ಅಲ್-ಹಜ್ಜ್ · 73/78
ಅನುವಾದ ಉಚ್ಚಾರಣೆ — ಸೂರಾ ಅಲ್-ಹಜ್ಜ್
يَا أَيُّهَا النَّاسُ ضُرِبَ مَثَلٌ فَاسْتَمِعُوا لَهُ ۚ إِنَّ الَّذِينَ تَدْعُونَ مِن دُونِ اللَّهِ لَن يَخْلُقُوا ذُبَابًا وَلَوِ اجْتَمَعُوا لَهُ ۖ وَإِن يَسْلُبْهُمُ الذُّبَابُ شَيْئًا لَّا يَسْتَنقِذُوهُ مِنْهُ ۚ ضَعُفَ الطَّالِبُ وَالْمَطْلُوبُ ۝٧٣
Yaaa ayyuhan naasu duriba masalun fastami`oo lah; innal lazeena tad`oona min doonil laahi lai yakhluqoo zubaabanw wa lawijtama`oo lahoo wa iny yaslub humuz zubbabu shai`al laa yastan qizoohu minh; da`ufat taalibu walmatloob
📖 ಕನ್ನಡ ಅರ್ಥ
ಓ ಜನರೇ, ಒಂದು ಉಪಮೆಯನ್ನು ಕೊಡಲಾಗುತ್ತಿದೆ. ಗಮನವಿಟ್ಟು ಕೇಳಿರಿ. ನೀವು ಅಲ್ಲಾಹನನ್ನು ಬಿಟ್ಟು ಯಾರನ್ನು ಕರೆದು ಬೆಡುತ್ತಿರುವಿರೋ ನಿಜವಾಗಿಯೂ ಅವರು ಒಂದು ನೊಣವನ್ನೂ ಸಹ ಸೃಷ್ಟಿಸಲಾರರು. ಅವರೆಲ್ಲರೂ ಅದಕ್ಕೋಸ್ಕರ ಒಟ್ಟು ಸೇರಿದರೂ ಸರಿಯೇ. ಅಷ್ಟೇಕೆ! ನೊಣವು ಅವರಿಂದ ಏನನ್ನಾದರೂ ಕಸಿದು ಕೊಂಡು ಹೋದರೆ ಅವರು ಅದನ್ನು ಅದರಿಂದ ಹಿಂದಕ್ಕೆ ಪಡೆಯಲೂ ಅಶಕ್ತರು. ಬೇಡುವವನೂ ದುರ್ಬಲನು, ಯಾರಿಂದ ಬೇಡಲಾಗುತ್ತಿದೆಯೋ ಅವನೂ ದುರ್ಬಲನು!

🎧 ಆಲಿಸಿ


📜 ಆಯತ್ 71-75 — ಸೂರಾ ಅಲ್-ಹಜ್ಜ್

71وَيَعْبُدُونَ مِن دُونِ اللَّهِ مَا لَمْ يُنَزِّلْ بِهِ سُلْطَانًا وَمَا لَيْسَ لَهُم بِهِ عِلْمٌ ۗ وَمَا لِلظَّالِمِينَ مِن نَّصِيرٍ
ಅವರು ಅಲ್ಲಾಹನನ್ನು ಬಿಟ್ಟು ಅವನು ಅದರ ಬಗ್ಗೆ ಯಾವುದೇ ಪುರಾವೆಯನ್ನು ಇಳಿಸದ ಹಾಗೂ ಅದರ ಕುರಿತು ಸ್ವತಃ ಅವರಿಗೂ ಯಾವ ಜ್ಞಾನವಿಲ್ಲದ ವಸ್ತುಗಳನ್ನು ಆರಾಧಿಸುತ್ತಾರೆ. ಮತ್ತು ಅಕ್ರಮಿಗಳಿಗೆ ಯಾವ ಸಹಾಯಕನೂ ಇರಲಾರನು.
72وَإِذَا تُتْلَىٰ عَلَيْهِمْ آيَاتُنَا بَيِّنَاتٍ تَعْرِفُ فِي وُجُوهِ الَّذِينَ كَفَرُوا الْمُنكَرَ ۖ يَكَادُونَ يَسْطُونَ بِالَّذِينَ يَتْلُونَ عَلَيْهِمْ آيَاتِنَا ۗ قُلْ أَفَأُنَبِّئُكُم بِشَرٍّ مِّن ذَٰلِكُمُ ۗ النَّارُ وَعَدَهَا اللَّهُ الَّذِينَ كَفَرُوا ۖ وَبِئْسَ الْمَصِيرُ
ಅವರ ಮುಂದೆ ನಮ್ಮ ಸುಸ್ಪಷ್ಟವಾದ ಸೂಕ್ತಿಗಳನ್ನು ಓದಿ ಹೇಳಲಾದಾಗ ನೀವು ಸತ್ಯನಿಷೇಧಿಗಳ ಮುಖಗಳು ವಿಕಾರಗೊಳ್ಳುತ್ತಿರುವುದನ್ನು ಕಾಣುವಿರಿ. ಅವರು ನಮ್ಮ ಸೂಕ್ತಿಗಳನ್ನು ಓದಿ ಹೇಳುವವರ ಮೇಲೆ ಮುಗಿಬೀಳಬಹುದು. ಹೇಳಿರಿ: ನಾನು ನಿಮಗೆ ಇದಕ್ಕಿಂತಲೂ ಅತ್ಯಂತ ಕೆಟ್ಟದ್ದಾಗಿರುವುದನ್ನು ತಿಳಿಸಿ ಕೊಡಲೇ? ಅದೇ ನರಕಾಗ್ನಿ! ಅಲ್ಲಾಹನು ಸತ್ಯನಿಷೇಧಿಸಿದವರಿಗೆ ಅದರ ವಾಗ್ದಾನವನ್ನು ಮಾಡಿದ್ದಾನೆ ಮತ್ತು ಅದು ಮರಳುವ ಕೆಟ್ಟ ತಾಣವಾಗಿದೆ.
73يَا أَيُّهَا النَّاسُ ضُرِبَ مَثَلٌ فَاسْتَمِعُوا لَهُ ۚ إِنَّ الَّذِينَ تَدْعُونَ مِن دُونِ اللَّهِ لَن يَخْلُقُوا ذُبَابًا وَلَوِ اجْتَمَعُوا لَهُ ۖ وَإِن يَسْلُبْهُمُ الذُّبَابُ شَيْئًا لَّا يَسْتَنقِذُوهُ مِنْهُ ۚ ضَعُفَ الطَّالِبُ وَالْمَطْلُوبُ
ಓ ಜನರೇ, ಒಂದು ಉಪಮೆಯನ್ನು ಕೊಡಲಾಗುತ್ತಿದೆ. ಗಮನವಿಟ್ಟು ಕೇಳಿರಿ. ನೀವು ಅಲ್ಲಾಹನನ್ನು ಬಿಟ್ಟು ಯಾರನ್ನು ಕರೆದು ಬೆಡುತ್ತಿರುವಿರೋ ನಿಜವಾಗಿಯೂ ಅವರು ಒಂದು ನೊಣವನ್ನೂ ಸಹ ಸೃಷ್ಟಿಸಲಾರರು. ಅವರೆಲ್ಲರೂ ಅದಕ್ಕೋಸ್ಕರ ಒಟ್ಟು ಸೇರಿದರೂ ಸರಿಯೇ. ಅಷ್ಟೇಕೆ! ನೊಣವು ಅವರಿಂದ ಏನನ್ನಾದರೂ ಕಸಿದು ಕೊಂಡು ಹೋದರೆ ಅವರು ಅದನ್ನು ಅದರಿಂದ ಹಿಂದಕ್ಕೆ ಪಡೆಯಲೂ ಅಶಕ್ತರು. ಬೇಡುವವನೂ ದುರ್ಬಲನು, ಯಾರಿಂದ ಬೇಡಲಾಗುತ್ತಿದೆಯೋ ಅವನೂ ದುರ್ಬಲನು!
74مَا قَدَرُوا اللَّهَ حَقَّ قَدْرِهِ ۗ إِنَّ اللَّهَ لَقَوِيٌّ عَزِيزٌ
ಅವರು ಅಲ್ಲಾಹನ ಮಹತ್ವವನ್ನು ಅರಿತುಕೊಳ್ಳಬೇಕಾದ ರೀತಿಯಲ್ಲಿ ಅರಿತುಕೊಳ್ಳಲೇ ಇಲ್ಲ. ನಿಶ್ಚಯವಾಗಿಯೂ ಅಲ್ಲಾಹನು ಮಹಾ ಶಕ್ತಿವಂತನೂ, ಪ್ರಚಂಡನೂ ಆಗಿದ್ದಾನೆ.
75اللَّهُ يَصْطَفِي مِنَ الْمَلَائِكَةِ رُسُلًا وَمِنَ النَّاسِ ۚ إِنَّ اللَّهَ سَمِيعٌ بَصِيرٌ
ಅಲ್ಲಾಹನು ಮಲಕ್‌ಗಳಿಂದಲೂ, ಮನುಷ್ಯರಿಂದಲೂ ಸಂದೇಶವಾಹಕರನ್ನು ಆಯ್ದುಕೊಳ್ಳುತ್ತಾನೆ. ನಿಸ್ಸಂದೇಹವಾಗಿಯು ಅಲ್ಲಾಹನು ಸರ್ವವನ್ನು ಆಲಿಸುವವನು, ಸರ್ವವನ್ನು ನೋಡುವವನು ಆಗಿದ್ದಾನೆ.
ಅಲ್-ಹಜ್ಜ್ಕುರಾನ್ ಸೂಚಿ
78ಆಯತ್
MedinanRevelation
73ಆಯತ್

ಅನುವಾದ — ಅಲ್-ಹಜ್ಜ್ 73

ಸೂರಾ ಅಲ್-ಹಜ್ಜ್ ಆಯತ್ 73 - ಓದಿ, ಆಲಿಸಿ, ಅನುವಾದ, ಕನ್ನಡ : ಓ ಜನರೇ, ಒಂದು ಉಪಮೆಯನ್ನು ಕೊಡಲಾಗುತ್ತಿದೆ. ಗಮನವಿಟ್ಟು ಕೇಳಿರಿ. ನೀವು ಅಲ್ಲಾಹನನ್ನು ಬಿಟ್ಟು…

ಸೂರಾ ಆಯತ್ 73/78 — ಸೂರಾ ಅಲ್-ಹಜ್ಜ್ الحج (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಹಜ್ಜ್ ಆಲಿಸಿ, ಸೂರಾ ಅಲ್-ಹಜ್ಜ್ ಅನುವಾದ, ಸೂರಾ ಅಲ್-ಹಜ್ಜ್ mp3, ಸೂರಾ ಅಲ್-ಹಜ್ಜ್ pdf. ಆಯತ್ 71–75. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers