ಫಾತಿರ್ · 11/45
ಅನುವಾದ ಉಚ್ಚಾರಣೆ — ಸೂರಾ ಫಾತಿರ್
وَاللَّهُ خَلَقَكُم مِّن تُرَابٍ ثُمَّ مِن نُّطْفَةٍ ثُمَّ جَعَلَكُمْ أَزْوَاجًا ۚ وَمَا تَحْمِلُ مِنْ أُنثَىٰ وَلَا تَضَعُ إِلَّا بِعِلْمِهِ ۚ وَمَا يُعَمَّرُ مِن مُّعَمَّرٍ وَلَا يُنقَصُ مِنْ عُمُرِهِ إِلَّا فِي كِتَابٍ ۚ إِنَّ ذَٰلِكَ عَلَى اللَّهِ يَسِيرٌ ۝١١
Wallaahu khalaqakum min turaabin summa min nutfatin summa ja`alakum azwaajaa; wa maa tahmilu min unsaa wa laa tada`u illaa bi`ilmih; wa maa yu`ammaru mim mu`ammarinw wa laa yunqasu min `umuriheee illaa fee kitaab; inna zaalika `alal laahi yaseer
📖 ಕನ್ನಡ ಅರ್ಥ
ಅಲ್ಲಾಹನು ನಿಮ್ಮನ್ನು ಮಣ್ಣಿನಿಂದ ಬಳಿಕ ವೀರ್ಯದಿಂದ ಸೃಷ್ಟಿಸಿರುವವನು. ತರುವಾಯ ನಿಮ್ಮನ್ನು ಜೋಡಿಗಳನ್ನಾಗಿ ನಿಶ್ಚಯಿಸಿದನು ಮತ್ತು ಅವನಿಗೆ ತಿಳಿಯದೇ ಯಾವ ಸ್ತಿçÃಯು ಗರ್ಭ ಧರಿಸುವುದಿಲ್ಲ ಮತ್ತು ಹಡೆಯುವುದಿಲ್ಲ. ಯಾವೊಬ್ಬ ದೀರ್ಘಾಯುಷ್ಯ ನೀಡಲಾದ ಯಾವುದೇ ವ್ಯಕ್ತಿಗೂ ಆಯುಷ್ಯನ್ನು ಹೆಚ್ಚಿಸಲಾಗುವುದಾಗಲಿ ಅಥವಾ ಅವನ ಆಯುಷ್ಯವು ಕಡಿತಗೊಳಿಸುವುದಾಗಲಿ ಎಲ್ಲವೂ ಗ್ರಂಥದಲ್ಲಿ ದಾಖಲಾಗಿದೆ. ನಿಸ್ಸಂದೇಹವಾಗಿಯೂ ಇದು ಅಲ್ಲಾಹನಿಗೆ ಅತ್ಯಂತ ಸುಲಭವಾಗಿದೆ.

🎧 ಆಲಿಸಿ


📜 ಆಯತ್ 9-13 — ಸೂರಾ ಫಾತಿರ್

9وَاللَّهُ الَّذِي أَرْسَلَ الرِّيَاحَ فَتُثِيرُ سَحَابًا فَسُقْنَاهُ إِلَىٰ بَلَدٍ مَّيِّتٍ فَأَحْيَيْنَا بِهِ الْأَرْضَ بَعْدَ مَوْتِهَا ۚ كَذَٰلِكَ النُّشُورُ
ಅಲ್ಲಾಹನು ಮಾರುತಗಳನ್ನು ಕಳುಹಿಸುತ್ತಾನೆ. ಅನಂತರ ಅವುಗಳು ಮೋಡಗಳನ್ನು ಹೊತ್ತು ತರುತ್ತವೆ. ನಾವು ಅದನ್ನು ಒಂದು ನಿರ್ಜೀವ ಭೂಮಿಯೆಡೆಗೆ ಸಾಗಿಸುತ್ತೇವೆ ಮತ್ತು ಅದರ ಮೂಲಕ ಭೂಮಿಯನ್ನು ಅದರ ಮರಣದ ಬಳಿಕ ಜೀವಂತಗೊಳಿಸುತ್ತೇವೆ. ಮತ್ತು ಪುನರುತ್ಥಾನವು ಇದೇ ಪ್ರಕಾರವಾಗಿರುವುದು.
10مَن كَانَ يُرِيدُ الْعِزَّةَ فَلِلَّهِ الْعِزَّةُ جَمِيعًا ۚ إِلَيْهِ يَصْعَدُ الْكَلِمُ الطَّيِّبُ وَالْعَمَلُ الصَّالِحُ يَرْفَعُهُ ۚ وَالَّذِينَ يَمْكُرُونَ السَّيِّئَاتِ لَهُمْ عَذَابٌ شَدِيدٌ ۖ وَمَكْرُ أُولَٰئِكَ هُوَ يَبُورُ
ಯಾರು ಗೌರವವನ್ನು ಬಯಸುತ್ತಾನೋ ಸರ್ವಗೌರವವು ಅಲ್ಲಾಹನಿಗೇ ಮೀಸಲಿದೆ. ಅವನೆಡೆಗೆ ಪವಿತ್ರ ವಚನಗಳು ಏರಿ ಹೋಗುತ್ತವೆ ಮತ್ತು ಸತ್ಕÀರ್ಮವು ಅವುಗಳನ್ನು ಉನ್ನತಕ್ಕೇರಿಸುತ್ತದೆ ಮತ್ತು ಸಂಚುಗಳನ್ನು ಹೊಡುವವರಿಗೆ ಅತ್ಯುಗ್ರ ಯಾತನೆಯಿದೆ ಮತ್ತು ಅವರ ಕುತಂತ್ರವು ನಾಶವಾಗಿ ಹೋಗುವುದು.
11وَاللَّهُ خَلَقَكُم مِّن تُرَابٍ ثُمَّ مِن نُّطْفَةٍ ثُمَّ جَعَلَكُمْ أَزْوَاجًا ۚ وَمَا تَحْمِلُ مِنْ أُنثَىٰ وَلَا تَضَعُ إِلَّا بِعِلْمِهِ ۚ وَمَا يُعَمَّرُ مِن مُّعَمَّرٍ وَلَا يُنقَصُ مِنْ عُمُرِهِ إِلَّا فِي كِتَابٍ ۚ إِنَّ ذَٰلِكَ عَلَى اللَّهِ يَسِيرٌ
ಅಲ್ಲಾಹನು ನಿಮ್ಮನ್ನು ಮಣ್ಣಿನಿಂದ ಬಳಿಕ ವೀರ್ಯದಿಂದ ಸೃಷ್ಟಿಸಿರುವವನು. ತರುವಾಯ ನಿಮ್ಮನ್ನು ಜೋಡಿಗಳನ್ನಾಗಿ ನಿಶ್ಚಯಿಸಿದನು ಮತ್ತು ಅವನಿಗೆ ತಿಳಿಯದೇ ಯಾವ ಸ್ತಿçÃಯು ಗರ್ಭ ಧರಿಸುವುದಿಲ್ಲ ಮತ್ತು ಹಡೆಯುವುದಿಲ್ಲ. ಯಾವೊಬ್ಬ ದೀರ್ಘಾಯುಷ್ಯ ನೀಡಲಾದ ಯಾವುದೇ ವ್ಯಕ್ತಿಗೂ ಆಯುಷ್ಯನ್ನು ಹೆಚ್ಚಿಸಲಾಗುವುದಾಗಲಿ ಅಥವಾ ಅವನ ಆಯುಷ್ಯವು ಕಡಿತಗೊಳಿಸುವುದಾಗಲಿ ಎಲ್ಲವೂ ಗ್ರಂಥದಲ್ಲಿ ದಾಖಲಾಗಿದೆ. ನಿಸ್ಸಂದೇಹವಾಗಿಯೂ ಇದು ಅಲ್ಲಾಹನಿಗೆ ಅತ್ಯಂತ ಸುಲಭವಾಗಿದೆ.
12وَمَا يَسْتَوِي الْبَحْرَانِ هَٰذَا عَذْبٌ فُرَاتٌ سَائِغٌ شَرَابُهُ وَهَٰذَا مِلْحٌ أُجَاجٌ ۖ وَمِن كُلٍّ تَأْكُلُونَ لَحْمًا طَرِيًّا وَتَسْتَخْرِجُونَ حِلْيَةً تَلْبَسُونَهَا ۖ وَتَرَى الْفُلْكَ فِيهِ مَوَاخِرَ لِتَبْتَغُوا مِن فَضْلِهِ وَلَعَلَّكُمْ تَشْكُرُونَ
ಮತ್ತು ಆ ಎರಡು ಸಮುದ್ರಗಳು ಸಮಾನವಾಗಿಲ್ಲ. ಅದರಲ್ಲಿ ಒಂದು ಸಿಹಿಯೂ, ದಾಹ ನೀಗಿಸುವಂತಹದು ಮತ್ತು ಕುಡಿಯಲು ರುಚಿಕರ ವಾದುದ್ದಾಗಿದೆ ಮತ್ತೊಂದು ಉಪ್ಪುಕಹಿಯಾದುದ್ದಾಗಿದೆ. ನೀವು ಇವುಗಳೆರಡರಿಂದ ತಾಜಾ ಮಾಂಸವನ್ನು ತಿನ್ನುತ್ತೀರಿ ಮತ್ತು ನೀವು ಧರಿಸುವಂತಹ ಆಭರಣಗಳನ್ನು ಹೊರತೆಗೆಯುತ್ತೀರಿ ಮತ್ತು ಅದರಲ್ಲಿ ಹಡಗುಗಳು ನೀರನ್ನು ಸೀಳುತ್ತಾ ಸಾಗುತ್ತಿರುವುದಾಗಿ ನೀವು ಕಾಣುವಿರಿ. ಇವೆಲ್ಲವೂ ನೀವು ಅವನ ಅನುಗ್ರಹವನ್ನು ಅರಸಲೆಂದೂ ಮತ್ತು ಕೃತಜ್ಞತೆ ತೋರಿಸಲೆಂದಾಗಿದೆ.
13يُولِجُ اللَّيْلَ فِي النَّهَارِ وَيُولِجُ النَّهَارَ فِي اللَّيْلِ وَسَخَّرَ الشَّمْسَ وَالْقَمَرَ كُلٌّ يَجْرِي لِأَجَلٍ مُّسَمًّى ۚ ذَٰلِكُمُ اللَّهُ رَبُّكُمْ لَهُ الْمُلْكُ ۚ وَالَّذِينَ تَدْعُونَ مِن دُونِهِ مَا يَمْلِكُونَ مِن قِطْمِيرٍ
ಅವನು ರಾತ್ರಿಯನ್ನು ಹಗಲಿನೊಳಗೆ ಪ್ರವೇಶಿಸುತ್ತಾನೆ ಮತ್ತು ಹಗಲನ್ನು ರಾತ್ರಿಯೊಳಗೆ ಪ್ರವೇಶಿಸುತ್ತಾನೆ ಮತ್ತು ಅವನು ಸೂರ್ಯನನ್ನು ಚಂದ್ರನನ್ನು ಕಾರ್ಯನಿರತಗೊಳಿಸಿದ್ದಾನೆ. ಪ್ರತಿಯೊಂದೂ ನಿಶ್ಚಿತವಾದ ಅವಧಿಯೆಡೆಗೆ ಸಂಚರಿಸುತ್ತಿದೆ. ಇವನು ಅಲ್ಲಾಹನು ನಿಮ್ಮೆಲ್ಲರ ಪ್ರಭು ಅವನದೇ ಅಧಿಪತ್ಯವಿರುವುದು ಮತ್ತು ನೀವು ಅವನ ಹೊರತು ಕರೆದು ಬೇಡುತ್ತಿರುವವರು ಒಂದು ಖರ್ಜೂರ ಬೀಜದ ಪೊರೆಯ ಒಡೆಯರೂ ಅಲ್ಲ.
ಫಾತಿರ್ಕುರಾನ್ ಸೂಚಿ
45ಆಯತ್
MeccanRevelation
11ಆಯತ್

ಅನುವಾದ — ಫಾತಿರ್ 11

ಸೂರಾ ಫಾತಿರ್ ಆಯತ್ 11 - ಓದಿ, ಆಲಿಸಿ, ಅನುವಾದ, ಕನ್ನಡ : ಅಲ್ಲಾಹನು ನಿಮ್ಮನ್ನು ಮಣ್ಣಿನಿಂದ ಬಳಿಕ ವೀರ್ಯದಿಂದ ಸೃಷ್ಟಿಸಿರುವವನು. ತರುವಾಯ ನಿಮ್ಮನ್ನು ಜೋಡಿಗಳನ್ನಾಗಿ ನಿಶ್ಚಯಿಸಿದನು…

ಸೂರಾ ಆಯತ್ 11/45 — ಸೂರಾ ಫಾತಿರ್ فاطر (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಫಾತಿರ್ ಆಲಿಸಿ, ಸೂರಾ ಫಾತಿರ್ ಅನುವಾದ, ಸೂರಾ ಫಾತಿರ್ mp3, ಸೂರಾ ಫಾತಿರ್ pdf. ಆಯತ್ 9–13. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers