ಅಲ್-ಮಾಇದಾ · 97/120
ಅನುವಾದ ಉಚ್ಚಾರಣೆ — ಸೂರಾ ಅಲ್-ಮಾಇದಾ
۞ جَعَلَ اللَّهُ الْكَعْبَةَ الْبَيْتَ الْحَرَامَ قِيَامًا لِّلنَّاسِ وَالشَّهْرَ الْحَرَامَ وَالْهَدْيَ وَالْقَلَائِدَ ۚ ذَٰلِكَ لِتَعْلَمُوا أَنَّ اللَّهَ يَعْلَمُ مَا فِي السَّمَاوَاتِ وَمَا فِي الْأَرْضِ وَأَنَّ اللَّهَ بِكُلِّ شَيْءٍ عَلِيمٌ ۝٩٧
Ja`alal laahul Ka`batal Baital Haraama qiyaamal linnaasi wash Shahral Haraama walhadya walqalaaa`id; zaalika lita`lamooo annal laaha ya`lamu maa fis samaawaati wa maa fil ardi wa annal laaha bikulli shai`in `Aleem
📖 ಕನ್ನಡ ಅರ್ಥ
ಆದರಣೀಯ ಗೃಹವಾದ ಕಾಬಾವನ್ನು, ಅಲ್ಲಾಹನು ಜನರ ಶಾಂತಿಯ ಕೇಂದ್ರವನ್ನಾಗಿ ಮಾಡಿದ್ದಾನೆ. ಮತ್ತು ಗೌರವಾನ್ವಿತ ತಿಂಗಳನ್ನು ಹರಮ್‌ನಲ್ಲಿ ಬಲಿನೀಡಲಾಗುವ ಪ್ರಾಣಿಯನ್ನೂ, ಕೊರಳಲ್ಲಿ ಪಟ್ಟಿ ಹಾಕಲಾದ (ಕಾಬಾದ ಕಡೆ ಒಯ್ಯುವ) ಪ್ರಾಣಿಗಳನ್ನೂ ಸಹ. ಇದು ನಿಸ್ಸಂಶಯವಾಗಿಯು ಅಲ್ಲಾಹನು ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವ ಸಕಲ ಜ್ಞಾನವನ್ನು ಹೊಂದಿದ್ದಾನೆAದೂ, ಮತ್ತು ಅವನು ಎಲ್ಲಾ ವಸ್ತುಗಳನ್ನು ಚೆನ್ನಾಗಿ ಅರಿತಿರುವನೆಂದೂ ನೀವು ತಿಳಿದುಕೊಳ್ಳಲೆಂದಾಗಿದೆ.

🎧 ಆಲಿಸಿ


📜 ಆಯತ್ 95-99 — ಸೂರಾ ಅಲ್-ಮಾಇದಾ

95يَا أَيُّهَا الَّذِينَ آمَنُوا لَا تَقْتُلُوا الصَّيْدَ وَأَنتُمْ حُرُمٌ ۚ وَمَن قَتَلَهُ مِنكُم مُّتَعَمِّدًا فَجَزَاءٌ مِّثْلُ مَا قَتَلَ مِنَ النَّعَمِ يَحْكُمُ بِهِ ذَوَا عَدْلٍ مِّنكُمْ هَدْيًا بَالِغَ الْكَعْبَةِ أَوْ كَفَّارَةٌ طَعَامُ مَسَاكِينَ أَوْ عَدْلُ ذَٰلِكَ صِيَامًا لِّيَذُوقَ وَبَالَ أَمْرِهِ ۗ عَفَا اللَّهُ عَمَّا سَلَفَ ۚ وَمَنْ عَادَ فَيَنتَقِمُ اللَّهُ مِنْهُ ۗ وَاللَّهُ عَزِيزٌ ذُو انتِقَامٍ
ಓ ಸತ್ಯವಿಶ್ವಾಸಿಗಳೇ, ನೀವು ಇಹ್ರಾಮ್‌ನಲ್ಲಿರುವಾಗ ಬೇಟೆ ಪ್ರಾಣಿಯನ್ನು ಕೊಲ್ಲಬೇಡಿರಿ. ನಿಮ್ಮ ಪೈಕಿ ಯಾರಾದರೂ ಉದ್ದೇಶಪೂರ್ವಕವಾಗಿ ಅದನ್ನು ಕೊಂದರೆ ಅವನು ಅದಕ್ಕೆ ಸಮಾನವಾದ ಪ್ರಾಣಿಯನ್ನು ಪ್ರಾಯಶ್ಚಿತ್ತವಾಗಿ ನೀಡುವುದು ಕಡ್ಡಾಯವಾಗಿದೆ. ನಿಮ್ಮ ಪೈಕಿ ಇಬ್ಬರು ನ್ಯಾಯಸಮ್ಮತ ವ್ಯಕ್ತಿಗಳು ಇದರ ತೀರ್ಮಾನ ಮಾಡಲಿ, ಪ್ರಾಯಶ್ಚಿತ್ತವು ಕಾಬಾಲಯಕ್ಕೆ ಹರಕೆಯ ರೂಪದಲ್ಲಿ ತಲುಪಿಸಬೇಕಾಗಿದೆ ಅಥವಾ ಪ್ರಾಯಶ್ಚಿತ್ತವನ್ನು ದರಿದ್ರರಿಗೆ ಆಹಾರವಾಗಿ ನೀಡಲಿ ಮತ್ತು ಅದಕ್ಕೆ ಸಮಾನವಾಗಿ ಉಪವಾಸ ಆಚರಿಸಲಿ. ಇದು ಅವನು ಮಾಡಿದ ಕೃತ್ಯದ ಪರಿಣಾಮವನ್ನು ಸ್ವತಃ ಅವನು ಅನುಭವಿಸಲೆಂದಾಗಿದೆ. ಈ ಮುಂಚೆ ಮಾಡಿರುವುದನ್ನು ಅಲ್ಲಾಹು ಕ್ಷಮಿಸಿರುತ್ತಾನೆ ಮತ್ತು ಯಾರು ಪುನಃ ಅಂತಹದೇ ಕೃತ್ಯವನ್ನು ಎಸಗುತ್ತಾನೋ ಅಲ್ಲಾಹನು ಪ್ರತೀಕಾರ ಶಿಕ್ಷಾಕ್ರಮವನ್ನು ಕೈಗೊಳ್ಳುವನು. ಅಲ್ಲಾಹನು ಪ್ರತಾಪಶಾಲಿಯೂ, ಶಿಕ್ಷಾಕ್ರಮ ಕೈಗೊಳ್ಳುವವನೂ ಆಗಿದ್ದಾನೆ.
96أُحِلَّ لَكُمْ صَيْدُ الْبَحْرِ وَطَعَامُهُ مَتَاعًا لَّكُمْ وَلِلسَّيَّارَةِ ۖ وَحُرِّمَ عَلَيْكُمْ صَيْدُ الْبَرِّ مَا دُمْتُمْ حُرُمًا ۗ وَاتَّقُوا اللَّهَ الَّذِي إِلَيْهِ تُحْشَرُونَ
ನಿಮ್ಮ ಪ್ರಯೋಜನಕ್ಕಾಗಿ ಮತ್ತು ಪ್ರಯಾಣಿಕರ ಪ್ರಯೋಜನಕ್ಕಾಗಿ ಸಮುದ್ರದಲ್ಲಿ ಬೇಟೆಯಾಡುವುದನ್ನೂ ಮತ್ತು ಅದನ್ನು ತಿನ್ನುವುದನ್ನೂ ಧರ್ಮಸಮ್ಮತಗೊಳಿಸಲಾಗಿದೆ. ಮತ್ತು ನೀವು ಇಹ್ರಾಮ್‌ನ ಸ್ಥಿತಿಯಲ್ಲಿರುವಾಗ ನೆಲದ ಬೇಟೆಯನ್ನು ನಿಮಗೆ ನಿಷಿದ್ಧಗೊಳಿಸಲಾಗಿದೆ. ಯಾರೆಡೆಗೆ ನೀವು ಒಟ್ಟುಗೂಡಿಸಲ್ಪಡುವಿರೋ ಆ ಅಲ್ಲಾಹುನನ್ನು ಭಯಪಡಿರಿ.
97۞ جَعَلَ اللَّهُ الْكَعْبَةَ الْبَيْتَ الْحَرَامَ قِيَامًا لِّلنَّاسِ وَالشَّهْرَ الْحَرَامَ وَالْهَدْيَ وَالْقَلَائِدَ ۚ ذَٰلِكَ لِتَعْلَمُوا أَنَّ اللَّهَ يَعْلَمُ مَا فِي السَّمَاوَاتِ وَمَا فِي الْأَرْضِ وَأَنَّ اللَّهَ بِكُلِّ شَيْءٍ عَلِيمٌ
ಆದರಣೀಯ ಗೃಹವಾದ ಕಾಬಾವನ್ನು, ಅಲ್ಲಾಹನು ಜನರ ಶಾಂತಿಯ ಕೇಂದ್ರವನ್ನಾಗಿ ಮಾಡಿದ್ದಾನೆ. ಮತ್ತು ಗೌರವಾನ್ವಿತ ತಿಂಗಳನ್ನು ಹರಮ್‌ನಲ್ಲಿ ಬಲಿನೀಡಲಾಗುವ ಪ್ರಾಣಿಯನ್ನೂ, ಕೊರಳಲ್ಲಿ ಪಟ್ಟಿ ಹಾಕಲಾದ (ಕಾಬಾದ ಕಡೆ ಒಯ್ಯುವ) ಪ್ರಾಣಿಗಳನ್ನೂ ಸಹ. ಇದು ನಿಸ್ಸಂಶಯವಾಗಿಯು ಅಲ್ಲಾಹನು ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವ ಸಕಲ ಜ್ಞಾನವನ್ನು ಹೊಂದಿದ್ದಾನೆAದೂ, ಮತ್ತು ಅವನು ಎಲ್ಲಾ ವಸ್ತುಗಳನ್ನು ಚೆನ್ನಾಗಿ ಅರಿತಿರುವನೆಂದೂ ನೀವು ತಿಳಿದುಕೊಳ್ಳಲೆಂದಾಗಿದೆ.
98اعْلَمُوا أَنَّ اللَّهَ شَدِيدُ الْعِقَابِ وَأَنَّ اللَّهَ غَفُورٌ رَّحِيمٌ
ಅಲ್ಲಾಹನು ಕಠಿಣವಾಗಿ ಶಿಕ್ಷಿಸುವವನೆಂದೂ ಮತ್ತು ಅಲ್ಲಾಹನು ಕ್ಷಮಾಶೀಲನೂ ಹಾಗೂ ಕರುಣಾನಿಧಿಯೂ ಆಗಿದ್ದಾನೆಂದು ನೀವು ತಿಳಿದುಕೊಳ್ಳಿರಿ.
99مَّا عَلَى الرَّسُولِ إِلَّا الْبَلَاغُ ۗ وَاللَّهُ يَعْلَمُ مَا تُبْدُونَ وَمَا تَكْتُمُونَ
ಸಂದೇಶವಾಹಕರ ಮೇಲೆ ಸಂದೇಶವನ್ನು ತಲುಪಿಸುವ ಹೊಣೆ ಮಾತ್ರವಿದೆ. ನೀವು ಬಹಿರಂಗಗೊಳಿಸುವುದನ್ನೂ, ಬಚ್ಚಿಡುವುದನ್ನೂ ಅಲ್ಲಾಹನು ಅರಿಯುತ್ತಾನೆ.
ಅಲ್-ಮಾಇದಾಕುರಾನ್ ಸೂಚಿ
120ಆಯತ್
MedinanRevelation
97ಆಯತ್

ಅನುವಾದ — ಅಲ್-ಮಾಇದಾ 97

ಸೂರಾ ಅಲ್-ಮಾಇದಾ ಆಯತ್ 97 - ಓದಿ, ಆಲಿಸಿ, ಅನುವಾದ, ಕನ್ನಡ : ಆದರಣೀಯ ಗೃಹವಾದ ಕಾಬಾವನ್ನು, ಅಲ್ಲಾಹನು ಜನರ ಶಾಂತಿಯ ಕೇಂದ್ರವನ್ನಾಗಿ ಮಾಡಿದ್ದಾನೆ. ಮತ್ತು ಗೌರವಾನ್ವಿತ…

ಸೂರಾ ಆಯತ್ 97/120 — ಸೂರಾ ಅಲ್-ಮಾಇದಾ المائدة (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಮಾಇದಾ ಆಲಿಸಿ, ಸೂರಾ ಅಲ್-ಮಾಇದಾ ಅನುವಾದ, ಸೂರಾ ಅಲ್-ಮಾಇದಾ mp3, ಸೂರಾ ಅಲ್-ಮಾಇದಾ pdf. ಆಯತ್ 95–99. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers