📖 0/604 ಓದಿದ ಪುಟಗಳು
📄 496
ಸೂರಾ ಅದ್-ದುಖಾನ್

ಸೂರಾ ಅದ್-ದುಖಾನ್

44:3
إِنَّآ أَنزَلۡنَٰهُ فِي لَيۡلَةٍ مُّبَٰرَكَةٍۚ إِنَّا كُنَّا مُنذِرِينَ ٣
ನಿಶ್ಚಯವಾಗಿಯು ನಾವು ಇದನ್ನು ಒಂದು ಸಮೃದ್ಧಪೂರ್ಣರಾತ್ರಿಯಲ್ಲಿ ಅವತೀರ್ಣಗೊಳಿಸಿರುತ್ತೇವೆ. ನಿಸ್ಸಂಶಯ ವಾಗಿಯು ನಾವು ಜನರನ್ನು ಮುನ್ನೆಚ್ಚರಿಕೆ ನೀಡುವವರಾಗಿದ್ದೇವೆ.
44:4
فِيهَا يُفۡرَقُ كُلُّ أَمۡرٍ حَكِيمٍ ٤
ಆ ರಾತ್ರಿಯಲ್ಲಿ ನಮ್ಮ ಅಪ್ಪಣೆಯಿಂದ ಯುಕ್ತಿಪೂರ್ಣವಾದ ಸಕಲ ವಿಷಯಗಳನ್ನು ಬೇರ್ಪಡಿಸಿ ವಿವರಿಸಲಾಗುವುದು.
44:5
أَمۡرًا مِّنۡ عِندِنَآۚ إِنَّا كُنَّا مُرۡسِلِينَ ٥
ಅದು ನಮ್ಮ ತೀರ್ಮಾನವಾಗಿರುತ್ತದೆ ಖಂಡಿತವಾಗಿಯೂ ಸಂದೇಶವಾಹಕರನ್ನು ಕಳುಹಿಸುವವರು ನಾವೇ ಆಗಿರುತ್ತೇವೆ.
44:6
رَحۡمَةً مِّن رَّبِّكَۚ إِنَّهُۥ هُوَ ٱلسَّمِيعُ ٱلۡعَلِيمُ ٦
ಇದು ನಿಮ್ಮ ಪ್ರಭುವಿನ ಕೃಪೆಯಿಂದಾಗಿದೆ. ನಿಸ್ಸಂದೇಹವಾಗಿಯೂ ಅವನು ಸರ್ವವನ್ನು ಆಲಿಸುವವನು ಮತ್ತು ಎಲ್ಲವನ್ನು ಅರಿಯುವವನಾಗಿದ್ದಾನೆ.
44:7
رَبِّ ٱلسَّمَٰوَٰتِ وَٱلۡأَرۡضِ وَمَا بَيۡنَهُمَآۖ إِن كُنتُم مُّوقِنِينَ ٧
ಅವನು ಆಕಾಶಗಳ ಮತ್ತು ಭೂಮಿಯ ಹಾಗೂ ಅವುಗಳ ನಡುವೆಯಿರುವ ಸಕಲ ವಸ್ತುಗಳ ಪ್ರಭುವಾಗಿದ್ದಾನೆ. ನೀವು ನಂಬುವವರಾಗಿದ್ದರೆ.
44:8
لَآ إِلَٰهَ إِلَّا هُوَ يُحۡيِۦ وَيُمِيتُۖ رَبُّكُمۡ وَرَبُّ ءَابَآئِكُمُ ٱلۡأَوَّلِينَ ٨
ಅವನ ಹೊರತು ಅನ್ಯಆರಾಧ್ಯರಿಲ್ಲ. ಅವನೇ ಜೀವಂತಗೊಳಿಸುತ್ತಾನೆ ಮತ್ತು ಮರಣ ನೀಡುತ್ತಾನೆ. ಅವನೇ ನಿಮ್ಮ ಮತ್ತು ನಿಮ್ಮ ಪೂರ್ವಿಕರಾದ ತಂದೆತಾತAದಿರ ಪ್ರಭುವು.
44:10
فَٱرۡتَقِبۡ يَوۡمَ تَأۡتِي ٱلسَّمَآءُ بِدُخَانٍ مُّبِينٍ ١٠
ಆದ್ದರಿಂದ ಆಕಾಶವು ಸ್ಪಷ್ಟವಾದ ಧೂಮವನ್ನು ತರುವ ದಿನವನ್ನು ನೀವು ನಿರೀಕ್ಷಿಸಿರಿ.
44:11
يَغۡشَى ٱلنَّاسَۖ هَٰذَا عَذَابٌ أَلِيمٌ ١١
ಅದು ಜನರನ್ನು ಆವರಿಸಿ ಕೊಳ್ಳುವುದು. ಇದೊಂದು ವೇದನಾಜನಕ ಯಾತನೆಯಾಗಿದೆ.
44:12
رَّبَّنَا ٱكۡشِفۡ عَنَّا ٱلۡعَذَابَ إِنَّا مُؤۡمِنُونَ ١٢
ಅವರು ಹೇಳುವರು: ನಮ್ಮ ಪ್ರಭು, ನಮ್ಮಿಂದ ಈ ಯಾತನೆಯನ್ನು ಸರಿಸಿಬಿಡು. ನಾವು ವಿಶ್ವಾಸಿಗಳಾಗುವೆವು.
44:13
أَنَّىٰ لَهُمُ ٱلذِّكۡرَىٰ وَقَدۡ جَآءَهُمۡ رَسُولٌ مُّبِينٌ ١٣
ಅವರಿಗೆ ಉದ್ಬೋಧೆಯು ಎಲ್ಲಿದೆ? ಅವರ ಬಳಿಗೆ ಸುಸ್ಪಷ್ಟವಾಗಿ ವಿವರಿಸುವಒಬ್ಬ ಸಂದೇಶವಾಹಕರು ಬಂದಿದ್ದರು.
44:14
ثُمَّ تَوَلَّوۡاْ عَنۡهُ وَقَالُواْ مُعَلَّمٌ مَّجۡنُونٌ ١٤
ಹಾಗಿದ್ದೂ ಅವರು ಆತನಿಂದ ವಿಮುಖರಾಗಿ ಬಿಟ್ಟರು ಮತ್ತು ಇವನೊಬ್ಬ ಕಲಿಸಲ್ಪಟ್ಟ ಹುಚ್ಚನಾಗಿದ್ದಾನೆ ಎಂದು ಹೇಳಿದರು.
44:15
إِنَّا كَاشِفُواْ ٱلۡعَذَابِ قَلِيلًاۚ إِنَّكُمۡ عَآئِدُونَ ١٥
ಖಂಡಿತವಾಗಿಯು ನಾವು ಯಾತನೆಯನ್ನು ಸ್ವಲ್ಪ ಕಾಲ ಸರಿಸಿ ಬಿಡುವೆವು. ಆದರೆ ನೀವು ಅದೇ ಹಿಂದಿನ ಸ್ಥಿತಿಗೆ ಮರಳುವಿರಿ.
44:16
يَوۡمَ نَبۡطِشُ ٱلۡبَطۡشَةَ ٱلۡكُبۡرَىٰٓ إِنَّا مُنتَقِمُونَ ١٦
ನಾವು ಅತ್ಯುಗ್ರವಾಗಿ ಹಿಡಿಯುವ ದಿನದಂದು ಖಂಡಿತವಾಗಿಯು ನಾವು ಪ್ರತಿಕಾರ ಪಡೆಯುವವರಿದ್ದೇವೆ.
44:17
۞ وَلَقَدۡ فَتَنَّا قَبۡلَهُمۡ قَوۡمَ فِرۡعَوۡنَ وَجَآءَهُمۡ رَسُولٌ كَرِيمٌ ١٧
ನಿಶ್ಚಯವಾಗಿಯು ನಾವು ಇವರಿಗಿಂತ ಮುಂಚೆ ಫಿರ್‌ಔನನ ಜನರನ್ನು ಪರೀಕ್ಷಿಸಿದ್ದೆವು. ಮತ್ತು ಅವರ ಬಳಿ ಒಬ್ಬ ಸನ್ಮಾನ್ಯ ಸಂದೇಶವಾಹಕರು ಬಂದಿದ್ದರು.
44:18
أَنۡ أَدُّوٓاْ إِلَيَّ عِبَادَ ٱللَّهِۖ إِنِّي لَكُمۡ رَسُولٌ أَمِينٌ ١٨
ನೀವು ಅಲ್ಲಾಹನ ದಾಸರನ್ನು ನನ್ನ ವಶಕ್ಕೊಪ್ಪಿಸಿರಿ. ಖಂಡಿತವಾಗಿಯು ನಾನು ನಿಮಗೆ ಒಬ್ಬ ನಂಬಿಗಸ್ಥ ಸಂದೇಶವಾಹಕನಾಗಿದ್ದೇನೆ. (ಎಂದು ಹೇಳಿದ್ದರು).
العربيةEnglishBahasa IndonesiaTürkçeРусскийفارسیFrançaisاردوবাংলাDeutschEspañol中文हिन्दीPortuguêsItalianoภาษาไทยPolskiNederlandsShqipKiswahiliO'zbekதமிழ்MelayuBosanskiSoomaaliAzərbaycanکوردی한국어日本語SvenskaDanskNorskپښتوമലയാളംසිංහලTamazightHausaአማርኛБългарскиТоҷикӣҚазақшаFilipinoسنڌيYorùbáFulfuldeТатарчаئۇيغۇرچەКыргызчаਪੰਜਾਬੀJawaతెలుగుမြန်မာગુજરાતીOromoमराठीTiếng ViệtMalagasyНохчийнWolofދިވެހިಕನ್ನಡУкраїнськаΕλληνικάქართულიខ្មែរدریQafar afMaranaoनेपाली
ಪವಿತ್ರ ಕುರಾನ್
Sunday, August 30, 2026
Don't forget us in your sincere prayers







