ಅಲ್-ಖಸಸ್ · 33/88
ಅನುವಾದ ಉಚ್ಚಾರಣೆ — ಸೂರಾ ಅಲ್-ಖಸಸ್
قَالَ رَبِّ إِنِّي قَتَلْتُ مِنْهُمْ نَفْسًا فَأَخَافُ أَن يَقْتُلُونِ ۝٣٣
Qaala Rabbi innee qataltu minhum nafsan fa akhaafu ai yaqtuloon
📖 ಕನ್ನಡ ಅರ್ಥ
ಮೂಸಾ(ಅ) ಹೇಳಿದರು: ನನ್ನ ಪ್ರಭುವೇ, ನಾನು ಅವರ ಪೈಕಿಯ ಒಬ್ಬ ವ್ಯಕ್ತಿಯನ್ನು ಕೊಂದಿರುವೆನು. ಈಗ ಅವರು ನನ್ನನ್ನು ಕೊಂದುಬಿಡಬಹುದೆAದು ನಾನು ಭಯಪಡುತ್ತೇನೆ.

🎧 ಆಲಿಸಿ


📜 ಆಯತ್ 31-35 — ಸೂರಾ ಅಲ್-ಖಸಸ್

31وَأَنْ أَلْقِ عَصَاكَ ۖ فَلَمَّا رَآهَا تَهْتَزُّ كَأَنَّهَا جَانٌّ وَلَّىٰ مُدْبِرًا وَلَمْ يُعَقِّبْ ۚ يَا مُوسَىٰ أَقْبِلْ وَلَا تَخَفْ ۖ إِنَّكَ مِنَ الْآمِنِينَ
ಮತ್ತು ನೀವು ನಿಮ್ಮ ಲಾಠಿಯನ್ನು ಕೆಳಗೆ ಹಾಕಿ ಬಿಡಿ ಎಂದು ಹೇಳಲಾಯಿತು. ಅನಂತರ ಅವರು ಅದನ್ನು ಸರ್ಪವೆಂಬAತೆ ತೆವಳುತ್ತಿರುವುದಾಗಿ ಕಂಡಾಗ ಅವರು ಬೆನ್ನು ತಿರುಗಿಸಿ ಓಟ ಕಿತ್ತರು ಮತ್ತು ತಿರುಗಿ ನೋಡಲಿಲ್ಲ. ನಾವು ಹೇಳಿದೆವು: ಓ ಮೂಸಾ, ಮುಂದೆ ಬನ್ನಿ ಮತ್ತು ಭಯಪಡಬೇಡಿ. ನಿಶ್ಚಯವಾಗಿಯು ನೀವು ಎಲ್ಲಾ ರೀತಿಯಿಂದಲೂ ನಿರ್ಭಯರಾಗಿರುವಿರಿ.
32اسْلُكْ يَدَكَ فِي جَيْبِكَ تَخْرُجْ بَيْضَاءَ مِنْ غَيْرِ سُوءٍ وَاضْمُمْ إِلَيْكَ جَنَاحَكَ مِنَ الرَّهْبِ ۖ فَذَانِكَ بُرْهَانَانِ مِن رَّبِّكَ إِلَىٰ فِرْعَوْنَ وَمَلَئِهِ ۚ إِنَّهُمْ كَانُوا قَوْمًا فَاسِقِينَ
ನಿಮ್ಮ ಕೈಯನ್ನು ನೀವು ಎದೆಪಟ್ಟಿಯೊಳಗೆ ಹಾಕಿರಿ. ಅದು ಯಾವುದೇ ರೋಗವಿಲ್ಲದೆ ಬೆಳ್ಳಗೆ ಮಿಂಚುತ್ತಿರುವ ಸ್ಥಿತಿಯಲ್ಲಿ ಹೊರಬರುವುದು ಮತ್ತು ಭಯದಿಂದ (ಮುಕ್ತಿ ಹೊಂದಲು) ನಿಮ್ಮ ಬಾಹುಗಳನ್ನು ಬಿಗಿದುಕೊಳ್ಳಿರಿ. ನಿಮ್ಮ ಪ್ರಭುವಿನಿಂದ ಫಿರ್‌ಔನ್ ಮತ್ತು ಅವನ ಆಸ್ಥಾನದವರ ಮುಂದಿಡಲಿಕ್ಕಾಗಿ ಇವೆರಡೂ ನಿದರ್ಶನಗಳಾಗಿವೆ. ನಿಜವಾಗಿಯು ಅವರು ಆಜ್ಞೋಲ್ಲಂಘಕ ಜನರಾಗಿದ್ದಾರೆ.
33قَالَ رَبِّ إِنِّي قَتَلْتُ مِنْهُمْ نَفْسًا فَأَخَافُ أَن يَقْتُلُونِ
ಮೂಸಾ(ಅ) ಹೇಳಿದರು: ನನ್ನ ಪ್ರಭುವೇ, ನಾನು ಅವರ ಪೈಕಿಯ ಒಬ್ಬ ವ್ಯಕ್ತಿಯನ್ನು ಕೊಂದಿರುವೆನು. ಈಗ ಅವರು ನನ್ನನ್ನು ಕೊಂದುಬಿಡಬಹುದೆAದು ನಾನು ಭಯಪಡುತ್ತೇನೆ.
34وَأَخِي هَارُونُ هُوَ أَفْصَحُ مِنِّي لِسَانًا فَأَرْسِلْهُ مَعِيَ رِدْءًا يُصَدِّقُنِي ۖ إِنِّي أَخَافُ أَن يُكَذِّبُونِ
ನನ್ನ ಸಹೋದರ ಹಾರೂನ್ ನನಗಿಂತಲೂ ನಿರರ್ಗಳವಾಗಿ ಮಾತನಾಡುವವನಾಗಿದ್ದಾನೆ. ಅದ್ದರಿಂದ ಅವನನ್ನು ನನ್ನ ಜೊತೆ ನನ್ನನ್ನು ಸಮರ್ಥಿಸುವಂತಹ ಒಬ್ಬ ಸಹಾಯಕನನ್ನಾಗಿ ಮಾಡಿ ಕಳುಹಿಸು. ನಿಶ್ಚಯವಾಗಿಯು ನನ್ನನ್ನು ಅವರು ಸುಳ್ಳಾಗಿಸುವರೆಂದು ನಾನು ಭಯಪಡುತ್ತೇನೆ.
35قَالَ سَنَشُدُّ عَضُدَكَ بِأَخِيكَ وَنَجْعَلُ لَكُمَا سُلْطَانًا فَلَا يَصِلُونَ إِلَيْكُمَا ۚ بِآيَاتِنَا أَنتُمَا وَمَنِ اتَّبَعَكُمَا الْغَالِبُونَ
ಅಲ್ಲಾಹನು ಹೇಳಿದನು: ನಾವು ನಿನ್ನ ಸಹೋದರನ ಮೂಲಕ ನಿನ್ನ ಬಾಹುವನ್ನು ಬಲಪಡಿಸಲಿದ್ದೇವೆ ಮತ್ತು ನಿಮಗಿಬ್ಬರಿಗೂ ವಿಜಯವನ್ನು ಕರುಣಿಸುವೆವು. ನಮ್ಮ ದೃಷ್ಟಾಂತಗಳ ನಿಮಿತ್ತ ಫಿರ್‌ಔನಿಯರು ನಿಮ್ಮೆಡೆಗೆ ತಲುಪಲಾರರು. ನೀವಿಬ್ಬರೂ ಮತ್ತು ನಿಮ್ಮನ್ನು ಅನುಸರಿಸುವವರೇ ಮೇಲುಗೈ ಸಾಧಿಸಲಿದ್ದಾರೆ.
ಅಲ್-ಖಸಸ್ಕುರಾನ್ ಸೂಚಿ
88ಆಯತ್
MeccanRevelation
33ಆಯತ್

ಅನುವಾದ — ಅಲ್-ಖಸಸ್ 33

ಸೂರಾ ಅಲ್-ಖಸಸ್ ಆಯತ್ 33 - ಓದಿ, ಆಲಿಸಿ, ಅನುವಾದ, ಕನ್ನಡ : ಮೂಸಾ(ಅ) ಹೇಳಿದರು: ನನ್ನ ಪ್ರಭುವೇ, ನಾನು ಅವರ ಪೈಕಿಯ ಒಬ್ಬ ವ್ಯಕ್ತಿಯನ್ನು ಕೊಂದಿರುವೆನು.…

ಸೂರಾ ಆಯತ್ 33/88 — ಸೂರಾ ಅಲ್-ಖಸಸ್ القصص (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಖಸಸ್ ಆಲಿಸಿ, ಸೂರಾ ಅಲ್-ಖಸಸ್ ಅನುವಾದ, ಸೂರಾ ಅಲ್-ಖಸಸ್ mp3, ಸೂರಾ ಅಲ್-ಖಸಸ್ pdf. ಆಯತ್ 31–35. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Tuesday, September 8, 2026

Don't forget us in your sincere prayers