ಸೂರಾ ನೂಹ್ ಅರೇಬಿಕ್ ಮತ್ತು ಕನ್ನಡ
ಸೂರಾ ನೂಹ್ ಸಂಪೂರ್ಣ ಕನ್ನಡ ಅನುವಾದ, ಉಚ್ಚಾರಣೆ ಮತ್ತು ಆಡಿಯೋ ಪಠಣದೊಂದಿಗೆ ಓದಿ. ಪ್ರತಿ ಆಯತ್‌ನ ಅರ್ಥ. (28 ಆಯತ್ — مكية). ನೂಹ್ ಆಲಿಸಿ, ನೂಹ್ ಅನುವಾದ, ನೂಹ್ mp3, ನೂಹ್ pdf.ಸೂರಾ ನೂಹ್ ಓದಿ ಮತ್ತು ಆಲಿಸಿ
🎧 ಆಯತ್
M
Mishary Rashid Alafasy
✓
Mishary Rashid Alafasy
✓
M
Mahmoud Khalil Al-Husary
✓
Mahmoud Khalil Al-Husary
✓
A
Abdurrahman As-Sudais
✓
Abdurrahman As-Sudais
✓
M
Mohamed Siddiq Al-Minshawi
✓
Mohamed Siddiq Al-Minshawi
✓
A
Abdul Basit Abdul Samad
✓
Abdul Basit Abdul Samad
✓
A
Ali Al-Hudhaify
✓
Ali Al-Hudhaify
✓
A
Ahmed ibn Ali al-Ajamy
✓
Ahmed ibn Ali al-Ajamy
✓
A
Abu Bakr Ash-Shaatree
✓
Abu Bakr Ash-Shaatree
✓
M
Muhammad Ayyoub
✓
Muhammad Ayyoub
✓
A
Abdullah Basfar
✓
Abdullah Basfar
✓
A
Abdullah Al-Juhani
✓
Abdullah Al-Juhani
✓
M
Maher Al Muaiqly
✓
Maher Al Muaiqly
✓
—
x1
إِنَّا أَرْسَلْنَا نُوحًا إِلَىٰ قَوْمِهِ أَنْ أَنذِرْ قَوْمَكَ مِن قَبْلِ أَن يَأْتِيَهُمْ عَذَابٌ أَلِيمٌ ١
📖 ಅನುವಾದ
ಆಯತ್ 1
ಖಂಡಿತವಾಗಿಯೂ ನಾವು ನೂಹ್ರನ್ನು ಅವರ ಜನಾಂಗದೆಡೆಗೆ ನೀವು ತಮ್ಮ ಜನತೆಗೆ ವೇದನಾಜನಕ ಶಿಕ್ಷೆಯು ಅವರ ಬಳಿ ಬರುವ ಮೊದಲು ಎಚ್ಚರಿಕೆ ನೀಡಿರಿ ಎಂಬ ಸಂದೇಶದೊಂದಿಗೆ ಕಳುಹಿಸಿದೆವು.
قَالَ يَا قَوْمِ إِنِّي لَكُمْ نَذِيرٌ مُّبِينٌ ٢
📖 ಅನುವಾದ
ಆಯತ್ 2
ನೂಹ್ರವರು ಹೇಳಿದರು; ಓ ನನ್ನ ಜನಾಂಗದವರೇ ನಾನು ನಿಮಗೆ ಸುಸ್ಪಷ್ಟ ಮುನ್ನೆಚ್ಚರಿಕೆ ಕೊಡುವವನಾಗಿದ್ದೇನೆ.
أَنِ اعْبُدُوا اللَّهَ وَاتَّقُوهُ وَأَطِيعُونِ ٣
📖 ಅನುವಾದ
ಆಯತ್ 3
ನೀವು ಅಲ್ಲಾಹನನ್ನು ಆರಾಧಿಸಿರಿ ಮತ್ತು ಅವನನ್ನೇ ಭಯಪಡಿರಿ ಹಾಗು ನನ್ನನ್ನು ಅನುಸರಿಸಿರಿ.
يَغْفِرْ لَكُم مِّن ذُنُوبِكُمْ وَيُؤَخِّرْكُمْ إِلَىٰ أَجَلٍ مُّسَمًّى ۚ إِنَّ أَجَلَ اللَّهِ إِذَا جَاءَ لَا يُؤَخَّرُ ۖ لَوْ كُنتُمْ تَعْلَمُونَ ٤
📖 ಅನುವಾದ
ಆಯತ್ 4
ಹಾಗಿದ್ದರೆ ಅವನು ನಿಮ್ಮ ಪಾಪಗಳನ್ನು ಕ್ಷಮಿಸುವನು, ಮತ್ತು ನಿಶ್ಚಿತ ಅವಧಿಯವರೆಗೆ ನಿಮಗೆ ಕಾಲಾವಕಾಶ ನೀಡುವನು. ಖಂಡಿತವಾಗಿಯೂ ಅಲ್ಲಾಹನ ಅವಧಿಯು ಬಂದರೆ ಅದು ಮುಂದೂಡಲಾಗದು, ನೀವು ಅರಿಯುತ್ತಿದ್ದರೆ!
قَالَ رَبِّ إِنِّي دَعَوْتُ قَوْمِي لَيْلًا وَنَهَارًا ٥
📖 ಅನುವಾದ
ಆಯತ್ 5
ನೂಹ್ರರು ಹೇಳಿದರು; ಖಂಡಿತವಾಗಿಯೂ ನನ್ನ ಪ್ರಭೂ, ನಾನು ನನ್ನ ಜನತೆಯನ್ನು ರಾತ್ರಿ ಹಗಲೆನ್ನದೆ ಕರೆದೆನು.
فَلَمْ يَزِدْهُمْ دُعَائِي إِلَّا فِرَارًا ٦
📖 ಅನುವಾದ
ಆಯತ್ 6
ಆದರೆ ನನ್ನ ಕರೆಯು ಅವರ ಪಲಾಯನವನ್ನೇ ಹೆಚ್ಚಿಸಿತು,
وَإِنِّي كُلَّمَا دَعَوْتُهُمْ لِتَغْفِرَ لَهُمْ جَعَلُوا أَصَابِعَهُمْ فِي آذَانِهِمْ وَاسْتَغْشَوْا ثِيَابَهُمْ وَأَصَرُّوا وَاسْتَكْبَرُوا اسْتِكْبَارًا ٧
📖 ಅನುವಾದ
ಆಯತ್ 7
ನೀನು ಅವರನ್ನು ಕ್ಷಮಿಸಲೆಂದು ನಾನು ಅವರನ್ನು ಕರೆದಾಗಲೆಲ್ಲಾ ಅವರು ತಮ್ಮ ಬೆರಳುಗಳನ್ನು ತಮ್ಮ ಕಿವಿಗಳೊಳಗೆ ತೂರಿಸಿದರು ಮತ್ತು ತಮ್ಮ ಉಡುಪುಗಳನ್ನು ಹೊದ್ದುಕೊಂಡರು, ಮತ್ತು ಅಸತ್ಯದಲ್ಲಿ ಹಠಸಾಧಿಸಿ ನಿಂತರು ಮಾತ್ರವಲ್ಲದೇ ಮಹಾ ಅಹಂಕಾರವನ್ನು ತೋರಿದರು.
ثُمَّ إِنِّي دَعَوْتُهُمْ جِهَارًا ٨
📖 ಅನುವಾದ
ಆಯತ್ 8
ತರುವಾಯ ನಾನು ಅವರನ್ನು ಉಚ್ಛಸ್ವರದೊಂದಿಗೆ ಆಹ್ವಾನಿಸಿದೆನು.
ثُمَّ إِنِّي أَعْلَنتُ لَهُمْ وَأَسْرَرْتُ لَهُمْ إِسْرَارًا ٩
📖 ಅನುವಾದ
ಆಯತ್ 9
ಮತ್ತು ನಿಸ್ಸಂದೇಹವಾಗಿಯೂ ನಾನು ಅವರಿಗೆ ಬಹಿರಂಗವಾಗಿಯು, ರಹಸ್ಯವಾಗಿಯು ಹೇಳಿದೆನು.
فَقُلْتُ اسْتَغْفِرُوا رَبَّكُمْ إِنَّهُ كَانَ غَفَّارًا ١٠
📖 ಅನುವಾದ
ಆಯತ್ 10
ಹಾಗು ನಾನು ಹೇಳಿದೆನು; ನೀವು ನಿಮ್ಮ ಪ್ರಭುವಿನೊಡನೆ ಕ್ಷಮೆ ಯಾಚಿಸಿರಿ, ಖಂಡಿತವಾಗಿಯು ಅವನು ಮಹಾ ಕ್ಷಮಾಶೀಲನಾಗಿದ್ದಾನೆ.
يُرْسِلِ السَّمَاءَ عَلَيْكُم مِّدْرَارًا ١١
📖 ಅನುವಾದ
ಆಯತ್ 11
ಹಾಗಾದರೆ ಅವನು ನಿಮ್ಮ ಮೇಲೆ ಆಕಾಶದಿಂದ ಧಾರಾಕಾರವಾಗಿ ಮಳೆ ಸುರಿಸುವನು.
وَيُمْدِدْكُم بِأَمْوَالٍ وَبَنِينَ وَيَجْعَل لَّكُمْ جَنَّاتٍ وَيَجْعَل لَّكُمْ أَنْهَارًا ١٢
📖 ಅನುವಾದ
ಆಯತ್ 12
ಸೊತ್ತು ಮತ್ತು ಸಂತಾನಗಳ ಮೂಲಕ ಅವನು ನಿಮಗೆ ನೆರವು ನೀಡುವನು, ಮತ್ತು ನಿಮಗೆ ತೋಟಗಳನ್ನು ಕರುಣಿಸುವನು ಹಾಗೂ ನಿಮಗಾಗಿ ಕಾಲುವೆಗಳನ್ನು ಹರಿಸುವನು.
مَّا لَكُمْ لَا تَرْجُونَ لِلَّهِ وَقَارًا ١٣
📖 ಅನುವಾದ
ಆಯತ್ 13
ನಿಮಗೇನಾಗಿಬಿಟ್ಟಿದೆ ? ನೀವು ಅಲ್ಲಾಹನ ಮಹಿಮೆಯಲ್ಲಿ ವಿಶ್ವಾಸವಿರಿಸುವುದಿಲ್ಲವೇಕೆ ?
وَقَدْ خَلَقَكُمْ أَطْوَارًا ١٤
📖 ಅನುವಾದ
ಆಯತ್ 14
ವಸ್ತುತಃ ಅವನು ನಿಮ್ಮನ್ನು ವಿವಿಧ ಹಂತಗಳಲ್ಲಿ ಸೃಷ್ಟಿಸಿರುವನು.
أَلَمْ تَرَوْا كَيْفَ خَلَقَ اللَّهُ سَبْعَ سَمَاوَاتٍ طِبَاقًا ١٥
📖 ಅನುವಾದ
ಆಯತ್ 15
ಅಲ್ಲಾಹನು ಏಳು ಆಕಾಶಗಳನ್ನು ಅಂತಸ್ತುಗಳಾಗಿ ಸೃಷ್ಟಿಸಿದ್ದಾನೆಂಬುದನ್ನು ನೀವು ನೋಡುವುದಿಲ್ಲವೇ ?
وَجَعَلَ الْقَمَرَ فِيهِنَّ نُورًا وَجَعَلَ الشَّمْسَ سِرَاجًا ١٦
📖 ಅನುವಾದ
ಆಯತ್ 16
ಅವುಗಳಲ್ಲಿ ಅವನು ಚಂದ್ರನನ್ನು ಹೊಳೆಯುವುದನ್ನಾಗಿಯು, ಸರ‍್ಯನನ್ನು ಒಂದು ಪ್ರಕಾಶಮಯ ದೀಪವನ್ನಾಗಿ ಉಂಟು ಮಾಡಿದನು.
وَاللَّهُ أَنبَتَكُم مِّنَ الْأَرْضِ نَبَاتًا ١٧
📖 ಅನುವಾದ
ಆಯತ್ 17
ಅಲ್ಲಾಹನು ನಿಮ್ಮನ್ನು ಭೂಮಿಯಿಂದ ಸಸ್ಯಗಳಂತೆ (ವಿಶೇಷರೀತಿಯಲ್ಲಿ) ಬೆಳೆಸಿದನು
ثُمَّ يُعِيدُكُمْ فِيهَا وَيُخْرِجُكُمْ إِخْرَاجًا ١٨
📖 ಅನುವಾದ
ಆಯತ್ 18
ತರುವಾಯ ಅವನು ನಿಮ್ಮನ್ನು ಅದರಲ್ಲೇ ಮರಳಿಸುವನು ಮತ್ತು ಪುನಃ ಅದರಿಂದಲೇ ಹೊರತರುವನು.
وَاللَّهُ جَعَلَ لَكُمُ الْأَرْضَ بِسَاطًا ١٩
📖 ಅನುವಾದ
ಆಯತ್ 19
ಅಲ್ಲಾಹನು ನಿಮಗಾಗಿ ಭೂಮಿಯನ್ನು ಹಾಸನ್ನಾಗಿ ಮಾಡಿರುವನು,
لِّتَسْلُكُوا مِنْهَا سُبُلًا فِجَاجًا ٢٠
📖 ಅನುವಾದ
ಆಯತ್ 20
ಏಕೆಂದರೆ, ನೀವು ಅದರ ವಿಶಾಲವಾಗಿರುವ ಮರ‍್ಗಗಳಲ್ಲಿ ಸಂಚರಿಸಲೆಂದಾಗಿದೆ.
قَالَ نُوحٌ رَّبِّ إِنَّهُمْ عَصَوْنِي وَاتَّبَعُوا مَن لَّمْ يَزِدْهُ مَالُهُ وَوَلَدُهُ إِلَّا خَسَارًا ٢١
📖 ಅನುವಾದ
ಆಯತ್ 21
ನೂಹ್ರವರು ಹೇಳಿದರು, ಓ ನನ್ನ ಪ್ರಭೂ, ಅವರು ನನ್ನನ್ನು ಧಿಕ್ಕರಿಸಿದರು, ಹಾಗು ಯಾರ ಸಂಪತ್ತು ಮತ್ತು ಸಂತಾನವು ಅವರಿಗೆ ನಷ್ಟವನ್ನೇ ಹೆಚ್ಚಿಸಿದೆಯೋ ಅಂತಹವರನ್ನು ಅವರು ಅನುಸರಿಸಿದರು.
وَقَالُوا لَا تَذَرُنَّ آلِهَتَكُمْ وَلَا تَذَرُنَّ وَدًّا وَلَا سُوَاعًا وَلَا يَغُوثَ وَيَعُوقَ وَنَسْرًا ٢٣
📖 ಅನುವಾದ
ಆಯತ್ 23
ಅವರು ಹೇಳಿದರು; ನೀವು ಎಂದಿಗೂ ನಿಮ್ಮ ಆರಾಧ್ಯರನ್ನು ಬಿಡಬೇಡಿರಿ, ವದ್ದ್ನನ್ನಾಗಲಿ, ಸುವಾಅï, ಯಗೂಸ್, ಯಊಕ್, ನಸ್ರ‍್ರÀನ್ನಾಗಲಿ (ಬಿಡದಿರಿ).
وَقَدْ أَضَلُّوا كَثِيرًا ۖ وَلَا تَزِدِ الظَّالِمِينَ إِلَّا ضَلَالًا ٢٤
📖 ಅನುವಾದ
ಆಯತ್ 24
ಅವರು (ಆ ವಿಗ್ರಹಗಳು) ಅನೇಕ ಜನರನ್ನು ದಾರಿಗೆಡಿಸಿದ್ದಾರೆ, ನೀನು ಆ ಅಕ್ರಮಿಗಳಿಗೆ ಮರ‍್ಗಭ್ರಷ್ಟತೆಯನ್ನಲ್ಲದೇ ಇನ್ನೇನನ್ನೂ ಹೆಚ್ಚಿಸಬೇಡ.
مِّمَّا خَطِيئَاتِهِمْ أُغْرِقُوا فَأُدْخِلُوا نَارًا فَلَمْ يَجِدُوا لَهُم مِّن دُونِ اللَّهِ أَنصَارًا ٢٥
📖 ಅನುವಾದ
ಆಯತ್ 25
ಅವರು ತಮ್ಮಪಾಪಗಳ ನಿಮಿತ್ತ ಮುಳುಗಿಸಲ್ಪಟ್ಟರು, ಮತ್ತು ನರಕಾಗ್ನಿಗೆ ತಲುಪಿಸಲ್ಪಟ್ಟರು ಅನಂತರ ಅಲ್ಲಾಹನ ಹೊರತು ಅವರಿಗೆ ತಮ್ಮ ಸಹಾಯಕರಾಗಿ ಯಾರೂ ಸಿಗಲಿಲ್ಲ.
وَقَالَ نُوحٌ رَّبِّ لَا تَذَرْ عَلَى الْأَرْضِ مِنَ الْكَافِرِينَ دَيَّارًا ٢٦
📖 ಅನುವಾದ
ಆಯತ್ 26
ನೂಹ್ರವರು ಹೇಳಿದರು; ನನ್ನ ಪ್ರಭು, ಭೂಮುಖದ ಮೇಲೆ ಯಾವೊಬ್ಬ ಸತ್ಯನಿಷೇಧಿಯನ್ನೂ ಬಿಡಬೇಡ.
إِنَّكَ إِن تَذَرْهُمْ يُضِلُّوا عِبَادَكَ وَلَا يَلِدُوا إِلَّا فَاجِرًا كَفَّارًا ٢٧
📖 ಅನುವಾದ
ಆಯತ್ 27
ಖಂಡಿತ ನೀನು ಅವರನ್ನು ಹಾಗೇ ಬಿಟ್ಟರೆ ಅವರು ನಿನ್ನ ದಾಸರನ್ನು ದಾರಿಗೆಡಿಸುವರು ಮುಂದೆ ಅವರು ಸತ್ಯನಿಷೇಧಿಗಳಾದ ದುರಾಚಾರಿಗಳನ್ನೇ ಜನ್ಮನೀಡುವರು.
رَّبِّ اغْفِرْ لِي وَلِوَالِدَيَّ وَلِمَن دَخَلَ بَيْتِيَ مُؤْمِنًا وَلِلْمُؤْمِنِينَ وَالْمُؤْمِنَاتِ وَلَا تَزِدِ الظَّالِمِينَ إِلَّا تَبَارًا ٢٨
📖 ಅನುವಾದ
ಆಯತ್ 28
ನನ್ನ ಪ್ರಭೂ, ನೀನು ನನ್ನನ್ನು ನನ್ನ ಮಾತಾಪಿತರನ್ನು ಸತ್ಯವಿಶ್ವಾಸಿಯಾಗಿ ನನ್ನ ಮನೆಯನ್ನು ಪ್ರವೇಶಿಸಿದ ಪ್ರತಿಯೊಬ್ಬನನ್ನು ಮತ್ತು ಸಕಲ ಸತ್ಯವಿಶ್ವಾಸಿ ಹಾಗು ಸತ್ಯವಿಶ್ವಾಸಿನಿಯರನ್ನು ಕ್ಷಮಿಸಿಬಿಡು. ಮತ್ತು ಸತ್ಯನಿಷೇಧಿಗಳಿಗೆ ನಾಶದ ಹೊರತು ಇನ್ನೇನನ್ನೂ ಹೆಚ್ಚಿಸದಿರು.
ಓದಿ ಸೂರಾ ನೂಹ್ ಕನ್ನಡ ಅನುವಾದ – ಪಠಣ ಮತ್ತು ಆಡಿಯೋ
ಪವಿತ್ರ ಕುರಾನ್
Monday, September 7, 2026
Don't forget us in your sincere prayers

