ಅಲ್-ಮಾಇದಾ · 15/120
ಅನುವಾದ ಉಚ್ಚಾರಣೆ — ಸೂರಾ ಅಲ್-ಮಾಇದಾ
يَا أَهْلَ الْكِتَابِ قَدْ جَاءَكُمْ رَسُولُنَا يُبَيِّنُ لَكُمْ كَثِيرًا مِّمَّا كُنتُمْ تُخْفُونَ مِنَ الْكِتَابِ وَيَعْفُو عَن كَثِيرٍ ۚ قَدْ جَاءَكُم مِّنَ اللَّهِ نُورٌ وَكِتَابٌ مُّبِينٌ ۝١٥
yaaa Ahlal kitaabi qad jaaa`akum Rasoolunaa yubaiyinu lakum kaseeram mimmmaa kuntum tukhfoona minal Kitaabi wa ya`foo `an kaseer; qad jaaa`akum minal laahi noorunw wa Kitaabum Mubeen
📖 ಕನ್ನಡ ಅರ್ಥ
ಓ ಗ್ರಂಥದವರೇ, ಗ್ರಂಥದಿAದ ನೀವು ಮರೆಮಾಚುತ್ತಿದ್ದ ಅನೇಕ ಸಂಗತಿಗಳನ್ನು ನಿಮಗೆ ಬಹಿರಂಗಗೊಳಿಸುವ ಮತ್ತು ಹಲವು ವಿಚಾರಗಳನ್ನು ಕಡೆಗಣಿಸುವ ನಮ್ಮ ಸಂದೇಶವಾಹಕರು ನಿಮ್ಮ ಬಳಿಗೆ ಬಂದಿರುವರು. ನಿಶ್ಚಯವಾಗಿಯು ನಿಮ್ಮೆಡೆಗೆ ಅಲ್ಲಾಹನ ವತಿಯಿಂದ ಒಂದು ಪ್ರಕಾಶವೂ, ಸ್ಪಷ್ಟವಾದ ಒಂದು ಗ್ರಂಥವೂ ಬಂದಿರುತ್ತದೆ.

🎧 ಆಲಿಸಿ


📜 ಆಯತ್ 13-17 — ಸೂರಾ ಅಲ್-ಮಾಇದಾ

13فَبِمَا نَقْضِهِم مِّيثَاقَهُمْ لَعَنَّاهُمْ وَجَعَلْنَا قُلُوبَهُمْ قَاسِيَةً ۖ يُحَرِّفُونَ الْكَلِمَ عَن مَّوَاضِعِهِ ۙ وَنَسُوا حَظًّا مِّمَّا ذُكِّرُوا بِهِ ۚ وَلَا تَزَالُ تَطَّلِعُ عَلَىٰ خَائِنَةٍ مِّنْهُمْ إِلَّا قَلِيلًا مِّنْهُمْ ۖ فَاعْفُ عَنْهُمْ وَاصْفَحْ ۚ إِنَّ اللَّهَ يُحِبُّ الْمُحْسِنِينَ
ತರುವಾಯ ಅವರ ಕರಾರು ಉಲ್ಲಂಘನೆಯ ನಿಮಿತ್ತ ನಾವು ಅವರ ಮೇಲೆ ನಮ್ಮ ಶಾಪವನ್ನು ಎರಗಿಸಿದೆವು ಮತ್ತು ಅವರ ಹೃದಯಗಳನ್ನು ಕಠೋರಗೊಳಿಸಿದೆವು. ಅವರು ಗ್ರಂಥ ವಾಕ್ಯಗಳನ್ನು ಅವುಗಳ ಸ್ಥಾನದಿಂದ ಬದಲಾಯಿಸುತ್ತಾರೆ. ಮತ್ತು ಅವರು ತಮಗೆ ಉಪದೇಶ ನೀಡಲಾದುದರಲ್ಲಿ ದೊಡ್ಡ ಅಂಶವನ್ನು ಮರೆತುಬಿಟ್ಟರು. ಅವರ ಪೈಕಿ ಕೆಲವರ ಹೊರತು ಒಂದಲ್ಲ ಒಂದು ವಂಚನೆಯ ಸುದ್ದಿಯು ನಿಮಗೆ ಲಭಿಸುತ್ತಲೇ ಇರುತ್ತದೆ. ನೀವು ಅವರನ್ನು ಕ್ಷಮಿಸಿರಿ ಮತ್ತು ಅವರನ್ನು ಮನ್ನಿಸಿರಿ. ಖಂಡಿತವಾಗಿಯು ಅಲ್ಲಾಹನು ಸದಾಚಾರವೆಸಗುವವರನ್ನು ಮೆಚ್ಚುತ್ತಾನೆ.
14وَمِنَ الَّذِينَ قَالُوا إِنَّا نَصَارَىٰ أَخَذْنَا مِيثَاقَهُمْ فَنَسُوا حَظًّا مِّمَّا ذُكِّرُوا بِهِ فَأَغْرَيْنَا بَيْنَهُمُ الْعَدَاوَةَ وَالْبَغْضَاءَ إِلَىٰ يَوْمِ الْقِيَامَةِ ۚ وَسَوْفَ يُنَبِّئُهُمُ اللَّهُ بِمَا كَانُوا يَصْنَعُونَ
ಮತ್ತು ಇದೇ ಪ್ರಕಾರ ತಮ್ಮನ್ನು ಕ್ರೆöÊಸ್ತರು ಎಂದು ಹೇಳಿಕೊಂಡವರಿAದಲೂ ನಾವು ಕರಾರನ್ನು ಪಡೆದೆವು. ಅವರೂ ಸಹ ತಮಗೆ ಉಪದೇಶ ನೀಡಲಾದುದರ ಅತಿದೊಡ್ಡ ಅಂಶವನ್ನು ಮರೆತು ಬಿಟ್ಟರು. ಆಗ ನಾವು ಸಹ ಅವರ ನಡುವೆ ಪುನರುತ್ಥಾನದ ದಿನದವರೆಗಿರುವಂತಹ ವಿದ್ವೇಷವನ್ನೂ, ವೈರತ್ವವನ್ನೂ ಹಾಕಿಬಿಟ್ಟೆವು ಮತ್ತು ಅವರು ಏನೆಲ್ಲವನ್ನು ಮಾಡುತ್ತಿದ್ದರೋ ಅದರ ಕುರಿತು ಅಲ್ಲಾಹನು ಸದ್ಯವೇ ಅವರಿಗೆ ತಿಳಿಸಿಕೊಡಲಿದ್ದಾನೆ.
15يَا أَهْلَ الْكِتَابِ قَدْ جَاءَكُمْ رَسُولُنَا يُبَيِّنُ لَكُمْ كَثِيرًا مِّمَّا كُنتُمْ تُخْفُونَ مِنَ الْكِتَابِ وَيَعْفُو عَن كَثِيرٍ ۚ قَدْ جَاءَكُم مِّنَ اللَّهِ نُورٌ وَكِتَابٌ مُّبِينٌ
ಓ ಗ್ರಂಥದವರೇ, ಗ್ರಂಥದಿAದ ನೀವು ಮರೆಮಾಚುತ್ತಿದ್ದ ಅನೇಕ ಸಂಗತಿಗಳನ್ನು ನಿಮಗೆ ಬಹಿರಂಗಗೊಳಿಸುವ ಮತ್ತು ಹಲವು ವಿಚಾರಗಳನ್ನು ಕಡೆಗಣಿಸುವ ನಮ್ಮ ಸಂದೇಶವಾಹಕರು ನಿಮ್ಮ ಬಳಿಗೆ ಬಂದಿರುವರು. ನಿಶ್ಚಯವಾಗಿಯು ನಿಮ್ಮೆಡೆಗೆ ಅಲ್ಲಾಹನ ವತಿಯಿಂದ ಒಂದು ಪ್ರಕಾಶವೂ, ಸ್ಪಷ್ಟವಾದ ಒಂದು ಗ್ರಂಥವೂ ಬಂದಿರುತ್ತದೆ.
16يَهْدِي بِهِ اللَّهُ مَنِ اتَّبَعَ رِضْوَانَهُ سُبُلَ السَّلَامِ وَيُخْرِجُهُم مِّنَ الظُّلُمَاتِ إِلَى النُّورِ بِإِذْنِهِ وَيَهْدِيهِمْ إِلَىٰ صِرَاطٍ مُّسْتَقِيمٍ
ಅದರ ಮೂಲಕ ತನ್ನ ಪ್ರಭುವಿನ ಸಂಪ್ರೀತಿಯನ್ನು ಬಯಸಿದವರಿಗೆ ಅಲ್ಲಾಹನು ರಕ್ಷಾ ಮಾರ್ಗಗಳಿಗೆ ಮುನ್ನಡೆಸುವನು. ಮತ್ತು ಅವನು ಅವರನ್ನು ತನ್ನ ಕೃಪೆಯಿಂದ ಅಂಧಕಾರಗಳಿAದ ಪ್ರಕಾಶದೆಡೆಗೆ ಕರೆತರುವನು ಮತ್ತು ಅವರನ್ನು ನೇರವಾದ ಮಾರ್ಗದೆಡೆಗೆ ಮಾರ್ಗದರ್ಶನ ಮಾಡುವನು.
17لَّقَدْ كَفَرَ الَّذِينَ قَالُوا إِنَّ اللَّهَ هُوَ الْمَسِيحُ ابْنُ مَرْيَمَ ۚ قُلْ فَمَن يَمْلِكُ مِنَ اللَّهِ شَيْئًا إِنْ أَرَادَ أَن يُهْلِكَ الْمَسِيحَ ابْنَ مَرْيَمَ وَأُمَّهُ وَمَن فِي الْأَرْضِ جَمِيعًا ۗ وَلِلَّهِ مُلْكُ السَّمَاوَاتِ وَالْأَرْضِ وَمَا بَيْنَهُمَا ۚ يَخْلُقُ مَا يَشَاءُ ۚ وَاللَّهُ عَلَىٰ كُلِّ شَيْءٍ قَدِيرٌ
ಅಲ್ಲಾಹನೇ ಮರ್ಯಮರ ಪುತ್ರ ಮಸೀಹನಾಗಿದ್ದಾನೆ ಎಂದು ಹೇಳಿದವರು ಖಂಡಿತವಾಗಿಯು ಸತ್ಯನಿಷೇಧಿಗಳಾಗಿರುವರು. ಹೇಳಿರಿ: ಅಲ್ಲಾಹನು ಮರ್ಯಮರ ಪುತ್ರ ಮಸೀಹರನ್ನೂ, ಅವರ ತಾಯಿಯನ್ನೂ, ಭೂಮಿಯಲ್ಲಿರುವ ಸರ್ವರನ್ನೂ ನಾಶಗೊಳಿಸಲು (ಮರಣ ಕೊಡಲು) ಬಯಸಿದರೆ ಅಲ್ಲಾಹನ ಮೇಲೆ ನಿಯಂತ್ರಣ ಹೊಂದಿದವರು ಯಾರಿದ್ದಾರೆ? ಆಕಾಶಗಳಲ್ಲಿ, ಭೂಮಿಯಲ್ಲಿ ಮತ್ತು ಅವೆರಡರ ಮಧ್ಯೆಯಿರುವ ಎಲ್ಲದರ ಅಧಿಪತ್ಯವು ಅಲ್ಲಾಹನದ್ದಾಗಿದೆ. ಅವನು ತಾನಿಚ್ಛಿಸಿದ್ದನ್ನು ಸೃಷ್ಟಿಸುತ್ತಾನೆ ಮತ್ತು ಅಲ್ಲಾಹನು ಸರ್ವ ಕಾರ್ಯಗಳ ಮೇಲೂ ಸಾಮರ್ಥ್ಯವುಳ್ಳವನಾಗಿದ್ದಾನೆ.
ಅಲ್-ಮಾಇದಾಕುರಾನ್ ಸೂಚಿ
120ಆಯತ್
MedinanRevelation
15ಆಯತ್

ಅನುವಾದ — ಅಲ್-ಮಾಇದಾ 15

ಸೂರಾ ಅಲ್-ಮಾಇದಾ ಆಯತ್ 15 - ಓದಿ, ಆಲಿಸಿ, ಅನುವಾದ, ಕನ್ನಡ : ಓ ಗ್ರಂಥದವರೇ, ಗ್ರಂಥದಿAದ ನೀವು ಮರೆಮಾಚುತ್ತಿದ್ದ ಅನೇಕ ಸಂಗತಿಗಳನ್ನು ನಿಮಗೆ ಬಹಿರಂಗಗೊಳಿಸುವ ಮತ್ತು…

ಸೂರಾ ಆಯತ್ 15/120 — ಸೂರಾ ಅಲ್-ಮಾಇದಾ المائدة (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಮಾಇದಾ ಆಲಿಸಿ, ಸೂರಾ ಅಲ್-ಮಾಇದಾ ಅನುವಾದ, ಸೂರಾ ಅಲ್-ಮಾಇದಾ mp3, ಸೂರಾ ಅಲ್-ಮಾಇದಾ pdf. ಆಯತ್ 13–17. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers