📖 0/604 ಓದಿದ ಪುಟಗಳು
📄 272
وَمَآ أَرۡسَلۡنَا مِن قَبۡلِكَ إِلَّا رِجَالًا نُّوحِيٓ إِلَيۡهِمۡۖ فَسۡـَٔلُوٓاْ أَهۡلَ ٱلذِّكۡرِ إِن كُنتُمۡ لَا تَعۡلَمُونَ ٤٣ بِٱلۡبَيِّنَٰتِ وَٱلزُّبُرِۗ وَأَنزَلۡنَآ إِلَيۡكَ ٱلذِّكۡرَ لِتُبَيِّنَ لِلنَّاسِ مَا نُزِّلَ إِلَيۡهِمۡ وَلَعَلَّهُمۡ يَتَفَكَّرُونَ ٤٤ أَفَأَمِنَ ٱلَّذِينَ مَكَرُواْ ٱلسَّيِّـَٔاتِ أَن يَخۡسِفَ ٱللَّهُ بِهِمُ ٱلۡأَرۡضَ أَوۡ يَأۡتِيَهُمُ ٱلۡعَذَابُ مِنۡ حَيۡثُ لَا يَشۡعُرُونَ ٤٥ أَوۡ يَأۡخُذَهُمۡ فِي تَقَلُّبِهِمۡ فَمَا هُم بِمُعۡجِزِينَ ٤٦ أَوۡ يَأۡخُذَهُمۡ عَلَىٰ تَخَوُّفٍ فَإِنَّ رَبَّكُمۡ لَرَءُوفٌ رَّحِيمٌ ٤٧ أَوَلَمۡ يَرَوۡاْ إِلَىٰ مَا خَلَقَ ٱللَّهُ مِن شَيۡءٍ يَتَفَيَّؤُاْ ظِلَٰلُهُۥ عَنِ ٱلۡيَمِينِ وَٱلشَّمَآئِلِ سُجَّدًا لِّلَّهِ وَهُمۡ دَٰخِرُونَ ٤٨ وَلِلَّهِۤ يَسۡجُدُۤ مَا فِي ٱلسَّمَٰوَٰتِ وَمَا فِي ٱلۡأَرۡضِ مِن دَآبَّةٍ وَٱلۡمَلَٰٓئِكَةُ وَهُمۡ لَا يَسۡتَكۡبِرُونَ ٤٩ يَخَافُونَ رَبَّهُم مِّن فَوۡقِهِمۡ وَيَفۡعَلُونَ مَا يُؤۡمَرُونَ۩ ٥٠ ۞ وَقَالَ ٱللَّهُ لَا تَتَّخِذُوٓاْ إِلَٰهَيۡنِ ٱثۡنَيۡنِۖ إِنَّمَا هُوَ إِلَٰهٌ وَٰحِدٌ فَإِيَّٰيَ فَٱرۡهَبُونِ ٥١ وَلَهُۥ مَا فِي ٱلسَّمَٰوَٰتِ وَٱلۡأَرۡضِ وَلَهُ ٱلدِّينُ وَاصِبًاۚ أَفَغَيۡرَ ٱللَّهِ تَتَّقُونَ ٥٢ وَمَا بِكُم مِّن نِّعۡمَةٍ فَمِنَ ٱللَّهِۖ ثُمَّ إِذَا مَسَّكُمُ ٱلضُّرُّ فَإِلَيۡهِ تَجۡـَٔرُونَ ٥٣ ثُمَّ إِذَا كَشَفَ ٱلضُّرَّ عَنكُمۡ إِذَا فَرِيقٌ مِّنكُم بِرَبِّهِمۡ يُشۡرِكُونَ ٥٤
16:43
وَمَآ أَرۡسَلۡنَا مِن قَبۡلِكَ إِلَّا رِجَالًا نُّوحِيٓ إِلَيۡهِمۡۖ فَسۡـَٔلُوٓاْ أَهۡلَ ٱلذِّكۡرِ إِن كُنتُمۡ لَا تَعۡلَمُونَ ٤٣
ನಾವು ನಿಮಗಿಂತ ಮೊದಲು ಪುರುಷರನ್ನೇ ಸಂದೇಶವಾಹಕರನ್ನಾಗಿ ಕಳುಹಿಸುತ್ತಿದ್ದೆವು. ಅವರೆಡೆಗೆ ನಾವು ದಿವ್ಯವಾಣಿ ಅವತೀರ್ಣಗೊಳಿಸುತ್ತಿದ್ದೆವು. ಇನ್ನು ನಿಮಗೆ ಅರಿವಿಲ್ಲದಿದ್ದರೆ ಜ್ಞಾನಿಗಳೊಡನೆ ವಿಚಾರಿಸಿರಿ.
16:44
بِٱلۡبَيِّنَٰتِ وَٱلزُّبُرِۗ وَأَنزَلۡنَآ إِلَيۡكَ ٱلذِّكۡرَ لِتُبَيِّنَ لِلنَّاسِ مَا نُزِّلَ إِلَيۡهِمۡ وَلَعَلَّهُمۡ يَتَفَكَّرُونَ ٤٤
ಗತ ಪೈಗಂಬರರನ್ನು ನಾವು ಪುರಾವೆ ಮತ್ತು ಗ್ರಂಥಗಳೊAದಿಗೆ ಕಳುಹಿಸಿದೆವು ಮತ್ತು ಈ ಕುರ್‌ಆನನ್ನು ನಾವು ನಿಮ್ಮೆಡೆಗೆ ಅವತೀರ್ಣಗೊಳಿಸಿರುತ್ತೇವೆ. ಜನರಿಗಾಗಿ ಅವತೀರ್ಣಗೊಳಿಸಲಾ ಗಿರುವುದನ್ನು ನೀವು ಅವರಿಗೆ ಸ್ಪಷ್ಟವಾಗಿ ವಿವರಿಸಿಕೊಡುವ ಮತ್ತು ಅವರು ಚಿಂತಿಸುವ ಸಲುವಾಗಿ.
16:45
أَفَأَمِنَ ٱلَّذِينَ مَكَرُواْ ٱلسَّيِّـَٔاتِ أَن يَخۡسِفَ ٱللَّهُ بِهِمُ ٱلۡأَرۡضَ أَوۡ يَأۡتِيَهُمُ ٱلۡعَذَابُ مِنۡ حَيۡثُ لَا يَشۡعُرُونَ ٤٥
(ಪೈಗಂಬರರನ್ನು ಸಂಕಷ್ಟಕ್ಕೀಡು ಮಾಡಲು) ದುಷ್ಟ ತಂತ್ರವನ್ನು ಹೂಡುತ್ತಿರುವವರು ಅಲ್ಲಾಹನು ತಮ್ಮನ್ನು ಭೂಮಿಯೊಳಗೆ ಹೂತು ಬಿಡಬಹುದು ಅಥವಾ ಅನಿರೀಕ್ಷಿತವಾಗಿ ತಮ್ಮೆಡೆಗೆ ಶಿಕ್ಷೆಯು ಎರಗಿಸಿಬಿಡಬಹುದೆಂಬ ವಿಚಾರದಿಂದ ನಿರ್ಭೀತರಾಗಿರುವರೇ?
16:46
أَوۡ يَأۡخُذَهُمۡ فِي تَقَلُّبِهِمۡ فَمَا هُم بِمُعۡجِزِينَ ٤٦
ಅಥವಾ ಅವರು ನಡೆದಾಡುತ್ತಿರುವಾಗ ಹಿಡಿದು ಬಿಡಬಹುದೆಂಬ ವಿಚಾರದಿಂದ (ನಿರ್ಭೀತರಾಗಿರುವರೇ?) ಮತ್ತು ಅವರು ಅಲ್ಲಾಹನನ್ನು ಸೋಲಿಸಲಾರರು.
16:47
أَوۡ يَأۡخُذَهُمۡ عَلَىٰ تَخَوُّفٍ فَإِنَّ رَبَّكُمۡ لَرَءُوفٌ رَّحِيمٌ ٤٧
ಅಥವಾ ಅವರು ಭಯಭೀತರಾಗಿರುವ ಸ್ಥಿತಿಯಲ್ಲಿ ಹಿಡಿದು ಬಿಡಬಹುದೆಂಬ ವಿಚಾರದಿಂದ. (ನಿರ್ಭೀತರಾಗಿರುವರೇ?) ನಿಜವಾಗಿಯು ನಿಮ್ಮ ಪ್ರಭುವು ಮಹಾ ದಯಾಮಯನು, ಕರುಣಾನಿಧಿಯು ಆಗಿರುತ್ತಾನೆ.
16:48
أَوَلَمۡ يَرَوۡاْ إِلَىٰ مَا خَلَقَ ٱللَّهُ مِن شَيۡءٍ يَتَفَيَّؤُاْ ظِلَٰلُهُۥ عَنِ ٱلۡيَمِينِ وَٱلشَّمَآئِلِ سُجَّدًا لِّلَّهِ وَهُمۡ دَٰخِرُونَ ٤٨
ಅಲ್ಲಾಹನು ಸೃಷ್ಟಿಸಿರುವ ವಸ್ತುಗಳ ನೆರಳು ಬಲಕ್ಕೂ, ಎಡಕ್ಕೂ ಬಾಗಿ ವಿನಮ್ರತೆಯಿಂದ ಅಲ್ಲಾಹನ ಮುಂದೆ ಸಾಷ್ಟಾಂಗವೆರಗುತ್ತಿರುವುದನ್ನು ಅವರು ನೋಡಲಿಲ್ಲವೇ?
16:49
وَلِلَّهِۤ يَسۡجُدُۤ مَا فِي ٱلسَّمَٰوَٰتِ وَمَا فِي ٱلۡأَرۡضِ مِن دَآبَّةٍ وَٱلۡمَلَٰٓئِكَةُ وَهُمۡ لَا يَسۡتَكۡبِرُونَ ٤٩
ಭೂಮಿಯಲ್ಲಿಯು, ಆಕಾಶಗಳಲ್ಲಿಯು, ಇರುವ ಜೀವಿಗಳೆಲ್ಲವೂ ಅಲ್ಲಾಹನಿಗೆ ಸಾಷ್ಟಾಂಗವೆರಗುತ್ತವೆ ಮತ್ತು ಮಲಕ್‌ಗಳೆÉಲ್ಲರೂ ಸಹ ಮತ್ತು ಅವರು ಅಹಂಭಾವ ತೋರಿಸುವುದಿಲ್ಲ.
16:50
يَخَافُونَ رَبَّهُم مِّن فَوۡقِهِمۡ وَيَفۡعَلُونَ مَا يُؤۡمَرُونَ۩ ٥٠
ತಮ್ಮ ಮೇಲಿರುವ ತಮ್ಮ ಪ್ರಭುವನ್ನು ಅವರು ಭಯಪಡುತ್ತಾರೆ ಹಾಗೂ ತಮಗೆ ಆಜ್ಞಾಪಿಸಲಾದಂತೆ ಅವರು ಕಾರ್ಯ ನಿರ್ವಹಿಸುತ್ತಾರೆ.
16:51
۞ وَقَالَ ٱللَّهُ لَا تَتَّخِذُوٓاْ إِلَٰهَيۡنِ ٱثۡنَيۡنِۖ إِنَّمَا هُوَ إِلَٰهٌ وَٰحِدٌ فَإِيَّٰيَ فَٱرۡهَبُونِ ٥١
ಅಲ್ಲಾಹನು ಹೇಳುತ್ತಾನೆ: ನೀವು ಎರಡೆರಡು ಆರಾಧ್ಯರನ್ನು ಮಾಡಿಕೊಳ್ಳಬೇಡಿರಿ. ಆರಾಧ್ಯನಂತು ಕೇವಲ ಏಕೈಕನು ಮಾತ್ರ. ಆದ್ದರಿಂದ ನೀವು ನನ್ನನ್ನು ಮಾತ್ರ ಭಯಪಡಿರಿ.
16:52
وَلَهُۥ مَا فِي ٱلسَّمَٰوَٰتِ وَٱلۡأَرۡضِ وَلَهُ ٱلدِّينُ وَاصِبًاۚ أَفَغَيۡرَ ٱللَّهِ تَتَّقُونَ ٥٢
ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿ ಇರುವುದೆಲ್ಲವೂ ಅವನದೇ ಆಗಿದೆ ಮತ್ತು ಅವನದೇ ಅನುಸರಣೆಯು ಕಡ್ಡಾಯವಾಗಿರುತ್ತದೆ. ಹಾಗಿದ್ದೂ ನೀವು ಅಲ್ಲಾಹನನ್ನು ಬಿಟ್ಟು ಇತರರನ್ನು ಭಯಪಡುತ್ತಿರುವಿರಾ?
16:53
وَمَا بِكُم مِّن نِّعۡمَةٍ فَمِنَ ٱللَّهِۖ ثُمَّ إِذَا مَسَّكُمُ ٱلضُّرُّ فَإِلَيۡهِ تَجۡـَٔرُونَ ٥٣
ನಿಮ್ಮ ಬಳಿಯಿರುವ ಪ್ರತಿಯೊಂದು ಅನುಗ್ರಹವು ಅಲ್ಲಾಹನಿಂದಲೇ ದೊರೆತಿದೆ ಮತ್ತು ನಿಮಗೆ ಯಾವುದಾದರು ವಿಪತ್ತು ಬಾಧಿಸಿದರೆ ಅವನೆಡೆಗೇ ನೀವು ಮೊರೆ ಹೋಗುತ್ತಿರಿ.
16:54
ثُمَّ إِذَا كَشَفَ ٱلضُّرَّ عَنكُمۡ إِذَا فَرِيقٌ مِّنكُم بِرَبِّهِمۡ يُشۡرِكُونَ ٥٤
ಆದರೆ ಅವನು ನಿಮ್ಮಿಂದ ಆ ಸಂಕಷ್ಟವನ್ನು ನೀಗಿಸಿದಾಗ ನಿಮ್ಮಲ್ಲಿನ ಒಂದು ವಿಭಾಗ ತಮ್ಮ ಪ್ರಭುವಿನೊಂದಿಗೆ ಕೂಡಲೇ ಸಹಭಾಗಿತ್ವವನ್ನು ಕಲ್ಪಿಸತೊಡಗುತ್ತದೆ.
العربيةEnglishBahasa IndonesiaTürkçeРусскийفارسیFrançaisاردوবাংলাDeutschEspañol中文हिन्दीPortuguêsItalianoภาษาไทยPolskiNederlandsShqipKiswahiliO'zbekதமிழ்MelayuBosanskiSoomaaliAzərbaycanکوردی한국어日本語SvenskaDanskNorskپښتوമലയാളംසිංහලTamazightHausaአማርኛБългарскиТоҷикӣҚазақшаFilipinoسنڌيYorùbáFulfuldeТатарчаئۇيغۇرچەКыргызчаਪੰਜਾਬੀJawaతెలుగుမြန်မာગુજરાતીOromoमराठीTiếng ViệtMalagasyНохчийнWolofދިވެހިಕನ್ನಡУкраїнськаΕλληνικάქართულიខ្មែរدریQafar afMaranaoनेपाली
ಪವಿತ್ರ ಕುರಾನ್
Tuesday, August 25, 2026
Don't forget us in your sincere prayers







