ಅಲ್-ಹಜ್ಜ್ · 71/78
ಅನುವಾದ ಉಚ್ಚಾರಣೆ — ಸೂರಾ ಅಲ್-ಹಜ್ಜ್
وَيَعْبُدُونَ مِن دُونِ اللَّهِ مَا لَمْ يُنَزِّلْ بِهِ سُلْطَانًا وَمَا لَيْسَ لَهُم بِهِ عِلْمٌ ۗ وَمَا لِلظَّالِمِينَ مِن نَّصِيرٍ ۝٧١
Wa ya`budoona min doonil laahi maa lam yunazzil bihee sultaananw wa maa laisa lahum bihee `ilm; wa maa lizzaalimeena min naseer
📖 ಕನ್ನಡ ಅರ್ಥ
ಅವರು ಅಲ್ಲಾಹನನ್ನು ಬಿಟ್ಟು ಅವನು ಅದರ ಬಗ್ಗೆ ಯಾವುದೇ ಪುರಾವೆಯನ್ನು ಇಳಿಸದ ಹಾಗೂ ಅದರ ಕುರಿತು ಸ್ವತಃ ಅವರಿಗೂ ಯಾವ ಜ್ಞಾನವಿಲ್ಲದ ವಸ್ತುಗಳನ್ನು ಆರಾಧಿಸುತ್ತಾರೆ. ಮತ್ತು ಅಕ್ರಮಿಗಳಿಗೆ ಯಾವ ಸಹಾಯಕನೂ ಇರಲಾರನು.

🎧 ಆಲಿಸಿ


📜 ಆಯತ್ 69-73 — ಸೂರಾ ಅಲ್-ಹಜ್ಜ್

69اللَّهُ يَحْكُمُ بَيْنَكُمْ يَوْمَ الْقِيَامَةِ فِيمَا كُنتُمْ فِيهِ تَخْتَلِفُونَ
ನಿಸ್ಸಂಶಯವಾಗಿಯೂ ಅಲ್ಲಾಹನು ಪುನರುತ್ಥಾನ ದಿನದಂದು ನೀವು ಭಿನ್ನಾಭಿಪ್ರಾಯ ಹೊಂದಿದ ಸಕಲ ವಿಷಯಗಳ ಬಗ್ಗೆ ನಿಮ್ಮ ನಡುವೆ ತೀರ್ಮಾನ ಮಾಡಲಿದ್ದಾನೆ.
70أَلَمْ تَعْلَمْ أَنَّ اللَّهَ يَعْلَمُ مَا فِي السَّمَاءِ وَالْأَرْضِ ۗ إِنَّ ذَٰلِكَ فِي كِتَابٍ ۚ إِنَّ ذَٰلِكَ عَلَى اللَّهِ يَسِيرٌ
ಭೂಮಿ, ಆಕಾಶಗಳಲ್ಲಿರುವ ಸಕಲ ಸಂಗತಿಗಳನ್ನು ಅಲ್ಲಾಹನು ಬಲ್ಲನೆಂದು ನೀವು ಅರಿತಿಲ್ಲವೇ? ಖಂಡಿತವಾಗಿ ಇವೆಲ್ಲವೂ ಒಂದು ದಾಖಲಿಸಲ್ಪಟ್ಟ ಗ್ರಂಥದಲ್ಲಿದೆ. ನಿಶ್ಚಯವಾಗಿಯು ಈ ಕಾರ್ಯವು ಅಲ್ಲಾಹನ ಪಾಲಿಗೆ ಸುಲಭವಾಗಿದೆ.
71وَيَعْبُدُونَ مِن دُونِ اللَّهِ مَا لَمْ يُنَزِّلْ بِهِ سُلْطَانًا وَمَا لَيْسَ لَهُم بِهِ عِلْمٌ ۗ وَمَا لِلظَّالِمِينَ مِن نَّصِيرٍ
ಅವರು ಅಲ್ಲಾಹನನ್ನು ಬಿಟ್ಟು ಅವನು ಅದರ ಬಗ್ಗೆ ಯಾವುದೇ ಪುರಾವೆಯನ್ನು ಇಳಿಸದ ಹಾಗೂ ಅದರ ಕುರಿತು ಸ್ವತಃ ಅವರಿಗೂ ಯಾವ ಜ್ಞಾನವಿಲ್ಲದ ವಸ್ತುಗಳನ್ನು ಆರಾಧಿಸುತ್ತಾರೆ. ಮತ್ತು ಅಕ್ರಮಿಗಳಿಗೆ ಯಾವ ಸಹಾಯಕನೂ ಇರಲಾರನು.
72وَإِذَا تُتْلَىٰ عَلَيْهِمْ آيَاتُنَا بَيِّنَاتٍ تَعْرِفُ فِي وُجُوهِ الَّذِينَ كَفَرُوا الْمُنكَرَ ۖ يَكَادُونَ يَسْطُونَ بِالَّذِينَ يَتْلُونَ عَلَيْهِمْ آيَاتِنَا ۗ قُلْ أَفَأُنَبِّئُكُم بِشَرٍّ مِّن ذَٰلِكُمُ ۗ النَّارُ وَعَدَهَا اللَّهُ الَّذِينَ كَفَرُوا ۖ وَبِئْسَ الْمَصِيرُ
ಅವರ ಮುಂದೆ ನಮ್ಮ ಸುಸ್ಪಷ್ಟವಾದ ಸೂಕ್ತಿಗಳನ್ನು ಓದಿ ಹೇಳಲಾದಾಗ ನೀವು ಸತ್ಯನಿಷೇಧಿಗಳ ಮುಖಗಳು ವಿಕಾರಗೊಳ್ಳುತ್ತಿರುವುದನ್ನು ಕಾಣುವಿರಿ. ಅವರು ನಮ್ಮ ಸೂಕ್ತಿಗಳನ್ನು ಓದಿ ಹೇಳುವವರ ಮೇಲೆ ಮುಗಿಬೀಳಬಹುದು. ಹೇಳಿರಿ: ನಾನು ನಿಮಗೆ ಇದಕ್ಕಿಂತಲೂ ಅತ್ಯಂತ ಕೆಟ್ಟದ್ದಾಗಿರುವುದನ್ನು ತಿಳಿಸಿ ಕೊಡಲೇ? ಅದೇ ನರಕಾಗ್ನಿ! ಅಲ್ಲಾಹನು ಸತ್ಯನಿಷೇಧಿಸಿದವರಿಗೆ ಅದರ ವಾಗ್ದಾನವನ್ನು ಮಾಡಿದ್ದಾನೆ ಮತ್ತು ಅದು ಮರಳುವ ಕೆಟ್ಟ ತಾಣವಾಗಿದೆ.
73يَا أَيُّهَا النَّاسُ ضُرِبَ مَثَلٌ فَاسْتَمِعُوا لَهُ ۚ إِنَّ الَّذِينَ تَدْعُونَ مِن دُونِ اللَّهِ لَن يَخْلُقُوا ذُبَابًا وَلَوِ اجْتَمَعُوا لَهُ ۖ وَإِن يَسْلُبْهُمُ الذُّبَابُ شَيْئًا لَّا يَسْتَنقِذُوهُ مِنْهُ ۚ ضَعُفَ الطَّالِبُ وَالْمَطْلُوبُ
ಓ ಜನರೇ, ಒಂದು ಉಪಮೆಯನ್ನು ಕೊಡಲಾಗುತ್ತಿದೆ. ಗಮನವಿಟ್ಟು ಕೇಳಿರಿ. ನೀವು ಅಲ್ಲಾಹನನ್ನು ಬಿಟ್ಟು ಯಾರನ್ನು ಕರೆದು ಬೆಡುತ್ತಿರುವಿರೋ ನಿಜವಾಗಿಯೂ ಅವರು ಒಂದು ನೊಣವನ್ನೂ ಸಹ ಸೃಷ್ಟಿಸಲಾರರು. ಅವರೆಲ್ಲರೂ ಅದಕ್ಕೋಸ್ಕರ ಒಟ್ಟು ಸೇರಿದರೂ ಸರಿಯೇ. ಅಷ್ಟೇಕೆ! ನೊಣವು ಅವರಿಂದ ಏನನ್ನಾದರೂ ಕಸಿದು ಕೊಂಡು ಹೋದರೆ ಅವರು ಅದನ್ನು ಅದರಿಂದ ಹಿಂದಕ್ಕೆ ಪಡೆಯಲೂ ಅಶಕ್ತರು. ಬೇಡುವವನೂ ದುರ್ಬಲನು, ಯಾರಿಂದ ಬೇಡಲಾಗುತ್ತಿದೆಯೋ ಅವನೂ ದುರ್ಬಲನು!
ಅಲ್-ಹಜ್ಜ್ಕುರಾನ್ ಸೂಚಿ
78ಆಯತ್
MedinanRevelation
71ಆಯತ್

ಅನುವಾದ — ಅಲ್-ಹಜ್ಜ್ 71

ಸೂರಾ ಅಲ್-ಹಜ್ಜ್ ಆಯತ್ 71 - ಓದಿ, ಆಲಿಸಿ, ಅನುವಾದ, ಕನ್ನಡ : ಅವರು ಅಲ್ಲಾಹನನ್ನು ಬಿಟ್ಟು ಅವನು ಅದರ ಬಗ್ಗೆ ಯಾವುದೇ ಪುರಾವೆಯನ್ನು ಇಳಿಸದ ಹಾಗೂ…

ಸೂರಾ ಆಯತ್ 71/78 — ಸೂರಾ ಅಲ್-ಹಜ್ಜ್ الحج (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಹಜ್ಜ್ ಆಲಿಸಿ, ಸೂರಾ ಅಲ್-ಹಜ್ಜ್ ಅನುವಾದ, ಸೂರಾ ಅಲ್-ಹಜ್ಜ್ mp3, ಸೂರಾ ಅಲ್-ಹಜ್ಜ್ pdf. ಆಯತ್ 69–73. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers