PDF —
19 ಆಯತ್ Meccan PDF
Built right in your browser — download starts automatically

ಸೂರಾ ಅಲ್-ಆಲಾ pdf — ಡೌನ್‌ಲೋಡ್ (ಕನ್ನಡ)

ಸೂರಾ ಅಲ್-ಆಲಾ pdf ಕನ್ನಡ — ಡೌನ್‌ಲೋಡ್ ಸೂರಾ ಅಲ್-ಆಲಾ ಅನುವಾದ. ಸೂರಾ ಅಲ್-ಆಲಾ (Meccan) 19 ಆಯತ್.



19 ಆಯತ್ · Meccan · ಕನ್ನಡ
bismillah
ﮟﮠﮡﮢﮣ
87:1 ನೀವು ತಮ್ಮ ಅತ್ತುö್ಯನ್ನತನಾದ ಪ್ರಭುವಿನ ನಾಮದ ಪಾವಿತ್ರö್ಯವನ್ನು ಸ್ತುತಿಸಿರಿ.
ﮤﮥﮦﮧ
87:2 ಅವನು (ಸಕಲವನ್ನು) ಸೃಷ್ಟಿಸಿದನು ಮತ್ತು (ಸಂತುಲಿತಗೊಳಿಸಿದನು.
ﮨﮩﮪﮫ
87:3 ಅವನು ವಿಧಿಯನ್ನು ನಿಶ್ಚಯಿಸಿದನು ಅನಂತರ (ಅವುಗಳಿಗೆ ತಕ್ಕ) ಮರ‍್ಗರ‍್ಶನ ಮಾಡಿದನು.
ﮬﮭﮮﮯ
87:4 ಅವನೇ ಭೂಮಿಯಿಂದ ಮೇವನ್ನು ಹೊರತಂದನು.
ﮰﮱﯓﯔ
87:5 ಬಳಿಕ ಅದನ್ನು ಕರಿಯ ಕಸಕಡ್ಡಿಯನ್ನಾಗಿ ಮಾಡಿದನು.
ﯕﯖﯗﯘ
87:6 ಓ ಪೈಗಂಬರರೇ ನಾವು ನಿಮಗೆ (ಕುರ್ಆನನ್ನು) ಓದಿಕೊಡುವೆವು. ಬಳಿಕ ನೀವು ಮರೆಯಲಾರಿರಿ.
ﯙﯚﯛﯜﯝﯞﯟﯠﯡﯢﯣ
87:7 ಆದರೆ ಅಲ್ಲಾಹನು ಇಚ್ಛಿಸುವುದರ ಹೊರತು. ಅವನು ಗೋಚರ ಮತ್ತು ಅಗೋಚರವನ್ನು ಬಲ್ಲವನು.
ﯤﯥﯦ
87:8 ನಾವು ನಿಮಗೆ ಸುಲಭ ಮರ‍್ಗವನ್ನು ಸುಗಮಗೊಳಿಸುವೆವು.
ﯧﯨﯩﯪﯫ
87:9 ಆದ್ದರಿಂದ ಉಪದೇಶವು ಪ್ರಯೋಜನಕಾರಿ ಆಗುವುದಾದರೆ ನೀವು ಉಪದೇಶ ನೀಡಿರಿ.
ﯬﯭﯮﯯ
87:10 ಭಯಭಕ್ತಿಯುಳ್ಳವನು ಉಪದೇಶವನ್ನು ಸ್ವೀಕರಿಸುವನು.
ﭑﭒﭓ
87:11 ಹತಭಾಗ್ಯನು ಅದರಿಂದ ದೂರ ಉಳಿಯುವನು.
ﭔﭕﭖﭗﭘ
87:12 ಅವನು ಮಹಾ ಅಗ್ನಿಯಲ್ಲಿ ಪ್ರವೇಶಿಸುವನು.
ﭙﭚﭛﭜﭝﭞﭟ
87:13 ಅನಂತರ ಅವನು ಅಲ್ಲಿ ಸಾಯುವುದೂ ಇಲ್ಲ, ಬದುಕುವುದೂ ಇಲ್ಲ,
ﭠﭡﭢﭣﭤ
87:14 ನಿಸ್ಸಂಶಯವಾಗಿಯೂ (ಸತ್ಯ ನಿಷೇಧದಿಂದ) ಪರಿಶುದ್ಧನಾದವನು ಯಶಸ್ಸುಗಳಿಸಿದನು.
ﭥﭦﭧﭨﭩ
87:15 ಅವನು ತನ್ನ ಪ್ರಭುವಿನ ನಾಮವನ್ನು ಸ್ಮರಿಸಿದನು ಮತ್ತು ನಮಾಜ್ ನರ‍್ವಹಿಸಿದನು.
ﭪﭫﭬﭭﭮ
87:16 ಆದರೆ ನೀವು ಐಹಿಕ ಜೀವನಕ್ಕೆಆದ್ಯತೆ ನೀಡುತ್ತೀರಿ.
ﭯﭰﭱﭲ
87:17 ಆದರೆ ಪರಲೋಕವು ಅತ್ತುö್ಯತ್ತಮವೂ, ಶಾಶ್ವತವೂ ಆಗಿದೆ.
ﭳﭴﭵﭶﭷﭸ
87:18 ವಾಸ್ತವದಲ್ಲಿ ಈ ವಿಚಾರಗಳು ಪರ‍್ವ ಗ್ರಂಥಗಳಲ್ಲೂ ಇದ್ದವು.
ﭹﭺﭻﭼ
87:19 ಅಂದರೆ ಇಬ್ರಾಹೀಮ್ ಮತ್ತು ಮೂಸಾರ ಗ್ರಂಥಗಳಲ್ಲಿ.

ಪವಿತ್ರ ಕುರಾನ್


Wednesday, September 9, 2026

Don't forget us in your sincere prayers