ಸೂರಾ ಫುಸ್ಸಿಲತ್ ಅರೇಬಿಕ್ ಮತ್ತು ಕನ್ನಡ

ಸೂರಾ ಫುಸ್ಸಿಲತ್ ಸಂಪೂರ್ಣ ಕನ್ನಡ ಅನುವಾದ, ಉಚ್ಚಾರಣೆ ಮತ್ತು ಆಡಿಯೋ ಪಠಣದೊಂದಿಗೆ ಓದಿ. ಪ್ರತಿ ಆಯತ್‌ನ ಅರ್ಥ. (54 ಆಯತ್ — مكية). ಫುಸ್ಸಿಲತ್ ಆಲಿಸಿ, ಫುಸ್ಸಿಲತ್ ಅನುವಾದ, ಫುಸ್ಸಿಲತ್ mp3, ಫುಸ್ಸಿಲತ್ pdf.

ಸೂರಾ ಫುಸ್ಸಿಲತ್ ಓದಿ ಮತ್ತು ಆಲಿಸಿ

🎧 ಆಯತ್
M Mishary Rashid Alafasy
M Mahmoud Khalil Al-Husary
A Abdurrahman As-Sudais
M Mohamed Siddiq Al-Minshawi
A Abdul Basit Abdul Samad
A Ali Al-Hudhaify
A Ahmed ibn Ali al-Ajamy
A Abu Bakr Ash-Shaatree
M Muhammad Ayyoub
A Abdullah Basfar
A Abdullah Al-Juhani
M Maher Al Muaiqly
x1
حم ۝١
📖 ಅನುವಾದ ಆಯತ್ 1
ಹಾ-ಮೀಮ್
تَنزِيلٌ مِّنَ الرَّحْمَٰنِ الرَّحِيمِ ۝٢
📖 ಅನುವಾದ ಆಯತ್ 2
ಇದು ಪರಮದಯಾಮಯನು, ಕರುಣಾನಿಧಿಯು ಆದವನಕಡೆಯಿಂದ ಅವತೀರ್ಣಗೊಂಡಿದೆ.
كِتَابٌ فُصِّلَتْ آيَاتُهُ قُرْآنًا عَرَبِيًّا لِّقَوْمٍ يَعْلَمُونَ ۝٣
📖 ಅನುವಾದ ಆಯತ್ 3
ಇದು ಸೂಕ್ತಿಗಳನ್ನು ಸ್ಪಷ್ಟವಾಗಿ ವಿವರಿಸಲಾದ ಒಂದು ಗ್ರಂಥ, ಅರಿವುಳ್ಳ ಜನರಿಗೆ ಅರಬೀ ಭಾಷೆಯಲ್ಲಿ ಪಾರಾಯಣ ಮಾಡುವ ಗ್ರಂಥ.
بَشِيرًا وَنَذِيرًا فَأَعْرَضَ أَكْثَرُهُمْ فَهُمْ لَا يَسْمَعُونَ ۝٤
📖 ಅನುವಾದ ಆಯತ್ 4
ಸುವಾರ್ತೆ ಹಾಗು ಮುನ್ನೆಚ್ಚರಿಕೆ ನೀಡುವಗ್ರಂಥ. ಆದರೂಅವರ ಪೈಕಿ ಹೆಚ್ಚಿನವರು ವಿಮುಖರಾದರು. ಅವರು ಆಲಿಸುವುದಿಲ್ಲ.
وَقَالُوا قُلُوبُنَا فِي أَكِنَّةٍ مِّمَّا تَدْعُونَا إِلَيْهِ وَفِي آذَانِنَا وَقْرٌ وَمِن بَيْنِنَا وَبَيْنِكَ حِجَابٌ فَاعْمَلْ إِنَّنَا عَامِلُونَ ۝٥
📖 ಅನುವಾದ ಆಯತ್ 5
ಅವರು ಹೇಳುತ್ತಾರೆ: ನೀವು ಯಾವುದರೆಡೆಗೆ ನಮ್ಮನ್ನು ಅಹ್ವಾನಿಸುತ್ತಿರುವಿರೋ ಅದರ ಬಗ್ಗೆ ನಮ್ಮ ಹೃದಯಗಳು ಪರದೆಯಲ್ಲಿವೆ ಮತ್ತು ನಮ್ಮ ಕಿವಿಗಳು ಕಿವುಡಾಗಿದೆ ಹಾಗೂ ನಮ್ಮ ಮತ್ತು ನಿಮ್ಮ ನಡುವೆ ಒಂದು ತೆರೆ ಬಿದ್ದಿದೆ. ಆದ್ದರಿಂದ ನೀವು ನಿಮ್ಮಕಾರ್ಯವೆಸಗಿ, ಮತ್ತು ನಾವು ನಮ್ಮ ಕಾರ್ಯವೆಸಗುತ್ತೇವೆ.
قُلْ إِنَّمَا أَنَا بَشَرٌ مِّثْلُكُمْ يُوحَىٰ إِلَيَّ أَنَّمَا إِلَٰهُكُمْ إِلَٰهٌ وَاحِدٌ فَاسْتَقِيمُوا إِلَيْهِ وَاسْتَغْفِرُوهُ ۗ وَوَيْلٌ لِّلْمُشْرِكِينَ ۝٦
📖 ಅನುವಾದ ಆಯತ್ 6
ಓ ಪ್ರವಾದಿಯವರೇ ಹೇಳಿರಿ: ನಾನು ನಿಮ್ಮಂತಹ ಒಬ್ಬ ಮನುಷ್ಯನಾಗಿದ್ದೇನೆ. ನಿಮ್ಮ ಆರಾಧ್ಯನು ಏಕೈಕ ಆರಾಧ್ಯನೆಂದು ನನ್ನೆಡೆಗೆ ದಿವ್ಯವಾಣಿ ಮಾಡಲಾಗುತ್ತದೆ. ಆದ್ದರಿಂದ ನೀವು ಅವನೆಡೆಗೆ ಸ್ಥಿರಚಿತ್ತರಾಗಿ ಅವನಲ್ಲಿ ಕ್ಷಮೆ ಬೇಡಿರಿ ಮತ್ತು ಬಹುದೇವಾರಾಧಕರಿಗೆ ಮಹಾನಾಶವಿದೆ.
الَّذِينَ لَا يُؤْتُونَ الزَّكَاةَ وَهُم بِالْآخِرَةِ هُمْ كَافِرُونَ ۝٧
📖 ಅನುವಾದ ಆಯತ್ 7
ಅವರು ಝಕಾತ್" ನೀಡದವರು ಮತ್ತು ಪರಲೋಕವನ್ನು ನಿಷೇಧಿಸುವವರಾಗಿದ್ದಾರೆ.
إِنَّ الَّذِينَ آمَنُوا وَعَمِلُوا الصَّالِحَاتِ لَهُمْ أَجْرٌ غَيْرُ مَمْنُونٍ ۝٨
📖 ಅನುವಾದ ಆಯತ್ 8
ಖಂಡಿತವಾಗಿಯು ಸತ್ಯವಿಶ್ವಾಸವಿರಿಸಿ ಸತ್ಕರ್ಮಗಳನ್ನು ಕೈಗೊಳ್ಳುವವರಿಗೆ ಅನಂತ ಪ್ರತಿಫಲವಿದೆ.
۞ قُلْ أَئِنَّكُمْ لَتَكْفُرُونَ بِالَّذِي خَلَقَ الْأَرْضَ فِي يَوْمَيْنِ وَتَجْعَلُونَ لَهُ أَندَادًا ۚ ذَٰلِكَ رَبُّ الْعَالَمِينَ ۝٩
📖 ಅನುವಾದ ಆಯತ್ 9
ಹೇಳಿರಿ: ನೀವು ಭೂಮಿಯನ್ನು ಎರಡು ದಿನಗಳಲ್ಲಿ ಸೃಷ್ಟಿಸಿದ ಅಲ್ಲಾಹನನ್ನು ನಿರಾಕರಿಸುತ್ತಿದ್ದೀರಾ? ಹಾಗೂ ಇತರರನ್ನು ಅವನಿಗೆ ಸರಿಸಮಾನರನ್ನಾಗಿ ಕಲ್ಪಿಸುತ್ತಿದ್ದೀರಾ? ಅವನೇ ಸರ್ವಲೋಕಗಳ ಪಾಲಕ ಪ್ರಭು.
وَجَعَلَ فِيهَا رَوَاسِيَ مِن فَوْقِهَا وَبَارَكَ فِيهَا وَقَدَّرَ فِيهَا أَقْوَاتَهَا فِي أَرْبَعَةِ أَيَّامٍ سَوَاءً لِّلسَّائِلِينَ ۝١٠
📖 ಅನುವಾದ ಆಯತ್ 10
ಅವನು ಭೂಮಿಯ ಮೇಲೆ ಪರ್ವತಗಳನ್ನು ನಾಟಿಬಿಟ್ಟನು. ಮತ್ತು ಅದರಲ್ಲಿ ಸಮೃದ್ಧಿಯನ್ನು ಇರಿಸಿದನು. ಹಾಗೂ ನಾಲ್ಕು ದಿನಗಳಲ್ಲಿ ಅಪೇಕ್ಷಕರಿಗೆ ಅವರ ಅಗತ್ಯಕ್ಕೆ ತಕ್ಕಂತೆ ಅದರಲ್ಲಿ ಆಹಾರದ ವ್ಯವಸ್ಥೆಯನ್ನು ಮಾಡಿದನು.
ثُمَّ اسْتَوَىٰ إِلَى السَّمَاءِ وَهِيَ دُخَانٌ فَقَالَ لَهَا وَلِلْأَرْضِ ائْتِيَا طَوْعًا أَوْ كَرْهًا قَالَتَا أَتَيْنَا طَائِعِينَ ۝١١
📖 ಅನುವಾದ ಆಯತ್ 11
ಬಳಿಕ ಅವನು ಆಕಾಶದೆಡೆಗೆ ಗಮನಹರಿಸಿದನು ಅದು ಧೂಮವಾಗಿತ್ತು. ಆಗ ಅವನು(ಅಲ್ಲಾಹ್) ಅದಕ್ಕೂ, ಭೂಮಿಗೂ ಹೇಳಿದನು: ನೀವಿಬ್ಬರೂ ವಿಧೇಯರಾಗಿ ಇಲ್ಲವೇ ಅನಿವಾರ್ಯವಾಗಿ ಬಂದು ಬಿಡಿರಿ. ಅವೆರಡೂ ನಾವು ವಿಧೇಯರಾಗಿ ಬಂದೆವು ಎಂದು ಹೇಳಿದವು.
فَقَضَاهُنَّ سَبْعَ سَمَاوَاتٍ فِي يَوْمَيْنِ وَأَوْحَىٰ فِي كُلِّ سَمَاءٍ أَمْرَهَا ۚ وَزَيَّنَّا السَّمَاءَ الدُّنْيَا بِمَصَابِيحَ وَحِفْظًا ۚ ذَٰلِكَ تَقْدِيرُ الْعَزِيزِ الْعَلِيمِ ۝١٢
📖 ಅನುವಾದ ಆಯತ್ 12
ಆಗ ಅವನು ಎರಡು ದಿನಗಳಲ್ಲಿ ಏಳು ಆಕಾಶಗಳನ್ನುಂಟು ಮಾಡಿದನು. ಹಾಗೂ ಪ್ರತಿಯೊಂದು ಆಕಾಶದಲ್ಲೂ ಅದಕ್ಕೆ ಯೋಗ್ಯವಾದ ನಿಯಮವನ್ನು ದಿವ್ಯ ವಾಣಿಯ ಮೂಲಕ ನೀಡಿದನು ಮತ್ತು ನಾವು ಜಗದ ಆಕಾಶವನ್ನು ದೀಪಗಳಿಂದ ಅಲಂಕರಿಸಿದ್ದೇವೆ ಹಾಗೂ ಸಂರಕ್ಷಣೆಯನ್ನು ಮಾಡಿದ್ದೇವೆ. ಇದು ಬಲಾಢ್ಯನೂ, ಸರ್ವಜ್ಞನೂ ಆದ ಅಲ್ಲಾಹನ ಯೋಜನೆಯಾಗಿದೆ.
فَإِنْ أَعْرَضُوا فَقُلْ أَنذَرْتُكُمْ صَاعِقَةً مِّثْلَ صَاعِقَةِ عَادٍ وَثَمُودَ ۝١٣
📖 ಅನುವಾದ ಆಯತ್ 13
ಇನ್ನು ಅವರು ವಿಮುಖರಾದರೆ ನೀವು ಹೇಳಿರಿ: ನಾನು ನಿಮಗೆ ಆದ್ ಮತ್ತು ಸಮೂದರಿಗೆ ಬಾಧಿಸಿದ ಆರ್ಭಟದಂತಿರುವ ಒಂದು ಘೋರ ಆರ್ಭಟದ ಎಚ್ಚರಿಕೆ ನೀಡುತ್ತೇನೆ.
إِذْ جَاءَتْهُمُ الرُّسُلُ مِن بَيْنِ أَيْدِيهِمْ وَمِنْ خَلْفِهِمْ أَلَّا تَعْبُدُوا إِلَّا اللَّهَ ۖ قَالُوا لَوْ شَاءَ رَبُّنَا لَأَنزَلَ مَلَائِكَةً فَإِنَّا بِمَا أُرْسِلْتُم بِهِ كَافِرُونَ ۝١٤
📖 ಅನುವಾದ ಆಯತ್ 14
ಅವರ ಬಳಿಗೆ ಸಂದೇಶವಾಹಕರು ಅವರ ಮುಂದಿನಿAದಲೂ, ಅವರ ಹಿಂದಿನಿAದಲೂ ಬಂದು: ನೀವು ಅಲ್ಲಾಹನ ಹೊರತು ಇನ್ನಾರನ್ನೂ ಆರಾಧಿಸಬೇಡಿರಿ ಎಂದಾಗ ಅವರು ನಮ್ಮ ಪ್ರಭುವು ಇಚ್ಛಿಸುತ್ತಿದ್ದರೆ ಮಲಕ್‌ಗಳನ್ನು ಕಳುಹಿಸುತ್ತಿದ್ದನು. ಆದುದರಿಂದ ನಿಮ್ಮನ್ನು ಯಾವ ಸಂದೇಶದ ಮೂಲಕ ಕಳುಹಿಸಲಾಗಿದೆಯೋ ಅದನ್ನು ನಾವು ನಿರಾಕರಿಸುತ್ತೇವೆ ಎಂದರು.
فَأَمَّا عَادٌ فَاسْتَكْبَرُوا فِي الْأَرْضِ بِغَيْرِ الْحَقِّ وَقَالُوا مَنْ أَشَدُّ مِنَّا قُوَّةً ۖ أَوَلَمْ يَرَوْا أَنَّ اللَّهَ الَّذِي خَلَقَهُمْ هُوَ أَشَدُّ مِنْهُمْ قُوَّةً ۖ وَكَانُوا بِآيَاتِنَا يَجْحَدُونَ ۝١٥
📖 ಅನುವಾದ ಆಯತ್ 15
ಆದ್ ಜನಾಂಗದವರು ಭೂಮಿಯಲ್ಲಿ ಅನ್ಯಾಯವಾಗಿ ಅಹಂಕಾರ ತೋರುತ್ತಿದ್ದರು ಮತ್ತು ನಮಗಿಂತಲೂ ಶಕ್ತಿ ಸಾಮರ್ಥ್ಯದಲ್ಲಿ ಮಿಗಿಲಾದವರು ಯಾರಿದ್ದಾರೆ? ಎನ್ನುತ್ತಿದ್ದರು. ಅವರನ್ನು ಸೃಷ್ಟಿಸಿದವನಾದ ಅಲ್ಲಾಹನು ಅವರಿಗಿಂತ ಆದಷ್ಟೋ ಹೆಚ್ಚು ಬಲಿಷ್ಠನೆಂಬುದು ಅವರಿಗೆ ಕಾಣಲಿಲ್ಲವೇ? ಮಾತ್ರವಲ್ಲದೆ ಅವರು ನಮ್ಮದೃಷ್ಟಾಂತಗಳನ್ನು ನಿರಾಕರಿಸುತ್ತಿದ್ದರು.
فَأَرْسَلْنَا عَلَيْهِمْ رِيحًا صَرْصَرًا فِي أَيَّامٍ نَّحِسَاتٍ لِّنُذِيقَهُمْ عَذَابَ الْخِزْيِ فِي الْحَيَاةِ الدُّنْيَا ۖ وَلَعَذَابُ الْآخِرَةِ أَخْزَىٰ ۖ وَهُمْ لَا يُنصَرُونَ ۝١٦
📖 ಅನುವಾದ ಆಯತ್ 16
ಆದ್ದರಿಂದ ನಾವು ಅವರಿಗೆ ಲೌಕಿಕ ಜೀವನದಲ್ಲೇ ಅಪಮಾನಕರ ಯಾತನೆಯನ್ನು ಸವಿಸಲೆಂದು ಭೀಕರ ಗಾಳಿಯನ್ನು ಅಶುಭಕರ ದಿನಗಳಲ್ಲಿ ಕಳುಹಿಸಿದೆವು ಮತ್ತು ಪರಲೋಕದ ಯಾತನೆಯು ಅದಕ್ಕಿಂತಲೂ ಅಪಮಾನಕರವಾಗಿದೆ. ಮತ್ತು ಅವರಿಗೆ ಸಹಾಯವು ನೀಡಲಾಗದು.
وَأَمَّا ثَمُودُ فَهَدَيْنَاهُمْ فَاسْتَحَبُّوا الْعَمَىٰ عَلَى الْهُدَىٰ فَأَخَذَتْهُمْ صَاعِقَةُ الْعَذَابِ الْهُونِ بِمَا كَانُوا يَكْسِبُونَ ۝١٧
📖 ಅನುವಾದ ಆಯತ್ 17
ಇನ್ನು ಸಮೂದ್ ಜನಾಂಗಕ್ಕೆ ನಾವು ಸನ್ಮಾರ್ಗವನ್ನು ತೋರಿಸಿದೆವು. ಆದರೆ ಅವರು ಸನ್ಮಾರ್ಗಕ್ಕಿಂತ ಅಂಧತೆಯನ್ನೇ ಮೆಚ್ಚಿಕೊಂಡರು. ಆಗ ಅವರನ್ನು ಅವರ ದುಷ್ಕರ್ಮಗಳ ನಿಮಿತ್ತ ಅಪಮಾನಕರ ಯಾತನೆಯ ರೂಪದಲ್ಲಿ ಘೋರ ಆರ್ಭಟವು ಹಿಡಿದು ಬಟ್ಟಿತು.
وَنَجَّيْنَا الَّذِينَ آمَنُوا وَكَانُوا يَتَّقُونَ ۝١٨
📖 ಅನುವಾದ ಆಯತ್ 18
ಮತ್ತು ಸತ್ಯವಿಶ್ವಾಸವನ್ನಿರಿಸಿ, ಭಯಭಕ್ತಿ ತೋರಿದವರನ್ನು ನಾವು ರಕ್ಷಿಸಿದೆವು
وَيَوْمَ يُحْشَرُ أَعْدَاءُ اللَّهِ إِلَى النَّارِ فَهُمْ يُوزَعُونَ ۝١٩
📖 ಅನುವಾದ ಆಯತ್ 19
ಅಲ್ಲಾಹನ ಶತ್ರುಗಳನ್ನು ನರಕದೆಡೆಗೆ ಒಟ್ಟು ಗೂಡಿಸಲಾಗುವ ದಿನ ಅವರು ತಂಡೋಪ ತಂಡಗಳಾಗಿ ಒಟ್ಟು ಗೂಡಿಸಲಾಗುವರು.
حَتَّىٰ إِذَا مَا جَاءُوهَا شَهِدَ عَلَيْهِمْ سَمْعُهُمْ وَأَبْصَارُهُمْ وَجُلُودُهُم بِمَا كَانُوا يَعْمَلُونَ ۝٢٠
📖 ಅನುವಾದ ಆಯತ್ 20
ಕೊನೆಗೆ ಅವರು ನರಕದ ಸಮೀಪಕ್ಕೆ ಬಂದಾಗ ಅವರ ಕಿವಿಗಳೂ, ಕಣ್ಣುಗಳೂ, ಚರ್ಮಗಳೂ ಅವರು ಮಾಡುತ್ತಿದ್ದುದರ ಕುರಿತು ಸಾಕ್ಷಿ ಹೇಳುವುವು.
وَقَالُوا لِجُلُودِهِمْ لِمَ شَهِدتُّمْ عَلَيْنَا ۖ قَالُوا أَنطَقَنَا اللَّهُ الَّذِي أَنطَقَ كُلَّ شَيْءٍ وَهُوَ خَلَقَكُمْ أَوَّلَ مَرَّةٍ وَإِلَيْهِ تُرْجَعُونَ ۝٢١
📖 ಅನುವಾದ ಆಯತ್ 21
ಅವರು ತಮ್ಮ ಚರ್ಮಗಳೊಡನೆ ಹೀಗೆ ಕೇಳುವರು ನೀವೇಕೆ ನಮ್ಮ ವಿರುದ್ಧ ಸಾಕ್ಷಿ ನೀಡಿದಿರಿ? ಆಗ ಅವು ಪ್ರತಿಯೊಂದು ವಸ್ತುವಿಗೂ ಮಾತನಾಡುವ ಶಕ್ತಿಯನ್ನು ನೀಡಿದ ಅಲ್ಲಾಹನೇ ನಮಗೂ ಮಾತನಾಡುವ ಶಕ್ತಿಯನ್ನು ನೀಡಿದ್ದಾನೆ ಎಂದು ಹೇಳುವರು. ಅವನೇ ನಿಮ್ಮನ್ನು ಮೊದಲ ಬಾರಿಗೆ ಸೃಷ್ಟಿಸಿದ್ದಾನೆ ಮತ್ತು ಅವನೆಡೆಗೇ ನೀವು ಮರಳಿಸಲಾಗುವಿರಿ.
وَمَا كُنتُمْ تَسْتَتِرُونَ أَن يَشْهَدَ عَلَيْكُمْ سَمْعُكُمْ وَلَا أَبْصَارُكُمْ وَلَا جُلُودُكُمْ وَلَٰكِن ظَنَنتُمْ أَنَّ اللَّهَ لَا يَعْلَمُ كَثِيرًا مِّمَّا تَعْمَلُونَ ۝٢٢
📖 ಅನುವಾದ ಆಯತ್ 22
ನೀವು ಅಪರಾಧಗಳನ್ನೆಸಗುತ್ತಿದ್ದಾಗ ನಿಮ್ಮ ಕಿವಿಗಳು, ಕಣ್ಣುಗಳು, ಚರ್ಮಗಳು ನಿಮ್ಮ ವಿರುದ್ಧ ಸಾಕ್ಷಿ ಹೇಳಬಲ್ಲವು ಎಂಬ ಯೋಚನೆಯಿಂದ ನೀವು ಅಡಗಿಕೊಳ್ಳುತ್ತಿರಲಿಲ್ಲ. ನೀವಂತು ನಿಮ್ಮ ಹಲವು ಕರ್ಮಗಳ ಕುರಿತು ಅಲ್ಲಾಹನಿಗೇ ತಿಳಿದಿಲ್ಲವೆಂದು ಭಾವಿಸಿಕೊಂಡಿದ್ದಿರಿ.
وَذَٰلِكُمْ ظَنُّكُمُ الَّذِي ظَنَنتُم بِرَبِّكُمْ أَرْدَاكُمْ فَأَصْبَحْتُم مِّنَ الْخَاسِرِينَ ۝٢٣
📖 ಅನುವಾದ ಆಯತ್ 23
ನೀವು ನಿಮ್ಮ ಪ್ರಭುವಿನ ಬಗ್ಗೆ ಇರಿಸಿಕೊಂಡಿದ್ದ ಭಾವನೆಯೇ ನಿಮ್ಮನ್ನು ನಾಶಕ್ಕೊಳಪಡಿಸಿದೆ. ಮತ್ತು ನೀವು ನಷ್ಟಹೊಂದಿದವರಲ್ಲಾಗಿಬಿಟ್ಟಿರಿ.
فَإِن يَصْبِرُوا فَالنَّارُ مَثْوًى لَّهُمْ ۖ وَإِن يَسْتَعْتِبُوا فَمَا هُم مِّنَ الْمُعْتَبِينَ ۝٢٤
📖 ಅನುವಾದ ಆಯತ್ 24
ಇನ್ನು ಅವರು ಸಹನೆವಹಿಸಿದರೂ ನರಕವೇ ಅವರ ವಾಸಸ್ಥಳವಾಗಿದೆ. ಮತ್ತು ಅವರು ಪಶ್ಚಾತ್ತಾಪ ಪಟ್ಟರೂ ಅವರ ಪಶ್ಚಾತ್ತಾಪವನ್ನು ಸ್ವೀಕರಿಸಲಾಗದು.
۞ وَقَيَّضْنَا لَهُمْ قُرَنَاءَ فَزَيَّنُوا لَهُم مَّا بَيْنَ أَيْدِيهِمْ وَمَا خَلْفَهُمْ وَحَقَّ عَلَيْهِمُ الْقَوْلُ فِي أُمَمٍ قَدْ خَلَتْ مِن قَبْلِهِم مِّنَ الْجِنِّ وَالْإِنسِ ۖ إِنَّهُمْ كَانُوا خَاسِرِينَ ۝٢٥
📖 ಅನುವಾದ ಆಯತ್ 25
ನಾವು ಅವರಿಗೆ ಕೆಲವು ಸಂಗಡಿಗರನ್ನು ನಿಯೋಜಿಸಿದ್ದೆವು. ಅವರು ಅವರ ಮುಂದೆ ಮತ್ತು ಹಿಂದೆ ಇರುವ ಕರ್ಮಗಳನ್ನು ಅವರ ದೃಷ್ಟಿಯಲ್ಲಿ ಮನಮೋಹಕವಾಗಿ ತೋರಿಸಿದರು. ಮತ್ತು ಅವರಿಗಿಂತ ಮೊದಲು ಗತಿಸಿದ ಯಕ್ಷ ಹಾಗೂ ಮನುಷ್ಯರಲ್ಲಿನ ಸಮುದಾಯಗಳ ಮೇಲೆ ಸಾಬೀತಾದ ಶಿಕ್ಷೆಯ ತೀರ್ಮಾನವೇ ಅವರ ಮೇಲೂ ಸಾಬೀತುಗೊಂಡಿತು ನಿಶ್ಚಯವಾಗಿಯು ಅವರು ನಷ್ಟಹೊಂದಿದವರಾಗಿದ್ದರು.
وَقَالَ الَّذِينَ كَفَرُوا لَا تَسْمَعُوا لِهَٰذَا الْقُرْآنِ وَالْغَوْا فِيهِ لَعَلَّكُمْ تَغْلِبُونَ ۝٢٦
📖 ಅನುವಾದ ಆಯತ್ 26
ಸತ್ಯನಿಷೇಧಿಗಳು ಹೇಳಿದರು: ನೀವು ಈ ಕುರ್‌ಆನನ್ನು ಕೇಳಬೇಡಿರಿ. ಅದರಲ್ಲಿ (ಪಠಣದ ವೇಳೆಯಲ್ಲಿ) ಗುಲ್ಲೆಬ್ಬಿಸಿರಿ. ನೀವು ಮೇಲುಗೈ ಸಾಧಿಸಬಹುದು.
فَلَنُذِيقَنَّ الَّذِينَ كَفَرُوا عَذَابًا شَدِيدًا وَلَنَجْزِيَنَّهُمْ أَسْوَأَ الَّذِي كَانُوا يَعْمَلُونَ ۝٢٧
📖 ಅನುವಾದ ಆಯತ್ 27
ನಿಶ್ಚಯವಾಗಿಯು ಆ ಸತ್ಯನಿಷೇಧಿಗಳಿಗೆ ನಾವು ಯಾತನೆಯ ಸವಿಯನ್ನು ಉಣಿಸುವೆವು. ಮತ್ತು ಅವರು ಮಾಡುತ್ತಿದ್ದಂತಹ ದುಪ್ಕರ್ಮಗಳ ಪ್ರತಿಫಲವನ್ನು ಅವರಿಗೆ ಖಂಡಿತ ನೀಡುವೆವು.
ذَٰلِكَ جَزَاءُ أَعْدَاءِ اللَّهِ النَّارُ ۖ لَهُمْ فِيهَا دَارُ الْخُلْدِ ۖ جَزَاءً بِمَا كَانُوا بِآيَاتِنَا يَجْحَدُونَ ۝٢٨
📖 ಅನುವಾದ ಆಯತ್ 28
ಅದು ಅಲ್ಲಾಹನ ಶತ್ರುಗಳಿಗೆ ಪ್ರತಿಫಲವಾಗಿ ಸಿಗಲಿರುವ ಶಿಕ್ಷೆಯೇ ಈ ನರಕಾಗ್ನಿಯಾಗಿದೆ. ಅದರಲ್ಲೇ ಅವರಿಗೆ ಶಾಶ್ವತ ನೆಲೆ ಇದೆ. (ಇದು) ನಮ್ಮ ದೃಷ್ಟಾಂತಗಳನ್ನು ನಿಷೇಧಿಸುತ್ತಿದ್ದುದರ ಪ್ರತಿಫಲವಾಗಿದೆ.
وَقَالَ الَّذِينَ كَفَرُوا رَبَّنَا أَرِنَا اللَّذَيْنِ أَضَلَّانَا مِنَ الْجِنِّ وَالْإِنسِ نَجْعَلْهُمَا تَحْتَ أَقْدَامِنَا لِيَكُونَا مِنَ الْأَسْفَلِينَ ۝٢٩
📖 ಅನುವಾದ ಆಯತ್ 29
ಸತ್ಯಷೇಧಿಗಳು ಹೇಳುವರು: ನಮ್ಮ ಪ್ರಭು, ಯಕ್ಷ ಮತ್ತು ಮನುಷ್ಯರ ಪೈಕಿ ನಮ್ಮನ್ನು ದಾರಿಗೆಡಿಸಿದ ಆ ಎರಡೂ ತಂಡಗಳನ್ನು ನಮಗೊಮ್ಮೆ ತೋರಿಸಿ ಕೊಡು. ಅವರು ತೀವ್ರ ಅಪಮಾನಿತರಾಗಲು ನಾವು ಅವರನ್ನು ನಮ್ಮ ಪಾದದಡಿಯಲ್ಲಿ ಹಾಕಿ ತುಳಿಯುವೆವು.
إِنَّ الَّذِينَ قَالُوا رَبُّنَا اللَّهُ ثُمَّ اسْتَقَامُوا تَتَنَزَّلُ عَلَيْهِمُ الْمَلَائِكَةُ أَلَّا تَخَافُوا وَلَا تَحْزَنُوا وَأَبْشِرُوا بِالْجَنَّةِ الَّتِي كُنتُمْ تُوعَدُونَ ۝٣٠
📖 ಅನುವಾದ ಆಯತ್ 30
ಖಂಡಿತವಾಗಿಯು ನಮ್ಮ ಫ್ರಭುವು ಅಲ್ಲಾಹನೆಂದು ಹೇಳಿ: ಬಳಿಕ ಅದರಲ್ಲೇ ಸ್ಥಿರವಾಗಿ ನಿಂತವರ ಬಳಿ ಮಲಕ್‌ಗಳು ಬಂದು: ನೀವು ಭಯಪಡಬೇಡಿರಿ ಮತ್ತು ವ್ಯಥೆಪಡಬೇಡಿರಿ ನಿಮಗೆ ವಾಗ್ದಾನ ನೀಡಲಾಗುತ್ತಿದ್ದಂತಹ ಸ್ವರ್ಗದ ಸುವಾರ್ತೆಯಿಂದ ಸಂತೋಷಪಡಿರಿ ಎಂದು ಹೇಳುವರು.
نَحْنُ أَوْلِيَاؤُكُمْ فِي الْحَيَاةِ الدُّنْيَا وَفِي الْآخِرَةِ ۖ وَلَكُمْ فِيهَا مَا تَشْتَهِي أَنفُسُكُمْ وَلَكُمْ فِيهَا مَا تَدَّعُونَ ۝٣١
📖 ಅನುವಾದ ಆಯತ್ 31
ನಾವು ನಿಮ್ಮ ಐಹಿಕ ಜೀವನದಲ್ಲೂ ಪರಲೋಕದಲ್ಲೂ ನಿಮ್ಮ ಮಿತ್ರರಾಗಿದ್ದೇವೆ. ಮತ್ತು ನಿಮ್ಮ ಮನಸ್ಸು ಬಯಸಿದ್ದೆಲ್ಲವೂ ಅದರಲ್ಲಿರುವುದು ಹಾಗೂ ನೀವು ಕೇಳುವುದೆಲ್ಲವೂ ಅದರಲ್ಲಿ ಇರುವುದು.
نُزُلًا مِّنْ غَفُورٍ رَّحِيمٍ ۝٣٢
📖 ಅನುವಾದ ಆಯತ್ 32
ಕ್ಷಮಾಶೀಲನು, ಕರುಣಾನಿಧಿಯು ಆದ ಅಲ್ಲಾಹನ ಕಡೆಯಿಂದ ನಿಮಗಿರುವ ಸತ್ಕಾರವಿದು.
وَمَنْ أَحْسَنُ قَوْلًا مِّمَّن دَعَا إِلَى اللَّهِ وَعَمِلَ صَالِحًا وَقَالَ إِنَّنِي مِنَ الْمُسْلِمِينَ ۝٣٣
📖 ಅನುವಾದ ಆಯತ್ 33
ಅಲ್ಲಾಹನ ಕಡೆಗೆ ಅಹ್ವಾನಿಸುವ, ಸತ್ಕರ್ಮವನ್ನು ಕೈಗೊಳ್ಳುವ ಖಂಡಿತವಾಗಿಯು ನಾನು ವಿಧೇಯರಲ್ಲಾಗಿರುವೆನೆಂದು ಹೇಳುವ ವ್ಯಕ್ತಿಯ ಮಾತಿಗಿಂತ ಉತ್ತಮ ಮಾತು ಇನ್ನಾರದ್ದಾಗಿದೆ?
وَلَا تَسْتَوِي الْحَسَنَةُ وَلَا السَّيِّئَةُ ۚ ادْفَعْ بِالَّتِي هِيَ أَحْسَنُ فَإِذَا الَّذِي بَيْنَكَ وَبَيْنَهُ عَدَاوَةٌ كَأَنَّهُ وَلِيٌّ حَمِيمٌ ۝٣٤
📖 ಅನುವಾದ ಆಯತ್ 34
ಒಳಿತು ಮತ್ತು ಕೆಡುಕು ಸಮಾನವಾಗಲಾರದು. ನೀವು ಕೆಡುಕನ್ನು ಅತ್ಯುತ್ತಮ ಒಳಿತಿನ ಮೂಲಕ ತಡೆಯಿರಿ. ಹಾಗಾದರೆ ನಿಮ್ಮೊಂದಿಗೆ ಹಗೆತನ ಸಾಧಿಸುವವನು ಆಪ್ತಮಿತ್ರನಾಗುವನು.
وَمَا يُلَقَّاهَا إِلَّا الَّذِينَ صَبَرُوا وَمَا يُلَقَّاهَا إِلَّا ذُو حَظٍّ عَظِيمٍ ۝٣٥
📖 ಅನುವಾದ ಆಯತ್ 35
ಈ ಗುಣ ಸಹನೆವಹಿಸುವವರ ಹೊರತು ಇನ್ನಾರಿಗೂ ಲಭಿಸುವುದಿಲ್ಲ. ಹಾಗೂ ಇದು ಮಹಾ ಅದೃಷ್ಟವಂತರ ಹೊರತು ಇನ್ನಾರಿಗೂ ದೊರಕುವುದಿಲ್ಲ.
وَإِمَّا يَنزَغَنَّكَ مِنَ الشَّيْطَانِ نَزْغٌ فَاسْتَعِذْ بِاللَّهِ ۖ إِنَّهُ هُوَ السَّمِيعُ الْعَلِيمُ ۝٣٦
📖 ಅನುವಾದ ಆಯತ್ 36
ಮತ್ತು ಶೈತಾನನ ಕಡೆಯಿಂದೆನಾದರೂ ನಿಮಗೆ ದುಷ್ಟೆçÃರಣೆಯು ಉಂಟಾದರೆ ನೀವು ಅಲ್ಲಾಹನ ಅಭಯ ಯಾಚಿಸಿರಿ. ಖಂಡಿತವಾಗಿಯು ಅವನು ಸರ್ವವನ್ನಾಲಿಸು ವವನೂ, ಸರ್ವಜ್ಞನೂ ಆಗಿದ್ದಾನೆ.
وَمِنْ آيَاتِهِ اللَّيْلُ وَالنَّهَارُ وَالشَّمْسُ وَالْقَمَرُ ۚ لَا تَسْجُدُوا لِلشَّمْسِ وَلَا لِلْقَمَرِ وَاسْجُدُوا لِلَّهِ الَّذِي خَلَقَهُنَّ إِن كُنتُمْ إِيَّاهُ تَعْبُدُونَ ۝٣٧
📖 ಅನುವಾದ ಆಯತ್ 37
ರಾತ್ರಿ ಹಗಲು, ಸೂರ್ಯ ಚಂದ್ರರು ಅಲ್ಲಾಹನ ನಿದರ್ಶನಗಳಲ್ಲಾಗಿವೆ. ನೀವು ಸೂರ್ಯನಿಗಾಗಲಿ, ಚಂದ್ರನಿಗಾಗಲಿ ಸಾಷ್ಟಾಂಗವೆರಗಬೇಡಿರಿ. ಅವುಗಳನ್ನು ಸೃಷ್ಟಿಸಿದ ಅಲ್ಲಾಹನಿಗೆ ಸಾಷ್ಟಾಂಗವೆರಗಿರಿ.ನೀವು ಅವನನ್ನೇ ಆರಾಧಿಸುವವರಾಗಿದ್ದರೆ.
فَإِنِ اسْتَكْبَرُوا فَالَّذِينَ عِندَ رَبِّكَ يُسَبِّحُونَ لَهُ بِاللَّيْلِ وَالنَّهَارِ وَهُمْ لَا يَسْأَمُونَ ۩ ۝٣٨
📖 ಅನುವಾದ ಆಯತ್ 38
ಇನ್ನು ಅವರು ಅಹಂಕಾರತೋರಿದರೆ ನಿಮ್ಮ ಪ್ರಭುವಿನ ಸನ್ನಿಧಿಯಲ್ಲಿರುವ (ಮಲಕ್‌ಗಳು) ರಾತ್ರಿ-ಹಗಲೆನ್ನದೆ ಅವನನ್ನು ಸುತ್ತಿಸುತ್ತಿರುತ್ತಾರೆ ಮತ್ತು ಅವರು ದಣಿಯುವುದಿಲ್ಲ.
وَمِنْ آيَاتِهِ أَنَّكَ تَرَى الْأَرْضَ خَاشِعَةً فَإِذَا أَنزَلْنَا عَلَيْهَا الْمَاءَ اهْتَزَّتْ وَرَبَتْ ۚ إِنَّ الَّذِي أَحْيَاهَا لَمُحْيِي الْمَوْتَىٰ ۚ إِنَّهُ عَلَىٰ كُلِّ شَيْءٍ قَدِيرٌ ۝٣٩
📖 ಅನುವಾದ ಆಯತ್ 39
ಅಲ್ಲಾಹನ ದೃಷ್ಟಾಂತಗಳ ಪೈಕಿ ನೀವು ಭೂಮಿಯನ್ನು ಒಣಗಿರುವುದಾಗಿ ಕಾಣುತ್ತೀರಿ. ಅನಂತರ ನಾವು ಅದರ ಮೇಲೆ ಮಳೆ ಸುರಿಸಿದಾಗ ಅದುಗರಿಗೆದರಿ ಮೊಳೆಯತೊಡಗುತ್ತದೆ. ಅದನ್ನು ಜೀವಂತಗೊಳಿಸಿದವನೇ ಖಂಡಿತ ಮೃತರನ್ನೂ ಪುನಃ ಜೀವಂತಗೊಳಿಸುವನು. ನಿಸ್ಸಂಶವಾಗಿಯು ಅವನು ಸಕಲ ವಸ್ತುಗಳ ಮೇಲೆ ಸಾಮರ್ಥ್ಯವುಳ್ಳವನಾಗಿದ್ದಾನೆ.
إِنَّ الَّذِينَ يُلْحِدُونَ فِي آيَاتِنَا لَا يَخْفَوْنَ عَلَيْنَا ۗ أَفَمَن يُلْقَىٰ فِي النَّارِ خَيْرٌ أَم مَّن يَأْتِي آمِنًا يَوْمَ الْقِيَامَةِ ۚ اعْمَلُوا مَا شِئْتُمْ ۖ إِنَّهُ بِمَا تَعْمَلُونَ بَصِيرٌ ۝٤٠
📖 ಅನುವಾದ ಆಯತ್ 40
ನಿಸ್ಸಂದೇಹವಾಗಿಯೂ ನಮ್ಮ ಸೂಕ್ತಿಗಳಲ್ಲಿ ವಕ್ರತೆಯನ್ನು ಉಂಟು ಮಾಡುವವರು ನಮ್ಮಿಂದ ಮರೆಯಾಗಿಲ್ಲ. ಇನ್ನು ನರಕದಲ್ಲಿ ಹಾಕಲಾಗುವವನು ಉತ್ತಮನೋ ಅಥವಾ ಪುನರುತ್ಥಾನದ ದಿನದಂದು ನಿರ್ಭಯನಾಗಿ ಬರುವವನೋ? ನೀವಿಚ್ಛಿಸುವುದನ್ನು ಮಾಡುತ್ತಿರಿ. ಅವನು ನೀವು ಮಾಡುತ್ತಿರುವುದೆಲ್ಲ ವನ್ನು ನೋಡುತ್ತಿದ್ದಾನೆ.
إِنَّ الَّذِينَ كَفَرُوا بِالذِّكْرِ لَمَّا جَاءَهُمْ ۖ وَإِنَّهُ لَكِتَابٌ عَزِيزٌ ۝٤١
📖 ಅನುವಾದ ಆಯತ್ 41
ಬೋಧನೆಯು ತಮ್ಮ ಬಳಿ ಬಂದಾಗ ಅವರು ಅದನ್ನು ನಿಷೇಧಿಸಿದರು. ಆದರೆ ಇದು ಪ್ರತಾಪಶಾಲಿ ಗ್ರಂಥವಾಗಿದೆ.
لَّا يَأْتِيهِ الْبَاطِلُ مِن بَيْنِ يَدَيْهِ وَلَا مِنْ خَلْفِهِ ۖ تَنزِيلٌ مِّنْ حَكِيمٍ حَمِيدٍ ۝٤٢
📖 ಅನುವಾದ ಆಯತ್ 42
ಅದರ ಮುಂದಿನಿAದಾಗಲಿ, ಹಿಂದಿನಿAದಾಗಲಿ ಮಿಥ್ಯವು ಸುಳಿಯದು. ಇದು ಸುಜ್ಞಾನಿಯೂ, ಸ್ತುತ್ಯರ್ಹನೂ ಆದ ಅಲ್ಲಾಹನಿಂದ ಅವತೀರ್ಣಗೊಂಡಿದ್ದಾಗಿದೆ.
مَّا يُقَالُ لَكَ إِلَّا مَا قَدْ قِيلَ لِلرُّسُلِ مِن قَبْلِكَ ۚ إِنَّ رَبَّكَ لَذُو مَغْفِرَةٍ وَذُو عِقَابٍ أَلِيمٍ ۝٤٣
📖 ಅನುವಾದ ಆಯತ್ 43
ನಿಮಗಿಂತ ಮುಂಚೆ ಗತಿಸಿದ ಸಂದೇಶವಾಹಕರೊAದಿಗೆ ಹೇಳಲಾಗಿದ್ದ ವಿಷಯವನ್ನೇ ನಿಮ್ಮೊಂದಿಗೂ ಹೇಳಲಾಗುತ್ತಿದೆ. ಖಂಡಿತವಾಗಿಯು ನಿಮ್ಮ ಪ್ರಭುವು ಕ್ಷಮೆಯುಳ್ಳವನೂ, ಮತ್ತು ವೇದನಾಜನಕ ಶಿಕ್ಷೆ ಕೊಡುವವನೂ ಆಗಿದ್ದಾನೆ.
وَلَوْ جَعَلْنَاهُ قُرْآنًا أَعْجَمِيًّا لَّقَالُوا لَوْلَا فُصِّلَتْ آيَاتُهُ ۖ أَأَعْجَمِيٌّ وَعَرَبِيٌّ ۗ قُلْ هُوَ لِلَّذِينَ آمَنُوا هُدًى وَشِفَاءٌ ۖ وَالَّذِينَ لَا يُؤْمِنُونَ فِي آذَانِهِمْ وَقْرٌ وَهُوَ عَلَيْهِمْ عَمًى ۚ أُولَٰئِكَ يُنَادَوْنَ مِن مَّكَانٍ بَعِيدٍ ۝٤٤
📖 ಅನುವಾದ ಆಯತ್ 44
ಮತ್ತು ನಾವಿದನ್ನು ಅರಬೇತರ ಭಾಷೆಯ ಖುರ್‌ಆನನ್ನಾಗಿ ಮಾಡಿ ಅವತೀರ್ಣಗೊಳಿಸಿರುತ್ತಿದ್ದರೆ ಅವರು ಹೀಗೆ ಹೇಳುತ್ತಿದ್ದರು: ಇದರ ಸೂಕ್ತಿಗಳನ್ನು ಸ್ಪಷ್ಟವಾಗಿ ಏಕೆ ವಿವರಿಸಿಲ್ಲ? ಇದು ಅರಬೇತರ ಗ್ರಂಥ ಹಾಗೂ ಅರಬ್ ಸಂದೇಶವಾಹಕ!? ಹೇಳಿರಿ: ಇದು ಸತ್ಯವಿಶ್ವಾಸವಿರಿಸಿದವರಿಗೆ ಸನ್ಮಾರ್ಗವು ಉಪಶಮನವು ಆಗಿದೆ ಮತ್ತು ವಿಶ್ವಾಸವಿಡದವರ ಕಿವಿಗಳಲ್ಲಿ (ಕಿವುಡುತನ ಹಾಗೂ) ಅವರ ಮೇಲೆ ಅಂಧತೆಯಿದೆ ಇಂತಹವರು. ಬಹುದೂರ ಪ್ರದೇಶದಿಂದ ಕರೆಯಲಾಗುವಂತಹ ಜನರಾಗಿದ್ದಾರೆ.
وَلَقَدْ آتَيْنَا مُوسَى الْكِتَابَ فَاخْتُلِفَ فِيهِ ۗ وَلَوْلَا كَلِمَةٌ سَبَقَتْ مِن رَّبِّكَ لَقُضِيَ بَيْنَهُمْ ۚ وَإِنَّهُمْ لَفِي شَكٍّ مِّنْهُ مُرِيبٍ ۝٤٥
📖 ಅನುವಾದ ಆಯತ್ 45
ನಿಸ್ಸಂದೇಹವಾಗಿಯೂ ನಾವು ಮೂಸಾರವರಿಗೆ ಗ್ರಂಥವನ್ನು ನೀಡಿದೆವು. ಅನಂತರ ಅದರಲ್ಲೂ ಭಿನ್ನಾಭಿಪ್ರಾಯ ತೋರಲಾಯಿತು ನಮ್ಮ ಪ್ರಭುವಿನಿಂದ ಮೊದಲೇ ನಿಶ್ಚಿತಗೊಂಡ ಮಾತು ಇಲ್ಲದಿರುತ್ತಿದ್ದರೆ (ಯಾವಾಗಲೋ )ಅವರ ನಡುವೆ ತೀರ್ಪು ಮಾಡಿಬಿಡಲಾಗುತ್ತಿತ್ತು ವಾಸ್ತವದಲ್ಲಿ ಇವರು ಅದರ (ಕುರ್‌ಆನಿನ) ಕುರಿತು ತೀವ್ರ ಸಂದೇಹದಲ್ಲಿದ್ದಾರೆ.
مَّنْ عَمِلَ صَالِحًا فَلِنَفْسِهِ ۖ وَمَنْ أَسَاءَ فَعَلَيْهَا ۗ وَمَا رَبُّكَ بِظَلَّامٍ لِّلْعَبِيدِ ۝٤٦
📖 ಅನುವಾದ ಆಯತ್ 46
ಯಾರು ಸತ್ಕರ್ಮವನ್ನು ಮಾಡುತ್ತಾನೋ ಅವನು ತನ್ನ ಹಿತಕ್ಕಾಗಿಯೇ ಮಾಡುತ್ತಾನೆ. ಹಾಗೂ ಯಾರು ಕೆಡುಕನ್ನು ಮಾಡುತ್ತಾನೋ ಅದರ ದುಷ್ಟರಿಣಾಮವು ಅವನ ಮೇಲೆಯೇ ಇರುತ್ತದೆ ನಮ್ಮ ಪ್ರಭುವು ತನ್ನದಾಸರ ಪಾಲಿಗೆ ಅಕ್ರಮಿಯಲ್ಲ.
۞ إِلَيْهِ يُرَدُّ عِلْمُ السَّاعَةِ ۚ وَمَا تَخْرُجُ مِن ثَمَرَاتٍ مِّنْ أَكْمَامِهَا وَمَا تَحْمِلُ مِنْ أُنثَىٰ وَلَا تَضَعُ إِلَّا بِعِلْمِهِ ۚ وَيَوْمَ يُنَادِيهِمْ أَيْنَ شُرَكَائِي قَالُوا آذَنَّاكَ مَا مِنَّا مِن شَهِيدٍ ۝٤٧
📖 ಅನುವಾದ ಆಯತ್ 47
ಪುನರುತ್ಥಾನದ ಜ್ಞಾನವನ್ನು ಅವನೆಡೆಗೇ ಮರಳಿಸಲಾಗುತ್ತದೆ. ಮತ್ತು ಅವನಿಗೆ ಅರಿವಿಲ್ಲದೇ ಯಾವುದೇ ಫಲ ತನ್ನ ಕೋಶದಿಂದ ಹೊರಬರುವುದಿಲ್ಲ ಮತ್ತು ಯಾವ ಹೆಣ್ಣು ಗರ್ಭಧರಿಸುವುದೂ ಇಲ್ಲ. ಹೆರುವುದೂ ಇಲ್ಲ. ಅವನು ನನ್ನ ಸಹಭಾಗಿಗಳೆಲ್ಲಾ ಎಲ್ಲಿ? ಎಂದು ಅವರನ್ನು ಕೇಳುವ ದಿನ ಆಗ ಅವರು: ನಮ್ಮಲ್ಲಿ ಸಾಕ್ಷಿದಾರನಾಗಿ ಯಾರೂ ಇಲ್ಲವೆಂದು ನಾವಾಗಲೇ ಹೇಳಿ ಬಟ್ಟಿದ್ದೇವೆಂದು ಉತ್ತರಿಸುವರು.
وَضَلَّ عَنْهُم مَّا كَانُوا يَدْعُونَ مِن قَبْلُ ۖ وَظَنُّوا مَا لَهُم مِّن مَّحِيصٍ ۝٤٨
📖 ಅನುವಾದ ಆಯತ್ 48
ಇದಕ್ಕೆ ಮೊದಲು ಅವರು ಕರೆದು ಬೇಡುತ್ತಿದ್ದ ದೇವರುಗಳೆಲ್ಲ ಅವರಿಂದ ಕಣ್ಮರೆಯಾಗಿ ಬಿಡುವರು ಮತ್ತು ತಮಗೆ ಯಾವ ಅಭಯ ಸ್ಥಾನವಿಲ್ಲವೆಂದು ಅವರಿಗೆ ಮನದಟ್ಟಾಗುವುದು.
لَّا يَسْأَمُ الْإِنسَانُ مِن دُعَاءِ الْخَيْرِ وَإِن مَّسَّهُ الشَّرُّ فَيَئُوسٌ قَنُوطٌ ۝٤٩
📖 ಅನುವಾದ ಆಯತ್ 49
ಮನುಷ್ಯನು ಒಳಿತನ್ನು ಬೇಡುವುದರಿಂದ ದಣಿಯುವುದಿಲ್ಲ ಅವನಿಗೆ ತೊಂದರೆಯೇನಾದರೂ ಉಂಟಾದರೆ ಅವನು ನಿರಾಶನೂ ಹತಾಶನೂ ಆಗಿ ಬಿಡುತ್ತಾನೆ.
وَلَئِنْ أَذَقْنَاهُ رَحْمَةً مِّنَّا مِن بَعْدِ ضَرَّاءَ مَسَّتْهُ لَيَقُولَنَّ هَٰذَا لِي وَمَا أَظُنُّ السَّاعَةَ قَائِمَةً وَلَئِن رُّجِعْتُ إِلَىٰ رَبِّي إِنَّ لِي عِندَهُ لَلْحُسْنَىٰ ۚ فَلَنُنَبِّئَنَّ الَّذِينَ كَفَرُوا بِمَا عَمِلُوا وَلَنُذِيقَنَّهُم مِّنْ عَذَابٍ غَلِيظٍ ۝٥٠
📖 ಅನುವಾದ ಆಯತ್ 50
ಆದರೆ ಅವನಿಗೆ ಬಾಧಿಸಿದ ಕಷ್ಟದ ನಂತರ ನಾವು ಅವನಿಗೆ ನಮ್ಮ ಕೃಪೆಯ ಸವಿಯನ್ನುಣಿಸಿದಾಗ ಅವನೇ ಇದಕ್ಕೆ ನಾನು ಅರ್ಹನಾಗಿದ್ದೆನು. ಪುನರುತ್ಥಾನವು ಸಂಭವಿಸುವುದೆAದು ನಾನು ಭಾವಿಸುವುದಿಲ್ಲ ಒಂದು ವೇಳೆ ನಾನು ನನ್ನ ಪ್ರಭುವಿನೆಡೆಗೆ ಮರಳಿಸಲಾದರೂ ಖಂಡಿತ ನನಗೆ ಅವನ ಬಳಿಯೂ ಅತ್ಯುತ್ತಮವಾದುದೇ ಇರುವುದು ಎಂದು ಹೇಳುತ್ತಾನೆ. ಖಂಡಿತವಾಗಿಯು ನಾವು ಆ ಸತ್ಯನಿಷೇಧಿಗಳಿಗೆ ಅವರ ಕರ್ಮಗಳ ಬಗ್ಗೆ ತಿಳಿಸಲಿದ್ದೇವೆ ಹಾಗೂ ಅವರಿಗೆ ಕಠಿಣಯಾತನೆಯ ಸವಿಯುನ್ನುಣಿಸಲಿದ್ದೇವೆ.
وَإِذَا أَنْعَمْنَا عَلَى الْإِنسَانِ أَعْرَضَ وَنَأَىٰ بِجَانِبِهِ وَإِذَا مَسَّهُ الشَّرُّ فَذُو دُعَاءٍ عَرِيضٍ ۝٥١
📖 ಅನುವಾದ ಆಯತ್ 51
ಮತ್ತು ನಾವು ಮನುಷ್ಯನಿಗೆ ಯಾವುದಾದರು ಅನುಗ್ರಹವನ್ನು ನೀಡಿದರೆ ಅವನು ವಿಮುಖನಾಗುತ್ತಾನೆ ಮತ್ತು ದೂರ ಸರಿದು ಬಿಡುತ್ತಾನೆ ಒಂದು ವೇಳೆ ಅವನಿಗೆನಾದರೂ ಸಂಕಷ್ಟವು ಬಾಧಿಸಿದರೆ ಅವನು ಉದ್ದುದ್ದ ಪ್ರಾರ್ಥನೆಯನ್ನು ಸಲ್ಲಿಸುತ್ತಾನೆ.
قُلْ أَرَأَيْتُمْ إِن كَانَ مِنْ عِندِ اللَّهِ ثُمَّ كَفَرْتُم بِهِ مَنْ أَضَلُّ مِمَّنْ هُوَ فِي شِقَاقٍ بَعِيدٍ ۝٥٢
📖 ಅನುವಾದ ಆಯತ್ 52
ಓ ಪೈಗಂಬರರೇ ಹೇಳಿರಿ: ಈ ಖುರ್‌ಆನ್ ಅಲ್ಲಾಹನ ಕಡೆಯಿಂದ ಬಂದಿದ್ದು, ನಂತರ ನೀವು ಅದನ್ನು ನಿರಾಕರಿಸಿದ್ದರೆ ಇದರ ವಿರೋಧದಲ್ಲಿ ದೂರ ಸಾಗಿ ಬಿಟ್ಟವನಿಗಿಂತ ದೊಡ್ಡ ಮಾರ್ಗಭ್ರಷ್ಟನು ಇನ್ನಾರಿದ್ದಾನೆಂದು ನೀವು ಆಲೋಚಿಸಿದ್ದೀರಾ?
سَنُرِيهِمْ آيَاتِنَا فِي الْآفَاقِ وَفِي أَنفُسِهِمْ حَتَّىٰ يَتَبَيَّنَ لَهُمْ أَنَّهُ الْحَقُّ ۗ أَوَلَمْ يَكْفِ بِرَبِّكَ أَنَّهُ عَلَىٰ كُلِّ شَيْءٍ شَهِيدٌ ۝٥٣
📖 ಅನುವಾದ ಆಯತ್ 53
ಶೀಘ್ರವೇ ನಾವು ಇವರಿಗೆ ಬಾಹ್ಯಾಕಾಶಗಳಲ್ಲೂ ಸ್ವತಃ ಅವರೊಳಗೂ ಈ ಖುರ್‌ಆನ್ ಸತ್ಯವೆಂದು ಅವರಿಗೆ ಮನದಟ್ಟಾಗುವತನಕ ನಮ್ಮ ದೃಷ್ಟಾಂತಗಳನ್ನು ತೋರಿಸಿಕೊಡಲಿದ್ದೇವೆ. ನಿಮ್ಮ ಪ್ರಭುವು ಪ್ರತಿಯೊಂದು ವಸ್ತುವಿನ ಮೇಲೆ ಸಾಕ್ಷಿಯಾಗಿದ್ದಾನೆಂದು ಸಾಲದೇ?
أَلَا إِنَّهُمْ فِي مِرْيَةٍ مِّن لِّقَاءِ رَبِّهِمْ ۗ أَلَا إِنَّهُ بِكُلِّ شَيْءٍ مُّحِيطٌ ۝٥٤
📖 ಅನುವಾದ ಆಯತ್ 54
ತಿಳಿಯಿರಿ ಖಂಡಿತವಾಗಿಯೂ ಇವರು ತಮ್ಮ ಪ್ರಭುವಿನ ಭೇಟಿಯ ಕುರಿತು ಸಂದೇಹದಲ್ಲಿದ್ದಾರೆ, ತಿಳಿಯಿರಿ. ಖಂಡಿತ ಅಲ್ಲಾಹನು ಸಕಲ ವಸ್ತುಗಳನ್ನೂ ಆವರಿಸಿರುತ್ತಾನೆ.
← 40 ಫುಸ್ಸಿಲತ್ (41/114) 42 →
ಓದಿ ಸೂರಾ ಫುಸ್ಸಿಲತ್ ಕನ್ನಡ ಅನುವಾದ – ಪಠಣ ಮತ್ತು ಆಡಿಯೋ

41فصلت Fussilat 📚 54 ಆಯತ್ مكية

ಆಯತ್‌ವಾರು – ಸೂರಾ ಫುಸ್ಸಿಲತ್ — 54 ಆಯತ್




ಪವಿತ್ರ ಕುರಾನ್


Monday, September 7, 2026

Don't forget us in your sincere prayers