PDF —
88 ಆಯತ್ Meccan PDF
Built right in your browser — download starts automatically

ಸೂರಾ ಸಾದ್ pdf — ಡೌನ್‌ಲೋಡ್ (ಕನ್ನಡ)

ಸೂರಾ ಸಾದ್ pdf ಕನ್ನಡ — ಡೌನ್‌ಲೋಡ್ ಸೂರಾ ಸಾದ್ ಅನುವಾದ. ಸೂರಾ ಸಾದ್ (Meccan) 88 ಆಯತ್.



88 ಆಯತ್ · Meccan · ಕನ್ನಡ
bismillah
ﭑﭒﭓﭔﭕﭖ
38:1 ಸ್ವಾದ್, ಉಪದೇಶಗಳನ್ನೊಳಗೊಂಡ ಕುರ್‌ಆನಿನಾಣೆ.
ﭗﭘﭙﭚﭛﭜﭝ
38:2 ಆದರೆ, ಸತ್ಯನಿಷೇಧಿಗಳು ದುರಹಂಕಾರದಲ್ಲಿ ಮತ್ತು ವಿರೋಧದಲ್ಲಿ ತಲ್ಲೀನರಾಗಿರುವರು.
ﭞﭟﭠﭡﭢﭣﭤﭥﭦﭧﭨ
38:3 ಇವರಿಗಿಂತ ಮೊದಲು ಅದೆಷ್ಟೊ ಜನಾಂಗಗಳನ್ನು ನಾವು ನಾಶ ಮಾಡಿರುತ್ತೇವೆ. ವಸ್ತುತಃ ಅವರು ಮೊರೆಯಿಟ್ಟಿದ್ದರು. ಆದರೆ ಅದು ರಕ್ಷಣೆಯ ಸಂದರ್ಭವಾಗಿರಲಿಲ್ಲ.
ﭩﭪﭫﭬﭭﭮﭯﭰﭱﭲﭳﭴ
38:4 ಮತ್ತು ಇವರಿಂದಲೇ ಆದ ಒಬ್ಬ ಮುನ್ನೆಚ್ಚರಿಕೆಗಾರನು ಇವರ ಬಳಿ ಬಂದಿರುವನೆAದು ಇವರು ಆಶ್ಚರ್ಯಪಡುತ್ತಾರೆ. ಹಾಗೂ ಸತ್ಯನಿಷೇಧಿಗಳು ಇವನೊಬ್ಬ ಮಹಾ ಜಾದುಗಾರನೂ, ಸುಳ್ಳುಗಾರನೂ ಆಗಿದ್ದಾನೆಂದು ಹೇಳುತ್ತಾರೆ.
ﭵﭶﭷﭸﭹﭺﭻﭼﭽﭾ
38:5 ಇವನು ಎಲ್ಲಾ ದೇವರುಗಳ ಸ್ಥಾನದಲ್ಲಿ ಒಂದೇ ಆರಾಧ್ಯನನ್ನಾಗಿ ಮಾಡಿಬಿಟ್ಟಿರುವನೇ? ನಿಜವಾಗಿಯು ಇದೊಂದು ವಿಚಿತ್ರ ಸಂಗತಿಯಾಗಿದೆ.
ﭿﮀﮁﮂﮃﮄﮅﮆﮇﮈﮉﮊﮋﮌ
38:6 ಮತ್ತು ಅವರ ಮುಖಂಡರು ಹೀಗೆ ಹೇಳುತ್ತಾ ನಡೆದರು: ನಡೆಯಿರಿ ಹಾಗೂ ನಿಮ್ಮ ಆರಾಧ್ಯರ ಆರಾಧನೆಯಲ್ಲೇ ಸ್ಥಿರವಾಗಿರಿ ನಿಜವಾಗಿಯು ಇದು ಉದ್ದೇಶಪೂರ್ವಕವಾಗಿ ಮಾಡಲಾಗುತ್ತಿರುವ ಸಂಗತಿಯಾಗಿದೆ.
ﮍﮎﮏﮐﮑﮒﮓﮔﮕﮖﮗ
38:7 ನಾವು ಇತರ ಧರ್ಮಗಳಲ್ಲಿ ಇಂತಹ ಮಾತನ್ನು ಕೇಳಲಿಲ್ಲ. ಇದು ಕೃತಕ ಸೃಷ್ಟಿಯಾಗಿದೆ.
ﮘﮙﮚﮛﮜﮝﮞﮟﮠﮡﮢﮣﮤﮥﮦﮧﮨﮩ
38:8 ಏನೂ ನಮ್ಮ ನಡುವೆ ಕೇವಲ ಇವನ ಮೇಲೆಯೇ ಬೋಧನೆಯು ಅವತೀರ್ಣಗೊಂಡಿತೇ? ವಾಸ್ತವದಲ್ಲಿ ನಮ್ಮ ವಾಣಿಯಕುರಿತು ಇವರು ಸಂದೇಹದಲ್ಲಿದ್ದಾರೆ ಅಲ್ಲ! ವಾಸ್ತವದಲ್ಲಿ ಇವರು ಇಷ್ಟರವರೆಗೆ ನನ್ನ ಯಾತನೆಯನ್ನು ಸವಿದಿಲ್ಲ.
ﮪﮫﮬﮭﮮﮯﮰﮱ
38:9 ಅಥವಾ ಪ್ರಚಂಡನೂ, ಮಹಾದಾನಶೀಲನೂ ಆದ ನಿಮ್ಮ ಪ್ರಭುವಿನ ಕಾರುಣ್ಯದ ಭಂಡಾರಗಳೇನಾದರೂ ಇವರ ಬಳಿ ಇವೆಯೇ ?
ﯓﯔﯕﯖﯗﯘﯙﯚﯛﯜﯝﯞ
38:10 ಅಥವಾ ಅವರಿಗೆ ಆಕಾಶಗಳ, ಭೂಮಿಯ ಹಾಗೂ ಅವೆರಡರ ಮಧ್ಯೆಯಿರುವುದರ ಅಧಿಪತ್ಯ ಇದೆಯೇ ? ಹಾಗಿದ್ದರೆ ಅವರು ಆ ಮಾರ್ಗಗಳ ಮೂಲಕ (ಆಕಾಶಗಳ ಉನ್ನತಕ್ಕೆ) ಏರಿ ಹೋಗಲಿ.
ﯟﯠﯡﯢﯣﯤﯥ
38:11 ಇದು ಸೋತ ಸÉÊನ್ಯಗಳ ಪÉÊಕಿ ಒಂದು ಚಿಕ್ಕ ಸÉÊನ್ಯವಾಗಿದ್ದು ಸೋಲಿಸಲ್ಪಡಲಿದೆ.
ﯦﯧﯨﯩﯪﯫﯬﯭﯮ
38:12 ಇವರಿಗಿಂತ ಮೊದಲು ನೂಹರ ಜನಾಂಗ, ಆದ್ ಹಾಗೂ ಮೊಳೆಗಳವನಾದ ಫಿರ್‌ಔನ್ ಸುಳ್ಳಾಗಿಸಿದ್ದರು.
ﯯﯰﯱﯲﯳﯴﯵﯶﯷ
38:13 ಮತ್ತು ಸಮೂದರ, ಲೂತರ ಜನಾಂಗ ಹಾಗೂ ಐಕಾ ನಿವಾಸಿಗಳೂ ಸುಳ್ಳಾಗಿಸಿದ್ದರು. ಇವು (ಮಹಾ) ಪಡೆಗಳಾಗಿದ್ದವು.
ﯸﯹﯺﯻﯼﯽﯾﯿ
38:14 ಇವರ ಪÉÊಕಿ ಪ್ರತಿಯೊಬ್ಬರೂ ಸಂದೇಶವಾಹಕರನ್ನು ಸುಳ್ಳಾಗಿಸಿದ್ದರು. ಆಗ ನನ್ನ ಶಿಕÉ್ಷಯು ಅವರ ಮೇಲೆ ಸ್ಧಿರವಾಗಿಬಿಟ್ಟಿತು.
ﰀﰁﰂﰃﰄﰅﰆﰇﰈﰉﰊ
38:15 ಅವರು ಒಂದು ಘೋರ ಆರ್ಭಟವನ್ನು ನಿರೀಕ್ಷಿಸುತ್ತಿದ್ದಾರೆ. ಅದಕ್ಕೆ ಕಾಲಾವಕಾಶ ಇರದು.
ﰋﰌﰍﰎﰏﰐﰑﰒﰓ
38:16 ಮತ್ತು ಅವರು ಹೇಳುತ್ತಾರೆ: ನಮ್ಮ ಪ್ರಭು, ವಿಚಾರಣಾ ದಿನಕ್ಕೆ ಮೊದಲೇ ನಮಗೆ ನಮ್ಮ ಶಿಕ್ಷೆಯ ಪಾಲನ್ನು ನೀಡಿಬಿಡು.
ﭑﭒﭓﭔﭕﭖﭗﭘﭙﭚﭛﭜﭝ
38:17 ಓ ಪ್ರವಾದಿ, ನೀವು ಇವರ ಮಾತುಗಳ ಮೇಲೆ ಸಹನೆ ವಹಿಸಿರಿ ಹಾಗೂ ಮಹಾ ಬಲಿಷ್ಠರಾಗಿದ್ದ ನಮ್ಮ ದಾಸ ದಾವೂದರನ್ನು ಸ್ಮರಿಸಿರಿ. ನಿಜವಾಗಿಯು ಅವರು ಅತ್ಯಧಿಕ (ಅಲ್ಲಾಹನೆಡೆಗೆ) ಪಶ್ಚಾತಾಪ ಪಟ್ಟು ಮರಳುವವರಾಗಿದ್ದರು.
ﭞﭟﭠﭡﭢﭣﭤﭥ
38:18 ಅವರೊಂದಿಗೆ ಸಂಜೆ ಮುಂಜಾನೆಯಲ್ಲಿ ಪಾವಿತ್ರö್ಯವನ್ನು ಸ್ತುತಿಸಲಿಕ್ಕಾಗಿ ನಾವು ಪರ್ವತಗಳನ್ನು ನಿಯಂತ್ರಿಸಿ ಕೊಟ್ಟಿದ್ದೆವು.
ﭦﭧﭨﭩﭪﭫﭬ
38:19 ಮತ್ತು ಪಕ್ಷಿಗಳೂ ಅವರ ಸುತ್ತಲೂ ಒಟ್ಟಾಗಿ ಸೇರುತ್ತಿದ್ದವು ಮತ್ತು ಅವೆಲ್ಲವೂ ಅವರಿಗೆ ವಿಧೇಯವಾಗಿದ್ದವು.
ﭭﭮﭯﭰﭱﭲﭳ
38:20 ಮತ್ತು ನಾವು ಅವರ ಸಾಮ್ರಾಜ್ಯವನ್ನು ಬಲಪಡಿಸಿದ್ದೆವು ಹಾಗೂ ಅವರಿಗೆ ಸುಜ್ಞಾನವನ್ನು ನಿರ್ಣಾಯಕವಾಗಿ ಮಾತನಾಡುವ ಸಾಮರ್ಥ್ಯವನ್ನು ದಯಪಾಲಿಸಿದ್ದೆವು.
ﭴﭵﭶﭷﭸﭹﭺﭻﭼ
38:21 ಗೋಡೆಯನ್ನೇರಿ ಅವರ ಆರಾಧನಾ ಕೊಠಡಿಗೆ ಬಂದAತಹ ಆ ವ್ಯಾಜ್ಯಗಾರರ ಸುದ್ದಿಯು ನಿಮಗೆ ತಲುಪಿದೆಯೇ ?
ﭽﭾﭿﮀﮁﮂﮃﮄﮅﮆﮇﮈﮉﮊﮋﮌﮍﮎﮏﮐﮑﮒﮓﮔﮕﮖ
38:22 ಅವರು ದಾವೂದರ ಬಳಿಗೆ ಬಂದಾಗ ದಾವೂದರು ಅವರನ್ನು ಕಂಡು ಭಯಪಟ್ಟರು. ಆಗ ಅವರು ಹೇಳಿದರು: ಹೆದರಬೇಡಿರಿ. ನಾವು ಎರಡು ಕಕ್ಷಿದಾರರಾಗಿದ್ದೇವೆ. ನಮ್ಮಲ್ಲಿ ಒಬ್ಬನು ಇನ್ನೊಬ್ಬನ ಮೇಲೆ ಅತಿಕ್ರಮತೋರಿದ್ದಾನೆ. ಇನ್ನು ನೀವು ನ್ಯಾಯದೊಂದಿಗೆ ನಮ್ಮ ನಡುವೆ ತೀರ್ಮಾನ ಮಾಡಿರಿ ಮತ್ತು ಅನ್ಯಾಯ ಮಾಡಬೇಡಿರಿ ಮತ್ತು ನಮ್ಮನ್ನು ನೇರ ಮಾರ್ಗಕ್ಕೆ ಮುನ್ನಡೆಸಿರಿ.
ﮗﮘﮙﮚﮛﮜﮝﮞﮟﮠﮡﮢﮣﮤﮥﮦ
38:23 (ಕೇಳಿರಿ) ಇವನು ನನ್ನ ಸಹೋದರನು. ಇವನ ಬಳಿ ತೊಂಬತ್ತೊAಬತ್ತು ಕುರಿಗಳಿವೆ ಮತ್ತು ನನ್ನ ಬಳಿ ಒಂದೇ ಒಂದು ಕುರಿ ಇದೆ. ಆದರೆ ಇವನು ನಿನ್ನ ಈ ಒಂದನ್ನು ಸಹ ನನಗೆ ಒಪ್ಪಿಸಿ ಬಿಡು ಎಂದು ನನ್ನೊಂದಿಗೆ ಹೇಳುತ್ತಾನೆ ಮತ್ತು ಇವನು ವಾಗ್ವಾದದಲ್ಲಿ ನನ್ನನ್ನು ಸೋಲಿಸಿದ್ದಾನೆ.
ﮧﮨﮩﮪﮫﮬﮭﮮﮯﮰﮱﯓﯔﯕﯖﯗﯘﯙﯚﯛﯜﯝﯞﯟﯠﯡﯢﯣﯤﯥﯦﯧﯨﯩﯪﯫ
38:24 ಅವರು (ದಾವೂದ್) ಹೇಳಿದರು: ಇವನು ತನ್ನ ಕುರಿಗಳೊಂದಿಗೆ ನಿನ್ನ ಕುರಿಯನ್ನು ಸೇರಿಸಿಕೊಳ್ಳಲು ಕೇಳಿರುವುದು ನಿಸ್ಸಂಶಯವಾಗಿಯು ನಿನ್ನ ಮೇಲೆ ಮಾಡಿದ ಅಕ್ರಮವಾಗಿದೆ ಮತ್ತು ಹೆಚ್ಚಿನ ಭಾಗಸ್ಥರು ಪರಸ್ಪರ ಒಬ್ಬರನ್ನೊಬ್ಬರ ಮೇಲೆ ಅತಿಕ್ರಮವೆಸಗುತ್ತಾರೆ. ಆದರೆ ಸತ್ಯವಿಶ್ವಾಸವಿಟ್ಟವರು ಹಾಗೂ ಸತ್ಕರ್ಮಗಳನ್ನು ಕÉÊಗೊಂಡವರ ಹೊರತು. ಇಂತಹವರು ಬಹಳ ವಿರಳರಾಗಿದ್ದಾರೆ ಮತ್ತÄ ದಾವೂದರು ನಾವು ಅವರನ್ನು ಪರೀಕ್ಷೆಗೊಳಪಡಿಸಿ ದೆವೆಂದು ತಿಳಿದರು. ಕೊಡಲೇ ತನ್ನ ಪ್ರಭುವಿನಲ್ಲಿ ಕ್ಷೆಮೆಯಾಚಿಸಿದರು ಹಾಗೂ ದÉÊನ್ಯತೆಯನ್ನು ತೋರುತ್ತಾ ಸಾಷ್ಟಾಂಗವೆರಗಿದರು ಮತ್ತು ಪಶ್ಚಾತ್ತಾಪ ಪಟ್ಟು ಮರಳಿದರು.
ﯬﯭﯮﯯﯰﯱﯲﯳﯴﯵﯶ
38:25 ಆಗ ನಾವು ಅವರ ಪ್ರಮಾದವನ್ನು ಕ್ಷಮಿಸಿದೆವು ಮತ್ತು ಖಂಡಿತವಾಗಿಯು ಅವರಿಗಾಗಿ ನಮ್ಮ ಬಳಿ ನಿಕಟ ಸ್ಥಾನ ಮತ್ತು ಅತ್ಯುತ್ತಮ ನೆಲೆಯಿದೆ.
ﯷﯸﯹﯺﯻﯼﯽﯾﯿﰀﰁﰂﰃﰄﰅﰆﰇﰈﰉﰊﰋﰌﰍﰎﰏﰐﰑﰒﰓﰔﰕﰖ
38:26 ಓ ದಾವೂದ್! ನಾವು ನಿಮ್ಮನ್ನು ಈ ಭೂಮಿಯಲ್ಲಿ ಪ್ರತಿನಿಧಿಯನ್ನಾಗಿ ನಿಶ್ಚಯಿಸಿರುತ್ತೇವೆ. ಆದ್ದರಿಂದ ನೀವು ಜನರ ನಡುವೆ ನ್ಯಾಯದೊಂದಿಗೆ ತೀರ್ಪು ನೀಡಿರಿ ಹಾಗೂ ಸ್ವೇಚ್ಛೆಯನ್ನು ಅನುಸರಿಸದಿರಿ. ಇಲ್ಲ ವಾದಲ್ಲಿ ಅದು ನಿಮ್ಮನ್ನು ಅಲ್ಲಾಹನ ಮಾರ್ಗದಿಂದ ತಪ್ಪಿಸಿ ಬಿಡುವುದು. ನಿಜವಾಗಿಯು ಯಾರು ಅಲ್ಲಾಹನ ಮಾರ್ಗದಿಂದ ತಪ್ಪಿ ಹೋಗುತ್ತಾರೋ ಅವರಿಗೆ ಅತ್ಯುಗ್ರ ಶಿಕ್ಷೆಯಿರುವುದು. ಇದು ಅವರು ವಿಚಾರಣಾ ದಿನವನ್ನು ಮರೆತು ಬಿಟ್ಟಿದ್ದುದರ ನಿಮಿತ್ತವಾಗಿದೆ.
ﭑﭒﭓﭔﭕﭖﭗﭘﭙﭚﭛﭜﭝﭞﭟﭠﭡﭢﭣ
38:27 ಮತ್ತು ನಾವು ಆಕಾಶವನ್ನು, ಭೂಮಿಯನ್ನು ಮತ್ತು ಅವುಗಳ ನಡುವೆಯಿರುವುದನ್ನು ವ್ಯರ್ಥವಾಗಿ ಸೃಷ್ಟಿಸಿರುವುದಿಲ್ಲ. ಇದಂತು ಸತ್ಯ ನಿಷೇಧಿಗಳ ಭ್ರಮೆಯಾಗಿದೆ. ಆದ್ದರಿಂದ ಸತ್ಯನಿಷೇಧಿಗಳಿಗೆ ನರಕಾಗ್ನಿಯ ವಿನಾಶವಿದೆ.
ﭤﭥﭦﭧﭨﭩﭪﭫﭬﭭﭮﭯﭰﭱ
38:28 ಸತ್ಯವಿಶ್ವಾಸವಿರಿಸಿ ಸತ್ಕರ್ಮಗಳನ್ನು ಕÉÊಗೊಂಡವರನ್ನು ಭೂಮಿಯಲ್ಲಿ (ಸದಾ) ಕ್ಷೆÆÃಭೆ ಹರಡುತ್ತಿರುವವರ ಹಾಗೆ ನಾವು ಮಾಡುವೆವೇ? ಅಥವಾ ಭಯಭಕ್ತಿಯು ಳ್ಳವರನ್ನು ದುರಾಚಾರಿಗಳಂತೆ ಮಾಡುವೆವೇ ?
ﭲﭳﭴﭵﭶﭷﭸﭹﭺﭻ
38:29 ಇದು ಒಂದು ಸಮೃದ್ಧಿಯುಳ್ಳ ಗ್ರಂಥ, ಜನರು ಇದರ ಸೂಕ್ತಿಗಳ ಕುರಿತು ಚಿಂತಿಸಲೆAದೂ, ಬುದ್ಧಿಜೀವಿಗಳು ಉಪದೇಶ ಪಡೆದುಕೊಳ್ಳಲೆಂದೂ ನಾವಿದನ್ನು ನಿಮ್ಮಡೆಗೆ ಅವತೀರ್ಣಗೊಳಿಸಿರುತ್ತೇವೆ.
ﭼﭽﭾﭿﮀﮁﮂﮃﮄ
38:30 ಮತ್ತು ನಾವು ದಾವೂದರಿಗೆ ಸುಲೈಮಾನರನ್ನು ಕರುಣಿಸಿದೆವು. ಅವರು ಅತ್ಯುತ್ತಮ ದಾಸರಾಗಿದ್ದರು ಮತ್ತು ಅತ್ಯಧಿಕವಾಗಿ ಪಶ್ಚಾತ್ತಾಪ ಪಟ್ಟು ಮರಳುವವರಾಗಿದ್ದರು.
ﮅﮆﮇﮈﮉﮊﮋ
38:31 ಅತಿವೇಗವಾಗಿ ಓಡುವ ಉತ್ತಮ ಕುದುರೆಗಳನ್ನು ಒಮ್ಮೆ ಅವರ ಮುಂದೆ ಸಾಯಂಕಾಲದ ಹೊತ್ತಲ್ಲಿ ಪ್ರದರ್ಶಿಸಲಾದ ಸಂದರ್ಭ.
ﮌﮍﮎﮏﮐﮑﮒﮓﮔﮕﮖﮗ
38:32 ಆಗ ಅವರು ಹೇಳತೊಡಗಿದರು: ನಾನು ನನ್ನ ಪ್ರಭುವಿನ ಸ್ಮರಣೆಗಿಂತ ಈ ಸಂಪತ್ತನ್ನು ಹೆಚ್ಚು ಪ್ರೀತಿಸಿದೆನು. ಕೊನೆಗೆ (ಸೂರ್ಯ) ಮರೆಯಾಯಿತು.
ﮘﮙﮚﮛﮜﮝﮞﮟ
38:33 ನೀವು ಅವು(ಆ ಕುದುರೆ)ಗಳನ್ನು ಪುನಃ ನನ್ನ ಮುಂದೆ ತನ್ನಿರಿ. ಬಳಿಕ ಅವರು ಅವುಗಳ ಮೀನಖಂಡಗಳನ್ನು ಮತ್ತು ಕೊರಳುಗಳನ್ನು ಸವರಲುತೊಡಗಿದರು.
ﮠﮡﮢﮣﮤﮥﮦﮧﮨﮩ
38:34 ಮತ್ತು ನಾವು ಸುಲೈಮಾನರನ್ನು ಪರೀಕ್ಷಿಸಿದೆವು ಹಾಗೂ ಅವರ ಸಿಂಹಾಸನದ ಮೇಲೆ ಒಂದು ದೇಹವನ್ನು ಹಾಕಿದೆವು. ತರುವಾಯ ಅವರು ಪಶ್ಚಾತ್ತಾಪ ಪಟ್ಟು ಮರಳಿದರು.
ﮪﮫﮬﮭﮮﮯﮰﮱﯓﯔﯕﯖﯗﯘﯙﯚﯛ
38:35 ಅವರು ಪ್ರಾರ್ಥಿಸಿದರು: ನನ್ನ ಪ್ರಭು, ನನ್ನನ್ನು ಕ್ಷಮಿಸು ಮತ್ತು ನನ್ನ ನಂತರ ಯಾರಿಗೂ ನೀಡಿರದಂತಹ ಅಧಿಪತ್ಯವನ್ನು ನನಗೆ ಕರುಣಿಸು. ನಿಶ್ಚಯವಾಗಿಯು ನೀನು ಮಹಾ ಉದಾರಿಯಾಗಿರುವೆ.
ﯜﯝﯞﯟﯠﯡﯢﯣﯤ
38:36 ಆಗ ನಾವು ಅವರಿಗೆ ಗಾಳಿಯನ್ನು ನಿಯಂತ್ರಿಸಿಕೊಟ್ಟೆವು. ಅದು ಅವರ ಆದೇಶದಂತೆ ಅವರು ಇಚ್ಛಿಸಿದೆಡೆಗೆ ಮೃದುವಾಗಿ ಬೀಸುತ್ತಿತ್ತು.
ﯥﯦﯧﯨﯩ
38:37 ಮತ್ತು ಸರ್ವ ವಿಧದ ಕಟ್ಟಡ ನಿರ್ಮಾಣಗಾರರನ್ನು ಮುಳುಗುಗಾರ ಜಿನ್ನ್ಗಳನ್ನು (ಅವರ ಅಧೀನಕ್ಕೆ ಕೊಟ್ಟೆವು)
ﯪﯫﯬﯭﯮ
38:38 ಮತ್ತು ಸಂಕೋಲೆಗಳಲ್ಲಿ ಬಂಧಿತರಾಗಿರುವ ಇತರ ಜಿನ್ನ್ಗಳನ್ನೂ ಸಹ.
ﯯﯰﯱﯲﯳﯴﯵﯶ
38:39 ಇದು ನಮ್ಮ ಉಡುಗೊರೆಯಾಗಿದೆ. ಆದುದರಿಂದ ನೀವು ಇಚ್ಛಿಸಿದವರಿಗೆ ಉಪಕಾರ ಮಾಡಿ ಇಲ್ಲವೇ ತಡೆದಿರಿಸಿಕೊಳ್ಳಿ. ಯಾವುದೇ ಲೆಕ್ಕವಿಚಾರಣೆಯಿರಲಾರದು.
ﯷﯸﯹﯺﯻﯼﯽ
38:40 ಮತ್ತು ಖಂಡಿತವಾಗಿಯು ಅವರಿಗೆ ನಮ್ಮ ಬಳಿ ಸಾಮಿಪ್ಯವು ಮತ್ತು ಅತ್ಯುತ್ತಮ ತಾಣವಿದೆ.
ﯾﯿﰀﰁﰂﰃﰄﰅﰆﰇﰈﰉ
38:41 ಮತ್ತು ನಮ್ಮ ದಾಸ ಅಯ್ಯೂಬರ ಪ್ರಸ್ತಾಪವನ್ನು ಮಾಡಿರಿ. ಶÉÊತಾನನು ನನಗೆ ಕಷ್ಟ ಹಾಗೂ ಹಿಂಸೆಯಲ್ಲಿ ಸಿಲುಕಿಸಿರುವನು ಎಂದು ಅವರು ತಮ್ಮ ಪ್ರಭುವನ್ನು ಕರೆದು ಬೇಡಿದ ಸಂದರ್ಭ.
ﰊﰋﰌﰍﰎﰏﰐﰑ
38:42 ನೀವು ತಮ್ಮ ಕಾಲನ್ನು ನೆಲಕ್ಕೆ ಬಡಿಯಿರಿ. ಇದು ಸ್ನಾನ ಮಾಡುವಂತಹ ತಂಪು ಹಾಗೂ ಕುಡಿಯುವ ನೀರಾಗಿದೆ.
ﭑﭒﭓﭔﭕﭖﭗﭘﭙﭚﭛ
38:43 ಮತ್ತು ನಾವು ನಮ್ಮ ಕಡೆಯ ವಿಶೇಷ ಕಾರುಣ್ಯದಿಂದ ಅವರಿಗೆ ಅವರÀ ಮನೆಯವರನ್ನು ಮತ್ತು ಅವರ ಜೊತೆಯಲ್ಲಿ ಅವರಷ್ಟೇ ಮಂದಿಯನ್ನೂ ನೀಡಿದೆವು. ಇದು ಬುದ್ಧಿಜೀವಿಗಳಿಗೆ ಉದ್ಭೋದೆಯಾಗಲೆಂದಾಗಿದೆ.
ﭜﭝﭞﭟﭠﭡﭢﭣﭤﭥﭦﭧﭨﭩﭪﭫﭬ
38:44 ಮತ್ತು ನೀವು ನಿಮ್ಮ ಕÉÊಯಲ್ಲಿ ಹುಲ್ಲು ಕಡ್ಡಿಗಳ ಪೊರಕೆಯೊಂದನ್ನು ತೆಗೆದುಕೊಂಡು ಅದರಿಂದ ಹೊಡೆಯಿರಿ ಹಾಗೂ ಪ್ರತಿಜ್ಞೆಯನ್ನು ಉಲ್ಲಂಘಿಸಬೇಡಿ. ನಿಜವಾಗಿಯು ನಾವು ಅಯ್ಯೂಬರನ್ನು ಸಹನಾಶೀಲರನ್ನಾಗಿ ಕಂಡೆವು. ಅವರು ಅತ್ಯುತ್ತಮ ದಾಸರು ಮತ್ತು ತಮ್ಮ ಪ್ರಭುವಿನೆಡೆಗೆ ಹೆಚ್ಚು ಮರಳುವವರಾಗಿದ್ದರು.
ﭭﭮﭯﭰﭱﭲﭳﭴﭵ
38:45 ನೀವು ನಮ್ಮ ದಾಸರಾದ ಇಬ್ರಾಹೀಮ್, ಇಸ್‌ಹಾಕ್, ಯಅಕೂಬರನ್ನೂ ಸ್ಮರಿಸಿರಿ. ಅವರು ಕರ್ಮ ಶಕ್ತಿಯುಳ್ಳವರೂ, ದೂರದೃಷ್ಟಿ ಹೊಂದಿದವರೂ ಆಗಿದ್ದರು.
ﭶﭷﭸﭹﭺﭻ
38:46 ನಾವು ಅವರನ್ನು ಒಂದು ವಿಶಿಷ್ಟ ಗುಣದಿಂದಾಗಿ ಉತ್ಕೃಷ್ಟಗೊಳಿಸಿದೆವು. ಅದು ಪರಲೋಕದ ಸ್ಮರಣೆಯಾಗಿತ್ತು.
ﭼﭽﭾﭿﮀﮁ
38:47 ನಿಶ್ಚಯವಾಗಿಯೂ ಅವರು ನಮ್ಮ ಬಳಿ ಆಯ್ಕೆ ಮಾಡಲಾದ ಅತ್ಯುತ್ತಮ ಜನರಾಗಿದ್ದರು.
ﮂﮃﮄﮅﮆﮇﮈﮉﮊﮋ
38:48 ಇಸ್ಮಾಯೀಲ್, ಯಸ್‌ಅ ಹಾಗೂ ದುಲ್‌ಕಿಫಲ್‌ರನ್ನು ಸ್ಮರಿಸಿರಿ. ಅವರಲ್ಲಿ ಪ್ರತಿಯೊಬ್ಬರೂ ಸತ್ಕರ್ಮಿಗಳಾಗಿದ್ದರು.
ﮌﮍﮎﮏﮐﮑﮒﮓ
38:49 ಇದೊಂದು ಬೋಧನೆಯಾಗಿದೆ. ನಿಶ್ಚಯವಾಗಿಯೂ ಭಯಭಕ್ತಿಯುಳ್ಳವರಿಗೆ ಮರಳಲು ಅತ್ಯುತ್ತಮ ನೆಲೆಯಿದೆ.
ﮔﮕﮖﮗﮘﮙ
38:50 (ಅಂದರೆ) ಶಾಶ್ವತವಾದ ಸ್ವರ್ಗೋದ್ಯಾನಗಳು: ಅವುಗಳ ದ್ವಾರಗಳನ್ನು ಅವರಿಗಾಗಿ ತೆರೆದಿಡಲಾಗಿದೆ.
ﮚﮛﮜﮝﮞﮟﮠﮡ
38:51 ಅವರು ದಿಂಬುಗಳಿಗೆ ಒರಗಿ ಕುಳಿತುಕೊಂಡು ವಿಧವಿಧದ ಹಣ್ಣುಹಂಪಲು ಹಾಗೂ ಪಾನೀಯಗಳನ್ನು ತರಿಸುತ್ತಿರುವರು.
ﮢﮣﮤﮥﮦﮧ
38:52 ಮತ್ತು ಅವರ ಬಳಿ ದೃಷ್ಟಿ ತಗ್ಗಿಸಿರುವ ಸಮವಯಸ್ಕರಾದ ಅಪ್ಸರೆಗಳಿರುವರು.
ﮨﮩﮪﮫﮬﮭ
38:53 ಇವು ವಿಚಾರಣೆಯ ದಿನಕ್ಕಾಗಿ ನಿಮಗೆ ವಾಗ್ದಾನ ನೀಡಲಾಗುತ್ತಿರುವ ವಸ್ತುಗಳಾಗಿವೆ.
ﮮﮯﮰﮱﯓﯔﯕﯖ
38:54 ಖಂಡಿತವಾಗಿಯೂ ಇದು ನಮ್ಮ( ಕಡೆಯ ವಿಶೇಷ) ಜೀವನಾಧಾರವಾಗಿದೆ. ಇದಕ್ಕೆ ಎಂದಿಗೂ ಅಂತ್ಯವಿಲ್ಲ.
ﯗﯘﯙﯚﯛﯜﯝ
38:55 ಇದಂತು (ಧರ್ಮನಿಷ್ಠರ) ಪ್ರತಿಫಲವಾಯಿತು. ನಿಶ್ಚಯವಾಗಿಯು ಅತಿಕ್ರಮಿಗಳಿಗೆ ಕೆಟ್ಟತಾಣವಿರುವುದು.
ﯞﯟﯠﯡﯢ
38:56 ಅದು ನರಕವಾಗಿದೆ ಅವರು ಅದರಲ್ಲಿ ಪ್ರವೇಶಿಸುವರು ಮತ್ತು ಅದೆಷ್ಟು ನಿಕೃಷ್ಟ ನೆಲೆಯಾಗಿರುವುದು.
ﯣﯤﯥﯦﯧ
38:57 ( ಮಲಕ್‌ಗಳು ಹೇಳುವರು) ಇದು ಅತ್ಯುಷ್ಣ ಜಲ ಹಾಗೂ ಕೀವು ಆಗಿದೆ. ಆದ್ದರಿಂದ ಅವರು ಅದನ್ನು ಸವಿಯಲಿ.
ﯨﯩﯪﯫﯬ
38:58 ಇದೇ ರೀತಿಯ ಇತರೇ ಶಿಕ್ಷೆಗಳಿರುವವು.
ﯭﯮﯯﯰﯱﯲﯳﯴﯵﯶﯷﯸ
38:59 (ಮಲಕ್‌ಗಳು ಸತ್ಯನಿಷೇಧಿಗಳಿಗೆÀ ಹೇಳುವರು) ಇದು ನಿಮ್ಮೊಂದಿಗೆ ನರಕದಲ್ಲಿ ಪ್ರವೇಶಿಸಲಿರುವ ಒಂದು ತುಕ್ಕಡಿಯಾಗಿದೆ. (ಆಗ ನಾಯಕರು) ಅವರಿಗೆಯಾವ ಸ್ವಾಗತವೂ ಇಲ್ಲ. ಇವರು ನರಕಾಗ್ನಿಯನ್ನು ಪ್ರವೇಶಿಸುವವರಾಗಿರುವರು ಎಂದು ಹೇಳುವರು.
ﯹﯺﯻﯼﯽﯾﯿﰀﰁﰂﰃﰄﰅﰆ
38:60 (ಆಗ ಅವರ ಅನುಯಾಯಿಗಳು) ಹೇಳುವರು: ಹಾಗಲ್ಲ! ನಿಮಗೂ ಯಾವ ಸ್ವಾಗತವಿಲ್ಲ. ನೀವೇ ಇದನ್ನು ಮೊದಲು ನಮ್ಮ ಮುಂದೆ ತಂದಿಟ್ಟಿರುವಿರಿ. ಹಾಗೆಯೇ ಅದೆಷ್ಟು ಕೆಟ್ಟ ವಾಸಸ್ಥಾನವಾಗಿದೆ.
ﰇﰈﰉﰊﰋﰌﰍﰎﰏﰐﰑﰒ
38:61 ಅವರೆನ್ನುವರು: ನಮ್ಮ ಪ್ರಭು, ಯಾರು ನಮಗೆ ಈ ಶಿಕ್ಷಗೆ ಗುರಿಪಡಿಸಿದರೂ ಅವರಿಗೆ ನರಕಾಗ್ನಿಯ ಇಮ್ಮಡಿ ಯಾತನೆಯನ್ನು ನಿಶ್ಚಯಿಸಿಬಿಡು.
ﭑﭒﭓﭔﭕﭖﭗﭘﭙﭚﭛ
38:62 ಮತ್ತು ಅವರು ಹೇಳುವರು: ನಮಗೇನಾಗಿದೇ ನಾವು ಕೆಟ್ಟವರೆಂದು ಭಾವಿಸುತ್ತಿದ್ದಂತಹ ಜನರು ನಮಗೆ ಕಾಣಿಸುತ್ತಿಲ್ಲವಲ್ಲ !
ﭜﭝﭞﭟﭠﭡﭢ
38:63 ನಾವು ಅವರನ್ನು ವಿನಃಕಾರಣ ಪರಿಹಾಸ್ಯ ಮಾಡುತ್ತಿದ್ದೆವೋ? ಅಥವಾ ಅವರನ್ನು ಗ್ರಹಿಸಲು ನಮ್ಮ ಕಣ್ಣುಗಳು ವಿಫಲವಾಗಿವೆಯೋ ?
ﭣﭤﭥﭦﭧﭨﭩ
38:64 ನರಕವಾಸಿಗಳು ಮಾಡುವ ಈ ವಾಗ್ವಾದವು ಖಂಡಿತವಾಗಿಯು ಸತ್ಯವಾಗಿದೆ.
ﭪﭫﭬﭭﭮﭯﭰﭱﭲﭳﭴﭵﭶ
38:65 ಹೇಳಿರಿ: ಓ ಪ್ರವಾದಿಯರೇ, ನಾನು ಕೇವಲ ಒಬ್ಬ ಮುನ್ನೆಚ್ಚರಿಕೆಗಾರನಾಗಿ ರುವೆನು, ಏಕÉÊಕನೂ, ಸರ್ವಾಧಿಪತಿಯು ಆದ ಅಲ್ಲಾಹನ ಹೊರತು ಅನ್ಯ ಆರಾಧ್ಯನಿಲ್ಲ.
ﭷﭸﭹﭺﭻﭼﭽﭾ
38:66 ಅವನು ಆಕಾಶಗಳ ಮತ್ತು ಭೂಮಿಯ ಹಾಗೂ ಅವೆರಡರ ನಡುವಿನ ಪ್ರಭುವಾಗಿದ್ದಾನೆ. ಅವನು ಪ್ರಚಂಡನೂ, ಕ್ಷಮಾಶೀಲನೂ ಆಗಿರುವನು.
ﭿﮀﮁﮂﮃ
38:67 ಹೇಳಿರಿ: ಇದು ಗಂಭೀರ ವಾರ್ತೆಯಾಗಿದೆ.
ﮄﮅﮆﮇ
38:68 ಅದರಿಂದ ನೀವು ವಿಮುಖರಾಗುತ್ತಿರುವಿರಿ.
ﮈﮉﮊﮋﮌﮍﮎﮏﮐﮑ
38:69 ಮಹೋನ್ನತ ಮಲಕ್‌ಗಳು ಪರಸ್ಪರ ತರ್ಕ ಮಾಡುತ್ತಿದ್ದುದರ ಬಗ್ಗೆ ನನಗೆ ಯಾವುದೇ ಜ್ಞಾನವಿಲ್ಲ.
ﮒﮓﮔﮕﮖﮗﮘﮙﮚ
38:70 ನಾನು ಸುಸ್ಪಷ್ಟವಾಗಿ ಮುನ್ನೆಚ್ಚರಿಕೆ ನೀಡುವವನಾಗಿದ್ದೇನೆಂದು ಮಾತ್ರ ನನ್ನೆಡೆಗೆ ದಿವ್ಯ ಸಂದೇಶ ಮಾಡಲಾಗುತ್ತಿದೆ.
ﮛﮜﮝﮞﮟﮠﮡﮢﮣﮤ
38:71 ನಿಮ್ಮ ಪ್ರಭುವು ಮಲಕ್‌ಗಳೊಂದಿಗೆ ಹೇಳಿದ ಸಂದರ್ಭವನ್ನು ಸ್ಮರಿಸಿರಿ ಖಂಡಿತವಾಗಿಯು ನಾನು ಆವೆಮಣ್ಣಿನಿಂದ ಒಬ್ಬ ಮಾನವನನ್ನು ಸೃಷ್ಟಿಸುವವನಿ ದ್ದೇನೆ.
ﮥﮦﮧﮨﮩﮪﮫﮬﮭﮮ
38:72 ಹಾಗೆಯೇ ನಾನು ಅವನನ್ನು ಪರಿಪೂರ್ಣಗೊಳಿಸಿದಾಗ ಹಾಗೂ ಅವನಲ್ಲಿ ನನ್ನ ಆತ್ಮವನ್ನು ಊದಿದಾಗ ನೀವೆಲ್ಲರೂ ಅವನ ಮುಂದೆ ಸಾಷ್ಟಾಂಗವೆರಗಿರಿ.
ﮯﮰﮱﯓﯔ
38:73 ಆಗ ಮಲಕ್‌ಗಳೆಲ್ಲರೂ ಒಟ್ಟಾಗಿ ಸಾಷ್ಟಾಂಗವೆರಗಿದರು.
ﯕﯖﯗﯘﯙﯚﯛ
38:74 ಆದರೆ ಇಬ್‌ಲೀಸನ ಹೊರತು ಅವನು ಅಹಂಭಾವ ತೋರಿದನು ಮತ್ತು ಅವನು ಸತ್ಯನಿಷೇಧಿಗಳಲ್ಲಾಗಿದ್ದನು.
ﯜﯝﯞﯟﯠﯡﯢﯣﯤﯥﯦﯧﯨﯩﯪﯫ
38:75 ಅಲ್ಲಾಹನು ಹೇಳಿದನು: ಓ ಇಬ್‌ಲೀಸ್, ನಾನು ನನ್ನೆರಡು ಕÉÊಗಳಿಂದ ಸೃಷ್ಟಿಸಿದಂತವನಿಗೆ ನೀನು ಸಾಷ್ಟಾಂಗವೆರಗುವುದರಿAದ ನಿನ್ನನ್ನು ತಡೆದುದ್ದಾದರೂ ಏನು? ನೀನು ದರ್ಪತೋರಿದೆಯಾ ? ಇಲ್ಲವೇ ನೀನು ಉನ್ನತ ಮಟ್ಟದವರಲ್ಲಿ ಸೇರಿರುವೆಯಾ ?
ﯬﯭﯮﯯﯰﯱﯲﯳﯴﯵﯶ
38:76 ಇಬ್‌ಲೀಸ್ ಉತ್ತರಿಸಿದನು: ನಾನು ಅವನಿಗಿಂತ ಉತ್ತಮನು. ನೀನು ನನ್ನನ್ನು ಅಗ್ನಿಯಿಂದ ಸೃಷ್ಟಿಸಿರುವೆ ಹಾಗೂ ಅವನನ್ನು ಆವೆಮಣ್ಣಿನಿಂದ ಸೃಷ್ಟಿಸಿರುವೆ.
ﯷﯸﯹﯺﯻﯼ
38:77 ಹೇಳಲಾಯಿತು: ನೀನು ಇಲ್ಲಿಂದ ತೊಲಗು ಖಂಡಿತವಾಗಿಯು ನೀನು ತಿರಸ್ಕೃತನಾಗಿರುವೆ.
ﯽﯾﯿﰀﰁﰂﰃ
38:78 ನಿಶ್ಚಯವಾಗಿಯು ನಿರ್ಣಾಯಕ ದಿನದವರೆಗೂ ನಿನ್ನ ಮೇಲೆ ನನ್ನ ಶಾಪವಿರುವುದು.
ﰄﰅﰆﰇﰈﰉﰊ
38:79 ಅವನು ಹೇಳಿದನು: ನನ್ನ ಪ್ರಭುವೇ, ಜನರು ಪುನಃ ಎಬ್ಬಸಲಾಗುವ ದಿನದವರೆಗೆ ನನಗೆ ಕಾಲಾವಕಾಶ ನೀಡು.
ﰋﰌﰍﰎﰏ
38:80 ಅಲ್ಲಾಹನು ಹೇಳಿದನು: ನೀನು ಕಾಲಾವಕಾಶ ನೀಡಲಾದವರಲ್ಲಾಗಿರುವೆ.
ﰐﰑﰒﰓﰔ
38:81 ನಿಶ್ಚಿತ ಸಮಯವು ಬರುವ ದಿನದವರೆಗೆ
ﰕﰖﰗﰘﰙ
38:82 ಆಗ ಅವನು ಹೇಳಿದನು: ನಿನ್ನ ಪ್ರತಾಪದಾಣೆ, ನಾನು ಅವರೆಲ್ಲರನ್ನೂ ಖಂಡಿತ ದಾರಿಗೆಡಿಸುವೆನು.
ﰚﰛﰜﰝﰞ
38:83 ಆದರೆ ಅವರಲ್ಲಿ ನಿನ್ನ ನಿಷ್ಠಾವಂತದಾಸರ ಹೊರತು.
ﭑﭒﭓﭔﭕ
38:84 ಅಲ್ಲಾಹನು ಹೇಳಿದನು: ಇದು ಸತ್ಯವಾಗಿದೆ ಮತ್ತು ನಾನು ಸತ್ಯವನ್ನೇ ಹೇಳುತ್ತೇನೆ.
ﭖﭗﭘﭙﭚﭛﭜﭝ
38:85 ಖಂಡಿತವಾಗಿಯು ನಾನು ನಿನ್ನಿಂದಲೂ ಮತ್ತು ನಿನ್ನನ್ನು ಅನುಸರಿಸುವ ಸಕಲರಿಂದಲೂ ನರಕವನ್ನು ತುಂಬಿ ಬಿಡುವೆನು.
ﭞﭟﭠﭡﭢﭣﭤﭥﭦﭧﭨ
38:86 ಹೇಳಿರಿ ಓ ಪ್ರವಾದಿಯವರೇ, ಇದಕ್ಕಾಗಿ (ಸತ್ಯ ಪ್ರಚಾರಕ್ಕಾಗಿ)ನಾನು ನಿಮ್ಮಿಂದಯಾವುದೇ ಪ್ರತಿಫಲವನ್ನು ಬೇಡುತ್ತಿಲ್ಲ. ನಾನು ಕೃತಕರಚನೆಗಾರರಲ್ಲೂ ಸೇರಿಲ್ಲ.
ﭩﭪﭫﭬﭭﭮ
38:87 ಇದು ಸರ್ವಲೋಕದವರಿಗೆ ಒಂದು ಉಪದೇಶವಾಗಿದೆ.
ﭯﭰﭱﭲﭳ
38:88 ಒಂದು ಕಾಲಾವಧಿಯ ನಂತರ ನೀವು ಇದರ ವಾಸ್ತವಿಕತೆಯನ್ನು ಖಂಡಿತ ತಿಳಿಯಲಿರುವಿರಿ.

ಪವಿತ್ರ ಕುರಾನ್


Wednesday, September 9, 2026

Don't forget us in your sincere prayers