ಸೂರಾ ಅಲ್-ಹಜ್ಜ್ ಅರೇಬಿಕ್ ಮತ್ತು ಕನ್ನಡ
ಸೂರಾ ಅಲ್-ಹಜ್ಜ್ ಸಂಪೂರ್ಣ ಕನ್ನಡ ಅನುವಾದ, ಉಚ್ಚಾರಣೆ ಮತ್ತು ಆಡಿಯೋ ಪಠಣದೊಂದಿಗೆ ಓದಿ. ಪ್ರತಿ ಆಯತ್‌ನ ಅರ್ಥ. (78 ಆಯತ್ — مدنية). ಅಲ್-ಹಜ್ಜ್ ಆಲಿಸಿ, ಅಲ್-ಹಜ್ಜ್ ಅನುವಾದ, ಅಲ್-ಹಜ್ಜ್ mp3, ಅಲ್-ಹಜ್ಜ್ pdf.ಸೂರಾ ಅಲ್-ಹಜ್ಜ್ ಓದಿ ಮತ್ತು ಆಲಿಸಿ
🎧 ಆಯತ್
M
Mishary Rashid Alafasy
✓
Mishary Rashid Alafasy
✓
M
Mahmoud Khalil Al-Husary
✓
Mahmoud Khalil Al-Husary
✓
A
Abdurrahman As-Sudais
✓
Abdurrahman As-Sudais
✓
M
Mohamed Siddiq Al-Minshawi
✓
Mohamed Siddiq Al-Minshawi
✓
A
Abdul Basit Abdul Samad
✓
Abdul Basit Abdul Samad
✓
A
Ali Al-Hudhaify
✓
Ali Al-Hudhaify
✓
A
Ahmed ibn Ali al-Ajamy
✓
Ahmed ibn Ali al-Ajamy
✓
A
Abu Bakr Ash-Shaatree
✓
Abu Bakr Ash-Shaatree
✓
M
Muhammad Ayyoub
✓
Muhammad Ayyoub
✓
A
Abdullah Basfar
✓
Abdullah Basfar
✓
A
Abdullah Al-Juhani
✓
Abdullah Al-Juhani
✓
M
Maher Al Muaiqly
✓
Maher Al Muaiqly
✓
—
x1
يَا أَيُّهَا النَّاسُ اتَّقُوا رَبَّكُمْ ۚ إِنَّ زَلْزَلَةَ السَّاعَةِ شَيْءٌ عَظِيمٌ ١
📖 ಅನುವಾದ
ಆಯತ್ 1
ಓ ಜನರೇ, ನೀವು ನಿಮ್ಮ ಪ್ರಭುವಿನ ಯಾತನೆಯಿಂದ, ಭಯಪಡಿರಿ. ನಿಸ್ಸಂದೇಹವಾಗಿಯೂ ಪ್ರಳಯದ ಅಂತ್ಯ ಘಳಿಗೆಯ ಕಂಪನವು ಒಂದು ಭಯಂಕರ ಸಂಗತಿಯಾಗಿದೆ.
يَوْمَ تَرَوْنَهَا تَذْهَلُ كُلُّ مُرْضِعَةٍ عَمَّا أَرْضَعَتْ وَتَضَعُ كُلُّ ذَاتِ حَمْلٍ حَمْلَهَا وَتَرَى النَّاسَ سُكَارَىٰ وَمَا هُم بِسُكَارَىٰ وَلَٰكِنَّ عَذَابَ اللَّهِ شَدِيدٌ ٢
📖 ಅನುವಾದ
ಆಯತ್ 2
ಅದನ್ನು ನೀವು ಕಾಣುವ ದಿನ ಪ್ರತಿಯೊಬ್ಬ ಹಾಲುಣಿಸುವವಳು ತಾನು ಹಾಲುಣಿಸುವ ಮಗುವನ್ನು ಮರೆತುಬಿಡುವಳು ಮತ್ತು ಪ್ರತಿಯೊಬ್ಬ ಗರ್ಭಿಣಿಯ ಗರ್ಭ ಪಾತವಾಗಿ ಬಿಡುವುದು ಮತ್ತು ನೀವು ಜನರನ್ನು ಅಮಲೇರಿದವರನ್ನಾಗಿ ಕಾಣುವಿರಿ ವಾಸ್ತವದಲ್ಲಿ ಅವರು ಅಮಲೇರಿದವರಲ್ಲ. ಆದರೆ ಅಲ್ಲಾಹನ ಯಾತನೆಯು ಅತ್ಯಂತ ಕಠೋರವಾಗಿರುತ್ತದೆ.
وَمِنَ النَّاسِ مَن يُجَادِلُ فِي اللَّهِ بِغَيْرِ عِلْمٍ وَيَتَّبِعُ كُلَّ شَيْطَانٍ مَّرِيدٍ ٣
📖 ಅನುವಾದ
ಆಯತ್ 3
ಅದನ್ನು ನೀವು ಕಾಣುವ ದಿನ ಪ್ರತಿಯೊಬ್ಬ ಹಾಲುಣಿಸುವವಳು ತಾನು ಹಾಲುಣಿಸುವ ಮಗುವನ್ನು ಮರೆತುಬಿಡುವಳು ಮತ್ತು ಪ್ರತಿಯೊಬ್ಬ ಗರ್ಭಿಣಿಯ ಗರ್ಭ ಪಾತವಾಗಿ ಬಿಡುವುದು ಮತ್ತು ನೀವು ಜನರನ್ನು ಅಮಲೇರಿದವರನ್ನಾಗಿ ಕಾಣುವಿರಿ ವಾಸ್ತವದಲ್ಲಿ ಅವರು ಅಮಲೇರಿದವರಲ್ಲ. ಆದರೆ ಅಲ್ಲಾಹನ ಯಾತನೆಯು ಅತ್ಯಂತ ಕಠೋರವಾಗಿರುತ್ತದೆ.
كُتِبَ عَلَيْهِ أَنَّهُ مَن تَوَلَّاهُ فَأَنَّهُ يُضِلُّهُ وَيَهْدِيهِ إِلَىٰ عَذَابِ السَّعِيرِ ٤
📖 ಅನುವಾದ
ಆಯತ್ 4
ಯಾರು ಆ ಶೈತಾನನ್ನು ಆಪ್ತನನ್ನಾಗಿ ಮಾಡುತ್ತಾನೋ ಅವನು ಅವನನ್ನು ದಾರಿಗೆಡಿಸುತ್ತಾನೆ ಮತ್ತು ಅವನನ್ನು ನರಕ ಯಾತನೆಯೆಡೆಗೆ ಮುನ್ನಡೆಸುತ್ತಾನೆ ಎಂದು ಅವನ (ಶೈತಾನನ) ಅದೃಷ್ಟದಲ್ಲೇ ಬರೆಯಲಾಗಿದೆ.
يَا أَيُّهَا النَّاسُ إِن كُنتُمْ فِي رَيْبٍ مِّنَ الْبَعْثِ فَإِنَّا خَلَقْنَاكُم مِّن تُرَابٍ ثُمَّ مِن نُّطْفَةٍ ثُمَّ مِنْ عَلَقَةٍ ثُمَّ مِن مُّضْغَةٍ مُّخَلَّقَةٍ وَغَيْرِ مُخَلَّقَةٍ لِّنُبَيِّنَ لَكُمْ ۚ وَنُقِرُّ فِي الْأَرْحَامِ مَا نَشَاءُ إِلَىٰ أَجَلٍ مُّسَمًّى ثُمَّ نُخْرِجُكُمْ طِفْلًا ثُمَّ لِتَبْلُغُوا أَشُدَّكُمْ ۖ وَمِنكُم مَّن يُتَوَفَّىٰ وَمِنكُم مَّن يُرَدُّ إِلَىٰ أَرْذَلِ الْعُمُرِ لِكَيْلَا يَعْلَمَ مِن بَعْدِ عِلْمٍ شَيْئًا ۚ وَتَرَى الْأَرْضَ هَامِدَةً فَإِذَا أَنزَلْنَا عَلَيْهَا الْمَاءَ اهْتَزَّتْ وَرَبَتْ وَأَنبَتَتْ مِن كُلِّ زَوْجٍ بَهِيجٍ ٥
📖 ಅನುವಾದ
ಆಯತ್ 5
ಓ ಜನರೇ, ನಿಮಗೆ ಪುನರುತ್ಥಾನದ ಬಗ್ಗೆ ಸಂದೇಹವಿದ್ದರೆ ಚಿಂತಿಸಿ ನೋಡಿರಿ: ನಾವು ನಿಮ್ಮನ್ನು ಮಣ್ಣಿನಿಂದ, ಆ ಬಳಿಕ ವೀರ್ಯದಿಂದ, ನಂತರ ರಕ್ತ ಪಿಂಡದಿAದ, ತರುವಾಯ ರೂಪವಿರುವ, ಸ್ವರೂಪವಿಲ್ಲದ ಮಾಂಸ ಪಿಂಡದಿAದ ಸೃಷ್ಟಿಸಿರುತ್ತೇವೆ. (ಇದೆಕೆಂದರೆ) ವಸ್ತುಸ್ಥಿತಿಯನ್ನು ವಿವರಿಸಲಿಕ್ಕಾಗಿ ನಾವಿದನ್ನು ನಿಮಗೆ (ನಮ್ಮ ಸಾಮರ್ಥ್ಯವನ್ನು) ತಿಳಿಸುತ್ತಿದ್ದೇವೆ ಮತ್ತು ನಾವು ಇಚ್ಛಿಸಿದವರನ್ನು ಗರ್ಭಾಶಯಗಳಲ್ಲಿ ಒಂದು ನಿರ್ಧಿಷ್ಟಾವಧಿಯವರೆಗೆ ನೆಲೆಗೊಳಿಸುತ್ತೇವೆ. ತರುವಾಯ ನಿಮ್ಮನ್ನು ಶಿಶುವಿನ ರೂಪದಲ್ಲಿ ಹೊರ ತರುತ್ತೇವೆ. ಇದು ಆ ಬಳಿಕ ನೀವು ನಿಮ್ಮ ಪರಿಪೂರ್ಣ ಯವ್ವನಕ್ಕೆ ತಲುಪಲೆಂದಾಗಿರುತ್ತದೆ. ನಿಮ್ಮ ಪೈಕಿ ಕೆಲವರು ಮೊದಲೇ ಮರಣ ಹೊಂದುವವರಿದ್ದಾರೆ ಮತ್ತು ಕೆಲವರು ಒಂದು ವಸ್ತುವಿನ ಜ್ಞಾನ ಪಡೆದ ನಂತರ ಅರಿವಿಲ್ಲದಾಗುವಷ್ಟು ಮುಪ್ಪಿನ ಪ್ರಾಯಕ್ಕೆ ಮರಳಿಸಲ್ಪಡುವವರೂ ಇದ್ದಾರೆ ಮತ್ತು ನೀವು ಭೂಮಿಯನ್ನು ಒಣಗಿ ಬಂಜರು ಆಗಿರುವುದಾಗಿ ಕಾಣುತ್ತೀರಿ. ಇನ್ನು ನಾವು ಅದರ ಮೇಲೆ ಮಳೆಯನ್ನು ಸುರಿಸಿದಾಗ ಅದು ಗರಿಗೆದರಿ ಮೊಳೆಯುತ್ತದೆ ಮತ್ತು ಸಕಲ ವಿಧದ ಮನ ಮೋಹಕ ಬೆಳೆಯನ್ನು ಬೆಳೆಯುತ್ತದೆ.
ذَٰلِكَ بِأَنَّ اللَّهَ هُوَ الْحَقُّ وَأَنَّهُ يُحْيِي الْمَوْتَىٰ وَأَنَّهُ عَلَىٰ كُلِّ شَيْءٍ قَدِيرٌ ٦
📖 ಅನುವಾದ
ಆಯತ್ 6
ಇದೇಕೆಂದರೆ ನಿಶ್ಚಯವಾಗಿಯೂ ಅಲ್ಲಾಹನೇ ಪರಮ ಸತ್ಯ ಮತ್ತು ಅವನೇ ಮೃತರನ್ನು ಜೀವಂತಗೊಳಿಸುತ್ತಾನೆ ಮತ್ತು ಅವನು ಪ್ರತಿಯೊಂದು ವಸ್ತುವಿನ ಮೇಲೆ ಸರ್ವ ಸಮರ್ಥನಾಗಿದ್ದಾನೆ.
وَأَنَّ السَّاعَةَ آتِيَةٌ لَّا رَيْبَ فِيهَا وَأَنَّ اللَّهَ يَبْعَثُ مَن فِي الْقُبُورِ ٧
📖 ಅನುವಾದ
ಆಯತ್ 7
ಪ್ರಳಯ ಸಮಯವು ಖಂಡಿತ ಬರಲಿದೆ. ಅದರಲ್ಲಿ ಯಾವುದೇ ಸಂಶಯವಿಲ್ಲ. ಮತ್ತು ನಿಶ್ಚಯವಾಗಿಯೂ ಅಲ್ಲಾಹನು ಸಮಾಧಿಯಲ್ಲಿರುವವರನ್ನು ಪುನಃ ಎಬ್ಬಿಸುವನು.
وَمِنَ النَّاسِ مَن يُجَادِلُ فِي اللَّهِ بِغَيْرِ عِلْمٍ وَلَا هُدًى وَلَا كِتَابٍ مُّنِيرٍ ٨
📖 ಅನುವಾದ
ಆಯತ್ 8
ಜನರ ಪೈಕಿ ಕೆಲವರು ಅಲ್ಲಾಹನ ವಿಚಾರದಲ್ಲಿ ಯಾವುದೇ ಜ್ಞಾನ, ಮಾರ್ಗದರ್ಶನ, ಮತ್ತು ಪ್ರಕಾಶಮಯ ಗ್ರಂಥವಿಲ್ಲದೇ ತರ್ಕ ಮಾಡುವವರೂ ಇದ್ದಾರೆ.
ثَانِيَ عِطْفِهِ لِيُضِلَّ عَن سَبِيلِ اللَّهِ ۖ لَهُ فِي الدُّنْيَا خِزْيٌ ۖ وَنُذِيقُهُ يَوْمَ الْقِيَامَةِ عَذَابَ الْحَرِيقِ ٩
📖 ಅನುವಾದ
ಆಯತ್ 9
ಜನರ ಪೈಕಿ ಕೆಲವರು ಅಲ್ಲಾಹನ ವಿಚಾರದಲ್ಲಿ ಯಾವುದೇ ಜ್ಞಾನ, ಮಾರ್ಗದರ್ಶನ, ಮತ್ತು ಪ್ರಕಾಶಮಯ ಗ್ರಂಥವಿಲ್ಲದೇ ತರ್ಕ ಮಾಡುವವರೂ ಇದ್ದಾರೆ.
ذَٰلِكَ بِمَا قَدَّمَتْ يَدَاكَ وَأَنَّ اللَّهَ لَيْسَ بِظَلَّامٍ لِّلْعَبِيدِ ١٠
📖 ಅನುವಾದ
ಆಯತ್ 10
ಇದು ನಿನ್ನ ಕೈಗಳು ಮೊದಲೇ ಮಾಡಿರುವ ಕರ್ಮಗಳ ಫಲವಾಗಿದೆ ಮತ್ತು ನಿಶ್ಚಯವಾಗಿಯೂ ಅಲ್ಲಾಹನು ತನ್ನ ದಾಸರ ಮೇಲೆ ಅಕ್ರಮವೆಸುಗುವವನಲ್ಲ.
وَمِنَ النَّاسِ مَن يَعْبُدُ اللَّهَ عَلَىٰ حَرْفٍ ۖ فَإِنْ أَصَابَهُ خَيْرٌ اطْمَأَنَّ بِهِ ۖ وَإِنْ أَصَابَتْهُ فِتْنَةٌ انقَلَبَ عَلَىٰ وَجْهِهِ خَسِرَ الدُّنْيَا وَالْآخِرَةَ ۚ ذَٰلِكَ هُوَ الْخُسْرَانُ الْمُبِينُ ١١
📖 ಅನುವಾದ
ಆಯತ್ 11
ಜನರಲ್ಲಿ ಕೆಲವರು ಅಂಚಿನಲ್ಲಿ ನಿಂತು ಅಲ್ಲಾಹನನ್ನು ಆರಾಧಿಸುವವರಾಗಿದ್ದಾರೆ. ಅವರಿಗೆ ಒಳಿತೇನಾದರೂ ಸಿಕ್ಕಿದರೆ ಆಸಕ್ತಿ ತೋರಿಸುತ್ತಾರೆ ಇನ್ನು ಯಾವುದಾದರೂ ವಿಪತ್ತು ಬಾಧಿಸಿದರೆ ಕೂಡಲೇ ವಿಮುಖರಾಗಿಬಿಡುತ್ತಾರೆ. ಅವರು ಇಹಪರ ಲೋಕಗಳನ್ನು ನಷ್ಟ ಮಾಡಿಕೊಂಡವರಾಗಿದ್ದಾರೆ. ನಿಜವಾಗಿಯು ಇದುವೇ ಸ್ಪಷ್ಟ ನಷ್ಟ.
يَدْعُو مِن دُونِ اللَّهِ مَا لَا يَضُرُّهُ وَمَا لَا يَنفَعُهُ ۚ ذَٰلِكَ هُوَ الضَّلَالُ الْبَعِيدُ ١٢
📖 ಅನುವಾದ
ಆಯತ್ 12
ಅವನು ಅಲ್ಲಾಹನ ಹೊರತು ತಮಗೆ ಹಾನಿಯನ್ನಾಗಲೀ, ಲಾಭವನ್ನಾಗಲೀ ಮಾಡದ ವಸ್ತುಗಳನ್ನು ಕರೆದು ಬೇಡುತ್ತಾನೆ. ಇದುವೇ ಅತಿವಿದೂರದ ಮಾರ್ಗಭ್ರಷ್ಟತೆಯಾಗಿದೆ.
يَدْعُو لَمَن ضَرُّهُ أَقْرَبُ مِن نَّفْعِهِ ۚ لَبِئْسَ الْمَوْلَىٰ وَلَبِئْسَ الْعَشِيرُ ١٣
📖 ಅನುವಾದ
ಆಯತ್ 13
ಯಾರ ಹಾನಿಯು ಅವರ ಲಾಭಕ್ಕಿಂತ ಹತ್ತಿರವಿದೆಯೋ ಅಂತಹವನನ್ನು ಅವನು ಕರೆದು ಬೇಡುತ್ತಾನೆ. ವಾಸ್ತವದಲ್ಲಿ ಅವನು ಅದೆಷ್ಟು ಕೆಟ್ಟ ರಕ್ಷಕನು! ಮತ್ತು ಅದೆಷ್ಟು ಕೆಟ್ಟ ಸಂಗಾತಿ!
إِنَّ اللَّهَ يُدْخِلُ الَّذِينَ آمَنُوا وَعَمِلُوا الصَّالِحَاتِ جَنَّاتٍ تَجْرِي مِن تَحْتِهَا الْأَنْهَارُ ۚ إِنَّ اللَّهَ يَفْعَلُ مَا يُرِيدُ ١٤
📖 ಅನುವಾದ
ಆಯತ್ 14
ಸತ್ಯವಿಶ್ವಾಸಿವಿರಿಸಿ, ಸತ್ಕರ್ಮಗಳನ್ನು ಕೈಗೊಂಡವರನ್ನು ನಿಶ್ಚಯವಾಗಿಯು ಅಲ್ಲಾಹನು ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವ ಸ್ವರ್ಗೋದ್ಯಾನಗಳಲ್ಲಿ ಪ್ರವೇಶಿಸುವನು. ಖಂಡಿತವಾಗಿಯೂ ಅಲ್ಲಾಹನು ತಾನಿಚ್ಛಿಸಿದ್ದನ್ನು ಮಾಡುತ್ತಾನೆ.
مَن كَانَ يَظُنُّ أَن لَّن يَنصُرَهُ اللَّهُ فِي الدُّنْيَا وَالْآخِرَةِ فَلْيَمْدُدْ بِسَبَبٍ إِلَى السَّمَاءِ ثُمَّ لْيَقْطَعْ فَلْيَنظُرْ هَلْ يُذْهِبَنَّ كَيْدُهُ مَا يَغِيظُ ١٥
📖 ಅನುವಾದ
ಆಯತ್ 15
ಅಲ್ಲಾಹನು ತನ್ನ ಸಂದೇಶವಾಹಕರಿಗೆ ಇಹಪರ ಲೋಕದಲ್ಲಿ ಸಹಾಯ ಮಾಡಲಾರನೆಂದು ಯಾರು ಭಾವಿಸುತ್ತಿದ್ದನೋ ಅವನು ಒಂದು ಹಗ್ಗವನ್ನು ಎತ್ತರಕ್ಕೆ ಕಟ್ಟಿಕೊಂಡು (ತನ್ನ ಕೊರಳಿಗೆ ಉರುಳಾಗಿಸಿ ತನ್ನ ಕತ್ತನ್ನು ಹಿಸುಕಿಕೊಳ್ಳಲಿ) ಆ ಬಳಿಕ ಅವನು ತನ್ನ ಯೋಜನೆಗಳು ತನಗೆ ಅಸಹನೆ ಹುಟ್ಟಿಸುತ್ತಿದ್ದಂತಹ ವಿಚಾರವನ್ನು ನೀಗಿಸುವುದೇ ನೋಡಲಿ.
وَكَذَٰلِكَ أَنزَلْنَاهُ آيَاتٍ بَيِّنَاتٍ وَأَنَّ اللَّهَ يَهْدِي مَن يُرِيدُ ١٦
📖 ಅನುವಾದ
ಆಯತ್ 16
ಇದೇ ಪ್ರಕಾರ ನಾವು ಈ ಕುರ್‌ಆನನ್ನು ಸುಸ್ಪಷ್ಟವಾದ ಸೂಕ್ತಿಗಳೊಂದಿಗೆ ಅವತೀರ್ಣಗೊಳಿಸಿರುತ್ತೇವೆ. ನಿಶ್ಚಯವಾಗಿಯು ಅಲ್ಲಾಹನು ತಾನಿಚ್ಛಿಸಿದವರನ್ನು ಸನ್ಮಾರ್ಗದಲ್ಲಿ ಮುನ್ನಡೆಸುತ್ತಾನೆ.
إِنَّ الَّذِينَ آمَنُوا وَالَّذِينَ هَادُوا وَالصَّابِئِينَ وَالنَّصَارَىٰ وَالْمَجُوسَ وَالَّذِينَ أَشْرَكُوا إِنَّ اللَّهَ يَفْصِلُ بَيْنَهُمْ يَوْمَ الْقِيَامَةِ ۚ إِنَّ اللَّهَ عَلَىٰ كُلِّ شَيْءٍ شَهِيدٌ ١٧
📖 ಅನುವಾದ
ಆಯತ್ 17
ಇದೇ ಪ್ರಕಾರ ನಾವು ಈ ಕುರ್‌ಆನನ್ನು ಸುಸ್ಪಷ್ಟವಾದ ಸೂಕ್ತಿಗಳೊಂದಿಗೆ ಅವತೀರ್ಣಗೊಳಿಸಿರುತ್ತೇವೆ. ನಿಶ್ಚಯವಾಗಿಯು ಅಲ್ಲಾಹನು ತಾನಿಚ್ಛಿಸಿದವರನ್ನು ಸನ್ಮಾರ್ಗದಲ್ಲಿ ಮುನ್ನಡೆಸುತ್ತಾನೆ.
أَلَمْ تَرَ أَنَّ اللَّهَ يَسْجُدُ لَهُ مَن فِي السَّمَاوَاتِ وَمَن فِي الْأَرْضِ وَالشَّمْسُ وَالْقَمَرُ وَالنُّجُومُ وَالْجِبَالُ وَالشَّجَرُ وَالدَّوَابُّ وَكَثِيرٌ مِّنَ النَّاسِ ۖ وَكَثِيرٌ حَقَّ عَلَيْهِ الْعَذَابُ ۗ وَمَن يُهِنِ اللَّهُ فَمَا لَهُ مِن مُّكْرِمٍ ۚ إِنَّ اللَّهَ يَفْعَلُ مَا يَشَاءُ ۩ ١٨
📖 ಅನುವಾದ
ಆಯತ್ 18
ಭೂಮಿ ಆಕಾಶಗಳಲ್ಲಿರುವವರು, ಸೂರ್ಯ, ಚಂದ್ರ, ನಕ್ಷತ್ರಗಳು, ಪರ್ವತಗಳು, ಮರಗಳು, ಜೀವಿಗಳು ಮತ್ತು ಬಹುತೇಕ ಜನರು ಅಲ್ಲಾಹನ ಮುಂದೆ ಸಾಷ್ಟಾಂಗವೆರಗುತ್ತಿರುವುದನ್ನು ನೀವು ಕಾಣುವುದಿಲ್ಲವೇ? ಮತ್ತು ಅಲ್ಲಾಹನ ಶಿಕ್ಷೆಗೆ ಅರ್ಹರಾದವರು ಅನೇಕರಿದ್ದಾರೆ. ಅಲ್ಲಾಹನು ಯಾರನ್ನು ಅಪಮಾನಿಸುತ್ತಾನೋ ಅವನಿಗೆ ಗೌರವ ನೀಡುವವರಾರಿಲ್ಲ. ಖಂಡಿತವಾಗಿಯೂ ಅಲ್ಲಾಹನು ತಾನಿಚ್ಛಿಸಿದ್ದನ್ನು ಮಾಡುತ್ತಾನೆ.
۞ هَٰذَانِ خَصْمَانِ اخْتَصَمُوا فِي رَبِّهِمْ ۖ فَالَّذِينَ كَفَرُوا قُطِّعَتْ لَهُمْ ثِيَابٌ مِّن نَّارٍ يُصَبُّ مِن فَوْقِ رُءُوسِهِمُ الْحَمِيمُ ١٩
📖 ಅನುವಾದ
ಆಯತ್ 19
ತಮ್ಮ ಪ್ರಭುವಿನ ವಿಚಾರದಲ್ಲಿ ವಾಗ್ವಾದ ನಡೆಸುತ್ತಿದ್ದ ಎರಡು ಪಂಗಡಗಳಿವು. ಆದ್ದರಿಂದ ಸತ್ಯ ನಿಷೇಧಿಸಿದವರಿಗೆ ಅಗ್ನಿಯ ವಸ್ತçವನ್ನು ತಯಾರಿಸಿಡಲಾಗಿದೆ. ಅವರ ತಲೆಗಳ ಮೇಲಿಂದ ತೀವ್ರವಾಗಿ ಕುದಿಯುವ ನೀರನ್ನು ಸುರಿಸಲಾಗವುದು.
يُصْهَرُ بِهِ مَا فِي بُطُونِهِمْ وَالْجُلُودُ ٢٠
📖 ಅನುವಾದ
ಆಯತ್ 20
ಅದರಿಂದ ಅವರ ಹೊಟ್ಟೆಯೊಳಗಿರುವುದೆಲ್ಲವೂ ಮತ್ತು ಚರ್ಮಗಳೂ ಕರಗಿ ಬಿಡುವುದು.
كُلَّمَا أَرَادُوا أَن يَخْرُجُوا مِنْهَا مِنْ غَمٍّ أُعِيدُوا فِيهَا وَذُوقُوا عَذَابَ الْحَرِيقِ ٢٢
📖 ಅನುವಾದ
ಆಯತ್ 22
ಮತ್ತು ಅವರ ದಂಡನೆಗಾಗಿ ಕಬ್ಬಿಣದ ಗದೆಗಳಿವೆ.
إِنَّ اللَّهَ يُدْخِلُ الَّذِينَ آمَنُوا وَعَمِلُوا الصَّالِحَاتِ جَنَّاتٍ تَجْرِي مِن تَحْتِهَا الْأَنْهَارُ يُحَلَّوْنَ فِيهَا مِنْ أَسَاوِرَ مِن ذَهَبٍ وَلُؤْلُؤًا ۖ وَلِبَاسُهُمْ فِيهَا حَرِيرٌ ٢٣
📖 ಅನುವಾದ
ಆಯತ್ 23
ಸತ್ಯವಿಶ್ವಾಸವಿರಿಸಿ, ಸತ್ಕರ್ಮಗಳನ್ನು ಕೈಗೊಂಡವರನ್ನು ಅಲ್ಲಾಹನು ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವ ಸ್ವರ್ಗೋದ್ಯಾನಗಳಲ್ಲಿ ಪ್ರವೇಶಿಸುವನು. ಅಲ್ಲಿ ಅವರಿಗೆ ಚಿನ್ನದ ಕಂಕಣಗಳನ್ನು, ಮುತ್ತುಗಳನ್ನು ತೊಡಿಸಲಾಗುವುದು ಮತ್ತು ಅಲ್ಲಿ ಅವರ ಉಡುಪು ರೇಶ್ಮೆಯದ್ದಾಗಿರುವುದು.
وَهُدُوا إِلَى الطَّيِّبِ مِنَ الْقَوْلِ وَهُدُوا إِلَىٰ صِرَاطِ الْحَمِيدِ ٢٤
📖 ಅನುವಾದ
ಆಯತ್ 24
ಐಹಿಕ ಜೀವನದಲ್ಲಿ ಅವರನ್ನು ಪವಿತ್ರ ವಚನದೆಡೆಗೆ (ಸಾಕ್ಷಿ ವಚನ) ಮುನ್ನಡೆಸಲಾಗಿದೆ ಮತ್ತು ಅವರನ್ನು ಸ್ತುತ್ಯರ್ಹನಾದ ಅಲ್ಲಾಹನ ಮಾರ್ಗದೆಡೆಗೆ ಮುನ್ನಡೆಸಲಾಗಿತ್ತು.
إِنَّ الَّذِينَ كَفَرُوا وَيَصُدُّونَ عَن سَبِيلِ اللَّهِ وَالْمَسْجِدِ الْحَرَامِ الَّذِي جَعَلْنَاهُ لِلنَّاسِ سَوَاءً الْعَاكِفُ فِيهِ وَالْبَادِ ۚ وَمَن يُرِدْ فِيهِ بِإِلْحَادٍ بِظُلْمٍ نُّذِقْهُ مِنْ عَذَابٍ أَلِيمٍ ٢٥
📖 ಅನುವಾದ
ಆಯತ್ 25
ಯಾರು ಸತ್ಯನಿಷೇಧಿಸಿದರೊ ಮತ್ತು ಅಲ್ಲಾಹನ ಮಾರ್ಗದಿಂದ ತಡೆಯುತ್ತಾರೋ ಮತ್ತು ಅಲ್ಲಿನ ನಿವಾಸಿಗಳಿಗೂ ಹಾಗೂ ಹೊರ ನಾಡಿನವರಿಗೂ ನಾವು ಸಮಾನ ಹಕ್ಕುನ್ನು ನೀಡಿರುವ. ಮಸ್ಜಿದುಲ್ ಹರಾಮ್‌ನಿಂದ ತಡೆಯುತ್ತಾರೋ ಮತ್ತು ಅಲ್ಲಿ ಯಾರು ಅನ್ಯಾಯದೊಂದಿಗೆ ಅತಿರೇಕವನ್ನು ಬಯಸುತ್ತಾನೋ ಅವನಿಗೆ ನಾವು ವೇದನಾಜನಕ ಯಾತನೆಯನ್ನು ಸವಿಯುವಂತೆ ಮಾಡುವೆವು.
وَإِذْ بَوَّأْنَا لِإِبْرَاهِيمَ مَكَانَ الْبَيْتِ أَن لَّا تُشْرِكْ بِي شَيْئًا وَطَهِّرْ بَيْتِيَ لِلطَّائِفِينَ وَالْقَائِمِينَ وَالرُّكَّعِ السُّجُودِ ٢٦
📖 ಅನುವಾದ
ಆಯತ್ 26
ನಾವು ಇಬ್ರಾಹೀಮರಿಗೆ ಕಾಬಾಲಯದ ಸ್ಥಾನವನ್ನು ನಿಶ್ಚಯಿಸಿಕೊಟ್ಟ ಸಂದರ್ಭವನ್ನು ಸ್ಮರಿಸಿರಿ. ನೀವು ನನ್ನೊಂದಿಗೆ ಯಾರನ್ನೂ ಸಹಭಾಗಿಯನ್ನಾಗಿ ಮಾಡಬೇಡಿರಿ ಮತ್ತು ಪ್ರದಕ್ಷಿಣೆ ಹಾಕುವವರಿಗೆ, ನಮಾಝ್ ನಿರ್ವಹಿಸುವವರಿಗೆ, ಬಾಗುವವರಿಗೆ, ಸಾಷ್ಟಾಂಗ ಮಾಡುವವರಿಗೆ ನನ್ನ ಭವನವನ್ನು ಶುಚಿಯಾಗಿರಿಸಿರಿ.
وَأَذِّن فِي النَّاسِ بِالْحَجِّ يَأْتُوكَ رِجَالًا وَعَلَىٰ كُلِّ ضَامِرٍ يَأْتِينَ مِن كُلِّ فَجٍّ عَمِيقٍ ٢٧
📖 ಅನುವಾದ
ಆಯತ್ 27
ಹಜ್ಜ್ಗಾಗಿ ನೀವು ಜನರಿಗೆ ಕರೆ ನೀಡಿರಿ. ಅವರು ಪಾದಚಾರಿಗಳಾಗಿಯೂ, ಬಳಲಿದ ಒಂಟೆಗಳ ಮೇಲೂ ದೂರದ ಎಲ್ಲಾ ಮಾರ್ಗದಿಂದಲೂ ನಿಮ್ಮ ಬಳಿಗೆ ಬರುವರು.
لِّيَشْهَدُوا مَنَافِعَ لَهُمْ وَيَذْكُرُوا اسْمَ اللَّهِ فِي أَيَّامٍ مَّعْلُومَاتٍ عَلَىٰ مَا رَزَقَهُم مِّن بَهِيمَةِ الْأَنْعَامِ ۖ فَكُلُوا مِنْهَا وَأَطْعِمُوا الْبَائِسَ الْفَقِيرَ ٢٨
📖 ಅನುವಾದ
ಆಯತ್ 28
ಅವರು ತಮ್ಮ ಪ್ರಯೋಜನಗಳನ್ನು ಪಡೆಯಲಿಕ್ಕಾಗಿ ಬರಲಿ ಮತ್ತು ಅವರಿಗೆ ದಯಪಾಲಿಸಿದ ಜಾನುವಾರುಗಳ ಮೇಲೆ ನಿರ್ಧಿಷ್ಟ ದಿನಗಳಲ್ಲಿ ಅಲ್ಲಾಹನ ನಾಮವನ್ನುಚ್ಚರಿಸಲಿ. ಅದರಿಂದ ನೀವೂ ತಿನ್ನಿರಿ ಹಾಗೂ ಕಡುಬಡವರಿಗೂ ತಿನ್ನಿಸಿರಿ.
ثُمَّ لْيَقْضُوا تَفَثَهُمْ وَلْيُوفُوا نُذُورَهُمْ وَلْيَطَّوَّفُوا بِالْبَيْتِ الْعَتِيقِ ٢٩
📖 ಅನುವಾದ
ಆಯತ್ 29
ತರುವಾಯ ಅವರು ತಮ್ಮ ಮಾಲಿನ್ಯಗಳನ್ನು ನೀಗಿಸಲಿ ಮತ್ತು ತಮ್ಮ ಪುರಾತನ ಭವನ ಕಾಬಾದ ಪ್ರದಕ್ಷಿಣೆ ಮಾಡಲಿ.
ذَٰلِكَ وَمَن يُعَظِّمْ حُرُمَاتِ اللَّهِ فَهُوَ خَيْرٌ لَّهُ عِندَ رَبِّهِ ۗ وَأُحِلَّتْ لَكُمُ الْأَنْعَامُ إِلَّا مَا يُتْلَىٰ عَلَيْكُمْ ۖ فَاجْتَنِبُوا الرِّجْسَ مِنَ الْأَوْثَانِ وَاجْتَنِبُوا قَوْلَ الزُّورِ ٣٠
📖 ಅನುವಾದ
ಆಯತ್ 30
ಇದು ಹಜ್ಜ್ನ ವಿಷಯವಾಗಿದೆ ಮತ್ತು ಯಾರು ಅಲ್ಲಾಹನು ಪಾವನಗೊಳಿಸಿದವುಗಳನ್ನು ಗೌರವಿಸುವನೋ ಅವನ ಪಾಲಿಗೆ ಅವನ ಪ್ರಭುವಿನ ಬಳಿ ಅತ್ಯುತ್ತಮವಾದುದು ಇದೆ ಮತ್ತು ಜಾನುವಾರುಗಳನ್ನು ನಿಮಗೆ ಧರ್ಮಸಮ್ಮತಗೊಳಿಸಲಾಗಿದೆ ಆದರೆ ನಿಮಗೆ ಓದಿ ಹೇಳಲಾದವುಗಳ ಹೊರತು ಹಾಗೆಯೇ ನೀವು ವಿಗ್ರಹಗಳ ಮಾಲಿನ್ಯದಿಂದ ದೂರವಿರಿ ಮತ್ತು ಸುಳ್ಳು ಮಾತನ್ನು ತೊರೆದು ಬಿಡರಿ.
حُنَفَاءَ لِلَّهِ غَيْرَ مُشْرِكِينَ بِهِ ۚ وَمَن يُشْرِكْ بِاللَّهِ فَكَأَنَّمَا خَرَّ مِنَ السَّمَاءِ فَتَخْطَفُهُ الطَّيْرُ أَوْ تَهْوِي بِهِ الرِّيحُ فِي مَكَانٍ سَحِيقٍ ٣١
📖 ಅನುವಾದ
ಆಯತ್ 31
ಅಲ್ಲಾಹನಿಗೆ ಏಕನಿಷ್ಠರಾಗಿ ಅವನೊಂದಿಗೆ ಯಾರನ್ನೂ ಸಹಭಾಗಿಯನ್ನಾಗಿ ಮಾಡದಿರಿ. ಅಲ್ಲಾಹನೊಂದಿಗೆ ಸಹಭಬಾಗಿಯನ್ನು ನಿಶ್ಚಯಿಸುವವನು ಆಕಾಶದಿಂದ ಕೆಳಗೆ ಬಿದ್ದಂತಿರುವನು. ಅವನನ್ನು ಪಕ್ಷಿಗಳು ಹೆಕ್ಕಿಕೊಂಡು ಹೋಗುವುವು. ಇಲ್ಲವೇ ಬೀಸುಗಾಳಿಯು ಅವನನ್ನು ದೂರ ಸ್ಥಳಕ್ಕೆ ಎಸೆದು ಬಿಡುವುದು.
ذَٰلِكَ وَمَن يُعَظِّمْ شَعَائِرَ اللَّهِ فَإِنَّهَا مِن تَقْوَى الْقُلُوبِ ٣٢
📖 ಅನುವಾದ
ಆಯತ್ 32
ಇದು ವಾಸ್ತವಿಕತೆಯಾಗಿದೆ. ಇನ್ನು ಯಾರು ಅಲ್ಲಾಹನ ಲಾಂಛನಗಳಿಗೆ ಗೌರವ ನೀಡುತ್ತಾನೋ ಖಂಡಿತವಾಗಿಯೂ ಅದು ಅವನ ಹೃದಯದ ಭಯಭಕ್ತಿಯಿಂದಾಗಿರುತ್ತದೆ.
لَكُمْ فِيهَا مَنَافِعُ إِلَىٰ أَجَلٍ مُّسَمًّى ثُمَّ مَحِلُّهَا إِلَى الْبَيْتِ الْعَتِيقِ ٣٣
📖 ಅನುವಾದ
ಆಯತ್ 33
ನಿಮಗೆ ಆ ಜಾನುವಾರುಗಳಲ್ಲಿ ಒಂದು ನಿಶ್ಚಿತಾವಧಿಯವರೆಗೆ ಪ್ರಯೋಜನಗಳಿವೆ. ಅನಂತರ ಅವುಗಳ ಬಲಿದಾನದ ಸ್ಥಳವು ಪುರಾತನ ಭವನವಾಗಿದೆ.
وَلِكُلِّ أُمَّةٍ جَعَلْنَا مَنسَكًا لِّيَذْكُرُوا اسْمَ اللَّهِ عَلَىٰ مَا رَزَقَهُم مِّن بَهِيمَةِ الْأَنْعَامِ ۗ فَإِلَٰهُكُمْ إِلَٰهٌ وَاحِدٌ فَلَهُ أَسْلِمُوا ۗ وَبَشِّرِ الْمُخْبِتِينَ ٣٤
📖 ಅನುವಾದ
ಆಯತ್ 34
ಪ್ರತಿಯೊಂದು ಜನಾಂಗಕ್ಕೂ ನಾವು ಬಲಿ ಕರ್ಮವನ್ನು ನಿಶ್ಚಯಿಸಿಕೊಟ್ಟಿರುತ್ತೇವೆ. ಇದು ಅವರು ತಮಗೆ ಅಲ್ಲಾಹನು ದಯಪಾಲಿಸಿದ ಜಾನುವಾರುಗಳ ಮೇಲೆ ಅಲ್ಲಾಹನ ನಾಮವನ್ನು ಉಚ್ಛರಿಸಲೆಂದಾಗಿದೆ. ನಿಮ್ಮೆಲ್ಲರ ಆರಾಧ್ಯನು ಏಕೈಕ ಆರಾಧ್ಯನಾಗಿದ್ದಾನೆ. ಆದ್ದರಿಂದ ನೀವು ಅವನಿಗೇ ವಿಧೇಯರಾಗಿರಿ ಮತ್ತು ದೈನ್ಯರಾದವರಿಗೆ (ಓ ಪೈಗಂಬರರೇ) ನೀವು ಶುಭವಾರ್ತೆಯನ್ನೀಡಿರಿ.
الَّذِينَ إِذَا ذُكِرَ اللَّهُ وَجِلَتْ قُلُوبُهُمْ وَالصَّابِرِينَ عَلَىٰ مَا أَصَابَهُمْ وَالْمُقِيمِي الصَّلَاةِ وَمِمَّا رَزَقْنَاهُمْ يُنفِقُونَ ٣٥
📖 ಅನುವಾದ
ಆಯತ್ 35
ಅವರ ಮುಂದೆ ಅಲ್ಲಾಹನ ಸ್ಮರಣೆಯನ್ನು ಮಾಡಲಾದಾಗ ಅವರ ಹೃದಯಗಳು ಕಂಪಿಸುತ್ತವೆ. ಮತ್ತು ಅವರಿಗೆ ಬಾಧಿಸಿದ ಸಂಕಷ್ಟಗಳ ಮೇಲೆ ಸಹನೆ ವಹಿಸುತ್ತಾರೆ ಮತ್ತು ನಮಾಝನ್ನು ಸಂಸ್ಥಾಪಿಸುತ್ತಾರೆ. ಹಾಗೂ ನಾವು ಅವರಿಗೆ ನೀಡಿದ ಸಂಪತ್ತಿನಿAದ ಖರ್ಚು ಮಾಡುವವರೂ ಆಗಿದ್ದಾರೆ.
وَالْبُدْنَ جَعَلْنَاهَا لَكُم مِّن شَعَائِرِ اللَّهِ لَكُمْ فِيهَا خَيْرٌ ۖ فَاذْكُرُوا اسْمَ اللَّهِ عَلَيْهَا صَوَافَّ ۖ فَإِذَا وَجَبَتْ جُنُوبُهَا فَكُلُوا مِنْهَا وَأَطْعِمُوا الْقَانِعَ وَالْمُعْتَرَّ ۚ كَذَٰلِكَ سَخَّرْنَاهَا لَكُمْ لَعَلَّكُمْ تَشْكُرُونَ ٣٦
📖 ಅನುವಾದ
ಆಯತ್ 36
ಬಲಿದಾನದ ಒಂಟೆಗಳನ್ನು ನಾವು ನಿಮಗೆ ಅಲ್ಲಾಹನ ಲಾಂಛನಗಳಾಗಿ ಮಾಡಿರುತ್ತೇವೆ. ಅವುಗಳಲ್ಲಿ ನಿಮಗೆ ಒಳಿತಿದೆ. ಆದ್ದರಿಂದ ನೀವು ಅವುಗಳನ್ನು ಸಾಲಾಗಿ ನಿಲ್ಲಿಸಿ ಅವುಗಳ ಮೇಲೆ ಅಲ್ಲಾಹನ ನಾಮವನ್ನುಚ್ಛರಿಸಿರಿ ಹಾಗೆಯೇ ಅವುಗಳ ಪಾರ್ಶ್ವಗಳು ನೆಲಕ್ಕೊರಗಿದರೆ ಅವುಗಳನ್ನು ತಿನ್ನಿರಿ ಮತ್ತು ಯಾಚಿಸುವವನಿಗೂ, ಯಾಚಿಸದ ಬಡವನಿಗೂ, ತಿನ್ನಿಸಿರಿ.ಇದೇ ಪ್ರಕಾರ ನಾವು ಜಾನುವಾರುಗಳನ್ನು ನಿಮಗೆ ಅಧೀನಗೊಳಿಸಿರುತ್ತೇವೆ. ಇದು ನೀವು ಕೃತಜ್ಞತೆ ತೋರಲೆಂದಾಗಿದೆ.
لَن يَنَالَ اللَّهَ لُحُومُهَا وَلَا دِمَاؤُهَا وَلَٰكِن يَنَالُهُ التَّقْوَىٰ مِنكُمْ ۚ كَذَٰلِكَ سَخَّرَهَا لَكُمْ لِتُكَبِّرُوا اللَّهَ عَلَىٰ مَا هَدَاكُمْ ۗ وَبَشِّرِ الْمُحْسِنِينَ ٣٧
📖 ಅನುವಾದ
ಆಯತ್ 37
ಅವುಗಳ ಮಾಂಸವಾಗಲೀ, ರಕ್ತವಾಗಲೀ ಅಲ್ಲಾಹನಿಗೆ ತಲುಪುವುದಿಲ್ಲ. ಆದರೆ ಅವನಿಗೆ ನಿಮ್ಮ ಹೃದಯದ ಭಯಭಕ್ತಿಯು ತಲುಪುವುದು. ಇದೇ ಪ್ರಕಾರ ಅಲ್ಲಾಹನು ಆ ಜಾನುವಾರುಗಳನ್ನು ನಿಮಗೆ ಅಧೀನಗೊಳಿಸಿರುತ್ತಾನೆ. ಇದು ನಿಮ್ಮನ್ನು ಅವನು ಸನ್ಮಾರ್ಗದಲ್ಲಿ ಮುನ್ನಡೆಸಿರುವುದಕ್ಕೋಸ್ಕರ ನೀವು ಅವನ ಮಹಾನತೆಯನ್ನು ಕೊಂಡಾಡಲೆAದಾಗಿದೆ ಮತ್ತು ಒಳಿತಿನ ಪಾಲಕರಿಗೆ ನೀವು ಸುವಾರ್ತೆಯನ್ನು ನೀಡಿರಿ.
