ಅಲ್-ಹಜ್ಜ್ · 30/78
ಅನುವಾದ ಉಚ್ಚಾರಣೆ — ಸೂರಾ ಅಲ್-ಹಜ್ಜ್
ذَٰلِكَ وَمَن يُعَظِّمْ حُرُمَاتِ اللَّهِ فَهُوَ خَيْرٌ لَّهُ عِندَ رَبِّهِ ۗ وَأُحِلَّتْ لَكُمُ الْأَنْعَامُ إِلَّا مَا يُتْلَىٰ عَلَيْكُمْ ۖ فَاجْتَنِبُوا الرِّجْسَ مِنَ الْأَوْثَانِ وَاجْتَنِبُوا قَوْلَ الزُّورِ ۝٣٠
Zaalika wa mai yu`azzim hurumaatil laahi fahuwa khairul lahoo `inda Rabbih; wa uhillat lakumul an`aamu illaa maa yutlaa `alaikum fajtanibur rijsa minal awsaani wajtaniboo qawlaz zoor
📖 ಕನ್ನಡ ಅರ್ಥ
ಇದು ಹಜ್ಜ್ನ ವಿಷಯವಾಗಿದೆ ಮತ್ತು ಯಾರು ಅಲ್ಲಾಹನು ಪಾವನಗೊಳಿಸಿದವುಗಳನ್ನು ಗೌರವಿಸುವನೋ ಅವನ ಪಾಲಿಗೆ ಅವನ ಪ್ರಭುವಿನ ಬಳಿ ಅತ್ಯುತ್ತಮವಾದುದು ಇದೆ ಮತ್ತು ಜಾನುವಾರುಗಳನ್ನು ನಿಮಗೆ ಧರ್ಮಸಮ್ಮತಗೊಳಿಸಲಾಗಿದೆ ಆದರೆ ನಿಮಗೆ ಓದಿ ಹೇಳಲಾದವುಗಳ ಹೊರತು ಹಾಗೆಯೇ ನೀವು ವಿಗ್ರಹಗಳ ಮಾಲಿನ್ಯದಿಂದ ದೂರವಿರಿ ಮತ್ತು ಸುಳ್ಳು ಮಾತನ್ನು ತೊರೆದು ಬಿಡರಿ.

🎧 ಆಲಿಸಿ


📜 ಆಯತ್ 28-32 — ಸೂರಾ ಅಲ್-ಹಜ್ಜ್

28لِّيَشْهَدُوا مَنَافِعَ لَهُمْ وَيَذْكُرُوا اسْمَ اللَّهِ فِي أَيَّامٍ مَّعْلُومَاتٍ عَلَىٰ مَا رَزَقَهُم مِّن بَهِيمَةِ الْأَنْعَامِ ۖ فَكُلُوا مِنْهَا وَأَطْعِمُوا الْبَائِسَ الْفَقِيرَ
ಅವರು ತಮ್ಮ ಪ್ರಯೋಜನಗಳನ್ನು ಪಡೆಯಲಿಕ್ಕಾಗಿ ಬರಲಿ ಮತ್ತು ಅವರಿಗೆ ದಯಪಾಲಿಸಿದ ಜಾನುವಾರುಗಳ ಮೇಲೆ ನಿರ್ಧಿಷ್ಟ ದಿನಗಳಲ್ಲಿ ಅಲ್ಲಾಹನ ನಾಮವನ್ನುಚ್ಚರಿಸಲಿ. ಅದರಿಂದ ನೀವೂ ತಿನ್ನಿರಿ ಹಾಗೂ ಕಡುಬಡವರಿಗೂ ತಿನ್ನಿಸಿರಿ.
29ثُمَّ لْيَقْضُوا تَفَثَهُمْ وَلْيُوفُوا نُذُورَهُمْ وَلْيَطَّوَّفُوا بِالْبَيْتِ الْعَتِيقِ
ತರುವಾಯ ಅವರು ತಮ್ಮ ಮಾಲಿನ್ಯಗಳನ್ನು ನೀಗಿಸಲಿ ಮತ್ತು ತಮ್ಮ ಪುರಾತನ ಭವನ ಕಾಬಾದ ಪ್ರದಕ್ಷಿಣೆ ಮಾಡಲಿ.
30ذَٰلِكَ وَمَن يُعَظِّمْ حُرُمَاتِ اللَّهِ فَهُوَ خَيْرٌ لَّهُ عِندَ رَبِّهِ ۗ وَأُحِلَّتْ لَكُمُ الْأَنْعَامُ إِلَّا مَا يُتْلَىٰ عَلَيْكُمْ ۖ فَاجْتَنِبُوا الرِّجْسَ مِنَ الْأَوْثَانِ وَاجْتَنِبُوا قَوْلَ الزُّورِ
ಇದು ಹಜ್ಜ್ನ ವಿಷಯವಾಗಿದೆ ಮತ್ತು ಯಾರು ಅಲ್ಲಾಹನು ಪಾವನಗೊಳಿಸಿದವುಗಳನ್ನು ಗೌರವಿಸುವನೋ ಅವನ ಪಾಲಿಗೆ ಅವನ ಪ್ರಭುವಿನ ಬಳಿ ಅತ್ಯುತ್ತಮವಾದುದು ಇದೆ ಮತ್ತು ಜಾನುವಾರುಗಳನ್ನು ನಿಮಗೆ ಧರ್ಮಸಮ್ಮತಗೊಳಿಸಲಾಗಿದೆ ಆದರೆ ನಿಮಗೆ ಓದಿ ಹೇಳಲಾದವುಗಳ ಹೊರತು ಹಾಗೆಯೇ ನೀವು ವಿಗ್ರಹಗಳ ಮಾಲಿನ್ಯದಿಂದ ದೂರವಿರಿ ಮತ್ತು ಸುಳ್ಳು ಮಾತನ್ನು ತೊರೆದು ಬಿಡರಿ.
31حُنَفَاءَ لِلَّهِ غَيْرَ مُشْرِكِينَ بِهِ ۚ وَمَن يُشْرِكْ بِاللَّهِ فَكَأَنَّمَا خَرَّ مِنَ السَّمَاءِ فَتَخْطَفُهُ الطَّيْرُ أَوْ تَهْوِي بِهِ الرِّيحُ فِي مَكَانٍ سَحِيقٍ
ಅಲ್ಲಾಹನಿಗೆ ಏಕನಿಷ್ಠರಾಗಿ ಅವನೊಂದಿಗೆ ಯಾರನ್ನೂ ಸಹಭಾಗಿಯನ್ನಾಗಿ ಮಾಡದಿರಿ. ಅಲ್ಲಾಹನೊಂದಿಗೆ ಸಹಭಬಾಗಿಯನ್ನು ನಿಶ್ಚಯಿಸುವವನು ಆಕಾಶದಿಂದ ಕೆಳಗೆ ಬಿದ್ದಂತಿರುವನು. ಅವನನ್ನು ಪಕ್ಷಿಗಳು ಹೆಕ್ಕಿಕೊಂಡು ಹೋಗುವುವು. ಇಲ್ಲವೇ ಬೀಸುಗಾಳಿಯು ಅವನನ್ನು ದೂರ ಸ್ಥಳಕ್ಕೆ ಎಸೆದು ಬಿಡುವುದು.
32ذَٰلِكَ وَمَن يُعَظِّمْ شَعَائِرَ اللَّهِ فَإِنَّهَا مِن تَقْوَى الْقُلُوبِ
ಇದು ವಾಸ್ತವಿಕತೆಯಾಗಿದೆ. ಇನ್ನು ಯಾರು ಅಲ್ಲಾಹನ ಲಾಂಛನಗಳಿಗೆ ಗೌರವ ನೀಡುತ್ತಾನೋ ಖಂಡಿತವಾಗಿಯೂ ಅದು ಅವನ ಹೃದಯದ ಭಯಭಕ್ತಿಯಿಂದಾಗಿರುತ್ತದೆ.
ಅಲ್-ಹಜ್ಜ್ಕುರಾನ್ ಸೂಚಿ
78ಆಯತ್
MedinanRevelation
30ಆಯತ್

ಅನುವಾದ — ಅಲ್-ಹಜ್ಜ್ 30

ಸೂರಾ ಅಲ್-ಹಜ್ಜ್ ಆಯತ್ 30 - ಓದಿ, ಆಲಿಸಿ, ಅನುವಾದ, ಕನ್ನಡ : ಇದು ಹಜ್ಜ್ನ ವಿಷಯವಾಗಿದೆ ಮತ್ತು ಯಾರು ಅಲ್ಲಾಹನು ಪಾವನಗೊಳಿಸಿದವುಗಳನ್ನು ಗೌರವಿಸುವನೋ ಅವನ ಪಾಲಿಗೆ…

ಸೂರಾ ಆಯತ್ 30/78 — ಸೂರಾ ಅಲ್-ಹಜ್ಜ್ الحج (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಹಜ್ಜ್ ಆಲಿಸಿ, ಸೂರಾ ಅಲ್-ಹಜ್ಜ್ ಅನುವಾದ, ಸೂರಾ ಅಲ್-ಹಜ್ಜ್ mp3, ಸೂರಾ ಅಲ್-ಹಜ್ಜ್ pdf. ಆಯತ್ 28–32. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers