ಅಲ್-ಮಾಇದಾ · 74/120
ಅನುವಾದ ಉಚ್ಚಾರಣೆ — ಸೂರಾ ಅಲ್-ಮಾಇದಾ
أَفَلَا يَتُوبُونَ إِلَى اللَّهِ وَيَسْتَغْفِرُونَهُ ۚ وَاللَّهُ غَفُورٌ رَّحِيمٌ ۝٧٤
Afalaa yatooboona ilal laahi wa yastaghfiroonah; wallaahu Ghafoorur Raheem
📖 ಕನ್ನಡ ಅರ್ಥ
ಅವರು ಅಲ್ಲಾಹನೆಡೆಗೆ ಮರಳಿ ಅವನೊಂದಿಗೆ ಪಾಪವಿಮೋಚನೆಯನ್ನು ಏಕೆ ಬೇಡುವುದಿಲ್ಲ? ಅಲ್ಲಾಹನು ಅತ್ಯಧಿಕ ಕ್ಷಮಿಸುವವನೂ, ಕರುಣಾನಿಧಿಯೂ ಆಗಿದ್ದಾನೆ.

🎧 ಆಲಿಸಿ


📜 ಆಯತ್ 72-76 — ಸೂರಾ ಅಲ್-ಮಾಇದಾ

72لَقَدْ كَفَرَ الَّذِينَ قَالُوا إِنَّ اللَّهَ هُوَ الْمَسِيحُ ابْنُ مَرْيَمَ ۖ وَقَالَ الْمَسِيحُ يَا بَنِي إِسْرَائِيلَ اعْبُدُوا اللَّهَ رَبِّي وَرَبَّكُمْ ۖ إِنَّهُ مَن يُشْرِكْ بِاللَّهِ فَقَدْ حَرَّمَ اللَّهُ عَلَيْهِ الْجَنَّةَ وَمَأْوَاهُ النَّارُ ۖ وَمَا لِلظَّالِمِينَ مِنْ أَنصَارٍ
ಮರ್ಯಮರ ಮಗನಾದ ಮಸೀಹನೇ ಅಲ್ಲಾಹನಾಗಿದ್ದಾನೆ ಎಂದು ಹೇಳಿದವರು ನಿಸ್ಸಂಶಯವಾಗಿಯು ಸತ್ಯನಿಷೇಧಿಗಳಾಗಿದ್ದಾರೆ. ವಸ್ತುತಃ ಸ್ವತಃ ಮಸೀಹರೆ ಅವರೊಂದಿಗೆ ಹೇಳಿದ್ದರು: ಓ ಇಸ್ರಾಯೀಲ್ ಸಂತತಿಗಳೇ, ನನ್ನ ಮತ್ತು ನಿಮ್ಮೆಲ್ಲರ ಪ್ರಭುವಾದ ಅಲ್ಲಾಹನ ಆರಾಧನೆಯನ್ನು ಮಾಡಿರಿ. ಯಾರು ಅಲ್ಲಾಹನೊಂದಿಗೆ ಸಹಭಾಗಿಯನ್ನು ನಿಶ್ಚಯಿಸುತ್ತಾನೋ ಖಂಡಿತವಾಗಿಯು ಅಲ್ಲಾಹನು ಅವನಿಗೆ ಸ್ವರ್ಗವನ್ನು ನಿಷಿದ್ಧಗೊಳಿಸಿದ್ದಾನೆ. ಅವನ ನೆಲೆಯು ನರಕವಾಗಿರುತ್ತದೆ ಮತ್ತು ಪಾಪಿಗಳ ಸಹಾಯಕರಾಗಿ ಯಾರೂ ಇರಲಾರರು.
73لَّقَدْ كَفَرَ الَّذِينَ قَالُوا إِنَّ اللَّهَ ثَالِثُ ثَلَاثَةٍ ۘ وَمَا مِنْ إِلَٰهٍ إِلَّا إِلَٰهٌ وَاحِدٌ ۚ وَإِن لَّمْ يَنتَهُوا عَمَّا يَقُولُونَ لَيَمَسَّنَّ الَّذِينَ كَفَرُوا مِنْهُمْ عَذَابٌ أَلِيمٌ
ಅಲ್ಲಾಹನು ಮೂವರಲ್ಲಿ ಒಬ್ಬನಾಗಿದ್ದಾನೆ ಎಂದು ಹೇಳಿದವರು ಖಂಡಿತವಾಗಿಯು ನಿಷೇಧಿಗಳಾಗಿದ್ದಾರೆ. ವಾಸ್ತವದಲ್ಲಿ ಅಲ್ಲಾಹನ ಹೊರತು ಇನ್ನಾವ ಆರಾಧ್ಯನಿಲ್ಲ. ಅವರ ಪೈಕಿ ಸತ್ಯನಿಷೇಧಿಗಳಾಗಿರುವವರಿಗೆ ವೇದನಾಜನಕವಾದ ಶಿಕ್ಷೆಯು ಖಂಡಿತ ತಲುಪುವುದು.
74أَفَلَا يَتُوبُونَ إِلَى اللَّهِ وَيَسْتَغْفِرُونَهُ ۚ وَاللَّهُ غَفُورٌ رَّحِيمٌ
ಅವರು ಅಲ್ಲಾಹನೆಡೆಗೆ ಮರಳಿ ಅವನೊಂದಿಗೆ ಪಾಪವಿಮೋಚನೆಯನ್ನು ಏಕೆ ಬೇಡುವುದಿಲ್ಲ? ಅಲ್ಲಾಹನು ಅತ್ಯಧಿಕ ಕ್ಷಮಿಸುವವನೂ, ಕರುಣಾನಿಧಿಯೂ ಆಗಿದ್ದಾನೆ.
75مَّا الْمَسِيحُ ابْنُ مَرْيَمَ إِلَّا رَسُولٌ قَدْ خَلَتْ مِن قَبْلِهِ الرُّسُلُ وَأُمُّهُ صِدِّيقَةٌ ۖ كَانَا يَأْكُلَانِ الطَّعَامَ ۗ انظُرْ كَيْفَ نُبَيِّنُ لَهُمُ الْآيَاتِ ثُمَّ انظُرْ أَنَّىٰ يُؤْفَكُونَ
ಮರ್ಯಮಳ ಮಗನಾದ ಮಸೀಹನು ಸಂದೇಶವಾಹಕನೇ ಹೊರತು ಬೇರೇನೂ ಅಲ್ಲ. ಅವರಿಗಿಂತ ಮುಂಚೆ ಅನೇಕ ಸಂದೇಶವಾಹಕರು ಗತಿಸಿ ಹೋಗಿದ್ದಾರೆ. ಅವರ ತಾಯಿಯು ಓರ್ವ ಸತ್ಯವಂತೆಯಾಗಿದ್ದರು. ಅವರಿಬ್ಬರೂ ಆಹಾರವನ್ನು ಸೇವಿಸುತ್ತಿದ್ದರು. ನಾವು ಅವರ ಮುಂದೆ ಯಾವ ರೀತಿಯಲ್ಲಿ ದೃಷ್ಟಾಂತಗಳನ್ನು ವಿವರಿಸುತ್ತಿದ್ದೇವೆಂದು ನೋಡಿರಿ ಅವರು ಯಾವ ರೀತಿ ಅಲೆದಾಡುತ್ತಿದ್ದಾರೆಂದು ನೋಡಿರಿ.
76قُلْ أَتَعْبُدُونَ مِن دُونِ اللَّهِ مَا لَا يَمْلِكُ لَكُمْ ضَرًّا وَلَا نَفْعًا ۚ وَاللَّهُ هُوَ السَّمِيعُ الْعَلِيمُ
(ಪೈಗಂಬರರೇ ಹೇಳಿರಿ:) ನಿಮಗೆ ಯಾವುದೇ ಲಾಭ ಅಥವಾ ಹಾನಿಯನ್ನುಂಟು ಮಾಡುವ ಅಧಿಕಾರವಿಲ್ಲದವರನ್ನು ನೀವು ಅಲ್ಲಾಹನ ಹೊರತು ಅರಾಧಿಸುತ್ತಿರುವಿರಾ? ಅಲ್ಲಾಹನೇ ಸರ್ವವನ್ನು, ಆಲಿಸುವವನೂ, ಸಂಪೂರ್ಣವಾಗಿ ಅರಿಯುವವನೂ ಆಗಿದ್ದಾನೆ.
ಅಲ್-ಮಾಇದಾಕುರಾನ್ ಸೂಚಿ
120ಆಯತ್
MedinanRevelation
74ಆಯತ್

ಅನುವಾದ — ಅಲ್-ಮಾಇದಾ 74

ಸೂರಾ ಅಲ್-ಮಾಇದಾ ಆಯತ್ 74 - ಓದಿ, ಆಲಿಸಿ, ಅನುವಾದ, ಕನ್ನಡ : ಅವರು ಅಲ್ಲಾಹನೆಡೆಗೆ ಮರಳಿ ಅವನೊಂದಿಗೆ ಪಾಪವಿಮೋಚನೆಯನ್ನು ಏಕೆ ಬೇಡುವುದಿಲ್ಲ? ಅಲ್ಲಾಹನು ಅತ್ಯಧಿಕ ಕ್ಷಮಿಸುವವನೂ,…

ಸೂರಾ ಆಯತ್ 74/120 — ಸೂರಾ ಅಲ್-ಮಾಇದಾ المائدة (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಮಾಇದಾ ಆಲಿಸಿ, ಸೂರಾ ಅಲ್-ಮಾಇದಾ ಅನುವಾದ, ಸೂರಾ ಅಲ್-ಮಾಇದಾ mp3, ಸೂರಾ ಅಲ್-ಮಾಇದಾ pdf. ಆಯತ್ 72–76. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Tuesday, September 8, 2026

Don't forget us in your sincere prayers