ಸೂರಾ ಅಸ್-ಸಾಫ್ಫಾತ್ ಅರೇಬಿಕ್ ಮತ್ತು ಕನ್ನಡ

ಸೂರಾ ಅಸ್-ಸಾಫ್ಫಾತ್ ಸಂಪೂರ್ಣ ಕನ್ನಡ ಅನುವಾದ, ಉಚ್ಚಾರಣೆ ಮತ್ತು ಆಡಿಯೋ ಪಠಣದೊಂದಿಗೆ ಓದಿ. ಪ್ರತಿ ಆಯತ್‌ನ ಅರ್ಥ. (182 ಆಯತ್ — مكية). ಅಸ್-ಸಾಫ್ಫಾತ್ ಆಲಿಸಿ, ಅಸ್-ಸಾಫ್ಫಾತ್ ಅನುವಾದ, ಅಸ್-ಸಾಫ್ಫಾತ್ mp3, ಅಸ್-ಸಾಫ್ಫಾತ್ pdf.

ಸೂರಾ ಅಸ್-ಸಾಫ್ಫಾತ್ ಓದಿ ಮತ್ತು ಆಲಿಸಿ

🎧 ಆಯತ್
M Mishary Rashid Alafasy
M Mahmoud Khalil Al-Husary
A Abdurrahman As-Sudais
M Mohamed Siddiq Al-Minshawi
A Abdul Basit Abdul Samad
A Ali Al-Hudhaify
A Ahmed ibn Ali al-Ajamy
A Abu Bakr Ash-Shaatree
M Muhammad Ayyoub
A Abdullah Basfar
A Abdullah Al-Juhani
M Maher Al Muaiqly
x1
وَالصَّافَّاتِ صَفًّا ۝١
📖 ಅನುವಾದ ಆಯತ್ 1
ಪಂಕ್ತಿಬದ್ಧವಾಗಿ ನಿಲ್ಲುವವರ
فَالزَّاجِرَاتِ زَجْرًا ۝٢
📖 ಅನುವಾದ ಆಯತ್ 2
ಬಳಿಕ ಗದರಿಸಿ ಅಟ್ಟುವವರ
فَالتَّالِيَاتِ ذِكْرًا ۝٣
📖 ಅನುವಾದ ಆಯತ್ 3
ಅನಂತರ ಕುರ್‌ಆನನ್ನು ಉಪದೇಶವನ್ನಾಗಿ ಪಠಿಸುತ್ತಿರುವ ದೇವಚರರ ಆಣೆ.
إِنَّ إِلَٰهَكُمْ لَوَاحِدٌ ۝٤
📖 ಅನುವಾದ ಆಯತ್ 4
ನಿಶ್ಚಯವಾಗಿಯೂ ನಿಮ್ಮ ಆರಾಧ್ಯನು ಏಕÉÊಕನು.
رَّبُّ السَّمَاوَاتِ وَالْأَرْضِ وَمَا بَيْنَهُمَا وَرَبُّ الْمَشَارِقِ ۝٥
📖 ಅನುವಾದ ಆಯತ್ 5
ಆಕಾಶಗಳ ಮತ್ತು ಭೂಮಿಯ ಹಾಗೂ ಅವೆರಡರ ಮಧ್ಯದ ಸಕಲ ವಸ್ತುಗಳ ಪ್ರಭು ಮತ್ತು ಉದಯಸ್ಧಾನಗಳ ಪ್ರಭು.
إِنَّا زَيَّنَّا السَّمَاءَ الدُّنْيَا بِزِينَةٍ الْكَوَاكِبِ ۝٦
📖 ಅನುವಾದ ಆಯತ್ 6
ನಾವು ಜಗದ ಆಕಾಶವನ್ನು ನಕ್ಷತ್ರಗಳ ಶೃಂಗಾರದ ಮೂಲಕ ಅಲಂಕೃತಗೊಳಿಸಿದ್ದೇವೆ.
وَحِفْظًا مِّن كُلِّ شَيْطَانٍ مَّارِدٍ ۝٧
📖 ಅನುವಾದ ಆಯತ್ 7
ಮತ್ತು ಪ್ರತಿಯೊಬ್ಬ ಧಿಕ್ಕಾರಿ ಶÉÊತಾನನಿಂದ ಅದನ್ನು ಸುರಕ್ಷಿತಗೊಳಿಸಿದ್ದೇವೆ.
لَّا يَسَّمَّعُونَ إِلَى الْمَلَإِ الْأَعْلَىٰ وَيُقْذَفُونَ مِن كُلِّ جَانِبٍ ۝٨
📖 ಅನುವಾದ ಆಯತ್ 8
ಶೈತಾನರು ಉನ್ನತ ಲೋಕದ ಮಲಕ್‌ಗಳ (ಮಾತನ್ನು) ಆಲಿಸಲಾರರು. ಮತ್ತು ಸರ್ವ ದಿಕ್ಕುಗಳಿಂದಲೂ ಅವರು ಒದ್ದೋಡಿಸಲ್ಪಡುವರು.
دُحُورًا ۖ وَلَهُمْ عَذَابٌ وَاصِبٌ ۝٩
📖 ಅನುವಾದ ಆಯತ್ 9
ಮತ್ತು ಅವರಿಗೆ ನಿರಂತರ ಯಾತನೆಯಿರುವುದು.
إِلَّا مَنْ خَطِفَ الْخَطْفَةَ فَأَتْبَعَهُ شِهَابٌ ثَاقِبٌ ۝١٠
📖 ಅನುವಾದ ಆಯತ್ 10
ಆದರೆ ಯಾರಾದರೂ ಮಾತೊಂದನ್ನು ಕದ್ದಾಲಿಸಿದರೆ ಅವನನ್ನು ಪ್ರಜ್ವಲಿಸುವ ಜ್ವಾಲೆಯೊಂದು ಬೆನ್ನಟ್ಟವುದು.
فَاسْتَفْتِهِمْ أَهُمْ أَشَدُّ خَلْقًا أَم مَّنْ خَلَقْنَا ۚ إِنَّا خَلَقْنَاهُم مِّن طِينٍ لَّازِبٍ ۝١١
📖 ಅನುವಾದ ಆಯತ್ 11
ಆದುದರಿಂದ ಓ ಪ್ರವಾದಿಯವರೇ, ನೀವು ಸತ್ಯನಿಷೇಧಿಗಳೊಂದಿಗೆ ಕೇಳಿರಿ :ಅವರನ್ನು ಪುನಃ ಸೃಷ್ಟಿಸುವುದು ಅತಿಕಠಿಣವೋ ಅಥವಾ ನಾವು ಸೃಷ್ಟಿಸಿರುವ ಇತರ ವಸ್ತುಗಳೋ ನಿಶ್ಚಯವಾಗಿಯು ನಾವು ಅವರನ್ನು ಜಿಗುಟಾದ ಆವೆ ಮಣ್ಣಿನಿಂದ ಸೃಷ್ಟಿಸಿರುತ್ತೇವೆ.
بَلْ عَجِبْتَ وَيَسْخَرُونَ ۝١٢
📖 ಅನುವಾದ ಆಯತ್ 12
ನೀವಾದರೂ ಆಶ್ಚರ್ಯ ಪಡುತ್ತಿರುವಿರಿ ಹಾಗೂ ಅವರು ಪರಿಹಾಸ್ಯ ಮಾಡುತ್ತಾರೆ.
وَإِذَا ذُكِّرُوا لَا يَذْكُرُونَ ۝١٣
📖 ಅನುವಾದ ಆಯತ್ 13
ಮತ್ತು ಅವರಿಗೆ ಉಪದೇಶ ಮಾಡಲಾದರೆ ಅವರು ಉಪದೇಶವನ್ನು ಸ್ವೀಕರಿಸುವುದಿಲ್ಲ.
وَإِذَا رَأَوْا آيَةً يَسْتَسْخِرُونَ ۝١٤
📖 ಅನುವಾದ ಆಯತ್ 14
ಮತ್ತು ಅವರು ಯಾವುದಾದರೂ ದೃಷ್ಟಾಂತವನ್ನು ನೋಡಿದಾಗ ಪರಿಹಾಸ್ಯ ಮಾಡುತ್ತಾರೆ.
وَقَالُوا إِنْ هَٰذَا إِلَّا سِحْرٌ مُّبِينٌ ۝١٥
📖 ಅನುವಾದ ಆಯತ್ 15
ಅವರು ಹೇಳುತ್ತಾರೆ: ಇದು ಸುಸ್ಟಷ್ಟ ಜಾದುವಲ್ಲದೆ ಇನ್ನೇನಲ್ಲ.
أَإِذَا مِتْنَا وَكُنَّا تُرَابًا وَعِظَامًا أَإِنَّا لَمَبْعُوثُونَ ۝١٦
📖 ಅನುವಾದ ಆಯತ್ 16
16 &
أَوَآبَاؤُنَا الْأَوَّلُونَ ۝١٧
📖 ಅನುವಾದ ಆಯತ್ 17
ನಾವು ಸತ್ತು ಮಣ್ಣಾಗಿ, ಎಲುಬುಗಳಾದ ಬಳಿಕವೂ ನಿಜವಾಗಿಯೂ ನಮ್ಮನ್ನು ಮತ್ತು ನಮ್ಮ ಪೂರ್ವಿಕರನ್ನು ಪುನಃ ಜೀವಂತಗೊಳಿಸಲಾಗುವುದೇ ?
قُلْ نَعَمْ وَأَنتُمْ دَاخِرُونَ ۝١٨
📖 ಅನುವಾದ ಆಯತ್ 18
ನೀವು ಉತ್ತರಿಸಿರಿ: ಹೌದು, ಮತ್ತು ನೀವು ನಿಂದ್ಯರಾಗುವಿರಿ.
فَإِنَّمَا هِيَ زَجْرَةٌ وَاحِدَةٌ فَإِذَا هُمْ يَنظُرُونَ ۝١٩
📖 ಅನುವಾದ ಆಯತ್ 19
ಅದು ಕೇವಲ ಒಂದು ಘೋರ ಗರ್ಜನೆಯಾಗಿರುವುದು. ಆಗ ಅವರುಕೊಡಲೇ ನೋಡ ತೊಡಗುವರು.
وَقَالُوا يَا وَيْلَنَا هَٰذَا يَوْمُ الدِّينِ ۝٢٠
📖 ಅನುವಾದ ಆಯತ್ 20
ಅವರು ಹೇಳುವರು: ಅಯ್ಯೋ ನಮ್ಮದುರ್ಗತಿಯೇ, ಪ್ರತಿಫಲದ ದಿನವು ಇದೇ ಆಗಿದೆ.
هَٰذَا يَوْمُ الْفَصْلِ الَّذِي كُنتُم بِهِ تُكَذِّبُونَ ۝٢١
📖 ಅನುವಾದ ಆಯತ್ 21
(ಅವರಿಗೆ ಉತ್ತರಿಸಲಾಗುವುದು) ನೀವು ಸುಳ್ಳಾಗಿಸುತ್ತಿದ್ದ ನಿರ್ಣಾಯಕ ದಿನವಾಗಿದೆ.
۞ احْشُرُوا الَّذِينَ ظَلَمُوا وَأَزْوَاجَهُمْ وَمَا كَانُوا يَعْبُدُونَ ۝٢٢
📖 ಅನುವಾದ ಆಯತ್ 22
ಹೇಳಲಾಗುವುದು ಅಕ್ರಮಿಗಳನ್ನು ಅವರ ಸಹಚರರನ್ನು, ಅವರು ಅಲ್ಲಾಹನ ಹೊರತು ಆರಾಧಿಸುತ್ತಿದ್ದವರನ್ನು ಒಟ್ಟು ಸೇರಿಸಿರಿ.
مِن دُونِ اللَّهِ فَاهْدُوهُمْ إِلَىٰ صِرَاطِ الْجَحِيمِ ۝٢٣
📖 ಅನುವಾದ ಆಯತ್ 23
ಅನಂತರ ಅವರಿಗೆ ನರಕದ ಮಾರ್ಗವನ್ನು ತೋರಿಸಿರಿ.
وَقِفُوهُمْ ۖ إِنَّهُم مَّسْئُولُونَ ۝٢٤
📖 ಅನುವಾದ ಆಯತ್ 24
ಮತ್ತು ಅವರನ್ನು ತಡೆಯಿರಿ. ಅವರ ವಿಚಾರಣೆ ಮಾಡಲಾಗುವುದು.
مَا لَكُمْ لَا تَنَاصَرُونَ ۝٢٥
📖 ಅನುವಾದ ಆಯತ್ 25
ನಿಮಗೇನಾಗಿದೆ: ನೀವು (ಈಗ) ಪರಸ್ಪರ ಸಹಾಯ ಮಾಡುತ್ತಿಲ್ಲವಲ್ಲ ?
بَلْ هُمُ الْيَوْمَ مُسْتَسْلِمُونَ ۝٢٦
📖 ಅನುವಾದ ಆಯತ್ 26
ಅಲ್ಲ! ಅವರು ಇಂದು ಸಂಪೂರ್ಣ ಶರಣಾಗತರಾಗಿದ್ದಾರೆ.
وَأَقْبَلَ بَعْضُهُمْ عَلَىٰ بَعْضٍ يَتَسَاءَلُونَ ۝٢٧
📖 ಅನುವಾದ ಆಯತ್ 27
ಆ ಬಳಿಕ ಅವರು ಪರಸ್ಪರ ಮುಂದಾಗಿ ಪ್ರಶ್ನಿಸತೊಡಗುವರು.
قَالُوا إِنَّكُمْ كُنتُمْ تَأْتُونَنَا عَنِ الْيَمِينِ ۝٢٨
📖 ಅನುವಾದ ಆಯತ್ 28
ನೀವು ನಮ್ಮ ಬಳಿಗೆ ಬಲಭಾಗದಿಂದ ಬರುತ್ತಿದ್ದಿರಲ್ಲವೇ ಎಂದು ಹೇಳುವರು.
قَالُوا بَل لَّمْ تَكُونُوا مُؤْمِنِينَ ۝٢٩
📖 ಅನುವಾದ ಆಯತ್ 29
ಅವರು ಉತ್ತರಿಸುವರು ಅಲ್ಲ! ನೀವೇ ಸತ್ಯವಿಶ್ವಾಸಿಗಳಾಗಿರಲಿಲ್ಲ.
وَمَا كَانَ لَنَا عَلَيْكُم مِّن سُلْطَانٍ ۖ بَلْ كُنتُمْ قَوْمًا طَاغِينَ ۝٣٠
📖 ಅನುವಾದ ಆಯತ್ 30
ಮತ್ತು ನಿಮ್ಮ ಮೇಲೆ ನಮ್ಮ ಯಾವ ಬಲವಂತವೂ ಇರಲಿಲ್ಲ. ಬದಲಾಗಿ ನೀವು ಅತಿಕ್ರಮಿಸಿದ ಜನಾಂಗವಾಗಿದ್ದಿರಿ.
فَحَقَّ عَلَيْنَا قَوْلُ رَبِّنَا ۖ إِنَّا لَذَائِقُونَ ۝٣١
📖 ಅನುವಾದ ಆಯತ್ 31
ಆದುದರಿಂದ ನಮ್ಮ ಮೇಲೆ ನಮ್ಮ ಪ್ರಭುವಿನ ವಚನವು ನಿಜವಾಗಿ ಬಿಟ್ಟಿದೆ. ಖಂಡಿತವಾಗಿಯೂ ನಾವು ಯಾತನೆಯನ್ನು ಸವಿಯಲೇ ಬೇಕು.
فَأَغْوَيْنَاكُمْ إِنَّا كُنَّا غَاوِينَ ۝٣٢
📖 ಅನುವಾದ ಆಯತ್ 32
ಹೀಗೆ ನಾವು ನಿಮ್ಮನ್ನು ದಾರಿಗೆಡಿಸಿದ್ದೇವೆ. ಸ್ವತಃ ನಾವೂ ದಾರಿಗೆಟ್ಟವರಾಗಿದ್ದೆವು.
فَإِنَّهُمْ يَوْمَئِذٍ فِي الْعَذَابِ مُشْتَرِكُونَ ۝٣٣
📖 ಅನುವಾದ ಆಯತ್ 33
ಆದ್ದರಿಂದ ಇಂದು ಅವರೆಲ್ಲರೂ ಯಾತನೆಯಲ್ಲಿ ಪಾಲುದಾರರಾಗಿರುವರು.
إِنَّا كَذَٰلِكَ نَفْعَلُ بِالْمُجْرِمِينَ ۝٣٤
📖 ಅನುವಾದ ಆಯತ್ 34
ಖಂಡಿತವಾಗಿಯು ನಾವು ಅಪರಾಧಿಗಳೊಂದಿಗೆ ಹೀಗೆ ಮಾಡುವೆವು.
إِنَّهُمْ كَانُوا إِذَا قِيلَ لَهُمْ لَا إِلَٰهَ إِلَّا اللَّهُ يَسْتَكْبِرُونَ ۝٣٥
📖 ಅನುವಾದ ಆಯತ್ 35
ಅಲ್ಲಾಹನ ಹೊರತು ಇನ್ನಾವ ಆರಾಧ್ಯನಿಲ್ಲ ಎಂದು ಅವರೊಂದಿಗೆ ಹೇಳಲಾದರೆ ಅವರು ದರ್ಪತೋರುತ್ತಿದ್ದರು.
وَيَقُولُونَ أَئِنَّا لَتَارِكُو آلِهَتِنَا لِشَاعِرٍ مَّجْنُونٍ ۝٣٦
📖 ಅನುವಾದ ಆಯತ್ 36
ನಾವು ಒಬ್ಬ ಹುಚ್ಚು ಕವಿಗಾಗಿ ನಮ್ಮ ಆರಾಧ್ಯರನ್ನು ಬಿಟ್ಟು ಬಿಡಬೇಕೇ ? ಎಂದು ಹೇಳುತ್ತಿದ್ದರು.
بَلْ جَاءَ بِالْحَقِّ وَصَدَّقَ الْمُرْسَلِينَ ۝٣٧
📖 ಅನುವಾದ ಆಯತ್ 37
ಹಾಗಲ್ಲ ಬದಲಾಗಿ ಪ್ರವಾದಿಯು ಸತ್ಯಧರ್ಮವನ್ನು ತಂದಿರುತ್ತಾರೆ ಮತ್ತು ಸಂದೇಶವಾಹಕರ ಸತ್ಯತೆಯನ್ನು ದೃಢೀಕರಿಸಿದ್ದಾರೆ.
إِنَّكُمْ لَذَائِقُو الْعَذَابِ الْأَلِيمِ ۝٣٨
📖 ಅನುವಾದ ಆಯತ್ 38
ಖಂಡಿತವಾಗಿಯೂ ನೀವು ವೇದನಾಜನಕ ಶಿಕ್ಷೆಯನ್ನು ಸವಿಯಲಿರುವಿರಿ.
وَمَا تُجْزَوْنَ إِلَّا مَا كُنتُمْ تَعْمَلُونَ ۝٣٩
📖 ಅನುವಾದ ಆಯತ್ 39
ನೀವು ಮಾಡುತ್ತಿದ್ದ ಕರ್ಮಗಳ ಫಲವನ್ನೇ ನಿಮಗೆ ನೀಡಲಾಗುವುದು.
إِلَّا عِبَادَ اللَّهِ الْمُخْلَصِينَ ۝٤٠
📖 ಅನುವಾದ ಆಯತ್ 40
ಅಲ್ಲಾಹನ ನಿಷ್ಟವಂತರಾದ ಆಯ್ದ ದಾಸರ ಹೊರತು.
أُولَٰئِكَ لَهُمْ رِزْقٌ مَّعْلُومٌ ۝٤١
📖 ಅನುವಾದ ಆಯತ್ 41
ಅವರಿಗೆ ನಿಶ್ಚಿತ ಜೀವನಾಧಾರವಿರುವುದು.
فَوَاكِهُ ۖ وَهُم مُّكْرَمُونَ ۝٤٢
📖 ಅನುವಾದ ಆಯತ್ 42
ಹಣ್ಣು ಹಂಪಲುಗಳಿರುವುವು ಮತ್ತು ಅವರು ಆದರಣೀಯರೂ, ಮಾನ್ಯರೂ ಆಗಿರುವರು.
فِي جَنَّاتِ النَّعِيمِ ۝٤٣
📖 ಅನುವಾದ ಆಯತ್ 43
ಅನುಗ್ರಹಪೂರ್ಣ ಸ್ವರ್ಗೋದ್ಯಾನಗಳಲ್ಲಿ…..
عَلَىٰ سُرُرٍ مُّتَقَابِلِينَ ۝٤٤
📖 ಅನುವಾದ ಆಯತ್ 44
ಅಲಂಕೃತ ಮಂಚಗಳ ಮೇಲೆ ಎದುರು ಬದುರಾಗಿ ಕುಳಿತಿರುವರು.
يُطَافُ عَلَيْهِم بِكَأْسٍ مِّن مَّعِينٍ ۝٤٥
📖 ಅನುವಾದ ಆಯತ್ 45
ಹರಿಯುತ್ತಿರುವ ಚಿಲುಮೆಯಿಂದ ಮದ್ಯದ, ಪಾನಪಾತ್ರೆಗಳನ್ನು ಅವರ ಸುತ್ತ ತರಲಾಗುವುದು.
بَيْضَاءَ لَذَّةٍ لِّلشَّارِبِينَ ۝٤٦
📖 ಅನುವಾದ ಆಯತ್ 46
ಅದು ಪರಿಶುದ್ಧವಾಗಿರುವುದು, ಕುಡಿಯುವವರಿಗೆ ರುಚಿಕರವಾಗಿರುವುದು.
لَا فِيهَا غَوْلٌ وَلَا هُمْ عَنْهَا يُنزَفُونَ ۝٤٧
📖 ಅನುವಾದ ಆಯತ್ 47
ಅದರಿಂದ ತಲೆ ಬೇನೆ ಉಂಟಾಗದು, ಮತ್ತು ಅದರಿಂದ ಅವರಿಗೆ ಅಮಲೇರಲಾರದು.
وَعِندَهُمْ قَاصِرَاتُ الطَّرْفِ عِينٌ ۝٤٨
📖 ಅನುವಾದ ಆಯತ್ 48
ಮತ್ತು ಅವರ ಬಳಿ ದೃಷ್ಟಿ ತಗ್ಗಿಸಿರುವ, ದೊಡ್ಡ ಕಣ್ಣುಗಳುಳ್ಳ ಅಪ್ಸರೆಯರು ಇರುವರು.
كَأَنَّهُنَّ بَيْضٌ مَّكْنُونٌ ۝٤٩
📖 ಅನುವಾದ ಆಯತ್ 49
ಅವರು ಬಚ್ಚಿಡಲಾದ ಮೊಟ್ಟೆಗಳಂತಿರುವರು.
فَأَقْبَلَ بَعْضُهُمْ عَلَىٰ بَعْضٍ يَتَسَاءَلُونَ ۝٥٠
📖 ಅನುವಾದ ಆಯತ್ 50
ಸ್ವರ್ಗವಾಸಿಗಳು ಒಬ್ಬರನ್ನೊಬ್ಬರು ಉದ್ದೇಶಿಸುತ್ತಾ ಕೇಳುವರು:
قَالَ قَائِلٌ مِّنْهُمْ إِنِّي كَانَ لِي قَرِينٌ ۝٥١
📖 ಅನುವಾದ ಆಯತ್ 51
ಅವರಲ್ಲೊಬ್ಬನು ಹೇಳುವನು: (ಭೂ ಲೋಕದಲ್ಲಿ) ನನಗೊಬ್ಬ ಸಂಗಾತಿಯಿದ್ದನು.
يَقُولُ أَإِنَّكَ لَمِنَ الْمُصَدِّقِينَ ۝٥٢
📖 ಅನುವಾದ ಆಯತ್ 52
ಅವನು ಹೇಳುತ್ತಿದ್ದನು: ನೀನು ಪುನರುತ್ಥಾನವನ್ನು ನಂಬುವವರಲ್ಲಿ ಆಗಿರುವೆಯಾ ?
أَإِذَا مِتْنَا وَكُنَّا تُرَابًا وَعِظَامًا أَإِنَّا لَمَدِينُونَ ۝٥٣
📖 ಅನುವಾದ ಆಯತ್ 53
ನಾವು ಸತ್ತು ಮಣ್ಣಾಗಿ, ಎಲುಬುಗಳಾದ ಬಳಿಕವೂ ನಮ್ಮ ಕರ್ಮಗಳ ಪ್ರತಿಫಲ ನೀಡಲಾಗುವುದೆ ?
قَالَ هَلْ أَنتُم مُّطَّلِعُونَ ۝٥٤
📖 ಅನುವಾದ ಆಯತ್ 54
ಅವನು ಹೇಳುವನು : ನೀನು ನರಕವನ್ನು ಇಣುಕಿ ನೋಡಬಯಸುವೆಯಾ ?
فَاطَّلَعَ فَرَآهُ فِي سَوَاءِ الْجَحِيمِ ۝٥٥
📖 ಅನುವಾದ ಆಯತ್ 55
ಅವನು ಇಣುಕಿ ನೋಡಿ ಅವನನ್ನು ನರಕದ ಮಧ್ಯದಲ್ಲಿಕಾಣುವನು
قَالَ تَاللَّهِ إِن كِدتَّ لَتُرْدِينِ ۝٥٦
📖 ಅನುವಾದ ಆಯತ್ 56
ಅವನು ಹೇಳುವನು: ಅಲ್ಲಾಹನಾಣೆ! ನೀನು ನನ್ನನ್ನು ನಾಶ ಮಾಡಿ ಬಿಡುತ್ತಿದ್ದೆ.
وَلَوْلَا نِعْمَةُ رَبِّي لَكُنتُ مِنَ الْمُحْضَرِينَ ۝٥٧
📖 ಅನುವಾದ ಆಯತ್ 57
ನನ್ನ ಪ್ರಭುವಿನ ಕೃಪೆ ಇಲ್ಲದಿರುತ್ತಿದ್ದರೆ ನಾನು ಸಹ ಯಾತನೆಗಾಗಿ ಹಾಜರು ಗೊಳಿಸಲ್ಪಡುವವರಲ್ಲಾಗುತ್ತಿದ್ದೆ.
أَفَمَا نَحْنُ بِمَيِّتِينَ ۝٥٨
📖 ಅನುವಾದ ಆಯತ್ 58
ನಮ್ಮ ಮೊದಲ ಮರಣದ ಹೊರತು ನಾವು ಇನ್ನು ಮರಣ ಹೊಂದಲಾರೆವು.
إِلَّا مَوْتَتَنَا الْأُولَىٰ وَمَا نَحْنُ بِمُعَذَّبِينَ ۝٥٩
📖 ಅನುವಾದ ಆಯತ್ 59
ಮತ್ತು ನಮಗೆ ಶಿಕ್ಷೆಯು ಇರಲಾರದು.
إِنَّ هَٰذَا لَهُوَ الْفَوْزُ الْعَظِيمُ ۝٦٠
📖 ಅನುವಾದ ಆಯತ್ 60
ನಿಜವಾಗಿಯೂ ಇದುವೇ ಮಹಾ ಯಶಸ್ಸಾಗಿದೆ.
لِمِثْلِ هَٰذَا فَلْيَعْمَلِ الْعَامِلُونَ ۝٦١
📖 ಅನುವಾದ ಆಯತ್ 61
ಕಾರ್ಯವೆಸಗುವವರು ಇಂತಹ ಯಶಸ್ಸು ಪಡೆಯುವುದಕ್ಕಾಗಿ ಕಾರ್ಯವೆಸಗಲಿ.
أَذَٰلِكَ خَيْرٌ نُّزُلًا أَمْ شَجَرَةُ الزَّقُّومِ ۝٦٢
📖 ಅನುವಾದ ಆಯತ್ 62
ಈ ಸತ್ಕಾರವು ಅತ್ಯುತ್ತಮವೋ ಅಥವಾ ಝಕ್ಯೂಮ್ ವೃಕ್ಷವೋ ?
إِنَّا جَعَلْنَاهَا فِتْنَةً لِّلظَّالِمِينَ ۝٦٣
📖 ಅನುವಾದ ಆಯತ್ 63
ನಾವು ಅದನ್ನು ಅಕ್ರಮಿಗಳಿಗೆ ಪರೀಕ್ಷೆಯನ್ನಾಗಿ ಮಾಡಿಟ್ಟಿದ್É್ದÃವೆ.
إِنَّهَا شَجَرَةٌ تَخْرُجُ فِي أَصْلِ الْجَحِيمِ ۝٦٤
📖 ಅನುವಾದ ಆಯತ್ 64
ನಿಸ್ಸಂದೇಹವಾಗಿಯು ಅದು ನರಕದ ತಳಭಾಗದಿಂದ ಹೊರಡುವ ವೃಕ್ಷವಾಗಿದೆ.
طَلْعُهَا كَأَنَّهُ رُءُوسُ الشَّيَاطِينِ ۝٦٥
📖 ಅನುವಾದ ಆಯತ್ 65
ಅದರ ಗೊನೆಗಳು ಶÉÊತಾನರ ತಲೆಗಳಂತಿರುವುವು.
فَإِنَّهُمْ لَآكِلُونَ مِنْهَا فَمَالِئُونَ مِنْهَا الْبُطُونَ ۝٦٦
📖 ಅನುವಾದ ಆಯತ್ 66
ಖಂಡಿತವಾಗಿಯೂ ಅವರು ಅದನ್ನು ತಿನ್ನುವರು ಮತ್ತು ಅದರಿಂದಲೇ ಹೊಟ್ಟೆ ತುಂಬುವರು.
ثُمَّ إِنَّ لَهُمْ عَلَيْهَا لَشَوْبًا مِّنْ حَمِيمٍ ۝٦٧
📖 ಅನುವಾದ ಆಯತ್ 67
ಅನಂತರ ಅವರಿಗೆ ಕುಡಿಯಲು ಕೀವು ಮಿಶ್ರಿತ ಕುದಿಯುವ ನೀರು ಇರುವುದು.
ثُمَّ إِنَّ مَرْجِعَهُمْ لَإِلَى الْجَحِيمِ ۝٦٨
📖 ಅನುವಾದ ಆಯತ್ 68
ಆ ಬಳಿಕ ಅವರ ಮರಳುವಿಕೆಯು ನರಕದ ಕಡೆಗೇ ಆಗಿರುವುದು.
