ಸೂರಾ ಅಸ್-ಸಫ್ pdf — ಡೌನ್‌ಲೋಡ್ (ಕನ್ನಡ)
ಸೂರಾ ಅಸ್-ಸಫ್ pdf ಕನ್ನಡ — ಡೌನ್‌ಲೋಡ್ ಸೂರಾ ಅಸ್-ಸಫ್ ಅನುವಾದ. ಸೂರಾ ಅಸ್-ಸಫ್ (Medinan) 14 ಆಯತ್.
Related
- ಸೂರಾ ಅಸ್-ಸಫ್ ಅನುವಾದಕನ್ನಡ
- ಸೂರಾ ಅಸ್-ಸಫ್ mp3ಆಲಿಸಿ
- Quran Index ಕನ್ನಡ114
More ಸೂರಾ PDF
ಸೂರಾ ಅಸ್-ಸಫ್

ﮍﮎﮏﮐﮑﮒﮓﮔﮕﮖﮗﮘﮙ
61:1
ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿ ಇರುವುದೆಲ್ಲವೂ ಅಲ್ಲಾಹನ ಪಾವಿತ್ರ‍್ಯವನ್ನು ಸ್ತುತಿಸುತ್ತಿವೆ ಅವನು ಪ್ರಬಲನೂ ಯುಕ್ತಿಪರ‍್ಣನೂ ಆಗಿದ್ದಾನೆ.
ﮚﮛﮜﮝﮞﮟﮠﮡﮢ
61:2
ಓ ಸತ್ಯ ವಿಶ್ವಾಸಿಗಳೇ ನೀವು ಮಾಡದ್ದನ್ನು ಏಕೆ ಹೇಳುತ್ತೀರಿ?
ﮣﮤﮥﮦﮧﮨﮩﮪﮫﮬ
61:3
ನೀವು ಮಾಡದ್ದನ್ನು ಹೇಳುವುದು ಅಲ್ಲಾಹನ ಬಳಿ ಕ್ರೋಧಕ್ಕೆ ಕಾರಣವಾಗಿದೆ.
ﮭﮮﮯﮰﮱﯓﯔﯕﯖﯗﯘﯙ
61:4
ನಿಸ್ಸಂಶಯವಾಗಿಯೂ ಅಲ್ಲಾಹನು ಅವನ ಮರ‍್ಗದಲ್ಲಿ ಸೀಸದ ಎರಕಹೊಯ್ದ ಉಕ್ಕಿನ ಗೋಡೆ ಎಂಬಂತೆ ಪಂಕ್ತಿಬದ್ಧರಾಗಿ ಹೋರಾಡುವವರನ್ನು ಇಷ್ಟಪಡುತ್ತಾನೆ.
ﯚﯛﯜﯝﯞﯟﯠﯡﯢﯣﯤﯥﯦﯧﯨﯩﯪﯫﯬﯭﯮﯯﯰﯱﯲﯳ
61:5
ಮೂಸಾ ತಮ್ಮ ಜನರಿಗೆ ಹೇಳಿದ ಸಂರ‍್ಭವನ್ನು ಸ್ಮರಿಸಿರಿ; ಓ ನನ್ನಜನಾಂಗದವರೇ ನಾನು ನಿಮ್ಮಕಡೆಗೆ ಕಳುಹಿಸಲ್ಪಟ್ಟ ಸಂದೇಶವಾಹಕನೆಂದು ನಿಮಗೆ ಚೆನ್ನಾಗಿ ತಿಳಿದಿದ್ದರೂ ನೀವು ನನ್ನನ್ನೇಕೆ ಪೀಡಿಸುತ್ತೀರಿ ಅವರು ವಕ್ರ ಮರ‍್ಗವನ್ನು ಹಿಡಿದಾಗ ಅಲ್ಲಾಹನು ಅವರ ಹೃದಯಗಳನ್ನು ವಕ್ರಗೊಳಿಸಿಬಿಟ್ಟನು ಮತ್ತು ಅಲ್ಲಾಹನು ಧಿಕ್ಕಾರಿಗಳಾದ ಜನರಿಗೆ ಸನ್ಮರ‍್ಗ ನೀಡುವುದಿಲ್ಲ.
ﭑﭒﭓﭔﭕﭖﭗﭘﭙﭚﭛﭜﭝﭞﭟﭠﭡﭢﭣﭤﭥﭦﭧﭨﭩﭪﭫﭬﭭﭮﭯﭰﭱ
61:6
ಮತ್ತು ರ‍್ಯಮರ ಪುತ್ರ ಈಸಾ ಹೇಳಿದ ಸಂರ‍್ಭವನ್ನು ಸ್ಮರಿಸಿರಿ; ಓ ಇಸ್ರಾಯೀಲ್ ಸಂತತಿಗಳೇ, ನಾನು ನಿಮ್ಮೆಡೆಗೆ ಅಲ್ಲಾಹನ ಕಡೆಯಿಂದ ಕಳುಹಿಸಲ್ಪಟ್ಟ ಸಂದೇಶವಾಹಕನಾಗಿರುತ್ತೇನೆ. ನನಗಿಂತ ಮುಂಚೆ ಅವತರ‍್ಣಗೊಂಡ ತೌರಾತ್ ಗ್ರಂಥವನ್ನು ನಾನು ದೃಢೀಕರಿಸುವವನು ಮತ್ತು ನನ್ನ ಬಳಿಕ ಬರಲಿರುವ ಅಹ್ಮದ್ ಎಂಬ ಹೆಸರಿನ ಒಬ್ಬ ಸಂದೇಶವಾಹಕನ ಶುಭವರ‍್ತೆ ನೀಡುವವನಾಗಿರುವೆನು; ಆದರೆ ಅವರು ಸುಸ್ಪಷ್ಟ ಪುರಾವೆಗಳೊಂದಿಗೆ ಅವರ ಬಳಿಗೆ ಬಂದಾಗ ಇದು ಸ್ಪಷ್ಟÀ್ಟ ಜಾದುವಾಗಿದೆ ಎಂದು ಅವರು ಹೇಳಿಬಿಟ್ಟರು.
ﭲﭳﭴﭵﭶﭷﭸﭹﭺﭻﭼﭽﭾﭿﮀﮁﮂﮃ
61:7
ಒಬ್ಬ ವ್ಯಕ್ತಿಯನ್ನು ಇಸ್ಲಾಮಿನೆÀಡೆಗೆ ಕರೆಯಲಾಗುತ್ತಿರುವಾಗ ಅವನು ಅಲ್ಲಾಹನ ಮೇಲೆ ಸುಳ್ಳಾರೋಪ ಮಾಡಿದವನಿಗಿಂತ ದೊಡ್ಡ ಅಕ್ರಮಿ ಇನ್ನಾರಿದ್ದಾನೆ. ಅಲ್ಲಾಹನು ಅಕ್ರಮಿಗಳಾದ ಜನರಿಗೆ ಸನ್ಮರ‍್ಗವನ್ನು ಕರುಣಿಸುವುದಿಲ್ಲ.
ﮄﮅﮆﮇﮈﮉﮊﮋﮌﮍﮎﮏ
61:8
ಅವರು ಅಲ್ಲಾಹನ ಪ್ರಕಾಶವನ್ನು ತಮ್ಮ ಬಾಯಿ ಯಿಂದ ಊದಿ ನಂದಿಸಲಿಚ್ಛಿಸುತ್ತಾರೆ ಸತ್ಯ ನಿಷೇಧಿಗಳಿಗೆ ಅಪ್ರಿಯವಾದರೂ ಅಲ್ಲಾಹನು ತನ್ನ ಪ್ರಕಾಶವನ್ನು ಪರ‍್ಣಗೊಳಿಸುವವನಿದ್ದಾನೆ.
ﮐﮑﮒﮓﮔﮕﮖﮗﮘﮙﮚﮛﮜﮝﮞ
61:9
ಸಕಲ ರ‍್ಮಗಳ ಮೇಲೆ ಮೇಲುಗೈ ಸಾಧಿಸಲೆಂದು ಅವನೇ ಸನ್ಮರ‍್ಗ ಹಾಗೂ ನೈಜರ‍್ಮದೊಂದಿಗೆ ತನ್ನ ಸಂದೇಶವಾಹಕರನ್ನು ಕಳುಹಿಸಿಕೊಟ್ಟವನು. ಬಹುದೇವ ಆರಾಧಕರಿಗೆ ಅದೆಷ್ಟು ಅಪ್ರಿಯವಾದರೂ ಸರಿಯೇ.
ﮟﮠﮡﮢﮣﮤﮥﮦﮧﮨﮩﮪ
61:10
ಓ ಸತ್ಯವಿಶ್ವಾಸಿಗಳೇ ನಿಮ್ಮನ್ನು ವೇದನಾಜನಕ ಯಾತನೆಯಿಂದ ರಕ್ಷಿಸುವಂತಹ ವ್ಯಾಪಾರವೊಂದನ್ನು ನಾನು ನಿಮಗೆ ತಿಳಿಸಿಕೊಡಲೇನು ?
