PDF —
12 ಆಯತ್ Medinan PDF
Built right in your browser — download starts automatically

ಸೂರಾ ಅತ್-ತಹ್ರೀಮ್ pdf — ಡೌನ್‌ಲೋಡ್ (ಕನ್ನಡ)

ಸೂರಾ ಅತ್-ತಹ್ರೀಮ್ pdf ಕನ್ನಡ — ಡೌನ್‌ಲೋಡ್ ಸೂರಾ ಅತ್-ತಹ್ರೀಮ್ ಅನುವಾದ. ಸೂರಾ ಅತ್-ತಹ್ರೀಮ್ (Medinan) 12 ಆಯತ್.

← ಅತ್-ತಲಾಕ್ಸೂರಾ ಅತ್-ತಹ್ರೀಮ್ ಅಲ್-ಮುಲ್ಕ್ →


12 ಆಯತ್ · Medinan · ಕನ್ನಡ
bismillah
ﭑﭒﭓﭔﭕﭖﭗﭘﭙﭚﭛﭜﭝﭞﭟﭠﭡ
66:1 ಓ ಪೈಗಂಬರರೇ ನೀವು ನಿಮ್ಮ ಪತ್ನಿಯರ ಮೆಚ್ಚುಗೆಯನ್ನು ಬಯಸುತ್ತಾ ಅಲ್ಲಾಹನು ನಿಮಗೆ ರ‍್ಮಸಮ್ಮತಗೊಳಿಸಿರುವುದನ್ನು ಏಕೆ ನಿಷಿದ್ಧಗೊಳಿಸಿರುತ್ತೀರಿ ? ಅಲ್ಲಾಹನು ಕ್ಷಮಾಶೀಲನು, ಕರುಣಾನಿಧಿಯು, ಆಗಿರುವನು.
ﭢﭣﭤﭥﭦﭧﭨﭩﭪﭫﭬﭭﭮﭯ
66:2 ನಿಜವಾಗಿಯು ಅಲ್ಲಾಹನು ನಿಮಗೆ ಶಪಥಗಳಿಂದ ಬಿಡುಗಡೆಯ ಪರಿಹಾರವನ್ನು ನಿಶ್ಚಯಿಸಿದ್ದಾನೆ. ಅಲ್ಲಾಹನು ನಿಮ್ಮ ಸಂರಕ್ಷಕನು ಮತ್ತು ಅವನೇ ರ‍್ವಜ್ಞನು ಯುಕ್ತಿಪರ‍್ಣನಾಗಿರುವನು.
ﭰﭱﭲﭳﭴﭵﭶﭷﭸﭹﭺﭻﭼﭽﭾﭿﮀﮁﮂﮃﮄﮅﮆﮇﮈﮉﮊﮋﮌﮍﮎﮏ
66:3 ಪೈಗಂಬರರು ತನ್ನ ರ‍್ವ ಪತ್ನಿಯೊಡನೆ ಒಂದು ಮಾತನ್ನು ರಹಸ್ಯವಾಗಿ ತಿಳಿಸಿದ ಸಂರ‍್ಭವನ್ನು ಸ್ಮರಿಸಿರಿ, ಆಕೆಯು ಈ ಮಾತನ್ನು ಇನ್ನೊಬ್ಬಳಿಗೆ ಮುಟ್ಟಿಸಿದಾಗ ಅಲ್ಲಾಹನು ತನ್ನ ಪೈಗಂಬರರಿಗೆ ಅದನ್ನು ತಿಳಿಸಿದನು, ಆಗ ಪೈಗಂಬರರು ಆ ಮಾತಿನ ಕೆಲವು ಅಂಶವನ್ನು ತಮ್ಮ ಪತ್ನಿಗೆ ತಿಳಿಸಿದರು ಹಾಗು ಕೆಲವನ್ನು ಬಿಟ್ಟುಬಿಟ್ಟರು, ಹಾಗೆಯೇ ಅವರು ಅದನ್ನು