ಸೂರಾ ಫಾತಿರ್ ಅರೇಬಿಕ್ ಮತ್ತು ಕನ್ನಡ

ಸೂರಾ ಫಾತಿರ್ ಸಂಪೂರ್ಣ ಕನ್ನಡ ಅನುವಾದ, ಉಚ್ಚಾರಣೆ ಮತ್ತು ಆಡಿಯೋ ಪಠಣದೊಂದಿಗೆ ಓದಿ. ಪ್ರತಿ ಆಯತ್‌ನ ಅರ್ಥ. (45 ಆಯತ್ — مكية). ಫಾತಿರ್ ಆಲಿಸಿ, ಫಾತಿರ್ ಅನುವಾದ, ಫಾತಿರ್ mp3, ಫಾತಿರ್ pdf.

ಸೂರಾ ಫಾತಿರ್ ಓದಿ ಮತ್ತು ಆಲಿಸಿ

🎧 ಆಯತ್
M Mishary Rashid Alafasy
M Mahmoud Khalil Al-Husary
A Abdurrahman As-Sudais
M Mohamed Siddiq Al-Minshawi
A Abdul Basit Abdul Samad
A Ali Al-Hudhaify
A Ahmed ibn Ali al-Ajamy
A Abu Bakr Ash-Shaatree
M Muhammad Ayyoub
A Abdullah Basfar
A Abdullah Al-Juhani
M Maher Al Muaiqly
x1
الْحَمْدُ لِلَّهِ فَاطِرِ السَّمَاوَاتِ وَالْأَرْضِ جَاعِلِ الْمَلَائِكَةِ رُسُلًا أُولِي أَجْنِحَةٍ مَّثْنَىٰ وَثُلَاثَ وَرُبَاعَ ۚ يَزِيدُ فِي الْخَلْقِ مَا يَشَاءُ ۚ إِنَّ اللَّهَ عَلَىٰ كُلِّ شَيْءٍ قَدِيرٌ ۝١
📖 ಅನುವಾದ ಆಯತ್ 1
ಸರ್ವಸ್ತುತಿಯು ಅಲ್ಲಾಹನಿಗೇ ಮೀಸಲು ಅವನು ಆಕಾಶಗಳ ಮತ್ತು ಭೂಮಿಯ ಸೃಷ್ಟಿಕರ್ತನು ಎರಡೆರಡು, ಮೂರು ಮೂರು, ನಾಲ್ಕು ನಾಲ್ಕು ರೆಕ್ಕೆಗಳುಳ್ಳ ಮಲಕ್‌ಗಳನ್ನು ತನ್ನ ದೂತರನ್ನಾಗಿ ನಿಶ್ಚಯಿಸಿದ್ದಾನೆ. ಅವನು ಸೃಷ್ಟಿಗಳಲ್ಲಿ ತಾನಿಚ್ಛಿಸಿದ್ದನ್ನು ಹೆಚ್ಚಿಸುತ್ತಾನೆ. ನಿಶ್ಚಯವಾಗಿಯೂ ಅಲ್ಲಾಹನು ಎಲ್ಲಾ ವಸ್ತುಗಳ ಮೇಲೆ ಸಾಮರ್ಥ್ಯವುಳ್ಳವನಾಗಿದ್ದಾನೆ.
مَّا يَفْتَحِ اللَّهُ لِلنَّاسِ مِن رَّحْمَةٍ فَلَا مُمْسِكَ لَهَا ۖ وَمَا يُمْسِكْ فَلَا مُرْسِلَ لَهُ مِن بَعْدِهِ ۚ وَهُوَ الْعَزِيزُ الْحَكِيمُ ۝٢
📖 ಅನುವಾದ ಆಯತ್ 2
ಅಲ್ಲಾಹನು ಜನರಿಗೆ ಯಾವ ಅನುಗ್ರಹವನ್ನು ತೆರೆದುಕೊಡುವನೋ ಅದನ್ನು ತಡೆಯುವವನಾರಿಲ್ಲ ಮತ್ತು ತಡೆ ಹಿಡಿದಿದ್ದನ್ನು ಅದರ ಬಳಿಕ ಅದನ್ನು ತೆರೆÉÉಯುವವನಾರಿಲ್ಲ ಮತ್ತು ಅವನು ಪ್ರಚಂಡನೂ, ಯುಕ್ತಿಪೂರ್ಣನೂ ಆಗಿದ್ದಾನೆ.
يَا أَيُّهَا النَّاسُ اذْكُرُوا نِعْمَتَ اللَّهِ عَلَيْكُمْ ۚ هَلْ مِنْ خَالِقٍ غَيْرُ اللَّهِ يَرْزُقُكُم مِّنَ السَّمَاءِ وَالْأَرْضِ ۚ لَا إِلَٰهَ إِلَّا هُوَ ۖ فَأَنَّىٰ تُؤْفَكُونَ ۝٣
📖 ಅನುವಾದ ಆಯತ್ 3
ಓ ಜನರೇ, ಅಲ್ಲಾಹನು ನಿಮ್ಮ ಮೇಲೆ ಮಾಡಿರುವಂತಹ ಅನುಗ್ರಹವನ್ನು ಸ್ಮರಿಸಿರಿ. ಆಕಾಶದಿಂದಾಗಲಿ, ಭೂಮಿಯಿಂದಾಗಲಿ ನಿಮಗೆ ಜೀವನಾಧಾರ ನೀಡುವಂತಹ ಬೇರೆ ಸೃಷ್ಟಿಕರ್ತನು ಇದ್ದಾನೆಯೇ ? ಅವನ ಹೊರತು ಬೇರೆ ಆರಾಧ್ಯನಿಲ್ಲ. ಹಾಗಿದ್ದೂ ನೀವು ಎತ್ತ ಅಲೆದಾಡಿಸಲಾಗುತ್ತಿರುವಿರಿ.
وَإِن يُكَذِّبُوكَ فَقَدْ كُذِّبَتْ رُسُلٌ مِّن قَبْلِكَ ۚ وَإِلَى اللَّهِ تُرْجَعُ الْأُمُورُ ۝٤
📖 ಅನುವಾದ ಆಯತ್ 4
ಮತ್ತು ಅವರು ನಿಮ್ಮನ್ನು ಸುಳ್ಳಾಗಿಸಿದರೆ ಖಂಡಿತವಾಗಿಯು ನಿಮಗೆ ಮೊದಲು ಅನೇಕ ಸಂದೇಶವಾಹಕರು ಸುಳ್ಳಾಗಿಸಲ್ಪಟ್ಟಿದ್ದಾರೆ. ಸರ್ವ ಕಾರ್ಯಗಳು ಅಲ್ಲಾಹನೆಡೆಗೇ ಮರಳಿಸಲಾಗುತ್ತವೆ.
يَا أَيُّهَا النَّاسُ إِنَّ وَعْدَ اللَّهِ حَقٌّ ۖ فَلَا تَغُرَّنَّكُمُ الْحَيَاةُ الدُّنْيَا ۖ وَلَا يَغُرَّنَّكُم بِاللَّهِ الْغَرُورُ ۝٥
📖 ಅನುವಾದ ಆಯತ್ 5
ಓ ಜನರೇ, ನಿಸ್ಸಂದೇಹವಾಗಿಯು ಅಲ್ಲಾಹನ ವಾಗ್ದಾನವು ಸತ್ಯವಾಗಿದೆ. ಆದುದರಿಂದ ಇಹಲೋಕ ಜೀವನವು ನಿಮ್ಮನ್ನು ವಂಚಿಸದಿರಲಿ ಹಾಗೂ ಮಹಾ ವಂಚಕ ಶÉÊತಾನನು ನಿಮ್ಮನ್ನು ಅಲ್ಲಾಹನ ವಿಷಯದಲ್ಲಿ ವಂಚಿಸದಿರಲಿ.
إِنَّ الشَّيْطَانَ لَكُمْ عَدُوٌّ فَاتَّخِذُوهُ عَدُوًّا ۚ إِنَّمَا يَدْعُو حِزْبَهُ لِيَكُونُوا مِنْ أَصْحَابِ السَّعِيرِ ۝٦
📖 ಅನುವಾದ ಆಯತ್ 6
ಖಂಡಿತವಾಗಿಯೂ ಶÉÊತಾನನು ನಿಮ್ಮ ಶತ್ರುವಾಗಿದ್ದಾನೆ. ಅವನನ್ನು ನೀವು ಶತ್ರುವೆಂದೇ ತಿಳಿಯಿರಿ. ಅವನು ತನ್ನ ಗುಂಪನ್ನು ಅವರು ನರಕ ದವರಲ್ಲಾಗಲೆಂದೇ ಕರೆಯುತ್ತಿದ್ದಾನೆ.
الَّذِينَ كَفَرُوا لَهُمْ عَذَابٌ شَدِيدٌ ۖ وَالَّذِينَ آمَنُوا وَعَمِلُوا الصَّالِحَاتِ لَهُم مَّغْفِرَةٌ وَأَجْرٌ كَبِيرٌ ۝٧
📖 ಅನುವಾದ ಆಯತ್ 7
ಸತ್ಯನಿಷೇಧಿಸಿದವರಿಗೆ ಅತ್ಯುಗ್ರ ಯಾತನೆಯಿದೆ ಮತ್ತು ಸತ್ಯವಿಶ್ವಾಸವಿರಿಸಿ, ಸತ್ಕರ್ಮಗಳನ್ನು ಕÉÊಗೊಂಡವರಿಗೆ ಕ್ಷಮೆ ಹಾಗೂ ಮಹಾ ಪ್ರತಿಫಲವಿದೆ
أَفَمَن زُيِّنَ لَهُ سُوءُ عَمَلِهِ فَرَآهُ حَسَنًا ۖ فَإِنَّ اللَّهَ يُضِلُّ مَن يَشَاءُ وَيَهْدِي مَن يَشَاءُ ۖ فَلَا تَذْهَبْ نَفْسُكَ عَلَيْهِمْ حَسَرَاتٍ ۚ إِنَّ اللَّهَ عَلِيمٌ بِمَا يَصْنَعُونَ ۝٨
📖 ಅನುವಾದ ಆಯತ್ 8
ಯಾರಿಗೆ ಅವನ ದುಷ್ಕರ್ಮವು ಸುಂದರಗೊಳಿಸಲಾಗಿದ್ದು ಕೊನೆಗೆ ಅವನದನ್ನು ಉತ್ತಮವಾಗಿ ಕಾಣುತ್ತಿರುವನೋ (ಅವನು ಸನ್ಮಾರ್ಗ ಪಡೆದವನಂತಾಗುವನೇ?) ಖಂಡಿತವಾಗಿಯು ಅಲ್ಲಾಹನು ತಾನಿಚ್ಛಿಸಿದರವರನ್ನು ಪಥಭ್ರಷ್ಟಗೊಳಿಸುತ್ತಾನೆ ಮತ್ತು ತಾನಿಚ್ಛಿಸಿದವರಿಗೆ ಸನ್ಮಾರ್ಗವನ್ನು ತೋರಿಸಿಕೊಡುತ್ತಾನೆ. ಆದ್ದರಿಂದ ನೀವು ಅವರ ಬಗ್ಗೆ ದು:ಖಿತರಾಗಿ ತಮ್ಮ ಜೀವವನ್ನು ನಾಶಮಾಡಬೇಡಿರಿ. ಅವರು ಮಾಡುತ್ತಿರುವುದರ ಕುರಿತು ಖಂಡಿತವಾಗಿಯು ಅಲ್ಲಾಹನು ಚೆನ್ನಾಗಿ ಬಲ್ಲನು.
وَاللَّهُ الَّذِي أَرْسَلَ الرِّيَاحَ فَتُثِيرُ سَحَابًا فَسُقْنَاهُ إِلَىٰ بَلَدٍ مَّيِّتٍ فَأَحْيَيْنَا بِهِ الْأَرْضَ بَعْدَ مَوْتِهَا ۚ كَذَٰلِكَ النُّشُورُ ۝٩
📖 ಅನುವಾದ ಆಯತ್ 9
ಅಲ್ಲಾಹನು ಮಾರುತಗಳನ್ನು ಕಳುಹಿಸುತ್ತಾನೆ. ಅನಂತರ ಅವುಗಳು ಮೋಡಗಳನ್ನು ಹೊತ್ತು ತರುತ್ತವೆ. ನಾವು ಅದನ್ನು ಒಂದು ನಿರ್ಜೀವ ಭೂಮಿಯೆಡೆಗೆ ಸಾಗಿಸುತ್ತೇವೆ ಮತ್ತು ಅದರ ಮೂಲಕ ಭೂಮಿಯನ್ನು ಅದರ ಮರಣದ ಬಳಿಕ ಜೀವಂತಗೊಳಿಸುತ್ತೇವೆ. ಮತ್ತು ಪುನರುತ್ಥಾನವು ಇದೇ ಪ್ರಕಾರವಾಗಿರುವುದು.
مَن كَانَ يُرِيدُ الْعِزَّةَ فَلِلَّهِ الْعِزَّةُ جَمِيعًا ۚ إِلَيْهِ يَصْعَدُ الْكَلِمُ الطَّيِّبُ وَالْعَمَلُ الصَّالِحُ يَرْفَعُهُ ۚ وَالَّذِينَ يَمْكُرُونَ السَّيِّئَاتِ لَهُمْ عَذَابٌ شَدِيدٌ ۖ وَمَكْرُ أُولَٰئِكَ هُوَ يَبُورُ ۝١٠
📖 ಅನುವಾದ ಆಯತ್ 10
ಯಾರು ಗೌರವವನ್ನು ಬಯಸುತ್ತಾನೋ ಸರ್ವಗೌರವವು ಅಲ್ಲಾಹನಿಗೇ ಮೀಸಲಿದೆ. ಅವನೆಡೆಗೆ ಪವಿತ್ರ ವಚನಗಳು ಏರಿ ಹೋಗುತ್ತವೆ ಮತ್ತು ಸತ್ಕÀರ್ಮವು ಅವುಗಳನ್ನು ಉನ್ನತಕ್ಕೇರಿಸುತ್ತದೆ ಮತ್ತು ಸಂಚುಗಳನ್ನು ಹೊಡುವವರಿಗೆ ಅತ್ಯುಗ್ರ ಯಾತನೆಯಿದೆ ಮತ್ತು ಅವರ ಕುತಂತ್ರವು ನಾಶವಾಗಿ ಹೋಗುವುದು.
وَاللَّهُ خَلَقَكُم مِّن تُرَابٍ ثُمَّ مِن نُّطْفَةٍ ثُمَّ جَعَلَكُمْ أَزْوَاجًا ۚ وَمَا تَحْمِلُ مِنْ أُنثَىٰ وَلَا تَضَعُ إِلَّا بِعِلْمِهِ ۚ وَمَا يُعَمَّرُ مِن مُّعَمَّرٍ وَلَا يُنقَصُ مِنْ عُمُرِهِ إِلَّا فِي كِتَابٍ ۚ إِنَّ ذَٰلِكَ عَلَى اللَّهِ يَسِيرٌ ۝١١
📖 ಅನುವಾದ ಆಯತ್ 11
ಅಲ್ಲಾಹನು ನಿಮ್ಮನ್ನು ಮಣ್ಣಿನಿಂದ ಬಳಿಕ ವೀರ್ಯದಿಂದ ಸೃಷ್ಟಿಸಿರುವವನು. ತರುವಾಯ ನಿಮ್ಮನ್ನು ಜೋಡಿಗಳನ್ನಾಗಿ ನಿಶ್ಚಯಿಸಿದನು ಮತ್ತು ಅವನಿಗೆ ತಿಳಿಯದೇ ಯಾವ ಸ್ತಿçÃಯು ಗರ್ಭ ಧರಿಸುವುದಿಲ್ಲ ಮತ್ತು ಹಡೆಯುವುದಿಲ್ಲ. ಯಾವೊಬ್ಬ ದೀರ್ಘಾಯುಷ್ಯ ನೀಡಲಾದ ಯಾವುದೇ ವ್ಯಕ್ತಿಗೂ ಆಯುಷ್ಯನ್ನು ಹೆಚ್ಚಿಸಲಾಗುವುದಾಗಲಿ ಅಥವಾ ಅವನ ಆಯುಷ್ಯವು ಕಡಿತಗೊಳಿಸುವುದಾಗಲಿ ಎಲ್ಲವೂ ಗ್ರಂಥದಲ್ಲಿ ದಾಖಲಾಗಿದೆ. ನಿಸ್ಸಂದೇಹವಾಗಿಯೂ ಇದು ಅಲ್ಲಾಹನಿಗೆ ಅತ್ಯಂತ ಸುಲಭವಾಗಿದೆ.
وَمَا يَسْتَوِي الْبَحْرَانِ هَٰذَا عَذْبٌ فُرَاتٌ سَائِغٌ شَرَابُهُ وَهَٰذَا مِلْحٌ أُجَاجٌ ۖ وَمِن كُلٍّ تَأْكُلُونَ لَحْمًا طَرِيًّا وَتَسْتَخْرِجُونَ حِلْيَةً تَلْبَسُونَهَا ۖ وَتَرَى الْفُلْكَ فِيهِ مَوَاخِرَ لِتَبْتَغُوا مِن فَضْلِهِ وَلَعَلَّكُمْ تَشْكُرُونَ ۝١٢
📖 ಅನುವಾದ ಆಯತ್ 12
ಮತ್ತು ಆ ಎರಡು ಸಮುದ್ರಗಳು ಸಮಾನವಾಗಿಲ್ಲ. ಅದರಲ್ಲಿ ಒಂದು ಸಿಹಿಯೂ, ದಾಹ ನೀಗಿಸುವಂತಹದು ಮತ್ತು ಕುಡಿಯಲು ರುಚಿಕರ ವಾದುದ್ದಾಗಿದೆ ಮತ್ತೊಂದು ಉಪ್ಪುಕಹಿಯಾದುದ್ದಾಗಿದೆ. ನೀವು ಇವುಗಳೆರಡರಿಂದ ತಾಜಾ ಮಾಂಸವನ್ನು ತಿನ್ನುತ್ತೀರಿ ಮತ್ತು ನೀವು ಧರಿಸುವಂತಹ ಆಭರಣಗಳನ್ನು ಹೊರತೆಗೆಯುತ್ತೀರಿ ಮತ್ತು ಅದರಲ್ಲಿ ಹಡಗುಗಳು ನೀರನ್ನು ಸೀಳುತ್ತಾ ಸಾಗುತ್ತಿರುವುದಾಗಿ ನೀವು ಕಾಣುವಿರಿ. ಇವೆಲ್ಲವೂ ನೀವು ಅವನ ಅನುಗ್ರಹವನ್ನು ಅರಸಲೆಂದೂ ಮತ್ತು ಕೃತಜ್ಞತೆ ತೋರಿಸಲೆಂದಾಗಿದೆ.
يُولِجُ اللَّيْلَ فِي النَّهَارِ وَيُولِجُ النَّهَارَ فِي اللَّيْلِ وَسَخَّرَ الشَّمْسَ وَالْقَمَرَ كُلٌّ يَجْرِي لِأَجَلٍ مُّسَمًّى ۚ ذَٰلِكُمُ اللَّهُ رَبُّكُمْ لَهُ الْمُلْكُ ۚ وَالَّذِينَ تَدْعُونَ مِن دُونِهِ مَا يَمْلِكُونَ مِن قِطْمِيرٍ ۝١٣
📖 ಅನುವಾದ ಆಯತ್ 13
ಅವನು ರಾತ್ರಿಯನ್ನು ಹಗಲಿನೊಳಗೆ ಪ್ರವೇಶಿಸುತ್ತಾನೆ ಮತ್ತು ಹಗಲನ್ನು ರಾತ್ರಿಯೊಳಗೆ ಪ್ರವೇಶಿಸುತ್ತಾನೆ ಮತ್ತು ಅವನು ಸೂರ್ಯನನ್ನು ಚಂದ್ರನನ್ನು ಕಾರ್ಯನಿರತಗೊಳಿಸಿದ್ದಾನೆ. ಪ್ರತಿಯೊಂದೂ ನಿಶ್ಚಿತವಾದ ಅವಧಿಯೆಡೆಗೆ ಸಂಚರಿಸುತ್ತಿದೆ. ಇವನು ಅಲ್ಲಾಹನು ನಿಮ್ಮೆಲ್ಲರ ಪ್ರಭು ಅವನದೇ ಅಧಿಪತ್ಯವಿರುವುದು ಮತ್ತು ನೀವು ಅವನ ಹೊರತು ಕರೆದು ಬೇಡುತ್ತಿರುವವರು ಒಂದು ಖರ್ಜೂರ ಬೀಜದ ಪೊರೆಯ ಒಡೆಯರೂ ಅಲ್ಲ.
إِن تَدْعُوهُمْ لَا يَسْمَعُوا دُعَاءَكُمْ وَلَوْ سَمِعُوا مَا اسْتَجَابُوا لَكُمْ ۖ وَيَوْمَ الْقِيَامَةِ يَكْفُرُونَ بِشِرْكِكُمْ ۚ وَلَا يُنَبِّئُكَ مِثْلُ خَبِيرٍ ۝١٤
📖 ಅನುವಾದ ಆಯತ್ 14
ನೀವು ಅವರನ್ನು ಕರೆದು ಬೇಡುವುದಾದರೆ ನಿಮ್ಮ ಕರೆಯನ್ನು ಅವರು ಆಲಿಸಲಾರರು. ಒಂದು ವೇಳೆ ಅವರು ಆಲಿಸಿದರೂ ನಿಮಗೆ ಓಗೊಡಲಾರರು ಬದಲಾಗಿ ಅವರು ಪ್ರಳಯ ದಿನದಂದು ನಿಮ್ಮ ಈ ಸಹಭಾಗಿತ್ವವನ್ನು ಸ್ಪಷ್ಟವಾಗಿ ನಿರಾಕರಿಸಿ ಬಿಡುವರು ಮತ್ತು ನಿಮಗೆ ಅಲ್ಲಾಹನಂತೆ ಯಾರು ವಿಷಯಗಳನ್ನು ತಿಳಿಸಿಕೊಡಲಾರರು.
۞ يَا أَيُّهَا النَّاسُ أَنتُمُ الْفُقَرَاءُ إِلَى اللَّهِ ۖ وَاللَّهُ هُوَ الْغَنِيُّ الْحَمِيدُ ۝١٥
📖 ಅನುವಾದ ಆಯತ್ 15
ಓ ಜನರೇ, ನೀವು ಅಲ್ಲಾಹನ ಅವಲಂಬಿತರಾಗಿದ್ದೀರಿ ಮತ್ತು ಅಲ್ಲಾಹನು ನಿರಪೇಕ್ಷಕನೂ, ಸ್ತುತ್ಯರ್ಹನೂ ಆಗಿದ್ದಾನೆ.
إِن يَشَأْ يُذْهِبْكُمْ وَيَأْتِ بِخَلْقٍ جَدِيدٍ ۝١٦
📖 ಅನುವಾದ ಆಯತ್ 16
ಅವನು ಇಚ್ಛಿಸಿದರೆ ನಿಮ್ಮನ್ನು ನಾಶಪಡಿಸಿ ಹೊಸ ಸೃಷ್ಟಿಯೊಂದನ್ನು ತರುವನು.
وَمَا ذَٰلِكَ عَلَى اللَّهِ بِعَزِيزٍ ۝١٧
📖 ಅನುವಾದ ಆಯತ್ 17
ಮತ್ತು ಅಲ್ಲಾಹನ ಪಾಲಿಗೆ ಅದು ಕಿಂಚಿತ್ತೂ ಕಷ್ಟವಲ್ಲ.
وَلَا تَزِرُ وَازِرَةٌ وِزْرَ أُخْرَىٰ ۚ وَإِن تَدْعُ مُثْقَلَةٌ إِلَىٰ حِمْلِهَا لَا يُحْمَلْ مِنْهُ شَيْءٌ وَلَوْ كَانَ ذَا قُرْبَىٰ ۗ إِنَّمَا تُنذِرُ الَّذِينَ يَخْشَوْنَ رَبَّهُم بِالْغَيْبِ وَأَقَامُوا الصَّلَاةَ ۚ وَمَن تَزَكَّىٰ فَإِنَّمَا يَتَزَكَّىٰ لِنَفْسِهِ ۚ وَإِلَى اللَّهِ الْمَصِيرُ ۝١٨
📖 ಅನುವಾದ ಆಯತ್ 18
ಪಾಪದ ಹೊರೆ ಹೊರುವ ಯಾವೊಬ್ಬ ವ್ಯಕ್ತಿಯು, ಮತ್ತೊಬ್ಬ ವ್ಯಕ್ತಿಯ ಹೊರೆಯನ್ನು ಹೊರಲಾರನು. ಭಾರ ಹೊತ್ತ ವ್ಯಕ್ತಿಯು ತನ್ನ ಭಾರವನ್ನು ಹೊರಲೆಂದು ಇತರರನ್ನು ಕರೆದರೂ ಅವನು ಆಪ್ತ ಸಂಬAಧಿಕನಾಗಿದ್ದರೂ ಅದರಿಂದ ಅಲ್ಪವನ್ನೂ ಹೊರಲಾರನು. ತಮ್ಮ ಪ್ರಭುವನ್ನು ಅಗೋಚರವಾಗಿ ಯಾರು ಭಯಪಡುತ್ತಾರೋ ಹಾಗೂ ನಮಾಝ್ ಸಂಸ್ಥಾಪಿಸುತ್ತಾರೋ ಅವರನ್ನು ಮಾತ್ರ ನೀವು ಎಚ್ಚರಿಸಬಲ್ಲಿರಾ? ಮತ್ತು ಯಾರು ಪರಿಶುದ್ಧತೆ ಪಡಿಯುತ್ತಾರೋ ಅವರು ಸ್ವತಃ ತನ್ನ ಲಾಭಕ್ಕಾಗಿ ಪರಿಶುದ್ಧಿ ಪಡೆಯುತ್ತಾನೆ. ಕೊನೆಗೆ ಅಲ್ಲಾಹನೆಡೆಗೇ ಮರಳುವಿಕೆ ಇರುವುದು.
وَمَا يَسْتَوِي الْأَعْمَىٰ وَالْبَصِيرُ ۝١٩
📖 ಅನುವಾದ ಆಯತ್ 19
ಕುರುಡನು ಮತ್ತು ದೃಷ್ಟಿಯುಳ್ಳವನು ಸಮಾನರಲ್ಲ.
وَلَا الظُّلُمَاتُ وَلَا النُّورُ ۝٢٠
📖 ಅನುವಾದ ಆಯತ್ 20
ಅಂಧಕಾರಗಳು ಮತ್ತು ಪ್ರಕಾಶವೂ ಸಮಾನವಲ್ಲ.
وَلَا الظِّلُّ وَلَا الْحَرُورُ ۝٢١
📖 ಅನುವಾದ ಆಯತ್ 21
ಮತ್ತು ನೆರಳು ಮತ್ತು ಬಿಸಿಲು ಸಮಾನವಾಗುವುದಿಲ್ಲ.
وَمَا يَسْتَوِي الْأَحْيَاءُ وَلَا الْأَمْوَاتُ ۚ إِنَّ اللَّهَ يُسْمِعُ مَن يَشَاءُ ۖ وَمَا أَنتَ بِمُسْمِعٍ مَّن فِي الْقُبُورِ ۝٢٢
📖 ಅನುವಾದ ಆಯತ್ 22
ಸಜೀವರೂ, ಮೃತರೂ ಸಮಾನರಲ್ಲ. ಖಂಡಿತವಾಗಿಯೂ ಅಲ್ಲಾಹನು ತಾನಿಚ್ಛಿಸಿದವರಿಗೆ ಕೇಳಿಸುತ್ತಾನೆ ಮತ್ತು ನೀವು ಗೋರಿಗಳಲ್ಲಿರುವವರಿಗೆ ಕೇಳಿಸಲಾರಿರಿ.
إِنْ أَنتَ إِلَّا نَذِيرٌ ۝٢٣
📖 ಅನುವಾದ ಆಯತ್ 23
ನೀವು ಕೇವಲ ಒಬ್ಬ ಮುನ್ನೆಚ್ಚರಿಕೆ ನೀಡುವವರು ಮಾತ್ರವಾಗಿರುವಿರಿ.
إِنَّا أَرْسَلْنَاكَ بِالْحَقِّ بَشِيرًا وَنَذِيرًا ۚ وَإِن مِّنْ أُمَّةٍ إِلَّا خَلَا فِيهَا نَذِيرٌ ۝٢٤
📖 ಅನುವಾದ ಆಯತ್ 24
ನಿಶ್ಚಯವಾಗಿಯೂ ನಾವು ನಿಮ್ಮನ್ನು ಸತ್ಯದೊಂದಿಗೆ ಸುವಾರ್ತೆ ಕೊಡುವವರಾಗಿಯೂ, ಮುನ್ನೆಚ್ಚರಿಕೆ ನೀಡುವವರಾಗಿಯೂ ಕಳುಹಿಸಿರುತ್ತೇವೆ ಮತ್ತು ಯಾವೊಬ್ಬ ಮುನ್ನೆಚ್ಚರಿಕೆಗಾರನು ಬಂದಿರದ ಯಾವ ಸಮುದಾಯವೂ ಗತಿಸಿಲ್ಲ.
وَإِن يُكَذِّبُوكَ فَقَدْ كَذَّبَ الَّذِينَ مِن قَبْلِهِمْ جَاءَتْهُمْ رُسُلُهُم بِالْبَيِّنَاتِ وَبِالزُّبُرِ وَبِالْكِتَابِ الْمُنِيرِ ۝٢٥
📖 ಅನುವಾದ ಆಯತ್ 25
ಇನ್ನು ಇವರು ನಿಮ್ಮನ್ನು ಸುಳ್ಳಾಗಿಸುವುದಾದರೆ ನಿಶ್ಚಯವಾಗಿಯೂ ಇವರಿಗಿಂತ ಮುಂಚಿನವರೂ ಸಹ ಸುಳ್ಳಾಗಿಸಿದ್ದಾರೆ. ಅವರೆಡೆಗೆ ಅವರ ಸಂದೇಶವಾಹಕರು ಸುಸ್ಪಷ್ಟ ಪುರಾವೆಗಳನ್ನು ಕಿರುಹೊತ್ತಿಗೆಗಳನ್ನು ಪ್ರಕಾಶ ಬೀರುವ ಗ್ರಂಥಗಳನ್ನು ತಂದಿದ್ದರು.
ثُمَّ أَخَذْتُ الَّذِينَ كَفَرُوا ۖ فَكَيْفَ كَانَ نَكِيرِ ۝٢٦
📖 ಅನುವಾದ ಆಯತ್ 26
ಅನಂತರ ನಾವು ಆ ಸತ್ಯನಿಷೇಧಿಗಳನ್ನು ಹಿಡಿದೆವು. ಆಗ ನನ್ನ ಶಿಕ್ಷೆಯು ಹೇಗಿತ್ತು ?
أَلَمْ تَرَ أَنَّ اللَّهَ أَنزَلَ مِنَ السَّمَاءِ مَاءً فَأَخْرَجْنَا بِهِ ثَمَرَاتٍ مُّخْتَلِفًا أَلْوَانُهَا ۚ وَمِنَ الْجِبَالِ جُدَدٌ بِيضٌ وَحُمْرٌ مُّخْتَلِفٌ أَلْوَانُهَا وَغَرَابِيبُ سُودٌ ۝٢٧
📖 ಅನುವಾದ ಆಯತ್ 27
ಅನಂತರ ನಾವು ಆ ಸತ್ಯನಿಷೇಧಿಗಳನ್ನು ಹಿಡಿದೆವು. ಆಗ ನನ್ನ ಶಿಕ್ಷೆಯು ಹೇಗಿತ್ತು ?
وَمِنَ النَّاسِ وَالدَّوَابِّ وَالْأَنْعَامِ مُخْتَلِفٌ أَلْوَانُهُ كَذَٰلِكَ ۗ إِنَّمَا يَخْشَى اللَّهَ مِنْ عِبَادِهِ الْعُلَمَاءُ ۗ إِنَّ اللَّهَ عَزِيزٌ غَفُورٌ ۝٢٨
📖 ಅನುವಾದ ಆಯತ್ 28
ಇದೇರೀತಿ ಮನುಷ್ಯರಲ್ಲೂ ಪ್ರಾಣಿಗಳಲ್ಲೂ ಹಾಗೂ ಜಾನುವಾರುಗಳಲ್ಲೂ ವಿವಿಧ ಬಣ್ಣಗಳಿವೆ. ಖಂಡಿತವಾಗಿಯು ಜ್ಞಾನವುಳ್ಳ ದಾಸರು ಮಾತ್ರ ಅಲ್ಲಾಹನನ್ನು ಭಯಪಡುತ್ತಾರೆ. ನಿಶ್ಚಯವಾಗಿಯು ಅಲ್ಲಾಹನು ಪ್ರಚಂಡನೂ, ಕ್ಷಮಾಶೀಲನೂ ಆಗಿದ್ದಾನೆ.
إِنَّ الَّذِينَ يَتْلُونَ كِتَابَ اللَّهِ وَأَقَامُوا الصَّلَاةَ وَأَنفَقُوا مِمَّا رَزَقْنَاهُمْ سِرًّا وَعَلَانِيَةً يَرْجُونَ تِجَارَةً لَّن تَبُورَ ۝٢٩
📖 ಅನುವಾದ ಆಯತ್ 29
ನಿಶ್ಚಯವಾಗಿಯು ಯಾರು ಅಲ್ಲಾಹನ ಗ್ರಂಥವನ್ನು ಪಠಿಸುತ್ತಾರೋ, ನಮಾಝ್ ಸಂಸ್ಥಾಪಿಸುತ್ತಾರೋ ಮತ್ತು ನಾವು ಅವರಿಗೆ ದಯಪಾಲಿಸಿದ ಜೀವನಾಧಾರದಿಂದ ರಹಸ್ಯವಾಗಿಯೂ, ಬಹಿರಂಗವಾಗಿಯೂ ಖರ್ಚು ಮಾಡುತ್ತಾರೋ ಅವರು ಎಂದಿಗೂ ನಷ್ಟವಾಗದ ವ್ಯಾಪಾರದ ನಿರೀಕ್ಷೆಯಲ್ಲಿದ್ದಾರೆ.
لِيُوَفِّيَهُمْ أُجُورَهُمْ وَيَزِيدَهُم مِّن فَضْلِهِ ۚ إِنَّهُ غَفُورٌ شَكُورٌ ۝٣٠
📖 ಅನುವಾದ ಆಯತ್ 30
ಇದೇಕೆಂದರೆ ಅಲ್ಲಾಹನು ಅವರ ಪ್ರತಿಫಲಗಳನ್ನು ಪರಿಪೂರ್ಣವಾಗಿ ನೀಡಲೆಂದೂ, ಅವನು ತನ್ನ ಅನುಗ್ರಹದಿಂದ ಅಧಿಕವಾಗಿ ಕೊಡಲೆಂದೂ ಆಗಿರುತ್ತದೆ. ನಿಸ್ಸಂಶಯವಾಗಿಯೂ ಅವನು ಕ್ಷಮಾಶೀಲನೂ, ಮೆಚ್ಚುವವನೂ ಆಗಿದ್ದಾನೆ.
وَالَّذِي أَوْحَيْنَا إِلَيْكَ مِنَ الْكِتَابِ هُوَ الْحَقُّ مُصَدِّقًا لِّمَا بَيْنَ يَدَيْهِ ۗ إِنَّ اللَّهَ بِعِبَادِهِ لَخَبِيرٌ بَصِيرٌ ۝٣١
📖 ಅನುವಾದ ಆಯತ್ 31
ಮತ್ತು ನಾವು ನಿಮ್ಮೆಡೆಗೆ ದಿವ್ಯ ಸಂದೇಶವಾಗಿ ಕಳುಹಿಸಿರುವ ಈ ಗ್ರಂಥವು ಸತ್ಯವಾದುದಾಗಿದೆ. ಇದು ತನ್ನ ಮುಂಚಿನ ಗ್ರಂಥಗಳನ್ನು ದೃಢೀಕರಿಸುತ್ತದೆ. ಖಂಡಿತವಾಗಿಯೂ ಅಲ್ಲಾಹನು ತನ್ನ ದಾಸರ ಕುರಿತು ಸಂಪೂರ್ಣ ಅರಿವುಳ್ಳವನೂ, ಚೆನ್ನಾಗಿ ನೋಡುವವನೂ ಆಗಿದ್ದಾನೆ.
ثُمَّ أَوْرَثْنَا الْكِتَابَ الَّذِينَ اصْطَفَيْنَا مِنْ عِبَادِنَا ۖ فَمِنْهُمْ ظَالِمٌ لِّنَفْسِهِ وَمِنْهُم مُّقْتَصِدٌ وَمِنْهُمْ سَابِقٌ بِالْخَيْرَاتِ بِإِذْنِ اللَّهِ ۚ ذَٰلِكَ هُوَ الْفَضْلُ الْكَبِيرُ ۝٣٢
📖 ಅನುವಾದ ಆಯತ್ 32
ತರುವಾಯ ನಾವು ನಮ್ಮ ದಾಸರ ಪÉÊಕಿ ಆಯ್ದುಕೊಂಡವರಿಗೆ ಈ ಗ್ರಂಥದ ವಾರಿಸುದಾರರಾಗಿ ಮಾಡಿದೆವು. ಅನಂತರ ಅವರಲ್ಲಿ ಕೆಲವರು ತಮ್ಮ ಮೇಲೆಯೇ ಅಕ್ರಮವೆಸಗುವವರು ಮತ್ತು ಅವರಲ್ಲಿ ಕೆಲವರು ಮಧ್ಯಮಾರ್ಗವನ್ನು ಅನುಸರಿಸುವವರು ಹಾಗೂ ಅವರ ಪÉÊಕಿ ಅಲ್ಲಾಹನ ಕೃಪೆಯಿಂದ ಒಳಿತುಗಳಲ್ಲಿ ಧಾವಿಸುವವರೂ ಇದ್ದಾರೆ. ಇದುವೇ ಮಹಾ ಅನುಗ್ರಹವಾಗಿದೆ.
جَنَّاتُ عَدْنٍ يَدْخُلُونَهَا يُحَلَّوْنَ فِيهَا مِنْ أَسَاوِرَ مِن ذَهَبٍ وَلُؤْلُؤًا ۖ وَلِبَاسُهُمْ فِيهَا حَرِيرٌ ۝٣٣
📖 ಅನುವಾದ ಆಯತ್ 33
ಅವರು ಶಾಶ್ವತವಾಗಿ ನೆಲೆಸಲಿಕ್ಕಿರುವ ಸ್ವರ್ಗೋದ್ಯಾನಗಳಲ್ಲಿ ಪ್ರವೇಶಿಸುವರು, ಅವರಿಗೆ ಸ್ವರ್ಣ ಕಂಕಣಗಳನ್ನೂ, ಮುತ್ತುಗಳನ್ನೂ ತೊಡಿಸಲಾಗುವುದು ಹಾಗೂ ಅಲ್ಲಿ ಅವರ ಉಡುಪು ರೇಷ್ಮೆಯದ್ದಾಗಿರುವುದು.
وَقَالُوا الْحَمْدُ لِلَّهِ الَّذِي أَذْهَبَ عَنَّا الْحَزَنَ ۖ إِنَّ رَبَّنَا لَغَفُورٌ شَكُورٌ ۝٣٤
📖 ಅನುವಾದ ಆಯತ್ 34
ಮತ್ತು ಅವರು ಹೇಳುವರು: ನಮ್ಮಿಂದ ದುಃಖವನ್ನು ದೂರೀಕರಿಸಿದ ಅಲ್ಲಾಹನಿಗೇ ಸರ್ವಸ್ತುತಿಯು ಮೀಸಲು ನಿಸ್ಸಂದೇಹವಾಗಿಯು ನಮ್ಮ ಪ್ರಭುವು ಕ್ಷಮಾಶೀಲನೂ, ಮೆಚ್ಚುವವನೂ ಆಗಿದ್ದಾನೆ.
الَّذِي أَحَلَّنَا دَارَ الْمُقَامَةِ مِن فَضْلِهِ لَا يَمَسُّنَا فِيهَا نَصَبٌ وَلَا يَمَسُّنَا فِيهَا لُغُوبٌ ۝٣٥
📖 ಅನುವಾದ ಆಯತ್ 35
ಅವನು ತನ್ನ ಅನುಗ್ರಹದಿಂದ ನಮ್ಮನ್ನು ಶಾಶ್ವತವಾಸದ ಭವನದಲ್ಲಿ ನೆಲೆಗೊಳಿಸಿದನು. ಇಲ್ಲಿ ನಮಗೆ ಯಾವುದೇ ಸಂಕಷ್ಟವಿಲ್ಲ. ಯಾವುದೇ ಆಯಾಸ ಬಾಧಿಸದು.
وَالَّذِينَ كَفَرُوا لَهُمْ نَارُ جَهَنَّمَ لَا يُقْضَىٰ عَلَيْهِمْ فَيَمُوتُوا وَلَا يُخَفَّفُ عَنْهُم مِّنْ عَذَابِهَا ۚ كَذَٰلِكَ نَجْزِي كُلَّ كَفُورٍ ۝٣٦
📖 ಅನುವಾದ ಆಯತ್ 36
ಸತ್ಯನಿಷೇಧಿಗಳಿಗೆ ನರಕಾಗ್ನಿ ಇದೆ. ಅವರು ಸಾಯುವಂತಾಗಲು ಅವರಿಗೆ ಮರಣವನ್ನೂ ವಿಧಿಸಲಾಗದು. ಅವರಿಂದ ನರಕದ ಶಿಕ್ಷೆಯನ್ನೂ ಹಗುರಗೊಳಿಸಲಾಗದು. ಪ್ರತಿಯೊಬ್ಬ ಸತ್ಯನಿಷೇಧಿಗೆ ನಾವು ಇದೇ ಪ್ರಕಾರ ಪ್ರತಿಫಲ ನೀಡುತ್ತೇವೆ.
