ಸೂರಾ ಅಲ್-ಅಂಕಬೂತ್ ಅರೇಬಿಕ್ ಮತ್ತು ಕನ್ನಡ
ಸೂರಾ ಅಲ್-ಅಂಕಬೂತ್ ಸಂಪೂರ್ಣ ಕನ್ನಡ ಅನುವಾದ, ಉಚ್ಚಾರಣೆ ಮತ್ತು ಆಡಿಯೋ ಪಠಣದೊಂದಿಗೆ ಓದಿ. ಪ್ರತಿ ಆಯತ್‌ನ ಅರ್ಥ. (69 ಆಯತ್ — مكية). ಅಲ್-ಅಂಕಬೂತ್ ಆಲಿಸಿ, ಅಲ್-ಅಂಕಬೂತ್ ಅನುವಾದ, ಅಲ್-ಅಂಕಬೂತ್ mp3, ಅಲ್-ಅಂಕಬೂತ್ pdf.ಸೂರಾ ಅಲ್-ಅಂಕಬೂತ್ ಓದಿ ಮತ್ತು ಆಲಿಸಿ
🎧 ಆಯತ್
M
Mishary Rashid Alafasy
✓
Mishary Rashid Alafasy
✓
M
Mahmoud Khalil Al-Husary
✓
Mahmoud Khalil Al-Husary
✓
A
Abdurrahman As-Sudais
✓
Abdurrahman As-Sudais
✓
M
Mohamed Siddiq Al-Minshawi
✓
Mohamed Siddiq Al-Minshawi
✓
A
Abdul Basit Abdul Samad
✓
Abdul Basit Abdul Samad
✓
A
Ali Al-Hudhaify
✓
Ali Al-Hudhaify
✓
A
Ahmed ibn Ali al-Ajamy
✓
Ahmed ibn Ali al-Ajamy
✓
A
Abu Bakr Ash-Shaatree
✓
Abu Bakr Ash-Shaatree
✓
M
Muhammad Ayyoub
✓
Muhammad Ayyoub
✓
A
Abdullah Basfar
✓
Abdullah Basfar
✓
A
Abdullah Al-Juhani
✓
Abdullah Al-Juhani
✓
M
Maher Al Muaiqly
✓
Maher Al Muaiqly
✓
—
x1
أَحَسِبَ النَّاسُ أَن يُتْرَكُوا أَن يَقُولُوا آمَنَّا وَهُمْ لَا يُفْتَنُونَ ٢
📖 ಅನುವಾದ
ಆಯತ್ 2
ಕೇವಲ 'ನಾವು ವಿಶ್ವಾಸವಿರಿಸಿದೆವು' ಎಂದು ಹೇಳಿದ ಮಾತ್ರಕ್ಕೆ ಅವರನ್ನು ಪರೀಕ್ಷೆಗೊಳಪಡಿಸದೆ ಬಿಟ್ಟುಬಿಡಲಾಗುವುದೆಂದು ಅವರು ಭಾವಿಸಿದ್ದಾರೆಯೇ?
وَلَقَدْ فَتَنَّا الَّذِينَ مِن قَبْلِهِمْ ۖ فَلَيَعْلَمَنَّ اللَّهُ الَّذِينَ صَدَقُوا وَلَيَعْلَمَنَّ الْكَاذِبِينَ ٣
📖 ಅನುವಾದ
ಆಯತ್ 3
ನಾವು ಅವರಿಗಿಂತ ಮುಂಚಿನವರನ್ನೂ ಪರೀಕ್ಷೆಗೊಳಪಡಿಸಿದ್ದೇವು. ಆದ್ದರಿಂದ ಅಲ್ಲಾಹನು ಸತ್ಯವಂತರು ಯಾರೆಂದು ಖಂಡಿತವಾಗಿಯು ಅರಿಯವನು ಮತ್ತು ಸುಳ್ಳುಗಾರರು ಯಾರೆಂಬುದನ್ನು ನಿಸ್ಸಂದೇಹವಾಗಿಯು ತಿಳಿಯಲಿದ್ದಾನೆ.
أَمْ حَسِبَ الَّذِينَ يَعْمَلُونَ السَّيِّئَاتِ أَن يَسْبِقُونَا ۚ سَاءَ مَا يَحْكُمُونَ ٤
📖 ಅನುವಾದ
ಆಯತ್ 4
ದುಷ್ಕೃತ್ಯಗಳನ್ನು ಎಸಗುವವರು ನಮ್ಮ ಹಿಡಿತದಿಂದ ತಪ್ಪಿಸಿಕೊಳ್ಳಬಹುದೆಂದು ಭಾವಿಸಿದ್ದಾರೆಯೇ? ಅವರು ಅದೆಂತಹ ಕೆಟ್ಟ ನಿರ್ಣಯವನ್ನು ಮಾಡುತ್ತಿದ್ದಾರೆ!
مَن كَانَ يَرْجُو لِقَاءَ اللَّهِ فَإِنَّ أَجَلَ اللَّهِ لَآتٍ ۚ وَهُوَ السَّمِيعُ الْعَلِيمُ ٥
📖 ಅನುವಾದ
ಆಯತ್ 5
ಯಾರು ಅಲ್ಲಾಹನ ಭೇಟಿಯನ್ನು ನಿರೀಕ್ಷಿಸುವನೋ ನಿಶ್ಚಯವಾಗಿಯು ಅಲ್ಲಾಹನ ನಿಶ್ಚಿತಾವಧಿಯು ಬರಲಿದೆ ಮತ್ತು ಅವನು ಸರ್ವವನ್ನಾಲಿಸುವವನು, ಸರ್ವಜ್ಞಾನಿಯು ಆಗಿದ್ದಾನೆ.
وَمَن جَاهَدَ فَإِنَّمَا يُجَاهِدُ لِنَفْسِهِ ۚ إِنَّ اللَّهَ لَغَنِيٌّ عَنِ الْعَالَمِينَ ٦
📖 ಅನುವಾದ
ಆಯತ್ 6
ಯಾರು ಅಲ್ಲಾಹನ ಮಾರ್ಗದಲ್ಲಿ ಪ್ರಯತ್ನಿಸುವನೋ ತನ್ನ ಒಳಿತಿಗಾಗಿಯೇ ಪ್ರಯತ್ನಿಸುವನು. ವಾಸ್ತವದಲ್ಲಿ ಅಲ್ಲಾಹನು ಸರ್ವಲೋಕದವರಿಂದ ನಿರಪೇಕ್ಷಕನಾಗಿದ್ದಾನೆ.
وَالَّذِينَ آمَنُوا وَعَمِلُوا الصَّالِحَاتِ لَنُكَفِّرَنَّ عَنْهُمْ سَيِّئَاتِهِمْ وَلَنَجْزِيَنَّهُمْ أَحْسَنَ الَّذِي كَانُوا يَعْمَلُونَ ٧
📖 ಅನುವಾದ
ಆಯತ್ 7
ಯಾರು ಸತ್ಯವಿಶ್ವಾಸವಿರಿಸಿ ಸತ್ಕರ್ಮಗಳನ್ನು ಕೈಗೊಂಡರೋ ನಾವು ಅವರ ಪಾಪಗಳನ್ನು ಅವರಿಂದ ಅಳಿಸಿಬಿಡುವೆವು, ಮತ್ತು ಅವರಿಗೆ ಅವರ ಸತ್ಕರ್ಮಗಳಿಗಾಗಿ ಅತ್ಯುತ್ತಮ ಪ್ರತಿಫಲವನ್ನು ನೀಡುವೆವು.
وَوَصَّيْنَا الْإِنسَانَ بِوَالِدَيْهِ حُسْنًا ۖ وَإِن جَاهَدَاكَ لِتُشْرِكَ بِي مَا لَيْسَ لَكَ بِهِ عِلْمٌ فَلَا تُطِعْهُمَا ۚ إِلَيَّ مَرْجِعُكُمْ فَأُنَبِّئُكُم بِمَا كُنتُمْ تَعْمَلُونَ ٨
📖 ಅನುವಾದ
ಆಯತ್ 8
ಮತ್ತು ತನ್ನ ಮಾತಾಪಿತರೊಂದಿಗೆ ಸದ್ವರ್ತನೆಯನ್ನು ತೋರಬೇಕೆಂದು ನಾವು ಮನುಷ್ಯನಿಗೆ ಉಪದೇಶ ನೀಡಿದ್ದೇವೆ. ಆದರೆ ಅವರು ನಿಮಗೆ ಜ್ಞಾನವಿಲ್ಲದ್ದನ್ನು ನನ್ನೊಂದಿಗೆ(ಅಲ್ಲಾಹನೊAದಿಗೆ) ದೇವಸಹಭಾಗಿಯನ್ನಾಗಿ ನಿಶ್ಚಯಿಸಬೇಕೆಂದು ಒತ್ತಾಯಿಸಿದರೆ ಈ ವಿಷಯದಲ್ಲಿ ಅವರನ್ನು ಅನುಸರಿಸಬೇಡಿರಿ. ನಿಮ್ಮ ಮರಳುವಿಕೆಯು ನನ್ನೆಡೆಗೇ ಆಗಿದೆ. ಅನಂತರ ನಾನು ನೀವು ಮಾಡುತ್ತಿರುವುದೆಲ್ಲವನ್ನೂ ನಿಮಗೆ ತಿಳಿಸಿಕೊಡುವೆನು.
وَالَّذِينَ آمَنُوا وَعَمِلُوا الصَّالِحَاتِ لَنُدْخِلَنَّهُمْ فِي الصَّالِحِينَ ٩
📖 ಅನುವಾದ
ಆಯತ್ 9
ಯಾರು ಸತ್ಯವಿಶ್ವಾಸವಿರಿಸಿ ಸತ್ಕರ್ಮಗಳನ್ನು ಕೈಗೊಂಡರೋ ಖಂಡಿತವಾಗಿಯು ನಾವು ಅವರನ್ನು ಸಜ್ಜನರಲ್ಲಿ ಸೇರಿಸುತ್ತೇವೆ.
وَمِنَ النَّاسِ مَن يَقُولُ آمَنَّا بِاللَّهِ فَإِذَا أُوذِيَ فِي اللَّهِ جَعَلَ فِتْنَةَ النَّاسِ كَعَذَابِ اللَّهِ وَلَئِن جَاءَ نَصْرٌ مِّن رَّبِّكَ لَيَقُولُنَّ إِنَّا كُنَّا مَعَكُمْ ۚ أَوَلَيْسَ اللَّهُ بِأَعْلَمَ بِمَا فِي صُدُورِ الْعَالَمِينَ ١٠
📖 ಅನುವಾದ
ಆಯತ್ 10
ಜನರ ಪೈಕಿ ಕೆಲವರು ನಾವು ಅಲ್ಲಾಹನ ಮೇಲೆ ವಿಶ್ವಾಸವಿರಿಸಿದ್ದೇವೆಂದು ಹೇಳುತ್ತಾರೆ. ಆದರೆ ಅಲ್ಲಾಹನ ಮಾರ್ಗದಲ್ಲಿ ಅವರು ಪೀಡಿಸಲ್ಪಟ್ಟರೆ ಜನರ ಕಿರುಕುಳವನ್ನು ಅವರು ಅಲ್ಲಾಹನ ಯಾತನೆಯೆಂದು ಬಗೆಯುತ್ತಾರೆ.ಇನ್ನು ಅಲ್ಲಾಹನ ಸಹಾಯವು ಬಂದೊದಗಿದರೆ ನಾವು ನಿಮ್ಮ ಜೊತೆಯಲ್ಲೇ ಇದ್ದೇವೆ ಎಂದು ಹೇಳುತ್ತಾರೆ. ಸರ್ವಲೋಕದವರ ಹೃದಯಗಳಲ್ಲಿರುವುದುನ್ನು ಅಲ್ಲಾಹನು ಅರಿಯುವವನಲ್ಲವೇ?
وَلَيَعْلَمَنَّ اللَّهُ الَّذِينَ آمَنُوا وَلَيَعْلَمَنَّ الْمُنَافِقِينَ ١١
📖 ಅನುವಾದ
ಆಯತ್ 11
ಸತ್ಯವಿಸ್ವಾಸಿಗಳನ್ನು ಅಲ್ಲಾಹನು ಖಂಡಿತ ತಿಳಿಯವನು ಮತ್ತು ಕಪಟ ವಿಶ್ವಾಸಿಗಳನ್ನು ಅವನು ಖಂಡಿತ ಅರಿಯುವನು.
وَقَالَ الَّذِينَ كَفَرُوا لِلَّذِينَ آمَنُوا اتَّبِعُوا سَبِيلَنَا وَلْنَحْمِلْ خَطَايَاكُمْ وَمَا هُم بِحَامِلِينَ مِنْ خَطَايَاهُم مِّن شَيْءٍ ۖ إِنَّهُمْ لَكَاذِبُونَ ١٢
📖 ಅನುವಾದ
ಆಯತ್ 12
ಸತ್ಯನಿಷೇಧಿಗಳು ಸತ್ಯವಿಶ್ವಾಸಿಗಳಿಗೆ ನೀವು ನಮ್ಮ ಮಾರ್ಗವನ್ನು ಅನುಸರಿಸಿರಿ ನಿಮ್ಮ ಪಾಪಗಳನ್ನು ನಾವು ವಹಿಸಿ ಕೊಳ್ಳುತ್ತೇವೆ ಎಂದು ಹೇಳುತ್ತಾರೆ. ವಸ್ತುತಃ ಅವರು ಅವರ ಪಾಪಗಳಿಂದ ಏನನ್ನೂ ವಹಿಸಿಕೊಳ್ಳುವವರಲ್ಲ, ಅವರಂತೂ ಸುಳ್ಳುಗಾರಾಗಿದ್ದಾರೆ.
وَلَيَحْمِلُنَّ أَثْقَالَهُمْ وَأَثْقَالًا مَّعَ أَثْقَالِهِمْ ۖ وَلَيُسْأَلُنَّ يَوْمَ الْقِيَامَةِ عَمَّا كَانُوا يَفْتَرُونَ ١٣
📖 ಅನುವಾದ
ಆಯತ್ 13
ಅದಾಗ್ಯೂ ಅವರು ತಮ್ಮ ಭಾರಗಳನ್ನು ಮತ್ತು ತಮ್ಮ ಭಾರಗಳ ಜೊತೆಗೇ (ಇತರ ಜನರ) ಭಾರಗಳನ್ನೂ ವಹಿಸಿಕೊಳ್ಳುವರು. ಪುನರುತ್ಥಾನ ದಿನದಂದು ಅವರು ಸುಳ್ಳು ಸೃಷ್ಟಿಸುತ್ತಿರುವುದರ ಕುರಿತು ಅವರು ವಿಚಾರಿಸಲ್ಪಡುವರು.
وَلَقَدْ أَرْسَلْنَا نُوحًا إِلَىٰ قَوْمِهِ فَلَبِثَ فِيهِمْ أَلْفَ سَنَةٍ إِلَّا خَمْسِينَ عَامًا فَأَخَذَهُمُ الطُّوفَانُ وَهُمْ ظَالِمُونَ ١٤
📖 ಅನುವಾದ
ಆಯತ್ 14
ನಾವು ನೂಹರನ್ನು ಅವರ ಜನಾಂಗದೆಡೆಗೆ ಕಳುಹಿಸದೆವು. ಅವರು ಅವರ ನಡುವೆ ಒಂಬೈನೂರ ಐವತ್ತು ವರ್ಷಗಳ ಕಾಲ ವಾಸಿಸಿದರು.ಅನಂತರ ಅವರು ಅಕ್ರಮಿಗಳಾಗಿದ್ದ ಸ್ಥಿತಿಯಲ್ಲೇ ಜಲಪ್ರಳಯವು ಅವರನ್ನು ಬಂದಾವರಿಸಿತು.
فَأَنجَيْنَاهُ وَأَصْحَابَ السَّفِينَةِ وَجَعَلْنَاهَا آيَةً لِّلْعَالَمِينَ ١٥
📖 ಅನುವಾದ
ಆಯತ್ 15
ಅನಂತರ ನಾವು ನೂಹರನ್ನು ಮತ್ತು ಹಡಗಿನಲ್ಲಿದ್ದವರನ್ನು ರಕ್ಷಿಸಿದೆವು ಮತ್ತು ಅದನ್ನು ಸರ್ವಲೋಕದವರಿಗೆ ಒಂದು ನಿದರ್ಶನವನ್ನಾಗಿ ಮಾಡಿದೆವು.
وَإِبْرَاهِيمَ إِذْ قَالَ لِقَوْمِهِ اعْبُدُوا اللَّهَ وَاتَّقُوهُ ۖ ذَٰلِكُمْ خَيْرٌ لَّكُمْ إِن كُنتُمْ تَعْلَمُونَ ١٦
📖 ಅನುವಾದ
ಆಯತ್ 16
ಇಬ್ರಾಹೀಮರು (ಸಂದೇಶವಾಹಕರಾಗಿ) ತಮ್ಮ ಜನಾಂಗದವರಿಗೆ ಹೇಳಿದ ಸಂದರ್ಭವನ್ನು ಸ್ಮರಿಸಿರಿ: ನೀವು ಅಲ್ಲಾಹನನ್ನು ಆರಾಧಿಸಿರಿ ಮತ್ತು ಅವನನ್ನು ಭಯಪಡಿರಿ. ನೀವು ಅರಿಯುವವರಾಗಿದ್ದರೆ ಇದು ನಿಮ್ಮ ಪಾಲಿಗೆ ಉತ್ತಮವಾಗಿದೆ.
إِنَّمَا تَعْبُدُونَ مِن دُونِ اللَّهِ أَوْثَانًا وَتَخْلُقُونَ إِفْكًا ۚ إِنَّ الَّذِينَ تَعْبُدُونَ مِن دُونِ اللَّهِ لَا يَمْلِكُونَ لَكُمْ رِزْقًا فَابْتَغُوا عِندَ اللَّهِ الرِّزْقَ وَاعْبُدُوهُ وَاشْكُرُوا لَهُ ۖ إِلَيْهِ تُرْجَعُونَ ١٧
📖 ಅನುವಾದ
ಆಯತ್ 17
ನೀವು ಅಲ್ಲಾಹನ ಹೊರತು ವಿಗ್ರಹಗಳ ಆರಾಧನೆ ಮಾಡುತ್ತಿರುವಿರಿ ಮತ್ತು ಸುಳ್ಳುವಿಚಾರಗಳನ್ನು ಸೃಷ್ಟಿಸುತ್ತಿರುವಿರಿ. ವಾಸ್ತವದಲ್ಲಿ, ನೀವು ಅಲ್ಲಾಹನ ಹೊರತು ಯಾರನ್ನು ಕರೆದುಬೇಡುತ್ತೀರೋ ಅವರು ನಿಮ್ಮ ಜೀವನಾಧಾರದ ಒಡೆಯರಲ್ಲ. ಇನ್ನು ನೀವು ಅಲ್ಲಾಹನಲ್ಲೇ ಜೀವನಾಧಾರವನ್ನು ಅರಸಿರಿ ಮತ್ತು ಅವನನ್ನೇ ಆರಾಧಿಸಿರಿ ಮತ್ತು ಅವನಿಗೇ ಕೃತಜ್ಞತೆಯನ್ನು ಸಲ್ಲಿಸಿರಿ. ಕೊನೆಗೆ ನೀವು ಅವನೆಡೆಗೇ ಮರಳಿಸಲಾಗುವಿರಿ.
وَإِن تُكَذِّبُوا فَقَدْ كَذَّبَ أُمَمٌ مِّن قَبْلِكُمْ ۖ وَمَا عَلَى الرَّسُولِ إِلَّا الْبَلَاغُ الْمُبِينُ ١٨
📖 ಅನುವಾದ
ಆಯತ್ 18
ಇನ್ನು ನೀವು ಸುಳ್ಳಾಗಿಸುವುದಾದರೆ ನಿಮಗಿಂತ ಮುಂಚೆ ಹಲವು ಜನಾಂಗಗಳು ಸಹ ಸುಳ್ಳಾಗಿಸಿವೆ ಮತ್ತು ಸಂದೇಶವನ್ನು ಸುಸ್ಪಷ್ಟವಾಗಿ ತಲುಪಿಸುವ ಹೊರತು ಸಂದೇಶವಾಹಕರ ಮೇಲೆ ಯಾವ ಹೊಣೆಗಾರಿಕೆಯೂ ಇಲ್ಲ.
أَوَلَمْ يَرَوْا كَيْفَ يُبْدِئُ اللَّهُ الْخَلْقَ ثُمَّ يُعِيدُهُ ۚ إِنَّ ذَٰلِكَ عَلَى اللَّهِ يَسِيرٌ ١٩
📖 ಅನುವಾದ
ಆಯತ್ 19
ಅಲ್ಲಾಹನು ಸೃಷ್ಟಿಯನ್ನು ಆರಂಭಿಸುವುದು ನಂತರ ಅದನ್ನು ಪುನರಾವರ್ತಿಸುವುದು ಹೇಗೆಂಬುದನ್ನು ಇವರು ಕಾಣುವುದಿಲ್ಲವೇ? ವಾಸ್ತವದಲ್ಲಿ ಇದು ಅಲ್ಲಾಹನಿಗೆ ಅತ್ಯಂತ ಸರಳವಾಗಿದೆ.
قُلْ سِيرُوا فِي الْأَرْضِ فَانظُرُوا كَيْفَ بَدَأَ الْخَلْقَ ۚ ثُمَّ اللَّهُ يُنشِئُ النَّشْأَةَ الْآخِرَةَ ۚ إِنَّ اللَّهَ عَلَىٰ كُلِّ شَيْءٍ قَدِيرٌ ٢٠
📖 ಅನುವಾದ
ಆಯತ್ 20
ಹೇಳಿರಿ: ನೀವು ಭೂಮಿಯಲ್ಲಿ ಸಂಚಿರಿಸಿ ನೋಡಿರಿ ಅವನು ಸೃಷ್ಟಿಯ ಆರಂಭ ಹೇಗೆ ಮಾಡುತ್ತಾನೆಂದು. ಅನಂತರ ಅಲ್ಲಾಹನೇ ಎರಡನೆ ಬಾರಿಯೂ ಸೃಷ್ಟಿಸುವವನಾಗಿದ್ದಾನೆ. ನಿಶ್ಚಯವಾಗಿಯು ಅಲ್ಲಾಹನು ಸರ್ವ ವಸ್ತುಗಳ ಮೇಲೆ ಸಮರ್ಥನಾಗಿದ್ದಾನೆ.
يُعَذِّبُ مَن يَشَاءُ وَيَرْحَمُ مَن يَشَاءُ ۖ وَإِلَيْهِ تُقْلَبُونَ ٢١
📖 ಅನುವಾದ
ಆಯತ್ 21
ಅವನು (ಅವರವರ ಕರ್ಮಗಳ ನಿಮಿತ್ತ) ತಾನಿಚ್ಛಿಸಿದವರಿಗೆ ಶಿಕ್ಷಿಸುತ್ತಾನೆ ಮತ್ತು ತಾನಿಚ್ಛಿಸಿದವರಿಗೆ ಕರುಣೆ ತೋರಿಸುತ್ತಾನೆ. ನೀವೆಲ್ಲರೂ ಅವನೆಡೆಗೆ ಮರಳಿಸಲಾಗುವಿರಿ.
وَمَا أَنتُم بِمُعْجِزِينَ فِي الْأَرْضِ وَلَا فِي السَّمَاءِ ۖ وَمَا لَكُم مِّن دُونِ اللَّهِ مِن وَلِيٍّ وَلَا نَصِيرٍ ٢٢
📖 ಅನುವಾದ
ಆಯತ್ 22
ನೀವು ಭೂಮಿಯಲ್ಲಾಗಲೀ, ಆಕಾಶದಲ್ಲಾಗಲೀ ಅವನನ್ನು ಸೋಲಿಸಲಾರಿರಿ. ಅಲ್ಲಾಹನನ್ನು ಬಿಟ್ಟು ಯಾವ ರಕ್ಷಕ ಮಿತ್ರನಾಗಲೀ, ಸಹಾಯಕನಾಗಲೀ ನಿಮಗಿರುವುದಿಲ್ಲ.
وَالَّذِينَ كَفَرُوا بِآيَاتِ اللَّهِ وَلِقَائِهِ أُولَٰئِكَ يَئِسُوا مِن رَّحْمَتِي وَأُولَٰئِكَ لَهُمْ عَذَابٌ أَلِيمٌ ٢٣
📖 ಅನುವಾದ
ಆಯತ್ 23
ಅಲ್ಲಾಹನ ಸೂಕ್ತಿಗಳನ್ನು ಮತ್ತು ಅವನ ಭೇಟಿಯನ್ನು ನಿಷೇಧಿಸಿದವರು ನನ್ನ ಕೃಪೆಯಿಂದ ನಿರಾಶೆ ಹೊಂದಿದ್ದಾರೆ ಮತ್ತು ಅವರಿಗೆ ವೇದನಾಜನಕ ಯಾತನೆಯಿದೆ.
فَمَا كَانَ جَوَابَ قَوْمِهِ إِلَّا أَن قَالُوا اقْتُلُوهُ أَوْ حَرِّقُوهُ فَأَنجَاهُ اللَّهُ مِنَ النَّارِ ۚ إِنَّ فِي ذَٰلِكَ لَآيَاتٍ لِّقَوْمٍ يُؤْمِنُونَ ٢٤
📖 ಅನುವಾದ
ಆಯತ್ 24
“ನೀವು ಅವನನ್ನು (ಇಬ್ರಾಹೀಮನನ್ನು) ಕೊಂದು ಹಾಕಿರಿ. ಇಲ್ಲವೇ ಸುಟ್ಟು ಹಾಕಿರಿ” ಎನ್ನುವುದನ್ನು ಬಿಟ್ಟು ಅವರ ಜನಾಂಗದವರ ಉತ್ತರ ಬೇರೇನಿರಲಿಲ್ಲ. ಆದರೆ ಅಲ್ಲಾಹನು ಅವರನ್ನು ಅಗ್ನಿಯಿಂದ ರಕ್ಷಿಸಿದನು. ನಿಸ್ಸಂದೇಹವಾಗಿಯು ಸತ್ಯವಿಶ್ವಾಸವಿರಿಸುವ ಜನರಿಗೆ ಇದರಲ್ಲಿ ಹಲವಾರು ನಿದರ್ಶನಗಳಿವೆ.
وَقَالَ إِنَّمَا اتَّخَذْتُم مِّن دُونِ اللَّهِ أَوْثَانًا مَّوَدَّةَ بَيْنِكُمْ فِي الْحَيَاةِ الدُّنْيَا ۖ ثُمَّ يَوْمَ الْقِيَامَةِ يَكْفُرُ بَعْضُكُم بِبَعْضٍ وَيَلْعَنُ بَعْضُكُم بَعْضًا وَمَأْوَاكُمُ النَّارُ وَمَا لَكُم مِّن نَّاصِرِينَ ٢٥
📖 ಅನುವಾದ
ಆಯತ್ 25
ಪೈಗಂಬರ್ ಇಬ್ರಾಹೀಮ್ ಹೇಳಿದರು: ನೀವು ಅಲ್ಲಾಹನ ಹೊರತು ಆರಾಧಿಸುತ್ತಿರುವ ವಿಗ್ರಹಗಳನ್ನು ಪರಸ್ಪರ ಲೌಕಿಕ ಮಿತ್ರತ್ವಕ್ಕಾಗಿ ನಿಶ್ಚಯಿಸಿರುತ್ತೀರಿ. ಆದರೆ ಪುನರುತ್ಥಾನ ದಿನದಂದು ನೀವು ಪರಸ್ಪರ ಒಬ್ಬರು ಇನ್ನೊಬ್ಬರನ್ನು ನಿರಾಕರಿಸಿ ಬಿಡುವಿರಿ ಮತ್ತು ಪರಸ್ಪರರನ್ನು ಶಪಿಸತೊಡಗುವಿರಿ. ನಿಮ್ಮ ಅಭಯ ತಾಣವು ನರಕಾಗ್ನಿಯಾಗಿದೆ ಮತ್ತು ನಿಮಗೆ ಯಾವ ಸಹಾಯಕರೂ ಇರಲಾರರು.
۞ فَآمَنَ لَهُ لُوطٌ ۘ وَقَالَ إِنِّي مُهَاجِرٌ إِلَىٰ رَبِّي ۖ إِنَّهُ هُوَ الْعَزِيزُ الْحَكِيمُ ٢٦
📖 ಅನುವಾದ
ಆಯತ್ 26
ಲೂತರು ಅವರಲ್ಲಿ ವಿಶ್ವಾಸವಿರಿಸಿದರು ಮತ್ತು ಇಬ್ರಾಹೀಮರು ಹೇಳಿದರು: ನಾನು ನನ್ನ ಪ್ರಭುವಿನೆಡೆಗೆ ವಲಸೆ ಹೋಗಲಿರುವೆನು. ಅವನು ಮಹಾ ಪ್ರಚಂಡನೂ, ಸುಜ್ಞಾನಿಯೂ ಆಗಿರುವನು.
وَوَهَبْنَا لَهُ إِسْحَاقَ وَيَعْقُوبَ وَجَعَلْنَا فِي ذُرِّيَّتِهِ النُّبُوَّةَ وَالْكِتَابَ وَآتَيْنَاهُ أَجْرَهُ فِي الدُّنْيَا ۖ وَإِنَّهُ فِي الْآخِرَةِ لَمِنَ الصَّالِحِينَ ٢٧
📖 ಅನುವಾದ
ಆಯತ್ 27
ತರುವಾಯ ನಾವು ಅವರಿಗೆ ಇಸ್‌ಹಾಕ್ ಮತ್ತು ಯಾಕೂಬ್‌ರನ್ನು ದಯಪಾಲಿಸಿದೆವು ಮತ್ತು ಪ್ರವಾದಿತ್ವವನ್ನು ಗ್ರಂಥವನ್ನು ಅವರ ಸಂತತಿಗಳಲ್ಲಿ ನಿಶ್ಚಯಿಸಿದೆವು ಮತ್ತು ಅವರಿಗೆ ಇಹಲೋಕದಲ್ಲೂ ಪ್ರತಿಫಲವನ್ನು ದಯಪಾಲಿಸಿದೆವು ಮತ್ತು ಪರಲೋಕದಲ್ಲಿ ಖಂಡಿತವಾಗಿಯು ಅವರು ಸದಾಚಾರಿಗಳಲ್ಲಾಗಿರುವರು.
وَلُوطًا إِذْ قَالَ لِقَوْمِهِ إِنَّكُمْ لَتَأْتُونَ الْفَاحِشَةَ مَا سَبَقَكُم بِهَا مِنْ أَحَدٍ مِّنَ الْعَالَمِينَ ٢٨
📖 ಅನುವಾದ
ಆಯತ್ 28
ಲೂತ್ ತಮ್ಮ ಜನಾಂಗದವರಿಗೆ ಹೇಳಿದ ಸಂದರ್ಭವನ್ನು ಸ್ಮರಿಸಿರಿ: ನಿಮಗಿಂತ ಮುಂಚೆ ಲೋಕದವರಲ್ಲಿ ಯಾರು ಮಾಡಿರದಂತಹ ನೀಚಕೃತ್ಯವನ್ನು ನೀವು ಮಾಡುತ್ತಿರುವಿರಿ.
أَئِنَّكُمْ لَتَأْتُونَ الرِّجَالَ وَتَقْطَعُونَ السَّبِيلَ وَتَأْتُونَ فِي نَادِيكُمُ الْمُنكَرَ ۖ فَمَا كَانَ جَوَابَ قَوْمِهِ إِلَّا أَن قَالُوا ائْتِنَا بِعَذَابِ اللَّهِ إِن كُنتَ مِنَ الصَّادِقِينَ ٢٩
📖 ಅನುವಾದ
ಆಯತ್ 29
ನೀವು ಕಾಮೇಚ್ಛೆಗಾಗಿ ಪರುಷರನ್ನು ಸಮೀಪಿಸುತ್ತಿರುವಿರಾ?ಮತ್ತು ದರೋಡೆ ಮಾಡುತ್ತಿರುವಿರಾ? ಹಾಗೂ ನಿಮ್ಮ ಸಭೆಗಳಲ್ಲಿ ನಿರ್ಲಜ್ಜೆಯ ಕೃತ್ಯವನ್ನು ಎಸಗುತ್ತಿರುವಿರಾ? ಆದರೆ ಅವರ ಜನಾಂಗದವರ ಉತ್ತರ ನೀನು ಸತ್ಯವಂತನಾಗಿದ್ದರೆ ಅಲ್ಲಾಹನ ಯಾತನೆಯನ್ನು ನಮ್ಮಲ್ಲಿಗೆ ತಾ. ಎಂಬುದರ ಹೊರತು ಬೇರೆನಿರಲಿಲ್ಲ.
قَالَ رَبِّ انصُرْنِي عَلَى الْقَوْمِ الْمُفْسِدِينَ ٣٠
📖 ಅನುವಾದ
ಆಯತ್ 30
ಆಗ ಲೂತರು ಪ್ರಾರ್ಥಿಸಿದರು: ಓ ನನ್ನ ಪ್ರಭುವೇ, ನೀನು ಈ ದುಷ್ಟ ಜನರ ವಿರುದ್ದ ನನಗೆ ಸಹಾಯ ಮಾಡು.
وَلَمَّا جَاءَتْ رُسُلُنَا إِبْرَاهِيمَ بِالْبُشْرَىٰ قَالُوا إِنَّا مُهْلِكُو أَهْلِ هَٰذِهِ الْقَرْيَةِ ۖ إِنَّ أَهْلَهَا كَانُوا ظَالِمِينَ ٣١
📖 ಅನುವಾದ
ಆಯತ್ 31
ಮತ್ತು ನಮ್ಮ ದೂತರು ಇಬ್ರಾಹೀಮರ ಬಳಿಗೆ ಸುವಾರ್ತೆಯೊಂದಿಗೆ ಬಂದಾಗ ಹೇಳಿದರು: ನಾವು ಆ (ಲೂತರ) ನಾಡಿನ ಜನರನ್ನು ನಾಶಮಾಡುವವರಿದ್ದೇವೆ. ನಿಜವಾಗಿಯೂ ಅಲ್ಲಿನ ಜನರು ಅಪರಾಧಿಗಳಾಗಿದ್ದಾರೆ.
قَالَ إِنَّ فِيهَا لُوطًا ۚ قَالُوا نَحْنُ أَعْلَمُ بِمَن فِيهَا ۖ لَنُنَجِّيَنَّهُ وَأَهْلَهُ إِلَّا امْرَأَتَهُ كَانَتْ مِنَ الْغَابِرِينَ ٣٢
📖 ಅನುವಾದ
ಆಯತ್ 32
ಇಬ್ರಾಹೀಮರು ಹೇಳಿದರು: ಅಲ್ಲಿ ಲೂತರು ಇದ್ದಾರೆ. ದೂತರು ಹೇಳಿದರು: ಅಲ್ಲಿರುವವರ ಕುರಿತು ನಾವು ಚೆನ್ನಾಗಿಬಲ್ಲೆವು. ನಾವು ಲೂತರನ್ನು ಮತ್ತು ಅವರ ಕುಟುಂಬವನ್ನು ರಕ್ಷಿಸುವೆವು. ಆದರೆ ಅವರ ಪತ್ನಿಯ ಹೊರತು, ಅವಳು ಹಿಂದುಳಿಯವವ ರಲ್ಲಾಗಿರುವಳು.
وَلَمَّا أَن جَاءَتْ رُسُلُنَا لُوطًا سِيءَ بِهِمْ وَضَاقَ بِهِمْ ذَرْعًا وَقَالُوا لَا تَخَفْ وَلَا تَحْزَنْ ۖ إِنَّا مُنَجُّوكَ وَأَهْلَكَ إِلَّا امْرَأَتَكَ كَانَتْ مِنَ الْغَابِرِينَ ٣٣
📖 ಅನುವಾದ
ಆಯತ್ 33
ಅನಂತರ ನಮ್ಮ ದೂತರು ಲೂತರ ಬಳಿ ಬಂದಾಗ ಅವರು ಅವರ ನಿಮಿತ್ತ ಸಂಕಟಕ್ಕೊಳಗಾದರು ಮತ್ತು ಒಳಗೊಳಗೇ ಇಕ್ಕಟ್ಟು ಅನುಭವಿಸತೊಡಗಿದರು. ಆದರೆ ದೂತರು ಹೇಳಿದರು: ನೀವು ಭಯ ಪಡಬೇಡಿ, ಮತ್ತು ವ್ಯಥೆಪಡುವುದು ಬೇಡ. ನಾವು ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ರಕ್ಷಿಸಲಿದ್ದೇವೆ. ಆದರೆ ನಿಮ್ಮ ಪತ್ನಿಯ ಹೊರತು ಅವಳು ಹಿಂದುಳಿಯುವರಲ್ಲಾಗಿ ರುವಳು.
إِنَّا مُنزِلُونَ عَلَىٰ أَهْلِ هَٰذِهِ الْقَرْيَةِ رِجْزًا مِّنَ السَّمَاءِ بِمَا كَانُوا يَفْسُقُونَ ٣٤
📖 ಅನುವಾದ
ಆಯತ್ 34
ಈ ನಾಡಿನವರ ಮೇಲೆ ಅವರು ಆಜ್ಞೋಲ್ಲಂಘನೆ ಮಾಡುತ್ತಿದ್ದುದರ ನಿಮಿತ್ತ ನಾವು ಆಕಾಶದಿಂದ ಯಾತನೆಯನ್ನು ಇಳಿಸುವವರಿದ್ದೇವೆ.
وَلَقَد تَّرَكْنَا مِنْهَا آيَةً بَيِّنَةً لِّقَوْمٍ يَعْقِلُونَ ٣٥
📖 ಅನುವಾದ
ಆಯತ್ 35
ಚಿಂತಕರಿಗೆ ನಾವು ಆ ನಾಡನ್ನು ಸುಸ್ಪಷ್ಟ ನಿದರ್ಶನವನ್ನಾಗಿ ಮಾಡಿದೆವು.
وَإِلَىٰ مَدْيَنَ أَخَاهُمْ شُعَيْبًا فَقَالَ يَا قَوْمِ اعْبُدُوا اللَّهَ وَارْجُوا الْيَوْمَ الْآخِرَ وَلَا تَعْثَوْا فِي الْأَرْضِ مُفْسِدِينَ ٣٦
📖 ಅನುವಾದ
ಆಯತ್ 36
ಮದ್‌ಯನ್‌ನೆಡೆಗೆ ಅವರ ಸಹೋದರ ಶುಐಬರನ್ನು ಕಳುಹಿಸಿದೆವು ಅವರು ಹೇಳಿದರು: ಓ ನನ್ನ ಜನಾಂಗದವರೇ, ನೀವು ಅಲ್ಲಾಹನನ್ನು ಆರಾಧಿಸಿರಿ. ಅಂತಿಮ ದಿನವನ್ನು ನಿರೀಕ್ಷಿಸಿರಿ ಮತ್ತು ಭೂಮಿಯಲ್ಲಿ ಕ್ಷೆÆÃಭೆ ಹರಡುತ್ತಾ ತಿರುಗದಿರಿ.
فَكَذَّبُوهُ فَأَخَذَتْهُمُ الرَّجْفَةُ فَأَصْبَحُوا فِي دَارِهِمْ جَاثِمِينَ ٣٧
📖 ಅನುವಾದ
ಆಯತ್ 37
ಆದರೆ ಅವರು ಅವರನ್ನು ಸುಳ್ಳಾಗಿಸಿದರು. ಕೊನೆಗೆ ಅವರನ್ನು ಒಂದು ಭಯಂಕರ ಭೂಕಂಪವು ಹಿಡಿದು ಬಿಟ್ಟಿತು ಮತ್ತು ಅವರು ತಮ್ಮ ಮನೆಗಳಲ್ಲಿ ಅಧೋಮುಖಿಗಳಾಗಿ ಬಿದ್ದಿದ್ದರು.
وَعَادًا وَثَمُودَ وَقَد تَّبَيَّنَ لَكُم مِّن مَّسَاكِنِهِمْ ۖ وَزَيَّنَ لَهُمُ الشَّيْطَانُ أَعْمَالَهُمْ فَصَدَّهُمْ عَنِ السَّبِيلِ وَكَانُوا مُسْتَبْصِرِينَ ٣٨
📖 ಅನುವಾದ
ಆಯತ್ 38
ನಾವು ಆದ್ ಮತ್ತು ಸಮೂದ್ ಜನಾಂಗಗಳನ್ನು ಸಹ ನಾಶಮಾಡಿದೆವು ಅವರ ವಸತಿಗಳಿಂದ ನಿಮಗೆ ಸ್ಪಷ್ಟವಾಗಿದೆ. ಶೈತಾನನು ಅವರ ದುಷ್ಕರ್ಮಗಳನ್ನು ಅವರಿಗೆ ಮನಮೋಹಕವಾಗಿ ತೋರಿಸಿದ್ದನು ಮತ್ತು ಅವರನ್ನು ಸನ್ಮಾರ್ಗದಿಂದ ತಡೆದಿದ್ದನು; ವಸ್ತುತಃ ಅವರು ಬುದ್ಧಿಯುಳ್ಳವರಾಗಿದ್ದರು.
وَقَارُونَ وَفِرْعَوْنَ وَهَامَانَ ۖ وَلَقَدْ جَاءَهُم مُّوسَىٰ بِالْبَيِّنَاتِ فَاسْتَكْبَرُوا فِي الْأَرْضِ وَمَا كَانُوا سَابِقِينَ ٣٩
📖 ಅನುವಾದ
ಆಯತ್ 39
ಕಾರೂನ್, ಫಿರ್‌ಔನ್ ಹಾಗೂ ಹಾಮಾನರನ್ನೂ ನಾವು ನಾಶಗೊಳಿಸಿದೆವು. ಅವರ ಬಳಿಗೆ ಮೂಸಾರವರು ಸುಸ್ಪಷ್ಟ ಪುರಾವೆಗಳೊಂದಿಗೆ ಬಂದಿದರು. ಅದಾಗ್ಯೂ ಅವರು ಭೂಮಿಯಲ್ಲಿ ಉದ್ಧಟತನ ತೋರಿದರು. ಆದರೆ ಅವರಿಗೆ ನಮ್ಮಿಂದ ತಪ್ಪಿಸಿಕೊಳ್ಳಲಾಗಲಿಲ್ಲ.
فَكُلًّا أَخَذْنَا بِذَنبِهِ ۖ فَمِنْهُم مَّنْ أَرْسَلْنَا عَلَيْهِ حَاصِبًا وَمِنْهُم مَّنْ أَخَذَتْهُ الصَّيْحَةُ وَمِنْهُم مَّنْ خَسَفْنَا بِهِ الْأَرْضَ وَمِنْهُم مَّنْ أَغْرَقْنَا ۚ وَمَا كَانَ اللَّهُ لِيَظْلِمَهُمْ وَلَٰكِن كَانُوا أَنفُسَهُمْ يَظْلِمُونَ ٤٠
📖 ಅನುವಾದ
ಆಯತ್ 40
ಅನಂತರ ಪ್ರತಿಯೊಬ್ಬನನ್ನೂ ನಾವು ಅವನವನ ಪಾಪದ ಪರಿಣಾಮವಾಗಿ ಹಿಡಿದು ಬಿಟ್ಟೆವು. ಅವರ ಪೈಕಿ ಕೆಲವರ ಮೇಲೆ ನಾವು ಕಲ್ಲುಗಳ ಮಳೆಯನ್ನು ವರ್ಷಿಸಿದೆವು ಕೆಲವರನ್ನು ಮಹಾ ಘೋರ ಆರ್ಭಟವು ಹಿಡಿದು ಬಿಟ್ಟಿತು ಮತ್ತು ಕೆಲವರನ್ನು ಭೂಮಿಯೊಳಗೆ ಹುದುಗಿಸಿಬಿಟ್ಟೆವು. ಇನ್ನೂ ಕೆಲವರನ್ನು ಮುಳಿಗಿಸಿಬಿಟ್ಟೆವು. ಅಲ್ಲಾಹನು ಅವರ ಮೇಲೆ ಅಕ್ರಮವೆಸುವವನಾಗಿರಲಿಲ್ಲ. ಆದರೆ ಅವರೇ ತಮ್ಮ ಮೇಲೆ ಅಕ್ರಮವೆಸಗುತ್ತಿದ್ದರು.
مَثَلُ الَّذِينَ اتَّخَذُوا مِن دُونِ اللَّهِ أَوْلِيَاءَ كَمَثَلِ الْعَنكَبُوتِ اتَّخَذَتْ بَيْتًا ۖ وَإِنَّ أَوْهَنَ الْبُيُوتِ لَبَيْتُ الْعَنكَبُوتِ ۖ لَوْ كَانُوا يَعْلَمُونَ ٤١
📖 ಅನುವಾದ
ಆಯತ್ 41
ಅಲ್ಲಾಹನನ್ನು ಬಿಟ್ಟು ಇತರರನ್ನು ರಕ್ಷಕ ಮಿತ್ರರನ್ನಾಗಿ ಮಾಡಿಕೊಂಡಿರುವವರ ಉಪಮೆಯು ಒಂದು ಜೇಡರ ಹುಳದಂತೆ. ಅದೊಂದು ಮನೆಯನ್ನು ನಿರ್ಮಿಸುತ್ತದೆ. ವಸ್ತುತಃ ಸಕಲ ಮನೆಗಳಿಗಿಂತ ದುರ್ಬಲ ಮನೆಯು ಜೇಡರ ಮನೆಯಾಗಿದೆ. ಅವರು ಅರಿಯುವವರಾಗಿದ್ದರೇ!
إِنَّ اللَّهَ يَعْلَمُ مَا يَدْعُونَ مِن دُونِهِ مِن شَيْءٍ ۚ وَهُوَ الْعَزِيزُ الْحَكِيمُ ٤٢
📖 ಅನುವಾದ
ಆಯತ್ 42
ನಿಶ್ಚಯವಾಗಿಯು ಅಲ್ಲಾಹನು ತನ್ನ ಹೊರತು ಅವರು ಕರೆದು ಬೇಡುತ್ತಿರುವುದನ್ನು ಅರಿಯುತ್ತಾನೆ ಮತ್ತು ಅವನು ಪ್ರಚಂಡನು, ಸುಜ್ಞಾನಿಯು ಆಗಿದ್ದಾನೆ.
وَتِلْكَ الْأَمْثَالُ نَضْرِبُهَا لِلنَّاسِ ۖ وَمَا يَعْقِلُهَا إِلَّا الْعَالِمُونَ ٤٣
📖 ಅನುವಾದ
ಆಯತ್ 43
ನಾವು ಈ ಉಪಮೆಗಳನ್ನು ಜನರಿಗೆ ವಿವರಿಸಿಕೊಡುತ್ತೇವೆ. ಅವುಗಳನ್ನು ಜ್ಞಾನಿಗಳು ಮಾತ್ರ ತಿಳಿದು ಕೊಳ್ಳುತ್ತಾರೆ.
خَلَقَ اللَّهُ السَّمَاوَاتِ وَالْأَرْضَ بِالْحَقِّ ۚ إِنَّ فِي ذَٰلِكَ لَآيَةً لِّلْمُؤْمِنِينَ ٤٤
📖 ಅನುವಾದ
ಆಯತ್ 44
ಅಲ್ಲಾಹನು ಆಕಾಶಗಳನ್ನೂ, ಭೂಮಿಯನ್ನೂ ಸತ್ಯದೊಂದಿಗೆ ಸೃಷ್ಟಿಸಿದ್ದಾನೆ. ನಿಶ್ಚಯವಾಗಿಯು ಸತ್ಯವಿಶ್ವಾಸಿಗಳಿಗೆ ಇದರಲ್ಲಿ ಮಹಾ ಪುರಾವೆಯಿದೆ.
اتْلُ مَا أُوحِيَ إِلَيْكَ مِنَ الْكِتَابِ وَأَقِمِ الصَّلَاةَ ۖ إِنَّ الصَّلَاةَ تَنْهَىٰ عَنِ الْفَحْشَاءِ وَالْمُنكَرِ ۗ وَلَذِكْرُ اللَّهِ أَكْبَرُ ۗ وَاللَّهُ يَعْلَمُ مَا تَصْنَعُونَ ٤٥
📖 ಅನುವಾದ
ಆಯತ್ 45
(ಓ ಪೈಗಂಬರರೇ) ನಿಮ್ಮೆಡೆಗೆ ಸಂದೇಶ ನೀಡಲಾಗುತ್ತಿರುವ ಗ್ರಂಥದಿAದ ನೀವು ಓದಿ ಹೇಳಿರಿ ಮತ್ತು ನಮಾಝ್ ಸಂಸ್ಥಾಪಿಸಿರಿ. ನಿಜವಾಗಿಯು ನಮಾಝ್ ನಿರ್ಲಜ್ಜೆ ಮತ್ತು ಕೆಡುಕುಗಳಿಂದ ತಡೆಯುತ್ತದೆ. ನಿಸ್ಸಂಶಯವಾಗಿಯು ಅಲ್ಲಾಹನ ಸ್ಮರಣೆಯು ಅತ್ಯಂತ ಹಿರಿದಾದುದಾಗಿದೆ ಮತ್ತು ಅಲ್ಲಾಹನು ನೀವು ಮಾಡುತ್ತಿರುವುದನ್ನೆಲ್ಲ ಅರಿಯುತ್ತಾನೆ.
۞ وَلَا تُجَادِلُوا أَهْلَ الْكِتَابِ إِلَّا بِالَّتِي هِيَ أَحْسَنُ إِلَّا الَّذِينَ ظَلَمُوا مِنْهُمْ ۖ وَقُولُوا آمَنَّا بِالَّذِي أُنزِلَ إِلَيْنَا وَأُنزِلَ إِلَيْكُمْ وَإِلَٰهُنَا وَإِلَٰهُكُمْ وَاحِدٌ وَنَحْنُ لَهُ مُسْلِمُونَ ٤٦
📖 ಅನುವಾದ
ಆಯತ್ 46
ಸತ್ಯವಿಶ್ವಾಸಿಗಳೇ, ಗ್ರಂಥದವರೊಡನೆ ಅತ್ಯುತ್ತಮ ರೀತಿಯಲ್ಲೇ ನೀವು ವಾಗ್ವಾದ ನಡೆಸಿರಿ. ಆದರೆ ಅವರ ಪೈಕಿ ಅಕ್ರಮವೆಸಗಿದವರ ಹೊರತು ಮತ್ತು ಹೇಳಿರಿ: ಓ ಗ್ರಂಥದವರೇ ನಮ್ಮೆಡೆಗೆ ಅವತೀರ್ಣ ಗೊಳಿಸಲಾದುದರಲ್ಲೂ, ನಿಮ್ಮೆಡೆಗೆ ಅವರ್ತೀಣ ಗೊಳಿಸಲಾದುದರಲ್ಲೂ ನಾವು ವಿಶ್ವಾಸಿರಿಸಿದೆವು. ಮತ್ತು ನಮ್ಮ ಹಾಗೂ ನಿಮ್ಮ ಆರಾಧ್ಯನು ಒಬ್ಬನೇ ಆಗಿದ್ದಾನೆ ಮತ್ತು ನಾವು ಅವನ ಆಜ್ಞಾಪಾಲಕರಾಗಿದ್ದೇವೆ.
وَكَذَٰلِكَ أَنزَلْنَا إِلَيْكَ الْكِتَابَ ۚ فَالَّذِينَ آتَيْنَاهُمُ الْكِتَابَ يُؤْمِنُونَ بِهِ ۖ وَمِنْ هَٰؤُلَاءِ مَن يُؤْمِنُ بِهِ ۚ وَمَا يَجْحَدُ بِآيَاتِنَا إِلَّا الْكَافِرُونَ ٤٧
📖 ಅನುವಾದ
ಆಯತ್ 47
(ಓ ಪೈಗಂಬರರೇ) ನಾವು ಇದೇ ರೀತಿ ನಿಮ್ಮೆಡೆಗೆ ಈ ಗ್ರಂಥವನ್ನು ಅವತೀರ್ಣಗೊಳಿಸಿರುತ್ತೇವೆ. ಇದಕ್ಕೆ ಮೊದಲು ನಾವು ಗ್ರಂಥವನ್ನು ನೀಡಲ್ಪಟ್ಟವರು ಇದರಲ್ಲಿ (ಕುರ್‌ಆನಿನಲ್ಲಿ) ವಿಶ್ವಾಸವಿರಿಸುತ್ತಾರೆ ಮತ್ತು ಇವರ (ಈ ಬಹುದೇವಾರಾಧಕರ) ಪೈಕಿಯು ಕೆಲವರು ಇದರಲ್ಲಿ ವಿಶ್ವಾಸವಿರಿಸುತ್ತಾರೆ. ಇನ್ನು ನಮ್ಮ ಸೂಕ್ತಿಗಳನ್ನು ಕೇವಲ ಸತ್ಯನಿಷೇಧಿಗಳು ಮಾತ್ರ ನಿಷೇಧಿಸುತ್ತಾರೆ.
وَمَا كُنتَ تَتْلُو مِن قَبْلِهِ مِن كِتَابٍ وَلَا تَخُطُّهُ بِيَمِينِكَ ۖ إِذًا لَّارْتَابَ الْمُبْطِلُونَ ٤٨
📖 ಅನುವಾದ
ಆಯತ್ 48
ಇದಕ್ಕೆ ಮೊದಲು ನೀವು ಯಾವ ಗ್ರಂಥವನ್ನು ಓದುತ್ತಿರಲಿಲ್ಲ ಮತ್ತು ಅದನ್ನು ನಿಮ್ಮ ಬಲಗೈಯಿಂದ ಬರೆಯುತ್ತಿರಲಿಲ್ಲ. ಹಾಗೇನಾದರೂ ಇದ್ದರೆ ಈ ಮಿಥ್ಯವಾದಿಗಳು ಸಂದೇಹಕ್ಕೊಳಗಾಗುತ್ತಿದ್ದರು.
بَلْ هُوَ آيَاتٌ بَيِّنَاتٌ فِي صُدُورِ الَّذِينَ أُوتُوا الْعِلْمَ ۚ وَمَا يَجْحَدُ بِآيَاتِنَا إِلَّا الظَّالِمُونَ ٤٩
📖 ಅನುವಾದ
ಆಯತ್ 49
ಆದರೆ, ಇದು (ಈ ಕುರ್‌ಆನ್) ಜ್ಞಾನಿಗಳ ಹೃದಯಗಳಲ್ಲಿ ಸುರಕ್ಷಿತವಾಗಿರುವ ಸುಸ್ಪಷ್ಟ ಸೂಕ್ತಿಗಳಾಗಿವೆ. ಅಕ್ರಮಿಗಳ ಹೊರತು ನಮ್ಮ ಸೂಕ್ತಿಗಳನ್ನು ಇನ್ನಾರೂ ನಿಷೇಧಿಸುವುದಿಲ್ಲ.
وَقَالُوا لَوْلَا أُنزِلَ عَلَيْهِ آيَاتٌ مِّن رَّبِّهِ ۖ قُلْ إِنَّمَا الْآيَاتُ عِندَ اللَّهِ وَإِنَّمَا أَنَا نَذِيرٌ مُّبِينٌ ٥٠
📖 ಅನುವಾದ
ಆಯತ್ 50
ಸತ್ಯನಿಷೇಧಿಗಳು ಹೇಳಿದರು: ಇವನ ಮೇಲೆ ಇವನ ಪ್ರಭುವಿನಿಂದ ಕೆಲವು ದೃಷ್ಟಾಂತಗಳು ಏಕೆ ಇಳಿಸಲಾಗಿಲ್ಲ? ಹೇಳಿರಿ: ದೃಷ್ಟಾಂತಗಳೆಲ್ಲವೂ ಅಲ್ಲಾಹನ ಬಳಿಯಿವೆ. ನಾನು ಕೇವಲ ಸುಸ್ಪಷ್ಟವಾಗಿ ಮುನ್ನೆಚ್ಚರಿಕೆ ನೀಡುವವನಾಗಿದ್ದೇನೆ.
أَوَلَمْ يَكْفِهِمْ أَنَّا أَنزَلْنَا عَلَيْكَ الْكِتَابَ يُتْلَىٰ عَلَيْهِمْ ۚ إِنَّ فِي ذَٰلِكَ لَرَحْمَةً وَذِكْرَىٰ لِقَوْمٍ يُؤْمِنُونَ ٥١
📖 ಅನುವಾದ
ಆಯತ್ 51
ಅವರ ಮೇಲೆ ಪಠಿಸಲಾಗುತ್ತಿರುವಂತಹ ಗ್ರಂಥವನ್ನು ನಾವು ನಿನಗೆ ನೀಡಿರುತ್ತೇವೆಂಬುದು ಅವರಿಗೆ ಸಾಲದೇ? ಇದರಲ್ಲಿ ವಿಶ್ವಾಸವಿರಿಸುವ ಜನರಿಗೆ ಕಾರುಣ್ಯವು ಉದ್ಭೋಧೆಯು ಇದೆ.
قُلْ كَفَىٰ بِاللَّهِ بَيْنِي وَبَيْنَكُمْ شَهِيدًا ۖ يَعْلَمُ مَا فِي السَّمَاوَاتِ وَالْأَرْضِ ۗ وَالَّذِينَ آمَنُوا بِالْبَاطِلِ وَكَفَرُوا بِاللَّهِ أُولَٰئِكَ هُمُ الْخَاسِرُونَ ٥٢
📖 ಅನುವಾದ
ಆಯತ್ 52
ಹೇಳಿರಿ: ನನ್ನ ಮತ್ತು ನಿಮ್ಮ ನಡುವೆ ಸಾಕ್ಷಿಯಾಗಿ ಅಲ್ಲಾಹನೇ ಸಾಕು. ಅವನು ಭೂಮಿ, ಆಕಾಶಗಳಲ್ಲಿರುವ ಸಕಲ ವಿಷಯಗಳ ಅರಿವುಳ್ಳವನಾಗಿದ್ದಾನೆ. ಮಿಥ್ಯದಲ್ಲಿ ವಿಶ್ವಾಸವನ್ನಿರಿಸಿರುವವರು ನಷ್ಟ ಹೊಂದಿದವರಾಗಿರುತ್ತಾರೆ.
وَيَسْتَعْجِلُونَكَ بِالْعَذَابِ ۚ وَلَوْلَا أَجَلٌ مُّسَمًّى لَّجَاءَهُمُ الْعَذَابُ وَلَيَأْتِيَنَّهُم بَغْتَةً وَهُمْ لَا يَشْعُرُونَ ٥٣
📖 ಅನುವಾದ
ಆಯತ್ 53
ಇವರು ನಿಮ್ಮಿಂದ ಯಾತನೆಗೆ ಆತುರ ಪಡುತ್ತಿದ್ದಾರೆ ನಿಶ್ಚಿತ ಕಾಲಾವಧಿಯೇನಾದರೂ ಇಲ್ಲದಿರುತ್ತಿದ್ದರೆ ಕೂಡಲೇ ಅವರ ಬಳಿಗೆ ಯಾತನೆಯು ಬಂದು ಬಿಡುತ್ತಿತ್ತು. ಖಂಡಿತವಾಗಿಯೂ ಅದು ಅವರಲ್ಲಿಗೆ ಅವರು ಊಹಿಸದಿರುವ ಸ್ಥಿತಿಯಲ್ಲೇ ಹಠಾತ್ತನೆ ಬಂದು ಬಿಡುವುದು.
يَسْتَعْجِلُونَكَ بِالْعَذَابِ وَإِنَّ جَهَنَّمَ لَمُحِيطَةٌ بِالْكَافِرِينَ ٥٤
📖 ಅನುವಾದ
ಆಯತ್ 54
ಇವರು ನಿಮ್ಮಿಂದ ಯಾತನೆಗೆ ಆತುರ ಪಟ್ಟುಕೊಳ್ಳುತ್ತಿದ್ದಾರೆ ನಿಶ್ಚಯವಾಗಿಯು ನರಕವು ಸತ್ಯನಿಷೇಧಿಗಳನ್ನು ಸುತ್ತುವರಿದಿದೆ.
يَوْمَ يَغْشَاهُمُ الْعَذَابُ مِن فَوْقِهِمْ وَمِن تَحْتِ أَرْجُلِهِمْ وَيَقُولُ ذُوقُوا مَا كُنتُمْ تَعْمَلُونَ ٥٥
📖 ಅನುವಾದ
ಆಯತ್ 55
ಅವರ ಮೇಲ್ಗಡೆಯಿಂದಲೂ ಅವರ ಕಾಲಡಿಯಿಂದಲೂ ಯಾತನೆಯು ಅವರನ್ನು ಆವರಿಸುವ ದಿನ, ಅಲ್ಲಾಹನು ಹೇಳುವನು: ಇನ್ನು ನೀವು ನಿಮ್ಮ ಕೃತ್ಯಗಳ ರುಚಿಯನ್ನು ಅನುಭವಿಸಿರಿ.
يَا عِبَادِيَ الَّذِينَ آمَنُوا إِنَّ أَرْضِي وَاسِعَةٌ فَإِيَّايَ فَاعْبُدُونِ ٥٦
📖 ಅನುವಾದ
ಆಯತ್ 56
ಓ ನನ್ನ ಸತ್ಯವಿಶ್ವಾಸಿ ದಾಸರೇ, ನಿಸ್ಸಂಶಯವಾಗಿಯು ನನ್ನ ಭೂಮಿಯು ವಿಶಾಲವಾಗಿದೆ. ಆದ್ದರಿಂದ ನೀವು ನನ್ನನ್ನೇ ಆರಾಧಿಸಿರಿ.
كُلُّ نَفْسٍ ذَائِقَةُ الْمَوْتِ ۖ ثُمَّ إِلَيْنَا تُرْجَعُونَ ٥٧
📖 ಅನುವಾದ
ಆಯತ್ 57
ಪ್ರತಿಯೊಂದು ಜೀವಿಯು ಮರಣದ ರುಚಿ ಸವಿಯಬೇಕಾಗಿದೆ. ತರುವಾಯ ನೀವೆಲ್ಲರೂ ನಮ್ಮೆಡೆಗೇ ಮರಳಿಸಲಾಗುವಿರಿ.
وَالَّذِينَ آمَنُوا وَعَمِلُوا الصَّالِحَاتِ لَنُبَوِّئَنَّهُم مِّنَ الْجَنَّةِ غُرَفًا تَجْرِي مِن تَحْتِهَا الْأَنْهَارُ خَالِدِينَ فِيهَا ۚ نِعْمَ أَجْرُ الْعَامِلِينَ ٥٨
📖 ಅನುವಾದ
ಆಯತ್ 58
ಯಾರು ಸತ್ಯವಿಶ್ವಾಸಿವಿರಿಸಿ ಸತ್ಕರ್ಮಗಳನ್ನು ಕೈಗೊಂಡರೋ ಖಂಡಿತ ನಾವು ಅವರಿಗೆ ಸ್ವರ್ಗೋದ್ಯಾನದ ಉನ್ನತ ಭವನಗಳಲ್ಲಿ ನೆಲೆಸುವೆವು. ಅವುಗಳ ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವುವು. ಅವರು ಅಲ್ಲಿ ಶಾಶ್ವತವಾಗಿರುವರು. ಸತ್ಕರ್ಮವೆಸಗುವವರ ಪ್ರತಿಫಲವು ಅದೆಷ್ಟು ಉತ್ತಮವಾದುದು.
الَّذِينَ صَبَرُوا وَعَلَىٰ رَبِّهِمْ يَتَوَكَّلُونَ ٥٩
📖 ಅನುವಾದ
ಆಯತ್ 59
ಅವರು ಸಹನೆ ವಹಿಸಿದವರು, ತಮ್ಮ ಪ್ರಭುವಿನ ಮೇಲೆ ಭರವಸೆಯನ್ನಿಟ್ಟಿರುವವರು ಆಗಿದ್ದಾರೆ.
وَكَأَيِّن مِّن دَابَّةٍ لَّا تَحْمِلُ رِزْقَهَا اللَّهُ يَرْزُقُهَا وَإِيَّاكُمْ ۚ وَهُوَ السَّمِيعُ الْعَلِيمُ ٦٠
📖 ಅನುವಾದ
ಆಯತ್ 60
ತಮ್ಮ ಆಹಾರವನ್ನು ಹೊತ್ತು ನಡೆಯದ ಅದೆಷ್ಟೋ ಜೀವಿಗಳಿವೆ. ಅಲ್ಲಾಹನು ಅವುಗಳಿಗೂ ಮತ್ತು ನಿಮಗೂ ಆಹಾರ ನೀಡುತ್ತಾನೆ ಮತ್ತು ಅವನು ಸರ್ವವನ್ನಾಲಿಸುವವನು, ಚೆನ್ನಾಗಿ ಅರಿಯುವವನು ಆಗಿದ್ದಾನೆ.
وَلَئِن سَأَلْتَهُم مَّنْ خَلَقَ السَّمَاوَاتِ وَالْأَرْضَ وَسَخَّرَ الشَّمْسَ وَالْقَمَرَ لَيَقُولُنَّ اللَّهُ ۖ فَأَنَّىٰ يُؤْفَكُونَ ٦١
📖 ಅನುವಾದ
ಆಯತ್ 61
ಭೂಮಿ, ಆಕಾಶಗಳನ್ನು ಸೃಷ್ಟಿಸಿದವನು ಮತ್ತು ಸೂರ್ಯನನ್ನೂ, ಚಂದ್ರನನ್ನೂ ಅಧೀನಗೊಳಿಸಿದವನು ಯಾರೆಂದು ನೀವು ಅವರೊಡನೆ ಕೇಳಿದರೆ ಖಂಡಿತ ಅವರು ಅಲ್ಲಾಹ್ ಎಂದೇ ಉತ್ತರಿಸುತ್ತಾರೆ. ಹಾಗಿದ್ದೂ ಅವರೆತ್ತ ಅಲೆದಾಡಿಸಲಾಗುತ್ತಿದ್ದಾರೆ?
اللَّهُ يَبْسُطُ الرِّزْقَ لِمَن يَشَاءُ مِنْ عِبَادِهِ وَيَقْدِرُ لَهُ ۚ إِنَّ اللَّهَ بِكُلِّ شَيْءٍ عَلِيمٌ ٦٢
📖 ಅನುವಾದ
ಆಯತ್ 62
ಅಲ್ಲಾಹನು ತನ್ನ ದಾಸರ ಪೈಕಿ ತಾನಿಚ್ಛಿಸಿದವರಿಗೆ ಜೀವನಾಧಾರವನ್ನು ವಿಶಾಲಗೊಳಿಸುತ್ತಾನೆ ಹಾಗೂ ತಾನಿಚ್ಛಿಸಿದವರಿಗೆ ಸೀಮಿತಗೊಳಿಸುತ್ತಾನೆ. ನಿಶ್ಚಯವಾಗಿಯು ಅಲ್ಲಾಹನು ಸಕಲ ವಸ್ತುಗಳ ಅರಿವುಳ್ಳವನಾಗಿದ್ದಾನೆ.
وَلَئِن سَأَلْتَهُم مَّن نَّزَّلَ مِنَ السَّمَاءِ مَاءً فَأَحْيَا بِهِ الْأَرْضَ مِن بَعْدِ مَوْتِهَا لَيَقُولُنَّ اللَّهُ ۚ قُلِ الْحَمْدُ لِلَّهِ ۚ بَلْ أَكْثَرُهُمْ لَا يَعْقِلُونَ ٦٣
📖 ಅನುವಾದ
ಆಯತ್ 63
ನೀವು ಅವರೊಡನೆ ಆಕಾಶದಿಂದ ನೀರನ್ನು ಸುರಿಸಿ ಭೂಮಿಯನ್ನು ಅದರ ನಿರ್ಜೀವದ ನಂತರ ಜೀವಕೊಟ್ಟವನು ಯಾರೆಂದು ಕೇಳಿದರೆ ಖಂಡಿತ ಅವರು ಅಲ್ಲಾಹ್ ಎಂದೇ ಉತ್ತರಿಸುತ್ತಾರೆ. ನೀವು ಹೇಳಿರಿ: ಸರ್ವಸ್ತುತಿಯು ಅಲ್ಲಾಹನಿಗೇ ಮೀಸಲು. ಆದರೆ ಅವರಲ್ಲಿ ಹೆಚ್ಚಿನವರು ಬುದ್ಧಿಶೂನ್ಯರಾಗಿದ್ದಾರೆ.
وَمَا هَٰذِهِ الْحَيَاةُ الدُّنْيَا إِلَّا لَهْوٌ وَلَعِبٌ ۚ وَإِنَّ الدَّارَ الْآخِرَةَ لَهِيَ الْحَيَوَانُ ۚ لَوْ كَانُوا يَعْلَمُونَ ٦٤
📖 ಅನುವಾದ
ಆಯತ್ 64
ಈ ಲೌಕಿಕ ಜೀವನವು ಕೇವಲ ಆಟ, ವಿನೋದವಾಗಿದೆ. ಪರಲೋಕ ಭವನದ ಜೀವನವೇ ಯತಾರ್ಥ ಜೀವನವಾಗಿದೆ. ಅವರು ಅರಿಯುತ್ತಿದ್ದರೆ!
فَإِذَا رَكِبُوا فِي الْفُلْكِ دَعَوُا اللَّهَ مُخْلِصِينَ لَهُ الدِّينَ فَلَمَّا نَجَّاهُمْ إِلَى الْبَرِّ إِذَا هُمْ يُشْرِكُونَ ٦٥
📖 ಅನುವಾದ
ಆಯತ್ 65
ಬಹುದೇವಾರಾಧಕರು ಹಡಗುಗಳಲ್ಲಿ ಸಂಚರಿಸುವಾಗ ತಮ್ಮ ಧರ್ಮವನ್ನು ಅಲ್ಲಾಹನಿಗೇ ಮೀಸಲಿಟ್ಟು ಅವನನ್ನು ಕರೆದು ಪ್ರಾರ್ಥಿಸುತ್ತಾರೆ. ಆದರೆ ಅವನು ಅವರನ್ನು ರಕ್ಷಿಸಿ ದಡಕ್ಕೆ ಸೇರಿಸಿದರೆ ಕೂಡಲೇ ಅವರು ಸಹಭಾಗಿಗಳನ್ನು ಕಲ್ಪಿಸತೊಡಗುತ್ತಾರೆ.
لِيَكْفُرُوا بِمَا آتَيْنَاهُمْ وَلِيَتَمَتَّعُوا ۖ فَسَوْفَ يَعْلَمُونَ ٦٦
📖 ಅನುವಾದ
ಆಯತ್ 66
ಇದು ನಾವು ಅವÀರಿಗೆ ದಯಪಾಲಿಸಿರುವ ಅನುಗ್ರಹಗಳಿಗೆ ಕೃತಘ್ನತೆ ತೋರಲೆಂದೂ, ಸುಖಾಡಂಬರಗಳನ್ನು ಅನುಭವಿಸಲೆಂದೂ ಆಗಿದೆ. ಅವರು ಸದ್ಯದಲ್ಲೇ ಅರಿಯಲಿದ್ದಾರೆ.
أَوَلَمْ يَرَوْا أَنَّا جَعَلْنَا حَرَمًا آمِنًا وَيُتَخَطَّفُ النَّاسُ مِنْ حَوْلِهِمْ ۚ أَفَبِالْبَاطِلِ يُؤْمِنُونَ وَبِنِعْمَةِ اللَّهِ يَكْفُرُونَ ٦٧
📖 ಅನುವಾದ
ಆಯತ್ 67
ನಾವು 'ಹರಮ್' (ಮಕ್ಕಾ ಪ್ರದೇಶವನ್ನು) ಅನ್ನು ನಿರ್ಭಯ ತಾಣವನ್ನಾಗಿ ಮಾಡಿದ್ದೇವೆಂದು ಅವರು ನೋಡುವುದಿಲ್ಲವೇ? ವಸ್ತುತಃ ಅದರ ಸುತ್ತ ಮುತ್ತಲಿನ ಜನರು ಅಪಹರಿಸಲ್ಪಡುತ್ತಿದ್ದಾರೆ. ಅದಾಗ್ಯೂ ಅವರು ಮಿಥ್ಯದಲ್ಲಿ ವಿಶ್ವಾಸವಿಟ್ಟು ಅಲ್ಲಾಹನ ಅನುಗ್ರಹಗಳಿಗೆ ಕೃತಘ್ನತೆ ತೋರುತ್ತಿದ್ದಾರೆಯೇ?
وَمَنْ أَظْلَمُ مِمَّنِ افْتَرَىٰ عَلَى اللَّهِ كَذِبًا أَوْ كَذَّبَ بِالْحَقِّ لَمَّا جَاءَهُ ۚ أَلَيْسَ فِي جَهَنَّمَ مَثْوًى لِّلْكَافِرِينَ ٦٨
📖 ಅನುವಾದ
ಆಯತ್ 68
ಅಲ್ಲಾಹನ ಮೇಲೆ ಸುಳ್ಳಾಗಿಸಿದವನಿಗಿಂತ ದೊಡ್ಡ ಅಕ್ರಮಿಯು ಇನ್ನಾರಿದ್ದಾನೆ? ಇಂತಹ ಸತ್ಯ ನಿಷೇಧಿಗಳ ತಂಗುದಾಣವು ನರಕದಲ್ಲಿಲ್ಲವೇ?
وَالَّذِينَ جَاهَدُوا فِينَا لَنَهْدِيَنَّهُمْ سُبُلَنَا ۚ وَإِنَّ اللَّهَ لَمَعَ الْمُحْسِنِينَ ٦٩
📖 ಅನುವಾದ
ಆಯತ್ 69
ನಮಗಾಗಿ ಹೋರಾಡುವವರಿಗೆ ನಾವು ನಮ್ಮ ಮಾರ್ಗಗಳನ್ನು ಖಂಡಿತ ತೋರಿಸಿ ಕೊಡಲಿದ್ದೇವೆ. ನಿಶ್ಚಯವಾಗಿಯು ಅಲ್ಲಾಹನು ಸಜ್ಜನರ ಜೊತೆಯಲ್ಲಿದ್ದಾನೆ.
ಓದಿ ಸೂರಾ ಅಲ್-ಅಂಕಬೂತ್ ಕನ್ನಡ ಅನುವಾದ – ಪಠಣ ಮತ್ತು ಆಡಿಯೋ
ಪವಿತ್ರ ಕುರಾನ್
Monday, September 7, 2026
Don't forget us in your sincere prayers

