ಸೂರಾ ಅಲ್-ಮಆರಿಜ್ ಅರೇಬಿಕ್ ಮತ್ತು ಕನ್ನಡ
ಸೂರಾ ಅಲ್-ಮಆರಿಜ್ ಸಂಪೂರ್ಣ ಕನ್ನಡ ಅನುವಾದ, ಉಚ್ಚಾರಣೆ ಮತ್ತು ಆಡಿಯೋ ಪಠಣದೊಂದಿಗೆ ಓದಿ. ಪ್ರತಿ ಆಯತ್‌ನ ಅರ್ಥ. (44 ಆಯತ್ — مكية). ಅಲ್-ಮಆರಿಜ್ ಆಲಿಸಿ, ಅಲ್-ಮಆರಿಜ್ ಅನುವಾದ, ಅಲ್-ಮಆರಿಜ್ mp3, ಅಲ್-ಮಆರಿಜ್ pdf.ಸೂರಾ ಅಲ್-ಮಆರಿಜ್ ಓದಿ ಮತ್ತು ಆಲಿಸಿ
🎧 ಆಯತ್
M
Mishary Rashid Alafasy
✓
Mishary Rashid Alafasy
✓
M
Mahmoud Khalil Al-Husary
✓
Mahmoud Khalil Al-Husary
✓
A
Abdurrahman As-Sudais
✓
Abdurrahman As-Sudais
✓
M
Mohamed Siddiq Al-Minshawi
✓
Mohamed Siddiq Al-Minshawi
✓
A
Abdul Basit Abdul Samad
✓
Abdul Basit Abdul Samad
✓
A
Ali Al-Hudhaify
✓
Ali Al-Hudhaify
✓
A
Ahmed ibn Ali al-Ajamy
✓
Ahmed ibn Ali al-Ajamy
✓
A
Abu Bakr Ash-Shaatree
✓
Abu Bakr Ash-Shaatree
✓
M
Muhammad Ayyoub
✓
Muhammad Ayyoub
✓
A
Abdullah Basfar
✓
Abdullah Basfar
✓
A
Abdullah Al-Juhani
✓
Abdullah Al-Juhani
✓
M
Maher Al Muaiqly
✓
Maher Al Muaiqly
✓
—
x1
سَأَلَ سَائِلٌ بِعَذَابٍ وَاقِعٍ ١
📖 ಅನುವಾದ
ಆಯತ್ 1
ಬೇಡುವವನೊಬ್ಬನು ಸಂಭವಿಸಲಿರುವಂತಹ ಯಾತನೆಯನ್ನು ಬೇಡಿದನು.
لِّلْكَافِرِينَ لَيْسَ لَهُ دَافِعٌ ٢
📖 ಅನುವಾದ
ಆಯತ್ 2
ಸತ್ಯನಿಷೇಧಿಗಳ ಮೇಲೆ ಬಂದೆರಗುವುದನ್ನು ತಡೆಯುವವನಾರೂ ಇಲ್ಲ.
مِّنَ اللَّهِ ذِي الْمَعَارِجِ ٣
📖 ಅನುವಾದ
ಆಯತ್ 3
ಆರೋಹಣಾ ಮರ‍್ಗಗಳ ಒಡೆಯನಾದ ಅಲ್ಲಾಹನ ಕಡೆಯಿಂದ (ಅದು ಸಂಭವಿಸುವುದು)
تَعْرُجُ الْمَلَائِكَةُ وَالرُّوحُ إِلَيْهِ فِي يَوْمٍ كَانَ مِقْدَارُهُ خَمْسِينَ أَلْفَ سَنَةٍ ٤
📖 ಅನುವಾದ
ಆಯತ್ 4
ಐವತ್ತು ಸಾವಿರ ರ‍್ಷಗಳ ಕಾಲಾವಧಿಯುಳ್ಳ ಒಂದು ದಿನದಲ್ಲಿ, ಮಲಕ್ಗಳು ಮತ್ತು ರೂಹ್ ಅವನೆಡೆಗೆ ಏರಿಹೋಗುತ್ತಾರೆ,
إِنَّهُمْ يَرَوْنَهُ بَعِيدًا ٦
📖 ಅನುವಾದ
ಆಯತ್ 6
ನಿಸ್ಸಂಶಯವಾಗಿಯೂ ಅವರು ಅದನ್ನು (ಯಾತನೆಯನ್ನು) ವಿದೂರವಾಗಿ ಕಾಣುತ್ತಾರೆ.
وَلَا يَسْأَلُ حَمِيمٌ حَمِيمًا ١٠
📖 ಅನುವಾದ
ಆಯತ್ 10
ಯಾವ ಆಪ್ತಮಿತ್ರನೂ ತನ್ನ ಆಪ್ತಮಿತ್ರನನ್ನು ವಿಚಾರಿಸಲಾರನು.
يُبَصَّرُونَهُمْ ۚ يَوَدُّ الْمُجْرِمُ لَوْ يَفْتَدِي مِنْ عَذَابِ يَوْمِئِذٍ بِبَنِيهِ ١١
📖 ಅನುವಾದ
ಆಯತ್ 11
(ವಸ್ತುತಃ) ಅವರು ಪರಸ್ಪರರನ್ನು ತೋರಿಸಲಾಗುವರು. ಅಪರಾಧಿಯು ಆದಿನದ ಶಿಕ್ಷೆಯ ಬದಲಿಗೆ ತನ್ನ ಮಕ್ಕಳನ್ನು
وَمَن فِي الْأَرْضِ جَمِيعًا ثُمَّ يُنجِيهِ ١٤
📖 ಅನುವಾದ
ಆಯತ್ 14
ಮತ್ತು ಭೂಮುಖದ ಮೇಲಿರುವ ಸಕಲರನ್ನೂ ಪ್ರಾಯಶ್ಚಿತ್ತವಾಗಿ ನೀಡಿ ಆ ದಿನದ ಶಿಕ್ಷೆಯಿಂದ ಪಾರಾಗಲು ಬಯಸುವನು,
كَلَّا ۖ إِنَّهَا لَظَىٰ ١٥
📖 ಅನುವಾದ
ಆಯತ್ 15
ಖಂಡಿತವಾಗಿಯೂ ಹೀಗಾಗದು ನಿಶ್ಚಯವಾಗಿಯೂ ಆದು ಜ್ವಾಲೆಗಳುಳ್ಳ ಅಗ್ನಿಯಾಗಿದೆ.
تَدْعُو مَنْ أَدْبَرَ وَتَوَلَّىٰ ١٧
📖 ಅನುವಾದ
ಆಯತ್ 17
ಸತ್ಯದಿಂದ ವಿಮುಖನಾದವನನ್ನು ಬೆನ್ನು ತಿರುಗಿಸಿದವನನ್ನು
وَجَمَعَ فَأَوْعَىٰ ١٨
📖 ಅನುವಾದ
ಆಯತ್ 18
ಮತ್ತು ಸಂಪತ್ತನ್ನು ಸಂಗ್ರಹಿಸಿ ಬಚ್ಚಿಟ್ಟವನನ್ನು ಅದು ಕೂಗಿ ಕರೆಯುವುದು.
۞ إِنَّ الْإِنسَانَ خُلِقَ هَلُوعًا ١٩
📖 ಅನುವಾದ
ಆಯತ್ 19
ನಿಸ್ಸಂದೇಹವಾಗಿಯೂ ಮನುಷ್ಯನು ಅತ್ಯಂತ ಅಸಹನೆಯುಳ್ಳವನಾಗಿ ಸೃಷ್ಟಿಸಲಾಗಿರುವನು.
إِذَا مَسَّهُ الشَّرُّ جَزُوعًا ٢٠
📖 ಅನುವಾದ
ಆಯತ್ 20
ಅವನಿಗೆ ಆಪತ್ತು ಬಾಧಿಸಿದರೆ ದಿಗ್ಭಾçಂತನಾಗಿಬಿಡುತ್ತಾನೆ.
وَإِذَا مَسَّهُ الْخَيْرُ مَنُوعًا ٢١
📖 ಅನುವಾದ
ಆಯತ್ 21
ಮತ್ತು ಅನುಕೂಲತೆಯು ಲಭಿಸಿದರೆ ಜಿಪುಣತೆ ತೋರತೊಡಗುತ್ತಾನೆ.
الَّذِينَ هُمْ عَلَىٰ صَلَاتِهِمْ دَائِمُونَ ٢٣
📖 ಅನುವಾದ
ಆಯತ್ 23
ಅವರು ತಮ್ಮ ನಮಾಜ಼್ನಲ್ಲಿ ಸದಾ ಸ್ಥಿರತೆಯನ್ನು ಕಾಪಾಡಿಕೊಳ್ಳುವವರಾಗಿದ್ದಾರೆ.
وَالَّذِينَ فِي أَمْوَالِهِمْ حَقٌّ مَّعْلُومٌ ٢٤
📖 ಅನುವಾದ
ಆಯತ್ 24
ಅವರ ಸಂಪತ್ತಿನಲ್ಲಿ ಒಂದು ನಿಶ್ಚಿತ ಪಾಲು ಇದೆ;
وَالَّذِينَ يُصَدِّقُونَ بِيَوْمِ الدِّينِ ٢٦
📖 ಅನುವಾದ
ಆಯತ್ 26
ಅವರು ಪ್ರತಿಫಲದ ದಿನ ಸತ್ಯವೇನೆಂದು ನಂಬುತ್ತಾರೆ,
وَالَّذِينَ هُم مِّنْ عَذَابِ رَبِّهِم مُّشْفِقُونَ ٢٧
📖 ಅನುವಾದ
ಆಯತ್ 27
ಅವರು ತಮ್ಮ ಪ್ರಭುವಿನ ಶಿಕ್ಷೆಯ ಬಗ್ಗೆ ಭಯಪಡುತ್ತಾರೆ.
إِنَّ عَذَابَ رَبِّهِمْ غَيْرُ مَأْمُونٍ ٢٨
📖 ಅನುವಾದ
ಆಯತ್ 28
ನಿಸ್ಸಂಶಯವಾಗಿಯೂ ಅವರ ಪ್ರಭುವಿನ ಶಿಕ್ಷೆಯು ನರ‍್ಭೀತಿಯಿಂದ ಇರುವಂತಹದ್ದಲ್ಲ.
وَالَّذِينَ هُمْ لِفُرُوجِهِمْ حَافِظُونَ ٢٩
📖 ಅನುವಾದ
ಆಯತ್ 29
ಅವರು ತಮ್ಮ ಗುಪ್ತಾಂಗಗಳನ್ನು ರಕ್ಷಿಸಿಕೊಳ್ಳುತ್ತಾರೆ.
إِلَّا عَلَىٰ أَزْوَاجِهِمْ أَوْ مَا مَلَكَتْ أَيْمَانُهُمْ فَإِنَّهُمْ غَيْرُ مَلُومِينَ ٣٠
📖 ಅನುವಾದ
ಆಯತ್ 30
ಆದರೆ ತಮ್ಮ ಪತ್ನಿಯರ ಅಥವಾ ತಮ್ಮ ದಾಸಿಯರ ಹೊರತು ಇದರಲ್ಲಿ ಅವರು ಆಕ್ಷೇಪರ‍್ಹರಲ್ಲ,
فَمَنِ ابْتَغَىٰ وَرَاءَ ذَٰلِكَ فَأُولَٰئِكَ هُمُ الْعَادُونَ ٣١
📖 ಅನುವಾದ
ಆಯತ್ 31
ಇನ್ನು ಯಾರು ಅದರ ಹೊರತು ಅನ್ಯಮರ‍್ಗವನ್ನು ಬಯಸುತ್ತಾರೋ ಅವರೇ ಮಿತಿಮೀರಿದವರಾಗಿರುತ್ತಾರೆ.
وَالَّذِينَ هُمْ لِأَمَانَاتِهِمْ وَعَهْدِهِمْ رَاعُونَ ٣٢
📖 ಅನುವಾದ
ಆಯತ್ 32
ಅವರು ತಮ್ಮ ಅಮಾನತ್ತು ಮತ್ತು ತಮ್ಮ ಒಪ್ಪಂದಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ.
وَالَّذِينَ هُم بِشَهَادَاتِهِمْ قَائِمُونَ ٣٣
📖 ಅನುವಾದ
ಆಯತ್ 33
ತಮ್ಮ ಸಾಕ್ಷö್ಯಗಳ ಮೇಲೆ ಸ್ಥಿರವಾಗಿ ನಿಲ್ಲುತ್ತಾರೆ.
وَالَّذِينَ هُمْ عَلَىٰ صَلَاتِهِمْ يُحَافِظُونَ ٣٤
📖 ಅನುವಾದ
ಆಯತ್ 34
ಮತ್ತು ತಮ್ಮ ನಮಾಜ಼್ಗಳನ್ನು ಕಾಪಾಡಿಕೊಳ್ಳುವವರಾಗಿದ್ದಾರೆ.
فَمَالِ الَّذِينَ كَفَرُوا قِبَلَكَ مُهْطِعِينَ ٣٦
📖 ಅನುವಾದ
ಆಯತ್ 36
(ಓ ಪೈಗಂಬರರೇ) ಈ ಸತ್ಯನಿಷೇಧಿಗಳಿಗೆ ಏನಾಗಿಬಿಟ್ಟಿದೆ ? ನಿಮ್ಮೆಡೆಗೆ ಧಾವಿಸಿ ಬರುತ್ತಿದ್ದಾರೆ.
عَنِ الْيَمِينِ وَعَنِ الشِّمَالِ عِزِينَ ٣٧
📖 ಅನುವಾದ
ಆಯತ್ 37
ಬಲಭಾಗದಿಂದಲೂ ಎಡಭಾಗದಿಂದಲೂ ಗುಂಪುಗುಂಪಾಗಿ (ಧಾವಿಸುತ್ತಿದ್ದಾರೆ) ,
أَيَطْمَعُ كُلُّ امْرِئٍ مِّنْهُمْ أَن يُدْخَلَ جَنَّةَ نَعِيمٍ ٣٨
📖 ಅನುವಾದ
ಆಯತ್ 38
ಅವರಲ್ಲಿ ಪ್ರತಿಯೊಬ್ಬನು ಸುಖಾನುಗ್ರಹಗಳು ತುಂಬಿದ ಸ್ರ‍್ಗದಲ್ಲಿ ತಾನು ಪ್ರವೇಶಿಸಲಿಕ್ಕಿರುವೆನೆಂದು ನಿರೀಕ್ಷಿಸುತ್ತಿದ್ದಾನೆಯೇ ?
كَلَّا ۖ إِنَّا خَلَقْنَاهُم مِّمَّا يَعْلَمُونَ ٣٩
📖 ಅನುವಾದ
ಆಯತ್ 39
ಖಂಡಿತ ಇಲ್ಲ ನಾವು ಅವರನ್ನು ಯಾವ ವಸ್ತುವಿನಿಂದ ಸೃಷ್ಟಿಸಿದ್ದೇವೆಂದು ಅವರು ಅರಿತಿದ್ದಾರೆ,
فَلَا أُقْسِمُ بِرَبِّ الْمَشَارِقِ وَالْمَغَارِبِ إِنَّا لَقَادِرُونَ ٤٠
📖 ಅನುವಾದ
ಆಯತ್ 40
ನಾನು ಉದಯಸ್ಥಾನಗಳ ಮತ್ತು ಅಸ್ತಮ ಸ್ಥಾನಗಳ ಪ್ರಭುವಿನ ಮೇಲೆ ಆಣೆಹಾಕುತ್ತೇನೆ,
عَلَىٰ أَن نُّبَدِّلَ خَيْرًا مِّنْهُمْ وَمَا نَحْنُ بِمَسْبُوقِينَ ٤١
📖 ಅನುವಾದ
ಆಯತ್ 41
ಖಚಿತವಾಗಿಯೂ ಅವರಿಗಿಂತಲೂ ಉತ್ತಮ ಜನರನ್ನು ಅವರ ಬದಲಿಗೆ ತರಲು ನಾವು ಸರ‍್ಥರಿದ್ದೇವೆ ಮತ್ತು ನಾವು (ಹೀಗೆ ಮಾಡಲು) ಅಶಕ್ತರಲ್ಲ.
فَذَرْهُمْ يَخُوضُوا وَيَلْعَبُوا حَتَّىٰ يُلَاقُوا يَوْمَهُمُ الَّذِي يُوعَدُونَ ٤٢
📖 ಅನುವಾದ
ಆಯತ್ 42
ಆದ್ದರಿಂದ ಅವರಿಗೆ ಎಚ್ಚರಿಕೆ ನೀಡಲಾದ ಆ ದಿನವನ್ನು ಭೇಟಿಯಾಗುವತನಕ ನೀವು ಅವರನ್ನು ಪರಸ್ಪರ ಜಗಳವಾಡುತ್ತಿರಲು, ಆಟವಾಡುತ್ತಿರಲು ಬಿಟ್ಟುಬಿಡಿರಿ.
يَوْمَ يَخْرُجُونَ مِنَ الْأَجْدَاثِ سِرَاعًا كَأَنَّهُمْ إِلَىٰ نُصُبٍ يُوفِضُونَ ٤٣
📖 ಅನುವಾದ
ಆಯತ್ 43
ಅವರು ಯಾವುದೋ ಒಂದು ವಿಗ್ರಹದತ್ತ ಅತಿವೇಗವಾಗಿ ಓಡುತ್ತಿರುವವರೋ ಎಂಬಂತೆ, ತಮ್ಮ ಗೋರಿಗಳಿಂದ ಧಾವಂತದಿಂದ ಹೊರಡುವ ದಿನ.
خَاشِعَةً أَبْصَارُهُمْ تَرْهَقُهُمْ ذِلَّةٌ ۚ ذَٰلِكَ الْيَوْمُ الَّذِي كَانُوا يُوعَدُونَ ٤٤
📖 ಅನುವಾದ
ಆಯತ್ 44
ಅವರ ದೃಷ್ಟಿಗಳು ತಗ್ಗಿರುವುವು, ನಿಂದ್ಯತೆಯು ಅವರನ್ನು ಆವರಿಸುತ್ತಿರುವುದು, ಅವರಿಗೆ ಎಚ್ಚರಿಕೆ ನೀಡಲ್ಪಟ್ಟ ದಿನ ಅದೇ ಆಗಿದೆ.
ಓದಿ ಸೂರಾ ಅಲ್-ಮಆರಿಜ್ ಕನ್ನಡ ಅನುವಾದ – ಪಠಣ ಮತ್ತು ಆಡಿಯೋ
ಪವಿತ್ರ ಕುರಾನ್
Monday, September 7, 2026
Don't forget us in your sincere prayers

