ಸೂರಾ ಗಾಫಿರ್ ಅರೇಬಿಕ್ ಮತ್ತು ಕನ್ನಡ

ಸೂರಾ ಗಾಫಿರ್ ಸಂಪೂರ್ಣ ಕನ್ನಡ ಅನುವಾದ, ಉಚ್ಚಾರಣೆ ಮತ್ತು ಆಡಿಯೋ ಪಠಣದೊಂದಿಗೆ ಓದಿ. ಪ್ರತಿ ಆಯತ್‌ನ ಅರ್ಥ. (85 ಆಯತ್ — مكية). ಗಾಫಿರ್ ಆಲಿಸಿ, ಗಾಫಿರ್ ಅನುವಾದ, ಗಾಫಿರ್ mp3, ಗಾಫಿರ್ pdf.

ಸೂರಾ ಗಾಫಿರ್ ಓದಿ ಮತ್ತು ಆಲಿಸಿ

🎧 ಆಯತ್
M Mishary Rashid Alafasy
M Mahmoud Khalil Al-Husary
A Abdurrahman As-Sudais
M Mohamed Siddiq Al-Minshawi
A Abdul Basit Abdul Samad
A Ali Al-Hudhaify
A Ahmed ibn Ali al-Ajamy
A Abu Bakr Ash-Shaatree
M Muhammad Ayyoub
A Abdullah Basfar
A Abdullah Al-Juhani
M Maher Al Muaiqly
x1
حم ۝١
📖 ಅನುವಾದ ಆಯತ್ 1
ಹಾ-ಮೀಮ್
تَنزِيلُ الْكِتَابِ مِنَ اللَّهِ الْعَزِيزِ الْعَلِيمِ ۝٢
📖 ಅನುವಾದ ಆಯತ್ 2
ಈ ಗ್ರಂಥವು ಪ್ರಚಂಡನೂ, ಸರ್ವಜ್ಞಾನಿಯೂ ಆದ ಅಲ್ಲಾಹನ ಕಡೆಯಿಂದ ಅವತೀರ್ಣಗೊಂಡಿದೆ.
غَافِرِ الذَّنبِ وَقَابِلِ التَّوْبِ شَدِيدِ الْعِقَابِ ذِي الطَّوْلِ ۖ لَا إِلَٰهَ إِلَّا هُوَ ۖ إِلَيْهِ الْمَصِيرُ ۝٣
📖 ಅನುವಾದ ಆಯತ್ 3
ಅವನು ಪಾಪವನ್ನು ಕ್ಷಮಿಸುವವನೂ, ಪಶ್ಚಾತ್ತಾಪವನ್ನು ಸ್ವೀಕರಿಸುವವನೂ, ಅತ್ಯುಗ್ರ ಯಾತನೆಯನ್ನು ನೀಡುವವನೂ ಅನುಗ್ರಹದಾತನೂ ಆಗಿರುವವನು. ಅವನ ಹೊರತು ಬೇರೆ ಆರಾಧ್ಯನಿಲ್ಲ. ಸರ್ವರಿಗೂ ಅವನೆಡೆಗೇ ಮರಳಬೇಕಾಗಿದೆ.
مَا يُجَادِلُ فِي آيَاتِ اللَّهِ إِلَّا الَّذِينَ كَفَرُوا فَلَا يَغْرُرْكَ تَقَلُّبُهُمْ فِي الْبِلَادِ ۝٤
📖 ಅನುವಾದ ಆಯತ್ 4
ಸತ್ಯನಿಷೇಧಿಗಳ ಹೊರತು ಬೇರಾರೂ ಅಲ್ಲಾಹನ ದೃಷ್ಟಾಂತಗಳಲ್ಲಿ ತರ್ಕಿಸುವುದಿಲ್ಲ. ಆದುದರಿಂದ ನಾಡುಗಳಲ್ಲಿನ ಅವರ ಮೆರೆದಾಟವು ನಿಮ್ಮನ್ನು ವಂಚಿಸದಿರಲಿ.
كَذَّبَتْ قَبْلَهُمْ قَوْمُ نُوحٍ وَالْأَحْزَابُ مِن بَعْدِهِمْ ۖ وَهَمَّتْ كُلُّ أُمَّةٍ بِرَسُولِهِمْ لِيَأْخُذُوهُ ۖ وَجَادَلُوا بِالْبَاطِلِ لِيُدْحِضُوا بِهِ الْحَقَّ فَأَخَذْتُهُمْ ۖ فَكَيْفَ كَانَ عِقَابِ ۝٥
📖 ಅನುವಾದ ಆಯತ್ 5
ಇದಕ್ಕೆ ಮೊದಲು ನೂಹರ ಜನಾಂಗ ಮತ್ತು ಅವರ ನಂತರದ ಹಲವು ಪಂಗಡಗಳು ಸಹ ಸುಳ್ಳಾಗಿಸಿದ್ದವು ಮತ್ತು ಪ್ರತಿಯೊಂದು ಸಮುದಾಯವೂ ತಮ್ಮ ಸಂದೇಶವಾಹಕನನ್ನು ಸೆರೆಹಿಡಿಯಲು ಮತ್ತು ಮಿಥ್ಯದ ಮೂಲಕ ಸತ್ಯವನ್ನು ಕೀಳಾಗಿಸಲು ಉದ್ದೇಶಿಸಿತು. ಆಗ ನಾನು ಅವರನ್ನು ಹಿಡಿದುಬಿಟ್ಟೆನು. ಆದ್ದರಿಂದ ನನ್ನ ಶಿಕ್ಷೆಯು ಹೇಗಿತ್ತೆಂಬುದನ್ನು ನೋಡಿರಿ
وَكَذَٰلِكَ حَقَّتْ كَلِمَتُ رَبِّكَ عَلَى الَّذِينَ كَفَرُوا أَنَّهُمْ أَصْحَابُ النَّارِ ۝٦
📖 ಅನುವಾದ ಆಯತ್ 6
ಹೀಗೆ ಸತ್ಯನಿಷೇಧಿಗಳು ನರಕವಾಸಿಗಳೆಂದು ನಿಮ್ಮ ಪ್ರಭುವಿನ ವಚನವು ಸಾಬೀತಾಯಿತು.
الَّذِينَ يَحْمِلُونَ الْعَرْشَ وَمَنْ حَوْلَهُ يُسَبِّحُونَ بِحَمْدِ رَبِّهِمْ وَيُؤْمِنُونَ بِهِ وَيَسْتَغْفِرُونَ لِلَّذِينَ آمَنُوا رَبَّنَا وَسِعْتَ كُلَّ شَيْءٍ رَّحْمَةً وَعِلْمًا فَاغْفِرْ لِلَّذِينَ تَابُوا وَاتَّبَعُوا سَبِيلَكَ وَقِهِمْ عَذَابَ الْجَحِيمِ ۝٧
📖 ಅನುವಾದ ಆಯತ್ 7
‘ಅರ್ಶ್'(ಸಿಂಹಾಸನ)ಅನ್ನು ಹೊತ್ತ ಮಲಕ್‌ಗಳು ಮತ್ತು ಅದರ ಸುತ್ತಲಿರುವವರು ತಮ್ಮ ಪ್ರಭುವಿನ ಸ್ತುತಿಯೊಂದಿಗೆ ಅವನ ಪಾವಿತ್ರö್ಯವನ್ನು ಕೊಂಡಾಡುತ್ತಾ ಅವನಲ್ಲಿ ವಿಶ್ವಾಸವಿಡುತ್ತಾರೆ ಮತ್ತು ಸತ್ಯವಿಶ್ವಾಸಿಗಳಿಗಾಗಿ ಹೀಗೆ ಕ್ಷಮೆಯನ್ನು ಬೇಡುತ್ತಾರೆ. ಓ ನಮ್ಮ ಪ್ರಭು, ನಿನ್ನ ಕೃಪೆ ಮತ್ತು ಜ್ಞಾನವು ಸಕಲ ವಸ್ತುಗಳನ್ನು ಆವರಿಸಿಕೊಂಡಿದೆ. ಆದ್ದರಿಂದ ಪಶ್ಚಾತ್ತಾಪಪಟ್ಟು ಮರಳುವವರಿಗೆ, ಮತ್ತು ನಿನ್ನ ಮಾರ್ಗವನ್ನು ಅನುಸರಿಸುವವರಿಗೆ ನೀನು ಕ್ಷಮಿಸಿಬಿಡು ಮತ್ತು ಅವರನ್ನು ನರಕದಿಂದ ಪಾರು ಮಾಡು.
رَبَّنَا وَأَدْخِلْهُمْ جَنَّاتِ عَدْنٍ الَّتِي وَعَدتَّهُمْ وَمَن صَلَحَ مِنْ آبَائِهِمْ وَأَزْوَاجِهِمْ وَذُرِّيَّاتِهِمْ ۚ إِنَّكَ أَنتَ الْعَزِيزُ الْحَكِيمُ ۝٨
📖 ಅನುವಾದ ಆಯತ್ 8
ಓ ನಮ್ಮ ಪ್ರಭು, ಅವರನ್ನು ಮತ್ತು ಸಜ್ಜನರಾದ ಅವರ ಮಾತಾ ಪಿತರನ್ನು ಪತ್ನಿಯರನ್ನು, ಸಂತಾನಗಳನ್ನು, ಅವರಿಗೆ ವಾಗ್ದಾನ ಮಾಡಿರುವಂತಹ ಶಾಶ್ವತವಾಸದ ಸ್ವರ್ಗೊದ್ಯಾನಗಳಲ್ಲಿ ಪ್ರವೇಶಿಸು. ನಿಜವಾಗಿಯು ನೀನು ಪ್ರಚಂಡನೂ, ಸುಜ್ಞಾನಿಯೂ ಆಗಿರುವೆ.
وَقِهِمُ السَّيِّئَاتِ ۚ وَمَن تَقِ السَّيِّئَاتِ يَوْمَئِذٍ فَقَدْ رَحِمْتَهُ ۚ وَذَٰلِكَ هُوَ الْفَوْزُ الْعَظِيمُ ۝٩
📖 ಅನುವಾದ ಆಯತ್ 9
ಅವರನ್ನು ಕೆಡುಕುಗಳಿಂದ ರಕ್ಷಿಸು. ಆ ದಿನ ನೀನು ಯಾರನ್ನು ಕೆಡುಕುಗಳಿಂದ ರಕ್ಷಿಸಿದೆಯೋ ಅವರ ಮೇಲೆ ನೀನು ಕರುಣೆ ತೋರಿಸಿರುವೆ ಮತ್ತು ಇದುವೇ ಮಹಾ ಯಶಸ್ಸಾಗಿದೆ.
إِنَّ الَّذِينَ كَفَرُوا يُنَادَوْنَ لَمَقْتُ اللَّهِ أَكْبَرُ مِن مَّقْتِكُمْ أَنفُسَكُمْ إِذْ تُدْعَوْنَ إِلَى الْإِيمَانِ فَتَكْفُرُونَ ۝١٠
📖 ಅನುವಾದ ಆಯತ್ 10
ನಿಸ್ಸಂಶಯವಾಗಿಯು ಸತ್ಯನಿಷೇಧಿಗಳಿಗೆ ಹೀಗೆ ಹೇಳಲಾಗುವುದು. ನಿಮ್ಮನ್ನು ಸತ್ಯವಿಶ್ವಾಸದೆಡೆಗೆ ಕರೆಯಲಾದಾಗ ನೀವು ನಿಷೇಧಿಸುತ್ತಿದ್ದ ಸಂದರ್ಭದಲ್ಲಿ ಅಲ್ಲಾಹನಿಗೆ ನಿಮ್ಮ ಮೇಲೆ ಉಂಟಾದ ಕೋಪವು ಸ್ವತಃ ನಿಮಗೆ ನಿಮ್ಮ ಮೇಲೆ ಉಂಟಾದ ಕೋಪಕ್ಕಿಂತಲೂ ಮಿಗಿಲಾಗಿತ್ತು.
قَالُوا رَبَّنَا أَمَتَّنَا اثْنَتَيْنِ وَأَحْيَيْتَنَا اثْنَتَيْنِ فَاعْتَرَفْنَا بِذُنُوبِنَا فَهَلْ إِلَىٰ خُرُوجٍ مِّن سَبِيلٍ ۝١١
📖 ಅನುವಾದ ಆಯತ್ 11
ಅವರು ಹೇಳುವರು: ನಮ್ಮ ಪ್ರಭು, ನೀನು ನಮಗೆ ಎರಡು ಬಾರಿ ಮರಣ ನೀಡಿರುವೆ ಹಾಗೂ ಎರಡು ಬಾರಿ ಜೀವಂತಗೊಳಿಸಿರುವೆ. ನಾವೀಗ ನಮ್ಮ ಪಾಪಗಳನ್ನು ಒಪ್ಪಿಕೊಂಡೆವು. ಇನ್ನು ಇಲ್ಲಿಂದ ಹೊರಹೋಗಲಿಕ್ಕೆ ಯಾವುದಾದರು ಮಾರ್ಗವಿದೆಯೇ ?
ذَٰلِكُم بِأَنَّهُ إِذَا دُعِيَ اللَّهُ وَحْدَهُ كَفَرْتُمْ ۖ وَإِن يُشْرَكْ بِهِ تُؤْمِنُوا ۚ فَالْحُكْمُ لِلَّهِ الْعَلِيِّ الْكَبِيرِ ۝١٢
📖 ಅನುವಾದ ಆಯತ್ 12
ಇದೇಕೆಂದರೆ ನಿಮ್ಮನ್ನು ಏಕÉÊಕ ಅಲ್ಲಾಹನೆಡೆಗೆ ಕರೆಯಲಾದಾಗ ನೀವು ನಿಷೇಧಿಸುತ್ತಿದ್ದಿರಿ ಮತ್ತು ಅವನೊಂದಿಗೆ ಸಹಭಾಗಿಗಳನ್ನು ಕಲ್ಪಿಸಲಾದಾಗ ನೀವು ನಂಬುತ್ತಿದ್ದಿರಿ. ಇನ್ನು ತೀರ್ಪಿನ ಅಧಿಕಾರವು ಮಹಾನನೂ ಉನ್ನತನೂ ಆದ ಅಲ್ಲಾಹನದ್ದೇ ಆಗಿದೆ.
هُوَ الَّذِي يُرِيكُمْ آيَاتِهِ وَيُنَزِّلُ لَكُم مِّنَ السَّمَاءِ رِزْقًا ۚ وَمَا يَتَذَكَّرُ إِلَّا مَن يُنِيبُ ۝١٣
📖 ಅನುವಾದ ಆಯತ್ 13
ಅವನೇ ನಿಮಗೆ ತನ್ನ ದೃಷ್ಟಾಂತಗಳನ್ನು ತೋರಿಸುತ್ತಾನೆ ಮತ್ತು ಆಕಾಶದಿಂದ ನಿಮಗೆ ಜೀವನಾಧಾರವನ್ನು ಇಳಿಸಿಕೊಡುತ್ತಾನೆ. ಆದರೆ (ಆಲ್ಲಾಹನೆಡೆಗೆ) ಮರಳುವವನೇ ಉಪದೇಶವನ್ನು ಸ್ವೀಕರಿಸುತ್ತಾನೆ.
فَادْعُوا اللَّهَ مُخْلِصِينَ لَهُ الدِّينَ وَلَوْ كَرِهَ الْكَافِرُونَ ۝١٤
📖 ಅನುವಾದ ಆಯತ್ 14
ಇನ್ನು ನೀವು ಧರ್ಮವನ್ನು ಅಲ್ಲಾಹನಿಗೇ ಮೀಸಲಿಟ್ಟು ಅವನನ್ನೇ ಕರೆದು ಪ್ರಾರ್ಥಿಸಿರಿ. ಸತ್ಯನಿಷೇಧಿಗಳು ಇಷ್ಟಪಡದಿದ್ದರೂ ಸರಿಯೇ?
رَفِيعُ الدَّرَجَاتِ ذُو الْعَرْشِ يُلْقِي الرُّوحَ مِنْ أَمْرِهِ عَلَىٰ مَن يَشَاءُ مِنْ عِبَادِهِ لِيُنذِرَ يَوْمَ التَّلَاقِ ۝١٥
📖 ಅನುವಾದ ಆಯತ್ 15
ಅವನು ಅತ್ಯುನ್ನತ ಪದವಿಯುಳ್ಳವನೂ, ಸಿಂಹಾಸನದ ಒಡೆಯನೂ ಅವನು ತನ್ನ ಆದೇಶದ ಮೂಲಕ ತನ್ನ ದಾಸರ ಪÉÊಕಿ ತಾನಿಚ್ಛಿಸಿದವರ ಮೇಲೆ ದಿವ್ಯವಾಣಿಯನ್ನು ಅವತೀರ್ಣಗೊಳಿಸುತ್ತಾನೆ. ಇದು ಅವರು ಭೇಟಿಯಾಗುವ ದಿನದ ಕುರಿತು ಎಚ್ಚರಿಸಲೆಂದಾಗಿದೆ.
يَوْمَ هُم بَارِزُونَ ۖ لَا يَخْفَىٰ عَلَى اللَّهِ مِنْهُمْ شَيْءٌ ۚ لِّمَنِ الْمُلْكُ الْيَوْمَ ۖ لِلَّهِ الْوَاحِدِ الْقَهَّارِ ۝١٦
📖 ಅನುವಾದ ಆಯತ್ 16
ಅವರು ತಮ್ಮ ಸಮಾಧಿಗಳಿಂದ ಹೊರಬರುವ ದಿನ ಅವರ ಯಾವ ವಿಷಯವೂ ಅಲ್ಲಾಹನಿಂದ ಅಡಗಿರುವುದಿಲ್ಲ. ಇಂದು ಅಧಿಪತ್ಯವು ಯಾರದು ? ಎಂದು ಅಲ್ಲಾಹನು ಕೇಳುವನು. ಏಕÉÊಕನೂ, ಪ್ರಚಂಡನೂ ಆದ ಅಲ್ಲಾಹನದ್ದು ಎಂದು ಸ್ವತಃ ಅವನೇ ಉತ್ತರಿಸುವನು.
الْيَوْمَ تُجْزَىٰ كُلُّ نَفْسٍ بِمَا كَسَبَتْ ۚ لَا ظُلْمَ الْيَوْمَ ۚ إِنَّ اللَّهَ سَرِيعُ الْحِسَابِ ۝١٧
📖 ಅನುವಾದ ಆಯತ್ 17
ಇಂದು ಪ್ರತಿಯೊಬ್ಬ ವ್ಯಕ್ತಿಗೂ ಅವನು ಗಳಿಸಿರುವುದರ ಪ್ರತಿಫಲ ನೀಡಲಾಗುವುದು. ಇಂದು ಯಾರ ಮೇಲೂ ಅನ್ಯಾಯ ಮಾಡಲಾಗದು. ನಿಶ್ಚಯವಾಗಿಯು ಅಲ್ಲಾಹನು ಅತೀ ಶೀಘ್ರವಾಗಿ ಲೆಕ್ಕ ವಿಚಾರಣೆಯನ್ನು ನಡೆಸುವವನಾಗಿದ್ದಾನೆ.
وَأَنذِرْهُمْ يَوْمَ الْآزِفَةِ إِذِ الْقُلُوبُ لَدَى الْحَنَاجِرِ كَاظِمِينَ ۚ مَا لِلظَّالِمِينَ مِنْ حَمِيمٍ وَلَا شَفِيعٍ يُطَاعُ ۝١٨
📖 ಅನುವಾದ ಆಯತ್ 18
ಸನ್ನಿಹಿತವಾಗಲಿರುವ (ಪುನರುತ್ಧಾನ) ದಿನದ ಬಗ್ಗೆ ನೀವು ಅವರನ್ನು ಎಚ್ಚರಿಸಿರಿ. ಹೃದಯಗಳು ಗಂಟಲುಗಳಿಗೆ ಏರಿ ಅವರು ಉಸಿರುಗಟ್ಟಿರುವ ಸಂದರ್ಭ ಮತ್ತು ಅಕ್ರಮಿಗಳಿಗೆ ಯಾವೊಬ್ಬ ಆಪ್ತಮಿತ್ರನಾಗಲಿ, ಅನುಸರಿಸಲಾಗುವ ಯಾವ ಶಿಫಾರಸ್ಸುಗಾರನಾಗಲಿ ಇರುವುದಿಲ್ಲ.
يَعْلَمُ خَائِنَةَ الْأَعْيُنِ وَمَا تُخْفِي الصُّدُورُ ۝١٩
📖 ಅನುವಾದ ಆಯತ್ 19
ಅಲ್ಲಾಹನು ದೃಷ್ಟಿಗಳ ವಂಚನೆಯನ್ನೂ, ಹೃದಯಗಳು ಬಚ್ಚಿಡುವುದನ್ನೂ ಚೆನ್ನಾಗಿ ಬಲ್ಲನು.
وَاللَّهُ يَقْضِي بِالْحَقِّ ۖ وَالَّذِينَ يَدْعُونَ مِن دُونِهِ لَا يَقْضُونَ بِشَيْءٍ ۗ إِنَّ اللَّهَ هُوَ السَّمِيعُ الْبَصِيرُ ۝٢٠
📖 ಅನುವಾದ ಆಯತ್ 20
ಅಲ್ಲಾಹನು ಸತ್ಯದೊಂದಿಗೆ ತೀರ್ಮಾನ ಮಾಡುತ್ತಾನೆ. ಮತ್ತು ಅವನನ್ನು ಬಿಟ್ಟು ಅವರು ಕರೆದು ಬೇಡುತ್ತಿರುವವರು ಯಾವ ಸಂಗತಿಯನ್ನೂ ತೀರ್ಮಾನಿಸಲಾರರು ಖಂಡಿತವಾಗಿಯೂ ಅಲ್ಲಾಹನು ಸರ್ವವನ್ನಾಲಿಸುವವನು, ಸೂಕ್ಷö್ಮ ದೃಷ್ಟಿಯುಳ್ಳವನು ಆಗಿದ್ದಾನೆ.
۞ أَوَلَمْ يَسِيرُوا فِي الْأَرْضِ فَيَنظُرُوا كَيْفَ كَانَ عَاقِبَةُ الَّذِينَ كَانُوا مِن قَبْلِهِمْ ۚ كَانُوا هُمْ أَشَدَّ مِنْهُمْ قُوَّةً وَآثَارًا فِي الْأَرْضِ فَأَخَذَهُمُ اللَّهُ بِذُنُوبِهِمْ وَمَا كَانَ لَهُم مِّنَ اللَّهِ مِن وَاقٍ ۝٢١
📖 ಅನುವಾದ ಆಯತ್ 21
ಇವರು ಭೂಮಿಯಲ್ಲಿ ಸಂಚರಿಸಿ ಇವರಿಗಿಂತ ಮುಂಚಿನವರ ಪರಿಣಾಮವೇನಾಯಿತೆಂಬುದನ್ನು ನೋಡಲಿಲ್ಲವೇ? ಅವರು ಇವರಿಗಿಂತ ಹೆಚ್ಚು ಬಲಶಾಲಿಗಳಾಗಿದ್ದರು ಮತ್ತು ಇವರಿಗಿಂತ ಹೆಚ್ಚು ಸ್ಮಾರಕಗಳನ್ನು ಭೂಮಿಯಲ್ಲಿ ಬಿಟ್ಟು ಹೋಗಿದ್ದರು. ಆದರೆ ಅಲ್ಲಾಹನು ಅವರ ಪಾಪಗಳ ನಿಮಿತ್ತ ಹಿಡಿದು ಬಿಟ್ಟನು ಮತ್ತು ಅವರಿಗೆ ಅಲ್ಲಾಹನ ಶಿಕ್ಷೆಯಿಂದ ಕಾಪಾಡುವ ಯಾವೊಬ್ಬನೂ ಇರಲಿಲ್ಲ.
ذَٰلِكَ بِأَنَّهُمْ كَانَت تَّأْتِيهِمْ رُسُلُهُم بِالْبَيِّنَاتِ فَكَفَرُوا فَأَخَذَهُمُ اللَّهُ ۚ إِنَّهُ قَوِيٌّ شَدِيدُ الْعِقَابِ ۝٢٢
📖 ಅನುವಾದ ಆಯತ್ 22
ಇದೇಕೆಂದರೆ ಅವರ ಬಳಿಗೆ ಅವರ ಸಂದೇಶವಾಹಕರು ಸುಸ್ಪಷ್ಟ ದೃಷ್ಟಾಂತಗ ಳೊಂದಿಗೆ ಬಂದಿದ್ದರು. ಆಗ ಅವರು ನಿಷೇಧಿಸಿದ್ದರು. ಕೊನೆಗೆ ಅಲ್ಲಾಹನು ಅವರನ್ನು ಹಿಡಿದುಬಿಟ್ಟನು. ಖಂಡಿತವಾಗಿಯು ಅವನು ಸರ್ವಶಕ್ತನೂ, ಅತ್ಯುಗ್ರಯಾತನೆಯನ್ನು ನೀಡುವವನೂ ಆಗಿದ್ದಾನೆ.
وَلَقَدْ أَرْسَلْنَا مُوسَىٰ بِآيَاتِنَا وَسُلْطَانٍ مُّبِينٍ ۝٢٣
📖 ಅನುವಾದ ಆಯತ್ 23
23&24
إِلَىٰ فِرْعَوْنَ وَهَامَانَ وَقَارُونَ فَقَالُوا سَاحِرٌ كَذَّابٌ ۝٢٤
📖 ಅನುವಾದ ಆಯತ್ 24
ನಾವು ಮೂಸಾರನ್ನು ನಮ್ಮ ದೃಷ್ಟಾಂತಗಳೊAದಿಗೆ ಮತ್ತು ಸುಸ್ಪಷ್ಟ ಪ್ರಮಾಣಗಳೊಂದಿಗೆ ಫಿರ್‌ಔನ್, ಹಾಮಾನ್ ಹಾಗೂ ಕಾರೂನನೆಡೆಗೆ ಕಳುಹಿಸಿದೆವು. ಆದರೆ ಅವನು ಇವನೊಬ್ಬ ಮಾಂತ್ರಿಕ ಮತ್ತು ಸುಳ್ಳುಗಾರನಾಗಿದ್ದಾನೆಂದು ಹೇಳಿದರು.
فَلَمَّا جَاءَهُم بِالْحَقِّ مِنْ عِندِنَا قَالُوا اقْتُلُوا أَبْنَاءَ الَّذِينَ آمَنُوا مَعَهُ وَاسْتَحْيُوا نِسَاءَهُمْ ۚ وَمَا كَيْدُ الْكَافِرِينَ إِلَّا فِي ضَلَالٍ ۝٢٥
📖 ಅನುವಾದ ಆಯತ್ 25
ಅವರ ಬಳಿಗೆ ಮೂಸಾ ನಮ್ಮ ಕಡೆಯಿಂದ ಸತ್ಯವನ್ನು ತಂದಾಗ ಅವರು ಹೇಳಿದರು: ಅವನಲ್ಲಿ ವಿಶ್ವಾಸವಿರಿಸಿದವರ ಗಂಡುಮಕ್ಕಳನ್ನು ಕೊಂದುಬಿಡಿರಿ ಹಾಗೂ ಹೆಣ್ಣು ಸಂತತಿಗಳನ್ನು ಜೀವಂತವಾಗಿಡಿರಿ ಸತ್ಯನಿಷೇಧಿಗಳ ಕುತಂತ್ರವು ಪಥಭ್ರಷ್ಟತೆಯಲ್ಲೇ ಇದೆ.
وَقَالَ فِرْعَوْنُ ذَرُونِي أَقْتُلْ مُوسَىٰ وَلْيَدْعُ رَبَّهُ ۖ إِنِّي أَخَافُ أَن يُبَدِّلَ دِينَكُمْ أَوْ أَن يُظْهِرَ فِي الْأَرْضِ الْفَسَادَ ۝٢٦
📖 ಅನುವಾದ ಆಯತ್ 26
ಫಿರ್‌ಔನ್ ಹೇಳಿದನು: ನನ್ನನ್ನು ಬಿಡಿರಿ. ನಾನು ಮೂಸಾರವರನ್ನು ಕೊಂದುಬಿಡುವೆನು. ಅವನು ತನ್ನ ಪ್ರಭುವನ್ನು ಕರೆದು ಬೇಡಲಿ, ಅವನು ನಿಮ್ಮ ಧರ್ಮವನ್ನು ಬದಲಾಯಿಸಿ ಬಿಡುವನು ಅಥವಾ ಭೂಮಿಯಲ್ಲಿ ಕ್ಷೆÆÃಭೆ ಹರಡುವನೆಂದು ನಾನು ಭಯಪಡುತ್ತಿರುವೆನು.
وَقَالَ مُوسَىٰ إِنِّي عُذْتُ بِرَبِّي وَرَبِّكُم مِّن كُلِّ مُتَكَبِّرٍ لَّا يُؤْمِنُ بِيَوْمِ الْحِسَابِ ۝٢٧
📖 ಅನುವಾದ ಆಯತ್ 27
ಮೂಸಾ ಹೇಳಿದರು: ನಿಸ್ಸಂದೇಹವಾಗಿಯು ವಿಚಾರಣೆಯ ದಿನವನ್ನು ನಂಬದ ಪ್ರತಿಯೊಬ್ಬ ದುರಹಂಕಾರಿಯ ವಿರುದ್ಧ ನನ್ನ ಮತ್ತು ನಿಮ್ಮ ಪ್ರಭುವಾದ ಅಲ್ಲಾಹನಲ್ಲಿ ಅಭಯ ಯಾಚಿಸಿದ್ದೇನೆ.
وَقَالَ رَجُلٌ مُّؤْمِنٌ مِّنْ آلِ فِرْعَوْنَ يَكْتُمُ إِيمَانَهُ أَتَقْتُلُونَ رَجُلًا أَن يَقُولَ رَبِّيَ اللَّهُ وَقَدْ جَاءَكُم بِالْبَيِّنَاتِ مِن رَّبِّكُمْ ۖ وَإِن يَكُ كَاذِبًا فَعَلَيْهِ كَذِبُهُ ۖ وَإِن يَكُ صَادِقًا يُصِبْكُم بَعْضُ الَّذِي يَعِدُكُمْ ۖ إِنَّ اللَّهَ لَا يَهْدِي مَنْ هُوَ مُسْرِفٌ كَذَّابٌ ۝٢٨
📖 ಅನುವಾದ ಆಯತ್ 28
ಆಗ ತನ್ನ ವಿಶ್ವಾಸವನ್ನು ಅಡಗಿಸಿಟ್ಟಿದ್ದ ಫಿರ್‌ಔನ್ ವಂಶದ ಒಬ್ಬ ಸತ್ಯವಿಶ್ವಾಸಿ ವ್ಯಕ್ತಿಯು ಹೇಳಿದನು; ತನ್ನ ಪ್ರಭುವು ಅಲ್ಲಾಹನಾಗಿದ್ದಾನೆ ಎಂದು ಹೇಳಿದ ಮಾತ್ರಕ್ಕಾಗಿ ವ್ಯಕ್ತಿಯೊಬ್ಬನನ್ನು ನೀವು ವಧಿಸುವಿರಾ? ಮತ್ತÄ ಅವನು ನಿಮ್ಮ ಬಳಿಗೆ ನಿವi್ಮ ಪ್ರಭುವಿನಿಂದ ಸುಸ್ಪಷ್ಟ ಪುರಾವೆಗಳನ್ನು ತಂದಿದ್ದಾನೆ ಮತ್ತು ಅವನೇನಾದರೂ ಸುಳ್ಳುಗಾರನಾಗಿದ್ದರೆ ಅವನ ಸುಳ್ಳು ಅವನ ವಿರುದ್ಧವೇ ಇರುವುದು ಇನ್ನು ಅವನು ಸತ್ಯವಂತನಾಗಿದ್ದರೆ ನಿಮಗೆ ಅವನು ಎಚ್ಚರಿಕೆ ನೀಡುತ್ತಿರುವ ಕೆಲವು ಶಿಕ್ಷೆಗಳು ನಿಮ್ಮ ಮೇಲೆರಗುವುವು. ಮಿತಿಮೀರಿದವನನ್ನು ಮತ್ತು ಸುಳ್ಳುಗಾರನನ್ನು ಅಲ್ಲಾಹನು ಸನ್ಮಾರ್ಗದಲ್ಲಿ ಮುನ್ನಡೆಸಲಾರನು.
يَا قَوْمِ لَكُمُ الْمُلْكُ الْيَوْمَ ظَاهِرِينَ فِي الْأَرْضِ فَمَن يَنصُرُنَا مِن بَأْسِ اللَّهِ إِن جَاءَنَا ۚ قَالَ فِرْعَوْنُ مَا أُرِيكُمْ إِلَّا مَا أَرَىٰ وَمَا أَهْدِيكُمْ إِلَّا سَبِيلَ الرَّشَادِ ۝٢٩
📖 ಅನುವಾದ ಆಯತ್ 29
ಓ ನನ್ನ ಜನಾಂಗದವರೇ, ಇಂದು ಅಧಿಪತ್ಯವು ನಿಮ್ಮದಾಗಿದೆ ನೀವು ಭೂಮಿಯಲ್ಲಿ ಮೇಲುಗೈ ಸಾಧಿಸುತ್ತೀರಿ. ಆದರೆ ಅಲ್ಲಾಹನ ಶಿಕ್ಷೆಯು ನಮ್ಮಲ್ಲಿಗೆ ಬಂದು ಬಿಟ್ಟರೆ ಅದರಿಂದ ರಕ್ಷಿಸಿ ನಮಗೆ ಸಹಾಯ ಮಾಡುವವರು ಯಾರು? ಫಿರ್‌ಔನ್ ಹೇಳಿದನು: ನಾನು ಯುಕ್ತ ಕಂಡ ಸಲಹೆಯನ್ನೇ ನಿಮಗೆ ಕೊಡುತ್ತಿದ್ದೇನೆ ಹಾಗೂ ನಾನು ನಿಮಗೆ ಸರಿಯಾದ ಮಾರ್ಗವನ್ನೇ ತೋರಿಸಿಕೊಡುತ್ತಿದ್ದೇನೆ.
وَقَالَ الَّذِي آمَنَ يَا قَوْمِ إِنِّي أَخَافُ عَلَيْكُم مِّثْلَ يَوْمِ الْأَحْزَابِ ۝٣٠
📖 ಅನುವಾದ ಆಯತ್ 30
ಆ ಸತ್ಯವಿಶ್ವಾಸಿಯು ಹೇಳಿದನು: ಓ ನನ್ನ ಜನಾಂಗದವರೇ ನಿಶ್ಚಯವಾಗಿಯೂ, (ಸಂದೇಶವಾಹಕರನ್ನು ವಿರೋಧಿಸಿದ) ಸಮುದಾಯಗಳ ಮೇಲೆ ಎರಗಿದಂತಹ ದಿನವು ನಿಮ್ಮ ಮೇಲೂ ಎರಗಬಹುದೆಂದು ನಾನು ಭಯಪಡುತ್ತೇನೆ.
مِثْلَ دَأْبِ قَوْمِ نُوحٍ وَعَادٍ وَثَمُودَ وَالَّذِينَ مِن بَعْدِهِمْ ۚ وَمَا اللَّهُ يُرِيدُ ظُلْمًا لِّلْعِبَادِ ۝٣١
📖 ಅನುವಾದ ಆಯತ್ 31
ನೂಹರ ಜನಾಂಗ ಆದ್, ಸಮೂದ್ ಹಾಗೂ ಅವರ ನಂತರದವರ ಸ್ಥಿತಿಯಾದಂತೆ, ಅಲ್ಲಾಹನು ತನ್ನ ದಾಸರ ಮೇಲೆ ಅಕ್ರಮವೆಸಗಲು ಬಯಸುವುದಿಲ್ಲ.
وَيَا قَوْمِ إِنِّي أَخَافُ عَلَيْكُمْ يَوْمَ التَّنَادِ ۝٣٢
📖 ಅನುವಾದ ಆಯತ್ 32
ಮತ್ತು ಓ ನಮ್ಮ ಜನಾಂಗದವರೇ ನಾನು ಪರಸ್ಪರ ಗೋಳಾಡುವ ದಿನದ ಕುರಿತು ನಿಮ್ಮ ಮೇಲೆ ಭಯಪಡುತ್ತೇನೆ.
يَوْمَ تُوَلُّونَ مُدْبِرِينَ مَا لَكُم مِّنَ اللَّهِ مِنْ عَاصِمٍ ۗ وَمَن يُضْلِلِ اللَّهُ فَمَا لَهُ مِنْ هَادٍ ۝٣٣
📖 ಅನುವಾದ ಆಯತ್ 33
ನೀವು ಬೆನ್ನು ತಿರುಗಿಸಿ ಓಡುವ ದಿನ ಅಲ್ಲಾಹನಿಂದ ನಿಮ್ಮನ್ನು ರಕ್ಷಿಸುವನಾರೂ ಇರಲಾರರು ಮತ್ತು ಅಲ್ಲಾಹನು ದಾರಿತಪ್ಪಿಸುವವನಿಗೆ ಮಾರ್ಗದರ್ಶಕನಾರೂ ಇಲ್ಲ.
وَلَقَدْ جَاءَكُمْ يُوسُفُ مِن قَبْلُ بِالْبَيِّنَاتِ فَمَا زِلْتُمْ فِي شَكٍّ مِّمَّا جَاءَكُم بِهِ ۖ حَتَّىٰ إِذَا هَلَكَ قُلْتُمْ لَن يَبْعَثَ اللَّهُ مِن بَعْدِهِ رَسُولًا ۚ كَذَٰلِكَ يُضِلُّ اللَّهُ مَنْ هُوَ مُسْرِفٌ مُّرْتَابٌ ۝٣٤
📖 ಅನುವಾದ ಆಯತ್ 34
ಇದಕ್ಕೆ ಮೊದಲು ಪ್ರವಾದಿ ಯೂಸುಫ್ ಸುಸ್ಪಷ್ಟ ಪುರಾವೆಗಳೊಂದಿಗೆ ಬಂದಿದ್ದರು. ಆದರೆ ನೀವು ಅವರು ತಂದಿರುವುದರಲ್ಲಿ ಸಂದೇಹದಲ್ಲೇ ಬಿದ್ದಿದ್ದಿರಿ. ಕೊನೆಗೆ ಅವರು ಮರಣಗೊಂಡಾಗ ನೀವು ಅವರ ನಂತರ ಅಲ್ಲಾಹನು ಯಾವೊಬ್ಬ ಸಂದೇಶವಾಹಕನನ್ನು ನಿಯೋಗಿಸುವುದಿಲ್ಲವೆಂದು ಹೇಳಿದಿರಿ. ಇದೇ ಪ್ರಕಾರ ಅಲ್ಲಾಹನು ಮಿತಿಮೀರಿದವರನ್ನು ಸಂಶಯಗ್ರಸ್ತರನ್ನು ದಾರಿ ತಪ್ಪಿಸಿಬಿಡುತ್ತಾನೆ.
الَّذِينَ يُجَادِلُونَ فِي آيَاتِ اللَّهِ بِغَيْرِ سُلْطَانٍ أَتَاهُمْ ۖ كَبُرَ مَقْتًا عِندَ اللَّهِ وَعِندَ الَّذِينَ آمَنُوا ۚ كَذَٰلِكَ يَطْبَعُ اللَّهُ عَلَىٰ كُلِّ قَلْبِ مُتَكَبِّرٍ جَبَّارٍ ۝٣٥
📖 ಅನುವಾದ ಆಯತ್ 35
ತಮ್ಮ ಬಳಿ ಬಂದAತಹ ಯಾವುದೇ ಪುರಾವೆಯಿಲ್ಲದೆ ಅಲ್ಲಾಹನ ದೃಷ್ಟಾಂತಗಳಲ್ಲಿ ತರ್ಕಿಸುತ್ತಾರೋ ಅಲ್ಲಾಹನ ಬಳಿ ಹಾಗೂ ಸತ್ಯವಿಶ್ವಾಸಿಗಳ ಬಳಿ ಇದು ಮಹಾ ಅಸಂತುಷ್ಟ ಸಂಗತಿಯಾಗಿದೆ. ಅಲ್ಲಾಹನು ಇದೇ ಪ್ರಕಾರ ಪ್ರತಿಯೊಬ್ಬ ದುರಹಂಕಾರಿ ಮತ್ತು ದುಷ್ಟನ ಹೃದಯದ ಮೇಲೆ ಮುದ್ರೆಯೊತ್ತುತ್ತಾನೆ.
وَقَالَ فِرْعَوْنُ يَا هَامَانُ ابْنِ لِي صَرْحًا لَّعَلِّي أَبْلُغُ الْأَسْبَابَ ۝٣٦
📖 ಅನುವಾದ ಆಯತ್ 36
ಮತ್ತು ಫಿರ್‌ಔನನೆಂದನು: ಓ ಹಾಮಾನ್, ನನಗೊಂದು ಉನ್ನತ ಕಟ್ಟಡವನ್ನು ನಿರ್ಮಿಸು. ನಾನು ಮಾರ್ಗಗಳನ್ನು ತಲುಪಬಹುದು.
أَسْبَابَ السَّمَاوَاتِ فَأَطَّلِعَ إِلَىٰ إِلَٰهِ مُوسَىٰ وَإِنِّي لَأَظُنُّهُ كَاذِبًا ۚ وَكَذَٰلِكَ زُيِّنَ لِفِرْعَوْنَ سُوءُ عَمَلِهِ وَصُدَّ عَنِ السَّبِيلِ ۚ وَمَا كَيْدُ فِرْعَوْنَ إِلَّا فِي تَبَابٍ ۝٣٧
📖 ಅನುವಾದ ಆಯತ್ 37
ಆ ಆಕಾಶ ಮಾರ್ಗಗಳನ್ನು ತಲುಪಿ ನಾನು ಮೂಸಾನ ಆರಾಧ್ಯನೆಡೆಗೆ ಇಣುಕಿ ನೋಡುವೆನು ಮತ್ತು ಖಂಡಿತವಾಗಿಯು ಅವನನ್ನು ನಾನು ಸುಳ್ಳುಗಾರನೆಂದು ಭಾವಿಸುತ್ತಿರುವೆನು ಮತ್ತು ಹೀಗೆ ಫಿರ್‌ಔನನಿಗೆ ಅವನ ದುಷ್ಕರ್ಮಗಳನ್ನು ಮನಮೋಹಕಗೊಳಿಸಲಾಯಿತು. ಹಾಗೂ ಸರಿದಾರಿಯಿಂದ ಅವನನ್ನು ತಡೆಯಲಾಯಿತು ಮತ್ತು ಫಿರ್‌ಔನನ ಕುತಂತ್ರವು ನಾಶ ಹೊಂದಿತು.
وَقَالَ الَّذِي آمَنَ يَا قَوْمِ اتَّبِعُونِ أَهْدِكُمْ سَبِيلَ الرَّشَادِ ۝٣٨
📖 ಅನುವಾದ ಆಯತ್ 38
ಮತ್ತು ಆ ಸತ್ಯವಿಶ್ವಾಸಿಯು ಹೇಳಿದನು: ಓ ನನ್ನ ಜನಾಂಗದವರೇ, ನೀವು ನನ್ನನ್ನು ಅನುಸರಿಸಿರಿ. ನಾನು ನಿಮ್ಮನ್ನು ಸನ್ಮಾರ್ಗದೆಡೆಗೆ ಮುನ್ನಡೆಸುವೆನು.
يَا قَوْمِ إِنَّمَا هَٰذِهِ الْحَيَاةُ الدُّنْيَا مَتَاعٌ وَإِنَّ الْآخِرَةَ هِيَ دَارُ الْقَرَارِ ۝٣٩
📖 ಅನುವಾದ ಆಯತ್ 39
ಓ ನನ್ನ ಜನಾಂಗದವರೇ, ಈ ಲೌಕಿಕ ಜೀವನವು ತಾತ್ಕಾಲಿಕ ಸುಖಭೋಗವಾಗಿದೆ. ಮತ್ತು ಖಂಡಿತವಾಗಿಯು ಶಾಶ್ವತ ಭವನವು ಪರಲೋಕವೇ ಆಗಿದೆ.
مَنْ عَمِلَ سَيِّئَةً فَلَا يُجْزَىٰ إِلَّا مِثْلَهَا ۖ وَمَنْ عَمِلَ صَالِحًا مِّن ذَكَرٍ أَوْ أُنثَىٰ وَهُوَ مُؤْمِنٌ فَأُولَٰئِكَ يَدْخُلُونَ الْجَنَّةَ يُرْزَقُونَ فِيهَا بِغَيْرِ حِسَابٍ ۝٤٠
📖 ಅನುವಾದ ಆಯತ್ 40
ಮತ್ತು ಯಾರು ಪಾಪ ಮಾಡುತ್ತಾನೋ ಅವನಿಗೆ ಅದರಷ್ಟೇ ಪ್ರತಿಫಲ ನೀಡಲಾಗುವುದು. ಮತ್ತು ಪುರುಷನಿರಲಿ ಸ್ತಿçÃಯಿರಲಿ ಯಾರು ಸತ್ಯವಿಶ್ವಾಸಿಯಾಗಿದ್ದುಕೊಂಡು ಸತ್ಕರ್ಮವೆಸಗುವರೋ ಸ್ವರ್ಗವನ್ನು ಪ್ರವೇಶಿಸುವರು ಅಲ್ಲಿ ಅವರಿಗೆ ಲೆಕ್ಕಾತೀತವಾಗಿ ಜೀವನಾಧಾರವನ್ನು ನೀಡಲಾಗುವುದು.
۞ وَيَا قَوْمِ مَا لِي أَدْعُوكُمْ إِلَى النَّجَاةِ وَتَدْعُونَنِي إِلَى النَّارِ ۝٤١
📖 ಅನುವಾದ ಆಯತ್ 41
ಓ ನನ್ನ ಜನಾಂಗದವರೇ, ಇದೇನಿದು? ನಾನು ನಿಮ್ಮನ್ನು ರಕ್ಷೆಯೆಡೆಗೆ ಕರೆಯುತ್ತಿದ್ದರೆ ನೀವು ನನ್ನನ್ನು ನರಕಾಗ್ನಿಯೆಡೆಗೆ ಕರೆಯುತ್ತಿರುವಿರಿ!
تَدْعُونَنِي لِأَكْفُرَ بِاللَّهِ وَأُشْرِكَ بِهِ مَا لَيْسَ لِي بِهِ عِلْمٌ وَأَنَا أَدْعُوكُمْ إِلَى الْعَزِيزِ الْغَفَّارِ ۝٤٢
📖 ಅನುವಾದ ಆಯತ್ 42
ನಾನು ಅಲ್ಲಾಹನನ್ನು ಧಿಕ್ಕರಿಸಬೇಕೆಂದು ಮತ್ತು ನನಗೆ ತಿಳಿಯದಿರುವುದನ್ನು ಅವನೊಂದಿಗೆ ಸಹಭಾಗಿಯಾಗಿ ನಿಶ್ಚಯಿಸಬೇಕೆಂದೂ ನೀವು ನನ್ನನ್ನು ಕರೆಯುತ್ತಿರುವಿರಿ. ಆದರೆ ನಾನು ನಿಮ್ಮನ್ನು ಪ್ರಚಂಡನೂ, ಕ್ಷಮಾಶೀಲನೂ ಆದ ಅಲ್ಲಾಹನೆಡೆಗೆ ಕರೆಯುತ್ತಿರುವೆನು.
لَا جَرَمَ أَنَّمَا تَدْعُونَنِي إِلَيْهِ لَيْسَ لَهُ دَعْوَةٌ فِي الدُّنْيَا وَلَا فِي الْآخِرَةِ وَأَنَّ مَرَدَّنَا إِلَى اللَّهِ وَأَنَّ الْمُسْرِفِينَ هُمْ أَصْحَابُ النَّارِ ۝٤٣
📖 ಅನುವಾದ ಆಯತ್ 43
ನೀವು ನನ್ನನ್ನು ಯಾರೆಡೆಗೆ ಕರೆಯುತ್ತಿರುವಿರೋ ಖಂಡಿತ ಅವರು ಇಹಲೋಕದಲ್ಲಾಗಲಿ, ಪರಲೋಕದಲ್ಲಾಗಲಿ ಕರೆದು ಬೇಡಿಕೊಳ್ಳುವಂತಹ ಯೋಗ್ಯತೆಯನ್ನು ಹೊಂದಿಲ್ಲ ಹಾಗೂ ಖಂಡಿತ ನವÉÄ್ಮಲ್ಲರ ಮರಳುವಿಕೆಯು ಅಲ್ಲಾಹನೆಡೆಗೇ ಆಗಿದೆ. ಮತ್ತು ನಿಶ್ಚಯವಾಗಿಯೂ ಮಿತಿಮೀರುವವರೇ ನರಕವಾಸಿಗಳಾಗಿದ್ದಾರೆ.
فَسَتَذْكُرُونَ مَا أَقُولُ لَكُمْ ۚ وَأُفَوِّضُ أَمْرِي إِلَى اللَّهِ ۚ إِنَّ اللَّهَ بَصِيرٌ بِالْعِبَادِ ۝٤٤
📖 ಅನುವಾದ ಆಯತ್ 44
ನಾನು ನಿಮಗೆ ಹೇಳಿದ ಮಾತುಗಳನ್ನು ನೀವು ಸಧ್ಯದಲ್ಲೇ ಜ್ಞಾಪಿಸಿಕೊಳ್ಳುವಿರಿ. ನನ್ನ ವಿಚಾರವನ್ನು ನಾನು ಅಲ್ಲಾಹನಿಗೆ ವಹಿಸಿಬಿಡುತ್ತೇನೆ. ನಿಶ್ಚಯವಾಗಿಯು ಅಲ್ಲಾಹನು ತನ್ನ ದಾಸರ ಮೇಲ್ವಿಚಾರಕನಾಗಿದ್ದಾನೆ.
فَوَقَاهُ اللَّهُ سَيِّئَاتِ مَا مَكَرُوا ۖ وَحَاقَ بِآلِ فِرْعَوْنَ سُوءُ الْعَذَابِ ۝٤٥
📖 ಅನುವಾದ ಆಯತ್ 45
ಆಗ ಅಲ್ಲಾಹನು ಅವರು ಹೂಡಿದ್ದ ಸಕಲ ಕುತಂತ್ರಗಳಿAದ ಆ ಸತ್ಯವಿಶ್ವಾಸಿಯನ್ನು ರಕ್ಷಿಸಿದನು. ಮತ್ತು ಫಿರ್‌ಔನನ ಜನರನ್ನು ಅತ್ಯಂತ ಕೆಟ್ಟ ಯಾತನೆಯು ಆವರಿಸಿಬಿಟ್ಟಿತು.
النَّارُ يُعْرَضُونَ عَلَيْهَا غُدُوًّا وَعَشِيًّا ۖ وَيَوْمَ تَقُومُ السَّاعَةُ أَدْخِلُوا آلَ فِرْعَوْنَ أَشَدَّ الْعَذَابِ ۝٤٦
📖 ಅನುವಾದ ಆಯತ್ 46
ಅವರು ನರಕಾಗ್ನಿಯ ಮುಂದೆ ಸಂಜೆ ಮುಂಜಾನೆಯಲ್ಲಿ ಒಡ್ಡಲ್ಪಡುತ್ತಾರೆ ಮತ್ತು ಪುನರುತ್ಧಾನದ ದಿನ ಫಿರ್‌ಔನನ ಪರಿವಾರವನ್ನು ಅತ್ಯುಗ್ರ ಶಿಕ್ಷೆಗೆ ಪ್ರವೇಶಗೊಳಿಸಿರಿ. ಎಂದು (ಹೇಳಲಾಗುವುದು)
وَإِذْ يَتَحَاجُّونَ فِي النَّارِ فَيَقُولُ الضُّعَفَاءُ لِلَّذِينَ اسْتَكْبَرُوا إِنَّا كُنَّا لَكُمْ تَبَعًا فَهَلْ أَنتُم مُّغْنُونَ عَنَّا نَصِيبًا مِّنَ النَّارِ ۝٤٧
📖 ಅನುವಾದ ಆಯತ್ 47
ಅವರು ನರಕಾಗ್ನಿಯಲ್ಲಿ ಪರಸ್ಪರ ತರ್ಕಿಸುತ್ತಿರುವ ಸಂದರ್ಭ: ಆಗ ದುರ್ಬಲರು ಅಹಂಕಾರಿಗಳೊAದಿಗೆ ನಾವು ನಿಮ್ಮ ಆಜ್ಞಾಪಾಲಕರಾಗಿದ್ದೆವು. ಆದುದರಿಂದ ನೀವು ನಮ್ಮಿಂದ ನರಕಾಗ್ನಿಯ ಯಾವುದಾದರೂ ಒಂದAಶವನ್ನು ಸರಿಸಬಲ್ಲಿರಾ? ಎಂದು ಕೇಳುವರು.
قَالَ الَّذِينَ اسْتَكْبَرُوا إِنَّا كُلٌّ فِيهَا إِنَّ اللَّهَ قَدْ حَكَمَ بَيْنَ الْعِبَادِ ۝٤٨
📖 ಅನುವಾದ ಆಯತ್ 48
ಆಗ ಅಹಂಕಾರಿಗಳು ಉತ್ತರಿಸುವರು: ನಿಶ್ಚಯವಾಗಿಯು ನಾವೆಲ್ಲರೂ ನರಕದಲ್ಲಿದ್ದೇವೆ. ಖಂಡಿತವಾಗಿಯು ಅಲ್ಲಾಹನು ತನ್ನ ದಾಸರ ನಡುವೆ ತೀರ್ಮಾನ ಮಾಡಿ ಬಿಟ್ಟಿದ್ದಾನೆ.
وَقَالَ الَّذِينَ فِي النَّارِ لِخَزَنَةِ جَهَنَّمَ ادْعُوا رَبَّكُمْ يُخَفِّفْ عَنَّا يَوْمًا مِّنَ الْعَذَابِ ۝٤٩
📖 ಅನುವಾದ ಆಯತ್ 49
ಮತ್ತು ನರಕಾಗ್ನಿಯಲ್ಲಿರವವರು ನರಕದ ಕಾವಲುಗಾರರೊಡನೆ: ನೀವು ನಿಮ್ಮ ಪ್ರಭುವಿನಲ್ಲಿ ಪ್ರಾರ್ಥಿಸಿರಿ. ಅವನು ನಮ್ಮಿಂದ ಒಂದು ದಿನವನ್ನಾದರೂ ಯಾತನೆಯನ್ನು ಕಡಿಮೆಗೊಳಿಸಲಿ ಎನ್ನುವರು.
قَالُوا أَوَلَمْ تَكُ تَأْتِيكُمْ رُسُلُكُم بِالْبَيِّنَاتِ ۖ قَالُوا بَلَىٰ ۚ قَالُوا فَادْعُوا ۗ وَمَا دُعَاءُ الْكَافِرِينَ إِلَّا فِي ضَلَالٍ ۝٥٠
📖 ಅನುವಾದ ಆಯತ್ 50
ಆಗ ಕಾವಲುಗಾರರು ನಿಮ್ಮ ಬಳಿ ನಿಮ್ಮ ಸಂದೇಶವಾಹಕರು ಸುಸ್ಪಷ್ಟ ದೃಷ್ಟಾಂತಗಳೊAದಿಗೆ ಬಂದಿರಲಿಲ್ಲವೇ?ಎAದು ಕೇಳುವರು.ಆಗ ಅವರು ಏಕಿಲ್ಲ ಎಂದು ಹೇಳುವರು. ಹಾಗಿದ್ದರೆ ನೀವೇ ಬೇಡಿಕೊಳ್ಳಿರಿ ಎಂದು ಅವರು ಹೇಳುವರು. ಮತ್ತು ಸತ್ಯನಿಷೇಧಿಗಳ ಮೊರೆಯು ವ್ಯರ್ಥವಾಗಿದೆ.
إِنَّا لَنَنصُرُ رُسُلَنَا وَالَّذِينَ آمَنُوا فِي الْحَيَاةِ الدُّنْيَا وَيَوْمَ يَقُومُ الْأَشْهَادُ ۝٥١
📖 ಅನುವಾದ ಆಯತ್ 51
ಖಂಡಿತವಾಗಿಯು ನಾವು ನಮ್ಮ ಸಂದೇಹವಾಹಕರಿಗೆ ಮತ್ತು ಸತ್ಯವಿಶ್ವಾಸವಿರಿಸಿದವರಿಗೆ ಇಹಲೋಕ ಜೀವನದಲ್ಲೂ ಮತ್ತು ಸಾಕ್ಷಿಗಳು ನಿಲ್ಲುವ ದಿನದಲ್ಲೂ ಸಹಾಯ ಮಾಡುವೆವು.
يَوْمَ لَا يَنفَعُ الظَّالِمِينَ مَعْذِرَتُهُمْ ۖ وَلَهُمُ اللَّعْنَةُ وَلَهُمْ سُوءُ الدَّارِ ۝٥٢
📖 ಅನುವಾದ ಆಯತ್ 52
ಅಕ್ರಮಿಗಳಿಗೆ ತಮ್ಮನೆಪಗಳು ಯಾವ ಪ್ರಯೋಜನವÀನ್ನೂ ಸಹ ನೀಡದ ದಿನದಂದು ಅವರಿಗೆ ಶಾಪವಿದೆ ಮತ್ತು ಅವರಿಗೆ ಕೆಟ್ಟ ವಾಸಸ್ಥಳವಿದೆ.
وَلَقَدْ آتَيْنَا مُوسَى الْهُدَىٰ وَأَوْرَثْنَا بَنِي إِسْرَائِيلَ الْكِتَابَ ۝٥٣
📖 ಅನುವಾದ ಆಯತ್ 53
ನಾವು ಮೂಸಾರವರಿಗೆ ಸನ್ಮಾರ್ಗ ಗ್ರಂಥವನ್ನು ದಯಪಾಲಿಸಿದೆವು ಮತ್ತು ಇಸ್ರಾಯೀಲ್ ಸಂತತಿಗಳನ್ನು ಆ ಗ್ರಂಥದ ವಾರೀಸುದಾರರನ್ನಾಗಿ ಮಾಡಿದೆವು
هُدًى وَذِكْرَىٰ لِأُولِي الْأَلْبَابِ ۝٥٤
📖 ಅನುವಾದ ಆಯತ್ 54
ಅದು ಬುದ್ದಿಜೀವಿಗಳಿಗೆ ಸನ್ಮಾರ್ಗವೂ ಹಾಗೂ ಉದ್ಬೋದೆಯು ಆಗಿತ್ತು.
فَاصْبِرْ إِنَّ وَعْدَ اللَّهِ حَقٌّ وَاسْتَغْفِرْ لِذَنبِكَ وَسَبِّحْ بِحَمْدِ رَبِّكَ بِالْعَشِيِّ وَالْإِبْكَارِ ۝٥٥
📖 ಅನುವಾದ ಆಯತ್ 55
ಆದ್ದರಿಂದ ಓ ಸಂದೇಶವಾಹಕರೇ, ತಾಳ್ಮೆವಹಿಸಿರಿ. ಅಲ್ಲಾಹನ ವಾಗ್ದಾನವು ಖಂಡಿತ ಸತ್ಯವಾಗಿದೆ. ನೀವು ನಿಮ್ಮ ಪಾಪಕ್ಕೆ ಕ್ಷಮೆ ಬೇಡಿರಿ ಹಾಗೂ ಸಂಜೆ ಮುಂಜಾನೆಯಲ್ಲಿ ನಿಮ್ಮ ಪ್ರಭುವಿನ ಸ್ತುತಿಯೊಂದಿಗೆ ಅವನ ಪಾವಿತ್ರö್ಯವನ್ನು ಕೊಂಡಾಡಿರಿ.
إِنَّ الَّذِينَ يُجَادِلُونَ فِي آيَاتِ اللَّهِ بِغَيْرِ سُلْطَانٍ أَتَاهُمْ ۙ إِن فِي صُدُورِهِمْ إِلَّا كِبْرٌ مَّا هُم بِبَالِغِيهِ ۚ فَاسْتَعِذْ بِاللَّهِ ۖ إِنَّهُ هُوَ السَّمِيعُ الْبَصِيرُ ۝٥٦
📖 ಅನುವಾದ ಆಯತ್ 56
ಯಾರು ತಮ್ಮ ಬಳಿಗೆ ಬಂದ ಆಲ್ಲಾಹನ ದೃಷ್ಟಾಂತಗಳಲ್ಲಿ ಯಾವುದೇ ಆಧಾರವಿಲ್ಲದೆಯೇ ತರ್ಕಿಸುತ್ತಾರೋ ಅವರ ಹೃದಯಗಳಲ್ಲಿ ಅಹಂಕಾರವಿದೆ. ಅವರು ಅದರವರೆಗೆ ತಲುಪುವವರೇ ಅಲ್ಲ. ಆದ್ದರಿಂದ ನೀವು ಅಲ್ಲಾಹನಲ್ಲಿ ಅಭಯ ಯಾಚಿಸಿರಿ. ಖಂಡಿತವಾಗಿಯು ಅವನು ಸರ್ವವನ್ನಾಲಿಸುವವನು, ಎಲ್ಲವನ್ನೂ ನೋಡುವವನು ಆಗಿದ್ದಾನೆ.
لَخَلْقُ السَّمَاوَاتِ وَالْأَرْضِ أَكْبَرُ مِنْ خَلْقِ النَّاسِ وَلَٰكِنَّ أَكْثَرَ النَّاسِ لَا يَعْلَمُونَ ۝٥٧
📖 ಅನುವಾದ ಆಯತ್ 57
ಆಕಾಶಗಳ ಹಾಗು ಭೂಮಿಯ ಸೃಷ್ಟಿಯು ಮನುಷ್ಯರ ಸೃಷ್ಟಿಗಿಂತಲೂ ದೊಡ್ಡ ಕಾರ್ಯವಾಗಿದೆ, ಆದರೆ ಹೆಚ್ಚಿನ ಜನರು ಅರಿಯುವುದಿಲ್ಲ.
وَمَا يَسْتَوِي الْأَعْمَىٰ وَالْبَصِيرُ وَالَّذِينَ آمَنُوا وَعَمِلُوا الصَّالِحَاتِ وَلَا الْمُسِيءُ ۚ قَلِيلًا مَّا تَتَذَكَّرُونَ ۝٥٨
📖 ಅನುವಾದ ಆಯತ್ 58
ಅಂಧನು ಮತ್ತು ದೃಷ್ಟಿಯುಳ್ಳವನು ಸಮಾನರಾಗಲಾರರು. ಸತ್ಯವಿಶ್ವಾಸವಿರಿಸಿ ಸತ್ಕರ್ಮಗಳನ್ನು ಕೈಗೊಂಡವನೂ ಹಾಗೂ ದುಷ್ಕರ್ಮಗಳನ್ನೆಸಗುವವನೂ ಸಮಾನರಾಗಲಾರರು. ನೀವು ಅತ್ಯಲ್ಪವೇ ಉಪದೇಶ ಸ್ವೀಕರಿಸುತ್ತೀರಿ.
إِنَّ السَّاعَةَ لَآتِيَةٌ لَّا رَيْبَ فِيهَا وَلَٰكِنَّ أَكْثَرَ النَّاسِ لَا يُؤْمِنُونَ ۝٥٩
📖 ಅನುವಾದ ಆಯತ್ 59
ಖಂಡಿತವಾಗಿಯೂ, ಅಂತ್ಯಗಳಿಗೆಯು ಬರಲಿದೆ. ಅದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ ಹೆಚ್ಚಿನ ಜನರು ವಿಶ್ವಾಸವಿರಿಸುವುದಿಲ್ಲ.
وَقَالَ رَبُّكُمُ ادْعُونِي أَسْتَجِبْ لَكُمْ ۚ إِنَّ الَّذِينَ يَسْتَكْبِرُونَ عَنْ عِبَادَتِي سَيَدْخُلُونَ جَهَنَّمَ دَاخِرِينَ ۝٦٠
📖 ಅನುವಾದ ಆಯತ್ 60
ನಿಮ್ಮ ಪ್ರಭು ಹೇಳುತ್ತಾನೆ: ನನ್ನೊಂದಿಗೆ ಪ್ರಾರ್ಥಿಸಿರಿ ನಾನು ನಿಮ್ಮ ಪ್ರಾರ್ಥನೆಗೆ ಓಗೊಡುತ್ತೇನೆ. ಖಂಡಿತವಾಗಿಯು ಯಾರು ನನ್ನ ಆರಾಧನೆಯಿಂದ ಅಹಂಕಾರ ತೋರಿಸುವರೋ ಅವರು ಶೀಘ್ರವೇ ಅಪಮಾನಿತರಾಗಿ ನರಕವನ್ನು ಪ್ರವೇಶಿಸಲಿರುವರು.
اللَّهُ الَّذِي جَعَلَ لَكُمُ اللَّيْلَ لِتَسْكُنُوا فِيهِ وَالنَّهَارَ مُبْصِرًا ۚ إِنَّ اللَّهَ لَذُو فَضْلٍ عَلَى النَّاسِ وَلَٰكِنَّ أَكْثَرَ النَّاسِ لَا يَشْكُرُونَ ۝٦١
📖 ಅನುವಾದ ಆಯತ್ 61
ನೀವು ವಿಶ್ರಾಂತಿ ಪಡೆಯಲೆಂದು ನಿಮಗಾಗಿ ರಾತ್ರಿಯನ್ನುಂಟು ಮಾಡಿದವನು. ಹಾಗು ಹಗಲನ್ನು ಪ್ರಕಾಶಮಾನವನ್ನಾಗಿ ಮಾಡಿದವನು ಅಲ್ಲಾಹನಾಗಿರುವನು. ಖಂಡಿತವಾಗಿಯು ಅಲ್ಲಾಹನು ಜನರ ಮೇಲೆ ಅನುಗ್ರಹವುಳ್ಳವನಾಗಿದ್ದಾನೆ. ಆದರೆ ಜನರಲ್ಲಿ ಹೆಚ್ಚಿನವರು ಕೃತಜ್ಞತೆ ತೋರುವುದಿಲ್ಲ.
ذَٰلِكُمُ اللَّهُ رَبُّكُمْ خَالِقُ كُلِّ شَيْءٍ لَّا إِلَٰهَ إِلَّا هُوَ ۖ فَأَنَّىٰ تُؤْفَكُونَ ۝٦٢
📖 ಅನುವಾದ ಆಯತ್ 62
ಅವನೇ ನಿಮ್ಮ ಪ್ರಭು ಅಲ್ಲಾಹನು; ಪ್ರತಿಯೊಂದು ವಸ್ತುವಿನ ಸೃಪ್ಟಿಕರ್ತನಾಗಿರುವನು. ಅವನ ಹೊರತು ಅನ್ಯ ಆರಾಧ್ಯನಿಲ್ಲ. ಹೀಗಿರುವಾಗ ನೀವೆತ್ತ ಅಲೆದಾಡಿಸಲ್ಪಡುತ್ತಿರುವಿರಿ.
كَذَٰلِكَ يُؤْفَكُ الَّذِينَ كَانُوا بِآيَاتِ اللَّهِ يَجْحَدُونَ ۝٦٣
📖 ಅನುವಾದ ಆಯತ್ 63
ಇದೇ ರೀತಿ ಅಲ್ಲಾಹನ ದೃಷ್ಟಾಂತಗಳನ್ನು ನಿಷೇಧಿಸುತ್ತಿದ್ದವರೂ ದಾರಿತಪ್ಪಿಸಲಾಗುತ್ತಿದ್ದರು.
اللَّهُ الَّذِي جَعَلَ لَكُمُ الْأَرْضَ قَرَارًا وَالسَّمَاءَ بِنَاءً وَصَوَّرَكُمْ فَأَحْسَنَ صُوَرَكُمْ وَرَزَقَكُم مِّنَ الطَّيِّبَاتِ ۚ ذَٰلِكُمُ اللَّهُ رَبُّكُمْ ۖ فَتَبَارَكَ اللَّهُ رَبُّ الْعَالَمِينَ ۝٦٤
📖 ಅನುವಾದ ಆಯತ್ 64
ಅಲ್ಲಾಹನೆಂದರೇ ನಿಮಗೆ ಭೂಮಿಯನ್ನು ತಾಣವನ್ನಾಗಿ, ಆಕಾಶವನ್ನು ಮೇಲ್ಛಾವಣÉಯನ್ನಾಗಿ ಮಾಡಿದವನು ಮತ್ತು ನಿಮಗೆ ರೂಪವನ್ನು ಕೊಟ್ಟು ನಿಮ್ಮ ರೂಪವನ್ನು ಸುಂದರಗೊಳಿಸಿದನು. ಮತ್ತು ಪರಿಶುದ್ಧ ವಸ್ತುಗಳಿಂದ ನಿಮಗೆ ಆಹಾರ ನೀಡಿದವನು. ಅವನೇ ನಿಮ್ಮ ಪ್ರಭು ಅಲ್ಲಾಹನಾಗಿದ್ದಾನೆ. ಹಾಗೆಯೇ ಸರ್ವಲೋಕಗಳ ಪ್ರಭುವಾದ ಅಲ್ಲಾಹನು ಮಹಾ ಮಂಗಲಮಯನಾಗಿರುವನು.
هُوَ الْحَيُّ لَا إِلَٰهَ إِلَّا هُوَ فَادْعُوهُ مُخْلِصِينَ لَهُ الدِّينَ ۗ الْحَمْدُ لِلَّهِ رَبِّ الْعَالَمِينَ ۝٦٥
📖 ಅನುವಾದ ಆಯತ್ 65
ಅವನು ಚಿರಂತನನು. ಅವನ ಹೊರತು ಅನ್ಯ ಆರಾಧ್ಯನಿಲ್ಲ. ಆದ್ದರಿಂದ ನೀವು ಧರ್ಮವನ್ನು ಅವನಿಗೆ ಮೀಸಲಿಟ್ಟು ಅವನನ್ನೇ ಕರೆದು ಬೇಡಿರಿ. ಸರ್ವಸ್ತುತಿಯು ಸರ್ವಲೋಕಗಳ ಪ್ರಭುವಾದ ಅಲ್ಲಾಹನಿಗೇ ಮೀಸಲು.
۞ قُلْ إِنِّي نُهِيتُ أَنْ أَعْبُدَ الَّذِينَ تَدْعُونَ مِن دُونِ اللَّهِ لَمَّا جَاءَنِيَ الْبَيِّنَاتُ مِن رَّبِّي وَأُمِرْتُ أَنْ أُسْلِمَ لِرَبِّ الْعَالَمِينَ ۝٦٦
📖 ಅನುವಾದ ಆಯತ್ 66
ಓ ಪ್ರವಾದಿಯವರೇ ಹೇಳಿರಿ: ಅಲ್ಲಾಹನ ಹೊರತು ನೀವು ಕರೆದು ಬೇಡುತ್ತಿರುವವರನ್ನು ಆರಾಧಿಸುವುದರಿಂದ ನನ್ನನ್ನು ತಡೆಯಲಾಗಿದೆ. ನನ್ನ ಬಳಿ ಪ್ರಭುವಿನ ಸುಸ್ಪಷ್ಟ ಪುರಾವೆಗಳು ಬಂದಿರುವುದರಿAದ ನಾನು ಸರ್ವಲೋಕಗಳ ಪ್ರಭುವಿಗೆ ಶರಣಾಗಲು ನನಗೆ ಆಜ್ಞಾಪಿಸಲಾಗಿದೆ.
هُوَ الَّذِي خَلَقَكُم مِّن تُرَابٍ ثُمَّ مِن نُّطْفَةٍ ثُمَّ مِنْ عَلَقَةٍ ثُمَّ يُخْرِجُكُمْ طِفْلًا ثُمَّ لِتَبْلُغُوا أَشُدَّكُمْ ثُمَّ لِتَكُونُوا شُيُوخًا ۚ وَمِنكُم مَّن يُتَوَفَّىٰ مِن قَبْلُ ۖ وَلِتَبْلُغُوا أَجَلًا مُّسَمًّى وَلَعَلَّكُمْ تَعْقِلُونَ ۝٦٧
📖 ಅನುವಾದ ಆಯತ್ 67
ನಿಮ್ಮನ್ನು ಮಣ್ಣಿನಿಂದ ತರುವಾಯ ವೀರ್ಯದಿಂದ, ನಂತರ ರಕ್ತಪಿಂಡದಿAದ ಸೃಷ್ಟಿಸಿದವನು ಅವನೇ. ಅನಂತರ ಅವನು ನಿಮ್ಮನ್ನು ಒಂದು ಶಿಶುವಿನ ರೂಪದಲ್ಲಿ ಹೊರತರುತ್ತಾನೆ. ಆ ಬಳಿಕ ನೀವು ನಿಮ್ಮ ಪರಿಪೂರ್ಣ ಯೌವ್ವನಕ್ಕೆ ತಲುಪಲೆಂದೂ, ತರುವಾಯ ನೀವು ವೃದ್ಧರಾಗಲೆಂದೂ (ನಿಮ್ಮನ್ನು ಬೆಳೆಸುತ್ತಾನೆ). ನಿಮ್ಮ ಪೈಕಿ ಕೆಲವರು ಇದಕ್ಕೆ ಮೊದಲೇ ಮರಣ ಹೊಂದುತ್ತಾರೆ (ಇನ್ನು ಕೆಲವರನ್ನು ಉಳಿಸುತ್ತಾನೆ) ನಿಶ್ಚಿತಾವಧಿಯನ್ನು ತಲುಪಲೆಂದು ಬಹುಷಃ ನೀವು ಚಿಂತಿಸಿ ಗ್ರಹಿಸಲುಬಹುದು.
هُوَ الَّذِي يُحْيِي وَيُمِيتُ ۖ فَإِذَا قَضَىٰ أَمْرًا فَإِنَّمَا يَقُولُ لَهُ كُن فَيَكُونُ ۝٦٨
📖 ಅನುವಾದ ಆಯತ್ 68
ಅವನೇ ಜೀವಂತಗೊಳಿಸುವನು ಹಾಗೂ ಮರಣ ಕೊಡುವವನು. ಅವನು ಏನನ್ನಾದರೂ ತೀರ್ಮಾನಿಸಿದರೆ ಅದಕ್ಕೆ ಆಗು ಎಂದು ಮಾತ್ರ ಹೇಳುತ್ತಾನೆ. ಆಗಲೇ ಆದಾಗಿ ಬಿಡುತ್ತದೆ.
أَلَمْ تَرَ إِلَى الَّذِينَ يُجَادِلُونَ فِي آيَاتِ اللَّهِ أَنَّىٰ يُصْرَفُونَ ۝٦٩
📖 ಅನುವಾದ ಆಯತ್ 69
ಅಲ್ಲಾಹನ ದೃಷ್ಟಾಂತಗಳಲ್ಲಿ ತರ್ಕಿಸುತ್ತಿರುವವರೆಡೆಗೆ ನೀವು ನೋಡಲಿಲ್ಲವೇ? ಅವರೆತ್ತ ತಿರುಗಿಸಲಾಗುತ್ತಿದ್ದಾರೆ?
الَّذِينَ كَذَّبُوا بِالْكِتَابِ وَبِمَا أَرْسَلْنَا بِهِ رُسُلَنَا ۖ فَسَوْفَ يَعْلَمُونَ ۝٧٠
📖 ಅನುವಾದ ಆಯತ್ 70
ಅವರು ಕುರ್‌ಆನನ್ನು ಮತ್ತು ನಾವು ನಮ್ಮ ಸಂದೇಶವಾಹಕರೊAದಿಗೆ ಕಳುಹಿಸಿರುವ ಎಲ್ಲಾ ಗ್ರಂಥಗಳನ್ನು ಸುಳ್ಳಾಗಿಸುತ್ತಾರೆ. ಸದ್ಯವೇ ಇವರು ಅರಿಯಲಿದ್ದಾರೆ.
إِذِ الْأَغْلَالُ فِي أَعْنَاقِهِمْ وَالسَّلَاسِلُ يُسْحَبُونَ ۝٧١
📖 ಅನುವಾದ ಆಯತ್ 71
ಅವರ ಕೊರಳುಗಳಲ್ಲಿ ಕಂಠಕಡಗಗಳು ಮತ್ತು ಸಂಕೋಲೆಗಳು ಇದ್ದು.
فِي الْحَمِيمِ ثُمَّ فِي النَّارِ يُسْجَرُونَ ۝٧٢
📖 ಅನುವಾದ ಆಯತ್ 72
ಅವರು ಕುದಿಯುವ ನೀರಿನಲ್ಲಿ ಎಳೆದೊಯ್ಯಲಾಗುವರು ಬಳಿಕ ಅವರು ನರಕಾಗ್ನಿಯಲ್ಲಿ ಸುಡಲಾಗುವರು.
ثُمَّ قِيلَ لَهُمْ أَيْنَ مَا كُنتُمْ تُشْرِكُونَ ۝٧٣
📖 ಅನುವಾದ ಆಯತ್ 73
ನಂತರ ಅವರೊಡನೆ: ನೀವು ಅಲ್ಲಾಹನ ಹೊರತು ಸಹಭಾಗಿಗಳನ್ನಾಗಿ ನಿಶ್ಚಯಿಸುತ್ತಿದ್ದವರೆಲ್ಲಾ ಎಲ್ಲಿದ್ದಾರೆ? ಎಂದು ಕೇಳಲಾಗುವುದು.
مِن دُونِ اللَّهِ ۖ قَالُوا ضَلُّوا عَنَّا بَل لَّمْ نَكُن نَّدْعُو مِن قَبْلُ شَيْئًا ۚ كَذَٰلِكَ يُضِلُّ اللَّهُ الْكَافِرِينَ ۝٧٤
📖 ಅನುವಾದ ಆಯತ್ 74
ಅವರು ಹೇಳುವರು: ಅವರು ನಮ್ಮಿಂದ ಕಣ್ಮರೆಯಾಗಿದ್ದಾರೆ. ಮಾತ್ರವಲ್ಲ. ಇದಕ್ಕೆ ಮೊದಲು ನಾವು ಯಾರನ್ನೂ ಕರೆದು ಬೇಡುತ್ತಿರಲಿಲ್ಲ. ಇದೇ ರೀತಿ ಅಲ್ಲಾಹನು ಸತ್ಯನಿಷೇಧಿಗಳನ್ನು ದಾರಿಗೆಡಿಸುತ್ತಾನೆ.
ذَٰلِكُم بِمَا كُنتُمْ تَفْرَحُونَ فِي الْأَرْضِ بِغَيْرِ الْحَقِّ وَبِمَا كُنتُمْ تَمْرَحُونَ ۝٧٥
📖 ಅನುವಾದ ಆಯತ್ 75
ಇದು ನೀವು ಭೂಮಿಯಲ್ಲಿ ಅನ್ಯಾಯವಾಗಿ ಹಿಗ್ಗುತ್ತಿದ್ದುದರ ಹಾಗೂ ದರ್ಪತೋರುತ್ತಿದ್ದುದ್ದರ ಪ್ರತಿಫಲವಾಗಿದೆ.
ادْخُلُوا أَبْوَابَ جَهَنَّمَ خَالِدِينَ فِيهَا ۖ فَبِئْسَ مَثْوَى الْمُتَكَبِّرِينَ ۝٧٦
📖 ಅನುವಾದ ಆಯತ್ 76
ನೀವು ನರಕದ ದ್ವಾರಗಳಲ್ಲಿ ಶಾಶ್ವತವಾಗಿ ನೆಲೆಸಲೆಂದು ಪ್ರವೇಶಿಸಿರಿ. ಅಹಂಕಾರಿಗಳ ನೆಲೆಯು ಅದೆಷ್ಟು ಕೆಟ್ಟದು!
فَاصْبِرْ إِنَّ وَعْدَ اللَّهِ حَقٌّ ۚ فَإِمَّا نُرِيَنَّكَ بَعْضَ الَّذِي نَعِدُهُمْ أَوْ نَتَوَفَّيَنَّكَ فَإِلَيْنَا يُرْجَعُونَ ۝٧٧
📖 ಅನುವಾದ ಆಯತ್ 77
ಆದುದರಿಂದ ನೀವು ತಾಳ್ಮೆವಹಿಸಿರಿ: ಅಲ್ಲಾಹನ ವಾಗ್ದಾನವು ಖಂಡಿತ ಸತ್ಯವಾಗಿದೆ. ನಾವು ಅವರಿಗೆ ಎಚ್ಚರಿಕೆ ನೀಡುತ್ತಿರುವಂತಹ ಶಿಕ್ಷೆಗಳಲ್ಲಿ ಕೆಲವನ್ನು ನಿಮಗೆ ತೋರಿಸಿಕೊಡಬಹುದು ಇಲ್ಲವೇ ನಿಮ್ಮನ್ನು ಮರಣಗೊಳಿಸಲೂ ಬಹುದು. ಅವರು ನಮ್ಮೆಡೆಗೇ ಮರಳಿಸಲಾಗುವರು.
وَلَقَدْ أَرْسَلْنَا رُسُلًا مِّن قَبْلِكَ مِنْهُم مَّن قَصَصْنَا عَلَيْكَ وَمِنْهُم مَّن لَّمْ نَقْصُصْ عَلَيْكَ ۗ وَمَا كَانَ لِرَسُولٍ أَن يَأْتِيَ بِآيَةٍ إِلَّا بِإِذْنِ اللَّهِ ۚ فَإِذَا جَاءَ أَمْرُ اللَّهِ قُضِيَ بِالْحَقِّ وَخَسِرَ هُنَالِكَ الْمُبْطِلُونَ ۝٧٨
📖 ಅನುವಾದ ಆಯತ್ 78
ನಿಶ್ಚಯವಾಗಿಯೂ ನಾವು ನಿಮಗಿಂತ ಮೊದಲು ಅನೇಕ ಸಂದೇಶವಾಹಕರನ್ನು ಕಳುಹಿಸಿದ್ದೇವೆ. ಅವರ ಪೈಕಿ ಕೆಲವರ ವೃತ್ತಾಂತಗಳನ್ನು ನಿಮಗೆ ವಿವರಿಸಿಕೊಟ್ಟಿರು ತ್ತೇವೆ ಇನ್ನು ಕೆಲವರ ವೃತ್ತಾಂತಗಳನ್ನು ನಿಮಗೆ ನಾವು ವಿವರಿಸಿಲ್ಲ. ಅಲ್ಲಾಹನ ಅಪ್ಪಣೆ ಇಲ್ಲದೆ ಯಾವೊಬ್ಬ ಸಂದೇಶವಾಹಕನು ಯಾವ ದೃಷ್ಟಾಂತವನ್ನು ತರಲಾರನು. ಅನಂತರ ಅಲ್ಲಾಹನ ಆದೇಶ ಬಂದರೆ ಸತ್ಯದೊಂದಿಗೆ ತೀರ್ಮಾನ ಮಾಡಲಾಗುವುದು. ಅಲ್ಲಿ ಮಿಥ್ಯವಾದಿಗಳು ನಷ್ಟದಲ್ಲಿರುವರು.
اللَّهُ الَّذِي جَعَلَ لَكُمُ الْأَنْعَامَ لِتَرْكَبُوا مِنْهَا وَمِنْهَا تَأْكُلُونَ ۝٧٩
📖 ಅನುವಾದ ಆಯತ್ 79
ನಿಮಗಾಗಿ ಜಾನುವಾರುಗಳನ್ನು ಉಂಟು ಮಾಡಿದವನು ಅಲ್ಲಾಹನಾಗಿರುವನು. ಅವುಗಳಲ್ಲಿ ಕೆಲವೊಂದರ ಮೇಲೆ ನೀವು ಸವಾರಿ ಮಾಡುತ್ತೀರಿ ಮತ್ತು ಅವುಗಳಿಂದ ಕೆಲವೊಂದನ್ನು ನೀವು ತಿನ್ನುತ್ತೀರಿ.
وَلَكُمْ فِيهَا مَنَافِعُ وَلِتَبْلُغُوا عَلَيْهَا حَاجَةً فِي صُدُورِكُمْ وَعَلَيْهَا وَعَلَى الْفُلْكِ تُحْمَلُونَ ۝٨٠
📖 ಅನುವಾದ ಆಯತ್ 80
ಮತ್ತು ಅವುಗಳಲ್ಲಿ ನಿಮಗೆ ಇನ್ನೂ ಅನೇಕ ಪ್ರಯೋಜನಗಳಿವೆ ಇದು ನೀವು ನಿಮ್ಮ ಮನಗಳಲ್ಲಿರುವ ಅಗತ್ಯಗಳನ್ನು ಅವುಗಳ ಮೇಲೆ ಸಂಚರಿಸಿ ಪೂರೈಸಲೆಂದಾಗಿದೆ. ಆ ಜಾನುವಾರುಗಳ ಮೇಲೂ ಮತ್ತು ಹಡಗಿನ ಮೇಲೂ ನಿಮ್ಮನ್ನು ಒಯ್ಯಲಾಗುತ್ತದೆ.
وَيُرِيكُمْ آيَاتِهِ فَأَيَّ آيَاتِ اللَّهِ تُنكِرُونَ ۝٨١
📖 ಅನುವಾದ ಆಯತ್ 81
ಅಲ್ಲಾಹನು ನಿಮಗೆ ತನ್ನ ದೃಷ್ಟಾಂತಗಳನ್ನು ತೋರಿಸುತ್ತಾನೆ. ಇನ್ನು ನೀವು ಅಲ್ಲಾಹನ ಯಾವೆಲ್ಲ ದೃಷ್ಟಾಂತಗಳನ್ನು ನಿರಾಕರಿಸುವಿರಿ?
أَفَلَمْ يَسِيرُوا فِي الْأَرْضِ فَيَنظُرُوا كَيْفَ كَانَ عَاقِبَةُ الَّذِينَ مِن قَبْلِهِمْ ۚ كَانُوا أَكْثَرَ مِنْهُمْ وَأَشَدَّ قُوَّةً وَآثَارًا فِي الْأَرْضِ فَمَا أَغْنَىٰ عَنْهُم مَّا كَانُوا يَكْسِبُونَ ۝٨٢
📖 ಅನುವಾದ ಆಯತ್ 82
ಅವರು ಭೂಮಿಯಲ್ಲಿ ಸಂಚರಿಸಿ ತಮಗಿಂತ ಮುಂಚಿನವರ ಪರಿಣಾಮವು ಹೇಗಾಯಿತೆಂಬುದನ್ನು ನೋಡಲಿಲ್ಲವೇ? ಅವರು ಇವರಿಗಿಂತ ಹೆಚ್ಚು ಸಂಖ್ಯೆಯುಳ್ಳವರು. ಶಕ್ತಿ ಸಾಮರ್ಥ್ಯದಲ್ಲಿ ಬಲಿಷ್ಠರು ಮತ್ತು ಭೂಮಿಯಲ್ಲಿ ಅನೇಕ ಸ್ಮಾರಕಗಳನ್ನು ಬಿಟ್ಟು ಹೋದವರಾಗಿದ್ದರು. ಅವರು ಮಾಡಿದ ಕಾರ್ಯಗಳು ಅವರಿಗೆ ಯಾವ ಪ್ರಯೋಜನವನ್ನೂ ನೀಡಲಿಲ್ಲ.
فَلَمَّا جَاءَتْهُمْ رُسُلُهُم بِالْبَيِّنَاتِ فَرِحُوا بِمَا عِندَهُم مِّنَ الْعِلْمِ وَحَاقَ بِهِم مَّا كَانُوا بِهِ يَسْتَهْزِئُونَ ۝٨٣
📖 ಅನುವಾದ ಆಯತ್ 83
ಕೊನೆಗೆ ಅವರ ಬಳಿಗೆ ಅವರ ಸಂದೇಶವಾಹಕರು ಸುಸ್ಪಷ್ಟ ಪುರಾವೆಗಳೊಂದಿಗೆ ಬಂದಾಗ ತಮ್ಮ ಬಳಿಯಿದ್ದ ಜ್ಞಾನದಲ್ಲೇ ಅವರು ಹೆಮ್ಮೆ ಪಡುತ್ತಿದ್ದರು ಮತ್ತು ಅವರು ಯಾವುದನ್ನು ಪರಿಹಾಸ್ಯ ಮಾಡುತ್ತಿದ್ದರೋ ಅದುವೇ ಅವರನ್ನು ಸುತ್ತುವರಿದು ಬಿಟ್ಟಿತು.
فَلَمَّا رَأَوْا بَأْسَنَا قَالُوا آمَنَّا بِاللَّهِ وَحْدَهُ وَكَفَرْنَا بِمَا كُنَّا بِهِ مُشْرِكِينَ ۝٨٤
📖 ಅನುವಾದ ಆಯತ್ 84
ಅವರು ನಮ್ಮ ಶಿಕ್ಷೆಯನ್ನು ಕಂಡಾಗ ನಾವು ಏಕೈಕ ಅಲ್ಲಾಹನಲ್ಲಿ ವಿಶ್ವಾಸವಿರಿಸಿದೆವು. ಮತ್ತು ಅವನಿಗೆ ಸಹಭಾಗಿಗಳನ್ನಾಗಿ ನಿಶ್ಚಯಿಸುತ್ತಿದ್ದ ದೇವರುಗಳನ್ನು ನಿರಾಕರಿಸಿಬಿಟ್ಟೆವು ಎಂದು ಹೇಳತೊಡಗಿದರು.
فَلَمْ يَكُ يَنفَعُهُمْ إِيمَانُهُمْ لَمَّا رَأَوْا بَأْسَنَا ۖ سُنَّتَ اللَّهِ الَّتِي قَدْ خَلَتْ فِي عِبَادِهِ ۖ وَخَسِرَ هُنَالِكَ الْكَافِرُونَ ۝٨٥
📖 ಅನುವಾದ ಆಯತ್ 85
ಆದರೆ ಅವರು ನಮ್ಮ ಶಿಕ್ಷೆಯನ್ನು ಕಂಡ ಬಳಿಕ ಅವರ ವಿಶ್ವಾಸವು ಅವರಿಗೆ ಯಾವ ಪ್ರಯೋಜನವನ್ನೂ ನೀಡಲಿಲ್ಲ. ಇದು ಅಲ್ಲಾಹನು ತನ್ನ ದಾಸರ ವಿಚಾರದಲ್ಲಿ ಮೊದಲಿನಿಂದಲೇ ಜಾರಿಯಲ್ಲಿರಿಸಿದ್ದ. ಒಂದು ನಿಶ್ಚಿತ ಸಂಪ್ರದಾಯವಾಗಿತ್ತು ಮತ್ತು ಅಲ್ಲಿ ಸತ್ಯನಿಷೇಧಿಗಳು ನಷ್ಟ ಹೊಂದಿದವರಾದರು.
← 39 ಗಾಫಿರ್ (40/114) 41 →
ಓದಿ ಸೂರಾ ಗಾಫಿರ್ ಕನ್ನಡ ಅನುವಾದ – ಪಠಣ ಮತ್ತು ಆಡಿಯೋ

40غافر Ghafir 📚 85 ಆಯತ್ مكية

ಆಯತ್‌ವಾರು – ಸೂರಾ ಗಾಫಿರ್ — 85 ಆಯತ್




ಪವಿತ್ರ ಕುರಾನ್


Tuesday, September 8, 2026

Don't forget us in your sincere prayers