ಅಲ್-ಮಾಇದಾ · 3/120
ಅನುವಾದ ಉಚ್ಚಾರಣೆ — ಸೂರಾ ಅಲ್-ಮಾಇದಾ
حُرِّمَتْ عَلَيْكُمُ الْمَيْتَةُ وَالدَّمُ وَلَحْمُ الْخِنزِيرِ وَمَا أُهِلَّ لِغَيْرِ اللَّهِ بِهِ وَالْمُنْخَنِقَةُ وَالْمَوْقُوذَةُ وَالْمُتَرَدِّيَةُ وَالنَّطِيحَةُ وَمَا أَكَلَ السَّبُعُ إِلَّا مَا ذَكَّيْتُمْ وَمَا ذُبِحَ عَلَى النُّصُبِ وَأَن تَسْتَقْسِمُوا بِالْأَزْلَامِ ۚ ذَٰلِكُمْ فِسْقٌ ۗ الْيَوْمَ يَئِسَ الَّذِينَ كَفَرُوا مِن دِينِكُمْ فَلَا تَخْشَوْهُمْ وَاخْشَوْنِ ۚ الْيَوْمَ أَكْمَلْتُ لَكُمْ دِينَكُمْ وَأَتْمَمْتُ عَلَيْكُمْ نِعْمَتِي وَرَضِيتُ لَكُمُ الْإِسْلَامَ دِينًا ۚ فَمَنِ اضْطُرَّ فِي مَخْمَصَةٍ غَيْرَ مُتَجَانِفٍ لِّإِثْمٍ ۙ فَإِنَّ اللَّهَ غَفُورٌ رَّحِيمٌ ۝٣
Hurrimat `alaikumul maitatu waddamu wa lahmul khinzeeri wa maaa uhilla lighiril laahi bihee walmun khani qatu wal mawqoozatu wal mutarad diyatu wanna teehatu wa maaa akalas sabu`u illaa maa zakkaitum wa maa zubiha `alan nusubi wa an tastaqsimoo bil azlaam; zaalikum fisq; alyawma ya`isal lazeena kafaroo min deenikum falaa takhshawhum wakh shawn; alyawma akmaltu lakum deenakum wa atmamtu `alaikum ni`matee wa radeetu lakumul Islaama deenaa; famanidturra fee makhmasatin ghaira mutajaanifil li ismin fa innallaaha Ghafoorur Raheem
📖 ಕನ್ನಡ ಅರ್ಥ
ಶವ, ರಕ್ತ, ಹಂದಿ ಮಾಂಸ, ಅಲ್ಲಾಹೇತರರ ಹೆಸರಲ್ಲಿ ಕೊಯ್ಯಲ್ಪಟ್ಟದ್ದು, ಕೊರಳು ಬಿಗಿದು ಸತ್ತದ್ದು, ಏಟು ಬಿದ್ದು ಸತ್ತದ್ದು, ಎತ್ತರದಿಂದ ಬಿದ್ದು ಸತ್ತದ್ದು, ಯಾವುದಾದರೂ ಪ್ರಾಣಿಯ ಕೊಂಬು ಇರಿಯಲ್ಪಟ್ಟು ಸತ್ತದ್ದು, ವನ್ಯಮೃಗಗಳು ಹರಿದು ತಿಂದದ್ದು ನಿಮ್ಮ ಮೇಲೆ ನಿಷಿದ್ಧಗೊಳಿಸಲಾಗಿದೆ. ಆದರೆ ನೀವು ಅದು ಸಾಯುವುದಕ್ಕೆ ಮುಂಚೆ ಕೊಯ್ದು ಬಿಟ್ಟಿದ್ದರೆ ಬೇರೆ ವಿಚಾರ. ಮತ್ತು ಬಲಿಪೀಠಗಳಲ್ಲಿ ಕೊಯ್ಯಲಾದದ್ದು ಮತ್ತು ಬಾಣಗಳನ್ನು ಬಳಸಿ ಅದೃಷ್ಟ ಪರೀಕ್ಷಿಸುವುದನ್ನು ಸಹ ನಿಮ್ಮ ಮೇಲೆ ನಿಷಿದ್ಧಗೊಳಿಸಲಾಗಿದೆ. ಇವೆಲ್ಲವೂ ಅತಿ ನಿಕೃಷ್ಟ ಪಾಪಗಳಾಗಿವೆ. ಇಂದು ಸತ್ಯನಿಷೇಧಿಗಳು ನಿಮ್ಮ ಧÀರ್ಮದಿಂದ ನಿರಾಶರಾಗಿಬಿಟ್ಟಿದ್ದಾರೆ. ನೀವು ಅವರನ್ನು ಭಯಪಡಬೇಡಿರಿ. ನೀವು ನನ್ನನ್ನು ಭಯಪಡಿರಿ. ಇಂದು ನಾನು ನಿಮಗಾಗಿ ನಿಮ್ಮ ಧರ್ಮವನ್ನು ಪರಿಪೂರ್ಣಗೊಳಿಸಿದ್ದೇನೆ. ಮತ್ತು ನನ್ನ ಅನುಗ್ರಹವನ್ನು ನಿಮಗೆ ಸಂಪೂರ್ಣಗೊಳಿಸಿದ್ದೇನೆ. ಮತ್ತು ಇಸ್ಲಾಮ್ ಅನ್ನು ನಿಮ್ಮ ಧರ್ಮವನ್ನಾಗಿ ನಾನು ಅಂಗೀಕರಿಸಿದ್ದೇನೆ. ಇನ್ನು ಯಾವೊಬ್ಬ ವ್ಯಕ್ತಿಯು ಮನಃ ಪೂರ್ವಕವಾಗಿ ಪಾಪದೆಡೆಗೆ ವಾಲದೆ ಕಠಿಣ ಹಸಿವಿನ ನಿಮಿತ್ತ ನಿರ್ಭಂಧಿತನಾಗಿ ಅದನ್ನು ತಿಂದರೆ ಬೇರೆ ವಿಚಾರ. ಖಂಡಿತವಾಗಿಯು ಅಲ್ಲಾಹನು ಅತ್ಯಧಿಕ ಕ್ಷಮಿಸುವವನೂ ಕರುಣೆ ತೋರುವವನೂ ಆಗಿದ್ದಾನೆ.

🎧 ಆಲಿಸಿ


📜 ಆಯತ್ 1-5 — ಸೂರಾ ಅಲ್-ಮಾಇದಾ

1يَا أَيُّهَا الَّذِينَ آمَنُوا أَوْفُوا بِالْعُقُودِ ۚ أُحِلَّتْ لَكُم بَهِيمَةُ الْأَنْعَامِ إِلَّا مَا يُتْلَىٰ عَلَيْكُمْ غَيْرَ مُحِلِّي الصَّيْدِ وَأَنتُمْ حُرُمٌ ۗ إِنَّ اللَّهَ يَحْكُمُ مَا يُرِيدُ
ಓ ಸತ್ಯವಿಶ್ವಾಸಿಗಳೇ, ನೀವು ಕರಾರುಗಳನ್ನು ಈಡೇರಿಸಿರಿ. ಪಶುಗಳನ್ನು ನಿಮಗಾಗಿ ಧರ್ಮಸಮ್ಮತಗೊಳಿಸಲಾಗಿದೆ. ಆದರೆ ಮುಂದೆ ನಿಮಗೆ ಓದಿ ಹೇಳಲಾಗುವ ಪ್ರಾಣಿಗಳ ಹೊರತು. ಆದರೆ ನೀವು ಇಹ್ರಾಮ್‌ನ ಸ್ಥಿತಿಯಲ್ಲಿ ಬೇಟೆಯಾಡಲು ನಿಮಗೆ ಅನುಮತಿಯಿಲ್ಲ. ಖಂಡಿತವಾಗಿಯು ಅಲ್ಲಾಹನು ತಾನಿಚ್ಛಿಸುವುದನ್ನು ವಿಧಿಸುತ್ತಾನೆ.
2يَا أَيُّهَا الَّذِينَ آمَنُوا لَا تُحِلُّوا شَعَائِرَ اللَّهِ وَلَا الشَّهْرَ الْحَرَامَ وَلَا الْهَدْيَ وَلَا الْقَلَائِدَ وَلَا آمِّينَ الْبَيْتَ الْحَرَامَ يَبْتَغُونَ فَضْلًا مِّن رَّبِّهِمْ وَرِضْوَانًا ۚ وَإِذَا حَلَلْتُمْ فَاصْطَادُوا ۚ وَلَا يَجْرِمَنَّكُمْ شَنَآنُ قَوْمٍ أَن صَدُّوكُمْ عَنِ الْمَسْجِدِ الْحَرَامِ أَن تَعْتَدُوا ۘ وَتَعَاوَنُوا عَلَى الْبِرِّ وَالتَّقْوَىٰ ۖ وَلَا تَعَاوَنُوا عَلَى الْإِثْمِ وَالْعُدْوَانِ ۚ وَاتَّقُوا اللَّهَ ۖ إِنَّ اللَّهَ شَدِيدُ الْعِقَابِ
ಓ ಸತ್ಯವಿಶ್ವಾಸಿಗಳೇ, ಅಲ್ಲಾಹನ ಧರ್ಮ ಲಾಂಛನಗಳನ್ನು ಅಪಮಾನಿಸÀದಿರಿ. ಪವಿತ್ರವಾದ ತಿಂಗಳನ್ನು ಹರಮ್‌ನಲ್ಲಿ ಬಲಿಕೊಡಲು ಕೊಂಡೊಯ್ಯಲಾಗುವ ಮೃಗಗಳನ್ನು, ಹಾಗೂ ಬಲಿ ಸೂಚಕವಾಗಿ ಕೊರಳಪಟ್ಟಿಯಿರುವ ಮೃಗಗಳನ್ನು ಮತ್ತು ತಮ್ಮ ಪ್ರಭುವಿನ ಅನುಗ್ರಹ ಹಾಗೂ ಸಂತೃಪ್ತಿಯನ್ನು ಅರಸುತ್ತಾ ಪವಿತ್ರ ಭವನದೆಡೆಗೆ (ಹಜ್ಜ್ಗಾಗಿ) ಹೋಗುವವರನ್ನು ಅಪಮಾನಿಸÀದಿರಿ. ಆದರೆ ಇಹ್ರಾಮನ್ನು ಬಿಚ್ಚಿದ ಬಳಿಕ ನೀವು ಬೇಟೆಯಾಡಬಹುದಾಗಿದೆ. ಒಂದು ಜನತೆಯ ನಿಮ್ಮೊಂದಿಗಿನ ವೈರತ್ವವು ಅವರು ನಿಮ್ಮನ್ನು ಮಸ್ಜಿದುಲ್ ಹರಾಮ್‌ನಿಂದ ತಡೆದರು. ಎಂಬ ವಿಚಾರವು ಅವರೊಡನೆ ಅನ್ಯಾಯ ಮಾಡಲು ನಿಮ್ಮನ್ನು ಪ್ರೇರೇಪಿಸದಿರಲಿ. ಪುಣ್ಯ ಮತ್ತು ಧರ್ಮ ನಿಷ್ಠೆಯ ವಿಚಾರದಲ್ಲಿ ನೀವು ಪರಸ್ಪರ ಸಹಾಯ ಮಾಡುತ್ತಲಿರಿ. ಪಾಪ ಮತ್ತು ಅನ್ಯಾಯಗಳ ವಿಚಾರದಲ್ಲಿ ನೀವು ಪರಸ್ಪರ ಸಹಾಯ ಮಾಡಬೇಡಿರಿ. ನೀವು ಅಲ್ಲಾಹನನ್ನು ಭಯಪಡಿರಿ. ಖಂಡಿತವಾಗಿಯು ಅಲ್ಲಾಹನು ಕಠಿಣವಾಗಿ ಶಿಕ್ಷಿಸುವವನಾಗಿದ್ದಾನೆ.
3حُرِّمَتْ عَلَيْكُمُ الْمَيْتَةُ وَالدَّمُ وَلَحْمُ الْخِنزِيرِ وَمَا أُهِلَّ لِغَيْرِ اللَّهِ بِهِ وَالْمُنْخَنِقَةُ وَالْمَوْقُوذَةُ وَالْمُتَرَدِّيَةُ وَالنَّطِيحَةُ وَمَا أَكَلَ السَّبُعُ إِلَّا مَا ذَكَّيْتُمْ وَمَا ذُبِحَ عَلَى النُّصُبِ وَأَن تَسْتَقْسِمُوا بِالْأَزْلَامِ ۚ ذَٰلِكُمْ فِسْقٌ ۗ الْيَوْمَ يَئِسَ الَّذِينَ كَفَرُوا مِن دِينِكُمْ فَلَا تَخْشَوْهُمْ وَاخْشَوْنِ ۚ الْيَوْمَ أَكْمَلْتُ لَكُمْ دِينَكُمْ وَأَتْمَمْتُ عَلَيْكُمْ نِعْمَتِي وَرَضِيتُ لَكُمُ الْإِسْلَامَ دِينًا ۚ فَمَنِ اضْطُرَّ فِي مَخْمَصَةٍ غَيْرَ مُتَجَانِفٍ لِّإِثْمٍ ۙ فَإِنَّ اللَّهَ غَفُورٌ رَّحِيمٌ
ಶವ, ರಕ್ತ, ಹಂದಿ ಮಾಂಸ, ಅಲ್ಲಾಹೇತರರ ಹೆಸರಲ್ಲಿ ಕೊಯ್ಯಲ್ಪಟ್ಟದ್ದು, ಕೊರಳು ಬಿಗಿದು ಸತ್ತದ್ದು, ಏಟು ಬಿದ್ದು ಸತ್ತದ್ದು, ಎತ್ತರದಿಂದ ಬಿದ್ದು ಸತ್ತದ್ದು, ಯಾವುದಾದರೂ ಪ್ರಾಣಿಯ ಕೊಂಬು ಇರಿಯಲ್ಪಟ್ಟು ಸತ್ತದ್ದು, ವನ್ಯಮೃಗಗಳು ಹರಿದು ತಿಂದದ್ದು ನಿಮ್ಮ ಮೇಲೆ ನಿಷಿದ್ಧಗೊಳಿಸಲಾಗಿದೆ. ಆದರೆ ನೀವು ಅದು ಸಾಯುವುದಕ್ಕೆ ಮುಂಚೆ ಕೊಯ್ದು ಬಿಟ್ಟಿದ್ದರೆ ಬೇರೆ ವಿಚಾರ. ಮತ್ತು ಬಲಿಪೀಠಗಳಲ್ಲಿ ಕೊಯ್ಯಲಾದದ್ದು ಮತ್ತು ಬಾಣಗಳನ್ನು ಬಳಸಿ ಅದೃಷ್ಟ ಪರೀಕ್ಷಿಸುವುದನ್ನು ಸಹ ನಿಮ್ಮ ಮೇಲೆ ನಿಷಿದ್ಧಗೊಳಿಸಲಾಗಿದೆ. ಇವೆಲ್ಲವೂ ಅತಿ ನಿಕೃಷ್ಟ ಪಾಪಗಳಾಗಿವೆ. ಇಂದು ಸತ್ಯನಿಷೇಧಿಗಳು ನಿಮ್ಮ ಧÀರ್ಮದಿಂದ ನಿರಾಶರಾಗಿಬಿಟ್ಟಿದ್ದಾರೆ. ನೀವು ಅವರನ್ನು ಭಯಪಡಬೇಡಿರಿ. ನೀವು ನನ್ನನ್ನು ಭಯಪಡಿರಿ. ಇಂದು ನಾನು ನಿಮಗಾಗಿ ನಿಮ್ಮ ಧರ್ಮವನ್ನು ಪರಿಪೂರ್ಣಗೊಳಿಸಿದ್ದೇನೆ. ಮತ್ತು ನನ್ನ ಅನುಗ್ರಹವನ್ನು ನಿಮಗೆ ಸಂಪೂರ್ಣಗೊಳಿಸಿದ್ದೇನೆ. ಮತ್ತು ಇಸ್ಲಾಮ್ ಅನ್ನು ನಿಮ್ಮ ಧರ್ಮವನ್ನಾಗಿ ನಾನು ಅಂಗೀಕರಿಸಿದ್ದೇನೆ. ಇನ್ನು ಯಾವೊಬ್ಬ ವ್ಯಕ್ತಿಯು ಮನಃ ಪೂರ್ವಕವಾಗಿ ಪಾಪದೆಡೆಗೆ ವಾಲದೆ ಕಠಿಣ ಹಸಿವಿನ ನಿಮಿತ್ತ ನಿರ್ಭಂಧಿತನಾಗಿ ಅದನ್ನು ತಿಂದರೆ ಬೇರೆ ವಿಚಾರ. ಖಂಡಿತವಾಗಿಯು ಅಲ್ಲಾಹನು ಅತ್ಯಧಿಕ ಕ್ಷಮಿಸುವವನೂ ಕರುಣೆ ತೋರುವವನೂ ಆಗಿದ್ದಾನೆ.
4يَسْأَلُونَكَ مَاذَا أُحِلَّ لَهُمْ ۖ قُلْ أُحِلَّ لَكُمُ الطَّيِّبَاتُ ۙ وَمَا عَلَّمْتُم مِّنَ الْجَوَارِحِ مُكَلِّبِينَ تُعَلِّمُونَهُنَّ مِمَّا عَلَّمَكُمُ اللَّهُ ۖ فَكُلُوا مِمَّا أَمْسَكْنَ عَلَيْكُمْ وَاذْكُرُوا اسْمَ اللَّهِ عَلَيْهِ ۖ وَاتَّقُوا اللَّهَ ۚ إِنَّ اللَّهَ سَرِيعُ الْحِسَابِ
ತಮಗೆ ಏನೆಲ್ಲಾ ಧರ್ಮಸಮ್ಮತಗೊಳಿಸಲಾಗಿದೆಯೆಂದು ಅವರು ನಿಮ್ಮೊಂದಿಗೆ ಕೇಳುತ್ತಾರೆ. ಹೇಳಿರಿ: ಎಲ್ಲಾ ಶುದ್ಧ ವಸ್ತುಗಳನ್ನು ನಿಮಗೆ ಧರ್ಮಸಮ್ಮತಗೊಳಿಸಲಾಗಿದೆ. ಮತ್ತು ಅಲ್ಲಾಹನು ನಿಮಗೆ ಕಲಿಸಿದ ಜ್ಞಾನದ ಆಧಾರದಲ್ಲಿ ನೀವು ತರಬೇತಿ ಕೊಟ್ಟು ಪಳಗಿಸಿದ ಪ್ರಾಣಿಯು ನಿಮಗೋಸ್ಕರ ಭೇಟೆಯಾಡಿ ತಂದದ್ದನ್ನು ನೀವು ತಿನ್ನಿರಿ ಆದರೆ ಅದರ ಮೇಲೆ ಅಲ್ಲಾಹನ ನಾಮವನ್ನು ಉಚ್ಛರಿಸಿರಿ. ಮತ್ತು ನೀವು ಅಲ್ಲಾಹನನ್ನು ಭಯಪಡಿರಿ. ಖಂಡಿತವಾಗಿಯು ಅಲ್ಲಾಹನು ಅತಿಶೀಘ್ರವಾಗಿ ವಿಚಾರಣೆ ನಡೆಸುವವನಾಗಿದ್ದಾನೆ.
5الْيَوْمَ أُحِلَّ لَكُمُ الطَّيِّبَاتُ ۖ وَطَعَامُ الَّذِينَ أُوتُوا الْكِتَابَ حِلٌّ لَّكُمْ وَطَعَامُكُمْ حِلٌّ لَّهُمْ ۖ وَالْمُحْصَنَاتُ مِنَ الْمُؤْمِنَاتِ وَالْمُحْصَنَاتُ مِنَ الَّذِينَ أُوتُوا الْكِتَابَ مِن قَبْلِكُمْ إِذَا آتَيْتُمُوهُنَّ أُجُورَهُنَّ مُحْصِنِينَ غَيْرَ مُسَافِحِينَ وَلَا مُتَّخِذِي أَخْدَانٍ ۗ وَمَن يَكْفُرْ بِالْإِيمَانِ فَقَدْ حَبِطَ عَمَلُهُ وَهُوَ فِي الْآخِرَةِ مِنَ الْخَاسِرِينَ
ಇಂದು ನಿಮಗೆ ಸಕಲ ಶುದ್ಧ ವಸ್ತುಗಳನ್ನೂ ಧರ್ಮಸಮ್ಮತಗೊಳಿಸಲಾಗಿದೆ ಮತ್ತು ಗ್ರಂಥ ನೀಡಲ್ಪಟ್ಟವರು ಕೊಯ್ದ ಮಾಂಸಾಹಾರವು ನಿಮಗೆ ಧರ್ಮಸಮ್ಮತಗೊಳಿಸಲಾಗಿದೆ ನೀವು ಕೊಯ್ದ ಮಾಂಸಹಾರವು ಅವರಿಗೂ ಧರ್ಮಸಮ್ಮತವಾಗಿದೆ. ಸತ್ಯವಿಶ್ವಾಸಿನಿಗಳ ಪೈಕಿ ಸುಶೀಲೆಯರಾದ ಸ್ತಿçÃಯರು ಮತ್ತು ನಿಮಗಿಂತ ಮುಂಚೆ ಗ್ರಂಥವನ್ನು ನೀಡಲ್ಪಟ್ಟವರ ಪೈಕಿ ಸುಶೀಲೆಯರಾದ ಸ್ತಿçÃಯರು ನೀವು ಬಹಿರಂಗ ವೈಭಿಚಾರವಾಗಲೀ, ರಹಸ್ಯವಾಗಿ ಅನೈತಿಕ ಸಂಬAಧವಾಗಲೀ ಇಟ್ಟುಕೊಳ್ಳದೆ ಅವರನ್ನು ವಿವಾಹವಾಗಿ ಅವರಿಗೆ ವಧುಧನವನ್ನು ನೀಡುವುದಾದರೆ ನಿಮಗೆ ಧರ್ಮಸಮ್ಮತವಾಗಿದ್ದಾರೆ. ಇನ್ನು ಯಾರು ಸತ್ಯವಿಶ್ವಾಸವನ್ನು ನಿಷೇಧಿಸುತ್ತಾನೋ ಅವನ ಕರ್ಮಗಳು ನಿಷ್ಫಲವಾಗಿವೆ. ಪರಲೋಕದಲ್ಲಿ ಅವನು ನಷ್ಟ ಹೊಂದಿದವರೊAದಿಗೆ ಸೇರುವನು.
ಅಲ್-ಮಾಇದಾಕುರಾನ್ ಸೂಚಿ
120ಆಯತ್
MedinanRevelation
3ಆಯತ್

ಅನುವಾದ — ಅಲ್-ಮಾಇದಾ 3

ಸೂರಾ ಅಲ್-ಮಾಇದಾ ಆಯತ್ 3 - ಓದಿ, ಆಲಿಸಿ, ಅನುವಾದ, ಕನ್ನಡ : ಶವ, ರಕ್ತ, ಹಂದಿ ಮಾಂಸ, ಅಲ್ಲಾಹೇತರರ ಹೆಸರಲ್ಲಿ ಕೊಯ್ಯಲ್ಪಟ್ಟದ್ದು, ಕೊರಳು ಬಿಗಿದು ಸತ್ತದ್ದು,…

ಸೂರಾ ಆಯತ್ 3/120 — ಸೂರಾ ಅಲ್-ಮಾಇದಾ المائدة (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಮಾಇದಾ ಆಲಿಸಿ, ಸೂರಾ ಅಲ್-ಮಾಇದಾ ಅನುವಾದ, ಸೂರಾ ಅಲ್-ಮಾಇದಾ mp3, ಸೂರಾ ಅಲ್-ಮಾಇದಾ pdf. ಆಯತ್ 1–5. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Wednesday, September 9, 2026

Don't forget us in your sincere prayers