ಅಲ್-ಹಜ್ಜ್ · 35/78
ಅನುವಾದ ಉಚ್ಚಾರಣೆ — ಸೂರಾ ಅಲ್-ಹಜ್ಜ್
الَّذِينَ إِذَا ذُكِرَ اللَّهُ وَجِلَتْ قُلُوبُهُمْ وَالصَّابِرِينَ عَلَىٰ مَا أَصَابَهُمْ وَالْمُقِيمِي الصَّلَاةِ وَمِمَّا رَزَقْنَاهُمْ يُنفِقُونَ ۝٣٥
Allazeena izaa zukiral laahu wajilat quloobuhum wassaabireena `alaa maaa asaabahum walmuqeemis Salaati wa mimmaa razaqnaahum yunfiqoon
📖 ಕನ್ನಡ ಅರ್ಥ
ಅವರ ಮುಂದೆ ಅಲ್ಲಾಹನ ಸ್ಮರಣೆಯನ್ನು ಮಾಡಲಾದಾಗ ಅವರ ಹೃದಯಗಳು ಕಂಪಿಸುತ್ತವೆ. ಮತ್ತು ಅವರಿಗೆ ಬಾಧಿಸಿದ ಸಂಕಷ್ಟಗಳ ಮೇಲೆ ಸಹನೆ ವಹಿಸುತ್ತಾರೆ ಮತ್ತು ನಮಾಝನ್ನು ಸಂಸ್ಥಾಪಿಸುತ್ತಾರೆ. ಹಾಗೂ ನಾವು ಅವರಿಗೆ ನೀಡಿದ ಸಂಪತ್ತಿನಿAದ ಖರ್ಚು ಮಾಡುವವರೂ ಆಗಿದ್ದಾರೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 33-37 — ಸೂರಾ ಅಲ್-ಹಜ್ಜ್

33لَكُمْ فِيهَا مَنَافِعُ إِلَىٰ أَجَلٍ مُّسَمًّى ثُمَّ مَحِلُّهَا إِلَى الْبَيْتِ الْعَتِيقِ
ನಿಮಗೆ ಆ ಜಾನುವಾರುಗಳಲ್ಲಿ ಒಂದು ನಿಶ್ಚಿತಾವಧಿಯವರೆಗೆ ಪ್ರಯೋಜನಗಳಿವೆ. ಅನಂತರ ಅವುಗಳ ಬಲಿದಾನದ ಸ್ಥಳವು ಪುರಾತನ ಭವನವಾಗಿದೆ.
34وَلِكُلِّ أُمَّةٍ جَعَلْنَا مَنسَكًا لِّيَذْكُرُوا اسْمَ اللَّهِ عَلَىٰ مَا رَزَقَهُم مِّن بَهِيمَةِ الْأَنْعَامِ ۗ فَإِلَٰهُكُمْ إِلَٰهٌ وَاحِدٌ فَلَهُ أَسْلِمُوا ۗ وَبَشِّرِ الْمُخْبِتِينَ
ಪ್ರತಿಯೊಂದು ಜನಾಂಗಕ್ಕೂ ನಾವು ಬಲಿ ಕರ್ಮವನ್ನು ನಿಶ್ಚಯಿಸಿಕೊಟ್ಟಿರುತ್ತೇವೆ. ಇದು ಅವರು ತಮಗೆ ಅಲ್ಲಾಹನು ದಯಪಾಲಿಸಿದ ಜಾನುವಾರುಗಳ ಮೇಲೆ ಅಲ್ಲಾಹನ ನಾಮವನ್ನು ಉಚ್ಛರಿಸಲೆಂದಾಗಿದೆ. ನಿಮ್ಮೆಲ್ಲರ ಆರಾಧ್ಯನು ಏಕೈಕ ಆರಾಧ್ಯನಾಗಿದ್ದಾನೆ. ಆದ್ದರಿಂದ ನೀವು ಅವನಿಗೇ ವಿಧೇಯರಾಗಿರಿ ಮತ್ತು ದೈನ್ಯರಾದವರಿಗೆ (ಓ ಪೈಗಂಬರರೇ) ನೀವು ಶುಭವಾರ್ತೆಯನ್ನೀಡಿರಿ.
35الَّذِينَ إِذَا ذُكِرَ اللَّهُ وَجِلَتْ قُلُوبُهُمْ وَالصَّابِرِينَ عَلَىٰ مَا أَصَابَهُمْ وَالْمُقِيمِي الصَّلَاةِ وَمِمَّا رَزَقْنَاهُمْ يُنفِقُونَ
ಅವರ ಮುಂದೆ ಅಲ್ಲಾಹನ ಸ್ಮರಣೆಯನ್ನು ಮಾಡಲಾದಾಗ ಅವರ ಹೃದಯಗಳು ಕಂಪಿಸುತ್ತವೆ. ಮತ್ತು ಅವರಿಗೆ ಬಾಧಿಸಿದ ಸಂಕಷ್ಟಗಳ ಮೇಲೆ ಸಹನೆ ವಹಿಸುತ್ತಾರೆ ಮತ್ತು ನಮಾಝನ್ನು ಸಂಸ್ಥಾಪಿಸುತ್ತಾರೆ. ಹಾಗೂ ನಾವು ಅವರಿಗೆ ನೀಡಿದ ಸಂಪತ್ತಿನಿAದ ಖರ್ಚು ಮಾಡುವವರೂ ಆಗಿದ್ದಾರೆ.
36وَالْبُدْنَ جَعَلْنَاهَا لَكُم مِّن شَعَائِرِ اللَّهِ لَكُمْ فِيهَا خَيْرٌ ۖ فَاذْكُرُوا اسْمَ اللَّهِ عَلَيْهَا صَوَافَّ ۖ فَإِذَا وَجَبَتْ جُنُوبُهَا فَكُلُوا مِنْهَا وَأَطْعِمُوا الْقَانِعَ وَالْمُعْتَرَّ ۚ كَذَٰلِكَ سَخَّرْنَاهَا لَكُمْ لَعَلَّكُمْ تَشْكُرُونَ
ಬಲಿದಾನದ ಒಂಟೆಗಳನ್ನು ನಾವು ನಿಮಗೆ ಅಲ್ಲಾಹನ ಲಾಂಛನಗಳಾಗಿ ಮಾಡಿರುತ್ತೇವೆ. ಅವುಗಳಲ್ಲಿ ನಿಮಗೆ ಒಳಿತಿದೆ. ಆದ್ದರಿಂದ ನೀವು ಅವುಗಳನ್ನು ಸಾಲಾಗಿ ನಿಲ್ಲಿಸಿ ಅವುಗಳ ಮೇಲೆ ಅಲ್ಲಾಹನ ನಾಮವನ್ನುಚ್ಛರಿಸಿರಿ ಹಾಗೆಯೇ ಅವುಗಳ ಪಾರ್ಶ್ವಗಳು ನೆಲಕ್ಕೊರಗಿದರೆ ಅವುಗಳನ್ನು ತಿನ್ನಿರಿ ಮತ್ತು ಯಾಚಿಸುವವನಿಗೂ, ಯಾಚಿಸದ ಬಡವನಿಗೂ, ತಿನ್ನಿಸಿರಿ.ಇದೇ ಪ್ರಕಾರ ನಾವು ಜಾನುವಾರುಗಳನ್ನು ನಿಮಗೆ ಅಧೀನಗೊಳಿಸಿರುತ್ತೇವೆ. ಇದು ನೀವು ಕೃತಜ್ಞತೆ ತೋರಲೆಂದಾಗಿದೆ.
37لَن يَنَالَ اللَّهَ لُحُومُهَا وَلَا دِمَاؤُهَا وَلَٰكِن يَنَالُهُ التَّقْوَىٰ مِنكُمْ ۚ كَذَٰلِكَ سَخَّرَهَا لَكُمْ لِتُكَبِّرُوا اللَّهَ عَلَىٰ مَا هَدَاكُمْ ۗ وَبَشِّرِ الْمُحْسِنِينَ
ಅವುಗಳ ಮಾಂಸವಾಗಲೀ, ರಕ್ತವಾಗಲೀ ಅಲ್ಲಾಹನಿಗೆ ತಲುಪುವುದಿಲ್ಲ. ಆದರೆ ಅವನಿಗೆ ನಿಮ್ಮ ಹೃದಯದ ಭಯಭಕ್ತಿಯು ತಲುಪುವುದು. ಇದೇ ಪ್ರಕಾರ ಅಲ್ಲಾಹನು ಆ ಜಾನುವಾರುಗಳನ್ನು ನಿಮಗೆ ಅಧೀನಗೊಳಿಸಿರುತ್ತಾನೆ. ಇದು ನಿಮ್ಮನ್ನು ಅವನು ಸನ್ಮಾರ್ಗದಲ್ಲಿ ಮುನ್ನಡೆಸಿರುವುದಕ್ಕೋಸ್ಕರ ನೀವು ಅವನ ಮಹಾನತೆಯನ್ನು ಕೊಂಡಾಡಲೆAದಾಗಿದೆ ಮತ್ತು ಒಳಿತಿನ ಪಾಲಕರಿಗೆ ನೀವು ಸುವಾರ್ತೆಯನ್ನು ನೀಡಿರಿ.
ಅಲ್-ಹಜ್ಜ್ಕುರಾನ್ ಸೂಚಿ
78ಆಯತ್
MedinanRevelation
35ಆಯತ್

ಅನುವಾದ — ಅಲ್-ಹಜ್ಜ್ 35

ಸೂರಾ ಅಲ್-ಹಜ್ಜ್ ಆಯತ್ 35 - ಓದಿ, ಆಲಿಸಿ, ಅನುವಾದ, ಕನ್ನಡ : ಅವರ ಮುಂದೆ ಅಲ್ಲಾಹನ ಸ್ಮರಣೆಯನ್ನು ಮಾಡಲಾದಾಗ ಅವರ ಹೃದಯಗಳು ಕಂಪಿಸುತ್ತವೆ. ಮತ್ತು ಅವರಿಗೆ…

ಸೂರಾ ಆಯತ್ 35/78 — ಸೂರಾ ಅಲ್-ಹಜ್ಜ್ الحج (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಹಜ್ಜ್ ಆಲಿಸಿ, ಸೂರಾ ಅಲ್-ಹಜ್ಜ್ ಅನುವಾದ, ಸೂರಾ ಅಲ್-ಹಜ್ಜ್ mp3, ಸೂರಾ ಅಲ್-ಹಜ್ಜ್ pdf. ಆಯತ್ 33–37. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers