ಸೂರಾ ಅಲ್-ಖಸಸ್ ಅರೇಬಿಕ್ ಮತ್ತು ಕನ್ನಡ
ಸೂರಾ ಅಲ್-ಖಸಸ್ ಸಂಪೂರ್ಣ ಕನ್ನಡ ಅನುವಾದ, ಉಚ್ಚಾರಣೆ ಮತ್ತು ಆಡಿಯೋ ಪಠಣದೊಂದಿಗೆ ಓದಿ. ಪ್ರತಿ ಆಯತ್‌ನ ಅರ್ಥ. (88 ಆಯತ್ — مكية). ಅಲ್-ಖಸಸ್ ಆಲಿಸಿ, ಅಲ್-ಖಸಸ್ ಅನುವಾದ, ಅಲ್-ಖಸಸ್ mp3, ಅಲ್-ಖಸಸ್ pdf.ಸೂರಾ ಅಲ್-ಖಸಸ್ ಓದಿ ಮತ್ತು ಆಲಿಸಿ
🎧 ಆಯತ್
M
Mishary Rashid Alafasy
✓
Mishary Rashid Alafasy
✓
M
Mahmoud Khalil Al-Husary
✓
Mahmoud Khalil Al-Husary
✓
A
Abdurrahman As-Sudais
✓
Abdurrahman As-Sudais
✓
M
Mohamed Siddiq Al-Minshawi
✓
Mohamed Siddiq Al-Minshawi
✓
A
Abdul Basit Abdul Samad
✓
Abdul Basit Abdul Samad
✓
A
Ali Al-Hudhaify
✓
Ali Al-Hudhaify
✓
A
Ahmed ibn Ali al-Ajamy
✓
Ahmed ibn Ali al-Ajamy
✓
A
Abu Bakr Ash-Shaatree
✓
Abu Bakr Ash-Shaatree
✓
M
Muhammad Ayyoub
✓
Muhammad Ayyoub
✓
A
Abdullah Basfar
✓
Abdullah Basfar
✓
A
Abdullah Al-Juhani
✓
Abdullah Al-Juhani
✓
M
Maher Al Muaiqly
✓
Maher Al Muaiqly
✓
—
x1
نَتْلُو عَلَيْكَ مِن نَّبَإِ مُوسَىٰ وَفِرْعَوْنَ بِالْحَقِّ لِقَوْمٍ يُؤْمِنُونَ ٣
📖 ಅನುವಾದ
ಆಯತ್ 3
ನಾವು ನಿಮಗೆ ಮೂಸಾ ಮತ್ತು ಫಿರ್‌ಔನನ ಕೆಲವು ವೃತ್ತಾಂತವನ್ನು ವಿಶ್ವಾಸವಿರಿಸುವ ಜನರಿಗೆ ಯಥಾರ್ಥವಾಗಿ ಓದಿ ಕೇಳಿಸುತ್ತಿದ್ದೇವೆ.
إِنَّ فِرْعَوْنَ عَلَا فِي الْأَرْضِ وَجَعَلَ أَهْلَهَا شِيَعًا يَسْتَضْعِفُ طَائِفَةً مِّنْهُمْ يُذَبِّحُ أَبْنَاءَهُمْ وَيَسْتَحْيِي نِسَاءَهُمْ ۚ إِنَّهُ كَانَ مِنَ الْمُفْسِدِينَ ٤
📖 ಅನುವಾದ
ಆಯತ್ 4
ನಿಜವಾಗಿಯು ಫಿರ್‌ಔನನು ಭೂಮಿಯಲ್ಲಿ (ಈಜಿಪ್ಟ್) ದರ್ಪ ತೋರಿದನು ಮತ್ತು ಅಲ್ಲಿನ ನಿವಾಸಿಗಳನ್ನು ಗುಂಪುಗಳಾಗಿ ವಿಂಗಡಿಸಿದ್ದನು ಅವರ ಪೈಕಿ ಒಂದು ಕೂಟವನ್ನು (ಬನೀ ಇಸ್ರಾಯೀಲರನ್ನು) ದಮನಿಸಿಟ್ಟಿದ್ದನು ಮತ್ತು ಅವರ ಗಂಡು ಸಂತತಿಗಳನ್ನು ಕೊಂದು ಅವರ ಹೆಣ್ಣು ಸಂತತಿಗಳನ್ನು ಜೀವಂತವಾಗಿ ಬಿಡುತ್ತಿದ್ದನು. ನಿಸ್ಸಂಶಯವಾಗಿಯು ಅವನು ಕ್ಷೆÆÃಭೆ ಹರಡುವವರಲ್ಲಾಗಿದ್ದನು.
وَنُرِيدُ أَن نَّمُنَّ عَلَى الَّذِينَ اسْتُضْعِفُوا فِي الْأَرْضِ وَنَجْعَلَهُمْ أَئِمَّةً وَنَجْعَلَهُمُ الْوَارِثِينَ ٥
📖 ಅನುವಾದ
ಆಯತ್ 5
ಭೂಮಿಯಲ್ಲಿ ತುಳಿಯಲ್ಪಟ್ಟವರ ಮೇಲೆ ಕೃಪೆ ತೋರಲೆಂದು, ಅವರನ್ನು ನಾಯಕರು ಮತ್ತು ಉತ್ತರಾಧಿಕಾರಿಗಳನ್ನಾಗಿ ಮಾಡಲೆಂದು ನಾವು ಇಚ್ಛಿಸಿದೆವು.
وَنُمَكِّنَ لَهُمْ فِي الْأَرْضِ وَنُرِيَ فِرْعَوْنَ وَهَامَانَ وَجُنُودَهُمَا مِنْهُم مَّا كَانُوا يَحْذَرُونَ ٦
📖 ಅನುವಾದ
ಆಯತ್ 6
ಮತ್ತು ನಾವು ಭೂಮಿಯಲ್ಲಿ ತುಳಿಯಲ್ಪಟ್ಟವರಿಗೆ ಅಧಿಕಾರ ನೀಡಲೆಂದೂ, ಫಿರ್‌ಔನ್, ಹಾಮಾನ್ ಹಾಗೂ ಅವರ ಸೈನ್ಯಗಳು ಅವರಿಂದ ಯಾವ ವಿಚಾರದ ಕುರಿತು ಭಯಪಡುತ್ತಿದ್ದರೋ ಅದನ್ನು ತೋರಿಸಿಕೊಡಲೆಂದಾಗಿದೆ.
وَأَوْحَيْنَا إِلَىٰ أُمِّ مُوسَىٰ أَنْ أَرْضِعِيهِ ۖ فَإِذَا خِفْتِ عَلَيْهِ فَأَلْقِيهِ فِي الْيَمِّ وَلَا تَخَافِي وَلَا تَحْزَنِي ۖ إِنَّا رَادُّوهُ إِلَيْكِ وَجَاعِلُوهُ مِنَ الْمُرْسَلِينَ ٧
📖 ಅನುವಾದ
ಆಯತ್ 7
ಮತ್ತು ನಾವು ಮೂಸಾರ ತಾಯಿಯೆಡೆಗೆ ಹೀಗೆ ಸಂದೇಶ ನೀಡಿದೆವು: “ನೀನು ಅವನಿಗೆ ಹಾಲುಣಿಸುತ್ತಿರು. ಇನ್ನು ಅವನ ಬಗ್ಗೆ ಭಯಪಟ್ಟರೆ ಅವನನ್ನು ಪೆಟ್ಟಿಗೆಯಲ್ಲಿರಿಸಿ ನೈಲ್ ನದಿಯಲ್ಲಿ ಹಾಕಿಬಿಡು ಭಯಪಡಲೂ ಬೇಡ, ವ್ಯಥೆ ಪಡಲೂ ಬೇಡ, ನಿಶ್ಚಯವಾಗಿಯು ನಾವು ಅವನನ್ನು ನಿನ್ನೆಡೆಗೇ ಮರಳಿಸುವವರಿದ್ದೇವೆ ಹಾಗೂ ನಾವು ಅವನನ್ನು ಸಂದೇಶವಾಹಕರಲ್ಲಿ ನಿಶ್ಚಯಿಸುವವರಿದ್ದೇವೆ”.
فَالْتَقَطَهُ آلُ فِرْعَوْنَ لِيَكُونَ لَهُمْ عَدُوًّا وَحَزَنًا ۗ إِنَّ فِرْعَوْنَ وَهَامَانَ وَجُنُودَهُمَا كَانُوا خَاطِئِينَ ٨
📖 ಅನುವಾದ
ಆಯತ್ 8
ಮತ್ತು ನಾವು ಮೂಸಾರ ತಾಯಿಯೆಡೆಗೆ ಹೀಗೆ ಸಂದೇಶ ನೀಡಿದೆವು: “ನೀನು ಅವನಿಗೆ ಹಾಲುಣಿಸುತ್ತಿರು. ಇನ್ನು ಅವನ ಬಗ್ಗೆ ಭಯಪಟ್ಟರೆ ಅವನನ್ನು ಪೆಟ್ಟಿಗೆಯಲ್ಲಿರಿಸಿ ನೈಲ್ ನದಿಯಲ್ಲಿ ಹಾಕಿಬಿಡು ಭಯಪಡಲೂ ಬೇಡ, ವ್ಯಥೆ ಪಡಲೂ ಬೇಡ, ನಿಶ್ಚಯವಾಗಿಯು ನಾವು ಅವನನ್ನು ನಿನ್ನೆಡೆಗೇ ಮರಳಿಸುವವರಿದ್ದೇವೆ ಹಾಗೂ ನಾವು ಅವನನ್ನು ಸಂದೇಶವಾಹಕರಲ್ಲಿ ನಿಶ್ಚಯಿಸುವವರಿದ್ದೇವೆ”.
وَقَالَتِ امْرَأَتُ فِرْعَوْنَ قُرَّتُ عَيْنٍ لِّي وَلَكَ ۖ لَا تَقْتُلُوهُ عَسَىٰ أَن يَنفَعَنَا أَوْ نَتَّخِذَهُ وَلَدًا وَهُمْ لَا يَشْعُرُونَ ٩
📖 ಅನುವಾದ
ಆಯತ್ 9
ಮತ್ತು ನಾವು ಮೂಸಾರ ತಾಯಿಯೆಡೆಗೆ ಹೀಗೆ ಸಂದೇಶ ನೀಡಿದೆವು: “ನೀನು ಅವನಿಗೆ ಹಾಲುಣಿಸುತ್ತಿರು. ಇನ್ನು ಅವನ ಬಗ್ಗೆ ಭಯಪಟ್ಟರೆ ಅವನನ್ನು ಪೆಟ್ಟಿಗೆಯಲ್ಲಿರಿಸಿ ನೈಲ್ ನದಿಯಲ್ಲಿ ಹಾಕಿಬಿಡು ಭಯಪಡಲೂ ಬೇಡ, ವ್ಯಥೆ ಪಡಲೂ ಬೇಡ, ನಿಶ್ಚಯವಾಗಿಯು ನಾವು ಅವನನ್ನು ನಿನ್ನೆಡೆಗೇ ಮರಳಿಸುವವರಿದ್ದೇವೆ ಹಾಗೂ ನಾವು ಅವನನ್ನು ಸಂದೇಶವಾಹಕರಲ್ಲಿ ನಿಶ್ಚಯಿಸುವವರಿದ್ದೇವೆ”.
وَأَصْبَحَ فُؤَادُ أُمِّ مُوسَىٰ فَارِغًا ۖ إِن كَادَتْ لَتُبْدِي بِهِ لَوْلَا أَن رَّبَطْنَا عَلَىٰ قَلْبِهَا لِتَكُونَ مِنَ الْمُؤْمِنِينَ ١٠
📖 ಅನುವಾದ
ಆಯತ್ 10
ಮೂಸಾರ ತಾಯಿಯ ಹೃದಯವು ವ್ಯಾಕುಲಗೊಂಡಿತು. ನಾವು ಅವಳ ಹೃದಯವನ್ನು ಸಂತೈಸದಿರುತ್ತಿದ್ದರೆ ಅವಳು ಈ ಗುಟ್ಟನ್ನು ರಟ್ಟು ಮಾಡಿಬಿಡುತ್ತಿದ್ದಳು. ಇದೇಕೆಂದರೆ ಆಕೆ ದೃಢ ನಂಬಿಕೆಯುಳ್ಳವರೊAದಿಗೆ ಸೇರಲೆಂದಾಗಿತ್ತು.
وَقَالَتْ لِأُخْتِهِ قُصِّيهِ ۖ فَبَصُرَتْ بِهِ عَن جُنُبٍ وَهُمْ لَا يَشْعُرُونَ ١١
📖 ಅನುವಾದ
ಆಯತ್ 11
ಮೂಸರ ತಾಯಿಯು ಅವನ ಸಹೋದರಿಗೆ ಹೇಳಿದಳು: ನೀನು ಅವನ ಹಿಂದೆಯೇ ಹೋಗು. ಹಾಗೆಯೇ ಅವಳು ಅವನನ್ನು ದೂರದಿಂದಲೇ ನೋಡುತಿದ್ದಳು ಆದರೆ ಫಿರ್‌ಔನಿಯರು ಇದನ್ನು ತಿಳಿಯಲಿಲ್ಲ.
