ್ದರು.
38:49
هَٰذَا ذِكۡرٌۚ وَإِنَّ لِلۡمُتَّقِينَ لَحُسۡنَ مَـَٔابٍ  ۝٤٩
ಇದೊಂದು ಬೋಧನೆಯಾಗಿದೆ. ನಿಶ್ಚಯವಾಗಿಯೂ ಭಯಭಕ್ತಿಯುಳ್ಳವರಿಗೆ ಮರಳಲು ಅತ್ಯುತ್ತಮ ನೆಲೆಯಿದೆ.
38:50
جَنَّٰتِ عَدۡنٍ مُّفَتَّحَةً لَّهُمُ ٱلۡأَبۡوَٰبُ  ۝٥٠
(ಅಂದರೆ) ಶಾಶ್ವತವಾದ ಸ್ವರ್ಗೋದ್ಯಾನಗಳು: ಅವುಗಳ ದ್ವಾರಗಳನ್ನು ಅವರಿಗಾಗಿ ತೆರೆದಿಡಲಾಗಿದೆ.
38:51
مُتَّكِـِٔينَ فِيهَا يَدۡعُونَ فِيهَا بِفَٰكِهَةٍ كَثِيرَةٍ وَشَرَابٍ  ۝٥١
ಅವರು ದಿಂಬುಗಳಿಗೆ ಒರಗಿ ಕುಳಿತುಕೊಂಡು ವಿಧವಿಧದ ಹಣ್ಣುಹಂಪಲು ಹಾಗೂ ಪಾನೀಯಗಳನ್ನು ತರಿಸುತ್ತಿರುವರು.
38:52
۞ وَعِندَهُمۡ قَٰصِرَٰتُ ٱلطَّرۡفِ أَتۡرَابٌ  ۝٥٢
ಮತ್ತು ಅವರ ಬಳಿ ದೃಷ್ಟಿ ತಗ್ಗಿಸಿರುವ ಸಮವಯಸ್ಕರಾದ ಅಪ್ಸರೆಗಳಿರುವರು.
38:53
هَٰذَا مَا تُوعَدُونَ لِيَوۡمِ ٱلۡحِسَابِ  ۝٥٣
ಇವು ವಿಚಾರಣೆಯ ದಿನಕ್ಕಾಗಿ ನಿಮಗೆ ವಾಗ್ದಾನ ನೀಡಲಾಗುತ್ತಿರುವ ವಸ್ತುಗಳಾಗಿವೆ.
38:54
إِنَّ هَٰذَا لَرِزۡقُنَا مَا لَهُۥ مِن نَّفَادٍ  ۝٥٤
ಖಂಡಿತವಾಗಿಯೂ ಇದು ನಮ್ಮ( ಕಡೆಯ ವಿಶೇಷ) ಜೀವನಾಧಾರವಾಗಿದೆ. ಇದಕ್ಕೆ ಎಂದಿಗೂ ಅಂತ್ಯವಿಲ್ಲ.
38:55
هَٰذَاۚ وَإِنَّ لِلطَّٰغِينَ لَشَرَّ مَـَٔابٍ  ۝٥٥
ಇದಂತು (ಧರ್ಮನಿಷ್ಠರ) ಪ್ರತಿಫಲವಾಯಿತು. ನಿಶ್ಚಯವಾಗಿಯು ಅತಿಕ್ರಮಿಗಳಿಗೆ ಕೆಟ್ಟತಾಣವಿರುವುದು.
38:56
جَهَنَّمَ يَصۡلَوۡنَهَا فَبِئۡسَ ٱلۡمِهَادُ  ۝٥٦
ಅದು ನರಕವಾಗಿದೆ ಅವರು ಅದರಲ್ಲಿ ಪ್ರವೇಶಿಸುವರು ಮತ್ತು ಅದೆಷ್ಟು ನಿಕೃಷ್ಟ ನೆಲೆಯಾಗಿರುವುದು.
38:57
هَٰذَا فَلۡيَذُوقُوهُ حَمِيمٌ وَغَسَّاقٌ  ۝٥٧
( ಮಲಕ್‌ಗಳು ಹೇಳುವರು) ಇದು ಅತ್ಯುಷ್ಣ ಜಲ ಹಾಗೂ ಕೀವು ಆಗಿದೆ. ಆದ್ದರಿಂದ ಅವರು ಅದನ್ನು ಸವಿಯಲಿ.
