ಸೂರಾ ಅಜ್-ಜುಮರ್ ಅರೇಬಿಕ್ ಮತ್ತು ಕನ್ನಡ
ಸೂರಾ ಅಜ್-ಜುಮರ್ ಸಂಪೂರ್ಣ ಕನ್ನಡ ಅನುವಾದ, ಉಚ್ಚಾರಣೆ ಮತ್ತು ಆಡಿಯೋ ಪಠಣದೊಂದಿಗೆ ಓದಿ. ಪ್ರತಿ ಆಯತ್‌ನ ಅರ್ಥ. (75 ಆಯತ್ — مكية). ಅಜ್-ಜುಮರ್ ಆಲಿಸಿ, ಅಜ್-ಜುಮರ್ ಅನುವಾದ, ಅಜ್-ಜುಮರ್ mp3, ಅಜ್-ಜುಮರ್ pdf.ಸೂರಾ ಅಜ್-ಜುಮರ್ ಓದಿ ಮತ್ತು ಆಲಿಸಿ
🎧 ಆಯತ್
M
Mishary Rashid Alafasy
✓
Mishary Rashid Alafasy
✓
M
Mahmoud Khalil Al-Husary
✓
Mahmoud Khalil Al-Husary
✓
A
Abdurrahman As-Sudais
✓
Abdurrahman As-Sudais
✓
M
Mohamed Siddiq Al-Minshawi
✓
Mohamed Siddiq Al-Minshawi
✓
A
Abdul Basit Abdul Samad
✓
Abdul Basit Abdul Samad
✓
A
Ali Al-Hudhaify
✓
Ali Al-Hudhaify
✓
A
Ahmed ibn Ali al-Ajamy
✓
Ahmed ibn Ali al-Ajamy
✓
A
Abu Bakr Ash-Shaatree
✓
Abu Bakr Ash-Shaatree
✓
M
Muhammad Ayyoub
✓
Muhammad Ayyoub
✓
A
Abdullah Basfar
✓
Abdullah Basfar
✓
A
Abdullah Al-Juhani
✓
Abdullah Al-Juhani
✓
M
Maher Al Muaiqly
✓
Maher Al Muaiqly
✓
—
x1
تَنزِيلُ الْكِتَابِ مِنَ اللَّهِ الْعَزِيزِ الْحَكِيمِ ١
📖 ಅನುವಾದ
ಆಯತ್ 1
ಇದು ಪ್ರಚಂಡನೂ ಸುಜ್ಞಾನಿಯೂ ಆದ ಅಲ್ಲಾಹನ ವತಿಯಿಂದ ಅವತೀರ್ಣವಾದ ಗ್ರಂಥ.
إِنَّا أَنزَلْنَا إِلَيْكَ الْكِتَابَ بِالْحَقِّ فَاعْبُدِ اللَّهَ مُخْلِصًا لَّهُ الدِّينَ ٢
📖 ಅನುವಾದ
ಆಯತ್ 2
ನಿಶ್ಚಯವಾಗಿಯೂ ನಾವು ಈ ಗ್ರಂಥವನ್ನು ನಿಮ್ಮಡೆಗೆ ಸತ್ಯದೊಂದಿಗೆ ಅವತೀರ್ಣಗೊಳಿಸಿದ್ದೇವೆ. ಆದ್ದರಿಂದ ನೀವು ಏಕನಿಷ್ಠರಾಗಿ, ಧರ್ಮವನ್ನು ಅಲ್ಲಾಹನಿಗೇ ಮೀಸಲಿಟ್ಟು ಅವನನ್ನು ಆರಾಧಿಸಿರಿ.
أَلَا لِلَّهِ الدِّينُ الْخَالِصُ ۚ وَالَّذِينَ اتَّخَذُوا مِن دُونِهِ أَوْلِيَاءَ مَا نَعْبُدُهُمْ إِلَّا لِيُقَرِّبُونَا إِلَى اللَّهِ زُلْفَىٰ إِنَّ اللَّهَ يَحْكُمُ بَيْنَهُمْ فِي مَا هُمْ فِيهِ يَخْتَلِفُونَ ۗ إِنَّ اللَّهَ لَا يَهْدِي مَنْ هُوَ كَاذِبٌ كَفَّارٌ ٣
📖 ಅನುವಾದ
ಆಯತ್ 3
ಎಚ್ಚರಿಕೆ ಧರ್ಮವು ನಿಷ್ಕಳಂಕವಾಗಿ ಕೇವಲ ಅಲ್ಲಾಹನಿಗೇ ಮೀಸಲಾಗಿದೆ ಮತ್ತು ಯಾರು ಅವನ ಹೊರತು ಇತರರನ್ನು ರಕ್ಷಕ ಮಿತ್ರರನ್ನಾಗಿ ಮಾಡಿಕೊಂಡಿರುತ್ತಾರೋ ಅವರು ನಮ್ಮನ್ನು 'ಅಲ್ಲಾಹನ ಬಳಿ ನಿಕಟಗೊಳಿಸಲೆಂದು ಮಾತ್ರ ನಾವು ಅವರನ್ನು ಆರಾಧಿಸುತ್ತೇವೆ (ಎಂದು ಹೇಳುತ್ತಾರೆ). ಅವರು ಭಿನ್ನತೆ ತೋರುತ್ತಿದ್ದ ವಿಚಾರಗಳ ತೀರ್ಮಾನವನ್ನು ಅಲ್ಲಾಹನು ಮಾಡಲಿದ್ದಾನೆ. ನಿಶ್ಚಯವಾಗಿಯು ಸುಳ್ಳರೂ, ಕೃತಘ್ನರೂ ಆದವರನ್ನು ಅಲ್ಲಾಹನು ಸನ್ಮಾರ್ಗಕ್ಕೆ ಮುನ್ನಡೆಸುವುದಿಲ್ಲ.
لَّوْ أَرَادَ اللَّهُ أَن يَتَّخِذَ وَلَدًا لَّاصْطَفَىٰ مِمَّا يَخْلُقُ مَا يَشَاءُ ۚ سُبْحَانَهُ ۖ هُوَ اللَّهُ الْوَاحِدُ الْقَهَّارُ ٤
📖 ಅನುವಾದ
ಆಯತ್ 4
ಅಲ್ಲಾಹನು ಯಾರನ್ನಾದರೂ ಪುತ್ರನನ್ನಾಗಿ ಮಾಡಿಕೊಳ್ಳಲು ಇಚ್ಛಿಸಿರುತ್ತಿದ್ದರೆ ಅವನು ಸೃಷ್ಟಿಸಿದವುಗಳಲ್ಲಿಂದ ತಾನಿಚ್ಛಿಸಿದ್ದನ್ನು ಆರಿಸಿಕೊಳ್ಳುತ್ತಿದ್ದನು. (ಆದರೆ) ಅವನು ಪರಮಪಾನನನು. ಅವನು ಏಕÉÊಕನೂ, ಸರ್ವರ ಮೇಲೆ ಪ್ರಾಬಲ್ಯವುಳ್ಳವನಾಗಿದ್ದಾನೆ.
خَلَقَ السَّمَاوَاتِ وَالْأَرْضَ بِالْحَقِّ ۖ يُكَوِّرُ اللَّيْلَ عَلَى النَّهَارِ وَيُكَوِّرُ النَّهَارَ عَلَى اللَّيْلِ ۖ وَسَخَّرَ الشَّمْسَ وَالْقَمَرَ ۖ كُلٌّ يَجْرِي لِأَجَلٍ مُّسَمًّى ۗ أَلَا هُوَ الْعَزِيزُ الْغَفَّارُ ٥
📖 ಅನುವಾದ
ಆಯತ್ 5
ಅವನು ಆಕಾಶಗಳನ್ನು ಮತ್ತು ಭೂಮಿಯನ್ನು ಸತ್ಯದೊಂದಿಗೆ ಸೃಷ್ಟಿಸಿರುತ್ತಾನೆ. ಅವನು ರಾತ್ರಿಯನ್ನು ಹಗಲಿನ ಮೇಲೆ ಹಾಗೂ ಹಗಲನ್ನುರಾತ್ರಿಯ ಮೇಲೆ ಸುತ್ತುತ್ತಾನೆ ಮತ್ತು ಸೂರ್ಯ ಹಾಗೂ ಚಂದ್ರರನ್ನು ನಿಯಂತ್ರಿಸುತ್ತಾನೆ. ಪ್ರತಿಯೊಂದೂ ಸಹ ಒಂದು ನಿಶ್ಚಿತ ಅವಧಿಯವರೆಗೆ ಸಂಚರಿಸುತ್ತಿರುತ್ತವೆ. ತಿಳಿಯಿರಿ! ಅವನು ಪ್ರಚಂಡನೂ, ಕ್ಷಮಾಶೀಲನೂ ಆಗಿದ್ದಾನೆ.
خَلَقَكُم مِّن نَّفْسٍ وَاحِدَةٍ ثُمَّ جَعَلَ مِنْهَا زَوْجَهَا وَأَنزَلَ لَكُم مِّنَ الْأَنْعَامِ ثَمَانِيَةَ أَزْوَاجٍ ۚ يَخْلُقُكُمْ فِي بُطُونِ أُمَّهَاتِكُمْ خَلْقًا مِّن بَعْدِ خَلْقٍ فِي ظُلُمَاتٍ ثَلَاثٍ ۚ ذَٰلِكُمُ اللَّهُ رَبُّكُمْ لَهُ الْمُلْكُ ۖ لَا إِلَٰهَ إِلَّا هُوَ ۖ فَأَنَّىٰ تُصْرَفُونَ ٦
📖 ಅನುವಾದ
ಆಯತ್ 6
ಅವನು ನಿಮ್ಮೆಲ್ಲರನ್ನು ಒಂದೇ ಜೀವದಿಂದ ಸೃಷ್ಟಿಸಿರುವನು. ತರುವಾಯ ಅದರಿಂದ ಅದರ ಜೋಡಿಯನ್ನು ಉಂಟು ಮಾಡಿದನು ಹಾಗೂ ನಿಮಗಾಗಿ ಜಾನುವಾರುಗಳಿಂದ ಎಂಟು ವರ್ಗ ಗಂಡು ಹೆಣ್ಣುಗಳನ್ನು ಇಳಿಸಿರುವನು. ಅವನು ನಿಮ್ಮನ್ನು ನಿಮ್ಮ ತಾಯಂದಿರ ಹೊಟ್ಟೆಗಳಲ್ಲಿ ಒಂದು ಸೃಷ್ಟಿ ಹಂತದ ಬಳಿಕ ಮತ್ತೊಂದು ಸೃಷ್ಟಿ ಹಂತವನ್ನಾಗಿ ಮೂರು ಅಂಧಕಾರಗಳಲ್ಲಿ ಸೃಷ್ಟಿಸುವನು. ಅವನೇ ನಿಮ್ಮ ಪ್ರಭುವು ಅಲ್ಲಾಹನಾಗಿದ್ದಾನೆ. ಅಧಿಪತ್ಯವು ಅವನದೇ ಆಗಿರುವುದು. ಅವನ ಹೊರತು ಇನ್ನಾವ ಆರಾಧ್ಯನಿಲ್ಲ. ಹಾಗಿದ್ದೂ ನೀವೆತ್ತ ಅಲೆದಾಡುತ್ತಿರುವಿರಿ?
إِن تَكْفُرُوا فَإِنَّ اللَّهَ غَنِيٌّ عَنكُمْ ۖ وَلَا يَرْضَىٰ لِعِبَادِهِ الْكُفْرَ ۖ وَإِن تَشْكُرُوا يَرْضَهُ لَكُمْ ۗ وَلَا تَزِرُ وَازِرَةٌ وِزْرَ أُخْرَىٰ ۗ ثُمَّ إِلَىٰ رَبِّكُم مَّرْجِعُكُمْ فَيُنَبِّئُكُم بِمَا كُنتُمْ تَعْمَلُونَ ۚ إِنَّهُ عَلِيمٌ بِذَاتِ الصُّدُورِ ٧
📖 ಅನುವಾದ
ಆಯತ್ 7
ನೀವು ಕೃತಘ್ನತೆ ತೋರುವುದಾದರೆ ಅಲ್ಲಾಹನು ನಿಮ್ಮಿಂದ ನಿರಪೇಕ್ಷನಾಗಿದ್ದಾನೆ ಹಾಗೂ ಅವನು ತನ್ನ ದಾಸರ ಪಾಲಿಗೆ ಕೃತಘ್ನತೆಯನ್ನು ಮೆಚ್ಚುವುದಿಲ್ಲ ಮತ್ತು ನೀವು ಕೃತಜ್ಞತೆ ತೋರುವುದಾದರೆ ಅದನ್ನು ಅವನು ನಿಮ್ಮ ಪಾಲಿಗೆ ಮೆಚ್ಚುತ್ತಾನೆ ಮತ್ತು ಪಾಪ ಭಾರ ಹೊರುವವನು ಮತ್ತೊಬ್ಬನ ಭಾರವನ್ನು ಹೊರಲಾರನು. ತರುವಾಯ ನಿಮ್ಮೆಲ್ಲರ ಮರಳುವಿಕೆಯು ನಿಮ್ಮ ಪ್ರಭುವಿನೆಡೆಗೇ ಆಗಿದೆ. ನೀವು ಮಾಡುತ್ತಿದ್ದಿದ್ದನ್ನು ಅವನು ನಿಮಗೆ ತಿಳಿಸಿಕೊಡುವನು. ಖಂಡಿತವಾಗಿಯು ಅವನು ಮನಸ್ಸಿನಲ್ಲಿರುವ ಸಂಗತಿಗಳನ್ನು ಚೆನ್ನಾಗಿಬಲ್ಲನು.
۞ وَإِذَا مَسَّ الْإِنسَانَ ضُرٌّ دَعَا رَبَّهُ مُنِيبًا إِلَيْهِ ثُمَّ إِذَا خَوَّلَهُ نِعْمَةً مِّنْهُ نَسِيَ مَا كَانَ يَدْعُو إِلَيْهِ مِن قَبْلُ وَجَعَلَ لِلَّهِ أَندَادًا لِّيُضِلَّ عَن سَبِيلِهِ ۚ قُلْ تَمَتَّعْ بِكُفْرِكَ قَلِيلًا ۖ إِنَّكَ مِنْ أَصْحَابِ النَّارِ ٨
📖 ಅನುವಾದ
ಆಯತ್ 8
ಮನುಷ್ಯನಿಗೆ ಯಾವುದಾದರೂ ವಿಪತ್ತು ಬಾಧಿಸಿದಾಗ ಅವನು ತನ್ನ ಪ್ರಭುವಿನೆಡೆಗೆ ಮರಳಿ ವಿನಮ್ರತೆಯಿಂದ ಅವನನ್ನು ಕರೆದುಬೇಡುತ್ತಾನೆ. ತರುವಾಯ ಅಲ್ಲಾಹನು ತನ್ನ ವತಿಯಿಂದ ಯಾವುದಾದರೂ ಅನುಗ್ರಹವನ್ನು ಅವನಿಗೆ ದಯಪಾಲಿಸಿದರೆ. ಅವನು ಇದಕ್ಕೆ ಮೊದಲು ತಾನು ಅವನೆಡೆಗೆ ಮೊರೆಯಿಟ್ಟಿರುವುದನ್ನು (ಸಂಪೂರ್ಣವಾಗಿ) ಮರೆತು ಬಿಡುತ್ತಾನೆ ಮತ್ತು ಇತರರನ್ನು ಅವನ ಮಾರ್ಗದಿಂದ ಭ್ರಷ್ಟಗೊಳಿಸಲು ಅಲ್ಲಾಹನಿಗೆ ಸರಿಸಮಾನರನ್ನು ನಿಶ್ಚಯಿಸುತ್ತಾನೆ. ಓ ಪೈಗಂಬರರೇ, ಹೇಳಿರಿ ಈ ಸತ್ಯನಿಷೇಧದ ಲಾಭವನ್ನು ಅಲ್ಪ ಕಾಲ ಭೋಗಿಸು. ಖಂಡಿತವಾಗಿಯು ನೀನು ನರಕವಾಸಿಗಳಲ್ಲಿ ಸೇರಲಿರುವೆ.
أَمَّنْ هُوَ قَانِتٌ آنَاءَ اللَّيْلِ سَاجِدًا وَقَائِمًا يَحْذَرُ الْآخِرَةَ وَيَرْجُو رَحْمَةَ رَبِّهِ ۗ قُلْ هَلْ يَسْتَوِي الَّذِينَ يَعْلَمُونَ وَالَّذِينَ لَا يَعْلَمُونَ ۗ إِنَّمَا يَتَذَكَّرُ أُولُو الْأَلْبَابِ ٩
📖 ಅನುವಾದ
ಆಯತ್ 9
ಪರಲೋಕವನ್ನು ಭಯಪಟ್ಟು, ತನ್ನ ಪ್ರಭುವಿನ ಕಾರುಣ್ಯವನ್ನು ಆಶಿಸಿ ರಾತ್ರಿ ಆಯಾಮಗಳಲ್ಲಿ ಸಾಷ್ಟಾಂಗವೆರಗುತ್ತಾ ಮತ್ತÄ ನಿಂತುಕೊAಡು ತನ್ನ ಪ್ರಭುವನ್ನು ಆರಾಧಿಸುವವನು ಇದಕ್ಕೆ ವ್ಯತಿರಿಕ್ತವಾಗಿರುವವನಿಗೆ ಸಮಾನನೇ? ಹೇಳಿರಿ: ಜ್ಞಾನವುಳ್ಳವರೂ, ಅಜ್ಞಾನಿಗಳೂ ಸರಿಸಮಾನರಾಗುವರೇ? ನಿಜವಾಗಿಯು ಬುದ್ಧಿಜೀವಿಗಳು ಮಾತ್ರ ಉಪದೇಶವನ್ನು ಸ್ವೀಕರಿಸುತ್ತಾರೆ.
قُلْ يَا عِبَادِ الَّذِينَ آمَنُوا اتَّقُوا رَبَّكُمْ ۚ لِلَّذِينَ أَحْسَنُوا فِي هَٰذِهِ الدُّنْيَا حَسَنَةٌ ۗ وَأَرْضُ اللَّهِ وَاسِعَةٌ ۗ إِنَّمَا يُوَفَّى الصَّابِرُونَ أَجْرَهُم بِغَيْرِ حِسَابٍ ١٠
📖 ಅನುವಾದ
ಆಯತ್ 10
ಹೇಳಿರಿ: ಓ ನನ್ನ ಸತ್ಯವಿಶ್ವಾಸಿ ದಾಸರೇ, ನೀವು ನಿಮ್ಮ ಪ್ರಭುವನ್ನು ಭಯಪಡುತ್ತಿರಿ. ಇಹಲೋಕದಲ್ಲಿ ಒಳಿತನ್ನು ಮಾಡುವವರಿಗೇ ಸತ್ಫಲವಿರುವುದು ಮತ್ತು ಅಲ್ಲಾಹನ ಭೂಮಿಯು ವಿಶಾಲವಾಗಿರುವುದು. ಖಂಡಿತವಾಗಿಯು ಸಹನಶೀಲರಿಗೆ ಅವರ ಪ್ರತಿಫಲವನ್ನು ಲೆಕ್ಕಾತೀತವಾಗಿ ನೀಡಲಾಗುವುದು.
قُلْ إِنِّي أُمِرْتُ أَنْ أَعْبُدَ اللَّهَ مُخْلِصًا لَّهُ الدِّينَ ١١
📖 ಅನುವಾದ
ಆಯತ್ 11
ಹೇಳಿರಿ: ಏಕನಿಷ್ಠನಾಗಿ ಧರ್ಮವನ್ನು ಅಲ್ಲಾಹನಿಗೆ ಮೀಸಲಿಟ್ಟು ಅವನನ್ನು ಆರಾಧಿಸಬೇಕೆಂದು ನನಗೆ ಆದೇಶ ನೀಡಲಾಗಿದೆ.
وَأُمِرْتُ لِأَنْ أَكُونَ أَوَّلَ الْمُسْلِمِينَ ١٢
📖 ಅನುವಾದ
ಆಯತ್ 12
ಮತ್ತು ಎಲ್ಲರಿಗಿಂತ ಮೊದಲು ವಿಧೇಯನಾಗಿರಬೇಕೆಂದು ನನಗೆ ಆದೇಶ ನೀಡಲಾಗಿರುತ್ತದೆ.
قُلْ إِنِّي أَخَافُ إِنْ عَصَيْتُ رَبِّي عَذَابَ يَوْمٍ عَظِيمٍ ١٣
📖 ಅನುವಾದ
ಆಯತ್ 13
ಹೇಳಿರಿ: ನಾನು ನನ್ನ ಪ್ರಭುವಿನ ಆಜ್ಞಾಲ್ಲೋಂಘನೆ ಮಾಡುವುದಾದರೆ ಖಂಡಿತವಾಗಿಯು ಮಹಾದಿನದ ಯಾತನೆಯಿಂದ ಭಯಪಡುತ್ತೇನೆ.
قُلِ اللَّهَ أَعْبُدُ مُخْلِصًا لَّهُ دِينِي ١٤
📖 ಅನುವಾದ
ಆಯತ್ 14
ಹೇಳಿರಿ: ನಾನು ನನ್ನ ಧರ್ಮವನ್ನು ಅಲ್ಲಾಹನಿಗೆ ಮೀಸಲಿಟ್ಟು ಏಕನಿಷ್ಠನಾಗಿ ಅವನನ್ನೇ, ಆರಾಧಿಸುತ್ತೇನೆ.
فَاعْبُدُوا مَا شِئْتُم مِّن دُونِهِ ۗ قُلْ إِنَّ الْخَاسِرِينَ الَّذِينَ خَسِرُوا أَنفُسَهُمْ وَأَهْلِيهِمْ يَوْمَ الْقِيَامَةِ ۗ أَلَا ذَٰلِكَ هُوَ الْخُسْرَانُ الْمُبِينُ ١٥
📖 ಅನುವಾದ
ಆಯತ್ 15
ನೀವು ಅವನ ಹೊರತು ನೀವಿಚ್ಛಿಸಿದವರನ್ನು ಆರಾಧಿಸುತ್ತಿರಿ, ಹೇಳಿರಿ: ಪುನರುತ್ಥಾನದÀ ದಿನ ತಮ್ಮನ್ನು ತಮ್ಮ ಕುಟುಂಬದವರನ್ನು ನಷ್ಟಕ್ಕೀಡು ಮಾಡಿದವರೇ ನಿಜವಾಗಿಯು ನಷ್ಟ ಹೊಂದಿದವರಾಗಿರುತ್ತಾರೆ. ನೆನಪಿರಲಿ: ಇದೇ ಸುಸ್ಪಷ್ಟವಾದ ನಷ್ಟವಾಗಿರುವುದು.
لَهُم مِّن فَوْقِهِمْ ظُلَلٌ مِّنَ النَّارِ وَمِن تَحْتِهِمْ ظُلَلٌ ۚ ذَٰلِكَ يُخَوِّفُ اللَّهُ بِهِ عِبَادَهُ ۚ يَا عِبَادِ فَاتَّقُونِ ١٦
📖 ಅನುವಾದ
ಆಯತ್ 16
ಅವರಿಗೆ ಅವರ ಮೇಲ್ಭಾಗದಿಂದಲೂ, ಅವರ ಕೆಳಭಾಗದಿಂದಲೂ ಅಗ್ನಿಯ ಆಚ್ಛಾದನೆಯಿರುವುದು. ಅಲ್ಲಾಹನು ತನ್ನ ದಾಸರನ್ನು ಭಯಪಡಿಸುತ್ತಿರುವುದು (ಶಿಕ್ಷೆಯು) ಇದೇ ಆಗಿದೆ. ಆದುದರಿಂದ ಓ ನನ್ನ ದಾಸರೇ, ನನ್ನನ್ನೇ ಭಯಪಡುತ್ತಿರಿ.
وَالَّذِينَ اجْتَنَبُوا الطَّاغُوتَ أَن يَعْبُدُوهَا وَأَنَابُوا إِلَى اللَّهِ لَهُمُ الْبُشْرَىٰ ۚ فَبَشِّرْ عِبَادِ ١٧
📖 ಅನುವಾದ
ಆಯತ್ 17
ಮತ್ತು ಮಿಥ್ಯಾರಾಧ್ಯರನ್ನು ತೊರೆದು ಅಲ್ಲಾಹನೆಡೆಗೆ ಮರಳುವವರಿಗೆ ಸುವಾರ್ತೆ ಇದೆ. ಆದುದರಿಂದ ನನ್ನ ದಾಸರಿಗೆ ಸುವಾರ್ತೆಯನ್ನು ನೀಡಿರಿ.
الَّذِينَ يَسْتَمِعُونَ الْقَوْلَ فَيَتَّبِعُونَ أَحْسَنَهُ ۚ أُولَٰئِكَ الَّذِينَ هَدَاهُمُ اللَّهُ ۖ وَأُولَٰئِكَ هُمْ أُولُو الْأَلْبَابِ ١٨
📖 ಅನುವಾದ
ಆಯತ್ 18
ಇವರು ಕುರ್‌ಆನನ್ನು ಗಮನವಿಟ್ಟು ಆಲಿಸುತ್ತಾರೆ. ತರುವಾಯ ಅದರಿಂದ ಅತ್ಯುತ್ತಮವಾಗಿರುವುದನ್ನು ಅನುಸರಿಸುತ್ತಾರೆ. ಇವರೇ ಅಲ್ಲಾಹನಕಡೆಯಿಂದ ಸನ್ಮಾರ್ಗ ಪಡೆದವರಾಗಿರುತ್ತಾರೆ ಮತ್ತು ಇವರೇ ಬುದ್ಧಿವಂತರಾಗಿದ್ದಾರೆ.
أَفَمَنْ حَقَّ عَلَيْهِ كَلِمَةُ الْعَذَابِ أَفَأَنتَ تُنقِذُ مَن فِي النَّارِ ١٩
📖 ಅನುವಾದ
ಆಯತ್ 19
ಇನ್ನು ಯಾರ ಮೇಲೆ ಯಾತನೆಯ ವಚನವು ಸಾಬೀತಾಗಿದೆಯೋ ಏನು ನರಕಾಗ್ನಿಯಲ್ಲಿರುವವನನ್ನು ನೀವು ವಿಮೋಚಿಸಬಲ್ಲಿರಾ?
لَٰكِنِ الَّذِينَ اتَّقَوْا رَبَّهُمْ لَهُمْ غُرَفٌ مِّن فَوْقِهَا غُرَفٌ مَّبْنِيَّةٌ تَجْرِي مِن تَحْتِهَا الْأَنْهَارُ ۖ وَعْدَ اللَّهِ ۖ لَا يُخْلِفُ اللَّهُ الْمِيعَادَ ٢٠
📖 ಅನುವಾದ
ಆಯತ್ 20
ಆದರೆ ತಮ್ಮ ಪ್ರಭುವನ್ನು ಭಯಪಡುವವರಿಗೆ ಅಂತಸ್ತಿನ ಮೇಲೆ ಅಂತಸ್ತಿನ ಉನ್ನತ ಭವನಗಳಿವೆ. ಅವುಗಳ ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವುವು. ಇದು ಅಲ್ಲಾಹನ ವಾಗ್ದಾನ ಮತ್ತು ಅಲ್ಲಾಹನು ವಾಗ್ದಾನವನ್ನು ಉಲ್ಲಂಘಿಸುವುದಿಲ್ಲ.
أَلَمْ تَرَ أَنَّ اللَّهَ أَنزَلَ مِنَ السَّمَاءِ مَاءً فَسَلَكَهُ يَنَابِيعَ فِي الْأَرْضِ ثُمَّ يُخْرِجُ بِهِ زَرْعًا مُّخْتَلِفًا أَلْوَانُهُ ثُمَّ يَهِيجُ فَتَرَاهُ مُصْفَرًّا ثُمَّ يَجْعَلُهُ حُطَامًا ۚ إِنَّ فِي ذَٰلِكَ لَذِكْرَىٰ لِأُولِي الْأَلْبَابِ ٢١
📖 ಅನುವಾದ
ಆಯತ್ 21
ಅಲ್ಲಾಹನು ಆಕಾಶದಿಂದ ನೀರನ್ನು ಸುರಿಸಿದ್ದನ್ನು ನೀವು ನೋಡುವುದಿಲ್ಲವೇ? ಮತ್ತು ಅದನ್ನು ಭೂಮಿಯ ಚಿಲುಮೆಗಳಿಗೆ ತಲುಪಿಸುತ್ತಾನೆ. ತರುವಾಯ ಅದರ ಮೂಲಕ ವಿಭಿನ್ನ ಬಣ್ಣಗಳ ಕೃಷಿಗಳನ್ನು ಹೊರತರುತ್ತಾನೆ. ಅನಂತರ ಅವು ಒಣಗಿ ಹಳದಿ ಬಣ್ಣಕÉ್ಕತಿರುಗಿರುವುದಾಗಿ ನೀವು ಕಾಣುವಿರಿ. ಆ ಬಳಿಕ ಅವನು ಅವುಗಳನ್ನು ಹೊಟ್ಟಾಗಿ ಮಾಡಿಬಿಡುವನು. ಇದರಲ್ಲಿ ಬುದ್ಧಿವಂತರಿಗೆ ಅನೇಕ ಉದ್ಭೋಧೆಗಳಿವೆ.
أَفَمَن شَرَحَ اللَّهُ صَدْرَهُ لِلْإِسْلَامِ فَهُوَ عَلَىٰ نُورٍ مِّن رَّبِّهِ ۚ فَوَيْلٌ لِّلْقَاسِيَةِ قُلُوبُهُم مِّن ذِكْرِ اللَّهِ ۚ أُولَٰئِكَ فِي ضَلَالٍ مُّبِينٍ ٢٢
📖 ಅನುವಾದ
ಆಯತ್ 22
ಇನ್ನು ಅಲ್ಲಾಹನು ಯಾರ ಹೃದಯವನ್ನು ಇಸ್ಲಾಮಿಗೆಂದು ತೆÉರೆದಿರುವನೋ ಅವನು ತನ್ನ ಪ್ರಭುವಿನ ವತಿಯಿಂದ ಒಂದು ಪ್ರಕಾಶದಲ್ಲಿರುವನು ಮತ್ತÄ ಯಾರ ಹೃದಯಗಳು ಅಲ್ಲಾಹನ ಸ್ಮರಣೆಯಿಂದ ಕಠಿಣವಾಗಿವೆಯೋ ಅಂತಹವರಿಗೆ ವಿನಾಶವಿದೆ. ಇವರೇ ಸುಸ್ಪಷ್ಟ ಮಾರ್ಗ ಭ್ರಷ್ಟತೆಯಲ್ಲಿದ್ದಾರೆ.
اللَّهُ نَزَّلَ أَحْسَنَ الْحَدِيثِ كِتَابًا مُّتَشَابِهًا مَّثَانِيَ تَقْشَعِرُّ مِنْهُ جُلُودُ الَّذِينَ يَخْشَوْنَ رَبَّهُمْ ثُمَّ تَلِينُ جُلُودُهُمْ وَقُلُوبُهُمْ إِلَىٰ ذِكْرِ اللَّهِ ۚ ذَٰلِكَ هُدَى اللَّهِ يَهْدِي بِهِ مَن يَشَاءُ ۚ وَمَن يُضْلِلِ اللَّهُ فَمَا لَهُ مِنْ هَادٍ ٢٣
📖 ಅನುವಾದ
ಆಯತ್ 23
ಅಲ್ಲಾಹನು ಅತ್ಯುತ್ತಮ ವಚನವನ್ನು ಅವತೀರ್ಣಗೊಳಿಸಿದ್ದಾನೆ. ಅದು ಪರಸ್ಪರ ಸಾದೃಶ್ಯವಿರುವಂತಹ ಮತ್ತು ಪುನರಾವರ್ತಿಸಿ ಓದಲಾಗುವಂತಹ ಗ್ರಂಥವಾಗಿದೆ. ಅದರಿಂದಾಗಿ ತಮ್ಮ ಪ್ರಭುವನ್ನು ಭಯಪಟ್ಟುಕೊಳ್ಳುವವರ ರೋಮಗಳು ಸಟೆದು ನಿಲ್ಲುವುವು. ಕೊನೆಗೆ ಅವರ ಚರ್ಮಗಳು ಹಾಗೂ ಹೃದಯಗಳು ಅಲ್ಲಾಹನ ಸ್ಮರಣೆಯೆಡೆಗೆ ಮೃದುವಾಗಿ ಬಿಡುವುವು. ಇದು ಅಲ್ಲಾಹನ ಸನ್ಮಾರ್ಗವಾಗಿದೆ. ಅದರ ಮೂಲಕ ಅವನು ತಾನಿಚ್ಛಿಸಿದವರನ್ನು ಸನ್ಮಾರ್ಗದಲ್ಲಿ ಮುನ್ನಡೆಸುತ್ತಾನೆ ಮತ್ತು ಅಲ್ಲಾಹನು ಮಾರ್ಗಭ್ರಷ್ಟಗೊಳಿಸಿದವನಿಗೆ ಮಾರ್ಗದರ್ಶಕನಾರೂ ಇರಲಾರನು.
أَفَمَن يَتَّقِي بِوَجْهِهِ سُوءَ الْعَذَابِ يَوْمَ الْقِيَامَةِ ۚ وَقِيلَ لِلظَّالِمِينَ ذُوقُوا مَا كُنتُمْ تَكْسِبُونَ ٢٤
📖 ಅನುವಾದ
ಆಯತ್ 24
ಪುನರುತ್ಧಾನದ ದಿನ ತನ್ನ ಮುಖವನ್ನು ನಿಕೃಷ್ಟ ಯಾತನೆಗೆ ಒಡ್ಡುವವನು (ಸ್ವರ್ಗವಾಸಿಗಳಿಗೆ ಸಮವಾಗುವನೇ) ನೀವು ನಿಮ್ಮ ಸಂಪಾದನೆಯ (ವಿಪತ್ತ)ನ್ನು ಸವಿಯಿರಿ ಎಂದು ಅಕ್ರಮಿಗಳೊಡನೆ ಹೇಳಲಾಗುವುದು.
كَذَّبَ الَّذِينَ مِن قَبْلِهِمْ فَأَتَاهُمُ الْعَذَابُ مِنْ حَيْثُ لَا يَشْعُرُونَ ٢٥
📖 ಅನುವಾದ
ಆಯತ್ 25
ಇವರಿಗಿಂತ ಮುಂಚಿನವರು ಸಹ ಸುಳ್ಳಾಗಿಸಿದ್ದಾರೆ. ಅನಂತರ ಅವರು ಊಹಿಸದಿರದಂತಹ ಕಡೆಯಿಂದ ಅವರ ಮೇಲೆ ಯಾತನೆಯು ಬಂದೆರಗಿತು.
فَأَذَاقَهُمُ اللَّهُ الْخِزْيَ فِي الْحَيَاةِ الدُّنْيَا ۖ وَلَعَذَابُ الْآخِرَةِ أَكْبَرُ ۚ لَوْ كَانُوا يَعْلَمُونَ ٢٦
📖 ಅನುವಾದ
ಆಯತ್ 26
ತರುವಾಯ ಅಲ್ಲಾಹನು ಅವರಿಗೆ ಇಹಲೋಕದಲ್ಲೇ ಅಪಮಾನದ ರುಚಿಯನ್ನು ಸವಿಸಿದನು ಮತ್ತು ಪರಲೋಕದ ಯಾತನೆಯು ಇದಕ್ಕಿಂತಲೂ ಹೆಚ್ಚು ಘೋರವಾದುದಾಗಿದೆ ಅವರು ಅರಿತುಕೊಳ್ಳುತ್ತಿದ್ದರೆ!
وَلَقَدْ ضَرَبْنَا لِلنَّاسِ فِي هَٰذَا الْقُرْآنِ مِن كُلِّ مَثَلٍ لَّعَلَّهُمْ يَتَذَكَّرُونَ ٢٧
📖 ಅನುವಾದ
ಆಯತ್ 27
ಖಂಡಿತವಾಗಿಯು ಜನರಿಗೆ ಮನದಟ್ಟಾಗಲೆಂದು ನಾವು ಈ ಖುರ್‌ಆನಿನಲ್ಲಿ ಸರ್ವ ವಿಧದ ಉಪಮೆಗಳನ್ನು ವಿವರಿಸಿರುತ್ತೇವೆ.
قُرْآنًا عَرَبِيًّا غَيْرَ ذِي عِوَجٍ لَّعَلَّهُمْ يَتَّقُونَ ٢٨
📖 ಅನುವಾದ
ಆಯತ್ 28
ಕುರ್‌ಆನ್ ಇರುವುದು ಅರಬೀ ಭಾಷೆಯಲ್ಲಿ: ಅದರಲ್ಲಿ ಯಾವುದೇ ವಕ್ರತೆಯಿಲ್ಲ. ಬಹುಶಃ ಅವರು ಭಯಭಕ್ತಿ ಹೊಂದ ಬಹುದು.
ضَرَبَ اللَّهُ مَثَلًا رَّجُلًا فِيهِ شُرَكَاءُ مُتَشَاكِسُونَ وَرَجُلًا سَلَمًا لِّرَجُلٍ هَلْ يَسْتَوِيَانِ مَثَلًا ۚ الْحَمْدُ لِلَّهِ ۚ بَلْ أَكْثَرُهُمْ لَا يَعْلَمُونَ ٢٩
📖 ಅನುವಾದ
ಆಯತ್ 29
ಅಲ್ಲಾಹನು ಒಂದು ಉಪಮೆಯನ್ನು ನೀಡುತ್ತಾನೆ. ಒಬ್ಬವ್ಯಕ್ತಿ : ಪರಸ್ಪರ ಕಚ್ಚಾಡುವ ಅನೇಕ ಪಾಲುದಾರರ ಗುಲಾಮನಾಗಿದ್ದಾನೆ. ಮತ್ತೊಬ್ಬ ವ್ಯಕ್ತಿಯು ಕೇವಲ ಒಬ್ಬ ವ್ಯಕ್ತಿಯ ಗುಲಾಮನಾಗಿದ್ದಾನೆ. ಇಬರಿಬ್ಬರ ಸ್ಥಿತಿ ಸಮಾನವಾಗಿದೆಯೇ ? ಸರ್ವಸ್ತುತಿಗಳು ಅಲ್ಲಾಹನಿಗೇ ಮೀಸಲು. ವಾಸ್ತವದಲ್ಲಿ ಅವರಲ್ಲಿನ ಹೆಚ್ಚಿನವರು ಅರಿಯುವುದಿಲ್ಲ.
إِنَّكَ مَيِّتٌ وَإِنَّهُم مَّيِّتُونَ ٣٠
📖 ಅನುವಾದ
ಆಯತ್ 30
ಖಂಡಿತವಾಗಿಯೂ ನಿಮಗೂ ಮರಣ ಬರಲಿದೆ. ನಿಶ್ಚಯವಾಗಿಯು ಅವರಿಗೂ ಮರಣ ಬರಲಿದೆ.
ثُمَّ إِنَّكُمْ يَوْمَ الْقِيَامَةِ عِندَ رَبِّكُمْ تَخْتَصِمُونَ ٣١
📖 ಅನುವಾದ
ಆಯತ್ 31
ತರುವಾಯ ಪುನರುತ್ಥಾನದ ದಿನದಂದು ನೀವು ನಿಮ್ಮ ಪ್ರಭುವಿನ ಬಳಿ ತರ್ಕ ಮಾಡಲಿರುವಿರಿ.
۞ فَمَنْ أَظْلَمُ مِمَّن كَذَبَ عَلَى اللَّهِ وَكَذَّبَ بِالصِّدْقِ إِذْ جَاءَهُ ۚ أَلَيْسَ فِي جَهَنَّمَ مَثْوًى لِّلْكَافِرِينَ ٣٢
📖 ಅನುವಾದ
ಆಯತ್ 32
ಅಲ್ಲಾಹನ ಮೇಲೆ ಸುಳ್ಳಾರೋಪ ಮಾಡುವ ಮತ್ತು ತನ್ನ ಬಳಿ ಸತ್ಯವು ಬಂದಾಗ ಅದನ್ನು ಸುಳ್ಳಾಗಿಸಿದವನಿಗಿಂತ ದೊಡ್ಡ ಅಕ್ರಮಿಯು ಇನ್ನಾರಿದ್ದಾನೆ ? ಇಂತಹ ಸತ್ಯನಿಷೇಧಿಗಳ ನೆಲೆ ನರಕದಲ್ಲೇ ಅಲ್ಲವೇ?
وَالَّذِي جَاءَ بِالصِّدْقِ وَصَدَّقَ بِهِ ۙ أُولَٰئِكَ هُمُ الْمُتَّقُونَ ٣٣
📖 ಅನುವಾದ
ಆಯತ್ 33
ಮತ್ತು ಪ್ರವಾದಿಯು ಸತ್ಯವನ್ನು ತಂದಿದ್ದು ಯಾರು ಅದನ್ನು ಸತ್ಯವೆಂದು ಒಪ್ಪಿಕೊಂಡರೋ ಅಂತಹವರೇ ಭಯಭಕ್ತಿಯುಳ್ಳವರು.
لَهُم مَّا يَشَاءُونَ عِندَ رَبِّهِمْ ۚ ذَٰلِكَ جَزَاءُ الْمُحْسِنِينَ ٣٤
📖 ಅನುವಾದ
ಆಯತ್ 34
ಅವರಿಗೆ ತಮ್ಮ ಪ್ರಭುವಿನ ಬಳಿ ಅವರು ಬಯಸಿದ್ದೆಲ್ಲವೂ ಇರುವುದು. ಇದುವೇ ಸಜ್ಜನರ ಪ್ರತಿಫಲವಾಗಿದೆ.
لِيُكَفِّرَ اللَّهُ عَنْهُمْ أَسْوَأَ الَّذِي عَمِلُوا وَيَجْزِيَهُمْ أَجْرَهُم بِأَحْسَنِ الَّذِي كَانُوا يَعْمَلُونَ ٣٥
📖 ಅನುವಾದ
ಆಯತ್ 35
ಇದೇಕೆಂದರೆ ಅವರು ಮಾಡಿದ ಕೆಡುಕುಗಳನ್ನು ಅಲ್ಲಾಹನು ಅವರಿಂದ ಅಳಿಸಲೆಂದೂ, ಮತ್ತು ಅವರು ಮಾಡಿರುವಂತಹ ಅತ್ಯುತ್ತಮ ಕರ್ಮಗಳಿಗೆ ಪ್ರತಿಫಲ ನೀಡಲೆಂದು ಆಗಿರುತ್ತದೆ.
أَلَيْسَ اللَّهُ بِكَافٍ عَبْدَهُ ۖ وَيُخَوِّفُونَكَ بِالَّذِينَ مِن دُونِهِ ۚ وَمَن يُضْلِلِ اللَّهُ فَمَا لَهُ مِنْ هَادٍ ٣٦
📖 ಅನುವಾದ
ಆಯತ್ 36
ಅಲ್ಲಾಹನು ತನ್ನ ದಾಸರಿಗೆ (ಮುಹಮ್ಮದ್) ಸಾಕಾಗಲಾರನೇ ಮತ್ತು ಇವರು (ಬಹುದೇವರಾಧಕರು) ಅಲ್ಲಾಹನ ಹೊರತು ಇತರ ಮಿಥ್ಯಾ ಆರಾಧ್ಯಾರಿಂದ ನಿಮ್ಮನ್ನು ಹೆದರಿಸುತ್ತಾರೆ ಮತ್ತು ಅಲ್ಲಾಹನು ದಾರಿತಪ್ಪಿಸಿದವನಿಗೆ ಯಾರು ಮಾರ್ಗದರ್ಶಕ ಇರಲಾರನು.
