ಅಲ್-ಮಾಇದಾ · 21/120
ಅನುವಾದ ಉಚ್ಚಾರಣೆ — ಸೂರಾ ಅಲ್-ಮಾಇದಾ
يَا قَوْمِ ادْخُلُوا الْأَرْضَ الْمُقَدَّسَةَ الَّتِي كَتَبَ اللَّهُ لَكُمْ وَلَا تَرْتَدُّوا عَلَىٰ أَدْبَارِكُمْ فَتَنقَلِبُوا خَاسِرِينَ ۝٢١
Yaa qawmid khulul Ardal MMuqaddasatal latee katabal laahu lakum wa laa tartaddoo `alaaa adbaarikum fatanqaliboo khaasireen
📖 ಕನ್ನಡ ಅರ್ಥ
ಓ ನನ್ನ ಜನರೇ, ಅಲ್ಲಾಹನು ನಿಮಗಾಗಿ ಬರೆದಿರುವ ಪವಿತ್ರ ಭೂಮಿಯನ್ನು (ಫೆಲಸ್ತೀನ್) ನೀವು ಪ್ರವೇಶಿಸಿರಿ. ಮತ್ತು ಬೆನ್ನು ತಿರುಗಿಸಿ ಹೋಗಬೇಡಿರಿ. ಅನ್ಯಥಾ ನೀವು ನಷ್ಟ ಹೊಂದಿದವರಾಗಿ ಮರಳುವಿರಿ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 19-23 — ಸೂರಾ ಅಲ್-ಮಾಇದಾ

19يَا أَهْلَ الْكِتَابِ قَدْ جَاءَكُمْ رَسُولُنَا يُبَيِّنُ لَكُمْ عَلَىٰ فَتْرَةٍ مِّنَ الرُّسُلِ أَن تَقُولُوا مَا جَاءَنَا مِن بَشِيرٍ وَلَا نَذِيرٍ ۖ فَقَدْ جَاءَكُم بَشِيرٌ وَنَذِيرٌ ۗ وَاللَّهُ عَلَىٰ كُلِّ شَيْءٍ قَدِيرٌ
ಓ ಗ್ರಂಥದವರೇ, ನಿಶ್ಚಯವಾಗಿಯು ಸಂದೇಶವಾಹಕರ ಆಗಮನವು ಸ್ಥಗಿತಗೊಂಡಿದ್ದ ಒಂದು ಕಾಲದ ಬಳಿಕ ನಮ್ಮ ಸಂದೇಶವಾಹಕರು ನಿಮ್ಮ ಬಳಿಗೆ ಬಂದಿರುವರು. ಅವರು ನಿಮಗಾಗಿ (ನಮ್ಮ ನಿಯಮಗಳನ್ನು) ಸ್ಪಷ್ಟವಾಗಿ ವಿವರಿಸಿಕೊಡುತ್ತಾರೆ. ಇದೇಕೆಂದರೆ ನೀವು ನಮ್ಮ ಬಳಿಗೆ ಒಬ್ಬ ಶುಭವಾರ್ತೆ ನೀಡುವವನಾಗಲೀ, ಮುನ್ನೆಚ್ಚರಿಕೆ ನೀಡುವವನಾಗಲೀ ಬಂದಿರಲಿಲ್ಲ ಎಂದು ಹೇಳಬಾರದೆಂದಾಗಿದೆ. ಇನ್ನು ಖಂಡಿತವಾಗಿಯು ಶುಭವಾರ್ತೆಯನ್ನು ತಿಳಿಸುವ ಮತ್ತು ಮುನ್ನೆಚ್ಚರಿಕೆ ನೀಡುವ ಪೈಗಂಬರರು ನಿಮ್ಮ ಬಳಿಗೆ ಬಂದಿರುವರು ಮತ್ತು ಅಲ್ಲಾಹನು ಸಕಲ ಸಂಗತಿಗಳ ಮೇಲೂ ಸಾಮರ್ಥ್ಯವುಳ್ಳವನಾಗಿದ್ದಾನೆ.
20وَإِذْ قَالَ مُوسَىٰ لِقَوْمِهِ يَا قَوْمِ اذْكُرُوا نِعْمَةَ اللَّهِ عَلَيْكُمْ إِذْ جَعَلَ فِيكُمْ أَنبِيَاءَ وَجَعَلَكُم مُّلُوكًا وَآتَاكُم مَّا لَمْ يُؤْتِ أَحَدًا مِّنَ الْعَالَمِينَ
ಮೂಸಾ ತನ್ನ ಜನತೆಯೊಂದಿಗೆ ಹೇಳಿದ ಸಂದರ್ಭವನ್ನು ಸ್ಮರಿಸಿರಿ: ಓ ನನ್ನ ಜನರೇ, ನಿಮ್ಮಿಂದಲೇ ಪೈಗಂಬರರÀನ್ನು ನಿಯೋಗಿಸಿ, ನಿಮ್ಮನ್ನು ಅರಸರನ್ನಾಗಿ ಮಾಡಿ ಮತ್ತು ಇಡೀ ಜಗತ್ತಿನ ಜನರ ಪೈಕಿ ಯಾರಿಗೂ ನೀಡದಂತಹದ್ದನ್ನು ನಿಮಗೆ ನೀಡಿ ಅಲ್ಲಾಹನು ನಿಮ್ಮ ಮೇಲೆ ಮಾಡಿರುವ ಉಪಕಾರವನ್ನು ಸ್ಮರಿಸಿರಿ.
21يَا قَوْمِ ادْخُلُوا الْأَرْضَ الْمُقَدَّسَةَ الَّتِي كَتَبَ اللَّهُ لَكُمْ وَلَا تَرْتَدُّوا عَلَىٰ أَدْبَارِكُمْ فَتَنقَلِبُوا خَاسِرِينَ
ಓ ನನ್ನ ಜನರೇ, ಅಲ್ಲಾಹನು ನಿಮಗಾಗಿ ಬರೆದಿರುವ ಪವಿತ್ರ ಭೂಮಿಯನ್ನು (ಫೆಲಸ್ತೀನ್) ನೀವು ಪ್ರವೇಶಿಸಿರಿ. ಮತ್ತು ಬೆನ್ನು ತಿರುಗಿಸಿ ಹೋಗಬೇಡಿರಿ. ಅನ್ಯಥಾ ನೀವು ನಷ್ಟ ಹೊಂದಿದವರಾಗಿ ಮರಳುವಿರಿ.
22قَالُوا يَا مُوسَىٰ إِنَّ فِيهَا قَوْمًا جَبَّارِينَ وَإِنَّا لَن نَّدْخُلَهَا حَتَّىٰ يَخْرُجُوا مِنْهَا فَإِن يَخْرُجُوا مِنْهَا فَإِنَّا دَاخِلُونَ
ಅವರು ಉತ್ತರಿಸಿದರು: ಓ ಮೂಸಾ, ಅಲ್ಲಿ ಪರಾಕ್ರಮಿಗಳಾದ ಜನಾಂಗವಿದೆ. ಅವರು ಅಲ್ಲಿಂದ ಹೊರಹೋಗುವವರೆಗೆ ನಾವು ಅಲ್ಲಿಗೆ ಹೋಗಲಾರೆವು. ಆದರೆ ಅವರು ಅಲ್ಲಿಂದ ನಿರ್ಗಮಿಸಿದ ಬಳಿಕ ಖಂಡಿತ ನಾವು ಪ್ರವೇಶಿಸುವೆವು.
23قَالَ رَجُلَانِ مِنَ الَّذِينَ يَخَافُونَ أَنْعَمَ اللَّهُ عَلَيْهِمَا ادْخُلُوا عَلَيْهِمُ الْبَابَ فَإِذَا دَخَلْتُمُوهُ فَإِنَّكُمْ غَالِبُونَ ۚ وَعَلَى اللَّهِ فَتَوَكَّلُوا إِن كُنتُم مُّؤْمِنِينَ
ದೇವಭಯವಿರುವವರ ಪೈಕಿ ಅಲ್ಲಾಹನು ಅನುಗ್ರಹಿಸಿದ ಇಬ್ಬರು ಹೇಳಿದರು: ನೀವು ಅವರ ಬಳಿಗೆ ಹೆಬ್ಬಾಗಿಲಿನಿಂದ ದಾಳಿ ಮಾಡುತ್ತಾ ಹೊಕ್ಕಿಬಿಡಿ, ನೀವು ಹೆಬ್ಬಾಗಿಲನ್ನು ತಲುಪುತ್ತಿರುವಂತೆಯೇ ಖಂಡಿತ ಗೆಲುವು ಸಾಧಿಸುವಿರಿ. ಮತ್ತು ನೀವು ವಿಶ್ವಾಸಿಗಳಾಗಿದ್ದರೆ ಅಲ್ಲಾಹನ ಮೇಲೆಯೇ ಭರವಸೆಯನ್ನಿಡಿರಿ.
ಅಲ್-ಮಾಇದಾಕುರಾನ್ ಸೂಚಿ
120ಆಯತ್
MedinanRevelation
21ಆಯತ್

ಅನುವಾದ — ಅಲ್-ಮಾಇದಾ 21

ಸೂರಾ ಅಲ್-ಮಾಇದಾ ಆಯತ್ 21 - ಓದಿ, ಆಲಿಸಿ, ಅನುವಾದ, ಕನ್ನಡ : ಓ ನನ್ನ ಜನರೇ, ಅಲ್ಲಾಹನು ನಿಮಗಾಗಿ ಬರೆದಿರುವ ಪವಿತ್ರ ಭೂಮಿಯನ್ನು (ಫೆಲಸ್ತೀನ್) ನೀವು…

ಸೂರಾ ಆಯತ್ 21/120 — ಸೂರಾ ಅಲ್-ಮಾಇದಾ المائدة (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಮಾಇದಾ ಆಲಿಸಿ, ಸೂರಾ ಅಲ್-ಮಾಇದಾ ಅನುವಾದ, ಸೂರಾ ಅಲ್-ಮಾಇದಾ mp3, ಸೂರಾ ಅಲ್-ಮಾಇದಾ pdf. ಆಯತ್ 19–23. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers