ಸೂರಾ ಅರ್-ರೂಮ್ pdf — ಡೌನ್‌ಲೋಡ್ (ಕನ್ನಡ)
ಸೂರಾ ಅರ್-ರೂಮ್ pdf ಕನ್ನಡ — ಡೌನ್‌ಲೋಡ್ ಸೂರಾ ಅರ್-ರೂಮ್ ಅನುವಾದ. ಸೂರಾ ಅರ್-ರೂಮ್ (Meccan) 60 ಆಯತ್.
Related
- ಸೂರಾ ಅರ್-ರೂಮ್ ಅನುವಾದಕನ್ನಡ
- ಸೂರಾ ಅರ್-ರೂಮ್ mp3ಆಲಿಸಿ
- Quran Index ಕನ್ನಡ114
More ಸೂರಾ PDF
ಸೂರಾ ಅರ್-ರೂಮ್

ﮫﮬ
30:1
ಅಲೀಫ್ ಲಾಮ್ ಮೀಮ್.
ﮭﮮﮯ
30:2
ರೋಮನರು, ಅತೀ ಸಮೀಪದ ಪ್ರದೇಶದಲ್ಲಿ ಪರಾಜಿತರಾದರು.
ﮰﮱﯓﯔﯕﯖﯗﯘﯙ
30:3
ಹಾಗೂ ಅವರು ತಮ್ಮ ಪರಾಜಯದ ಬಳಿಕ ಕೆಲವೇ ವರ್ಷಗಳಲ್ಲಿ ವಿಜಯಗಳಿಸುವರು.
ﯚﯛﯜﯝﯞﯟﯠﯡﯢﯣﯤﯥﯦﯧﯨ
30:4
ಇದಕ್ಕೆ ಮೊದಲು ಇದರ ನಂತರವೂ ಆಜ್ಞಾಧಿಕಾರವು ಅಲ್ಲಾಹನದ್ದಾಗಿದೆ. ಅಂದು ಸತ್ಯವಿಶ್ವಾಸಿಗಳು ಅಲ್ಲಾಹನ ಸಹಾಯದಿಂದ ಹರ್ಷಗೊಳ್ಳುವರು.
ﯩﯪﯫﯬﯭﯮﯯﯰﯱﯲﯳ
30:5
ಅವನು ತಾನಿಚ್ಛಿಸಿದವರಿಗೆ ಸಹಾಯ ಮಾಡುತ್ತಾನೆ ಮತ್ತು ಅವನು ಮಹಾ ಪ್ರಚಂಡನೂ, ಕರುಣಾನಿಧಿಯೂ ಆಗಿದ್ದಾನೆ.
ﭑﭒﭓﭔﭕﭖﭗﭘﭙﭚﭛﭜﭝ
30:6
ಇದು ಅಲ್ಲಾಹನ ವಾಗ್ದಾನವಾಗಿದೆ. ಅಲ್ಲಾಹನು ತನ್ನ ವಾಗ್ದಾನವನ್ನು ಉಲ್ಲಂಘಿಸುವುದಿಲ್ಲ. ಆದರೆ ಹೆಚ್ಚಿನ ಜನರು ಅರಿಯುವುದಿಲ್ಲ.
ﭞﭟﭠﭡﭢﭣﭤﭥﭦﭧﭨ
30:7
ಅವರು ಇಹಲೋಕದ ಜೀವನದ ಬಾಹ್ಯ ಸಂಗತಿಯನ್ನು ಅರಿತುಕೊಂಡಿದ್ದಾರೆ ಆದರೆ ಅವರು ಪರಲೋಕದ ಬಗ್ಗೆ ತೀರ ಅಲಕ್ಷö್ಯರಾಗಿದ್ದಾರೆ.
ﭩﭪﭫﭬﭭﭮﭯﭰﭱﭲﭳﭴﭵﭶﭷﭸﭹﭺﭻﭼﭽﭾﭿﮀﮁ
30:8
ಅವರು ತಮ್ಮ ಮನಸ್ಸಿನಲ್ಲಿ ಆಲೋಚಿಸಲಿಲ್ಲವೇ? ಆಕಾಶಗಳನ್ನೂ, ಭೂಮಿಯನ್ನೂ ಮತ್ತು ಅವೆರಡರ ಮಧ್ಯೆಯಿರುವುದನ್ನು ಅಲ್ಲಾಹನು ಸತ್ಯಪೂರ್ಣವಾಗಿ ಒಂದು ನಿಶ್ಚಿತ ಕಾಲಾವಧಿಯವರೆಗೆ ಸೃಷ್ಟಿಸಿರುತ್ತಾನೆ. ಆದರೆ ವಾಸ್ತವದಲ್ಲಿ ಹೆಚ್ಚಿನ ಜನರು ತಮ್ಮ ಪ್ರಭುವಿನ ಭೇಟಿಯನ್ನು ನಿರಾಕರಿಸುವವರಾಗಿದ್ದಾರೆ.
ﮂﮃﮄﮅﮆﮇﮈﮉﮊﮋﮌﮍﮎﮏﮐﮑﮒﮓﮔﮕﮖﮗﮘﮙﮚﮛﮜﮝﮞﮟﮠﮡﮢﮣﮤ
30:9
ಅವರು ಭೂಮಿಯಲ್ಲಿ ಸಂಚರಿಸಿ ತಮಗಿಂತ ಮುಂಚಿನವರ ಪರಿಣಾಮವು ಹೇಗಾಯಿತೆಂಬುದನ್ನು ನೋಡಲಿಲ್ಲವೇ? ಅವರು ಇವರಿಗಿಂತ ಹೆಚ್ಚು ಬಲಿಷ್ಠರಾಗಿದ್ದರು. ಮತ್ತು ಅವರೂ ಭೂಮಿಯಲ್ಲಿ ವ್ಯವಸಾಯ ಮಾಡಿ ಫಲ ಪ್ರದಾಯಾವಾಗಿಸಿ ಇವರಿಗಿಂತ ಅಧಿಕವಾಗಿ ಸಂಪನ್ನಗೊಳಿಸಿದರು. ಮತ್ತು ಅವರ ಬಳಿಗೆ ಅವರ ಸಂದೇಶವಾಹಕರು ಸುಸ್ಪಷ್ಟ ಪುರಾವೆಗಳೊಂದಿಗೆ ಬಂದಿದ್ದರು. ಅಲ್ಲಾಹನು ಅವರಿಗೆ ಅನ್ಯಾಯ ಮಾಡಲಿಲ್ಲ. ಆದರೆ ಅವರು ತಮ್ಮ ಮೇಲೆ ಅನ್ಯಾಯ ಮಾಡುತ್ತಿದ್ದರು.
ﮥﮦﮧﮨﮩﮪﮫﮬﮭﮮﮯﮰﮱﯓ
30:10
ಅನಂತರ ದುಷ್ಕೃತ್ಯ ಮಾಡುತ್ತಿದ್ದವರ ಪರಿಣಾಮವು ಅತ್ಯಂತ ಕೆಟ್ಟದಾಯಿತು. ಇದೇಕೆಂದರೆ ಅವರು ಅಲ್ಲಾಹನ ದೃಷ್ಟಾಂತಗಳನ್ನು ನಿರಾಕರಿಸಿದರು ಮತ್ತು ಅವರು ಅವುಗಳ ಪರಿಹಾಸ್ಯ ಮಾಡುತ್ತಿದ್ದರು.
ﯔﯕﯖﯗﯘﯙﯚﯛﯜ
30:11
ಅಲ್ಲಾಹನೇ ಸೃಷ್ಟಿಯ ಆರಂಭ ಮಾಡುತ್ತಾನೆ. ಅನಂತರ ಅವನೇ ಅದನ್ನು ಪುನರಾವರ್ತಿಸುವನು. ತರುವಾಯ ನೀವೆಲ್ಲರೂ ಅವನೆಡೆಗೇ ಮರಳಿಸಲಾಗುವಿರಿ.
ﯝﯞﯟﯠﯡﯢ
30:12
ಮತ್ತು ಅಂತ್ಯ ಗಳಿಗೆ ಬರುವ ದಿನದಂದು ಅಪರಾಧಿಗಳು ನಿರಾಶರಾಗಿ ಬಿಡುವರು.
ﯣﯤﯥﯦﯧﯨﯩﯪﯫﯬ
30:13
ಮತ್ತು ಅವರು ಸಹಭಾಗಿಗಳನ್ನಾಗಿ ಮಾಡಿಕೊಂಡ ದೇವರುಗಳ ಪೈಕಿ ಯಾರೂ ಅವರಿಗೆ ಶಿಫಾರಸ್ಸುಗಾರರಾಗಲಾರರು. ಮತ್ತು ಅವರೂ ಸಹ ತಮ್ಮ ಸಹಭಾಗಿ ದೇವರುಗಳ ನಿಷೇಧಿಗಳಾಗಿ ಬಿಡುವರು.
ﯭﯮﯯﯰﯱﯲ
30:14
ಮತ್ತು ಅಂತ್ಯ ಗಳಿಗೆ ಬರುವ ದಿನ ಅಂದು ಅವರು (ಸತ್ಯವಿಶ್ವಾಸಿ ಹಾಗೂ ಸತ್ಯನಿಷೇಧಿಗಳು) ಬೇರೆ ಬೇರೆಯಾಗುವರು.
ﯳﯴﯵﯶﯷﯸﯹﯺﯻﯼ
30:15
ಆದರೆ ಸತ್ಯವಿಶ್ವಾಸವಿರಿಸಿ, ಸತ್ಕರ್ಮಗಳನ್ನು ಕೈಗೊಳ್ಳುವವರು ಒಂದು ಸ್ವರ್ಗೋದ್ಯಾನದಲ್ಲಿ ಹರ್ಷ ಉಲ್ಲಾಸದಲ್ಲಿರಿಸಲಾಗುವರು.
ﭑﭒﭓﭔﭕﭖﭗﭘﭙﭚﭛﭜ
30:16
ಮತ್ತು ಸತ್ಯನಿಷೇಧಿಸಿ, ನಮ್ಮ ಸೂಕ್ತಿಗಳನ್ನು ಮತ್ತು ಪರಲೋಕದ ಭೇಟಿಯನ್ನು ನಿರಾಕರಿಸಿದವರು ಯಾತನೆಯಲ್ಲಿ ಹಾಜರುಗೊಳಿಸಲಾಗುವರು.
ﭝﭞﭟﭠﭡﭢﭣ
30:17
ಆದ್ದರಿಂದ ನೀವು ಸಾಯಂಕಾಲದಲ್ಲೂ ಪ್ರಾತಃಕಾಲದಲ್ಲೂ ಅಲ್ಲಾಹನ ಪಾವಿತ್ರö್ಯವನ್ನು ಕೊಂಡಾಡಿರಿ.
ﭤﭥﭦﭧﭨﭩﭪﭫﭬ
30:18
ಆಕಾಶಗಳಲ್ಲೂ, ಭೂಮಿಯಲ್ಲೂ ಸರ್ವಸ್ತುತಿಗೆ ಅರ್ಹನು ಅವನೇ ಆಗಿದ್ದಾನೆ. ರಾತ್ರಿಯ ಪ್ರಥಮ ಹಂತದಲ್ಲೂ, ನೀವು ಮಧ್ಯಾಹ್ನದ ಹೊತ್ತಿನಲ್ಲೂ, (ಅವನ ಪಾವಿತ್ರö್ಯವನ್ನು ಕೊಂಡಾಡಿರಿ).
ﭭﭮﭯﭰﭱﭲﭳﭴﭵﭶﭷﭸﭹﭺﭻﭼ
30:19
(ಅವನೇ) ಸಜೀವಿಯನ್ನು ನಿರ್ಜೀವಿಯಿಂದಲೂ, ನಿರ್ಜೀವಿಯನ್ನು ಸಜೀವಿಯಿಂದಲೂ ಹೊರತೆಗೆಯುತ್ತಾನೆ ಮತ್ತು ಅವನೇ ಭೂಮಿಯನ್ನು ಅದರ ನಿರ್ಜೀವದ ಬಳಿಕ ಸಜೀವಗೊಳಿಸುತ್ತಾನೆ ಮತ್ತು ಇದೇ ಪ್ರಕಾರ ನೀವೂ (ಸಮಾಧಿಗಳಿಂದ) ಹೊರತರಲಾಗುವಿರಿ.
ﭽﭾﭿﮀﮁﮂﮃﮄﮅﮆﮇﮈ
30:20
ಅವನು ನಿಮ್ಮನ್ನು ಮಣ್ಣಿನಿಂದ ಸೃಷ್ಟಿಸಿರುವುದು. ಅನಂತರ ನೀವು ಮನುಷ್ಯರಾಗಿ ಭೂಮಿಯಲ್ಲಿ ಹಬ್ಬುತ್ತಿರುವುದು ಅವನ ನಿದರ್ಶನಗಳಲ್ಲೊಂದಾಗಿದೆ.
ﮉﮊﮋﮌﮍﮎﮏﮐﮑﮒﮓﮔﮕﮖﮗﮘﮙﮚﮛﮜﮝﮞ
30:21
ಮತ್ತು ಅವನು ನಿಮ್ಮ ವರ್ಗದಿಂದಲೇ ಜೋಡಿಗಳನ್ನು ಸೃಷ್ಟಿಸಿ ನೀವು ಅವರಿಂದ ಶಾಂತಿ ಹೊಂದಲೆAದು ಮತ್ತು ಅವನು ನಿಮ್ಮ ನಡುವೆ ಪ್ರೀತಿ ವಾತ್ಸಲ್ಯವನ್ನೂ ನಿಶ್ಚಯಿಸಿರುವುದು ಅವನ ನಿದರ್ಶನಗಳಲ್ಲೊಂದಾಗಿದೆ. ನಿಜವಾಗಿಯೂ ಇದರಲ್ಲಿ ಚಿಂತಕರಿಗೆ ಹಲವಾರು ನಿದರ್ಶನಗಳಿವೆ.
ﮟﮠﮡﮢﮣﮤﮥﮦﮧﮨﮩﮪﮫﮬﮭ
30:22
ಆಕಾಶಗಳ ಮತ್ತು ಭೂಮಿಯ ಸೃಷ್ಟಿ ಮತ್ತು ನಿಮ್ಮ ಭಾಷೆ ಹಾಗೂ ವರ್ಣ ವ್ಯತ್ಯಾಸವೂ ಅವನ ನಿದರ್ಶನಗಳಲ್ಲೊಂದಾಗಿದೆ. ಜ್ಞಾನಿಗಳಿಗೆ ಖಂಡಿತವಾಗಿಯು ಇದರಲ್ಲಿ ಹಲವಾರು ನಿದರ್ಶನಗಳಿವೆ.
ﮮﮯﮰﮱﯓﯔﯕﯖﯗﯘﯙﯚﯛﯜﯝﯞ
30:23
ನಿಮ್ಮ ಹಗಲು ಮತ್ತು ರಾತ್ರಿಯ ನಿದ್ರೆ ಹಾಗೂ ಅವನ ಅನುಗ್ರಹವನ್ನು ಅರಸುವುದೂ ಅವನ ನಿದರ್ಶನಗಳಲ್ಲೊಂದಾಗಿದೆ. ಗಮನವಿಟ್ಟು ಆಲಿಸುವ ಜನರಿಗೆ ನಿಜವಾಗಿಯೂ ಇದರಲ್ಲಿ ಹಲವಾರು ನಿದರ್ಶನಗಳಿವೆ.
ﯟﯠﯡﯢﯣﯤﯥﯦﯧﯨﯩﯪﯫﯬﯭﯮﯯﯰﯱﯲﯳﯴﯵ
30:24
ಅವನು ನಿಮಗೆ ಭಯ ಹಾಗೂ ನಿರೀಕ್ಷೆಯುಂಟಾಗಲು ಮಿಂಚನ್ನು ತೋರಿಸುವುದು ಮತ್ತು ಆಕಾಶದಿಂದ ಮಳೆಯನ್ನು ವರ್ಷಿಸಿ ಅದರ ಮೂಲಕ ಭೂಮಿಯನ್ನು ಅದರ ಮರಣದ ಬಳಿಕ ಸಜೀವಗೊಳಿಸುವುದೂ ಅವನ ನಿದರ್ಶನಗಳಲ್ಲೊಂದಾಗಿದೆ. ನಿಶ್ಚಯವಾಗಿಯೂ ಇದರಲ್ಲಿ ಬುದ್ಧಿವಂತರಿಗೆ ಅನೇಕ ನಿದರ್ಶನಗಳಿವೆ.
ﭑﭒﭓﭔﭕﭖﭗﭘﭙﭚﭛﭜﭝﭞﭟﭠﭡﭢ
30:25
ಆಕಾಶ ಮತ್ತು ಭೂಮಿಯು ಅವನ ಆದೇಶದ ಮೇರೆಗೆ ನೆಲೆ ನಿಂತಿರುವುದು ಅವನ ನಿದರ್ಶನಗಳಲ್ಲೊಂದಾಗಿದೆ. ತರುವಾಯ ಅವನು ನಿಮಗೆ ಕರೆಯೊಂದನ್ನು ನೀಡುವನು. ಕೂಡಲೇ ನೀವೆಲ್ಲರೂ ಭೂಮಿಯಿಂದ ಹೊರಟು ಬರುವಿರಿ.
ﭣﭤﭥﭦﭧﭨﭩﭪﭫﭬ
30:26
ಮತ್ತು ಆಕಾಶ, ಭೂಮಿಯಲ್ಲಿರುವವರು ಅವನದೇ ಅಧಿಪತ್ಯದಲ್ಲಿರುವರು ಮತ್ತು ಸಕಲರೂ ಅವನಿಗೆ ವಿಧೇಯರಾಗಿರುವರು.
ﭭﭮﭯﭰﭱﭲﭳﭴﭵﭶﭷﭸﭹﭺﭻﭼﭽﭾﭿﮀﮁ
30:27
ಮತ್ತು ಅವನೇ ಸೃಷ್ಟಿಯ ಆರಂಭ ಮಾಡುತ್ತಾನೆ. ಅನಂತರ ಅವನು ಅದನ್ನು ಪುನರಾವರ್ತಿಸುವನು. ಇದು ಅವನ ಪಾಲಿಗೆ ಅತ್ಯಂತ ಸರಳವಾಗಿದೆ. ಆಕಾಶಗಳಲ್ಲೂ, ಭೂಮಿಯಲ್ಲೂ ಅವನಿಗೆ ಸರ್ವ ಶ್ರೇಷ್ಠ ವಿಶೇಷತೆಯಿದೆ ಮತ್ತು ಅವನು ಪ್ರಚಂಡನೂ, ಸುಜ್ಞಾನಿಯೂ, ಆಗಿದ್ದಾನೆ.
ﮂﮃﮄﮅﮆﮇﮈﮉﮊﮋﮌﮍﮎﮏﮐﮑﮒﮓﮔﮕﮖﮗﮘﮙﮚﮛﮜﮝﮞﮟ
30:28
ಅಲ್ಲಾಹನು ನಿಮಗೆ ನಿಮ್ಮಿಂದಲೇ ಒಂದು ಉಪಮೆಯನ್ನು ನೀಡುತ್ತಾನೆ. ನಾವು ನಿಮಗೆ ದಯಪಾಲಿಸಿದ ಸಂಪತ್ತಿನಲ್ಲಿ ನಿಮ್ಮ ಗುಲಾಮರ ಪೈಕಿ ಯಾರಾದರೂ ನಿಮ್ಮ ಪಾಲುದಾರರಾಗಿದ್ದಾರೆಯೇ? ಹೀಗೆ ನೀವು ಅದರಲ್ಲಿ ಸಮಾನ ಪಾಲುಗಾರರಾಗಿದ್ದು ನೀವು ನಿಮ್ಮವರಿಂದ ಭಯಪಡುವಂತೆಯೇ ಅವರಿಂದಲೂ ಭಯಪಡುತ್ತಿರುವಿರಾ? ಇದೇ ಪ್ರಕಾರ ನಾವು ಚಿಂತಕರಿಗೆ ಸ್ಪಷ್ಟವಾಗಿ ವಿವರಿಸಿ ಕೊಡುತ್ತೇವೆ.
ﮠﮡﮢﮣﮤﮥﮦﮧﮨﮩﮪﮫﮬﮭﮮﮯﮰﮱﯓ
30:29
ಆದರೆ ಅಕ್ರಮಿಗಳು ಯಾವುದೇ ಜ್ಞಾನವಿಲ್ಲದೆಯೇ ತಮ್ಮ ಸ್ವೇಚ್ಛೆಗಳನ್ನು ಅನುಸರಿಸುತ್ತಿದ್ದಾರೆ. ಅಲ್ಲಾಹನು ದಾರಿತಪ್ಪಿಸಿದವರಿಗೆ ಸನ್ಮಾರ್ಗ ತೋರುವವನು ಯಾರು? ಮತ್ತು ಅವರಿಗೆ ಯಾವ ಸಹಾಯಕನೂ ಇರಲಾರನು.
ﯔﯕﯖﯗﯘﯙﯚﯛﯜﯝﯞﯟﯠﯡﯢﯣﯤﯥﯦﯧﯨﯩﯪﯫﯬﯭ
30:30
ಆದ್ದರಿಂದ ನೀವು ನಿಷ್ಠೆಯಿಂದ ನಿಮ್ಮ ಮುಖವನ್ನು ಧರ್ಮದೆಡೆಗೆ ಕೇಂದ್ರೀಕರಿಸಿರಿ. ಇದು ಅಲ್ಲಾಹನ ಪ್ರಕೃತಿಯಾಗಿದೆ; ಇದರಲ್ಲಿ ಅವನು ಜನರನ್ನು ಸೃಷ್ಟಿಸಿರುತ್ತಾನೆ. ಅಲ್ಲಾಹನ ಸೃಷ್ಟಿಗೆ ಯಾವುದೇ ಬದಲಾವಣೆಯಿಲ್ಲ. ಇದುವೇ ಋಜುವಾದ ಧರ್ಮವಾಗಿದೆ. ಆದರೆ ಹೆಚ್ಚಿನ ಜನರು ಅರಿತುಕೊಳ್ಳುವುದಿಲ್ಲ.
ﯮﯯﯰﯱﯲﯳﯴﯵﯶﯷﯸ
30:31
ನೀವು ಅಲ್ಲಾಹನೆಡೆಗೆ ಮರಳಿ ಅವನನ್ನು ಭಯಪಡುತ್ತಿರಿ ಮತ್ತು ನಮಾಝನ್ನು ಸಂಸ್ಥಾಪಿಸಿರಿ ಮತ್ತು ಬಹುದೇವಾರಾಧಕರೊಂದಿಗೆ ಸೇರಬೇಡಿರಿ.
ﯹﯺﯻﯼﯽﯾﯿﰀﰁﰂﰃﰄﰅ
30:32
ತಮ್ಮ ಧರ್ಮವನ್ನು ಭಿನ್ನ ವಿಭಿನ್ನವಾಗಿಸಿ ತಾವೇ ವಿವಿಧ ಗುಂಪುಗಳಾಗಿ ಬಿಟ್ಟವರಲ್ಲಿ (ಸೇರಿದಿರಿ). ಪ್ರತಿಯೊಂದು ಗುಂಪಿನವರುತಮ್ಮ ಬಳಿಯಿರುವುದರಲ್ಲಿ ಸಂತುಷ್ಟರಾಗಿದ್ದಾರೆ.
ﭑﭒﭓﭔﭕﭖﭗﭘﭙﭚﭛﭜﭝﭞﭟﭠﭡﭢﭣ
30:33
ಅವರಿಗೆ ಯಾವುದಾದರೂ ಸಂಕಷ್ಟವು ಬಾಧಿಸಿದರೆ ಅವರು ತಮ್ಮ ಪ್ರಭುವಿನೆಡೆಗೆ ಮರಳಿ ಅವನನ್ನೇ ಕರೆದು ಬೇಡುತ್ತಾರೆ. ನಂತರ ಅವನು ಅವರಿಗೆ ತನ್ನೆಡೆಯಿಂದ ಕಾರುಣ್ಯವನ್ನು ಸವಿಯುವಂತೆ ಮಾಡಿದರೆ ಅವರ ಪೈಕಿ ಒಂದು ತಂಡದವರು ನಾವು ಅವರಿಗೆ ದಯಪಾಲಿಸಿರುವುದಕ್ಕೆ ಅವರು ಕೃತಘ್ನತೆ ತೋರಲೆಂದು ತಮ್ಮ ಪ್ರಭುವಿನೊಂದಿಗೆ ಸಹಭಾಗಿಗಳನ್ನು ನಿಶ್ಚಯಿಸತೊಡಗುತ್ತಾರೆ.
ﭤﭥﭦﭧﭨﭩﭪﭫ
30:34
ಸರಿ, ನೀವು ಸುಖಭೋಗಗಳನ್ನು ಸವಿಯಿರಿ. ಬಹುಬೇಗನೇ ನೀವು ಅರಿತುಕೊಳ್ಳಲಿದ್ದೀರಿ.
ﭬﭭﭮﭯﭰﭱﭲﭳﭴﭵﭶ
30:35
ಇವರು ಅಲ್ಲಾಹನಿಗೆ ಸಹಭಾಗಿಯನ್ನಾಗಿ ನಿಶ್ಚಯಿಸುವಂತೆ ಹೇಳುವ ಯಾವುದಾದರೂ ಪುರಾವೆಯನ್ನು ನಾವು ಇವರ ಮೇಲೆ ಇಳಿಸಿರುತ್ತೇವೆಯೇ?
ﭷﭸﭹﭺﭻﭼﭽﭾﭿﮀﮁﮂﮃﮄﮅﮆﮇ
30:36
ಮತ್ತು ನಾವು ಜನರಿಗೆ ಕಾರುಣ್ಯವನ್ನು ಸವಿಯುವಂತೆ ಮಾಡಿದರೆ ಅವರು ಸಂತುಷ್ಟರಾಗುತ್ತಾರೆ ಮತ್ತು ಅವರಿಗೆ ಅವರ ಕೃತ್ಯಗಳ ನಿಮಿತ್ತ ಯಾವುದಾದರೂ ವಿಪತ್ತು ತಟ್ಟಿದರೆ ಅವರು ನಿರಾಶರಾಗುತ್ತಾರೆ.
ﮈﮉﮊﮋﮌﮍﮎﮏﮐﮑﮒﮓﮔﮕﮖﮗﮘ
30:37
ಅಲ್ಲಾಹನು ತಾನಿಚ್ಛಿಸಿದವರಿಗೆ ಜೀವನಾಧಾರವನ್ನು ವಿಶಾಲಗೊಳಿಸುತ್ತಾನೆ ಹಾಗೂ ತಾನಿಚ್ಛಿಸಿದವರಿಗೆ ಸೀಮಿತಗೊಳಿಸುತ್ತಾನೆಂಬುದನ್ನು ಅವರು ನೋಡಲಿಲ್ಲವೆ? ಇದರಲ್ಲೂ ವಿಶ್ವಾಸಿವಿರಿಸುವ ಜನರಿಗೆ ಹಲವಾರು ನಿದರ್ಶನಗಳಿವೆ.
ﮙﮚﮛﮜﮝﮞﮟﮠﮡﮢﮣﮤﮥﮦﮧﮨﮩﮪﮫ
30:38
ಆದುದರಿಂದ ನೀವು ಆಪ್ತ ಸಂಬAಧಿಕರಿಗೂ, ನಿರ್ಗತಿಕರಿಗೂ ಮತ್ತು ಪ್ರಯಾಣಿಕರಿಗೂ ಅವರ ಹಕ್ಕನ್ನು ನೀಡಿರಿ. ಇದು ಅಲ್ಲಾಹನ ಸಂತುಷ್ಟತೆ ಬಯಸುವವನ ಪಾಲಿಗೆ ಉತ್ತಮವಾಗಿದೆ ಮತ್ತು ಇವರೇ ಯಶಸ್ಸು ಹೊಂದುವವರಾಗಿರುತ್ತಾರೆ.
ﮬﮭﮮﮯﮰﮱﯓﯔﯕﯖﯗﯘﯙﯚﯛﯜﯝﯞﯟﯠﯡﯢﯣﯤ
30:39
ಅವರು ಸಂಪತ್ತುಗಳಿAದ ಅಭಿವೃದ್ಧಿ ಹೊಂದಲೆAದು ನೀವು ಬಡ್ಡಿಗೆ ಕೊಡುವುದೇನಿದ್ದರೂ ಅಲ್ಲಾಹನ ಬಳಿ ಅದು ಅಭಿವೃದ್ಧಿ ಹೊಂದಲಾರದು ಮತ್ತು ಅಲ್ಲಾಹನ ಸಂತೃಪ್ತಿ ಬಯಸಿ ಝಕಾತ್ ನೀಡಿದವರೇ ತಮ್ಮ ಸಂಪತ್ತನ್ನು ವೃದ್ಧಿಗೊಳಿಸುವವರಾಗಿದ್ದಾರೆ.
ﯥﯦﯧﯨﯩﯪﯫﯬﯭﯮﯯﯰﯱﯲﯳﯴﯵﯶﯷﯸﯹﯺﯻﯼﯽ
30:40
ಅಲ್ಲಾಹನೆಂದರೇ ನಿಮ್ಮನ್ನು ಸೃಷ್ಟಿಸಿದವನು. ತರುವಾಯ ಜೀವನಾಧಾರ ನೀಡಿದವನು ಅನಂತರ ನಿಮಗೆ ಮರಣ ನೀಡುವವನು. ಆಮೇಲೆ ನಿಮ್ಮನ್ನು ಸಜೀವಗೊಳಿಸುವವನಾಗಿದ್ದಾನೆ. ಆದರೆ ಇವುಗಳಲ್ಲಿ ಯಾವುದನ್ನಾದರೂ ಮಾಡುವ ನಿಮ್ಮ ಸಹಭಾಗಿ ದೇವರುಗಳಲ್ಲಿ ಯಾರಾದರು ಇದ್ದಾರೆಯೇ? ಅವನು ಪರಮ ಪಾವನನು ಮತ್ತು ಇವರು ಮಾಡುತ್ತಿರುವ ಸಕಲ ಸಹಭಾಗಿತ್ವದಿಂದ ಅವನು ಮಹೋನ್ನತನಾಗಿರುವನು.
ﯾﯿﰀﰁﰂﰃﰄﰅﰆﰇﰈﰉﰊﰋﰌﰍ
30:41
ಜನರ ಕೈಗಳು ಎಸಗಿದ ದುಷ್ಕೃತ್ಯಗಳ ನಿಮಿತ್ತ ನೆಲದಲ್ಲೂ, ಕಡಲಲ್ಲೂ ಕ್ಷೆÆÃಭೆಯು ಹರಡಿಬಿಟ್ಟಿದೆ. ಇದು ಅವರು ಎಸಗಿದ ಕೃತ್ಯಗಳ ಫಲವನ್ನು ಅವರು ಸವಿಯಲೆಂದಾಗಿದೆ. ಅವರು ಮರಳಲೂಬಹುದು.
ﭑﭒﭓﭔﭕﭖﭗﭘﭙﭚﭛﭜﭝﭞﭟﭠ
30:42
ಹೇಳಿರಿ: ನೀವು ಭೂಮಿಯಲ್ಲಿ ಸಂಚರಿಸಿ ನಿಮಗಿಂತ ಮುಂಚೆ ಗತಿಸಿದವರ ಪರಿಣಾಮವು ಹೇಗಾಯಿತೆಂಬುದನ್ನು ನೋಡಿರಿ. ಅವರಲ್ಲಿ ಹೆಚ್ಚಿನವರು ಬಹುದೇವಾರಾಧಕರಾಗಿದ್ದರು.
ﭡﭢﭣﭤﭥﭦﭧﭨﭩﭪﭫﭬﭭﭮﭯﭰﭱﭲ
30:43
ಆದ್ದರಿಂದ ಯಾರಿಂದಲೂ ತಡೆಯಲಾಗದಂತಹ ಒಂದು ದಿನ ಅಲ್ಲಾಹನ ಕಡೆಯಿಂದ ಬರುವುದಕ್ಕೆ ಮುಂಚೆ ನೀವು ನಿಮ್ಮ ಮುಖವನ್ನು ರುಜುವಾದ ಧರ್ಮದೆಡೆಗೇ ಕೇಂದ್ರೀಕರಿಸಿರಿ. ಆ ದಿನ ಜನರೆಲ್ಲರೂ ವಿಭಿನ್ನ ಗುಂಪುಗಳಾಗಿ ಬಿಡುವರು.
ﭳﭴﭵﭶﭷﭸﭹﭺﭻﭼﭽ
30:44
ಸತ್ಯನಿಷೇಧ ತಾಳುವವರ ಮೇಲೆ ಅವರ ಸತ್ಯನಿಷೇಧದ ವಿಪತ್ತು ಇರುವುದು ಮತ್ತು ಸತ್ಕರ್ಮಗಳನ್ನು ಕೈಗೊಳ್ಳುವವರು ತಮ್ಮದೇ ಒಳಿತಿನ ಮಾರ್ಗವನ್ನು ಸುಗಮಗೊಳಿಸುತ್ತಿದ್ದಾರೆ.
ﭾﭿﮀﮁﮂﮃﮄﮅﮆﮇﮈﮉﮊ
30:45
ಇದು ಸತ್ಯವಿಶ್ವಾಸಿವಿರಿಸಿ, ಸತ್ಕರ್ಮಗಳನ್ನು ಕೈಗೊಂಡವರಿಗೆ ಅಲ್ಲಾಹನು ತನ್ನ ಅನುಗ್ರಹದಿಂದ ಪ್ರತಿಫಲವನ್ನು ನೀಡಲೆಂದಾಗಿದೆ. ಖಂಡಿತವಾಗಿಯೂ ಅವನು ಸತ್ಯನಿಷೇಧಿಗಳನ್ನು ಮೆಚ್ಚುವುದಿಲ್ಲ.
ﮋﮌﮍﮎﮏﮐﮑﮒﮓﮔﮕﮖﮗﮘﮙﮚﮛﮜ
30:46
(ಮಳೆಯ) ಸುವಾರ್ತೆಯನ್ನು ನೀಡುವಂತಹ ಮಾರುತಗಳನ್ನು ಕಳುಹಿಸುವುದು ಅವನ ನಿದರ್ಶನಗಳಲ್ಲೊಂದಾಗಿದೆ. ಇದು ಅವನು ಅವರಿಗೆ ತನ್ನ ಕಾರುಣ್ಯದ ಸವಿಯನ್ನುಣ್ಣಿಸಲೆಂದೂ ಅವನ ಆದೇಶದ ಮೇರೆಗೆ ಹಡಗು ಸಂಚರಿಸಲೆAದೂ ಅವನ ಅನುಗ್ರಹವನ್ನು ನೀವು ಅರಸಲೆಂದೂ ಮತ್ತು ನೀವು ಕೃತಜ್ಞತೆ ಸಲ್ಲಿಸಲೆಂದೂ ಆಗಿದೆ.
ﮝﮞﮟﮠﮡﮢﮣﮤﮥﮦﮧﮨﮩﮪﮫﮬﮭﮮﮯﮰ
30:47
ನಿಶ್ಚಯವಾಗಿಯು ನಾವು ನಿಮಗಿಂತ ಮುಂಚೆ ಅನೇಕ ಸಂದೇಶವಾಹಕರನ್ನು ಅವರ ಜನಾಂಗಗಳೆಡೆಗೆ ಕಳುಹಿಸಿದ್ದೆವು. ಅವರು (ಪೈಗಂಬರರು) ಅವರ ಬಳಿಗೆ ಸುಸ್ಪಷ್ಟ ಪುರಾವೆಗಳನ್ನು ತಂದಿದ್ದರು. ಅನಂತರ ನಾವು ಆ ಅಪರಾಧಿಗಳೊಂದಿಗೆ ಪ್ರತಿಕಾರ ಪಡೆದೆವು. ಸತ್ಯವಿಶ್ವಾಸಿಗಳಿಗೆ ನೆರವಾಗುವುದು ನಮ್ಮ ಹೊಣೆಯಾಗಿದೆ.
ﮱﯓﯔﯕﯖﯗﯘﯙﯚﯛﯜﯝﯞﯟﯠﯡﯢﯣﯤﯥﯦﯧﯨﯩﯪﯫﯬﯭﯮﯯ
30:48
ಅಲ್ಲಾಹನು ಮಾರುತಗಳನ್ನು ಕಳುಹಿಸುತ್ತಾನೆ. ಅವುಗಳು ಮೋಡಗಳನ್ನು ಹೊತ್ತುಕೊಳ್ಳುತ್ತವೆ. ಅನಂತರ ಅಲ್ಲಾಹನು ತನ್ನಇಚ್ಛೆಯ ಪ್ರಕಾರ ಅವುಗಳನ್ನು ಆಕಾಶದಲ್ಲಿ ಹಬ್ಬಿಸುತ್ತಾನೆ ಮತ್ತು ಅವುಗಳನ್ನು ತುಣುಕು ತುಣುಕುಗಳನ್ನಾಗಿ ಮಾಡುತ್ತಾನೆ. ಅನಂತರ ನೀವು ಅವುಗಳಿಂದ ಮಳೆ ಹನಿಗಳು ಹೊರಬರುವುದನ್ನು ಕಾಣುವಿರಿ ಮತ್ತು ಅಲ್ಲಾಹನು ಇಚ್ಛಿಸುವ ತನ್ನ ದಾಸರ ಮೇಲೆ ಅದನ್ನು ವರ್ಷಿಸಿದಾಗ ಅವರು ಹರ್ಷಗೊಳ್ಳುವರು.
ﯰﯱﯲﯳﯴﯵﯶﯷﯸﯹﯺ
30:49
ವಸ್ತುತಃ ಅವರು ತಮ್ಮ ಮೇಲೆ ಮಳೆ ಸುರಿಯವ ಮುನ್ನ ಹತಾಶರಾಗಿದ್ದರು.
ﯻﯼﯽﯾﯿﰀﰁﰂﰃﰄﰅﰆﰇﰈﰉﰊﰋﰌﰍﰎﰏﰐ
30:50
ಆದ್ದರಿಂದ ನೀವು ಅಲ್ಲಾಹನ ಕಾರುಣ್ಯದ ಕುರುಹುಗಳನ್ನು ನೋಡಿರಿ. ಅಲ್ಲಾಹನು ಭೂಮಿಯನ್ನು ಅದರ ನಿರ್ಜೀವದ ಬಳಿಕ ಅದನ್ನು ಹೇಗೆ ಸಜೀವಗೊಳಿಸುತ್ತಾನೆ. ನಿಸ್ಸಂಶಯವಾಗಿಯೂ ಅವನೇ ಮೃತರನ್ನು ಜೀವಂತಗೊಳಿಸುವವನಾಗಿದ್ದಾನೆ ಮತ್ತು ಅವನು ಸಕಲ ವಸ್ತುಗಳ ಮೇಲೆ ಸಾಮರ್ಥ್ಯವುಳ್ಳವನಾಗಿದ್ದಾನೆ.
ﭑﭒﭓﭔﭕﭖﭗﭘﭙﭚ
30:51
ಮತ್ತು ನಾವು ಪ್ರತಿಕೂಲ ಮಾರುತವನ್ನು ಕಳುಹಿಸಿದರೆ (ಇದರಕಾರಣ) ಅವರು ಹೊಲಗಳನ್ನು ತನ್ಮೂಲಕ (ಬಾಡಿ) ಹಳದಿಯಾಗಿ ಕಂಡಾಗ ಖಂಡಿತ ಅವರು ಅದರ ನಂತರ ಕೃತಘ್ನತೆ ತೋರುವರು.
ﭛﭜﭝﭞﭟﭠﭡﭢﭣﭤﭥﭦ
30:52
ನಿಸ್ಸಂದೇಹವಾಗಿಯೂ ನೀವು ಮೃತರನ್ನು ಕೇಳಿಸಲಾರಿರಿ ಮತ್ತು ಬೆನ್ನು ತಿರುಗಿಸಿ ಹೋಗುತ್ತಿರುವ ಕಿವುಡರಿಗೆ ಕೇಳಿಸಲಾರಿರಿ;
ﭧﭨﭩﭪﭫﭬﭭﭮﭯﭰﭱﭲﭳﭴﭵﭶ
30:53
ನೀವು ಕುರುಡರನ್ನು ಅವರ ಪಥಭ್ರಷ್ಟತೆಯಿಂದ ಸನ್ಮಾರ್ಗಕ್ಕೆ ಮುನ್ನಡೆಸುವವರಲ್ಲ. ನೀವು ಕೇವಲ ನಮ್ಮ ದೃಷ್ಟಾಂತಗಳನ್ನು ವಿಶ್ವಾಸವಿರಿಸುವವರಿಗೆ ಕೇಳಿಸಬಲ್ಲಿರಿ. ಆದ್ದರಿಂದ ಅವರೇ ವಿಧೇಯತೆ ತೋರುವವರಾಗಿದ್ದಾರೆ.
ﭷﭸﭹﭺﭻﭼﭽﭾﭿﮀﮁﮂﮃﮄﮅﮆﮇﮈﮉﮊﮋﮌﮍﮎﮏﮐﮑﮒ
30:54
ನಿಮ್ಮನ್ನು ಬಲಹೀನ ಸ್ಥಿತಿಯಲ್ಲಿ ಸೃಷ್ಟಿಸಿದವನು ಅಲ್ಲಾಹನು. ತರುವಾಯ ಆ ಬಲಹೀನತೆಯ ನಂತರ ಶಕ್ತರನ್ನಾಗಿ ಮಾಡಿದನು. ನಂತರ ಆ ಶಕ್ತಿಯ ಬಳಿಕ ಬಲಹೀನತೆ ಮತ್ತು ವೃದ್ಧಾಪ್ಯವನ್ನು ನಿಶ್ಚಯಿಸಿದನು. ಅವನು ತಾನಿಚ್ಛಿಸಿದ್ದನ್ನು ಸೃಷ್ಟಿಸುತ್ತಾನೆ ಮತ್ತು ಅವನು ಸಂಪೂರ್ಣ ಅರಿವುಳ್ಳವನೂ, ಸರ್ವಶಕ್ತನೂ ಆಗಿರುವನು.
ﮓﮔﮕﮖﮗﮘﮙﮚﮛﮜﮝﮞﮟﮠ
30:55
ಅಂತ್ಯ ಗಳಿಗೆ ಸಂಭವಿಸುವ ದಿನ ಅಪರಾಧಿಗಳು ನಾವು (ಭೂಲೋಕದಲ್ಲಿ) ಒಂದು ಗಳಿಗೆಗಿಂತ ಹೆಚ್ಚು ಕಾಲ ತಂಗಿರಲಿಲ್ಲವೆAದು ಆಣೆ ಹಾಕಲಿದ್ದಾರೆ. ಇದೇ ಪ್ರಕಾರ ಅವರು ದಾರಿತಪ್ಪಿದವರಾಗಿಯೇ ಇದ್ದರು.
ﮡﮢﮣﮤﮥﮦﮧﮨﮩﮪﮫﮬﮭﮮﮯﮰﮱﯓﯔﯕﯖﯗ
30:56
ಜ್ಞಾನ ಹಾಗೂ ಸತ್ಯವಿಶ್ವಾಸ ನೀಡಲಾದವರು ಉತ್ತರಿಸುವರು: ನೀವಂತು ಅಲ್ಲಾಹನ ದಾಖಲೆಯಲ್ಲಿರುವ ಪ್ರಕಾರ ಪುನರುತ್ಥಾನ ದಿನದವರೆಗೆ ತಂಗಿರುವಿರಿ. ಇದೇ ಪುನರುತ್ಥಾನದ ದಿನವಾಗಿದೆ. ಆದರೆ ನೀವು ತಿಳಿದಿರಲಿಲ್ಲ.
ﯘﯙﯚﯛﯜﯝﯞﯟﯠﯡ
30:57
ಆದ್ದರಿಂದ ಆ ದಿನ ಅಕ್ರಮವೆಸಗಿದವರಿಗೆ ಅವರ ನೆಪಗಳು ಪ್ರಯೋಜನ ನೀಡದು ಮತ್ತು ಅವರಿಂದ ಪಶ್ಚಾತ್ತಾಪ ಪಡಲೂ ಹೇಳಲಾಗದು.
ﯢﯣﯤﯥﯦﯧﯨﯩﯪﯫﯬﯭﯮﯯﯰﯱﯲﯳﯴﯵﯶ
30:58
ನಿಸ್ಸಂಶಯವಾಗಿಯು ನಾವು ಈ ಕುರ್‌ಆನಿನಲ್ಲಿ ಜನರ ಮಾರ್ಗದರ್ಶನಕ್ಕಾಗಿ ಎಲ್ಲಾ ತರಹದ ಉಪಮೆಗಳನ್ನು ವಿವರಿಸಿ ಕೊಟ್ಟಿದ್ದೇವೆ ಮತ್ತು ನೀವು ಅವರ ಬಳಿಗೆ ಯಾವ ದೃಷ್ಟಾಂತವನ್ನು ತಂದರೂ ಈ ಸತ್ಯನಿಷೇಧಿಗಳು ನೀವು ಮಿಥ್ಯವಾದಿಗಳಾಗಿರುವಿರಿ ಎನ್ನುವರು.
ﯷﯸﯹﯺﯻﯼﯽﯾﯿ
30:59
ಇದೇ ಪ್ರಕಾರ ಅಲ್ಲಾಹನು ಅಜ್ಞಾತ ಜನರ ಹೃದಯಗಳ ಮೇಲೆ ಮುದ್ರೆಯೊತ್ತಿ ಬಿಡುವನು.
ﰀﰁﰂﰃﰄﰅﰆﰇﰈﰉﰊﰋ
30:60
ಇನ್ನು ನೀವು ಸಹನೆವಹಿಸಿರಿ. ನಿಜವಾಗಿಯು ಅಲ್ಲಾಹನ ವಾಗ್ದಾನವು ಸತ್ಯವಾಗಿದೆ ಮತ್ತು ದೃಢವಿಶ್ವಾಸವಿಲ್ಲದವರು ನಿಮ್ಮನ್ನು ಚಂಚಲಗೊಳಿಸದಿರಲಿ.
ಪವಿತ್ರ ಕುರಾನ್
Wednesday, September 9, 2026
Don't forget us in your sincere prayers







