ಸೂರಾ ಅಲ್-ಜಿನ್ನ್ ಅರೇಬಿಕ್ ಮತ್ತು ಕನ್ನಡ
ಸೂರಾ ಅಲ್-ಜಿನ್ನ್ ಸಂಪೂರ್ಣ ಕನ್ನಡ ಅನುವಾದ, ಉಚ್ಚಾರಣೆ ಮತ್ತು ಆಡಿಯೋ ಪಠಣದೊಂದಿಗೆ ಓದಿ. ಪ್ರತಿ ಆಯತ್‌ನ ಅರ್ಥ. (28 ಆಯತ್ — مكية). ಅಲ್-ಜಿನ್ನ್ ಆಲಿಸಿ, ಅಲ್-ಜಿನ್ನ್ ಅನುವಾದ, ಅಲ್-ಜಿನ್ನ್ mp3, ಅಲ್-ಜಿನ್ನ್ pdf.ಸೂರಾ ಅಲ್-ಜಿನ್ನ್ ಓದಿ ಮತ್ತು ಆಲಿಸಿ
🎧 ಆಯತ್
M
Mishary Rashid Alafasy
✓
Mishary Rashid Alafasy
✓
M
Mahmoud Khalil Al-Husary
✓
Mahmoud Khalil Al-Husary
✓
A
Abdurrahman As-Sudais
✓
Abdurrahman As-Sudais
✓
M
Mohamed Siddiq Al-Minshawi
✓
Mohamed Siddiq Al-Minshawi
✓
A
Abdul Basit Abdul Samad
✓
Abdul Basit Abdul Samad
✓
A
Ali Al-Hudhaify
✓
Ali Al-Hudhaify
✓
A
Ahmed ibn Ali al-Ajamy
✓
Ahmed ibn Ali al-Ajamy
✓
A
Abu Bakr Ash-Shaatree
✓
Abu Bakr Ash-Shaatree
✓
M
Muhammad Ayyoub
✓
Muhammad Ayyoub
✓
A
Abdullah Basfar
✓
Abdullah Basfar
✓
A
Abdullah Al-Juhani
✓
Abdullah Al-Juhani
✓
M
Maher Al Muaiqly
✓
Maher Al Muaiqly
✓
—
x1
قُلْ أُوحِيَ إِلَيَّ أَنَّهُ اسْتَمَعَ نَفَرٌ مِّنَ الْجِنِّ فَقَالُوا إِنَّا سَمِعْنَا قُرْآنًا عَجَبًا ١
📖 ಅನುವಾದ
ಆಯತ್ 1
(ಓ ಪೈಗಂಬರರೇ) ಹೇಳಿರಿ; ಯಕ್ಷಗಳ ಒಂದು ಸಮೂಹವು (ಕುರ್ಆನನ್ನು) ಗಮನಕೊಟ್ಟು ಆಲಿಸಿತೆಂದು ನನಗೆ ದಿವ್ಯವಾಣಿ ಮಾಡಲಾಗಿದೆ. ತರುವಾಯ ಅವರು ತಮ್ಮಜನಾಂಗದವರಿಗೆ “ನಾವು ಅದ್ಭುತವಾದ ಒಂದು ಕುರ್ಆನನ್ನು ಆಲಿಸಿದ್ದೇವೆ” ಎಂದು ಹೇಳಿದರು.
يَهْدِي إِلَى الرُّشْدِ فَآمَنَّا بِهِ ۖ وَلَن نُّشْرِكَ بِرَبِّنَا أَحَدًا ٢
📖 ಅನುವಾದ
ಆಯತ್ 2
ಅದು ಸನ್ಮರ‍್ಗದೆಡೆಗೆ ಮರ‍್ಗರ‍್ಶನ ಮಾಡುತ್ತದೆ. ಆದ್ದರಿಂದ ನಾವು ಅದರಲ್ಲಿ ವಿಶ್ವಾಸವಿರಿಸಿದೆವು, ಇನ್ನು ನಾವು ನಮ್ಮ ಪ್ರಭುವಿನೊಂದಿಗೆ ಯಾರನ್ನೂ ಸಹಭಾಗಿಯನ್ನಾಗಿ ನಿಶ್ಚಯಿಸಲಾರೆವು.
وَأَنَّهُ تَعَالَىٰ جَدُّ رَبِّنَا مَا اتَّخَذَ صَاحِبَةً وَلَا وَلَدًا ٣
📖 ಅನುವಾದ
ಆಯತ್ 3
. ಖಂಡಿತವಾಗಿಯೂ ನಮ್ಮ ಪ್ರಭುವಿನ ವೈಭವವು ಅತ್ಯುನ್ನತವಾಗಿದೆ, ಅವನು ಯಾರನ್ನೂ ತನ್ನ ಪತ್ನಿಯನ್ನಾಗಿ ಮತ್ತು ತನ್ನ ಪುತ್ರನನ್ನಾಗಿ ನಿಶ್ಚಯಿಸಿಲ್ಲ.
وَأَنَّهُ كَانَ يَقُولُ سَفِيهُنَا عَلَى اللَّهِ شَطَطًا ٤
📖 ಅನುವಾದ
ಆಯತ್ 4
ಖಂಡಿತವಾಗಿಯೂ ನಮ್ಮಪೈಕಿಯ ಅವಿವೇಕಿಗಳು ಅಲ್ಲಾಹನ ಕುರಿತು ಘೋರ ಸುಳ್ಳನ್ನು ಹೇಳುತ್ತಿದ್ದರು.
وَأَنَّا ظَنَنَّا أَن لَّن تَقُولَ الْإِنسُ وَالْجِنُّ عَلَى اللَّهِ كَذِبًا ٥
📖 ಅನುವಾದ
ಆಯತ್ 5
ನಿಶ್ಚಯವಾಗಿಯೂ ಮನುಷ್ಯರು ಮತ್ತು ಯಕ್ಷಗಳು ಅಲ್ಲಾಹನ ಕುರಿತು ಎಂದಿಗೂ ಸುಳ್ಳು ಹೇಳಲಾರರೆಂದು ನಾವು ಭಾವಿಸಿಕೊಂಡಿದ್ದೆವು.
وَأَنَّهُ كَانَ رِجَالٌ مِّنَ الْإِنسِ يَعُوذُونَ بِرِجَالٍ مِّنَ الْجِنِّ فَزَادُوهُمْ رَهَقًا ٦
📖 ಅನುವಾದ
ಆಯತ್ 6
ಮನುಷ್ಯರ ಪೈಕಿ ಕೆಲವರು ಯಕ್ಷಗಳ ಪೈಕಿ ಕೆಲವರೊಂದಿಗೆ ಅಭಯ ಬೇಡುತ್ತಿದ್ದರು, ಹೀಗೆ ಅವರು ಯಕ್ಷಗಳ ಅತಿರೇಕವನ್ನು ಇನ್ನಷ್ಟು ಹೆಚ್ಚಿಸಿಬಿಟ್ಟರು.
وَأَنَّهُمْ ظَنُّوا كَمَا ظَنَنتُمْ أَن لَّن يَبْعَثَ اللَّهُ أَحَدًا ٧
📖 ಅನುವಾದ
ಆಯತ್ 7
ಮನುಷ್ಯರು ಸಹ ನಿಮ್ಮಂತೆಯೇ ಅಲ್ಲಾಹನು ಯಾರನ್ನೂ ಸಂದೇಶವಾಹಕರನ್ನಾಗಿ ಕಳುಹಿಸುವುದಿಲ್ಲವೆಂದು ಭಾವಿಸಿಕೊಂಡಿದ್ದರು.
وَأَنَّا لَمَسْنَا السَّمَاءَ فَوَجَدْنَاهَا مُلِئَتْ حَرَسًا شَدِيدًا وَشُهُبًا ٨
📖 ಅನುವಾದ
ಆಯತ್ 8
ಖಂಡಿತವಾಗಿಯು ನಾವು ಆಕಾಶವನ್ನು ಹುಡುಕಿ ನೋಡಿದಾಗ ಅದನ್ನು ಬಲಿಷ್ಠ ಕಾವಲುಗಾರರಿಂದ ಮತ್ತು ಅಗ್ನಿ ಜ್ವಾಲೆಗಳಿಂದ ತುಂಬಿರುವುದಾಗಿ ಕಂಡೆವು.
وَأَنَّا كُنَّا نَقْعُدُ مِنْهَا مَقَاعِدَ لِلسَّمْعِ ۖ فَمَن يَسْتَمِعِ الْآنَ يَجِدْ لَهُ شِهَابًا رَّصَدًا ٩
📖 ಅನುವಾದ
ಆಯತ್ 9
ಇದಕ್ಕೆ ಮೊದಲು ನಾವು ಮಾತುಗಳನ್ನು ಕದ್ದಾಲಿಸಲಿಕ್ಕಾಗಿ ಆಕಾಶದಲ್ಲಿ ಅಲ್ಲಲ್ಲಿ ಕೂರುತ್ತಿದ್ದೆವು, ಈಗ ಯಾರಾದರೂ ಆಲಿಸಲು ಯತ್ನಿಸಿದರೆ ಅವನು ತನಗಾಗಿ ಹೊಂಚು ಹಾಕುತ್ತಿರುವ ಅಗ್ನಿಜ್ವಾಲೆಯನ್ನು ಕಾಣುವನು.
وَأَنَّا لَا نَدْرِي أَشَرٌّ أُرِيدَ بِمَن فِي الْأَرْضِ أَمْ أَرَادَ بِهِمْ رَبُّهُمْ رَشَدًا ١٠
📖 ಅನುವಾದ
ಆಯತ್ 10
ಭೂಮಿಯಲ್ಲಿರುವವರ ವಿಷಯದಲ್ಲಿ ಕೆಡುಕನ್ನೇನಾದರೂ ಉದ್ದೇಶಿಸಲಾಗಿದೆಯೋ ಅಥವಾ ಅವರ ಪ್ರಭುವಿನ ಉದ್ದೇಶವು ಅವರೊಂದಿಗೆ ಒಳಿತು ಮಾಡುವುದಾಗಿದೆಯೋ ನಮಗೆ ಖಂಡಿತ ತಿಳಿಯದು.
وَأَنَّا مِنَّا الصَّالِحُونَ وَمِنَّا دُونَ ذَٰلِكَ ۖ كُنَّا طَرَائِقَ قِدَدًا ١١
📖 ಅನುವಾದ
ಆಯತ್ 11
ಖಂಡಿತವಾಗಿಯೂ ನಮ್ಮಲ್ಲಿ ಕೆಲವರು ಸಜ್ಜನರಿದ್ದಾರೆ ಇನ್ನು ಕೆಲವರು ಅದಕ್ಕೆತದ್ವಿರುದ್ಧವಿದ್ದಾರೆ, ನಾವು ವಿಭಿನ್ನ ಮರ‍್ಗಗಳಲ್ಲಿ ಹರಿಹಂಚಿಹೋಗಿ ದ್ದೇವೆ.
وَأَنَّا ظَنَنَّا أَن لَّن نُّعْجِزَ اللَّهَ فِي الْأَرْضِ وَلَن نُّعْجِزَهُ هَرَبًا ١٢
📖 ಅನುವಾದ
ಆಯತ್ 12
ಖಂಡಿತವಾಗಿಯೂ ನಾವು ಅಲ್ಲಾಹನನ್ನು ಭೂಮಿಯಲ್ಲಿ ಸೋಲಿಸಲಾರೆವು ಮತ್ತು ಓಡಿಹೋಗಿ ಅವನನ್ನು ಸೋಲಿಸಲಾರೆವೆಂದು ನಾವು ಮನವರಿಕೆ ಮಾಡಿಕೊಂಡೆವು.
وَأَنَّا لَمَّا سَمِعْنَا الْهُدَىٰ آمَنَّا بِهِ ۖ فَمَن يُؤْمِن بِرَبِّهِ فَلَا يَخَافُ بَخْسًا وَلَا رَهَقًا ١٣
📖 ಅನುವಾದ
ಆಯತ್ 13
ನಿಸ್ಸಂದೇಹವಾಗಿಯೂ ನಾವು ಸನ್ಮರ‍್ಗದ ಮಾತನ್ನು ಆಲಿಸಿದಾಗ ಅದರಲ್ಲಿ ವಿಶ್ವಾಸವಿರಿಸಿದೆವು ಮತ್ತು ಯಾರು ತನ್ನ ಪ್ರಭುವಿನಲ್ಲಿ ವಿಶ್ವಾಸವಿಡುತ್ತಾನೋ ಅವನಿಗೆ ಯಾವುದೇ ಹಕ್ಕುಚ್ಯುತಿಯ, ಅಥವಾ ಅನ್ಯಾಯದ ಭಯವಿರಲಾರದು.
وَأَنَّا مِنَّا الْمُسْلِمُونَ وَمِنَّا الْقَاسِطُونَ ۖ فَمَنْ أَسْلَمَ فَأُولَٰئِكَ تَحَرَّوْا رَشَدًا ١٤
📖 ಅನುವಾದ
ಆಯತ್ 14
ನಮ್ಮ ಪೈಕಿ ಕೆಲವರು ವಿಧೇಯರಿದ್ದಾರೆ ಮತ್ತು ಕೆಲವರು ಅಕ್ರಮಿಗಳಿದ್ದಾರೆ ಇನ್ನು ಯಾರು ವಿಧೇಯರಾಗಿ ಬಿಟ್ಟರೋ ಅವರು ಸನ್ಮರ‍್ಗವನ್ನು ಪಡೆದರು.
وَأَمَّا الْقَاسِطُونَ فَكَانُوا لِجَهَنَّمَ حَطَبًا ١٥
📖 ಅನುವಾದ
ಆಯತ್ 15
ಮತ್ತು ಯಾರು ಅನ್ಯಾಯವೆಸಗಿದರೋ ಅವರು ನರಕಾಗ್ನಿಯ ಇಂಧನವಾಗಿ ಬಿಟ್ಟರು.
وَأَن لَّوِ اسْتَقَامُوا عَلَى الطَّرِيقَةِ لَأَسْقَيْنَاهُم مَّاءً غَدَقًا ١٦
📖 ಅನುವಾದ
ಆಯತ್ 16
(ಅಲ್ಲಾಹನು ಹೇಳಿದನು) ಅವರು ನೇರ ಮರ‍್ಗದಲ್ಲಿ ಸ್ಥಿರಚಿತ್ತರಾಗಿ ನಿಲ್ಲುತ್ತಿದ್ದರೆ ಖಂಡಿತ ನಾವು ಅವರಿಗೆ ಧಾರಾಳ ನೀರನ್ನು ಕುಡಿಸುತ್ತಿದ್ದೆವು.
لِّنَفْتِنَهُمْ فِيهِ ۚ وَمَن يُعْرِضْ عَن ذِكْرِ رَبِّهِ يَسْلُكْهُ عَذَابًا صَعَدًا ١٧
📖 ಅನುವಾದ
ಆಯತ್ 17
ಇದೇಕೆಂದರೆ ನಾವು ಆ ಅನುಗ್ರಹದಲ್ಲಿ ಅವರನ್ನು ಪರೀಕ್ಷಿಸಲೆಂದಾಗಿದೆ. ಯಾರು ತನ್ನ ಪ್ರಭುವಿನ ಸ್ಮರಣೆಯಿಂದ ವಿಮುಖವಾಗುತ್ತಾನೋ ಅವನನ್ನು ಅಲ್ಲಾಹನು ಕಠಿಣ ಶಿಕ್ಷೆಗೆ ಗುರಿಪಡಿಸುವನು.
وَأَنَّ الْمَسَاجِدَ لِلَّهِ فَلَا تَدْعُوا مَعَ اللَّهِ أَحَدًا ١٨
📖 ಅನುವಾದ
ಆಯತ್ 18
ಖಂಡಿತವಾಗಿಯೂ ಮಸೀದಿಗಳು ಕೇವಲ ಅಲ್ಲಾಹನದ್ದಾಗಿವೆ, ಆದ್ದರಿಂದ ನೀವು ಅಲ್ಲಾಹನೊಂದಿಗೆ ಯಾರನ್ನೂ ಕರೆದು ಪ್ರರ‍್ಥಿಸಬೇಡಿರಿ.
وَأَنَّهُ لَمَّا قَامَ عَبْدُ اللَّهِ يَدْعُوهُ كَادُوا يَكُونُونَ عَلَيْهِ لِبَدًا ١٩
📖 ಅನುವಾದ
ಆಯತ್ 19
ಖಂಡಿತವಾಗಿಯೂ ಅಲ್ಲಾಹನ ದಾಸರು (ಮುಹಮ್ಮದರು) ಅವನ ಆರಾಧನೆಗಾಗಿ ನಿಂತಾಗ ಅವರು ಪೈಗಂಬರರ ಮೇಲೆ ಮುಗಿಬೀಳಲು ಸಿದ್ಧರಾಗಿಬಿಟ್ಟರು.
قُلْ إِنَّمَا أَدْعُو رَبِّي وَلَا أُشْرِكُ بِهِ أَحَدًا ٢٠
📖 ಅನುವಾದ
ಆಯತ್ 20
(ಓ ಪೈಗಂಬರರೇ) ಹೇಳಿರಿ; ನಾನು ನನ್ನ ಪ್ರಭುವನ್ನು ಮಾತ್ರ ಆರಾಧಿಸುತ್ತೇನೆ ಮತ್ತು ಅವನೊಂದಿಗೆ ಯಾರನ್ನೂ ಸಹಭಾಗಿಯನ್ನಾಗಿ ಮಾಡುವುದಿಲ್ಲ.
قُلْ إِنِّي لَا أَمْلِكُ لَكُمْ ضَرًّا وَلَا رَشَدًا ٢١
📖 ಅನುವಾದ
ಆಯತ್ 21
ಹೇಳಿರಿ; ನಾನು ನಿಮಗೆ ಯಾವುದೇ ಹಾನಿಯನ್ನುಂಟು ಮಾಡುವ ಅಥವಾ ಲಾಭ ನೀಡುವ ಅಧಿಕಾರ ಹೊಂದಿಲ್ಲ.
قُلْ إِنِّي لَن يُجِيرَنِي مِنَ اللَّهِ أَحَدٌ وَلَنْ أَجِدَ مِن دُونِهِ مُلْتَحَدًا ٢٢
📖 ಅನುವಾದ
ಆಯತ್ 22
ಹೇಳಿರಿ; ನನ್ನನ್ನು ಅಲ್ಲಾಹನ ಯಾತನೆಯಿಂದ ಯಾರೂ ರಕ್ಷಿಸಲಾರರು ಮತ್ತು ಅವನ ಹೊರತು ಯಾವುದೇ ಅಭಯ ಸ್ಥಾನವನ್ನು ನಾನೆಂದಿಗೂ ಪಡೆಯಲಾರೆನು.
إِلَّا بَلَاغًا مِّنَ اللَّهِ وَرِسَالَاتِهِ ۚ وَمَن يَعْصِ اللَّهَ وَرَسُولَهُ فَإِنَّ لَهُ نَارَ جَهَنَّمَ خَالِدِينَ فِيهَا أَبَدًا ٢٣
📖 ಅನುವಾದ
ಆಯತ್ 23
ಆದರೆ ನನ್ನ ರ‍್ತವ್ಯವು ಅಲ್ಲಾಹನ ಆದೇಶ ಮತ್ತು ಅವನ ಸಂದೇಶಗಳನ್ನು ತಲುಪಿಸುವುದಾಗಿದೆ. ಯಾರು ಅಲ್ಲಾಹನನ್ನು ಮತ್ತು ಅವನ ಸಂದೇಶವಾಹಕರನ್ನು ಧಿಕ್ಕರಿಸುತ್ತಾರೋ ಅವರಿಗೆ ನರಕಾಗ್ನಿಯಿದೆ. ಅದರಲ್ಲಿ ಅವರು ಶಾಶ್ವತವಾಗಿರುವರು.
حَتَّىٰ إِذَا رَأَوْا مَا يُوعَدُونَ فَسَيَعْلَمُونَ مَنْ أَضْعَفُ نَاصِرًا وَأَقَلُّ عَدَدًا ٢٤
📖 ಅನುವಾದ
ಆಯತ್ 24
ಅವರು ತಮಗೆ ಎಚ್ಚರಿಕೆ ನೀಡಲಾಗುವುದನ್ನು ಕಣ್ಣಾರೆ ಕಂಡಾಗ ಯಾರ ಸಹಾಯಕನು ದರ‍್ಬಲನು ಮತ್ತು ಯಾರ ಸಂಖ್ಯೆಯು ಕಡಿಮೆ ಎಂಬುದನ್ನು ಅವರು ಗ್ರಹಿಸಿಕೊಳ್ಳುವರು.
قُلْ إِنْ أَدْرِي أَقَرِيبٌ مَّا تُوعَدُونَ أَمْ يَجْعَلُ لَهُ رَبِّي أَمَدًا ٢٥
📖 ಅನುವಾದ
ಆಯತ್ 25
ಹೇಳಿರಿ; ನಿಮಗೆ ಎಚ್ಚರಿಕೆ ನೀಡಲಾಗುತ್ತಿರುವ ಸಂಗತಿಯು ಹತ್ತಿರದಲ್ಲಿದೆಯೋ ಅಥವಾ ನನ್ನ ಪ್ರಭು ಅದಕ್ಕೆ ದರ‍್ಘ ಅವಧಿಯನ್ನು ನಿಶ್ಚಯಿಸಿರುವನೋ ನನಗೆ ತಿಳಿದಿಲ್ಲ.
عَالِمُ الْغَيْبِ فَلَا يُظْهِرُ عَلَىٰ غَيْبِهِ أَحَدًا ٢٦
📖 ಅನುವಾದ
ಆಯತ್ 26
ಅವನು ಅಗೋಚರ ಜ್ಞಾನಿಯಾಗಿದ್ದಾನೆ ಅವನು ತನ್ನ ಅಗೋಚರ ಜ್ಞಾನವನ್ನು ಯಾರಿಗೂ ಪ್ರಕಟಗೊಳಿಸುವುದಿಲ್ಲ,
إِلَّا مَنِ ارْتَضَىٰ مِن رَّسُولٍ فَإِنَّهُ يَسْلُكُ مِن بَيْنِ يَدَيْهِ وَمِنْ خَلْفِهِ رَصَدًا ٢٧
📖 ಅನುವಾದ
ಆಯತ್ 27
ತಾನು ಮೆಚ್ಚಿಕೊಂಡ ಸಂದೇಶವಾಹಕರ ಹೊರತು. ಆಗ ಅವರ ಹಿಂದೆಯೂ ಮುಂದೆಯೂ ಅವನು ಕಾವಲುಗಾರರನ್ನು ನಿಶ್ಚಯಿಸಿಬಿಡುತ್ತಾನೆ.
لِّيَعْلَمَ أَن قَدْ أَبْلَغُوا رِسَالَاتِ رَبِّهِمْ وَأَحَاطَ بِمَا لَدَيْهِمْ وَأَحْصَىٰ كُلَّ شَيْءٍ عَدَدًا ٢٨
📖 ಅನುವಾದ
ಆಯತ್ 28
ಇದು ಅವರು ತಮ್ಮ ಪ್ರಭುವಿನ ಸಂದೇಶವನ್ನು ತಲುಪಿಸಿಕೊಟ್ಟಿರುವರು ಎಂಬುದನ್ನು ಅವನು ಅರಿಯುವ ಸಲುವಾಗಿದೆ. ಅಲ್ಲಾಹನು ಅವರ (ಸಂದೇಶವಾಹಕರ) ಸುತ್ತಲಿರುವ (ಸಕಲವನ್ನು) ಆವರಿಸಿದ್ದಾನೆ ಮತ್ತು ಅವನು ಸಕಲ ವಸ್ತುಗಳ ಎಣಿಕೆಯನ್ನು ದಾಖಲಿಸಿಟ್ಟಿದ್ದಾನೆ.
ಓದಿ ಸೂರಾ ಅಲ್-ಜಿನ್ನ್ ಕನ್ನಡ ಅನುವಾದ – ಪಠಣ ಮತ್ತು ಆಡಿಯೋ
ಪವಿತ್ರ ಕುರಾನ್
Monday, September 7, 2026
Don't forget us in your sincere prayers

