ಸೂರಾ ಅಸ್-ಸಫ್ ಅರೇಬಿಕ್ ಮತ್ತು ಕನ್ನಡ

ಸೂರಾ ಅಸ್-ಸಫ್ ಸಂಪೂರ್ಣ ಕನ್ನಡ ಅನುವಾದ, ಉಚ್ಚಾರಣೆ ಮತ್ತು ಆಡಿಯೋ ಪಠಣದೊಂದಿಗೆ ಓದಿ. ಪ್ರತಿ ಆಯತ್‌ನ ಅರ್ಥ. (14 ಆಯತ್ — مدنية). ಅಸ್-ಸಫ್ ಆಲಿಸಿ, ಅಸ್-ಸಫ್ ಅನುವಾದ, ಅಸ್-ಸಫ್ mp3, ಅಸ್-ಸಫ್ pdf.

ಸೂರಾ ಅಸ್-ಸಫ್ ಓದಿ ಮತ್ತು ಆಲಿಸಿ

🎧 ಆಯತ್
M Mishary Rashid Alafasy
M Mahmoud Khalil Al-Husary
A Abdurrahman As-Sudais
M Mohamed Siddiq Al-Minshawi
A Abdul Basit Abdul Samad
A Ali Al-Hudhaify
A Ahmed ibn Ali al-Ajamy
A Abu Bakr Ash-Shaatree
M Muhammad Ayyoub
A Abdullah Basfar
A Abdullah Al-Juhani
M Maher Al Muaiqly
x1
سَبَّحَ لِلَّهِ مَا فِي السَّمَاوَاتِ وَمَا فِي الْأَرْضِ ۖ وَهُوَ الْعَزِيزُ الْحَكِيمُ ۝١
📖 ಅನುವಾದ ಆಯತ್ 1
ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿ ಇರುವುದೆಲ್ಲವೂ ಅಲ್ಲಾಹನ ಪಾವಿತ್ರ‍್ಯವನ್ನು ಸ್ತುತಿಸುತ್ತಿವೆ ಅವನು ಪ್ರಬಲನೂ ಯುಕ್ತಿಪರ‍್ಣನೂ ಆಗಿದ್ದಾನೆ.
يَا أَيُّهَا الَّذِينَ آمَنُوا لِمَ تَقُولُونَ مَا لَا تَفْعَلُونَ ۝٢
📖 ಅನುವಾದ ಆಯತ್ 2
ಓ ಸತ್ಯ ವಿಶ್ವಾಸಿಗಳೇ ನೀವು ಮಾಡದ್ದನ್ನು ಏಕೆ ಹೇಳುತ್ತೀರಿ?
كَبُرَ مَقْتًا عِندَ اللَّهِ أَن تَقُولُوا مَا لَا تَفْعَلُونَ ۝٣
📖 ಅನುವಾದ ಆಯತ್ 3
ನೀವು ಮಾಡದ್ದನ್ನು ಹೇಳುವುದು ಅಲ್ಲಾಹನ ಬಳಿ ಕ್ರೋಧಕ್ಕೆ ಕಾರಣವಾಗಿದೆ.
إِنَّ اللَّهَ يُحِبُّ الَّذِينَ يُقَاتِلُونَ فِي سَبِيلِهِ صَفًّا كَأَنَّهُم بُنْيَانٌ مَّرْصُوصٌ ۝٤
📖 ಅನುವಾದ ಆಯತ್ 4
ನಿಸ್ಸಂಶಯವಾಗಿಯೂ ಅಲ್ಲಾಹನು ಅವನ ಮರ‍್ಗದಲ್ಲಿ ಸೀಸದ ಎರಕಹೊಯ್ದ ಉಕ್ಕಿನ ಗೋಡೆ ಎಂಬಂತೆ ಪಂಕ್ತಿಬದ್ಧರಾಗಿ ಹೋರಾಡುವವರನ್ನು ಇಷ್ಟಪಡುತ್ತಾನೆ.
وَإِذْ قَالَ مُوسَىٰ لِقَوْمِهِ يَا قَوْمِ لِمَ تُؤْذُونَنِي وَقَد تَّعْلَمُونَ أَنِّي رَسُولُ اللَّهِ إِلَيْكُمْ ۖ فَلَمَّا زَاغُوا أَزَاغَ اللَّهُ قُلُوبَهُمْ ۚ وَاللَّهُ لَا يَهْدِي الْقَوْمَ الْفَاسِقِينَ ۝٥
📖 ಅನುವಾದ ಆಯತ್ 5
ಮೂಸಾ ತಮ್ಮ ಜನರಿಗೆ ಹೇಳಿದ ಸಂರ‍್ಭವನ್ನು ಸ್ಮರಿಸಿರಿ; ಓ ನನ್ನಜನಾಂಗದವರೇ ನಾನು ನಿಮ್ಮಕಡೆಗೆ ಕಳುಹಿಸಲ್ಪಟ್ಟ ಸಂದೇಶವಾಹಕನೆಂದು ನಿಮಗೆ ಚೆನ್ನಾಗಿ ತಿಳಿದಿದ್ದರೂ ನೀವು ನನ್ನನ್ನೇಕೆ ಪೀಡಿಸುತ್ತೀರಿ ಅವರು ವಕ್ರ ಮರ‍್ಗವನ್ನು ಹಿಡಿದಾಗ ಅಲ್ಲಾಹನು ಅವರ ಹೃದಯಗಳನ್ನು ವಕ್ರಗೊಳಿಸಿಬಿಟ್ಟನು ಮತ್ತು ಅಲ್ಲಾಹನು ಧಿಕ್ಕಾರಿಗಳಾದ ಜನರಿಗೆ ಸನ್ಮರ‍್ಗ ನೀಡುವುದಿಲ್ಲ.
وَإِذْ قَالَ عِيسَى ابْنُ مَرْيَمَ يَا بَنِي إِسْرَائِيلَ إِنِّي رَسُولُ اللَّهِ إِلَيْكُم مُّصَدِّقًا لِّمَا بَيْنَ يَدَيَّ مِنَ التَّوْرَاةِ وَمُبَشِّرًا بِرَسُولٍ يَأْتِي مِن بَعْدِي اسْمُهُ أَحْمَدُ ۖ فَلَمَّا جَاءَهُم بِالْبَيِّنَاتِ قَالُوا هَٰذَا سِحْرٌ مُّبِينٌ ۝٦
📖 ಅನುವಾದ ಆಯತ್ 6
ಮತ್ತು ರ‍್ಯಮರ ಪುತ್ರ ಈಸಾ ಹೇಳಿದ ಸಂರ‍್ಭವನ್ನು ಸ್ಮರಿಸಿರಿ; ಓ ಇಸ್ರಾಯೀಲ್ ಸಂತತಿಗಳೇ, ನಾನು ನಿಮ್ಮೆಡೆಗೆ ಅಲ್ಲಾಹನ ಕಡೆಯಿಂದ ಕಳುಹಿಸಲ್ಪಟ್ಟ ಸಂದೇಶವಾಹಕನಾಗಿರುತ್ತೇನೆ. ನನಗಿಂತ ಮುಂಚೆ ಅವತರ‍್ಣಗೊಂಡ ತೌರಾತ್ ಗ್ರಂಥವನ್ನು ನಾನು ದೃಢೀಕರಿಸುವವನು ಮತ್ತು ನನ್ನ ಬಳಿಕ ಬರಲಿರುವ ಅಹ್ಮದ್ ಎಂಬ ಹೆಸರಿನ ಒಬ್ಬ ಸಂದೇಶವಾಹಕನ ಶುಭವರ‍್ತೆ ನೀಡುವವನಾಗಿರುವೆನು; ಆದರೆ ಅವರು ಸುಸ್ಪಷ್ಟ ಪುರಾವೆಗಳೊಂದಿಗೆ ಅವರ ಬಳಿಗೆ ಬಂದಾಗ ಇದು ಸ್ಪಷ್ಟÀ್ಟ ಜಾದುವಾಗಿದೆ ಎಂದು ಅವರು ಹೇಳಿಬಿಟ್ಟರು.
وَمَنْ أَظْلَمُ مِمَّنِ افْتَرَىٰ عَلَى اللَّهِ الْكَذِبَ وَهُوَ يُدْعَىٰ إِلَى الْإِسْلَامِ ۚ وَاللَّهُ لَا يَهْدِي الْقَوْمَ الظَّالِمِينَ ۝٧
📖 ಅನುವಾದ ಆಯತ್ 7
ಒಬ್ಬ ವ್ಯಕ್ತಿಯನ್ನು ಇಸ್ಲಾಮಿನೆÀಡೆಗೆ ಕರೆಯಲಾಗುತ್ತಿರುವಾಗ ಅವನು ಅಲ್ಲಾಹನ ಮೇಲೆ ಸುಳ್ಳಾರೋಪ ಮಾಡಿದವನಿಗಿಂತ ದೊಡ್ಡ ಅಕ್ರಮಿ ಇನ್ನಾರಿದ್ದಾನೆ. ಅಲ್ಲಾಹನು ಅಕ್ರಮಿಗಳಾದ ಜನರಿಗೆ ಸನ್ಮರ‍್ಗವನ್ನು ಕರುಣಿಸುವುದಿಲ್ಲ.
يُرِيدُونَ لِيُطْفِئُوا نُورَ اللَّهِ بِأَفْوَاهِهِمْ وَاللَّهُ مُتِمُّ نُورِهِ وَلَوْ كَرِهَ الْكَافِرُونَ ۝٨
📖 ಅನುವಾದ ಆಯತ್ 8
ಅವರು ಅಲ್ಲಾಹನ ಪ್ರಕಾಶವನ್ನು ತಮ್ಮ ಬಾಯಿ ಯಿಂದ ಊದಿ ನಂದಿಸಲಿಚ್ಛಿಸುತ್ತಾರೆ ಸತ್ಯ ನಿಷೇಧಿಗಳಿಗೆ ಅಪ್ರಿಯವಾದರೂ ಅಲ್ಲಾಹನು ತನ್ನ ಪ್ರಕಾಶವನ್ನು ಪರ‍್ಣಗೊಳಿಸುವವನಿದ್ದಾನೆ.
هُوَ الَّذِي أَرْسَلَ رَسُولَهُ بِالْهُدَىٰ وَدِينِ الْحَقِّ لِيُظْهِرَهُ عَلَى الدِّينِ كُلِّهِ وَلَوْ كَرِهَ الْمُشْرِكُونَ ۝٩
📖 ಅನುವಾದ ಆಯತ್ 9
ಸಕಲ ರ‍್ಮಗಳ ಮೇಲೆ ಮೇಲುಗೈ ಸಾಧಿಸಲೆಂದು ಅವನೇ ಸನ್ಮರ‍್ಗ ಹಾಗೂ ನೈಜರ‍್ಮದೊಂದಿಗೆ ತನ್ನ ಸಂದೇಶವಾಹಕರನ್ನು ಕಳುಹಿಸಿಕೊಟ್ಟವನು. ಬಹುದೇವ ಆರಾಧಕರಿಗೆ ಅದೆಷ್ಟು ಅಪ್ರಿಯವಾದರೂ ಸರಿಯೇ.
يَا أَيُّهَا الَّذِينَ آمَنُوا هَلْ أَدُلُّكُمْ عَلَىٰ تِجَارَةٍ تُنجِيكُم مِّنْ عَذَابٍ أَلِيمٍ ۝١٠
📖 ಅನುವಾದ ಆಯತ್ 10
ಓ ಸತ್ಯವಿಶ್ವಾಸಿಗಳೇ ನಿಮ್ಮನ್ನು ವೇದನಾಜನಕ ಯಾತನೆಯಿಂದ ರಕ್ಷಿಸುವಂತಹ ವ್ಯಾಪಾರವೊಂದನ್ನು ನಾನು ನಿಮಗೆ ತಿಳಿಸಿಕೊಡಲೇನು ?
تُؤْمِنُونَ بِاللَّهِ وَرَسُولِهِ وَتُجَاهِدُونَ فِي سَبِيلِ اللَّهِ بِأَمْوَالِكُمْ وَأَنفُسِكُمْ ۚ ذَٰلِكُمْ خَيْرٌ لَّكُمْ إِن كُنتُمْ تَعْلَمُونَ ۝١١
📖 ಅನುವಾದ ಆಯತ್ 11
ನೀವು ಅಲ್ಲಾಹನಲ್ಲಿ ಮತ್ತು ಅವನ ಸಂದೇಶವಾಹಕರಲ್ಲಿ ವಿಶ್ವಾಸವಿಡಿರಿ ಹಾಗೂ ಅಲ್ಲಾಹನ ಮರ‍್ಗದಲ್ಲಿ ನಿಮ್ಮ ಸಂಪತ್ತು ಮತ್ತು ಶರೀರಗಳೊಂದಿಗೆ ಹೋರಾಡಿರಿ, ನೀವು ತಿಳಿಯುವವರಾಗಿದ್ದರೆ ಇದು ನಿಮ್ಮ ಪಾಲಿಗೆ ಅತ್ಯುತ್ತಮ ವಾಗಿರುತ್ತದೆ,
يَغْفِرْ لَكُمْ ذُنُوبَكُمْ وَيُدْخِلْكُمْ جَنَّاتٍ تَجْرِي مِن تَحْتِهَا الْأَنْهَارُ وَمَسَاكِنَ طَيِّبَةً فِي جَنَّاتِ عَدْنٍ ۚ ذَٰلِكَ الْفَوْزُ الْعَظِيمُ ۝١٢
📖 ಅನುವಾದ ಆಯತ್ 12
