📖 0/604 ಓದಿದ ಪುಟಗಳು
📄 330
وَٱلَّتِيٓ أَحۡصَنَتۡ فَرۡجَهَا فَنَفَخۡنَا فِيهَا مِن رُّوحِنَا وَجَعَلۡنَٰهَا وَٱبۡنَهَآ ءَايَةً لِّلۡعَٰلَمِينَ ٩١ إِنَّ هَٰذِهِۦٓ أُمَّتُكُمۡ أُمَّةً وَٰحِدَةً وَأَنَا۠ رَبُّكُمۡ فَٱعۡبُدُونِ ٩٢ وَتَقَطَّعُوٓاْ أَمۡرَهُم بَيۡنَهُمۡۖ كُلٌّ إِلَيۡنَا رَٰجِعُونَ ٩٣ فَمَن يَعۡمَلۡ مِنَ ٱلصَّٰلِحَٰتِ وَهُوَ مُؤۡمِنٌ فَلَا كُفۡرَانَ لِسَعۡيِهِۦ وَإِنَّا لَهُۥ كَٰتِبُونَ ٩٤ وَحَرَٰمٌ عَلَىٰ قَرۡيَةٍ أَهۡلَكۡنَٰهَآ أَنَّهُمۡ لَا يَرۡجِعُونَ ٩٥ حَتَّىٰٓ إِذَا فُتِحَتۡ يَأۡجُوجُ وَمَأۡجُوجُ وَهُم مِّن كُلِّ حَدَبٍ يَنسِلُونَ ٩٦ وَٱقۡتَرَبَ ٱلۡوَعۡدُ ٱلۡحَقُّ فَإِذَا هِيَ شَٰخِصَةٌ أَبۡصَٰرُ ٱلَّذِينَ كَفَرُواْ يَٰوَيۡلَنَا قَدۡ كُنَّا فِي غَفۡلَةٍ مِّنۡ هَٰذَا بَلۡ كُنَّا ظَٰلِمِينَ ٩٧ إِنَّكُمۡ وَمَا تَعۡبُدُونَ مِن دُونِ ٱللَّهِ حَصَبُ جَهَنَّمَ أَنتُمۡ لَهَا وَٰرِدُونَ ٩٨ لَوۡ كَانَ هَٰٓؤُلَآءِ ءَالِهَةً مَّا وَرَدُوهَاۖ وَكُلٌّ فِيهَا خَٰلِدُونَ ٩٩ لَهُمۡ فِيهَا زَفِيرٌ وَهُمۡ فِيهَا لَا يَسۡمَعُونَ ١٠٠ إِنَّ ٱلَّذِينَ سَبَقَتۡ لَهُم مِّنَّا ٱلۡحُسۡنَىٰٓ أُوْلَٰٓئِكَ عَنۡهَا مُبۡعَدُونَ ١٠١
21:91
وَٱلَّتِيٓ أَحۡصَنَتۡ فَرۡجَهَا فَنَفَخۡنَا فِيهَا مِن رُّوحِنَا وَجَعَلۡنَٰهَا وَٱبۡنَهَآ ءَايَةً لِّلۡعَٰلَمِينَ ٩١
ತನ್ನ ಶೀಲವನ್ನು ಕಾಪಾಡಿಕೊಂಡ ಆ ಸ್ತಿçà (ಮರ್ಯಮ್)ಯನ್ನು ಸ್ಮರಿಸಿರಿ. ನಾವು ಅವಳ ಒಳಗೆ ನಮ್ಮ ಆತ್ಮದಿಂದ ಊದಿದೆವು ಮತ್ತು ಆಕೆಯನ್ನು, ಆಕೆಯ ಪುತ್ರನನ್ನು ಸರ್ವ ಲೋಕದವರಿಗೆ ಒಂದು ನಿದರ್ಶನವನ್ನಾಗಿ ಮಾಡಿದೆವು.
21:92
إِنَّ هَٰذِهِۦٓ أُمَّتُكُمۡ أُمَّةً وَٰحِدَةً وَأَنَا۠ رَبُّكُمۡ فَٱعۡبُدُونِ ٩٢
ವಾಸ್ತವದಲ್ಲಿ ಈ ನಿಮ್ಮ ಸಮುದಾಯವು ಏಕೈಕ ಸಮುದಾಯವಾಗಿದೆ ಮತ್ತು ನಾನು ನಿಮ್ಮ ಪ್ರಭುವಾಗಿದ್ದೇನೆ. ಆದ್ದರಿಂದ ನೀವು ನನ್ನನ್ನು ಆರಾಧಿಸಿರಿ.
21:93
وَتَقَطَّعُوٓاْ أَمۡرَهُم بَيۡنَهُمۡۖ كُلٌّ إِلَيۡنَا رَٰجِعُونَ ٩٣
ಆದರೆ ಅವರು (ಗ್ರಂಥದವರು) ತಮ್ಮ ಧರ್ಮದಲ್ಲಿ ಗುಂಪುಗಳನ್ನು ಕಟ್ಟಿಕೊಂಡರು. ಎಲ್ಲರೂ ನಮ್ಮೆಡೆಗೇ ಮರಳಿ ಬರುವವರಾಗಿದ್ದಾರೆ.
21:94
فَمَن يَعۡمَلۡ مِنَ ٱلصَّٰلِحَٰتِ وَهُوَ مُؤۡمِنٌ فَلَا كُفۡرَانَ لِسَعۡيِهِۦ وَإِنَّا لَهُۥ كَٰتِبُونَ ٩٤
ಯಾರು ಸತ್ಯವಿಶ್ವಾಸಿಯಾಗಿದ್ದು ಕೊಂಡು ಸತ್ಕರ್ಮಗಳನ್ನು ಮಾಡುತ್ತನೋ ಅವನ ಪರಿಶ್ರಮವನ್ನು ತಿರಸ್ಕರಿಸಲಾಗದು. ನಾವು ಅದನ್ನು ದಾಖಲಿಸುತ್ತಿದ್ದೇವೆ.
21:95
وَحَرَٰمٌ عَلَىٰ قَرۡيَةٍ أَهۡلَكۡنَٰهَآ أَنَّهُمۡ لَا يَرۡجِعُونَ ٩٥
ಮತ್ತು ನಾವು ನಾಶ ಮಾಡಿರುವ ಯಾವುದೇ ನಾಡಿನ ಜನರು (ಮರಣದ ನಂತರ) ಪುನಃ ಮರಳಿ ಬರುವುದು ಅಸಾಧ್ಯವಾಗಿದೆ.
21:96
حَتَّىٰٓ إِذَا فُتِحَتۡ يَأۡجُوجُ وَمَأۡجُوجُ وَهُم مِّن كُلِّ حَدَبٍ يَنسِلُونَ ٩٦
ಯಾಜೂಜ್-ಮಾಜೂಜ್‌ರನ್ನು ಬಿಡುಗಡೆಗೊಳಿಸಲ್ಪಡುವ ತನಕ ಅವರ ಪ್ರತಿಯೊಂದು ಎತ್ತರ ಪ್ರದೇಶಗಳಿಂದಲೂ ಧಾವಿಸಿ ಬರುವರು.
21:97
وَٱقۡتَرَبَ ٱلۡوَعۡدُ ٱلۡحَقُّ فَإِذَا هِيَ شَٰخِصَةٌ أَبۡصَٰرُ ٱلَّذِينَ كَفَرُواْ يَٰوَيۡلَنَا قَدۡ كُنَّا فِي غَفۡلَةٍ مِّنۡ هَٰذَا بَلۡ كُنَّا ظَٰلِمِينَ ٩٧
ಸತ್ಯಪೂರ್ಣ ವಾಗ್ದಾನದ ಸಮಯ ಸಮೀಪಿಸಿದಾಗ ಸತ್ಯನಿಷೇಧಿಗಳ ದೃಷ್ಟಿಗಳು ದಿಟ್ಟಿಸಿ ನೋಡುತ್ತಿರುವುವು. (ಅವರು ಹೇಳುವರು) ಅಯ್ಯೋ ನಮ್ಮ ದುರ್ಗತಿಯೇ, ನಾವು ಇದರ ಕುರಿತು ಅಲಕ್ಷö್ಯರಾಗಿದ್ದೆವು. ಅಲ್ಲ, ನಾವು ಅಪರಾಧಿಗಳಾಗಿದ್ದೆವು.
21:98
إِنَّكُمۡ وَمَا تَعۡبُدُونَ مِن دُونِ ٱللَّهِ حَصَبُ جَهَنَّمَ أَنتُمۡ لَهَا وَٰرِدُونَ ٩٨
ನೀವು ಮತ್ತು ಅಲ್ಲಾಹನನ್ನು ಬಿಟ್ಟು ನೀವು ಆರಾಧಿಸುತ್ತಿದ್ದ ವಸ್ತುಗಳು ನರಕದ ಇಂಧನವಾಗಿವೆ. ನೀವೆಲ್ಲರೂ ಅಲ್ಲಿಗೆ ತಲುಪುವವರಾಗಿರುವಿರಿ.
21:99
لَوۡ كَانَ هَٰٓؤُلَآءِ ءَالِهَةً مَّا وَرَدُوهَاۖ وَكُلٌّ فِيهَا خَٰلِدُونَ ٩٩
ಇವು ನೈಜವಾಗಿ ದೇವರುಗಳೇ ಆಗಿರುತ್ತಿದ್ದರೆ, ನರಕಕ್ಕೆ ತಲುಪುತ್ತಿರಲಿಲ್ಲ ಮತ್ತು ಸಕಲರೂ ಅದರಲ್ಲೇ ಶಾಶ್ವತರಾಗಿರುವರು.
21:100
لَهُمۡ فِيهَا زَفِيرٌ وَهُمۡ فِيهَا لَا يَسۡمَعُونَ ١٠٠
ಅವರು ಅಲ್ಲಿ ಚೀರುತ್ತಿರುವರು ಮತ್ತು ಅದರಲ್ಲಿ ಏನನ್ನೂ ಕೇಳಿಸಿಕೊಳ್ಳಾರರು.
21:101
إِنَّ ٱلَّذِينَ سَبَقَتۡ لَهُم مِّنَّا ٱلۡحُسۡنَىٰٓ أُوْلَٰٓئِكَ عَنۡهَا مُبۡعَدُونَ ١٠١
ನಿಶ್ಚಯವಾಗಿಯೂ ಯಾರಿಗೆ ಮೊದಲೇ ನಮ್ಮಿಂದ ಒಳಿತಿನ ನಿರ್ಧಾರವಾಗಿದೆಯೋ (ಸತ್ಯವಿಶ್ವಾಸಿಗಳು) ಅವರೆಲ್ಲರೂ ನರಕಾಗ್ನಿಯಿಂದ ದೂರ ಇಡಲಾಗುವರು.
العربيةEnglishBahasa IndonesiaTürkçeРусскийفارسیFrançaisاردوবাংলাDeutschEspañol中文हिन्दीPortuguêsItalianoภาษาไทยPolskiNederlandsShqipKiswahiliO'zbekதமிழ்MelayuBosanskiSoomaaliAzərbaycanکوردی한국어日本語SvenskaDanskNorskپښتوമലയാളംසිංහලTamazightHausaአማርኛБългарскиТоҷикӣҚазақшаFilipinoسنڌيYorùbáFulfuldeТатарчаئۇيغۇرچەКыргызчаਪੰਜਾਬੀJawaతెలుగుမြန်မာગુજરાતીOromoमराठीTiếng ViệtMalagasyНохчийнWolofދިވެހިಕನ್ನಡУкраїнськаΕλληνικάქართულიខ្មែរدریQafar afMaranaoनेपाली
ಪವಿತ್ರ ಕುರಾನ್
Tuesday, August 25, 2026
Don't forget us in your sincere prayers