ﮫﮬﮭﮮﮯﮰﮱﯓﯔﯕﯖﯗﯘﯙﯚﯛﯜ
61:11
ನೀವು ಅಲ್ಲಾಹನಲ್ಲಿ ಮತ್ತು ಅವನ ಸಂದೇಶವಾಹಕರಲ್ಲಿ ವಿಶ್ವಾಸವಿಡಿರಿ ಹಾಗೂ ಅಲ್ಲಾಹನ ಮರ‍್ಗದಲ್ಲಿ ನಿಮ್ಮ ಸಂಪತ್ತು ಮತ್ತು ಶರೀರಗಳೊಂದಿಗೆ ಹೋರಾಡಿರಿ, ನೀವು ತಿಳಿಯುವವರಾಗಿದ್ದರೆ ಇದು ನಿಮ್ಮ ಪಾಲಿಗೆ ಅತ್ಯುತ್ತಮ ವಾಗಿರುತ್ತದೆ,
ﯝﯞﯟﯠﯡﯢﯣﯤﯥﯦﯧﯨﯩﯪﯫﯬﯭﯮﯯ
61:12
ಅವನು ನಿಮ್ಮ ಪಾಪಗಳನ್ನು ಕ್ಷಮಿಸುವನು ಮತ್ತು ನಿಮ್ಮನ್ನು ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವ ಸ್ರ‍್ಗೋದ್ಯಾನಗಳಲ್ಲಿ ಮತ್ತು ಶಾಶ್ವತವಾಗಿ ವಾಸಕ್ಕಿರುವ ಸ್ರ‍್ಗೋದ್ಯಾನಗಳಲ್ಲಿ, ಅತ್ಯುತ್ತಮ ನಿವಾಸದಲ್ಲಿ ಪ್ರವೇಶಿಸುವನು ಇದುವೇ ಮಹಾ ಯಶಸ್ಸಾಗಿದೆ.
ﯰﯱﯲﯳﯴﯵﯶﯷﯸﯹﯺﯻ
61:13
ನೀವು ಬಯಸುವ ಇನ್ನೊಂದು ಅನುಗ್ರಹವನ್ನು ನೀಡುವನು, ಅಂದರೆ ಅಲ್ಲಾಹನ ಕಡೆಯ ಸಹಾಯ ಹಾಗೂ ಶೀಘ್ರ ವಿಜಯವಾಗಿದೆ. ನೀವು ಸತ್ಯವಿಶ್ವಾಸಿಗಳಿಗೆ ಸುವರ‍್ತೆ ನೀಡಿರಿ.
ﯼﯽﯾﯿﰀﰁﰂﰃﰄﰅﰆﰇﰈﰉﰊﰋﰌﰍﰎﰏﰐﰑﰒﰓﰔﰕﰖﰗﰘﰙﰚﰛﰜﰝﰞﰟﰠﰡﰢ
61:14
ಓ ಸತ್ಯ ವಿಶ್ವಾಸಿಗಳೇ, ನೀವು ಅಲ್ಲಾಹನ ಸಹಾಯಕರಾಗಿಬಿಡಿರಿ, ರ‍್ಯಮರ ಪುತ್ರ ಈಸಾ ಹವಾರಿಗಳೊಂದಿಗೆ ಅಲ್ಲಾಹನ ಮರ‍್ಗದಲ್ಲಿ ನನ್ನ ಸಹಾಯಕರಾಗುವರು ಯಾರು? ಎಂದು ಕೇಳಿದಂತೆ, ಹವಾರಿಗಳು ಹೇಳಿದರು; ನಾವು ಅಲ್ಲಾಹನ ಮರ‍್ಗದಲ್ಲಿ ನಿಮ್ಮ ಸಹಾಯಕರಾಗಿರುವೆವು. ಆಗ ಇಸ್ರಾಯೀಲ್ ಸಂತತಿಗಳ ಪೈಕಿಯ ಇನ್ನೊಂದು ಗುಂಪು ಸತ್ಯವಿಶ್ವಾಸವಿಟ್ಟಿತು ಒಂದು ಗುಂಪು ನಿಷೇಧಿಸಿಬಿಟ್ಟಿತು. ಆಗ ನಾವು ಸತ್ಯ ವಿಶ್ವಾಸಿಗಳಿಗೆ ಅವರ ಶತ್ರುಗಳ ವಿರುದ್ಧ ಬೆಂಬಲ ನೀಡಿದವು. ಹೀಗೆ ಅವರು ವಿಜಯಶಾಲಿಗಳಾದರು.
ಪವಿತ್ರ ಕುರಾನ್
Wednesday, September 9, 2026
Don't forget us in your sincere prayers







