ಸೂರಾ ಸಾದ್ ಅರೇಬಿಕ್ ಮತ್ತು ಕನ್ನಡ
ಸೂರಾ ಸಾದ್ ಸಂಪೂರ್ಣ ಕನ್ನಡ ಅನುವಾದ, ಉಚ್ಚಾರಣೆ ಮತ್ತು ಆಡಿಯೋ ಪಠಣದೊಂದಿಗೆ ಓದಿ. ಪ್ರತಿ ಆಯತ್‌ನ ಅರ್ಥ. (88 ಆಯತ್ — مكية). ಸಾದ್ ಆಲಿಸಿ, ಸಾದ್ ಅನುವಾದ, ಸಾದ್ mp3, ಸಾದ್ pdf.ಸೂರಾ ಸಾದ್ ಓದಿ ಮತ್ತು ಆಲಿಸಿ
🎧 ಆಯತ್
M
Mishary Rashid Alafasy
✓
Mishary Rashid Alafasy
✓
M
Mahmoud Khalil Al-Husary
✓
Mahmoud Khalil Al-Husary
✓
A
Abdurrahman As-Sudais
✓
Abdurrahman As-Sudais
✓
M
Mohamed Siddiq Al-Minshawi
✓
Mohamed Siddiq Al-Minshawi
✓
A
Abdul Basit Abdul Samad
✓
Abdul Basit Abdul Samad
✓
A
Ali Al-Hudhaify
✓
Ali Al-Hudhaify
✓
A
Ahmed ibn Ali al-Ajamy
✓
Ahmed ibn Ali al-Ajamy
✓
A
Abu Bakr Ash-Shaatree
✓
Abu Bakr Ash-Shaatree
✓
M
Muhammad Ayyoub
✓
Muhammad Ayyoub
✓
A
Abdullah Basfar
✓
Abdullah Basfar
✓
A
Abdullah Al-Juhani
✓
Abdullah Al-Juhani
✓
M
Maher Al Muaiqly
✓
Maher Al Muaiqly
✓
—
x1
بَلِ الَّذِينَ كَفَرُوا فِي عِزَّةٍ وَشِقَاقٍ ٢
📖 ಅನುವಾದ
ಆಯತ್ 2
ಆದರೆ, ಸತ್ಯನಿಷೇಧಿಗಳು ದುರಹಂಕಾರದಲ್ಲಿ ಮತ್ತು ವಿರೋಧದಲ್ಲಿ ತಲ್ಲೀನರಾಗಿರುವರು.
كَمْ أَهْلَكْنَا مِن قَبْلِهِم مِّن قَرْنٍ فَنَادَوا وَّلَاتَ حِينَ مَنَاصٍ ٣
📖 ಅನುವಾದ
ಆಯತ್ 3
ಇವರಿಗಿಂತ ಮೊದಲು ಅದೆಷ್ಟೊ ಜನಾಂಗಗಳನ್ನು ನಾವು ನಾಶ ಮಾಡಿರುತ್ತೇವೆ. ವಸ್ತುತಃ ಅವರು ಮೊರೆಯಿಟ್ಟಿದ್ದರು. ಆದರೆ ಅದು ರಕ್ಷಣೆಯ ಸಂದರ್ಭವಾಗಿರಲಿಲ್ಲ.
وَعَجِبُوا أَن جَاءَهُم مُّنذِرٌ مِّنْهُمْ ۖ وَقَالَ الْكَافِرُونَ هَٰذَا سَاحِرٌ كَذَّابٌ ٤
📖 ಅನುವಾದ
ಆಯತ್ 4
ಮತ್ತು ಇವರಿಂದಲೇ ಆದ ಒಬ್ಬ ಮುನ್ನೆಚ್ಚರಿಕೆಗಾರನು ಇವರ ಬಳಿ ಬಂದಿರುವನೆAದು ಇವರು ಆಶ್ಚರ್ಯಪಡುತ್ತಾರೆ. ಹಾಗೂ ಸತ್ಯನಿಷೇಧಿಗಳು ಇವನೊಬ್ಬ ಮಹಾ ಜಾದುಗಾರನೂ, ಸುಳ್ಳುಗಾರನೂ ಆಗಿದ್ದಾನೆಂದು ಹೇಳುತ್ತಾರೆ.
أَجَعَلَ الْآلِهَةَ إِلَٰهًا وَاحِدًا ۖ إِنَّ هَٰذَا لَشَيْءٌ عُجَابٌ ٥
📖 ಅನುವಾದ
ಆಯತ್ 5
ಇವನು ಎಲ್ಲಾ ದೇವರುಗಳ ಸ್ಥಾನದಲ್ಲಿ ಒಂದೇ ಆರಾಧ್ಯನನ್ನಾಗಿ ಮಾಡಿಬಿಟ್ಟಿರುವನೇ? ನಿಜವಾಗಿಯು ಇದೊಂದು ವಿಚಿತ್ರ ಸಂಗತಿಯಾಗಿದೆ.
وَانطَلَقَ الْمَلَأُ مِنْهُمْ أَنِ امْشُوا وَاصْبِرُوا عَلَىٰ آلِهَتِكُمْ ۖ إِنَّ هَٰذَا لَشَيْءٌ يُرَادُ ٦
📖 ಅನುವಾದ
ಆಯತ್ 6
ಮತ್ತು ಅವರ ಮುಖಂಡರು ಹೀಗೆ ಹೇಳುತ್ತಾ ನಡೆದರು: ನಡೆಯಿರಿ ಹಾಗೂ ನಿಮ್ಮ ಆರಾಧ್ಯರ ಆರಾಧನೆಯಲ್ಲೇ ಸ್ಥಿರವಾಗಿರಿ ನಿಜವಾಗಿಯು ಇದು ಉದ್ದೇಶಪೂರ್ವಕವಾಗಿ ಮಾಡಲಾಗುತ್ತಿರುವ ಸಂಗತಿಯಾಗಿದೆ.
مَا سَمِعْنَا بِهَٰذَا فِي الْمِلَّةِ الْآخِرَةِ إِنْ هَٰذَا إِلَّا اخْتِلَاقٌ ٧
📖 ಅನುವಾದ
ಆಯತ್ 7
ನಾವು ಇತರ ಧರ್ಮಗಳಲ್ಲಿ ಇಂತಹ ಮಾತನ್ನು ಕೇಳಲಿಲ್ಲ. ಇದು ಕೃತಕ ಸೃಷ್ಟಿಯಾಗಿದೆ.
أَأُنزِلَ عَلَيْهِ الذِّكْرُ مِن بَيْنِنَا ۚ بَلْ هُمْ فِي شَكٍّ مِّن ذِكْرِي ۖ بَل لَّمَّا يَذُوقُوا عَذَابِ ٨
📖 ಅನುವಾದ
ಆಯತ್ 8
ಏನೂ ನಮ್ಮ ನಡುವೆ ಕೇವಲ ಇವನ ಮೇಲೆಯೇ ಬೋಧನೆಯು ಅವತೀರ್ಣಗೊಂಡಿತೇ? ವಾಸ್ತವದಲ್ಲಿ ನಮ್ಮ ವಾಣಿಯಕುರಿತು ಇವರು ಸಂದೇಹದಲ್ಲಿದ್ದಾರೆ ಅಲ್ಲ! ವಾಸ್ತವದಲ್ಲಿ ಇವರು ಇಷ್ಟರವರೆಗೆ ನನ್ನ ಯಾತನೆಯನ್ನು ಸವಿದಿಲ್ಲ.
أَمْ عِندَهُمْ خَزَائِنُ رَحْمَةِ رَبِّكَ الْعَزِيزِ الْوَهَّابِ ٩
📖 ಅನುವಾದ
ಆಯತ್ 9
ಅಥವಾ ಪ್ರಚಂಡನೂ, ಮಹಾದಾನಶೀಲನೂ ಆದ ನಿಮ್ಮ ಪ್ರಭುವಿನ ಕಾರುಣ್ಯದ ಭಂಡಾರಗಳೇನಾದರೂ ಇವರ ಬಳಿ ಇವೆಯೇ ?
أَمْ لَهُم مُّلْكُ السَّمَاوَاتِ وَالْأَرْضِ وَمَا بَيْنَهُمَا ۖ فَلْيَرْتَقُوا فِي الْأَسْبَابِ ١٠
📖 ಅನುವಾದ
ಆಯತ್ 10
ಅಥವಾ ಅವರಿಗೆ ಆಕಾಶಗಳ, ಭೂಮಿಯ ಹಾಗೂ ಅವೆರಡರ ಮಧ್ಯೆಯಿರುವುದರ ಅಧಿಪತ್ಯ ಇದೆಯೇ ? ಹಾಗಿದ್ದರೆ ಅವರು ಆ ಮಾರ್ಗಗಳ ಮೂಲಕ (ಆಕಾಶಗಳ ಉನ್ನತಕ್ಕೆ) ಏರಿ ಹೋಗಲಿ.
جُندٌ مَّا هُنَالِكَ مَهْزُومٌ مِّنَ الْأَحْزَابِ ١١
📖 ಅನುವಾದ
ಆಯತ್ 11
ಇದು ಸೋತ ಸÉÊನ್ಯಗಳ ಪÉÊಕಿ ಒಂದು ಚಿಕ್ಕ ಸÉÊನ್ಯವಾಗಿದ್ದು ಸೋಲಿಸಲ್ಪಡಲಿದೆ.
كَذَّبَتْ قَبْلَهُمْ قَوْمُ نُوحٍ وَعَادٌ وَفِرْعَوْنُ ذُو الْأَوْتَادِ ١٢
📖 ಅನುವಾದ
ಆಯತ್ 12
ಇವರಿಗಿಂತ ಮೊದಲು ನೂಹರ ಜನಾಂಗ, ಆದ್ ಹಾಗೂ ಮೊಳೆಗಳವನಾದ ಫಿರ್‌ಔನ್ ಸುಳ್ಳಾಗಿಸಿದ್ದರು.
وَثَمُودُ وَقَوْمُ لُوطٍ وَأَصْحَابُ الْأَيْكَةِ ۚ أُولَٰئِكَ الْأَحْزَابُ ١٣
📖 ಅನುವಾದ
ಆಯತ್ 13
ಮತ್ತು ಸಮೂದರ, ಲೂತರ ಜನಾಂಗ ಹಾಗೂ ಐಕಾ ನಿವಾಸಿಗಳೂ ಸುಳ್ಳಾಗಿಸಿದ್ದರು. ಇವು (ಮಹಾ) ಪಡೆಗಳಾಗಿದ್ದವು.
إِن كُلٌّ إِلَّا كَذَّبَ الرُّسُلَ فَحَقَّ عِقَابِ ١٤
📖 ಅನುವಾದ
ಆಯತ್ 14
ಇವರ ಪÉÊಕಿ ಪ್ರತಿಯೊಬ್ಬರೂ ಸಂದೇಶವಾಹಕರನ್ನು ಸುಳ್ಳಾಗಿಸಿದ್ದರು. ಆಗ ನನ್ನ ಶಿಕÉ್ಷಯು ಅವರ ಮೇಲೆ ಸ್ಧಿರವಾಗಿಬಿಟ್ಟಿತು.
وَمَا يَنظُرُ هَٰؤُلَاءِ إِلَّا صَيْحَةً وَاحِدَةً مَّا لَهَا مِن فَوَاقٍ ١٥
📖 ಅನುವಾದ
ಆಯತ್ 15
ಅವರು ಒಂದು ಘೋರ ಆರ್ಭಟವನ್ನು ನಿರೀಕ್ಷಿಸುತ್ತಿದ್ದಾರೆ. ಅದಕ್ಕೆ ಕಾಲಾವಕಾಶ ಇರದು.
وَقَالُوا رَبَّنَا عَجِّل لَّنَا قِطَّنَا قَبْلَ يَوْمِ الْحِسَابِ ١٦
📖 ಅನುವಾದ
ಆಯತ್ 16
ಮತ್ತು ಅವರು ಹೇಳುತ್ತಾರೆ: ನಮ್ಮ ಪ್ರಭು, ವಿಚಾರಣಾ ದಿನಕ್ಕೆ ಮೊದಲೇ ನಮಗೆ ನಮ್ಮ ಶಿಕ್ಷೆಯ ಪಾಲನ್ನು ನೀಡಿಬಿಡು.
اصْبِرْ عَلَىٰ مَا يَقُولُونَ وَاذْكُرْ عَبْدَنَا دَاوُودَ ذَا الْأَيْدِ ۖ إِنَّهُ أَوَّابٌ ١٧
📖 ಅನುವಾದ
ಆಯತ್ 17
ಓ ಪ್ರವಾದಿ, ನೀವು ಇವರ ಮಾತುಗಳ ಮೇಲೆ ಸಹನೆ ವಹಿಸಿರಿ ಹಾಗೂ ಮಹಾ ಬಲಿಷ್ಠರಾಗಿದ್ದ ನಮ್ಮ ದಾಸ ದಾವೂದರನ್ನು ಸ್ಮರಿಸಿರಿ. ನಿಜವಾಗಿಯು ಅವರು ಅತ್ಯಧಿಕ (ಅಲ್ಲಾಹನೆಡೆಗೆ) ಪಶ್ಚಾತಾಪ ಪಟ್ಟು ಮರಳುವವರಾಗಿದ್ದರು.
إِنَّا سَخَّرْنَا الْجِبَالَ مَعَهُ يُسَبِّحْنَ بِالْعَشِيِّ وَالْإِشْرَاقِ ١٨
📖 ಅನುವಾದ
ಆಯತ್ 18
ಅವರೊಂದಿಗೆ ಸಂಜೆ ಮುಂಜಾನೆಯಲ್ಲಿ ಪಾವಿತ್ರö್ಯವನ್ನು ಸ್ತುತಿಸಲಿಕ್ಕಾಗಿ ನಾವು ಪರ್ವತಗಳನ್ನು ನಿಯಂತ್ರಿಸಿ ಕೊಟ್ಟಿದ್ದೆವು.
وَالطَّيْرَ مَحْشُورَةً ۖ كُلٌّ لَّهُ أَوَّابٌ ١٩
📖 ಅನುವಾದ
ಆಯತ್ 19
ಮತ್ತು ಪಕ್ಷಿಗಳೂ ಅವರ ಸುತ್ತಲೂ ಒಟ್ಟಾಗಿ ಸೇರುತ್ತಿದ್ದವು ಮತ್ತು ಅವೆಲ್ಲವೂ ಅವರಿಗೆ ವಿಧೇಯವಾಗಿದ್ದವು.
وَشَدَدْنَا مُلْكَهُ وَآتَيْنَاهُ الْحِكْمَةَ وَفَصْلَ الْخِطَابِ ٢٠
📖 ಅನುವಾದ
ಆಯತ್ 20
ಮತ್ತು ನಾವು ಅವರ ಸಾಮ್ರಾಜ್ಯವನ್ನು ಬಲಪಡಿಸಿದ್ದೆವು ಹಾಗೂ ಅವರಿಗೆ ಸುಜ್ಞಾನವನ್ನು ನಿರ್ಣಾಯಕವಾಗಿ ಮಾತನಾಡುವ ಸಾಮರ್ಥ್ಯವನ್ನು ದಯಪಾಲಿಸಿದ್ದೆವು.
۞ وَهَلْ أَتَاكَ نَبَأُ الْخَصْمِ إِذْ تَسَوَّرُوا الْمِحْرَابَ ٢١
📖 ಅನುವಾದ
ಆಯತ್ 21
ಗೋಡೆಯನ್ನೇರಿ ಅವರ ಆರಾಧನಾ ಕೊಠಡಿಗೆ ಬಂದAತಹ ಆ ವ್ಯಾಜ್ಯಗಾರರ ಸುದ್ದಿಯು ನಿಮಗೆ ತಲುಪಿದೆಯೇ ?
إِذْ دَخَلُوا عَلَىٰ دَاوُودَ فَفَزِعَ مِنْهُمْ ۖ قَالُوا لَا تَخَفْ ۖ خَصْمَانِ بَغَىٰ بَعْضُنَا عَلَىٰ بَعْضٍ فَاحْكُم بَيْنَنَا بِالْحَقِّ وَلَا تُشْطِطْ وَاهْدِنَا إِلَىٰ سَوَاءِ الصِّرَاطِ ٢٢
📖 ಅನುವಾದ
ಆಯತ್ 22
ಅವರು ದಾವೂದರ ಬಳಿಗೆ ಬಂದಾಗ ದಾವೂದರು ಅವರನ್ನು ಕಂಡು ಭಯಪಟ್ಟರು. ಆಗ ಅವರು ಹೇಳಿದರು: ಹೆದರಬೇಡಿರಿ. ನಾವು ಎರಡು ಕಕ್ಷಿದಾರರಾಗಿದ್ದೇವೆ. ನಮ್ಮಲ್ಲಿ ಒಬ್ಬನು ಇನ್ನೊಬ್ಬನ ಮೇಲೆ ಅತಿಕ್ರಮತೋರಿದ್ದಾನೆ. ಇನ್ನು ನೀವು ನ್ಯಾಯದೊಂದಿಗೆ ನಮ್ಮ ನಡುವೆ ತೀರ್ಮಾನ ಮಾಡಿರಿ ಮತ್ತು ಅನ್ಯಾಯ ಮಾಡಬೇಡಿರಿ ಮತ್ತು ನಮ್ಮನ್ನು ನೇರ ಮಾರ್ಗಕ್ಕೆ ಮುನ್ನಡೆಸಿರಿ.
إِنَّ هَٰذَا أَخِي لَهُ تِسْعٌ وَتِسْعُونَ نَعْجَةً وَلِيَ نَعْجَةٌ وَاحِدَةٌ فَقَالَ أَكْفِلْنِيهَا وَعَزَّنِي فِي الْخِطَابِ ٢٣
📖 ಅನುವಾದ
ಆಯತ್ 23
(ಕೇಳಿರಿ) ಇವನು ನನ್ನ ಸಹೋದರನು. ಇವನ ಬಳಿ ತೊಂಬತ್ತೊAಬತ್ತು ಕುರಿಗಳಿವೆ ಮತ್ತು ನನ್ನ ಬಳಿ ಒಂದೇ ಒಂದು ಕುರಿ ಇದೆ. ಆದರೆ ಇವನು ನಿನ್ನ ಈ ಒಂದನ್ನು ಸಹ ನನಗೆ ಒಪ್ಪಿಸಿ ಬಿಡು ಎಂದು ನನ್ನೊಂದಿಗೆ ಹೇಳುತ್ತಾನೆ ಮತ್ತು ಇವನು ವಾಗ್ವಾದದಲ್ಲಿ ನನ್ನನ್ನು ಸೋಲಿಸಿದ್ದಾನೆ.
قَالَ لَقَدْ ظَلَمَكَ بِسُؤَالِ نَعْجَتِكَ إِلَىٰ نِعَاجِهِ ۖ وَإِنَّ كَثِيرًا مِّنَ الْخُلَطَاءِ لَيَبْغِي بَعْضُهُمْ عَلَىٰ بَعْضٍ إِلَّا الَّذِينَ آمَنُوا وَعَمِلُوا الصَّالِحَاتِ وَقَلِيلٌ مَّا هُمْ ۗ وَظَنَّ دَاوُودُ أَنَّمَا فَتَنَّاهُ فَاسْتَغْفَرَ رَبَّهُ وَخَرَّ رَاكِعًا وَأَنَابَ ۩ ٢٤
📖 ಅನುವಾದ
ಆಯತ್ 24
ಅವರು (ದಾವೂದ್) ಹೇಳಿದರು: ಇವನು ತನ್ನ ಕುರಿಗಳೊಂದಿಗೆ ನಿನ್ನ ಕುರಿಯನ್ನು ಸೇರಿಸಿಕೊಳ್ಳಲು ಕೇಳಿರುವುದು ನಿಸ್ಸಂಶಯವಾಗಿಯು ನಿನ್ನ ಮೇಲೆ ಮಾಡಿದ ಅಕ್ರಮವಾಗಿದೆ ಮತ್ತು ಹೆಚ್ಚಿನ ಭಾಗಸ್ಥರು ಪರಸ್ಪರ ಒಬ್ಬರನ್ನೊಬ್ಬರ ಮೇಲೆ ಅತಿಕ್ರಮವೆಸಗುತ್ತಾರೆ. ಆದರೆ ಸತ್ಯವಿಶ್ವಾಸವಿಟ್ಟವರು ಹಾಗೂ ಸತ್ಕರ್ಮಗಳನ್ನು ಕÉÊಗೊಂಡವರ ಹೊರತು. ಇಂತಹವರು ಬಹಳ ವಿರಳರಾಗಿದ್ದಾರೆ ಮತ್ತÄ ದಾವೂದರು ನಾವು ಅವರನ್ನು ಪರೀಕ್ಷೆಗೊಳಪಡಿಸಿ ದೆವೆಂದು ತಿಳಿದರು. ಕೊಡಲೇ ತನ್ನ ಪ್ರಭುವಿನಲ್ಲಿ ಕ್ಷೆಮೆಯಾಚಿಸಿದರು ಹಾಗೂ ದÉÊನ್ಯತೆಯನ್ನು ತೋರುತ್ತಾ ಸಾಷ್ಟಾಂಗವೆರಗಿದರು ಮತ್ತು ಪಶ್ಚಾತ್ತಾಪ ಪಟ್ಟು ಮರಳಿದರು.
فَغَفَرْنَا لَهُ ذَٰلِكَ ۖ وَإِنَّ لَهُ عِندَنَا لَزُلْفَىٰ وَحُسْنَ مَآبٍ ٢٥
📖 ಅನುವಾದ
ಆಯತ್ 25
ಆಗ ನಾವು ಅವರ ಪ್ರಮಾದವನ್ನು ಕ್ಷಮಿಸಿದೆವು ಮತ್ತು ಖಂಡಿತವಾಗಿಯು ಅವರಿಗಾಗಿ ನಮ್ಮ ಬಳಿ ನಿಕಟ ಸ್ಥಾನ ಮತ್ತು ಅತ್ಯುತ್ತಮ ನೆಲೆಯಿದೆ.
يَا دَاوُودُ إِنَّا جَعَلْنَاكَ خَلِيفَةً فِي الْأَرْضِ فَاحْكُم بَيْنَ النَّاسِ بِالْحَقِّ وَلَا تَتَّبِعِ الْهَوَىٰ فَيُضِلَّكَ عَن سَبِيلِ اللَّهِ ۚ إِنَّ الَّذِينَ يَضِلُّونَ عَن سَبِيلِ اللَّهِ لَهُمْ عَذَابٌ شَدِيدٌ بِمَا نَسُوا يَوْمَ الْحِسَابِ ٢٦
📖 ಅನುವಾದ
ಆಯತ್ 26
ಓ ದಾವೂದ್! ನಾವು ನಿಮ್ಮನ್ನು ಈ ಭೂಮಿಯಲ್ಲಿ ಪ್ರತಿನಿಧಿಯನ್ನಾಗಿ ನಿಶ್ಚಯಿಸಿರುತ್ತೇವೆ. ಆದ್ದರಿಂದ ನೀವು ಜನರ ನಡುವೆ ನ್ಯಾಯದೊಂದಿಗೆ ತೀರ್ಪು ನೀಡಿರಿ ಹಾಗೂ ಸ್ವೇಚ್ಛೆಯನ್ನು ಅನುಸರಿಸದಿರಿ. ಇಲ್ಲ ವಾದಲ್ಲಿ ಅದು ನಿಮ್ಮನ್ನು ಅಲ್ಲಾಹನ ಮಾರ್ಗದಿಂದ ತಪ್ಪಿಸಿ ಬಿಡುವುದು. ನಿಜವಾಗಿಯು ಯಾರು ಅಲ್ಲಾಹನ ಮಾರ್ಗದಿಂದ ತಪ್ಪಿ ಹೋಗುತ್ತಾರೋ ಅವರಿಗೆ ಅತ್ಯುಗ್ರ ಶಿಕ್ಷೆಯಿರುವುದು. ಇದು ಅವರು ವಿಚಾರಣಾ ದಿನವನ್ನು ಮರೆತು ಬಿಟ್ಟಿದ್ದುದರ ನಿಮಿತ್ತವಾಗಿದೆ.
وَمَا خَلَقْنَا السَّمَاءَ وَالْأَرْضَ وَمَا بَيْنَهُمَا بَاطِلًا ۚ ذَٰلِكَ ظَنُّ الَّذِينَ كَفَرُوا ۚ فَوَيْلٌ لِّلَّذِينَ كَفَرُوا مِنَ النَّارِ ٢٧
📖 ಅನುವಾದ
ಆಯತ್ 27
ಮತ್ತು ನಾವು ಆಕಾಶವನ್ನು, ಭೂಮಿಯನ್ನು ಮತ್ತು ಅವುಗಳ ನಡುವೆಯಿರುವುದನ್ನು ವ್ಯರ್ಥವಾಗಿ ಸೃಷ್ಟಿಸಿರುವುದಿಲ್ಲ. ಇದಂತು ಸತ್ಯ ನಿಷೇಧಿಗಳ ಭ್ರಮೆಯಾಗಿದೆ. ಆದ್ದರಿಂದ ಸತ್ಯನಿಷೇಧಿಗಳಿಗೆ ನರಕಾಗ್ನಿಯ ವಿನಾಶವಿದೆ.
أَمْ نَجْعَلُ الَّذِينَ آمَنُوا وَعَمِلُوا الصَّالِحَاتِ كَالْمُفْسِدِينَ فِي الْأَرْضِ أَمْ نَجْعَلُ الْمُتَّقِينَ كَالْفُجَّارِ ٢٨
📖 ಅನುವಾದ
ಆಯತ್ 28
ಸತ್ಯವಿಶ್ವಾಸವಿರಿಸಿ ಸತ್ಕರ್ಮಗಳನ್ನು ಕÉÊಗೊಂಡವರನ್ನು ಭೂಮಿಯಲ್ಲಿ (ಸದಾ) ಕ್ಷೆÆÃಭೆ ಹರಡುತ್ತಿರುವವರ ಹಾಗೆ ನಾವು ಮಾಡುವೆವೇ? ಅಥವಾ ಭಯಭಕ್ತಿಯು ಳ್ಳವರನ್ನು ದುರಾಚಾರಿಗಳಂತೆ ಮಾಡುವೆವೇ ?
كِتَابٌ أَنزَلْنَاهُ إِلَيْكَ مُبَارَكٌ لِّيَدَّبَّرُوا آيَاتِهِ وَلِيَتَذَكَّرَ أُولُو الْأَلْبَابِ ٢٩
📖 ಅನುವಾದ
ಆಯತ್ 29
ಇದು ಒಂದು ಸಮೃದ್ಧಿಯುಳ್ಳ ಗ್ರಂಥ, ಜನರು ಇದರ ಸೂಕ್ತಿಗಳ ಕುರಿತು ಚಿಂತಿಸಲೆAದೂ, ಬುದ್ಧಿಜೀವಿಗಳು ಉಪದೇಶ ಪಡೆದುಕೊಳ್ಳಲೆಂದೂ ನಾವಿದನ್ನು ನಿಮ್ಮಡೆಗೆ ಅವತೀರ್ಣಗೊಳಿಸಿರುತ್ತೇವೆ.
وَوَهَبْنَا لِدَاوُودَ سُلَيْمَانَ ۚ نِعْمَ الْعَبْدُ ۖ إِنَّهُ أَوَّابٌ ٣٠
📖 ಅನುವಾದ
ಆಯತ್ 30
ಮತ್ತು ನಾವು ದಾವೂದರಿಗೆ ಸುಲೈಮಾನರನ್ನು ಕರುಣಿಸಿದೆವು. ಅವರು ಅತ್ಯುತ್ತಮ ದಾಸರಾಗಿದ್ದರು ಮತ್ತು ಅತ್ಯಧಿಕವಾಗಿ ಪಶ್ಚಾತ್ತಾಪ ಪಟ್ಟು ಮರಳುವವರಾಗಿದ್ದರು.
إِذْ عُرِضَ عَلَيْهِ بِالْعَشِيِّ الصَّافِنَاتُ الْجِيَادُ ٣١
📖 ಅನುವಾದ
ಆಯತ್ 31
ಅತಿವೇಗವಾಗಿ ಓಡುವ ಉತ್ತಮ ಕುದುರೆಗಳನ್ನು ಒಮ್ಮೆ ಅವರ ಮುಂದೆ ಸಾಯಂಕಾಲದ ಹೊತ್ತಲ್ಲಿ ಪ್ರದರ್ಶಿಸಲಾದ ಸಂದರ್ಭ.
فَقَالَ إِنِّي أَحْبَبْتُ حُبَّ الْخَيْرِ عَن ذِكْرِ رَبِّي حَتَّىٰ تَوَارَتْ بِالْحِجَابِ ٣٢
📖 ಅನುವಾದ
ಆಯತ್ 32
ಆಗ ಅವರು ಹೇಳತೊಡಗಿದರು: ನಾನು ನನ್ನ ಪ್ರಭುವಿನ ಸ್ಮರಣೆಗಿಂತ ಈ ಸಂಪತ್ತನ್ನು ಹೆಚ್ಚು ಪ್ರೀತಿಸಿದೆನು. ಕೊನೆಗೆ (ಸೂರ್ಯ) ಮರೆಯಾಯಿತು.
رُدُّوهَا عَلَيَّ ۖ فَطَفِقَ مَسْحًا بِالسُّوقِ وَالْأَعْنَاقِ ٣٣
📖 ಅನುವಾದ
ಆಯತ್ 33
ನೀವು ಅವು(ಆ ಕುದುರೆ)ಗಳನ್ನು ಪುನಃ ನನ್ನ ಮುಂದೆ ತನ್ನಿರಿ. ಬಳಿಕ ಅವರು ಅವುಗಳ ಮೀನಖಂಡಗಳನ್ನು ಮತ್ತು ಕೊರಳುಗಳನ್ನು ಸವರಲುತೊಡಗಿದರು.
وَلَقَدْ فَتَنَّا سُلَيْمَانَ وَأَلْقَيْنَا عَلَىٰ كُرْسِيِّهِ جَسَدًا ثُمَّ أَنَابَ ٣٤
📖 ಅನುವಾದ
ಆಯತ್ 34
ಮತ್ತು ನಾವು ಸುಲೈಮಾನರನ್ನು ಪರೀಕ್ಷಿಸಿದೆವು ಹಾಗೂ ಅವರ ಸಿಂಹಾಸನದ ಮೇಲೆ ಒಂದು ದೇಹವನ್ನು ಹಾಕಿದೆವು. ತರುವಾಯ ಅವರು ಪಶ್ಚಾತ್ತಾಪ ಪಟ್ಟು ಮರಳಿದರು.
قَالَ رَبِّ اغْفِرْ لِي وَهَبْ لِي مُلْكًا لَّا يَنبَغِي لِأَحَدٍ مِّن بَعْدِي ۖ إِنَّكَ أَنتَ الْوَهَّابُ ٣٥
📖 ಅನುವಾದ
ಆಯತ್ 35
ಅವರು ಪ್ರಾರ್ಥಿಸಿದರು: ನನ್ನ ಪ್ರಭು, ನನ್ನನ್ನು ಕ್ಷಮಿಸು ಮತ್ತು ನನ್ನ ನಂತರ ಯಾರಿಗೂ ನೀಡಿರದಂತಹ ಅಧಿಪತ್ಯವನ್ನು ನನಗೆ ಕರುಣಿಸು. ನಿಶ್ಚಯವಾಗಿಯು ನೀನು ಮಹಾ ಉದಾರಿಯಾಗಿರುವೆ.
فَسَخَّرْنَا لَهُ الرِّيحَ تَجْرِي بِأَمْرِهِ رُخَاءً حَيْثُ أَصَابَ ٣٦
📖 ಅನುವಾದ
ಆಯತ್ 36
ಆಗ ನಾವು ಅವರಿಗೆ ಗಾಳಿಯನ್ನು ನಿಯಂತ್ರಿಸಿಕೊಟ್ಟೆವು. ಅದು ಅವರ ಆದೇಶದಂತೆ ಅವರು ಇಚ್ಛಿಸಿದೆಡೆಗೆ ಮೃದುವಾಗಿ ಬೀಸುತ್ತಿತ್ತು.
وَالشَّيَاطِينَ كُلَّ بَنَّاءٍ وَغَوَّاصٍ ٣٧
📖 ಅನುವಾದ
ಆಯತ್ 37
ಮತ್ತು ಸರ್ವ ವಿಧದ ಕಟ್ಟಡ ನಿರ್ಮಾಣಗಾರರನ್ನು ಮುಳುಗುಗಾರ ಜಿನ್ನ್ಗಳನ್ನು (ಅವರ ಅಧೀನಕ್ಕೆ ಕೊಟ್ಟೆವು)
وَآخَرِينَ مُقَرَّنِينَ فِي الْأَصْفَادِ ٣٨
📖 ಅನುವಾದ
ಆಯತ್ 38
ಮತ್ತು ಸಂಕೋಲೆಗಳಲ್ಲಿ ಬಂಧಿತರಾಗಿರುವ ಇತರ ಜಿನ್ನ್ಗಳನ್ನೂ ಸಹ.
هَٰذَا عَطَاؤُنَا فَامْنُنْ أَوْ أَمْسِكْ بِغَيْرِ حِسَابٍ ٣٩
📖 ಅನುವಾದ
ಆಯತ್ 39
ಇದು ನಮ್ಮ ಉಡುಗೊರೆಯಾಗಿದೆ. ಆದುದರಿಂದ ನೀವು ಇಚ್ಛಿಸಿದವರಿಗೆ ಉಪಕಾರ ಮಾಡಿ ಇಲ್ಲವೇ ತಡೆದಿರಿಸಿಕೊಳ್ಳಿ. ಯಾವುದೇ ಲೆಕ್ಕವಿಚಾರಣೆಯಿರಲಾರದು.
وَإِنَّ لَهُ عِندَنَا لَزُلْفَىٰ وَحُسْنَ مَآبٍ ٤٠
📖 ಅನುವಾದ
ಆಯತ್ 40
ಮತ್ತು ಖಂಡಿತವಾಗಿಯು ಅವರಿಗೆ ನಮ್ಮ ಬಳಿ ಸಾಮಿಪ್ಯವು ಮತ್ತು ಅತ್ಯುತ್ತಮ ತಾಣವಿದೆ.
وَاذْكُرْ عَبْدَنَا أَيُّوبَ إِذْ نَادَىٰ رَبَّهُ أَنِّي مَسَّنِيَ الشَّيْطَانُ بِنُصْبٍ وَعَذَابٍ ٤١
📖 ಅನುವಾದ
ಆಯತ್ 41
ಮತ್ತು ನಮ್ಮ ದಾಸ ಅಯ್ಯೂಬರ ಪ್ರಸ್ತಾಪವನ್ನು ಮಾಡಿರಿ. ಶÉÊತಾನನು ನನಗೆ ಕಷ್ಟ ಹಾಗೂ ಹಿಂಸೆಯಲ್ಲಿ ಸಿಲುಕಿಸಿರುವನು ಎಂದು ಅವರು ತಮ್ಮ ಪ್ರಭುವನ್ನು ಕರೆದು ಬೇಡಿದ ಸಂದರ್ಭ.
ارْكُضْ بِرِجْلِكَ ۖ هَٰذَا مُغْتَسَلٌ بَارِدٌ وَشَرَابٌ ٤٢
📖 ಅನುವಾದ
ಆಯತ್ 42
ನೀವು ತಮ್ಮ ಕಾಲನ್ನು ನೆಲಕ್ಕೆ ಬಡಿಯಿರಿ. ಇದು ಸ್ನಾನ ಮಾಡುವಂತಹ ತಂಪು ಹಾಗೂ ಕುಡಿಯುವ ನೀರಾಗಿದೆ.
وَوَهَبْنَا لَهُ أَهْلَهُ وَمِثْلَهُم مَّعَهُمْ رَحْمَةً مِّنَّا وَذِكْرَىٰ لِأُولِي الْأَلْبَابِ ٤٣
📖 ಅನುವಾದ
ಆಯತ್ 43
ಮತ್ತು ನಾವು ನಮ್ಮ ಕಡೆಯ ವಿಶೇಷ ಕಾರುಣ್ಯದಿಂದ ಅವರಿಗೆ ಅವರÀ ಮನೆಯವರನ್ನು ಮತ್ತು ಅವರ ಜೊತೆಯಲ್ಲಿ ಅವರಷ್ಟೇ ಮಂದಿಯನ್ನೂ ನೀಡಿದೆವು. ಇದು ಬುದ್ಧಿಜೀವಿಗಳಿಗೆ ಉದ್ಭೋದೆಯಾಗಲೆಂದಾಗಿದೆ.
وَخُذْ بِيَدِكَ ضِغْثًا فَاضْرِب بِّهِ وَلَا تَحْنَثْ ۗ إِنَّا وَجَدْنَاهُ صَابِرًا ۚ نِّعْمَ الْعَبْدُ ۖ إِنَّهُ أَوَّابٌ ٤٤
📖 ಅನುವಾದ
ಆಯತ್ 44
ಮತ್ತು ನೀವು ನಿಮ್ಮ ಕÉÊಯಲ್ಲಿ ಹುಲ್ಲು ಕಡ್ಡಿಗಳ ಪೊರಕೆಯೊಂದನ್ನು ತೆಗೆದುಕೊಂಡು ಅದರಿಂದ ಹೊಡೆಯಿರಿ ಹಾಗೂ ಪ್ರತಿಜ್ಞೆಯನ್ನು ಉಲ್ಲಂಘಿಸಬೇಡಿ. ನಿಜವಾಗಿಯು ನಾವು ಅಯ್ಯೂಬರನ್ನು ಸಹನಾಶೀಲರನ್ನಾಗಿ ಕಂಡೆವು. ಅವರು ಅತ್ಯುತ್ತಮ ದಾಸರು ಮತ್ತು ತಮ್ಮ ಪ್ರಭುವಿನೆಡೆಗೆ ಹೆಚ್ಚು ಮರಳುವವರಾಗಿದ್ದರು.
وَاذْكُرْ عِبَادَنَا إِبْرَاهِيمَ وَإِسْحَاقَ وَيَعْقُوبَ أُولِي الْأَيْدِي وَالْأَبْصَارِ ٤٥
📖 ಅನುವಾದ
ಆಯತ್ 45
ನೀವು ನಮ್ಮ ದಾಸರಾದ ಇಬ್ರಾಹೀಮ್, ಇಸ್‌ಹಾಕ್, ಯಅಕೂಬರನ್ನೂ ಸ್ಮರಿಸಿರಿ. ಅವರು ಕರ್ಮ ಶಕ್ತಿಯುಳ್ಳವರೂ, ದೂರದೃಷ್ಟಿ ಹೊಂದಿದವರೂ ಆಗಿದ್ದರು.
إِنَّا أَخْلَصْنَاهُم بِخَالِصَةٍ ذِكْرَى الدَّارِ ٤٦
📖 ಅನುವಾದ
ಆಯತ್ 46
ನಾವು ಅವರನ್ನು ಒಂದು ವಿಶಿಷ್ಟ ಗುಣದಿಂದಾಗಿ ಉತ್ಕೃಷ್ಟಗೊಳಿಸಿದೆವು. ಅದು ಪರಲೋಕದ ಸ್ಮರಣೆಯಾಗಿತ್ತು.
وَإِنَّهُمْ عِندَنَا لَمِنَ الْمُصْطَفَيْنَ الْأَخْيَارِ ٤٧
📖 ಅನುವಾದ
ಆಯತ್ 47
ನಿಶ್ಚಯವಾಗಿಯೂ ಅವರು ನಮ್ಮ ಬಳಿ ಆಯ್ಕೆ ಮಾಡಲಾದ ಅತ್ಯುತ್ತಮ ಜನರಾಗಿದ್ದರು.
وَاذْكُرْ إِسْمَاعِيلَ وَالْيَسَعَ وَذَا الْكِفْلِ ۖ وَكُلٌّ مِّنَ الْأَخْيَارِ ٤٨
📖 ಅನುವಾದ
ಆಯತ್ 48
ಇಸ್ಮಾಯೀಲ್, ಯಸ್‌ಅ ಹಾಗೂ ದುಲ್‌ಕಿಫಲ್‌ರನ್ನು ಸ್ಮರಿಸಿರಿ. ಅವರಲ್ಲಿ ಪ್ರತಿಯೊಬ್ಬರೂ ಸತ್ಕರ್ಮಿಗಳಾಗಿದ್ದರು.
هَٰذَا ذِكْرٌ ۚ وَإِنَّ لِلْمُتَّقِينَ لَحُسْنَ مَآبٍ ٤٩
📖 ಅನುವಾದ
ಆಯತ್ 49
ಇದೊಂದು ಬೋಧನೆಯಾಗಿದೆ. ನಿಶ್ಚಯವಾಗಿಯೂ ಭಯಭಕ್ತಿಯುಳ್ಳವರಿಗೆ ಮರಳಲು ಅತ್ಯುತ್ತಮ ನೆಲೆಯಿದೆ.
جَنَّاتِ عَدْنٍ مُّفَتَّحَةً لَّهُمُ الْأَبْوَابُ ٥٠
📖 ಅನುವಾದ
ಆಯತ್ 50
(ಅಂದರೆ) ಶಾಶ್ವತವಾದ ಸ್ವರ್ಗೋದ್ಯಾನಗಳು: ಅವುಗಳ ದ್ವಾರಗಳನ್ನು ಅವರಿಗಾಗಿ ತೆರೆದಿಡಲಾಗಿದೆ.
مُتَّكِئِينَ فِيهَا يَدْعُونَ فِيهَا بِفَاكِهَةٍ كَثِيرَةٍ وَشَرَابٍ ٥١
📖 ಅನುವಾದ
ಆಯತ್ 51
ಅವರು ದಿಂಬುಗಳಿಗೆ ಒರಗಿ ಕುಳಿತುಕೊಂಡು ವಿಧವಿಧದ ಹಣ್ಣುಹಂಪಲು ಹಾಗೂ ಪಾನೀಯಗಳನ್ನು ತರಿಸುತ್ತಿರುವರು.
۞ وَعِندَهُمْ قَاصِرَاتُ الطَّرْفِ أَتْرَابٌ ٥٢
📖 ಅನುವಾದ
ಆಯತ್ 52
ಮತ್ತು ಅವರ ಬಳಿ ದೃಷ್ಟಿ ತಗ್ಗಿಸಿರುವ ಸಮವಯಸ್ಕರಾದ ಅಪ್ಸರೆಗಳಿರುವರು.
هَٰذَا مَا تُوعَدُونَ لِيَوْمِ الْحِسَابِ ٥٣
📖 ಅನುವಾದ
ಆಯತ್ 53
ಇವು ವಿಚಾರಣೆಯ ದಿನಕ್ಕಾಗಿ ನಿಮಗೆ ವಾಗ್ದಾನ ನೀಡಲಾಗುತ್ತಿರುವ ವಸ್ತುಗಳಾಗಿವೆ.
إِنَّ هَٰذَا لَرِزْقُنَا مَا لَهُ مِن نَّفَادٍ ٥٤
📖 ಅನುವಾದ
ಆಯತ್ 54
ಖಂಡಿತವಾಗಿಯೂ ಇದು ನಮ್ಮ( ಕಡೆಯ ವಿಶೇಷ) ಜೀವನಾಧಾರವಾಗಿದೆ. ಇದಕ್ಕೆ ಎಂದಿಗೂ ಅಂತ್ಯವಿಲ್ಲ.
هَٰذَا ۚ وَإِنَّ لِلطَّاغِينَ لَشَرَّ مَآبٍ ٥٥
📖 ಅನುವಾದ
ಆಯತ್ 55
ಇದಂತು (ಧರ್ಮನಿಷ್ಠರ) ಪ್ರತಿಫಲವಾಯಿತು. ನಿಶ್ಚಯವಾಗಿಯು ಅತಿಕ್ರಮಿಗಳಿಗೆ ಕೆಟ್ಟತಾಣವಿರುವುದು.
جَهَنَّمَ يَصْلَوْنَهَا فَبِئْسَ الْمِهَادُ ٥٦
📖 ಅನುವಾದ
ಆಯತ್ 56
ಅದು ನರಕವಾಗಿದೆ ಅವರು ಅದರಲ್ಲಿ ಪ್ರವೇಶಿಸುವರು ಮತ್ತು ಅದೆಷ್ಟು ನಿಕೃಷ್ಟ ನೆಲೆಯಾಗಿರುವುದು.
هَٰذَا فَلْيَذُوقُوهُ حَمِيمٌ وَغَسَّاقٌ ٥٧
📖 ಅನುವಾದ
ಆಯತ್ 57
( ಮಲಕ್‌ಗಳು ಹೇಳುವರು) ಇದು ಅತ್ಯುಷ್ಣ ಜಲ ಹಾಗೂ ಕೀವು ಆಗಿದೆ. ಆದ್ದರಿಂದ ಅವರು ಅದನ್ನು ಸವಿಯಲಿ.
هَٰذَا فَوْجٌ مُّقْتَحِمٌ مَّعَكُمْ ۖ لَا مَرْحَبًا بِهِمْ ۚ إِنَّهُمْ صَالُو النَّارِ ٥٩
📖 ಅನುವಾದ
ಆಯತ್ 59
(ಮಲಕ್‌ಗಳು ಸತ್ಯನಿಷೇಧಿಗಳಿಗೆÀ ಹೇಳುವರು) ಇದು ನಿಮ್ಮೊಂದಿಗೆ ನರಕದಲ್ಲಿ ಪ್ರವೇಶಿಸಲಿರುವ ಒಂದು ತುಕ್ಕಡಿಯಾಗಿದೆ. (ಆಗ ನಾಯಕರು) ಅವರಿಗೆಯಾವ ಸ್ವಾಗತವೂ ಇಲ್ಲ. ಇವರು ನರಕಾಗ್ನಿಯನ್ನು ಪ್ರವೇಶಿಸುವವರಾಗಿರುವರು ಎಂದು ಹೇಳುವರು.
قَالُوا بَلْ أَنتُمْ لَا مَرْحَبًا بِكُمْ ۖ أَنتُمْ قَدَّمْتُمُوهُ لَنَا ۖ فَبِئْسَ الْقَرَارُ ٦٠
📖 ಅನುವಾದ
ಆಯತ್ 60
(ಆಗ ಅವರ ಅನುಯಾಯಿಗಳು) ಹೇಳುವರು: ಹಾಗಲ್ಲ! ನಿಮಗೂ ಯಾವ ಸ್ವಾಗತವಿಲ್ಲ. ನೀವೇ ಇದನ್ನು ಮೊದಲು ನಮ್ಮ ಮುಂದೆ ತಂದಿಟ್ಟಿರುವಿರಿ. ಹಾಗೆಯೇ ಅದೆಷ್ಟು ಕೆಟ್ಟ ವಾಸಸ್ಥಾನವಾಗಿದೆ.
قَالُوا رَبَّنَا مَن قَدَّمَ لَنَا هَٰذَا فَزِدْهُ عَذَابًا ضِعْفًا فِي النَّارِ ٦١
📖 ಅನುವಾದ
ಆಯತ್ 61
ಅವರೆನ್ನುವರು: ನಮ್ಮ ಪ್ರಭು, ಯಾರು ನಮಗೆ ಈ ಶಿಕ್ಷಗೆ ಗುರಿಪಡಿಸಿದರೂ ಅವರಿಗೆ ನರಕಾಗ್ನಿಯ ಇಮ್ಮಡಿ ಯಾತನೆಯನ್ನು ನಿಶ್ಚಯಿಸಿಬಿಡು.
وَقَالُوا مَا لَنَا لَا نَرَىٰ رِجَالًا كُنَّا نَعُدُّهُم مِّنَ الْأَشْرَارِ ٦٢
📖 ಅನುವಾದ
ಆಯತ್ 62
ಮತ್ತು ಅವರು ಹೇಳುವರು: ನಮಗೇನಾಗಿದೇ ನಾವು ಕೆಟ್ಟವರೆಂದು ಭಾವಿಸುತ್ತಿದ್ದಂತಹ ಜನರು ನಮಗೆ ಕಾಣಿಸುತ್ತಿಲ್ಲವಲ್ಲ !
أَتَّخَذْنَاهُمْ سِخْرِيًّا أَمْ زَاغَتْ عَنْهُمُ الْأَبْصَارُ ٦٣
📖 ಅನುವಾದ
ಆಯತ್ 63
ನಾವು ಅವರನ್ನು ವಿನಃಕಾರಣ ಪರಿಹಾಸ್ಯ ಮಾಡುತ್ತಿದ್ದೆವೋ? ಅಥವಾ ಅವರನ್ನು ಗ್ರಹಿಸಲು ನಮ್ಮ ಕಣ್ಣುಗಳು ವಿಫಲವಾಗಿವೆಯೋ ?
إِنَّ ذَٰلِكَ لَحَقٌّ تَخَاصُمُ أَهْلِ النَّارِ ٦٤
📖 ಅನುವಾದ
ಆಯತ್ 64
ನರಕವಾಸಿಗಳು ಮಾಡುವ ಈ ವಾಗ್ವಾದವು ಖಂಡಿತವಾಗಿಯು ಸತ್ಯವಾಗಿದೆ.
قُلْ إِنَّمَا أَنَا مُنذِرٌ ۖ وَمَا مِنْ إِلَٰهٍ إِلَّا اللَّهُ الْوَاحِدُ الْقَهَّارُ ٦٥
📖 ಅನುವಾದ
ಆಯತ್ 65
ಹೇಳಿರಿ: ಓ ಪ್ರವಾದಿಯರೇ, ನಾನು ಕೇವಲ ಒಬ್ಬ ಮುನ್ನೆಚ್ಚರಿಕೆಗಾರನಾಗಿ ರುವೆನು, ಏಕÉÊಕನೂ, ಸರ್ವಾಧಿಪತಿಯು ಆದ ಅಲ್ಲಾಹನ ಹೊರತು ಅನ್ಯ ಆರಾಧ್ಯನಿಲ್ಲ.
رَبُّ السَّمَاوَاتِ وَالْأَرْضِ وَمَا بَيْنَهُمَا الْعَزِيزُ الْغَفَّارُ ٦٦
📖 ಅನುವಾದ
ಆಯತ್ 66
ಅವನು ಆಕಾಶಗಳ ಮತ್ತು ಭೂಮಿಯ ಹಾಗೂ ಅವೆರಡರ ನಡುವಿನ ಪ್ರಭುವಾಗಿದ್ದಾನೆ. ಅವನು ಪ್ರಚಂಡನೂ, ಕ್ಷಮಾಶೀಲನೂ ಆಗಿರುವನು.
مَا كَانَ لِيَ مِنْ عِلْمٍ بِالْمَلَإِ الْأَعْلَىٰ إِذْ يَخْتَصِمُونَ ٦٩
📖 ಅನುವಾದ
ಆಯತ್ 69
ಮಹೋನ್ನತ ಮಲಕ್‌ಗಳು ಪರಸ್ಪರ ತರ್ಕ ಮಾಡುತ್ತಿದ್ದುದರ ಬಗ್ಗೆ ನನಗೆ ಯಾವುದೇ ಜ್ಞಾನವಿಲ್ಲ.
إِن يُوحَىٰ إِلَيَّ إِلَّا أَنَّمَا أَنَا نَذِيرٌ مُّبِينٌ ٧٠
📖 ಅನುವಾದ
ಆಯತ್ 70
ನಾನು ಸುಸ್ಪಷ್ಟವಾಗಿ ಮುನ್ನೆಚ್ಚರಿಕೆ ನೀಡುವವನಾಗಿದ್ದೇನೆಂದು ಮಾತ್ರ ನನ್ನೆಡೆಗೆ ದಿವ್ಯ ಸಂದೇಶ ಮಾಡಲಾಗುತ್ತಿದೆ.
إِذْ قَالَ رَبُّكَ لِلْمَلَائِكَةِ إِنِّي خَالِقٌ بَشَرًا مِّن طِينٍ ٧١
📖 ಅನುವಾದ
ಆಯತ್ 71
ನಿಮ್ಮ ಪ್ರಭುವು ಮಲಕ್‌ಗಳೊಂದಿಗೆ ಹೇಳಿದ ಸಂದರ್ಭವನ್ನು ಸ್ಮರಿಸಿರಿ ಖಂಡಿತವಾಗಿಯು ನಾನು ಆವೆಮಣ್ಣಿನಿಂದ ಒಬ್ಬ ಮಾನವನನ್ನು ಸೃಷ್ಟಿಸುವವನಿ ದ್ದೇನೆ.
فَإِذَا سَوَّيْتُهُ وَنَفَخْتُ فِيهِ مِن رُّوحِي فَقَعُوا لَهُ سَاجِدِينَ ٧٢
📖 ಅನುವಾದ
ಆಯತ್ 72
ಹಾಗೆಯೇ ನಾನು ಅವನನ್ನು ಪರಿಪೂರ್ಣಗೊಳಿಸಿದಾಗ ಹಾಗೂ ಅವನಲ್ಲಿ ನನ್ನ ಆತ್ಮವನ್ನು ಊದಿದಾಗ ನೀವೆಲ್ಲರೂ ಅವನ ಮುಂದೆ ಸಾಷ್ಟಾಂಗವೆರಗಿರಿ.
فَسَجَدَ الْمَلَائِكَةُ كُلُّهُمْ أَجْمَعُونَ ٧٣
📖 ಅನುವಾದ
ಆಯತ್ 73
ಆಗ ಮಲಕ್‌ಗಳೆಲ್ಲರೂ ಒಟ್ಟಾಗಿ ಸಾಷ್ಟಾಂಗವೆರಗಿದರು.
إِلَّا إِبْلِيسَ اسْتَكْبَرَ وَكَانَ مِنَ الْكَافِرِينَ ٧٤
📖 ಅನುವಾದ
ಆಯತ್ 74
ಆದರೆ ಇಬ್‌ಲೀಸನ ಹೊರತು ಅವನು ಅಹಂಭಾವ ತೋರಿದನು ಮತ್ತು ಅವನು ಸತ್ಯನಿಷೇಧಿಗಳಲ್ಲಾಗಿದ್ದನು.
قَالَ يَا إِبْلِيسُ مَا مَنَعَكَ أَن تَسْجُدَ لِمَا خَلَقْتُ بِيَدَيَّ ۖ أَسْتَكْبَرْتَ أَمْ كُنتَ مِنَ الْعَالِينَ ٧٥
📖 ಅನುವಾದ
ಆಯತ್ 75
ಅಲ್ಲಾಹನು ಹೇಳಿದನು: ಓ ಇಬ್‌ಲೀಸ್, ನಾನು ನನ್ನೆರಡು ಕÉÊಗಳಿಂದ ಸೃಷ್ಟಿಸಿದಂತವನಿಗೆ ನೀನು ಸಾಷ್ಟಾಂಗವೆರಗುವುದರಿAದ ನಿನ್ನನ್ನು ತಡೆದುದ್ದಾದರೂ ಏನು? ನೀನು ದರ್ಪತೋರಿದೆಯಾ ? ಇಲ್ಲವೇ ನೀನು ಉನ್ನತ ಮಟ್ಟದವರಲ್ಲಿ ಸೇರಿರುವೆಯಾ ?
قَالَ أَنَا خَيْرٌ مِّنْهُ ۖ خَلَقْتَنِي مِن نَّارٍ وَخَلَقْتَهُ مِن طِينٍ ٧٦
📖 ಅನುವಾದ
ಆಯತ್ 76
ಇಬ್‌ಲೀಸ್ ಉತ್ತರಿಸಿದನು: ನಾನು ಅವನಿಗಿಂತ ಉತ್ತಮನು. ನೀನು ನನ್ನನ್ನು ಅಗ್ನಿಯಿಂದ ಸೃಷ್ಟಿಸಿರುವೆ ಹಾಗೂ ಅವನನ್ನು ಆವೆಮಣ್ಣಿನಿಂದ ಸೃಷ್ಟಿಸಿರುವೆ.
قَالَ فَاخْرُجْ مِنْهَا فَإِنَّكَ رَجِيمٌ ٧٧
📖 ಅನುವಾದ
ಆಯತ್ 77
ಹೇಳಲಾಯಿತು: ನೀನು ಇಲ್ಲಿಂದ ತೊಲಗು ಖಂಡಿತವಾಗಿಯು ನೀನು ತಿರಸ್ಕೃತನಾಗಿರುವೆ.
وَإِنَّ عَلَيْكَ لَعْنَتِي إِلَىٰ يَوْمِ الدِّينِ ٧٨
📖 ಅನುವಾದ
ಆಯತ್ 78
ನಿಶ್ಚಯವಾಗಿಯು ನಿರ್ಣಾಯಕ ದಿನದವರೆಗೂ ನಿನ್ನ ಮೇಲೆ ನನ್ನ ಶಾಪವಿರುವುದು.
قَالَ رَبِّ فَأَنظِرْنِي إِلَىٰ يَوْمِ يُبْعَثُونَ ٧٩
📖 ಅನುವಾದ
ಆಯತ್ 79
ಅವನು ಹೇಳಿದನು: ನನ್ನ ಪ್ರಭುವೇ, ಜನರು ಪುನಃ ಎಬ್ಬಸಲಾಗುವ ದಿನದವರೆಗೆ ನನಗೆ ಕಾಲಾವಕಾಶ ನೀಡು.
قَالَ فَإِنَّكَ مِنَ الْمُنظَرِينَ ٨٠
📖 ಅನುವಾದ
ಆಯತ್ 80
ಅಲ್ಲಾಹನು ಹೇಳಿದನು: ನೀನು ಕಾಲಾವಕಾಶ ನೀಡಲಾದವರಲ್ಲಾಗಿರುವೆ.
قَالَ فَبِعِزَّتِكَ لَأُغْوِيَنَّهُمْ أَجْمَعِينَ ٨٢
📖 ಅನುವಾದ
ಆಯತ್ 82
ಆಗ ಅವನು ಹೇಳಿದನು: ನಿನ್ನ ಪ್ರತಾಪದಾಣೆ, ನಾನು ಅವರೆಲ್ಲರನ್ನೂ ಖಂಡಿತ ದಾರಿಗೆಡಿಸುವೆನು.
إِلَّا عِبَادَكَ مِنْهُمُ الْمُخْلَصِينَ ٨٣
📖 ಅನುವಾದ
ಆಯತ್ 83
ಆದರೆ ಅವರಲ್ಲಿ ನಿನ್ನ ನಿಷ್ಠಾವಂತದಾಸರ ಹೊರತು.
قَالَ فَالْحَقُّ وَالْحَقَّ أَقُولُ ٨٤
📖 ಅನುವಾದ
ಆಯತ್ 84
ಅಲ್ಲಾಹನು ಹೇಳಿದನು: ಇದು ಸತ್ಯವಾಗಿದೆ ಮತ್ತು ನಾನು ಸತ್ಯವನ್ನೇ ಹೇಳುತ್ತೇನೆ.
لَأَمْلَأَنَّ جَهَنَّمَ مِنكَ وَمِمَّن تَبِعَكَ مِنْهُمْ أَجْمَعِينَ ٨٥
📖 ಅನುವಾದ
ಆಯತ್ 85
ಖಂಡಿತವಾಗಿಯು ನಾನು ನಿನ್ನಿಂದಲೂ ಮತ್ತು ನಿನ್ನನ್ನು ಅನುಸರಿಸುವ ಸಕಲರಿಂದಲೂ ನರಕವನ್ನು ತುಂಬಿ ಬಿಡುವೆನು.
قُلْ مَا أَسْأَلُكُمْ عَلَيْهِ مِنْ أَجْرٍ وَمَا أَنَا مِنَ الْمُتَكَلِّفِينَ ٨٦
📖 ಅನುವಾದ
ಆಯತ್ 86
ಹೇಳಿರಿ ಓ ಪ್ರವಾದಿಯವರೇ, ಇದಕ್ಕಾಗಿ (ಸತ್ಯ ಪ್ರಚಾರಕ್ಕಾಗಿ)ನಾನು ನಿಮ್ಮಿಂದಯಾವುದೇ ಪ್ರತಿಫಲವನ್ನು ಬೇಡುತ್ತಿಲ್ಲ. ನಾನು ಕೃತಕರಚನೆಗಾರರಲ್ಲೂ ಸೇರಿಲ್ಲ.
وَلَتَعْلَمُنَّ نَبَأَهُ بَعْدَ حِينٍ ٨٨
📖 ಅನುವಾದ
ಆಯತ್ 88
ಒಂದು ಕಾಲಾವಧಿಯ ನಂತರ ನೀವು ಇದರ ವಾಸ್ತವಿಕತೆಯನ್ನು ಖಂಡಿತ ತಿಳಿಯಲಿರುವಿರಿ.
ಓದಿ ಸೂರಾ ಸಾದ್ ಕನ್ನಡ ಅನುವಾದ – ಪಠಣ ಮತ್ತು ಆಡಿಯೋ
ಪವಿತ್ರ ಕುರಾನ್
Monday, September 7, 2026
Don't forget us in your sincere prayers