۞ وَحَرَّمْنَا عَلَيْهِ الْمَرَاضِعَ مِن قَبْلُ فَقَالَتْ هَلْ أَدُلُّكُمْ عَلَىٰ أَهْلِ بَيْتٍ يَكْفُلُونَهُ لَكُمْ وَهُمْ لَهُ نَاصِحُونَ ١٢
📖 ಅನುವಾದ
ಆಯತ್ 12
ಮೊದಲೇ ನಾವು ಅವನ ಮೇಲೆ ದಾದಿಗಳ ಎದೆಹಾಲನ್ನು ನಿಷಿದ್ಧ ಮಾಡಿದ್ದೆವು. ಅವಳೆಂದಳು: ಈ ಮಗುವನ್ನು ನಿಮಗಾಗಿ ಪೋಷಿಸುವಂತಹ ಒಂದು ಮನೆತನವನ್ನು ನಾನು ನಿಮಗೆ ತಿಳಿಸಿಕೊಡಲೇ? ಅವರು ಇವನಿಗೆ ಹಿತೈಷಿಗಳಾಗಿರುವರು.
فَرَدَدْنَاهُ إِلَىٰ أُمِّهِ كَيْ تَقَرَّ عَيْنُهَا وَلَا تَحْزَنَ وَلِتَعْلَمَ أَنَّ وَعْدَ اللَّهِ حَقٌّ وَلَٰكِنَّ أَكْثَرَهُمْ لَا يَعْلَمُونَ ١٣
📖 ಅನುವಾದ
ಆಯತ್ 13
ಕೊನೆಗೆ ನಾವು ಅವನನ್ನು ಅವನ ತಾಯಿಯೆಡೆಗೇ ಮರಳಿಸಿದೆವು. ಇದು ಅವಳ ಕಣ್ಣು ತಂಪಾಗಿರಲೆAದೂ, ಅವಳು ವ್ಯಥೆಪಡದಿರಲೆಂದೂ ಮತ್ತು ಅಲ್ಲಾಹನ ವಾಗ್ದಾನವು ಸತ್ಯವಾಗಿದೆಯೆಂದು ಆಕೆ ತಿಳಿಯಲೆಂದೂ ಆಗಿತ್ತು. ಆದರೆ ಹೆಚ್ಚಿನ ಜನರು ಅರಿಯುವುದಿಲ್ಲ.
وَلَمَّا بَلَغَ أَشُدَّهُ وَاسْتَوَىٰ آتَيْنَاهُ حُكْمًا وَعِلْمًا ۚ وَكَذَٰلِكَ نَجْزِي الْمُحْسِنِينَ ١٤
📖 ಅನುವಾದ
ಆಯತ್ 14
ಮೂಸ ತನ್ನ ಯೌವನಕ್ಕೆ ತಲುಪಿದಾಗ ಮತ್ತು ಸಂಪೂರ್ಣ ಶಕ್ತರಾದಾಗ ನಾವು ಅವರಿಗೆ ಯುಕ್ತಿ, ಜ್ಞಾನವನ್ನು ದಯಪಾಲಿಸಿದೆವು ಮತ್ತು ನಾವು ಸಜ್ಜನರಿಗೆ ಹೀಗೆ ಪ್ರತಿಫಲ ನೀಡುತ್ತೇವೆ.
وَدَخَلَ الْمَدِينَةَ عَلَىٰ حِينِ غَفْلَةٍ مِّنْ أَهْلِهَا فَوَجَدَ فِيهَا رَجُلَيْنِ يَقْتَتِلَانِ هَٰذَا مِن شِيعَتِهِ وَهَٰذَا مِنْ عَدُوِّهِ ۖ فَاسْتَغَاثَهُ الَّذِي مِن شِيعَتِهِ عَلَى الَّذِي مِنْ عَدُوِّهِ فَوَكَزَهُ مُوسَىٰ فَقَضَىٰ عَلَيْهِ ۖ قَالَ هَٰذَا مِنْ عَمَلِ الشَّيْطَانِ ۖ إِنَّهُ عَدُوٌّ مُّضِلٌّ مُّبِينٌ ١٥
📖 ಅನುವಾದ
ಆಯತ್ 15
ಒಮ್ಮೆ ಪಟ್ಟಣದ ನಿವಾಸಿಗಳು ಅಲಕ್ಷö್ಯತೆಯಲ್ಲಿದ್ದಂತಹ ಸಂದರ್ಭದಲ್ಲಿ ಮೂಸಾರವರು ಪೇಟೆಯಲ್ಲಿ ಪ್ರವೇಶಿದರು. ಆಗ ಅವರು ಅಲ್ಲಿ ಇಬ್ಬರು. ವ್ಯಕ್ತಿಗಳು ಪರಸ್ಪರ ಹೊಡೆದಾಡುತ್ತಿರುವುದಾಗಿ ಕಂಡರು. ಒಬ್ಬನು ಅವರ ಜನಾಂಗದವನಾಗಿದ್ದರೆ ಮತ್ತೊಬ್ಬನು ಅವರ ಶತ್ರು ಜನಾಂಗಕ್ಕೆ ಸೇರಿದವನಾಗಿದ್ದನು ಅವರ ಜನಾಂಗದಿAದ ಇರುವವನು ಅವನ ಶತ್ರುಗಳಿಂದ ಇರುವವನ ವಿರುದ್ಧ ಅವರಲ್ಲಿ ಸಹಾಯ ಬೇಡಿದನು. ಆಗ ಮೂಸಾ ಅವನಿಗೆ ಮುಷ್ಠಿಯಿಂದ ಗುದ್ದಿದರು. ಅದರಿಂದ ಅವನು ಪ್ರಾಣ ಬಿಟ್ಟನು. ಆಗ ಮೂಸ ಹೇಳಿದರು: ಇದಂತು ಶೈತಾನಿನ ಕೃತ್ಯವಾಗಿದೆ. ನಿಜವಾಗಿಯೂ ಶೈತಾನನು ಶತ್ರು ಹಾಗೂ ಪ್ರತ್ಯಕ್ಷವಾಗಿ ದಾರಿಗೆಡಿಸುವವನಾಗಿದ್ದಾನೆ.
قَالَ رَبِّ إِنِّي ظَلَمْتُ نَفْسِي فَاغْفِرْ لِي فَغَفَرَ لَهُ ۚ إِنَّهُ هُوَ الْغَفُورُ الرَّحِيمُ ١٦
📖 ಅನುವಾದ
ಆಯತ್ 16
ಅನಂತರ ಅವರು ಪ್ರಾರ್ಥಿಸ ತೊಡಗಿದರು: ಓ ನನ್ನ ಪ್ರಭುವೇ, ನಾನು ನನ್ನ ಮೇಲೆ ಅಕ್ರಮವೆಸಗಿದ್ದೇನೆ. ಆದ್ದರಿಂದ ನೀನು ನನ್ನನ್ನು ಕ್ಷಮಿಸು. ಆಗ ಅಲ್ಲಾಹನು ಅವರಿಗೆ ಕ್ಷಮಿಸಿದನು.ನಿಶ್ಚಯವಾಗಿಯು ಅವನು ಕ್ಷಮಾಶೀಲನು, ಕರುಣಾನಿಧಿಯು ಆಗಿದ್ದಾನೆ.
قَالَ رَبِّ بِمَا أَنْعَمْتَ عَلَيَّ فَلَنْ أَكُونَ ظَهِيرًا لِّلْمُجْرِمِينَ ١٧
📖 ಅನುವಾದ
ಆಯತ್ 17
ಅವರು ಹೇಳಿದರು: ನನ್ನ ಪ್ರಭುವೇ, ನೀನು ನನ್ನ ಮೇಲೆ ಅನುಗ್ರಹಿಸಿರುವೆ. ಆದ್ದರಿಂದ ಇನ್ನು ಮೇಲೆ ನಾನೆಂದಿಗೂ ಅಪರಾಧಿಗಳಿಗೆ ಸಹಾಯಕನಾಗಲಾರೆ.
فَأَصْبَحَ فِي الْمَدِينَةِ خَائِفًا يَتَرَقَّبُ فَإِذَا الَّذِي اسْتَنصَرَهُ بِالْأَمْسِ يَسْتَصْرِخُهُ ۚ قَالَ لَهُ مُوسَىٰ إِنَّكَ لَغَوِيٌّ مُّبِينٌ ١٨
📖 ಅನುವಾದ
ಆಯತ್ 18
ಅವರು ಮರುದಿನ ಬೆಳಗ್ಗೆಯೇ ಭಯಭೀತರಾಗಿರುವ ಸ್ಥೀತಿಯಲ್ಲಿ ಸುದ್ದಿ ತಿಳಿಯಲು ಪಟ್ಟಣಕ್ಕೆ ಹೋದರು. ಅಷ್ಟರಲ್ಲಿ ನಿನ್ನೆ ದಿನ ಅವರಲ್ಲಿ ಸಹಾಯ ಬೇಡಿದ ಅದೇ ವ್ಯಕ್ತಿಯು ಅವರನ್ನು ಸಹಾಯಕ್ಕೆ ಮೊರೆಯಿಡುತ್ತಿದ್ದಾನೆ! ಆಗ ಮೂಸಾ ಅವನಿಗೆ ಹೇಳಿದರು: ನೀನಂತು ಸುಸ್ಪಷ್ಟ ದಾರಿಗೆಟ್ಟವನಾಗಿರುವೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.
فَلَمَّا أَنْ أَرَادَ أَن يَبْطِشَ بِالَّذِي هُوَ عَدُوٌّ لَّهُمَا قَالَ يَا مُوسَىٰ أَتُرِيدُ أَن تَقْتُلَنِي كَمَا قَتَلْتَ نَفْسًا بِالْأَمْسِ ۖ إِن تُرِيدُ إِلَّا أَن تَكُونَ جَبَّارًا فِي الْأَرْضِ وَمَا تُرِيدُ أَن تَكُونَ مِنَ الْمُصْلِحِينَ ١٩
📖 ಅನುವಾದ
ಆಯತ್ 19
ಅನಂತರ ಅವರು ತಮಗಿಬ್ಬರಿಗೂ ಶತ್ರುವಾದವನ ಮೇಲೆ ಕೈ ಮಾಡಲು ಬಯಸಿದಾಗ ಮೊರೆಯಿಟ್ಟವನು ಹೇಳಿದನು: ಓ ಮೂಸಾ, ನಿನ್ನೆ ನೀವು ಒಬ್ಬ ವ್ಯಕ್ತಿಯನ್ನು ಕೊಂದ ಹಾಗೆಯೇ ನನ್ನನ್ನೂ ಕೊಲ್ಲಬಯಸುತ್ತಿರುವಿರಾ? ನೀವು ಭೂಮಿಯಲ್ಲಿ ವಿದ್ವಂಸಕರಾಗಿರಲೆAದು ಬಯಸುತ್ತಿರುವಿರಿ. ಮತ್ತು ಸುಧಾರಕರಲ್ಲಿ ಆಗಲು ನೀವು ಬಯಸುವುದಿಲ್ಲ.
وَجَاءَ رَجُلٌ مِّنْ أَقْصَى الْمَدِينَةِ يَسْعَىٰ قَالَ يَا مُوسَىٰ إِنَّ الْمَلَأَ يَأْتَمِرُونَ بِكَ لِيَقْتُلُوكَ فَاخْرُجْ إِنِّي لَكَ مِنَ النَّاصِحِينَ ٢٠
📖 ಅನುವಾದ
ಆಯತ್ 20
ನಗರದ ಕೊನೆಯಿಂದ ವ್ಯಕ್ತಿಯೊಬ್ಬ ಓಡುತ್ತಾ ಬಂದು ಹೇಳಿದನು: ಓ ಮೂಸಾ, ಸರದಾರರು ನಿಮ್ಮ ಹತ್ಯೆಗಾಗಿ ಗೂಢಾಲೋಚನೆ ಮಾಡುತ್ತಿದ್ದಾರೆ. ಆದ್ದರಿಂದ ನೀವು ಕೂಡಲೇ ಹೊರಟುಬಿಡಿ. ನಿಜವಾಗಿಯೂ ನಾನು ನಿಮ್ಮ ಹಿತೈಷಿಯರಲ್ಲಾಗಿದ್ದೇನೆ.
فَخَرَجَ مِنْهَا خَائِفًا يَتَرَقَّبُ ۖ قَالَ رَبِّ نَجِّنِي مِنَ الْقَوْمِ الظَّالِمِينَ ٢١
📖 ಅನುವಾದ
ಆಯತ್ 21
ನಗರದ ಕೊನೆಯಿಂದ ವ್ಯಕ್ತಿಯೊಬ್ಬ ಓಡುತ್ತಾ ಬಂದು ಹೇಳಿದನು: ಓ ಮೂಸಾ, ಸರದಾರರು ನಿಮ್ಮ ಹತ್ಯೆಗಾಗಿ ಗೂಢಾಲೋಚನೆ ಮಾಡುತ್ತಿದ್ದಾರೆ. ಆದ್ದರಿಂದ ನೀವು ಕೂಡಲೇ ಹೊರಟುಬಿಡಿ. ನಿಜವಾಗಿಯೂ ನಾನು ನಿಮ್ಮ ಹಿತೈಷಿಯರಲ್ಲಾಗಿದ್ದೇನೆ.
وَلَمَّا تَوَجَّهَ تِلْقَاءَ مَدْيَنَ قَالَ عَسَىٰ رَبِّي أَن يَهْدِيَنِي سَوَاءَ السَّبِيلِ ٢٢
📖 ಅನುವಾದ
ಆಯತ್ 22
ಮತ್ತು ಅವರು ಮದ್‌ಯನ್ ಕಡೆಗೆ ತಿರುಗಿದಾಗ ಹೇಳಿದರು: ನನ್ನ ಪ್ರಭುವು ನನಗೆ ಋಜುವಾದ ಮಾರ್ಗವನ್ನು ತೋರಿಸುವನೆಂದು ನಾನು ನಿರೀಕ್ಷಿಸುತ್ತೇನೆ.
وَلَمَّا وَرَدَ مَاءَ مَدْيَنَ وَجَدَ عَلَيْهِ أُمَّةً مِّنَ النَّاسِ يَسْقُونَ وَوَجَدَ مِن دُونِهِمُ امْرَأَتَيْنِ تَذُودَانِ ۖ قَالَ مَا خَطْبُكُمَا ۖ قَالَتَا لَا نَسْقِي حَتَّىٰ يُصْدِرَ الرِّعَاءُ ۖ وَأَبُونَا شَيْخٌ كَبِيرٌ ٢٣
📖 ಅನುವಾದ
ಆಯತ್ 23
ಅವರು ಮದ್‌ಯನ್‌ನ ಬಾವಿಯ ಹತ್ತಿರ ತಲುಪಿದಾಗ ಜನರಲ್ಲಿನ ಒಂದು ಕೂಟವು ಅಲ್ಲಿ ನೀರು ಕುಡಿಸುತ್ತಿರುವುದಾಗಿ ಕಂಡರು ಮತ್ತು ಇಬ್ಬರು ಸ್ತಿçÃಯರು ದೂರ ನಿಂತು (ತಮ್ಮ ಜಾನುವಾರುಗಳನ್ನು) ತಡೆದು ನಿಲ್ಲಿಸುತ್ತಿರುವುದನ್ನು ಕಂಡರು ಅವರು (ಮೂಸಾ) ಅವರೊಡನೆ ಕೇಳಿದರು: ಈ ಕುರುಬರು ಮರಳಿಹೋಗುವ ತನಕ ನಾವು ನೀರು ಕುಡಿಸಲಾರೆವು ಮತ್ತು ನಮ್ಮ ತಂದೆಯು ಹಿರಿಯ ವಯಸ್ಸಿನ ವೃದ್ಧರಾಗಿರುವರು.
فَسَقَىٰ لَهُمَا ثُمَّ تَوَلَّىٰ إِلَى الظِّلِّ فَقَالَ رَبِّ إِنِّي لِمَا أَنزَلْتَ إِلَيَّ مِنْ خَيْرٍ فَقِيرٌ ٢٤
📖 ಅನುವಾದ
ಆಯತ್ 24
ಆಗ ಅವರು ಅವರಿಗಾಗಿ ನೀರು ಕುಡಿಸಿದರು. ಅನಂತರ ಒಂದು ನೆರಳಿನ ಕಡೆಗೆ ಸರಿದು ನಿಂತರು ಮತ್ತು ಹೇಳಿದರು: ನನ್ನ ಪ್ರಭುವೇ, ನೀನು ನನ್ನೆಡೆಗೆ ಯಾವುದೇ ಒಳಿತನ್ನು ಇಳಿಸಿದರೂ ನಾನು ಅದರ ಅಪೇಕ್ಷಕನಾಗಿದ್ದೇನೆ.
فَجَاءَتْهُ إِحْدَاهُمَا تَمْشِي عَلَى اسْتِحْيَاءٍ قَالَتْ إِنَّ أَبِي يَدْعُوكَ لِيَجْزِيَكَ أَجْرَ مَا سَقَيْتَ لَنَا ۚ فَلَمَّا جَاءَهُ وَقَصَّ عَلَيْهِ الْقَصَصَ قَالَ لَا تَخَفْ ۖ نَجَوْتَ مِنَ الْقَوْمِ الظَّالِمِينَ ٢٥
📖 ಅನುವಾದ
ಆಯತ್ 25
ಅವರಿಬ್ಬರ ಪೈಕಿ ಒಬ್ಬಳು ನಾಚುತ್ತಾ ಅವರೆಡೆಗೆ ನಡೆದು ಬಂದು ಹೇಳಿದಳು: ನೀವು ನಮಗಾಗಿ ನೀರು ಕುಡಿಸಿರುವುದರ ಪ್ರತಿಫಲವನ್ನು ನಿಮಗೆ ನೀಡಲೆಂದು ನನ್ನ ತಂದೆಯು ನಿಮ್ಮನ್ನು ಕರೆಯುತ್ತಿದ್ದಾರೆ. ಮೂಸಾ ಅವರಲ್ಲಿಗೆ ಹೋದರು ಮತ್ತು ತನ್ನ ವೃತ್ತಾಂತವನ್ನೆಲ್ಲಾ ಅವರ ಮುಂದೆ ವಿವರಿಸಿದರು. ಆಗ ಅವರು ಹೇಳಿದರು: ನೀವು ಹೆದರಬೇಡಿ, ಅಕ್ರಮಿ ಜನಾಂಗದಿAದ ನೀವು ರಕ್ಷಣೆ ಹೊಂದಿರುವಿರಿ.
قَالَتْ إِحْدَاهُمَا يَا أَبَتِ اسْتَأْجِرْهُ ۖ إِنَّ خَيْرَ مَنِ اسْتَأْجَرْتَ الْقَوِيُّ الْأَمِينُ ٢٦
📖 ಅನುವಾದ
ಆಯತ್ 26
ಅವರಿಬ್ಬರಲ್ಲಿ ಒಬ್ಬಳು ಹೇಳಿದಳು: ಅಪ್ಪಾಜಿ, ನೀವು ಅವರನ್ನು ನೌಕರನಾಗಿ ಇರಿಸಿಕೊಳ್ಳಿರಿ. ನೀವು ನೌಕರನಾಗಿ ಇರಿಸಿಕೊಳ್ಳುವವರಲ್ಲಿ ಅತ್ಯುತ್ತಮನು, ಬಲಿಷ್ಠನು, ಪ್ರಮಾಣಿಕನು ಆಗಿರಬೇಕು.
قَالَ إِنِّي أُرِيدُ أَنْ أُنكِحَكَ إِحْدَى ابْنَتَيَّ هَاتَيْنِ عَلَىٰ أَن تَأْجُرَنِي ثَمَانِيَ حِجَجٍ ۖ فَإِنْ أَتْمَمْتَ عَشْرًا فَمِنْ عِندِكَ ۖ وَمَا أُرِيدُ أَنْ أَشُقَّ عَلَيْكَ ۚ سَتَجِدُنِي إِن شَاءَ اللَّهُ مِنَ الصَّالِحِينَ ٢٧
📖 ಅನುವಾದ
ಆಯತ್ 27
ಆ ವೃದ್ಧ ವ್ಯಕ್ತಿ ಹೇಳಿದರು: ನಾನು ಎಂಟು ವರ್ಷಗಳ ಕಾಲ ನನ್ನ ಬಳಿ ನೌಕರಿ ಮಾಡುವ ಷರತ್ತಿನ ಮೇಲೆ ಈ ನನ್ನ ಇಬ್ಬರು ಹೆಣ್ಣು ಮಕ್ಕಳಲ್ಲಿ ಒಬ್ಬಳನ್ನು ನಿಮಗೆ ಮದುವೆ ಮಾಡಿಕೊಡಲು ಇಚ್ಛಿಸುತ್ತಿದ್ದೇನೆ. ಇನ್ನು ನೀವು ಹತ್ತು ವರ್ಷಗಳನ್ನು ಪೂರ್ತಿ ಮಾಡಿದರೆ ಅದು ನಿಮ್ಮ ಕಡೆಯಿಂದ ಉಪಕಾರವಾಗಿರುತ್ತದೆ ಮತ್ತು ನಾನು ನಿಮ್ಮನ್ನು ಸಂಕಷ್ಟದಲ್ಲಿ ಬೀಳಿಸಲು ಎಂದಿಗೂ ಬಯಸಲಾರೆನು. ಅಲ್ಲಾಹನಿಚ್ಛಿಸಿದರೆ ನೀವು ನನ್ನನ್ನು ಸಜ್ಜನರಲ್ಲಿ ಕಾಣುವಿರಿ.
قَالَ ذَٰلِكَ بَيْنِي وَبَيْنَكَ ۖ أَيَّمَا الْأَجَلَيْنِ قَضَيْتُ فَلَا عُدْوَانَ عَلَيَّ ۖ وَاللَّهُ عَلَىٰ مَا نَقُولُ وَكِيلٌ ٢٨
📖 ಅನುವಾದ
ಆಯತ್ 28
ಮೂಸಾ ಹೇಳಿದರು: ಇದು ನನ್ನ ಮತ್ತು ನಿಮ್ಮ ನಡುವೆ ಇರುವ ಒಪ್ಪಂದವಾಗಿದೆ. ಇವೆರಡರಲ್ಲಿ ಯಾವ ಕಾಲಾವಧಿಯನ್ನು ನಾನು ಪೂರ್ತಿಗೊಳಿಸಿದರೂ ನನ್ನ ಮೇಲೆ ಅತಿರೇಕ ನಡೆಯಬಾರದು.ನಾವು ಹೇಳುತ್ತಿರುವುದರ ಮೇಲೆ ಅಲ್ಲಾಹನು (ಸಾಕ್ಷಿಯಾಗಿ) ಕಾರ್ಯ ಸಾಧಕನಾಗಿದ್ದಾನೆ.
۞ فَلَمَّا قَضَىٰ مُوسَى الْأَجَلَ وَسَارَ بِأَهْلِهِ آنَسَ مِن جَانِبِ الطُّورِ نَارًا قَالَ لِأَهْلِهِ امْكُثُوا إِنِّي آنَسْتُ نَارًا لَّعَلِّي آتِيكُم مِّنْهَا بِخَبَرٍ أَوْ جَذْوَةٍ مِّنَ النَّارِ لَعَلَّكُمْ تَصْطَلُونَ ٢٩
📖 ಅನುವಾದ
ಆಯತ್ 29
ಪೈಗಂಬರ್ ಮೂಸಾರವರು ನಿರ್ಧಿಷ್ಟ ಅವಧಿಯನ್ನು ಪೂರ್ತಿಗೊಳಿಸಿ ತನ್ನ ಮನೆಯವರನ್ನು ಕರೆದುಕೊಂಡು ಹೊರಟಾಗ ತೂರ್ ಪರ್ವತದ ಒಂದು ಕಡೆಯಿಂದ ಬೆಂಕಿಯನ್ನು ಕಂಡರು. ಅವರು ತನ್ನ ಪತ್ನಿಗೆ ಹೇಳಿದರು: ನಿಲ್ಲಿರಿ, ನಾನೊಂದು ಬೆಂಕಿಯನ್ನು ಕಂಡಿರುವೆನು. ಬಹುಷಃ ನಾನು ಅಲ್ಲಿಂದ ಏನಾದರೂ ಸುದ್ದಿಯನ್ನು ತರುವೆ ಇಲ್ಲವೇ ನಿಮಗೆ ಚಳಿ ಕಾಯಿಸಿಕೊಳ್ಳಲು ಬೆಂಕಿಯ ಕೆಂಡವೊAದನ್ನು ತರುವೆನು.
فَلَمَّا أَتَاهَا نُودِيَ مِن شَاطِئِ الْوَادِ الْأَيْمَنِ فِي الْبُقْعَةِ الْمُبَارَكَةِ مِنَ الشَّجَرَةِ أَن يَا مُوسَىٰ إِنِّي أَنَا اللَّهُ رَبُّ الْعَالَمِينَ ٣٠
📖 ಅನುವಾದ
ಆಯತ್ 30
. ಹಾಗೆಯೇ ಅವರು ಅಲ್ಲಿ ತಲುಪಿದಾಗ ಆ ಅನುಗ್ರಹೀತ ಭೂಮಿಯ ಬಲಭಾಗದ ಮರದಿಂದ “ಓ ಮೂಸಾ” ನಾನು ಸರ್ವಲೋಕಗಳ ಪ್ರಭುವಾದ ಅಲ್ಲಾಹನಾಗಿದ್ದೇನೆ ಎಂದು ಕೂಗಿ ಕರೆಯಲಾಯಿತು.
وَأَنْ أَلْقِ عَصَاكَ ۖ فَلَمَّا رَآهَا تَهْتَزُّ كَأَنَّهَا جَانٌّ وَلَّىٰ مُدْبِرًا وَلَمْ يُعَقِّبْ ۚ يَا مُوسَىٰ أَقْبِلْ وَلَا تَخَفْ ۖ إِنَّكَ مِنَ الْآمِنِينَ ٣١
📖 ಅನುವಾದ
ಆಯತ್ 31
ಮತ್ತು ನೀವು ನಿಮ್ಮ ಲಾಠಿಯನ್ನು ಕೆಳಗೆ ಹಾಕಿ ಬಿಡಿ ಎಂದು ಹೇಳಲಾಯಿತು. ಅನಂತರ ಅವರು ಅದನ್ನು ಸರ್ಪವೆಂಬAತೆ ತೆವಳುತ್ತಿರುವುದಾಗಿ ಕಂಡಾಗ ಅವರು ಬೆನ್ನು ತಿರುಗಿಸಿ ಓಟ ಕಿತ್ತರು ಮತ್ತು ತಿರುಗಿ ನೋಡಲಿಲ್ಲ. ನಾವು ಹೇಳಿದೆವು: ಓ ಮೂಸಾ, ಮುಂದೆ ಬನ್ನಿ ಮತ್ತು ಭಯಪಡಬೇಡಿ. ನಿಶ್ಚಯವಾಗಿಯು ನೀವು ಎಲ್ಲಾ ರೀತಿಯಿಂದಲೂ ನಿರ್ಭಯರಾಗಿರುವಿರಿ.
اسْلُكْ يَدَكَ فِي جَيْبِكَ تَخْرُجْ بَيْضَاءَ مِنْ غَيْرِ سُوءٍ وَاضْمُمْ إِلَيْكَ جَنَاحَكَ مِنَ الرَّهْبِ ۖ فَذَانِكَ بُرْهَانَانِ مِن رَّبِّكَ إِلَىٰ فِرْعَوْنَ وَمَلَئِهِ ۚ إِنَّهُمْ كَانُوا قَوْمًا فَاسِقِينَ ٣٢
📖 ಅನುವಾದ
ಆಯತ್ 32
ನಿಮ್ಮ ಕೈಯನ್ನು ನೀವು ಎದೆಪಟ್ಟಿಯೊಳಗೆ ಹಾಕಿರಿ. ಅದು ಯಾವುದೇ ರೋಗವಿಲ್ಲದೆ ಬೆಳ್ಳಗೆ ಮಿಂಚುತ್ತಿರುವ ಸ್ಥಿತಿಯಲ್ಲಿ ಹೊರಬರುವುದು ಮತ್ತು ಭಯದಿಂದ (ಮುಕ್ತಿ ಹೊಂದಲು) ನಿಮ್ಮ ಬಾಹುಗಳನ್ನು ಬಿಗಿದುಕೊಳ್ಳಿರಿ. ನಿಮ್ಮ ಪ್ರಭುವಿನಿಂದ ಫಿರ್‌ಔನ್ ಮತ್ತು ಅವನ ಆಸ್ಥಾನದವರ ಮುಂದಿಡಲಿಕ್ಕಾಗಿ ಇವೆರಡೂ ನಿದರ್ಶನಗಳಾಗಿವೆ. ನಿಜವಾಗಿಯು ಅವರು ಆಜ್ಞೋಲ್ಲಂಘಕ ಜನರಾಗಿದ್ದಾರೆ.
قَالَ رَبِّ إِنِّي قَتَلْتُ مِنْهُمْ نَفْسًا فَأَخَافُ أَن يَقْتُلُونِ ٣٣
📖 ಅನುವಾದ
ಆಯತ್ 33
ಮೂಸಾ(ಅ) ಹೇಳಿದರು: ನನ್ನ ಪ್ರಭುವೇ, ನಾನು ಅವರ ಪೈಕಿಯ ಒಬ್ಬ ವ್ಯಕ್ತಿಯನ್ನು ಕೊಂದಿರುವೆನು. ಈಗ ಅವರು ನನ್ನನ್ನು ಕೊಂದುಬಿಡಬಹುದೆAದು ನಾನು ಭಯಪಡುತ್ತೇನೆ.
وَأَخِي هَارُونُ هُوَ أَفْصَحُ مِنِّي لِسَانًا فَأَرْسِلْهُ مَعِيَ رِدْءًا يُصَدِّقُنِي ۖ إِنِّي أَخَافُ أَن يُكَذِّبُونِ ٣٤
📖 ಅನುವಾದ
ಆಯತ್ 34
ನನ್ನ ಸಹೋದರ ಹಾರೂನ್ ನನಗಿಂತಲೂ ನಿರರ್ಗಳವಾಗಿ ಮಾತನಾಡುವವನಾಗಿದ್ದಾನೆ. ಅದ್ದರಿಂದ ಅವನನ್ನು ನನ್ನ ಜೊತೆ ನನ್ನನ್ನು ಸಮರ್ಥಿಸುವಂತಹ ಒಬ್ಬ ಸಹಾಯಕನನ್ನಾಗಿ ಮಾಡಿ ಕಳುಹಿಸು. ನಿಶ್ಚಯವಾಗಿಯು ನನ್ನನ್ನು ಅವರು ಸುಳ್ಳಾಗಿಸುವರೆಂದು ನಾನು ಭಯಪಡುತ್ತೇನೆ.
قَالَ سَنَشُدُّ عَضُدَكَ بِأَخِيكَ وَنَجْعَلُ لَكُمَا سُلْطَانًا فَلَا يَصِلُونَ إِلَيْكُمَا ۚ بِآيَاتِنَا أَنتُمَا وَمَنِ اتَّبَعَكُمَا الْغَالِبُونَ ٣٥
📖 ಅನುವಾದ
ಆಯತ್ 35
ಅಲ್ಲಾಹನು ಹೇಳಿದನು: ನಾವು ನಿನ್ನ ಸಹೋದರನ ಮೂಲಕ ನಿನ್ನ ಬಾಹುವನ್ನು ಬಲಪಡಿಸಲಿದ್ದೇವೆ ಮತ್ತು ನಿಮಗಿಬ್ಬರಿಗೂ ವಿಜಯವನ್ನು ಕರುಣಿಸುವೆವು. ನಮ್ಮ ದೃಷ್ಟಾಂತಗಳ ನಿಮಿತ್ತ ಫಿರ್‌ಔನಿಯರು ನಿಮ್ಮೆಡೆಗೆ ತಲುಪಲಾರರು. ನೀವಿಬ್ಬರೂ ಮತ್ತು ನಿಮ್ಮನ್ನು ಅನುಸರಿಸುವವರೇ ಮೇಲುಗೈ ಸಾಧಿಸಲಿದ್ದಾರೆ.
فَلَمَّا جَاءَهُم مُّوسَىٰ بِآيَاتِنَا بَيِّنَاتٍ قَالُوا مَا هَٰذَا إِلَّا سِحْرٌ مُّفْتَرًى وَمَا سَمِعْنَا بِهَٰذَا فِي آبَائِنَا الْأَوَّلِينَ ٣٦
📖 ಅನುವಾದ
ಆಯತ್ 36
ತರುವಾಯ ಮೂಸಾ ನಮ್ಮ ಸುಸ್ಪಷ್ಟ ದೃಷ್ಟಾಂತಗಳೊAದಿಗೆ ಅವರ ಬಳಿ ಬಂದಾಗ ಅವರೆಂದರು ಇದಂತೂ ಕೃತಕ ಜಾದು ಆಗಿದೆ. ಮತ್ತು ಇದನ್ನು ನಾವು ನಮ್ಮ ಪೂರ್ವಿಕರಾದ ತಂದೆ ತಾತಂದಿರ ಕಾಲದಲ್ಲಿ ಕೇಳಿಯೇ ಇಲ್ಲ.
وَقَالَ مُوسَىٰ رَبِّي أَعْلَمُ بِمَن جَاءَ بِالْهُدَىٰ مِنْ عِندِهِ وَمَن تَكُونُ لَهُ عَاقِبَةُ الدَّارِ ۖ إِنَّهُ لَا يُفْلِحُ الظَّالِمُونَ ٣٧
📖 ಅನುವಾದ
ಆಯತ್ 37
ಪೈಗಂಬರ್ ಮೂಸಾ ಹೇಳಿದರು: ನನ್ನ ಪ್ರಭುವು, ತನ್ನ ಬಳಿಯಿಂದ ಮಾರ್ಗದರ್ಶನದೊಂದಿಗೆ ಬಂದಿರುವವನನ್ನು ಮತ್ತು ಪರಲೋಕದ ಉತ್ತಮ ಪರಿಣಾಮವು ಯಾರಿಗೆ ಇರುವುದೆಂದು ಚೆನ್ನಾಗಿ ಬಲ್ಲನು ನಿಜವಾಗಿಯೂ ಅಕ್ರಮಿಗಳು ವಿಜಯ ಪಡೆಯಲಾರರು.
وَقَالَ فِرْعَوْنُ يَا أَيُّهَا الْمَلَأُ مَا عَلِمْتُ لَكُم مِّنْ إِلَٰهٍ غَيْرِي فَأَوْقِدْ لِي يَا هَامَانُ عَلَى الطِّينِ فَاجْعَل لِّي صَرْحًا لَّعَلِّي أَطَّلِعُ إِلَىٰ إِلَٰهِ مُوسَىٰ وَإِنِّي لَأَظُنُّهُ مِنَ الْكَاذِبِينَ ٣٨
📖 ಅನುವಾದ
ಆಯತ್ 38
ಫಿರ್‌ಔನನೆಂದನು: ಓ ಆಸ್ಥಾನದ ಪ್ರಮುಖರೇ, ನನ್ನ ಹೊರತು ನಿಮಗೆ ಬೇರಾರ ಆರಾಧ್ಯ ದೇವನಿರುವುದನ್ನು ನಾನರಿಯೆನು. ಓ ಹಾಮಾನ್, ಇಟ್ಟಿಗೆಗಳನ್ನು ಸುಟ್ಟು ನನಗೊಂದು ಉನ್ನತ ಕಟ್ಟಡವನ್ನು ನಿರ್ಮಿಸು. ಹೀಗೆ ನಾನು ಮೂಸಾನ ಆರಾಧ್ಯನೆಡೆಗೆ ಇಣುಕಿ ನೋಡುತ್ತೇನೆ. ನಾನಂತು ಅವನನ್ನು ಸುಳ್ಳರಲ್ಲಿ ಭಾವಿಸುತ್ತಿದ್ದೇನೆ.
وَاسْتَكْبَرَ هُوَ وَجُنُودُهُ فِي الْأَرْضِ بِغَيْرِ الْحَقِّ وَظَنُّوا أَنَّهُمْ إِلَيْنَا لَا يُرْجَعُونَ ٣٩
📖 ಅನುವಾದ
ಆಯತ್ 39
ಫಿರ್‌ಔನನೆಂದನು: ಓ ಆಸ್ಥಾನದ ಪ್ರಮುಖರೇ, ನನ್ನ ಹೊರತು ನಿಮಗೆ ಬೇರಾರ ಆರಾಧ್ಯ ದೇವನಿರುವುದನ್ನು ನಾನರಿಯೆನು. ಓ ಹಾಮಾನ್, ಇಟ್ಟಿಗೆಗಳನ್ನು ಸುಟ್ಟು ನನಗೊಂದು ಉನ್ನತ ಕಟ್ಟಡವನ್ನು ನಿರ್ಮಿಸು. ಹೀಗೆ ನಾನು ಮೂಸಾನ ಆರಾಧ್ಯನೆಡೆಗೆ ಇಣುಕಿ ನೋಡುತ್ತೇನೆ. ನಾನಂತು ಅವನನ್ನು ಸುಳ್ಳರಲ್ಲಿ ಭಾವಿಸುತ್ತಿದ್ದೇನೆ.
فَأَخَذْنَاهُ وَجُنُودَهُ فَنَبَذْنَاهُمْ فِي الْيَمِّ ۖ فَانظُرْ كَيْفَ كَانَ عَاقِبَةُ الظَّالِمِينَ ٤٠
📖 ಅನುವಾದ
ಆಯತ್ 40
ಕೊನೆಗೆ ನಾವು ಅವನನ್ನೂ, ಅವನ ಸೈನ್ಯಗಳನ್ನೂ ಹಿಡಿದು ಸಮುದ್ರದಲ್ಲಿ ಎಸೆದು ಬಿಟ್ಟೆವು. ಇನ್ನು ನೀವು ಆ ಅಪರಾಧಿಗಳ ಪರಿಣಾಮವು ಹೇಗಿತ್ತೆಂಬುದನ್ನು ನೋಡಿ.
وَجَعَلْنَاهُمْ أَئِمَّةً يَدْعُونَ إِلَى النَّارِ ۖ وَيَوْمَ الْقِيَامَةِ لَا يُنصَرُونَ ٤١
📖 ಅನುವಾದ
ಆಯತ್ 41
ನಾವು ಅವರನ್ನು ನರಕದೆಡೆಗೆ ಕರೆಯುವಂತಹ ಮುಂದಾಳುಗಳನ್ನಾಗಿ ಮಾಡಿಬಿಟ್ಟೆವು ಪುನರುತ್ಥಾನ ದಿನದಂದು ಅವರಿಗೆ ಯಾವ ಸಹಾಯವು ದೊರಕಲಾರದು.
وَأَتْبَعْنَاهُمْ فِي هَٰذِهِ الدُّنْيَا لَعْنَةً ۖ وَيَوْمَ الْقِيَامَةِ هُم مِّنَ الْمَقْبُوحِينَ ٤٢
📖 ಅನುವಾದ
ಆಯತ್ 42
ಇಹಲೋಕದಲ್ಲಿ ನಾವು ಅವರ ಹಿಂದೆ ನಮ್ಮ ಶಾಪವನ್ನು ಹೇರಿಬಿಟ್ಟೆವು. ಮತ್ತು ಪ್ರಳಯ ದಿನದಂದೂ ಅವರು ಅತಿ ನಿಕೃಷ್ಟರಲ್ಲಾಗಿರುವರು.
وَلَقَدْ آتَيْنَا مُوسَى الْكِتَابَ مِن بَعْدِ مَا أَهْلَكْنَا الْقُرُونَ الْأُولَىٰ بَصَائِرَ لِلنَّاسِ وَهُدًى وَرَحْمَةً لَّعَلَّهُمْ يَتَذَكَّرُونَ ٤٣
📖 ಅನುವಾದ
ಆಯತ್ 43
ಇಹಲೋಕದಲ್ಲಿ ನಾವು ಅವರ ಹಿಂದೆ ನಮ್ಮ ಶಾಪವನ್ನು ಹೇರಿಬಿಟ್ಟೆವು. ಮತ್ತು ಪ್ರಳಯ ದಿನದಂದೂ ಅವರು ಅತಿ ನಿಕೃಷ್ಟರಲ್ಲಾಗಿರುವರು.
وَمَا كُنتَ بِجَانِبِ الْغَرْبِيِّ إِذْ قَضَيْنَا إِلَىٰ مُوسَى الْأَمْرَ وَمَا كُنتَ مِنَ الشَّاهِدِينَ ٤٤
📖 ಅನುವಾದ
ಆಯತ್ 44
ಓ ಸಂದೇಶವಾಹಕರೇ ನಾವು ಮೂಸಾರವರಿಗೆ ಧರ್ಮ ಸಂದೇಶವನ್ನು ನೀಡಿದಾಗ ನೀವು ತೂರ್ ಪರ್ವತದ ಪಶ್ಚಿಮ ಭಾಗದಲ್ಲಿ ಇರಲಿಲ್ಲ. ಮತ್ತು ಸಾಕ್ಷö್ಯವಹಿಸುವವರಲ್ಲೂ ಸೇರಿರಲಿಲ್ಲ.
وَلَٰكِنَّا أَنشَأْنَا قُرُونًا فَتَطَاوَلَ عَلَيْهِمُ الْعُمُرُ ۚ وَمَا كُنتَ ثَاوِيًا فِي أَهْلِ مَدْيَنَ تَتْلُو عَلَيْهِمْ آيَاتِنَا وَلَٰكِنَّا كُنَّا مُرْسِلِينَ ٤٥
📖 ಅನುವಾದ
ಆಯತ್ 45
ಇದಾದ ಬಳಿಕ ನಾವು ಅನೇಕ ಜನಾಂಗಗಳನ್ನು ಉಂಟು ಮಾಡಿದೆವು. ಅವರ ಮೇಲೆ ಸುಧೀರ್ಘ ಕಾಲಾವಧಿಯು ಗತಿಸಿಹೋಯಿತು, ಮತ್ತು ನೀವು ಮದ್‌ಯನ್‌ನವರಿಗೆ ನಮ್ಮ ಸೂಕ್ತಿಗಳನ್ನು ಓದಿ ಕೇಳಿಸಲು ಅವರ ಮಧ್ಯೆ ತಂಗಿರಲಿಲ್ಲ. ಆದರೆ ನಾವೇ (ಆ ಕಾಲದ) ಸುದ್ದಿಗಳನ್ನು ಕಳುಹಿಸಿ ಕೊಡುವವರಾಗಿದ್ದೇವೆ
وَمَا كُنتَ بِجَانِبِ الطُّورِ إِذْ نَادَيْنَا وَلَٰكِن رَّحْمَةً مِّن رَّبِّكَ لِتُنذِرَ قَوْمًا مَّا أَتَاهُم مِّن نَّذِيرٍ مِّن قَبْلِكَ لَعَلَّهُمْ يَتَذَكَّرُونَ ٤٦
📖 ಅನುವಾದ
ಆಯತ್ 46
ನಾವು ಮೂಸಾರವರನ್ನು ಕರೆದಾಗ ನೀವು ತೂರ್‌ನ ಬದಿಯಲ್ಲಿ ಇರಲಿಲ್ಲ. ಆದರೆ ಇದು ನಿಮ್ಮ ಪ್ರಭುವಿನ ಕಡೆಯ ಒಂದು ಕೃಪೆಯಾಗಿದೆ. ಇದೇಕೆಂದರೆ ನಿಮಗಿಂತ ಮೊದಲು ಮುನ್ನೆಚ್ಚರಿಕೆ ನೀಡುವವರಾರು ಬಾರದಿದ್ದ ಜನತೆಗೆ ಎಚ್ಚರಿಕೆ ನೀಡಲೆಂದಾಗಿದೆ. ಅವರು ಉಪದೇಶ ಸ್ವೀಕರಿಸಬಹುದು.
وَلَوْلَا أَن تُصِيبَهُم مُّصِيبَةٌ بِمَا قَدَّمَتْ أَيْدِيهِمْ فَيَقُولُوا رَبَّنَا لَوْلَا أَرْسَلْتَ إِلَيْنَا رَسُولًا فَنَتَّبِعَ آيَاتِكَ وَنَكُونَ مِنَ الْمُؤْمِنِينَ ٤٧
📖 ಅನುವಾದ
ಆಯತ್ 47
(ಅವರ ಜನಾಂಗ) ಸ್ವತಃ ಅವರ ಕೈಗಳು ಮುಂಚೆ ಮಾಡಿರುವ ಕರ್ಮಗಳ ಕಾರಣ ಅವರಿಗೆ ಯಾವುದಾದರೂ ವಿಪತ್ತು ತಟ್ಟಿದರೆ ಅವರಾಗ ಹೇಳುತ್ತಿದ್ದರು “ನಮ್ಮ ಪ್ರಭುವೇ, ನಮ್ಮೆಡೆಗೆ ಒಬ್ಬ ಸಂದೇಶವಾಹಕನನ್ನು ಯಾಕೆ ಕಳುಹಿಸಲಿಲ್ಲ? ಹಾಗಿದ್ದರೆ ನಾವು ನಿನ್ನ ಸೂಕ್ತಿಗಳನ್ನು ಅನುಸರಿಸುತ್ತಿದ್ದೆವು ಹಾಗು ಸತ್ಯವಿಶ್ವಾಸಿಗಳಲ್ಲಾಗುತ್ತಿದ್ದೆವು”.
فَلَمَّا جَاءَهُمُ الْحَقُّ مِنْ عِندِنَا قَالُوا لَوْلَا أُوتِيَ مِثْلَ مَا أُوتِيَ مُوسَىٰ ۚ أَوَلَمْ يَكْفُرُوا بِمَا أُوتِيَ مُوسَىٰ مِن قَبْلُ ۖ قَالُوا سِحْرَانِ تَظَاهَرَا وَقَالُوا إِنَّا بِكُلٍّ كَافِرُونَ ٤٨
📖 ಅನುವಾದ
ಆಯತ್ 48
ಅನಂತರ ಅವರ ಬಳಿ ನಮ್ಮ ಕಡೆಯಿಂದ ಸತ್ಯವು ಬಂದಾಗ ಅವರು ಹೇಳುತ್ತಾರೆ: ಮೂಸಾರಿಗೆ ನೀಡಲಾದಂತಹ ದುಷ್ಟಾಂತಗಳನ್ನು ಇವರಿಗೇಕೆ ನೀಡಲಾಗಿಲ್ಲ? ಸರಿ, ಇದಕ್ಕೆ ಮೊದಲು ಮೂಸಾರಿಗೆ ನೀಡಲಾಗಿದವುಗಳನ್ನು ಅವರು ನಿಷೇಧಿಸಲಿಲ್ಲವೇ? ಅವರು ಹೇಳಿದರು: ಎರಡೂ (ಕುರ್‌ಆನ್, ತೌರಾತ್) ಪರಸ್ಪರ ಸಮರ್ಥಿಸುತ್ತಿರುವ ಜಾದು ಆಗಿದೆ. ಮತ್ತು ನಾವು ಅವೆಲ್ಲವುಗಳ ನಿಷೇಧಿಗಳಾಗಿದ್ದೇವೆ.
قُلْ فَأْتُوا بِكِتَابٍ مِّنْ عِندِ اللَّهِ هُوَ أَهْدَىٰ مِنْهُمَا أَتَّبِعْهُ إِن كُنتُمْ صَادِقِينَ ٤٩
📖 ಅನುವಾದ
ಆಯತ್ 49
ಹೇಳಿರಿ: ನೀವು (ಮಕ್ಕಾದ ಬಹುದೇವರಾಧಕರು) ಇವೆರೆಡಕ್ಕಿಂತ ಹೆಚ್ಚು ಸನ್ಮಾರ್ಗದರ್ಶಿ ಯಾದಂತಹ ಗ್ರಂಥವನ್ನು ಅಲ್ಲಾಹನ ಬಳಿಯಿಂದ ತನ್ನಿರಿ. ನಾನು ಅದನ್ನು ಅನುಸರಿಸುವೆನು. ನೀವು ಸತ್ಯವಂತರಾಗಿದ್ದರೆ.
فَإِن لَّمْ يَسْتَجِيبُوا لَكَ فَاعْلَمْ أَنَّمَا يَتَّبِعُونَ أَهْوَاءَهُمْ ۚ وَمَنْ أَضَلُّ مِمَّنِ اتَّبَعَ هَوَاهُ بِغَيْرِ هُدًى مِّنَ اللَّهِ ۚ إِنَّ اللَّهَ لَا يَهْدِي الْقَوْمَ الظَّالِمِينَ ٥٠
📖 ಅನುವಾದ
ಆಯತ್ 50
ಇನ್ನು ಅವರು ನಿಮ್ಮ ಸವಾಲನ್ನು ಸ್ವೀಕರಿಸದಿದ್ದಲ್ಲಿ ಆಗ ನೀವು ತಿಳಿದುಕೊಳ್ಳಿ ಅವರಂತು ತಮ್ಮ ಸ್ವೇಚ್ಛೆಗಳನ್ನು ಅನುಸರಿಸುತ್ತಿದ್ದಾರೆ ಮತ್ತು ಅಲ್ಲಾಹನ ಮಾರ್ಗದರ್ಶನವಿಲ್ಲದೆ ತನ್ನ ಸ್ವೇಚ್ಛೆಯನ್ನು ಅನುಸರಿಸುವವನಿಗಿಂತ ಹೆಚ್ಚು ದಾರಿಗೆಟ್ಟವ ಇನ್ನರಿದ್ದಾನೆ? ನಿಸ್ಸಂದೇಹವಾಗಿಯೂ ಅಲ್ಲಾಹನು ಅಕ್ರಮಿ ಜನಾಂಗಕ್ಕೆ ಸನ್ಮಾರ್ಗವನ್ನು ಕರುಣಿಸುವುದಿಲ್ಲ.
۞ وَلَقَدْ وَصَّلْنَا لَهُمُ الْقَوْلَ لَعَلَّهُمْ يَتَذَكَّرُونَ ٥١
📖 ಅನುವಾದ
ಆಯತ್ 51
ನಿಶ್ಚಯವಾಗಿಯು ಅವರು ಉಪದೇಶ ಸ್ವೀಕರಿಸಲೆಂದು ಅವರಿಗೆ ನಾವು ನಮ್ಮ ಸಂದೇಶವನ್ನು ನಿರಂತರವಾಗಿ ಕಳುಹಿಸಿದೆವು.
الَّذِينَ آتَيْنَاهُمُ الْكِتَابَ مِن قَبْلِهِ هُم بِهِ يُؤْمِنُونَ ٥٢
📖 ಅನುವಾದ
ಆಯತ್ 52
ಇದಕ್ಕೆ ಮೊದಲು ನಾವು ಯಾರಿಗೆ ಗ್ರಂಥ ನೀಡಿದ್ದೇವೊ ಅವರು ಅದರಲ್ಲಿ ವಿಶ್ವಾಸವಿಡುತ್ತಾರೆ.
وَإِذَا يُتْلَىٰ عَلَيْهِمْ قَالُوا آمَنَّا بِهِ إِنَّهُ الْحَقُّ مِن رَّبِّنَا إِنَّا كُنَّا مِن قَبْلِهِ مُسْلِمِينَ ٥٣
📖 ಅನುವಾದ
ಆಯತ್ 53
ಮತ್ತು ಅವರಿಗೆ ಅದನ್ನು ಓದಿ ಹೇಳಲಾದಾಗ ಅವರು ಹೇಳುತ್ತಾರೆ: ನಾವು ಇದರಲ್ಲಿ ವಿಶ್ವಾಸವಿರಿಸಿದ್ದೇವೆ. ಇದು ನಮ್ಮ ಪ್ರಭುವಿನ ಕಡೆಯಿಂದಿರುವ ಸತ್ಯವಾಗಿದೆ. ನಿಶ್ಚಯವಾಗಿಯು ನಾವು ಇದಕ್ಕೆ ಮೊದಲೇ ವಿಧೇಯರಾಗಿದ್ದೆವು.
أُولَٰئِكَ يُؤْتَوْنَ أَجْرَهُم مَّرَّتَيْنِ بِمَا صَبَرُوا وَيَدْرَءُونَ بِالْحَسَنَةِ السَّيِّئَةَ وَمِمَّا رَزَقْنَاهُمْ يُنفِقُونَ ٥٤
📖 ಅನುವಾದ
ಆಯತ್ 54
ಅವರು ಸಹನೆವಹಿಸಿರುವ ನಿಮಿತ್ತ ಎರಡು ಬಾರಿ ಪ್ರತಿಫಲವನ್ನು ನೀಡಲಾಗುವರು ಅವರು ಒಳಿತಿನಿಂದ ಕೆಡುಕನ್ನು ತಡೆಯುತ್ತಾರೆ. ಹಾಗೂ ನಾವು ಅವರಿಗೆ ನೀಡಿರುವುದರಿಂದ ಖರ್ಚು ಮಾಡುತ್ತಾರೆ.
وَإِذَا سَمِعُوا اللَّغْوَ أَعْرَضُوا عَنْهُ وَقَالُوا لَنَا أَعْمَالُنَا وَلَكُمْ أَعْمَالُكُمْ سَلَامٌ عَلَيْكُمْ لَا نَبْتَغِي الْجَاهِلِينَ ٥٥
📖 ಅನುವಾದ
ಆಯತ್ 55
ಅವರು ವ್ಯರ್ಥ ಮಾತು ಕೇಳಿದಾಗ ಅದರಿಂದ ವಿಮುಖರಾಗುತ್ತಾರೆ ಹಾಗೂ ಹೇಳುತ್ತಾರೆ ನಮ್ಮ ಕರ್ಮಗಳು ನಮಗಿರುವುವು ನಿಮ್ಮ ಕರ್ಮಗಳು ನಿಮಗಿರುವುವು. ನಿಮ್ಮ ಮೇಲೆ ಶಾಂತಿ ಇರಲಿ. ನಾವು ಅವಿವೇಕಿಗಳೊಂದಿಗೆ ತರ್ಕಿಸಲು (ಜಗಳವಾಡಲು) ಬಯಸುವುದಿಲ್ಲ.
إِنَّكَ لَا تَهْدِي مَنْ أَحْبَبْتَ وَلَٰكِنَّ اللَّهَ يَهْدِي مَن يَشَاءُ ۚ وَهُوَ أَعْلَمُ بِالْمُهْتَدِينَ ٥٦
📖 ಅನುವಾದ
ಆಯತ್ 56
ನೀವಿಚ್ಛಿಸುವವರನ್ನು ಸನ್ಮಾರ್ಗದಲ್ಲಿ ಮುನ್ನಡೆಸಲಾರಿರಿ ಆದರೆ ಅಲ್ಲಾಹನು ತಾನಿಚ್ಛಿದವರನ್ನು ಸನ್ಮಾರ್ಗದಲ್ಲಿ ಮುನ್ನೆಡೆಸುತ್ತಾನೆ. ಮತ್ತು ಸನ್ಮಾರ್ಗ ಪಡೆಯುವವರ ಕುರಿತು ಅವನು ಚೆನ್ನಾಗಿ ಬಲ್ಲನು.
وَقَالُوا إِن نَّتَّبِعِ الْهُدَىٰ مَعَكَ نُتَخَطَّفْ مِنْ أَرْضِنَا ۚ أَوَلَمْ نُمَكِّن لَّهُمْ حَرَمًا آمِنًا يُجْبَىٰ إِلَيْهِ ثَمَرَاتُ كُلِّ شَيْءٍ رِّزْقًا مِّن لَّدُنَّا وَلَٰكِنَّ أَكْثَرَهُمْ لَا يَعْلَمُونَ ٥٧
📖 ಅನುವಾದ
ಆಯತ್ 57
ಮಕ್ಕಾದ ಬಹುದೇವರಾಧಕರು ಹೇಳುತ್ತಾರೆ: ನಾವು ನಿಮ್ಮೊಂದಿಗೆ ಸನ್ಮಾರ್ಗವನ್ನು ಅನುಸರಿಸಿದರೆ ನಾವು ನಮ್ಮ ನಾಡಿನಿಂದ ಅಪಹರಿಸಲ್ಪಡುತ್ತೇವೆ. ಏನು ಎಲ್ಲಾ ವಿಧದ ಹಣ್ಣು-ಹಂಪಲುಗಳು ನಮ್ಮ ಕಡೆಯಿಂದ ಜೀವನಾಧಾರವಾಗಿ ಹರಿದು ಬರುತ್ತಿರುವ ಒಂದು ನಿರ್ಭಯ ತಾಣವಾದ ಹರಮ್‌ಅನ್ನು ನಾವು ಅವರಿಗೆ ಕರುಣಿಸಲಿಲ್ಲವೇ? ಆದರೆ ಅವರಲ್ಲಿ ಹೆಚ್ಚಿನವರು ಅರಿಯುವುದಿಲ್ಲ.
وَكَمْ أَهْلَكْنَا مِن قَرْيَةٍ بَطِرَتْ مَعِيشَتَهَا ۖ فَتِلْكَ مَسَاكِنُهُمْ لَمْ تُسْكَن مِّن بَعْدِهِمْ إِلَّا قَلِيلًا ۖ وَكُنَّا نَحْنُ الْوَارِثِينَ ٥٨
📖 ಅನುವಾದ
ಆಯತ್ 58
ತಮ್ಮ ಸುಖಜೀವನಾಧಾರದಲ್ಲಿ ದುರಭಿಮಾನ ಪಟ್ಟುಕೊಳ್ಳುತ್ತಿದ್ದಂತಹ ಅದೆಷ್ಟೋ ನಾಡುಗಳನ್ನು ನಾವು ನಾಶಗೊಳಿಸಿದ್ದೇವೆ. ಇವು ಅವರ ಪಾಳುಬಿದ್ದಿರುವ ವಸತಿಗಳು; ಅವುಗಳಲ್ಲಿ ಅವರ ನಂತರ ಅತ್ಯಲ್ಪವಾಗಿಯೇ ವಾಸಿಸಲಾಯಿತು. ಕೊನೆಗೆ ನಾವೇ ವಾರಿಸುದಾರರಾದೆವು.
وَمَا كَانَ رَبُّكَ مُهْلِكَ الْقُرَىٰ حَتَّىٰ يَبْعَثَ فِي أُمِّهَا رَسُولًا يَتْلُو عَلَيْهِمْ آيَاتِنَا ۚ وَمَا كُنَّا مُهْلِكِي الْقُرَىٰ إِلَّا وَأَهْلُهَا ظَالِمُونَ ٥٩
📖 ಅನುವಾದ
ಆಯತ್ 59
ನಿಮ್ಮ ಪ್ರಭುವು ನಾಡುಗಳ ಕೇಂದ್ರದಲ್ಲಿ ಅವರಿಗೆ ನಮ್ಮ ಸೂಕ್ತಿಗಳನ್ನು ಓದಿ ಹೇಳುವ ಓರ್ವ ಸಂದೇಶವಾಹಕನನ್ನು ಕಳುಹಿಸುವವರೆಗೆ ನಾಡುಗಳನ್ನು ನಾಶಪಡಿಸುವವನಲ್ಲ ಮತ್ತು ನಾವು ಅಕ್ರಮಿ ನಾಡುಗಳನ್ನೇ ನಾಶಗೊಳಿಸುತ್ತೇವೆ.
وَمَا أُوتِيتُم مِّن شَيْءٍ فَمَتَاعُ الْحَيَاةِ الدُّنْيَا وَزِينَتُهَا ۚ وَمَا عِندَ اللَّهِ خَيْرٌ وَأَبْقَىٰ ۚ أَفَلَا تَعْقِلُونَ ٦٠
📖 ಅನುವಾದ
ಆಯತ್ 60
ನಿಮಗೆ ಕರುಣಿಸಲಾಗಿರುವುದೆಲ್ಲಾ ಇಹಲೋಕ ಜೀವನದ ಸುಖಾಡಂಬರ ಹಾಗೂ ಅದರ ಅಲಂಕಾರವಾಗಿರುತ್ತದೆ ಆದರೆ ಅಲ್ಲಾಹನ ಬಳಿಯಿರುವುದು ಅತ್ಯುತ್ತಮವೂ, ಅತ್ಯಂತ ಶಾಶ್ವತವೂ ಆಗಿದೆ. ನೀವು ತಿಳಿದುಕೊಳ್ಳುವುದಿಲ್ಲವೇ?
أَفَمَن وَعَدْنَاهُ وَعْدًا حَسَنًا فَهُوَ لَاقِيهِ كَمَن مَّتَّعْنَاهُ مَتَاعَ الْحَيَاةِ الدُّنْيَا ثُمَّ هُوَ يَوْمَ الْقِيَامَةِ مِنَ الْمُحْضَرِينَ ٦١
📖 ಅನುವಾದ
ಆಯತ್ 61
ನಿಮಗೆ ಕರುಣಿಸಲಾಗಿರುವುದೆಲ್ಲಾ ಇಹಲೋಕ ಜೀವನದ ಸುಖಾಡಂಬರ ಹಾಗೂ ಅದರ ಅಲಂಕಾರವಾಗಿರುತ್ತದೆ ಆದರೆ ಅಲ್ಲಾಹನ ಬಳಿಯಿರುವುದು ಅತ್ಯುತ್ತಮವೂ, ಅತ್ಯಂತ ಶಾಶ್ವತವೂ ಆಗಿದೆ. ನೀವು ತಿಳಿದುಕೊಳ್ಳುವುದಿಲ್ಲವೇ?
وَيَوْمَ يُنَادِيهِمْ فَيَقُولُ أَيْنَ شُرَكَائِيَ الَّذِينَ كُنتُمْ تَزْعُمُونَ ٦٢
📖 ಅನುವಾದ
ಆಯತ್ 62
ಅಂದು ಅಲ್ಲಾಹನು ಅವರನ್ನು ನೀವು ನನ್ನ ಸಹಭಾಗಿಗಳೆಂದು ನಿಶ್ಚಯಿಸುತ್ತಿದ್ದವರು ಎಲ್ಲಿದ್ದಾರೆಂದು ಕೇಳುವನು.
قَالَ الَّذِينَ حَقَّ عَلَيْهِمُ الْقَوْلُ رَبَّنَا هَٰؤُلَاءِ الَّذِينَ أَغْوَيْنَا أَغْوَيْنَاهُمْ كَمَا غَوَيْنَا ۖ تَبَرَّأْنَا إِلَيْكَ ۖ مَا كَانُوا إِيَّانَا يَعْبُدُونَ ٦٣
📖 ಅನುವಾದ
ಆಯತ್ 63
ಯಾರ ಮೇಲೆ (ಶಿಕ್ಷೆ) ಮಾತು ಸಾಬೀತುಗೊಂಡಿದೆಯೋ ಅವರು ಹೇಳುವರು: ನಮ್ಮ ಪ್ರಭುವೇ, ಇವರೇ ನಾವು ದಾರಿತಪ್ಪಿಸಿದವರು. ನಾವು ದಾರಿ ತಪ್ಪಿದಂತೆಯೇ ಇವರನ್ನೂ ದಾರಿ ತಪ್ಪಿಸಿದೆವು. ನಾವು ನಿನ್ನ ಮುಂದೆ ಹೊಣೆ ಮುಕ್ತರಾಗುತ್ತಿದ್ದೇವೆ. ಇವರು ನಮ್ಮನ್ನು ಆರಾಧಿಸುತ್ತಿರಲಿಲ್ಲ.
وَقِيلَ ادْعُوا شُرَكَاءَكُمْ فَدَعَوْهُمْ فَلَمْ يَسْتَجِيبُوا لَهُمْ وَرَأَوُا الْعَذَابَ ۚ لَوْ أَنَّهُمْ كَانُوا يَهْتَدُونَ ٦٤
📖 ಅನುವಾದ
ಆಯತ್ 64
ಹೇಳಲಾಗುವುದು: ನೀವು ನಿಮ್ಮ ಸಹಭಾಗಿಗಳನ್ನು ಕರೆÀದುಕೊಳ್ಳಿರಿ. ಆಗ ಅವರು ಅವರನ್ನು ಕರೆಯುವರು. ಆದರೆ ಅವರು (ಮಿಥ್ಯ ದೇವರುಗಳು) ಅವರಿಗೆ ಓಗೊಡಲಾರರು ಮತ್ತು ಅವರು ಸತ್ಯನಿಷೇಧಿಗಳು ಮತ್ತು ಬಹುದೇವಾರಾಧಕರು ಯಾತನೆಯನ್ನು ಕಾಣುವಾಗ. (ಹೇಳುವರು) ಅಯ್ಯೋ! ನಾವು ಸನ್ಮಾರ್ಗ ಪಡೆದಿರುತ್ತಿದ್ದರೆ!
وَيَوْمَ يُنَادِيهِمْ فَيَقُولُ مَاذَا أَجَبْتُمُ الْمُرْسَلِينَ ٦٥
📖 ಅನುವಾದ
ಆಯತ್ 65
ಅಂದು ಅಲ್ಲಾಹನು ಅವರನ್ನು ಕರೆದು ಕೇಳುವನು: ಸಂದೇಶವಾಹಕರಿಗೆ ನೀವೇನು ಉತ್ತರ ಕೊಟ್ಟಿರಿ.
فَعَمِيَتْ عَلَيْهِمُ الْأَنبَاءُ يَوْمَئِذٍ فَهُمْ لَا يَتَسَاءَلُونَ ٦٦
📖 ಅನುವಾದ
ಆಯತ್ 66
ಅಂದು ಅವರಿಗೆ ಏನು ತೋಚದಂತಾಗಿ ಬಿಡುವುದು ಮತ್ತು ಅವರಿಗೆ ಪರಸ್ಪರ ವಿಚಾರಿಸಲೂ ಸಾಧ್ಯವಾಗದು.
فَأَمَّا مَن تَابَ وَآمَنَ وَعَمِلَ صَالِحًا فَعَسَىٰ أَن يَكُونَ مِنَ الْمُفْلِحِينَ ٦٧
📖 ಅನುವಾದ
ಆಯತ್ 67
ಆದರೆ ಯಾರು ಪಶ್ಚಾತ್ತಾಪ ಪಟ್ಟು, ಸತ್ಯವಿಶ್ವಾಸವಿರಿಸಿ ಹಾಗೂ ಸತ್ಕರ್ಮವನ್ನು ಕೈಗೊಳ್ಳುತ್ತಾನೋ ಅವನು ವಿಜಯಿಗಳಲ್ಲಾಗಬಹುದು.
وَرَبُّكَ يَخْلُقُ مَا يَشَاءُ وَيَخْتَارُ ۗ مَا كَانَ لَهُمُ الْخِيَرَةُ ۚ سُبْحَانَ اللَّهِ وَتَعَالَىٰ عَمَّا يُشْرِكُونَ ٦٨
📖 ಅನುವಾದ
ಆಯತ್ 68
ನಿಮ್ಮ ಪ್ರಭುವು ತಾನಿಚ್ಛಿಸಿದ್ದನ್ನು ಸೃಷ್ಟಿಸುತ್ತಾನೆ ಮತ್ತು ತಾನಿಚ್ಛಿಸಿದ್ದನ್ನು ಆಯ್ಕೆ ಮಾಡುತ್ತಾನೆ. ಅವರಿಗೆ ಆಯ್ಕೆ ಮಾಡುವ ಅಧಿಕಾರವಿಲ್ಲ. ಅಲ್ಲಾಹನು ಪರಮಪಾವನನು ಮತ್ತು ಇವರು ಮಾಡುತ್ತಿರುವ ದೇವಸಹಭಾಗಿತ್ವದಿಂದ ಅವನು ಅದೆಷ್ಟೋ ಉನ್ನತನಾಗಿರುವನು.
وَرَبُّكَ يَعْلَمُ مَا تُكِنُّ صُدُورُهُمْ وَمَا يُعْلِنُونَ ٦٩
📖 ಅನುವಾದ
ಆಯತ್ 69
ಮತ್ತು ಅವರ ಹೃದಯಗಳು ರಹಸ್ಯವಾಗಿರುವುದನ್ನು. ಬಹಿರಂಗಗೊಳಿಸುವುದನ್ನು ನಿಮ್ಮ ಪ್ರಭುವು ಅರಿಯುತ್ತಾನೆ.
وَهُوَ اللَّهُ لَا إِلَٰهَ إِلَّا هُوَ ۖ لَهُ الْحَمْدُ فِي الْأُولَىٰ وَالْآخِرَةِ ۖ وَلَهُ الْحُكْمُ وَإِلَيْهِ تُرْجَعُونَ ٧٠
📖 ಅನುವಾದ
ಆಯತ್ 70
ಅವನೇ ಅಲ್ಲಾಹನು; ಅವನ ಹೊರತು ಬೇರಾವ ಆರಾಧ್ಯನಿಲ್ಲ. ಇಹಲೋಕದಲ್ಲೂ, ಪರಲೋಕದಲ್ಲೂ ಅವನಿಗೇ ಸರ್ವಸ್ತುತಿಯು ಮೀಸಲು. ಅವನಿಗೇ ಆಜ್ಞಾಧಿಕಾರವಿರುವುದು ಮತ್ತು ಅವನೆಡೆಗೇ ನೀವು ಮರಳಿಸಲಾಗುವಿರಿ.
قُلْ أَرَأَيْتُمْ إِن جَعَلَ اللَّهُ عَلَيْكُمُ اللَّيْلَ سَرْمَدًا إِلَىٰ يَوْمِ الْقِيَامَةِ مَنْ إِلَٰهٌ غَيْرُ اللَّهِ يَأْتِيكُم بِضِيَاءٍ ۖ أَفَلَا تَسْمَعُونَ ٧١
📖 ಅನುವಾದ
ಆಯತ್ 71
ಅವನೇ ಅಲ್ಲಾಹನು; ಅವನ ಹೊರತು ಬೇರಾವ ಆರಾಧ್ಯನಿಲ್ಲ. ಇಹಲೋಕದಲ್ಲೂ, ಪರಲೋಕದಲ್ಲೂ ಅವನಿಗೇ ಸರ್ವಸ್ತುತಿಯು ಮೀಸಲು. ಅವನಿಗೇ ಆಜ್ಞಾಧಿಕಾರವಿರುವುದು ಮತ್ತು ಅವನೆಡೆಗೇ ನೀವು ಮರಳಿಸಲಾಗುವಿರಿ.
قُلْ أَرَأَيْتُمْ إِن جَعَلَ اللَّهُ عَلَيْكُمُ النَّهَارَ سَرْمَدًا إِلَىٰ يَوْمِ الْقِيَامَةِ مَنْ إِلَٰهٌ غَيْرُ اللَّهِ يَأْتِيكُم بِلَيْلٍ تَسْكُنُونَ فِيهِ ۖ أَفَلَا تُبْصِرُونَ ٧٢
📖 ಅನುವಾದ
ಆಯತ್ 72
ಹೇಳಿರಿ: ಅಲ್ಲಾಹನು ನಿಮ್ಮ ಮೇಲೆ ಪ್ರಳಯ ದಿನದವರೆಗೂ ಹಗಲನ್ನೇ ನಿಶ್ಚಯಿಸಿಬಿಟ್ಟರೆ ಅಲ್ಲಾಹನ ಹೊರತು ನೀವು ವಿಶ್ರಾಂತಿ ಪಡಯುವ ರಾತ್ರಿಯನ್ನು ನಿಮಗೆ ತಂದು ಕೊಡುವಂತಹ ಬೇರಾವ ಆರಾಧ್ಯನಿದ್ದಾನೆ? ನೀವು ಕಾಣುವುದಿಲ್ಲವೇ?
وَمِن رَّحْمَتِهِ جَعَلَ لَكُمُ اللَّيْلَ وَالنَّهَارَ لِتَسْكُنُوا فِيهِ وَلِتَبْتَغُوا مِن فَضْلِهِ وَلَعَلَّكُمْ تَشْكُرُونَ ٧٣
📖 ಅನುವಾದ
ಆಯತ್ 73
ಹೇಳಿರಿ: ಅಲ್ಲಾಹನು ನಿಮ್ಮ ಮೇಲೆ ಪ್ರಳಯ ದಿನದವರೆಗೂ ಹಗಲನ್ನೇ ನಿಶ್ಚಯಿಸಿಬಿಟ್ಟರೆ ಅಲ್ಲಾಹನ ಹೊರತು ನೀವು ವಿಶ್ರಾಂತಿ ಪಡಯುವ ರಾತ್ರಿಯನ್ನು ನಿಮಗೆ ತಂದು ಕೊಡುವಂತಹ ಬೇರಾವ ಆರಾಧ್ಯನಿದ್ದಾನೆ? ನೀವು ಕಾಣುವುದಿಲ್ಲವೇ?
وَيَوْمَ يُنَادِيهِمْ فَيَقُولُ أَيْنَ شُرَكَائِيَ الَّذِينَ كُنتُمْ تَزْعُمُونَ ٧٤
📖 ಅನುವಾದ
ಆಯತ್ 74
ಅಂದು ಅಲ್ಲಾಹನು ಬಹುದೇವಾರಾಧಕರನ್ನು ಕರೆದು ಕೇಳುವನು: ನನ್ನ ಸಹಭಾಗಿಗಳೆಂದು ಕಲ್ಪಿಸಿಕೊಂಡಿದ್ದವರು ಎಲ್ಲಿದ್ದಾರೆ?
وَنَزَعْنَا مِن كُلِّ أُمَّةٍ شَهِيدًا فَقُلْنَا هَاتُوا بُرْهَانَكُمْ فَعَلِمُوا أَنَّ الْحَقَّ لِلَّهِ وَضَلَّ عَنْهُم مَّا كَانُوا يَفْتَرُونَ ٧٥
📖 ಅನುವಾದ
ಆಯತ್ 75
ನಾವು ಪ್ರತಿಯೊಂದು ಸಮುದಾಯದಿಂದಲೂ ಒಬ್ಬ ಸಾಕ್ಷಿಯನ್ನು ಹೊರತರುವೆವು: ಹಾಗೂ ಹೇಳುವೆವು, ನೀವು ನಿಮ್ಮ ಪುರಾವೆಯವನ್ನು ತನ್ನಿರಿ. ಕೂಡಲೇ ಅವರು ಸತ್ಯವು ಅಲ್ಲಾಹನ ಕಡೆಯಿದೆ ಎಂದು ಮನಗಾಣುವರು ಮತ್ತು ಅವರು ಸುಳ್ಳು ಸೃಷ್ಟಿಸುತ್ತಿದ್ದವುಗಳೆಲ್ಲಾ ಅವರಿಂದ ಕಣ್ಮರೆಯಾಗಿ ಬಿಡುವುದು
۞ إِنَّ قَارُونَ كَانَ مِن قَوْمِ مُوسَىٰ فَبَغَىٰ عَلَيْهِمْ ۖ وَآتَيْنَاهُ مِنَ الْكُنُوزِ مَا إِنَّ مَفَاتِحَهُ لَتَنُوءُ بِالْعُصْبَةِ أُولِي الْقُوَّةِ إِذْ قَالَ لَهُ قَوْمُهُ لَا تَفْرَحْ ۖ إِنَّ اللَّهَ لَا يُحِبُّ الْفَرِحِينَ ٧٦
📖 ಅನುವಾದ
ಆಯತ್ 76
ಕಾರೂನನು ಮೂಸಾರವರ ಜನಾಂಗದವನಾಗಿದ್ದನು. ಆದರೆ ಅವನು ಅವರ ಮೇಲೆ ದಬ್ಬಾಳಿಕೆ ನಡೆಸಿದ್ದನು ನಾವು ಅವನಿಗೆ ನಿಧಿಭಂಡಾರಗಳನ್ನು ನೀಡಿದೆವು. ಅದರ ಬೀಗದ ಕೈಗಳನ್ನು ಎತ್ತಲು ಒಂದು ಬಲಿಷ್ಠ ತಂಡಕ್ಕೆ ಭಾರವಾಗಿತ್ತಿತ್ತು. ಒಮ್ಮೆ ಅವನ ಜನಾಂಗದವರು ಅವನಿಗೆ ಹೇಳಿದರು: ನೀನು ಹಿಗ್ಗಬೇಡ. ಅಲ್ಲಾಹನು ಹಿಗ್ಗುವವರನ್ನು ಇಷ್ಟಪಡುವುದಿಲ್ಲ.
وَابْتَغِ فِيمَا آتَاكَ اللَّهُ الدَّارَ الْآخِرَةَ ۖ وَلَا تَنسَ نَصِيبَكَ مِنَ الدُّنْيَا ۖ وَأَحْسِن كَمَا أَحْسَنَ اللَّهُ إِلَيْكَ ۖ وَلَا تَبْغِ الْفَسَادَ فِي الْأَرْضِ ۖ إِنَّ اللَّهَ لَا يُحِبُّ الْمُفْسِدِينَ ٧٧
📖 ಅನುವಾದ
ಆಯತ್ 77
ಮತ್ತು ಅಲ್ಲಾಹನು ನಿನಗೆ ದಯಪಾಲಿಸಿದ ಸಂಪತ್ತಿನಿAದ ಪರಲೋಕದ ನಿವಾಸವನ್ನು ಅರಸು. ಮತ್ತು ನಿನ್ನ ಇಹಲೋಕದ ಪಾಲನ್ನು ಸಹ ಮರೆಯಬೇಡ ಮತ್ತು ಅಲ್ಲಾಹನು ನಿನಗೆ ಒಳಿತು ಮಾಡಿದ ಹಾಗೆ ನೀನೂ ಒಳಿತು ಮಾಡು. ಮತ್ತು ಭೂಮಿಯಲ್ಲಿ ಕ್ಷೆÆÃಭೆಯನ್ನು ಬಯಸದಿರು. ನಿಶ್ಚಯವಾಗಿಯು ಅಲ್ಲಾಹನು ಕ್ಷೆÆÃಭೆ ಹರಡುವವರನ್ನು ಇಷ್ಟಪಡುವುದಿಲ್ಲ.
قَالَ إِنَّمَا أُوتِيتُهُ عَلَىٰ عِلْمٍ عِندِي ۚ أَوَلَمْ يَعْلَمْ أَنَّ اللَّهَ قَدْ أَهْلَكَ مِن قَبْلِهِ مِنَ الْقُرُونِ مَنْ هُوَ أَشَدُّ مِنْهُ قُوَّةً وَأَكْثَرُ جَمْعًا ۚ وَلَا يُسْأَلُ عَن ذُنُوبِهِمُ الْمُجْرِمُونَ ٧٨
📖 ಅನುವಾದ
ಆಯತ್ 78
ಕಾರೂನ್ ಹೇಳಿದನು: ಇವೆಲ್ಲವೂ ನನ್ನ ಬಳಿ ಇರುವ ಜ್ಞಾನದ ಆಧಾರದಲ್ಲೇ ನನಗೆ ನೀಡಲಾಗಿದೆ. ಅವನ ಮೊದಲು ಅವನಿಗಿಂತ ಹೆಚ್ಚು ಶಕ್ತಿಸಾಮರ್ಥ್ಯವುಳ್ಳ ವರೂ, ಜನ ಬಲವುಳ್ಳವರಾಗಿದ್ದಂತಹ ಅದೆಷ್ಟೋ ಜನಾಂಗಗಳನ್ನು ಅಲ್ಲಾಹನು ನಾಶ ಮಾಡಿರುವುದು ಇವನಿಗೆ ತಿಳಿದಿಲ್ಲವೇ? ಅಪರಾಧಿಗಳನ್ನು (ಶಿಕ್ಷಿಸಲು) ಅವರ ಪಾಪಗಳ ಕುರಿತು ವಿಚಾರಿಸಲಾಗುವುದಿಲ್ಲ.
فَخَرَجَ عَلَىٰ قَوْمِهِ فِي زِينَتِهِ ۖ قَالَ الَّذِينَ يُرِيدُونَ الْحَيَاةَ الدُّنْيَا يَا لَيْتَ لَنَا مِثْلَ مَا أُوتِيَ قَارُونُ إِنَّهُ لَذُو حَظٍّ عَظِيمٍ ٧٩
📖 ಅನುವಾದ
ಆಯತ್ 79
ಹಾಗೆಯೇ ಕಾರೂನ್ ತನ್ನ ಆಢಂಬರದೊAದಿಗೆ ತನ್ನ ಸಮೂಹದ ಮುಂದಿನಿAದ ಹೊರಟಿದನು. ಆಗ ಐಹಿಕ ಜೀವನವನ್ನು ಬಯಸುವವರು ಹೇಳಿದರು: ಕಾರೂನನಿಗೆ ನೀಡಲಾದುದು ನಮಗೂ ಸಿಗುತ್ತಿದ್ದರೆ! ನಿಜವಾಗಿಯು ಅವನಂತು ಮಹಾ ಸೌಭಾಗ್ಯವಂತನಾಗಿದ್ದಾನೆ.
وَقَالَ الَّذِينَ أُوتُوا الْعِلْمَ وَيْلَكُمْ ثَوَابُ اللَّهِ خَيْرٌ لِّمَنْ آمَنَ وَعَمِلَ صَالِحًا وَلَا يُلَقَّاهَا إِلَّا الصَّابِرُونَ ٨٠
📖 ಅನುವಾದ
ಆಯತ್ 80
ಜ್ಞಾನವಿದ್ದವರು ಹೀಗೆ ಹೇಳದಿರು: ನಿಮ್ಮ ನಾಶವೇ, ಸತ್ಯವಿಶ್ವಾಸವಿರಿಸಿರಿ ಮತ್ತು ಸತ್ಕರ್ಮಗಳನ್ನು ಕೈಗೊಂಡವರ ಪಾಲಿಗೆ ಅಲ್ಲಾಹನ ಪುಣ್ಯಫಲವೇ ಉತ್ತಮ ಇದು ಸಹನೆವಹಿಸಿದವರಿಗೇ ಲಭಿಸುತ್ತದೆ.
فَخَسَفْنَا بِهِ وَبِدَارِهِ الْأَرْضَ فَمَا كَانَ لَهُ مِن فِئَةٍ يَنصُرُونَهُ مِن دُونِ اللَّهِ وَمَا كَانَ مِنَ الْمُنتَصِرِينَ ٨١
📖 ಅನುವಾದ
ಆಯತ್ 81
ಕೊನೆಗೆ ನಾವು ಅವನನ್ನು ಅವನ ಅರಮನೆಯನ್ನು ಭೂಮಿಯೊಳಗೆ ಹುದುಗಿಸಿಬಿಟ್ಟೆವು ಅಲ್ಲಾಹನ ಹೊರತು ಅವನ ಸಹಾಯಕ್ಕಾಗಿ ಯಾವುದೇ ಕೂಟವು ಇರಲಿಲ್ಲ. ಮಾತ್ರವಲ್ಲ ಅವನಿಗೆ ಸ್ವಯಂ ಪ್ರತೀಕಾರ ಹೊಂದಲೂ ಸಾಧ್ಯವಾಗಲಿಲ್ಲ.
وَأَصْبَحَ الَّذِينَ تَمَنَّوْا مَكَانَهُ بِالْأَمْسِ يَقُولُونَ وَيْكَأَنَّ اللَّهَ يَبْسُطُ الرِّزْقَ لِمَن يَشَاءُ مِنْ عِبَادِهِ وَيَقْدِرُ ۖ لَوْلَا أَن مَّنَّ اللَّهُ عَلَيْنَا لَخَسَفَ بِنَا ۖ وَيْكَأَنَّهُ لَا يُفْلِحُ الْكَافِرُونَ ٨٢
📖 ಅನುವಾದ
ಆಯತ್ 82
ನಿನ್ನೆಯವರೆಗೆ ಅವನ ಸ್ಥಾನಮಾನಕ್ಕೆ ಹಂಬಲಿಸುತ್ತಿದ್ದವರು ಹೇಳತೊಡಗಿದರು: ಅಲ್ಲಾಹನೇ ತಾನಿಚ್ಛಿಸಿದವರಿಗೆ ಜೀವನಾಧಾರವನ್ನು ವಿಶಾಲಗೊಳಿಸುತ್ತಾನೆ ಹಾಗೂ ಸೀಮಿತಗೊಳಿಸುತ್ತಾನೆ. ಅಲ್ಲಾಹನು ನಮ್ಮ ಮೇಲೆ ಕೃಪೆತೋರದಿರುತ್ತಿದ್ದರೆ ನಮ್ಮನ್ನು ಸಹ ಹುದುಗಿಸಿಬಿಡುತ್ತಿದ್ದನು. ಅವಿಶ್ವಾಸಿಗಳು ಎಂದೂ ಯಶಸ್ಸು ಪಡೆಯಲಾರರು.
تِلْكَ الدَّارُ الْآخِرَةُ نَجْعَلُهَا لِلَّذِينَ لَا يُرِيدُونَ عُلُوًّا فِي الْأَرْضِ وَلَا فَسَادًا ۚ وَالْعَاقِبَةُ لِلْمُتَّقِينَ ٨٣
📖 ಅನುವಾದ
ಆಯತ್ 83
ನಾವು ಪರಲೋಕದ ಭವನವನ್ನು ಭೂಮಿಯಲ್ಲಿ ಯಾವುದೇ ಹಿರಿಮೆಯನ್ನಾಗಲೀ, ಕ್ಷೆÆÃಭೆಯನ್ನಾಗಲೀ ಬಯಸದಂತಹವರಿಗೇ ನೀಡುವೆವು. ಮತ್ತು ಭಯಭಕ್ತಿಯುಳ್ಳವರಿಗೇ ಉತ್ತಮ ಪರಿಣಾಮವಿದೆ.
مَن جَاءَ بِالْحَسَنَةِ فَلَهُ خَيْرٌ مِّنْهَا ۖ وَمَن جَاءَ بِالسَّيِّئَةِ فَلَا يُجْزَى الَّذِينَ عَمِلُوا السَّيِّئَاتِ إِلَّا مَا كَانُوا يَعْمَلُونَ ٨٤
📖 ಅನುವಾದ
ಆಯತ್ 84
ಯಾರು ಒಳಿತನ್ನು ತರುತ್ತಾನೋ ಅವನಿಗೆ ಅದಕ್ಕಿಂತಲೂ ಅತ್ಯುತ್ತಮವಾದು ದ್ದಿದೆ. ಮತ್ತು ಯಾರು ಕೆಡುಕನ್ನು ತರುತ್ತಾನೋ ಕೆಡುಕುಗಳನ್ನು ಮಾಡುವವರಿಗೆ ತಾವು ಮಾಡುತ್ತಿದ್ದುದರ ಪ್ರತಿಫಲವನ್ನೇ ನೀಡಲಾಗುವುದು.
إِنَّ الَّذِي فَرَضَ عَلَيْكَ الْقُرْآنَ لَرَادُّكَ إِلَىٰ مَعَادٍ ۚ قُل رَّبِّي أَعْلَمُ مَن جَاءَ بِالْهُدَىٰ وَمَنْ هُوَ فِي ضَلَالٍ مُّبِينٍ ٨٥
📖 ಅನುವಾದ
ಆಯತ್ 85
(ಓ ಪೈಗಂಬರರೇ) ನಿಶ್ಚಯವಾಗಿಯು ನಿಮ್ಮ ಮೇಲೆ ಕುರ್‌ಆನ್ (ಭೋದನೆ ಹಾಗೂ ಪ್ರಚಾರವನ್ನು) ಕಡ್ಡಾಯಗೊಳಿಸಿದವನು ನಿಮ್ಮನ್ನು ಒಂದು ಅತ್ಯುತ್ತಮ ಪರಿಣಾಮಕ್ಕೆ ಮರಳಿಸುವವನಾಗಿದ್ದಾನೆ. ನೀವು ಹೇಳಿರಿ: ಸನ್ಮಾರ್ಗ ಪಡೆವಯುವವ ನಾರೆಂದು, ಸ್ಪಷ್ಟ ಮಾರ್ಗ ಭ್ರಷ್ಟತೆಯಲ್ಲಿರುವವನಾರೆಂದು ನನ್ನ ಪ್ರಭುವು ಚೆನ್ನಾಗಿ ಬಲ್ಲನು.
وَمَا كُنتَ تَرْجُو أَن يُلْقَىٰ إِلَيْكَ الْكِتَابُ إِلَّا رَحْمَةً مِّن رَّبِّكَ ۖ فَلَا تَكُونَنَّ ظَهِيرًا لِّلْكَافِرِينَ ٨٦
📖 ಅನುವಾದ
ಆಯತ್ 86
ನಿಮ್ಮೆಡೆಗೆ ಗ್ರಂಥÀವನ್ನು ಅವತೀರ್ಣಗೊಳಿಸಲಾಗುವುದೆಂದು ನೀವು ಭಾವಿಸಿಯೂ ಇರಲಿಲ್ಲ. ಆದರೆ ಅದು ನಿಮ್ಮ ಪ್ರಭುವಿನ ಕಡೆಯ ಕಾರುಣ್ಯದಿಂದಾಗಿದೆ. ಆದ್ದರಿಂದ ನೀವು ಎಂದಿಗೂ ಸತ್ಯನಿಷೇಧಿಗಳ ಸಹಾಯಕರಾಗಬಾರದು.
وَلَا يَصُدُّنَّكَ عَنْ آيَاتِ اللَّهِ بَعْدَ إِذْ أُنزِلَتْ إِلَيْكَ ۖ وَادْعُ إِلَىٰ رَبِّكَ ۖ وَلَا تَكُونَنَّ مِنَ الْمُشْرِكِينَ ٨٧
📖 ಅನುವಾದ
ಆಯತ್ 87
ಅಲ್ಲಾಹನ ಸೂಕ್ತಿಗಳನ್ನು ನಿಮ್ಮೆಡೆಗೆ ಅವತೀರ್ಣ ಗೊಂಡ ಬಳಿಕ ಈ ಸತ್ಯನಿಷೇಧಿಗಳು ನಿಮ್ಮನ್ನು ಅವುಗಳ ಪ್ರಚಾರದಿಂದ ತಡೆಯದಿರಲಿ; ಆದ್ದರಿಂದ ನೀವು ತಮ್ಮ ಪ್ರಭುವಿನೆಡೆಗೆ ಕರೆಯುತ್ತಿರಿ ಮತ್ತು ಬಹುದೇವಾರಾಧಕರಲ್ಲಿ ಸೇರದಿರಿ.
وَلَا تَدْعُ مَعَ اللَّهِ إِلَٰهًا آخَرَ ۘ لَا إِلَٰهَ إِلَّا هُوَ ۚ كُلُّ شَيْءٍ هَالِكٌ إِلَّا وَجْهَهُ ۚ لَهُ الْحُكْمُ وَإِلَيْهِ تُرْجَعُونَ ٨٨
📖 ಅನುವಾದ
ಆಯತ್ 88
ಮತ್ತು ಅಲ್ಲಾಹನೊಂದಿಗೆ ಬೇರೆ ಆರಾಧ್ಯ ದೇವರನ್ನು ಕರೆದು ಬೇಡದಿರಿ. ಅಲ್ಲಾಹನ ಹೊರತು ಬೇರಾವ ದೇವನಿಲ್ಲ. ಅವನ ಅಸ್ತಿತ್ವದ ಹೊರತು ಎಲ್ಲವೂ ನಾಶವಾಗಿಬಿಡುವಂತದ್ದಾಗಿದೆ ಅವನದೇ ಆಜ್ಞಾಧಿಕಾರವಿರುವುದು ಮತ್ತು ನೀವು ಅವನೆಡೆಗೇ ಮರಳಿಸಲಾಗುವಿರಿ.
ಓದಿ ಸೂರಾ ಅಲ್-ಖಸಸ್ ಕನ್ನಡ ಅನುವಾದ – ಪಠಣ ಮತ್ತು ಆಡಿಯೋ
ಪವಿತ್ರ ಕುರಾನ್
Monday, September 7, 2026
Don't forget us in your sincere prayers