ತನ್ನ ಆ ಪತ್ನಿಗೆ ತಿಳಿಸಿದಾಗ ಆಕೆ ಹೇಳಿದಳು; ಇದನ್ನು ನಿಮಗೆ ತಿಳಿಸಿದವರಾರು ? ಪೈಗಂಬರರು ಹೇಳಿದರು; ಸಕಲವನ್ನು ಅರಿಯುವವನು ಸಂಪರ‍್ಣ ಜ್ಞಾನಿಯಾದ ಅಲ್ಲಾಹನು ಇದನ್ನು ತಿಳಿಸಿದನು.
ﮐﮑﮒﮓﮔﮕﮖﮗﮘﮙﮚﮛﮜﮝﮞﮟﮠﮡﮢﮣﮤﮥﮦﮧ
66:4 ನೀವಿಬ್ಬರೂ ಅಲ್ಲಾಹನ ಮುಂದೆ ಪಶ್ಚಾತ್ತಾಪ ಹೊಂದಿ ಮರಳುವುದಾದರೆ (ಉತ್ತಮವಾಗಿದೆ) ನಿಜವಾಗಿಯೂ ನಿಮ್ಮಿಬ್ಬರ ಹೃದಯಗಳು ಋಜು ಮರ‍್ಗದಿಂದ ವಾಲಿಬಿಟ್ಟಿವೆ, ಮತ್ತು ನೀವಿಬ್ಬರೂ ಪೈಗಂಬರರ ವಿರುದ್ಧ ಪರಸ್ಪರ ಸಹಾಯ ನೀಡುವುದಾದರೆ ನಿಜವಾಗಿಯೂ ಅಲ್ಲಾಹನು ಅವರ ಕರ‍್ಯಸಾಧಕನಾಗಿರುವನು ಮತ್ತು ಜಿಬ್ರೀಲರು ಹಾಗು ಸಜ್ಜನರಾದ ಸತ್ಯವಿಶ್ವಾಸಿಗಳೂ ಸಹ ಅವರ ಜೊತೆಗೆ ದೇವದೂತರು ಸಹಾಯಕರಾಗಿರುತ್ತಾರೆ.
ﮨﮩﮪﮫﮬﮭﮮﮯﮰﮱﯓﯔﯕﯖﯗﯘﯙﯚ
66:5 ಪೈಗಂಬರರು ನಿಮಗೆ ವಿಚ್ಛೇದನ ನೀಡಿದರೆ ಅವರ ಪ್ರಭುವು ಶೀಘ್ರವೇ ಅವರಿಗೆ ನಿಮ್ಮ ಬದಲಿಗೆ ನಿಮಗಿಂತ ಉತ್ತಮರೂ ವಿಧೇಯರಾಗುವವರೂ, ಸತ್ಯ ವಿಶ್ವಾಸವುಳ್ಳವರೂ, ಅಲ್ಲಾಹನ ಮುಂದೆ ಬಾಗುವವರೂ, ಪಶ್ಚಾತ್ತಾಪ ಹೊಂದಿ ಮರಳುವವರೂ, ಉಪವಾಸ ಆಚರಿಸುವವರೂ, ವಿವಾಹವಾದವರೂ, ಕನ್ಯೆಯರೂ ಆದ ಪತ್ನಿಯರನ್ನು ಕರುಣಿಸಬಹುದು.
ﯛﯜﯝﯞﯟﯠﯡﯢﯣﯤﯥﯦﯧﯨﯩﯪﯫﯬﯭﯮﯯﯰﯱ
66:6 ಓ ಸತ್ಯವಿಶ್ವಾಸಿಗಳೇ, ನಿಮ್ಮನ್ನೂ ನಿಮ್ಮ ಕುಟುಂಬವನ್ನು ನರಕಾಗ್ನಿಯಿಂದ ರಕ್ಷಿಸಿಕೊಳ್ಳಿರಿ. ಅದರ ಇಂಧನವು ಮನುಷ್ಯರು ಮತ್ತು ಕಲ್ಲುಗಳಾಗಿವೆ. ಅದರ ಮೇಲೆ ಕಠೋರರೂ, ಬಲಿಷ್ಠರೂ ಆದ ಮಲಕ್ಗಳಿರುವರು ಅಲ್ಲಾಹನು ಅವರಿಗೆ ಆಜ್ಞಾಪಿಸಿದ್ದನ್ನು ಅವರು ಉಲ್ಲಂಘಿಸುವುದಿಲ್ಲ. ಮಾತ್ರವಲ್ಲ ಆಜ್ಞೆ ನೀಡಲಾಗಿರುವುದನ್ನೇ ಅವರು ಮಾಡುತ್ತಾರೆ.
ﯲﯳﯴﯵﯶﯷﯸﯹﯺﯻﯼﯽﯾ
66:7 ಓ ಸತ್ಯನಿಷೇಧಿಗಳೇ, ನೀವು ಇಂದು ನೆಪಗಳನ್ನೊಡ್ಡಬೇಡಿರಿ, ನೀವು ಮಾಡುತ್ತಿರುವ ಕೃತ್ಯಗಳ ಪ್ರತಿಫಲವನ್ನೇ ನಿಮಗೆ ನೀಡಲಾಗುತ್ತಿದೆ.
ﭑﭒﭓﭔﭕﭖﭗﭘﭙﭚﭛﭜﭝﭞﭟﭠﭡﭢﭣﭤﭥﭦﭧﭨﭩﭪﭫﭬﭭﭮﭯﭰﭱﭲﭳﭴﭵﭶﭷﭸﭹﭺﭻﭼﭽﭾﭿﮀ
66:8 ಓ ಸತ್ಯವಿಶ್ವಾಸಿಗಳೇ, ನೀವು ಅಲ್ಲಾಹನೆಡೆಗೆ ನಿಷ್ಕಳಂಕ ಪಶ್ಚಾತ್ತಾಪ ಪಟ್ಟು ಮರಳಿರಿ, ನಿಮ್ಮ ಪ್ರಭುವು ನಿಮ್ಮ ಪಾಪಗಳನ್ನು ನಿಮ್ಮಿಂದ ಅಳಿಸಿ ನಿಮ್ಮನ್ನು ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವ ಸ್ರ‍್ಗೋದ್ಯಾನಗಳಲ್ಲಿ ಪ್ರವೇಶಗೊಳಿಸಬಹುದು. ಅಂದು ಅಲ್ಲಾಹನು ಪೈಗಂಬರರನ್ನು ಅವರ ಜೊತೆಯಿರುವ ಸತ್ಯವಿಶ್ವಾಸಿಗಳನ್ನೂ ಅಪಮಾನಿಸಲಾರನು. ಅವರ ಪ್ರಕಾಶವು ಅವರ ಮುಂದಿನಿಂದಲೂ, ಬಲಗಡೆಯಿಂದಲೂ ಸಾಗುತ್ತಿರುವುದು. ಅವರು ಹೀಗೆ ಪ್ರರ‍್ಥಿಸುತ್ತಿರುವರು. ನಮ್ಮ ಪ್ರಭು, ನಮ್ಮ ಪ್ರಕಾಶವನ್ನು ನಮಗೆ ಪರಿಪರ‍್ಣಗೊಳಿಸು ಹಾಗು ಕ್ಷಮಿಸಿಬಿಡು ನಿಜವಾಗಿಯೂ ನೀನು ಸಕಲ ವಸ್ತುಗಳ ಮೇಲೆ ಸಾರ‍್ಥ್ಯವುಳ್ಳವನಾಗಿರುವೆ.
ﮁﮂﮃﮄﮅﮆﮇﮈﮉﮊﮋﮌﮍﮎ
66:9 ಓ ಪೈಗಂಬರರೇ ಸತ್ಯನಿಷೇಧಿಗಳೊಂದಿಗೂ, ಕಪಟವಿಶ್ವಾಸಿಗಳೊಂದಿಗೂ ಹೋರಾಡಿರಿ, ಹಾಗು ಅವರೊಂದಿಗೆ ಕಠಿಣವಾಗಿ ರ‍್ತಿಸಿರಿ. ಅವರ ನೆಲೆಯು ನರಕಾಗ್ನಿಯಾಗಿದೆ ಮತ್ತು ಅದು ಅತಿ ನಿಕೃಷ್ಟ ತಾಣವಾಗಿದೆ.
ﮏﮐﮑﮒﮓﮔﮕﮖﮗﮘﮙﮚﮛﮜﮝﮞﮟﮠﮡﮢﮣﮤﮥﮦﮧﮨﮩﮪﮫ