۞ إِنَّ اللَّهَ يُدَافِعُ عَنِ الَّذِينَ آمَنُوا ۗ إِنَّ اللَّهَ لَا يُحِبُّ كُلَّ خَوَّانٍ كَفُورٍ ٣٨
📖 ಅನುವಾದ
ಆಯತ್ 38
ನಿಶ್ಚಯವಾಗಿಯು ಅಲ್ಲಾಹನು ಸತ್ಯವಿಶ್ವಾಸಿಗಳನ್ನು ಶತ್ರುಗಳಿಂದ ರಕ್ಷಿಸುತ್ತಾನೆ ಮತ್ತು ವಿಶ್ವಾಸಘಾತುಕ ಅವಿಶ್ವಾಸಿಯನ್ನು ಅಲ್ಲಾಹನು ಎಂದಿಗೂ ಮೆಚ್ಚಲಾರನು.
أُذِنَ لِلَّذِينَ يُقَاتَلُونَ بِأَنَّهُمْ ظُلِمُوا ۚ وَإِنَّ اللَّهَ عَلَىٰ نَصْرِهِمْ لَقَدِيرٌ ٣٩
📖 ಅನುವಾದ
ಆಯತ್ 39
ಯಾವ ಸತ್ಯವಿಶ್ವಾಸಿಗಳ ವಿರುದ್ಧ ಯುದ್ಧ ಮಾಡಲಾಗುತ್ತಿದೆಯೋ ಅವರಿಗೂ ಪ್ರತಿ ಯುದ್ಧಕ್ಕೆ ಅನುಮತಿ ನೀಡಲಾಗಿದೆ. ಏಕೆಂದರೆ ಅವರು ಮರ್ದಿತರಾಗಿದ್ದಾರೆ. ನಿಸ್ಸಂಶಯವಾಗಿಯು ಅಲ್ಲಾಹನು ಅವರ ಸಹಾಯಕ್ಕೆ ಸಮರ್ಥನಿರುವನು.
الَّذِينَ أُخْرِجُوا مِن دِيَارِهِم بِغَيْرِ حَقٍّ إِلَّا أَن يَقُولُوا رَبُّنَا اللَّهُ ۗ وَلَوْلَا دَفْعُ اللَّهِ النَّاسَ بَعْضَهُم بِبَعْضٍ لَّهُدِّمَتْ صَوَامِعُ وَبِيَعٌ وَصَلَوَاتٌ وَمَسَاجِدُ يُذْكَرُ فِيهَا اسْمُ اللَّهِ كَثِيرًا ۗ وَلَيَنصُرَنَّ اللَّهُ مَن يَنصُرُهُ ۗ إِنَّ اللَّهَ لَقَوِيٌّ عَزِيزٌ ٤٠
📖 ಅನುವಾದ
ಆಯತ್ 40
ಯಾವ ಸತ್ಯವಿಶ್ವಾಸಿಗಳ ವಿರುದ್ಧ ಯುದ್ಧ ಮಾಡಲಾಗುತ್ತಿದೆಯೋ ಅವರಿಗೂ ಪ್ರತಿ ಯುದ್ಧಕ್ಕೆ ಅನುಮತಿ ನೀಡಲಾಗಿದೆ. ಏಕೆಂದರೆ ಅವರು ಮರ್ದಿತರಾಗಿದ್ದಾರೆ. ನಿಸ್ಸಂಶಯವಾಗಿಯು ಅಲ್ಲಾಹನು ಅವರ ಸಹಾಯಕ್ಕೆ ಸಮರ್ಥನಿರುವನು.
الَّذِينَ إِن مَّكَّنَّاهُمْ فِي الْأَرْضِ أَقَامُوا الصَّلَاةَ وَآتَوُا الزَّكَاةَ وَأَمَرُوا بِالْمَعْرُوفِ وَنَهَوْا عَنِ الْمُنكَرِ ۗ وَلِلَّهِ عَاقِبَةُ الْأُمُورِ ٤١
📖 ಅನುವಾದ
ಆಯತ್ 41
ಅವರಿಗೆ ನಾವು ಭೂಮಿಯಲ್ಲಿ ಅಧಿಕಾರವನ್ನು ಕೊಟ್ಟರೆ ಅವರು ನಮಾಝ್ ಸಂಸ್ಥಾಪಿಸುತ್ತಾರೆ ಝಕಾತ್ ನೀಡುತ್ತಾರೆ ಒಳಿತನ ಆದೇಶ ನೀಡುತ್ತಾರೆ ಮತ್ತು ಕೆಡುಕಿನಿಂದ ತಡೆಯುತ್ತಾರೆ. ಸರ್ವ ಕಾರ್ಯಗಳ ಅಂತಿಮ ಪರಿಣಾಮವು ಅಲ್ಲಾಹನ ನಿಯಂತ್ರಣದಲ್ಲಿದೆ.
وَإِن يُكَذِّبُوكَ فَقَدْ كَذَّبَتْ قَبْلَهُمْ قَوْمُ نُوحٍ وَعَادٌ وَثَمُودُ ٤٢
📖 ಅನುವಾದ
ಆಯತ್ 42
(ಓ ಪೈಗಂಬರರೇ) ಇವರು ನಿಮ್ಮನ್ನು ಸುಳ್ಳಾಗಿಸುವುದಾದರೆ ಇವರಿಗಿಂತ ಮೊದಲು ನೂಹರವರ ಜನಾಂಗವು, ಆದ್ ಮತ್ತು ಸಮೂದ್ ಜನಾಂಗವೂ ಸುಳ್ಳಾಗಿಸಿದೆ.
وَقَوْمُ إِبْرَاهِيمَ وَقَوْمُ لُوطٍ ٤٣
📖 ಅನುವಾದ
ಆಯತ್ 43
ಮತ್ತು ಇಬ್ರಾಹೀಮರವರ ಜನಾಂಗವೂ, ಲೂತರವರ ಜನಾಂಗವೂ ಸಹ
وَأَصْحَابُ مَدْيَنَ ۖ وَكُذِّبَ مُوسَىٰ فَأَمْلَيْتُ لِلْكَافِرِينَ ثُمَّ أَخَذْتُهُمْ ۖ فَكَيْفَ كَانَ نَكِيرِ ٤٤
📖 ಅನುವಾದ
ಆಯತ್ 44
ಮತ್ತು ಮದ್‌ಯನ್‌ನ ಜನರು ಸಹ ತಮ್ಮ ಪೈಗಂಬರರನ್ನು ಸುಳ್ಳಾಗಿಸಿದ್ದರು. ಮೂಸಾರವರೂ ಸಹ ಸುಳ್ಳಾಗಿಸಲ್ಪಟ್ಟರು. ಆಗ ನಾನು ಸತ್ಯನಿಷೇಧಿಗಳಿಗೆ ಒಂದಿಷ್ಟು ಅವಕಾಶವನ್ನು ನೀಡಿ, ನಂತರ ಅವರನ್ನು ಹಿಡಿದುಬಿಟ್ಟೆನು. ಆಮೇಲೆ ನನ್ನ ಶಿಕ್ಷೆಯು ಹೇಗಿತ್ತು ಎಂಬದನ್ನು ನೋಡಿರಿ.
فَكَأَيِّن مِّن قَرْيَةٍ أَهْلَكْنَاهَا وَهِيَ ظَالِمَةٌ فَهِيَ خَاوِيَةٌ عَلَىٰ عُرُوشِهَا وَبِئْرٍ مُّعَطَّلَةٍ وَقَصْرٍ مَّشِيدٍ ٤٥
📖 ಅನುವಾದ
ಆಯತ್ 45
ಅದೆಷ್ಟೋ ದೌರ್ಜನ್ಯವೆಸಗುತ್ತಿದ್ದ ನಾಡುಗಳನ್ನು ನಾವು ನಾಶ ಮಾಡಿದೆವು ಅವು ತಮ್ಮ ಛಾವಣಿಗಳ ಮೇಲೆ ಬುಡಮೇಲಾಗಿ ಬಿದ್ದಿವೆ ಮತ್ತು ಎಷ್ಟೋ ಬಾವಿಗಳು ಹಾಗೂ ಅದೆಷ್ಟೋ ಸುಭದ್ರ ಅರಮನೆಗಳೂ ಪಾಳು ಬಿದ್ದಿವೆ.
أَفَلَمْ يَسِيرُوا فِي الْأَرْضِ فَتَكُونَ لَهُمْ قُلُوبٌ يَعْقِلُونَ بِهَا أَوْ آذَانٌ يَسْمَعُونَ بِهَا ۖ فَإِنَّهَا لَا تَعْمَى الْأَبْصَارُ وَلَٰكِن تَعْمَى الْقُلُوبُ الَّتِي فِي الصُّدُورِ ٤٦
📖 ಅನುವಾದ
ಆಯತ್ 46
ಅವರ ಹೃದಯಗಳು ಈ ವಿಚಾರಗಳನ್ನು ಗ್ರಹಿಸಿಕೊಳ್ಳುವಂತಾಗಲು ಅಥವಾ ಕಿವಿಗಳು ಕೇಳಿಸಿಕೊಳ್ಳುವಂತಾಗಲು ಅವರು ಭೂಮಿಯಲ್ಲಿ ಸಂಚರಿಸುವುದಿಲ್ಲವೇ? ಕೇವಲ ದೃಷ್ಟಿಗಳು ಮಾತ್ರ ಕುರುಡಾಗವುದಿಲ್ಲ. ಆದರೆ ಎದೆಗಳೊಳಗೆ ಇರುವಂತಹ ಹೃದಯಗಳು ಸಹ ಕುರುಡಾಗುತ್ತವೆ.
وَيَسْتَعْجِلُونَكَ بِالْعَذَابِ وَلَن يُخْلِفَ اللَّهُ وَعْدَهُ ۚ وَإِنَّ يَوْمًا عِندَ رَبِّكَ كَأَلْفِ سَنَةٍ مِّمَّا تَعُدُّونَ ٤٧
📖 ಅನುವಾದ
ಆಯತ್ 47
ಅವರು ಯಾತನೆಗೆ ಆತುರಪಟ್ಟುಕೊಳ್ಳುತ್ತಿದ್ದಾರೆ. ಆದರೆ ಅಲ್ಲಾಹನು ತನ್ನ ವಾಗ್ದನವನ್ನೆಂದೂ ಉಲ್ಲಂಘಿಸುವುದಿಲ್ಲ. ವಾಸ್ತವದಲ್ಲಿ ನಿಮ್ಮ ಪ್ರಭುವಿನ ಬಳಿ ಒಂದು ದಿನವೆಂದರೆ ನೀವು ಎಣಿಸುವ ಒಂದು ಸಾವಿರ ವರ್ಷಗಳದ್ದಾಗಿರುತ್ತದೆ.
وَكَأَيِّن مِّن قَرْيَةٍ أَمْلَيْتُ لَهَا وَهِيَ ظَالِمَةٌ ثُمَّ أَخَذْتُهَا وَإِلَيَّ الْمَصِيرُ ٤٨
📖 ಅನುವಾದ
ಆಯತ್ 48
ಅದೆಷ್ಟೋ ಅಕ್ರಮಿ ನಾಡುಗಳಿಗೆ ನಾನು ಕಾಲಾವಕಾಶವನ್ನು ನೀಡಿದೆನು. ಅನಂತರ ನಾನು ಅವರನ್ನು ಹಿಡಿದುಬಿಟ್ಟೆನು ಮತ್ತು ನನ್ನೆಡೆಗೇ ಮರಳುವಿಕೆಯಿರುವುದು.
قُلْ يَا أَيُّهَا النَّاسُ إِنَّمَا أَنَا لَكُمْ نَذِيرٌ مُّبِينٌ ٤٩
📖 ಅನುವಾದ
ಆಯತ್ 49
(ಓ ಪೈಗಂಬರರೇ) ಹೇಳಿರಿ: ಓ ಜನರೇ, ನಾನು ನಿಮಗೆ ಬಹಿರಂಗವಾಗಿ ಮುನ್ನೆಚ್ಚರಿಕೆ ನೀಡುವವನು ಮಾತ್ರವಾಗಿದ್ದೇನೆ.
فَالَّذِينَ آمَنُوا وَعَمِلُوا الصَّالِحَاتِ لَهُم مَّغْفِرَةٌ وَرِزْقٌ كَرِيمٌ ٥٠
📖 ಅನುವಾದ
ಆಯತ್ 50
ಯಾರು ಸತ್ಯವಿಶ್ವಾಸವಿರಿಸಿ, ಸತ್ಕರ್ಮಗಳನ್ನು ಕೈಗೊಂಡಿರುವರೋ ಅವರಿಗೆ ಕ್ಷಮೆಯೂ, ಗೌರವಪೂರ್ಣ ಜೀವನಾಧಾರವು ಇರುವುದು.
وَالَّذِينَ سَعَوْا فِي آيَاتِنَا مُعَاجِزِينَ أُولَٰئِكَ أَصْحَابُ الْجَحِيمِ ٥١
📖 ಅನುವಾದ
ಆಯತ್ 51
ನಮ್ಮ ದೃಷ್ಟಾಂತಗಳನ್ನು ಸೋಲಿಸುವ ಪ್ರಯತ್ನದಲ್ಲಿರುವವರು ನರಕವಾಸಿಗಳಾಗಿರುವರು.
وَمَا أَرْسَلْنَا مِن قَبْلِكَ مِن رَّسُولٍ وَلَا نَبِيٍّ إِلَّا إِذَا تَمَنَّىٰ أَلْقَى الشَّيْطَانُ فِي أُمْنِيَّتِهِ فَيَنسَخُ اللَّهُ مَا يُلْقِي الشَّيْطَانُ ثُمَّ يُحْكِمُ اللَّهُ آيَاتِهِ ۗ وَاللَّهُ عَلِيمٌ حَكِيمٌ ٥٢
📖 ಅನುವಾದ
ಆಯತ್ 52
ನಾವು ನಿಮಗಿಂತ ಮೊದಲು ಯಾವೊಬ್ಬ ಸಂದೇಶವಾಹಕನನ್ನಾಗಲಿ, ಪ್ರವಾದಿಯನ್ನಾಗಲೀ ಕಳುಹಿಸಿರುತ್ತೇವೆಯೋ ಅವನು ಏನೇ ಉದ್ದೇಶಿಸಿದರೂ ಅವನ ಉದ್ದೇಶ ಮಾರ್ಗದಲ್ಲಿ ಶೈತಾನನು ದುಷ್ಪೆçÃರಣೆಗಳನ್ನು ಹಾಕಿದನು. ಆದರೆ ಅಲ್ಲಾಹನು ಶೈತಾನನ ದುಷ್ಪೆçÃರಣೆಗಳನ್ನು ನೀಗಿಸುತ್ತಾನೆ. ಮತ್ತು ತನ್ನ ವಚನಗಳನ್ನು ಸದೃಢಗೊಳಿಸುತ್ತಾನೆ. ಅಲ್ಲಾಹನು ಸರ್ವಜ್ಞನು, ಯುಕ್ತಿಪೂರ್ಣನು ಆಗಿರುವನು.
لِّيَجْعَلَ مَا يُلْقِي الشَّيْطَانُ فِتْنَةً لِّلَّذِينَ فِي قُلُوبِهِم مَّرَضٌ وَالْقَاسِيَةِ قُلُوبُهُمْ ۗ وَإِنَّ الظَّالِمِينَ لَفِي شِقَاقٍ بَعِيدٍ ٥٣
📖 ಅನುವಾದ
ಆಯತ್ 53
ಇದೇಕೆಂದರೆ ಅಲ್ಲಾಹನು ಶೈತಾನನ ದುಷ್ಪೆçÃರಣೆಗಳನ್ನು ಹೃದಯಗಳಲ್ಲಿ ರೋಗವಿರುವವರಿಗೂ ಮತ್ತು ಕಠಿಣ ಹೃದಯವಂತರಿಗೂ ಪರೀಕ್ಷಾ ಸಾಧನವನ್ನಾಗಿ ಮಾಡಲೆಂದಾಗಿದೆ ಮತ್ತು ನಿಸ್ಸಂದೇಹವಾಗಿಯೂ ಅಕ್ರಮಿಗಳು ವಿರೋಧದಲ್ಲಿ ಬಹುದೂರ ಸರಿದಿದ್ದಾರೆ.
وَلِيَعْلَمَ الَّذِينَ أُوتُوا الْعِلْمَ أَنَّهُ الْحَقُّ مِن رَّبِّكَ فَيُؤْمِنُوا بِهِ فَتُخْبِتَ لَهُ قُلُوبُهُمْ ۗ وَإِنَّ اللَّهَ لَهَادِ الَّذِينَ آمَنُوا إِلَىٰ صِرَاطٍ مُّسْتَقِيمٍ ٥٤
📖 ಅನುವಾದ
ಆಯತ್ 54
ಮತ್ತು ಜ್ಞಾನ ಪಡೆದವರು ಇದು ನಿಮ್ಮ ಪ್ರಭುವಿನ ಕಡೆಯ ಸತ್ಯವೇ ಆಗಿದೆಯೆಂದು ದೃಢವಾಗಿ ತಿಳಿಯಲೆಂದಾಗಿದೆ. ಆ ಬಳಿಕ ಅವರು ಅದರಲ್ಲಿ ವಿಶ್ವಾಸವಿಡಲಿ ಮತ್ತು ಅವರ ಹೃದಯಗಳು ಅದಕ್ಕೆ ಶರಣಾಗಲಿ. ನಿಶ್ಚಯವಾಗಿಯು ಅಲ್ಲಾಹನು ಸತ್ಯವಿಶ್ವಾಸವಿರಿಸಿದವರಿಗೆ ಋಜುವಾದ ಮಾರ್ಗದೆಡೆಗೆ ಮುನ್ನಡೆಸುತ್ತಾನೆ.
وَلَا يَزَالُ الَّذِينَ كَفَرُوا فِي مِرْيَةٍ مِّنْهُ حَتَّىٰ تَأْتِيَهُمُ السَّاعَةُ بَغْتَةً أَوْ يَأْتِيَهُمْ عَذَابُ يَوْمٍ عَقِيمٍ ٥٥
📖 ಅನುವಾದ
ಆಯತ್ 55
ಸತ್ಯನಿಷೇಧಿಸಿದವರು ದಿವ್ಯವಾಣಿಯ ಕುರಿತು ಸದಾ ಸಂದೇಹದಲ್ಲೇ ಇರುವರು. ಕೊನೆಗೆ ಅವರ ಮೇಲೆ ಅಂತ್ಯ ಗಳಿಗೆಯು ಹಠಾತ್ತನೆ ಬಂದುಬಿಡುವುದು ಅಥವಾ ಅಶುಭದಿನದ ಯಾತನೆಯು ಅವರ ಬಳಿ ಬಂದು ಬಿಡುವುದು.
الْمُلْكُ يَوْمَئِذٍ لِّلَّهِ يَحْكُمُ بَيْنَهُمْ ۚ فَالَّذِينَ آمَنُوا وَعَمِلُوا الصَّالِحَاتِ فِي جَنَّاتِ النَّعِيمِ ٥٦
📖 ಅನುವಾದ
ಆಯತ್ 56
ಆ ದಿನ ಕೇವಲ ಅಲ್ಲಾಹನ ಅಧಿಪತ್ಯವಿರುವುದು. ಅವನೇ ಅವರ ನಡುವೆ ತೀರ್ಪು ನೀಡುವನು.ಸತ್ಯವಿಶ್ವಾಸವಿರಿಸಿದವರು, ಸತ್ಕರ್ಮಗಳನ್ನು ಕೈಗೊಂಡವರು ಅನುಗ್ರಹಪೂರ್ಣ ಸ್ವಗೋದ್ಯಾನಗಳಲ್ಲಿರುವರು.
وَالَّذِينَ كَفَرُوا وَكَذَّبُوا بِآيَاتِنَا فَأُولَٰئِكَ لَهُمْ عَذَابٌ مُّهِينٌ ٥٧
📖 ಅನುವಾದ
ಆಯತ್ 57
ಇನ್ನು ಯಾರು ಸತ್ಯನಿಷೇಧಿಸಿ ನಮ್ಮ ಸೂಕ್ತಿಗಳನ್ನು ಸುಳ್ಳಾಗಿಸಿದರೋ ಅವರಿಗೆ ಅಪಮಾನಕರ ಶಿಕ್ಷೆಯಿರುವುದು.
وَالَّذِينَ هَاجَرُوا فِي سَبِيلِ اللَّهِ ثُمَّ قُتِلُوا أَوْ مَاتُوا لَيَرْزُقَنَّهُمُ اللَّهُ رِزْقًا حَسَنًا ۚ وَإِنَّ اللَّهَ لَهُوَ خَيْرُ الرَّازِقِينَ ٥٨
📖 ಅನುವಾದ
ಆಯತ್ 58
ಯಾರು ಅಲ್ಲಾಹನ ಮಾರ್ಗದಲ್ಲಿ ವಲಸೆ ಹೋಗಿ ಅನಂತರ ಕೊಲ್ಲಲ್ಪಟ್ಟರೋ ಅಥವ ಸಹಜ ಮರಣ ಹೊಂದಿದರೋ ಅವರಿಗೆ ಅಲ್ಲಾಹನು ಅತ್ಯುತ್ತಮವಾಗಿರುವ ಜೀವನಾಧಾರವನ್ನು ದಯಪಾಲಿಸುತ್ತಾನೆ. ಮತ್ತು ನಿಸ್ಸಂಶಯವಾಗಿಯೂ ಅವನು ಜೀವನಾಧಾರ ನೀಡುವವರಲ್ಲಿ ಅತ್ಯುತ್ತಮನಾಗಿರುವನು.
لَيُدْخِلَنَّهُم مُّدْخَلًا يَرْضَوْنَهُ ۗ وَإِنَّ اللَّهَ لَعَلِيمٌ حَلِيمٌ ٥٩
📖 ಅನುವಾದ
ಆಯತ್ 59
ಅವರು ಸಂತುಷ್ಟರಾಗುವAತಹ ಸ್ಥಳಕ್ಕೆ ಅವರನ್ನು ತಲುಪಿಸುವನು. ನಿಸ್ಸಂದೇಹವಾಗಿಯೂ ಅಲ್ಲಾಹನು ಮಹಾಜ್ಞಾನಿಯೂ ಹಾಗೂ ಸಹನಾಶೀಲನಾಗಿರುವನು.
۞ ذَٰلِكَ وَمَنْ عَاقَبَ بِمِثْلِ مَا عُوقِبَ بِهِ ثُمَّ بُغِيَ عَلَيْهِ لَيَنصُرَنَّهُ اللَّهُ ۗ إِنَّ اللَّهَ لَعَفُوٌّ غَفُورٌ ٦٠
📖 ಅನುವಾದ
ಆಯತ್ 60
ಇದು ಅವರ ಅಂತಿಮ ಪರಿಣಾಮವಾಯಿತು. ಒಬ್ಬನು ಹಿಂಸೆಗೊಳಗಾದಷ್ಟೇ ಪ್ರತಿಕಾರ ಪಡೆದರೆ ಆ ಬಳಿಕ ಅವನ ಮೇಲೆ ಪುನಃ ಅತಿಕ್ರಮ ನಡೆದರೆ ಖಂಡಿತವಾಗಿಯು ಅಲ್ಲಾಹನು ಅವನಿಗೆ ಸಹಾಯ ನೀಡುತ್ತಾನೆ. ನಿಸ್ಸಂಶಯವಾಗಿಯೂ ಅಲ್ಲಾಹನು ಪಾಪಗಳನ್ನು ಮನ್ನಿಸುವವನು, ಕ್ಷಮಾಶೀಲನು ಆಗಿರುವನು.
ذَٰلِكَ بِأَنَّ اللَّهَ يُولِجُ اللَّيْلَ فِي النَّهَارِ وَيُولِجُ النَّهَارَ فِي اللَّيْلِ وَأَنَّ اللَّهَ سَمِيعٌ بَصِيرٌ ٦١
📖 ಅನುವಾದ
ಆಯತ್ 61
ಇದೇಕೆಂದರೆ ಅಲ್ಲಾಹನು ರಾತ್ರಿಯನ್ನು ಹಗಲಿನೊಳಗೆ ಹಾಗೂ ಹಗಲನ್ನು ರಾತ್ರಿಯೊಳಗೆ ಪ್ರವೇಶಿಸುತ್ತಾನೆ ಮತ್ತು ವಾಸ್ತವದಲ್ಲಿ ಅಲ್ಲಾಹನು ಸರ್ವವನ್ನಾಲಿಸುವವನು, ಚೆನ್ನಾಗಿ ನೋಡುವವನು ಆಗಿದ್ದಾನೆ.
ذَٰلِكَ بِأَنَّ اللَّهَ هُوَ الْحَقُّ وَأَنَّ مَا يَدْعُونَ مِن دُونِهِ هُوَ الْبَاطِلُ وَأَنَّ اللَّهَ هُوَ الْعَلِيُّ الْكَبِيرُ ٦٢
📖 ಅನುವಾದ
ಆಯತ್ 62
ಇದೇಕೆಂದರೆ ವಾಸ್ತವದಲ್ಲಿ ಅಲ್ಲಾಹನೇ ಸತ್ಯ ಮತ್ತು ಅವನ ಹೊರತು ಅವರು ಕರೆದು ಬೇಡುತ್ತಿರುವ ವಸ್ತುಗಳು ಮಿಥ್ಯವಾಗಿರುವುದು. ನಿಶ್ಚಯವಾಗಿಯೂ ಅಲ್ಲಾಹನು ಉನ್ನತನು, ಮಹಾನನು ಆಗಿದ್ದಾನೆ.
أَلَمْ تَرَ أَنَّ اللَّهَ أَنزَلَ مِنَ السَّمَاءِ مَاءً فَتُصْبِحُ الْأَرْضُ مُخْضَرَّةً ۗ إِنَّ اللَّهَ لَطِيفٌ خَبِيرٌ ٦٣
📖 ಅನುವಾದ
ಆಯತ್ 63
ಅಲ್ಲಾಹನು ಆಕಾಶದಿಂದ ನೀರನ್ನು ಸುರಿಸಿ, ಅನಂತರ ಭೂಮಿಯು ಹಚ್ಚಹಸಿರಾಗಿರುವುದನ್ನು ನೀವು ನೋಡಲಿಲ್ಲವೇ? ನಿಸ್ಸಂಶಯವಾಗಿಯೂ ಅಲ್ಲಾಹನು ಸೂಕ್ಷö್ಮಗ್ರಹಿಯು, ವಿವರ ಪೂರ್ಣನೂ ಆಗಿದ್ದಾನೆ.
لَّهُ مَا فِي السَّمَاوَاتِ وَمَا فِي الْأَرْضِ ۗ وَإِنَّ اللَّهَ لَهُوَ الْغَنِيُّ الْحَمِيدُ ٦٤
📖 ಅನುವಾದ
ಆಯತ್ 64
ಭೂಮಿ, ಆಕಾಶಗಳಲ್ಲಿರುವುದೆಲ್ಲವೂ ಅವನದ್ದಾಗಿದೆ. ನಿಶ್ಚಯವಾಗಿಯೂ ಅಲ್ಲಾಹನೇ ನಿರಪೇಕ್ಷಕನು ಸ್ತುತ್ಯರ್ಹನು ಆಗಿದ್ದಾನೆ.
أَلَمْ تَرَ أَنَّ اللَّهَ سَخَّرَ لَكُم مَّا فِي الْأَرْضِ وَالْفُلْكَ تَجْرِي فِي الْبَحْرِ بِأَمْرِهِ وَيُمْسِكُ السَّمَاءَ أَن تَقَعَ عَلَى الْأَرْضِ إِلَّا بِإِذْنِهِ ۗ إِنَّ اللَّهَ بِالنَّاسِ لَرَءُوفٌ رَّحِيمٌ ٦٥
📖 ಅನುವಾದ
ಆಯತ್ 65
ನಿಶ್ಚಯವಾಗಿಯು ಅಲ್ಲಾಹನು ಭೂಮಿಯಲ್ಲಿರುವುದನ್ನು ಮತ್ತು ಅವನ ಅಪ್ಪಣೆಯಿಂದ ಸಮುದ್ರದಲ್ಲಿ ಸಂಚರಿಸುವ ಹಡಗನ್ನು ನಿಮಗೆ ಅಧೀನಗೊಳಿಸಿದ್ದಾನೆಂದು ನೀವು ನೋಡಲಿಲ್ಲವೇ? ಮತ್ತು ಅವನ ಅನುಮತಿಯ ವಿನಃ ಆಕಾಶವು ಭೂಮಿಯ ಮೇಲೆ ಬೀಳದಂತೆ ಅವನೇ ಆಧರಿಸಿದ್ದಾನೆ ವಾಸ್ತವದಲ್ಲಿ ಅಲ್ಲಾಹನು ಜನರ ಕುರಿತು ಕೃಪಾಳುವು, ಕರುಣಾಮಯಿಯು ಆಗಿದ್ದಾನೆ.
وَهُوَ الَّذِي أَحْيَاكُمْ ثُمَّ يُمِيتُكُمْ ثُمَّ يُحْيِيكُمْ ۗ إِنَّ الْإِنسَانَ لَكَفُورٌ ٦٦
📖 ಅನುವಾದ
ಆಯತ್ 66
ಅವನೇ ನಿಮಗೆ ಜೀವ ನೀಡಿದನು. ನಂತರ ನಿಮ್ಮನ್ನು ಮರಣಗೊಳಿಸುತ್ತಾನೆ. ಅನಂತರ ನಿಮ್ಮನ್ನು (ಪುನಃ) ಜೀವಂತಗೊಳಿಸುವನು. ವಾಸ್ತವದಲ್ಲಿ ಮನುಷ್ಯನು ಕೃತಘ್ನನಾಗಿದ್ದಾನೆ.
لِّكُلِّ أُمَّةٍ جَعَلْنَا مَنسَكًا هُمْ نَاسِكُوهُ ۖ فَلَا يُنَازِعُنَّكَ فِي الْأَمْرِ ۚ وَادْعُ إِلَىٰ رَبِّكَ ۖ إِنَّكَ لَعَلَىٰ هُدًى مُّسْتَقِيمٍ ٦٧
📖 ಅನುವಾದ
ಆಯತ್ 67
ಪ್ರತಿಯೊಂದು ಸಮುದಾಯಕ್ಕೂ ನಾವು ಆರಾಧನ ಕ್ರಮವನ್ನು ನಿಶ್ಚಯಿಸಿದ್ದೇವು ಅವರು ಅದನ್ನು ಪಾಲಿಸುತ್ತಿದ್ದರು. ಇನ್ನು ಇವರು ನಿಮ್ಮೊಂದಿಗೆ ಈ ವಿಚಾರದಲ್ಲಿ ತರ್ಕ ಮಾಡದಿರಲಿ ಮತ್ತು ನೀವು ನಿಮ್ಮ ಪ್ರಭುವಿನ ಕಡೆಗೆ ಕರೆಯಿರಿ. ನಿಸ್ಸಂಶಯವಾಗಿಯೂ ನೀವು ಋಜುವಾದ ಮಾರ್ಗದಲ್ಲಿದ್ದೀರಿ.
وَإِن جَادَلُوكَ فَقُلِ اللَّهُ أَعْلَمُ بِمَا تَعْمَلُونَ ٦٨
📖 ಅನುವಾದ
ಆಯತ್ 68
ಮತ್ತು ಅವರೇನಾದರೂ ನಿಮ್ಮೊಡನೆ ಜಗಳವಾಡಿದರೆ ಹೇಳಿರಿ: ನೀವು ಮಾಡುತ್ತಿರುವುದೆಲ್ಲವನ್ನು ಅಲ್ಲಾಹನು ಚೆನ್ನಾಗಿ ಬಲ್ಲನು.
اللَّهُ يَحْكُمُ بَيْنَكُمْ يَوْمَ الْقِيَامَةِ فِيمَا كُنتُمْ فِيهِ تَخْتَلِفُونَ ٦٩
📖 ಅನುವಾದ
ಆಯತ್ 69
ನಿಸ್ಸಂಶಯವಾಗಿಯೂ ಅಲ್ಲಾಹನು ಪುನರುತ್ಥಾನ ದಿನದಂದು ನೀವು ಭಿನ್ನಾಭಿಪ್ರಾಯ ಹೊಂದಿದ ಸಕಲ ವಿಷಯಗಳ ಬಗ್ಗೆ ನಿಮ್ಮ ನಡುವೆ ತೀರ್ಮಾನ ಮಾಡಲಿದ್ದಾನೆ.
أَلَمْ تَعْلَمْ أَنَّ اللَّهَ يَعْلَمُ مَا فِي السَّمَاءِ وَالْأَرْضِ ۗ إِنَّ ذَٰلِكَ فِي كِتَابٍ ۚ إِنَّ ذَٰلِكَ عَلَى اللَّهِ يَسِيرٌ ٧٠
📖 ಅನುವಾದ
ಆಯತ್ 70
ಭೂಮಿ, ಆಕಾಶಗಳಲ್ಲಿರುವ ಸಕಲ ಸಂಗತಿಗಳನ್ನು ಅಲ್ಲಾಹನು ಬಲ್ಲನೆಂದು ನೀವು ಅರಿತಿಲ್ಲವೇ? ಖಂಡಿತವಾಗಿ ಇವೆಲ್ಲವೂ ಒಂದು ದಾಖಲಿಸಲ್ಪಟ್ಟ ಗ್ರಂಥದಲ್ಲಿದೆ. ನಿಶ್ಚಯವಾಗಿಯು ಈ ಕಾರ್ಯವು ಅಲ್ಲಾಹನ ಪಾಲಿಗೆ ಸುಲಭವಾಗಿದೆ.
وَيَعْبُدُونَ مِن دُونِ اللَّهِ مَا لَمْ يُنَزِّلْ بِهِ سُلْطَانًا وَمَا لَيْسَ لَهُم بِهِ عِلْمٌ ۗ وَمَا لِلظَّالِمِينَ مِن نَّصِيرٍ ٧١
📖 ಅನುವಾದ
ಆಯತ್ 71
ಅವರು ಅಲ್ಲಾಹನನ್ನು ಬಿಟ್ಟು ಅವನು ಅದರ ಬಗ್ಗೆ ಯಾವುದೇ ಪುರಾವೆಯನ್ನು ಇಳಿಸದ ಹಾಗೂ ಅದರ ಕುರಿತು ಸ್ವತಃ ಅವರಿಗೂ ಯಾವ ಜ್ಞಾನವಿಲ್ಲದ ವಸ್ತುಗಳನ್ನು ಆರಾಧಿಸುತ್ತಾರೆ. ಮತ್ತು ಅಕ್ರಮಿಗಳಿಗೆ ಯಾವ ಸಹಾಯಕನೂ ಇರಲಾರನು.
وَإِذَا تُتْلَىٰ عَلَيْهِمْ آيَاتُنَا بَيِّنَاتٍ تَعْرِفُ فِي وُجُوهِ الَّذِينَ كَفَرُوا الْمُنكَرَ ۖ يَكَادُونَ يَسْطُونَ بِالَّذِينَ يَتْلُونَ عَلَيْهِمْ آيَاتِنَا ۗ قُلْ أَفَأُنَبِّئُكُم بِشَرٍّ مِّن ذَٰلِكُمُ ۗ النَّارُ وَعَدَهَا اللَّهُ الَّذِينَ كَفَرُوا ۖ وَبِئْسَ الْمَصِيرُ ٧٢
📖 ಅನುವಾದ
ಆಯತ್ 72
ಅವರ ಮುಂದೆ ನಮ್ಮ ಸುಸ್ಪಷ್ಟವಾದ ಸೂಕ್ತಿಗಳನ್ನು ಓದಿ ಹೇಳಲಾದಾಗ ನೀವು ಸತ್ಯನಿಷೇಧಿಗಳ ಮುಖಗಳು ವಿಕಾರಗೊಳ್ಳುತ್ತಿರುವುದನ್ನು ಕಾಣುವಿರಿ. ಅವರು ನಮ್ಮ ಸೂಕ್ತಿಗಳನ್ನು ಓದಿ ಹೇಳುವವರ ಮೇಲೆ ಮುಗಿಬೀಳಬಹುದು. ಹೇಳಿರಿ: ನಾನು ನಿಮಗೆ ಇದಕ್ಕಿಂತಲೂ ಅತ್ಯಂತ ಕೆಟ್ಟದ್ದಾಗಿರುವುದನ್ನು ತಿಳಿಸಿ ಕೊಡಲೇ? ಅದೇ ನರಕಾಗ್ನಿ! ಅಲ್ಲಾಹನು ಸತ್ಯನಿಷೇಧಿಸಿದವರಿಗೆ ಅದರ ವಾಗ್ದಾನವನ್ನು ಮಾಡಿದ್ದಾನೆ ಮತ್ತು ಅದು ಮರಳುವ ಕೆಟ್ಟ ತಾಣವಾಗಿದೆ.
يَا أَيُّهَا النَّاسُ ضُرِبَ مَثَلٌ فَاسْتَمِعُوا لَهُ ۚ إِنَّ الَّذِينَ تَدْعُونَ مِن دُونِ اللَّهِ لَن يَخْلُقُوا ذُبَابًا وَلَوِ اجْتَمَعُوا لَهُ ۖ وَإِن يَسْلُبْهُمُ الذُّبَابُ شَيْئًا لَّا يَسْتَنقِذُوهُ مِنْهُ ۚ ضَعُفَ الطَّالِبُ وَالْمَطْلُوبُ ٧٣
📖 ಅನುವಾದ
ಆಯತ್ 73
ಓ ಜನರೇ, ಒಂದು ಉಪಮೆಯನ್ನು ಕೊಡಲಾಗುತ್ತಿದೆ. ಗಮನವಿಟ್ಟು ಕೇಳಿರಿ. ನೀವು ಅಲ್ಲಾಹನನ್ನು ಬಿಟ್ಟು ಯಾರನ್ನು ಕರೆದು ಬೆಡುತ್ತಿರುವಿರೋ ನಿಜವಾಗಿಯೂ ಅವರು ಒಂದು ನೊಣವನ್ನೂ ಸಹ ಸೃಷ್ಟಿಸಲಾರರು. ಅವರೆಲ್ಲರೂ ಅದಕ್ಕೋಸ್ಕರ ಒಟ್ಟು ಸೇರಿದರೂ ಸರಿಯೇ. ಅಷ್ಟೇಕೆ! ನೊಣವು ಅವರಿಂದ ಏನನ್ನಾದರೂ ಕಸಿದು ಕೊಂಡು ಹೋದರೆ ಅವರು ಅದನ್ನು ಅದರಿಂದ ಹಿಂದಕ್ಕೆ ಪಡೆಯಲೂ ಅಶಕ್ತರು. ಬೇಡುವವನೂ ದುರ್ಬಲನು, ಯಾರಿಂದ ಬೇಡಲಾಗುತ್ತಿದೆಯೋ ಅವನೂ ದುರ್ಬಲನು!
مَا قَدَرُوا اللَّهَ حَقَّ قَدْرِهِ ۗ إِنَّ اللَّهَ لَقَوِيٌّ عَزِيزٌ ٧٤
📖 ಅನುವಾದ
ಆಯತ್ 74
ಅವರು ಅಲ್ಲಾಹನ ಮಹತ್ವವನ್ನು ಅರಿತುಕೊಳ್ಳಬೇಕಾದ ರೀತಿಯಲ್ಲಿ ಅರಿತುಕೊಳ್ಳಲೇ ಇಲ್ಲ. ನಿಶ್ಚಯವಾಗಿಯೂ ಅಲ್ಲಾಹನು ಮಹಾ ಶಕ್ತಿವಂತನೂ, ಪ್ರಚಂಡನೂ ಆಗಿದ್ದಾನೆ.
اللَّهُ يَصْطَفِي مِنَ الْمَلَائِكَةِ رُسُلًا وَمِنَ النَّاسِ ۚ إِنَّ اللَّهَ سَمِيعٌ بَصِيرٌ ٧٥
📖 ಅನುವಾದ
ಆಯತ್ 75
ಅಲ್ಲಾಹನು ಮಲಕ್‌ಗಳಿಂದಲೂ, ಮನುಷ್ಯರಿಂದಲೂ ಸಂದೇಶವಾಹಕರನ್ನು ಆಯ್ದುಕೊಳ್ಳುತ್ತಾನೆ. ನಿಸ್ಸಂದೇಹವಾಗಿಯು ಅಲ್ಲಾಹನು ಸರ್ವವನ್ನು ಆಲಿಸುವವನು, ಸರ್ವವನ್ನು ನೋಡುವವನು ಆಗಿದ್ದಾನೆ.
يَعْلَمُ مَا بَيْنَ أَيْدِيهِمْ وَمَا خَلْفَهُمْ ۗ وَإِلَى اللَّهِ تُرْجَعُ الْأُمُورُ ٧٦
📖 ಅನುವಾದ
ಆಯತ್ 76
ಜನರ ಮುಂದಿರುವುದನ್ನು ಹಿಂದಿರುವುದನ್ನು ಅವನು ಬಲ್ಲನು.ಮತ್ತು ಕಾರ್ಯಗಳೆಲ್ಲವೂ ಅಲ್ಲಾಹನೆಡೆಗೆ ಮರಳಿಸಲ್ಪಡುತ್ತವೆ.
يَا أَيُّهَا الَّذِينَ آمَنُوا ارْكَعُوا وَاسْجُدُوا وَاعْبُدُوا رَبَّكُمْ وَافْعَلُوا الْخَيْرَ لَعَلَّكُمْ تُفْلِحُونَ ۩ ٧٧
📖 ಅನುವಾದ
ಆಯತ್ 77
ಓ ಸತ್ಯವಿಶ್ಚಾಸಿಗಳೇ, ನೀವು ಬಾಗಿರಿ, ಸಾಷ್ಟಾಂಗವೆರಗಿರಿ ಮತ್ತು ನಿಮ್ಮ ಪ್ರಭುವನ್ನು ಆರಾಧಿಸಿರಿ ಹಾಗೂ ಒಳಿತನ್ನು ಮಾಡಿರಿ. ನೀವು ಯಶಸ್ಸು ಪಡೆಯಬಹುದು.
وَجَاهِدُوا فِي اللَّهِ حَقَّ جِهَادِهِ ۚ هُوَ اجْتَبَاكُمْ وَمَا جَعَلَ عَلَيْكُمْ فِي الدِّينِ مِنْ حَرَجٍ ۚ مِّلَّةَ أَبِيكُمْ إِبْرَاهِيمَ ۚ هُوَ سَمَّاكُمُ الْمُسْلِمِينَ مِن قَبْلُ وَفِي هَٰذَا لِيَكُونَ الرَّسُولُ شَهِيدًا عَلَيْكُمْ وَتَكُونُوا شُهَدَاءَ عَلَى النَّاسِ ۚ فَأَقِيمُوا الصَّلَاةَ وَآتُوا الزَّكَاةَ وَاعْتَصِمُوا بِاللَّهِ هُوَ مَوْلَاكُمْ ۖ فَنِعْمَ الْمَوْلَىٰ وَنِعْمَ النَّصِيرُ ٧٨
📖 ಅನುವಾದ
ಆಯತ್ 78
ನೀವು ಅಲ್ಲಾಹನ ಮಾರ್ಗದಲ್ಲಿ ಹೋರಾಡಬೇಕಾದ ರೀತಿಯಲ್ಲಿ ಹೋರಾಡಿರಿ! ಅವನು ನಿಮ್ಮನ್ನು ಆಯ್ಕೆ ಮಾಡಿದ್ದಾನೆ ಮತ್ತು ಅವನು ನಿಮ್ಮ ಮೇಲೆ ಧರ್ಮವಿಷಯದಲ್ಲಿ ಯಾವುದೇ ಇಕ್ಕಟ್ಟನ್ನುಂಟು ಮಾಡಿಲ್ಲ. ನಿಮ್ಮ ತಂದೆ ಇಬ್ರಾಹೀಮ್‌ರ ಧರ್ಮವನ್ನು ಸಂಸ್ಥಾಪಿಸಿರಿ. ಈ ಕುರ್‌ಆನ್‌ಗಿಂತ ಮೊದಲು (ಬಂದ ಗ್ರಂಥಗಳಲ್ಲೂ), ಇದರಲ್ಲೂ ಅವನು ನಿಮ್ಮ ಹೆಸರನ್ನು ಮುಸ್ಲಿಮ್ ಎಂದಿಟ್ಟಿರುತ್ತಾನೆ. ಇದು ಸಂದೇಶವಾಹಕರು ನಿಮ್ಮ ಮೇಲೆ ಸಾಕ್ಷಿಯಾಗಲೆಂದು, ನೀವು ಸಕಲ ಜನರ ಮೇಲೆ ಸಾಕ್ಷಿಗಳಾಗಲೆಂದಾಗಿದೆ. ಹಾಗೆಯೇ ನೀವು ನಮಾಝ್ ಸಂಸ್ಥಾಪಿಸಿರಿ ಹಾಗೂ ಝಕಾತ್ ನೀಡಿರಿ ಮತ್ತು ಅಲ್ಲಾಹನ ಪಾಶವನ್ನು ಭದ್ರವಾಗಿ ಹಿಡಿದುಕೊಳ್ಳಿರಿ. ಅವನೇ ನಿಮ್ಮ ರಕ್ಷಕ ಮಿತ್ರನಾಗಿದ್ದಾನೆ. ಅವನು ಅದೆಷ್ಟು ಉತ್ತಮನು ಹಾಗೂ ಅದೆಷ್ಟು ಉತ್ತಮ ಸಹಾಯಕನು!.
ಓದಿ ಸೂರಾ ಅಲ್-ಹಜ್ಜ್ ಕನ್ನಡ ಅನುವಾದ – ಪಠಣ ಮತ್ತು ಆಡಿಯೋ
ಪವಿತ್ರ ಕುರಾನ್
Monday, September 7, 2026
Don't forget us in your sincere prayers

