ಸೂರಾ ಅತ್-ತಹ್ರೀಮ್ ಅರೇಬಿಕ್ ಮತ್ತು ಕನ್ನಡ

ಸೂರಾ ಅತ್-ತಹ್ರೀಮ್ ಸಂಪೂರ್ಣ ಕನ್ನಡ ಅನುವಾದ, ಉಚ್ಚಾರಣೆ ಮತ್ತು ಆಡಿಯೋ ಪಠಣದೊಂದಿಗೆ ಓದಿ. ಪ್ರತಿ ಆಯತ್‌ನ ಅರ್ಥ. (12 ಆಯತ್ — مدنية). ಅತ್-ತಹ್ರೀಮ್ ಆಲಿಸಿ, ಅತ್-ತಹ್ರೀಮ್ ಅನುವಾದ, ಅತ್-ತಹ್ರೀಮ್ mp3, ಅತ್-ತಹ್ರೀಮ್ pdf.

ಸೂರಾ ಅತ್-ತಹ್ರೀಮ್ ಓದಿ ಮತ್ತು ಆಲಿಸಿ

🎧 ಆಯತ್
M Mishary Rashid Alafasy
M Mahmoud Khalil Al-Husary
A Abdurrahman As-Sudais
M Mohamed Siddiq Al-Minshawi
A Abdul Basit Abdul Samad
A Ali Al-Hudhaify
A Ahmed ibn Ali al-Ajamy
A Abu Bakr Ash-Shaatree
M Muhammad Ayyoub
A Abdullah Basfar
A Abdullah Al-Juhani
M Maher Al Muaiqly
x1
يَا أَيُّهَا النَّبِيُّ لِمَ تُحَرِّمُ مَا أَحَلَّ اللَّهُ لَكَ ۖ تَبْتَغِي مَرْضَاتَ أَزْوَاجِكَ ۚ وَاللَّهُ غَفُورٌ رَّحِيمٌ ۝١
📖 ಅನುವಾದ ಆಯತ್ 1
ಓ ಪೈಗಂಬರರೇ ನೀವು ನಿಮ್ಮ ಪತ್ನಿಯರ ಮೆಚ್ಚುಗೆಯನ್ನು ಬಯಸುತ್ತಾ ಅಲ್ಲಾಹನು ನಿಮಗೆ ರ‍್ಮಸಮ್ಮತಗೊಳಿಸಿರುವುದನ್ನು ಏಕೆ ನಿಷಿದ್ಧಗೊಳಿಸಿರುತ್ತೀರಿ ? ಅಲ್ಲಾಹನು ಕ್ಷಮಾಶೀಲನು, ಕರುಣಾನಿಧಿಯು, ಆಗಿರುವನು.
قَدْ فَرَضَ اللَّهُ لَكُمْ تَحِلَّةَ أَيْمَانِكُمْ ۚ وَاللَّهُ مَوْلَاكُمْ ۖ وَهُوَ الْعَلِيمُ الْحَكِيمُ ۝٢
📖 ಅನುವಾದ ಆಯತ್ 2
ನಿಜವಾಗಿಯು ಅಲ್ಲಾಹನು ನಿಮಗೆ ಶಪಥಗಳಿಂದ ಬಿಡುಗಡೆಯ ಪರಿಹಾರವನ್ನು ನಿಶ್ಚಯಿಸಿದ್ದಾನೆ. ಅಲ್ಲಾಹನು ನಿಮ್ಮ ಸಂರಕ್ಷಕನು ಮತ್ತು ಅವನೇ ರ‍್ವಜ್ಞನು ಯುಕ್ತಿಪರ‍್ಣನಾಗಿರುವನು.
وَإِذْ أَسَرَّ النَّبِيُّ إِلَىٰ بَعْضِ أَزْوَاجِهِ حَدِيثًا فَلَمَّا نَبَّأَتْ بِهِ وَأَظْهَرَهُ اللَّهُ عَلَيْهِ عَرَّفَ بَعْضَهُ وَأَعْرَضَ عَن بَعْضٍ ۖ فَلَمَّا نَبَّأَهَا بِهِ قَالَتْ مَنْ أَنبَأَكَ هَٰذَا ۖ قَالَ نَبَّأَنِيَ الْعَلِيمُ الْخَبِيرُ ۝٣
📖 ಅನುವಾದ ಆಯತ್ 3
ಪೈಗಂಬರರು ತನ್ನ ರ‍್ವ ಪತ್ನಿಯೊಡನೆ ಒಂದು ಮಾತನ್ನು ರಹಸ್ಯವಾಗಿ ತಿಳಿಸಿದ ಸಂರ‍್ಭವನ್ನು ಸ್ಮರಿಸಿರಿ, ಆಕೆಯು ಈ ಮಾತನ್ನು ಇನ್ನೊಬ್ಬಳಿಗೆ ಮುಟ್ಟಿಸಿದಾಗ ಅಲ್ಲಾಹನು ತನ್ನ ಪೈಗಂಬರರಿಗೆ ಅದನ್ನು ತಿಳಿಸಿದನು, ಆಗ ಪೈಗಂಬರರು ಆ ಮಾತಿನ ಕೆಲವು ಅಂಶವನ್ನು ತಮ್ಮ ಪತ್ನಿಗೆ ತಿಳಿಸಿದರು ಹಾಗು ಕೆಲವನ್ನು ಬಿಟ್ಟುಬಿಟ್ಟರು, ಹಾಗೆಯೇ ಅವರು ಅದನ್ನು ತನ್ನ ಆ ಪತ್ನಿಗೆ ತಿಳಿಸಿದಾಗ ಆಕೆ ಹೇಳಿದಳು; ಇದನ್ನು ನಿಮಗೆ ತಿಳಿಸಿದವರಾರು ? ಪೈಗಂಬರರು ಹೇಳಿದರು; ಸಕಲವನ್ನು ಅರಿಯುವವನು ಸಂಪರ‍್ಣ ಜ್ಞಾನಿಯಾದ ಅಲ್ಲಾಹನು ಇದನ್ನು ತಿಳಿಸಿದನು.
إِن تَتُوبَا إِلَى اللَّهِ فَقَدْ صَغَتْ قُلُوبُكُمَا ۖ وَإِن تَظَاهَرَا عَلَيْهِ فَإِنَّ اللَّهَ هُوَ مَوْلَاهُ وَجِبْرِيلُ وَصَالِحُ الْمُؤْمِنِينَ ۖ وَالْمَلَائِكَةُ بَعْدَ ذَٰلِكَ ظَهِيرٌ ۝٤
📖 ಅನುವಾದ ಆಯತ್ 4
ನೀವಿಬ್ಬರೂ ಅಲ್ಲಾಹನ ಮುಂದೆ ಪಶ್ಚಾತ್ತಾಪ ಹೊಂದಿ ಮರಳುವುದಾದರೆ (ಉತ್ತಮವಾಗಿದೆ) ನಿಜವಾಗಿಯೂ ನಿಮ್ಮಿಬ್ಬರ ಹೃದಯಗಳು ಋಜು ಮರ‍್ಗದಿಂದ ವಾಲಿಬಿಟ್ಟಿವೆ, ಮತ್ತು ನೀವಿಬ್ಬರೂ ಪೈಗಂಬರರ ವಿರುದ್ಧ ಪರಸ್ಪರ ಸಹಾಯ ನೀಡುವುದಾದರೆ ನಿಜವಾಗಿಯೂ ಅಲ್ಲಾಹನು ಅವರ ಕರ‍್ಯಸಾಧಕನಾಗಿರುವನು ಮತ್ತು ಜಿಬ್ರೀಲರು ಹಾಗು ಸಜ್ಜನರಾದ ಸತ್ಯವಿಶ್ವಾಸಿಗಳೂ ಸಹ ಅವರ ಜೊತೆಗೆ ದೇವದೂತರು ಸಹಾಯಕರಾಗಿರುತ್ತಾರೆ.
عَسَىٰ رَبُّهُ إِن طَلَّقَكُنَّ أَن يُبْدِلَهُ أَزْوَاجًا خَيْرًا مِّنكُنَّ مُسْلِمَاتٍ مُّؤْمِنَاتٍ قَانِتَاتٍ تَائِبَاتٍ عَابِدَاتٍ سَائِحَاتٍ ثَيِّبَاتٍ وَأَبْكَارًا ۝٥
📖 ಅನುವಾದ ಆಯತ್ 5
ಪೈಗಂಬರರು ನಿಮಗೆ ವಿಚ್ಛೇದನ ನೀಡಿದರೆ ಅವರ ಪ್ರಭುವು ಶೀಘ್ರವೇ ಅವರಿಗೆ ನಿಮ್ಮ ಬದಲಿಗೆ ನಿಮಗಿಂತ ಉತ್ತಮರೂ ವಿಧೇಯರಾಗುವವರೂ, ಸತ್ಯ ವಿಶ್ವಾಸವುಳ್ಳವರೂ, ಅಲ್ಲಾಹನ ಮುಂದೆ ಬಾಗುವವರೂ, ಪಶ್ಚಾತ್ತಾಪ ಹೊಂದಿ ಮರಳುವವರೂ, ಉಪವಾಸ ಆಚರಿಸುವವರೂ, ವಿವಾಹವಾದವರೂ, ಕನ್ಯೆಯರೂ ಆದ ಪತ್ನಿಯರನ್ನು ಕರುಣಿಸಬಹುದು.
يَا أَيُّهَا الَّذِينَ آمَنُوا قُوا أَنفُسَكُمْ وَأَهْلِيكُمْ نَارًا وَقُودُهَا النَّاسُ وَالْحِجَارَةُ عَلَيْهَا مَلَائِكَةٌ غِلَاظٌ شِدَادٌ لَّا يَعْصُونَ اللَّهَ مَا أَمَرَهُمْ وَيَفْعَلُونَ مَا يُؤْمَرُونَ ۝٦
📖 ಅನುವಾದ ಆಯತ್ 6
ಓ ಸತ್ಯವಿಶ್ವಾಸಿಗಳೇ, ನಿಮ್ಮನ್ನೂ ನಿಮ್ಮ ಕುಟುಂಬವನ್ನು ನರಕಾಗ್ನಿಯಿಂದ ರಕ್ಷಿಸಿಕೊಳ್ಳಿರಿ. ಅದರ ಇಂಧನವು ಮನುಷ್ಯರು ಮತ್ತು ಕಲ್ಲುಗಳಾಗಿವೆ. ಅದರ ಮೇಲೆ ಕಠೋರರೂ, ಬಲಿಷ್ಠರೂ ಆದ ಮಲಕ್ಗಳಿರುವರು ಅಲ್ಲಾಹನು ಅವರಿಗೆ ಆಜ್ಞಾಪಿಸಿದ್ದನ್ನು ಅವರು ಉಲ್ಲಂಘಿಸುವುದಿಲ್ಲ. ಮಾತ್ರವಲ್ಲ ಆಜ್ಞೆ ನೀಡಲಾಗಿರುವುದನ್ನೇ ಅವರು ಮಾಡುತ್ತಾರೆ.
يَا أَيُّهَا الَّذِينَ كَفَرُوا لَا تَعْتَذِرُوا الْيَوْمَ ۖ إِنَّمَا تُجْزَوْنَ مَا كُنتُمْ تَعْمَلُونَ ۝٧
📖 ಅನುವಾದ ಆಯತ್ 7
ಓ ಸತ್ಯನಿಷೇಧಿಗಳೇ, ನೀವು ಇಂದು ನೆಪಗಳನ್ನೊಡ್ಡಬೇಡಿರಿ, ನೀವು ಮಾಡುತ್ತಿರುವ ಕೃತ್ಯಗಳ ಪ್ರತಿಫಲವನ್ನೇ ನಿಮಗೆ ನೀಡಲಾಗುತ್ತಿದೆ.
يَا أَيُّهَا الَّذِينَ آمَنُوا تُوبُوا إِلَى اللَّهِ تَوْبَةً نَّصُوحًا عَسَىٰ رَبُّكُمْ أَن يُكَفِّرَ عَنكُمْ سَيِّئَاتِكُمْ وَيُدْخِلَكُمْ جَنَّاتٍ تَجْرِي مِن تَحْتِهَا الْأَنْهَارُ يَوْمَ لَا يُخْزِي اللَّهُ النَّبِيَّ وَالَّذِينَ آمَنُوا مَعَهُ ۖ نُورُهُمْ يَسْعَىٰ بَيْنَ أَيْدِيهِمْ وَبِأَيْمَانِهِمْ يَقُولُونَ رَبَّنَا أَتْمِمْ لَنَا نُورَنَا وَاغْفِرْ لَنَا ۖ إِنَّكَ عَلَىٰ كُلِّ شَيْءٍ قَدِيرٌ ۝٨
📖 ಅನುವಾದ ಆಯತ್ 8
ಓ ಸತ್ಯವಿಶ್ವಾಸಿಗಳೇ, ನೀವು ಅಲ್ಲಾಹನೆಡೆಗೆ ನಿಷ್ಕಳಂಕ ಪಶ್ಚಾತ್ತಾಪ ಪಟ್ಟು ಮರಳಿರಿ, ನಿಮ್ಮ ಪ್ರಭುವು ನಿಮ್ಮ ಪಾಪಗಳನ್ನು ನಿಮ್ಮಿಂದ ಅಳಿಸಿ ನಿಮ್ಮನ್ನು ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವ ಸ್ರ‍್ಗೋದ್ಯಾನಗಳಲ್ಲಿ ಪ್ರವೇಶಗೊಳಿಸಬಹುದು. ಅಂದು ಅಲ್ಲಾಹನು ಪೈಗಂಬರರನ್ನು ಅವರ ಜೊತೆಯಿರುವ ಸತ್ಯವಿಶ್ವಾಸಿಗಳನ್ನೂ ಅಪಮಾನಿಸಲಾರನು. ಅವರ ಪ್ರಕಾಶವು ಅವರ ಮುಂದಿನಿಂದಲೂ, ಬಲಗಡೆಯಿಂದಲೂ ಸಾಗುತ್ತಿರುವುದು. ಅವರು ಹೀಗೆ ಪ್ರರ‍್ಥಿಸುತ್ತಿರುವರು. ನಮ್ಮ ಪ್ರಭು, ನಮ್ಮ ಪ್ರಕಾಶವನ್ನು ನಮಗೆ ಪರಿಪರ‍್ಣಗೊಳಿಸು ಹಾಗು ಕ್ಷಮಿಸಿಬಿಡು ನಿಜವಾಗಿಯೂ ನೀನು ಸಕಲ ವಸ್ತುಗಳ ಮೇಲೆ ಸಾರ‍್ಥ್ಯವುಳ್ಳವನಾಗಿರುವೆ.
يَا أَيُّهَا النَّبِيُّ جَاهِدِ الْكُفَّارَ وَالْمُنَافِقِينَ وَاغْلُظْ عَلَيْهِمْ ۚ وَمَأْوَاهُمْ جَهَنَّمُ ۖ وَبِئْسَ الْمَصِيرُ ۝٩
📖 ಅನುವಾದ ಆಯತ್ 9
ಓ ಪೈಗಂಬರರೇ ಸತ್ಯನಿಷೇಧಿಗಳೊಂದಿಗೂ, ಕಪಟವಿಶ್ವಾಸಿಗಳೊಂದಿಗೂ ಹೋರಾಡಿರಿ, ಹಾಗು ಅವರೊಂದಿಗೆ ಕಠಿಣವಾಗಿ ರ‍್ತಿಸಿರಿ. ಅವರ ನೆಲೆಯು ನರಕಾಗ್ನಿಯಾಗಿದೆ ಮತ್ತು ಅದು ಅತಿ ನಿಕೃಷ್ಟ ತಾಣವಾಗಿದೆ.
ضَرَبَ اللَّهُ مَثَلًا لِّلَّذِينَ كَفَرُوا امْرَأَتَ نُوحٍ وَامْرَأَتَ لُوطٍ ۖ كَانَتَا تَحْتَ عَبْدَيْنِ مِنْ عِبَادِنَا صَالِحَيْنِ فَخَانَتَاهُمَا فَلَمْ يُغْنِيَا عَنْهُمَا مِنَ اللَّهِ شَيْئًا وَقِيلَ ادْخُلَا النَّارَ مَعَ الدَّاخِلِينَ ۝١٠
📖 ಅನುವಾದ ಆಯತ್ 10
ಅಲ್ಲಾಹನು ಸತ್ಯ ನಿಷೇಧಿಗಳಿಗೆ ನೂಹರ ಪತ್ನಿಯನ್ನೂ, ಲೂತರ ಪತ್ನಿಯನ್ನೂ ಒಂದು ಉದಾಹರಣೆಯಾಗಿ ಮುಂದಿಡುತ್ತಾನೆ. ಅವರಿಬ್ಬರೂ ನಮ್ಮ ರ‍್ವ ದಾಸರ ವಿವಾಹ ಬಂಧನದಲ್ಲಿದ್ದರು. ಬಳಿಕ ಆ ಸ್ತಿçÃಯರು ಅವರನ್ನು ಅವಿಧೇಯತೆ ತೋರಿದರು ಆಗ ಆ ಸಜ್ಜನ ದಾಸರು ಅವರಿಂದ ಅಲ್ಲಾಹನ ಯಾವುದೇ ಶಿಕ್ಷೆಯನ್ನು ತಡೆಯಲು ಅಸರ‍್ಥರಾದರು, ನಂತರ ನರಕಾಗ್ನಿಯಲ್ಲಿ ಪ್ರವೇಶಿಸುವವರೊಂದಿಗೆ ನೀವಿಬ್ಬರೂ ಪ್ರವೇಶಿಸಿರಿ ಎಂದು ಆ ಸ್ತಿçÃಯರೊಂದಿಗೆ ಹೇಳಲಾಯಿತು.
وَضَرَبَ اللَّهُ مَثَلًا لِّلَّذِينَ آمَنُوا امْرَأَتَ فِرْعَوْنَ إِذْ قَالَتْ رَبِّ ابْنِ لِي عِندَكَ بَيْتًا فِي الْجَنَّةِ وَنَجِّنِي مِن فِرْعَوْنَ وَعَمَلِهِ وَنَجِّنِي مِنَ الْقَوْمِ الظَّالِمِينَ ۝١١
📖 ಅನುವಾದ ಆಯತ್ 11
ಸತ್ಯವಿಶ್ವಾಸಿಗಳಿಗಾಗಿ ಅಲ್ಲಾಹನು ಫಿರ್ಔನನ ಪ್ರತ್ನಿಯ ಉದಾಹರಣೆಯನು ನೀಡುತ್ತಾನೆ, ಅವಳು ಪ್ರರ‍್ಥಿಸಿದ ಸಂರ‍್ಭ ಓ ನನ್ನ ಪ್ರಭು ನನಗಾಗಿ ನಿನ್ನ ಬಳಿ ಸ್ರ‍್ಗದಲ್ಲಿ ಒಂದು ಭವನವನ್ನು ನರ‍್ಮಿಸಿಕೊಡು ಫಿರ್ಔನ್ ಮತ್ತು ಅವನ ಕೃತ್ಯಗಳಿಂದ ನನ್ನನ್ನು ಕಾಪಾಡು, ಅಕ್ರಮಿ ಜನಾಂಗದಿಂದ ಪಾರುಮಾಡು.
وَمَرْيَمَ ابْنَتَ عِمْرَانَ الَّتِي أَحْصَنَتْ فَرْجَهَا فَنَفَخْنَا فِيهِ مِن رُّوحِنَا وَصَدَّقَتْ بِكَلِمَاتِ رَبِّهَا وَكُتُبِهِ وَكَانَتْ مِنَ الْقَانِتِينَ ۝١٢
📖 ಅನುವಾದ ಆಯತ್ 12
ಮತ್ತು ಅವನು ಇಮ್ರಾನನ ಮಗಳು ರ‍್ಯಮಳ ಉಪಮೆಯನ್ನು ನೀಡಿರುವನು ಅವಳು ತನ್ನ ಶೀಲವನ್ನು ಸಂರಕ್ಷಿಸಿದಳು, ಅನಂತರ ನಾವದರಲ್ಲಿ ನಮ್ಮ ಕಡೆಯ ಆತ್ಮವನ್ನು ಊದಿದೆವು ಅವಳು ತನ್ನ ಪ್ರಭುವಿನ ವಚನಗಳನ್ನು ಮತ್ತು ಅವನ ಗ್ರಂಥಗಳನ್ನೂ ಸತ್ಯವೆಂದು ದೃಢಪಡಿಸಿದಳು ಅವಳು ಭಯಭಕ್ತಿ ಹೊಂದಿದವರಲ್ಲಾಗಿದ್ದಳು.
← 65 ಅತ್-ತಹ್ರೀಮ್ (66/114) 67 →
ಓದಿ ಸೂರಾ ಅತ್-ತಹ್ರೀಮ್ ಕನ್ನಡ ಅನುವಾದ – ಪಠಣ ಮತ್ತು ಆಡಿಯೋ

66التحريم At-Tahrim 📚 12 ಆಯತ್ مدنية

ಆಯತ್‌ವಾರು – ಸೂರಾ ಅತ್-ತಹ್ರೀಮ್ — 12 ಆಯತ್




ಪವಿತ್ರ ಕುರಾನ್


Monday, September 7, 2026

Don't forget us in your sincere prayers