ಅಲ್-ಹಜ್ಜ್ · 67/78
ಅನುವಾದ ಉಚ್ಚಾರಣೆ — ಸೂರಾ ಅಲ್-ಹಜ್ಜ್
لِّكُلِّ أُمَّةٍ جَعَلْنَا مَنسَكًا هُمْ نَاسِكُوهُ ۖ فَلَا يُنَازِعُنَّكَ فِي الْأَمْرِ ۚ وَادْعُ إِلَىٰ رَبِّكَ ۖ إِنَّكَ لَعَلَىٰ هُدًى مُّسْتَقِيمٍ ۝٦٧
Likulli ummatin ja`alnaa mansakan hum naasikoohu falaa yunaazi `unnaka fil amr; wad`u ilaa Rabbika innaka la `alaa hudam mustaqeem
📖 ಕನ್ನಡ ಅರ್ಥ
ಪ್ರತಿಯೊಂದು ಸಮುದಾಯಕ್ಕೂ ನಾವು ಆರಾಧನ ಕ್ರಮವನ್ನು ನಿಶ್ಚಯಿಸಿದ್ದೇವು ಅವರು ಅದನ್ನು ಪಾಲಿಸುತ್ತಿದ್ದರು. ಇನ್ನು ಇವರು ನಿಮ್ಮೊಂದಿಗೆ ಈ ವಿಚಾರದಲ್ಲಿ ತರ್ಕ ಮಾಡದಿರಲಿ ಮತ್ತು ನೀವು ನಿಮ್ಮ ಪ್ರಭುವಿನ ಕಡೆಗೆ ಕರೆಯಿರಿ. ನಿಸ್ಸಂಶಯವಾಗಿಯೂ ನೀವು ಋಜುವಾದ ಮಾರ್ಗದಲ್ಲಿದ್ದೀರಿ.

🎧 ಆಲಿಸಿ


📜 ಆಯತ್ 65-69 — ಸೂರಾ ಅಲ್-ಹಜ್ಜ್

65أَلَمْ تَرَ أَنَّ اللَّهَ سَخَّرَ لَكُم مَّا فِي الْأَرْضِ وَالْفُلْكَ تَجْرِي فِي الْبَحْرِ بِأَمْرِهِ وَيُمْسِكُ السَّمَاءَ أَن تَقَعَ عَلَى الْأَرْضِ إِلَّا بِإِذْنِهِ ۗ إِنَّ اللَّهَ بِالنَّاسِ لَرَءُوفٌ رَّحِيمٌ
ನಿಶ್ಚಯವಾಗಿಯು ಅಲ್ಲಾಹನು ಭೂಮಿಯಲ್ಲಿರುವುದನ್ನು ಮತ್ತು ಅವನ ಅಪ್ಪಣೆಯಿಂದ ಸಮುದ್ರದಲ್ಲಿ ಸಂಚರಿಸುವ ಹಡಗನ್ನು ನಿಮಗೆ ಅಧೀನಗೊಳಿಸಿದ್ದಾನೆಂದು ನೀವು ನೋಡಲಿಲ್ಲವೇ? ಮತ್ತು ಅವನ ಅನುಮತಿಯ ವಿನಃ ಆಕಾಶವು ಭೂಮಿಯ ಮೇಲೆ ಬೀಳದಂತೆ ಅವನೇ ಆಧರಿಸಿದ್ದಾನೆ ವಾಸ್ತವದಲ್ಲಿ ಅಲ್ಲಾಹನು ಜನರ ಕುರಿತು ಕೃಪಾಳುವು, ಕರುಣಾಮಯಿಯು ಆಗಿದ್ದಾನೆ.
66وَهُوَ الَّذِي أَحْيَاكُمْ ثُمَّ يُمِيتُكُمْ ثُمَّ يُحْيِيكُمْ ۗ إِنَّ الْإِنسَانَ لَكَفُورٌ
ಅವನೇ ನಿಮಗೆ ಜೀವ ನೀಡಿದನು. ನಂತರ ನಿಮ್ಮನ್ನು ಮರಣಗೊಳಿಸುತ್ತಾನೆ. ಅನಂತರ ನಿಮ್ಮನ್ನು (ಪುನಃ) ಜೀವಂತಗೊಳಿಸುವನು. ವಾಸ್ತವದಲ್ಲಿ ಮನುಷ್ಯನು ಕೃತಘ್ನನಾಗಿದ್ದಾನೆ.
67لِّكُلِّ أُمَّةٍ جَعَلْنَا مَنسَكًا هُمْ نَاسِكُوهُ ۖ فَلَا يُنَازِعُنَّكَ فِي الْأَمْرِ ۚ وَادْعُ إِلَىٰ رَبِّكَ ۖ إِنَّكَ لَعَلَىٰ هُدًى مُّسْتَقِيمٍ
ಪ್ರತಿಯೊಂದು ಸಮುದಾಯಕ್ಕೂ ನಾವು ಆರಾಧನ ಕ್ರಮವನ್ನು ನಿಶ್ಚಯಿಸಿದ್ದೇವು ಅವರು ಅದನ್ನು ಪಾಲಿಸುತ್ತಿದ್ದರು. ಇನ್ನು ಇವರು ನಿಮ್ಮೊಂದಿಗೆ ಈ ವಿಚಾರದಲ್ಲಿ ತರ್ಕ ಮಾಡದಿರಲಿ ಮತ್ತು ನೀವು ನಿಮ್ಮ ಪ್ರಭುವಿನ ಕಡೆಗೆ ಕರೆಯಿರಿ. ನಿಸ್ಸಂಶಯವಾಗಿಯೂ ನೀವು ಋಜುವಾದ ಮಾರ್ಗದಲ್ಲಿದ್ದೀರಿ.
68وَإِن جَادَلُوكَ فَقُلِ اللَّهُ أَعْلَمُ بِمَا تَعْمَلُونَ
ಮತ್ತು ಅವರೇನಾದರೂ ನಿಮ್ಮೊಡನೆ ಜಗಳವಾಡಿದರೆ ಹೇಳಿರಿ: ನೀವು ಮಾಡುತ್ತಿರುವುದೆಲ್ಲವನ್ನು ಅಲ್ಲಾಹನು ಚೆನ್ನಾಗಿ ಬಲ್ಲನು.
69اللَّهُ يَحْكُمُ بَيْنَكُمْ يَوْمَ الْقِيَامَةِ فِيمَا كُنتُمْ فِيهِ تَخْتَلِفُونَ
ನಿಸ್ಸಂಶಯವಾಗಿಯೂ ಅಲ್ಲಾಹನು ಪುನರುತ್ಥಾನ ದಿನದಂದು ನೀವು ಭಿನ್ನಾಭಿಪ್ರಾಯ ಹೊಂದಿದ ಸಕಲ ವಿಷಯಗಳ ಬಗ್ಗೆ ನಿಮ್ಮ ನಡುವೆ ತೀರ್ಮಾನ ಮಾಡಲಿದ್ದಾನೆ.
ಅಲ್-ಹಜ್ಜ್ಕುರಾನ್ ಸೂಚಿ
78ಆಯತ್
MedinanRevelation
67ಆಯತ್

ಅನುವಾದ — ಅಲ್-ಹಜ್ಜ್ 67

ಸೂರಾ ಅಲ್-ಹಜ್ಜ್ ಆಯತ್ 67 - ಓದಿ, ಆಲಿಸಿ, ಅನುವಾದ, ಕನ್ನಡ : ಪ್ರತಿಯೊಂದು ಸಮುದಾಯಕ್ಕೂ ನಾವು ಆರಾಧನ ಕ್ರಮವನ್ನು ನಿಶ್ಚಯಿಸಿದ್ದೇವು ಅವರು ಅದನ್ನು ಪಾಲಿಸುತ್ತಿದ್ದರು. ಇನ್ನು…

ಸೂರಾ ಆಯತ್ 67/78 — ಸೂರಾ ಅಲ್-ಹಜ್ಜ್ الحج (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಹಜ್ಜ್ ಆಲಿಸಿ, ಸೂರಾ ಅಲ್-ಹಜ್ಜ್ ಅನುವಾದ, ಸೂರಾ ಅಲ್-ಹಜ್ಜ್ mp3, ಸೂರಾ ಅಲ್-ಹಜ್ಜ್ pdf. ಆಯತ್ 65–69. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers