ಸೂರಾ ಫುಸ್ಸಿಲತ್ pdf — ಡೌನ್‌ಲೋಡ್ (ಕನ್ನಡ)
ಸೂರಾ ಫುಸ್ಸಿಲತ್ pdf ಕನ್ನಡ — ಡೌನ್‌ಲೋಡ್ ಸೂರಾ ಫುಸ್ಸಿಲತ್ ಅನುವಾದ. ಸೂರಾ ಫುಸ್ಸಿಲತ್ (Meccan) 54 ಆಯತ್.
Related
- ಸೂರಾ ಫುಸ್ಸಿಲತ್ ಅನುವಾದಕನ್ನಡ
- ಸೂರಾ ಫುಸ್ಸಿಲತ್ mp3ಆಲಿಸಿ
- Quran Index ಕನ್ನಡ114
More ಸೂರಾ PDF
ಸೂರಾ ಫುಸ್ಸಿಲತ್

ﭑﭒ
41:1
ಹಾ-ಮೀಮ್
ﭓﭔﭕﭖﭗ
41:2
ಇದು ಪರಮದಯಾಮಯನು, ಕರುಣಾನಿಧಿಯು ಆದವನಕಡೆಯಿಂದ ಅವತೀರ್ಣಗೊಂಡಿದೆ.
ﭘﭙﭚﭛﭜﭝﭞﭟ
41:3
ಇದು ಸೂಕ್ತಿಗಳನ್ನು ಸ್ಪಷ್ಟವಾಗಿ ವಿವರಿಸಲಾದ ಒಂದು ಗ್ರಂಥ, ಅರಿವುಳ್ಳ ಜನರಿಗೆ ಅರಬೀ ಭಾಷೆಯಲ್ಲಿ ಪಾರಾಯಣ ಮಾಡುವ ಗ್ರಂಥ.
ﭠﭡﭢﭣﭤﭥﭦﭧ
41:4
ಸುವಾರ್ತೆ ಹಾಗು ಮುನ್ನೆಚ್ಚರಿಕೆ ನೀಡುವಗ್ರಂಥ. ಆದರೂಅವರ ಪೈಕಿ ಹೆಚ್ಚಿನವರು ವಿಮುಖರಾದರು. ಅವರು ಆಲಿಸುವುದಿಲ್ಲ.
ﭨﭩﭪﭫﭬﭭﭮﭯﭰﭱﭲﭳﭴﭵﭶﭷﭸﭹ
41:5
ಅವರು ಹೇಳುತ್ತಾರೆ: ನೀವು ಯಾವುದರೆಡೆಗೆ ನಮ್ಮನ್ನು ಅಹ್ವಾನಿಸುತ್ತಿರುವಿರೋ ಅದರ ಬಗ್ಗೆ ನಮ್ಮ ಹೃದಯಗಳು ಪರದೆಯಲ್ಲಿವೆ ಮತ್ತು ನಮ್ಮ ಕಿವಿಗಳು ಕಿವುಡಾಗಿದೆ ಹಾಗೂ ನಮ್ಮ ಮತ್ತು ನಿಮ್ಮ ನಡುವೆ ಒಂದು ತೆರೆ ಬಿದ್ದಿದೆ. ಆದ್ದರಿಂದ ನೀವು ನಿಮ್ಮಕಾರ್ಯವೆಸಗಿ, ಮತ್ತು ನಾವು ನಮ್ಮ ಕಾರ್ಯವೆಸಗುತ್ತೇವೆ.
ﭺﭻﭼﭽﭾﭿﮀﮁﮂﮃﮄﮅﮆﮇﮈﮉﮊﮋ
41:6
ಓ ಪ್ರವಾದಿಯವರೇ ಹೇಳಿರಿ: ನಾನು ನಿಮ್ಮಂತಹ ಒಬ್ಬ ಮನುಷ್ಯನಾಗಿದ್ದೇನೆ. ನಿಮ್ಮ ಆರಾಧ್ಯನು ಏಕೈಕ ಆರಾಧ್ಯನೆಂದು ನನ್ನೆಡೆಗೆ ದಿವ್ಯವಾಣಿ ಮಾಡಲಾಗುತ್ತದೆ. ಆದ್ದರಿಂದ ನೀವು ಅವನೆಡೆಗೆ ಸ್ಥಿರಚಿತ್ತರಾಗಿ ಅವನಲ್ಲಿ ಕ್ಷಮೆ ಬೇಡಿರಿ ಮತ್ತು ಬಹುದೇವಾರಾಧಕರಿಗೆ ಮಹಾನಾಶವಿದೆ.
ﮌﮍﮎﮏﮐﮑﮒﮓﮔ
41:7
ಅವರು ಝಕಾತ್" ನೀಡದವರು ಮತ್ತು ಪರಲೋಕವನ್ನು ನಿಷೇಧಿಸುವವರಾಗಿದ್ದಾರೆ.
ﮕﮖﮗﮘﮙﮚﮛﮜﮝﮞ
41:8
ಖಂಡಿತವಾಗಿಯು ಸತ್ಯವಿಶ್ವಾಸವಿರಿಸಿ ಸತ್ಕರ್ಮಗಳನ್ನು ಕೈಗೊಳ್ಳುವವರಿಗೆ ಅನಂತ ಪ್ರತಿಫಲವಿದೆ.
ﮟﮠﮡﮢﮣﮤﮥﮦﮧﮨﮩﮪﮫﮬﮭﮮﮯ
41:9
ಹೇಳಿರಿ: ನೀವು ಭೂಮಿಯನ್ನು ಎರಡು ದಿನಗಳಲ್ಲಿ ಸೃಷ್ಟಿಸಿದ ಅಲ್ಲಾಹನನ್ನು ನಿರಾಕರಿಸುತ್ತಿದ್ದೀರಾ? ಹಾಗೂ ಇತರರನ್ನು ಅವನಿಗೆ ಸರಿಸಮಾನರನ್ನಾಗಿ ಕಲ್ಪಿಸುತ್ತಿದ್ದೀರಾ? ಅವನೇ ಸರ್ವಲೋಕಗಳ ಪಾಲಕ ಪ್ರಭು.
ﮰﮱﯓﯔﯕﯖﯗﯘﯙﯚﯛﯜﯝﯞﯟﯠ
41:10
ಅವನು ಭೂಮಿಯ ಮೇಲೆ ಪರ್ವತಗಳನ್ನು ನಾಟಿಬಿಟ್ಟನು. ಮತ್ತು ಅದರಲ್ಲಿ ಸಮೃದ್ಧಿಯನ್ನು ಇರಿಸಿದನು. ಹಾಗೂ ನಾಲ್ಕು ದಿನಗಳಲ್ಲಿ ಅಪೇಕ್ಷಕರಿಗೆ ಅವರ ಅಗತ್ಯಕ್ಕೆ ತಕ್ಕಂತೆ ಅದರಲ್ಲಿ ಆಹಾರದ ವ್ಯವಸ್ಥೆಯನ್ನು ಮಾಡಿದನು.
ﯡﯢﯣﯤﯥﯦﯧﯨﯩﯪﯫﯬﯭﯮﯯﯰﯱ
41:11
ಬಳಿಕ ಅವನು ಆಕಾಶದೆಡೆಗೆ ಗಮನಹರಿಸಿದನು ಅದು ಧೂಮವಾಗಿತ್ತು. ಆಗ ಅವನು(ಅಲ್ಲಾಹ್) ಅದಕ್ಕೂ, ಭೂಮಿಗೂ ಹೇಳಿದನು: ನೀವಿಬ್ಬರೂ ವಿಧೇಯರಾಗಿ ಇಲ್ಲವೇ ಅನಿವಾರ್ಯವಾಗಿ ಬಂದು ಬಿಡಿರಿ. ಅವೆರಡೂ ನಾವು ವಿಧೇಯರಾಗಿ ಬಂದೆವು ಎಂದು ಹೇಳಿದವು.
ﭑﭒﭓﭔﭕﭖﭗﭘﭙﭚﭛﭜﭝﭞﭟﭠﭡﭢﭣﭤﭥﭦ
41:12
ಆಗ ಅವನು ಎರಡು ದಿನಗಳಲ್ಲಿ ಏಳು ಆಕಾಶಗಳನ್ನುಂಟು ಮಾಡಿದನು. ಹಾಗೂ ಪ್ರತಿಯೊಂದು ಆಕಾಶದಲ್ಲೂ ಅದಕ್ಕೆ ಯೋಗ್ಯವಾದ ನಿಯಮವನ್ನು ದಿವ್ಯ ವಾಣಿಯ ಮೂಲಕ ನೀಡಿದನು ಮತ್ತು ನಾವು ಜಗದ ಆಕಾಶವನ್ನು ದೀಪಗಳಿಂದ ಅಲಂಕರಿಸಿದ್ದೇವೆ ಹಾಗೂ ಸಂರಕ್ಷಣೆಯನ್ನು ಮಾಡಿದ್ದೇವೆ. ಇದು ಬಲಾಢ್ಯನೂ, ಸರ್ವಜ್ಞನೂ ಆದ ಅಲ್ಲಾಹನ ಯೋಜನೆಯಾಗಿದೆ.
ﭧﭨﭩﭪﭫﭬﭭﭮﭯﭰ
41:13
ಇನ್ನು ಅವರು ವಿಮುಖರಾದರೆ ನೀವು ಹೇಳಿರಿ: ನಾನು ನಿಮಗೆ ಆದ್ ಮತ್ತು ಸಮೂದರಿಗೆ ಬಾಧಿಸಿದ ಆರ್ಭಟದಂತಿರುವ ಒಂದು ಘೋರ ಆರ್ಭಟದ ಎಚ್ಚರಿಕೆ ನೀಡುತ್ತೇನೆ.
ﭱﭲﭳﭴﭵﭶﭷﭸﭹﭺﭻﭼﭽﭾﭿﮀﮁﮂﮃﮄﮅﮆﮇﮈﮉ
41:14
ಅವರ ಬಳಿಗೆ ಸಂದೇಶವಾಹಕರು ಅವರ ಮುಂದಿನಿAದಲೂ, ಅವರ ಹಿಂದಿನಿAದಲೂ ಬಂದು: ನೀವು ಅಲ್ಲಾಹನ ಹೊರತು ಇನ್ನಾರನ್ನೂ ಆರಾಧಿಸಬೇಡಿರಿ ಎಂದಾಗ ಅವರು ನಮ್ಮ ಪ್ರಭುವು ಇಚ್ಛಿಸುತ್ತಿದ್ದರೆ ಮಲಕ್‌ಗಳನ್ನು ಕಳುಹಿಸುತ್ತಿದ್ದನು. ಆದುದರಿಂದ ನಿಮ್ಮನ್ನು ಯಾವ ಸಂದೇಶದ ಮೂಲಕ ಕಳುಹಿಸಲಾಗಿದೆಯೋ ಅದನ್ನು ನಾವು ನಿರಾಕರಿಸುತ್ತೇವೆ ಎಂದರು.
ﮊﮋﮌﮍﮎﮏﮐﮑﮒﮓﮔﮕﮖﮗﮘﮙﮚﮛﮜﮝﮞﮟﮠﮡﮢﮣﮤﮥ
41:15
ಆದ್ ಜನಾಂಗದವರು ಭೂಮಿಯಲ್ಲಿ ಅನ್ಯಾಯವಾಗಿ ಅಹಂಕಾರ ತೋರುತ್ತಿದ್ದರು ಮತ್ತು ನಮಗಿಂತಲೂ ಶಕ್ತಿ ಸಾಮರ್ಥ್ಯದಲ್ಲಿ ಮಿಗಿಲಾದವರು ಯಾರಿದ್ದಾರೆ? ಎನ್ನುತ್ತಿದ್ದರು. ಅವರನ್ನು ಸೃಷ್ಟಿಸಿದವನಾದ ಅಲ್ಲಾಹನು ಅವರಿಗಿಂತ ಆದಷ್ಟೋ ಹೆಚ್ಚು ಬಲಿಷ್ಠನೆಂಬುದು ಅವರಿಗೆ ಕಾಣಲಿಲ್ಲವೇ? ಮಾತ್ರವಲ್ಲದೆ ಅವರು ನಮ್ಮದೃಷ್ಟಾಂತಗಳನ್ನು ನಿರಾಕರಿಸುತ್ತಿದ್ದರು.
ﮦﮧﮨﮩﮪﮫﮬﮭﮮﮯﮰﮱﯓﯔﯕﯖﯗﯘﯙﯚﯛﯜ
41:16
ಆದ್ದರಿಂದ ನಾವು ಅವರಿಗೆ ಲೌಕಿಕ ಜೀವನದಲ್ಲೇ ಅಪಮಾನಕರ ಯಾತನೆಯನ್ನು ಸವಿಸಲೆಂದು ಭೀಕರ ಗಾಳಿಯನ್ನು ಅಶುಭಕರ ದಿನಗಳಲ್ಲಿ ಕಳುಹಿಸಿದೆವು ಮತ್ತು ಪರಲೋಕದ ಯಾತನೆಯು ಅದಕ್ಕಿಂತಲೂ ಅಪಮಾನಕರವಾಗಿದೆ. ಮತ್ತು ಅವರಿಗೆ ಸಹಾಯವು ನೀಡಲಾಗದು.
ﯝﯞﯟﯠﯡﯢﯣﯤﯥﯦﯧﯨﯩﯪﯫ
41:17
ಇನ್ನು ಸಮೂದ್ ಜನಾಂಗಕ್ಕೆ ನಾವು ಸನ್ಮಾರ್ಗವನ್ನು ತೋರಿಸಿದೆವು. ಆದರೆ ಅವರು ಸನ್ಮಾರ್ಗಕ್ಕಿಂತ ಅಂಧತೆಯನ್ನೇ ಮೆಚ್ಚಿಕೊಂಡರು. ಆಗ ಅವರನ್ನು ಅವರ ದುಷ್ಕರ್ಮಗಳ ನಿಮಿತ್ತ ಅಪಮಾನಕರ ಯಾತನೆಯ ರೂಪದಲ್ಲಿ ಘೋರ ಆರ್ಭಟವು ಹಿಡಿದು ಬಟ್ಟಿತು.
ﯬﯭﯮﯯﯰﯱ
41:18
ಮತ್ತು ಸತ್ಯವಿಶ್ವಾಸವನ್ನಿರಿಸಿ, ಭಯಭಕ್ತಿ ತೋರಿದವರನ್ನು ನಾವು ರಕ್ಷಿಸಿದೆವು
ﯲﯳﯴﯵﯶﯷﯸﯹﯺ
41:19
ಅಲ್ಲಾಹನ ಶತ್ರುಗಳನ್ನು ನರಕದೆಡೆಗೆ ಒಟ್ಟು ಗೂಡಿಸಲಾಗುವ ದಿನ ಅವರು ತಂಡೋಪ ತಂಡಗಳಾಗಿ ಒಟ್ಟು ಗೂಡಿಸಲಾಗುವರು.
ﯻﯼﯽﯾﯿﰀﰁﰂﰃﰄﰅﰆﰇ
41:20
ಕೊನೆಗೆ ಅವರು ನರಕದ ಸಮೀಪಕ್ಕೆ ಬಂದಾಗ ಅವರ ಕಿವಿಗಳೂ, ಕಣ್ಣುಗಳೂ, ಚರ್ಮಗಳೂ ಅವರು ಮಾಡುತ್ತಿದ್ದುದರ ಕುರಿತು ಸಾಕ್ಷಿ ಹೇಳುವುವು.
ﭑﭒﭓﭔﭕﭖﭗﭘﭙﭚﭛﭜﭝﭞﭟﭠﭡﭢﭣﭤﭥ
41:21
ಅವರು ತಮ್ಮ ಚರ್ಮಗಳೊಡನೆ ಹೀಗೆ ಕೇಳುವರು ನೀವೇಕೆ ನಮ್ಮ ವಿರುದ್ಧ ಸಾಕ್ಷಿ ನೀಡಿದಿರಿ? ಆಗ ಅವು ಪ್ರತಿಯೊಂದು ವಸ್ತುವಿಗೂ ಮಾತನಾಡುವ ಶಕ್ತಿಯನ್ನು ನೀಡಿದ ಅಲ್ಲಾಹನೇ ನಮಗೂ ಮಾತನಾಡುವ ಶಕ್ತಿಯನ್ನು ನೀಡಿದ್ದಾನೆ ಎಂದು ಹೇಳುವರು. ಅವನೇ ನಿಮ್ಮನ್ನು ಮೊದಲ ಬಾರಿಗೆ ಸೃಷ್ಟಿಸಿದ್ದಾನೆ ಮತ್ತು ಅವನೆಡೆಗೇ ನೀವು ಮರಳಿಸಲಾಗುವಿರಿ.
ﭦﭧﭨﭩﭪﭫﭬﭭﭮﭯﭰﭱﭲﭳﭴﭵﭶﭷﭸﭹﭺ
41:22
ನೀವು ಅಪರಾಧಗಳನ್ನೆಸಗುತ್ತಿದ್ದಾಗ ನಿಮ್ಮ ಕಿವಿಗಳು, ಕಣ್ಣುಗಳು, ಚರ್ಮಗಳು ನಿಮ್ಮ ವಿರುದ್ಧ ಸಾಕ್ಷಿ ಹೇಳಬಲ್ಲವು ಎಂಬ ಯೋಚನೆಯಿಂದ ನೀವು ಅಡಗಿಕೊಳ್ಳುತ್ತಿರಲಿಲ್ಲ. ನೀವಂತು ನಿಮ್ಮ ಹಲವು ಕರ್ಮಗಳ ಕುರಿತು ಅಲ್ಲಾಹನಿಗೇ ತಿಳಿದಿಲ್ಲವೆಂದು ಭಾವಿಸಿಕೊಂಡಿದ್ದಿರಿ.
ﭻﭼﭽﭾﭿﮀﮁﮂﮃﮄ
41:23
ನೀವು ನಿಮ್ಮ ಪ್ರಭುವಿನ ಬಗ್ಗೆ ಇರಿಸಿಕೊಂಡಿದ್ದ ಭಾವನೆಯೇ ನಿಮ್ಮನ್ನು ನಾಶಕ್ಕೊಳಪಡಿಸಿದೆ. ಮತ್ತು ನೀವು ನಷ್ಟಹೊಂದಿದವರಲ್ಲಾಗಿಬಿಟ್ಟಿರಿ.
ﮅﮆﮇﮈﮉﮊﮋﮌﮍﮎﮏﮐﮑ
41:24
ಇನ್ನು ಅವರು ಸಹನೆವಹಿಸಿದರೂ ನರಕವೇ ಅವರ ವಾಸಸ್ಥಳವಾಗಿದೆ. ಮತ್ತು ಅವರು ಪಶ್ಚಾತ್ತಾಪ ಪಟ್ಟರೂ ಅವರ ಪಶ್ಚಾತ್ತಾಪವನ್ನು ಸ್ವೀಕರಿಸಲಾಗದು.
ﮒﮓﮔﮕﮖﮗﮘﮙﮚﮛﮜﮝﮞﮟﮠﮡﮢﮣﮤﮥﮦﮧﮨﮩﮪﮫﮬﮭ
41:25
ನಾವು ಅವರಿಗೆ ಕೆಲವು ಸಂಗಡಿಗರನ್ನು ನಿಯೋಜಿಸಿದ್ದೆವು. ಅವರು ಅವರ ಮುಂದೆ ಮತ್ತು ಹಿಂದೆ ಇರುವ ಕರ್ಮಗಳನ್ನು ಅವರ ದೃಷ್ಟಿಯಲ್ಲಿ ಮನಮೋಹಕವಾಗಿ ತೋರಿಸಿದರು. ಮತ್ತು ಅವರಿಗಿಂತ ಮೊದಲು ಗತಿಸಿದ ಯಕ್ಷ ಹಾಗೂ ಮನುಷ್ಯರಲ್ಲಿನ ಸಮುದಾಯಗಳ ಮೇಲೆ ಸಾಬೀತಾದ ಶಿಕ್ಷೆಯ ತೀರ್ಮಾನವೇ ಅವರ ಮೇಲೂ ಸಾಬೀತುಗೊಂಡಿತು ನಿಶ್ಚಯವಾಗಿಯು ಅವರು ನಷ್ಟಹೊಂದಿದವರಾಗಿದ್ದರು.
ﮮﮯﮰﮱﯓﯔﯕﯖﯗﯘﯙﯚ
41:26
ಸತ್ಯನಿಷೇಧಿಗಳು ಹೇಳಿದರು: ನೀವು ಈ ಕುರ್‌ಆನನ್ನು ಕೇಳಬೇಡಿರಿ. ಅದರಲ್ಲಿ (ಪಠಣದ ವೇಳೆಯಲ್ಲಿ) ಗುಲ್ಲೆಬ್ಬಿಸಿರಿ. ನೀವು ಮೇಲುಗೈ ಸಾಧಿಸಬಹುದು.
ﯛﯜﯝﯞﯟﯠﯡﯢﯣﯤﯥ
41:27
ನಿಶ್ಚಯವಾಗಿಯು ಆ ಸತ್ಯನಿಷೇಧಿಗಳಿಗೆ ನಾವು ಯಾತನೆಯ ಸವಿಯನ್ನು ಉಣಿಸುವೆವು. ಮತ್ತು ಅವರು ಮಾಡುತ್ತಿದ್ದಂತಹ ದುಪ್ಕರ್ಮಗಳ ಪ್ರತಿಫಲವನ್ನು ಅವರಿಗೆ ಖಂಡಿತ ನೀಡುವೆವು.
ﯦﯧﯨﯩﯪﯫﯬﯭﯮﯯﯰﯱﯲﯳﯴﯵﯶ
41:28
ಅದು ಅಲ್ಲಾಹನ ಶತ್ರುಗಳಿಗೆ ಪ್ರತಿಫಲವಾಗಿ ಸಿಗಲಿರುವ ಶಿಕ್ಷೆಯೇ ಈ ನರಕಾಗ್ನಿಯಾಗಿದೆ. ಅದರಲ್ಲೇ ಅವರಿಗೆ ಶಾಶ್ವತ ನೆಲೆ ಇದೆ. (ಇದು) ನಮ್ಮ ದೃಷ್ಟಾಂತಗಳನ್ನು ನಿಷೇಧಿಸುತ್ತಿದ್ದುದರ ಪ್ರತಿಫಲವಾಗಿದೆ.
ﯷﯸﯹﯺﯻﯼﯽﯾﯿﰀﰁﰂﰃﰄﰅﰆﰇ
41:29
ಸತ್ಯಷೇಧಿಗಳು ಹೇಳುವರು: ನಮ್ಮ ಪ್ರಭು, ಯಕ್ಷ ಮತ್ತು ಮನುಷ್ಯರ ಪೈಕಿ ನಮ್ಮನ್ನು ದಾರಿಗೆಡಿಸಿದ ಆ ಎರಡೂ ತಂಡಗಳನ್ನು ನಮಗೊಮ್ಮೆ ತೋರಿಸಿ ಕೊಡು. ಅವರು ತೀವ್ರ ಅಪಮಾನಿತರಾಗಲು ನಾವು ಅವರನ್ನು ನಮ್ಮ ಪಾದದಡಿಯಲ್ಲಿ ಹಾಕಿ ತುಳಿಯುವೆವು.
ﭑﭒﭓﭔﭕﭖﭗﭘﭙﭚﭛﭜﭝﭞﭟﭠﭡﭢﭣﭤ
41:30
ಖಂಡಿತವಾಗಿಯು ನಮ್ಮ ಫ್ರಭುವು ಅಲ್ಲಾಹನೆಂದು ಹೇಳಿ: ಬಳಿಕ ಅದರಲ್ಲೇ ಸ್ಥಿರವಾಗಿ ನಿಂತವರ ಬಳಿ ಮಲಕ್‌ಗಳು ಬಂದು: ನೀವು ಭಯಪಡಬೇಡಿರಿ ಮತ್ತು ವ್ಯಥೆಪಡಬೇಡಿರಿ ನಿಮಗೆ ವಾಗ್ದಾನ ನೀಡಲಾಗುತ್ತಿದ್ದಂತಹ ಸ್ವರ್ಗದ ಸುವಾರ್ತೆಯಿಂದ ಸಂತೋಷಪಡಿರಿ ಎಂದು ಹೇಳುವರು.
ﭥﭦﭧﭨﭩﭪﭫﭬﭭﭮﭯﭰﭱﭲﭳﭴﭵﭶ
41:31
ನಾವು ನಿಮ್ಮ ಐಹಿಕ ಜೀವನದಲ್ಲೂ ಪರಲೋಕದಲ್ಲೂ ನಿಮ್ಮ ಮಿತ್ರರಾಗಿದ್ದೇವೆ. ಮತ್ತು ನಿಮ್ಮ ಮನಸ್ಸು ಬಯಸಿದ್ದೆಲ್ಲವೂ ಅದರಲ್ಲಿರುವುದು ಹಾಗೂ ನೀವು ಕೇಳುವುದೆಲ್ಲವೂ ಅದರಲ್ಲಿ ಇರುವುದು.
ﭷﭸﭹﭺﭻ
41:32
ಕ್ಷಮಾಶೀಲನು, ಕರುಣಾನಿಧಿಯು ಆದ ಅಲ್ಲಾಹನ ಕಡೆಯಿಂದ ನಿಮಗಿರುವ ಸತ್ಕಾರವಿದು.
ﭼﭽﭾﭿﮀﮁﮂﮃﮄﮅﮆﮇﮈﮉ
41:33
ಅಲ್ಲಾಹನ ಕಡೆಗೆ ಅಹ್ವಾನಿಸುವ, ಸತ್ಕರ್ಮವನ್ನು ಕೈಗೊಳ್ಳುವ ಖಂಡಿತವಾಗಿಯು ನಾನು ವಿಧೇಯರಲ್ಲಾಗಿರುವೆನೆಂದು ಹೇಳುವ ವ್ಯಕ್ತಿಯ ಮಾತಿಗಿಂತ ಉತ್ತಮ ಮಾತು ಇನ್ನಾರದ್ದಾಗಿದೆ?
ﮊﮋﮌﮍﮎﮏﮐﮑﮒﮓﮔﮕﮖﮗﮘﮙﮚﮛﮜ
41:34
ಒಳಿತು ಮತ್ತು ಕೆಡುಕು ಸಮಾನವಾಗಲಾರದು. ನೀವು ಕೆಡುಕನ್ನು ಅತ್ಯುತ್ತಮ ಒಳಿತಿನ ಮೂಲಕ ತಡೆಯಿರಿ. ಹಾಗಾದರೆ ನಿಮ್ಮೊಂದಿಗೆ ಹಗೆತನ ಸಾಧಿಸುವವನು ಆಪ್ತಮಿತ್ರನಾಗುವನು.
ﮝﮞﮟﮠﮡﮢﮣﮤﮥﮦﮧﮨ
41:35
ಈ ಗುಣ ಸಹನೆವಹಿಸುವವರ ಹೊರತು ಇನ್ನಾರಿಗೂ ಲಭಿಸುವುದಿಲ್ಲ. ಹಾಗೂ ಇದು ಮಹಾ ಅದೃಷ್ಟವಂತರ ಹೊರತು ಇನ್ನಾರಿಗೂ ದೊರಕುವುದಿಲ್ಲ.
ﮩﮪﮫﮬﮭﮮﮯﮰﮱﯓﯔﯕﯖ
41:36
ಮತ್ತು ಶೈತಾನನ ಕಡೆಯಿಂದೆನಾದರೂ ನಿಮಗೆ ದುಷ್ಟೆçÃರಣೆಯು ಉಂಟಾದರೆ ನೀವು ಅಲ್ಲಾಹನ ಅಭಯ ಯಾಚಿಸಿರಿ. ಖಂಡಿತವಾಗಿಯು ಅವನು ಸರ್ವವನ್ನಾಲಿಸು ವವನೂ, ಸರ್ವಜ್ಞನೂ ಆಗಿದ್ದಾನೆ.
ﯗﯘﯙﯚﯛﯜﯝﯞﯟﯠﯡﯢﯣﯤﯥﯦﯧﯨﯩﯪﯫ
41:37
ರಾತ್ರಿ ಹಗಲು, ಸೂರ್ಯ ಚಂದ್ರರು ಅಲ್ಲಾಹನ ನಿದರ್ಶನಗಳಲ್ಲಾಗಿವೆ. ನೀವು ಸೂರ್ಯನಿಗಾಗಲಿ, ಚಂದ್ರನಿಗಾಗಲಿ ಸಾಷ್ಟಾಂಗವೆರಗಬೇಡಿರಿ. ಅವುಗಳನ್ನು ಸೃಷ್ಟಿಸಿದ ಅಲ್ಲಾಹನಿಗೆ ಸಾಷ್ಟಾಂಗವೆರಗಿರಿ.ನೀವು ಅವನನ್ನೇ ಆರಾಧಿಸುವವರಾಗಿದ್ದರೆ.
ﯬﯭﯮﯯﯰﯱﯲﯳﯴﯵﯶﯷﯸﯹ
41:38
ಇನ್ನು ಅವರು ಅಹಂಕಾರತೋರಿದರೆ ನಿಮ್ಮ ಪ್ರಭುವಿನ ಸನ್ನಿಧಿಯಲ್ಲಿರುವ (ಮಲಕ್‌ಗಳು) ರಾತ್ರಿ-ಹಗಲೆನ್ನದೆ ಅವನನ್ನು ಸುತ್ತಿಸುತ್ತಿರುತ್ತಾರೆ ಮತ್ತು ಅವರು ದಣಿಯುವುದಿಲ್ಲ.
ﭑﭒﭓﭔﭕﭖﭗﭘﭙﭚﭛﭜﭝﭞﭟﭠﭡﭢﭣﭤﭥﭦﭧﭨﭩ
41:39
ಅಲ್ಲಾಹನ ದೃಷ್ಟಾಂತಗಳ ಪೈಕಿ ನೀವು ಭೂಮಿಯನ್ನು ಒಣಗಿರುವುದಾಗಿ ಕಾಣುತ್ತೀರಿ. ಅನಂತರ ನಾವು ಅದರ ಮೇಲೆ ಮಳೆ ಸುರಿಸಿದಾಗ ಅದುಗರಿಗೆದರಿ ಮೊಳೆಯತೊಡಗುತ್ತದೆ. ಅದನ್ನು ಜೀವಂತಗೊಳಿಸಿದವನೇ ಖಂಡಿತ ಮೃತರನ್ನೂ ಪುನಃ ಜೀವಂತಗೊಳಿಸುವನು. ನಿಸ್ಸಂಶವಾಗಿಯು ಅವನು ಸಕಲ ವಸ್ತುಗಳ ಮೇಲೆ ಸಾಮರ್ಥ್ಯವುಳ್ಳವನಾಗಿದ್ದಾನೆ.
ﭪﭫﭬﭭﭮﭯﭰﭱﭲﭳﭴﭵﭶﭷﭸﭹﭺﭻﭼﭽﭾﭿﮀﮁﮂﮃﮄﮅﮆ
41:40
ನಿಸ್ಸಂದೇಹವಾಗಿಯೂ ನಮ್ಮ ಸೂಕ್ತಿಗಳಲ್ಲಿ ವಕ್ರತೆಯನ್ನು ಉಂಟು ಮಾಡುವವರು ನಮ್ಮಿಂದ ಮರೆಯಾಗಿಲ್ಲ. ಇನ್ನು ನರಕದಲ್ಲಿ ಹಾಕಲಾಗುವವನು ಉತ್ತಮನೋ ಅಥವಾ ಪುನರುತ್ಥಾನದ ದಿನದಂದು ನಿರ್ಭಯನಾಗಿ ಬರುವವನೋ? ನೀವಿಚ್ಛಿಸುವುದನ್ನು ಮಾಡುತ್ತಿರಿ. ಅವನು ನೀವು ಮಾಡುತ್ತಿರುವುದೆಲ್ಲ ವನ್ನು ನೋಡುತ್ತಿದ್ದಾನೆ.
ﮇﮈﮉﮊﮋﮌﮍﮎﮏﮐﮑ
41:41
ಬೋಧನೆಯು ತಮ್ಮ ಬಳಿ ಬಂದಾಗ ಅವರು ಅದನ್ನು ನಿಷೇಧಿಸಿದರು. ಆದರೆ ಇದು ಪ್ರತಾಪಶಾಲಿ ಗ್ರಂಥವಾಗಿದೆ.
ﮒﮓﮔﮕﮖﮗﮘﮙﮚﮛﮜﮝﮞﮟﮠ
41:42
ಅದರ ಮುಂದಿನಿAದಾಗಲಿ, ಹಿಂದಿನಿAದಾಗಲಿ ಮಿಥ್ಯವು ಸುಳಿಯದು. ಇದು ಸುಜ್ಞಾನಿಯೂ, ಸ್ತುತ್ಯರ್ಹನೂ ಆದ ಅಲ್ಲಾಹನಿಂದ ಅವತೀರ್ಣಗೊಂಡಿದ್ದಾಗಿದೆ.
ﮡﮢﮣﮤﮥﮦﮧﮨﮩﮪﮫﮬﮭﮮﮯﮰﮱﯓﯔ
41:43
ನಿಮಗಿಂತ ಮುಂಚೆ ಗತಿಸಿದ ಸಂದೇಶವಾಹಕರೊAದಿಗೆ ಹೇಳಲಾಗಿದ್ದ ವಿಷಯವನ್ನೇ ನಿಮ್ಮೊಂದಿಗೂ ಹೇಳಲಾಗುತ್ತಿದೆ. ಖಂಡಿತವಾಗಿಯು ನಿಮ್ಮ ಪ್ರಭುವು ಕ್ಷಮೆಯುಳ್ಳವನೂ, ಮತ್ತು ವೇದನಾಜನಕ ಶಿಕ್ಷೆ ಕೊಡುವವನೂ ಆಗಿದ್ದಾನೆ.
ﯕﯖﯗﯘﯙﯚﯛﯜﯝﯞﯟﯠﯡﯢﯣﯤﯥﯦﯧﯨﯩﯪﯫﯬﯭﯮﯯﯰﯱﯲﯳﯴﯵﯶﯷ
41:44
ಮತ್ತು ನಾವಿದನ್ನು ಅರಬೇತರ ಭಾಷೆಯ ಖುರ್‌ಆನನ್ನಾಗಿ ಮಾಡಿ ಅವತೀರ್ಣಗೊಳಿಸಿರುತ್ತಿದ್ದರೆ ಅವರು ಹೀಗೆ ಹೇಳುತ್ತಿದ್ದರು: ಇದರ ಸೂಕ್ತಿಗಳನ್ನು ಸ್ಪಷ್ಟವಾಗಿ ಏಕೆ ವಿವರಿಸಿಲ್ಲ? ಇದು ಅರಬೇತರ ಗ್ರಂಥ ಹಾಗೂ ಅರಬ್ ಸಂದೇಶವಾಹಕ!? ಹೇಳಿರಿ: ಇದು ಸತ್ಯವಿಶ್ವಾಸವಿರಿಸಿದವರಿಗೆ ಸನ್ಮಾರ್ಗವು ಉಪಶಮನವು ಆಗಿದೆ ಮತ್ತು ವಿಶ್ವಾಸವಿಡದವರ ಕಿವಿಗಳಲ್ಲಿ (ಕಿವುಡುತನ ಹಾಗೂ) ಅವರ ಮೇಲೆ ಅಂಧತೆಯಿದೆ ಇಂತಹವರು. ಬಹುದೂರ ಪ್ರದೇಶದಿಂದ ಕರೆಯಲಾಗುವಂತಹ ಜನರಾಗಿದ್ದಾರೆ.
ﯸﯹﯺﯻﯼﯽﯾﯿﰀﰁﰂﰃﰄﰅﰆﰇﰈﰉﰊﰋﰌ
41:45
ನಿಸ್ಸಂದೇಹವಾಗಿಯೂ ನಾವು ಮೂಸಾರವರಿಗೆ ಗ್ರಂಥವನ್ನು ನೀಡಿದೆವು. ಅನಂತರ ಅದರಲ್ಲೂ ಭಿನ್ನಾಭಿಪ್ರಾಯ ತೋರಲಾಯಿತು ನಮ್ಮ ಪ್ರಭುವಿನಿಂದ ಮೊದಲೇ ನಿಶ್ಚಿತಗೊಂಡ ಮಾತು ಇಲ್ಲದಿರುತ್ತಿದ್ದರೆ (ಯಾವಾಗಲೋ )ಅವರ ನಡುವೆ ತೀರ್ಪು ಮಾಡಿಬಿಡಲಾಗುತ್ತಿತ್ತು ವಾಸ್ತವದಲ್ಲಿ ಇವರು ಅದರ (ಕುರ್‌ಆನಿನ) ಕುರಿತು ತೀವ್ರ ಸಂದೇಹದಲ್ಲಿದ್ದಾರೆ.
ﰍﰎﰏﰐﰑﰒﰓﰔﰕﰖﰗﰘﰙﰚ
41:46
ಯಾರು ಸತ್ಕರ್ಮವನ್ನು ಮಾಡುತ್ತಾನೋ ಅವನು ತನ್ನ ಹಿತಕ್ಕಾಗಿಯೇ ಮಾಡುತ್ತಾನೆ. ಹಾಗೂ ಯಾರು ಕೆಡುಕನ್ನು ಮಾಡುತ್ತಾನೋ ಅದರ ದುಷ್ಟರಿಣಾಮವು ಅವನ ಮೇಲೆಯೇ ಇರುತ್ತದೆ ನಮ್ಮ ಪ್ರಭುವು ತನ್ನದಾಸರ ಪಾಲಿಗೆ ಅಕ್ರಮಿಯಲ್ಲ.
ﭑﭒﭓﭔﭕﭖﭗﭘﭙﭚﭛﭜﭝﭞﭟﭠﭡﭢﭣﭤﭥﭦﭧﭨﭩﭪﭫﭬﭭﭮﭯﭰ
41:47
ಪುನರುತ್ಥಾನದ ಜ್ಞಾನವನ್ನು ಅವನೆಡೆಗೇ ಮರಳಿಸಲಾಗುತ್ತದೆ. ಮತ್ತು ಅವನಿಗೆ ಅರಿವಿಲ್ಲದೇ ಯಾವುದೇ ಫಲ ತನ್ನ ಕೋಶದಿಂದ ಹೊರಬರುವುದಿಲ್ಲ ಮತ್ತು ಯಾವ ಹೆಣ್ಣು ಗರ್ಭಧರಿಸುವುದೂ ಇಲ್ಲ. ಹೆರುವುದೂ ಇಲ್ಲ. ಅವನು ನನ್ನ ಸಹಭಾಗಿಗಳೆಲ್ಲಾ ಎಲ್ಲಿ? ಎಂದು ಅವರನ್ನು ಕೇಳುವ ದಿನ ಆಗ ಅವರು: ನಮ್ಮಲ್ಲಿ ಸಾಕ್ಷಿದಾರನಾಗಿ ಯಾರೂ ಇಲ್ಲವೆಂದು ನಾವಾಗಲೇ ಹೇಳಿ ಬಟ್ಟಿದ್ದೇವೆಂದು ಉತ್ತರಿಸುವರು.
ﭱﭲﭳﭴﭵﭶﭷﭸﭹﭺﭻﭼﭽﭾ
41:48
ಇದಕ್ಕೆ ಮೊದಲು ಅವರು ಕರೆದು ಬೇಡುತ್ತಿದ್ದ ದೇವರುಗಳೆಲ್ಲ ಅವರಿಂದ ಕಣ್ಮರೆಯಾಗಿ ಬಿಡುವರು ಮತ್ತು ತಮಗೆ ಯಾವ ಅಭಯ ಸ್ಥಾನವಿಲ್ಲವೆಂದು ಅವರಿಗೆ ಮನದಟ್ಟಾಗುವುದು.
ﭿﮀﮁﮂﮃﮄﮅﮆﮇﮈﮉﮊ
41:49
ಮನುಷ್ಯನು ಒಳಿತನ್ನು ಬೇಡುವುದರಿಂದ ದಣಿಯುವುದಿಲ್ಲ ಅವನಿಗೆ ತೊಂದರೆಯೇನಾದರೂ ಉಂಟಾದರೆ ಅವನು ನಿರಾಶನೂ ಹತಾಶನೂ ಆಗಿ ಬಿಡುತ್ತಾನೆ.
ﮋﮌﮍﮎﮏﮐﮑﮒﮓﮔﮕﮖﮗﮘﮙﮚﮛﮜﮝﮞﮟﮠﮡﮢﮣﮤﮥﮦﮧﮨﮩﮪﮫﮬ
41:50
ಆದರೆ ಅವನಿಗೆ ಬಾಧಿಸಿದ ಕಷ್ಟದ ನಂತರ ನಾವು ಅವನಿಗೆ ನಮ್ಮ ಕೃಪೆಯ ಸವಿಯನ್ನುಣಿಸಿದಾಗ ಅವನೇ ಇದಕ್ಕೆ ನಾನು ಅರ್ಹನಾಗಿದ್ದೆನು. ಪುನರುತ್ಥಾನವು ಸಂಭವಿಸುವುದೆAದು ನಾನು ಭಾವಿಸುವುದಿಲ್ಲ ಒಂದು ವೇಳೆ ನಾನು ನನ್ನ ಪ್ರಭುವಿನೆಡೆಗೆ ಮರಳಿಸಲಾದರೂ ಖಂಡಿತ ನನಗೆ ಅವನ ಬಳಿಯೂ ಅತ್ಯುತ್ತಮವಾದುದೇ ಇರುವುದು ಎಂದು ಹೇಳುತ್ತಾನೆ. ಖಂಡಿತವಾಗಿಯು ನಾವು ಆ ಸತ್ಯನಿಷೇಧಿಗಳಿಗೆ ಅವರ ಕರ್ಮಗಳ ಬಗ್ಗೆ ತಿಳಿಸಲಿದ್ದೇವೆ ಹಾಗೂ ಅವರಿಗೆ ಕಠಿಣಯಾತನೆಯ ಸವಿಯುನ್ನುಣಿಸಲಿದ್ದೇವೆ.
ﮭﮮﮯﮰﮱﯓﯔﯕﯖﯗﯘﯙﯚﯛ
41:51
ಮತ್ತು ನಾವು ಮನುಷ್ಯನಿಗೆ ಯಾವುದಾದರು ಅನುಗ್ರಹವನ್ನು ನೀಡಿದರೆ ಅವನು ವಿಮುಖನಾಗುತ್ತಾನೆ ಮತ್ತು ದೂರ ಸರಿದು ಬಿಡುತ್ತಾನೆ ಒಂದು ವೇಳೆ ಅವನಿಗೆನಾದರೂ ಸಂಕಷ್ಟವು ಬಾಧಿಸಿದರೆ ಅವನು ಉದ್ದುದ್ದ ಪ್ರಾರ್ಥನೆಯನ್ನು ಸಲ್ಲಿಸುತ್ತಾನೆ.
ﯜﯝﯞﯟﯠﯡﯢﯣﯤﯥﯦﯧﯨﯩﯪﯫﯬﯭ
41:52
ಓ ಪೈಗಂಬರರೇ ಹೇಳಿರಿ: ಈ ಖುರ್‌ಆನ್ ಅಲ್ಲಾಹನ ಕಡೆಯಿಂದ ಬಂದಿದ್ದು, ನಂತರ ನೀವು ಅದನ್ನು ನಿರಾಕರಿಸಿದ್ದರೆ ಇದರ ವಿರೋಧದಲ್ಲಿ ದೂರ ಸಾಗಿ ಬಿಟ್ಟವನಿಗಿಂತ ದೊಡ್ಡ ಮಾರ್ಗಭ್ರಷ್ಟನು ಇನ್ನಾರಿದ್ದಾನೆಂದು ನೀವು ಆಲೋಚಿಸಿದ್ದೀರಾ?
ﯮﯯﯰﯱﯲﯳﯴﯵﯶﯷﯸﯹﯺﯻﯼﯽﯾﯿﰀﰁﰂ
41:53
ಶೀಘ್ರವೇ ನಾವು ಇವರಿಗೆ ಬಾಹ್ಯಾಕಾಶಗಳಲ್ಲೂ ಸ್ವತಃ ಅವರೊಳಗೂ ಈ ಖುರ್‌ಆನ್ ಸತ್ಯವೆಂದು ಅವರಿಗೆ ಮನದಟ್ಟಾಗುವತನಕ ನಮ್ಮ ದೃಷ್ಟಾಂತಗಳನ್ನು ತೋರಿಸಿಕೊಡಲಿದ್ದೇವೆ. ನಿಮ್ಮ ಪ್ರಭುವು ಪ್ರತಿಯೊಂದು ವಸ್ತುವಿನ ಮೇಲೆ ಸಾಕ್ಷಿಯಾಗಿದ್ದಾನೆಂದು ಸಾಲದೇ?
ﰃﰄﰅﰆﰇﰈﰉﰊﰋﰌﰍﰎﰏﰐ
41:54
ತಿಳಿಯಿರಿ ಖಂಡಿತವಾಗಿಯೂ ಇವರು ತಮ್ಮ ಪ್ರಭುವಿನ ಭೇಟಿಯ ಕುರಿತು ಸಂದೇಹದಲ್ಲಿದ್ದಾರೆ, ತಿಳಿಯಿರಿ. ಖಂಡಿತ ಅಲ್ಲಾಹನು ಸಕಲ ವಸ್ತುಗಳನ್ನೂ ಆವರಿಸಿರುತ್ತಾನೆ.
ಪವಿತ್ರ ಕುರಾನ್
Wednesday, September 9, 2026
Don't forget us in your sincere prayers