وَمَن يَهْدِ اللَّهُ فَمَا لَهُ مِن مُّضِلٍّ ۗ أَلَيْسَ اللَّهُ بِعَزِيزٍ ذِي انتِقَامٍ ٣٧
📖 ಅನುವಾದ
ಆಯತ್ 37
ಮತ್ತು ಅಲ್ಲಾಹನು ಸನ್ಮಾರ್ಗದಲ್ಲಿ ಮುನ್ನಡೆಸುವವನಿಗೆ ದಾರಿತಪ್ಪಿಸುವವನಾರೂ ಇರಲಾರನು. ಅಲ್ಲಾಹನು ಪ್ರಚಂಡನೂ ಪ್ರತಿಕಾರತೀರಿಸುವವನಲ್ಲವೇ?
وَلَئِن سَأَلْتَهُم مَّنْ خَلَقَ السَّمَاوَاتِ وَالْأَرْضَ لَيَقُولُنَّ اللَّهُ ۚ قُلْ أَفَرَأَيْتُم مَّا تَدْعُونَ مِن دُونِ اللَّهِ إِنْ أَرَادَنِيَ اللَّهُ بِضُرٍّ هَلْ هُنَّ كَاشِفَاتُ ضُرِّهِ أَوْ أَرَادَنِي بِرَحْمَةٍ هَلْ هُنَّ مُمْسِكَاتُ رَحْمَتِهِ ۚ قُلْ حَسْبِيَ اللَّهُ ۖ عَلَيْهِ يَتَوَكَّلُ الْمُتَوَكِّلُونَ ٣٨
📖 ಅನುವಾದ
ಆಯತ್ 38
ಆಕಾಶಗಳನ್ನು, ಭೂಮಿಯನ್ನು ಸೃಷ್ಟಿಸಿರುವವನಾರೆಂದು ನೀವು ಅವರೊಂದಿಗೆ ಕೇಳಿದರೆ ಖಂಡಿತವಾಗಿಯು ಅವರು ಅಲ್ಲಾಹನೆಂದು ಉತ್ತರಿಸುವರು. ಅವರೊಂದಿಗೆ ಕೇಳಿರಿ: ಅಲ್ಲಾಹನೇನಾದರೂ ನನಗೆ ಹಾನಿಯುನ್ನುಂಟು ಮಾಡಲು ಇಚ್ಚಿಸಿದರೆ ಅಲ್ಲಾಹನ ಹೊರತು ನೀವು ಕರೆದು ಬೇಡುತ್ತಿರುವವರು ಅವನ ಹಾನಿಯಿಂದ ತಡೆಯಬಲ್ಲರೇ? ಅಥವಾ ಅಲ್ಲಾಹನು ನನ್ನ ಮೇಲೆ ಕರುಣೆ ತೋರಲು ಬಯಸಿದರೆ ಇವರು ಅವನ ಕರುಣೆಯನ್ನು ತಡೆಯಬಲ್ಲರೇ ಹೇಳಿರಿ: ನನಗೆ ಅಲ್ಲಾಹನೇ ಸಾಕು. ಭರವಸೆ ಇಡುವವರು ಅವನ ಮೇಲೆ ಭರವಸೆಯನ್ನಿಡಲಿ.
قُلْ يَا قَوْمِ اعْمَلُوا عَلَىٰ مَكَانَتِكُمْ إِنِّي عَامِلٌ ۖ فَسَوْفَ تَعْلَمُونَ ٣٩
📖 ಅನುವಾದ
ಆಯತ್ 39
ಹೇಳಿರಿ: ಓ ನನ್ನ ಜನಾಂಗದವರೇ, ನೀವು ನಿಮ್ಮ ನಿಲುವಿನ ಪ್ರಕಾರ ಕಾರ್ಯವೆಸಗಿರಿ. ನಾನೂ ಸಹ ಕಾರ್ಯವೆಸಗುತ್ತಿದ್ದೇನೆ. ಸದ್ಯದಲ್ಲೇ ನೀವು ಅರಿತುಕೊಳ್ಳುವಿರಿ.
مَن يَأْتِيهِ عَذَابٌ يُخْزِيهِ وَيَحِلُّ عَلَيْهِ عَذَابٌ مُّقِيمٌ ٤٠
📖 ಅನುವಾದ
ಆಯತ್ 40
ಯಾರ ಮೇಲೆ ಅಪಮಾನಕರ ಯಾತನೆಯು ಬರಲಿದೆಯೆಂದು ಮತ್ತು ಯಾರ ಮೇಲೆ ಶಾಶ್ವತ ಯಾತನೆಯು ಎರಗಲಿದೆಯೆಂದು. (ನೀವು ಅರಿತುಕೊಳ್ಳುವಿರಿ)
إِنَّا أَنزَلْنَا عَلَيْكَ الْكِتَابَ لِلنَّاسِ بِالْحَقِّ ۖ فَمَنِ اهْتَدَىٰ فَلِنَفْسِهِ ۖ وَمَن ضَلَّ فَإِنَّمَا يَضِلُّ عَلَيْهَا ۖ وَمَا أَنتَ عَلَيْهِم بِوَكِيلٍ ٤١
📖 ಅನುವಾದ
ಆಯತ್ 41
ಸಂದೇಶವಾಹಕರೇ, ಖಂಡಿತವಾಗಿಯೂ ನಾವು ಸಕಲ ಮಾನವರಿಗಾಗಿ ಸತ್ಯಪೂರ್ಣಗ್ರಂಥವನ್ನು ನಿಮ್ಮೆಡೆಗೆ ಅವತೀರ್ಣಗೊಳಿಸಿದ್ದೇವೆ. ಯಾರು ಸನ್ಮಾರ್ಗ ಪಡೆಯುತ್ತಾನೋ ಅದು ಅವನ ಹಿತಕ್ಕಾಗಿಯೇ ಆಗಿದೆ. ಮತ್ತು ಯಾರು ಮಾರ್ಗಭ್ರಷ್ಟನಾಗುತ್ತಾನೋ ಅವನ ಮಾರ್ಗಭ್ರಷ್ಟತೆಯ ದೋಷವು ಅವನ ಮೇಲೆಯೇ ಇರುವುದು. ನೀವು ಅವರ ಮೇಲ್ವಿಚಾರಕರೇನು ಅಲ್ಲ.
اللَّهُ يَتَوَفَّى الْأَنفُسَ حِينَ مَوْتِهَا وَالَّتِي لَمْ تَمُتْ فِي مَنَامِهَا ۖ فَيُمْسِكُ الَّتِي قَضَىٰ عَلَيْهَا الْمَوْتَ وَيُرْسِلُ الْأُخْرَىٰ إِلَىٰ أَجَلٍ مُّسَمًّى ۚ إِنَّ فِي ذَٰلِكَ لَآيَاتٍ لِّقَوْمٍ يَتَفَكَّرُونَ ٤٢
📖 ಅನುವಾದ
ಆಯತ್ 42
ಅಲ್ಲಾಹನು ಆತ್ಮಗಳನ್ನು ಅವುಗಳ ಮರಣದ ವೇಳೆಯಲ್ಲಿ ವಶಪಡಿಸಿಕೊಳ್ಳುತ್ತಾನೆ. ಮತ್ತು ಮರಣ ಹೊಂದದ ಆತ್ಮವನ್ನು ಅದರ ನಿದ್ರೆಯ ವೇಳೆಯಲ್ಲಿ ವಶಪಡಿಸಿಕೊಳ್ಳುತ್ತಾನೆ. ಅನಂತರ ಯಾವುದರ ಮೇಲೆ ಮರಣದ ಆದೇಶವು ನಿಶ್ಚಿತವಾಗಿದೆಯೋ ಅವುಗಳನ್ನು ತಡೆದಿರಿಸಿಕೊಳ್ಳುತ್ತಾನೆ ಹಾಗೂ ಉಳಿದವುಗಳನ್ನು ಒಂದು ನಿರ್ಧಿಷ್ಟಾವಧಿಯವರೆಗೆ ಬಿಟ್ಟು ಬಿಡುತ್ತಾನೆ. ನಿಸ್ಸಂದೇಹವಾಗಿಯು ಇದರಲ್ಲಿ ಚಿಂತಿಸುವ ಜನರಿಗೆ ಹಲವಾರು ದೃಷ್ಠಾಂತಗಳಿವೆ.
أَمِ اتَّخَذُوا مِن دُونِ اللَّهِ شُفَعَاءَ ۚ قُلْ أَوَلَوْ كَانُوا لَا يَمْلِكُونَ شَيْئًا وَلَا يَعْقِلُونَ ٤٣
📖 ಅನುವಾದ
ಆಯತ್ 43
ಅವರು ಅಲ್ಲಾಹನ ಹೊರತು ಇತರರನ್ನು ತಮ್ಮ ಶಿಫಾರಸ್ಸುದಾರರನ್ನಾಗಿ ಮಾಡಿಕೊಂಡಿದ್ದಾರೆಯೇ? ಹೇಳಿರಿ: ಅವರು ಯಾವ ಅಧಿಕಾರವನ್ನು ಹೊಂದಿಲ್ಲದಿದÀ್ದರೂ ಮತ್ತು ಅವಿವೇಕಿಗಳಾಗಿದ್ದರೂ ಸರಿಯೇ?
قُل لِّلَّهِ الشَّفَاعَةُ جَمِيعًا ۖ لَّهُ مُلْكُ السَّمَاوَاتِ وَالْأَرْضِ ۖ ثُمَّ إِلَيْهِ تُرْجَعُونَ ٤٤
📖 ಅನುವಾದ
ಆಯತ್ 44
ಹೇಳಿರಿ: ಶಿಫಾರಸ್ಸು ಸಂಪೂರ್ಣವಾಗಿ ಅಲ್ಲಾಹನ ಅಧಿಕಾರದಲ್ಲಿದೆ. ಆಕಾಶಗಳ ಹಾಗೂ ಭೂಮಿಯ ಅಧಿಪತ್ಯವು ಅವನದ್ದಾಗಿರುವುದು. ನಂತರ ನೀವು ಅವನೆಡೆಗೆ ಮರಳಿಸಲಾಗುವಿರಿ.
وَإِذَا ذُكِرَ اللَّهُ وَحْدَهُ اشْمَأَزَّتْ قُلُوبُ الَّذِينَ لَا يُؤْمِنُونَ بِالْآخِرَةِ ۖ وَإِذَا ذُكِرَ الَّذِينَ مِن دُونِهِ إِذَا هُمْ يَسْتَبْشِرُونَ ٤٥
📖 ಅನುವಾದ
ಆಯತ್ 45
ಏಕÉÊಕ ಅಲ್ಲಾಹನ ಪ್ರಸ್ತಾಪನೆ ಮಾಡಲಾದಾಗ ಪರಲೋಕದಲ್ಲಿ ನಂಬಿಕೆಯಿಡದವರ ಹೃದಯಗಳು ಅಸಹ್ಯಪಡತೊಡಗುತ್ತವೆ. ಮತ್ತು ಅವನ ಹೊರತು ಇತರರನ್ನು ಪ್ರಸ್ತಾಪಿಸಲಾದರೆ ಅವರ ಹೃದಯಗಳು ಅರಳಿ ಹರುಷಭರಿತವಾಗುತ್ತವೆ.
قُلِ اللَّهُمَّ فَاطِرَ السَّمَاوَاتِ وَالْأَرْضِ عَالِمَ الْغَيْبِ وَالشَّهَادَةِ أَنتَ تَحْكُمُ بَيْنَ عِبَادِكَ فِي مَا كَانُوا فِيهِ يَخْتَلِفُونَ ٤٦
📖 ಅನುವಾದ
ಆಯತ್ 46
ಹೇಳಿರಿ: ಓ ಅಲ್ಲಾಹ್, ಆಕಾಶಗಳ ಮತ್ತು ಭೂಮಿಯ ಸೃಷ್ಠಿಕರ್ತನೇ, ರಹಸ್ಯ-ಬಹಿರಂಗಗಳ ಜ್ಞಾನಿಯೇ, ನೀನೇ ನಿನ್ನದಾಸರ ನಡುವೆ ಅವರು ಭಿನ್ನತೆ ತೋರುತ್ತಿದ್ದಂತಹ ವಿಷಯಗಳ ತೀರ್ಮಾನ ಮಾಡಲಿರುವೆ.
وَلَوْ أَنَّ لِلَّذِينَ ظَلَمُوا مَا فِي الْأَرْضِ جَمِيعًا وَمِثْلَهُ مَعَهُ لَافْتَدَوْا بِهِ مِن سُوءِ الْعَذَابِ يَوْمَ الْقِيَامَةِ ۚ وَبَدَا لَهُم مِّنَ اللَّهِ مَا لَمْ يَكُونُوا يَحْتَسِبُونَ ٤٧
📖 ಅನುವಾದ
ಆಯತ್ 47
ಅಕ್ರಮಿಗಳ ಬಳಿ ಭೂಮಿಯ ಸಕಲ ಸಂಪತ್ತೂ ಮಾತ್ರವಲ್ಲ ಅಷ್ಟೇ ಬೇರೆ ಇರುತ್ತಿದ್ದರೂ ಪುನರುತ್ಥಾನ ದಿನದ ಉಗ್ರಯಾತನೆಯಿಂದ ಪಾರಾಗಲಿಕ್ಕೆ ಪರಿಹಾರವಾಗಿ ಅವೆಲ್ಲವನ್ನೂ ನೀಡುತ್ತಿದ್ದರು ಮತ್ತು ಅಲ್ಲಾಹನ ಕಡೆಯಿಂದ ಅವರು ಊಹಿಸಿಯೂ ಇಲ್ಲದಿರುವಂತಹದ್ದು ಅವರ ಮುಂದೆ ಪ್ರಕಟವಾಗುವುದು.
وَبَدَا لَهُمْ سَيِّئَاتُ مَا كَسَبُوا وَحَاقَ بِهِم مَّا كَانُوا بِهِ يَسْتَهْزِئُونَ ٤٨
📖 ಅನುವಾದ
ಆಯತ್ 48
ಅವರ ಕೃತ್ಯಗಳ ದುಷ್ಟರಿಣಾಮಗಳು ಅವರಿಗೆ ಪ್ರಕಟವಾಗಲಿದೆ ಮತ್ತು ಅವರು ಪರಿಹಾಸ್ಯ ಮಾಡುತ್ತಿದ್ದುದೇ ಅವರನ್ನು ಸುತ್ತುವರಿದು ಬಿಡುವುದು.
فَإِذَا مَسَّ الْإِنسَانَ ضُرٌّ دَعَانَا ثُمَّ إِذَا خَوَّلْنَاهُ نِعْمَةً مِّنَّا قَالَ إِنَّمَا أُوتِيتُهُ عَلَىٰ عِلْمٍ ۚ بَلْ هِيَ فِتْنَةٌ وَلَٰكِنَّ أَكْثَرَهُمْ لَا يَعْلَمُونَ ٤٩
📖 ಅನುವಾದ
ಆಯತ್ 49
ಮನುಷ್ಯನಿಗೆ ಯಾವುದಾದರೂ ಸಂಕಷ್ಟ ಬಾಧಿಸಿದರೆ ಅವನು ನಮ್ಮನ್ನು ಪ್ರಾರ್ಥಿಸುತ್ತಾನೆ. ತರುವಾಯ ನಾವು ಅವನಿಗೆ ನಮ್ಮ ಕಡೆಯಿಂದ ಯಾವುದಾದರೂ ಅನುಗ್ರಹವನ್ನು ದಯಪಾಲಿಸಿದರೆ ಅವನು ಇದನ್ನು ನನಗೆ ನನ್ನಜ್ಞಾನದ ಆಧಾರದಲ್ಲಿ ಕೊಡಲಾಗಿದೆ ಎನ್ನುತ್ತಾನೆ ಅಲ್ಲ !ಇದು ಒಂದು ಪರೀಕ್ಷೆಯಾಗಿದೆ. ಆದರೆ ಅವರಲ್ಲಿ ಹೆಚ್ಚಿನವರು ಅರಿಯುವುದಿಲ್ಲ.
قَدْ قَالَهَا الَّذِينَ مِن قَبْلِهِمْ فَمَا أَغْنَىٰ عَنْهُم مَّا كَانُوا يَكْسِبُونَ ٥٠
📖 ಅನುವಾದ
ಆಯತ್ 50
ಇವರಿಗಿಂತ ಮುಂಚಿನವರೂ ಹೀಗೆ ಹೇಳಿದ್ದರು. ಆದರೆ ಅವರು ಗಳಿಸಿದ್ದು ಅವರ ಯಾವ ಪ್ರಯೋಜನಕ್ಕೂ ಬರಲಿಲ್ಲ.
فَأَصَابَهُمْ سَيِّئَاتُ مَا كَسَبُوا ۚ وَالَّذِينَ ظَلَمُوا مِنْ هَٰؤُلَاءِ سَيُصِيبُهُمْ سَيِّئَاتُ مَا كَسَبُوا وَمَا هُم بِمُعْجِزِينَ ٥١
📖 ಅನುವಾದ
ಆಯತ್ 51
ಆದುದರಿಂದ ಅವರ ಕೃತ್ಯಗಳ ದುಷ್ಟರಿಣಾಮಗಳು ಅವರ ಮೇಲೆ ಎರಗಿದವು ಮತ್ತು ಅವರ ಪÉÊಕಿ ಅಪರಾಧಿಗಳಾಗಿರುವವರು ಶೀಘ್ರವೇ ಅವರ ಗಳಿಕೆಯ ದುಷ್ಪಲಕ್ಕೆ ಗುರಿಯಾಗಲಿರುವರು. ಮತ್ತು ಅವರು ನಮ್ಮನ್ನು (ಅಲ್ಲಾಹನನ್ನು) ಸೋಲಿಸುವವರಲ್ಲ.
أَوَلَمْ يَعْلَمُوا أَنَّ اللَّهَ يَبْسُطُ الرِّزْقَ لِمَن يَشَاءُ وَيَقْدِرُ ۚ إِنَّ فِي ذَٰلِكَ لَآيَاتٍ لِّقَوْمٍ يُؤْمِنُونَ ٥٢
📖 ಅನುವಾದ
ಆಯತ್ 52
ಅಲ್ಲಾಹನು ತಾನಿಚ್ಛಿಸಿದವರಿಗೆ ಜೀವನಾಧಾರವನ್ನು ವಿಶಾಲಗೊಳಿಸುತ್ತಾನೆ ಮತ್ತು ಪರಿಮಿತಗೊಳಿಸುತ್ತಾನೆ ಎಂಬುದು ಇವರಿಗೆ ಗೊತ್ತಿಲ್ಲವೇ? ಖಂಡಿತವಾಗಿಯು ಇದರಲ್ಲಿ ವಿಶ್ವಾಸಿ ಜನರಿಗೆ ನಿದರ್ಶನಗಳಿವೆ.
۞ قُلْ يَا عِبَادِيَ الَّذِينَ أَسْرَفُوا عَلَىٰ أَنفُسِهِمْ لَا تَقْنَطُوا مِن رَّحْمَةِ اللَّهِ ۚ إِنَّ اللَّهَ يَغْفِرُ الذُّنُوبَ جَمِيعًا ۚ إِنَّهُ هُوَ الْغَفُورُ الرَّحِيمُ ٥٣
📖 ಅನುವಾದ
ಆಯತ್ 53
ಹೇಳಿರಿ: ಸ್ವತಃ ತಮ್ಮ ಮೇಲೆಯೇ ಅನ್ಯಾಯ ಮಾಡಿದಂತ ಓ ನನ್ನದಾಸರೇ, ನೀವು ಅಲ್ಲಾಹನ ಕರುಣೆಯಿಂದ ನಿರಾಶರಾಗಬೇಡಿರಿ. ನಿಶ್ಚಯವಾಗಿಯು ಅಲ್ಲಾಹನು ಸಕಲ ಪಾಪಗಳನ್ನು ಕ್ಷಮಿಸುತ್ತಾನೆ. ಖಂಡಿತವಾಗಿಯು ಅವನು ಕ್ಷಮಾಶೀಲನೂ, ಕರುಣಾನಿಧಿಯೂ ಆಗಿದ್ದಾನೆ.
وَأَنِيبُوا إِلَىٰ رَبِّكُمْ وَأَسْلِمُوا لَهُ مِن قَبْلِ أَن يَأْتِيَكُمُ الْعَذَابُ ثُمَّ لَا تُنصَرُونَ ٥٤
📖 ಅನುವಾದ
ಆಯತ್ 54
ನಿಮ್ಮ ಮೇಲೆ ಯಾತನೆಯು ಬಂದೆರಗಿದ ಬಳಿಕ ನಿಮಗೆ ಸಹಾಯ ನೀಡಲಾಗದ ಸ್ಥಿತಿ ಬರುವುದಕ್ಕೂ ಮುನ್ನ ನೀವು ನಿಮ್ಮ ಪ್ರಭುವಿನೆಡೆಗೆ ಮರಳಿರಿ ಹಾಗೂ ಅವನ ಆಜ್ಞಾನುಸರಣೆ ಮಾಡಿರಿ.
وَاتَّبِعُوا أَحْسَنَ مَا أُنزِلَ إِلَيْكُم مِّن رَّبِّكُم مِّن قَبْلِ أَن يَأْتِيَكُمُ الْعَذَابُ بَغْتَةً وَأَنتُمْ لَا تَشْعُرُونَ ٥٥
📖 ಅನುವಾದ
ಆಯತ್ 55
ಮತ್ತÄ ನೀವು ಊಹಿಸಿರದಂತಹ ಸ್ಥಿತಿಯಲ್ಲಿ ಹಠಾತ್ತಾನೆ ಯಾತನೆಯು ಬಂದೆರಗುವ ಮುನ್ನ ನೀವು ನಿಮ್ಮ ಪ್ರಭುವಿನ ಕಡೆಯಿಂದ ನಿಮ್ಮಡೆಗೆ ಅವತೀರ್ಣಗೊಂಡ ಗ್ರಂಥದಿAದ ಅತ್ಯುತ್ತಮವಾದುದನ್ನು ಅನುಸರಿಸಿರಿ.
أَن تَقُولَ نَفْسٌ يَا حَسْرَتَا عَلَىٰ مَا فَرَّطتُ فِي جَنبِ اللَّهِ وَإِن كُنتُ لَمِنَ السَّاخِرِينَ ٥٦
📖 ಅನುವಾದ
ಆಯತ್ 56
ಅಯ್ಯೋ! ಅಲ್ಲಾಹನ ಅನುಸರಣೆಯಲ್ಲಿ ಪ್ರಮಾದವೆಸಗಿ ನಾನು ಗೇಲಿ ಮಾಡುವವರ ಸಾಲಿಗೆ ಸೇರಿದ್ದೇನಲ್ಲ ಎಂದು ಯಾವೊಬ್ಬ ವ್ಯಕ್ತಿಗೂ ಹೇಳುವಂತಾಗಬಾರದು.
أَوْ تَقُولَ لَوْ أَنَّ اللَّهَ هَدَانِي لَكُنتُ مِنَ الْمُتَّقِينَ ٥٧
📖 ಅನುವಾದ
ಆಯತ್ 57
ಅಥವಾ ಅಲ್ಲಾಹನೇನಾದರೂ ನನ್ನನ್ನು ಸನ್ಮಾರ್ಗದಲ್ಲಿ ಮುನ್ನಡೆಸಿರುತ್ತಿದ್ದರೆ ನಾನೂ ಸಹ ಭಯಭಕ್ತಿ ಹೊಂದುವವರಲ್ಲಿ ಸೇರಿರುತ್ತಿದ್ದೆ ಎಂದು ಹೇಳುವಂತಾಗ ಬಾರದು.
أَوْ تَقُولَ حِينَ تَرَى الْعَذَابَ لَوْ أَنَّ لِي كَرَّةً فَأَكُونَ مِنَ الْمُحْسِنِينَ ٥٨
📖 ಅನುವಾದ
ಆಯತ್ 58
ಅಥವಾ ಶಿಕ್ಷೆಯನ್ನು ಕಂಡು ನನಗೆ ಮತ್ತೊಮ್ಮೆ ಮರಳಿಸಲಾಗುತ್ತಿದÀ್ದರೆ ನಾನು ಸಹ ಸಜ್ಜನರಲ್ಲಿ ಸೇರಿಬಿಡುತ್ತಿದ್ದೆ ಎಂದು ಹೇಳುವಂತಾಗದಿರಲಿ.
بَلَىٰ قَدْ جَاءَتْكَ آيَاتِي فَكَذَّبْتَ بِهَا وَاسْتَكْبَرْتَ وَكُنتَ مِنَ الْكَافِرِينَ ٥٩
📖 ಅನುವಾದ
ಆಯತ್ 59
ಹೌದು! ನಿಸ್ಸಂಶಯವಾಗಿಯು ನನ್ನ ದೃಷ್ಟಾಂತಗಳು ನಿನ್ನ ಬಳಿಗೆ ಬಂದಿದ್ದವು. ಅವುಗಳನ್ನು ನೀನು ಸುಳ್ಳಾಗಿಸಿಬಿಟ್ಟೆ ಹಾಗೂ ಅಹಂಭಾವತೋರಿದೆ ಮತ್ತು ನೀನು ಸತ್ಯಷೇಧಿಗಳಲ್ಲಿ ಸೇರಿದ್ದೆ.
وَيَوْمَ الْقِيَامَةِ تَرَى الَّذِينَ كَذَبُوا عَلَى اللَّهِ وُجُوهُهُم مُّسْوَدَّةٌ ۚ أَلَيْسَ فِي جَهَنَّمَ مَثْوًى لِّلْمُتَكَبِّرِينَ ٦٠
📖 ಅನುವಾದ
ಆಯತ್ 60
ಅಲ್ಲಾಹನ ಮೇಲೆ ಸುಳ್ಳಾರೋಪ ಹೊರಿಸಿದವರ ಮುಖಗಳು ಪುನರುತ್ಥಾನದ ದಿನ ಕಪ್ಪಾಗಿರುವುದನ್ನು ನೀವು ಕಾಣುವಿರಿ. ಅಹಂಕಾರಿಗಳ ವಾಸಸ್ಥಾನವು ನರಕದಲ್ಲೇ ಅಲ್ಲವೇ?
وَيُنَجِّي اللَّهُ الَّذِينَ اتَّقَوْا بِمَفَازَتِهِمْ لَا يَمَسُّهُمُ السُّوءُ وَلَا هُمْ يَحْزَنُونَ ٦١
📖 ಅನುವಾದ
ಆಯತ್ 61
ಮತ್ತು ಭಯಭಕ್ತಿ ತೋರಿದವರನ್ನು ಅಲ್ಲಾಹನು ಅವರ ಸ್ವರ್ಗದ ಯಶಸ್ಸಿನೊಂದಿಗೆ ನರಕದಿಂದ ಸಂರಕ್ಷಿಸಿಕೊಳ್ಳುವನು. ಅವರಿಗೆ ಯಾವುದೇ ವಿಪತ್ತು ಬಾಧಿಸದು ಮತ್ತು ಅವರು ದುಃಖಿತರಾಗಲಾರರು.
اللَّهُ خَالِقُ كُلِّ شَيْءٍ ۖ وَهُوَ عَلَىٰ كُلِّ شَيْءٍ وَكِيلٌ ٦٢
📖 ಅನುವಾದ
ಆಯತ್ 62
ಅಲ್ಲಾಹನು ಸರ್ವ ವಸ್ತುಗಳ ಸೃಷ್ಟಿಕರ್ತನಾಗಿರುವನು ಮತ್ತು ಅವನು ಸಕಲ ವಸ್ತುಗಳ ಮೇಲ್ವಿಚಾರಕನಾಗಿದ್ದಾನೆ.
لَّهُ مَقَالِيدُ السَّمَاوَاتِ وَالْأَرْضِ ۗ وَالَّذِينَ كَفَرُوا بِآيَاتِ اللَّهِ أُولَٰئِكَ هُمُ الْخَاسِرُونَ ٦٣
📖 ಅನುವಾದ
ಆಯತ್ 63
ಆಕಾಶಗಳ ಮತ್ತು ಭೂಮಿಯ ಕೀಲಿ ಕÉÊಗಳು ಅವನ ಬಳಿಯಿವೆ. ಮತ್ತು ಅಲ್ಲಾಹನ ಸೂಕ್ತಿಗಳನ್ನು ನಿಷೇಧಿಸಿದವರೇ ನಷ್ಟ ಹೊಂದಿದವರಾಗಿದ್ದಾರೆ.
قُلْ أَفَغَيْرَ اللَّهِ تَأْمُرُونِّي أَعْبُدُ أَيُّهَا الْجَاهِلُونَ ٦٤
📖 ಅನುವಾದ
ಆಯತ್ 64
ಹೇಳಿರಿ: ಓ ಅಜ್ಞಾನಿಗಳೇ, ಅಲ್ಲಾಹನ ಹೊರತು ಇತರರನ್ನು ಆರಾಧಿಸಲು ನೀವು ನನಗೆ ಆದೇಶಿಸುತ್ತಿದ್ದೀರಾ?
وَلَقَدْ أُوحِيَ إِلَيْكَ وَإِلَى الَّذِينَ مِن قَبْلِكَ لَئِنْ أَشْرَكْتَ لَيَحْبَطَنَّ عَمَلُكَ وَلَتَكُونَنَّ مِنَ الْخَاسِرِينَ ٦٥
📖 ಅನುವಾದ
ಆಯತ್ 65
ನೀವೇನಾದರೂ ದೇವ ಸಹಭಾಗಿತ್ವವನ್ನು ನಿಶ್ಚಯಿಸಿದರೆ, ಖಂಡಿತವಾಗಿಯು ನಿಮ್ಮ ಕರ್ಮವು ನಿಷ್ಟಲಗೊಳ್ಳುವುದು ಹಾಗೂ ನಿಶ್ಚಯವಾಗಿಯು ನೀವು ನಷ್ಟಹೊಂದಿದವರಲ್ಲಿ ಆಗುವಿರಿ ಎಂದು ನಿಮ್ಮಡೆಗೂ, ನಿಮ್ಮ ಮುಂಚಿನ ಪ್ರವಾದಿಗಳೆಡೆಗೂ ದಿವ್ಯವಾಣಿ ಮಾಡಲಾಗಿದೆ.
بَلِ اللَّهَ فَاعْبُدْ وَكُن مِّنَ الشَّاكِرِينَ ٦٦
📖 ಅನುವಾದ
ಆಯತ್ 66
ಆದುದರಿಂದ ನೀವು ಅಲ್ಲಾಹನನ್ನು ಆರಾಧಿಸಿರಿ. ಹಾಗೂ ಕೃತಜ್ಞರಲ್ಲಿ ಸೇರಿರಿ.
وَمَا قَدَرُوا اللَّهَ حَقَّ قَدْرِهِ وَالْأَرْضُ جَمِيعًا قَبْضَتُهُ يَوْمَ الْقِيَامَةِ وَالسَّمَاوَاتُ مَطْوِيَّاتٌ بِيَمِينِهِ ۚ سُبْحَانَهُ وَتَعَالَىٰ عَمَّا يُشْرِكُونَ ٦٧
📖 ಅನುವಾದ
ಆಯತ್ 67
ಮತ್ತು ಅವರು ಅಲ್ಲಾಹನನ್ನು ಗೌರವಿಸಬೇಕಾದ ರೀತಿಯಲ್ಲಿ ಗೌರವಿಸಲಿಲ್ಲ. ಪುನರುತ್ಥಾನ ದಿನ ಇಡೀ ಭೂಮಿಯು ಅವನ ಮುಷ್ಠಿಯಲ್ಲಿರುವುದು ಮತ್ತು ಸಕಲ ಆಕಾಶಗಳು ಅವನ ಬಲಗೈಯಲ್ಲಿ ಸುತ್ತಿಕೊಂಡಿರುವುವು. ಅವನು ಪರಮ ಪಾವನನು ಅವರು ಕಲ್ಪಿಸುತ್ತಿರುವ ಸಹಭಾಗಿತ್ವದಿಂದ ಅವನು ಮಹೋನ್ನತನಾಗಿರುವನು.
وَنُفِخَ فِي الصُّورِ فَصَعِقَ مَن فِي السَّمَاوَاتِ وَمَن فِي الْأَرْضِ إِلَّا مَن شَاءَ اللَّهُ ۖ ثُمَّ نُفِخَ فِيهِ أُخْرَىٰ فَإِذَا هُمْ قِيَامٌ يَنظُرُونَ ٦٨
📖 ಅನುವಾದ
ಆಯತ್ 68
ಮತ್ತು ಕಹಳೆಯನ್ನು ಊದಲಾದಾಗ. ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವವರು ಮೂರ್ಛೆತಪ್ಪಿ ಹೋಗುವರು. ಆದರೆ ಅಲ್ಲಾಹನು ಇಚ್ಛಿಸಿದವರ ಹೊರತು. ಅನಂತರ ಪುನಃ ಕಹಳೆಯನ್ನು ಊದಲಾದಾಗ ಒಮ್ಮೇಲೆ ಅವರು ಎದ್ದು ನಿಂತು ವೀಕ್ಷಿಸುವರು.
وَأَشْرَقَتِ الْأَرْضُ بِنُورِ رَبِّهَا وَوُضِعَ الْكِتَابُ وَجِيءَ بِالنَّبِيِّينَ وَالشُّهَدَاءِ وَقُضِيَ بَيْنَهُم بِالْحَقِّ وَهُمْ لَا يُظْلَمُونَ ٦٩
📖 ಅನುವಾದ
ಆಯತ್ 69
ಭೂಮಿಯು ತನ್ನ ಪ್ರಭುವಿನ ಪ್ರಕಾಶದಿಂದ ಬೆಳಗುವುದು ಮತ್ತು ಕರ್ಮ ಗ್ರಂಥಗಳನ್ನು ಇರಿಸಲಾಗುವುದು ಮತ್ತು ಪ್ರವಾದಿಗಳನ್ನೂ, ಸಾಕ್ಷಿಗಳನ್ನೂ ತರಲಾಗುವುದು ಮತ್ತು ಜನರ ನಡುವೆ ಸತ್ಯದೊಂದಿಗೆ ತೀರ್ಪು ನೀಡಲಾಗುವುದು ಮತ್ತು ಅವರು ಅನ್ಯಾಯಕ್ಕೊಳಗಾಗ ಲಾರರು.
وَوُفِّيَتْ كُلُّ نَفْسٍ مَّا عَمِلَتْ وَهُوَ أَعْلَمُ بِمَا يَفْعَلُونَ ٧٠
📖 ಅನುವಾದ
ಆಯತ್ 70
ಪ್ರತಿಯೊಬ್ಬ ವ್ಯಕ್ತಿಗೂ ಅವನು ಮಾಡುತ್ತಿದ್ದ ಕರ್ಮಗಳ ಪ್ರತಿಫಲವನ್ನು ಪರಿಪೂರ್ಣವಾಗಿ ನೀಡಲಾಗುವುದು ಮತ್ತು ಅವರು ಮಾಡುತ್ತಿರುವುದನ್ನು ಅಲ್ಲಾಹನು ಚೆನ್ನಾಗಿ ಬಲ್ಲನು
وَسِيقَ الَّذِينَ كَفَرُوا إِلَىٰ جَهَنَّمَ زُمَرًا ۖ حَتَّىٰ إِذَا جَاءُوهَا فُتِحَتْ أَبْوَابُهَا وَقَالَ لَهُمْ خَزَنَتُهَا أَلَمْ يَأْتِكُمْ رُسُلٌ مِّنكُمْ يَتْلُونَ عَلَيْكُمْ آيَاتِ رَبِّكُمْ وَيُنذِرُونَكُمْ لِقَاءَ يَوْمِكُمْ هَٰذَا ۚ قَالُوا بَلَىٰ وَلَٰكِنْ حَقَّتْ كَلِمَةُ الْعَذَابِ عَلَى الْكَافِرِينَ ٧١
📖 ಅನುವಾದ
ಆಯತ್ 71
ಮತ್ತು ಸತ್ಯನಿಷೇಧಿಗಳನ್ನು ನರಕದೆಡೆಗೆ ತಂಡೋಪತAಡವಾಗಿ ಅಟ್ಟಲಾಗುವುದು. ಅವರು ಅಲ್ಲಿಗೆ ತಲುಪಿದಾಗ ಅದರ ದ್ವಾರಗಳು ತೆರೆಯಲಾಗುವುವು ಮತ್ತು ಅವರೊಂದಿಗೆ ಅದರ ಕಾವಲುಗಾರರು ಕೇಳುವರು: ನಿಮ್ಮ ಮುಂದೆ ನಿಮ್ಮ ಪ್ರಭುವಿನ ಸೂಕ್ತಿಗಳನ್ನು ಓದುವ ಮತ್ತು ನಿಮ್ಮನ್ನು ಈ ದಿನದ ಭೇಟಿಯ ಬಗ್ಗೆ ಎಚ್ಚರಿಸುವ ಸಂದೇಶವಾಹಕರು ನಿಮ್ಮಿಂದಲೇ ನಿಮ್ಮ ಬಳಿ ಬಂದಿರಲಿಲ್ಲವೇ ? ಆಗ ಅವರು ಹೇಳುವರು: ಹೌದು ಬಂದಿದ್ದರು. ಆದರೆ ಸತ್ಯನಿಷೇಧಿಗಳ ಮೇಲೆ ಯಾತನೆಯ ವಚನವು ಸಾಬೀತುಗೊಂಡಿದೆ.
قِيلَ ادْخُلُوا أَبْوَابَ جَهَنَّمَ خَالِدِينَ فِيهَا ۖ فَبِئْسَ مَثْوَى الْمُتَكَبِّرِينَ ٧٢
📖 ಅನುವಾದ
ಆಯತ್ 72
ಹೇಳಲಾಗುವುದು: ನೀವು ನರಕದ ದ್ವಾರಗಳಲ್ಲಿ ಪ್ರವೇಶಿಸಿರಿ. ಅಲ್ಲಿ ನೀವು ಶಾಶ್ವತರಾಗಿರುವಿರಿ. ಹಾಗೆಯೇ ಅಹಂಕಾರಿಗಳ ವಾಸಸ್ಥಳವು ಅದೆಷ್ಟು ನಿಕೃಷ್ಟವಾಗಿದೆ.
وَسِيقَ الَّذِينَ اتَّقَوْا رَبَّهُمْ إِلَى الْجَنَّةِ زُمَرًا ۖ حَتَّىٰ إِذَا جَاءُوهَا وَفُتِحَتْ أَبْوَابُهَا وَقَالَ لَهُمْ خَزَنَتُهَا سَلَامٌ عَلَيْكُمْ طِبْتُمْ فَادْخُلُوهَا خَالِدِينَ ٧٣
📖 ಅನುವಾದ
ಆಯತ್ 73
ಇನ್ನು ತಮ್ಮ ಪ್ರಭುವನ್ನು ಭಯಪಡುವವರು ಸ್ವರ್ಗದೆಡೆಗೆ ತಂಡೋಪ ತಂಡವಾಗಿ ಕರೆದೊಯ್ಯಲಾಗುವರು. ಅವರು ಅಲ್ಲಿಗೆ ತಲುಪಿದಾಗ ಅದರ ದ್ವಾರಗಳು ತೆÉರೆಯಲಾಗುವುದು. ಅದರ ಕಾವಲುಗಾರರು ಅವರಿಗೆ ಹೇಳುವರು: ನಿಮ್ಮ ಮೇಲೆ ಶಾಂತಿ ಇರಲಿ. ನೀವು ಸಂತುಷ್ಟರಾಗಿರಿ. ಮತ್ತು ಇದರಲ್ಲಿ ಶಾಶ್ವತವಾಗಿ ಪ್ರವೇಶಿಸಿರಿ.
وَقَالُوا الْحَمْدُ لِلَّهِ الَّذِي صَدَقَنَا وَعْدَهُ وَأَوْرَثَنَا الْأَرْضَ نَتَبَوَّأُ مِنَ الْجَنَّةِ حَيْثُ نَشَاءُ ۖ فَنِعْمَ أَجْرُ الْعَامِلِينَ ٧٤
📖 ಅನುವಾದ
ಆಯತ್ 74
ಅವರು ಹೇಳುವರು: ನಮ್ಮೊಂದಿಗೆ ತನ್ನ ವಾಗ್ದಾನವನ್ನು ಸತ್ಯವನ್ನಾಗಿಸಿ ನಮ್ಮನ್ನು ಈ ನೆಲದ ವಾರೀಸುದಾರರನ್ನಾಗಿ ಮಾಡಿದ ಅಲ್ಲಾಹನಿಗೇ ಸರ್ವಸ್ತುತಿಯು ಮೀಸಲು. ಸ್ವರ್ಗದಲ್ಲಿ ನಾವು ಇಚ್ಛಿಸಿದ ಕಡೆ ನೆಲೆಸಬಹುದು. ಸತ್ಕರ್ಮಿಗಳ ಪ್ರತಿಫಲವು ಅದೆಷ್ಟು ಉತ್ತಮವಾದುದು!
وَتَرَى الْمَلَائِكَةَ حَافِّينَ مِنْ حَوْلِ الْعَرْشِ يُسَبِّحُونَ بِحَمْدِ رَبِّهِمْ ۖ وَقُضِيَ بَيْنَهُم بِالْحَقِّ وَقِيلَ الْحَمْدُ لِلَّهِ رَبِّ الْعَالَمِينَ ٧٥
📖 ಅನುವಾದ
ಆಯತ್ 75
ಮತ್ತು ದೇವಚರರು ಸಿಂಹಾಸನದ ಸುತ್ತ ತಮ್ಮ ಪ್ರಭುವಿನ ಸ್ತುತಿಯೊಂದಿಗೆ ಅವನ ಪಾವಿತ್ರö್ಯವನ್ನು ಕೊಂಡಾಡುತ್ತಾ ವೃತ್ತಾಕಾರದಲ್ಲಿ ನೆರೆದಿರುವುದನ್ನು ನೀವು ಕಾಣುವಿರಿ. ಜನರ ನಡುವೆ ನ್ಯಾಯದೊಂದಿಗೆ ತೀರ್ಮಾನ ಮಾಡಲಾಗುವುದು ಮತ್ತು ಸರ್ವಸ್ತುತಿಗಳು ಸರ್ವಲೋಕಗಳ ಪ್ರಭುವಿಗೆ ಮೀಸಲು ಎಂದು ಹೇಳಲಾಗುವುದು.
ಓದಿ ಸೂರಾ ಅಜ್-ಜುಮರ್ ಕನ್ನಡ ಅನುವಾದ – ಪಠಣ ಮತ್ತು ಆಡಿಯೋ
ಪವಿತ್ರ ಕುರಾನ್
Monday, September 7, 2026
Don't forget us in your sincere prayers