إِنَّهُمْ أَلْفَوْا آبَاءَهُمْ ضَالِّينَ ۝٦٩
📖 ಅನುವಾದ ಆಯತ್ 69
ನಿಸ್ಸಂದೇಹವಾಗಿಯು ಅವರು ತಮ್ಮ ಪೂರ್ವಿಕರನ್ನು ಪಥಭ್ರಷ್ಟರಾಗಿ ಕಂಡಿದ್ದರು.
فَهُمْ عَلَىٰ آثَارِهِمْ يُهْرَعُونَ ۝٧٠
📖 ಅನುವಾದ ಆಯತ್ 70
ಆದರೂ ಅವರು ಅವರ ಹೆಜ್ಜೆಗಳನ್ನು ಅನುಸರಿಸುತ್ತಾ ಓಡಾಡುತ್ತಿದ್ದರು.
وَلَقَدْ ضَلَّ قَبْلَهُمْ أَكْثَرُ الْأَوَّلِينَ ۝٧١
📖 ಅನುವಾದ ಆಯತ್ 71
ನಿಜವಾಗಿಯೂ ಅವರಿಗಿಂತ ಮೊದಲು ಪೂರ್ವಿಕರ ಪÉÊಕಿ ಅನೇಕರು ಪಥಭ್ರಷ್ಟರಾಗಿದ್ದರು.
وَلَقَدْ أَرْسَلْنَا فِيهِم مُّنذِرِينَ ۝٧٢
📖 ಅನುವಾದ ಆಯತ್ 72
ನಿಸ್ಸಂಶವಾಗಿ ನಾವು ಅವರ ಬಳಿ ಮುನ್ನೆಚ್ಚರಿಕೆಕೊಡುವ ಸಂದೇಶವಾಹಕರನ್ನು ಕಳುಹಿಸಿದ್ದೆವು.
فَانظُرْ كَيْفَ كَانَ عَاقِبَةُ الْمُنذَرِينَ ۝٧٣
📖 ಅನುವಾದ ಆಯತ್ 73
ಮುನ್ನೆಚ್ಚರಿಕೆ ನೀಡಲಾದವರ ಪರಿಣಾಮವು ಹೇಗಾಯಿತೆಂಬುದನ್ನು ನೋಡಿರಿ.
إِلَّا عِبَادَ اللَّهِ الْمُخْلَصِينَ ۝٧٤
📖 ಅನುವಾದ ಆಯತ್ 74
ಆದರೆ ಅಲ್ಲಾಹನ ನಿಷ್ಠಾವಂತದಾಸರ ಹೊರತು.
وَلَقَدْ نَادَانَا نُوحٌ فَلَنِعْمَ الْمُجِيبُونَ ۝٧٥
📖 ಅನುವಾದ ಆಯತ್ 75
ಮತ್ತು ನೂಹ್‌ರವರು ನಮ್ಮನ್ನು ಕೂಗಿ ಕರೆದರು. ನಾವು ಅದೆಷ್ಟು ಉತ್ತಮ ಓಗೊಡುವವರಾಗಿದ್ದೇವೆ (ಎಂದು ನೋಡಿರಿ).
وَنَجَّيْنَاهُ وَأَهْلَهُ مِنَ الْكَرْبِ الْعَظِيمِ ۝٧٦
📖 ಅನುವಾದ ಆಯತ್ 76
ನಾವು ಅವರನ್ನು ಮತ್ತು ಅವರ ಮನೆಯವರನ್ನು ಆ ಮಹಾ ವಿಪತ್ತಿನಿಂದ ರಕ್ಷಿಸಿದೆವು.
وَجَعَلْنَا ذُرِّيَّتَهُ هُمُ الْبَاقِينَ ۝٧٧
📖 ಅನುವಾದ ಆಯತ್ 77
ಮತ್ತು ನಾವು ಅವರ ಸಂತತಿಗಳನ್ನು ಉಳಿಸಿದೆವು.
وَتَرَكْنَا عَلَيْهِ فِي الْآخِرِينَ ۝٧٨
📖 ಅನುವಾದ ಆಯತ್ 78
ಮತ್ತು ನಾವು ಅವರ( ಸತ್ಕೀರ್ತಿಯನ್ನು) ನಂತರದ ತಲೆಮಾರುಗಳಲ್ಲಿ ಉಳಿಸಿದೆವು.
سَلَامٌ عَلَىٰ نُوحٍ فِي الْعَالَمِينَ ۝٧٩
📖 ಅನುವಾದ ಆಯತ್ 79
ಸರ್ವಲೋಕದಲ್ಲಿ ನೂಹರಿಗೆ ಸಲಾಮ್ (ಶಾಂತಿ) ಇರಲಿ.
إِنَّا كَذَٰلِكَ نَجْزِي الْمُحْسِنِينَ ۝٨٠
📖 ಅನುವಾದ ಆಯತ್ 80
ನಿಶ್ಚಯವಾಗಿಯೂ ನಾವು ಪುಣ್ಯ ಕಾರ್ಯವೆಸಗುವವರಿಗೆ ಇದೇ ಪ್ರಕಾರ ಪ್ರತಿಫಲ ನೀಡುತ್ತೇವೆ.
إِنَّهُ مِنْ عِبَادِنَا الْمُؤْمِنِينَ ۝٨١
📖 ಅನುವಾದ ಆಯತ್ 81
ನಿಶ್ಚಯವಾಗಿಯೂ ಅವರು ನಮ್ಮ ಸತ್ಯವಿಶ್ವಾಸಿಗಳಾದ ದಾಸರಲ್ಲಾಗಿದ್ದರು.
ثُمَّ أَغْرَقْنَا الْآخَرِينَ ۝٨٢
📖 ಅನುವಾದ ಆಯತ್ 82
ಅನಂತರ ನಾವು ಇತರ ಸತ್ಯನಿಷೆಧಿಗಳನ್ನು ಮುಳುಗಿಸಿಬಿಟ್ಟೆವು.
۞ وَإِنَّ مِن شِيعَتِهِ لَإِبْرَاهِيمَ ۝٨٣
📖 ಅನುವಾದ ಆಯತ್ 83
ಮತ್ತು ಇಬ್ರಾಹೀಮ್‌ರವರು ನೂಹರ ಸಮುದಾಯದವರಾಗಿದ್ದರು.
إِذْ جَاءَ رَبَّهُ بِقَلْبٍ سَلِيمٍ ۝٨٤
📖 ಅನುವಾದ ಆಯತ್ 84
ಅವರು ತನ್ನ ಪ್ರಭುವಿನೆಡೆಗೆ ನಿರ್ಮಲ ಮನಸ್ಸಿನೊಂದಿಗೆ ಬಂದ ಸಂದರ್ಭ.
إِذْ قَالَ لِأَبِيهِ وَقَوْمِهِ مَاذَا تَعْبُدُونَ ۝٨٥
📖 ಅನುವಾದ ಆಯತ್ 85
ಅವರು ತನ್ನ ತಂದೆಗೂ, ತನ್ನಜನತೆಗೂ ನೀವು ಏನನ್ನೂ ಆರಾಧಿಸುತ್ತಿರುವಿರಿ? ಎಂದು ಕೇಳಿದ ಸಂದರ್ಭ.
أَئِفْكًا آلِهَةً دُونَ اللَّهِ تُرِيدُونَ ۝٨٦
📖 ಅನುವಾದ ಆಯತ್ 86
ನೀವು ಅಲ್ಲಾಹನ ಹೊರತು ಮಿಥ್ಯ ದೇವರುಗಳನ್ನು ಬಯಸುತ್ತೀರಾ?
فَمَا ظَنُّكُم بِرَبِّ الْعَالَمِينَ ۝٨٧
📖 ಅನುವಾದ ಆಯತ್ 87
ಹಾಗೆಯೇ ಸರ್ವಲೋಕಗಳ ಪ್ರಭುವಿನ ಕುರಿತು ನಿಮ್ಮ ಅಭಿಪ್ರಾಯವೇನು?
فَنَظَرَ نَظْرَةً فِي النُّجُومِ ۝٨٨
📖 ಅನುವಾದ ಆಯತ್ 88
ಅನಂತರ ಅವರು ಒಮ್ಮೆ ನಕ್ಷತ್ರಗಳೆಡೆಗೆ ದೃಷ್ಟಿ ಹಾಯಿಸಿದರು.
فَقَالَ إِنِّي سَقِيمٌ ۝٨٩
📖 ಅನುವಾದ ಆಯತ್ 89
ಮತ್ತು ಹೇಳಿದರು: ನಿಜವಾಗಿಯೂ ನಾನು ರೋಗಗ್ರಸ್ಥನಾಗಿದ್ದೇನೆ.
فَتَوَلَّوْا عَنْهُ مُدْبِرِينَ ۝٩٠
📖 ಅನುವಾದ ಆಯತ್ 90
ಆದುದರಿಂದ ಅವರು ಅವರನ್ನು ಬಿಟ್ಟು ಹೋದರು.
فَرَاغَ إِلَىٰ آلِهَتِهِمْ فَقَالَ أَلَا تَأْكُلُونَ ۝٩١
📖 ಅನುವಾದ ಆಯತ್ 91
ಅವರು (ಮೆಲ್ಲನೆ) ಅವರ ಆರಾಧ್ಯ ದೇವರುಗಳೆಡೆಗೆ ಹೋದರು ಮತ್ತು ಹೇಳತೊಡಗಿದರು: ನೀವು ತಿನ್ನುವುದಿಲ್ಲವೇಕೆ?
مَا لَكُمْ لَا تَنطِقُونَ ۝٩٢
📖 ಅನುವಾದ ಆಯತ್ 92
ನಿಮಗೇನಾಗಿದೆ: ನೀವು ಮಾತನಾಡುವುದಿಲ್ಲವಲ್ಲ?
فَرَاغَ عَلَيْهِمْ ضَرْبًا بِالْيَمِينِ ۝٩٣
📖 ಅನುವಾದ ಆಯತ್ 93
ನಂತರ ಅವರು ಹಠಾತ್ತಾಗಿ ತಮ್ಮ ಬಲಗÉÊಯಿಂದ ಅವುಗಳನ್ನು ಹೊಡೆಯತೊಡಗಿದರು.
فَأَقْبَلُوا إِلَيْهِ يَزِفُّونَ ۝٩٤
📖 ಅನುವಾದ ಆಯತ್ 94
ಆಗ ಜನರು ಅವರೆಡೆಗೆ ಧಾವಿಸಿ ಬಂದರು.
قَالَ أَتَعْبُدُونَ مَا تَنْحِتُونَ ۝٩٥
📖 ಅನುವಾದ ಆಯತ್ 95
ಇಬ್ರಾಹೀಮರು ಹೇಳಿದರು: (ಸ್ವತಃ) ನೀವೇ ಕೆತ್ತಿ ನಿರ್ಮಿಸುತ್ತಿರುವ ವಸ್ತುಗಳನ್ನು ನೀವು ಆರಾಧಿಸುತ್ತಿರುವಿರಾ?
وَاللَّهُ خَلَقَكُمْ وَمَا تَعْمَلُونَ ۝٩٦
📖 ಅನುವಾದ ಆಯತ್ 96
ವಸ್ತುತಃ ನಿಮ್ಮನ್ನು ಮತ್ತು ನೀವು ನಿರ್ಮಿಸುತ್ತಿರುವ ವಸ್ತುಗಳನ್ನು ಅಲ್ಲಾಹನು ಸೃಷ್ಟಿಸಿದ್ದಾನೆ.
قَالُوا ابْنُوا لَهُ بُنْيَانًا فَأَلْقُوهُ فِي الْجَحِيمِ ۝٩٧
📖 ಅನುವಾದ ಆಯತ್ 97
ಅವರು ಹೇಳತೊಡಗಿದರು: ನೀವು ಇವನಿಗಾಗಿ ಅಗ್ನಿಕುಂಡವನ್ನು ನಿರ್ಮಿಸಿರಿ. ಅನಂತರ ಇವನನ್ನು ಧಗಧಗಿಸುವ ಬೆಂಕಿಯಲ್ಲಿ ಎಸೆದುಬಿಡಿರಿ.
فَأَرَادُوا بِهِ كَيْدًا فَجَعَلْنَاهُمُ الْأَسْفَلِينَ ۝٩٨
📖 ಅನುವಾದ ಆಯತ್ 98
ಅವರು ಇಬ್ರಾಹೀಮರೊಂದಿಗೆ ತಂತ್ರವೆಸಗಲು ಬಯಸಿದ್ದರು. ಆದರೆ ನಾವು ಅವರನ್ನೇ ಕೀಳಾಗಿ ಮಾಡಿಬಿಟ್ಟೆವು.
وَقَالَ إِنِّي ذَاهِبٌ إِلَىٰ رَبِّي سَيَهْدِينِ ۝٩٩
📖 ಅನುವಾದ ಆಯತ್ 99
ಮತ್ತÄ ಇಬ್ರಾಹೀಮ್ ಹೇಳಿದರು: ನಾನಂತು ನನ್ನ ಪ್ರಭುವಿನೆಡೆಗೆ ಹೋಗುವೆನು. ಖಂಡಿತ ಅವನು ನನಗೆ ಮಾರ್ಗದರ್ಶನ ಮಾಡಲಿರುವನು.
رَبِّ هَبْ لِي مِنَ الصَّالِحِينَ ۝١٠٠
📖 ಅನುವಾದ ಆಯತ್ 100
ಓ ನನ್ನ ಪ್ರಭುವೇ, ನನಗೆ ನೀನು ಸಜ್ಜನರಲ್ಲಾದ ಸಂತತಿಗಳನ್ನು ಕರುಣಿಸು.
فَبَشَّرْنَاهُ بِغُلَامٍ حَلِيمٍ ۝١٠١
📖 ಅನುವಾದ ಆಯತ್ 101
ಆಗ ನಾವು ಅವರಿಗೆ ಒಬ್ಬ ಸಹನಾಶೀಲ ಪುತ್ರನ ಶುಭ ವಾರ್ತೆಯನ್ನು ನೀಡಿದೆವು.
فَلَمَّا بَلَغَ مَعَهُ السَّعْيَ قَالَ يَا بُنَيَّ إِنِّي أَرَىٰ فِي الْمَنَامِ أَنِّي أَذْبَحُكَ فَانظُرْ مَاذَا تَرَىٰ ۚ قَالَ يَا أَبَتِ افْعَلْ مَا تُؤْمَرُ ۖ سَتَجِدُنِي إِن شَاءَ اللَّهُ مِنَ الصَّابِرِينَ ۝١٠٢
📖 ಅನುವಾದ ಆಯತ್ 102
ಅನಂತರ ಅವರ ಪುತ್ರನು ಅವರ ಜೊತೆಯಲ್ಲಿ ನಡೆದಾಡುವ ಪ್ರಾಯಕ್ಕೆ ತಲುಪಿದಾಗ ಇಬ್ರಾಹೀಮರು ಹೇಳಿದರು: ಓ ನನ್ನ ಪ್ರಿಯ ಮಗನೇ, ನಾನು ಕನಸಿನಲ್ಲಿ ನಿನ್ನನ್ನು ಕೊಯ್ಯುತ್ತಿರುವುದಾಗಿ ಕಂಡಿರುವೆನು. ನಿನ್ನ ಅಭಿಪ್ರಾಯವೇನೆಂದು ಹೇಳು ಮಗನು ಉತ್ತರಿಸಿದನು. ಓ ನನ್ನ ಪ್ರಿಯತಂದೆಯೇ, ನಿಮಗೆ ಆಜ್ಞೆ ನೀಡಲಾಗಿರುವುದನ್ನು ಕಾರ್ಯರೂಪಕ್ಕೆ ತನ್ನಿರಿ. ಅಲ್ಲಾಹನ ಇಚ್ಛೆಯಿದ್ದರೆ ನೀವು ನನ್ನನ್ನು ಸಹನಾಶೀಲರಲ್ಲಿ ಕಾಣಲಿರುವಿರಿ.
فَلَمَّا أَسْلَمَا وَتَلَّهُ لِلْجَبِينِ ۝١٠٣
📖 ಅನುವಾದ ಆಯತ್ 103
ಕೊನೆಗೆ ಅವರಿಬ್ಬರೂ ವಿಧೇಯರಾದಾಗ (ತಂದೆಯು) ( ಮಗನನ್ನು) ಅಧೋಮುಖಿಯಾಗಿ ಮಲಗಿಸಿದರು..
وَنَادَيْنَاهُ أَن يَا إِبْرَاهِيمُ ۝١٠٤
📖 ಅನುವಾದ ಆಯತ್ 104
ಆಗ ನಾವು ಕೂಗಿ ಕರೆದೆವು: ಓ ಇಬ್ರಾಹೀಮ್
قَدْ صَدَّقْتَ الرُّؤْيَا ۚ إِنَّا كَذَٰلِكَ نَجْزِي الْمُحْسِنِينَ ۝١٠٥
📖 ಅನುವಾದ ಆಯತ್ 105
ನಿಶ್ಚಯವಾಗಿಯೂ ನೀವು ನಿನ್ನ ಕನಸನ್ನು ನಿಜ ಮಾಡಿ ತೋರಿಸಿರುವಿರಿ. ನಿಸ್ಸಂಶಯವಾಗಿಯು ನಾವು ಪುಣ್ಯ ಕಾರ್ಯವೆಸಗುವವರಿಗೆ ಹೀಗೆಯೇ ಪ್ರತಿಫಲ ನೀಡುತ್ತೇವೆ.
إِنَّ هَٰذَا لَهُوَ الْبَلَاءُ الْمُبِينُ ۝١٠٦
📖 ಅನುವಾದ ಆಯತ್ 106
ವಾಸ್ತವದಲ್ಲಿ ಇದೊಂದು ಸುಸ್ಪಷ್ಟ ಪರೀಕ್ಷೆಯಾಗಿತ್ತು.
وَفَدَيْنَاهُ بِذِبْحٍ عَظِيمٍ ۝١٠٧
📖 ಅನುವಾದ ಆಯತ್ 107
ಮತ್ತು ನಾವು ಅವರ ಪ್ರಾಯಶ್ಚಿತ್ತವಾಗಿ ಮೃಗವೊಂದನ್ನು ಬಲಿ ನೀಡಿದೆವು.
وَتَرَكْنَا عَلَيْهِ فِي الْآخِرِينَ ۝١٠٨
📖 ಅನುವಾದ ಆಯತ್ 108
ಮತ್ತು ನಾವು ಅವರ ಸತ್ಕೀರ್ತಿಯನ್ನು ನಂತರದ ತಲೆಮಾರುಗಳಲ್ಲಿ ಉಳಿಸಿಬಿಟ್ಟೆವು.
سَلَامٌ عَلَىٰ إِبْرَاهِيمَ ۝١٠٩
📖 ಅನುವಾದ ಆಯತ್ 109
ಇಬ್ರಾಹೀಮರ ಮೇಲೆ ಶಾಂತಿ ಇರಲಿ.
كَذَٰلِكَ نَجْزِي الْمُحْسِنِينَ ۝١١٠
📖 ಅನುವಾದ ಆಯತ್ 110
ನಾವು ಪುಣ್ಯ ಕಾರ್ಯವೆಸಗುವವರಿಗೆ ಹೀಗೆಯೇ ಪ್ರತಿಫಲ ನೀಡುತ್ತೇವೆ.
إِنَّهُ مِنْ عِبَادِنَا الْمُؤْمِنِينَ ۝١١١
📖 ಅನುವಾದ ಆಯತ್ 111
ನಿಸ್ಸಂಶಯವಾಗಿಯು ಅವರು ನಮ್ಮ ಸತ್ಯವಿಶ್ವಾಸಿ ದಾಸರಲ್ಲಾಗಿದ್ದರು.
وَبَشَّرْنَاهُ بِإِسْحَاقَ نَبِيًّا مِّنَ الصَّالِحِينَ ۝١١٢
📖 ಅನುವಾದ ಆಯತ್ 112
ಮತ್ತು ನಾವು ಅವರಿಗೆ ಸಜ್ಜನರ ಪÉÊಕಿ ಪ್ರವಾದಿಯಾಗಿ ಬರಲಿರುವ ಇಸ್‌ಹಾಕರ ಸುವಾರ್ತೆಯನ್ನು ನೀಡಿದೆವು.
وَبَارَكْنَا عَلَيْهِ وَعَلَىٰ إِسْحَاقَ ۚ وَمِن ذُرِّيَّتِهِمَا مُحْسِنٌ وَظَالِمٌ لِّنَفْسِهِ مُبِينٌ ۝١١٣
📖 ಅನುವಾದ ಆಯತ್ 113
ಮತ್ತು ನಾವು ಇಬ್ರಾಹೀಮ್ ಮತ್ತು ಇಸ್‌ಹಾಕರ ಮೇಲೆ ಸಮೃದ್ಧಿಯನ್ನು ದಯಪಾಲಿಸಿದೆವು ಮತ್ತು ಅವರಿಬ್ಬರ ಸಂತಾನಗಳಲ್ಲಿ ಕೆಲವರು ಒಳಿತಿನ ಪಾಲಕರಾಗಿದ್ದಾರೆ ಮತ್ತು ಕೆಲವರು ತಮ್ಮ ಮೇಲೆಯೇ ಸ್ಪಷ್ಟ ಅಕ್ರಮವೆಸಗುವವರಿದ್ದಾರೆ.
وَلَقَدْ مَنَنَّا عَلَىٰ مُوسَىٰ وَهَارُونَ ۝١١٤
📖 ಅನುವಾದ ಆಯತ್ 114
ಮತ್ತು ನಿಜವಾಗಿಯೂ ನಾವು ಮೂಸಾ ಮತ್ತು ಹಾರೂನ್‌ರವರ ಮೇಲೆ ಮಹಾ ಉಪಕಾರವನ್ನು ಮಾಡಿದೆವು.
وَنَجَّيْنَاهُمَا وَقَوْمَهُمَا مِنَ الْكَرْبِ الْعَظِيمِ ۝١١٥
📖 ಅನುವಾದ ಆಯತ್ 115
ಮತ್ತು ನಾವು ಅವರನ್ನು ಮತ್ತು ಅವರ ಜನತೆಯನ್ನು ಮಹಾ ವಿಪತ್ತಿನಿಂದ ರಕ್ಷಿಸಿದೆವು.
وَنَصَرْنَاهُمْ فَكَانُوا هُمُ الْغَالِبِينَ ۝١١٦
📖 ಅನುವಾದ ಆಯತ್ 116
ಮತ್ತು ನಾವು ಅವರಿಗೆ ಸಹಾಯ ಮಾಡಿದಾಗ ಅವರೇ ಮೇಲುಗÉÊ ಸಾಧಿಸಿದರು.
وَآتَيْنَاهُمَا الْكِتَابَ الْمُسْتَبِينَ ۝١١٧
📖 ಅನುವಾದ ಆಯತ್ 117
ಮತ್ತÄ ನಾವು ಅವರಿಬ್ಬರಿಗೆ ಸುವ್ಯಕ್ತಗ್ರಂಥವನ್ನು ದಯಪಾಲಿಸಿದೆವು.
وَهَدَيْنَاهُمَا الصِّرَاطَ الْمُسْتَقِيمَ ۝١١٨
📖 ಅನುವಾದ ಆಯತ್ 118
ಮತ್ತು ಅವರಿಬ್ಬರನ್ನು ಋಜುವಾದ ಮಾರ್ಗದಲ್ಲಿ ಮುನ್ನಡೆಸಿದೆವು.
وَتَرَكْنَا عَلَيْهِمَا فِي الْآخِرِينَ ۝١١٩
📖 ಅನುವಾದ ಆಯತ್ 119
ಮತ್ತು ನಾವು ನಂತರದ ತಲೆಮಾರುಗಳಲ್ಲಿ ಅವರ ಕೀರ್ತಿಯನ್ನು ಉಳಿಸಿದೆವು.
سَلَامٌ عَلَىٰ مُوسَىٰ وَهَارُونَ ۝١٢٠
📖 ಅನುವಾದ ಆಯತ್ 120
ಮೂಸಾ ಮತ್ತು ಹಾರೂನರ ಮೇಲೆ ಶಾಂತಿಯಿರಲಿ
إِنَّا كَذَٰلِكَ نَجْزِي الْمُحْسِنِينَ ۝١٢١
📖 ಅನುವಾದ ಆಯತ್ 121
ನಿಸ್ಸಂದೇಹವಾಗಿಯೂ ನಾವು ಒಳಿತಿನ ಪಾಲಕರಿಗೆ ಹೀಗೆಯೇ ಪ್ರತಿಫಲ ನೀಡುತ್ತೇವೆ.
إِنَّهُمَا مِنْ عِبَادِنَا الْمُؤْمِنِينَ ۝١٢٢
📖 ಅನುವಾದ ಆಯತ್ 122
ನಿಜವಾಗಿಯು ಅವರಿಬ್ಬರೂ ನಮ್ಮ ಸಜ್ಜನದಾಸರಲ್ಲಾಗಿದ್ದರು.
وَإِنَّ إِلْيَاسَ لَمِنَ الْمُرْسَلِينَ ۝١٢٣
📖 ಅನುವಾದ ಆಯತ್ 123
ನಿಸ್ಸಂಶಯವಾಗಿಯೂ ಇಲ್ಯಾಸ್‌ರವರು ಸಂದೇಶವಾಹಕ ರಲ್ಲಾಗಿದ್ದರು.
إِذْ قَالَ لِقَوْمِهِ أَلَا تَتَّقُونَ ۝١٢٤
📖 ಅನುವಾದ ಆಯತ್ 124
ಅವರು ತನ್ನ ಜನಾಂಗಕ್ಕೆ ಹೇಳಿದ ಸಂದರ್ಭ : ನೀವು ಅಲ್ಲಾಹನ್ನು ಭಯಪಡುವುದಿಲ್ಲವೇ ?
أَتَدْعُونَ بَعْلًا وَتَذَرُونَ أَحْسَنَ الْخَالِقِينَ ۝١٢٥
📖 ಅನುವಾದ ಆಯತ್ 125
125&126
اللَّهَ رَبَّكُمْ وَرَبَّ آبَائِكُمُ الْأَوَّلِينَ ۝١٢٦
📖 ಅನುವಾದ ಆಯತ್ 126
ನೀವು ಬಾಲ್(ವಿಗ್ರಹ)ನನ್ನು ಪೂಜಿಸುತ್ತಾ ತಮ್ಮ ಅತ್ಯುತ್ತಮ ಸೃಷ್ಟಿಕರ್ತನನ್ನು, ನಿಮ್ಮ ಪ್ರಭುವಾದ ಮತ್ತು ನಿಮ್ಮ ಪೂರ್ವಿಕರ ಪ್ರಭುವಾದ ಅಲ್ಲಾಹನ್ನು ಬಿಟ್ಟಿಬಿಡುತ್ತೀರಾ?
فَكَذَّبُوهُ فَإِنَّهُمْ لَمُحْضَرُونَ ۝١٢٧
📖 ಅನುವಾದ ಆಯತ್ 127
ಆದರೆ ಅವರು ಇಲ್ಯಾಸ್‌ರವರನ್ನು ಸುಳ್ಳಾಗಿಸಿಬಿಟ್ಟರು. ಆದ್ದರಿಂದ ಅವರು ಖಂಡಿತ ಯಾತನೆಗಾಗಿ ಹಾಜರುಗೊಳಿಸಲಾಗುವರು.
إِلَّا عِبَادَ اللَّهِ الْمُخْلَصِينَ ۝١٢٨
📖 ಅನುವಾದ ಆಯತ್ 128
ಅಲ್ಲಾಹನ ನಿಷ್ಠಾವಂತದಾಸರ ಹೊರತು.
وَتَرَكْنَا عَلَيْهِ فِي الْآخِرِينَ ۝١٢٩
📖 ಅನುವಾದ ಆಯತ್ 129
ನಂತರದ ತಲೆಮಾರುಗಳಲ್ಲಿ ನಾವು ಅವರ ಸತ್ಕೀರ್ತಿಯನ್ನು ಉಳಿಸಿದೆವು.
سَلَامٌ عَلَىٰ إِلْ يَاسِينَ ۝١٣٠
📖 ಅನುವಾದ ಆಯತ್ 130
ಇಲ್ಯಾಸರ ಮೇಲೆ ಶಾಂತಿ ಇರಲಿ.
إِنَّا كَذَٰلِكَ نَجْزِي الْمُحْسِنِينَ ۝١٣١
📖 ಅನುವಾದ ಆಯತ್ 131
ವಾಸ್ತವದಲ್ಲಿ ನಾವು ಒಳಿತಿನ ಪಾಲಕರಿಗೆ ಹೀಗೆಯೇ ಪ್ರತಿಫಲ ನೀಡುತ್ತೇವೆ.
إِنَّهُ مِنْ عِبَادِنَا الْمُؤْمِنِينَ ۝١٣٢
📖 ಅನುವಾದ ಆಯತ್ 132
ನಿಸ್ಸಂಶಯವಾಗಿಯೂ ಅವರು ನಮ್ಮ ಸತ್ಯವಿಶ್ವಾಸಿ ದಾಸರಲ್ಲಾಗಿದ್ದರು.
وَإِنَّ لُوطًا لَّمِنَ الْمُرْسَلِينَ ۝١٣٣
📖 ಅನುವಾದ ಆಯತ್ 133
ಖಂಡಿತವಾಗಿಯೂ ಲೂತರವರೂ ಸಂದೇಶವಾಹಕರಲ್ಲಾಗಿದ್ದರು.
إِذْ نَجَّيْنَاهُ وَأَهْلَهُ أَجْمَعِينَ ۝١٣٤
📖 ಅನುವಾದ ಆಯತ್ 134
ನಾವು ಅವರನ್ನು ಮತ್ತು ಅವರ ಮನೆಯವರನ್ನು ರಕ್ಷಿಸಿದ ಸಂದರ್ಭವನ್ನು ಸ್ಮರಿಸಿರಿ.
إِلَّا عَجُوزًا فِي الْغَابِرِينَ ۝١٣٥
📖 ಅನುವಾದ ಆಯತ್ 135
ಆದರೆ ಹಿಂದುಳಿಯುವವರಲ್ಲಾಗಿದ್ದ ಆ ವೃದ್ಧೆಯ ಹೊರತು.
ثُمَّ دَمَّرْنَا الْآخَرِينَ ۝١٣٦
📖 ಅನುವಾದ ಆಯತ್ 136
ಅನಂತರ ನಾವು ಇತರರನ್ನು ನಾಶಮಾಡಿಬಿಟ್ಟೆವು.
وَإِنَّكُمْ لَتَمُرُّونَ عَلَيْهِم مُّصْبِحِينَ ۝١٣٧
📖 ಅನುವಾದ ಆಯತ್ 137
136&137
وَبِاللَّيْلِ ۗ أَفَلَا تَعْقِلُونَ ۝١٣٨
📖 ಅನುವಾದ ಆಯತ್ 138
ವಸ್ತುತಃ ನೀವು ಅವರ ನಾಡುಗಳ ಬಳಿಯಿಂದ ಹಗಲು ಮತ್ತು ರಾತ್ರಿಯಲ್ಲಿ ಹಾದು ಹೋಗುತ್ತೀರಿ. ಹಾಗಿದ್ದೂ ನೀವು ಚಿಂತಿಸುವುದಿಲ್ಲವೇ?
وَإِنَّ يُونُسَ لَمِنَ الْمُرْسَلِينَ ۝١٣٩
📖 ಅನುವಾದ ಆಯತ್ 139
ಖಂಡಿತವಾಗಿಯು ಯೂನುಸ್ ಪ್ರವಾದಿಗಳಲ್ಲಾಗಿದ್ದರು.
إِذْ أَبَقَ إِلَى الْفُلْكِ الْمَشْحُونِ ۝١٤٠
📖 ಅನುವಾದ ಆಯತ್ 140
ತುಂಬಿದ ಹಡಗಿನ ಕಡೆಗೆ ಅವರು ಓಡಿಹೋದ ಸಂದರ್ಭ.
فَسَاهَمَ فَكَانَ مِنَ الْمُدْحَضِينَ ۝١٤١
📖 ಅನುವಾದ ಆಯತ್ 141
ಚೀಟಿ ಎತ್ತಲಾದಾಗ ಅವರು ಸೋಲಿಸುವವರಲ್ಲಾದರು.
فَالْتَقَمَهُ الْحُوتُ وَهُوَ مُلِيمٌ ۝١٤٢
📖 ಅನುವಾದ ಆಯತ್ 142
ಆಗ ಅವರನ್ನು ಮೀನು ನುಂಗಿ ಹಾಕಿತು ಮತ್ತು ಅವರು ತನ್ನನ್ನೇ ಆಕ್ಷೇಪಿಸತೊಡಗಿದರು.
فَلَوْلَا أَنَّهُ كَانَ مِنَ الْمُسَبِّحِينَ ۝١٤٣
📖 ಅನುವಾದ ಆಯತ್ 143
ಇನ್ನು ಅವರು ಅಲ್ಲಾಹನ ಪಾವಿತ್ರö್ಯ ಸ್ತುತಿಸುವವರಲ್ಲಿ ಸೇರಿಲ್ಲದಿರುತ್ತಿದ್ದರೆ.
لَلَبِثَ فِي بَطْنِهِ إِلَىٰ يَوْمِ يُبْعَثُونَ ۝١٤٤
📖 ಅನುವಾದ ಆಯತ್ 144
ಪುನರುತ್ಥಾನ ದಿನದವರೆಗೂ ಅದರ ಹೊಟ್ಟೆಯೊಳಗೆ ಇರುತ್ತಿದ್ದರು.
۞ فَنَبَذْنَاهُ بِالْعَرَاءِ وَهُوَ سَقِيمٌ ۝١٤٥
📖 ಅನುವಾದ ಆಯತ್ 145
ಕೊನೆಗೆ ಅವರು ಅಸ್ವಸ್ಥ ಸ್ಥಿತಿಯಲ್ಲಿದ್ದಾಗ ನಾವು ಅವರನ್ನು ಸಮತಟ್ಟಾದ ವÉÄÊದಾನದಲ್ಲಿ ಎಸೆದು ಬಿಟ್ಟೆವು.
وَأَنبَتْنَا عَلَيْهِ شَجَرَةً مِّن يَقْطِينٍ ۝١٤٦
📖 ಅನುವಾದ ಆಯತ್ 146
ಮತ್ತÄ ನಾವು ಅವರ ಮೇಲೆ ನೆರಳನ್ನು ನೀಡುವಂತಹ ಸೋರೆಕಾಯಿಯ ಬಳ್ಳಿಯನ್ನು ಬೆಳೆಸಿದೆವು.
وَأَرْسَلْنَاهُ إِلَىٰ مِائَةِ أَلْفٍ أَوْ يَزِيدُونَ ۝١٤٧
📖 ಅನುವಾದ ಆಯತ್ 147
ಮತ್ತÄ ನಾವು ಅವರನ್ನು ಒಂದು ಲಕ್ಷ ಅಥವಾ ಅದಕ್ಕಿಂತಲೂ ಹೆಚ್ಚು ಸಂಖ್ಯೆಯಿರುವ ಜನರೆಡೆಗೆ ಕಳುಹಿಸಿದೆವು.
فَآمَنُوا فَمَتَّعْنَاهُمْ إِلَىٰ حِينٍ ۝١٤٨
📖 ಅನುವಾದ ಆಯತ್ 148
ಆಗ ಅವರು ಸತ್ಯವಿಶ್ವಾಸವಿರಿಸಿದರು. ಆದ್ದರಿಂದ ನಾವು ಅವರಿಗೆ ಒಂದು ನಿರ್ದಿಷ್ಟಕಾಲದವರೆಗೆ ಸುಖಬೋಗಗಳನ್ನು ನೀಡಿದೆವು.
فَاسْتَفْتِهِمْ أَلِرَبِّكَ الْبَنَاتُ وَلَهُمُ الْبَنُونَ ۝١٤٩
📖 ಅನುವಾದ ಆಯತ್ 149
ಓ ಪೈಗಂಬರÀರೇ ಇವರೊಂದಿಗೆ ಕೇಳಿರಿ: ನಿಮ್ಮ ಪ್ರಭುವಿಗೆ ಹೆಣ್ಣುಮಕ್ಕಳು ಮತ್ತು ಇವರಿಗೆ ಗಂಡುಮಕ್ಕಳೇ ?
أَمْ خَلَقْنَا الْمَلَائِكَةَ إِنَاثًا وَهُمْ شَاهِدُونَ ۝١٥٠
📖 ಅನುವಾದ ಆಯತ್ 150
ಅಥವಾ ನಾವು ಮಲಕ್‌ಗಳನ್ನು ಹೆಣ್ಣಾಗಿ ಸೃಷ್ಟಿಸಿದಾಗ ಇವರು ಹಾಜರಿದ್ದರೇ ?
أَلَا إِنَّهُم مِّنْ إِفْكِهِمْ لَيَقُولُونَ ۝١٥١
📖 ಅನುವಾದ ಆಯತ್ 151
ಜಾಗ್ರತೆ !ಇವರು ಕೇವಲ ತಮ್ಮ ಮಿಥ್ಯಕಲ್ಪನೆಯಿಂದ ಅಲ್ಲಾಹನಿಗೆ ಸಂತಾನವಿದೆ ಎಂದು ಸುಳ್ಳು ಹೇಳುತ್ತಿದ್ದಾರೆ.
وَلَدَ اللَّهُ وَإِنَّهُمْ لَكَاذِبُونَ ۝١٥٢
📖 ಅನುವಾದ ಆಯತ್ 152
ಖಂಡಿತ ಅಲ್ಲಾಹನು ಮಕ್ಕಳನ್ನು ಹಡಿದಿದ್ದಾನೆ ಎಂದು ಸುಳ್ಳು ಹೇಳಿದ್ದಾರೆ.
أَصْطَفَى الْبَنَاتِ عَلَى الْبَنِينَ ۝١٥٣
📖 ಅನುವಾದ ಆಯತ್ 153
ಅಲ್ಲಾಹನು ತನಗೋಸ್ಕರ ಪುತ್ರರ ಬದಲು ಪುತ್ರಿಯರನ್ನು ಆಯ್ಕೆ ಮಾಡಿರುವೆನೇ?
مَا لَكُمْ كَيْفَ تَحْكُمُونَ ۝١٥٤
📖 ಅನುವಾದ ಆಯತ್ 154
ನಿಮಗೇನಾಗಿದೇ ನೀವು ಎಂತಹ ತಿರ್ಮಾನವನ್ನು ಮಾಡುತ್ತಿರುವಿರಿ?
أَفَلَا تَذَكَّرُونَ ۝١٥٥
📖 ಅನುವಾದ ಆಯತ್ 155
ಇನ್ನು ನೀವು ಯೋಚಿಸಿ ಪಾಠಕಲಿಯುವುದಿಲ್ಲವೇ ?
أَمْ لَكُمْ سُلْطَانٌ مُّبِينٌ ۝١٥٦
📖 ಅನುವಾದ ಆಯತ್ 156
ಅಥವಾ ನಿಮ್ಮ ಬಳಿ ಯಾವುದಾದರೂ ಸ್ಪಷ್ಟ ಆಧಾರವಿದೆಯೇ ?
فَأْتُوا بِكِتَابِكُمْ إِن كُنتُمْ صَادِقِينَ ۝١٥٧
📖 ಅನುವಾದ ಆಯತ್ 157
ನೀವು ಸತ್ಯವಂತರಾಗಿದ್ದರೆ ನಿಮ್ಮ ಗ್ರಂಥವನ್ನು ತನ್ನಿರಿ.
وَجَعَلُوا بَيْنَهُ وَبَيْنَ الْجِنَّةِ نَسَبًا ۚ وَلَقَدْ عَلِمَتِ الْجِنَّةُ إِنَّهُمْ لَمُحْضَرُونَ ۝١٥٨
📖 ಅನುವಾದ ಆಯತ್ 158
ಮತ್ತು ಇವರು ಅಲ್ಲಾಹನ ಮತ್ತÄ ಜಿನ್ನ್ಗಳ (ಯಕ್ಷ) ನಡುವೆ ಕುಟುಂಬ ಸಂಬAಧವನ್ನು ನಿಶ್ಚಿಯಿಸಿದ್ದಾರೆ! ಮತ್ತು ವಸ್ತುತಃ ಜಿನ್ನ್ಗಳಿಗೆ (ಯಕ್ಷ) ಇಂತಹ ವಿಶ್ವಾಸವನ್ನಿಡುವ ಸತ್ಯನಿಷೇಧಿಗಳನ್ನು ಯಾತನೆಗೆ ಹಾಜರುಗೊಳಿಸಲಾಗುವರೆಂದು ಗೊತ್ತಿದೆ.
سُبْحَانَ اللَّهِ عَمَّا يَصِفُونَ ۝١٥٩
📖 ಅನುವಾದ ಆಯತ್ 159
ಅವರು ಆರೋಪಿಸುತ್ತಿರುವ ವಿಷಯಗಳಿಂದ ಅಲ್ಲಾಹನು ಪವಿತ್ರನಾಗಿರುವನು.
إِلَّا عِبَادَ اللَّهِ الْمُخْلَصِينَ ۝١٦٠
📖 ಅನುವಾದ ಆಯತ್ 160
ಅಲ್ಲಾಹನ ನಿಷ್ಠಾವಂತದಾಸರ ಹೊರತು.
فَإِنَّكُمْ وَمَا تَعْبُدُونَ ۝١٦١
📖 ಅನುವಾದ ಆಯತ್ 161
ನಿಜವಾಗಿಯು ನೀವೂ, ನಿಮ್ಮ (ಮಿಥ್ಯ) ಆರಾಧ್ಯರೂ….
مَا أَنتُمْ عَلَيْهِ بِفَاتِنِينَ ۝١٦٢
📖 ಅನುವಾದ ಆಯತ್ 162
ಅಲ್ಲಾಹನ ವಿರುದ್ಧ ಯಾವೊಬ್ಬನನ್ನೂ ದಾರಿ ತಪ್ಪಿಸಲಾರಿರಿ.
إِلَّا مَنْ هُوَ صَالِ الْجَحِيمِ ۝١٦٣
📖 ಅನುವಾದ ಆಯತ್ 163
ಆದರೆ ನರಕಕ್ಕೆ ಅರ್ಹನಾಗಿರುವವನ ಹೊರತು.
وَمَا مِنَّا إِلَّا لَهُ مَقَامٌ مَّعْلُومٌ ۝١٦٤
📖 ಅನುವಾದ ಆಯತ್ 164
(ದೇವಚರರು ಹೇಳುತ್ತಾರೆ) ನಮ್ಮ ಪÉÊಕಿ ಪ್ರತಿಯೊಬ್ಬರ ಸ್ಥಾನವು ನಿಶ್ಚಿತವಿದೆ.
وَإِنَّا لَنَحْنُ الصَّافُّونَ ۝١٦٥
📖 ಅನುವಾದ ಆಯತ್ 165
ಮತ್ತು ನಾವು (ಅಲ್ಲಾಹನ ಆರಾಧನೆಯಲ್ಲಿ) ಪಂಕ್ತಿ ಬದ್ಧರಾಗಿ ನಿಂತಿರುವೆವು.
وَإِنَّا لَنَحْنُ الْمُسَبِّحُونَ ۝١٦٦
📖 ಅನುವಾದ ಆಯತ್ 166
ಮತ್ತು ಅವನ ಪಾವಿತ್ರö್ಯವನ್ನು ಸ್ತÄತಿಸುತ್ತಿರುವೆವು.
وَإِن كَانُوا لَيَقُولُونَ ۝١٦٧
📖 ಅನುವಾದ ಆಯತ್ 167
ಮತ್ತು ಸತ್ಯನಿಷೇಧಿಗಳು ಹೇಳುತ್ತಿದ್ದರು.
لَوْ أَنَّ عِندَنَا ذِكْرًا مِّنَ الْأَوَّلِينَ ۝١٦٨
📖 ಅನುವಾದ ಆಯತ್ 168
ನಮ್ಮ ಬಳಿ ಪೂರ್ವಿಕರ ಉದ್ಭೋಧನೆಯೇನಾದರೂ ಇರುತ್ತಿದ್ದರೆ.
لَكُنَّا عِبَادَ اللَّهِ الْمُخْلَصِينَ ۝١٦٩
📖 ಅನುವಾದ ಆಯತ್ 169
ನಾವು ಸಹ ಅಲ್ಲಾಹನ ನಿಷ್ಠಾವಂತದಾಸರಾಗುತ್ತಿದ್ದೆವು.
فَكَفَرُوا بِهِ ۖ فَسَوْفَ يَعْلَمُونَ ۝١٧٠
📖 ಅನುವಾದ ಆಯತ್ 170
ಆದರೆ ಅವರು ಈ ಕುರ್‌ಆನನ್ನು ನಿಷೇಧಿಸಿ ಬಿಟ್ಟರು. ಇನ್ನು ಸದ್ಯದಲ್ಲೇ ಅದರ ಪರಿಣಾಮವನ್ನು ಮನಗಾಣಲಿರುವರು.
وَلَقَدْ سَبَقَتْ كَلِمَتُنَا لِعِبَادِنَا الْمُرْسَلِينَ ۝١٧١
📖 ಅನುವಾದ ಆಯತ್ 171
ಮತ್ತು ನಿಸ್ಸಂದೇಹವಾಗಿಯು ನಮ್ಮ ದಾಸರಾದ ಸಂದೇಶವಾಹಕರಿಗೆ ಈ ಮೊದಲೇ ವಾಗ್ದಾನವಿತ್ತಿದ್ದೇವೆ.
إِنَّهُمْ لَهُمُ الْمَنصُورُونَ ۝١٧٢
📖 ಅನುವಾದ ಆಯತ್ 172
ನಿಶ್ಚಯವಾಗಿಯೂ ಅವರಿಗೆ ಸಹಾಯ ನೀಡಲಾಗುವುದು.
وَإِنَّ جُندَنَا لَهُمُ الْغَالِبُونَ ۝١٧٣
📖 ಅನುವಾದ ಆಯತ್ 173
ಖಂಡಿತವಾಗಿಯೂ ನಮ್ಮ ಸÉÊನ್ಯವೇ ವಿಜಯಿಯಾಗುವು ದೆಂದು.
فَتَوَلَّ عَنْهُمْ حَتَّىٰ حِينٍ ۝١٧٤
📖 ಅನುವಾದ ಆಯತ್ 174
ಓ (ಪೈಗಂಬರರೇ) ಆದುದರಿಂದ ಒಂದು ನಿರ್ಧಿಷ್ಟ ಅವಧಿಯವರೆಗೆ ಅವರನ್ನು ಕಡೆಗಣಿಸಿರಿ.
وَأَبْصِرْهُمْ فَسَوْفَ يُبْصِرُونَ ۝١٧٥
📖 ಅನುವಾದ ಆಯತ್ 175
ಮತ್ತು ಅವರನ್ನು ನೋಡುತ್ತಿರಿ ಸಧ್ಯವೇ ಅವರು ತಮ್ಮ ಪರಿಣಾಮವನ್ನು ನೋಡಲಿರುವರು.
أَفَبِعَذَابِنَا يَسْتَعْجِلُونَ ۝١٧٦
📖 ಅನುವಾದ ಆಯತ್ 176
ಅವರು ನಮ್ಮ ಯಾತನೆಗಾಗಿ ಆತುರ ಪಡುತ್ತಿದ್ದಾರೆಯೇ ?
فَإِذَا نَزَلَ بِسَاحَتِهِمْ فَسَاءَ صَبَاحُ الْمُنذَرِينَ ۝١٧٧
📖 ಅನುವಾದ ಆಯತ್ 177
ನಮ್ಮ ಶಿಕ್ಷೆಯು ಅವರ ಅಂಗಳಕ್ಕೆ ತಲುಪಿದಾಗ ಎಚ್ಚರಿಕೆ ನೀಡಲಾದವರ ಪ್ರಭಾತವು ಅತ್ಯಂತ ಕೆಟ್ಟದಾಗಲಿರುವುದು.
وَتَوَلَّ عَنْهُمْ حَتَّىٰ حِينٍ ۝١٧٨
📖 ಅನುವಾದ ಆಯತ್ 178
ಆದುದರಿಂದ ನೀವು ಒಂದು ನಿರ್ಧಿಷ್ಟ ಅವಧಿಯವರೆಗೆ ಅವರನ್ನು ಬಿಟ್ಟುಬಿಡಿರಿ.
وَأَبْصِرْ فَسَوْفَ يُبْصِرُونَ ۝١٧٩
📖 ಅನುವಾದ ಆಯತ್ 179
ಮತ್ತು ನೋಡುತ್ತಿರಿ. ಅವರು ಸಹ ಸದ್ಯದಲ್ಲೇ ನೋಡಲಿರುವರು.
سُبْحَانَ رَبِّكَ رَبِّ الْعِزَّةِ عَمَّا يَصِفُونَ ۝١٨٠
📖 ಅನುವಾದ ಆಯತ್ 180
ಮಹಾ ಪ್ರತಾಪಶಾಲಿಯಾದ ನಿಮ್ಮ ಪ್ರಭುವು ಇವರು ಆರೋಪಿಸುತ್ತಿರುವವುಗಳಿಂದ ಪರಮಪಾವನನು.
وَسَلَامٌ عَلَى الْمُرْسَلِينَ ۝١٨١
📖 ಅನುವಾದ ಆಯತ್ 181
ಸಂದೇಶವಾಹಕರ ಮೇಲೆ ಅಲ್ಲಾಹನ ಶಾಂತಿ ಇರುವುದು.
وَالْحَمْدُ لِلَّهِ رَبِّ الْعَالَمِينَ ۝١٨٢
📖 ಅನುವಾದ ಆಯತ್ 182
ಮತ್ತು ಸರ್ವಲೋಕಗಳ ಪ್ರಭುವಾದ ಅಲ್ಲಾಹನಿಗೆ ಸರ್ವ ಸ್ತುತಿಯು ಮೀಸಲು.
← 36 ಅಸ್-ಸಾಫ್ಫಾತ್ (37/114) 38 →
ಓದಿ ಸೂರಾ ಅಸ್-ಸಾಫ್ಫಾತ್ ಕನ್ನಡ ಅನುವಾದ – ಪಠಣ ಮತ್ತು ಆಡಿಯೋ

37الصافات As-Saffat 📚 182 ಆಯತ್ مكية

ಆಯತ್‌ವಾರು – ಸೂರಾ ಅಸ್-ಸಾಫ್ಫಾತ್ — 182 ಆಯತ್




ಪವಿತ್ರ ಕುರಾನ್


Monday, September 7, 2026

Don't forget us in your sincere prayers