38:58
وَءَاخَرُ مِن شَكۡلِهِۦٓ أَزۡوَٰجٌ  ۝٥٨
ಇದೇ ರೀತಿಯ ಇತರೇ ಶಿಕ್ಷೆಗಳಿರುವವು.
38:59
هَٰذَا فَوۡجٌ مُّقۡتَحِمٌ مَّعَكُمۡ لَا مَرۡحَبَۢا بِهِمۡۚ إِنَّهُمۡ صَالُواْ ٱلنَّارِ  ۝٥٩
(ಮಲಕ್‌ಗಳು ಸತ್ಯನಿಷೇಧಿಗಳಿಗೆÀ ಹೇಳುವರು) ಇದು ನಿಮ್ಮೊಂದಿಗೆ ನರಕದಲ್ಲಿ ಪ್ರವೇಶಿಸಲಿರುವ ಒಂದು ತುಕ್ಕಡಿಯಾಗಿದೆ. (ಆಗ ನಾಯಕರು) ಅವರಿಗೆಯಾವ ಸ್ವಾಗತವೂ ಇಲ್ಲ. ಇವರು ನರಕಾಗ್ನಿಯನ್ನು ಪ್ರವೇಶಿಸುವವರಾಗಿರುವರು ಎಂದು ಹೇಳುವರು.
38:60
قَالُواْ بَلۡ أَنتُمۡ لَا مَرۡحَبَۢا بِكُمۡۖ أَنتُمۡ قَدَّمۡتُمُوهُ لَنَاۖ فَبِئۡسَ ٱلۡقَرَارُ  ۝٦٠
(ಆಗ ಅವರ ಅನುಯಾಯಿಗಳು) ಹೇಳುವರು: ಹಾಗಲ್ಲ! ನಿಮಗೂ ಯಾವ ಸ್ವಾಗತವಿಲ್ಲ. ನೀವೇ ಇದನ್ನು ಮೊದಲು ನಮ್ಮ ಮುಂದೆ ತಂದಿಟ್ಟಿರುವಿರಿ. ಹಾಗೆಯೇ ಅದೆಷ್ಟು ಕೆಟ್ಟ ವಾಸಸ್ಥಾನವಾಗಿದೆ.
38:61
قَالُواْ رَبَّنَا مَن قَدَّمَ لَنَا هَٰذَا فَزِدۡهُ عَذَابًا ضِعۡفًا فِي ٱلنَّارِ  ۝٦١
ಅವರೆನ್ನುವರು: ನಮ್ಮ ಪ್ರಭು, ಯಾರು ನಮಗೆ ಈ ಶಿಕ್ಷಗೆ ಗುರಿಪಡಿಸಿದರೂ ಅವರಿಗೆ ನರಕಾಗ್ನಿಯ ಇಮ್ಮಡಿ ಯಾತನೆಯನ್ನು ನಿಶ್ಚಯಿಸಿಬಿಡು.


📚Juz 23 📄456 / 604



Mishary Rashid Alafasy
Mahmoud Khalil Al-Husary
Abdurrahman As-Sudais
Mohamed Siddiq Al-Minshawi
Abdul Basit Abdul Samad
Ali Al-Hudhaify
Ahmed ibn Ali al-Ajamy
Abu Bakr Ash-Shaatree
Muhammad Ayyoub
Abdullah Basfar
Abdullah Al-Juhani
Maher Al Muaiqly
0:00
0:00
-

ಪವಿತ್ರ ಕುರಾನ್


Saturday, August 29, 2026

Don't forget us in your sincere prayers