ಅವನು ನಿಮ್ಮ ಪಾಪಗಳನ್ನು ಕ್ಷಮಿಸುವನು ಮತ್ತು ನಿಮ್ಮನ್ನು ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವ ಸ್ರ‍್ಗೋದ್ಯಾನಗಳಲ್ಲಿ ಮತ್ತು ಶಾಶ್ವತವಾಗಿ ವಾಸಕ್ಕಿರುವ ಸ್ರ‍್ಗೋದ್ಯಾನಗಳಲ್ಲಿ, ಅತ್ಯುತ್ತಮ ನಿವಾಸದಲ್ಲಿ ಪ್ರವೇಶಿಸುವನು ಇದುವೇ ಮಹಾ ಯಶಸ್ಸಾಗಿದೆ.
وَأُخْرَىٰ تُحِبُّونَهَا ۖ نَصْرٌ مِّنَ اللَّهِ وَفَتْحٌ قَرِيبٌ ۗ وَبَشِّرِ الْمُؤْمِنِينَ ۝١٣
📖 ಅನುವಾದ ಆಯತ್ 13
ನೀವು ಬಯಸುವ ಇನ್ನೊಂದು ಅನುಗ್ರಹವನ್ನು ನೀಡುವನು, ಅಂದರೆ ಅಲ್ಲಾಹನ ಕಡೆಯ ಸಹಾಯ ಹಾಗೂ ಶೀಘ್ರ ವಿಜಯವಾಗಿದೆ. ನೀವು ಸತ್ಯವಿಶ್ವಾಸಿಗಳಿಗೆ ಸುವರ‍್ತೆ ನೀಡಿರಿ.
يَا أَيُّهَا الَّذِينَ آمَنُوا كُونُوا أَنصَارَ اللَّهِ كَمَا قَالَ عِيسَى ابْنُ مَرْيَمَ لِلْحَوَارِيِّينَ مَنْ أَنصَارِي إِلَى اللَّهِ ۖ قَالَ الْحَوَارِيُّونَ نَحْنُ أَنصَارُ اللَّهِ ۖ فَآمَنَت طَّائِفَةٌ مِّن بَنِي إِسْرَائِيلَ وَكَفَرَت طَّائِفَةٌ ۖ فَأَيَّدْنَا الَّذِينَ آمَنُوا عَلَىٰ عَدُوِّهِمْ فَأَصْبَحُوا ظَاهِرِينَ ۝١٤
📖 ಅನುವಾದ ಆಯತ್ 14
ಓ ಸತ್ಯ ವಿಶ್ವಾಸಿಗಳೇ, ನೀವು ಅಲ್ಲಾಹನ ಸಹಾಯಕರಾಗಿಬಿಡಿರಿ, ರ‍್ಯಮರ ಪುತ್ರ ಈಸಾ ಹವಾರಿಗಳೊಂದಿಗೆ ಅಲ್ಲಾಹನ ಮರ‍್ಗದಲ್ಲಿ ನನ್ನ ಸಹಾಯಕರಾಗುವರು ಯಾರು? ಎಂದು ಕೇಳಿದಂತೆ, ಹವಾರಿಗಳು ಹೇಳಿದರು; ನಾವು ಅಲ್ಲಾಹನ ಮರ‍್ಗದಲ್ಲಿ ನಿಮ್ಮ ಸಹಾಯಕರಾಗಿರುವೆವು. ಆಗ ಇಸ್ರಾಯೀಲ್ ಸಂತತಿಗಳ ಪೈಕಿಯ ಇನ್ನೊಂದು ಗುಂಪು ಸತ್ಯವಿಶ್ವಾಸವಿಟ್ಟಿತು ಒಂದು ಗುಂಪು ನಿಷೇಧಿಸಿಬಿಟ್ಟಿತು. ಆಗ ನಾವು ಸತ್ಯ ವಿಶ್ವಾಸಿಗಳಿಗೆ ಅವರ ಶತ್ರುಗಳ ವಿರುದ್ಧ ಬೆಂಬಲ ನೀಡಿದವು. ಹೀಗೆ ಅವರು ವಿಜಯಶಾಲಿಗಳಾದರು.
← 60 ಅಸ್-ಸಫ್ (61/114) 62 →
ಓದಿ ಸೂರಾ ಅಸ್-ಸಫ್ ಕನ್ನಡ ಅನುವಾದ – ಪಠಣ ಮತ್ತು ಆಡಿಯೋ

61الصف As-Saff 📚 14 ಆಯತ್ مدنية

ಆಯತ್‌ವಾರು – ಸೂರಾ ಅಸ್-ಸಫ್ — 14 ಆಯತ್




ಪವಿತ್ರ ಕುರಾನ್


Monday, September 7, 2026

Don't forget us in your sincere prayers