📖 0/604 ಓದಿದ ಪುಟಗಳು
📄 490
وَٱلَّذِي نَزَّلَ مِنَ ٱلسَّمَآءِ مَآءَۢ بِقَدَرٍ فَأَنشَرۡنَا بِهِۦ بَلۡدَةً مَّيۡتًاۚ كَذَٰلِكَ تُخۡرَجُونَ ١١ وَٱلَّذِي خَلَقَ ٱلۡأَزۡوَٰجَ كُلَّهَا وَجَعَلَ لَكُم مِّنَ ٱلۡفُلۡكِ وَٱلۡأَنۡعَٰمِ مَا تَرۡكَبُونَ ١٢ لِتَسۡتَوُۥاْ عَلَىٰ ظُهُورِهِۦ ثُمَّ تَذۡكُرُواْ نِعۡمَةَ رَبِّكُمۡ إِذَا ٱسۡتَوَيۡتُمۡ عَلَيۡهِ وَتَقُولُواْ سُبۡحَٰنَ ٱلَّذِي سَخَّرَ لَنَا هَٰذَا وَمَا كُنَّا لَهُۥ مُقۡرِنِينَ ١٣ وَإِنَّآ إِلَىٰ رَبِّنَا لَمُنقَلِبُونَ ١٤ وَجَعَلُواْ لَهُۥ مِنۡ عِبَادِهِۦ جُزۡءًاۚ إِنَّ ٱلۡإِنسَٰنَ لَكَفُورٌ مُّبِينٌ ١٥ أَمِ ٱتَّخَذَ مِمَّا يَخۡلُقُ بَنَاتٍ وَأَصۡفَىٰكُم بِٱلۡبَنِينَ ١٦ وَإِذَا بُشِّرَ أَحَدُهُم بِمَا ضَرَبَ لِلرَّحۡمَٰنِ مَثَلًا ظَلَّ وَجۡهُهُۥ مُسۡوَدًّا وَهُوَ كَظِيمٌ ١٧ أَوَمَن يُنَشَّؤُاْ فِي ٱلۡحِلۡيَةِ وَهُوَ فِي ٱلۡخِصَامِ غَيۡرُ مُبِينٍ ١٨ وَجَعَلُواْ ٱلۡمَلَٰٓئِكَةَ ٱلَّذِينَ هُمۡ عِبَٰدُ ٱلرَّحۡمَٰنِ إِنَٰثًاۚ أَشَهِدُواْ خَلۡقَهُمۡۚ سَتُكۡتَبُ شَهَٰدَتُهُمۡ وَيُسۡـَٔلُونَ ١٩ وَقَالُواْ لَوۡ شَآءَ ٱلرَّحۡمَٰنُ مَا عَبَدۡنَٰهُمۗ مَّا لَهُم بِذَٰلِكَ مِنۡ عِلۡمٍۖ إِنۡ هُمۡ إِلَّا يَخۡرُصُونَ ٢٠ أَمۡ ءَاتَيۡنَٰهُمۡ كِتَٰبًا مِّن قَبۡلِهِۦ فَهُم بِهِۦ مُسۡتَمۡسِكُونَ ٢١ بَلۡ قَالُوٓاْ إِنَّا وَجَدۡنَآ ءَابَآءَنَا عَلَىٰٓ أُمَّةٍ وَإِنَّا عَلَىٰٓ ءَاثَٰرِهِم مُّهۡتَدُونَ ٢٢
43:11
وَٱلَّذِي نَزَّلَ مِنَ ٱلسَّمَآءِ مَآءَۢ بِقَدَرٍ فَأَنشَرۡنَا بِهِۦ بَلۡدَةً مَّيۡتًاۚ كَذَٰلِكَ تُخۡرَجُونَ ١١
ಅವನು ಆಕಾಶದಿಂದ ಒಂದು ನಿಶ್ಚಿತ ಪ್ರಮಾಣದಲ್ಲಿ ನೀರನ್ನು ಸುರಿಸಿದನು. ತರುವಾಯ ಅದರ ಮೂಲಕ ನಿರ್ಜೀವ ಪ್ರದೇಶವನ್ನು ನಾವು ಜೀವಂತಗೊಳಿಸಿದೆವು. ಇದೇ ಪ್ರಕಾರ ನೀವೂ ಸಮಾಧಿಗಳಿಂದ ಹೊರ ತೆಗೆಯಲಾಗುವಿರಿ.
43:12
وَٱلَّذِي خَلَقَ ٱلۡأَزۡوَٰجَ كُلَّهَا وَجَعَلَ لَكُم مِّنَ ٱلۡفُلۡكِ وَٱلۡأَنۡعَٰمِ مَا تَرۡكَبُونَ ١٢
ಅವನೇ ಸಕಲ ವಸ್ತುಗಳ ಜೋಡಿಗಳನ್ನು ಸೃಷ್ಟಿಸಿದನು ಮತ್ತು ನಿಮಗೆ ಹಡಗುಗಳನ್ನು, ಜಾನುವಾರುಗಳನ್ನು ಉಂಟು ಮಾಡಿದನು. ಅವುಗಳ ಮೇಲೆ ನೀವು ಸಂಚರಿಸುತ್ತೀರಿ.
43:13
لِتَسۡتَوُۥاْ عَلَىٰ ظُهُورِهِۦ ثُمَّ تَذۡكُرُواْ نِعۡمَةَ رَبِّكُمۡ إِذَا ٱسۡتَوَيۡتُمۡ عَلَيۡهِ وَتَقُولُواْ سُبۡحَٰنَ ٱلَّذِي سَخَّرَ لَنَا هَٰذَا وَمَا كُنَّا لَهُۥ مُقۡرِنِينَ ١٣
ನೀವು ಅವುಗಳ ಬೆನ್ನ ಮೇಲೆ ಭದ್ರವಾಗಿ ಕುಳಿತುಕೊಳ್ಳಲಿಕ್ಕಾಗಿ. ತರುವಾಯ ನೀವು ಅವುಗಳ ಮೇಲೆ ಕುಳಿತುಕೊಂಡಾಗ ನಿಮ್ಮ ಪ್ರಭುವಿನ ಅನುಗ್ರಹವನ್ನು ಸ್ಮರಿಸಿರಿ ಮತ್ತು ಹೀಗೆ ಹೇಳಿರಿ: “ಇದನ್ನು ನಮಗೆ ನಿಯಂತ್ರಿಸಿಕೊಟ್ಟವನು ಪರಮಪಾವನನು! ವಸ್ತುತಃ ನಮಗೆ ಇದನ್ನು ನಿಯಂತ್ರಿಸುವ ಸಾಮರ್ಥ್ಯವಿರಲಿಲ್ಲ.
43:14
وَإِنَّآ إِلَىٰ رَبِّنَا لَمُنقَلِبُونَ ١٤
ಖಂಡಿತವಾಗಿಯು ನಾವು ನಮ್ಮ ಪ್ರಭುವಿನೆಡೆಗೇ ಮರುಳುವವರಾಗಿದ್ದೇವೆ.
43:15
وَجَعَلُواْ لَهُۥ مِنۡ عِبَادِهِۦ جُزۡءًاۚ إِنَّ ٱلۡإِنسَٰنَ لَكَفُورٌ مُّبِينٌ ١٥
ಬಹುದೇವರಾಧಕರು ಅಲ್ಲಾಹನ ದಾಸರಲ್ಲಿ ಕೆಲವರನ್ನು ಅವನ ಅಂಶವನ್ನಾಗಿ ನಿಶ್ಚಯಿಸಿಬಿಟ್ಟರು. ಖಂಡಿತವಾಗಿಯು ಮನುಷ್ಯ ಪ್ರತ್ಯೇಕ ಕೃತಘ್ನನಾಗಿದ್ದಾನೆ.
43:16
أَمِ ٱتَّخَذَ مِمَّا يَخۡلُقُ بَنَاتٍ وَأَصۡفَىٰكُم بِٱلۡبَنِينَ ١٦
ಅಲ್ಲಾಹನು ತನ್ನ ಸೃಷ್ಟಿಗಳಲ್ಲಿ ತನಗಾಗಿ ಪುತ್ರಿಯರನ್ನು ಆಯ್ದುಕೊಂಡು ನಿಮಗೆ ಪುತ್ರರನ್ನು ದಯಪಾಲಿಸಿರುವನೇ?
43:17
وَإِذَا بُشِّرَ أَحَدُهُم بِمَا ضَرَبَ لِلرَّحۡمَٰنِ مَثَلًا ظَلَّ وَجۡهُهُۥ مُسۡوَدًّا وَهُوَ كَظِيمٌ ١٧
ಅದಾಗ್ಯೂ ಅವರ ಪೈಕಿ ಒಬ್ಬನಿಗೆ ಯಾವ ಸಂತತಿಯನ್ನು ಇವರು ರಹ್ಮಾನದೆಂದು ಹೇಳುತ್ತಾರೋ ಅದರ ಜನನದ ಸುರ್ವಾತೆಯು ನೀಡಲಾದರೆ ಅವನ ಮುಖವು ರ‍್ರಗಾಗುತ್ತದೆ ಮತ್ತು ಅವನು ದುಃಖಿತನಾಗಿಬಿಡು ತ್ತಾನೆ.
43:18
أَوَمَن يُنَشَّؤُاْ فِي ٱلۡحِلۡيَةِ وَهُوَ فِي ٱلۡخِصَامِ غَيۡرُ مُبِينٍ ١٨
ಆಭರಣಗಳಲ್ಲಿ ಪೋಷಿಸಲಾಗುವ ಮತ್ತು ವಾಗ್ವಾದದಲ್ಲಿ (ತನ್ನ ಮಾತನ್ನು) ಸ್ಪಷ್ಟಗೊಳಿಸಲು ಸಾಧ್ಯವಾಗದಂತಹ ಪುತ್ರಿಯರು ಅಲ್ಲಾಹನಿಗೆ ಸಂತಾನವಾಗಿರುವರೇ?
43:19
وَجَعَلُواْ ٱلۡمَلَٰٓئِكَةَ ٱلَّذِينَ هُمۡ عِبَٰدُ ٱلرَّحۡمَٰنِ إِنَٰثًاۚ أَشَهِدُواْ خَلۡقَهُمۡۚ سَتُكۡتَبُ شَهَٰدَتُهُمۡ وَيُسۡـَٔلُونَ ١٩
ಅವರು ಪರಮದಯಾಮಯನ ದಾಸರಾದ ಮಲಕ್‌ಗಳನ್ನು ಸ್ತಿçÃಯರೆಂದು ನಿಶ್ಚಯಿಸಿಬಿಟ್ಟಿದ್ದಾರೆಯೇ? ಅವರ ಸೃಷ್ಟಿಯ ವೇಳೆಯಲ್ಲಿ ಅವರು ಹಾಜರಿದ್ದರೇ? ಅವರ ಸಾಕ್ಷö್ಯವನ್ನು ದಾಖಲಿಸಲಾಗುವುದು ಮತ್ತು ಅವರನ್ನು ವಿಚಾರಣೆಗೆ ಗುರಿಪಡಿಸಲಾಗುವುದು.
43:20
وَقَالُواْ لَوۡ شَآءَ ٱلرَّحۡمَٰنُ مَا عَبَدۡنَٰهُمۗ مَّا لَهُم بِذَٰلِكَ مِنۡ عِلۡمٍۖ إِنۡ هُمۡ إِلَّا يَخۡرُصُونَ ٢٠
ಅವರು ಹೇಳುತ್ತಾರೆ: ಪರಮ ದಯಾಮಯನು ಇಚ್ಛಿಸುತ್ತಿದ್ದರೆ ನಾವು ಮಲಕ್‌ಗಳನ್ನು ಆರಾಧಿಸುತ್ತಿರಲಿಲ್ಲ. ಆದರೆ ಅವರಿಗೆ ಅದರ ಕುರಿತು ಯಾವ ಅರಿವೂ ಇಲ್ಲ. ಅವರು ಕೇವಲ ಊಹಿಸುತ್ತಿದ್ದಾರಷ್ಟೇ.
43:21
أَمۡ ءَاتَيۡنَٰهُمۡ كِتَٰبًا مِّن قَبۡلِهِۦ فَهُم بِهِۦ مُسۡتَمۡسِكُونَ ٢١
ಇದಕ್ಕೆ ಮೊದಲು ನಾವು ಅವರಿಗೆ ಯಾವುದಾದರೂ ಗ್ರಂಥವನ್ನು ನೀಡಿದ್ದು ಅದನ್ನವರು ಭದ್ರವಾಗಿ ಹಿಡಿದುಕೊಂಡಿರುವರೇ?
43:22
بَلۡ قَالُوٓاْ إِنَّا وَجَدۡنَآ ءَابَآءَنَا عَلَىٰٓ أُمَّةٍ وَإِنَّا عَلَىٰٓ ءَاثَٰرِهِم مُّهۡتَدُونَ ٢٢
ಅಲ್ಲ; “ನಾವು ನಮ್ಮ ಪೂರ್ವಿಕರನ್ನು ಒಂದು ಮಾರ್ಗದಲ್ಲಿ ಕಂಡಿರುತ್ತೇವೆ ಮತ್ತು ನಾವು ಅವರ ಹೆಜ್ಜೆಗಳ ಮೇಲೆ ನಡೆದು ಸನ್ಮಾರ್ಗಿಗಳಾಗುವೆವು ಎಂದು ಅವರು ಹೇಳುತ್ತಾರೆ.
العربيةEnglishBahasa IndonesiaTürkçeРусскийفارسیFrançaisاردوবাংলাDeutschEspañol中文हिन्दीPortuguêsItalianoภาษาไทยPolskiNederlandsShqipKiswahiliO'zbekதமிழ்MelayuBosanskiSoomaaliAzərbaycanکوردی한국어日本語SvenskaDanskNorskپښتوമലയാളംසිංහලTamazightHausaአማርኛБългарскиТоҷикӣҚазақшаFilipinoسنڌيYorùbáFulfuldeТатарчаئۇيغۇرچەКыргызчаਪੰਜਾਬੀJawaతెలుగుမြန်မာગુજરાતીOromoमराठीTiếng ViệtMalagasyНохчийнWolofދިވެހިಕನ್ನಡУкраїнськаΕλληνικάქართულიខ្មែរدریQafar afMaranaoनेपाली
ಪವಿತ್ರ ಕುರಾನ್
Sunday, August 30, 2026
Don't forget us in your sincere prayers