66:10 ಅಲ್ಲಾಹನು ಸತ್ಯ ನಿಷೇಧಿಗಳಿಗೆ ನೂಹರ ಪತ್ನಿಯನ್ನೂ, ಲೂತರ ಪತ್ನಿಯನ್ನೂ ಒಂದು ಉದಾಹರಣೆಯಾಗಿ ಮುಂದಿಡುತ್ತಾನೆ. ಅವರಿಬ್ಬರೂ ನಮ್ಮ ರ‍್ವ ದಾಸರ ವಿವಾಹ ಬಂಧನದಲ್ಲಿದ್ದರು. ಬಳಿಕ ಆ ಸ್ತಿçÃಯರು ಅವರನ್ನು ಅವಿಧೇಯತೆ ತೋರಿದರು ಆಗ ಆ ಸಜ್ಜನ ದಾಸರು ಅವರಿಂದ ಅಲ್ಲಾಹನ ಯಾವುದೇ ಶಿಕ್ಷೆಯನ್ನು ತಡೆಯಲು ಅಸರ‍್ಥರಾದರು, ನಂತರ ನರಕಾಗ್ನಿಯಲ್ಲಿ ಪ್ರವೇಶಿಸುವವರೊಂದಿಗೆ ನೀವಿಬ್ಬರೂ ಪ್ರವೇಶಿಸಿರಿ ಎಂದು ಆ ಸ್ತಿçÃಯರೊಂದಿಗೆ ಹೇಳಲಾಯಿತು.
ﮬﮭﮮﮯﮰﮱﯓﯔﯕﯖﯗﯘﯙﯚﯛﯜﯝﯞﯟﯠﯡﯢﯣﯤﯥ
66:11 ಸತ್ಯವಿಶ್ವಾಸಿಗಳಿಗಾಗಿ ಅಲ್ಲಾಹನು ಫಿರ್ಔನನ ಪ್ರತ್ನಿಯ ಉದಾಹರಣೆಯನು ನೀಡುತ್ತಾನೆ, ಅವಳು ಪ್ರರ‍್ಥಿಸಿದ ಸಂರ‍್ಭ ಓ ನನ್ನ ಪ್ರಭು ನನಗಾಗಿ ನಿನ್ನ ಬಳಿ ಸ್ರ‍್ಗದಲ್ಲಿ ಒಂದು ಭವನವನ್ನು ನರ‍್ಮಿಸಿಕೊಡು ಫಿರ್ಔನ್ ಮತ್ತು ಅವನ ಕೃತ್ಯಗಳಿಂದ ನನ್ನನ್ನು ಕಾಪಾಡು, ಅಕ್ರಮಿ ಜನಾಂಗದಿಂದ ಪಾರುಮಾಡು.
ﯦﯧﯨﯩﯪﯫﯬﯭﯮﯯﯰﯱﯲﯳﯴﯵﯶﯷ
66:12 ಮತ್ತು ಅವನು ಇಮ್ರಾನನ ಮಗಳು ರ‍್ಯಮಳ ಉಪಮೆಯನ್ನು ನೀಡಿರುವನು ಅವಳು ತನ್ನ ಶೀಲವನ್ನು ಸಂರಕ್ಷಿಸಿದಳು, ಅನಂತರ ನಾವದರಲ್ಲಿ ನಮ್ಮ ಕಡೆಯ ಆತ್ಮವನ್ನು ಊದಿದೆವು ಅವಳು ತನ್ನ ಪ್ರಭುವಿನ ವಚನಗಳನ್ನು ಮತ್ತು ಅವನ ಗ್ರಂಥಗಳನ್ನೂ ಸತ್ಯವೆಂದು ದೃಢಪಡಿಸಿದಳು ಅವಳು ಭಯಭಕ್ತಿ ಹೊಂದಿದವರಲ್ಲಾಗಿದ್ದಳು.

ಪವಿತ್ರ ಕುರಾನ್


Wednesday, September 9, 2026

Don't forget us in your sincere prayers