ಸೂರಾ ಅಲ್-ಮುಲ್ಕ್ pdf — ಡೌನ್‌ಲೋಡ್ (ಕನ್ನಡ)
ಸೂರಾ ಅಲ್-ಮುಲ್ಕ್ pdf ಕನ್ನಡ — ಡೌನ್‌ಲೋಡ್ ಸೂರಾ ಅಲ್-ಮುಲ್ಕ್ ಅನುವಾದ. ಸೂರಾ ಅಲ್-ಮುಲ್ಕ್ (Meccan) 30 ಆಯತ್.
Related
- ಸೂರಾ ಅಲ್-ಮುಲ್ಕ್ ಅನುವಾದಕನ್ನಡ
- ಸೂರಾ ಅಲ್-ಮುಲ್ಕ್ mp3ಆಲಿಸಿ
- Quran Index ಕನ್ನಡ114
More ಸೂರಾ PDF
ಸೂರಾ ಅಲ್-ಮುಲ್ಕ್

ﭑﭒﭓﭔﭕﭖﭗﭘﭙﭚ
67:1
ಅಧಿಪತ್ಯವು ಯಾರ ಕೈಯಲ್ಲಿದೆಯೋ ಅವನು(ಅಲ್ಲಾಹ) ಮಹಾ ಸಮೃದ್ಧನಾಗಿರುವನು, ಅವನು ಸಕಲ ವಸ್ತುಗಳ ಮೇಲೆ ಸಾರ‍್ಥ್ಯವುಳ್ಳವನಾಗಿ ರುವನು.
ﭛﭜﭝﭞﭟﭠﭡﭢﭣﭤﭥﭦﭧ
67:2
ನಿಮ್ಮ ಪೈಕಿ ಉತ್ತಮ ರ‍್ಮವೆಸಗುವವರು ಯಾರೆಂದು ಪರೀಕ್ಷಿಸುವ ಸಲುವಾಗಿ ಅವನು ಮರಣ ಮತ್ತು ಜೀವನವನ್ನು ಸೃಷ್ಟಿಸಿದನು. ಅವನು ಪ್ರತಾಪಶಾಲಿಯು ಕ್ಷಮಾಶೀಲನು ಆಗಿದ್ದಾನೆ.
ﭨﭩﭪﭫﭬﭭﭮﭯﭰﭱﭲﭳﭴﭵﭶﭷﭸﭹﭺﭻﭼ
67:3
ಅವನು ಏಳು ಆಕಾಶಗಳನ್ನು ಅಂತಸ್ತುಗಳಾಗಿ ಸೃಷ್ಟಿಸಿದನು ಪರಮ ದಯಾಮಯನ ಸೃಷ್ಟಿಯಲ್ಲಿ ನೀವು ಯಾವ ಅವ್ಯವಸ್ಥೆಯನ್ನೂ ಕಾಣಲಾರಿರಿ. ಮತ್ತೊಮ್ಮೆ ದೃಷ್ಟಿ ಹಾಯಿಸಿ ನೋಡಿ, ಯಾವುದಾದರೂ ಬಿರುಕನ್ನು ಕಾಣುತ್ತಿರುವಿರಾ ?
ﭽﭾﭿﮀﮁﮂﮃﮄﮅﮆﮇ
67:4
ತರುವಾಯ ಆರ‍್ತಿಸಿ ಮತ್ತೆ ಮತ್ತೆ ನೋಡಿ, ದೃಷ್ಟಿಯು ನಿಮ್ಮೆಡೆಗೆ ಸೋತು ವಿವಶವಾಗಿ ಮರಳುವುದು.
ﮈﮉﮊﮋﮌﮍﮎﮏﮐﮑﮒﮓﮔﮕ
67:5
ನಿಸ್ಸಂಶಯವಾಗಿಯೂ ಜಗದ ಆಕಾಶವನ್ನು ನಾವು ದೀಪ(ನಕ್ಷತ್ರ)ಗಳಿಂದ ಅಲಂಕರಿಸಿದ್ದೇವೆ ಮತ್ತು ಅವುಗಳನ್ನು ಶೈತಾನರಿಗೆ ಒದ್ದೋಡಿಸುವ ಸಾಧನವನ್ನಾಗಿ ಮಾಡಿದ್ದೇವೆ ಶೈತಾನರಿಗೆ ನಾವು ಧಗಧಗಿಸುವ ನರಕ ಶಿಕ್ಷೆಯನ್ನು ಸಜ್ಜುಗೊಳಿಸಿದ್ದೇವೆ.
ﮖﮗﮘﮙﮚﮛﮜﮝﮞ
67:6
ಯಾರು ತಮ್ಮ ಪ್ರಭುವನ್ನು ನಿಷೇಧಿಸುತ್ತಾರೋ ಅವರಿಗೆ ನರಕ ಶಿಕ್ಷೆಯಿದೆ ಮತ್ತು ಅದೆಷ್ಟು ನಿಕೃಷ್ಟ ತಾಣವಾಗಿದೆ ?
ﮟﮠﮡﮢﮣﮤﮥﮦﮧ
67:7
ಅವರು ನರಕಕ್ಕೆ ಎಸೆಯಲಾದಾಗ ಅದರ ಘೋರ ರ‍್ಜನೆಯನ್ನು ಕೇಳುವರು ಮತ್ತು ಅದು ಭರ‍್ಗರೆಯುತ್ತಿರುವುದು.
ﮨﮩﮪﮫﮬﮭﮮﮯﮰﮱﯓﯔﯕﯖﯗ
67:8
ಕ್ರೋಧಾವೇಶದಿಂದ ಅದು ಸಿಡಿದು ಬೀಳುವಂತಿರುವುದು ಪ್ರತಿಯೊಂದು ಬಾರಿ ಅದರೊಳಗೆ ಯಾವುದಾದರೂ ಗುಂಪನ್ನು ಹಾಕಲಾದಾಗ ಅದರ ಕಾವಲುಗಾರರು ಅವರೊಡನೆ; ನಿಮ್ಮ ಬಳಿಗೆ ಮುನ್ನೆಚ್ಚರಿಕೆ ನೀಡುರ‍್ಯಾರು ಬಂದಿರಲಿಲ್ಲವೇ ? ಎಂದು ಕೇಳುವರು ?
ﯘﯙﯚﯛﯜﯝﯞﯟﯠﯡﯢﯣﯤﯥﯦﯧﯨﯩﯪ
67:9
ಅವರು ಹೇಳುವರು ಯಾಕಿಲ್ಲ ನಿಸ್ಸಂಶಯವಾಗಿಯೂ ಮುನ್ನೆಚ್ಚರಿಕೆ ನೀಡುವವರು ನಮ್ಮ ಬಳಿ ಬಂದಿದ್ದರು. ಆದರೆ ನಾವು ಅವರನ್ನು ನಿಷೇಧಿಸಿದೆವು ಮತ್ತು ಅಲ್ಲಾಹನು ಏನನ್ನೂ ಅವತರ‍್ಣಗೊಳಿಸಿಲ್ಲ, ನೀವು ಬಹುದೊಡ್ಡ ಪಥಭ್ರಷ್ಟತೆಯಲ್ಲಿರುವಿರಿ ಎಂದು ನಾವು ಹೇಳಿದೆವು.
ﯫﯬﯭﯮﯯﯰﯱﯲﯳﯴﯵﯶ
67:10
ಮತ್ತು ಹೇಳುವರು; ನಾವು ಆಲಿಸಿರುತ್ತಿದ್ದರೆ ಮತ್ತು ಗ್ರಹಿಸಿರುತ್ತಿದ್ದರೆ, ನರಕ ವಾಸಿಗಳಲ್ಲಾಗುತ್ತಿರಲಿಲ್ಲ ಎಂದು ಅವರು ಹೇಳುವರು.
ﯷﯸﯹﯺﯻﯼ
67:11
ಹೀಗೆ ಅವರು ತಮ್ಮ ತಪ್ಪನ್ನು ಒಪ್ಪಿಕೊಳ್ಳುವರು, ಆ ನರಕವಾಸಿಗಳಿಗೆ ಶಾಪವಿರಲಿ.
ﯽﯾﯿﰀﰁﰂﰃﰄﰅﰆ
67:12
ಯಾರು ತಮ್ಮ ಪ್ರಭುವನ್ನು ಅಗೋಚರವಾಗಿ ಭಯಪಡುತ್ತಾರೋ ಅವರಿಗೆ ಕ್ಷಮೆಯು ಮತ್ತು ಮಹಾ ಪ್ರತಿಫಲವಿದೆ.
ﭑﭒﭓﭔﭕﭖﭗﭘﭙﭚﭛ
67:13
ನೀವು ನಿಮ್ಮ ಮಾತನ್ನು ರಹಸ್ಯವಾಗಿಡಿರಿ ಅಥವಾ ಬಹಿರಂಗ ಪಡಿಸಿರಿ, ಖಂಡಿತವಾಗಿಯೂ ಅವನು ಹೃದಯಗಳಲ್ಲಿರು ವುದನ್ನೂ ಚೆನ್ನಾಗಿ ಅರಿಯುತ್ತಾನೆ.
ﭜﭝﭞﭟﭠﭡﭢﭣ
67:14
ಏನು ಸೃಷ್ಟಿಸಿದವನೇ ಅರಿಯದಿರುವನೇ ? ಅವನು ಸೂಕ್ಷö್ಮಜ್ಞಾನಿಯೂ, ವಿವರ ಪರ‍್ಣನೂ ಆಗಿದ್ದಾನೆ.
ﭤﭥﭦﭧﭨﭩﭪﭫﭬﭭﭮﭯﭰﭱﭲﭳ
67:15
ಅವನೇ ನಿಮಗೆ ಭೂಮಿಯನ್ನು ಅಧೀನಗೊಳಿಸಿದವನು ಆದ್ದರಿಂದ ನೀವು ಅದರ ಮರ‍್ಗಗಳಲ್ಲಿ ಸಂಚರಿಸಿರಿ ಮತ್ತು ಅವನು ದಯಪಾಲಿಸಿದ ಆಹಾರದಿಂದ ಸೇವಿಸಿರಿ, ನೀವು ಮರಣದ ನಂತರ ಅವನೆಡೆಗೆ ಎಬ್ಬಿಸಿ ಮರಳಿಸಲಾಗುವಿರಿ.
ﭴﭵﭶﭷﭸﭹﭺﭻﭼﭽﭾﭿ
67:16
ಏನು ಆಕಾಶದಲ್ಲಿರುವ ಅಲ್ಲಾಹನು ನಿಮ್ಮನ್ನು ಭೂಮಿಯಲ್ಲಿ ಹುದುಗಿ ಬಿಡುವುದರ ಕುರಿತು ನೀವು ನರ‍್ಭಯರಾಗಿರುವಿರಾ ? ಆಗ ಅದು ಹಠಾತ್ತನೆ ಕಂಪಿಸತೊಡಗುವುದು.
ﮀﮁﮂﮃﮄﮅﮆﮇﮈﮉﮊﮋﮌﮍ
67:17
ಅಥವಾ ಆಕಾಶದಲ್ಲಿರುವವನು ನಿಮ್ಮ ಮೇಲೆ ಕಲ್ಲು ಮಳೆಯನ್ನು ಸುರಿಸುವುದರ ಕುರಿತು ನೀವು ನರ‍್ಭಯರಾಗಿರುವಿರಾ ? ಆಗ ನನ್ನ ಎಚ್ಚರಿಕೆ ಹೇಗಿತ್ತೆಂದು ನಿಮಗೆ ತಿಳಿಯಲಿರುವುದು.
ﮎﮏﮐﮑﮒﮓﮔﮕﮖ
67:18
ನಿಶ್ಚಯವಾಗಿಯೂ ಅವರಿಗಿಂತ ಮುಂಚಿನವರೂ (ಸಂದೇಶವನ್ನು) ಸುಳ್ಳಾಗಿಸಿದ್ದರು. ಆಗ ನನ್ನ ಶಿಕ್ಷೆ ಹೇಗಿತ್ತೆಂಬುದನ್ನು ನೋಡಿರಿ.
ﮗﮘﮙﮚﮛﮜﮝﮞﮟﮠﮡﮢﮣﮤﮥﮦﮧﮨ
67:19
ಅವರು ತಮ್ಮ ಮೇಲೆ ರೆಕ್ಕೆಯನ್ನು ಬಿಚ್ಚಿ ಮತ್ತು ಮಡಚಿ ಹಾರುವ ಹಕ್ಕಿಗಳೆಡೆಗೆ ನೋಡಲಿಲ್ಲವೇ ? ಪರಮ ದಯಾಮಯನ ಹೊರತು ಅವುಗಳನ್ನು ಯಾರೂ ಆಧರಿಸಿಲ್ಲ. ನಿಸ್ಸಂಶಯವಾಗಿಯೂ ಅವನು ಸಕಲ ವಸ್ತುಗಳ ವೀಕ್ಷಕನಾಗಿರುವನು.
ﮩﮪﮫﮬﮭﮮﮯﮰﮱﯓﯔﯕﯖﯗﯘﯙﯚ
67:20
ಪರಮ ದಯಾಮಯನ ಎದುರು ನಿಮಗೆ ಸಹಾಯ ಮಾಡಬಹುದಾದಂತಹ ಸೈನ್ಯವು ನಿಮ್ಮ ಬಳಿ ಯಾವುದಿದೆ ? ಸತ್ಯನಿಷೇಧಿಗಳು ವಂಚನೆಯಲ್ಲಿ ಸಿಲುಕಿಕೊಂಡಿದ್ದಾರೆ.
ﯛﯜﯝﯞﯟﯠﯡﯢﯣﯤﯥﯦﯧﯨ
67:21
ಪರಮ ದಯಾಮಯನು ತನ್ನ ಜೀವನಾಧಾರವನ್ನು ತಡೆಹಿಡಿದರೆ ನಿಮಗೆ ಜೀವನಾಧಾರವನ್ನು ನೀಡುವವನು ಯಾರಿದ್ದಾನೆ ? ಹಾಗಲ್ಲ ಸತ್ಯನಿಷೇಧಿಗಳಂತು ಧಿಕ್ಕಾರ ಮತ್ತು ತಿರಸ್ಕಾರಕ್ಕೆ ಅಂಟಿಕೊಂಡಿದ್ದಾರೆ.
ﯩﯪﯫﯬﯭﯮﯯﯰﯱﯲﯳﯴﯵ
67:22
ಅಧೋಮುಖಿಯಾಗಿ ಚಲಿಸುವವನು ಹೆಚ್ಚು ಸನ್ಮರ‍್ಗದಲ್ಲಿರುವನೇ? ಅಥವಾ ನೇರವಾಗಿ ಸನ್ಮರ‍್ಗದಲ್ಲಿ ಚಲಿಸುವವನೇ ?
ﯶﯷﯸﯹﯺﯻﯼﯽﯾﯿﰀﰁﰂﰃ
67:23
ಪೈಗಂಬರರೇ, ಹೇಳಿರಿ ಅವನೇ ನಿಮ್ಮನ್ನು ಸೃಷ್ಟಿಸಿದವನು ಮತ್ತು ನಿಮಗೆ ಕಿವಿ, ಕಣ್ಣು ಮತ್ತು ಹೃದಯಗಳನ್ನು ನೀಡಿದವನು, ನೀವು ಸ್ವಲ್ಪ ಮಾತ್ರ ಕೃತಜ್ಞತೆ ಸಲ್ಲಿಸುತ್ತೀರಿ.
ﰄﰅﰆﰇﰈﰉﰊﰋﰌ
67:24
ಹೇಳಿರಿ; ಅವನೇ ನಿಮ್ಮನ್ನು ಭೂಮಿಯಲ್ಲಿ ಹರಡಿದವನು ಮತ್ತು ನೀವು ಅವನೆಡೆಗೇ ಒಟ್ಟುಗೂಡಿಸಲ್ಪಡುವಿರಿ.
ﰍﰎﰏﰐﰑﰒﰓﰔ
67:25
ನೀವು ಸತ್ಯವಂತರಾಗಿದ್ದರೆ ಈ (ಪುನರುತ್ಥಾನದ) ವಾಗ್ದಾನವು ಪ್ರಕಟವಾಗುವುದು ಯಾವಾಗ ? ಎಂದು ಅವರು ಕೇಳುತ್ತಾರೆ.
ﰕﰖﰗﰘﰙﰚﰛﰜﰝﰞ
67:26
. ಹೇಳಿರಿ; ಅದರ ಅರಿವು ಅಲ್ಲಾಹನಿಗೆ ಮಾತ್ರವಿದೆ, ನಾನು ಕೇವಲ ಸ್ಪಷ್ಟವಾಗಿ ಮುನ್ನೆಚ್ಚರಿಕೆ ನೀಡುವವನು ಮಾತ್ರವಾಗಿದ್ದೇನೆ.
ﭑﭒﭓﭔﭕﭖﭗﭘﭙﭚﭛﭜﭝﭞ
67:27
ಅವರು ಆ (ಪುರುತ್ಥಾನದ) ಶಿಕ್ಷೆಯನ್ನು ಸಮೀಪದಿಂದ ಕಂಡಾಗ ಸತ್ಯನಿಷೇಧಿಗಳ ಮುಖಗಳು ವಿಕಾರವಾಗಿಬಿಡುವುವು ನೀವು ಬೇಡುತ್ತಿದ್ದಂತಹ ವಸ್ತು ಇದುವೇ ಆಗಿದೆ ಎಂದು ಅವರೊಂದಿಗೆ ಹೇಳಲಾಗುವುದು.
ﭟﭠﭡﭢﭣﭤﭥﭦﭧﭨﭩﭪﭫﭬﭭﭮ
67:28
ಹೇಳಿರಿ; ನೀವು ಆಲೋಚಿಸಿದ್ದೀರಾ ನನ್ನನ್ನು ಮತ್ತು ನನ್ನ ಸಂಗಾತಿಗಳನ್ನು ಅಲ್ಲಾಹನು ಮರಣಗೊಳಿಸಬಹುದು ಅಥವಾ ನಮ್ಮ ಮೇಲೆ ಅವನು ಕರುಣೆ ತೋರಬಹುದು, ಆದರೆ ಸತ್ಯನಿಷೇಧಿಗಳನ್ನು ವೇದನಾಜನಕ ಶಿಕ್ಷೆಯಿಂದ ರಕ್ಷಿಸುವವರು ಯಾರಿದ್ದಾರೆ ?
ﭯﭰﭱﭲﭳﭴﭵﭶﭷﭸﭹﭺﭻﭼﭽ
67:29
ಹೇಳಿರಿ; ಅವನು ಪರಮದಯಾಮಯನಾ ಗಿದ್ದಾನೆ, ನಾವು ಅವನ ಮೇಲೆಯೇ ವಿಶ್ವಾಸವಿರಿಸಿದ್ದೇವೆ ಮತ್ತು ಅವನ ಮೇಲೆಯೇ ನಾವು ಭರವಸೆಯಿಟ್ಟಿದ್ದೇವೆ. ಸದ್ಯದಲ್ಲೇ ನಿಮಗೆ ಸ್ಪಷ್ಟವಾದ ಪಥಭ್ರಷ್ಟತೆಯ ಲ್ಲಿರುವವರು ಯಾರೆಂದು ತಿಳಿಯಲಿರುವುದು.
ﭾﭿﮀﮁﮂﮃﮄﮅﮆﮇﮈ
67:30
ಹೇಳಿರಿ; ನಿಮ್ಮ ಬಾವಿಗಳ ನೀರು ಭೂಮಿಯೊಳಗೆ ಇಂಗಿ ಹೋದರೆ ನರ‍್ಮಲವಾದ ನೀರನ್ನು ನಿಮಗೆ ತರುವವರು ಯಾರಿದ್ದಾರೆಂದು ಯೋಚಿಸಿದ್ದೀರಾ ?
ಪವಿತ್ರ ಕುರಾನ್
Wednesday, September 9, 2026
Don't forget us in your sincere prayers