وَهُمْ يَصْطَرِخُونَ فِيهَا رَبَّنَا أَخْرِجْنَا نَعْمَلْ صَالِحًا غَيْرَ الَّذِي كُنَّا نَعْمَلُ ۚ أَوَلَمْ نُعَمِّرْكُم مَّا يَتَذَكَّرُ فِيهِ مَن تَذَكَّرَ وَجَاءَكُمُ النَّذِيرُ ۖ فَذُوقُوا فَمَا لِلظَّالِمِينَ مِن نَّصِيرٍ ۝٣٧
📖 ಅನುವಾದ ಆಯತ್ 37
ಮತ್ತು ಅವರು ಅದರಲ್ಲಿ ಕಿರುಚಾಡುವರು: ನಮ್ಮ ಪ್ರಭು, ನಮ್ಮನ್ನು ಹೊರತೆಗೆ, ನಾವು ಹಿಂದೆ ಎಸಗುತ್ತಿದ್ದಂತಹ ಕರ್ಮಗಳಿಗೆ ವಿರುದ್ಧವಾದ ಸತ್ಕರ್ಮವನ್ನು ಕÉÊಗೊಳ್ಳುವೆವು. (ಆಗ ಅಲ್ಲಾಹನು ಹೇಳುವನು) ತಿಳಿಯುವವರಿಗೆ ತಿಳಿದುಕೊಳ್ಳುವಷ್ಟು ಕಾಲ ನಾವು ನಿಮಗೆ ಆಯುಸ್ಸು ನೀಡಿರಲಿಲ್ಲವೇ? ಹಾಗೂ ನಿಮ್ಮೆಡೆಗೆ ಮುನ್ನೆಚ್ಚರಿಕೆಗಾರನೂ ಬಂದಿದ್ದನು. ಆದ್ದರಿಂದ ಈಗ ಸವಿಯಿರಿ. ಅಕ್ರಮಿಗಳಿಗೆ ಯಾವ ಸಹಾಯಕರೂ ಇರಲಾರರು.
إِنَّ اللَّهَ عَالِمُ غَيْبِ السَّمَاوَاتِ وَالْأَرْضِ ۚ إِنَّهُ عَلِيمٌ بِذَاتِ الصُّدُورِ ۝٣٨
📖 ಅನುವಾದ ಆಯತ್ 38
ನಿಸ್ಸಂಶಯವಾಗಿಯು ಅಲ್ಲಾಹನು ಆಕಾಶಗಳ ಮತ್ತು ಭೂಮಿಯ ಅಗೋಚರ ಜ್ಞಾನಿಯಾಗಿದ್ದಾನೆ. ನಿಸ್ಸಂದೇಹವಾಗಿಯು ಅವನು ಹೃದಯದ ಅಂತರಾಳದ ವಿಚಾರಗಳ ಅರಿವುಳ್ಳವನಾಗಿದ್ದಾನೆ.
هُوَ الَّذِي جَعَلَكُمْ خَلَائِفَ فِي الْأَرْضِ ۚ فَمَن كَفَرَ فَعَلَيْهِ كُفْرُهُ ۖ وَلَا يَزِيدُ الْكَافِرِينَ كُفْرُهُمْ عِندَ رَبِّهِمْ إِلَّا مَقْتًا ۖ وَلَا يَزِيدُ الْكَافِرِينَ كُفْرُهُمْ إِلَّا خَسَارًا ۝٣٩
📖 ಅನುವಾದ ಆಯತ್ 39
ಅವನೇ ನಿಮ್ಮನ್ನು ಭೂಮಿಯಲ್ಲಿ ಉತ್ತರಾಧಿಕಾರಿಗಳನ್ನಾಗಿ ನಿಶ್ಚಯಿಸಿದನು. ಇನ್ನು ಯಾರು ಸತ್ಯನಿಷೇಧಿಸುತ್ತಾನೋ ಅವನ ಸತ್ಯನಿಷೇಧದ ಫಲವು ಅವನ ಮೇಲೆಯೇ ಇರುವುದು ಮತ್ತು ಸತ್ಯನಿಷೇಧಿಗಳಿಗೆ ಅವರ ಸತ್ಯನಿಷೇಧವು ಅವರ ಪ್ರಭುವಿನ ಬಳಿ ಕ್ರೋಧವನ್ನೇ ಹೆಚ್ಚಿಸುವುದು.
قُلْ أَرَأَيْتُمْ شُرَكَاءَكُمُ الَّذِينَ تَدْعُونَ مِن دُونِ اللَّهِ أَرُونِي مَاذَا خَلَقُوا مِنَ الْأَرْضِ أَمْ لَهُمْ شِرْكٌ فِي السَّمَاوَاتِ أَمْ آتَيْنَاهُمْ كِتَابًا فَهُمْ عَلَىٰ بَيِّنَتٍ مِّنْهُ ۚ بَلْ إِن يَعِدُ الظَّالِمُونَ بَعْضُهُم بَعْضًا إِلَّا غُرُورًا ۝٤٠
📖 ಅನುವಾದ ಆಯತ್ 40
ಹೇಳಿರಿ: ನೀವು ಅಲ್ಲಾಹನನ್ನು ಬಿಟ್ಟು ಪೂಜಿಸುತ್ತಿರುವಂತಹ ನಿಮ್ಮ ಸಹಭಾಗಿ ದೇವರುಗಳನ್ನು ಕಂಡಿದ್ದೀರಾ ? ಅವರು ಭೂಮಿಯಲ್ಲಿ ಯಾವುದನ್ನು( ಯಾವ ಭಾಗವನ್ನು) ಸೃಷ್ಟಿಸಿದ್ದಾರೆಂದು ನೀವು ನನಗೆ ತೋರಿಸಿಕೊಡಿರಿ ಅಥವಾ ಅವರಿಗೆ ಆಕಾಶಗಳಲ್ಲೇನಾದರೂ ಪಾಲುದಾರಿಕೆಯುಂಟೇ ? ಅಥವಾ ನಾವು ಅವರಿಗೆ ಯಾವುದಾದರೂ ಗ್ರಂಥವನ್ನು ದಯಪಾಲಿಸಿ ಅದರಲ್ಲಿ ಅವರಿಗೆ ದೇವಸಹಭಾಗಿತ್ವದ ಆಧಾರವೇನಾದರೂ ಇದೆಯೇ ? ಇಲ್ಲ ! ಈ ಅಕ್ರಮಿಗಳು ಪರಸ್ಪರರಿಗೆ ವಂಚನೆಯ ಮಾತುಗಳ ವಾಗ್ದಾನವನ್ನೇ ನೀಡುತ್ತಾರೆ.
۞ إِنَّ اللَّهَ يُمْسِكُ السَّمَاوَاتِ وَالْأَرْضَ أَن تَزُولَا ۚ وَلَئِن زَالَتَا إِنْ أَمْسَكَهُمَا مِنْ أَحَدٍ مِّن بَعْدِهِ ۚ إِنَّهُ كَانَ حَلِيمًا غَفُورًا ۝٤١
📖 ಅನುವಾದ ಆಯತ್ 41
ವಾಸ್ತವ ವಿಚಾರವೇನೆಂದರೆ ಅಲ್ಲಾಹನೇ ಆಕಾಶಗಳನ್ನೂ, ಭೂಮಿಯನ್ನೂ ಅವೆರಡೂ ಕದಲದಂತೆ ಆಧರಿಸಿ ಹಿಡಿದಿದ್ದಾನೆ ಮತ್ತು ಅವು ಕದಲಿದರೆ ಅವನ ಹೊರತು ಅವುಗಳನ್ನು ಆಧರಿಸಿ ಹಿಡಿಯುವವನಾರೂ ಇಲ್ಲ. ಅವನು ಸಹನಾಶೀಲನೂ, ಕ್ಷಮಾಶೀಲನೂ ಆಗಿದ್ದಾನೆ.
وَأَقْسَمُوا بِاللَّهِ جَهْدَ أَيْمَانِهِمْ لَئِن جَاءَهُمْ نَذِيرٌ لَّيَكُونُنَّ أَهْدَىٰ مِنْ إِحْدَى الْأُمَمِ ۖ فَلَمَّا جَاءَهُمْ نَذِيرٌ مَّا زَادَهُمْ إِلَّا نُفُورًا ۝٤٢
📖 ಅನುವಾದ ಆಯತ್ 42
ಮಕ್ಕಾದ ಬಹುದೇವಾರಾಧಕರು ತಮ್ಮ ಬಳಿ ಓರ್ವ ಮುನ್ನೆಚ್ಚರಿಕೆಗಾರನು ಬರುತ್ತಿದ್ದರೆ. ನಾವು ಇತರ ಸಮುದಾಯಗಳಿಗಿಂತಲೂ ಹೆಚ್ಚು ಸನ್ಮಾರ್ಗ ಪಡೆದವರಾಗುತ್ತಿದ್ದೆವು ಎಂದು ಅಲ್ಲಾಹನ ಹೆಸರಿನಲ್ಲಿ ದೃಢ ಪ್ರತಿಜ್ಞೆ ಕÉÊಗೊಂಡಿದ್ದರು. ಆದರೆ ಅವರ ಬಳಿ ಮುನ್ನೆಚ್ಚರಿಕೆಗಾರನು ಬಂದಾಗ ಅದು ಅವರ ತಿರಸ್ಕಾರದ ಹೊರತು ಬೇರೇನನ್ನೂ ಹೆಚ್ಚಿಸಲಿಲ್ಲ.
اسْتِكْبَارًا فِي الْأَرْضِ وَمَكْرَ السَّيِّئِ ۚ وَلَا يَحِيقُ الْمَكْرُ السَّيِّئُ إِلَّا بِأَهْلِهِ ۚ فَهَلْ يَنظُرُونَ إِلَّا سُنَّتَ الْأَوَّلِينَ ۚ فَلَن تَجِدَ لِسُنَّتِ اللَّهِ تَبْدِيلًا ۖ وَلَن تَجِدَ لِسُنَّتِ اللَّهِ تَحْوِيلًا ۝٤٣
📖 ಅನುವಾದ ಆಯತ್ 43
ಭೂಮಿಯಲ್ಲಿ ಅಹಂಭಾವ ತೋರಿಸುತ್ತಿದ್ದುದರ ನಿಮಿತ್ತ, ಅವರ ದುಷ್ಟ ತಂತ್ರಗಳ ನಿಮಿತ್ತ ಆ ದುಷ್ಟ ತಂತ್ರಗಳ ವಿಪತ್ತು ಅವರ ಮೇಲೆಯೇ ಎರಗಿಬಿಡುತ್ತದೆ. ಅವರು ಪೂರ್ವಿಕರೊಂದಿಗೆ ಜಾರಿಯಲ್ಲಿದ್ದ ಕ್ರಮವನ್ನು ನಿರೀಕ್ಷಿಸುತ್ತಿದ್ದಾರೆ. ನೀವು ಅಲ್ಲಾಹನ ಕ್ರಮದಲ್ಲಿ ಯಾವುದೇ ಬದಲಾವಣೆಯನ್ನೂ ಕಾಣಲಾರಿರಿ ಮತ್ತು ನೀವು ಅಲ್ಲಾಹನ ಕ್ರಮದಲ್ಲಿ ಯಾವುದೇ ಮಾರ್ಪಾಡನ್ನೂ ಕಾಣಲಾರಿರಿ.
أَوَلَمْ يَسِيرُوا فِي الْأَرْضِ فَيَنظُرُوا كَيْفَ كَانَ عَاقِبَةُ الَّذِينَ مِن قَبْلِهِمْ وَكَانُوا أَشَدَّ مِنْهُمْ قُوَّةً ۚ وَمَا كَانَ اللَّهُ لِيُعْجِزَهُ مِن شَيْءٍ فِي السَّمَاوَاتِ وَلَا فِي الْأَرْضِ ۚ إِنَّهُ كَانَ عَلِيمًا قَدِيرًا ۝٤٤
📖 ಅನುವಾದ ಆಯತ್ 44
ಅವರು ಭೂಮಿಯಲ್ಲಿ ಸಂಚರಿಸಿ ತಮಗಿಂತ ಮುಂಚಿನವರ ಪರಿಣಾಮವು ಹೇಗಾಯಿತೆಂಬುದನ್ನು ನೋಡಲಿಲ್ಲವೇ ? ವಸ್ತುತಃ ಅವರು ಶಕ್ತಿ ಸಾಮರ್ಥ್ಯದಲ್ಲಿ ಅವರಿಗಿಂತ ಬಲಶಾಲಿಗಳಾಗಿದ್ದರು ಮತ್ತು ಆಕಾಶಗಳಲ್ಲಾಗಲಿ, ಭೂಮಿಯಲ್ಲಾಗಲಿ ಅಲ್ಲಾಹನನ್ನು ಸೋಲಿಸಬಲ್ಲ ಯಾವ ವಸ್ತುವೂ ಇಲ್ಲ. ನಿಶ್ಚಯವಾಗಿಯೂ ಅವನು ಸರ್ವಜ್ಞನೂ, ಸರ್ವ ಸಮರ್ಥನೂ ಆಗಿದ್ದಾನೆ.
وَلَوْ يُؤَاخِذُ اللَّهُ النَّاسَ بِمَا كَسَبُوا مَا تَرَكَ عَلَىٰ ظَهْرِهَا مِن دَابَّةٍ وَلَٰكِن يُؤَخِّرُهُمْ إِلَىٰ أَجَلٍ مُّسَمًّى ۖ فَإِذَا جَاءَ أَجَلُهُمْ فَإِنَّ اللَّهَ كَانَ بِعِبَادِهِ بَصِيرًا ۝٤٥
📖 ಅನುವಾದ ಆಯತ್ 45
ಮತ್ತು ಅಲ್ಲಾಹನು ಜನರನ್ನು ಅವರ ಕರ್ಮಗಳ ನಿಮಿತ್ತ ಹಿಡಿದಿದ್ದರೆ ಭೂಮಿಯ ಮೇಲೆ ಯಾವ ಜೀವಿಯನ್ನೂ ಬಿಡುತ್ತಿರಲಿಲ್ಲ. ಆದರೆ ಅವನು ಅವರನ್ನು ಒಂದು ನಿಶ್ಚಿತ ಅವಧಿಯವರೆಗೆ ಕಾಲಾವಕಾಶ ನೀಡುವನು. ಅನಂತರ ಅವರ ಅವಧಿಯು ಬಂದಾಗ ಖಂಡಿತವಾಗಿಯೂ ಅಲ್ಲಾಹನು ತನ್ನ ದಾಸರನ್ನು ನೋಡಿಕೊಳ್ಳುವನು.
← 34 ಫಾತಿರ್ (35/114) 36 →
ಓದಿ ಸೂರಾ ಫಾತಿರ್ ಕನ್ನಡ ಅನುವಾದ – ಪಠಣ ಮತ್ತು ಆಡಿಯೋ

35فاطر Fatir 📚 45 ಆಯತ್ مكية

ಆಯತ್‌ವಾರು – ಸೂರಾ ಫಾತಿರ್ — 45 ಆಯತ್




ಪವಿತ್ರ ಕುರಾನ್


Tuesday, September 8, 2026

Don't forget us in your sincere prayers